Tag: Vishnuvardhan

  • ಅಂಬಿ ಕುಟೀರ ತಲುಪಿದ ಆಪ್ತಮಿತ್ರನ ಮನೆಯ ಊಟ

    ಅಂಬಿ ಕುಟೀರ ತಲುಪಿದ ಆಪ್ತಮಿತ್ರನ ಮನೆಯ ಊಟ

    ಬೆಂಗಳೂರು: ಸಾಹಸ ಸಿಂಹ ವಿಷ್ಣುವರ್ಧನ್ ಮನೆಯಿಂದ ರೆಬಲ್ ಸ್ಟಾರ್ ಅಂಬರೀಶ್ ಅವರ ಕುಟುಂಬದವರಿಗೆ ಊಟ ಕಳುಹಿಸಲಾಗಿದೆ.

    ಸೋಮವಾರ ಅಂಬರೀಶ್ ಅವರ ಅಂತ್ಯಕ್ರಿಯೆ ಆಗಿದ್ದು, ಇಂದು ಮನೆಯಲ್ಲಿ ಯಾರೂ ಅಡುಗೆ ಮಾಡುವುದಿಲ್ಲ. ಇದನ್ನು ತಿಳಿದ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಅವರು ತಮ್ಮ ಪಿಎಯಿಂದ ಅಂಬರೀಶ್ ಮನೆಯವರಿಗೆ ಊಟ ಕಳುಹಿಸಿಕೊಟ್ಟಿದ್ದಾರೆ.

    ವಿಷ್ಣುವರ್ಧನ್ ಹಾಗೂ ಅಂಬರೀಶ್ ಅವರು ಆತ್ಮೀಯ ಸ್ನೇಹಿತರಾಗಿದ್ದು, ಇಬ್ಬರ ಕುಟುಂಬದವರು ತುಂಬಾ ಆತ್ಮೀಯರಾಗಿದ್ದಾರೆ. ಈ ಸಮಯದಲ್ಲಿ ಸುಮಲತಾ ಹಾಗೂ ಅಭಿಷೇಕ್ ಊಟ ಮಾಡುವುದಿಲ್ಲ ಎಂಬುದನ್ನು ತಿಳಿದ ಭಾರತಿ ವಿಷ್ಣುವರ್ಧನ್ ಅವರು 2 ಕ್ಯಾರಿಯರ್‍ನಲ್ಲಿ ತಮ್ಮ ಮನೆಯಿಂದ ಊಟ ಪಾರ್ಸಲ್ ಕಳುಹಿಸಿದ್ದಾರೆ.

    ಕಳೆದ ಕೆಲವು ದಿನಗಳಿಂದ ಕಿಡ್ನಿ ಹಾಗೂ ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಅಂಬರೀಶ್ ಶನಿವಾರ ರಾತ್ರಿ ಮೃತಪಟ್ಟಿದ್ದರು. ಮಂಡ್ಯ ಬಸ್ ದುರಂತ ಘಟನೆಯ ಬಳಿಕ ಸುಸ್ತಾಗಿದ್ದ ಅಂಬರೀಶ್ ಆರೋಗ್ಯದಲ್ಲಿ ಏರುಪೇರಾಗಿತ್ತು. ಹೀಗಾಗಿ ಹೆಚ್ಚಿನ ಚಿಕಿತ್ಸೆಗೆಂದು ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಂಬರೀಶ್ ಚಿಕಿತ್ಸೆ ಫಲಿಸದೇ ವಿಧಿವಶರಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಂಬಿ ಅಂತ್ಯಸಂಸ್ಕಾರದ ವೇಳೆ ಕಾಣಿಸಿಕೊಂಡ ನಾಗರಾಜ

    ಅಂಬಿ ಅಂತ್ಯಸಂಸ್ಕಾರದ ವೇಳೆ ಕಾಣಿಸಿಕೊಂಡ ನಾಗರಾಜ

    – ಜಲೀಲನ ಕಳುಹಿಸಿಕೊಡಲು ನಾಗರಹಾವು ಬಂತಂತೆ
    – ಆಪ್ತ ಗೆಳೆಯ ವಿಷ್ಣು ಬಂದಿದ್ದಾರೆ ಎಂದ ಅಭಿಮಾನಿಗಳು

    ಬೆಂಗಳೂರು: ಕಂಠೀರವ ಸ್ಟುಡಿಯೋದಲ್ಲಿ ಅಂಬರೀಶ್ ಅಂತ್ಯಸಂಸ್ಕಾರದ ವೇಳೆ ನಾಗರಹಾವು ಕಾಣಿಸಿಕೊಂಡಿತ್ತು. ನಾಗಾರಹಾವು ಕಂಡ ಅಭಿಮಾನಿಗಳು ಜಲೀಲನನ್ನು ನೋಡಲು ಆಪ್ತ ಗೆಳೆಯ ವಿಷ್ಣುವರ್ಧನ್ ಬಂದಿದ್ದಾರೆಂದು ಮಾತನಾಡಲು ಆರಂಭಿಸಿದ್ದಾರೆ.

    ಅಂಬರೀಶ್ ಅವರ ಮೊದಲ ಚಿತ್ರ ನಾಗರಹಾವು. ಹಾಗಾಗಿ ಕಾಕತಾಳೀಯ ಎನ್ನುವಂತೆ ಕಾಣಿಸಿಕೊಂಡ ನಾಗರಹಾವು ನೋಡುಗರಲ್ಲಿ ಆಶ್ಚರ್ಯಚಕಿತರನ್ನಾಗಿ ಮಾಡುವಂತೆ ಮಾಡಿತು. ಈ ಹಿಂದೆ ಹಲವು ಬಾರಿ ವಿಷ್ಣುವರ್ಧನ್ ಸಮಾಧಿ ಬಳಿ ನಾಗರಹಾವು ಕಾಣಿಸಿಕೊಳ್ಳುತ್ತಿತ್ತು. ಹಾವು ಕಾಣಿಸಿಕೊಳ್ಳುತ್ತಿದ್ದಂತೆ ಉರಗ ತಜ್ಞರಿಗೆ ಮಾಹಿತಿ ನೀಡಲಾಗಿತ್ತು. ಸ್ಥಳಕ್ಕಾಗಮಿಸಿದ ಉರಗ ತಜ್ಞ ನಾಗರಹಾವನ್ನು ರಕ್ಷಣೆ ಮಾಡಿದ್ದಾರೆ.

    ಫೆಬ್ರವರಿಯಲ್ಲಿ ಪಬ್ಲಿಕ್ ಟಿವಿಗೆ ನೀಡಿದ ಸಂದರ್ಶನದಲ್ಲಿ, ಏನು ಬೇಕಾದರೂ ಕೇಳಿ, ವಿಷ್ಣು ಬಗ್ಗೆ ಕೇಳಬೇಡಿ ಅಂತ ಹೇಳಿದ್ದರು. ವಿಷ್ಣು ಬಗ್ಗೆ ಮಾತನಾಡುವಾಗ ಮನಸ್ಸು ಭಾರವಾಗುತ್ತದೆ. ಏನೇ ಹೇಳಬೇಕೆಂದು ಪದಗಳೇ ತೋಚಲ್ಲ. ಕೇವಲ ಕಣ್ಣೀರು ಬಂದ್ರೆ ಸ್ನೇಹಿತರಲ್ಲ, ಚಿತ್ರರಂಗದಲ್ಲಿ ನನಗೂ ಮತ್ತು ಅವನ ನಡುವಿನ ಸ್ನೇಹಕ್ಕೆ ಪದಗಳೇ ಇಲ್ಲ. ಆ ಕಾಲದಲ್ಲಿ ನಾವಿಬ್ಬರು ಹೀರೋಗಳು. ಬೇರೆ ಯಾರಾದರೂ ಆಗಿದ್ದರೆ ಸಿನಿಮಾಗಾಗಿ ಗಲಾಟೆ ಮಾಡುತ್ತಿದ್ದರು. ಸಿನಿಮಾ ಬಗ್ಗೆ ಒಂದು ದಿನವೂ ನಾವಿಬ್ಬರು ಮಾತನಾಡುತ್ತಿರಲಿಲ್ಲ ಎಂದು ಹೇಳಿದ್ದರು.

    ಸೆನ್ಸ್ ಅಫ್ ಹ್ಯೂಮರ್ ನಲ್ಲಿ ವಿಷ್ಣು ನನಗಿಂತ ಎತ್ತರದಲ್ಲಿದ್ದಾನೆ. ಯಾರಾದರೂ ಇದ್ದರೆ ಸುಮ್ಮನೆ ಇರುತ್ತಿದ್ದ, ನಾನು ಮತ್ತು ಸುಮಲತಾ ಇದ್ದಾಗ ಬೇರೆಯವರು ಹೇಗೆ ಮಾತಾಡ್ತಾರೆ ಎಂಬುದನ್ನು ಮಿಮಿಕ್ರಿ ಮಾಡಿ ತೋರಿಸುತ್ತಿದ್ದನು. ಇಬ್ಬರು ಏಕಕಾಲದಲ್ಲಿ ಸಿನಿಮಾಗೆ ಎಂಟ್ರಿ ಕೊಟ್ಟಿದ್ದು, ಅವನಿಗೂ ಇಷ್ಟು ದೊಡ್ಡ ಹೀರೋ ಅಗ್ತೀನಿ ಅಂತಾ ಗೊತ್ತಿರಲಿಲ್ಲ. ನಾನು ಹೀರೋ ಆಗ್ತೀನಿ ಅಂತ ನನಗೂ ಗೊತ್ತಿರಲಿಲ್ಲ. ಅಂದಿನಿಂದ ಶುರುವಾದ ಸ್ನೇಹ ಇಂದಿಗೂ ಮುಂದುವರಿದುಕೊಂಡು ಬಂದಿದೆ ಎಂದು ವಿಷ್ಣು ಮತ್ತು ತಮ್ಮ ಸ್ನೇಹದ ಬಗ್ಗೆ ಮಾತುಗಳನ್ನಾಡಿದ್ದರು.

    https://www.youtube.com/watch?v=y7BaiZ-wkck

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಿಷ್ಣುವರ್ಧನ್ ಮತ್ತು ಅಂಬರೀಶ್ ಸ್ನೇಹ ಶುರುವಾಗಿದ್ದು ಹೇಗೆ?

    ವಿಷ್ಣುವರ್ಧನ್ ಮತ್ತು ಅಂಬರೀಶ್ ಸ್ನೇಹ ಶುರುವಾಗಿದ್ದು ಹೇಗೆ?

    ಬೆಂಗಳೂರು: ಸಾಹಸಸಿಂಹ ವಿಷ್ಣುವರ್ಧನ್ ಹಾಗೂ ರೆಬಲ್ ಸ್ಟಾರ್ ಅಂಬರೀಶ್ ಅವರ ಸ್ನೇಹ ಶುರುವಾಗಿದ್ದು ಹೇಗೆ ಎಂಬ ಇಂಟ್ರಸ್ಟಿಂಗ್ ಸ್ಟೋರಿ ಇಲ್ಲಿದೆ.

    ನಿರ್ದೇಶಕ ಪುಟ್ಟಣ್ಣ ಕಣಗಾಲ್ ನಾಗರಹಾವು ಸಿನಿಮಾಗಾಗಿ ಹೊಸ ನಟರನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಆಗ ಚಿಗುರು ಮೀಸೆಯ ತೀಕ್ಷ್ಣ ಕಣ್ಣಿನ ಹುಡುಗ ವಿಷ್ಣುವರ್ಧನ್ ಈ ಚಿತ್ರಕ್ಕೆ ನಾಯಕನಾಗಿ ಆಯ್ಕೆಯಾಗಿದ್ದರು. ಇದೇ ಚಿತ್ರದಲ್ಲಿ ಒಂದು ಸಣ್ಣ ಪಾತ್ರ ಅದು ಜಲೀಲನ ಪಾತ್ರಕ್ಕಾಗಿ ತುಸು ಪುಂಡನ ಲುಕ್ ಇರೋ ನಟನಿಗಾಗಿ ಪುಟ್ಟಣ್ಣ ಹುಡುಕಾಡುತ್ತಿದ್ದರು. ಆಗ ರೆಬಲ್ ಸ್ಟಾರ್ ಅಂಬರೀಶ್ ಅವರು ಜಲೀಲನ ಪಾತ್ರಕ್ಕೆ ಆಯ್ಕೆಯಾಗಿದ್ದರು. ಹೀಗೆ ನಾಗರಹಾವು ಸಿನಿಮಾ ಸೆಟ್ ನಲ್ಲಿ ವಿಷ್ಣು ಹಾಗೂ ಅಂಬರೀಶ್ ಮೊದಲ ಭೇಟಿಯಾಗಿತ್ತು.

    ವಿಷ್ಣುವರ್ಧನ್ ಮೊದಲಿನಿಂದಲೂ ಸ್ವಲ್ಪ ಹ್ಯೂಮರಸ್ ವ್ಯಕ್ತಿತ್ವದವರು. ಹೀಗಾಗಿ, ಅಂಬರೀಶ್ ಗೆ ಬಹಳ ಬೇಗನೆ ಹತ್ತಿರವಾದರು. ಈ ಚಿತ್ರದಲ್ಲಿ ವಿಷ್ಣು ಹೀರೋ ಆಗಿದ್ರೆ, ಅಂಬರೀಶ್ ವಿಲನ್ ರೋಲ್ ನಿಭಾಯಿಸಿದ್ದರು. ಆದರೆ ನಿಜ ಜೀವನದಲ್ಲಿ ಇಬ್ಬರೂ ತುಂಬಾ ಒಳ್ಳೆಯ ಸ್ನೇಹಿತರಾಗೋದಕ್ಕೆ ಈ ಚಿತ್ರವೂ ಕಾರಣವಾಯ್ತು. ಜಲೀಲನ ಪಾತ್ರದಲ್ಲಿದ್ದ ಅಂಬರೀಶ್ ನಟಿ ಆರತಿ ಅವರನ್ನು ರೇಗಿಸುತ್ತಿದ್ದರೆ, ಇತ್ತ ವಿಷ್ಣುವರ್ಧನ್ ಸೈಕಲ್ ನಲ್ಲಿ ಬಂದು ಫೈಟ್ ಮಾಡುವ ದೃಶ್ಯ ನೋಡುಗರಿಗೆ ಖುಷಿ ಕೊಟ್ಟಿತ್ತು.

    ಸಾಹಸಸಿಂಹ ವಿಷ್ಣುವರ್ಧನ್ ಬಗ್ಗೆ ಅಂಬರೀಶ್ ಗೆ ಎಲ್ಲಿಲ್ಲದ ಅಭಿಮಾನ. ಇಬ್ಬರೂ ಗಂಟೆಗಟ್ಟಲೆ ಕೂತು ಹರಟೆ ಹೊಡೆಯುತ್ತಾ, ಒಬ್ಬರ ಕಾಲನ್ನು ಮತ್ತೊಬ್ಬರು ಎಳೆದು ನಕ್ಕು ನಲಿಸುತ್ತಿದ್ದರು. ಬಹುಶಃ ನಾಗರಹಾವು ಚಿತ್ರದ ಮೂಲಕ ಚಿಗುರಿದ ಸ್ನೇಹ ಆದರ್ಶ ಸ್ನೇಹವಾಗುತ್ತೆ ಅಂತಾ ಅವರಿಬ್ಬರಿಗೂ ಅಂದು ಅರಿವೇ ಇರಲಿಲ್ಲ. ಚಿತ್ರದುರ್ಗದಲ್ಲಿ ನಾಗರಹಾವು ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಇಬ್ಬರೂ ಒಂದೇ ರೂಂನಲ್ಲಿ ಮಲಗುವ ಸಂದರ್ಭವಿತ್ತು. ಈ ಸಂದರ್ಭದಲ್ಲಂತೂ ವಿಷ್ಣು ಹಾಗೂ ಅಂಬರೀಶ್ ಮತ್ತಷ್ಟು ಕ್ಲೋಸ್ ಆದರು. ಚಿತ್ರದುರ್ಗದಲ್ಲಿ ನಡೆಯುತ್ತಿದ್ದ ಶೂಟಿಂಗ್ ಯಾವಾಗ ಬೆಂಗಳೂರಿಗೆ ಶಿಫ್ಟ್ ಆಯ್ತು ಆಗ ಅಂಬರೀಶ್ ವಿಷ್ಣು ಮನೆಗೆ ಹೋಗುತ್ತಿದ್ದರು.

    ನಾಗರಹಾವು ಚಿತ್ರ ಬಿಡುಗಡೆಗೂ ಮುನ್ನವೇ ಚಿತ್ರದ ಮೊದಲ ಪ್ರಿಂಟ್ ಮದ್ರಾಸ್ ನ ಖಾಸಗಿ ಚಿತ್ರ ಮಂದಿರವೊಂದರಲ್ಲಿ ಪ್ರದರ್ಶನವಾಗಿತ್ತು. ಮದ್ರಾಸ್‍ನ ನಿರ್ಮಾಪಕರು, ನಿರ್ದೇಶಕರು ಅದಾಗಲೇ ಚಿತ್ರವನ್ನು ನೋಡಿ ಅದ್ಭುತ ಎಂದು ಹೇಳಿದ್ದರು. ನಿರ್ಮಾಪಕರ ಹಾಗೂ ನಿರ್ದೇಶಕರ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಸಂದರ್ಭದಲ್ಲಿ ವಿಷ್ಣುವರ್ಧನ್ ಅಲ್ಲಿ ಇರಲಿಲ್ಲ. ಆಗ ಈ ಸುದ್ದಿಯನ್ನು ಅಂಬರೀಶ್ ಮೊದಲು ವಿಷ್ಣುವರ್ಧನ್ ಅವರಿಗೆ ತಿಳಿಸಿದ್ದರು.

    ವಿಷ್ಣುವರ್ಧನ್ ಅವರಿಗೆ ಸಿನಿಮಾ ಬಗ್ಗೆ ತುಂಬಾ ಭಯವಿತ್ತು. ಚಿತ್ರ ಬಿಡುಗಡೆಯಾದಾಗ ಮುಂದೆ ಏನಾಗುವುದೋ ಎಂಬ ಆತಂಕ ಅವರನ್ನು ಕಾಡುತ್ತಿತ್ತು. ರೀರೆಕಾರ್ಡಿಂಗ್ ಮುಗಿದು, ಸಿನಿಮಾ ಬಿಡುಗಡೆಯಾಯಿತು. ಅಂಬರೀಶ್ ಹಾಗೂ ವಿಷ್ಣು ಖುದ್ದಾಗಿ ಎಲ್ಲಾ ಚಿತ್ರಮಂದಿರಗಳಿಗೂ ಹೋಗಿ ಜನರ ಪ್ರತಿಕ್ರಿಯೆ ನೋಡಿಕೊಂಡು ಬರುತ್ತಿದ್ದರು. ನಾಗರ ಹಾವು ಸಿನಿಮಾ ಮೂಲಕ ಒಬ್ಬ ಹೀರೋ ಹಾಗೇ ಒಬ್ಬ ವಿಲನ್ ಪಾತ್ರಧಾರಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದರು. ಇಬ್ಬರಲ್ಲೂ ಅಸಾಧಾರಣವಾದ ಪ್ರತಿಭೆ ಇತ್ತು.

    ನಾಗರಹಾವು ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆಯಿಂದ ಇಬ್ಬರೂ ಸಖತ್ ಥ್ರಿಲ್ ಆಗಿದ್ದರು. ಕೇವಲ ಸೆಟ್‍ನಲ್ಲಷ್ಟೇ ಅಲ್ಲ. ಇನ್ನೂ ಮುಂದುವರಿದು ನಮ್ಮ ಸ್ನೇಹ ಎಂಥದ್ದು ಎನ್ನುವುದ್ದಕ್ಕೆ ಅಂಬರೀಶ್ ಮತ್ತು ವಿಷ್ಣು ಸಾಧಿಸಿದ್ದರು. ನಾಗರಹಾವು ಆರಂಭವಾಗಿದ್ದ ಸ್ನೇಹ ಮುಂದೆ ಆಫ್ ಸ್ಕ್ರೀನ್ ನಲ್ಲಿ ವಿಷ್ಣು ಅಂಬಿ ಒಬ್ಬರನೊಬ್ಬರು ಬಿಟ್ಟು ಇರುತ್ತಿರಲಿಲ್ಲ. 1973ರಲ್ಲಿ ಬಿಡುಗಡೆಯಾದ ನಾಗರಹಾವು ಸಿನಿಮಾ ಬೆಂಗಳೂರಿನ ಮೂರು ಥಿಯೇಟರ್ ಗಳಲ್ಲಿ ಜಯಭೇರಿ ಬಾರಿಸಿತ್ತು. ಈಗ ಮತ್ತೆ ಸಿನಿಮಾ ರೀ-ರಿಲೀಸ್ ಆಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಾಹಸಸಿಂಹ ಡಾ.ವಿಷ್ಣುವರ್ಧನ್ 69ನೇ ಜನ್ಮ ದಿನಾಚರಣೆ- ನೆಲಮಂಗಲ ವಿಷ್ಣು ಸೇನಾ ಸಂಸ್ಥೆಯಿಂದ ಆಚರಣೆ

    ಸಾಹಸಸಿಂಹ ಡಾ.ವಿಷ್ಣುವರ್ಧನ್ 69ನೇ ಜನ್ಮ ದಿನಾಚರಣೆ- ನೆಲಮಂಗಲ ವಿಷ್ಣು ಸೇನಾ ಸಂಸ್ಥೆಯಿಂದ ಆಚರಣೆ

    ಬೆಂಗಳೂರು: ಸಾಹಸಸಿಂಹ ಅಭಿನವ ಭಾರ್ಗವ ಡಾ. ವಿಷ್ಣುವರ್ಧನ್ ಅವರ 69ನೇ ಜನ್ಮ ದಿನಾಚರಣೆಯನ್ನು ಸಡಗರ ಸಂಭ್ರಮದಿಂದ ಅಭಿಮಾನಿಗಳು ಆಚರಿಸಿದರು.

    ಬೆಂಗಳೂರು ಹೊರವಲಯ ನೆಲಮಂಗಲ ಪಟ್ಟಣದ ಹೊನ್ನಗಂಗಯ್ಯನ ಪಾಳ್ಯದಲ್ಲಿ ವಿಷ್ಣು ಸೇವಾ ಸಮಿತಿಯಿಂದ ಹುಟ್ಟುಹಬ್ಬದ ಆಚರಣೆಯನ್ನು ಅಭಿಮಾನಿಗಳು ಕೇಕ್ ಅನ್ನು ಕತ್ತರಿಸಿ, ಕಂಚಿನ ವಿಷ್ಣು ಪುತ್ಥಳಿಗೆ ಮಾಲಾರ್ಪಣೆ ಮಾಡಿ ತಮ್ಮ ನೆಚ್ಚಿನ ನಾಯಕ ನಟನ ಸ್ಮರಣೆ ಮಾಡಿದರು.

    ಯಾವ ಸರ್ಕಾರ ಬಂದರೂ, ಯಾರೇ ಮುಖ್ಯಮಂತ್ರಿ ಆದರೂ ಇದುವರೆಗೆ, ಬೆಂಗಳೂರು ನಗರದಲ್ಲಿ ವಿಷ್ಣು ಸ್ಮಾರಕ ನಿರ್ಮಾಣ ಮಾಡದೇ ಇರುವುದು ಬೇಸರದ ಸಂಗತಿಯಾಗಿದೆ. ಇನ್ನಾದರೂ ಜನ ಪ್ರತಿನಿಧಿಗಳು ಸ್ಮಾರಕ ನಿರ್ಮಾಣ ಮಾಡುವತ್ತ ಮನಸ್ಸು ಮಾಡಬೇಕು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ವಿಷ್ಣು ಸೇವಾ ಸಮಿತಿಯ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.

    ಸಾಹಸಸಿಂಹ ವಿಷ್ಣುವರ್ಧನ್ ಅವರ 68 ನೇ ಹುಟ್ಟುಹಬ್ಬವನ್ನು ಅಭಿಮಾನಿಗಳು ಸಮಾಧಿ ಮುಂದೆ ಕೇಕ್ ಕಟ್ ಮಾಡೋದರ ಮೂಲಕ ಸಂಭ್ರಮಿಸಿದರು. ಇದೇ ವೇಳೆ ವಿಷ್ಣುವರ್ಧನ್ ಅಭಿಮಾನಿಯೊಬ್ಬರು ಪಬ್ಲಿಕ್ ಟಿವಿ ಜೊತೆ ಮಾತನಾಡಿ, ವಿಷ್ಣು ದಾದಾ ಅವರ 69ನೇ ಹುಟ್ಟು ಹಬ್ಬವನ್ನು ಆಚರಿಸುತ್ತಿದ್ದೇವೆ. ಪ್ರತೀ ವರ್ಷದಂತೆ ಈ ವರ್ಷವೂ ಮಧ್ಯರಾತ್ರಿ 12 ಗಂಟೆಯ ಸುಮಾರಿಗೆ ಅಭಿಮಾನಿಗಳು ಸೇರಿ ಹುಟ್ಟುಹಬ್ಬವನ್ನು ಆಚರಿಸುತ್ತೇವೆ. ಬೆಳಗ್ಗೆ ಇತಿಶ್ರೀ ಡಾ. ವಿಷ್ಣುವರ್ಧನ್ ಅಭಿಮಾನಿಗಳ ಬಳಗದಿಂದ ರಕ್ತದಾನ ಶಿಬಿರ, ಮನರಂಜನಾ ಕಾರ್ಯಕ್ರಮ, ಡೆಂಟಲ್ ಹಾಗೂ ನೇತ್ರದಾನ ಶಿಬಿರಗಳನ್ನು ಮಾಡುತ್ತಿದ್ದೇವೆ ಎಂದು ಹೇಳಿದರು.

    ಸ್ಯಾಂಡಲ್‍ವುಡ್‍ನ ರಿಯಲ್ ಸ್ಟಾರ್ ಉಪೇಂದ್ರ, ಸಾಹಸಸಿಂಹ ವಿಷ್ಣುವರ್ಧನ್ ಹಾಗೂ ನಟಿ ಶೃತಿ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ನಗರದ ಕತ್ರಿಗುಪ್ಪೆಯ ತಮ್ಮ ನಿವಾಸದಲ್ಲಿ ಉಪೇಂದ್ರ ಅವರ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ 51 ನೇ ಬರ್ತ್ ಡೇ ಆಚರಿಸಿಕೊಂಡರು. ಅಭಿಮಾನಿಗಳು ಅದ್ಧೂರಿಯಿಂದ ರಿಯಲ್ ಸ್ಟಾರ್ ಬರ್ತ್ ಡೇ ಆಚರಣೆ ಮಾಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಭಿಮಾನಿಗಳ ಜೊತೆ ಉಪ್ಪಿ, ಸಮಾಧಿ ಮುಂದೆ ವಿಷ್ಣುದಾದಾ ಬರ್ತ್ ಡೇ ಆಚರಣೆ

    ಅಭಿಮಾನಿಗಳ ಜೊತೆ ಉಪ್ಪಿ, ಸಮಾಧಿ ಮುಂದೆ ವಿಷ್ಣುದಾದಾ ಬರ್ತ್ ಡೇ ಆಚರಣೆ

    ಬೆಂಗಳೂರು: ಸ್ಯಾಂಡಲ್‍ವುಡ್‍ನ ರಿಯಲ್ ಸ್ಟಾರ್ ಉಪೇಂದ್ರ, ಸಾಹಸಸಿಂಹ ವಿಷ್ಣುವರ್ಧನ್ ಹಾಗೂ ನಟಿ ಶೃತಿ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ.

    ನಗರದ ಕತ್ರಿಗುಪ್ಪೆಯ ತಮ್ಮ ನಿವಾಸದಲ್ಲಿ ಉಪೇಂದ್ರ ಅವರ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ 51 ನೇ ಬರ್ತ್ ಡೇ ಆಚರಿಸಿಕೊಂಡರು. ಅಭಿಮಾನಿಗಳು ಅದ್ಧೂರಿಯಿಂದ ರಿಯಲ್ ಸ್ಟಾರ್ ಬರ್ತ್ ಡೇ ಆಚರಣೆ ಮಾಡಿದ್ರು.

    ಸಾಹಸಸಿಂಹ ವಿಷ್ಣುವರ್ಧನ್ ಅವರ 68 ನೇ ಹುಟ್ಟುಹಬ್ಬವನ್ನು ಅಭಿಮಾನಿಗಳು ಸಮಾಧಿ ಮುಂದೆ ಕೇಕ್ ಕಟ್ ಮಾಡೋದರ ಮೂಲಕ ಸಂಭ್ರಮಿಸಿದ್ರು. ಇಂದು ಸ್ಯಾಂಡಲ್‍ವುಡ್ ನಟಿ ಶೃತಿ ಸಹ ತಮ್ಮ ಬರ್ತ್‍ಡೇ ಆಚರಿಸಿಕೊಂಡಿದ್ದಾರೆ.

    ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಟ ಉಪೇಂದ್ರ, ಸಿನಿಮಾಕ್ಕೆ ಸೇರಿ ಬಳಿಕ ಇದೂವರೆಗೂ ನಾನು ಬರ್ತ್ ಡೇ ಆಚರಿಸಿಕೊಂಡಿಲ್ಲ. ಅಭಿಮಾನಿಗಳೇ ನನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡು ಬಂದಿದ್ದರು. ಹೀಗಾಗಿ ಇದು ಅಭಿಮಾನಿಗಳ ದಿನವೆಂದು ನಾನು ಯಾವತ್ತೂ ಹೇಳುತ್ತೇನೆ. ಇಂದು ಉಪ್ಪಿ ಬರ್ತ್ ಡೇ ಆಗಿದೆ. ಇನ್ನು ಮುಂದೆ ಯುಪಿಪಿ ಬರ್ತ್ ಡೇ ಆಗಬೇಕು. ಈಗಿನ ಜನಾಂಗ ಇನ್ನು 50 ವರ್ಷಗಳ ಕಾಲ ಅದನ್ನು ಮುಂದುವರಿಸಿಕೊಂಡು ಹೋಗಬೇಕು. ಹೀಗಾಗಿ ಇಂದು ಅದಕ್ಕೋಸ್ಕರ ಒಂದು ವೇದಿಕೆ ಮಾಡಿದ್ದೇನೆ. ನಿಮಗೆಲ್ಲರಿಗೂ ಅದರ ಬಗ್ಗೆ ವಿವರವಾಗಿ ವಿಷಯ ತಿಳಿಸುತ್ತೇನೆ ಅಂದ್ರು.

    ಪ್ರಜಾಕೀಯದಲ್ಲಿ ಏಳು-ಬೀಳು ಅನ್ನೋದು ಇಲ್ಲ. ಯಾರು ನಂಬಿಕೆಯಿಟ್ಟು ಮುಂದೆ ಬರುತ್ತಾರೋ ಅವರಿಗೆ ಗೆಲುವು ಅಂತಾನೇ ಅರ್ಥ. ಎಷ್ಟು ವರ್ಷವಾದ್ರೂ ಸತ್ಯ ಹೇಳೋದಕ್ಕೆ ಸೋಲು-ಗೆಲುವು ಇಲ್ಲ. ಯಾವತ್ತಿದ್ರೂ ಇದಾಗಬೇಕು. ಖಂಡಿತ ಒಳ್ಳೆಯದಾಗುತ್ತದೆ. ಇಲ್ಲಿ ಯಾರು ತಪ್ಪು ಮಾಡುತ್ತಿದ್ದಾರೆ ಅಂತ ಹೇಳಲ್ಲ, ಹೀಗಾಗಿ ಅವರೆಲ್ಲರೂ ದೊಡ್ಡವರು. ತುಂಬಾ ವರ್ಷಗಳಿಂದಲೂ ಇರುವವರು, ಆದುದರಿಂದ ನಮಗಿಂತಲೂ ಅವರಿಗೆ ತುಂಬಾನೇ ಅನುಭವ ಇದೆ. ಆದ್ರೆ ಇಲ್ಲಿ ಹೊಸಬರೇ ಮಾಡಬೇಕಾದ್ದರಿಂದ ನಾನು ಹೊಸಬರಿಗೆ ಅಂತಾನೇ ಒಂದು ಪಕ್ಷ ಮಾಡಿದ್ದೇನೆ ಅಂತ ಹೇಳಿದ್ರು.

    ಇದೇ ವೇಳೆ ವಿಷ್ಣುವರ್ಧನ್ ಅಭಿಮಾನಿಯೊಬ್ಬರು ಪಬ್ಲಿಕ್ ಟಿವಿ ಜೊತೆ ಮಾತನಾಡಿ, ವಿಷ್ಣು ದಾದಾ ಅವರ 69ನೇ ಹುಟ್ಟು ಹಬ್ಬವನ್ನು ಆಚರಿಸುತ್ತಿದ್ದೇವೆ. ಪ್ರತೀ ವರ್ಷದಂತೆ ಈ ವರ್ಷವೂ ಮಧ್ಯರಾತ್ರಿ 12 ಗಂಟೆಯ ಸುಮಾರಿಗೆ ಅಭಿಮಾನಿಗಳು ಸೇರಿ ಹುಟ್ಟುಹಬ್ಬವನ್ನು ಆಚರಿಸುತ್ತೇವೆ. ಬೆಳಗ್ಗೆ ಇತಿಶ್ರೀ ಡಾ. ವಿಷ್ಣುವರ್ಧನ್ ಅಭಿಮಾನಿಗಳ ಬಳಗದಿಂದ ರಕ್ತದಾನ ಶಿಬಿರ, ಮನರಂಜನಾ ಕಾರ್ಯಕ್ರಮ, ಡೆಂಟಲ್ ಹಾಗೂ ನೇತ್ರದಾನ ಶಿಬಿರಗಳನ್ನು ಮಾಡುತ್ತಿದ್ದೇವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಿಷ್ಣುವರ್ಧನ್ ಕಟೌಟ್‍ಗೆ ಅಭಿಮಾನಿಯಿಂದ ರಕ್ತದ ಅಭಿಷೇಕ!

    ವಿಷ್ಣುವರ್ಧನ್ ಕಟೌಟ್‍ಗೆ ಅಭಿಮಾನಿಯಿಂದ ರಕ್ತದ ಅಭಿಷೇಕ!

    ಬೆಂಗಳೂರು: ತಮ್ಮ ನೆಚ್ಚಿನ ನಟರಿಗೆ ಅಭಿಮಾನಿಗಳು ಪ್ರಾಣ ಕೊಡೋಕೆ ತಯಾರಿರುತ್ತಾರೆ. ಅಂತೆಯೇ ಇಲ್ಲೊಬ್ಬರು ಅಭಿಮಾನಿ ತನ್ನ ನೆಚ್ಚಿನ ನಟ ಸಾಹಸ ವಿಷ್ಣುವರ್ಧನ್ ಗಾಗಿ ರಕ್ತದ ಅಭಿಷೇಕವನ್ನೇ ಮಾಡಿದ್ದಾರೆ.

    ಮೈಸೂರು ಮೂಲದ ವ್ಯಕ್ತಿ ಸಾಹಸಸಿಂಹ ವಿಷ್ಣುವರ್ಧನ್ ಅವರ ಅಪ್ಪಟ ಅಭಿಮಾನಿಯಾಗಿದ್ದು, ವಿಷ್ಣುದಾದಾ ಅಂದ್ರೆ ಇವರಿಗೆ ಎಲ್ಲಿಲ್ಲದ ಪ್ರೀತಿ ಹಾಗೂ ಅಭಿಮಾನ. ಈ ಅಭಿಮಾನಿಯ ರಕ್ತಾಭಿಮಾನ ಹಾಗೂ `ನಯಾ ನಾಗರಹಾವು’ ಸಿನಿಮಾಗೆ ಸಿಕ್ತಿರುವ ರೆಸ್ಪಾನ್ಸ್ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ.

    ನಾಗರಹಾವು ಸಿನಿಮಾ ರೀ-ರಿಲೀಸ್ ಆಗಿದ್ದು, ಕರುನಾಡ ಮಂದಿ ಅದ್ಧೂರಿಯಾಗಿ ನಯಾ ನಾಗರಹಾವು ಚಿತ್ರವನ್ನ ಚಿತ್ರಮಂದಿರಕ್ಕೆ ಬರಮಾಡಿಕೊಂಡಿದ್ದಾರೆ. ಕಳೆದ ಎರಡು ದಿನಗಳಿಂದ ಥಿಯೇಟರ್ ಮುಂದೆ ಹಬ್ಬ ಮಾಡಿ ಸಂಭ್ರಮಿಸುತ್ತಿದ್ದಾರೆ. ಡಿಜಿಟಲ್ ರೂಪ ಪಡೆದುಕೊಂಡಿರುವ ನಾಗರಹಾವು ಆರ್ಭಟಕ್ಕೆ ವಿಷ್ಣು ಅಭಿಮಾನಿ ಖುಷಿಯಾಗಿದ್ದಾರೆ. ಆದರೆ ಮೈಸೂರಿನ ಅಭಿಮಾನಿ ದಾದಾನ ಕಟೌಟ್‍ಗೆ ನೆತ್ತರ ಅಭಿಷೇಕ ಮಾಡಿ ಅಭಿಮಾನದ ಪರಾಕಾಷ್ಠೆ ಮೆರೆದಿದ್ದಾರೆ. ಇದನ್ನೂ ಓದಿ: ಕಲರ್ ಫುಲ್ ನಾಗರಹಾವಿಗೆ ಮನಸೋತ ಅಭಿಮಾನಿಗಳು- ಸಿನಿಮಾ ವೀಕ್ಷಿಸಿದ್ರು ಹ್ಯಾಟ್ರಿಕ್ ಹೀರೋ ಶಿವಣ್ಣ

    45 ವರ್ಷಗಳ ಹಳೆಯ ಸಿನಿಮಾವಾದರೂ ಬೆಳ್ಳಿತೆರೆ ಮೇಲೆ ಮೋಡಿ ಮಾಡ್ತಿರುವುದು ವಿಶೇಷ. ಪ್ರೇಕ್ಷಕರಿಂದ ಹಿಡಿದು ಸ್ಟಾರ್ ಗಳು ಕೂಡ ವಿಷ್ಣು ಅಭಿನಯದ ನಾಗರಹಾವು ಸಿನಿಮಾ ನೋಡೋದಕ್ಕೆ ಮುಗಿಬೀಳ್ತಿದ್ದಾರೆ. ಇಂಟ್ರೆಸ್ಟಿಂಗ್ ಅಂದ್ರೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೂಡ ಅಭಿಮಾನಿಗಳ ಜೊತೆ ಕುಳಿತು ಸಿನಿಮಾ ನೋಡಿದ್ದರು. ಒಬ್ಬ ಅಭಿಮಾನಿಯಂತೆ ಕರುನಾಡ ಚಕ್ರವರ್ತಿ ಶಿವಣ್ಣ, ಸಾಹಸಸಿಂಹನ ಅಭಿನಯವನ್ನ ಕಣ್ತುಂಬಿಸಿಕೊಂಡಿದ್ದರು.

    ಒಟ್ಟಿನಲ್ಲಿ ರಾಮಾಚಾರಿಯ ಆರ್ಭಟ ಕರುನಾಡಲ್ಲಿ ಜೋರಾಗಿದೆ. ರಾಜಾದ್ಯಂತ ಎಲ್ಲಾ ಚಿತ್ರಮಂದಿರಗಳು ಹೌಸ್ ಫುಲ್ ಪ್ರದರ್ಶನ ಕಾಣ್ತಿದೆ. ಇದರ ಮೂಲಕ ಅಭಿಮಾನಿಗಳ ಹೃದಯದಲ್ಲಿ ವಿಷ್ಣುದಾದಾ ಚಿರಸ್ಥಾಯಿ ಅನ್ನೋದು ಮತ್ತೊಮ್ಮೆ, ಮಗದೊಮ್ಮೆ ಸಾಬೀತಾಗಿದೆ.

  • ‘ನಾಗರಹಾವು’ ಸಿನಿಮಾ ರೀ ರಿಲೀಸ್- ಅಭಿಮಾನಿಗಳಿಂದ ವಿಷ್ಣುದಾದಾಗೆ ಭರ್ಜರಿ ಸ್ವಾಗತ!

    ‘ನಾಗರಹಾವು’ ಸಿನಿಮಾ ರೀ ರಿಲೀಸ್- ಅಭಿಮಾನಿಗಳಿಂದ ವಿಷ್ಣುದಾದಾಗೆ ಭರ್ಜರಿ ಸ್ವಾಗತ!

    ಬೆಂಗಳೂರು: ಸಾಹಸ ಸಿಂಹ ವಿಷ್ಣುವರ್ಧನ್ ಅಭಿನಯದ ನಾಗರಹಾವು ಚಿತ್ರ ಇಂದು ಮತ್ತೆ ತೆರೆಗೆ ಬಂದಿದೆ. ಧ್ವನಿ ವಿನ್ಯಾಸ, ಸಿನಿಮಾ ಸ್ಕೋಪ್ ಮೂಲಕ ಚಿತ್ರ ರೀ- ರಿಲೀಸ್ ಆಗಿದೆ. ರಾಜ್ಯಾದ್ಯಂತ ವಿಷ್ಣುವರ್ಧನ್ ಅಭಿಮಾನಿಗಳು ಭರ್ಜರಿಯಿಂದ ಚಿತ್ರವನ್ನು ಸ್ವಾಗತಿಸಿದ್ದಾರೆ.

    ಸಾಹಸಸಿಂಹ ವಿಷ್ಣುವರ್ಧನ್ ಅವರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸುತ್ತಲೇ ಸ್ಟಾರ್ ಆಗಿಯೂ ರೂಪಿಸಿದ ಚಿತ್ರ ನಾಗರಹಾವು. ಪುಟ್ಟಣ್ಣ ಕಣಗಾಲ್ ನಿರ್ದೇಶನದ ಈ ಚಿತ್ರವನ್ನು ಕ್ರೇಜಿಸ್ಟಾರ್ ರವಿಚಂದ್ರನ್ ಸಹೋದರ ಬಾಲಾಜಿ ನವೀನ ತಂತ್ರಜ್ಞಾನದೊಂದಿಗೆ ತೆರೆಗೆ ತಂದಿದ್ದಾರೆ.

    ನಾಗರಹಾವು ಚಿತ್ರ ಮರು ಬಿಡುಗಡೆ ಹಿನ್ನೆಲೆಯಲ್ಲಿ ಬಾಗಲಕೋಟೆಯ ಕೃಷ್ಣಾ ಥೇಟರ್ ಆವರಣದಲ್ಲಿ ವಿಷ್ಣು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಚಿತ್ರಮಂದಿರದಲ್ಲಿ ಸಂಭ್ರಮ ಮನೆ ಮಾಡಿದೆ. 70ರ ದಶಕದಲ್ಲಿ ನಾಗರ ಹಾವು ಚಿತ್ರ ತೆರೆಕಂಡಿತ್ತು. ಈಗ ಡಾ. ವಿಷ್ಣು ಸೇನಾ ಕಾರ್ಯಕರ್ತರ ಸಂಭ್ರಮಾಚರಣೆ ಮಾಡುತ್ತಿದ್ದು, ದಿವಗಂತ ವಿಷ್ಣುವರ್ಧನ ಅವರ ಕಟೌಟ್ ಗೆ ಹಾಲಿನ ಅಭಿಷೇಕ ಮಾಡಿ ಸಂಭ್ರಮಿಸಿದ್ದಾರೆ. ಅಲ್ಲದೇ ವಿಷ್ಣು ಭಾವಚಿತ್ರವಿರುವ ಕೇಕ್ ಕಟ್ ಮಾಡಿ, ಸಿಹಿ ಹಂಚಿ ರಾಮಾಚಾರಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ.

    ದಾವಣಗೆರೆಯಲ್ಲೂ ವಿಷ್ಟು ಅಭಿಮಾನಿಗಳ ಸಂಭ್ರಮ ಮನೆ ಮಾಡಿದೆ. ನಗರದ ಪುಷ್ಪಾಂಜಲಿ ಚಿತ್ರಮಂದಿರದಲ್ಲಿ ರಿಲೀಸ್ ಆಗಿದೆ. ಅಭಿಮಾನಿಗಳು 20 ಅಡಿ ಎತ್ತರದ ವಿಷ್ಣು ಕಟೌಟ್ ಗೆ ಹೂವಿನ ಹಾರ ಹಾಕಿ ಜೈಕಾರ ಕೂಗಿದ್ರು. ಕಟೌಟ್ ಗೆ ಕೊಡಗಳಲ್ಲಿ ಹಾಲಿನ ಅಭಿಷೇಕ ಮಾಡಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ರು. ವಿಷ್ಣುವರ್ಧನ್ ಅಭಿಮಾನಿಯೊಬ್ಬ ಆಕರ್ಷಕ ಉಡುಗೆ ತೊಟ್ಟು ಅಭಿಮಾನಿಗಳನ್ನು ರಂಜಿಸಿದ್ರು. ಅಲ್ಲದೆ ಸಾಹಸಸಿಂಹ ವಿಷ್ಣುವರ್ಧನ್ ಡೈಲಾಗ್ ಹೇಳಿ ನಾಗರಹಾವು ಚಿತ್ರ ನೂರು ದಿನಗಳು ಪೂರೈಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು.

    ರಾಯಚೂರಿನಲ್ಲೂ ಆಧುನಿಕ ತಂತ್ರಜ್ಞಾನದ ಮೆರಗಿನೊಂದಿಗೆ ಬಿಡುಗಡೆಯಾದ ಡಾ.ವಿಷ್ಣುವರ್ಧನ್ ಅಭಿನಯದ ಸೂಪರ್ ಹಿಟ್ ಸಿನಿಮಾ ನಾಗರಹಾವುಗೆ ಅಭಿಮಾನಿಗಳು ಭರ್ಜರಿ ಸ್ವಾಗತ ಕೋರಿದ್ದಾರೆ. ನಗರದ ಎಸ್ ಎನ್ ಟಿ ಚಿತ್ರಮಂದಿರದಲ್ಲಿ ಸಿನಿಮಾ ಬಿಡುಗಡಯಾಗಿದ್ದು, ಚಿತ್ರದ ಪೋಸ್ಟರ್ ಗೆ ಅಭಿಮಾನಿಗಳು ಹಾಲಿನ ಅಭಿಷೇಕ ಮಾಡಿದ್ದಾರೆ. ವಿಷ್ಣುವರ್ಧನ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಸಿನಿಮಾ ಮರು ಬಿಡುಗಡೆಯಾಗಿದ್ದಕ್ಕೆ ಸಂಭ್ರಮಿಸಿದ್ದಾರೆ. ತೆಂಗಿನಕಾಯಿ ಹೊಡೆಯುವ ಮೂಲಕ ಸಿನಿಮಾ ಶತದಿನ ಆಚರಿಸಬೇಕು ಎಂದು ಹಾರೈಸಿದ್ದಾರೆ.

    ಹುಬ್ಬಳ್ಳಿಯ ರೂಪಂ ಚಿತ್ರಮಂದಿರದಲ್ಲಿ ನಾಗರಹಾವು ಚಿತ್ರ ತೆರೆಕಂಡಿದೆ. ಡಾ. ವಿಷ್ಣು ಸೇನಾ ಸಮಿತಿ ವತಿಯಿಂದ ಸಂಭ್ರಮಾಚರಣೆ ಮನೆ ಮಾಡಿದೆ. ದಿವಗಂತ ವಿಷ್ಣುವರ್ಧನ ಅವರ ಕಟೌಟ್ ಗೆ ಹಾಲಿನ ಅಭಿಷೇಕ ಮಾಡಿದ್ದಾರೆ. ಅಲ್ಲದೇ ಡಾ. ವಿಷ್ಣುವರ್ಧನ್ ಕಟೌಟ್ ಗೆ ಬೃಹತ್ ಗಾತ್ರದ ಹಾರ ಹಾಕಿ ರಾಮಾಚಾರಿ ಶಿಷ್ಯಂದಿರು ಅಭಿಮಾನ ಮೆರೆದಿದ್ದಾರೆ. ಸ್ಟೇಷನ್ ರಸ್ತೆಯಲ್ಲಿರುವ ರೂಪಂ ಚಿತ್ರಮಂದಿರದಲ್ಲಿ ವಿಷ್ಣುವರ್ಧನ್ ಅಭಿಮಾನಿಗಳು ಸಂಭ್ರಮ ಮಾಡುತ್ತಿದ್ದಾರೆ.

    ತುಮಕೂರು ಜಿಲ್ಲೆಯಲ್ಲೂ ಕೂಡಾ ಡಾ. ವಿಷ್ಣುವರ್ದನ್ ಅಭಿನಯದ ನಾಗರಹಾವು ಸಿನಿಮಾ ಹೊಸ ತಂತ್ರಜ್ಞಾನದೊಂದಿಗೆ ಮರು ಬಿಡುಗೆಡೆಯಾಗಿದೆ. ತುಮಕೂರು ನಗರದ ಮಾರುತಿ ಚಿತ್ರಮಂದಿರದಲ್ಲಿ ನಾಗರಹಾವು ಬಿಡುಗಡೆಯಾಗಿದೆ. ವಿಷ್ಣು ಅಭಿಮಾನಿಗಳು ವರ್ಣಮಯ ಚಿತ್ರ ನೋಡಿ ಫುಲ್ ಖುಷ್ ಆಗಿದ್ದಾರೆ. ಸಾಹಸ ಸಿಂಹರ ಕಟೌಟ್ ತಯಾರಿಸಿ ಹೂವಿನ ಹಾರ ಹಾಕಿ ಪೂಜೆ ಮಾಡಿದ್ದಾರೆ. ಅಲ್ಲದೇ ಕ್ಷೀರಾಭಿಷೇಕ ಮಾಡಿ ಅನ್ನಸಂತರ್ಪಣೆ ನೇರವೇರಿಸಿ ವಿಷ್ಣು ಅಭಿಮಾನಿಗಳು ಸಂಭ್ರಮಿಸಿದ್ದಾರೆ.

  • ಸಾಹಸಸಿಂಹ ವಿಷ್ಣುವರ್ಧನ್ ಅಭಿಮಾನಿಗಳಿಗೆ ಗುಡ್ ನ್ಯೂಸ್!

    ಸಾಹಸಸಿಂಹ ವಿಷ್ಣುವರ್ಧನ್ ಅಭಿಮಾನಿಗಳಿಗೆ ಗುಡ್ ನ್ಯೂಸ್!

    ಬೆಂಗಳೂರು: ಬೆಳ್ಳಿತೆರೆ ಮೇಲೆ ಸಾಹಸಸಿಂಹ ವಿಷ್ಣುವರ್ಧನ್ ನಟಿಸಿದ ‘ನಾಗರಹಾವು’ ಚಿತ್ರ ರಿ-ರಿಲೀಸ್ ಆಗಲಿದೆ.

    ಪುಟ್ಟಣ್ಣ ಕಣಗಾಲ್ ನಿರ್ದೇಶನದ ನಾಗರಹಾವು ಸಿನಿಮಾ ರಿ-ರಿಲೀಸ್ ಆಗ್ತಿರೋ ಮೂಲಕ ಬೆಳ್ಳಿತೆರೆ ಮೇಲೆ ಮತ್ತೆ ರಾಮಾಚಾರಿಯ ದರ್ಶನವಾಗುತ್ತಿದೆ. ಇದೀಗ ಹೊಸ ಲುಕ್‍ನಲ್ಲಿ ಅಭಿಮಾನಿ ದೇವರುಗಳಿಗೆ ದರ್ಶನ ಕೊಡೋದಕ್ಕೆ ಸಜ್ಜಾಗಿದ್ದು, ವೆಲ್‍ಕಮ್ ಮಾಡಿಕೊಳ್ಳೋಕ್ಕೆ ಚಿತ್ರರಂಗ ಕೂಡ ತುದಿಗಾಲಲ್ಲಿ ನಿಂತಿದೆ.

    ಚಂದನವನಕ್ಕೆ ಇಬ್ಬರು ದೊಡ್ಡ ನಟರನ್ನು ಕೊಟ್ಟ ನಾಗರಹಾವು ಎಂದೆಂದಿಗೂ ಎವರ್ ಗ್ರೀನ್ ಚಿತ್ರ. ಈ ಬಾರಿ ಬೆಳ್ಳಿತೆರೆ ಮೇಲೆ ಹೈ ಗ್ರೇಡ್ ಕಲರ್ ಫುಲ್ ರಾಮಾಚಾರಿಯನ್ನು ಎಲ್ಲರೂ ನೋಡಬಹುದಾಗಿದೆ.

    7.1 ತಂತ್ರಜ್ಞಾನದಲ್ಲಿ ನಾಗರಹಾವನ್ನ ರೆಡಿ ಮಾಡಿದ್ದು, ಮ್ಯೂಸಿಕ್‍ನ ರಿ-ಕ್ರಿಯೇಟ್ ಮಾಡಲಾಗಿದೆ. ಡಿಜಿಟಲ್ ಸೌಂಡಿಂಗ್ ಎಫೆಕ್ಟ್ ನಲ್ಲಿ ಎದ್ದು ಬರುತ್ತದೆ. ಈಗಾಗಲೇ ರಿಲೀಸ್ ಆಗಿರುವ ನಾಗರಹಾವು ಟೀಸರ್ ಭಾರೀ ಸದ್ದು ಮಾಡ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಹಲ್‍ಚಲ್ ಎಬ್ಬಿಸಿದೆ.

    ಇನ್ನೂ ವಿಶೇಷ ಅಂದ್ರೆ ಡಿಜಿಟಲ್ ತಂತ್ರಜ್ಞಾನದಲ್ಲಿ ಮೂಡಿ ಬರ್ತಿರುವ ನಾಗರಹಾವು ಸಿನಿಮಾ ನೋಡೋದಕ್ಕೆ ಸಿನಿಪ್ರಿಯರು ಮಾತ್ರವಲ್ಲ ಸಿನಿಮಾ ಮಂದಿ ಕೂಡ ಕಾದು ಕುಳಿತಿದ್ದಾರೆ. ಹೊಸ ರಾಮಾಚಾರಿಯ ಬಗ್ಗೆ ಮಾತನಾಡೋದಕ್ಕೆ ಸ್ಯಾಂಡಲ್‍ವುಡ್‍ನ ಹಲವು ಗಣ್ಯರು ಆಗಮಿಸಿದ್ರು.

    ಭಾರತಿ ವಿಷ್ಣುವರ್ಧನ್, ಕ್ರೇಜಿಸ್ಟಾರ್ ರವಿಚಂದ್ರನ್, ಅಂಬರೀಷ್, ಲೀಲಾವತಿ, ಜಯಂತಿ, ರಾಕ್‍ಲೈನ್ ವೆಂಕಟೇಶ್ ಸೇರಿದಂತೆ ಹಲವರು ಹೊಸ ನಾಗರಹಾವಿನ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ರು. ಒಟ್ಟಿನಲ್ಲಿ ನಾಗರಹಾವು ಸಿನಿಮಾ ಬಿಡುಗಡೆಗೆ ಸಕಲ ಸಿದ್ಧತೆಗಳು ಆಗಿವೆ. ಜುಲೈ 20 ರಂದು ರಾಜ್ಯಾದ್ಯಂತ ಭರ್ಜರಿಯಾಗಿ ಬಿಡುಗಡೆಯಾಗಲಿದೆ.

  • ಬಹು ವರ್ಷಗಳ ಬಳಿಕ ಗೆಳೆಯ ವಿಷ್ಣುವರ್ಧನ್ ಮನೆಗೆ ತೆರಳಿದ ರೆಬೆಲ್ ಸ್ಟಾರ್!

    ಬಹು ವರ್ಷಗಳ ಬಳಿಕ ಗೆಳೆಯ ವಿಷ್ಣುವರ್ಧನ್ ಮನೆಗೆ ತೆರಳಿದ ರೆಬೆಲ್ ಸ್ಟಾರ್!

    ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಶ್ ಬಹಳ ವರ್ಷಗಳ ಬಳಿಕ ತನ್ನ ಆತ್ಮೀಯ ಗೆಳೆಯ ವಿಷ್ಣುವರ್ಧನ್ ಮನೆಗೆ ಭೇಟಿ ನೀಡಿದ್ದಾರೆ.

    ಜಯನಗರದಲ್ಲಿ ಅಂಬರೀಶ್ ನಟನೆಯ “ಅಂಬಿ ನಿಂಗ್ ವಯಸ್ಸಾಯತ್ತೋ” ಚಿತ್ರೀಕರಣ ನಡೆಯುತ್ತಿದ್ದು, ಈ ವೇಳೆ ಹತ್ತಿರದಲ್ಲೇ ಇದ್ದ ವಿಷ್ಣುವರ್ಧನ್ ಮನೆಗೆ ತೆರಳಿ ಸದಸ್ಯರ ಕುಶಲೋಪರಿ ವಿಚಾರಿಸಿದ್ದರು.

    ಭಾರತಿ ವಿಷ್ಣುವರ್ಧನ್ ಜೊತೆ ಕೆಲ ಕಾಲ ಮಾತನಾಡಿ ಯೋಗಕ್ಷೇಮ ವಿಚಾರಿಸಿದ್ದಾರೆ. ಸದ್ಯ ಅಂಬರೀಶ್ ರಾಜಕೀಯದಿಂದ ದೂರವಿದ್ದು, ಅಂಬಿ ನಿಂಗ್ ವಯಸ್ಸಾಯತ್ತೋ ಚಿತ್ರದ ಶೂಟಿಂಗ್ ನಲ್ಲಿ ತಮ್ಮನು ತಾವು ತೊಡಗಿದ್ದಾರೆ.

    ಈ ಚಿತ್ರದಲ್ಲಿ ಕಿಚ್ಚ ಸುದೀಪ್ ಜೂನಿಯರ್ ಅಂಬಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಕಿಚ್ಚನಿಗೆ ಜೋಡಿ ಆಗಿ ಮುಗೂತಿ ಸುಂದರಿ ಶೃತಿ ಹರಿಹರನ್ ಅಭಿನಯಿಸುತ್ತಿದ್ದಾರೆ. ಜಾಕ್ ಮಂಜು ನಿರ್ಮಾಣದಲ್ಲಿ ಗುರುದತ್ತ್ ಗಾನಿಗ ಕಲ್ಪನೆಯಲ್ಲಿ ಚಿತ್ರ ಮೂಡಿಬರುತ್ತಿದೆ.

  • ಕಳೆದ ದಿನಗಳನ್ನು ನನೆದ್ರೆ ಕಣ್ಣೀರು ಬರುತ್ತೆ ಅಂದ್ರು ನವರಸನಾಯಕ ಜಗ್ಗೇಶ್

    ಕಳೆದ ದಿನಗಳನ್ನು ನನೆದ್ರೆ ಕಣ್ಣೀರು ಬರುತ್ತೆ ಅಂದ್ರು ನವರಸನಾಯಕ ಜಗ್ಗೇಶ್

    ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಸದಾ ಚಟುವಟಿಕೆಯಲ್ಲಿರುವ ನವರಸನಾಯಕ ಜಗ್ಗೇಶ್ ಅವರು ಇಂದು ಆ ದಿನಗಳನ್ನು ನೆನೆಸಿಕೊಂಡ್ರೆ ಇದೀಗ ಕಣ್ಣೀರು ಬರುತ್ತದೆ ಅಂತ ಹೇಳಿದ್ದಾರೆ.

    ಟ್ವಿಟ್ಟರ್ ನಲ್ಲಿ ನಟ ಸುದೀಪ್ ಅಭಿಮಾನಿಯೊಬ್ಬರು, ಅಂಬರೀಶ್, ರವಿಚಂದ್ರನ್, ಜಗ್ಗೇಶ್ ಹಾಗೂ ವಿಷ್ಣುವರ್ಧನ್ ಜೊತೆಯಲ್ಲಿರೋ ಹಳೆಯ ಫೋಟೋವೊಂದನ್ನು ಟ್ಯಾಗ್ ಮಾಡಿದ್ದರು.

    ಇದಕ್ಕೆ ಪ್ರತಿಕ್ರಿಯಿಸಿದ ಜಗ್ಗೇಶ್ ಅವರು, ಮೂವರು ನನ್ನ ಛೇಡಿಸುತ್ತಿರುವುದು..!, ಅಂಬರೀಶ್ ರವರು ನಾನೇ ಜಾಸ್ತಿ ಕರಿಯ ಎಂದು.. ನಾನು ಇಲ್ಲಾ ನೀವೆ ಎಂದು.. ಆಗ ಅಂಬರೀಶ್ ಬಿಚ್ಚೋ ಶರ್ಟು ನೋಡೇಬಿಡೋಣ ಎಂದಾಗ ನಾನು ಇದು ಪಬ್ಲಿಕ್ ಅಂತ ಹೇಳಿದೆ. ಈ ವೇಳೆ ಎಲ್ಲರು ಬಿಚ್ಚು ನೋಡಣ ಎಂದಾಗಿನ ಚಿತ್ರವಾಗಿದೆ. ಆ ದಿನ ನೆನೆದರೆ ಕಣ್ಣೀರು ಬರುತ್ತದೆ. ಎಂಥ ಅದ್ಭುತ ಸಂತೋಷದ ದಿನಗಳು. ಇಂದು ಆ ಸಂತೋಷವೆಲ್ಲಾ ಇಲ್ಲ ಅಂತ ಹಳೆಯ ದಿನಗಳನ್ನು ಮೆಲುಕು ಹಾಕಿಕೊಂಡರು.

    ಸದ್ಯ ಪ್ರೀಮಿಯರ್ ಪದ್ಮಿನಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಈ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಈ ಚಿತ್ರವನ್ನು ರಮೇಶ್ ಚಂದ್ರ ನಿರ್ದೇಶಿಸುತ್ತಿದ್ದು, ಶೃತಿ ನಾಯ್ಡು ನಿರ್ಮಾಣ ಮಾಡುತ್ತಿದ್ದಾರೆ. ಮಧುಬಾಲ ಕೂಡ ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.