Tag: Vishwa

  • ಹುಬ್ಬಳ್ಳಿ ಅಂಜಲಿ ಹತ್ಯೆ ಪ್ರಕರಣ – ಮನನೊಂದು ಸಹೋದರಿ ಆತ್ಮಹತ್ಯೆಗೆ ಯತ್ನ

    ಹುಬ್ಬಳ್ಳಿ ಅಂಜಲಿ ಹತ್ಯೆ ಪ್ರಕರಣ – ಮನನೊಂದು ಸಹೋದರಿ ಆತ್ಮಹತ್ಯೆಗೆ ಯತ್ನ

    ಹುಬ್ಬಳ್ಳಿ: ನಗರದ ವೀರಾಪುರ ಓಣಿಯಲ್ಲಿ ಇತ್ತೀಚೆಗೆ ನಡೆದಿದ್ದ ಅಂಜಲಿ ಅಂಬಿಗೇರ ಹತ್ಯೆಯಿಂದ (Anjali Murder Case) ಬೇಸತ್ತ ಆಕೆಯ ಸಹೋದರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

    ಶನಿವಾರ (ಮೇ 18) ಅಂಜಲಿ ಹತ್ಯೆ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಅಂಜಲಿ ಸಹೋದರಿ ಯಶೋಧಾ ಅವರು, ಮನೆಗೆ ಮರಳಿದ ಬಳಿಕ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಅವರನ್ನು ಸ್ಥಳೀಯರು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಪ್ರಾಣಾಪಾಯದಿಂದ ಅವರು ಪಾರಾಗಿದ್ದಾರೆ. ಪ್ರತಿಭಟನೆ ವೇಳೆ ಸಹ ಯುವತಿ ತೀವ್ರ ಅಸ್ವಸ್ಥಗೊಂಡಿದ್ದು, ಪ್ರಜ್ಞೆ ತಪ್ಪಿದ್ದರು ಎಂದು ತಿಳಿದುಬಂದಿದೆ.

    ಏನಿದು ಪ್ರಕರಣ:
    ವೀರಾಪುರ ಓಣಿಯಲ್ಲಿ ಅಂಜಲಿ ಅಂಬಿಗೇರ (21) ಮನೆಯಲ್ಲಿ ಮಲಗಿದ್ದ ಸಂದರ್ಭದಲ್ಲಿ ಆರೋಪಿ ಗಿರೀಶ್ ಅಲಿಯಾಸ್ ವಿಶ್ವ (Vishwa) ಏಕಾಏಕಿ ಮನೆಗೆ ನುಗ್ಗಿದ್ದ. ಬಳಿಕ ಆಕೆಯ ಅಜ್ಜಿ ಮತ್ತು ಇಬ್ಬರು ಸಹೋದರಿಯರ ಮುಂದೆಯೇ ಅಂಜಲಿಯನ್ನ ಎಳೆದಾಡಿ ಚಾಕುವಿನಿಂದ ಚುಚ್ಚಿ ಭೀಕರವಾಗಿ ಹತ್ಯೆಗೈದಿದ್ದ. ಇದನ್ನೂ ಓದಿ: ಅಂಜಲಿ ಬಳಿಕ ರೈಲಿನಲ್ಲಿ ಮಹಿಳೆಗೆ ಚಾಕು ಹಾಕಲು ಯತ್ನಿಸಿ ಸಿಕ್ಕಿಬಿದ್ದ ಕಿರಾತಕ ವಿಶ್ವ

    ಮೊದಲಿಗೆ ಮನೆಯ ಪಡಸಾಲೆಯಲ್ಲಿ ಅಂಜಲಿಗೆ ಚಾಕು ಹಾಕಿ, ಬಳಿಕ ಕುತ್ತಿಗೆ ಹಿಡಿದು ಗೋಡೆಯತ್ತ ಎಳೆದುಕೊಂಡು ಹೋಗಿ ಹೊಟ್ಟೆ ಭಾಗಕ್ಕೆ ಚಾಕು ಹಾಕಿದ್ದ. ಅಷ್ಟಕ್ಕೇ ತೃಪ್ತಿಯಾಗದೇ ಅಲ್ಲಿಂದ ಅಡುಗೆ ಮನೆಗೆ ಎಳೆದೊಯ್ದು ಮನ ಬಂದಂತೆ ಚಾಕುವಿನಿಂದ ಚುಚ್ಚಿ ಅಂಜಲಿ ಕೊನೆಯುಸಿರೆಳೆದ ಬಳಿಕವೇ ಅಲ್ಲಿಂದ ಆರೋಪಿ ಹೊರ ನಡೆದಿದ್ದ.

    ಅಂಜಲಿ ಹತ್ಯೆ ಮಾಡಿದ ಬಳಿಕ ವಿಶ್ವ ಪರಾರಿಯಾಗಿ ದಾವಣಗೆರೆ  (Davanagere) ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ. ಈ ವೇಳೆ ರೈಲಿನಲ್ಲಿ ಮಹಿಳೆ ಜೊತೆ ಗಲಾಟೆ ಮಾಡಿ ಸಿಟ್ಟಾಗಿ ಚಾಕು ಹಾಕಲು ಮುಂದಾಗಿದ್ದ. ಈ ವಿಚಾರ ತಿಳಿಯುತ್ತಿದ್ದಂತೆ ಪ್ರಯಾಣಿಕರು ಆತನಿಗೆ ರೈಲಿನಲ್ಲೇ ಹಿಗ್ಗಾಮುಗ್ಗಾ ಥಳಿಸಿದ್ದರು. ಜನರಿಂದ ತಪ್ಪಿಸಿಕೊಳ್ಳಲು ವಿಶ್ವ ರೈಲಿನಿಂದ ಜಿಗಿದಿದ್ದ. ಹಳಿಯಲ್ಲಿ ಬಿದ್ದು ಗಾಯಗೊಂಡಿದ್ದ ಈತನನ್ನು ದಾವಣಗೆರೆ ರೈಲ್ವೇ ಪೊಲೀಸರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ವೇಳೆ ವಿಶ್ವನ ವಿಳಾಸ ಇತ್ಯಾದಿ ಮಾಹಿತಿಗಳನ್ನು ಪರಿಶೀಲಿಸಿದಾಗ ಈತನೇ ಅಂಜಲಿಯನ್ನು ಕೊಲೆ ಮಾಡಿದ ಆರೋಪಿ ಎನ್ನುವುದು ಪೊಲೀಸರಿಗೆ ದೃಢಪಟ್ಟಿತ್ತು. ಇದನ್ನೂ ಓದಿ: ಅಂಜಲಿ ಹತ್ಯೆಗೈದಿದ್ದ ಆರೋಪಿ ಅರೆಸ್ಟ್ – ಬಗೆದಷ್ಟು ಬಯಲಾಗ್ತಿದೆ ವಿಶ್ವನ ದುಷ್ಕೃತ್ಯ

  • ಮಗನ ತಪ್ಪಿನಿಂದಾಗಿ ಬಾಡಿಗೆ ಮನೆಯಿಂದ ನಮ್ಮನ್ನು ಹೊರಹಾಕಿದ್ರು: ಅಂಜಲಿ ಕೊಲೆ ಆರೋಪಿ ತಾಯಿ ಕಣ್ಣೀರು

    ಮಗನ ತಪ್ಪಿನಿಂದಾಗಿ ಬಾಡಿಗೆ ಮನೆಯಿಂದ ನಮ್ಮನ್ನು ಹೊರಹಾಕಿದ್ರು: ಅಂಜಲಿ ಕೊಲೆ ಆರೋಪಿ ತಾಯಿ ಕಣ್ಣೀರು

    – ವಿಶ್ವ ತಪ್ಪು ಮಾಡಿದ್ದಾನೆ, ಅವರಿಗೆ ಶಿಕ್ಷೆ ಆಗಬೇಕು
    – ಅವನನ್ನು ನೋಡಲು ಆಸ್ಪತ್ರೆಗೂ ನಾನು ಹೋಗಲ್ಲ

    ಹುಬ್ಬಳ್ಳಿ: ವಿಶ್ವ ತಪ್ಪು ಮಾಡಿದ್ದಾನೆ. ಅವನಿಗೆ ಶಿಕ್ಷೆ ಆಗಲೇಬೇಕು. ಅವನಿಂದ ನಮ್ಮ ಮಾನ-ಮರ್ಯಾದೆ ಎಲ್ಲಾ ಹೋಗಿದೆ ಎಂದು ಅಂಜಲಿ ಹತ್ಯೆ (Anjali Murder Case) ಪ್ರಕರಣದ ಆರೋಪಿ ವಿಶ್ವನ ತಾಯಿ ಶ್ವೇತ ಕಣ್ಣೀರು ಹಾಕಿದರು.

    ಹುಬ್ಬಳ್ಳಿಯಲ್ಲಿ (Hubballi) ವೀರಾಪುರ ಓಣಿಯ ಅಂಜಲಿ ಅಂಬಿಗೇರ ಎಂಬಾಕೆ ಹತ್ಯೆ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ. ಆರೋಪಿ ವಿಶ್ವ ಅಲಿಯಾಸ್ ಗಿರೀಶ್‌ಗೆ ಗಲ್ಲು ಶಿಕ್ಷೆಯಾಗಬೇಕು ಎಂದು ಜನರು ಒತ್ತಾಯಿಸಿದ್ದಾರೆ. ಪುತ್ರನ ಕೃತ್ಯಕ್ಕೆ ಆರೋಪಿ ತಾಯಿ ಬೇಸರಗೊಂಡು ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ: ಕೊಲೆ ಆರೋಪಿ ಗೋವಾ, ಮಹಾರಾಷ್ಟ್ರದಲ್ಲಿ ತಲೆಮರೆಸಿಕೊಳ್ಳಲು ಪ್ಲ್ಯಾನ್‌ ಮಾಡಿದ್ದ: ರೇಣುಕಾ ಸುಕುಮಾರ

    ಪ್ರಕರಣ ಕುರಿತು ಮಾತನಾಡಿದ ಆರೋಪಿ ತಾಯಿ ಶ್ವೇತಾ, ನನ್ನ ಮಗ ಮೊದಲು ಕೆಲಸ ಮಾಡುತ್ತಿದ್ದ. ಈ ನಡುವೆ ಕೆಲಸ ಬಿಟ್ಟ. ಆ ನಂತರ ಮನೆಯಲ್ಲಿದ್ದು, ಮದ್ಯವ್ಯಸನ ಚಟಕ್ಕೆ ಬಲಿಯಾದ. ಆ ನಂತರ 6 ತಿಂಗಳು ಮನೆ ಬಿಟ್ಟು ಹೋಗಿದ್ದ ಎಂದು ಮಗನ ನಡವಳಿಕೆ ಬಗ್ಗೆ ಮಾತನಾಡಿದರು.

    ಅವನು ಆರಾಮಾಗಿ ಇದ್ದಾನೆಂದು ತಿಳಿದುಕೊಂಡಿದ್ದೆವು. ಅದರೆ ಇದೀಗ ಕೊಲೆ ಮಾಡಿರುವುದು ಗೊತ್ತಾಗಿದೆ. ಅವನು ತಪ್ಪು ಮಾಡಿದ್ದಾನೆ. ಅವನಿಗೆ ಕಾನೂನು ಪ್ರಕಾರ ಶಿಕ್ಷೆ ಆಗಲಿ. ಅದರೆ ಮಗ ಮಾಡಿದ ತಪ್ಪಿಗೆ ನಮಗೆ ಶಿಕ್ಷೆ ನೀಡಲಾಗುತ್ತಿದೆ ಎಂದು ಬೇಸರಿಸಿದರು. ಇದನ್ನೂ ಓದಿ: ವಿಶ್ವನಿಗೂ ನಮ್ಮ ಅಕ್ಕನಿಗೂ ಯಾವುದೇ ಸಂಬಂಧ ಇಲ್ಲ: ಅಂಜಲಿ ಸಹೋದರಿ ಸ್ಪಷ್ಟನೆ

    ಅವನಿಂದಾಗಿ ಬಾಡಿಗೆ ಮನೆಯಿಂದ ಹೊರಗೆ ಹಾಕಿದ್ದಾರೆ. ನಾನು ಹೋಟೆಲಿನ ಅಡುಗೆ ಮನೆಯಲ್ಲಿ ವಾಸ ಮಾಡುತ್ತಿದ್ದೇನೆ. ಅವನಿಂದ ನಮ್ಮ ಮಾನ-ಮರ್ಯಾದೆ ಎಲ್ಲಾ ಹೋಗಿದೆ. ಅವನನ್ನು ನೋಡಲು ಕಿಮ್ಸ್ ಆಸ್ಪತ್ರೆಗೂ ನಾನು ಹೋಗುವುದಿಲ್ಲ ಎಂದು ನೊಂದು ನುಡಿದರು.

  • ವಿಶ್ವನಿಗೂ ನಮ್ಮ ಅಕ್ಕನಿಗೂ ಯಾವುದೇ ಸಂಬಂಧ ಇಲ್ಲ: ಅಂಜಲಿ ಸಹೋದರಿ ಸ್ಪಷ್ಟನೆ

    ವಿಶ್ವನಿಗೂ ನಮ್ಮ ಅಕ್ಕನಿಗೂ ಯಾವುದೇ ಸಂಬಂಧ ಇಲ್ಲ: ಅಂಜಲಿ ಸಹೋದರಿ ಸ್ಪಷ್ಟನೆ

    ಹುಬ್ಬಳ್ಳಿ: ಆರೋಪಿ ವಿಶ್ವನಿಗೂ ಅಕ್ಕನಿಗೂ ಯಾವುದೇ ಸಂಬಂಧ ಇಲ್ಲ ಎಂದು ಮೃತ ಅಂಜಲಿ ಅಂಬಿಗೇರ (Anjali Ambigera) ಸಹೋದರಿ ಸ್ಪಷ್ಟನೆ ನೀಡಿದ್ದಾಳೆ.

    ಆರೋಪಿ ಬಂಧನ ಸಂಬಂಧ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಯಶೋಧ, ಆರೋಪಿ ವಿಶ್ವನನ್ನು ಆಸ್ಪತ್ರೆಗೆ ಸೇರಿಸಿ ಯಾಕೆ ಚಿಕಿತ್ಸೆ ನೀಡುತ್ತಿದ್ದೀರಿ. ನಮ್ಮ ಅಕ್ಕ ಹೇಗೆ ರಕ್ತ ಹರಿದು ನರಳಿ ನರಳಿ ಸತ್ತಳೊ ಹಾಗೇ ಅವನು ಸಾಯಲಿ ಎಂದು ಆಕ್ರೋಶ ಹೊರಹಾಕಿದ್ದಾಳೆ.

    ನಮ್ಮ ಅಕ್ಕನ ರಕ್ತ ಹರಿದಷ್ಟು ಅವನಿಂದ ಹರಿಯಲಿ. ವಿಶ್ವನಿಗೆ ಹಾಗೂ ನಮ್ಮ ಅಕ್ಕನಿಗೆ ಯಾವುದೇ ಸಂಬಂಧ ಇಲ್ಲ. ಅವಳು ಸತ್ತ ಮೇಲೆ ಈ ರೀತಿ ಕಥೆ ಹುಟ್ಟುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದಳು. ಇದನ್ನೂ ಓದಿ: ಅಂಜಲಿ ಬಳಿಕ ರೈಲಿನಲ್ಲಿ ಮಹಿಳೆಗೆ ಚಾಕು ಹಾಕಲು ಯತ್ನಿಸಿ ಸಿಕ್ಕಿಬಿದ್ದ ಕಿರಾತಕ ವಿಶ್ವ

    ಅವನು ದಾವಣಗೆರೆ ರೈಲಿನಲ್ಲಿ ಮಹಿಳೆ ಮೇಲೆ ಚಾಕು ಹಾಕಿದಾನಲ್ಲಾ ಹಾಗಿದ್ರೆ ಅವಳಗೇನು ಸಂಬಂಧ?. ಯಾಕೆ ಚಾಕು ಹಾಕೋಕೆ ಹೋದ?. ವಿಶ್ವ ಮನಸ್ಥಿತಿ ಹಾಗಿದೆ ಹೀಗಾಗಿ ನಮ್ಮ ಅಕ್ಕ ಬಲಿಯಾಗಿದ್ದಾಳೆ ಎಂದು ಕಿಡಿಕಾರಿದಳು.

    ಪ್ರಕರಣದ ವಿವರ: ಹುಬ್ಬಳ್ಳಿಯ ವೀರಾಪುರ ಓಣಿಯಲ್ಲಿ ಅಂಜಲಿ ಅಂಬಿಗೇರ (21) ಮನೆಯಿದೆ. ಅಂಜಲಿ ಮನೆಯಲ್ಲಿ ಮಲಗಿದ್ದ ಸಂದರ್ಭದಲ್ಲಿ ಗಿರೀಶ್ ಅಲಿಯಾಸ್ ವಿಶ್ವ ಏಕಾಏಕಿ ಮನೆಗೆ ಎಮಟ್ರಿ ಕೊಟ್ಟಿದ್ದಾನೆ. ಅಲ್ಲದೆ ಅಜ್ಜಿ ಮತ್ತು ಇಬ್ಬರು ಸಹೋದರಿಯರ ಮುಂದೆಯೇ ಅಂಜಲಿಯನ್ನು ಮನೆ ತುಂಬೆಲ್ಲಾ ಎಳೆದಾಡಿ ಚಾಕುವಿನಿಂದ ಚುಚ್ಚಿ ಭೀಕರ ಹತ್ಯೆಗೈದಿದ್ದಾನೆ.

    ಮೊದಲಿಗೆ ಮನೆಯ ಪಡಸಾಲೆಯಲ್ಲಿ ಅಂಜಲಿಗೆ ಚಾಕು ಹಾಕಿ, ಬಳಿಕ ಕುತ್ತಿಗೆ ಹಿಡಿದು ಗೋಡೆಯತ್ತ ಎಳೆದುಕೊಂಡು ಹೋಗಿ ಹೊಟ್ಟೆ ಭಾಗಕ್ಕೆ ಚಾಕು ಹಾಕಿದ್ದಾನೆ. ಅಷ್ಟಕ್ಕೇ ತೃಪ್ತಿಯಾಗದೇ ಅಲ್ಲಿಂದ ಅಡುಗೆ ಮನೆಗೆ ಎಳೆದೊಯ್ದು ಮನ ಬಂದಂತೆ ಚಾಕುವಿನಿಂದ ಚುಚ್ಚಿ ಅಂಜಲಿ ಕೊನೆಯುಸಿರೆಳೆದ ಬಳಿಕವೇ ಅಲ್ಲಿಂದ ಕಾಲ್ಕಿತ್ತಿದ್ದಾನೆ.

  • ಆಟೋದಲ್ಲಿ ಬಂದು ಅಂಜಲಿ ಕೊಲೆಗೈದು ಹಂತಕ ಎಸ್ಕೇಪ್- ಸಿಸಿಟಿವಿಯಲ್ಲಿ ದೃಶ್ಯ ಸೆರೆ

    ಆಟೋದಲ್ಲಿ ಬಂದು ಅಂಜಲಿ ಕೊಲೆಗೈದು ಹಂತಕ ಎಸ್ಕೇಪ್- ಸಿಸಿಟಿವಿಯಲ್ಲಿ ದೃಶ್ಯ ಸೆರೆ

    ಹುಬ್ಬಳ್ಳಿ: ವಿದ್ಯಾರ್ಥಿನಿ ನೇಹಾ ಹಿರೇಮಠ ಭೀಕರ ಕೊಲೆ ಘಟನೆ ಮಾಸುವ ಮುನ್ನವೇ ಹುಬ್ಬಳ್ಳಿಯಲ್ಲಿ (Hubballi) ಮತ್ತೊಂದು ಯುವತಿಯ ಬರ್ಬರ ಹತ್ಯೆಯಾಗಿದೆ. ಆಟೋದಲ್ಲಿ ಬಂದ ಹಂತಕ ಯುವತಿ ಅಂಜಲಿ ಅಂಬಿಗೇರಳನ್ನು ಕೊಲೆ ಮಾಡಿದ್ದಾರೆ.

    ಹಂತಕ ವಿಶ್ವ ಆಟೋದಲ್ಲಿ ಬಂದು ಇಳಿಯುತ್ತಿರುವ ದೃಶ್ಯ ಸ್ಥಳೀಯ ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿದೆ. ಆಟೋದಿಂದ ಇಳಿದು 2 ನಿಮಿಷದಲ್ಲೇ ಕೊಲೆಗೈಯ್ದು ಬಳಿಕ ಹುಬ್ಬಳ್ಳಿ ಹೊಸ ಬಸ್ ನಿಲ್ದಾಣಕ್ಕೆ ಬಂದು ಅಲ್ಲಿಂದ ತಲೆಮರೆಸಿಕೊಂಡಿದ್ದಾನೆ. ಈ ದೃಶ್ಯ ಬಸ್ ನಿಲ್ದಾಣ ಇರುವ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ವೀಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಮನೆಗೆ ನುಗ್ಗಿ ಸಹೋದರಿಯರ ಮುಂದೆಯೇ ಯುವತಿಯ ಭೀಕರ ಹತ್ಯೆ – ಸಹಪಾಠಿಯಿಂದಲೇ ಕೃತ್ಯ

    ಪ್ರಕರಣದ ವಿವರ: ಹುಬ್ಬಳ್ಳಿಯ ವೀರಾಪುರ ಓಣಿಯಲ್ಲಿ ಅಂಜಲಿ ಅಂಬಿಗೇರ (21) ಮನೆಯಿದೆ. ಅಂಜಲಿ ಮನೆಯಲ್ಲಿ ಮಲಗಿದ್ದ ಸಂದರ್ಭದಲ್ಲಿ ಗಿರೀಶ್ ಅಲಿಯಾಸ್ ವಿಶ್ವ ಏಕಾಏಕಿ ಮನೆಗೆ ಎಮಟ್ರಿ ಕೊಟ್ಟಿದ್ದಾನೆ. ಅಲ್ಲದೆ ಅಜ್ಜಿ ಮತ್ತು ಇಬ್ಬರು ಸಹೋದರಿಯರ ಮುಂದೆಯೇ ಅಂಜಲಿಯನ್ನು ಮನೆ ತುಂಬೆಲ್ಲಾ ಎಳೆದಾಡಿ ಚಾಕುವಿನಿಂದ ಚುಚ್ಚಿ ಭೀಕರ ಹತ್ಯೆಗೈದಿದ್ದಾನೆ.

    ಮೊದಲಿಗೆ ಮನೆಯ ಪಡಸಾಲೆಯಲ್ಲಿ ಅಂಜಲಿಗೆ ಚಾಕು ಹಾಕಿ, ಬಳಿಕ ಕುತ್ತಿಗೆ ಹಿಡಿದು ಗೋಡೆಯತ್ತ ಎಳೆದುಕೊಂಡು ಹೋಗಿ ಹೊಟ್ಟೆ ಭಾಗಕ್ಕೆ ಚಾಕು ಹಾಕಿದ್ದಾನೆ. ಅಷ್ಟಕ್ಕೇ ತೃಪ್ತಿಯಾಗದೇ ಅಲ್ಲಿಂದ ಅಡುಗೆ ಮನೆಗೆ ಎಳೆದೊಯ್ದು ಮನ ಬಂದಂತೆ ಚಾಕುವಿನಿಂದ ಚುಚ್ಚಿ ಅಂಜಲಿ ಕೊನೆಯುಸಿರೆಳೆದ ಬಳಿಕವೇ ಅಲ್ಲಿಂದ ಕಾಲ್ಕಿತ್ತಿದ್ದಾನೆ.

  • ಬಿಗ್‍ಬಾಸ್ ಮನೆಯ ಕ್ಯಾಪ್ಟನ್ ವಿಶ್ವ ಮೇಲೆ ಕತ್ತಿ ಮಸೆದ ನಿಧಿ ಸುಬ್ಬಯ್ಯ

    ಬಿಗ್‍ಬಾಸ್ ಮನೆಯ ಕ್ಯಾಪ್ಟನ್ ವಿಶ್ವ ಮೇಲೆ ಕತ್ತಿ ಮಸೆದ ನಿಧಿ ಸುಬ್ಬಯ್ಯ

    ಬೆಂಗಳೂರು: ಬಿಗ್ ಮನೆಯಲ್ಲಿ ಸ್ಪರ್ಧಿಗಳು ಒಬ್ಬರೊನೊಬ್ಬರು ಅಳೆದುತೂಗಿ ಉಪಚರಿಸುವಂತಹ ಹಂತಕ್ಕೆ ಬಂದು ನಿಂತಿದ್ದಾರೆ. ತಂಡವೆಂದು ಬಂದಾಗ ತಂಡದಲ್ಲಿ ಬೆರೆತು ಎದುರಾಳಿ ತಂಡದ ವಿರುದ್ಧ ತೊಡೆತಟ್ಟಿ ಅಖಾಡಕ್ಕೆ ಇಳಿದರೆ ಟಾಸ್ಕ್ ಮುಗಿದ ಮೇಲೆ ಎಲ್ಲರೊಂದಿಗೆ ಬೆರೆಯಲು ಪ್ರಯತ್ನಿಸುತ್ತಾರೆ. ಈ ನಡುವೆ ನಿಧಿ ಸುಬ್ಬಯ್ಯ ಬಿಗ್ ಮನೆಯ ಕ್ಯಾಪ್ಟನ್ ವಿಶ್ವ ಮೇಲೆ ಕತ್ತಿ ಮಸೆಯಲು ಪ್ರಯತ್ನಿಸಿದ್ದಾರೆ.

    ನಿಧಿ ಮತ್ತು ಶುಭಾ ಅಡುಗೆ ಮನೆಯಲ್ಲಿ ತಿಂಡಿ ತಯಾರಿಸುತ್ತಿದ್ದಂತೆ, ನಿಧಿ ಕ್ಯಾಪ್ಟನ್ ವಿಶ್ವನ ಕುರಿತು ಮಾತನಾಡಿದ್ದಾರೆ. ವಿಶ್ವ ನಮ್ಮ ತಂಡ ಏನಾದರೂ ತಪ್ಪು ಮಾಡಿದರೆ ಬೇಗ ಬಂದು ಹೇಳುತ್ತಾನೆ. ಆದರೆ ನಮ್ಮ ಎದುರಾಳಿ ತಂಡ ಏನಾದರು ತಪ್ಪು ಮಾಡಿದರೆ ಅದನ್ನು ಅವರೊಂದಿಗೆ ತಿಳಿಸಲು ಹೆದರುತ್ತಾನೆ ಎಂದು ವಿಶ್ವನ ವಿರುದ್ಧ ಆರೋಪ ಮಾಡಿದ್ದಾರೆ.

    ಟಾಸ್ಕ್ ವೇಳೆ ಅರವಿಂದ್ ಫೌಲ್ ಆಗಿದ್ದಾಗ ವಿಶ್ವ ಅರವಿಂದ್ ಬಳಿ ಫೌಲ್ ಕುರಿತು ಹೇಳಲು ಭಯ ಪಡುತ್ತಿದ್ದ. ಹಾಗಾಗಿ ನಾನು ವಿಶ್ವನಿಗೆ ಬೈದೆ, ನಾವು ತಪ್ಪು ಮಾಡಿದಾಗ ಜೋರಾಗಿ ಅದು ಇಲ್ಲ ಫೌಲ್ ಎನ್ನುತ್ತಿಯ, ಅವರ ತಪ್ಪನ್ನು ಮಾತ್ರ ಮೇಲ್ಲನೆ ಹೇಳುತ್ತಿಯಾ ಎಂದು ಪ್ರಶ್ನೆ ಮಾಡಿದೆ ಎಂದು ನಿಧಿ ಶುಭಾಗೆ ತಿಳಿಸಿದರು.

    ಈ ವೇಳೆ ಶುಭಾ ಎಲ್ಲರೂ ಹಾಗೆ ನಮ್ ಮಾವನು ನಮ್ಮ ಮುಂದೆ ಎಗರಾಡುತ್ತಾರೆ ಅಲ್ಲಿ ಸುಮ್ಮನಿರುತ್ತಾರೆ ಎಂದರು. ಅದಕ್ಕೆ ನಿಧಿ ಮಾವ ‘ಡರ್ ಪೋಕ್’ ಎಂದು ಹೀಯಾಳಿಸಿದರು. ನಂತರ ಮಾತು ಮುಂದುವರಿಸಿದ ಶುಭಾ, ಪ್ರಶಾಂತ್ ಡರ್ ಪೋಕ್ ಅಲ್ಲ ಅವರು ಮಾತನಾಡಿದರೆ ಮನೆಮಂದಿ ಅವರ ವಿರುದ್ಧ ನಿಲ್ಲಬಹುದೆಂದು ಆ ನಿಲುವಿಗೆ ಬಂದಿದ್ದಾರೆ. ಅದು ಒಂದು ಅವರ ವ್ಯಕ್ತಿತ್ವ ಎಂದರು.

    ಪ್ರಶಾಂತ್ ಯಾರೊಂದಿಗೆ ಜಗಳ ಮಾಡಿದರೂ ಕೂಡ ನಂತರ ಬಂದು ಅವರೇ ಮಾತನಾಡಿಸುತ್ತಾರೆ. ಅವರಿಗೆ ಈ ಮನೆಯಲ್ಲಿ ಎಲ್ಲರೊಂದಿಗೆ ಇರಬೇಕೆಂಬ ಮನೋಭಾವ ಇದೆ. ಹಾಗಾಗಿ ಅವರು ಆ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂದು ಶುಭಾ ಮತ್ತು ನಿಧಿ ಅಭಿಪ್ರಾಯಪಟ್ಟರು.

    ಬಿಗ್ ಮನೆಯ ಸದಸ್ಯರು ಒಬ್ಬರಿಗೊಬ್ಬರು ಎಷ್ಟೇ ಜಗಳವಾಡಿದರೂ ಕೂಡ ತಮ್ಮ ಸ್ವಾರ್ಥಕ್ಕಾಗಿ ಮತ್ತೆ ಒಂದಾಗುತ್ತಿದ್ದಾರೆ ಎಂಬುದು ಅಭಿಮಾನಿಗಳ ನಿಲುವು.