Tag: Visakhapatnam

  • ದೀಪಾವಳಿ ಪ್ರಯುಕ್ತ ಬೆಂಗಳೂರಿಂದ ವಿಶಾಖಪಟ್ಟಣಂಗೆ ವಿಶೇಷ ರೈಲು

    ದೀಪಾವಳಿ ಪ್ರಯುಕ್ತ ಬೆಂಗಳೂರಿಂದ ವಿಶಾಖಪಟ್ಟಣಂಗೆ ವಿಶೇಷ ರೈಲು

    ಬೆಂಗಳೂರು: ದೀಪಾವಳಿ ಹಬ್ಬದ (Diwali Festival) ಪ್ರಯುಕ್ತ ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಲು ನೈಋತ್ಯ ರೈಲ್ವೆಯು ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ಆಂಧ್ರ ಪ್ರದೇಶದ ವಿಶಾಖಪಟ್ಟಣಂಗೆ (Visakhapatnam) ಒಂದು-ಮಾರ್ಗದ ವಿಶೇಷ ರೈಲು ಸೇವೆ ಆರಂಭಿಸಲಿದೆ.

    ಅಕ್ಟೋಬರ್ 22ರ ಮಧ್ಯಾಹ್ನ 3:50ಕ್ಕೆ ಎಸ್ಎಂವಿಟಿ ಬೆಂಗಳೂರಿನಿಂದ ವಿಶೇಷ ರೈಲು (ಸಂಖ್ಯೆ 08544) ಹೊರಡಲಿದೆ. ಇದನ್ನೂ ಓದಿ: ಭಾರತದಲ್ಲಿ ಮಾತ್ರವಲ್ಲ, ಈ ದೇಶಗಳಲ್ಲಿಯೂ ದೀಪಾವಳಿ ಆಚರಣೆ ಬಲು ಜೋರು!

    ಈ ರೈಲು ಕೃಷ್ಣರಾಜಪುರಂ, ಬಂಗಾರಪೇಟೆ, ಕುಪ್ಪಂ, ಜೋಲಾರ್‌ಪೇಟೆ, ಕಾಟ್ಪಾಡಿ, ರೇಣಿಗುಂಟ, ಗೂಡೂರು, ನೆಲ್ಲೂರು, ಗುಡಿವಾಡ, ಕೈಕಲೂರು, ಆಕಿವಿಡು, ಭೀಮಾವರಂ, ತನುಕು, ನಿಡದವೋಲು, ರಾಜಮಂಡ್ರಿ, ಸಾಮಲಕೋಟ, ಎಲಮಂಚಿಲಿ ಮತ್ತು ದುವ್ವಾಡ ನಿಲ್ದಾಣಗಳಲ್ಲಿ ನಿಲುಗಡೆ ಮಾಡಿ ಅಕ್ಟೋಬರ್‌ 23ರಂದು ಮಧ್ಯಾಹ್ನ 1:30ಕ್ಕೆ ವಿಶಾಖಪಟ್ಟಣಂ ನಿಲ್ದಾಣ ತಲುಪಲಿದೆ. ಇದನ್ನೂ ಓದಿ: ಐಎನ್‌ಎಸ್‌ ವಿಕ್ರಾಂತ್‌ ಪಾಕ್‌ಗೆ ನಿದ್ರೆಯಿಲ್ಲದಂತೆ ಮಾಡಿತು, ಬ್ರಹ್ಮೋಸ್‌ ತನ್ನ ಸಾಮರ್ಥ್ಯ ತೋರಿತು – ನರೇಂದ್ರ ಮೋದಿ

  • ಟ್ರಂಪ್‌ಗೆ ಗೂಗಲ್‌ ಟಕ್ಕರ್‌| ವಿಶಾಖಪಟ್ಟಣದಲ್ಲಿ ಎಐ-ಹಬ್‌ಗಾಗಿ 1500 ಕೋಟಿ ಡಾಲರ್‌ ಹೂಡಿಕೆ, 1 ಲಕ್ಷ ಉದ್ಯೋಗ ಸೃಷ್ಟಿ

    ಟ್ರಂಪ್‌ಗೆ ಗೂಗಲ್‌ ಟಕ್ಕರ್‌| ವಿಶಾಖಪಟ್ಟಣದಲ್ಲಿ ಎಐ-ಹಬ್‌ಗಾಗಿ 1500 ಕೋಟಿ ಡಾಲರ್‌ ಹೂಡಿಕೆ, 1 ಲಕ್ಷ ಉದ್ಯೋಗ ಸೃಷ್ಟಿ

    ನವದೆಹಲಿ: ಮೇಕ್ ಅಮೆರಿಕ ಗ್ರೇಟ್ ಅಗೇನ್ (MAGA) ಅಂತಿದ್ದ ಟ್ರಂಪ್‌ಗೆ ಗೂಗಲ್ (Google) ಸಿಇಓ ಸುಂದರ್ ಪಿಚೈ ಟಕ್ಕರ್ ಕೊಟ್ಟಿದ್ದಾರೆ. ಭಾರತದಲ್ಲಿ (India) ಮೊದಲ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ (Artificial Intelligence) ಹಬ್‌ಗಾಗಿ ಗೂಗಲ್ ಬರೋಬ್ಬರಿ 1500 ಕೋಟಿ ರೂ. ಡಾಲರ್ ಹೂಡಿಕೆ ಮಾಡುತ್ತಿದೆ.

    ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ (Visakhapatnam) ನಿರ್ಮಾಣವಾಗಲಿರುವ ಎಐ ಹಬ್‌ಗಾಗಿ ಯೋಜನೆಗಳ ಬಗ್ಗೆ ಸುಂದರ್ ಪಿಚೈ ಪ್ರಧಾನಿ ಮೋದಿಗೆ (PM NarendraModi) ವಿವರಣೆ ಕೊಟ್ಟಿದ್ದಾರೆ. ದೆಹಲಿಯಲ್ಲಿ ನಡೆದ ಗೂಗಲ್‌ ಕಾರ್ಯಕ್ರಮದಲ್ಲಿ ಐಟಿ ಸಚಿವ ಅಶ್ವಿನಿ ವೈಷ್ಣವ್, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಆಂಧ್ರಪ್ರದೇಶ ಸಿಎಂ ಎನ್ ಚಂದ್ರಬಾಬು ನಾಯ್ಡು, ಆಂಧ್ರಪ್ರದೇಶ ಐಟಿ ಸಚಿವ ಎನ್ ಲೋಕೇಶ್ ಸಮ್ಮುಖದಲ್ಲಿ ಗೂಗಲ್‌ ಈ ಘೋಷಣೆ ಮಾಡಿದೆ.

    ಏನೇನು ಇರಲಿದೆ?
    AI ಮೂಲಸೌಕರ್ಯ, ಡೇಟಾ ಕೇಂದ್ರಗಳು, ನವೀಕರಿಸಬಹುದಾದ ಇಂಧನ ಸಾಮರ್ಥ್ಯ ಮತ್ತು ಹೊಸ ಸಬ್‌ಸೀ ಗೇಟ್‌ವೇ ಅನ್ನು ಸಂಯೋಜಿಸುತ್ತದೆ. ಇದು ದೇಶದ ಮೊದಲ ಗಿಗಾವ್ಯಾಟ್-ಪ್ರಮಾಣದ ಡೇಟಾ ಸೆಂಟರ್ ಕ್ಯಾಂಪಸ್ ಆಗಿರಲಿದೆ. ಇದನ್ನೂ ಓದಿ:  ನೀವು ಬೆಂಗಳೂರಿಗೆ ಹೋದರೆ, ಕನ್ನಡ ಕಲಿಯಿರಿ: ಝೋಹೊ ಸಂಸ್ಥಾಪಕ ಶ್ರೀಧರ್ ವೆಂಬು

    ಕ್ಲೌಡ್ ಸೇವೆಗಳು ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು, ಬೃಹತ್ ಕಂಪ್ಯೂಟಿಂಗ್ ಶಕ್ತಿ ಮತ್ತು ಕಡಿಮೆ-ಲೇಟೆನ್ಸಿ ಸಂಪರ್ಕದ ಅಗತ್ಯವಿರುವುದರಿಂದ ಡೇಟಾ ಕೇಂದ್ರಗಳು ಹೆಚ್ಚು ನಿರ್ಣಾಯಕವಾಗುತ್ತಿವೆ.

    ಐದು ವರ್ಷಗಳ ಯೋಜನೆಯು (2026–2030) 1 ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ ಎಂದು ನಾಗರಿಕ ವಿಮಾನಯಾನ ಸಚಿವ ಎನ್ ರಾಮ್ ಮೋಹನ್ ನಾಯ್ಡು ಹೇಳಿದ್ದಾರೆ.

    ಈ ಕೇಂದ್ರ ಅಡಾನಿಕಾನೆಕ್ಸ್ ( daniConneX) ಮತ್ತು ಏರ್‌ಟೆಲ್‌ನ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗುವುದು. ಈ ಉಪಕ್ರಮದ ಭಾಗವಾಗಿ, ಗೂಗಲ್ ವಿಶಾಖಪಟ್ಟಣದಲ್ಲಿ ಹೊಸ ಅಂತರರಾಷ್ಟ್ರೀಯ ಸಬ್‌ಸೀ ಕೇಬಲ್‌ಗಳನ್ನು ನಿರ್ಮಿಸಲಿದೆ. ಇದು ಭಾರತದ ಇಂಟರ್ನೆಟ್ ಸಾಮರ್ಥ್ಯವನ್ನು ಸುಧಾರಿಸಲಿದೆ. ಅಷ್ಟೇ ಅಲ್ಲದೇ ಮುಂಬೈ ಮತ್ತು ಚೆನ್ನೈನಲ್ಲಿ ಅಸ್ತಿತ್ವದಲ್ಲಿರುವ ಗೇಟ್‌ವೇಗಳಿಗೆ ಪೂರಕವಾಗಿರುತ್ತದೆ.

  • Yoga Day 2025: ಯೋಗಾಂಧ್ರದಲ್ಲಿ ʻನಮೋʼ ಯೋಗ – 25,000 ವಿದ್ಯಾರ್ಥಿಗಳಿಂದ 108 ನಿಮಿಷ ಸೂರ್ಯ ನಮಸ್ಕಾರ

    Yoga Day 2025: ಯೋಗಾಂಧ್ರದಲ್ಲಿ ʻನಮೋʼ ಯೋಗ – 25,000 ವಿದ್ಯಾರ್ಥಿಗಳಿಂದ 108 ನಿಮಿಷ ಸೂರ್ಯ ನಮಸ್ಕಾರ

    – 26 ಕಿಮೀ ಕಾರಿಡಾರ್‌, 3 ಲಕ್ಷಕ್ಕೂ ಅಧಿಕ ಮಂದಿಯಿಂದ ಯೋಗ

    ವಿಶಾಖಪಟ್ಟಣಂ: 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ (Yoga Day 2025) ಅಂಗವಾಗಿ ಜಗತ್ತಿನಾದ್ಯಂತ ಸಾಮೂಹಿಕ ಯೋಗ ಕಾರ್ಯಕ್ರಮಗಳು ನಡೆಯುತ್ತಿವೆ. ಅದರಂತೆ ವಿಶಾಖಪಟ್ಟಣಂನಲ್ಲಿ (Visakhapatnam) ಪ್ರಧಾನಿ ಮೋದಿ (Narendra Modi) ನೇತೃತ್ವದಲ್ಲಿ ವಿಶ್ವದಾಖಲೆಯ ಯೋಗ ಕಾರ್ಯಕ್ರಮ ನಡೆಯಿತು.

    ಕಾರ್ಯಕ್ರಮಕ್ಕಾಗಿ ಆರ್‌.ಕೆ ಬೀಚ್‍ನಿಂದ ಭೋಗಪುರಂವರೆಗೆ 26 ಕಿಮೀ ಕಾರಿಡಾರ್ನಿ ರ್ಮಾಣ ಮಾಡಲಾಗಿತ್ತು. ಈ ಕಾರಿಡಾರ್‌ನಲ್ಲಿ 3 ಲಕ್ಷಕ್ಕೂ ಅಧಿಕ ಜನ ಯೋಗಾಸನ ಮಾಡಿದ್ದಾರೆ. ಇನ್ನೂ 25,000 ವಿದ್ಯಾರ್ಥಿಗಳಿಂದ 108 ನಿಮಿಷ ಸೂರ್ಯ ನಮಸ್ಕಾರ ಮಾಡಿ ಗಮನ ಸೆಳೆದರು. ಈ ಬಾರಿ `ಒಂದು ಭೂಮಿಗಾಗಿ, ಒಂದು ಆರೋಗ್ಯಕ್ಕಾಗಿ’ ಎಂಬ ಥೀಮ್’ನಲ್ಲಿ ಈ ಬಾರಿಯ ಯೋಗ ದಿನ ಆಚರಣೆ ಮಾಡಲಾಗುತ್ತಿದೆ. ಇದನ್ನೂ ಓದಿ: ರಾಜ್ಯದಲ್ಲೂ ಅಂತಾರಾಷ್ಟ್ರೀಯ ಯೋಗ ದಿನಾಚರಣೆ – ವಿಧಾನಸೌಧದ ಎದುರು 5,000 ಮಂದಿ ಯೋಗ ಪ್ರದರ್ಶನ

    ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸುವವರನ್ನು ಕಾರ್ಯಕ್ರಮದ ಸ್ಥಳಕ್ಕೆ ಕರೆದುಕೊಂಡು ಬರಲು 3,000 ಕ್ಕೂ ಹೆಚ್ಚು ಬಸ್‌ಗಳನ್ನು ಯೋಜಿಸಲಾಗಿದೆ.

    ಯೋಗ ಕಾರ್ಯಕ್ರಮಕ್ಕೆ ಭಾರೀ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದ್ದು, 10,000 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇಡೀ ಮಾರ್ಗದುದ್ದಕ್ಕೂ 1,200 ಸಿಸಿಟಿವಿ ಕ್ಯಾಮೆರಾಗಳು ಮತ್ತು ಡ್ರೋನ್ ಮೂಲಕ ಕಣ್ಗಾವಲಿಡಲಾಗಿದೆ. ಇದನ್ನೂ ಓದಿ: Yoga Day 2025: ಯೋಗಾಂಧ್ರದಲ್ಲಿ ʻನಮೋʼ ಯೋಗ – 25,000 ವಿದ್ಯಾರ್ಥಿಗಳಿಂದ 108 ನಿಮಿಷ ಸೂರ್ಯ ನಮಸ್ಕಾರ

  • ಪತ್ನಿಯ ಮಾರ್ಫ್‌ ಫೋಟೋ ಬಳಸಿ ಆ್ಯಪ್‌ ಏಜೆಂಟರ ಕಿರುಕುಳ – 2,000 ರೂ. ಸಾಲ ಪಡೆದಿದ್ದ ವ್ಯಕ್ತಿ ಆತ್ಮಹತ್ಯೆ

    ಪತ್ನಿಯ ಮಾರ್ಫ್‌ ಫೋಟೋ ಬಳಸಿ ಆ್ಯಪ್‌ ಏಜೆಂಟರ ಕಿರುಕುಳ – 2,000 ರೂ. ಸಾಲ ಪಡೆದಿದ್ದ ವ್ಯಕ್ತಿ ಆತ್ಮಹತ್ಯೆ

    ಅಮರಾವತಿ: ತ್ವರಿತ ಸಾಲ ನೀಡುವ ಆ್ಯಪ್‌ (Loan App) ಮೂಲಕ 2,000 ರೂ. ಸಾಲ ಪಡೆದಿದ್ದ ವ್ಯಕ್ತಿಯೊಬ್ಬ ಆ್ಯಪ್‌ ಏಜೆಂಟರ ಕಿರುಕುಳದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರಪ್ರದೇಶದಲ್ಲಿ (Andhra Pradesh) ನಡೆದಿದೆ.

    ಹೈದರಾಬಾದ್‌ ಮೂಲದ ನರೇಂದ್ರ (25) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಆ್ಯಪ್‌ ಏಜೆಂಟರು ತನ್ನ ಪತ್ನಿಯ ಮಾರ್ಫ್‌ ಮಾಡಿದ ಅಶ್ಲೀಲ ಫೋಟೋವನ್ನು ನರೇಂದ್ರ ಕುಟುಂಬಸ್ಥರು ಹಾಗೂ ಸ್ನೇಹಿತರಿಗೆ ಕಳುಹಿಸಿದ್ದಾರೆ. ಇದರಿಂದ ಮನನೊಂದ ನರೇಂದ್ರ ಆತ್ಮಹತ್ಯೆಗೆ ಶರಣಾಗಿದ್ದಾನೆ. ಇದನ್ನೂ ಓದಿ: ಮುಂದಿನ 5 ವರ್ಷದಲ್ಲಿ ಆಟೋಮೊಬೈಲ್ ಉದ್ಯಮದಲ್ಲಿ ವಿಶ್ವದಲ್ಲೇ ಭಾರತ ನಂಬರ್‌ 1: ಗಡ್ಕರಿ ಭವಿಷ್ಯ

    25 ವರ್ಷದ ನರೇಂದ್ರ ಕಳೆದ 6 ತಿಂಗಳ ಹಿಂದೆಯಷ್ಟೇ ಅಖಿಲಾ ಎಂಬಾಕೆಯೊಂದಿಗೆ ಪ್ರೇಮ ವಿವಾಹವಾಗಿದ್ದ. ದಂಪತಿ ಇಬ್ಬರೂ ವಿಶಾಖಪಟ್ಟಂನಲ್ಲಿ ನೆಲೆಸಿದ್ದರು. ನರೇಂದ್ರ ಮೀನುಗಾರಿಕೆ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ಹಮಾವಾನ ವೈಪರಿತ್ಯದಿಂದಾಗಿ ಆರ್ಥಿಕ ನಷ್ಟ ಉಂಟಾಗಿತ್ತು. ಈ ವೇಳೆ ತನ್ನ ಖರ್ಚು ನಿಭಾಯಿಸಲು ತ್ವರಿತ ಸಾಲ ನೀಡುವ ಆ್ಯಪ್‌ನಿಂದ 2,000 ರೂ. ಸಾಲ ಪಡೆದುಕೊಂಡಿದ್ದ. ಸಾಲ ಪಡೆದ ಕೆಲದಿನಗಳ ನಂತರ ಆ್ಯಪ್‌ ಏಜೆಂಟರು ಸಾಲ ಮರುಪಾವತಿ ಮಾಡುವಂತೆ ಕಿರುಕುಳ ನೀಡಲು ಶುರು ಮಾಡಿದ್ದಾರೆ. ಅಸಭ್ಯ ಭಾಷೆಗಳಿಂದ ಸಂದೇಶ ಕಳುಹಿಸಿದ್ದಾರೆ. ಇಷ್ಟಕ್ಕೆ ಬಿಡದೇ ನರೇಂದ್ರ ಪತ್ನಿಯ ಮಾರ್ಫ್‌ ಮಾಡಿದ ಅಶ್ಲೀಲ ಫೋಟೋವನ್ನ ಕುಟುಂಬಸ್ಥರು, ಸ್ನೇಹಿತರಿಗೆ ಕಳುಹಿಸಿದ್ದಾರೆ. ಕೊನೆಗೆ ಆತನ ಪತ್ನಿಗೂ ಫೋಟೋ ಕಳುಹಿಸಿದ ಬಳಿಕ ಈ ವಿಷಯ ನರೇಂದ್ರನಿಗೆ ಗೊತ್ತಾಗಿದೆ.

    ಬಳಿಕ 2 ಸಾವಿರ ರೂ. ಸಾಲ ತೀರಿಸಲು ಬೇರೊಬ್ಬರ ಬಳಿ ಸಹಾಯ ಕೇಳಿದ್ದರು. ಆದ್ರೆ ಹಣ ಸಿಗದೇ ಸಾಲ ಮರುಪಾವತಿ ಮಾಡಲಾಗಲಿಲ್ಲ. ಇದರಿಂದ ಆ್ಯಪ್‌ ಏಜೆಂಟರು ನಿರಂತರವಾಗಿ ಕಿರುಕುಳ ನೀಡಲು ಶುರು ಮಾಡಿದರು. ಕೊನೆಗೆ ಮನನೊಂದ ನರೇಂದ್ರ ಆತ್ಮಹತ್ಯೆಗೆ ಶರಣಾಗಿದ್ದಾನೆ. ಇದನ್ನೂ ಓದಿ: ಅತುಲ್ ಸುಭಾಷ್ ಆತ್ಮಹತ್ಯೆ | ಹಣಕ್ಕಾಗಿ ಕೇಸ್‌ ಮೇಲೆ ಕೇಸ್‌ – ಪತ್ನಿ ಸೇರಿದಂತೆ ನಾಲ್ವರ ವಿರುದ್ಧ ಎಫ್‌ಐಆರ್‌

    ಒಂದೇ ವಾರದಲ್ಲಿ 3 ಕೇಸ್‌:
    ಆಂಧ್ರಪ್ರದೇಶದಲ್ಲಿ ಕಳೆದ ಒಂದು ವಾರದಲ್ಲಿ ತ್ವರಿತ ಆ್ಯಪ್‌ನಿಂದ ಸಾಲ ಪಡೆದವರ 3ನೇ ಆತ್ಮಹತ್ಯೆ ಪ್ರಕರಣ ಇದಾಗಿದೆ. ಇದಲ್ಲದೇ ನೆಂದ್ಯಾಲ್‌ ಜಿಲ್ಲೆಯಲ್ಲಿ ಇಂದು (ಡಿ.11) ಸಹ ಯುವತಿಯೊಬ್ಬಳು ಆಪ್‌ ಏಜೆಂಟರ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದಳು, ಅದೃಷ್ಟವಶಾತ್‌ ಪೊಲೀಸರು ಆಕೆಯನ್ನ ರಕ್ಷಣೆ ಮಾಡಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಶರಾವತಿ ಜಲವಿದ್ಯುತ್‌ ಯೋಜನೆ – ಸಂಸತ್‌ನಲ್ಲಿ ಕನ್ನಡದಲ್ಲೇ ಪ್ರಸ್ತಾಪಿಸಿದ ಬಿ.ವೈ.ರಾಘವೇಂದ್ರ

  • ಕ್ಷಮಿಸಿ ದೀದಿ ನಾನು ಹೋಗ್ತಿದ್ದೀನಿ; ಕಾಲೇಜು ಕಟ್ಟಡದಿಂದ ಜಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ

    ಕ್ಷಮಿಸಿ ದೀದಿ ನಾನು ಹೋಗ್ತಿದ್ದೀನಿ; ಕಾಲೇಜು ಕಟ್ಟಡದಿಂದ ಜಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ

    – ಲೈಂಗಿಕ ಕಿರುಕುಳದಿಂದ ಬೇಸತ್ತಿದ್ದ ವಿದ್ಯಾರ್ಥಿನಿ

    ಹೈದರಾಬಾದ್: ತಾನು ಲೈಂಗಿಕ ಕಿರುಕುಳಕ್ಕೊಳಗಾಗಿದ್ದು, ಆ ಫೋಟೋ ಇಟ್ಟುಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಬೆದರಿಕೆ ಹಾಕುತ್ತಿದ್ದರು ಎಂದು ಪೋಷಕರಿಗೆ ಸಂದೇಶ ಕಳಿಸಿ 17 ವರ್ಷದ ವಿದ್ಯಾರ್ಥಿನಿಯೊಬ್ಬಳು (Student) ಕಾಲೇಜು ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಶಾಖಪಟ್ಟಣಂನಲ್ಲಿ (Visakhapatnam) ನಡೆದಿದೆ.

    ಮೃತ ವಿದ್ಯಾರ್ಥಿನಿ ವಿಶಾಖಪಟ್ಟಣಂನ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಓದುತ್ತಿದ್ದು, ಆಕೆಯ ಕುಟುಂಬವು ನೆರೆಯ ಆಂಧ್ರಪ್ರದೇಶದ ಅನಕಪಲ್ಲಿ ಜಿಲ್ಲೆಯಲ್ಲಿ ನೆಲೆಸಿದೆ ಎಂದು ಹೇಳಲಾಗಿದೆ.

    ಮೃತ ಬಾಲಕಿ ಕಳುಹಿಸಿದ್ದ ಸಂದೇಶದಲ್ಲಿ, ತಾನು ಕಾಲೇಜಿನಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೇನೆ. ನನಗೆ ಕಿರುಕುಳ ನೀಡಿದ್ದನ್ನು ಫೋಟೋ ತೆಗೆದುಕೊಂಡು ಅವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಇದರಿಂದ ಸಂಸ್ಥೆಯ ಅಧಿಕಾರಿಗಳು ಹಾಗೂ ಪೊಲೀಸರಿಗೆ ದೂರು ನೀಡಲು ಸಾಧ್ಯವಾಗಲಿಲ್ಲ ಎಂದು ಹೇಳಿಕೊಂಡಿದ್ದಾಳೆ. ಅಲ್ಲದೇ ಕಾಲೇಜಿನಲ್ಲಿ ಕೆಲ ಸಹ ವಿದ್ಯಾರ್ಥಿನಿಯರೂ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ ಎಂದು ಸಂದೇಶ ಕಳುಹಿಸಿದ್ದಾಳೆ. ಹಾಗಾಗಿ ತನ್ನ ಅಕ್ಕನನ್ನು ಉದ್ದೇಶಿಸಿ, ಕ್ಷಮಿಸಿ ದೀದಿ, ನಾನು ಹೋಗಬೇಕು ಎಂದು ಭಾವುಕವಾಗಿ ಬರೆದಿದ್ದಾಳೆ.

    ಶುಕ್ರವಾರ ಮಧ್ಯರಾತ್ರಿ 12:50ರ ಸುಮಾರಿಗೆ ಬಾಲಕಿ ಸಂದೇಶದಲ್ಲಿ, ಟೆನ್ಶನ್ ಆಗಬೇಡಿ, ನನ್ನ ಮಾತು ಕೇಳಿ, ನಾನು ಯಾಕೆ ಹೋಗುತ್ತಿದ್ದೇನೆ ಎಂದು ನಾನು ನಿಮಗೆ ಹೇಳಲಾರೆ. ನಾನು ಹೋದರೂ ನಿಮಗೆ ಅರ್ಥವಾಗುವುದಿಲ್ಲ. ದಯವಿಟ್ಟು ನನ್ನನ್ನು ಮರೆತುಬಿಡಿ, ನನ್ನನ್ನು ಕ್ಷಮಿಸಿ. ಅಮ್ಮ ಮತ್ತು ಅಪ್ಪ, ನೀವು ನನಗೆ ಜನ್ಮ ನೀಡಿ ನನ್ನನ್ನು ಬೆಳೆಸಿದ್ದಕ್ಕಾಗಿ ನಾನು ಕೃತಜ್ಞಳಾಗಿರಬೇಕು, ಆದರೆ ನನ್ನ ಅಧ್ಯಾಯವು ಕೊನೆಗೊಳ್ಳುತ್ತಿದೆ ಎಂದು ಆಕೆ ತೆಲುಗಿನಲ್ಲಿ ಬರೆದಿದ್ದಾಳೆ.

    ತನ್ನ ತಂದೆಯನ್ನೂ ಉದ್ದೇಶಿಸಿ ಸಂದೇಶ ಕಳುಹಿಸಿರುವ ವಿದ್ಯಾರ್ಥಿನಿ, ಲೈಂಗಿಕ ಕಿರುಕುಳಕ್ಕೊಳಗಾದ ಕಾರಣ ನಾನು ಈ ನಿರ್ಧಾರ ಕೈಗೊಳ್ಳುತ್ತಿದ್ದೇನೆ. ನನ್ನ ಫೋಟೋಗಳನ್ನು ತೆಗೆದುಕೊಂಡಿದ್ದಾರೆ. ಅದನ್ನಿಟ್ಟುಕೊಂಡು ನನಗೆ ಬೆದರಿಕೆ ಹಾಕುತ್ತಿದ್ದಾರೆ. ನಾವು ಯಾರಿಗೂ ಹೇಳಲು ಸಾಧ್ಯವಿಲ್ಲ. ಇದರಿಂದ ಕಾಲೇಜಿಗೆ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಾನು ಪೊಲೀಸ್ ದೂರು ದಾಖಲಿಸಿದರೆ ಅಥವಾ ಅಧಿಕಾರಿಗಳನ್ನು ಸಂಪರ್ಕಿಸಿದರೆ, ಅವರು ನನ್ನ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆ ಮಾಡುತ್ತಾರೆ ಎಂದು ಸಂದೇಶದಲ್ಲಿ ಹೇಳಿಕೊಂಡಿದ್ದಾಳೆ.

    ಕೂಡಲೇ ಕುಟುಂಬಸ್ಥರು ಫೋನ್ ಮೂಲಕ ಬಾಲಕಿಯನ್ನು ಸಂಪರ್ಕಿಸಿ ದುಡುಕದಂತೆ ಮನವಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಪೊಲೀಸರಿಗೂ ಮಾಹಿತಿ ರವಾನಿಸಿದೆ. ಅಷ್ಟರಲ್ಲಾಗಲೇ ಬಾಲಕಿ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ. ಅಧ್ಯಾಪಕರು ಮತ್ತು ಇತರ ವಿದ್ಯಾರ್ಥಿಗಳನ್ನು ವಿಚಾರಣೆ ನಡೆಸಲಾಗುತ್ತಿದೆ ಮತ್ತು ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಮೊದಲ ಟಿ20 ಪಂದ್ಯದಲ್ಲೇ ಭಾರತಕ್ಕೆ ಬೃಹತ್ ಗುರಿ ನೀಡಿದ ಆಸೀಸ್

    ಮೊದಲ ಟಿ20 ಪಂದ್ಯದಲ್ಲೇ ಭಾರತಕ್ಕೆ ಬೃಹತ್ ಗುರಿ ನೀಡಿದ ಆಸೀಸ್

    ವಿಶಾಖಪಟ್ಟಣ: ಡಾ. ವೈ.ಎಸ್ ರಾಜಶೇಖರ್ ರೆಡ್ಡಿ ಎಸಿಎ-ವಿಡಿಸಿಎ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಆತಿಥೇಯ ಭಾರತ (Team India) ಮತ್ತು ಪ್ರವಾಸಿ ತಂಡ ಆಸ್ಟ್ರೇಲಿಯಾ (Australia) ನಡುವಿನ ಐದು ಟಿ20 ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಅಸೀಸ್ 209 ರನ್‍ಗಳ ಭಾರೀ ಗುರಿ ನೀಡಿದೆ.

    ಟಾಸ್ ಸೋತು ಬ್ಯಾಟಿಂಗ್ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ ನಿಗದಿತ ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 208 ರನ್ ಗಳಿಸಿತು. ಈ ಮೂಲಕ ಭಾರತದ ಗೆಲುವಿಗೆ 209ರನ್‍ಗಳ ಬೃಹತ್ ಗುರಿಯನ್ನು ನೀಡಿದೆ. ಇದನ್ನೂ ಓದಿ: ಭಾರತ ವಿಶ್ವಕಪ್ ಸೋಲಲು ಇಂದಿರಾ ಗಾಂಧಿ ಕಾರಣವೆಂದ ಅಸ್ಸಾಂ ಸಿಎಂ!

    ಆಸ್ಟ್ರೇಲಿಯಾ ಪಡೆ ಕೇವಲ 31 ರನ್‍ಗೆ ಮ್ಯಾಥೀವ್ ಶಾರ್ಟ್ (13) ವಿಕೆಟ್ ಕಳೆದುಕೊಳ್ಳುವ ಮೂಲಕ ಆರಂಭಿಕ ಆಘಾತಕ್ಕೆ ಒಳಗಾಯಿತು. ಸ್ಟೀವ್ ಸ್ಮಿತ್ (53) ಮತ್ತು ಜೋಶ್ ಇಂಗ್ಲಿಸ್ (110) ಅವರ 130 ರನ್‍ಗಳ ಜೊತೆಯಾಟದೊಂದಿಗೆ ಬೃಹತ್ ಮೊತ್ತದ ಗುರಿಯ ಕಡೆಗೆ ಅದ್ಭುತ ಇನಿಂಗ್ಸ್ ಆಡಿದರು. ಕೇವಲ 50 ಎಸೆತಗಳಲ್ಲಿ ಇಂಗ್ಲಿಸ್ 110 ರನ್‍ಗಳನ್ನು ಕಲೆಹಾಕಿದರು. ಮಾರ್ಕಸ್ ಸ್ಟೋನಿಸ್? (7*) ಮತ್ತು ಟಿಮ್ ಡೇವಿಡ್ (19*) ರನ್ ಗಳಿಸಿದರು. ಇದನ್ನೂ ಓದಿ: ಪಾಪಿಗಳು ಹಾಜರಾದ ಫೈನಲ್ ಹೊರತುಪಡಿಸಿ ಎಲ್ಲಾ ಪಂದ್ಯಗಳನ್ನು ಟೀಂ ಇಂಡಿಯಾ ಗೆದ್ದಿದೆ: ಮಮತಾ ಕಿಡಿ

  • ಗುಟುಕು ಮದ್ಯ ಕೊಡಲು ನಿರಾಕರಿಸಿದ್ದಕ್ಕೆ ವೈನ್ ಶಾಪ್‌ಗೇ ಬೆಂಕಿ ಇಟ್ಟ ಭೂಪ

    ಗುಟುಕು ಮದ್ಯ ಕೊಡಲು ನಿರಾಕರಿಸಿದ್ದಕ್ಕೆ ವೈನ್ ಶಾಪ್‌ಗೇ ಬೆಂಕಿ ಇಟ್ಟ ಭೂಪ

    ಅಮರಾವತಿ: ವ್ಯಕ್ತಿಯೊಬ್ಬ ಮದ್ಯ (Alcohol) ಕೊಡಲಿಲ್ಲ ಎಂದು ವೈನ್ ಶಾಪ್‌ಗೇ (Wine Shop) ಬೆಂಕಿ (Fire) ಹಚ್ಚಿದ ಘಟನೆ ವಿಶಾಖಪಟ್ಟಣಂನ (Visakhapatnam) ಮಧುರ್ವಾಡ (Madurwada) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ನಡೆದಿದೆ. ವೈನ್ ಶಾಪ್‌ಗೆ ಬೆಂಕಿ ಇಟ್ಟ ವ್ಯಕ್ತಿಯನ್ನು ಪೊಲೀಸರು ಇದೀಗ ಬಂಧಿಸಿದ್ದಾರೆ.

    ಆರೋಪಿಯನ್ನು ಮಧು ಎಂದು ಗುರುತಿಸಲಾಗಿದೆ. ಆತ ಮಧುವಾಡ ಬಡಾವಣೆಯ ವೈನ್ ಶಾಪ್‌ಗೆ ತಡರಾತ್ರಿ ಬಂದಿದ್ದ. ವೈನ್ ಶಾಪ್ ಮುಚ್ಚುವ ಸಮಯವಾಗಿದ್ದರಿಂದ ಶಾಪ್ ಸಿಬ್ಬಂದಿ ಮದ್ಯ ನೀಡಲು ನಿರಾಕರಿಸಿದ್ದಾರೆ. ಇದರಿಂದ ಆರೋಪಿ ಹಾಗೂ ಸಿಬ್ಬಂದಿ ನಡುವೆ ವಾಗ್ವಾದ ಉಂಟಾಗಿದೆ. ಬಳಿಕ ಆತನಿಗೆ ಎಚ್ಚರಿಕೆ ನೀಡಿದ ಬಳಿಕ ಆತ ಅಲ್ಲಿಂದ ತೆರಳಿದ್ದಾನೆ.

    ಎಚ್ಚರಿಕೆ ನೀಡಿದ್ದಕ್ಕೆ ಸಿಟ್ಟಾಗಿದ್ದ ಮಧು ಭಾನುವಾರ ಸಂಜೆ ಪೆಟ್ರೋಲ್ ಟ್ಯಾಂಕ್‌ನೊಂದಿಗೆ ವೈನ್ ಶಾಪ್‌ಗೆ ವಾಪಸ್ ಬಂದಿದ್ದಾನೆ. ವೈನ್ ಶಾಪ್ ಒಳಗಡೆ ಮಾತ್ರವಲ್ಲದೆ ಸಿಬ್ಬಂದಿ ಮೇಲೂ ಪೆಟ್ರೋಲ್ ಅನ್ನು ಸುರಿದು ತಕ್ಷಣ ಬೆಂಕಿ ಹಚ್ಚಿದ್ದಾನೆ. ಈ ವೇಳೆ ಸಿಬ್ಬಂದಿ ಅಂಗಡಿಯಿಂದ ಹೊರಕ್ಕೆ ಓಡಿ ಹೋಗಿ ತಮ್ಮ ಪ್ರಾಣ ಉಳಿಸಿಕೊಂಡಿದ್ದಾರೆ. ಆದರೆ ಅಂಗಡಿ ಸುಟ್ಟು ಹೋಗಿದ್ದು, ಕಂಪ್ಯೂಟರ್, ಪ್ರಿಂಟರ್ ಸೇರಿದಂತೆ 1.5 ಲಕ್ಷಕ್ಕೂ ಹೆಚ್ಚು ಮೌಲ್ಯದ ಆಸ್ತಿ ಹಾನಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಅಗ್ನಿ ಅವಘಡ – ಐಟಿ ಕಂಪನಿ ಭಾಗಶಃ ಭಸ್ಮ

    ಇದೀಗ ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಆತನ ವಿರುದ್ಧ ಐಪಿಸಿ ಸೆಕ್ಷನ್ 307 ಮತ್ತು 436ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಇನ್ಸ್‌ಪೆ ಕ್ಟರ್ ರಾಮಕೃಷ್ಣ ತಿಳಿಸಿದ್ದಾರೆ. ಇದನ್ನೂ ಓದಿ: ಹಾಸನಾಂಬೆ ದರ್ಶನಕ್ಕೆ ಹರಿದು ಬಂದ ಭಕ್ತ ಸಾಗರ – 5.8 ಕೋಟಿ ರೂ. ಹಣ ಸಂಗ್ರಹ

  • ಅಗ್ರ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಕುಸಿದ ಸಿರಾಜ್

    ಅಗ್ರ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಕುಸಿದ ಸಿರಾಜ್

    ದುಬೈ: ಐಸಿಸಿ (ICC) ಅಂತರಾಷ್ಟ್ರೀಯ ಏಕದಿನ (ODI) ಬೌಲರ್‌ಗಳ ಶ್ರೇಯಾಂಕ ಪಟ್ಟಿಯಲ್ಲಿ ವೇಗಿ ಮೊಹಮ್ಮದ್ ಸಿರಾಜ್ (Mohammed Siraj) ಅಗ್ರ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ.

    ಭಾರತದಲ್ಲಿ ನಡೆಯುತ್ತಿರುವ ಏಕದಿನ ಸರಣಿಯಲ್ಲಿ ಆಡದ ಆಸ್ಟ್ರೇಲಿಯಾದ ವೇಗಿ ಜೋಶ್ ಹ್ಯಾಝಲ್‍ವುಡ್ ಬೌಲಿಂಗ್ ರ‍್ಯಾಂಕಿಂಗ್ ಮೊದಲ ಸ್ಥಾನವನ್ನು ಮರಳಿ ಪಡೆದಿದ್ದಾರೆ. ನ್ಯೂಜಿಲೆಂಡ್ ಎಡಗೈ ಬೌಲರ್ ಟ್ರೆಂಟ್ ಬೌಲ್ಟ್ ಎರಡನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ಮತ್ತೊಬ್ಬ ವೇಗಿ ಮಿಚೆಲ್ ಸ್ಟಾರ್ಕ್ ಸಿರಾಜ್ ಜೊತೆ ಮೂರನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: WPL 2023: ಡೆಲ್ಲಿ ಕ್ಯಾಪಿಟಲ್ಸ್‌ಗೆ 5 ವಿಕೆಟ್‌ಗಳ ಜಯ – ಫೈನಲ್‌ಗೆ ಗ್ರ್ಯಾಂಡ್‌ ಎಂಟ್ರಿ

     

    ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ವಿಶಾಖಪಟ್ಟಣದಲ್ಲಿ (Visakhapatnam) ನಡೆದ 2ನೇ ಪಂದ್ಯದಲ್ಲಿ ಮಿಚೆಲ್ ಮಾರ್ಷ್ ಹಾಗೂ ಟ್ರಾವಿಸ್ ಹೆಡ್ ಅವರು ಸ್ಫೋಟಕ ಬ್ಯಾಟಿಂಗ್ ಮಾಡಿದ್ದರು. ಈ ಪಂದ್ಯದಲ್ಲಿ 3 ಓವರ್ ಎಸೆದ ಸಿರಾಜ್ 37 ರನ್ ನೀಡಿದ ಪರಿಣಾಮ ಸಿರಾಜ್ ಮೊದಲ ಸ್ಥಾನದಿಂದ ಜಾರಿದ್ದಾರೆ.

    ಸಿರಾಜ್ ಕಳೆದ ಹತ್ತು ತಿಂಗಳಿಂದ ಏಕದಿನ ಪಂದ್ಯದಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದರು. ಇದೇ ಜನವರಿಯಲ್ಲಿ ನಡೆದಿದ್ದ ಏಕದಿನ ಪಂದ್ಯದಲ್ಲಿ ಸಿರಾಜ್ ವಿಶ್ವದ ನಂ.1 ಬೌಲರ್ ಪಟ್ಟಕ್ಕೇರಿದ್ದರು. ಇದನ್ನೂ ಓದಿ: ಬೆಂಗಳೂರು ಸೇರಿದಂತೆ 12 ಸ್ಥಳಗಳಲ್ಲಿ ವಿಶ್ವಕಪ್‌ ಟೂರ್ನಿ – ಮೋದಿ ಸ್ಟೇಡಿಯಂನಲ್ಲಿ ಫೈನಲ್‌

  • ಉದ್ಘಾಟನೆಗೆ ಮುನ್ನವೇ ವಂದೇ ಭಾರತ್ ರೈಲಿಗೆ ಕಲ್ಲೆಸೆತ – ಮೂವರ ಬಂಧನ

    ಉದ್ಘಾಟನೆಗೆ ಮುನ್ನವೇ ವಂದೇ ಭಾರತ್ ರೈಲಿಗೆ ಕಲ್ಲೆಸೆತ – ಮೂವರ ಬಂಧನ

    ಅಮರಾವತಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಭಾನುವಾರ ಚಾಲನೆ ನೀಡಲಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ (Vande Bharat Express Train) ಕಲ್ಲು ಹೊಡೆದು (Stone Pelting) ಕಿಟಕಿ ಗಾಜುಗಳನ್ನು ಒಡೆದಿರುವ ಘಟನೆ ವರದಿಯಾಗಿತ್ತು. ರೈಲಿಗೆ ಹಾನಿ ಮಾಡಿರುವ ಆರೋಪದ ಮೇಲೆ ವಿಶಾಖಪಟ್ಟಣಂನ (Visakhapatnam) ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

    ಬುಧವಾರ ರಾತ್ರಿ ಅಪರಿಚಿತ ದುಷ್ಕರ್ಮಿಗಳು ಇನ್ನೂ ಚಾಲನೆ ಸಿಗದ ಹೊಸ ಹೈಸ್ಪೀಡ್ ರೈಲಿನ ಕೋಚ್ ಒಂದರ ಮೇಲೆ ಕಲ್ಲು ತೂರಾಟ ನಡೆಸಿ ಕಿಟಕಿಗಳನ್ನು ಒಡೆದಿದ್ದಾರೆ. ಗುರುವಾರ ಪೊಲೀಸರು ಪ್ರಕರಣದ ಬಗ್ಗೆ ತೀವ್ರ ತನಿಖೆ ಕೈಗೊಂಡು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

    ವರದಿಗಳ ಪ್ರಕಾರ ಕಂಚಾರ್ಲಪಾಲೆಂನ ಕೋಚ್ ಕಾಂಪ್ಲೆಕ್ಸ್ ಬಳಿ ಕಲ್ಲು ತೂರಾಟ ಪ್ರಕರಣ ನಡೆದಿದೆ. ರೈಲಿನ ಒಂದು ಕಿಟಕಿಯ ಗಾಜನ್ನು ಸಂಪೂರ್ಣ ಒಡೆದಿದ್ದು, ಮತ್ತೊಂದರಲ್ಲಿ ಬಿರುಕು ಕಾಣಿಸಿಕೊಂಡಿದೆ. ಇದನ್ನೂ ಓದಿ: ರನ್‌ವೇ ಸಿದ್ದವಾಗಿದೆ, ಕೌಶಲ್ಯಗಳನ್ನು ಕಲಿತು ಟೇಕಾಫ್‌ ಆಗಿ – ಯುವ ಜನತೆಗೆ ಮೋದಿ ಕರೆ

    ಆರೋಪಿಗಳ ವಿರುದ್ಧ ರೈಲ್ವೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ರೈಲ್ವೇ ರಕ್ಷಣಾ ಪಡೆ (ಆರ್‌ಪಿಎಫ್) ಪ್ರಕರಣವನ್ನು ನಿರ್ವಹಿಸಿದೆ ಎಂದು ಪೊಲೀಸ್ ಆಯುಕ್ತ ಶ್ರೀಕಾಂತ್ ತಿಳಿಸಿದ್ದಾರೆ.

    ನಿರ್ವಹಣೆ ತಪಾಸಣೆ ಮತ್ತು ಪ್ರಾಯೋಗಿಕ ಓಡಾಟಕ್ಕಾಗಿ ವಂದೇ ಭಾರತ್ ರೈಲನ್ನು ಬುಧವಾರ ಚೆನ್ನೈನಿಂದ ವಿಶಾಖಪಟ್ಟಣಂಗೆ ತರಿಸಲಾಗಿತ್ತು. ಈ ದುಷ್ಕೃತ್ಯದ ಹಿನ್ನೆಲೆ ಪೊಲೀಸರು ಭದ್ರತೆಯನ್ನು ಹೆಚ್ಚಿಸಿದ್ದಾರೆ.

    ವಂದೇ ಭಾರತ್ ಎಕ್ಸ್‌ಪ್ರೆಸ್‌ನ 8ನೇ ರೈಲಿಗೆ ಜನವರಿ 19 ರಂದು ಹೈದರಾಬಾದ್‌ನಲ್ಲಿ ಪ್ರಧಾನ ಮಂತ್ರಿ ಅವರು ಚಾಲನೆ ನೀಡಲು ನಿರ್ಧರಿಸಿದ್ದರು. ಆದರೆ ಈ ಭೇಟಿಯನ್ನು ಮುಂದೂಡಲಾಗಿದ್ದು, ಜನವರಿ 15 ಮಕರ ಸಂಕ್ರಾಂತಿಯಂದು ವರ್ಚುವಲ್ ಆಗಿ ಚಾಲನೆ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಮೋದಿ ರೋಡ್ ಶೋ ವೇಳೆ ಭದ್ರತಾ ಲೋಪ – ಬ್ಯಾರಿಕೇಡ್ ಹಾರಿ ಕಾರಿನತ್ತ ನುಗ್ಗಿದ ಯುವಕ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮತ್ತೆ ವಂದೇ ಭಾರತ್‌ ರೈಲಿಗೆ ಕಲ್ಲು ತೂರಾಟ

    ಮತ್ತೆ ವಂದೇ ಭಾರತ್‌ ರೈಲಿಗೆ ಕಲ್ಲು ತೂರಾಟ

    ಹೈದರಾಬಾದ್‌: ಮತ್ತೆ ವಂದೇ ಭಾರತ್‌ ರೈಲಿನ (Vande Bharat) ಮೇಲೆ ಕಿಡಿಗೇಡಿಗಳು ಕಲ್ಲುತೂರಾಟ ನಡೆಸಿದ್ದಾರೆ.

    ವಿಶಾಖಪಟ್ಟಣಂನಲ್ಲಿ (Visakhapatnam) ಜನವರಿ 19 ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಚಾಲನೆ ನೀಡಬೇಕಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ಕೋಚ್‌ನ ಎರಡು ಕಿಟಕಿಯ ಗಾಜುಗಳ ಮೇಲೆ ಕಲ್ಲು ತೂರಾಟ ನಡೆದಿದೆ. ಕಂಚರಪಾಲೆಂ ಬಳಿ ರೈಲು ನಿರ್ವಹಣೆಗಾಗಿ ನಿಂತಿದ್ದಾಗ ಈ ಘಟನೆ ನಡೆದಿದೆ.

    ಬುಧವಾರ ಸಂಜೆ 6:30 ಕ್ಕೆ ವಿಶಾಖಪಟ್ಟಣಂನಲ್ಲಿ ವಂದೇ ಭಾರತ್ ರೈಲಿಗೆ ಯಾರೋ ಕಲ್ಲು ತೂರಾಟ ನಡೆಸಿದರು. ಎರಡು ಕಿಟಕಿ ಗಾಜುಗಳು ಸಂಪೂರ್ಣವಾಗಿ ಒಡೆದುಹೋಗಿದ್ದು ಇದನ್ನು ಬದಲಾಯಿಸಬೇಕಾಗಿದೆ. ಇದು ಅತ್ಯಂತ ದುರದೃಷ್ಟಕರ ಎಂದು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅನುಪ್ ಕುಮಾರ್ ಹೇಳಿದ್ದಾರೆ. ಇದನ್ನೂ ಓದಿ: ಜ.15 ರಿಂದ ಗಾರ್ಡನ್ ಟರ್ಮಿನಲ್ -2 ಸಾರ್ವಜನಿಕರ ಸೇವೆಗೆ ಲಭ್ಯ

    ಈ ರೈಲು ಸಿಕಂದರಾಬಾದ್ ಮತ್ತು ವಿಶಾಖಪಟ್ಟಣಂ ನಡುವೆ ಚಲಿಸಲಿದೆ. ವಾರಂಗಲ್, ಖಮ್ಮಂ, ವಿಜಯವಾಡ ಮತ್ತು ರಾಜಮಂಡ್ರಿಯಲ್ಲಿ ನಿಲುಗಡೆಯಿದೆ.

    ಈ ಹಿಂದೆ ಪಶ್ಚಿಮ ಬಂಗಾಳದಲ್ಲಿ ವಂದೇ ಭಾರತ್‌ ರೈಲು ಸೇವೆ ಆರಂಭಿಸಿದ ನಾಲ್ಕೇ ದಿನಕ್ಕೆ ಕಲ್ಲು ತೂರಾಟ ನಡೆದಿತ್ತು. ಜನವರಿ 3 ಮತ್ತು 4 ರಂದು ಹೌರಾ- ಜಲಪೈಗುರಿ ನಡುವೆ ಆರಂಭಗೊಂಡಿದ್ದ ರೈಲಿಗೆ ಕಲ್ಲು ಎಸೆಯಲಾಗಿತ್ತು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k