Tag: vishakhapatna

  • ಮೂವರು ಮಕ್ಕಳ ಎದುರೇ ತಾಯಿಯ ಮೇಲೆ ಗ್ಯಾಂಗ್ ರೇಪ್!

    ಮೂವರು ಮಕ್ಕಳ ಎದುರೇ ತಾಯಿಯ ಮೇಲೆ ಗ್ಯಾಂಗ್ ರೇಪ್!

    ವಿಶಾಖಪಟ್ಟಣ: ಮೂವರು ಮಕ್ಕಳ ಕಣ್ಣೆದುರೇ ಮೂವತ್ತೈದು ವರ್ಷದ ಮಹಿಳೆಯ ಮೇಲೆ ಇಬ್ಬರು ಕಾಮುಕರು ಸಾಮೂಹಿಕ ಅತ್ಯಾಚಾರವೆಸಗಿದ ಘಟನೆ ಆಂಧ್ರದಲ್ಲಿ ನಡೆದಿದೆ

    ನಗರದ ಇಬ್ಬರು ಪುರುಷರು ಮನೆಯಲ್ಲಿ ತನ್ನ ಗಂಡ ಇಲ್ಲದ ವೇಳೆಯಲ್ಲಿ ನನ್ನ ಮೂವರು ಮಕ್ಕಳ ಮುಂದೆಯೇ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆ ದೂರು ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

    ಘಟನೆ ಸೋಮವಾರ ಸಂಜೆ ತನ್ನ ಗಂಡ ಕೆಲಸದ ನಿಮಿತ್ತ ಹೊರಗಡೆ ಹೋಗಿದ್ದ ಸಂದರ್ಭದಲ್ಲಿ ನಡೆದಿದೆ ಅಂತಾ ಗಾಜುವಾಕ ಠಾಣೆಯಲ್ಲಿ ಮಹಿಳೆ ದೂರು ನೀಡಿದ್ದಾರೆ. ನಾಲ್ವರ ಗುಂಪು ತನ್ನ ಮನೆಯನ್ನೂ ಹಾನಿಗೊಳಿಸಿದೆ ಎಂದು ಅವರು ದೂರಿನಲ್ಲಿ ಹೇಳಿದ್ದಾರೆ.

    ನಾಲ್ವರ ಪೈಕಿ ಇಬ್ಬರು ಮಕ್ಕಳ ಮುಂದೆಯೇ ಅತ್ಯಾಚಾರ ಎಸಗಿದ್ದಾರೆ. ಜತೆಗೆ, ಈ ವಿಷಯವನ್ನು ಬಹಿರಂಗಪಡಿಸಿದರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಮಹಿಳೆಗೆ ಬೆದರಿಕೆ ಹಾಕಿದ್ದಾರೆ ಎಂದು ಠಾಣೆಯ ಎಸ್‍ಐ ಟಿ ಇಮ್ಮಾನ್ವೆಲ್ ರಾಜು ತಿಳಿಸಿದ್ದಾರೆ.

    ಆರೋಪಿಗಳ ವಿರುದ್ಧ ಐಪಿಸಿ 376ರ ಅಡಿ ಪ್ರಕರಣ ದಾಖಲಿಸಲಾಗಿದೆ. ಈ ಸಂಬಂಧ ನಾಲ್ವರನ್ನು ಬಂಧಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.