Tag: visa

  • ಭಾರತ ನನ್ನ ಕುಟುಂಬದಂತೆ: ಓದಿನ ನೆರವಿಗಾಗಿ ಅಫ್ಘನ್ ಯುವತಿಯಿಂದ ಮೋದಿಗೆ ಮನವಿ

    ಭಾರತ ನನ್ನ ಕುಟುಂಬದಂತೆ: ಓದಿನ ನೆರವಿಗಾಗಿ ಅಫ್ಘನ್ ಯುವತಿಯಿಂದ ಮೋದಿಗೆ ಮನವಿ

    ಕಾಬೂಲ್: ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡ ಬಳಿಕ ಅಲ್ಲಿನ ವಿದ್ಯಾರ್ಥಿಗಳ ಪಾಡು ಹೇಳತೀರದಂತಾಗಿದೆ. ಅಧ್ಯಯನಕ್ಕೆ ವಿದೇಶಕ್ಕೆ ತೆರಳಲು ವೀಸಾ ಸಿಗದೇ ಸಿಲುಕಿಕೊಂಡಿದ್ದಾರೆ. ಓದಿನ ಹಂಬಲದಲ್ಲಿ ಅಫ್ಘನ್‌ನ ಯುವತಿಯೊಬ್ಬಳು ಮೋದಿ ಬಳಿ ಮನವಿ ಮಾಡಿಕೊಂಡಿದ್ದಾಳೆ.

    ಅಫ್ಘಾನಿಸ್ತಾನದ ಕಾಲೇಜು ವಿದ್ಯಾರ್ಥಿನಿ ಫಾತಿಮಾ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾರತದಲ್ಲಿ ಅಧ್ಯಯನ ಮಾಡಲು ವೀಸಾ ಪಡೆಯಲು ತೊಂದರೆಯಾಗುತ್ತಿರುವ ಬಗ್ಗೆ ಹೇಳಿಕೊಂಡಿದ್ದಾಳೆ. ನಾನು ಅಫ್ಘಾನಿಸ್ತಾನದ ಕಾಲೇಜು ಹುಡುಗಿ ಫಾತಿಮಾ, ಭಾರತದಲ್ಲಿ ಅಧ್ಯಯನವನ್ನು ಮುಂದುವರಿಸಲು ನನಗೆ ಸಹಾಯ ಮಾಡುವಂತೆ ಭಾರತದ ಪ್ರಧಾನಿಗೆ ಮನವಿ ಮಾಡುತ್ತೇನೆ. ನಾವು ಭಾರತವನ್ನು ಪ್ರೀತಿಸುತ್ತೇವೆ ಅದು ನಮ್ಮ ಕುಟುಂಬದಂತೆಯೇ ಎಂದು ಫಾತಿಮಾ ವೀಡಿಯೊದಲ್ಲಿ ಹೇಳಿದ್ದಾಳೆ. ಇದನ್ನೂ ಓದಿ: ಸಿದ್ದರಾಮೋತ್ಸವ ಬಳಿಕ ಮತ್ತೊಮ್ಮೆ ಶಕ್ತಿ ಪ್ರದರ್ಶನಕ್ಕೆ ಪ್ಲಾನ್- ಆಗಸ್ಟ್ 26ರಂದು ನಡೆಯುತ್ತಾ ಹೈಡ್ರಾಮಾ..?

    ಭಾರತದಲ್ಲಿ ಓದುತ್ತಿರುವ ಸುಮಾರು 5,000 ಅಫ್ಘಾನಿಸ್ತಾನದ ವಿದ್ಯಾರ್ಥಿಗಳು ಕಳೆದ ವರ್ಷದಿಂದ ಅಫ್ಘಾನಿಸ್ತಾನದಲ್ಲಿ ಸಿಲುಕಿಕೊಂಡಿದ್ದಾರೆ. ತಮಗೆ ವೀಸಾ ದೊರೆಯುತ್ತಿರದ ಕಾರಣ ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ ಎಂದು ಅಳಲನ್ನು ತೋಡಿಕೊಂಡಿದ್ದಾಳೆ. ಇದನ್ನೂ ಓದಿ: ಸಿಬಿಐ ದಾಳಿ ಬೆನ್ನಲ್ಲೇ 12 ಐಎಎಸ್ ಅಧಿಕಾರಿಗಳ ವರ್ಗಾವಣೆ

    ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡ ಬಳಿಕ ಭಾರತದ ಶಿಕ್ಷಣ ಸಂಸ್ಥೆಗಳಲ್ಲಿ ದಾಖಲಾದ ಆಫ್ಘನ್ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಮುಗಿಸಲು ವೀಸಾಗಳಿಗಾಗಿ ಕಾಯುತ್ತಿದ್ದಾರೆ. ಮೇ 2022 ರಲ್ಲಿ, ವಿದ್ಯಾರ್ಥಿಗಳು ಕಾಬೂಲ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಹೊರಗೆ ಜಮಾಯಿಸಿ, ಭಾರತ ಸರ್ಕಾರ ಸಾಧ್ಯವಾದಷ್ಟು ಬೇಗ ಇ-ವೀಸಾಗಳನ್ನು ನೀಡಬೇಕೆಂದು ಮನವಿ ಮಾಡುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹೂಡಿಕೆ ಉತ್ತೇಜನಕ್ಕೆ ಭಾರತೀಯ ಹೂಡಿಕೆದಾರರಿಗೆ ವೀಸಾ ನೀಡಿದ ಶ್ರೀಲಂಕಾ

    ಹೂಡಿಕೆ ಉತ್ತೇಜನಕ್ಕೆ ಭಾರತೀಯ ಹೂಡಿಕೆದಾರರಿಗೆ ವೀಸಾ ನೀಡಿದ ಶ್ರೀಲಂಕಾ

    ಕೊಲೊಂಬೊ: ದೇಶದಲ್ಲಿ ಹೂಡಿಕೆಯನ್ನು ಉತ್ತೇಜಿಸಲು ದ್ವೀಪ ರಾಷ್ಟ್ರವು ಭಾರತೀಯ ಉದ್ಯಮಿಗಳಿಗೆ ಶ್ರೀಲಂಕಾ ಸಚಿವ ಧಮ್ಮಿಕಾ ಪೆರೆರಾ ಅವರು 5 ವರ್ಷಗಳ ವೀಸಾಗಳನ್ನು ಹಸ್ತಾಂತರಿಸಿದರು.

    ಶ್ರೀಲಂಕಾದಲ್ಲಿರುವ ಭಾರತೀಯ ಹೈಕಮಿಷನ್ ಈ ಬಗ್ಗೆ ಟ್ವೀಟ್ ಮಾಡಿದ್ದು, ಶ್ರೀಲಂಕಾದಲ್ಲಿ ಭಾರತೀಯ ಉದ್ಯಮಿಗಳಿಗೆ 5 ವರ್ಷಗಳ ವೀಸಾಗಳನ್ನು ಹಸ್ತಾಂತರಿಸುತ್ತಿದ್ದಾರೆ. ಇದು ವ್ಯಾಪಾರ ಮಾಡಲು ಸುಲಭತೆಯನ್ನು ಹೆಚ್ಚಿಸುತ್ತದೆ. ಜೊತೆಗೆ ಹೂಡಿಕೆಯನ್ನು ಉತ್ತೇಜಿಸುವಲ್ಲಿ ಸ್ವಾಗತಾರ್ಹ ಹೆಜ್ಜೆಯಾಗಿದೆ ಎಂದು ತಿಳಿಸಿದರು.

    ಈ ಹಿಂದೆ ಕೊಲೊಂಬೊದಲ್ಲಿರುವ ಭಾರತೀಯ ಹೈಕಮಿಷನರ್ ಗೋಪಾಲ್ ಬಾಗ್ಲೆ ಶ್ರೀಲಂಕಾದ ವ್ಯಾಪಾರ ಸಚಿವರನ್ನು ಭೇಟಿಯಾಗಿ ವ್ಯಾಪಾರದ ವಿವಿಧ ಅಂಶಗಳ ಕುರಿತು ಚರ್ಚಿಸಿದ್ದರು. ಇದನ್ನೂ ಓದಿ: ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್‌ಗೆ ಕೊಲೆ ಬೆದರಿಕೆ ಪತ್ರ – ಲಿಸ್ಟ್‌ನಲ್ಲಿ ಸಿದ್ದು, ಹೆಚ್‌ಡಿಕೆ ಹೆಸರು

    ವ್ಯಾಪಾರ ಸಚಿವ ನಳಿನ್ ಫೆರ್ನಾಂಡೋ ಅವರನ್ನು ಹೈಕಮಿಷನರ್ ಭೇಟಿ ಮಾಡಿದರು. ಅವರು ವ್ಯಾಪಾರದ ಪ್ರಮಾಣವನ್ನು ಹೆಚ್ಚಿಸುವುದು, ಭಾರತ ಮತ್ತು ಶ್ರೀಲಂಕಾ ನಡುವಿನ ವ್ಯಾಪಾರ ಸಂಪರ್ಕವನ್ನು ಸುಲಭಗೊಳಿಸಲು ವೇದಿಕೆಗಳನ್ನು ರಚಿಸುವಂತಹ ದ್ವಿರಾಷ್ಟ್ರೀಯ ವ್ಯಾಪಾರದ ವಿವಿಧ ಅಂಶಗಳ ಕುರಿತು ಚರ್ಚಿಸಿರುವ ಬಗ್ಗೆ ಭಾರತೀಯ ರಾಯಭಾರ ಕಚೇರಿ ಟ್ವೀಟ್ ಮಾಡಿದೆ. ಇದನ್ನೂ ಓದಿ: ಪಾಕ್ ಪೊಲೀಸರಿಂದ 9 ಟೆರರಿಸ್ಟ್ ಬಂಧನ

    ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಮಾರ್ಚ್‍ನಲ್ಲಿ ಕೊಲಂಬೊದಲ್ಲಿರುವ ಸುವಾಸೇರಿಯಾ ಪ್ರಧಾನ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಫೌಂಡೇಶನ್ ಎದುರಿಸುತ್ತಿರುವ ವೈದ್ಯಕೀಯ ಸರಬರಾಜುಗಳ ಕೊರತೆಯ ಬಗ್ಗೆ ತಿಳಿಸಲಾಗಿದೆ ಎಂದು ಬಾಗ್ಲೇ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಇಂದು ಕೆಲ ವೈದ್ಯಕೀಯ ನೆರವನ್ನು ಶ್ರೀಲಂಕಾಕ್ಕೆ ಹಸ್ತಾಂತರಿಸಲಾಯಿತು.

    Live Tv

  • ವೀಸಾ ಇಲ್ಲದೇ ಇಂಡೋ-ನೇಪಾಳ ಗಡಿಗೆ ಬಂದಿದ್ದ ಇಬ್ಬರು ಚೀನಿ ಪ್ರಜೆಗಳು ಅರೆಸ್ಟ್

    ವೀಸಾ ಇಲ್ಲದೇ ಇಂಡೋ-ನೇಪಾಳ ಗಡಿಗೆ ಬಂದಿದ್ದ ಇಬ್ಬರು ಚೀನಿ ಪ್ರಜೆಗಳು ಅರೆಸ್ಟ್

    ಪಾಟ್ನಾ: ವೀಸಾ ಇಲ್ಲದೆ ಭಾರತೀಯ ಭೂಪ್ರದೇಶಕ್ಕೆ ನುಸುಳಿದ್ದ ಇಬ್ಬರು ಚೀನಿ ಪ್ರಜೆಗಳನ್ನು ಬಿಹಾರದ ಪೊಲೀಸರು ಬಂಧಿಸಿದ್ದಾರೆ.

    ದೆಹಲಿ-ಎನ್‍ಸಿಆರ್ ಪ್ರದೇಶದಲ್ಲಿ ಸುಮಾರು ಹದಿನೈದು ದಿನಗಳ ಕಾಲ ವಾಸಿಸುತ್ತಿದ್ದ ಇಬ್ಬರು ಚೀನಾದ ಪ್ರಜೆಗಳನ್ನು ಇಂಡೋ-ನೇಪಾಳ ಗಡಿ ದಾಟಲು ಪ್ರಯತ್ನಿಸುತ್ತಿದ್ದರು. ಈ ವೇಳೆ ಅವರನ್ನು ಬಿಹಾರದಲ್ಲಿ ಪೊಲೀಸರು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ. ಇದನ್ನೂ ಓದಿ: ಚರಂಡಿ ವಿಷಯಕ್ಕೆ ಜಗಳ – ಯುವಕನ ಕೊಲೆ, 6 ಜನರ ಸ್ಥಿತಿ ಗಂಭೀರ

    ನಡೆದ್ದಿದ್ದೇನು?
    ಸೀತಾಮರ್ಹಿಯ ಪೊಲೀಸ್ ವರಿಷ್ಠಾಧಿಕಾರಿ ಹರ್ಕಿಶೋರ್ ರೈ ಈ ಕುರಿತು ಮಾಹಿತಿ ತಿಳಿಸಿದ್ದು, ಲು ಲ್ಯಾಂಗ್(28) ಮತ್ತು ಯುವಾನ್ ಹೈಲಾಂಗ್(34) ಎಂದು ಗುರುತಿಸಲಾಗಿದ್ದ ವ್ಯಕ್ತಿಗಳನ್ನು ಸಶಸ್ತ್ರ ಸೀಮಾ ಬಾಲ್(SSB) ಬಂಧಿಸಿದೆ. ನಂತರ ಅವರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಗಳು ಯಾವುದೇ ರೀತಿಯ ವೀಸಾ ಹೊಂದಿಲ್ಲದಿದ್ದರೂ, ಚೀನಾದ ಪಾಸ್‍ಪೋರ್ಟ್ ಹೊಂದಿದ್ದರು ಎಂದು ತಿಳಿಸಿದ್ದಾರೆ.

    ಲು ಲ್ಯಾಂಗ್ ಮತ್ತು ಯುವಾನ್ ಹೈಲಾಂಗ್ ಟ್ಯಾಕ್ಸಿಯಿಂದ ಇಳಿದು ನಡೆದುಕೊಂಡು ಭಾರತ-ನೇಪಾಳ ಗಡಿ ದಾಟಲು ಯತ್ನಿಸಿದ್ದ ವೇಳೆ SSB ಕೈಗೆ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಆರೋಪಿಗಳು ನೇಪಾಳದಾದ್ಯಂತ ಲೀಫ್ಟ್ ಕೇಳುವ ಮೂಲಕ ಭಾರತೀಯ ಭೂಪ್ರದೇಶವನ್ನು ಪ್ರವೇಶಿಸಿದರು. ನೋಯ್ಡಾಗೆ ಹೋಗಿ ಅಲ್ಲಿ ಅವರಿಗೆ ಪರಿಚಯವಿದ್ದ ಮನೆಯಲ್ಲಿ ಇದ್ದರು ಎಂದು ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾರೆ.

    ಆರೋಪಿಗಳ ಫೋನ್ ದಾಖಲೆಗಳು ಮತ್ತು ಇತರ ವಸ್ತುಗಳ ಪರಿಶೀಲನೆ ಮಾಡಿದಾಗ ಇವರು ಹಣಕಾಸು ವಂಚನೆ ದಂಧೆಯಲ್ಲಿ ಭಾಗಿಯಾಗಿರುವುದು ತಿಳಿದುಬಂದಿದೆ. ಪ್ರಸ್ತುತ ಇಬ್ಬರ ವಿರುದ್ಧ ವಿದೇಶಿಯರ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಅಂಗಿ ಹರಿದ ಪೊಲೀಸರು: ಪ್ರತಿಭಟನೆ ವೇಳೆ ವೇಣುಗೋಪಾಲ್ ಅಸ್ವಸ್ಥ 

  • ಧಾರ್ಮಿಕ ಆಚರಣೆ – ಸಿಖ್‌ ಯಾತ್ರಾರ್ಥಿಗಳಿಗೆ 163 ವೀಸಾ ನೀಡಿದ ಪಾಕಿಸ್ತಾನ

    ಧಾರ್ಮಿಕ ಆಚರಣೆ – ಸಿಖ್‌ ಯಾತ್ರಾರ್ಥಿಗಳಿಗೆ 163 ವೀಸಾ ನೀಡಿದ ಪಾಕಿಸ್ತಾನ

    ಇಸ್ಲಾಮಾಬಾದ್‌: ಇದೇ ಜೂನ್‌ 8ರಿಂದ 17ರವರೆಗೆ ನಡೆಯಲಿರುವ ವಾರ್ಷಿಕ ಉತ್ಸವದ ಹಿನ್ನೆಲೆಯಲ್ಲಿ ಸಿಖ್‌ ಯಾತ್ರಾರ್ಥಿಗಳಿಗೆ ಪಾಕಿಸ್ತಾನ 163 ವೀಸಾಗಳನ್ನು ನೀಡಿದೆ.

    ಗುರು ಅರ್ಜನ್ ದೇವ್ ಅವರ ಹುತಾತ್ಮ ದಿನದ ಮುನ್ನಾದಿನದಂದು ಪಾಕಿಸ್ತಾನದ ಹೈಕಮಿಷನ್ ಈ ಕ್ರಮ ಕೈಗೊಂಡಿದೆ. ಇದನ್ನೂ ಓದಿ: ಸತ್ಯೇಂದ್ರ ಜೈನ್ ಸಹಚರರ ಮನೆ ಮೇಲೆ ಇಡಿ ದಾಳಿ – ನೋಟಿನ ಕಂತೆಗಳನ್ನೇ ಬಳಸಿ `ED’ ವಿನ್ಯಾಸ

    ಈ ಕುರಿತು ಮಾತನಾಡಿದ ಅಫ್ತಾಬ್ ಹಸನ್ ಖಾನ್, ಯಾತ್ರಾರ್ಥಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು. ಯಾತ್ರೆ ಮೂಲಕ ತಮ್ಮ ಮನದಾಸೆ ಪೂರೈಸಿಕೊಳ್ಳಲಿ ಎಂದು ಹಾರೈಸಿದ್ದಾರೆ.

    1974 ರ ಧಾರ್ಮಿಕ ದೇಗುಲಗಳಿಗೆ ಭೇಟಿ ನೀಡುವ ಪಾಕಿಸ್ತಾನ-ಭಾರತ ಮಾರ್ಗಸೂಚಿಯಡಿ ವೀಸಾ ವಿತರಿಸಲಾಗುವುದು. ಪ್ರತಿ ವರ್ಷ ಭಾರತದಿಂದ ಹೆಚ್ಚಿನ ಸಂಖ್ಯೆಯ ಸಿಖ್‌ ಯಾತ್ರಿಗಳು ಧಾರ್ಮಿಕ ಹಬ್ಬಗಳ ಆಚರಣೆ ಹಾಗೂ ಸ್ಥಳ ವೀಕ್ಷಿಸಲು ಪಾಕಿಸ್ತಾನಕ್ಕೆ ಭೇಟಿ ನೀಡುತ್ತಾರೆ. ಇದನ್ನೂ ಓದಿ: ಮೇಕೆದಾಟು ಅಣೆಕಟ್ಟು ನಿರ್ಮಾಣ ವಿಚಾರ – ತಮಿಳುನಾಡಿನಿಂದ ಮತ್ತೆ ತಕರಾರು

    ಯಾತ್ರಾರ್ಥಿಗಳು ಪಂಜಾ ಸಾಹಿಬ್, ನಂಕಾನಾ ಸಾಹಿಬ್ ಮತ್ತು ಕರ್ತಾರ್ಪುರ್ ಸಾಹಿಬ್‌ಗೆ ಹೋಗುತ್ತಾರೆ. ಅವರು ಜೂನ್ 8 ರಂದು ಪಾಕಿಸ್ತಾನ ತಲುಪಿ ನಂತರ ಜೂನ್ 17 ರಂದು ಭಾರತಕ್ಕೆ ಹಿಂತಿರುಗುತ್ತಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

  • ಚೀನಿಗಳಿಗೆ ವೀಸಾ ಬಂದ್ ಮಾಡಿದ ಬೆನ್ನಲ್ಲೇ ಭಾರತೀಯ ವಿದ್ಯಾರ್ಥಿಗಳಿಗೆ ಬನ್ನಿ ಎಂದ ಚೀನಾ

    ಚೀನಿಗಳಿಗೆ ವೀಸಾ ಬಂದ್ ಮಾಡಿದ ಬೆನ್ನಲ್ಲೇ ಭಾರತೀಯ ವಿದ್ಯಾರ್ಥಿಗಳಿಗೆ ಬನ್ನಿ ಎಂದ ಚೀನಾ

    ಬೀಜಿಂಗ್: ಚೀನಾದ ಪ್ರಜೆಗಳಿಗೆ ನೀಡಲಾಗಿದ್ದ ಪ್ರವಾಸಿ ವೀಸಾವನ್ನು ಅಮಾನತುಗೊಳಿಸಿ ಬಿಸಿ ಮುಟ್ಟಿಸಿದ ಬಳಿಕ ಈಗ ಭಾರತೀಯ ವಿದ್ಯಾರ್ಥಿಗಳಿಗೆ ದೇಶಕ್ಕೆ ಮರಳಲು ಚೀನಾ ಅನುಮತಿ ನೀಡಿದೆ.

    ಕೋವಿಡ್ ಕಾರಣದಿಂದಾಗಿ ಬೀಜಿಂಗ್ ವೀಸಾ ಹಾಗೂ ವಿಮಾನ ನಿರ್ಬಂಧಗಳನ್ನು ವಿಧಿಸಿತ್ತು. ಇದೀಗ 2 ವರ್ಷಗಳ ಬಳಿಕ ಚೀನಾದಲ್ಲಿ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿ ಭಾರತಕ್ಕೆ ತೆರಳಿದ್ದ ವಿದ್ಯಾರ್ಥಿಗಳಿಗೆ ಚೀನಾ ಮರಳುವಂತೆ ಅನುಮತಿ ನೀಡಿದೆ. ಇದನ್ನೂ ಓದಿ: ಚೀನಾ ಪ್ರಜೆಗಳ ಪ್ರವಾಸಿ ವೀಸಾ ಅಮಾನತುಗೊಳಿಸಿದ ಭಾರತ

    ಶುಕ್ರವಾರ ಚೀನಾ ವಿದ್ಯಾರ್ಥಿಗಳಿಗೆ ಮರಳಲು ಅನುಮತಿ ನೀಡುವ ಯೋಜನೆಯನ್ನು ಪ್ರಕಟಿಸಿದೆ. ಚೀನಾದ ವಿದೇಶಾಂಗ ಸಚಿವಾಲಯ ವಕ್ತಾರ ಝಾವೋ ಲಿಜಿಯಾನ್, ಚೀನಾದಲ್ಲಿ ಅಧ್ಯಯನಕ್ಕಾಗಿ ಭಾರತದಿಂದ ಮರಳುವ ವಿದ್ಯಾರ್ಥಿಗಳಿಗೆ ಚೀನಾ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತದೆ. ನಾವು ಇತರ ದೇಶಗಳ ವಿದ್ಯಾರ್ಥಿಗಳೊಂದಿಗೆ ಭಾರತಕ್ಕೂ ಚೀನಾಗೆ ಹಿಂದಿರುಗುವ ಕಾರ್ಯವಿಧಾನವನ್ನು ತಿಳಿಸಿದ್ದೇವೆ ಎಂದರು.

    ಭಾರತೀಯ ವಿದ್ಯಾರ್ಥಿಗಳನ್ನು ಚೀನಾಗೆ ಕರೆಸಿಕೊಳ್ಳುವ ಕೆಲಸ ಈಗಾಗಲೇ ಪ್ರಾರಂಭಿಸಲಾಗಿದೆ. ಇದೀಗ ಭಾರತ ಚೀನಾಗೆ ಹಿಂದಿರುಗಬೇಕಾಗಿರುವ ವಿದ್ಯಾರ್ಥಿಗಳ ಪಟ್ಟಿಯನ್ನು ನೀಡುವುದು ಮಾತ್ರವೇ ಬಾಕಿ ಉಳಿದಿದೆ ಎಂದರು.

    ಈ ಹಿಂದಿನ ವರದಿಗಳ ಪ್ರಕಾರ 2019ರಲ್ಲಿ ಕೊರೋನಾ ವೈರಸ್ ಪ್ರಾರಂಭವಾದಾಗ 23,000ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಸ್ವದೇಶಕ್ಕೆ ಬಂದಿದ್ದರು. ಅವರಲ್ಲಿ ಹೆಚ್ಚಿನವರು ವೈದ್ಯಕೀಯ ವಿದ್ಯಾರ್ಥಿಗಳೇ ಇದ್ದರು. ವೈರಸ್ ಹರಡುವಿಕೆ ತಡೆಯಲು ಚೀನಾ ವಿಧಿಸಿದ ನಿರ್ಬಂಧಗಳಿಂದಾಗಿ ಭಾರತೀಯ ವಿದ್ಯಾರ್ಥಿಗಳು ಚೀನಾ ಮರಳಲು ಸಾಧ್ಯವಾಗಿರಲಿಲ್ಲ. ಇದನ್ನೂ ಓದಿ: ಮಹಿಳೆಯರು, ಮಕ್ಕಳು ಭವಿಷ್ಯದ ಆತಂಕದಲ್ಲಿ ಬದುಕುತ್ತಿದ್ದಾರೆ: ವತ್ಸಲಾ ವರತ್ತನ

    ಬಿಸಿ ಮುಟ್ಟಿಸಿದ್ದ ಭಾರತ:
    ಚೀನಾದ ವಿಶ್ವವಿದ್ಯಾನಿಲಯಗಳಲ್ಲಿ ದಾಖಲಾದ ಸುಮಾರು 22,000 ಭಾರತೀಯ ವಿದ್ಯಾರ್ಥಿಗಳು ಭೌತಿಕ ತರಗತಿಗಳಿಗೆ ಹಾಜರಾಗಲು ಅನುಮತಿ ನೀಡುವಂತೆ ಚೀನಾಗೆ ಭಾರತ ಸರ್ಕಾರ ಮನವಿ ಮಾಡಿತ್ತು. ಸಾಕಷ್ಟು ಬಾರಿ ಮನವಿ ಮಾಡಿದರೂ ಚೀನಾ ಅನುಮತಿ ನೀಡಿರಲಿಲ್ಲ. ಈ ಕಾರಣಕ್ಕೆ ಚೀನಾದ ಪ್ರಜೆಗಳಿಗೆ ನೀಡಲಾಗಿದ್ದ ಪ್ರವಾಸಿ ವೀಸಾವನ್ನು ಭಾರತ ಈ ವಾರದ ಆರಂಭದಲ್ಲಿ ಅಮಾನತುಗೊಳಿಸಿ ಬಿಸಿ ಮುಟ್ಟಿಸಿತ್ತು.

  • ಚೀನಾ ಪ್ರಜೆಗಳ ಪ್ರವಾಸಿ ವೀಸಾ ಅಮಾನತುಗೊಳಿಸಿದ ಭಾರತ

    ಚೀನಾ ಪ್ರಜೆಗಳ ಪ್ರವಾಸಿ ವೀಸಾ ಅಮಾನತುಗೊಳಿಸಿದ ಭಾರತ

    ನವದೆಹಲಿ: ಚೀನಾದ ಪ್ರಜೆಗಳಿಗೆ ನೀಡಲಾಗಿದ್ದ ಪ್ರವಾಸಿ ವೀಸಾವನ್ನು ಭಾರತ ಅಮಾನತುಗೊಳಿಸಿದೆ ಎಂದು ಜಾಗತಿಕ ವಿಮಾನಯಾನ ಸಂಸ್ಥೆಯ ಇಂಟರ್‌ನ್ಯಾಶನಲ್ ಏರ್ ಟ್ರಾನ್ಸ್‌ಪೋರ್ಟ್ ಅಸೋಸಿಯೇಷನ್ (IATA) ತಿಳಿಸಿದೆ.

    ಚೀನಾದ ವಿಶ್ವವಿದ್ಯಾನಿಲಯಗಳಲ್ಲಿ ದಾಖಲಾದ ಸುಮಾರು 22,000 ಭಾರತೀಯ ವಿದ್ಯಾರ್ಥಿಗಳು ಭೌತಿಕ ತರಗತಿಗಳಿಗೆ ಹಿಂತಿರುಗಲು ಸಾಧ್ಯವಾಗದ ಬಗ್ಗೆ ಭಾರತದ ಮನವಿಗಳಿಗೆ ಬೀಜಿಂಗ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ನೆರೆಯ ದೇಶವು ಇಲ್ಲಿಯವರೆಗೆ ಅವರನ್ನು ಪ್ರವೇಶಿಸಲು ನಿರಾಕರಿಸಿದೆ. 2020 ರ ಆರಂಭದಲ್ಲಿ ಕೊರೊನಾ ಸಾಂಕ್ರಾಮಿಕ ರೋಗವು ಪ್ರಾರಂಭವಾದಾಗ ಈ ವಿದ್ಯಾರ್ಥಿಗಳು ಚೀನಾದಲ್ಲಿ ತಮ್ಮ ಅಧ್ಯಯನ ತೊರೆದು ಭಾರತಕ್ಕೆ ಬಂದಿದ್ದರು. ಇದನ್ನೂ ಓದಿ: ವಿಶೇಷ ಸ್ಥಾನಮಾನ ರದ್ದತಿ ನಂತರ ಜಮ್ಮು-ಕಾಶ್ಮೀರಕ್ಕೆ ಮೋದಿ ಮೊದಲ ಭೇಟಿ

    ಭಾರತಕ್ಕೆ ಸಂಬಂಧಿಸಿದಂತೆ ಹೊರಡಿಸಲಾದ ಸುತ್ತೋಲೆಯಲ್ಲಿ, ಚೀನಾ ಪ್ರಜೆಗಳಿಗೆ ನೀಡಲಾದ ಪ್ರವಾಸಿ ವೀಸಾಗಳು ಇನ್ನು ಮುಂದೆ ಮಾನ್ಯವಾಗಿಲ್ಲ ಎಂದು ಐಎಟಿಎ ಹೇಳಿದೆ. ಭೂತಾನ್‌, ಮಾಲ್ಡೀವ್ಸ್‌, ನೇಪಾಲ್‌ ಪ್ರಜೆಗಳು ಭಾರತಕ್ಕೆ ಪ್ರವಾಸ ಕೈಗೊಳ್ಳಬಹುದು ಎಂದು ತಿಳಿಸಲಾಗಿದೆ.

    ಭಾರತ ನೀಡಿದ ನಿವಾಸ ಪರವಾನಿಗೆ ಹೊಂದಿರುವ ಪ್ರಯಾಣಿಕರು, ಭಾರತದಿಂದ ನೀಡಿದ ವೀಸಾ ಅಥವಾ ಇ-ವೀಸಾ ಹೊಂದಿರುವ ಪ್ರಯಾಣಿಕರು, ಭಾರತದ ಸಾಗರೋತ್ತರ ನಾಗರಿಕ (OCI) ಕಾರ್ಡ್ ಅಥವಾ ಬುಕ್ಲೆಟ್ ಹೊಂದಿರುವ ಪ್ರಯಾಣಿಕರು, ಭಾರತೀಯ ಮೂಲದ ವ್ಯಕ್ತಿಗಳು (PIO) ಕಾರ್ಡ್ ಹೊಂದಿರುವ ಪ್ರಯಾಣಿಕರು, ರಾಜತಾಂತ್ರಿಕ ಪಾಸ್‌ಪೋರ್ಟ್‌ ಹೊಂದಿರುವ ಪ್ರಯಾಣಿಕರಿಗೆ ಅನುಮತಿ ಇದೆ. ಇದನ್ನೂ ಓದಿ: ಉದ್ಧವ್ ಠಾಕ್ರೆ ಎಂಟ್ರಿ – 14 ದಿನಗಳ ಕಸ್ಟಡಿಗೆ ಒಳಗಾದ ಸಂಸದೆ, ಶಾಸಕ ದಂಪತಿ

    10 ವರ್ಷಗಳ ಮಾನ್ಯತೆ ಹೊಂದಿರುವ ಪ್ರವಾಸಿ ವೀಸಾಗಳು ಇನ್ನು ಮುಂದೆ ಮಾನ್ಯವಾಗಿಲ್ಲ ಎಂದು ಐಎಟಿಎ ಹೇಳಿದೆ.

  • ರಷ್ಯಾ ಹಣಕಾಸು ಸಂಸ್ಥೆಗಳಿಗೆ ವೀಸಾ, ಮಾಸ್ಟರ್‌ ಕಾರ್ಡ್‌ ಬ್ಲಾಕ್‌ – ATMಗಳ ಮುಂದೆ ರಷ್ಯನ್ನರ ದಂಡು

    ರಷ್ಯಾ ಹಣಕಾಸು ಸಂಸ್ಥೆಗಳಿಗೆ ವೀಸಾ, ಮಾಸ್ಟರ್‌ ಕಾರ್ಡ್‌ ಬ್ಲಾಕ್‌ – ATMಗಳ ಮುಂದೆ ರಷ್ಯನ್ನರ ದಂಡು

    ಮಾಸ್ಕೋ: ಯುಎಸ್‌ ಪಾವತಿ ಕಾರ್ಡ್‌ ಸಂಸ್ಥೆಗಳಾದ ವೀಸಾ ಮತ್ತು ಮಾಸ್ಟರ್‌ ಕಾರ್ಡ್‌ ತಮ್ಮ ನೆಟ್‌ವರ್ಕ್‌ನಿಂದ ರಷ್ಯಾದ ಹಣಕಾಸು ಸಂಸ್ಥೆಗಳನ್ನು ನಿರ್ಬಂಧಿಸಿವೆ. ಉಕ್ರೇನ್‌ ಮೇಲಿನ ರಷ್ಯಾ ಆಕ್ರಮಣಕ್ಕೆ ವಿರೋಧ ವ್ಯಕ್ತಪಡಿಸಿರುವ ಅಮೆರಿಕ ಹಲವು ನಿರ್ಬಂಧಗಳನ್ನು ವಿಧಿಸುತ್ತಿದೆ.

    ಸೋಮವಾರದಿಂದಲೇ ಈ ನಿರ್ಬಂಧ ಅನ್ವಯವಾಗುವಂತೆ ಕ್ರಮ ಕೈಗೊಳ್ಳಲಾಗಿದೆ. ಮಾನವೀಯ ಸಹಾಯಕ್ಕಾಗಿ 15.14 ಕೋಟಿ (2 ಮಿಲಿಯನ್‌ ಡಾಲರ್)‌ ದೇಣಿಗೆ ನೀಡುವುದಾಗಿ ವೀಸಾ ಸ್ಪಷ್ಟಪಡಿಸಿದೆ. ಮಾಸ್ಟರ್‌ ಕಾರ್ಡ್‌ ಕೂಡ 15.14 ಕೋಟಿ ರೂ. ಕೊಡುಗೆ ನೀಡುವುದಾಗಿ ತಿಳಿಸಿದೆ. ಇದನ್ನೂ ಓದಿ: ಉಕ್ರೇನ್ ಮೇಲೆ ರಷ್ಯಾ ವ್ಯಾಕ್ಯೂಮ್ ಬಾಂಬ್ ಪ್ರಯೋಗ ಆರೋಪ – ಏನಿದರ ವಿಶೇಷ?

    ಸರ್ಕಾರದ ನಿರ್ಬಂಧಗಳ ಪ್ರಕಾರ ವಿಶೇಷವಾಗಿ ಗೊತ್ತುಪಡಿಸಿದ ರಾಷ್ಟ್ರದ್ದು ಎಂದು ಪಟ್ಟಿ ಮಾಡಲಾದ ಘಟಗಳಿಗೆ ವೀಸಾ ತನ್ನ ನೆಟ್‌ವರ್ಕ್‌ಗೆ ಪ್ರವೇಶವನ್ನು ಅಮಾನತುಗೊಳಿಸಿದೆ. ರಷ್ಯಾದ ಕೇಂದ್ರ ಬ್ಯಾಂಕ್‌ ಮತ್ತು ಎರಡನೇ ಅತಿ ದೊಡ್ಡ ಸಾಲದಾತ ವಿಟಿಬಿ ಸೇರಿದಂತೆ ವಿವಿಧ ಹಣಕಾಸು ಸಂಸ್ಥೆಗಳನ್ನು ಈ ಪಟ್ಟಿಗೆ ಸೇರಿಸಲಾಗಿದೆ. ಯುಎಸ್‌, ಬ್ರಿಟನ್‌, ಯೂರೋಪ್‌ ಮತ್ತು ಕೆನಡಾ ದೇಶಗಳು ರಷ್ಯಾದ ಮೇಲೆ ಹೊಸ ನಿರ್ಬಂಧಗಳನ್ನು ಶನಿವಾರವೂ ಘೋಷಿಸಿವೆ.

    ಹಲವು ನಿರ್ಬಂಧಗಳ ಹಿನ್ನೆಲೆಯಲ್ಲಿ ಬ್ಯಾಂಕ್‌ ಕಾರ್ಡ್‌ಗಳು ಕಾರ್ಯನಿರ್ವಹಿಸುವುದನ್ನು ನಿಲ್ಲಿಸಬಹುದು, ಬ್ಯಾಂಕ್‌ಗಳು ನಗದು ಹಿಂಪಡೆಯುವಿಕೆಯನ್ನು ಮಿತಿಗೊಳಿಸಬಹುದು ಎಂದು ಆತಂಕದಲ್ಲಿ ರಷ್ಯನ್ನರು ಎಟಿಎಂಗಳ ಮುಂದೆ ಅಪಾರ ಸಂಖ್ಯೆಯಲ್ಲಿ ಜಮಾಯಿಸುತ್ತಿದ್ದಾರೆ. ಭಾನುವಾರ ಮತ್ತು ಸೋಮವಾರ ಎಟಿಎಂಗಳ ಮುಂದೆ ರಷ್ಯನ್ನರ ಉದ್ದದ ಕ್ಯೂ ಇದ್ದ ದೃಶ್ಯಗಳು ಕಂಡುಬಂದಿದ್ದವು. ಇದನ್ನೂ ಓದಿ: ಊಟ ತರಲು ನನ್ನ ಬಳಿ ದುಡ್ಡಿಲ್ಲ, ಸ್ವಲ್ಪ ಹಣ ಹಾಕು ಅಂದ ಅದೇ ನವೀನ್‍ನ ಕೊನೆ ಮಾತು: ಶ್ರೀಕಾಂತ್

    ರಷ್ಯಾ ಕಳೆದ ವಾರ ಉಕ್ರೇನ್‌ ಮೇಲೆ ಯುದ್ಧವನ್ನು ಸಾರಿತು. ಇದಕ್ಕೆ ಅನೇಕ ಪಾಶ್ಚಿಮಾತ್ಯ ರಾಷ್ಟ್ರಗಳು ವಿರೋಧ ವ್ಯಕ್ತಪಡಿಸಿವೆ. ಅನೇಕ ಪಾಶ್ಚಿಮಾತ್ಯ ಬ್ಯಾಂಕ್‌ಗಳು, ವಿಮಾನಯಾನ ಸಂಸ್ಥೆಗಳು ರಷ್ಯಾದೊಂದಿಗೆ ಸಂಬಂಧವನ್ನು ಕಡಿತಗೊಳಿಸಿವೆ. ರಷ್ಯಾದ ಕ್ರಮಗಳು ಸ್ವೀಕಾರಾರ್ಹವಲ್ಲ ಎಂದು ವಿರೋಧಿಸಿವೆ. ಇದನ್ನೂ ಓದಿ: ಉಕ್ರೇನ್‌ನಲ್ಲಿ ಶೆಲ್ ದಾಳಿಗೆ ಮಡಿದ ಕನ್ನಡಿಗನಿಗೆ ಸ್ಯಾಂಡಲ್ ವುಡ್ ಕಣ್ಣೀರು

  • ನೊವಾಕ್ ಜೊಕೊವಿಕ್ ವೀಸಾ 2ನೇ ಬಾರಿ ರದ್ದು – 3 ವರ್ಷ ಆಸ್ಟ್ರೇಲಿಯಾಗೆ ಪ್ರವೇಶವಿಲ್ಲ

    ನೊವಾಕ್ ಜೊಕೊವಿಕ್ ವೀಸಾ 2ನೇ ಬಾರಿ ರದ್ದು – 3 ವರ್ಷ ಆಸ್ಟ್ರೇಲಿಯಾಗೆ ಪ್ರವೇಶವಿಲ್ಲ

    ಸಿಡ್ನಿ: ವಿಶ್ವದ ನಂಬರ್ 1 ಟೆನಿಸ್ ಆಟಗಾರ ನೊವಾಕ್ ಜೊಕೊವಿಕ್ ಕೋವಿಡ್-19 ಲಸಿಕೆ ಪಡೆಯದೆ ಇದ್ದ ಪರಿಣಾಮ ಆಸ್ಟ್ರೇಲಿಯಾ ಸರ್ಕಾರ ಜೊಕಾವಿಕ್ ವೀಸಾವನ್ನು ಎರಡನೇ ಬಾರಿ ರದ್ದು ಪಡಿಸಿದೆ. ಇದರಿಂದಾಗಿ ಜೊಕೊವಿಕ್ ಇನ್ನೂ 3 ವರ್ಷ ಆಸ್ಟ್ರೇಲಿಯಾಗೆ ಕಾಲಿಡುವಂತಿಲ್ಲ.

    ಆಸ್ಟ್ರೇಲಿಯನ್ ಓಪನ್ ಟೆನಿಸ್ ಗ್ರ್ಯಾನ್‍ಸ್ಲಾಂ ಟೂರ್ನಿಯಲ್ಲಿ ಭಾಗವಹಿಸಲು ಜೊಕೊವಿಕ್ ಆಸ್ಟ್ರೇಲಿಯಾಗೆ ಬಂದಿಳಿದಿದ್ದರು. ಈ ವೇಳೆ ಕೋವಿಡ್ ನಿಯಮದ ಪ್ರಕಾರ ಲಸಿಕೆ ಪಡೆದಿರಬೇಕಿತ್ತು ಆದರೆ ಹಾಲಿ ಚಾಂಪಿಯನ್ ನೊವಾಕ್ ಜೊಕೊವಿಕ್ ಲಸಿಕೆ ಪಡೆದಿರಲಿಲ್ಲ. ಹಾಗಾಗಿ ವಿಮಾನ ನಿಲ್ದಾಣದಲ್ಲಿ ಅವರ ವೀಸಾವನ್ನು ಆಸ್ಟ್ರೇಲಿಯಾ ಸರ್ಕಾರ ಮೊದಲ ಬಾರಿಗೆ ರದ್ದು ಪಡಿಸಿತ್ತು. ಆ ಬಳಿಕ ವೈದ್ಯಕೀಯ ಅನುಮತಿ ಪಡೆದು ಆಸ್ಟ್ರೇಲಿಯಾ ಪ್ರವೇಶಿಸಿದ್ದ ಜೊಕೊವಿಕ್‍ಗೆ ಮತ್ತೊಮ್ಮೆ ಹಿನ್ನಡೆ ಯಾಗಿದೆ. ಆಸ್ಟ್ರೇಲಿಯಾ ಸರ್ಕಾರ ಎರಡನೇ ಬಾರಿ ಜೊಕೊವಿಕ್ ವೀಸಾವನ್ನು ರದ್ದು ಪಡಿಸಿ 3 ವರ್ಷಗಳ ವರೆಗೆ ಆಸ್ಟ್ರೇಲಿಯಾಕ್ಕೆ ಪ್ರವೇಶ ನಿಷೇಧಿಸಿದೆ. ಹಾಗಾಗಿ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ನೊವಾಕ್ ಜೊಕೊವಿಕ್ ಪಾಲ್ಗೊಳ್ಳುವಿಕೆಯ ಮೇಲೆ ಅನುಮಾನದ ತೂಗುಗತ್ತಿ ನೇತಾಡುತ್ತಿದೆ.

    ಜೊಕೊವಿಕ್ ವೀಸಾ ರದ್ದು ಪಡಿಸಿದ ಬಗ್ಗೆ ಸ್ಪಷ್ಟತೆ ನೀಡಿದ ಆಸ್ಟ್ರೇಲಿಯಾದ ಸಚಿವ ಅಲೆಕ್ಸ್ ಹ್ವಾಕೆ, ಇದೀಗ ಎರಡನೇ ಬಾರಿ ಟೆನಿಸ್ ಆಟಗಾರ ಜೊಕೊವಿಕ್ ಅವರ ವೀಸಾವನ್ನು ಇಂದು ರದ್ದು ಪಡಿಸಲಾಗಿದೆ. ಸಾರ್ವಜನಿಕರ ಆರೋಗ್ಯದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ತೀರ್ಮಾನ ತೆಗೆದುಕೊಂಡಿದ್ದೇವೆ ಎಂದಿದ್ದಾರೆ.

    ಜನವರಿ 17 ರಿಂದ ಆಸ್ಪ್ರೇಲಿಯನ್ ಓಪನ್ ಗ್ರ್ಯಾನ್ ಸ್ಲಾಂ ಟೆನಿಸ್ ಟೂರ್ನಿ ಆರಂಭಗೊಳ್ಳಲಿದೆ. ಆಸ್ಟ್ರೇಲಿಯನ್ ಓಪನ್ ಟೆನಿಸ್ ಗ್ರ್ಯಾನ್‍ಸ್ಲಾಂ ಟೂರ್ನಿಯ ನಿಯಮದ ಪ್ರಕಾರ ಲಸಿಕೆ ಪಡೆದರಷ್ಟೇ ಆಡಲು ಅವಕಾಶವಿದೆ. ಆದರೆ ಜೊಕೊವಿಕ್ ಲಸಿಕೆ ಪಡೆಯಲು ಬಯಸುತ್ತಿಲ್ಲ. ಇದೀಗ ಟೂರ್ನಿ ಆರಂಭಕ್ಕೂ ಮೊದಲು ವಿವಾದ ಕೊನೆಗೊಳ್ಳದಿದ್ದರೆ ವಿಶ್ವ ನಂ.1 ನೊವಾಕ್ ಜೊಕೊವಿಕ್ ಆಸ್ಟ್ರೇಲಿಯಾ ಓಪನ್ ಆಡುವುದು ಅನುಮಾನವಾಗಿದೆ. ಈಗಾಗಲೇ ಜೊಕೊವಿಕ್ ಅವರ ಪಂದ್ಯದ ವೇಳಾಪಟ್ಟಿ ಪ್ರಕಟಗೊಂಡಿದೆ. 9 ಬಾರಿಯ ಚಾಂಪಿಯನ್ ಜೊಕೊವಿಕ್ ಮೊದಲ ಸುತ್ತಿನಲ್ಲಿ ಜ.17 ರಂದು ಸರ್ಬಿಯಾದ ಮಿಯೊಮಿರ್ ಕೆಮನೊವಿಚ್ ವಿರುದ್ಧ ಆಡಬೇಕಿದೆ.

    ಜೊಕೊವಿಕ್ ಇದುವರೆಗೂ 20 ಟೆನಿಸ್ ಗ್ರ್ಯಾನ್‍ಸ್ಲಾಂ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡು ಟೆನಿಸ್ ದಿಗ್ಗಜರಾದ ರೋಜರ್ ಫೆಡರರ್ ಹಾಗೂ ರಾಫೆಲ್ ನಡಾಲ್ ಜೊತೆ ಜಂಟಿ ಅಗ್ರಸ್ಥಾನ ಹಂಚಿಕೊಂಡಿದ್ದಾರೆ. ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಅದ್ಭುತ ದಾಖಲೆ ಹೊಂದಿರುವ ಜೊಕೊವಿಕ್ ಈ ಬಾರಿ ಮತ್ತೊಮ್ಮೆ ಪ್ರಶಸ್ತಿಗೆ ಮುತ್ತಿಕ್ಕುವ ಮೂಲಕ 21ನೇ ಗ್ರ್ಯಾನ್‍ಸ್ಲಾಂ ಪ್ರಶಸ್ತಿ ಎತ್ತಿಹಿಡಿಯುವ ತವಕದಲ್ಲಿದ್ದರು. ಆದರೆ ಇದೀಗ ಈ ವಿವಾದದಿಂದಾಗಿ ಅವರ ಆ ಕನಸಿಗೆ ಹಿನ್ನಡೆಯಾಗಿದೆ.

    ಯಾಕೆ ಕಠಿಣ ನಿಯಮ?
    ಆಸ್ಟ್ರೇಲಿಯಾಕ್ಕೆ ಬರುವವರಿಗೆ ಲಸಿಕೆ ಕಡ್ಡಾಯ ಮಾಡಲಾಗಿದೆ. ಲಸಿಕೆ ಪಡೆಯದವರಿಗೆ ವೀಸಾ ನೀಡಲು ಸಾಧ್ಯವಿಲ್ಲ ಎಂದು ಸರ್ಕಾರ ಮೊದಲೇ ಪ್ರಕಟಿಸಿತ್ತು. ಹೀಗಿದ್ದರೂ ಜೊಕೊವಿಕ್ ಆಸ್ಟ್ರೇಲಿಯಾದ ವೀಸಾ ಸಿಕ್ಕಿತ್ತು. ಈ ವಿಚಾರ ತಿಳಿದ ಆಸ್ಟ್ರೇಲಿಯಾದ ಜನತೆ ಬಡವರಿಗೆ ಒಂದು ನಿಯಮ, ಶ್ರೀಮಂತರಿಗೆ ಒಂದು ನಿಯಮ ಎಷ್ಟು ಸರಿ ಎಂದು ಖಾರವಾಗಿ ಪ್ರಶ್ನಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಜನಾಕ್ರೋಷ ಹೆಚ್ಚಾಗುತ್ತಿದ್ದಂತೆ ಸರ್ಕಾರ ಈಗ ವೀಸಾವನ್ನೇ ರದ್ದು ಮಾಡಿದೆ.

  • ಸೆ.30ರವರೆಗೆ ಭಾರತದಲ್ಲಿರುವ ವಿದೇಶಿಗರ ವೀಸಾ ವಿಸ್ತರಣೆ

    ಸೆ.30ರವರೆಗೆ ಭಾರತದಲ್ಲಿರುವ ವಿದೇಶಿಗರ ವೀಸಾ ವಿಸ್ತರಣೆ

    ನವದೆಹಲಿ: ಕೋವಿಡ್-19ನಿಂದಾಗಿ ಭಾರತದಲ್ಲಿ ಸಿಲುಕಿರುವ ಎಲ್ಲಾ ವಿದೇಶಿಗರ ವೀಸಾವನ್ನು ಸೆಪ್ಟೆಂಬರ್ 30ರವರೆಗೂ ವಿಸ್ತರಿಸಲಾಗಿದೆ ಎಂದು ಕೇಂದ್ರ ಸರ್ಕಾರ ಗುರುವಾರ ಘೋಷಿಸಿದೆ.

    ಮಾರ್ಚ್ 2020ರಲ್ಲಿ ವಿವಿಧ ರೀತಿಯ ವೀಸಾ ಮೂಲಕ ಭಾರತಕ್ಕೆ ಬಂದ ಹಲವಾರು ವಿದೇಶಿಗರು ಕೊರೊನಾ ವೈರಸ್‍ನಿಂದಾಗಿ ತಮ್ಮ ದೇಶಗಳಿಗೆ ತಲುಪಲು ವಿಮಾನಗಳ ಅನುಪಸ್ಥಿತಿ ಕಾರಣ ಭಾರತದಲ್ಲಿಯೇ ಸಿಲುಕಿಕೊಂಡಿದ್ದರಿಂದ ವೀಸಾವನ್ನು ವಿಸ್ತರಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:ಬೆಂಗಳೂರಿನಲ್ಲಿ ತಲೆ ಎತ್ತಿರುವ ಅಕ್ರಮ ಕ್ಯಾಸಿನೋ ಅಡ್ಡೆಗಳನ್ನು ಕೂಡಲೇ ನಿಲ್ಲಿಸಿ – ಕೆಜೆ ಜಾರ್ಜ್ ಪತ್ರ

    ಸೆಪ್ಟೆಂಬರ್ 30ರವರೆಗೂ ವೀಸಾ ವಿಸ್ತರಣೆಗಾಗಿ ಸಂಬಂಧಿಸಿದ ಎಫ್‌ಆರ್‌ಆರ್‌ಒ / ಎಫ್‌ಆರ್‌ಒ ಅರ್ಜಿಯನ್ನು ವಿದೇಶಿಗರು ಸಲ್ಲಿಸುವ ಅಗತ್ಯವಿಲ್ಲ. ಆದರೆ ನಿರ್ಗಮಿಸುವ ಮೊದಲು ಇ-ಎಫ್‌ಆರ್‌ಆರ್‌ಒ ಪೋರ್ಟಲ್‍ನಲ್ಲಿ ನಿರ್ಗಮನ ಅನುಮತಿಗಾಗಿ ಆನ್‍ಲೈನ್‍ನಲ್ಲಿ ಅರ್ಜಿಸಲ್ಲಿಸಬೇಕಾಗುತ್ತದೆ. ಇದಕ್ಕೆ ಹೆಚ್ಚು ಶುಲ್ಕವನ್ನು ವಿಧಿಸದೇ ಉಚಿತವಾಗಿ ಆಧಾರದ ಮೇಲೆ ಸಂಬಂಧಿಸಿದ ಎಫ್‌ಆರ್‌ಆರ್‌ಒ / ಎಫ್‌ಆರ್‌ಒ ಅರ್ಜಿಯನ್ನು ನೀಡಲಾಗುವುದು ಮತ್ತು ಸೆಪ್ಟೆಂಬರ್ 30ರ ನಂತರ ವೀಸಾ ವಿಸ್ತರಣೆಯ ಅಗತ್ಯವಿದ್ದಲ್ಲಿ, ವಿದೇಶಿಗರು ಆನ್‍ಲೈನ್ ಇ-ಎಫ್‌ಆರ್‌ಆರ್‌ಒ ಪೋರ್ಟಲ್‍ನಲ್ಲಿ ವೀಸಾ ವಿಸ್ತರಣೆಗೆ ಪಾವತಿ ಆಧಾರದ ಮೇಲೆ ಅರ್ಜಿ ಸಲ್ಲಿಸಬಹುದು. ಇದನ್ನು ಎಫ್‌ಆರ್‌ಆರ್‌ಒ / ಎಫ್‌ಆರ್‌ಒ ಪರಿಗಣಿಸುತ್ತದೆ. ಇದನ್ನೂ ಓದಿ:ಅಘ್ಘಾನ್ ಪ್ರಜೆಗಳಲ್ಲಿ ಇ-ವೀಸಾವಿದ್ದರೆ ಮಾತ್ರ ಭಾರತ ಪ್ರವೇಶ

    ಈಗಾಗಲೇ ಭಾರತದಲ್ಲಿರುವ ಅಫ್ಘಾನಿಸ್ತಾನ ಪ್ರಜೆಗಳಿಗೆ ಪ್ರತ್ಯೇಕವಾಗಿ ನೀಡಲಾಗಿರುವ ಮಾರ್ಗ ಸೂಚಿಗಳ ಅಡಿಯಲ್ಲಿ ವೀಸಾ ವಿಸ್ತರಣೆಯನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹೆಂಡತಿಯೊಂದಿಗೆ ಜಗಳ ವಿಷ ಕುಡಿದೆ ಎಂದು ಪೊಲೀಸರಿಗೆ ಪತಿರಾಯನ ಕರೆ

  • ಅಫ್ಘಾನ್ ನಿರಾಶ್ರಿತರಿಗೆ ಭಾರತದ ಆಶ್ರಯ – ಏನಿದು ವೀಸಾ? ವಿಶೇಷತೆ ಏನು?

    ಅಫ್ಘಾನ್ ನಿರಾಶ್ರಿತರಿಗೆ ಭಾರತದ ಆಶ್ರಯ – ಏನಿದು ವೀಸಾ? ವಿಶೇಷತೆ ಏನು?

    ನವದೆಹಲಿ: ತಾಲಿಬಾನಿಗಳ ಅಟ್ಟಹಾಸಕ್ಕೆ ಹೆದರಿ ದೇಶ ತೊರೆಯುತ್ತಿರುವ ಅಫ್ಘಾನಿಸ್ತಾನದ ಪ್ರಜೆಗಳಿಗೆ ಆಶ್ರಯ ನೀಡಲು ಭಾರತ ಮುಂದಾಗಿದೆ. ಈ ನಿಟ್ಟಿನಲ್ಲಿ ಅಫ್ಘಾನ್ ನಿರಾಶ್ರಿತರಿಗೆ 6 ತಿಂಗಳ ಅವಧಿ ಇರುವ ಇ ಎಮರ್ಜೆನ್ಸಿ ಎಕ್ಸ್-ಮಿಸ್ಕ್ ವೀಸಾವನ್ನು ಪ್ರಕಟಿಸಿ ಮಾನವೀಯತೆ ತೋರಿದೆ.

    ಈ ವಿಶೇಷ ವೀಸಾದ ಬಗ್ಗೆ ಕೇಂದ್ರ ಗೃಹ ಸಚಿವಾಲಯ ಪ್ರಕಟಣೆ ಹೊರಡಿಸಿ ಮಾಹಿತಿ ನೀಡಿದೆ. ಅಫ್ಘಾನಿಸ್ತಾನದಿಂದ ಭಾರತಕ್ಕೆ ಬರಲು ಇಚ್ಛಿಸುವ ನಿರಾಶ್ರಿತರಿಗೆ ಆಶ್ರಯ ನೀಡಲು ಭಾರತ ಹೊಸ ಮಾದರಿಯ ವೀಸಾವನ್ನು ಪರಿಚಯಿಸಲಾಗಿದೆ. ಯಾವುದೇ ಧರ್ಮದವರು ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದರೆ 6 ತಿಂಗಳ ವೀಸಾವನ್ನು ನೀಡಲಾಗುತ್ತದೆ. ಈ ಅರ್ಜಿಗಳನ್ನು ದೆಹಲಿ ಕಚೇರಿಯಿಂದ ನಿರ್ವಹಿಸಲಾಗುವುದು ಎಂದು ಹೇಳಿದೆ. ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ – ಭಾರತಕ್ಕೆ ಇರುವ ಸವಾಲುಗಳೇನು?

    ಭಾರತದಲ್ಲಿ ನಿರಾಶ್ರಿತರಿಗೆ ಸಂಬಂಧಿಸಿದಂತೆ ಯಾವುದೇ ನೀತಿ ಇಲ್ಲ. ಆದರೆ ವಿದೇಶಗಳಲ್ಲಿ ಹಿಂಸೆಗೆ ತುತ್ತಾಗುವವರಿಗೆ ಪ್ರಕರಣಗಳನ್ನು ಆಧರಿಸಿ ಆಶ್ರಯ ನೀಡುತ್ತಿದೆ. ಹೀಗಾಗಿ 6 ತಿಂಗಳ ವೀಸಾ ಅವಧಿ ಮುಗಿದ ಬಳಿಕ ಮುಂದೇನು ಎಂಬ ಪ್ರಶ್ನೆಗೆ ಕೇಂದ್ರ ಸರ್ಕಾರದಿಂದ ಸ್ಪಷ್ಟವಾದ ಉತ್ತರ ಸಿಕ್ಕಿಲ್ಲ.

    ಏನಿದು ಎಕ್ಸ್-ಮಿಸ್ಕ್ ವೀಸಾ?
    ಯಾವುದೇ ದೇಶಕ್ಕೆ ಭೇಟಿ ನೀಡಬೇಕಾದರೂ ವೀಸಾಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಈ ವೇಳೆ ಯಾವ ಕಾರಣಕ್ಕೆ ಭೇಟಿ ನೀಡಲಾಗುತ್ತದೆ ಎಂಬುದನ್ನು ಉಲ್ಲೇಖಿಸಬೇಕಾಗುತ್ತದೆ. ನೀಡಿದ ಕಾರಣಗಳು ಸಮಪರ್ಕವಾಗಿದ್ದರೆ ಪ್ರವಾಸಿ, ಬಿಸಿನೆಸ್.. ಇತ್ಯಾದಿ ವೀಸಾಗಳನ್ನು ದೇಶಗಳು ನೀಡುತ್ತವೆ. ಇದನ್ನೂ ಓದಿ: ಮಹಿಳೆಯರು ಕೆಲಸ ಮಾಡಬಹುದು, ಮುಸ್ಲಿಂ ಕಾನೂನುಗಳ ವ್ಯಾಪ್ತಿಯಲ್ಲಷ್ಟೇ: ತಾಲಿಬಾನ್

    ಯಾವುದೇ ಉದ್ದೇಶವಿಲ್ಲದೆ ದೇಶಕ್ಕೆ ಬರುವವರಿಗೆ, ತಾತ್ಕಾಲಿಕ ಅವಧಿಗೆ ನೀಡಲಾಗುವ ವೀಸಾವನ್ನು ಎಕ್ಸ್-ಮಿಸ್ಕ್ ಎಂದು ಪರಿಗಣಿಸಲಾಗುತ್ತದೆ. ಸದ್ಯ ಅಫ್ಘಾನಿಸ್ತಾನದಲ್ಲಿರುವ ಭಾರತೀಯ ರಾಯಭಾರ ಕಚೇರಿ ಬಂದ್ ಆಗಿರುವುದರಿಂದ ಆನ್‍ಲೈನ್ ಮೂಲಕ ವೀಸಾಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಅರ್ಜಿ ಸಲ್ಲಿಸಿದ ಎಲ್ಲರಿಗೂ ವೀಸಾ ಸಿಗುವುದು ಅನುಮಾನ. ಭದ್ರತಾ ಸಂಸ್ಥೆಗಳು ಅನುಮೋದನೆ ನೀಡಿದರೆ ಮಾತ್ರ ವೀಸಾವನ್ನು ಮಂಜೂರು ಮಾಡಲಾಗುತ್ತದೆ.

    ಅರ್ಜಿ ಸಲ್ಲಿಸುವ ವ್ಯಕ್ತಿಗಳು ಹೆಸರು, ವಿಳಾಸ, ಫೋನ್ ನಂಬರ್ ಜೊತೆಗೆ ಭಾರತ ಮತ್ತು ಅಫ್ಘಾನಿಸ್ತಾನಲ್ಲಿ ನೆಲೆಸಿರುವ ವ್ಯಕ್ತಿಗಳ ಹೆಸರನ್ನು ರೆಫರೆನ್ಸ್ ಆಗಿ ನೀಡಬೇಕಾಗುತ್ತದೆ.

    ಈ ವೀಸಾಗೆ ಸಂಬಂಧಿಸಿದ ಹೆಚ್ಚಿನ ವಿವರಗಳಿಗೆ ಇಲ್ಲಿ ಭೇಟಿ ನೀಡಬಹುದು: www.indianvisaonline.gov.in