Tag: Vishnuvardhan Statue

  • ವಿಷ್ಣುವರ್ಧನ್ ಪುತ್ಧಳಿ ಧ್ವಂಸಗೊಳಿಸಿದವರಿಗೆ ಶಿಕ್ಷೆ ಆಗ್ಬೇಕು: ದರ್ಶನ್ ಕಿಡಿ

    ವಿಷ್ಣುವರ್ಧನ್ ಪುತ್ಧಳಿ ಧ್ವಂಸಗೊಳಿಸಿದವರಿಗೆ ಶಿಕ್ಷೆ ಆಗ್ಬೇಕು: ದರ್ಶನ್ ಕಿಡಿ

    ಬೆಂಗಳೂರು: ಸಾಹಸಸಿಂಹ ವಿಷ್ಣುವರ್ಧನ್ ಪುತ್ಥಳಿ ಧ್ವಂಸ ಮಾಡಿದ ದುಷ್ಕರ್ಮಿಗಳಿಗೆ ತಕ್ಕ ಶಿಕ್ಷೆಯಾಗಲಬೇಕೆಂದು ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಗ್ರಹಿಸಿದ್ದಾರೆ.

    ಕರ್ನಾಟಕದಲ್ಲಿ ಅತಿಯಾಗಿ ಪ್ರೀತಿಸೋ, ಆರಾಧಿಸೋ ವ್ಯಕ್ತಿಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುವ ನಮ್ಮ ನಲ್ಮೆಯ ಸಾಹಸ ಸಿಂಹ ಡಾ. ವಿಷ್ಣು ಸರ್ ಪುತ್ಥಳಿಯನ್ನು ಯಾರೋ ಕಿಡಿಗೇಡಿಗಳು ಯಾರು ಇಲ್ಲದ ಹೊತ್ತಿನಲ್ಲಿ ಧ್ವಂಸ ಮಾಡಿರುವುದು ನಾಚಿಕೆಯ ಸಂಗತಿ. ಇಂತ ದುಷ್ಕರ್ಮಿಗಳಿಗೆ ತಕ್ಕ ಶಿಕ್ಷೆಯಾಗಲೇಬೇಕು ಎಂದು ದರ್ಶನ್ ಟ್ವೀಟ್ ಮಾಡಿದ್ದಾರೆ.

    ಬೆಂಗಳೂರಿನ ಮಾಗಡಿ ರಸ್ತೆಯ ಟೋಲ್‍ಗೇಟ್ ಅಂಡರ್‍ಪಾಸ್ ಮೇಲಿದ್ದ ನಟ ಸಾಹಸ ಸಿಂಹ ವಿಷ್ಣುವರ್ಧನ್ ಪ್ರತಿಮೆಯನ್ನ ರಾತ್ರೋ ರಾತ್ರಿ ತೆಗೆಯಲಾಗಿದೆ. ವಿಷಯ ತಿಳಿದು ಸ್ಥಳದಲ್ಲಿ ಜಮಾಯಿಸಿರುವ ವಿಷ್ಣುವರ್ಧನ್ ಅಭಿಮಾನಿಗಳು ಆಕ್ರೋಶ ಹೊರ ಹಾಕಿದ್ದಾರೆ. ಮುನ್ನೇಚ್ಚರಿಕೆ ಕ್ರಮವಾಗಿ ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

    ಟೋಲ್‍ಗೇಟ್ ಸರ್ಕಲ್ ಗೆ ಶ್ರೀ ಬಾಲ ಗಂಗಾಧರ ಸ್ವಾಮೀಜಿ ವೃತ್ತ ಅಂತ ಹೆಸರಿಡಲಾಗಿದೆ. ಹಾಗಾಗಿ ವಿಷ್ಣುವರ್ಧನ್ ಪ್ರತಿಮೆ ಸ್ಥಳದಲ್ಲಿ ಬಾಲಗಂಗಾಧರ ಸ್ವಾಮೀಜಿ ಸ್ಟ್ಯಾಚು ಇಡಲು ನಿರ್ಧರಿಸಲಾಗಿದೆ. ಹೀಗಾಗಿ ರಾತ್ರಿ ವಿಷ್ಣು ಪ್ರತಿಮೆ ತೆರವುಗೊಳಿಸಲಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಪ್ರತಿಮೆ ತೆಗೆಯುವ ಮೂಲಕ ಕನ್ನಡಿಗರಿಗೆ ಅವಮಾನಿಸಲಾಗಿದೆ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

  • ರಾತ್ರೋ ರಾತ್ರಿ ಪ್ರತಿಮೆ ತೆಗೆಯುವುದು ಸರಿನಾ?- ಅನಿರುದ್ಧ್

    ರಾತ್ರೋ ರಾತ್ರಿ ಪ್ರತಿಮೆ ತೆಗೆಯುವುದು ಸರಿನಾ?- ಅನಿರುದ್ಧ್

    ಬೆಂಗಳೂರು: ಮಾಗಡಿ ರಸ್ತೆಯ ಅಂಡರ್ ಪಾಸ್ ಮೇಲ್ಭಾಗದಲ್ಲಿ ವಿಷ್ಣುವರ್ಧನ್ ಪ್ರತಿಮೆ ಸ್ಥಳಾಂತರದ ಬಗ್ಗೆ ನಟ ಅನಿರುದ್ಧ್ ಪ್ರತಿಕ್ರಿಯೆ ನೀಡಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅನಿರುದ್ಧ್, ಪ್ರತಿಷ್ಠಾಪನೆಯಾಗಿರುವ ಮೂರ್ತಿಯನ್ನ ರಾತ್ರೋ ರಾತ್ರಿ ಯಾರಿಗೂ ಹೇಳದೇ ತೆಗೆಯುವುದು ಎಷ್ಟು ಸೂಕ್ತ. ಈ ರೀತಿಯ ಕೆಲಸಗಳಿಂದ ಹಿರಿಯ ವ್ಯಕ್ತಿಗೆ ಅವಮಾನ ಮಾಡಿದಂತೆ ಆಗಲ್ವಾ? ಇದರಿಂದ ಅಭಿಮಾನಿಗಳಿಗೆ ದುಃಖ ಆಗುತ್ತೆ. ವಿಷ್ಣುವರ್ಧನ್ ಅಪ್ಪಾಜಿ ಪ್ರತಿಮೆಯನ್ನ ಯಾರು ತೆಗೆದ್ರು ಮತ್ತು ಯಾಕೆ ತೆಗೆದರು ಎಂದು ಬೇಸರ ವ್ಯಕ್ತಪಡಿಸಿದರು.

    ನಮ್ಮ ಕುಟುಂಬ ಎಲ್ಲರನ್ನ ಗೌರವಿಸುತ್ತೆ. ನಾವು ಯಾರ ಮಾತಿಗೆ ತಿರುಗೇಟು ನೀಡುವುದು ನಮಗೆ ಗೊತ್ತಿಲ್ಲ. ಸಚಿವರಾಗಿರುವ ಸೋಮಣ್ಣ ಅವರ ಮಾತುಗಳಿಗೆ ನಾವು ಗೌರವ ನೀಡುತ್ತೇವೆ. ಒಂದು ಪುತ್ಥಳಿಯನ್ನ ಪ್ರತಿಷ್ಠಾಪನೆ ಮಾಡುವಾಗಲೇ ಎಲ್ಲ ಮಾಹಿತಿ ಸಂಗ್ರಹಿಸಿಕೊಳ್ಳಬೇಕು. ಪ್ರತಿಷ್ಠಾಪನೆ ವಿಚಾರದಲ್ಲಿ ಯಾವ ತೊಂದರೆಯೂ ಇಲ್ಲ ಅಂದ್ಮೇಲೆ ಪ್ರತಿಮೆ ಸ್ಥಾಪನೆ ಮಾಡಲಾಗುತ್ತದೆ. ಪ್ರತಿ ಬಾರಿಯೂ ಅಪ್ಪಾಜಿ ಅವರ ಬಗ್ಗೆಯೇ ಈ ರೀತಿ ಯಾಕೆ ಆಗ್ತಿದೆ. ಒಂದು ವೇಳೆ ಪ್ರತಿಮೆ ಸ್ಥಳಾಂತರಿಸುವದಿದ್ದರೆ ಎಲ್ಲರ ಜೊತೆ ಮಾತುಕತೆ ನಡೆಸಿ ಗೌರವಯುತವಾಗಿ ತೆಗೆಯಬಹದಿತ್ತು ಎಂದರು.

    ವಿ.ಸೋಮಣ್ಣ ಹೇಳಿದ್ದೇನು?: 40 ವರ್ಷಗಳ ಹಿಂದೆಯೇ ಬಾಲಗಂಗಾಧರೇಶ್ವರ ವೃತ್ತ ಎಂದು ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ನಾನು ಮತ್ತು ವಿಷ್ಣುವರ್ಧನ್ ಆತ್ಮೀಯರು. ಆದ್ರೆ ಈ ಪ್ರತಿಮೆ ಏಕೆ ತೆರವು ಆಯ್ತು ಅಂತ ಮಾಹಿತಿ ಇಲ್ಲ. ಆದ್ರೆ ಈ ಪ್ರದೇಶದಲ್ಲಿ ತಿಳಿದೋ ಅಥವಾ ತಿಳಿಯದೋ ಅಲ್ಲಿ ಪ್ರತಿಮೆ ಇರಿಸಲಾಗಿತ್ತು. ಮುಂದಿನ ನಾಲ್ಕೈದು ದಿನಗಳಲ್ಲಿ ಒಳ್ಳೆ ಕಡೆ ಪ್ರತಿಮೆ ಸ್ಥಾಪನೆ ಮಾಡಲಾಗುವುದು. ವಿಷ್ಣುವರ್ಧನ್ ನನಗೆ ಆತ್ಮೀಯರಲ್ಲಿ ಆತ್ಮೀಯರು. ನನ್ನ ಜೊತೆಗಿನ ಅವರ ಒಡನಾಟ ಹೇಗಿತ್ತು ಅನ್ನೋದು ಈಗ ಹೇಳಲು ಸಮಯ ಇಲ್ಲ. ಇದೊಂದು ಸೂಕ್ಷ್ಮ ಘಟನೆಯಾಗಿದ್ದು, ನಡೆದ ಅತಾಚುರ್ಯಕ್ಕೆ ನಾನು ಕ್ಷಮೆ ಕೇಳುತ್ತೇನೆ. ನನ್ನ ಕ್ಷೇತ್ರದಲ್ಲಿ ಎಲ್ಲಿ ಬೇಕಾದ್ರೂ ಸ್ಥಾಪಿಸುವ ಕೆಲಸ ಮಾಡುತ್ತೇನೆ ಎಂದು ಹೇಳಿದ್ದರು.

  • ಮಾತುಕತೆ ಮೂಲಕವೇ ವಿಷ್ಣು ಮೂರ್ತಿ ತೆಗೆಯಲಾಗಿದೆ: ವಿ.ಸೋಮಣ್ಣ

    ಮಾತುಕತೆ ಮೂಲಕವೇ ವಿಷ್ಣು ಮೂರ್ತಿ ತೆಗೆಯಲಾಗಿದೆ: ವಿ.ಸೋಮಣ್ಣ

    – ನಡೆದ ಅತಾಚುರ್ಯಕ್ಕೆ ಕ್ಷಮೆ ಕೇಳಿದ ಸಚಿವರು

    ಬೆಂಗಳೂರು: ಸಾಹಸಸಿಂಹ ವಿಷ್ಣುವರ್ಧನ್ ಅವರ ಮೂರ್ತಿಯನ್ನ ಮಾತುಕತೆಯೇ ಮೂಲಕವೇ ತೆರವು ಮಾಡಲಾಗಿದೆ. ಆದ್ರೆ ಯಾಕೆ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ನನಗೂ ಗೊತ್ತಿಲ್ಲ. ಕೂಡಲೇ ವಿಷ್ಣುವರ್ಧನ್ ಅವರ ಅಭಿಮಾನಿಗಳನ್ನ ಕರೆಸಿ ಮಾತನಾಡುತ್ತೇನೆ ಎಂದು ವಸತಿ ಸಚಿವ ವಿ.ಸೋಮಣ್ಣ ಪ್ರತಿಕ್ರಿಯೆ ನೀಡಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ವಿ.ಸೋಮಣ್ಣ, ನಾನು ನಿನ್ನೆ ಚಿಕ್ಕಮಗಳೂರಿನಲ್ಲಿದ್ದು, ಇಂದು ಮಾತನಾಡುತ್ತೇನೆ. ಶ್ರೀ ಬಾಲಗಂಗಾಧರ ಸ್ವಾಮೀಜಿಗಳ ವೃತ್ತ ಆಗಿರೋದರಿಂದ ಅವರ ಪ್ರತಿಮೆ ಸ್ಥಾಪನೆ ಬಗ್ಗೆ ಚರ್ಚೆ ನಡೆದಿತ್ತು. ಅಲ್ಲಿಯೇ ನಿರ್ಮಾಣವಾಗುತ್ತಿರುವ ಪಾರ್ಕ್ ನಲ್ಲಿ ಅಥವಾ ವಿಜಯನಗರ ಬಸ್ ನಿಲ್ದಾಣದಲ್ಲಿ ವಿಷ್ಣು ಅವರ ಪ್ರತಿಮೆ ಸ್ಥಾಪಿಸುವ ಕುರಿತು ಮಾತುಕತೆ ನಡೆದಿತ್ತು ಎಂದು ಸೋಮಣ್ಣ ಅವರು ತಿಳಿಸಿದರು.

    40 ವರ್ಷಗಳ ಹಿಂದೆಯೇ ಬಾಲಗಂಗಾಧರೇಶ್ವರ ವೃತ್ತ ಎಂದು ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ನಾನು ಮತ್ತು ವಿಷ್ಣುವರ್ಧನ್ ಆತ್ಮೀಯರು. ಆದ್ರೆ ಈ ಪ್ರತಿಮೆ ಏಕೆ ತೆರವು ಆಯ್ತು ಅಂತ ಮಾಹಿತಿ ಇಲ್ಲ. ಆದ್ರೆ ಈ ಪ್ರದೇಶದಲ್ಲಿ ತಿಳಿದೋ ಅಥವಾ ತಿಳಿಯದೋ ಅಲ್ಲಿ ಪ್ರತಿಮೆ ಇರಿಸಲಾಗಿತ್ತು. ಮುಂದಿನ ನಾಲ್ಕೈದು ದಿನಗಳಲ್ಲಿ ಒಳ್ಳೆ ಕಡೆ ಪ್ರತಿಮೆ ಸ್ಥಾಪನೆ ಮಾಡಲಾಗುವುದು ಎಂದರು.

    ವಿಷ್ಣುವರ್ಧನ್ ನನಗೆ ಆತ್ಮೀಯರಲ್ಲಿ ಆತ್ಮೀಯರು. ನನ್ನ ಜೊತೆಗಿನ ಅವರ ಒಡನಾಟ ಹೇಗಿತ್ತು ಅನ್ನೋದು ಈಗ ಹೇಳಲು ಸಮಯ ಇಲ್ಲ. ಇದೊಂದು ಸೂಕ್ಷ್ಮ ಘಟನೆಯಾಗಿದ್ದು, ನಡೆದ ಅತಾಚುರ್ಯಕ್ಕೆ ನಾನು ಕ್ಷಮೆ ಕೇಳುತ್ತೇನೆ. ನನ್ನ ಕ್ಷೇತ್ರದಲ್ಲಿ ಎಲ್ಲಿ ಬೇಕಾದ್ರೂ ಸ್ಥಾಪಿಸುವ ಕೆಲಸ ಮಾಡುತ್ತೇನೆ ಎಂದು ಹೇಳಿದ್ದರು.

  • ರಾತ್ರೋ ರಾತ್ರಿ ವಿಷ್ಣುವರ್ಧನ್ ಪ್ರತಿಮೆ ತೆರವು

    ರಾತ್ರೋ ರಾತ್ರಿ ವಿಷ್ಣುವರ್ಧನ್ ಪ್ರತಿಮೆ ತೆರವು

    ಬೆಂಗಳೂರು: ಮಾಗಡಿ ರಸ್ತೆಯ ಟೋಲ್‍ಗೇಟ್ ಅಂಡರ್‍ಪಾಸ್ ಮೇಲಿದ್ದ ನಟ ಸಾಹಸ ಸಿಂಹ ವಿಷ್ಣುವರ್ಧನ್ ಪ್ರತಿಮೆಯನ್ನ ರಾತ್ರೋ ರಾತ್ರಿ ತೆಗೆಯಲಾಗಿದೆ. ವಿಷಯ ತಿಳಿದು ಸ್ಥಳದಲ್ಲಿ ಜಮಾಯಿಸಿರುವ ವಿಷ್ಣುವರ್ಧನ್ ಅಭಿಮಾನಿಗಳು ಆಕ್ರೋಶ ಹೊರ ಹಾಕಿದ್ದಾರೆ. ಮುನ್ನೇಚ್ಚರಿಕೆ ಕ್ರಮವಾಗಿ ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

    ಟೋಲ್‍ಗೇಟ್ ಸರ್ಕಲ್ ಗೆ ಶ್ರೀ ಬಾಲ ಗಂಗಾಧರ ಸ್ವಾಮೀಜಿ ವೃತ್ತ ಅಂತ ಹೆಸರಿಡಲಾಗಿದೆ. ಹಾಗಾಗಿ ವಿಷ್ಣುವರ್ಧನ್ ಪ್ರತಿಮೆ ಸ್ಥಳದಲ್ಲಿ ಬಾಲಗಂಗಾಧರ ಸ್ವಾಮೀಜಿ ಸ್ಟ್ಯಾಚು ಇಡಲು ನಿರ್ಧರಿಸಲಾಗಿದೆ. ಹೀಗಾಗಿ ರಾತ್ರಿ ವಿಷ್ಣು ಪ್ರತಿಮೆ ತೆರವುಗೊಳಿಸಲಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಪ್ರತಿಮೆ ತೆಗೆಯುವ ಮೂಲಕ ಕನ್ನಡಿಗರಿಗೆ ಅವಮಾನಿಸಲಾಗಿದೆ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಟೋಲ್ ಗೇಟ್ ಅಂಡರ್ ಪಾಸ್ ಮೇಲೆ ವಿಷ್ಣು ದಾದಾ ಸ್ಟ್ಯಾಚು ಇಡಲಾಗಿತ್ತು. ಎರಡು ವರ್ಷದ ಹಿಂದೆ ವಿಷ್ಣು ಸ್ಟ್ಯಾಚು ಪ್ರತಿಷ್ಠಾನ ಮಾಡಲಾಗಿತ್ತು. ವಿಷ್ಣು ದಾದಾಗೆ ಪದೇ ಪದೇ ಅವಮಾನವಾಗ್ತಿದೆ. ರಾತ್ರೋ ರಾತ್ರಿ ಸ್ಟ್ಯಾಚು ಒಡೆದು ಹಾಕಲಾಗಿದೆ. ಕಳೆದ ಒಂದು ವಾರದಿಂದ ಇಲ್ಲಿ ಸ್ಟ್ಯಾಚು ತೆಗೆಸ್ತೀನಿ ಅನ್ನೋ ಗುಸು ಗುಸು ನಡೆಯುತ್ತಿತ್ತು. ಅತೃಪ್ತ ಆತ್ಮಗಳಿಗೆ ವಿಷ್ಣುದಾದರನ್ನ ಸಹಿಸಿಕೊಳ್ಳೋದಕ್ಕೆ ಆಗುತ್ತಿಲ್ಲ. ಕಳೆದ ಬಾರಿ ಸಹ ಇದೇ ರೀತಿ ಪ್ರತಿಮೆ ತೆಗೆದು ಅವಮಾನಿಸಲಾಗಿತ್ತು. ನಂತರ ಅಭಿಮಾನಿಗಳು ಮತ್ತೆ ಪ್ರತಿಮೆ ಪುನರ್ ಪ್ರತಿಷ್ಠಾಪಿಸಿದ್ದರು. ಸಾರಾ ಗೋವಿಂದ್, ಎನ್.ಆರ್.ರಮೇಶ್ ಗೆ ವಿಷ್ಣುವರ್ಧನ್ ಕಂಡ್ರೆ ಆಗಲ್ಲ. ವಿಷ್ಣು ಪ್ರತಿಮೆ ಇಟ್ರೆ ಅವರಿಗೆ ಕೆಲವರು ಕಿವಿ ಚುಚ್ಚೊ ಕೆಲಸ ಮಾಡ್ತಾರೆ. ಕಂಪ್ಲೇಂಟ್ ಕೊಡೋದಕ್ಕೆ ಅಭಿಮಾನಿ ಪದಾದಿಕಾರಿಗಳ ಜೊತೆ ಮಾತಾಡುತ್ತೇವೆ ಎಂದು ವಿಷ್ಣು ಅಭಿಮಾನಿ ರಮೇಶ್ ಗೌಡ ಹೇಳಿದ್ದಾರೆ.

    ವಿಷ್ಣು ಪ್ರತಿಮೆ ತೆರವಿನ ಹಿಂದೆ ಸಾರಾ ಗೋವಿಂದು ಹಾಗೂ ಎನ್.ಆರ್.ರಮೇಶ್ ಹೆಸರು ಕೇಳಿ ಬರುತ್ತಿದೆ. ಕಳೆದ ವರ್ಷವೂ ಇದೇ ರೀತಿ ವಿಷ್ಣು ಸ್ಮಾರಕಕ್ಕೆ ಹಾನಿಯಾಗಿತ್ತು. ಕೂಡಲೇ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು. ವಿಷ್ಣು ಸರ್ ಇಂಡಸ್ಟ್ರಿಗೆ ಬಂದಾಗಿನಿಂದಲೂ ಈ ರೀತಿ ಅವರ ವಿರುದ್ಧ ಷಡ್ಯಂತ್ರ ನಡೀತಿದೆ ಎಂದು ರಮೇಶ್ ಗೌಡ ಹೇಳಿದ್ದಾರೆ.