Tag: visa

  • World Cup 2023: ಇನ್ನೂ ವೀಸಾ ಸಿಕ್ಕಿಲ್ಲ – ಪಾಕಿಸ್ತಾನ ಆಟಗಾರರಿಗೆ ಶುರುವಾಯ್ತು ಹೊಸ ಸಮಸ್ಯೆ

    World Cup 2023: ಇನ್ನೂ ವೀಸಾ ಸಿಕ್ಕಿಲ್ಲ – ಪಾಕಿಸ್ತಾನ ಆಟಗಾರರಿಗೆ ಶುರುವಾಯ್ತು ಹೊಸ ಸಮಸ್ಯೆ

    ಇಸ್ಲಾಮಾಬಾದ್‌: ಅಕ್ಟೋಬರ್‌ 5 ರಿಂದ ಭಾರತದಲ್ಲಿ ವಿಶ್ವಕಪ್‌ (World Cup 2023) ಟೂರ್ನಿ ಆರಂಭವಾಗಲಿದ್ದು, ಭಾರತಕ್ಕೆ ಪ್ರಯಾಣಿಸಬೇಕಿರುವ ಕ್ರಿಕೆಟ್‌ ಆಟಗಾರರಿಗೆ ಇನ್ನೂ ವೀಸಾ ಸಿಕ್ಕಿಲ್ಲ ಎಂದು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (PCB) ಕಳವಳ ವ್ಯಕ್ತಪಡಿಸಿದೆ. ಈ ಕುರಿತು ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿಗೂ (ICC) ಪತ್ರ ಬರೆದಿದೆ.

    ವಿಶ್ವಕಪ್‌ ಟೂರ್ನಿಗೆ ಇನ್ನೂ 10 ದಿನಗಳು ಮಾತ್ರ ಬಾಕಿ ಉಳಿದಿದ್ದು, ಭಾರತಕ್ಕೆ ಪ್ರಯಾಣಿಸಲು ಎಲ್ಲಾ ತಂಡಗಳು ಸಂಪೂರ್ಣ ಸಿದ್ಧತೆ ಮಾಡಿಕೊಂಡಿವೆ. ಆದ್ರೆ ಪಾಕಿಸ್ತಾನ ತಂಡಕ್ಕೆ ವೀಸಾ ಸಮಸ್ಯೆ (Visa clearance Problem) ಶುರುವಾಗಿದ್ದು, ತೀವ್ರ ಕಳವಳಕ್ಕೆ ಕಾರಣವಾಗಿದೆ. ವಿಶ್ವಕಪ್‌ಗೂ ಮುನ್ನ ಪಾಕ್‌ ತಂಡ ದುಬೈಗೆ ತೆರಳಬೇಕಿತ್ತು. ಆದ್ರೆ ಶುಕ್ರವಾರದವರೆಗೂ ಭಾರತ ಸರ್ಕಾರವು ಪಾಕಿಸ್ತಾನ ತಂಡಕ್ಕೆ ವೀಸಾಗೆ ಅನುಮೋದನೆ ನೀಡಿಲ್ಲ. ಇದರಿಂದಾಗಿ ಈ ದುಬೈ ಪ್ರವಾಸವನ್ನೂ ರದ್ದುಗೊಳಿಸಲಾಗಿದೆ ಎಂದು ಪಿಸಿಬಿ ತಿಳಿಸಿದೆ. ಇದನ್ನೂ ಓದಿ: World Cup 2023: ವಿಶ್ವಕಪ್‌ ಟೂರ್ನಿಗೆ ಟೀಂ ಇಂಡಿಯಾ ಬಲಿಷ್ಠ ತಂಡ ಪ್ರಕಟ – ಕನ್ನಡಿಗ ಕೆ.ಎಲ್‌ ರಾಹುಲ್‌ಗೆ ಸ್ಥಾನ

    ಸದ್ಯ ವೀಸಾ ಸಮಸ್ಯೆಗೆ ಸಿಲುಕಿರುವ ಪಾಕಿಸ್ತಾನ (Pakistan), ಐಸಿಸಿಗೆ ಪತ್ರ ಬರೆದಿದೆ. ನಮ್ಮ ಆಟಗಾರರಿಗೆ ಇನ್ನೂ ವೀಸಾ ಸಿಕ್ಕಿಲ್ಲ. ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್‌ನಿಂದ ವೀಸಾ ಕ್ಲಿಯರೆನ್ಸ್‌ಗಾಗಿ ಕಾಯುತ್ತಿದ್ದೇವೆ. ನಮ್ಮ ಆಟಗಾರರು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದಾರೆ. ಆದ್ರೆ ವಿಶ್ವಕಪ್‌ಗೆ ತೆರಳಬೇಕಿರುವ ಆಟಗಾರರು, ತಂಡದ ಅಧಿಕಾರಿಗಳು, ಕ್ರಿಕೆಟ್‌ ಅಭಿಮಾನಿಗಳು ಮತ್ತು ಪತ್ರಕರ್ತರಿಗೆ ವೀಸಾ ಇನ್ನೂ ಸಿಕ್ಕಿಲ್ಲ. ಭಾರತೀಯ ಗೃಹ ಸಚಿವಾಲಯವು NOC ನೀಡಿಲ್ಲ, ಇಂತಹ ವರ್ತನೆ ಸ್ವೀಕಾರಾರ್ಹವಲ್ಲ ಎಂದು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಅಸಮಾಧಾನ ಹೊರಹಾಕಿದೆ.

    ವಿಶ್ವಕಪ್‌ ಟೂರ್ನಿಗೂ ಮುನ್ನ ಪಾಕಿಸ್ತಾನವು ಸೆಪ್ಟೆಂಬರ್‌ 29ರಂದು ನ್ಯೂಜಿಲೆಂಡ್ ವಿರುದ್ಧ ಹೈದರಾಬಾದ್‌ನಲ್ಲಿ ಅಭ್ಯಾಸ ಪಂದ್ಯವನ್ನಾಡಬೇಕಿದೆ. ಅದಕ್ಕೂ ಮೊದಲು ತಂಡವು ದುಬೈನಲ್ಲಿ ಕೆಲವು ದಿನಗಳ ಕಾಲ ಇದ್ದು ನಂತರ ಹೈದರಾಬಾದ್‌ಗೆ ತೆರಳಬೇಕಿತ್ತು. ಆದ್ರೆ ವೀಸಾ ಸಮಸ್ಯೆಯಿಂದ ದುಬೈ ಪ್ರವಾಸ ಕೂಡ ರದ್ದಾಗಿದೆ. ಹಾಗಾಗಿ ಪಾಕಿಸ್ತಾನ ಲಾಹೋರ್‌ನಿಂದ ನೇರವಾಗಿ ಭಾರತಕ್ಕೆ ಬರಲು ಪ್ಲ್ಯಾನ್‌ ಮಾಡಿಕೊಂಡಿದ್ದು, ಸೆಪ್ಟೆಂಬರ್ 27 ರಂದು ಲಾಹೋರ್‌ನಿಂದ ನೇರವಾಗಿ ಹೈದರಾಬಾದ್​ಗೆ ಬಂದಿಳಿಯಲಿದೆ. ಇದನ್ನೂ ಓದಿ: ವಿಶ್ವಕಪ್‌ ಟೂರ್ನಿಯಲ್ಲಿ ಗೆದ್ದರೂ ಸೋತರೂ ದುಡ್ಡೋ ದುಡ್ಡು – ಬಹುಮಾನದ ಮೊತ್ತ ಪ್ರಕಟಿಸಿದ ICC

    ಪಾಕಿಸ್ತಾನ ತಂಡವು ಕೊನೆಯ ಬಾರಿ 2016ರಲ್ಲಿ ನಡೆದ ಟಿ20 ವಿಶ್ವಕಪ್​ಗಾಗಿ ಭಾರತಕ್ಕೆ ಆಗಮಿಸಿತ್ತು. ಇದಾದ ಬಳಿಕ ಈ ವರ್ಷ ಅಂದರೆ ಬರೋಬ್ಬರಿ 7 ವರ್ಷಗಳ ಬಳಿಕ ಮತ್ತೆ ಭಾರತದ ನೆಲಕ್ಕೆ ಪಾಕ್​ ತಂಡ ಕಾಲಿಡುತ್ತಿದೆ. ಈ ಬಾರಿ ಪಾಕಿಸ್ತಾನ ತಂಡವು ಹೈದರಾಬಾದ್‌, ಬೆಂಗಳೂರು, ಚೆನ್ನೈ, ಅಹಮದಾಬಾದ್‌ ಹಾಗೂ ಕೋಲ್ಕತ್ತಾ ಮೈದಾನಗಳಲ್ಲಿ ತನ್ನ ವಿಶ್ವಕಪ್‌ ಪಂದ್ಯಗಳನ್ನ ಆಡಲಿದೆ. ಅದಕ್ಕೂ ಮುನ್ನ ಸೆಪ್ಟೆಂಬರ್‌ 29 ರಂದು ನ್ಯೂಜಿಲೆಂಡ್‌ ವಿರುದ್ಧ, ಅಕ್ಟೋಬರ್‌ 3 ರಂದು ಆಸ್ಟ್ರೇಲಿಯಾ ವಿರುದ್ಧ ಅಭ್ಯಾಸ ಪಂದ್ಯಗಳನ್ನಾಡಲಿದೆ. ಇದನ್ನೂ ಓದಿ: Ind vs Aus: ಬೆಂಕಿ ಬ್ಯಾಟಿಂಗ್‌, ಮಿಂಚಿನ ಬೌಲಿಂಗ್‌; ಆಸೀಸ್‌ ವಿರುದ್ಧ ಭಾರತಕ್ಕೆ ಸರಣಿ ಜಯ

    ಭಾರತದಲ್ಲಿ ಪಾಕ್‌ ತಂಡದ ವೇಳಾಪಟ್ಟಿ ಹೀಗಿದೆ…
    ಪಾಕಿಸ್ತಾನ vs ಕ್ವಾಲಿಫೈಯರ್ 1, ಅಕ್ಟೋಬರ್ 6 – ಹೈದರಾಬಾದ್
    ಪಾಕಿಸ್ತಾನ vs ಕ್ವಾಲಿಫೈಯರ್ 2, ಅಕ್ಟೋಬರ್ 12 – ಹೈದರಾಬಾದ್
    ಪಾಕಿಸ್ತಾನ vs ಭಾರತ, ಅಕ್ಟೋಬರ್ 15 – ಅಹಮದಾಬಾದ್
    ಪಾಕಿಸ್ತಾನ vs ಆಸ್ಟ್ರೇಲಿಯಾ, ಅಕ್ಟೋಬರ್ 20 – ಬೆಂಗಳೂರು
    ಪಾಕಿಸ್ತಾನ vs ಅಫ್ಘಾನಿಸ್ತಾನ, ಅಕ್ಟೋಬರ್ 23- ಚೆನ್ನೈ
    ಪಾಕಿಸ್ತಾನ vs ದಕ್ಷಿಣ ಆಫ್ರಿಕಾ, ಅಕ್ಟೋಬರ್ 27- ಚೆನ್ನೈ
    ಪಾಕಿಸ್ತಾನ vs ಬಾಂಗ್ಲಾದೇಶ, ಅಕ್ಟೋಬರ್ 31 – ಕೋಲ್ಕತ್ತಾ
    ಪಾಕಿಸ್ತಾನ vs ನ್ಯೂಜಿಲೆಂಡ್, ನವೆಂಬರ್ 4 – ಬೆಂಗಳೂರು
    ಪಾಕಿಸ್ತಾನ vs ಇಂಗ್ಲೆಂಡ್, ನವೆಂಬರ್ 12- ಕೋಲ್ಕತ್ತಾ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೆನಡಾದ ಪ್ರಜೆಗಳಿಗೆ ಭಾರತೀಯ ವೀಸಾ ಸೇವೆ ತಾತ್ಕಾಲಿಕ ಸ್ಥಗಿತ

    ಕೆನಡಾದ ಪ್ರಜೆಗಳಿಗೆ ಭಾರತೀಯ ವೀಸಾ ಸೇವೆ ತಾತ್ಕಾಲಿಕ ಸ್ಥಗಿತ

    ನವದೆಹಲಿ: ಭಾರತ (India) ಹಾಗೂ ಕೆನಡಾ (Canada) ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಮೂಡಿರುವ ಹಿನ್ನೆಲೆ ಕೆನಡಾದ ಪ್ರಜೆಗಳಿಗೆ ಭಾರತೀಯ ವೀಸಾ (Visa) ಸೇವೆಯನ್ನು ಗುರುವಾರದಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

    ಜೂನ್‌ನಲ್ಲಿ ಕೆನಡಾದಲ್ಲಿ ನಡೆದ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ (Hardeep Singh Nijjar) ಹತ್ಯೆಯ ಹಿಂದೆ ಭಾರತದ ಕೈವಾಡವಿದೆ ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೋ (Justin Trudeau) ಆರೋಪಿಸಿದ್ದಾರೆ. ಈ ಹೇಳಿಕೆ ಬೆನ್ನಲ್ಲೇ ಉಭಯ ದೇಶಗಳ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಮೂಡಿದ್ದು, ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ.

    ಈ ಬಗ್ಗೆ ವೀಸಾ ಸಲಹೆಗಳನ್ನು ಒದಗಿಸುವ ಭಾರತದ ಆನ್‌ಲೈನ್ ವೀಸಾ ಅರ್ಜಿ ಕೇಂದ್ರ ಬಿಎಲ್‌ಎಸ್ ಇಂಟರ್‌ನ್ಯಾಷನಲ್ ತನ್ನ ವೆಬ್‌ಸೈಟ್‌ನಲ್ಲಿ ಸೂಚನೆಯನ್ನು ಪೋಸ್ಟ್ ಮಾಡಿದೆ. ಭಾರತೀಯ ಮಿಷನ್‌ನಿಂದ ಪ್ರಮುಖ ಸೂಚನೆ: ಕಾರ್ಯಾಚರಣೆಯ ಕಾರಣಗಳಿಂದಾಗಿ 2023ರ ಸೆಪ್ಟೆಂಬರ್ 21ರಿಂದ ಜಾರಿಗೆ ಬರುವಂತೆ ಭಾರತೀಯ ವೀಸಾ ಸೇವೆಗಳನ್ನು ಮುಂದಿನ ಸೂಚನೆಯ ತನಕ ಸ್ಥಗಿತಗೊಳಿಸಲಾಗಿದೆ ಎಂದು ಬರೆದಿದೆ. ಇದನ್ನೂ ಓದಿ: ಕೆನಡಾದಲ್ಲಿ ಗ್ಯಾಂಗ್‌ವಾರ್‌ – ಖಲಿಸ್ತಾನಿ ಭಯೋತ್ಪಾದಕ ಹತ್ಯೆ

    ಕೆನಡಾದ ಪ್ರಧಾನಿ ಟ್ರುಡೋ ಸೋಮವಾರ ಸಂಸತ್ತಿನಲ್ಲಿ ಮಾತನಾಡುತ್ತಾ, ಖಲಿಸ್ತಾನ್ ಟೈಗರ್ ಫೋರ್ಸ್ ಮುಖ್ಯಸ್ಥ ಹರ್ದೀಪ್ ಸಿಂಗ್ ನಿಜ್ಜರ್‌ನ ಮಾರಣಾಂತಿಕ ಗುಂಡಿನ ದಾಳಿಯ ಹಿಂದೆ ಭಾರತೀಯ ಏಜೆಂಟರ ಕೈವಾಡವಿದೆ ಎಂದು ಆರೋಪಿಸಿದ್ದರು. ಆದರೆ ಈ ಆರೋಪವನ್ನು ಭಾರತ ತಳ್ಳಿ ಹಾಕಿದೆ. ನಾವು ತಮ್ಮ ಸಂಸತ್ತಿನಲ್ಲಿ ಕೆನಡಾ ಪ್ರಧಾನಿಯವರ ಹೇಳಿಕೆಯನ್ನು ಗಮನಿಸಿದ್ದೇವೆ ಹಾಗೂ ಅದನ್ನು ತಿರಸ್ಕರಿಸುತ್ತೇವೆ. ಮತ್ತು ಅವರ ವಿದೇಶಾಂಗ ಸಚಿವರ ಹೇಳಿಕೆನ್ನೂ ತಿರಸ್ಕರಿಸುತ್ತೇವೆ ಎಂದು ಭಾರತದ ವಿದೇಶಾಂಗ ಸಚಿವಾಲಯ (MEA) ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಭಾರತ ವಿರೋಧಿ ಪ್ರಚಾರಕ್ಕೆ ಖಲಿಸ್ತಾನ್ ಉಗ್ರರ ಜೊತೆ ಕೈ ಜೋಡಿಸಿದ ಪಾಕ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವೀಸಾ ಅವಧಿ ಮುಗಿದರೂ ಗುಜರಾತ್‌ನಲ್ಲಿ ಅಕ್ರಮ ನೆಲೆ – 45 ಪಾಕಿಸ್ತಾನಿ ಹಿಂದೂಗಳ ಬಂಧನ

    ವೀಸಾ ಅವಧಿ ಮುಗಿದರೂ ಗುಜರಾತ್‌ನಲ್ಲಿ ಅಕ್ರಮ ನೆಲೆ – 45 ಪಾಕಿಸ್ತಾನಿ ಹಿಂದೂಗಳ ಬಂಧನ

    ಗಾಂಧಿನಗರ: ವೀಸಾ (Visa) ಅವಧಿ ಮುಗಿದ ಬಳಿಕವೂ ಗುಜರಾತ್‌ನಲ್ಲಿ (Gujarat) ಅಕ್ರಮವಾಗಿ ನೆಲೆಸಿದ್ದ ಹಿಂದೂ (Hindu)  ಸಮುದಾಯದ 45 ಪಾಕಿಸ್ತಾನದ ಪ್ರಜೆಗಳನ್ನು (pakistani) ಬಂಧಿಸಲಾಗಿದೆ.

    ಗುಜರಾತ್‌ನ ಬನಸ್ಕಾಂತದಲ್ಲಿ ಪಾಕಿಸ್ತಾನಿ ಪ್ರಜೆಗಳ ವೀಸಾ ಮುಗಿದಿದ್ದು, ಅವರು ನಂತರ ದೀರ್ಘಾವಧಿಯ ವೀಸಾಗಾಗಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಇದನ್ನು ತಿರಸ್ಕರಿಸಲಾಗಿದ್ದು, ಅಕ್ರಮವಾಗಿ ನೆಲೆಸಿರುವುದಕ್ಕೆ 45 ಪಾಕಿಸ್ತಾನಿ ಹಿಂದೂಗಳನ್ನು ಬಂಧಿಸಲಾಗಿದೆ.

    ಪಾಕಿಸ್ತಾನಿ ಪ್ರಜೆಗಳನ್ನು ಅಕೋಲಿ ಗ್ರಾಮದಿಂದ ಬಂಧಿಸಲಾಗಿದೆ. ಅವರನ್ನು ಪಾಕಿಸ್ತಾನಕ್ಕೆ ವಾಪಸ್ ಕಳುಹಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಸ್ಥಳೀಯ ಗುಪ್ತಚರ ಬ್ಯೂರೋ ಪೊಲೀಸ್ ಇನ್ಸ್ಪೆಕ್ಟರ್ ಸಂತೋಷ್ ಧೋಬಿ ತಿಳಿಸಿದ್ದಾರೆ. ಇದನ್ನೂ ಓದಿ: ಉತ್ತರಾಖಂಡದಲ್ಲಿ ಕಮರಿಗೆ ಉರುಳಿದ ಬಸ್ – ಏಳು ಮಂದಿ ದುರ್ಮರಣ

    ವರದಿಗಳ ಪ್ರಕಾರ ಈ ಪಾಕಿಸ್ತಾನಿ ಪ್ರಜೆಗಳು ಉತ್ತರಾಖಂಡದ ಹರಿದ್ವಾರಕ್ಕೆ ಭೇಟಿ ನೀಡಲು ಭಾರತಕ್ಕೆ ಆಗಮಿಸಿದ್ದರು. ತಮ್ಮ ಸಂಬಂಧಿಕರನ್ನು ಭೇಟಿಯಾಗಲು ಬಳಿಕ ಅವರು ಬನಸ್ಕಾಂತಕ್ಕೆ ಬಂದರು. ಅವರು ಮಾನ್ಯ ವೀಸಾದಲ್ಲಿ ಕಳೆದ 2 ತಿಂಗಳಿನಿಂದ ಭಾರತದಲ್ಲಿದ್ದರು. ಪ್ರಸ್ತುತ ಅವರ ವೀಸಾಗಳ ಅವಧಿ ಮುಗಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ತುಂಬಿ ಹರಿಯುತ್ತಿರುವ ಡ್ಯಾಂನಲ್ಲಿ ಸಿಲುಕಿದ 10 ಮಂದಿ – ರಕ್ಷಣೆಗೆ ಹರಸಾಹಸ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವೀಸಾ ಮುಗಿದ ವಿದೇಶಿಗರನ್ನು ವಾಪಸ್ ಕಳುಹಿಸಲು ಕ್ರಮ ತೆಗೆದುಕೊಳ್ತೀವಿ: ಪರಮೇಶ್ವರ್

    ವೀಸಾ ಮುಗಿದ ವಿದೇಶಿಗರನ್ನು ವಾಪಸ್ ಕಳುಹಿಸಲು ಕ್ರಮ ತೆಗೆದುಕೊಳ್ತೀವಿ: ಪರಮೇಶ್ವರ್

    ಬೆಂಗಳೂರು: ರಾಜ್ಯದಲ್ಲಿ 754 ವಿದೇಶಿಗರು (Foreigners) ವೀಸಾ (Visa) ಮುಗಿದರೂ ಅಕ್ರಮವಾಗಿ ವಾಸವಾಗಿದ್ದಾರೆ. ವೀಸಾ ಅವಧಿ ಮುಗಿದವರನ್ನು ಶೀಘ್ರವಾಗಿ ವಾಪಸ್ ಕಳುಹಿಸುವ ಕೆಲಸ ಮಾಡುತ್ತೇವೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ (G.Parameshwara) ಹೇಳಿದ್ದಾರೆ.

    ವಿಧಾನ ಪರಿಷತ್ (Legislative Council) ಪ್ರಶ್ನೋತ್ತರ ಕಲಾಪದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿಗರ ಬಗ್ಗೆ ಬಿಜೆಪಿಯ ಗೋಪಿನಾಥ್ ಪ್ರಶ್ನೆ ಕೇಳಿದರು. ಇದಕ್ಕೆ ಉತ್ತರ ನೀಡಿದ ಪರಮೇಶ್ವರ್, ವಿದೇಶಿ ಪ್ರಜೆಗಳು ವಿದ್ಯಾಭ್ಯಾಸ, ಪ್ರವಾಸಕ್ಕೆ ಸೇರಿ ಹಲವು ವಿಚಾರಕ್ಕೆ ರಾಜ್ಯಕ್ಕೆ ಬರುತ್ತಾರೆ. ರಾಜ್ಯದಲ್ಲಿ ಸುಮಾರು 4,890 ವಿದೇಶಿ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಲು ಬಂದಿದ್ದಾರೆ. ಇದಲ್ಲದೆ ಒಟ್ಟಾರೆ ಬೆಂಗಳೂರು (Bengaluru) ನಗರ ಮತ್ತು ಉಳಿದ ಜಿಲ್ಲೆಯಲ್ಲಿ ಒಟ್ಟು 8,862 ವಿದೇಶಿಯರು ವಿದೇಶಿ ವೀಸಾದ ಮೇಲೆ ನೆಲೆಸಿದ್ದಾರೆ. ಇದರಲ್ಲಿ 754 ವಿದೇಶಿಯರು ವೀಸಾ ಮುಕ್ತಾಯವಾದರೂ ಇಲ್ಲೇ ಇದ್ದಾರೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ನನ್ನ ಮೇಲೆ ಲಾರಿ ಹತ್ತಿಸ್ತೀನಿ ಅಂತಾರೆ: ವಿಧಾನಸಭೆಯಲ್ಲಿ ಶಾಸಕಿ ಅಳಲು

    ವೀಸಾ ಅವಧಿ ಮುಗಿದವರನ್ನು ಶೀಘ್ರವಾಗಿ ವಾಪಸ್ ಕಳುಹಿಸುವ ಕೆಲಸ ಮಾಡುತ್ತೇವೆ. ವಿದೇಶಿ ಪ್ರಜೆಗಳ ಮೇಲೆ ಅಕ್ರಮ ಚಟುವಟಿಕೆಗಳ ವಿಚಾರವಾಗಿ ರಾಜ್ಯದಲ್ಲಿ 502 ದೂರು ದಾಖಲಾಗಿದೆ. ಆಫ್ರಿಕಾ (Africa) ಮತ್ತು ನೈಜೀರಿಯಾದಿಂದ (Nigeria) ಬಂದವರೇ ಇಂತಹ ಪ್ರಕರಣದಲ್ಲಿ ಜಾಸ್ತಿ ಭಾಗಿಯಾಗಿದ್ದಾರೆ. ಇವರು ವೀಸಾ ಮುಗಿದ ಮೇಲೂ ಅವರೇ ಕೇಸ್ ಹಾಕಿಸಿಕೊಂಡು ಇಲ್ಲೇ ಇರೋ ರೀತಿ ಪ್ಲ್ಯಾನ್ ಮಾಡುತ್ತಾರೆ. ಹೀಗಿದ್ದರೂ ನಮ್ಮ ಇಲಾಖೆ ಅವರ ಮೇಲೆ ನಿಗಾ ಇಡುವ ಕೆಲಸ ಮಾಡುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಪೆನ್‌ಡ್ರೈವ್‌ ಬಿಡುಗಡೆಗೆ ಕಾಂಗ್ರೆಸ್ಸಿನವರಿಂದಲೇ ತಡೆ – ಕೈ ಒಳಜಗಳಕ್ಕೆ ಬೆಂಕಿ ಹಚ್ಚಿದ ಹೆಚ್‌ಡಿಕೆ

    ಪ್ರತಿ ಠಾಣೆಗಳಿಗೂ ಇವರ ಮೇಲೆ ನಿಗಾ ಇಡಲು ಸೂಚನೆ ನೀಡಲಾಗಿದೆ. ಕೆಲ ಭಾಗದಲ್ಲಿ ವಿದೇಶಿ ಪ್ರಜೆಗಳಿಂದ ಗಲಾಟೆಗಳು ಆಗಿವೆ. ಹೀಗಾಗಿ ವೀಸಾ ಮುಗಿದವರನ್ನು ವಾಪಸ್ ಕಳುಹಿಸುವ ಕೆಲಸ ಕಟ್ಟುನಿಟ್ಟಾಗಿ ಮಾಡುತ್ತೇವೆ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: 15 ದಿನದಲ್ಲಿ 30 ಜನರು ಸಸ್ಪೆಂಡ್: ಮುನಿರತ್ನ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೆಂಗಳೂರಲ್ಲೇ ಸಿಗಲಿದೆ ಅಮೆರಿಕ ವೀಸಾ – ಸಿಲಿಕಾನ್ ಸಿಟಿಯಲ್ಲಿ ರಾಯಭಾರ ಕಚೇರಿ ತೆರೆಯಲು US ನಿರ್ಧಾರ

    ಬೆಂಗಳೂರಲ್ಲೇ ಸಿಗಲಿದೆ ಅಮೆರಿಕ ವೀಸಾ – ಸಿಲಿಕಾನ್ ಸಿಟಿಯಲ್ಲಿ ರಾಯಭಾರ ಕಚೇರಿ ತೆರೆಯಲು US ನಿರ್ಧಾರ

    – ಅಮೆರಿಕ ವೀಸಾಗಾಗಿ ಕನ್ನಡಿಗರು ಇನ್ನು ಚೆನ್ನೈಗೆ ಹೋಗಬೇಕಾಗಿಲ್ಲ

    ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಅಮೆರಿಕ (America) ಭೇಟಿಯಿಂದ ಕನ್ನಡಿಗರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಬೆಂಗಳೂರು (Bengaluru) ಹಾಗೂ ಅಹಮದಾಬಾದ್‌ನಲ್ಲಿ (Ahmedabad) ತನ್ನ ರಾಯಭಾರ ಕಚೇರಿ (Consulate) ತೆರೆಯಲು ಅಮೆರಿಕ ನಿರ್ಧರಿಸಿದೆ.

    ಅಮೆರಿಕವು ಬೆಂಗಳೂರು ಹಾಗೂ ಅಹಮದಾಬಾದ್‌ನಲ್ಲೂ 2 ಹೊಸ ರಾಯಭಾರ ಕಚೇರಿಗಳನ್ನು ತೆರೆಯಲು ಉದ್ದೇಶಿಸಿದ್ದು, ಈ ಮೂಲಕ ಭಾರತದ ಜನರೊಂದಿಗಿನ ಸಂಬಂಧವನ್ನು ಹೆಚ್ಚಿಸಲು ಮುಂದಾಗಿರುವುದಾಗಿ ಶ್ವೇತಭವನದ ಹಿರಿಯ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.

    ಕಳೆದ ವರ್ಷ ಅಮೆರಿಕ ಭಾರತೀಯ ವಿದ್ಯಾರ್ಥಿಗಳಿಗೆ ಸುಮಾರು 1,25,000 ದಾಖಲೆಯ ವೀಸಾಗಳನ್ನು ನೀಡಿದೆ. ದೇಶದಲ್ಲಿ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ 20% ರಷ್ಟು ಹೆಚ್ಚಳವಾಗಿದ್ದು, ಅಮೆರಿಕದಲ್ಲೇ ಅತಿ ದೊಡ್ಡ ವಿದೇಶಿ ವಿದ್ಯಾರ್ಥಿ ಸಮುದಾಯವಾಗಲಿದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಮೈಸೂರಿನ ಶ್ರೀಗಂಧದ ಪೆಟ್ಟಿಗೆಯಲ್ಲಿ ಬೈಡನ್‌ಗೆ ಉಡುಗೊರೆ – ಮೋದಿ ಕೊಟ್ಟ ಗಿಫ್ಟ್ ಬಾಕ್ಸ್‌ನಲ್ಲಿ ಏನಿದೆ?

    ಅಮೆರಿಕದ ವಾಷಿಂಗ್ಟನ್, ನ್ಯೂಯಾರ್ಕ್, ಸ್ಯಾನ್ ಫ್ರಾನ್ಸಿಸ್ಕೋ, ಚಿಕಾಗೋ, ಹೂಸ್ಟನ್ ಹಾಗೂ ಅಟ್ಲಾಂಟಾದಲ್ಲಿ ಭಾರತ ತನ್ನ ಒಟ್ಟು 5 ರಾಯಭಾರ ಕಚೇರಿಗಳನ್ನು ಹೊಂದಿದೆ. ಭಾರತದಲ್ಲಿ ಪ್ರಸ್ತುತ ನವದೆಹಲಿ, ಮುಂಬೈ, ಕೋಲ್ಕತ್ತಾ, ಚೆನ್ನೈ, ಹಾಗೂ ಹೈದರಾಬಾದ್‌ನಲ್ಲಿ ಅಮೆರಿಕದ ರಾಯಭಾರ ಕಚೇರಿಗಳಿವೆ.

    ನವದೆಹಲಿಯಲ್ಲಿರುವ ಅಮೆರಿಕದ ರಾಯಭಾರ ಕಚೇರಿ ವಿಶ್ವದ ಅತಿದೊಡ್ಡ ರಾಜತಾಂತ್ರಿಕ ಕಾರ್ಯಾಚರಣೆಗಳಲ್ಲಿ ಒಂದಾಗಿದೆ. ಇಲ್ಲಿಯವರೆಗೆ ಕರ್ನಾಟಕದ ಜನತೆ ಅಮೆರಿಕ ಪ್ರವಾಸ ಕೈಗೊಳ್ಳಲು ವೀಸಾ ಪಡೆಯಲು ಚೆನ್ನೈ ಅಥವಾ ಹೈದರಾಬಾದ್ ಅಲೆಯುವುದು ಅನಿವಾರ್ಯವಾಗಿತ್ತು. ಇದೀಗ ಬೆಂಗಳೂರಿನಲ್ಲೂ ಅಮೆರಿಕದ ರಾಯಭಾರ ಕಚೇರಿ ತೆರೆದರೆ ಪ್ರಯಾಣಿಕರು ಇತರ ರಾಜ್ಯಗಳಿಗೆ ಹೋಗುವ ಅನಿವಾರ್ಯತೆ ಇರುವುದಿಲ್ಲ. ಇದನ್ನೂ ಓದಿ: ವಾಷಿಂಗ್ಟನ್‌ನಲ್ಲಿ ಅದ್ಧೂರಿ ಸ್ವಾಗತ – ಮೋದಿಗಾಗಿ ಖಾದ್ಯ ತಯಾರಿಸಿದ್ದಾರೆ ಜಿಲ್ ಬೈಡೆನ್

  • ಅಮೆರಿಕಕ್ಕೆ ಹೋಗಲ್ಲ, ಭಾರತದಲ್ಲೇ ಇರ್ತೀನಿ, ದೇಶವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ: ಚೇತನ್

    ಅಮೆರಿಕಕ್ಕೆ ಹೋಗಲ್ಲ, ಭಾರತದಲ್ಲೇ ಇರ್ತೀನಿ, ದೇಶವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ: ಚೇತನ್

    ಬೆಂಗಳೂರು: ದೇಶ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂಬ ಕಾರಣ ನೀಡಿ ನಟ, ಸಾಮಾಜಿಕ ಹೋರಾಟಗಾರ ಚೇತನ್ (Chetan) ಅವರ ವೀಸಾವನ್ನು (Visa) ಕೇಂದ್ರ ಸರ್ಕಾರ ರದ್ದು ಮಾಡಿದೆ. ಈ ಹಿನ್ನೆಲೆ ಸುದ್ದಿಗೋಷ್ಠಿ ನಡೆಸಿರುವ ಚೇತನ್ ಉದ್ದೇಶಪೂರ್ವಕವಾಗಿ ನನ್ನ ಮೇಲೆ ಈ ರೀತಿ ಪಿತೂರಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಚೇತನ್, ನಾನು ಹುಟ್ಟಿ, ಓದಿದ್ದು ಅಮೆರಿಕದಲ್ಲಿ (America) ಆದರೂ ಕಾರ್ಯನಿರ್ವಹಿಸಲು ಭಾರತಕ್ಕೆ (India) ಬಂದೆ. ಸಿನಿಮಾ ಸೇರಿದಂತೆ ಸಾಕಷ್ಟು ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಿದ್ದೇನೆ. ಹೋರಾಟ ಮಾಡಿ ಆದಿವಾಸಿಗಳಿಗೆ 528 ಮನೆಗಳನ್ನು ಕಟ್ಟಿಸಿದ್ದೇನೆ. ನನ್ನ ಸಿದ್ಧಾಂತ, ಅಂಬೇಡ್ಕರ್ ವಾದ, ಪೆರಿಯರ್ ವಾದ ಸರ್ಕಾರಕ್ಕೆ ಇಷ್ಟವಾಗಿಲ್ಲ ಎಂದು ಈ ರೀತಿ ಕ್ರಮ ಕೈಗೊಂಡಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

    ಬ್ರಾಹ್ಮಣ್ಯ ಲಾಬಿ ಎನ್ನುವ ಮಾತು ಹೇಳಿದ್ದಕ್ಕೆ ಕೇಸ್ ಹಾಕಿದ್ರು. ಗನ್ ಮ್ಯಾನ್‌ನನ್ನು ಒಂದೂವರೆ ವರ್ಷದ ಹಿಂದೆಯೇ ತೆಗೆದಿದ್ದಾರೆ. ಒಂದು ಸತ್ಯದ ಟ್ವೀಟ್ ಮಾಡಿದ್ದಕ್ಕೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡಲಾಗಿದೆ ಎಂದು ಹೇಳಿ 3 ದಿನ ಜೈಲಿಗೆ ಕಳುಹಿಸಿದರು. ಸಾಗರೋತ್ತರ ವೀಸಾ (OCI) ನನಗೆ ನೀಡಿದ್ದಾರೆ. ಇದರಲ್ಲಿ ಮತ ಹಾಕುವುದು, ಚುನಾವಣೆಗೆ ನಿಲ್ಲುವುದು, ಸರ್ಕಾರಿ ನೌಕರನಾಗಿ ಕೆಲಸ ಮಾಡುವುದು ಬಿಟ್ಟರೆ ಬೇರೆ ಎಲ್ಲಾ ಹಕ್ಕು ನನಗೆ ಇದೆ ಎಂದು ತಿಳಿಸಿದರು.

    ಕಳೆದ 10 ತಿಂಗಳ ಹಿಂದೆ ಕ್ರಿಮಿನಲ್ ಕೆಲಸಗಳಲ್ಲಿ ಭಾಗಿಯಾಗುತ್ತಿದ್ದೀರಿ, ನಿಮ್ಮ ವೀಸಾ ರದ್ದು ಮಾಡಬಹುದು ಎಂಬ ಶೋಕಾಸ್ ನೋಟಿಸ್ ನೀಡಿದ್ದರು. ಆಗ ಗೃಹ ಇಲಾಖೆಗೆ ಹೋಗಿ ಎಲ್ಲಾ ದಾಖಲೆ ಸಲ್ಲಿಸಿ ಬಂದಿದ್ದೆ. ದೇಶವಿರೋಧಿ ಚುಟುವಟಿಕೆಯಲ್ಲಿ ನಾನು ಎಲ್ಲಿ ಭಾಗಿಯಾಗಿದ್ದೇನೆ? ಉದ್ದೇಶಪೂರ್ವಕವಾಗಿ ನನ್ನ ಮೇಲೆ ಈ ರೀತಿ ಪಿತೂರಿ ಮಾಡುತ್ತಿದ್ದಾರೆ. ನಾನು ಈ ದೇಶದಲ್ಲಿ ಇರಬಾರದು ಅಂತ ವೀಸಾ ರದ್ದುಗೊಳಿಸಿದ್ದಾರೆ. ವಾಕ್ ಸ್ವಾತಂತ್ರವನ್ನು ಕಿತ್ತು, ಜೈಲಿಗೆ ಹಾಕುವುದಲ್ಲದೇ ನಾನು ದೇಶದಲ್ಲೂ ಇರಬಾರದು ಎಂದು ವೀಸಾ ರದ್ದು ಮಾಡಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ನಟ ಚೇತನ್‌ ಭಾರತದ ವೀಸಾ ರದ್ದು

    ನಾನು ವಕೀಲರ ಬಳಿ ಮಾತನಾಡಿದ್ದೇನೆ. ಇದಕ್ಕೆ ವಿರುದ್ಧವಾಗಿ ಸ್ಟೇ ತರುತ್ತೇನೆ. ನಾನು ಕಾನೂನಿನ ಹೋರಾಟ ಮಾಡುತ್ತೇನೆ. ನನಗೆ 15 ದಿನದವರೆಗೆ ಸಮಯ ಕೊಟ್ಟಿದ್ದಾರೆ. 15 ದಿನದೊಳಗೆ ನಾನು ಸ್ಟೇ ತರುತ್ತೇನೆ ಎಂದು ತಿಳಿಸಿದರು.

    ಭಾರತದಲ್ಲಿ 18 ವರ್ಷದಿಂದ ಇದ್ದೇನೆ. ಜಾನಪದ ರಂಗಭೂಮಿ ಮತ್ತು ಅದರಿಂದ ಸಾಮಾಜಿಕ ಬದಲಾವಣೆ ಎನ್ನುವ ವಿಚಾರದ ಮೇಲೆ ಸಂಶೋಧನೆ ಅನುದಾನ ತೆಗೆದುಕೊಂಡು ಭಾರತಕ್ಕೆ 2005 ರಲ್ಲಿ ಬಂದೆ. 2015 ರಿಂದ ಪೂರ್ಣಪ್ರಮಾಣದಲ್ಲಿ ಭಾರತದಲ್ಲಿಯೇ ಇದ್ದೇನೆ. ನನ್ನ ತಂದೆ ಮತ್ತು ತಾಯಿ ಭಾರತದವರೇ ಆಗಿರುವುದರಿಂದ 2018 ರಲ್ಲಿ ನನಗೆ ಒಸಿಐ ಕೊಟ್ಟಿದ್ದಾರೆ. ನನ್ನ ಬಳಿ ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್ ಎಲ್ಲವೂ ಇದೆ. ನಾನು ಕೂಡಾ ತೆರಿಗೆಯನ್ನು ಇದೇ ದೇಶಕ್ಕೆ ಕಟ್ಟುತ್ತೇನೆ. ಆದರೆ ಈ ತಕ್ಷಣವೇ ಒಸಿಐ ರದ್ದು ಮಾಡಲಾಗಿದೆ ಎಂದು ನೋಟಿಸ್ ನೀಡಿದ್ದಾರೆ. ಇದರಲ್ಲಿ ಯಾವುದೇ ಅರ್ಥ ಇಲ್ಲ. ನಾನು ಇದೇ ದೇಶದವನು, ನನಗೆ ಅಮೆರಿಕಕ್ಕೆ ಹೋಗುವ ಮನಸ್ಸಿಲ್ಲ ಎಂದು ಚೇತನ್ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ 3ನೇ ಪಟ್ಟಿ ರಿಲೀಸ್‌ – ಸಿದ್ದರಾಮಯ್ಯ ಕೋಲಾರದಿಂದ ಔಟ್‌, ಉಮಾಶ್ರೀಗೂ ಕೊಕ್‌

  • ಮೋದಿ ಭೇಟಿ ಬೆನ್ನಲ್ಲೇ ಭಾರತೀಯರಿಗೆ 3,000 ವೀಸಾ ಯೋಜನೆಗೆ ಬ್ರಿಟನ್‌ ಪ್ರಧಾನಿ ಚಾಲನೆ

    ಮೋದಿ ಭೇಟಿ ಬೆನ್ನಲ್ಲೇ ಭಾರತೀಯರಿಗೆ 3,000 ವೀಸಾ ಯೋಜನೆಗೆ ಬ್ರಿಟನ್‌ ಪ್ರಧಾನಿ ಚಾಲನೆ

    ಲಂಡನ್‌: ಜಿ20 ಶೃಂಗಸಭೆ (G20 Summit) ವೇಳೆ ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಬೆನ್ನಲ್ಲೇ ಬ್ರಿಟನ್‌ ಪ್ರಧಾನಿ ರಿಷಿ ಸುನಕ್ (Rishi Sunak) ಅವರು ಪ್ರತಿ ವರ್ಷ ಭಾರತದಿಂದ ಯುವ ವೃತ್ತಿಪರರಿಗೆ ಯುಕೆಯಲ್ಲಿ ಕೆಲಸ ಮಾಡಲು 3,000 ವೀಸಾಗಳಿಗೆ (Visa) ಚಾಲನೆ ನೀಡಿದ್ದಾರೆ.

    ಇಂದು ಯುಕೆ-ಭಾರತ ಯುವ ವೃತ್ತಿಪರರ ಯೋಜನೆಯನ್ನು ದೃಢೀಕರಿಸಲಾಗಿದೆ. 18-30 ವರ್ಷ ವಯಸ್ಸಿನ ಪದವಿ-ಶಿಕ್ಷಿತ ಭಾರತೀಯ ಪ್ರಜೆಗಳಿಗೆ ಯುಕೆಗೆ ಬರಲು ಮತ್ತು ಎರಡು ವರ್ಷಗಳವರೆಗೆ ಕೆಲಸ ಮಾಡಲು 3,000 ವೀಸಾಗಳನ್ನು ನೀಡುತ್ತದೆ ಎಂದು ಯುಕೆ ಪ್ರಧಾನ ಮಂತ್ರಿ ಕಚೇರಿ ತಿಳಿಸಿದೆ. ಇದನ್ನೂ ಓದಿ: ಭಾರತದಲ್ಲಿ ಟ್ವಿಟ್ಟರ್‌ ತುಂಬಾ ನಿಧಾನ – ಎಲಾನ್‌ ಮಸ್ಕ್‌

    17ನೇ ಆವೃತ್ತಿಯ ಜಿ20 ಶೃಂಗಸಭೆಯ ಸಂದರ್ಭದಲ್ಲಿ ಸುನಕ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಕೆಲವೇ ಗಂಟೆಗಳ ನಂತರ ಡೌನಿಂಗ್ ಸ್ಟ್ರೀಟ್ ರೀಡೌಟ್‌ನಲ್ಲಿ ಈ ಪ್ರಕಟಣೆ ಹೊರಬಿದ್ದಿದೆ. ಕಳೆದ ತಿಂಗಳು ಭಾರತೀಯ ಮೂಲದ ವ್ಯಕ್ತಿಯೊಬ್ಬರು ಬ್ರಿಟಿಷ್ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಇದು ಅವರ ಮೊದಲ ಸಭೆಯಾಗಿದೆ.

    ಈ ಯೋಜನೆಯು ಭಾರತದೊಂದಿಗಿನ ನಮ್ಮ ದ್ವಿಪಕ್ಷೀಯ ಸಂಬಂಧ ಮತ್ತು ಎರಡೂ ದೇಶಗಳ ಆರ್ಥಿಕತೆಯನ್ನು ಬಲಪಡಿಸಲು ಸಹಕಾರಿಯಾಗಿದೆ. ಇಂಡೋ-ಪೆಸಿಫಿಕ್ ಪ್ರದೇಶದೊಂದಿಗೆ ಬಲವಾದ ಸಂಪರ್ಕಗಳನ್ನು ರೂಪಿಸುವ UKಯ ಬದ್ಧತೆಗೆ ಮಹತ್ವದ ಸಾಕ್ಷಿಯಾಗಲಿದೆ ಎಂದು ಡೌನಿಂಗ್ ಸ್ಟ್ರೀಟ್ ಹೇಳಿಕೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಮೆಟ್ಟಿಲು ಹತ್ತುವಾಗ ಎಡವಿದ ಜೋ ಬೈಡನ್ – ಮುಂದೇನಾಯ್ತು ಗೊತ್ತಾ?

    ಇಂಡೋ-ಪೆಸಿಫಿಕ್ ಪ್ರದೇಶದ ಇತರೆ ದೇಶಕ್ಕಿಂತ ಯುಕೆ ಭಾರತದೊಂದಿಗೆ ಹೆಚ್ಚಿನ ಸಂಪರ್ಕ ಹೊಂದಿದೆ. UKಯಲ್ಲಿರುವ ಎಲ್ಲಾ ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ಪೈಕಿ ಸುಮಾರು ಕಾಲು ಭಾಗದಷ್ಟು ಜನರು ಭಾರತದವರಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮತದಾರರ ಪಟ್ಟಿಯಲ್ಲಿ ಪಾಕಿಸ್ತಾನಿ ಮಹಿಳೆಯ ಹೆಸರು!

    ಮತದಾರರ ಪಟ್ಟಿಯಲ್ಲಿ ಪಾಕಿಸ್ತಾನಿ ಮಹಿಳೆಯ ಹೆಸರು!

    ಲಕ್ನೋ: ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಉತ್ತರ ಪ್ರದೇಶದ ಮೊರಾಬಾದ್‍ನಲ್ಲಿ ಪಾಕಿಸ್ತಾನಿ (Pakistan) ಮಹಿಳೆಯ (Woman) ಹೆಸರು ಮತದಾರರ ಪಟ್ಟಿಯಲ್ಲಿ (Voter List) ಕಾಣಿಸಿಕೊಂಡಿದೆ.

    ಪಾಕಿಸ್ತಾನಿ ಮಹಿಳೆ ಸಾಬಾ ಪರ್ವೀನ್ ಎಂಬಾಕೆ 2005ರಲ್ಲಿ ಅಹ್ಮದ್ ಎಂಬಾತನನ್ನು ವಿವಾಹವಾಗಿದ್ದಳು. ಅದಾದ ಬಳಿಕ ಆಕೆ ಮೊರಾಬಾದ್‍ನಲ್ಲಿ ಪಾಕ್ಬರಾ ನಗರ ಪಂಚಾಯತ್ ಪ್ರದೇಶದಲ್ಲಿ ನೆಲೆಸಿದ್ದರು. ಆದರೆ ಆಕೆ ಭಾರತದಲ್ಲಿ ನೆಲೆಸಲು ದೀರ್ಘಾವಧಿ ವೀಸಾವನ್ನು (Visa) ಪಡೆದಿದ್ದಳು. ಈ ಹಿನ್ನೆಲೆಯಲ್ಲಿ ಅವಳಿಗೆ ಮತದಾನವನ್ನು ಮಾಡುವ ಹಕ್ಕಿಲ್ಲ. ಆದರೂ ಇವರನ್ನು ಮೊರಾಬಾದ್‍ನ ಮತದಾರರ ಪಟ್ಟಿಯಲ್ಲಿ ಸೇರಿಸಲಾಗಿರುವ ವಿಷಯ ಬೆಳಕಿಗೆ ಬಂದಿದೆ.

    ಇತ್ತೀಚೆಗೆ ಮತದಾರರ ಪಟ್ಟಿಯ ವಿಚಾರಣೆ ನಡೆಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. 2017ರಲ್ಲಿ ನಗರ ಪಂಚಾಯಿತಿ ಚುನಾವಣೆ ನಡೆದಾಗ ಆಕೆಯ ಹೆಸರು ಮತದಾರರ ಪಟ್ಟಿಯಲ್ಲಿ ಸೇರಿತ್ತು. ಆದರೆ, ನಿಯಮಗಳ ಪ್ರಕಾರ ಆಕೆಯ ಹೆಸರನ್ನು ಅದರಲ್ಲಿ ಸೇರಿಸಲು ಸಾಧ್ಯವಿರಲಿಲ್ಲ. ಇದನ್ನೂ ಓದಿ: ಮಂಡ್ಯದಲ್ಲಿ ರಸ್ತೆ ಗುಂಡಿಗೆ ನಿವೃತ್ತ ಯೋಧ ಬಲಿ

    ಇದು ಬೆಳಕಿಗೆ ಬಂದ ತಕ್ಷಣ ಆಕೆಯ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಜೊತೆಗೆ ಇಂತಹ ಘಟನೆ ಮರುಕಳಿಸದಂತೆ ಇತರೆ ಕಸರತ್ತು ನಡೆಸಲಾಗುತ್ತಿದೆ. ಘಟನೆಗೆ ಸಂಬಂಧಿಸಿ ಅಲ್ಲಿನ ಜಿಲ್ಲಾಧಿಕಾರಿ ಮಾತನಾಡಿದ್ದು, ಪ್ರಕರಣ ದೃಢಪಟ್ಟ ನಂತರ ಅದಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಶಿರಾಡಿ ಘಾಟ್ ರಸ್ತೆ ದುರಸ್ಥಿಗೆ ಮನವಿ- ಉದ್ಯಮಿಗಳಿಂದ ಸಂಸದ ವೀರೇಂದ್ರ ಹೆಗ್ಡೆಗೆ ಪತ್ರ

    Live Tv
    [brid partner=56869869 player=32851 video=960834 autoplay=true]

  • 2 ವರ್ಷಗಳ ನಂತರ ಭಾರತದ ವಿದ್ಯಾರ್ಥಿಗಳಿಗೆ ವೀಸಾ ನೀಡಲು ಚೀನಾ ಅನುಮತಿ

    2 ವರ್ಷಗಳ ನಂತರ ಭಾರತದ ವಿದ್ಯಾರ್ಥಿಗಳಿಗೆ ವೀಸಾ ನೀಡಲು ಚೀನಾ ಅನುಮತಿ

    ಬೀಜಿಂಗ್: ಕೊನೆಗೂ 2 ವರ್ಷಗಳ ನಂತರ ಭಾರತದ ವಿದ್ಯಾರ್ಥಿಗಳಿಗೆ ವೀಸಾ ನೀಡಲು ಚೀನಾ ನಿರ್ಧರಿಸಿದೆ.

    ಕೋವಿಡ್ ಹೆಚ್ಚಳವಾದ ಕಾರಣದಿಂದಾಗಿ ಚೀನಾ ಭಾರತದ ವಿದ್ಯಾರ್ಥಿಗಳಿಗೆ ವೀಸಾ ನೀಡಲು ನಿರ್ಬಂಧ ವಿಧಿಸಿತ್ತು. ಸದ್ಯ ಚೀನಾದ ಕಾಲೇಜುಗಳಿಗೆ ಹೊಸದಾಗಿ ದಾಖಲಾದ ವಿದ್ಯಾರ್ಥಿಗಳು ಮತ್ತು ತಮ್ಮ ಅಧ್ಯಯನವನ್ನು ಪುನರಾರಂಭಿಸಲು, ಚೀನಾಕ್ಕೆ ಹಿಂದಿರುಗುವ ವಿದ್ಯಾರ್ಥಿಗಳಿಗೆ ಹಾಗೂ ಉನ್ನತ ಶೈಕ್ಷಣಿಕ ಶಿಕ್ಷಣಕ್ಕಾಗಿ ದೀರ್ಘಾವಧಿಯ ಅಧ್ಯಯನ ಕೈಗೊಳ್ಳಲು ಚೀನಾಕ್ಕೆ ಹೋಗುವ ವಿದ್ಯಾರ್ಥಿಗಳಿಗೆ X1-ವೀಸಾ ನೀಡಲು ನಿರ್ಧರಿಸಿದೆ. ಇದನ್ನೂ ಓದಿ: ಬನಶಂಕರಿ ದೇವಸ್ಥಾನ ಅಭಿವೃದ್ಧಿ – ಮಾಸ್ಟರ್ ಪ್ಲಾನ್‌ಗೆ ಶಶಿಕಲಾ ಜೊಲ್ಲೆ ಸೂಚನೆ

    ಚೀನಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಏಷ್ಯನ್ ವ್ಯವಹಾರಗಳ ಇಲಾಖೆಯ ಕೌನ್ಸಿಲರ್ ಜಿ ರಾಂಗ್ ಈ ಕುರಿತು ಟ್ವೀಟ್ ಮಾಡಿದ್ದಾರೆ. ಭಾರತೀಯ ವಿದ್ಯಾರ್ಥಿಗಳಿಗೆ ಅಭಿನಂದನೆಗಳು, ನಿಮ್ಮ ತಾಳ್ಮೆಯು ಸಾರ್ಥಕವಾಗಿದೆ. ನಾನು ನಿಜವಾಗಿಯೂ ನಿಮ್ಮ ಉತ್ಸಾಹ ಮತ್ತು ಸಂತೋಷವನ್ನು ಹಂಚಿಕೊಳ್ಳಬಲ್ಲೆ. ಚೀನಾಗೆ ಮರಳಿ ಸ್ವಾಗತ ಎಂದು ಟ್ವೀಟ್ ಮಾಡಿದ್ದಾರೆ.

    ವಿದ್ಯಾರ್ಥಿಗಳು, ಉದ್ಯಮಿಗಳು ಮತ್ತು ಚೀನಾದಲ್ಲಿ ಕೆಲಸ ಮಾಡುವವರ ಕುಟುಂಬಗಳಿಗೆ ವೀಸಾಗಳನ್ನು ನೀಡುವ ಸಲುವಾಗಿ ನವದೆಹಲಿಯಲ್ಲಿರುವ ಚೀನಾ ರಾಯಭಾರಿ ಕಚೇರಿಯ ಪ್ರಕಟಣೆಯನ್ನು ಅವರ ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

    ಸಾಂದರ್ಭಿಕ ಚಿತ್ರ

    ಪ್ರಕಟಣೆಯ ಪ್ರಕಾರ, ಕೋವಿಡ್ ವೀಸಾ ನಿರ್ಬಂಧಗಳಿಂದಾಗಿ 23,000 ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು, ಹೆಚ್ಚಾಗಿ ವೈದ್ಯಕೀಯ ವಿದ್ಯಾರ್ಥಿಗಳು ತಮ್ಮ ಅಧ್ಯಯನವನ್ನು ಮುಂದುವರಿಸಲು ಚೀನಾಕ್ಕೆ ಮರಳಲು ಸಿದ್ಧರಿರುವ ವಿದ್ಯಾರ್ಥಿಗಳ ಹೆಸರುಗಳ ಪಟ್ಟಿಯನ್ನು ನೀಡುವಂತೆ ಭಾರತ ಸರ್ಕಾರಕ್ಕೆ ಕೇಳಿದೆ. ಹೀಗಾಗಿ ಭಾರತ ಸರ್ಕಾರ ಕೂಡ ನೂರಾರು ವಿದ್ಯಾರ್ಥಿಗಳ ಪಟ್ಟಿಯನ್ನು ಸಲ್ಲಿಸಿದೆ. ಇದನ್ನೂ ಓದಿ: ಹಣದಾಸೆಗೆ ಮದುವೆ – ಅನಾರೋಗ್ಯದ ನೆಪ ಹೇಳಿ, ಹಣ ದೋಚಿಕೊಂಡು ಸೊಸೆ ಎಸ್ಕೇಪ್

    ಚೀನಾಗೆ ತೆರಳುವ ವಿದ್ಯಾರ್ಥಿಗಳು ವೀಸಾ ಪಡೆಯಬೇಕಾದರೆ, ಹೊಸ ವಿದ್ಯಾರ್ಥಿಗಳು ಚೀನಾದ ವಿಶ್ವವಿದ್ಯಾನಿಲಯದಿಂದ ನೀಡಲಾದ ಮೂಲ ಪ್ರವೇಶ ಪತ್ರವನ್ನು ಭಾರತದಲ್ಲಿನ ಚೀನಾ ರಾಯಬಾರಿ ಕಚೇರಿಗೆ ಸಲ್ಲಿಸಬೇಕು. ಹಳೆಯ ವಿದ್ಯಾರ್ಥಿಗಳು ಚೀನಾದ ವಿಶ್ವವಿದ್ಯಾನಿಲಯವು ನೀಡಿದ ಕ್ಯಾಂಪಸ್‌ಗೆ ಹಿಂತಿರುಗುವ ಪ್ರಮಾಣಪತ್ರವನ್ನೂ ಸಲ್ಲಿಸಬೇಕಾಗುತ್ತದೆ ಎಂದು ಪ್ರಕಟಣೆ ಹೇಳಿದೆ.

    ಅಧಿಕೃತ ಮೂಲಗಳ ಪ್ರಕಾರ, 1,000 ಕ್ಕೂ ಹೆಚ್ಚು ಹಳೆಯ ಭಾರತೀಯ ವಿದ್ಯಾರ್ಥಿಗಳು ತಮ್ಮ ಅಧ್ಯಯನವನ್ನು ಮುಂದುವರೆಸಲು ಚೀನಾಗೆ ತೆರಳಲು ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಕೆನಡಾಕ್ಕೆ ಹೋಗಲು ವೀಸಾ ವಿಳಂಬ- ಮನನೊಂದ ವಿದ್ಯಾರ್ಥಿ ಆತ್ಮಹತ್ಯೆ

    ಕೆನಡಾಕ್ಕೆ ಹೋಗಲು ವೀಸಾ ವಿಳಂಬ- ಮನನೊಂದ ವಿದ್ಯಾರ್ಥಿ ಆತ್ಮಹತ್ಯೆ

    ಚಂಡೀಗಢ: ಕೆನಡಾಕ್ಕೆ ಹೋಗಲು ವೀಸಾ ವಿಳಂಬದಿಂದ ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಹರಿಯಾಣದ ಕುರುಕ್ಷೇತ್ರ ಜಿಲ್ಲೆಯಲ್ಲಿ ನಡೆದಿದೆ.

    ಶಹಬಾದ್‍ನ ಗೂರ್ಖಾ ಗ್ರಾಮದ ವಿಕೇಶ್ ಸೈನಿ ಅಲಿಯಾಸ್ ದೀಪಕ್ (23) ಮೃತ ಯುವಕ. ದೀಪಕ್ ವೀಸಾ ಗುರುವಾರವೇ ಬಂದಿತ್ತು. ಆದರೆ ವೀಸಾ ಕಾಣೆಯಾಗಿರುವುದರಿಂದ ಆತನಿಗೆ ಯಾರು ವೀಸಾ ಬಂದಿರುವ ವಿಷಯವನ್ನು ತಿಳಿಸಿರಲಿಲ್ಲ. ಆದರೆ ದೀಪಕ್ ತನ್ನ ಸ್ನೇಹಿತನಿಗೆ ವೀಸಾ ಬಂದಿದ್ದರೂ, ತನಗೆ ಇನ್ನೂ ವೀಸಾ ಬಂದಿಲ್ಲ ಎಂದು ಮನನೊಂದು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಘಟನೆ ಸಂಬಂಧ ದೀಪಕ್ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ದೀಪಕ್‍ನ ಚಪ್ಪಲಿಗಳು ಮತ್ತು ಬೈಕ್ ನರ್ವಾನಾ ಬ್ರಾಂಚ್ ಕೆರೆ ಬಳಿ ಪತ್ತೆ ಆಗಿದೆ. ನಂತರ ಅಲ್ಲೆ ಹುಡುಕಿದಾಗ ಮೃತದೇಹವು ಅಲ್ಲೇ ಪತ್ತೆ ಆಗಿದೆ. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಘಟನೆ ಸಂಬಂಧಿಸಿ ಪೊಲೀಸರು ವಿಚಾರಣೆ ಆರಂಭಿಸಿದ್ದು, ಇದನ್ನು ಆತ್ಮಹತ್ಯೆ ಎಂದು ಪರಿಗಣಿಸಿದ್ದಾರೆ. ಇದನ್ನೂ ಓದಿ: ಇಯರ್‌ಫೋನ್ ಧರಿಸಿ ಹಳಿ ಮೇಲೆ ಹೋಗುತ್ತಿದ್ದ ಮೂವರು ರೈಲಿಗೆ ಸಿಲುಕಿ ಸಾವು

    ಕೋವಿಡ್ ಕಡಿಮೆಯಾದ ನಂತರವೂ ವಿದ್ಯಾರ್ಥಿ ವೀಸಾ ವಿಳಂಬ ಸಮಸ್ಯೆಯಾಗಿದೆ. ಕೆನಡಾಕ್ಕೆ ಹೋಗಲು ವೀಸಾ ಪ್ರಕ್ರಿಯೆಯು ಸುಮಾರು 6 ತಿಂಗಳುಗಳನ್ನು ತೆಗೆದುಕೊಳ್ಳುತ್ತಿದೆ. ಯುಕೆ ಮತ್ತು ಯುಎಸ್ ವೀಸಾಕ್ಕಾಗಿ ಸಾಮಾನ್ಯಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಿವೆ. ಇದನ್ನೂ ಓದಿ: ಚಾಕುವಿನಿಂದ ಇರಿದು ಟಿಎಂಸಿ ಕಾರ್ಯಕರ್ತನ ಬರ್ಬರ ಹತ್ಯೆ – ನಾಲ್ವರು ಅರೆಸ್ಟ್

    Live Tv
    [brid partner=56869869 player=32851 video=960834 autoplay=true]