Tag: Vishnuvardhan

  • ವಿಷ್ಣು ಸ್ಮಾರಕದಲ್ಲಿ ದಿ-ವಿಲನ್ ಕಿಚ್ಚನ ಎಂಟ್ರಿ ಸಾಂಗ್!

    ವಿಷ್ಣು ಸ್ಮಾರಕದಲ್ಲಿ ದಿ-ವಿಲನ್ ಕಿಚ್ಚನ ಎಂಟ್ರಿ ಸಾಂಗ್!

    ಬೆಂಗಳೂರು: `ದಿ- ವಿಲನ್’ ಚಿತ್ರದ ಚಿತ್ರೀಕರಣ ಶುರುವಾದಾಗಿಂದ ಸಿನಿಪ್ರೇಕ್ಷಕರಲ್ಲಿ ಭಾರೀ ಕ್ರೇಜ್ ಹುಟ್ಟಿಸಿದೆ. ಈ ಚಿತ್ರದಲ್ಲಿ ಕಿಚ್ಚ ಸುದೀಪ್ ಇಂಟ್ರಡಕ್ಷನ್ ಸಾಂಗ್‍ಗೆ ವಿಷ್ಣು ಸ್ಮಾರಕದ ಬಳಿ ಚಿತ್ರಿಕರಿಸಲಾಗಿದ್ದು, ಈಗ ಆ ಶೂಟಿಂಗ್‍ನಲ್ಲಿ ತೆಗೆದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    `ದಿ-ವಿಲನ್’ ಚಿತ್ರದ ಎಲ್ಲಾ ಸಂಗತಿಗಳು ಒಂದೊಂದಾಗಿ ಹೊರಬರುತ್ತಿದ್ದು, ಇದೀಗ ಕಿಚ್ಚ ಸುದೀಪ್ ಅವರ ಇಂಟ್ರಡಕ್ಷನ್ ಸಾಂಗ್ ಅನ್ನು ಸಾಹಸಸಿಂಹ ವಿಷ್ಣುವರ್ಧನ್ ಸ್ಮಾರಕದಲ್ಲಿ ಚಿತ್ರೀಕರಿಸಲಾಗಿರುವ ವಿಷಯ ತಿಳಿದುಬಂದಿದೆ. ಕಿಚ್ಚ ಸುದೀಪ್ ಶೂಟಿಂಗ್ ವೇಳೆ ಸ್ಮಾರಕದ ಬಳಿ ಫೋಟೋ ಕ್ಲಿಕ್ಕಿಸಿಕೊಂಡು ತಮ್ಮ ಫೇಸ್‍ಬುಕ್ ಅಕೌಂಟ್‍ನಲ್ಲಿ ಅಪ್ಲೋಡ್ ಮಾಡಿದ್ದಾರೆ.

    ನಿರ್ದೇಶಕ ಪ್ರೇಮ್, ಕಿಚ್ಚನ ಇಂಟ್ರಡಕ್ಷನ್ ಸಾಂಗ್ ವಿಶೇಷವಾಗಿರಲು ವಿಷ್ಣು ಸ್ಮಾರಕದ ಬಳಿ ಚಿತ್ರೀಕರಿಸಿದ್ದಾರೆ ಎಂದು ಹೇಳಲಾಗಿದೆ. ಕಿಚ್ಚ ಸುದೀಪ್ ಸಾಹಸಸಿಂಹ ವಿಷ್ಣುವರ್ಧನ್ ಅವರ ಅಭಿಮಾನಿಯಾಗಿದ್ದು, ದಿ-ವಿಲನ್ ಚಿತ್ರದಲ್ಲಿ ತಮ್ಮ ನೆಚ್ಚಿನ ನಟನನ್ನು ಸ್ಮರಣೆ ಮಾಡಿದ್ದರೂ ಯಾವುದೇ ಅಚ್ಚರಿ ಪಡಬೇಕಾಗಿಲ್ಲ.

    ಸದ್ಯ ದಿ-ವಿಲನ್ ಚಿತ್ರದಲ್ಲಿ ಕಿಚ್ಚ ಸುದೀಪ್ ಅವರ ಮಾತಿನ ಭಾಗ ಮುಗಿದಿದ್ದು, ಶಿವಣ್ಣ ತಮ್ಮ ಭಾಗದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರ ಮಲ್ಟಿಸ್ಟಾರ್ ಫಿಲಂ ಆಗಿದ್ದು, ಚಿತ್ರದಲ್ಲಿ ಶಿವರಾಜ್ ಕುಮಾರ್, ಕಿಚ್ಚ ಸುದೀಪ್ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಬಹುಭಾಷಾ ನಟಿ ಆ್ಯಮಿ ಜಾಕ್ಸನ್ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.

  • ರಾಜರತ್ನ ಪುನೀತ್‍ಗೆ ಕಾಡಿತು ಸಾಹಸಸಿಂಹನ ನೆನಪು

    ರಾಜರತ್ನ ಪುನೀತ್‍ಗೆ ಕಾಡಿತು ಸಾಹಸಸಿಂಹನ ನೆನಪು

    ಬೆಂಗಳೂರು: ಸಿನಿಮಾರಂಗ ಅದ್ಯಾಕೆ ಹೀಗೋ ಗೊತ್ತಿಲ್ಲ. ಇಲ್ಲೇನಿದ್ದರೂ ಒಬ್ಬ ನಟ ಬದುಕಿದ್ದಾಗ ಮಾತ್ರ ಅವರನ್ನು ಬೇರೆ ನಟರು ನೆನಪಿಸಿಕೊಳ್ಳುತ್ತಾರೆ. ಅವರು ಇಲ್ಲವಾದ ಕೂಡಲೇ ಅವರ ನೆನಪನ್ನೂ ಇಲ್ಲವಾಗಿಸಿಕೊಳ್ಳೋರೇ ಹೆಚ್ಚು. ಕನ್ನಡ ಚಿತ್ರರಂಗವನ್ನು ಆಳಿ, ಮೆರೆದು ಗತಿಸಿದ ಕಲಾವಿದರು, ನಟರನ್ನು ಅಭಿಮಾನಿಗಳು ಯಾವತ್ತಿಗೂ ಮರೆಯೋದೇ ಇಲ್ಲ. ಆದರೆ ಚಿತ್ರರಂಗದಲ್ಲೇ ಇರುವ ಇತರೆ ಹೀರೋಗಳು ಮತ್ತೊಬ್ಬ ನಟನನ್ನು ನೆನಪಿಸಿಕೊಳ್ಳುವುದು ತೀರಾ ವಿರಳ.

    ಇಂಥವರ ನಡುವೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸ್ವಲ್ಪ ಭಿನ್ನ. ಆಗಾಗ ಹಿಂತಿರುಗಿ ನೋಡುವ ಗುಣ ಹೊಂದಿರುವ ಪುನೀತ್ ಹಿರಿಯ ನಟರನ್ನು ಮಾಮ, ಅಂಕಲ್ ಅಂತಾ ನೆನಪಿಸಿಕೊಳ್ಳುತ್ತಲೇ ಇರುತ್ತಾರೆ. ಅವರುಗಳ ಒಡನಾಡವನ್ನು ಪದೇ ಪದೇ ಮೆಲುಕು ಹಾಕುತ್ತಿರುತ್ತಾರೆ.

    ಇಷ್ಟೆಲ್ಲಾ ಹೇಳುತ್ತಿರೋದಕ್ಕೂ ಕಾರಣವಿದೆ. ಪುನೀತ್ ರಾಜ್ ಕುಮಾರ್ ತಮ್ಮ ಫೇಸ್ ಬುಕ್ ವಾಲ್ ನಲ್ಲಿ ತಮ್ಮ ಸಹೋದರರೊಂದಿಗೆ ಸಾಹಸ ಸಿಂಹ ವಿಷ್ಣು ಅವರ ಜೊತೆ ತೆಗೆಸಿಕೊಂಡ ಫೋಟೋವೊಂದನ್ನು ಟ್ಯಾಗ್ ಮಾಡಿ `ಏನೋ ಹುಡ್ಕಬೇಕಾದ್ರೆ ಈ Photo ಸಿಕ್ತು, #throwback Memories to Cherish, We all miss him so much ಅಲ್ವಾ?’ ಎಂದು ಬರೆದುಕೊಂಡಿದ್ದಾರೆ. ಪುನೀತ್ ರಾಜ್ ಕುಮಾರ್ ಅವರ ಈ ಪೋಸ್ಟ್ ವಿಷ್ಣು ಅಭಿಮಾನಿಗಳನ್ನು ಮಾತ್ರವಲ್ಲ, ಸಿನಿಮಾ ಮತ್ತು ಜೀವಪರ ಕಾಳಜಿ ಹೊಂದಿರುವ ಎಲ್ಲರನ್ನೂ ಒಂದು ಕ್ಷಣ ಬೆರಗಾಗಿಸಿದೆ. ಪುನೀತ್ ಅವರ ನಡೆ ಮತ್ತು ಹಿಂದಿನದನ್ನು ಮರೆಯದ ಅವರ ಮನಸ್ಥಿತಿಯ ಬಗ್ಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಯಾವತ್ತಿಗೂ ಹೀಗೇ ಇರಿ ಪುನೀತ್.

    https://www.facebook.com/PuneethRajkumar/posts/1959441104085740

     

  • ವಿಷ್ಣುವರ್ಧನ್ ಓದಿದ ಶಾಲೆ ಮುಚ್ಚಲು ಸಿದ್ಧತೆ- ಸರ್ಕಾರದ ಕ್ರಮಕ್ಕೆ ವ್ಯಾಪಕ ಆಕ್ರೋಶ

    ವಿಷ್ಣುವರ್ಧನ್ ಓದಿದ ಶಾಲೆ ಮುಚ್ಚಲು ಸಿದ್ಧತೆ- ಸರ್ಕಾರದ ಕ್ರಮಕ್ಕೆ ವ್ಯಾಪಕ ಆಕ್ರೋಶ

    ಬೆಂಗಳೂರು: ಕನ್ನಡ ಶಾಲೆಗಳನ್ನು ಮುಚ್ಚಲ್ಲ ಅಂತಾ ಬಡಾಯಿ ಕೊಚ್ಚಿಕೊಳ್ಳೋ ಸರ್ಕಾರ ಇದೀಗ ನಟ ವಿಷ್ಣುವರ್ಧನ್ ಓದಿದ ಶಾಲೆಯನ್ನೇ ಮುಚ್ಚಲು ಹೊರಟಿದೆ.

    ಚಾಮರಾಜಪೇಟೆಯಲ್ಲಿರೋ ಸರ್ಕಾರಿ ಅನುದಾನಿತ ಮಾಡಲ್ ಕನ್ನಡ ಹಿರಿಯ ಪ್ರಾಥಮಿಕ ಶಾಲೆಗೆ ಬೀಗ ಜಡಿಯಲು ಸರ್ಕಾರ ಮುಂದಾಗಿದೆ. ಈ ಹಿಂದೆ ಈ ಶಾಲೆಗೆ ಸೇರಬೇಕಾದ್ರೆ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿರಬೇಕಿತ್ತು ಅಥವಾ ರಾಜಕಾರಣಿಗಳ ರೆಕಮೆಂಡ್ ಬೇಕಿತ್ತು.

    ಈ ಶಾಲೆಯಲ್ಲಿ ಶಿಕ್ಷಕರ ಕೊರತೆ ಇದ್ದು, ಶಾಲೆಯ ಮಕ್ಕಳು ಮತ್ತು ಶಿಕ್ಷಕರು ಹಲವು ಬಾರಿ ಶಿಕ್ಷಕರನ್ನು ನೇಮಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಆದ್ರೂ ಸರ್ಕಾರ ಶಿಕ್ಷಕರ ನೇಮಕಕ್ಕೆ ಮುಂದಾಗದ ಕಾರಣ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ. 2 ತಿಂಗಳ ಹಿಂದೆ ಪ್ರೌಢಶಾಲೆಯನ್ನು ಮುಚ್ಚಿದ್ದ ಸರ್ಕಾರ ಈಗ ಮಕ್ಕಳ ಕೊರತೆಯನ್ನೇ ನೆಪವಾಗಿಟ್ಟುಕೊಂಡು ಪ್ರಾಥಮಿಕ ಶಾಲೆಯನ್ನು ಮುಚ್ಚಲು ಮುಂದಾಗಿದೆ ಎನ್ನಲಾಗಿದೆ.

  • ಇಂದು ಡಾ. ವಿಷ್ಣುವರ್ಧನ್ 8ನೇ ಪುಣ್ಯಸ್ಮರಣೆ- ಅಭಿಮಾನಿಗಳಿಂದ ಅನ್ನದಾನ, ರಕ್ತದಾನ

    ಇಂದು ಡಾ. ವಿಷ್ಣುವರ್ಧನ್ 8ನೇ ಪುಣ್ಯಸ್ಮರಣೆ- ಅಭಿಮಾನಿಗಳಿಂದ ಅನ್ನದಾನ, ರಕ್ತದಾನ

    ಬೆಂಗಳೂರು: ಚಂದನವನದ ಸಾಹಸಸಿಂಹ ಡಾ. ವಿಷ್ಣುವರ್ಧನ್ ಅಭಿಮಾನಿಗಳನ್ನ ಅಗಲಿ ಇಂದಿಗೆ 8 ವರ್ಷಗಳು ಕಳೆದಿವೆ. ಇಂದು ಅವರ 8ನೇ ಪುಣ್ಯಸ್ಮರಣೆ ದಿನವಾಗಿದೆ.

    ಡಾ.ವಿಷ್ಣುವರ್ಧನ್ ಮರೆಯಲಾಗದ ಮಾಣಿಕ್ಯವಾಗಿದ್ದು, 8ನೇ ಪುಣ್ಯಸ್ಮರಣೆ ಅಂಗವಾಗಿ ಅಭಿಮಾನ್ ಸ್ಟುಡಿಯೋದಲ್ಲಿ ಅಭಿಮಾನಿಗಳು ಅನ್ನದಾನ, ರಕ್ತದಾನದ ಜೊತೆಗೆ ಹಲವು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದಾರೆ.

    ಬೆಳಗ್ಗೆಯೇ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಸಮಾಧಿ ಸ್ಥಳಕ್ಕೆ ಆಗಮಿಸಿದ್ದು, ವಿವಿಧ ಹೂವುಗಳಿಂದ ಸಮಾಧಿಯನ್ನು ಅಲಂಕಾರ ಮಾಡಿ ಪೂಜೆ ಸಲ್ಲಿಸುತ್ತಿದ್ದಾರೆ. ಭಾರತಿ ವಿಷ್ಟುವರ್ಧನ್ ತಮ್ಮ ನಿವಾಸದಲ್ಲೇ ಪೂಜೆ ಸಲ್ಲಿಸಲಿದ್ದಾರೆ. ವಿಷ್ಣುವರ್ಧನ್ 2009 ಡಿಸೆಂಬರ್ 30 ರಂದು ಅಭಿಮಾನಿಗಳನ್ನ ಅಗಲಿದ್ದರು.

    ವಿಷ್ಣುವಧನ್ ನಾಗರಹಾವು ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಅವರು ಸುಮಾರು 200 ಚಿತ್ರಗಳನ್ನ ಮಾಡಿದ್ದು, ಕೊನೆಯ ಚಿತ್ರವಾಗಿ ಆಪ್ತರಕ್ಷಕ ಸಿನಿಮಾವನ್ನು ಮಾಡಿದ್ದರು. ಆದರೆ ಇಂದಿಗೂ ವಿಷ್ಣುವರ್ಧನ್ ಅಭಿಮಾನಿಗಳ ಮನಸ್ಸಿನಲ್ಲಿ ಚಿರಸ್ಮರಣಿಯವಾಗಿ ಉಳಿದಿದ್ದಾರೆ.

  • ಸಿಎಂರನ್ನು ದಿಢೀರ್ ಭೇಟಿ ಮಾಡಿದ ಕಿಚ್ಚ ಸುದೀಪ್

    ಸಿಎಂರನ್ನು ದಿಢೀರ್ ಭೇಟಿ ಮಾಡಿದ ಕಿಚ್ಚ ಸುದೀಪ್

    ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ನಟ ಕಿಚ್ಚ ಸುದೀಪ್ ದಿಢೀರ್ ಭೇಟಿ ಮಾಡಿದ್ದು, ಇದು ಎಲ್ಲರಲ್ಲೂ ಕುತೂಹಲಕ್ಕೆ ಕಾರಣವಾಗಿದೆ.

    ಇಂದು ಸಿಎಂ ನಿವಾಸ ಕಾವೇರಿಯಲ್ಲಿ ಸಿದ್ದರಾಮಯ್ಯರನ್ನು ಸುದೀಪ್ ಭೇಟಿ ಮಾಡಿದ್ದಾರೆ. ಆದರೆ ಸಿಎಂ ಜೊತೆ ಭೇಟಿ ಮುಕ್ತಾಯವಾದ ಬಳಿಕ ಸುದೀಪ್ ಸ್ವತಃ ಮಾತನಾಡಿ, ಸಾಹಸಸಿಂಹ ವಿಷ್ಣುವರ್ಧನ್ ಅವರ ಸಮಾಧಿಯ ಸ್ಥಳವನ್ನು ಪುಣ್ಯಭೂಮಿ ಮಾಡುವಂತೆ ಸಿಎಂಗೆ ಮನವಿ ಮಾಡಿದ್ದೇನೆ ಎಂದು ಹೇಳಿದ್ದಾರೆ.

    ವಿಷ್ಣು ಸಮಾಧಿಯ 100 ಎಕರೆ ಜಾಗವನ್ನ ನಾವೇ ಖರೀದಿ ಮಾಡುತ್ತೇನೆ. ಸಮಾಧಿಯನ್ನು ಸ್ಥಳಾಂತರ ಮಾಡೋದು ಬೇಡ, ಸಮಾಧಿ ಜಾಗವನ್ನ ಪುಣ್ಯಭೂಮಿ ಅಂತಾ ಅಭಿವೃದ್ಧಿ ಮಾಡಿ ಎಂದು ಮನವಿ ಮಾಡಿದ್ದೇನೆ. ಭಾರತೀಯರ ಆಸೆಯಂತೆ ಇಲ್ಲಿ ಬದಲಾಗಿ ಸ್ಮಾರಕವನ್ನು ಮೈಸೂರಿನಲ್ಲಿ ಮಾಡಿ ಎಂದು ಹೇಳಿದ್ದೇನೆ. ಈ ಬಗ್ಗೆ ಸಿಎಂ ಸಕಾರಾತ್ಮಕವಾಗಿ ಸ್ಪಂದನೆ ನೀಡಿದ್ದಾರೆ. ಜೊತೆಗೆ ಪುಣ್ಯಭೂಮಿ ಮಾಡಿಕೊಡೋದಾಗಿ ಸಿಎಂ ಭರವಸೆ ನೀಡಿದ್ದಾರೆ ಎಂದು ಸುದೀಪ್ ಹೇಳಿದರು.

    ಇನ್ನು ಸಿಎಂ ಜೊತೆ ರಾಜಕೀಯದ ಬಗ್ಗೆ ಮಾತನಾಡಿದ್ರಾ ಎಂದು ಕೇಳಿದ್ದಕ್ಕೆ ಸುದೀಪ್ ಕೈ ಮುಗಿದು ಹೊರಟು ಹೋಗಿದ್ದಾರೆ.

    ಇದನ್ನು ಓದಿ: 45 ವರ್ಷಗಳ ನಂತರ ಹೊಸ ರೂಪದಲ್ಲಿ ನಾಗರಹಾವು ರೀ ರಿಲೀಸ್

     

  • 45 ವರ್ಷಗಳ ನಂತರ ಹೊಸ ರೂಪದಲ್ಲಿ ನಾಗರಹಾವು ರೀ ರಿಲೀಸ್

    45 ವರ್ಷಗಳ ನಂತರ ಹೊಸ ರೂಪದಲ್ಲಿ ನಾಗರಹಾವು ರೀ ರಿಲೀಸ್

    ಬೆಂಗಳೂರು: 45 ವರ್ಷಗಳ ನಂತರ ಹೊಸ ರೂಪದಲ್ಲಿ ನಾಗರಹಾವು ತೆರೆಗೆ ಬರುತ್ತಿದ್ದು, ಸಾಹಸ ಸಿಂಹ ಅಭಿವನ ಭಾರ್ಗವ ವಿಷ್ಣುವರ್ಧನ್ ಪುಣ್ಯ ತಿಥಿಯಂದು ಸಿನಿಮಾ ಬಿಡುಗಡೆಯಾಗಲಿದೆ.

    ನಾಗರಹಾವು ರಿಲೀಸ್ ಆಗಿ ಬರೋಬ್ಬರಿ 45 ವರ್ಷಗಳಾಗಿವೆ. ಆದರೆ ಈಗ ಅವರ ಪುಣ್ಯತಿಥಿ ಪ್ರಯುಕ್ತ ಮತ್ತೆ ನಾಗರಹಾವು ರೀ ರಿಲೀಸ್ ಆಗುತ್ತಿದ್ದು, ತೆರೆಯ ಮೇಲೆ ರಾಮಾಚಾರಿ ಮತ್ತು ಚಾಮಯ್ಯ ಮೇಷ್ಟ್ರು ಮತ್ತೆ ಮೋಡಿ ಮಾಡಲು ಬರುತ್ತಿದ್ದಾರೆ.

    ಪುಟ್ಟಣ್ಣ ಕಣಗಾಲ್ ನಿರ್ದೇಶನದಲ್ಲಿ ಮೂಡಿಬಂದಿದ್ದ ನಾಗರಹಾವು ಸಿನಿಮಾ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆಯನ್ನು ಪಡೆದಿತ್ತು. ಅದೇ ಮೊದಲ ಬಾರಿಗೆ ನಾಯಕ ನಟರಾಗಿ ವಿಷ್ಣುವರ್ಧನ್ ಅಭಿನಯಿಸಿದ್ದು, ನಾಗರಹಾವು ಸಿನಿಮಾ ಅವರಿಗೆ ಹೆಸರು ಮತ್ತು ಖ್ಯಾತಿಯನ್ನು ತಂದುಕೊಟ್ಟಿತ್ತು. ಈಗ ನಾಗರಹಾವು ಸಿನಿಮಾವನ್ನು ವೀರಾಸ್ವಾಮಿಯವರ ಮಗ ಬಾಲಾಜಿ ಅವರು ರೀ ರಿಲೀಸ್ ಮಾಡುತ್ತಿದ್ದು, ವಿಶೇಷವಾಗಿ ಡಿಟಿಎಸ್ ಸೌಂಡ್ ಎಫೆಕ್ಟ್ ನೊಂದಿಗೆ ಬಿಡುಗಡೆಯಾಗುತ್ತಿದೆ.

    ಈ ಹಿಂದೆ ಕಸ್ತೂರಿ ನಿವಾಸ ಚಿತ್ರ ಕೂಡ ಹೊಸ ರೂಪದಲ್ಲಿ ಬಿಡುಗಡೆಯಾಗಿತ್ತು. ಈಗ ಇದೇ ತಿಂಗಳು ತೆರೆಯ ಮೇಲೆ ನಾಗರಹಾವು ಸಿನಿಮಾ ರಾರಾಜಿಸಲಿದೆ. ಡಿಸೆಂಬರ್ ತಿಂಗಳಲ್ಲಿ ವಿಷ್ಣು ಅಗಲಿದ್ದರು. ಹಾಗಾಗಿ ಅವರ ಪುಣ್ಯತಿಥಿಯ ಪ್ರಯುಕ್ತ ಇದೇ ತಿಂಗಳು ಮತ್ತೆ ನಾಗರಹಾವು ಚಿತ್ರ ಬಿಡುಗಡೆಯಾಗುತ್ತಿದೆ.

     

  • ಸ್ಯಾಂಡಲ್‍ವುಡ್ ನ  ಮೂವರು ದಿಗ್ಗಜರಿಗೆ ಇಂದು ಬರ್ತ್ ಡೇ

    ಸ್ಯಾಂಡಲ್‍ವುಡ್ ನ ಮೂವರು ದಿಗ್ಗಜರಿಗೆ ಇಂದು ಬರ್ತ್ ಡೇ

    ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ ಇಂದು ಮೂವರು ದಿಗ್ಗಜ ಕಲಾವಿದರ ಹುಟ್ಟುಹಬ್ಬದ ಸಂಭ್ರಮ. ಸಾಹಸಸಿಂಹ ವಿಷ್ಣುವರ್ಧನ್, ರಿಯಲ್ ಸ್ಟಾರ್ ಉಪೇಂದ್ರ, ನಟಿ ಶೃತಿ ಅವರ ಹುಟ್ಟುಹಬ್ಬದ ಆಚರಣೆಯನ್ನು ಅಭಿಮಾನಿಗಳು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸುತ್ತಿದ್ದಾರೆ.

    ಅಭಿಮಾನಿಗಳ ಆರಾಧ್ಯ ದೈವ ಸಾಹಸಸಿಂಹ ವಿಷ್ಣುವರ್ಧನ್ 67ನೇ ಜಯಂತೋತ್ಸವ. ಕಳೆದ ವರ್ಷದಂತೆ ಈ ವರ್ಷ ಕೂಡ ವಿಷ್ಣುದಾದ ಅವರ ಹುಟ್ಟುಹಬ್ಬವನ್ನ 2 ಕಡೆ ಆಚರಿಸಲಾಗುತ್ತಿದೆ. ವಿಷ್ಣುವರ್ಧನ್ ನಿವಾಸದಲ್ಲಿ ಭಾರತಿ ವಿಷ್ಣುವರ್ಧನ್ ಮತ್ತು ಕುಟುಂಬ ಸದಸ್ಯರು ಹುಟ್ಟುಹಬ್ಬ ಆಚರಿಸಿದ್ರೆ ಅಭಿಮಾನಿಗಳು ಅಭಿಮಾನ್ ಸ್ಟುಡಿಯೋದಲ್ಲಿ ದಾದಗೆ ನಮಿಸಲಿದ್ದಾರೆ.

    ಸ್ಯಾಂಡಲ್‍ವುಡ್‍ನ ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ 49ನೇ ಹುಟ್ಟುಹಬ್ಬದ ಸಂಭ್ರಮ. ಈಗಾಗ್ಲೇ ಉಡುಗೊರೆ, ಹಾರ, ಕೇಕ್ ಬೇಡ ಅಂತ ಹೇಳಿರೋ ಉಪ್ಪಿ ಅಭಿಮಾನಿಗಳ ಜೊತೆ ಬರ್ತ್ ಡೇ ಆಚರಿಸಿಕೊಳ್ಳಲಿದ್ದಾರೆ. ಉಪ್ಪಿ ಅಭಿನಯದ ಉಪೇಂದ್ರ ಮತ್ತೆ ಹುಟ್ಟಿಬಾ ಚಿತ್ರದ ಟ್ರೈಲರ್ ಮತ್ತು ಹಾಡುಗಳು ಕೂಡ ಲಾಂಚ್ ಆಗಲಿದೆ.

    ಇನ್ನೂ ಸ್ಯಾಂಡಲ್‍ವುಡ್ ಚಂದದ ಗೊಂಬೆ ಶೃತಿ ಅವರು 42 ನೇ ವಸಂತಕ್ಕೆ ಕಾಲಿಡ್ತಿದ್ದಾರೆ. ಓಂ ಸಾಯಿಪ್ರಕಾಶ್ ಸಾರಥ್ಯದ ಅಬ್ಬೆ ತುಮಕೂರು ವಿಶ್ವಾರಾಧ್ಯರು ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗ್ತಿರೋ ಶೃತಿ ಶೂಟಿಂಗ್ ಸೆಟ್‍ನಲ್ಲಿ ಕುಟುಂಬ ಸಮೇತ ಹುಟ್ಟುಬ್ಬ ಆಚರಿಸಿದ್ದಾರೆ. ವಿಷ್ಣುದಾದ ದೈಹಿಕವಾಗಿ ನಮ್ಮ ಜೊತೆ ಇಲ್ಲವಾದ್ರು ಅಭಿಮಾನಿಗಳ ಮನದಲ್ಲಿ ಅವ್ರು ಎಂದಿಗೂ ಅಮರ. ಬರ್ತ್ ಡೇ ಸಂಭ್ರಮದಲ್ಲಿರೋ ರಿಯಲ್ ಸ್ಟಾರ್ ಉಪ್ಪಿ, ನಟಿ ಶೃತಿ ಅವ್ರು ಇನ್ನಷ್ಟು ಒಳ್ಳೆ ಕೆಲಸ ಮಾಡಿ ಉತ್ತಮ ಹೆಸರುಗಳಿಸಲಿ ಅನ್ನೋದು ಎಲ್ಲರ ಆಶಯವಾಗಿದೆ.