Tag: Vishnuvardhan

  • ಸಹಿ ಫೋರ್ಜರಿ ಮಾಡಿ ಯೂಟ್ಯೂಬ್, ಒಟಿಟಿಗೆ ವಿಷ್ಣುವರ್ಧನ್ ಅಭಿನಯದ ಸಿನಿಮಾ ಹಂಚಿಕೆ – ನಿರ್ಮಾಪಕಿಯಿಂದ ದೂರು

    ಸಹಿ ಫೋರ್ಜರಿ ಮಾಡಿ ಯೂಟ್ಯೂಬ್, ಒಟಿಟಿಗೆ ವಿಷ್ಣುವರ್ಧನ್ ಅಭಿನಯದ ಸಿನಿಮಾ ಹಂಚಿಕೆ – ನಿರ್ಮಾಪಕಿಯಿಂದ ದೂರು

    ಬೆಂಗಳೂರು: ನಿರ್ಮಾಪಕಿಯ ಅನುಮತಿ ಪಡೆಯದೆ ನಕಲಿ ಸಹಿ ಮಾಡಿ ನಟ ವಿಷ್ಣುವರ್ಧನ್ (Vishnuvardhan) ಅಭಿನಯದ ʻಗಂಡುಗಲಿ ರಾಮʼ (Gandugali Rama) ಸಿನಿಮಾ (Cinema) ಸೇರಿ 3 ಚಿತ್ರಗಳನ್ನು ಯೂಟ್ಯೂಬ್, ಒಟಿಟಿ ಇನ್ನಿತರ ಸೋಷಿಯಲ್ ಮೀಡಿಯಾ ಫ್ಲಾಟ್ ಫಾರ್ಮ್‌ಗೆ ಹಂಚಿಕೆ ಮಾಡಲಾಗಿದೆ.

    ಕಿಡಿಗೇಡಿಗಳ ಕೃತ್ಯದಿಂದ ಕೋಟಿ ಕೋಟಿ ನಷ್ಟ ಅನುಭವಿಸುರುವ ಖ್ಯಾತ ನಿರ್ಮಾಪಕಿ ಲಕ್ಷ್ಮೀ ವೆಂಕಟೇಶ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತನ್ನ ಸಹಿಯನ್ನು ನಕಲಿ ಮಾಡಿ ಹಣ ನೀಡಿ ಚಿತ್ರ ಖರೀದಿಸಿರುವಂತೆ ದಾಖಲೆ ಸೃಷ್ಟಿ ಮಾಡಿದ್ದಾರೆ. ಆರೋಪಿಗಳಿಂದ ಒಂದು ಕೋಟಿ ರೂ. ನಷ್ಟವಾಗಿದೆ ಎಂದು ದೂರಿನಲ್ಲಿ ಅವರು ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ತಿಂಡಿ ತಿನ್ನಲೂ ಒಂದು ಗಂಟೆ ಬೇಕಿತ್ತು, ಆತ್ಮಹತ್ಯೆ ಯೋಚನೆ ಬಂದಿತ್ತು – ಜೀವನದಲ್ಲಿ ಕಾಡಿದ ನರರೋಗದ ಬಗ್ಗೆ ಸಲ್ಮಾನ್ ಖಾನ್ ಮಾತು

    ಡಾ.ವಿಷ್ಣುವರ್ಧನ್ ನಟನೆಯ 1983 ರಲ್ಲಿ ತೆರೆಕಂಡ ʻಗಂಡುಗಲಿ ರಾಮʼ ಚಿತ್ರ ಲಕ್ಷ್ಮಿ ವೆಂಕಟೇಶ್ ಮಾಲೀಕತ್ವದ ಮಮತಾ ಮೂವೀಸ್ ಬ್ಯಾನರ್‌ ಅಡಿ ನಿರ್ಮಾಣಗೊಂಡಿತ್ತು. ಅದರ ಜೊತೆ ನಟ ಅಶೋಕ್, ಆರತಿ ನಟನೆಯ 1981ರ ʻಗಣೇಶ ಮಹಿಮೆʼ ಚಿತ್ರ ಸೇರಿದಂತೆ 3 ಚಿತ್ರಗಳನ್ನು ಖರೀದಿ ಮಾಡಿರೋದಾಗಿ ನಕಲಿ ದಾಖಲೆ ಸೃಷ್ಟಿ ಮಾಡಿದ್ದಾರೆ ಎಂದು ನಿರ್ಮಾಪಕಿ ಆರೋಪಿಸಿದ್ದಾರೆ. ಸದ್ಯ ಅವರು ತಮ್ಮ ಬ್ಯಾನರ್‌ನಿಂದ ಚಿತ್ರ ನಿರ್ಮಾಣವನ್ನು ಸ್ಥಗಿತಗೊಳಿಸಿದ್ದಾರೆ.

    ಲಕ್ಷ್ಮಿ ವೆಂಕಟೇಶ್ ಅವರ ಹೆಸರಿನಲ್ಲಿ ನಕಲಿ ವಿಳಾಸ, ನಕಲಿ ಚೆಕ್ ಸೃಷ್ಟಿ ಮಾಡಿ, ನಂತರ ಚಿತ್ರ ಮಾರಾಟ ಮಾಡಲಾಗಿದೆ. ಎ.ಎನ್ ಜಗದೀಶ್ , ಪುರುಷೋತ್ತಮ್, ರಸೂಲ್ ಎಂಬುವವರು ತಮಗೆ ಈ ರೀತಿ ಮೋಸ ಮಾಡಿದ್ದಾರೆ. ಚಿತ್ರಗಳನ್ನ ಏಜೆಂಟರ ಮೂಲಕ ಮಾರಾಟ ಮಾಡಲು ಮುಂದಾದಾಗ ವಿಚಾರ ಬಯಲಾಗಿದೆ ಎಂದು ನಿರ್ಮಾಪಕಿ ಆರೋಪಿಸಿದ್ದಾರೆ. ಈ ಸಂಬಂಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇದನ್ನೂ ಓದಿ: 3ನೇ ಮಗುವಿನ ತಾಯಿಯಾದ ಖ್ಯಾತ ಸಿಂಗರ್ ರಿಹಾನಾ

  • ಎಸ್.ಎಲ್.ಭೈರಪ್ಪಗೆ ಸಿನಿಮಾ ನಂಟು – ಕಾದಂಬರಿ ಆಧರಿತ ಸಿನಿಮಾಗಳಲ್ಲಿ ವಿಷ್ಣು ಸೇರಿ ಖ್ಯಾತ ನಟರ ಅಭಿನಯ

    ಎಸ್.ಎಲ್.ಭೈರಪ್ಪಗೆ ಸಿನಿಮಾ ನಂಟು – ಕಾದಂಬರಿ ಆಧರಿತ ಸಿನಿಮಾಗಳಲ್ಲಿ ವಿಷ್ಣು ಸೇರಿ ಖ್ಯಾತ ನಟರ ಅಭಿನಯ

    ಡಾ. ಎಸ್.ಎಲ್.ಭೈರಪ್ಪನವರಿಗೂ (S.L.Bhyrappa) ಸಿನಿಮಾ ರಂಗಕ್ಕೂ ಅವಿನಾಭವ ನಂಟಿದೆ. ಅವರ ಅನೇಕ ಕೃತಿಗಳು ಸಿನಿಮಾವಾಗಿವೆ. ಕಿರುತೆರೆಯಲ್ಲಿ ರಾರಾಜಿಸಿವೆ. ಜೊತೆಗೆ ರಂಗಭೂಮಿಯಲ್ಲೂ ದಾಖಲೆ ಬರೆದಿವೆ. ಅನೇಕ ಕಲಾವಿದರು ಭೈರಪ್ಪನವರ ಕಾಂದಬರಿಯನ್ನು ಆಧರಿಸಿದ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಪ್ರವೇಶ ಮಾಡಿದ್ದಾರೆ ಎನ್ನುವುದು ವಿಶೇಷ.

    ಭೈರಪ್ಪನವರ ವಂಶವೃಕ್ಷ ಕೃತಿ ಮೊದಲ ಬಾರಿಗೆ ಸಿನಿಮಾ ಆಯಿತು. ಖ್ಯಾತ ರಂಗಕರ್ಮಿಗಳಾದ ಬಿ.ವಿ.ಕಾರಂತ್ ಮತ್ತು ಗಿರೀಶ್ ಕಾರ್ನಾಡ್ ಜಂಟಿಯಾಗಿ ಕಾದಂಬರಿಯ ಹೆಸರಿನಲ್ಲೇ ಸಿನಿಮಾ ಮಾಡಿದರು. ಈ ಸಿನಿಮಾದ ಮೂಲಕ ಡಾ.ವಿಷ್ಣುವರ್ಧನ್ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದರು. ವಿಷ್ಣುವರ್ಧನ್ ಈ ಸಿನಿಮಾದಲ್ಲಿ ಪುಟ್ಟ ಪಾತ್ರ ನಿರ್ವಹಿಸಿದ್ದಾರೆ. ಇದನ್ನೂ ಓದಿ: ʼಲೆಫ್ಟಿಸ್ಟ್‌ಗಳು ಅಪ್ರಾಮಾಣಿಕರು, ದೇಶ ಬೆಳೆಯಬೇಕಾದರೆ ಕ್ಯಾಪಿಟಲಿಸಂ ಅಗತ್ಯʼ

    ವಂಶವೃಕ್ಷ ನಂತರ ತಬ್ಬಲಿಯು ನೀನಾದೆ ಮಗನೇ ಕೃತಿಯನ್ನು ಮತ್ತೆ ಸಿನಿಮಾ ಮಾಡಿದ್ದು, ಬಿ.ವಿ.ಕಾರಂತ್ ಮತ್ತು ಗಿರೀಶ್ ಕರ್ನಾಡ್ ಜೋಡಿ. ಈ ಸಿನಿಮಾದಲ್ಲಿ ಬಾಲಿವುಡ್‌ನ ಖ್ಯಾತ ನಟರಾದ ನಸೀರುದ್ಧೀನ್ ಶಾ ಮತ್ತು ಓಂಪುರಿ ನಟಿಸಿದ್ದಾರೆ.

    ಭೈರಪ್ಪನವರ ಮತದಾನ ಕೃತಿಯನ್ನು ಸಿನಿಮಾ ಮಾಡಿದ್ದು, ನಿರ್ದೇಶಕ ಟಿ.ಎನ್.ಸೀತಾರಾಮ್. ಈ ಸಿನಿಮಾದಲ್ಲಿ ಅನಂತ್ ನಾಗ್, ತಾರಾ ಮತ್ತು ದೇವರಾಜ್ ಸೇರಿದಂತೆ ದಿಗ್ಗಜ ಕಲಾವಿದರೇ ನಟಿಸಿದ್ದಾರೆ.

    ಭೈರಪ್ಪನವರ ಮತ್ತೊಂದು ಕಾದಂಬರಿ ನಾಯಿ ನೆರಳು ಕೃತಿಯನ್ನು ಆಧರಿಸಿ ಗಿರೀಶ್ ಕಾಸರವಳ್ಳಿ ಸಿನಿಮಾ ನಿರ್ದೇಶನ ಮಾಡಿದ್ದಾರೆ. ನಾಯಿ ನೆರಳು ಸಿನಿಮಾದಲ್ಲಿ ಪವಿತ್ರಾ ಲೋಕೇಶ್ ಪ್ರಮುಖ ಪಾತ್ರದಲ್ಲಿ ನಿರ್ವಹಿಸಿದ್ದಾರೆ. ಅನಂತ್ ನಾಗ್ ಅವರು ಅಭಿನಯ ಶುರು ಮಾಡಿದ್ದು, ಭೈರಪ್ಪನವರ ನಾಯಿ ನೆರಳು ನಾಟಕದಿಂದ ಅನ್ನುವುದು ಮತ್ತೊಂದು ವಿಶೇಷ. ಇದನ್ನೂ ಓದಿ: ತಮ್ಮ ಅಕ್ಷರಗಳಿಂದ ಆತ್ಮವನ್ನು ಕಲಕಿ, ಭಾರತದ ಅಧ್ಯಯನ ಮಾಡಿದ್ದ ಮಹಾನ್ ಧೀಮಂತ – ಮೋದಿ ಸಂತಾಪ

    ನಾಲ್ಕು ಕೃತಿಗಳು ಸಿನಿಮಾವಾದರೆ, ಭೈರಪ್ಪನವರ ಗೃಹಭಂಗ ಮತ್ತು ದಾಟು ಕೃತಿಗಳು ಧಾರಾವಾಹಿಯಾಗಿ ಪ್ರಸಾರವಾಗಿವೆ. ಇವರ ಪರ್ವ ಕಾದಂಬರಿಯನ್ನು ಪ್ರಕಾಶ್ ಬೆಳವಾಡಿ ರಂಗರೂಪಕ್ಕೆ ತಂದಿದ್ದಾರೆ. ಭೈರಪ್ಪನವರ ಜೀವನವನ್ನು ಆಧರಿಸಿ ನಿರ್ದೇಶಕ ಪಿ. ಶೇಷಾದ್ರಿ ಮೂರು ಸಾಕ್ಷ್ಯ ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ.

    ಬಾಲಿವುಡ್ ನಟರಾದ ನಸೀರುದ್ಧೀನ್ ಶಾ, ಓಂ ಪುರಿ, ಕನ್ನಡದ ನಟರಾದ ವಿಷ್ಣುವರ್ಧನ್, ಅನಂತ್ ನಾಗ್, ದೇವರಾಜ್, ತಾರಾ, ಮಾಳವಿಕಾ ಅವನಾಶ್ ಸೇರಿದಂತೆ ಅನೇಕ ದಿಗ್ಗಜ ನಟರು ಇವರ ಕಾದಂಬರಿ ಆಧಾರಿತ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದನ್ನೂ ಓದಿ: ಭೈರಪ್ಪನವರ ಬದುಕು ಕೊನೆಯಿಲ್ಲದ ʻಯಾನʼ – ನಟ ಅನಂತನಾಗ್‌ ಭಾವುಕ

  • ವಿಷ್ಣುವರ್ಧನ್ ಅಭಿಮಾನ ಕ್ಷೇತ್ರದ ಬ್ಲ್ಯೂ ಪ್ರಿಂಟ್‌ ರಿಲೀಸ್

    ವಿಷ್ಣುವರ್ಧನ್ ಅಭಿಮಾನ ಕ್ಷೇತ್ರದ ಬ್ಲ್ಯೂ ಪ್ರಿಂಟ್‌ ರಿಲೀಸ್

    ವಿಷ್ಣುವರ್ಧನ್ (Vishnuvardhan) ಹಾಗೂ ಸುದೀಪ್‌ (Sudeep) ಅಭಿಮಾನಿಗಳಿಂದ ತಯಾರಾಗುತ್ತಿರುವ ನೂತನ ಸ್ಮಾರಕದ ನೀಲನಕ್ಷೆ ಬಿಡುಗಡೆಯಾಗಿದೆ.

    ಅಭಿಮಾನ್ ಸ್ಟುಡಿಯೋದಲ್ಲಿ(Abhiman Studio) ವಿಷ್ಣುವರ್ಧನ್ ಸಮಾಧಿ ಧ್ವಂಸವಾದ ಬಳಿಕ ಬೇಸರಗೊಂಡಿದ್ದ ಅಭಿಮಾನಿಗಳು ಪರ್ಯಾಯ ಸ್ಮಾರಕ ನಿರ್ಮಾಣ ಮಾಡಿಕೊಳ್ಳುವುದಾಗಿ ಸವಾಲು ಹಾಕಿದ್ದರು. ವಿಷ್ಣುವರ್ಧನ್ ಅಭಿಮಾನಿಗಳೊಂದಿಗೆ ವಿಷ್ಣುಸೇನೆ ಹಾಗೂ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ (Veerakaputra Srinivasa) ಜೊತೆ ನಟ ಸುದೀಪ್ ಕೈ ಜೋಡಿಸಿ ಹೊಸ ಸ್ಮಾರಕ ಘೋಷಿಸಿದ್ದರು. ಅದರಂತೆ ಕೆಂಗೇರಿ ಬಳಿಯಲ್ಲೇ ಎರಡು ಎಕರೆ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ನಯಾ ಸ್ಮಾರಕದ ನೀಲನಕ್ಷೆ ಲೋಕಾರ್ಪಣೆ ಮಾಡಲಾಗಿದೆ.

    ವಿಷ್ಣುವರ್ಧನ್ 75ನೇ ಜಯಂತೋತ್ಸವನ್ನು ವಿಷ್ಣುಸೇನೆ ಬೃಹತ್ ಮಟ್ಟದಲ್ಲಿ ಮಾಡಲು ತಯಾರಿ ಮಾಡಿಕೊಂಡಿತ್ತು. ಅಭಿಮಾನ್ ಸ್ಟುಡಿಯೋ ಜಾಗ ಗಲಾಟೆಯಿದ ಬೇಸರಗೊಂಡ ಅಭಿಮಾನಿಗಳು ಅಭಿಮಾನ್ ಸ್ಟುಡಿಯೋದಲ್ಲಿ ಕೊಡುವ ಜಾಗಕ್ಕಾಗಿ ಕಾಯದೇ ತಾವೇ ನಿರ್ಮಿಸಲು ಮುಂದಾಗಿದ್ದಾರೆ. ಇದನ್ನೂ ಓದಿ: ‘ಹೂವಿನ ಬಾಣದಂತೆ..’ ವೈರಲ್ ಹುಡುಗಿ ನಿತ್ಯಶ್ರೀ ಬಗ್ಗೆ ಅರ್ಜುನ್ ಜನ್ಯಾ ಹೇಳಿದ್ದೇನು?

    ಈ ಜಾಗವನ್ನು ಕಿಚ್ಚ ಸುದೀಪ್ ಮುಂದಾಳತ್ವದಲ್ಲಿ ಖರೀದಿಸಿ ಕೊಡಲಾಗಿದೆ. ಈ ಜಾಗಕ್ಕೆ ಡಾ.ವಿಷ್ಣುವರ್ಧನ್ ಅಭಿಮಾನ ಕ್ಷೇತ್ರ ಎಂದು ಹೆಸರಿಡಲು ಯೋಜನೆಯಾಗಿದ್ದು ಮುಂದಿನ ವರ್ಷದ ವಿಷ್ಣುವರ್ಧನ್ ಜನ್ಮದಿನದ ಒಳಗಾಗಿ ಯೋಜನೆ ಪೂರ್ಣಗೊಳಿಸುವ ಪ್ಲ್ಯಾನ್‌ ಹಾಕಲಾಗಿದೆ.

    ವಿಷ್ಣುವರ್ಧನ್ ಪ್ರತಿಮೆಯನ್ನೊಳಗೊಂಡ ಸ್ಮಾರಕದಲ್ಲಿ ಚಿತ್ರಗಳ ನೆನಪು ಹಾಗೂ ಕೆಲವು ವಸ್ತುಗಳನ್ನ ಇಟ್ಟು ಅಭಿಮಾನಿಗಳ ದರ್ಶನಕ್ಕೆ ಸದಾ ನೆರವಾಗುವಂತೆ ರೂಪುರೇಷೆ ಸಿದ್ಧ ಮಾಡಲಾಗಿದೆ. ಇದು ದೇಶದಲ್ಲೇ ಅಭಿಮಾನಕ್ಕಾಗಿ ಅಭಿಮಾನಿಗಳು ಕಟ್ಟಿಸಲಿರುವ ಮೊಟ್ಟಮೊದಲ ಬೃಹತ್ ಸ್ಮಾರಕ ಎಂದು ವಿಷ್ಣುಸೇನೆ ಘೋಷಿಸಿಕೊಂಡಿದೆ.

  • ಡಾ.ವಿಷ್ಣುವರ್ಧನ್ 75ನೇ ಜನ್ಮದಿನ ಇಂದು – ಅಭಿಮಾನ್‌ ಸ್ಟುಡಿಯೋ ಬಳಿ 2 ಎಕರೆ ಜಾಗದಲ್ಲಿ ಬರ್ತ್‌ಡೇಗೆ ಸಿದ್ಧತೆ

    ಡಾ.ವಿಷ್ಣುವರ್ಧನ್ 75ನೇ ಜನ್ಮದಿನ ಇಂದು – ಅಭಿಮಾನ್‌ ಸ್ಟುಡಿಯೋ ಬಳಿ 2 ಎಕರೆ ಜಾಗದಲ್ಲಿ ಬರ್ತ್‌ಡೇಗೆ ಸಿದ್ಧತೆ

    ಸಾಹಸಸಿಂಹ, ಕರ್ನಾಟಕ ರತ್ನ ಡಾ.ವಿಷ್ಣುವರ್ಧನ್‌ (Vishuvardhan) ಅವರ 75ನೇ ಜನ್ಮದಿನದ (ಸೆ.18) ಹಿನ್ನೆಲೆ ಅಭಿಮಾನ್‌ ಸ್ಟುಡಿಯೋ ಬಳಿ 2 ಎಕರೆ ಖಾಸಗಿ ಜಾಗದಲ್ಲಿ ಬರ್ತ್‌ಡೇಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.

    ಅಭಿಮಾನ್ ಸ್ಟುಡಿಯೋಗೆ ಪ್ರವೇಶ ನೀಡದ ಹಿನ್ನೆಲೆ ಪರ್ಯಾಯ ಜಾಗದಲ್ಲಿ ವಿಷ್ಣು ಜನ್ಮದಿನಾಚರಣೆಗೆ ವ್ಯವಸ್ಥೆ ಮಾಡಲಾಗಿದೆ. ವಿಷ್ಣು ಸೇನಾ ಸಮಿತಿಯ ರಾಜ್ಯಾಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ನೇತೃತ್ವದಲ್ಲಿ ಬರ್ತ್‌ಡೇ ಸೆಲಬ್ರೇಷನ್‌ಗೆ ಸಿದ್ಧತೆ ನಡೆದಿದೆ. ಇದನ್ನೂ ಓದಿ: ವಿಷ್ಣುವರ್ಧನ್ ಅಭಿಮಾನಿಗಳಿಗೆ ಗೆಲುವು – ಸಮಾಧಿ ಸಮೀಪ ಬರ್ತ್‌ಡೇಗೆ ಸಿಕ್ತು ಅನುಮತಿ

    ಮಂಟಪ ತಯಾರಿಸಿ ಪೂಜೆ ಮಾಡಿ ಅಮೃತ ಮಹೋತ್ಸವ ಆಚರಿಸಲು ಅಭಿಮಾನಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ. ದಾದಾ ಹುಟ್ಟುಹಬ್ಬದ ಪ್ರಯುಕ್ತ ಅನ್ನದಾನ, ರಕ್ತದಾನ ಸಮಾಜಮುಖಿ ಕಾರ್ಯಗಳು ನಡೆಯಲಿವೆ.

    ರಾಜ್ಯದ ವಿವಿಧ ಮೂಲೆಗಳಿಂದ ಅಭಿಮಾನಿಗಳು ಆಗಮಿಸಲಿದ್ದು, ಮೈಸೂರಿನ ಸ್ಮಾರಕದಲ್ಲಿ ವಿಷ್ಣುವರ್ಧನ್ ಹುಟ್ಟುಹಬ್ಬದ ಆಚರಣೆ ನಡೆಯಲಿದೆ. ಕುಟುಂಬಸ್ಥರು ಮೈಸೂರಿಗೆ ತೆರಳಿ ಪೂಜೆ ಸಲ್ಲಿಸಿ ಅಮೃತ ಮಹೋತ್ಸವ ಆಚರಣೆಯಲ್ಲಿ ಭಾಗಿಯಾಗಲಿದ್ದಾರೆ. ಇದನ್ನೂ ಓದಿ: ವಿಷ್ಣುವರ್ಧನ್ ಹುಟ್ಟುಹಬ್ಬದಂದು ಅಭಿಮಾನ್ ಸ್ಟುಡಿಯೋದಲ್ಲಿ ಸಂಭ್ರಮಾಚರಣೆಗೆ ಹೈಕೋರ್ಟ್ ಬ್ರೇಕ್

    ಪುಣ್ಯಭೂಮಿಯಲ್ಲಿ ವಿಷ್ಣು ಸಮಾಧಿ ತೆರವು ಹಿನ್ನೆಲೆ ಅಭಿಮಾನಿಗಳಲ್ಲಿ ಬೇಸರ ಮೂಡಿದೆ. 75ನೇ ವರ್ಷದ ಹುಟ್ಟುಹಬ್ಬ ಹಾಗೂ ಕರ್ನಾಟಕ ರತ್ನ ಘೋಷಣೆ ಹಿನ್ನೆಲೆ ಅದ್ಧೂರಿ ಸಂಭ್ರಮಾಚರಣೆಯ ಸಿದ್ಧತೆಯಲ್ಲಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ.

  • ವಿಷ್ಣುವರ್ಧನ್ ಹುಟ್ಟುಹಬ್ಬದಂದು ಅಭಿಮಾನ್ ಸ್ಟುಡಿಯೋದಲ್ಲಿ ಸಂಭ್ರಮಾಚರಣೆಗೆ ಹೈಕೋರ್ಟ್ ಬ್ರೇಕ್

    ವಿಷ್ಣುವರ್ಧನ್ ಹುಟ್ಟುಹಬ್ಬದಂದು ಅಭಿಮಾನ್ ಸ್ಟುಡಿಯೋದಲ್ಲಿ ಸಂಭ್ರಮಾಚರಣೆಗೆ ಹೈಕೋರ್ಟ್ ಬ್ರೇಕ್

    ಬೆಂಗಳೂರು: ನಟ ವಿಷ್ಣುವರ್ಧನ್ (Dr.Vishnuvardhan) ಹುಟ್ಟುಹಬ್ಬದಂದು ಅಭಿಮಾನ್ ಸ್ಟುಡಿಯೋದಲ್ಲಿ (Abhiman Studio) ಸಂಭ್ರಮಾಚರಣೆಗೆ ಅವಕಾಶ ನೀಡಲು ಹೈಕೋರ್ಟ್ ನಿರಾಕರಿಸಿದೆ.

    ಸಂಭ್ರಮಾಚರಣೆಗೆ ಅವಕಾಶ ನೀಡುವಂತೆ ವಿಷ್ಣುವರ್ಧನ್ ಅಭಿಮಾನಿಗಳ ಸಂಘ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯ, ಸಮಾಧಿ ಜಾಗ ವಿವಾದ ವಿಚಾರಣೆ ಬಾಕಿ ಇರುವ ಹಿನ್ನೆಲೆ ಸಂಭ್ರಮಾಚರಣೆಗೆ ಅವಕಾಶ ನೀಡಲು ನಿರಾಕರಿಸಿದೆ. ಇದನ್ನೂ ಓದಿ: ವಿಷ್ಣು ಸಮಾಧಿ ಇದ್ದ ಅಭಿಮಾನ್ ಸ್ಟುಡಿಯೋ ಮುಟ್ಟುಗೋಲು?

    ಇನ್ನೂ ಇತ್ತೀಚೆಗೆ ಹೈಕೋರ್ಟ್‌ ಸೂಚನೆ ಮೇರೆಗೆ ಅಭಿಮಾನ್ ಸ್ಟುಡಿಯೋದಲ್ಲಿದ್ದ ಸಮಾಧಿಯನ್ನು ರಾತ್ರೋರಾತ್ರಿ ತೆರವುಗೊಳಿಸಲಾಗಿತ್ತು. ಇದರಿಂದ ಆಘಾತಕ್ಕೆ ಒಳಗಾಗಿರುವ ವಿಷ್ಣು ಅಭಿಮಾನಿಗಳು ಸರ್ಕಾರ, ಪೊಲೀಸ್‌ ಇಲಾಖೆ ಹಾಗೂ ವಾಣಿಜ್ಯ ಮಂಡಳಿ ವಿರುದ್ಧ ಆಕ್ರೋಶ ಹೊರಹಾಕಿದ್ದರು.

    ಡಾ.ವಿಷ್ಣುವರ್ಧನ್‌ ಅವರಿಗೆ ಇತ್ತೀಚೆಗೆ ಮರಣೋತ್ತರ ‘ಕರ್ನಾಟಕ ರತ್ನ’ (Karnataka Ratna) ಪ್ರಶಸ್ತಿಯನ್ನು ಸರ್ಕಾರ ಘೋಷಿಸಿತ್ತು. ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿತ್ತು. ಇದನ್ನೂ ಓದಿ: ವಿಷ್ಣು ಸಮಾಧಿ ಸ್ಥಳವನ್ನು ಕಲಾಗ್ರಾಮವನ್ನಾಗಿ ಮಾಡಿ – ಸಿಎಂಗೆ ಶೋಭಾ ಕರಂದ್ಲಾಜೆ ಪತ್ರ

  • ಆಪ್ತಮಿತ್ರ ದುರ್ಘಟನೆ ನೆನಪಿಸಿಕೊಂಡ ರಮೇಶ್ ಅರವಿಂದ್

    ಆಪ್ತಮಿತ್ರ ದುರ್ಘಟನೆ ನೆನಪಿಸಿಕೊಂಡ ರಮೇಶ್ ಅರವಿಂದ್

    ಟ, ನಿರ್ದೇಶಕ ಹಾಗೂ ನಿರೂಪಕ ರಮೇಶ ಅರವಿಂದ್ (Ramesh Aravind) 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ತಮ್ಮ ಹುಟ್ಟುಹಬ್ಬದ ಪ್ರಯುಕ್ತ ದೈಜಿ ಸಿನಿಮಾದ (Daiji Cinema) ಟೀಸರ್ ಕೂಡಾ ರಿಲೀಸ್ ಆಗಿದೆ. ಈ ವೇಳೆ ಸಾಕಷ್ಟು ವಿಚಾರಗಳನ್ನ ಹಂಚಿಕೊಂಡಿದ್ದಾರೆ. ನಟ ವಿಷ್ಣುವರ್ಧನ್ (Vishnuvardhan) ಅವರ ಜೊತೆಗಿನ ದಿನಗಳು ಹಾಗೂ ಅವರಿಗೆ ಸಲ್ಲಬೇಕಾದ ಗೌರವಗಳ ಬಗ್ಗೆಯೂ ಅವರು ಮಾತನಾಡಿದ್ದಾರೆ. ಜೊತೆಗೆ ಆಪ್ತಮಿತ್ರ-3 ಸಿನಿಮಾ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ.

    ಆಪ್ತಮಿತ್ರ (Apthamitra) ಸಿನಿಮಾವನ್ನ ಮಾಡಿಯಾದ್ಮೇಲೆ ಒಂದು ದುರ್ಘಟನೆ ನಡೆಯಿತು. ಇದಾದ ಬಳಿಕ ಆಪ್ತರಕ್ಷಕ ಅಂದ್ರೆ ಆಪ್ತಮಿತ್ರ ಸಿನಿಮಾದ ಭಾಗ-2 ಸಿನಿಮಾ ರಿಲೀಸ್ ನಂತರ ಮತ್ತೊಂದು ಆಘಾತವೇ ನಡೆದುಹೋಯ್ತು. ಕಾಕತಾಳಿಯವೋ ಅಥವಾ ಆಕಸ್ಮಿಕವೋ ಇವೆರಡು ಘಟನೆ ನಡೆದ ಬಳಿಕ ಸ್ಯಾಂಡಲ್‌ವುಡ್‌ನಲ್ಲಿ ಆಪ್ತಮಿತ್ರ ಸಿರೀಸ್ ಅಂದ್ರೆ ಕೊಂಚ ಹಿಂಜರಿಕೆ ಉಂಟಾಗಿದೆ. ಇದು ಕಲಾವಿದರಿಗೂ ಸಹ ಆಘಾತ, ಆತಂಕವನ್ನ ಸೃಷ್ಟಿಸಿದೆ. ಹೀಗಾಗಿ ಆಪ್ತಮಿತ್ರ ಪಾರ್ಟ್-3 ಬರುತ್ತಾ ಎನ್ನುವ ಹಲವಾರು ಪ್ರಶ್ನೆಗಳು ಆಗಾಗ ಕೇಳಿ ಬರುತ್ತಿವೆ. ಇದನ್ನೂ ಓದಿ: ಉಪೇಂದ್ರ ದಂಪತಿ ಫೋನ್ ಹ್ಯಾಕ್ ಸೈಬರ್ ವಂಚಕರು ದೋಚಿದ್ದೆಷ್ಟು ಹಣ?

    ಆಪ್ತಮಿತ್ರ ಸಿನಿಮಾದ ಪಾರ್ಟ್-3 ಸ್ಕಿಪ್ಟ್‌ ಬಂದಿದೆಯಾ..? ಬಂದರೆ ಸಿನಿಮಾ ಮಾಡುತ್ತಿರಾ ಎನ್ನುವ ಪ್ರಶ್ನೆಗೆ ನಟ ರಮೇಶ್ ಅರವಿಂದ್ ಪ್ರತಿಕ್ರಿಯೆ ನೀಡಿದ್ದಾರೆ. `ನನ್ನ ಪ್ರಕಾರ ಅದೊಂದು ಸಬ್ಜೆಕ್ಟ್, ಅದೊಂದು ಸ್ಕಿçÃನ್, ಅದೊಂದು ಪಿಕ್ಸಿಯಸ್ ಕ್ಯಾರೆಕ್ಟರ್ ನಾಗವಲ್ಲಿ ಅನ್ನೋದು. ಆದರೆ ಆಪ್ತರಕ್ಷಕ ಮಾಡುವ ವೇಳೆ ಅಂತಹದೊಂದು ಕಥೆ ಬಂದಿತ್ತು. ಆಪ್ತಮಿತ್ರ, ಆಪ್ತರಕ್ಷಕ ಆದ್ಮೇಲೆ ನಾನು ಮಾಡ್ತಿರುವ ಹಾರರ್ ಸಿನಿಮಾ ದೈಜಿನೇ’ ಎಂದು ಹೇಳಿದ್ದಾರೆ.

  • ಹಿಂದೆ ಜಾಗ ಮಾರಾಟ ಮಾಡಿದಾಗ ಉಲ್ಲಂಘನೆಯಾಗಿರಲಿಲ್ಲ, ಈಗ ಹೇಗೆ ನಿಯಮ ಉಲ್ಲಂಘನೆಯಾಗುತ್ತೆ – ಬಾಲಣ್ಣನ ಪುತ್ರಿ ಸವಾಲು

    ಹಿಂದೆ ಜಾಗ ಮಾರಾಟ ಮಾಡಿದಾಗ ಉಲ್ಲಂಘನೆಯಾಗಿರಲಿಲ್ಲ, ಈಗ ಹೇಗೆ ನಿಯಮ ಉಲ್ಲಂಘನೆಯಾಗುತ್ತೆ – ಬಾಲಣ್ಣನ ಪುತ್ರಿ ಸವಾಲು

    – 2003 ರಲ್ಲಿ ಜಾಗ ಮಾರಾಟ ಮಾಡಲಾಗಿತ್ತು
    – ಆಗ ಯಾವ ನಿಯಮದಡಿ ಮಾರಾಟಕ್ಕೆ ಅವಕಾಶ ಇತ್ತು?

    ಡಾ.ವಿಷ್ಣುವರ್ಧನ್ (Vishnuvardhan) ಫ್ಯಾನ್ಸ್‌ಗೆ ಇದು ಬ್ಯಾಡ್ ನ್ಯೂಸ್. ಮತ್ತೆ ಸಮಾಧಿ ಎದ್ದೇಳುತ್ತೆ ಅಂತ ಕನಸು ಕಂಡವರಿಗೆ ಇದು ಖಂಡಿತಾ ನಿರಾಸೆ ಮಾಡುತ್ತದೆ. ಈ ನಿರಾಸೆಗೆ ಕಾರಣ ಬಾಲಣ್ಣನ ಪುತ್ರಿ ಗೀತಾ ಬಾಲಿ ಆಡಿದ ಮಾತು.

    ಹೌದು. ಚಿತ್ರರಂಗದ ಚಟುವಟಿಕೆಗಳಿಗೆ ಪೂರಕವಾಗಲಿ, ಚಿತ್ರರಂಗದವರಿಗೆ ಶೂಟಿಂಗ್‌ಗೆ ಸಹಾಯಕವಾಗಲಿ ಎಂಬ ಉದ್ದೇಶದಿಂದ ಹಿರಿಯನಟ ಬಾಲಕೃಷ್ಣ  (Balakrishna) ಅವರು ಬೆಂಗಳೂರಿನಲ್ಲಿ ಸ್ಟುಡಿಯೋ ನಿರ್ಮಾಣ ಮಾಡಬೇಕು ಎಂದಾಗ ಸರ್ಕಾರ ಕೂಡಾ ಸಾಥ್ ನೀಡಿ 20 ಎಕರೆ ಜಾಗವನ್ನ ನೀಡಿತ್ತು. ಜಮೀನು ನೀಡುವ ವೇಳೆ ಕೆಲವು ಷರತ್ತುಗಳನ್ನ ವಿಧಿಸಲಾಗಿತ್ತು. ಆ ನಿಯಮಗಳು ಈಗ ಉಲ್ಲಂಘನೆಯಾಗಿದೆ ಎಂದು ಅರಣ್ಯ ಇಲಾಖೆ ಮತ್ತೆ ಆ ಜಮೀನನ್ನು ಹಿಂಪಡೆಯಲು ಆದೇಶಿಸಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದೆ.

    ಈ ಬೆನ್ನಲ್ಲೇ ಬಾಲಣ್ಣ ಪುತ್ರಿ ಗೀತಾ ಬಾಲಿ (Geetha Bali) ಆ ಜಾಗವನ್ನ ನಾನು ಬಿಟ್ಟು ಕೊಡಲು ಸಿದ್ದವಿಲ್ಲ. ಕಾನೂನು ರೀತಿಯಲ್ಲಿ ಹೋರಾಟ ಮಾಡುತ್ತೇನೆ. 2003 ರಲ್ಲೇ 10 ಎಕರೆ ಮಾರಾಟವಾದ ವೇಳೆ ನಿಯಮ ಉಲ್ಲಂಘನೆ ಆಗದೇ ಇರೋದು ಈಗ ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

     

    ಡಾ.ವಿಷ್ಣುವರ್ಧನ್ ಸಮಾಧಿ ನೆಲಸಮವಾಗಿ ಅಸಂಖ್ಯಾತ ದಾದಾ ಅಭಿಮಾನಿಗಳಿಗೆ ನೋವುಂಟು ಮಾಡಿತ್ತು. ಡಾ.ವಿಷ್ಣುವರ್ಧನ್ ಅಭಿಮಾನಿಗಳ ಭಾವನೆಗೆ ಧಕ್ಕೆ ತರಲಾಗಿತ್ತು. ಆದರೆ ಸರಕಾರದ ಅರಣ್ಯ ಇಲಾಖೆ ಈ ಜಟಾಪಟಿಯಲ್ಲಿ ಮಧ್ಯಪ್ರವೇಶ ಮಾಡಿ ಅಭಿಮಾನ್ ಸ್ಟುಡಿಯೋ ಜಾಗವನ್ನ ಹಿಂಪಡೆಯುವ ಆದೇಶ ಹೊರಡಿಸಿತ್ತು. ಇದಾದ ಬಳಿಕ ಸಾಹಸಸಿಂಹ ವಿಷ್ಣುವರ್ಧನ್ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದರು.

    ಸರ್ಕಾರ ಅಭಿಮಾನ್ ಸ್ಟುಡಿಯೋವನ್ನ ಮುಟ್ಟುಗೋಲು ಹಾಕಿ ಅರಣ್ಯಪ್ರದೇಶ ಅಂತಾ ಘೋಷಣೆ ಮಾಡಿದ್ದೇ ಆದಲ್ಲಿ, ಸರ್ಕಾರಕ್ಕೆ ಮನವಿ ಸಲ್ಲಿಸಿ ಅಲ್ಲಿ ತಮ್ಮ ನೆಚ್ಚಿನ ನಾಯಕನ ಸ್ಮಾರಕ ತಲೆಎತ್ತಿ ನಿಲ್ಲುವ ಕನಸು ಕಂಡಿದ್ದರು. ಇದನ್ನೂ ಓದಿ:  ರಾತ್ರೋರಾತ್ರಿ ವಿಷ್ಣು ಸಮಾಧಿ ನೆಲಸಮ – ಅಭಿಮಾನಿಗಳಿಂದ ತೀವ್ರ ಆಕ್ರೋಶ

    ಸರ್ಕಾರ ಮಧ್ಯೆಪ್ರವೇಶದಿಂದ ಸಮಸ್ತ ವಿಷ್ಣುವರ್ಧನ್ ಅಭಿಮಾನಿಗಳು ಹಾಗೂ ವಿಷ್ಣುವರ್ಧನ್ ಕುಟುಂಬಸ್ಥರಲ್ಲಿ ಸಂಭ್ರಮದ ವಾತಾವರಣ ಸೃಷ್ಟಿಯಾಗಿತ್ತು. ಆದರೆ ಆ ಜಾಗವನ್ನ ಅಷ್ಟು ಸುಲಭವಾಗಿ ನಾನು ಬಿಟ್ಟುಕೊಡುವುದಿಲ್ಲ. ನ್ಯಾಯಾಲಯಕ್ಕೆ ಹೋಗುತ್ತೇನೆ. ಕಾನೂನು ಹೋರಾಟ ಮಾಡುತ್ತೇನೆ ಅಂತಾ ಬಾಲಣ್ಣ ಪುತ್ರಿ ಸರ್ಕಾರಕ್ಕೆ ಸವಾಲೆಸೆದಿದ್ದಾರೆ.

    ಈ ಜಟಾಪಟಿಗೆ ಸರ್ಕಾರ ಇತಿಶ್ರೀ ಹಾಡುತ್ತೆ ಎನ್ನುವ ಭರವಸೆ ಇಟ್ಟುಕೊಂಡಿದ್ದ ಅಭಿಮಾನಿಗಳು ಮತ್ತೆ ತಲೆಮೇಲೆ ಕೈಹೊತ್ತು ಕೂರುವಂತಾಗಿದೆ. ಇದೇ ಸೆಪ್ಟಂಬರ್ 18 ರಂದು ಅವರ 75ನೇ ಜನ್ಮದಿನವನ್ನ ಆಚರಣೆ ಮಾಡಲು ಸಕಲ ತಯಾರಿ ಮಾಡಿಕೊಂಡಿದ್ದ ಅಭಿಮಾನಿಗಳಿಗೆ ಮತ್ತೆ ನಿರಾಸೆಯಾಗಿದೆ. ಇದನ್ನೂ ಓದಿ:  ಜಮೀನು ಖರೀದಿಸ್ತೀನಿ ಅಂದವರು ಯಾಕೆ ಖರೀದಿಸಿಲ್ಲ : ಅನಿರುದ್ಧ ಪ್ರಶ್ನೆ ಮಾಡಿದ್ದು ಯಾರಿಗೆ?

    ಅಮೃತಮಹೋತ್ಸವದ ವೇಳೆ ಅಲ್ಲಿ ಅಡಿಗಲ್ಲಿಟ್ಟು ಸಮಾಧಿ ನಿರ್ಮಾಣಕ್ಕೆ ಅಂಕಿತ ಹಾಕುವ ಹಲವಾರು ಯೋಜನೆಗಳನ್ನ ಅಭಿಮಾನಿಗಳು ಮಾಡಿಕೊಂಡಿದ್ದರು. ಆದರೆ ಈಗ ಬಾಲಣ್ಣ ಪುತ್ರಿ ಸಿಡಿದೆದ್ದಿದ್ದಾರೆ. ಸರ್ಕಾರದ ಆದೇಶವನ್ನೂ ಲೆಕ್ಕಿಸದೇ ಕಾನೂನು ಹೋರಾಟ ಮಾಡುತ್ತೇನೆ. ಇದರ ಹಿಂದಿರೋ ರಾಜಕೀಯ ಪ್ರಭಾವಿಗಳ ಮುಖವಾಡ ಕಳಚುತ್ತೇನೆ ಎಂದು ಸವಾಲೆಸೆದಿದ್ದಾರೆ. ಬಾಲಣ್ಣ ಕುಟುಂಬದ ಆಸ್ತಿ ವಿವಾದ ಮೇರುನಟನಿಗೆ ಗೇಣು ಜಾಗಕ್ಕೂ ಕುತ್ತು ತಂದಿದೆ.

  • ನಟ ವಿಷ್ಣುವರ್ಧನ್‌ರಿಗೆ ಮರಣೋತ್ತರ ಕರ್ನಾಟಕ ರತ್ನ ನೀಡಿ: ಸಿಎಂಗೆ ಅನಿರುದ್ಧ ಮನವಿ

    ನಟ ವಿಷ್ಣುವರ್ಧನ್‌ರಿಗೆ ಮರಣೋತ್ತರ ಕರ್ನಾಟಕ ರತ್ನ ನೀಡಿ: ಸಿಎಂಗೆ ಅನಿರುದ್ಧ ಮನವಿ

    ಟ ಸಾಹಸಸಿಂಹ ವಿಷ್ಣುವರ್ಧನ್‌ರಿಗೆ (Vishnuvardhan) ಮರಣೋತ್ತರ ಕರ್ನಾಟಕ ರತ್ನ ನೀಡುವಂತೆ ವಿಷ್ಣುವರ್ಧನ್ ಅಳಿಯ ಅನಿರುದ್ಧ (Aniruddha Jatkar), ಸಿಎಂ ಸಿದ್ದರಾಮಯ್ಯಗೆ ಮನವಿ ಮಾಡಿದರು. ಕಾವೇರಿ ನಿವಾಸದಲ್ಲಿ ಸಿಎಂ ಭೇಟಿಯಾಗಿ ಅನಿರುದ್ಧ ಮನವಿ ಸಲ್ಲಿಸಿದರು.

    ಸಿಎಂ ಭೇಟಿ ಬಳಿಕ ಮಾತನಾಡಿ, ಸಿಎಂ ಸಿದ್ದರಾಮಯ್ಯ ಅವರನ್ನ ಭೇಟಿ ಮಾಡಿದೆ. ಹಿಂದೆಯೂ ಸಕಾರಾತ್ಮಕವಾಗಿ ಸ್ಪಂದಿಸಿದ್ದರು. ಇವತ್ತು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಸಚಿವ ಸಂಪುಟದಲ್ಲಿ ಚರ್ಚೆ ಮಾಡುತ್ತೇನೆ ಎಂದು ಸಿಎಂ ಹೇಳಿದ್ದಾರೆ. ಚರ್ಚೆ ಮಾಡಿ ತೀರ್ಮಾನ ಮಾಡ್ತೇವೆ ಎಂದು ಹೇಳಿದ್ದಾರೆ ಅಂತ ತಿಳಿಸಿದರು. ಇದನ್ನೂ ಓದಿ: ವಿಷ್ಣು ಸಮಾಧಿ ನೆಲಸಮ, ಅಭಿಮಾನ್‌ ಸ್ಟುಡಿಯೋದ ಅವ್ಯವಹಾರ: ವಿಷ್ಣು ಫ್ಯಾನ್ಸ್ ಗರಂ

    ವಿಷ್ಣುವರ್ಧನ್‌ಗೆ ಕರ್ನಾಟಕ ರತ್ನ ಕೊಡಿ ಎಂದು ಕೇಳುವುದು ಎಂದರೆ ತಪ್ಪು ಆಗುತ್ತದೆ. ಕರ್ನಾಟಕ ರತ್ನ ಪ್ರಶಸ್ತಿಗೆ ವಿಷ್ಣುವರ್ಧನ್ ಅವರು ಅರ್ಹರು. ಹಾಗಾಗಿ, ಕೇಳುವ ಬದಲಾಗಿ ನೆನಪು ಮಾಡುತ್ತೇನೆ. ಈ ಬಾರಿಯೂ ನೆನಪು ಮಾಡಿದ್ದೇನೆ‌‌ ಎಂದು ಹೇಳಿದರು.

    ವಿಷ್ಣುವರ್ಧನ್ ಸಮಾಧಿ ಧ್ವಂಸ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇದರ ಬಗ್ಗೆ ಈಗಾಗಲೇ ಸರ್ಕಾರದ ಮತ್ತು ಸಿಎಂ ಗಮನಕ್ಕಿದೆ. ಹಿಂದೆ ನಾವು ಕೇಳಿದ ಹಾಗೆ ಕರ್ನಾಟಕ ಸರ್ಕಾರ ಅಪ್ಪ ಅವರ ಸ್ಮಾರಕ ಮಾಡಿದ್ದಾರೆ. ಈಗಾಗಲೇ ಸರ್ಕಾರ ಐದು ಎಕರೆ ಜಮೀನಿನಲ್ಲಿ ಸ್ಮಾರಕ ಮಾಡಿದೆ. ಮೊನ್ನೆ ಸಮಾಧಿ ಧ್ವಂಸ ಮಾಡಿರುವ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಹೇಳಿಕೆ ನೀಡಿದ್ದೇನೆ. ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ ಸರ್ಕಾರ ಮಾಡಿದೆ. ಹೀಗಾಗಿ, ಬೆಂಗಳೂರಿನಲ್ಲಿಯೂ ಸ್ಮಾರಕ ಬೇಕು ಅನ್ನೋದು ತಪ್ಪಾಗುತ್ತದೆ ಎಂದರು. ಇದನ್ನೂ ಓದಿ: ಡಾ. ವಿಷ್ಣು ಅಭಿಮಾನ ಸ್ಮಾರಕ – ಪುತ್ಥಳಿ ನಿರ್ಮಾಣಕ್ಕೆ ಚಾಲನೆ

    ವಿಷ್ಣು ಸ್ಮಾರಕ ಇರೋದನ್ನ ಧ್ವಂಸ ಮಾಡಿದ್ದು ದುರಂತ. ಅಲ್ಲಿಯೇ ಅವರ ಅಂತ್ಯಕ್ರಿಯೆ ಆಗಿರೋದ್ರಿಂದ ಅದಕ್ಕೆ ಆದ್ಯತೆ ಪ್ರಾಮುಖ್ಯತೆ ಇದೆ. ಬಾಲಣ್ಣ ಅವರ ಜಾಗದಲ್ಲಿಯೂ ನಾವು ಸ್ಮಾರಕ ಬೇಕು ಅನ್ನೋದು ತಪ್ಪಾಗುತ್ತದೆ. ರಾಜ್ಯ ಸರ್ಕಾರ ಆ ಜಾಗ ಖರೀದಿ ಮಾಡುತ್ತದೆಯಾ ನೋಡಬೇಕು. ಒಂದು ದುರಂತದ ಘಟನೆಯಾಗಿದೆ. ಆ ಜಮೀನು ಬಾಲಣ್ಣ ಕುಟುಂಬಕ್ಕೆ ಸೇರಿದೆ. ಬಾಲಣ್ಣ ಕುಟುಂಬದ ಬಳಿಯೂ ಕೂಡ ಅಭಿಮಾನಿಗಳಿಗಾಗಿ 10 ಗುಂಟೆ ಜಾಗ ಕೇಳಿದ್ದೆ. ಸರ್ಕಾರ ಇದನ್ನು ಏನು ಮಾಡುತ್ತದೆ ಗೊತ್ತಿಲ್ಲ. ನಾವು ಕುಟುಂಬದವರಾಗಿ ಮತ್ತೆ ಮತ್ತೆ ಕೇಳೋದು ತಪ್ಪಾಗುತ್ತದೆ. ನಾವು ಕೇಳಿದ ಹಾಗೆ ಮೈಸೂರಿನಲ್ಲಿ ಸ್ಮಾರಕವಾಗಿದೆ. ಮತ್ತೆ ಇಲ್ಲಿಯೂ ಮಾಡಿ ಎನ್ನೋದರಲ್ಲಿ ಅರ್ಥ ಇಲ್ಲ. ಬಾಲಣ್ಣ ಕುಟುಂಬ ಮನಸು ಮಾಡಿ ಮತ್ತೆ ಸ್ಮಾರಕ ಕಟ್ಟೋಕೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

  • ಡಾ. ವಿಷ್ಣು ಅಭಿಮಾನ ಸ್ಮಾರಕ – ಪುತ್ಥಳಿ ನಿರ್ಮಾಣಕ್ಕೆ ಚಾಲನೆ

    ಡಾ. ವಿಷ್ಣು ಅಭಿಮಾನ ಸ್ಮಾರಕ – ಪುತ್ಥಳಿ ನಿರ್ಮಾಣಕ್ಕೆ ಚಾಲನೆ

     ಡಾ. ವಿಷ್ಣುವರ್ಧನ್ (Vishnuvardhan) ಅಭಿಮಾನ ಸ್ಮಾರಕಕ್ಕೆ ಚಾಲನೆ ಸಿಕ್ಕಿದೆ. ಕೆಂಗೇರಿ (Kengeri) ಬಳಿ ಅರ್ಧ ಎಕರೆ ಜಮೀನು ಖರೀದಿಸಿರುವ ನಟ ಸುದೀಪ್, ಆ ಜಮೀನನ್ನು ವಿಷ್ಣು ಸ್ಮಾರಕ ಮಾಡಲು ಹೊರಟಿದ್ದಾರೆ. ಅದಕ್ಕೆ ವೀರಕಪುತ್ರ ಶ್ರೀನಿವಾಸ್ ಮುಂದಾಳತ್ವ ವಹಿಸಿಕೊಂಡಿದ್ದಾರೆ. ಇದೀಗ ಪುತ್ಥಳಿ ನಿರ್ಮಾಣಕ್ಕೆ ಅಡ್ವಾನ್ಸ್ ಕೊಡುವ ಮೂಲಕ ಕೆಲಸಕ್ಕೆ ಚಾಲನೆ ನೀಡಲಾಗಿದೆ.

    ಸಾಹಸ ಸಿಂಹ ವಿಷ್ಣುವರ್ಧನ್ ಅಭಿಮಾನಿಗಳು ಅತಿ ದೊಡ್ಡ ಪ್ಲಾನ್ ಮಾಡಿದ್ದಾರೆ. ಅಭಿಮಾನ್ ಸ್ಟುಡಿಯೋದಲ್ಲಿದ್ದ (Abhiman Studio) ದಾದಾ ಸಮಾಧಿಯನ್ನು ಇತ್ತೀಚೆಗೆ ತೆರವುಗೊಳಿಸಲಾಗಿತ್ತು. ಇದೀಗ ಸೆಪ್ಟೆಂಬರ್ 18ರಂದು ವಿಷ್ಣುವರ್ಧನ್ ಹುಟ್ಟುಹಬ್ಬದ ದಿನವೇ ಸ್ಮಾರಕ ನಿರ್ಮಾಣಕ್ಕೆ ಅಡಿಗಲ್ಲು ಹಾಕಲು ಅಭಿಮಾನಿಗಳು ಮುಂದಾಗಿದ್ದಾರೆ. ಸೆಪ್ಟೆಂಬರ್ 18ರಂದು ಅಮೃತ ಮಹೋತ್ಸವ ಕಾರ್ಯಕ್ರಮ ನಡೆಯಲಿದೆ. ಇದೇ ದಿನದಂದು ಮಹತ್ವದ ಕೆಲಸಕ್ಕೆ ದಾದಾರ ಫ್ಯಾನ್ಸ್ ಮುಂದಾಗುತ್ತಿದ್ದಾರೆ.  ಇದನ್ನೂ ಓದಿ: ಮೈಸೂರು ಸ್ಯಾಂಡಲ್ ಸೋಪ್‌ ಪ್ರಚಾರಕ್ಕೆ 48.88 ಕೋಟಿ ತಮನ್ನಾಗೆ 6.20 ಕೋಟಿ, ಯಾರಿಗೆ ಎಷ್ಟು?

    ಕಿಚ್ಚನಿಂದ ಅನಾವರಣ
    ಸೆಪ್ಟೆಂಬರ್ 2ರಂದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬ. ಹೇಳಿಕೇಳಿ ಕಿಚ್ಚ ವಿಷ್ಣುದಾದಾರ ಅಪ್ಪಟ ಅಭಿಮಾನಿ. ಸುದೀಪ್ ಅವರ ಹುಟ್ಟುಹಬ್ಬದಂದೇ ಯಜಮಾನರ ಸ್ಮಾರಕದ ಬ್ಲ್ಯೂಪ್ರಿಂಟ್ ನ್ನು ಸ್ವತಃ ಕಿಚ್ಚ ಅನಾವರಣ ಮಾಡಲಿದ್ದಾರೆ. ಸೆಪ್ಟೆಂಬರ್ 18ರಂದು ದಾದಾ ಬರ್ತಡೇ ದಿನವೇ ಸ್ಮಾರಕಕ್ಕೆ ಅಡಿಗಲ್ಲು ಹಾಕಲಾಗುವುದು. ಕೆಂಗೇರಿ ಬಳಿ ನಿರ್ಮಾಣ ಆಗುವ ಸ್ಮಾರಕ, ಅಭಿಮಾನ್ ಸ್ಟುಡಿಯೋ ಪುಣ್ಯಭೂಮಿಗೆ ಸಮ ಅಲ್ಲ ಅನ್ನುವುದನ್ನು ವೀರಕಪುತ್ರ ಅವರು ತಿಳಿಸಿದ್ದಾರೆ. ಇದನ್ನೂ ಓದಿಇದೇ 28 ರಂದು ಬೆಂಗಳೂರಿನಲ್ಲಿ ಮದುವೆಯಾಗಲಿದ್ದಾರೆ ಅನುಶ್ರೀ

    ಈ ವೇಳೆ ಮಾತನಾಡಿದ ವೀರಕಪುತ್ರ ಶ್ರೀನಿವಾಸ್ ಮಾತನಾಡಿ, ಅಮೃತವರ್ಷ ಆಚರಿಸಲು ಮೂರು ವರ್ಷದಿಂದ ಪ್ಲಾನ್ ಮಾಡಿಕೊಳ್ಳುತ್ತಿದ್ದೇವೆ. ಅದೇ ದಿನದಂದು ಸ್ಮಾರಕ ಕೆಲಸ ನಿರ್ಮಾಣ ಕೆಲಸ ಆರಂಭಿಸುತ್ತಿದ್ದೇವೆ. ಸೆಪ್ಟೆಂಬರ್ 2ರಂದು ಕಿಚ್ಚ ಸುದೀಪ್ ಸರ್ ಬರ್ತಡೇ ದಿನದಂದು ಸ್ಮಾರಕ ಹೇಗಿರಲಿದೆ ಎಂಬ ಮಾಡೆಲ್ ಪರಿಚಯಿಸುತ್ತೇವೆ. ಸೆಪ್ಟೆಂಬರ್ 18ಕ್ಕೆ ಸ್ಮಾರಕಕ್ಕೆ ಅಡಿಗಲ್ಲು ಹಾಕುತ್ತೇವೆ. ಇದು ಪುಣ್ಯಭೂಮಿಗೆ ಸಮ ಎಂದು ವಾದ ಮಾಡಲು ಹೋಗುವುದಿಲ್ಲ. ಮೈಸೂರಿನಲ್ಲಿರುವ ಸ್ಮಾರಕಕ್ಕೆ ಪ್ಯಾರೆಲ್ ಎಂದು ಹೇಳುವುದಿಲ್ಲ. ಇದು ಅಸಂಖ್ಯಾತ ಭಾವನೆ ಬೆಸೆದ ಜಾಗ ಇದು. ಪುಣ್ಯಭೂಮಿ ಉಳಿಸಿಕೊಳ್ಳುತ್ತೇವೆ. ಅದಕ್ಕಾಗಿ ಹೋರಾಟ ಮಾಡುತ್ತೇವೆ. ಕುಟುಂಬದವರು ನಿನ್ನೆ ಹೇಳಿದ್ದಾರೆ. ನೀವೆಲ್ಲರೂ ನಿರ್ಧಾರ ಮಾಡಿಕೊಂಡು ಬನ್ನಿ ಎಂದಿದ್ದಾರೆ. ಅದಕ್ಕಾಗಿ ರೂಪುರೇಷೆ ಸಿದ್ದ ಪಡಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ದಾದಾ ಅವರ ದರ್ಶನ ಕೇಂದ್ರ ಮಾಡುತ್ತೇವೆ. ಅದು ಅರ್ಥಪೂರ್ಣ ಕೆಲಸಕ್ಕೆ ವೇದಿಕೆಯಾಗಲಿದೆ ಎಂಬುದನ್ನು ಸೆಪ್ಟೆಂಬರ್ 2ಕ್ಕೆ ಮಾಹಿತಿ ನೀಡುತ್ತೇನೆ ಎಂದರು.

    ಯಜಮಾನರ ಮಹೋತ್ಸವ
    ಸಾಹಸ ಸಿಂಹ ವಿಷ್ಣುವರ್ಧನ್ ಅವರ ಯಜಮಾನರ ಅಮೃತ ಮಹೋತ್ಸವನ್ನ ಒಂದು ದಿನ ಮಾಡೋಕೆ ಪ್ಲಾನ್ ಮಾಡಲಾಗಿದೆ. ಬೆಂಗಳೂರಿನ ನಂದಿ ಲಿಂಕ್ಸ್ ಗ್ರೌಂಡ್ ನಲ್ಲಿ ಈ ಸಂಭ್ರಮ ಮಾಡಲಾಗುತ್ತಿದೆ. ಈ ಒಂದು ಅಮೃತ ಮಹೋತ್ಸವದಲ್ಲಿ ಇಡೀ ಇಂಡಸ್ಟ್ರಿ ಭಾಗಿ ಆಗಲಿದೆ ಅಂತಲೂ ಹೇಳಬಹುದು.

  • ವಿಷ್ಣುವರ್ಧನ್ ಸ್ಮಾರಕ ನೆಲಸಮ: ವಿಜಯ್ ರಾಘವೇಂದ್ರ ಬೇಸರ

    ವಿಷ್ಣುವರ್ಧನ್ ಸ್ಮಾರಕ ನೆಲಸಮ: ವಿಜಯ್ ರಾಘವೇಂದ್ರ ಬೇಸರ

    ಸಾಹಸ ಸಿಂಹ ಡಾ.ವಿಷ್ಣುವರ್ಧನ್ (Dr Vishnuvardhan) ಸಮಾಧಿ ನೆಲಸಮ ಹಿನ್ನೆಲೆ ನಟ ವಿಜಯ್ ರಾಘವೇಂದ್ರ (Vijay Raghavendra) ಪ್ರತಿಕ್ರಿಯೆ ನೀಡಿದ್ದಾರೆ. ಮೇರು ನಟನ ಸಮಾಧಿ ರಾತ್ರೋ ರಾತ್ರಿ ತೆರವು ಮಾಡಿದ್ದು ಎಲ್ಲರಿಗೂ ಬೇಸರ ತಂದಿದೆ. ಈಗ ಆಗೋಗಿದೆ, ಅದಕ್ಕಾಗಿ ಏನು ಮಾಡಬೇಕು, ಕಾನೂನು ಬದ್ಧವಾಗಿ ಬಹಳ ದೊಡ್ಡ ಜವಾಬ್ದಾರಿ ಹೊತ್ತಿರೋರು ಹಾಗೂ ಒಳ್ಳೆಯ ಮನಸ್ಸಿರೋರು ಕೆಲಸ ಮಾಡ್ತಿದಾರೆ. ಸಿನಿಮಾ ಇಂಡಸ್ಟ್ರಿ ಬೆಳಸಿದವರು ವಿಷ್ಣುವರ್ಧನ್ ಸರ್. ಚಿತ್ರರಂಗಕ್ಕೆ ಕೊಡುಗೆ ಕೊಟ್ಟಿರುವ ಹಿರಿಯ ಕಲಾವಿದರಿಗೆ ಹೀಗಾದಾಗ ಏನು ಹೇಳಬೇಕು ಗೊತ್ತಾಗಲ್ಲ ಎಂದಿದ್ದಾರೆ.

    ವಿಷ್ಣುವರ್ಧನ್ ಅವರು ಬಹಳ ಜನರಿಗೆ ಆರಾಧ್ಯದೈವ. ಇವಾಗ ಆಗೋಗಿದೆ. ನಮ್ಮ ಹಿರಿಯರು ಸೇರಿ, ಮುಂದೆ ನಿಂತು ಅದನ್ನ ಸರಿಪಡಿಸುವ ಕೆಲಸ ಮಾಡಬೇಕು. ಎಂದು ತಮ್ಮ ರಿಪ್ಪನ್ ಸ್ವಾಮಿ ಸಿನಿಮಾದ ಟ್ರೈಲರ್ ಲಾಂಚ್ ಇವೆಂಟ್ ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

    ಈಗಾಗಲೇ ಕಿಚ್ಚ ಸುದೀಪ್ ಅವರು ವಿಷ್ಣುವರ್ಧನ್ ಅವರ ಅಭಿಮಾನಿಗಳಿಗಾಗಿ ದರ್ಶನ ಕೇಂದ್ರ ಮಾಡಲು ಕೆಂಗೇರಿ ಬಳಿ ಜಾಗವನ್ನು ಖರೀದಿಸಿದ್ದಾರಂತೆ. ಸದ್ಯದಲ್ಲಿಯೇ ಅಡಿಗಲ್ಲು ಇಡಲು ವಿಷ್ಣುದಾದ ಫ್ಯಾನ್ಸ್ ಹಾಗೂ ಕಿಚ್ಚ ಸುದೀಪ್ ನೇತೃತ್ವದಲ್ಲಿ ಈ ಕಾರ್ಯ ನಡೆಯಲಿದೆಯಂತೆ. ಜೊತೆಗೆ ಅಭಿಮಾನ್ ಸ್ಟುಡಿಯೋದಲ್ಲಿನ ಜಾಗವನ್ನು ಉಳಿಸಿಕೊಳ್ಳಲು ಹೋರಾಟಗಳು ನಡೆದಿವೆ. ಕಾನೂನು ಬದ್ಧವಾಗಿ ಜಾಗವನ್ನ ಪಡೆಯಲು ವಿಷ್ಣುವರ್ಧನ್ ಫ್ಯಾನ್ಸ್ ಪಣ ತೊಟ್ಟಿದ್ದಾರೆ.

    ಡಾ.ವಿಷ್ಣುವರ್ಧನ್ ಅವರ ಸಮಾಧಿ ವಿಚಾರದಲ್ಲಿ ಚಿತ್ರರಂಗದ ಗಣ್ಯರು ಧ್ವನಿ ಎತ್ತಿದ್ದಾರೆ. ಇದೀಗ ನಟ ವಿಜಯ್ ರಾಘವೇಂದ್ರ ಈ ಘಟನೆಗೆ ಬೇಸರ ವ್ಯಕ್ತಪಡಿಸಿದ್ದಾರೆ.