Tag: visa

  • ವೀಸಾ ಅವಧಿ ಮೀರಿ ವಾಸ್ತವ್ಯ; ಭಾರತ ಸೇರಿ ವಿದೇಶಿ ಪ್ರಜೆಗಳಿಗೆ ಅಮೆರಿಕ ಗಡೀಪಾರು ಎಚ್ಚರಿಕೆ

    ವೀಸಾ ಅವಧಿ ಮೀರಿ ವಾಸ್ತವ್ಯ; ಭಾರತ ಸೇರಿ ವಿದೇಶಿ ಪ್ರಜೆಗಳಿಗೆ ಅಮೆರಿಕ ಗಡೀಪಾರು ಎಚ್ಚರಿಕೆ

    ವಾಷಿಂಗ್ಟನ್: ಅಮೆರಿಕದ ವೀಸಾ (Visa) ನಿಯಮಗಳನ್ನು ವಾಸ್ತವ್ಯ ಹೂಡಿರುವ ವಿದೇಶಿ ಪ್ರಜೆಗಳಿಗೆ ಅಮೆರಿಕ (America) ಗಡೀಪಾರು ಎಚ್ಚರಿಕೆ ನೀಡಿದೆ.

    ವೀಸಾ ಅವಧಿ ಮೀರಿ ಉಳಿಯುವುದು ಮತ್ತು ಉಲ್ಲಂಘಿಸುವುದು ವೀಸಾ ರದ್ಧತಿ ಹಾಗೂ ಗಡೀಪಾರು ಸೇರಿದಂತೆ ಗಂಭೀರ ಪರಿಣಾಮಗಳಿಗೆ ಕಾರಣವಾಗಬಹುದು ಎಂದು ಭಾರತ ಸೇರಿದಂತೆ ಇತರೆ ದೇಶದ ಪ್ರಜೆಗಳಿಗೆ ಅಮೆರಿಕ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಕೆಂಪು ಕೋಟೆಗೆ ಪ್ರವೇಶಿಸಲು ಯತ್ನ – ಐವರು ಬಾಂಗ್ಲಾ ಪ್ರಜೆಗಳು ಅರೆಸ್ಟ್‌

    ಅಮೆರಿಕದ ಗೃಹ ಭದ್ರತಾ ಇಲಾಖೆಯು, ಭಾರತ ಸೇರಿದಂತೆ ವಿದೇಶಿ ರಾಷ್ಟ್ರಗಳಲ್ಲಿ ವೀಸಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ತನ್ನ ದೇಶದಲ್ಲಿರುವ ವಿದೇಶಿ ನಾಗರಿಕರಿಗೆ ಸೂಚನೆ ನೀಡಿದೆ. ವೀಸಾ ಅವಧಿ ಮೀರಿದರೆ, ಅಂತಹ ವ್ಯಕ್ತಿಗಳನ್ನು ಕಾನೂನು ಕ್ರಮಕ್ಕೆ ಒಳಪಡಿಸಬಹುದು. ಇದರಲ್ಲಿ ಗಡೀಪಾರು, ದಂಡ ಮತ್ತು ಭವಿಷ್ಯದಲ್ಲಿ ಅಮೆರಿಕ ಪ್ರವೇಶ ನಿಷೇಧವೂ ಸೇರಿರಬಹುದು ಎಂದು ತಿಳಿಸಿದೆ. ಇದನ್ನೂ ಓದಿ: ಭಾರತದಿಂದ ಖರೀದಿಸುವ ಎಲ್ಲ ಸರಕುಗಳಿಗೂ ಸುಂಕ – ಭಾರತ ಕೌಂಟರ್‌ಗೆ ಟ್ರಂಪ್‌ ಬಿಗ್‌ ವಾರ್ನಿಂಗ್‌

    ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಮೆರಿಕ ಗೃಹ ಭದ್ರತಾ ಇಲಾಖೆಯ ವಕ್ತಾರರು, ವಿದೇಶದಲ್ಲಿ ವೀಸಾ ನಿಯಮಗಳನ್ನು ಉಲ್ಲಂಘಿಸಿದರೆ ಗಂಭೀರ ಪರಿಣಾಮಗಳಿಗೆ ಕಾರಣವಾಗಬಹುದು. ಯಾವುದೇ ದೇಶದ ಕಾನೂನುಗಳನ್ನು ಗೌರವಿಸುವುದು ಮತ್ತು ವೀಸಾ ಅವಧಿಯೊಳಗೆ ಉಳಿಯುವುದು ಅತ್ಯಗತ್ಯ ಎಂದು ಹೇಳಿದ್ದಾರೆ.

    ಭಾರತದಲ್ಲಿರುವ ಅಮೆರಿಕ ನಾಗರಿಕರಿಗೆ, ತಮ್ಮ ವೀಸಾ ದಾಖಲೆಗಳನ್ನು ಪರಿಶೀಲಿಸಿ, ಅಗತ್ಯವಿದ್ದರೆ ವೀಸಾ ವಿಸ್ತರಣೆಗೆ ಅರ್ಜಿ ಸಲ್ಲಿಸುವಂತೆ ಯುಎಸ್ ರಾಯಭಾರ ಕಚೇರಿಯು ಸಲಹೆ ನೀಡಿದೆ. ಈ ಎಚ್ಚರಿಕೆಯು ಯುಎಸ್ ನಾಗರಿಕರಿಗೆ ತಮ್ಮ ಪ್ರಯಾಣ ಮತ್ತು ವಾಸಸ್ಥಾನದ ಯೋಜನೆಗಳನ್ನು ಕಾನೂನು ಚೌಕಟ್ಟಿನೊಳಗೆ ಇರಿಸಿಕೊಳ್ಳುವಂತೆ ತಿಳಿಸಿದೆ.

  • 65 ಕೋಟಿ ವಹಿವಾಟು – ವೀಸಾ ಹಿಂದಿಕ್ಕಿ ವಿಶ್ವದಲ್ಲೇ ಈಗ UPI ನಂಬರ್ 1

    65 ಕೋಟಿ ವಹಿವಾಟು – ವೀಸಾ ಹಿಂದಿಕ್ಕಿ ವಿಶ್ವದಲ್ಲೇ ಈಗ UPI ನಂಬರ್ 1

    ನವದೆಹಲಿ: 65 ಕೋಟಿ ರೂ. ವಹಿವಾಟು ನಡೆಸುವ ಮೂಲಕ ವೀಸಾವನ್ನು ಹಿಂದಿಕ್ಕಿ ಯುಪಿಐ (UPI) ವಿಶ್ವದಲ್ಲೇ ಅತೀ ದೊಡ್ಡ ಡಿಜಿಟಲ್ ಪಾವತಿ ವ್ಯವಸ್ಥೆಯಾಗಿ ಹೊರಹೊಮ್ಮಿದೆ.

    ಭಾರತದಲ್ಲಿ ಮೊಬೈಲ್ ಮೂಲಕ ನಡೆಯುವ ವಹಿವಾಟಿನ ಮೂಲವಾದ ಏಕೀಕೃತ ಪಾವತಿ ಇಂಟರ್ಫೇಸ್ (UPI) ಈಗ ವಿಶ್ವದ ಅತಿದೊಡ್ಡ ಡಿಜಿಟಲ್ ಪಾವತಿ ವ್ಯವಸ್ಥೆಯಾಗಿ ಹೊರಹೊಮ್ಮಿದೆ. ಈ ಮೂಲಕ ಈವರೆಗೆ ನಂ.1 ಡಿಜಿಟಲ್ ಪಾವತಿ ವ್ಯವಸ್ಥೆಯಾಗಿದ್ದ ವೀಸಾವನ್ನು ಹಿಂದಿಕ್ಕಿದೆ.ಇದನ್ನೂ ಓದಿ: ಇಂದು ಹುಟ್ಟೂರಿನಲ್ಲಿ ತಾಯಿಯ ಸಮಾಧಿ ಬಳಿಯೇ ಸರೋಜಾದೇವಿ ಅಂತ್ಯಸಂಸ್ಕಾರ

    ಈ ಕುರಿತು ನೀತಿ ಆಯೋಗದ ಮಾಜಿ ಸಿಇಒ ಅಮಿತಾಬ್ ಕಾಂತ್ (Amitabh Kant) ಅವರು ಎಕ್ಸ್‌ನಲ್ಲಿ (X) ಪೋಸ್ಟ್ ಹಂಚಿಕೊಂಡಿದ್ದು, 2025ರ ಮೇ-ಜೂನ್‌ನಲ್ಲಿ ಯುಪಿಐ ಪ್ರತಿದಿನ 65 ಕೋಟಿ ರೂ.ಯ ವಹಿವಾಟನ್ನು ನಡೆಸಿದ್ದು, ಇದೇ ಅವಧಿಯಲ್ಲಿ ವೀಸಾ 63.9 ಕೋಟಿ ರೂ ವಹಿವಾಟು ನಡೆಸಿದೆ. ವೀಸಾ 200 ದೇಶಗಳಲ್ಲಿ ಜಾರಿಯಲ್ಲಿದ್ದು, ಯುಪಿಐ ಕೇವಲ 7 ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ ಕೂಡ ವೀಸಾವನ್ನು ಹಿಂದಿಕ್ಕಿರುವುದು ವಿಶೇಷ. ಕಳೆದ ತಿಂಗಳೇ ಈ ಸಾಧನೆ ಮಾಡಿದೆ ಎಂದು ತಿಳಿಸಿದ್ದಾರೆ.

    ಭಾರತದಲ್ಲಿ ಯುಪಿಐ ಮೂಲಕ ಗೂಗಲ್ ಪೇ, ಫೋನ್ ಪೇ, ಭೀಮ್ ಯುಪಿಐ, ಅಮೇಜಾನ್ ಪೇ, ವಾಟ್ಸಾಪ್ ಪೇ ಸೇರಿದಂತೆ ಹಲವು ಡಿಜಿಟಲ್ ಪಾವತಿ ಕಂಪನಿಗಳು ಸೇವೆ ಒದಗಿಸುತ್ತವೆ. ಬ್ಯಾಂಕ್ ಖಾತೆಯನ್ನು ಜನರು ಈ ಆ್ಯಪ್‌ಗಳಲ್ಲಿ ಲಿಂಕ್ ಮಾಡಬೇಕು. ಕೆಲವೇ ಕ್ಷಣಗಳಲ್ಲಿ ಒಬ್ಬರಿಂದ ಇನ್ನೊಬ್ಬರಿಗೆ ಇದರಿಂದ ಹಣ ಪಾವತಿ ಮಾಡಬಹುದು. ಜಾರಿಯಾದ 9 ವರ್ಷಗಳಲ್ಲೇ ಈ ಸಾಧನೆ ಮಾಡಿರುವುದು ಹೊಸ ಮೈಲಿಗಲ್ಲನ್ನು ಸೃಷ್ಟಿಸಿದೆ.ಇದನ್ನೂ ಓದಿ: ಬಳ್ಳಾರಿ | ಶಾಲೆಗೆ ತೆರಳುತ್ತಿದ್ದ ಬಾಲಕಿ ಹಠಾತ್ ಕುಸಿದು ಬಿದ್ದು ಸಾವು

  • ಭಟ್ಕಳದಲ್ಲಿ 14 ಜನ ಪಾಕಿಸ್ತಾನಿ ಪ್ರಜೆಗಳು – ಸದ್ಯಕ್ಕಿಲ್ಲ ಗಡಿಪಾರು

    ಭಟ್ಕಳದಲ್ಲಿ 14 ಜನ ಪಾಕಿಸ್ತಾನಿ ಪ್ರಜೆಗಳು – ಸದ್ಯಕ್ಕಿಲ್ಲ ಗಡಿಪಾರು

    ಕಾರವಾರ: ಭಟ್ಕಳದಲ್ಲಿ (Bhatkal) 14 ಮಂದಿ ಪಾಕಿಸ್ತಾನ (Pakistan) ಪ್ರಜೆಗಳು ನೆಲೆಸಿದ್ದು ಅವರು ಅವರು ದೀರ್ಘಾವಧಿ ವೀಸಾ (Visa) ಹೊಂದಿದ್ದು ಭಾರತದಲ್ಲೇ (India) ಇರಲಿದ್ದಾರೆ.

    ಪಹಲ್ಗಾಮ್‌ನಲ್ಲಿ ಹಿಂದೂಗಳ ನರಮೇಧ ನಡೆದ ಬೆನ್ನಲ್ಲೇ ಭಾರತಕ್ಕೆ ಆಗಮಿಸಿರುವ ಪಾಕಿಸ್ತಾನಿ ಪ್ರಜೆಗಳು 48 ಗಂಟೆಯಲ್ಲಿ ದೇಶ ತೊರೆಯಲು ಕೇಂದ್ರ ಸರ್ಕಾರದ ಗಡುವು ನೀಡಿದೆ. ಆದರೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ನೆಲಸಿರುವ 14 ಜನ ಪಾಕಿಸ್ತಾನ ಮೂಲದ ಮಹಿಳೆಯರಿದ್ದು ದೀರ್ಘಾವಧಿ ವೀಸಾ ಇರುವ ಕಾರಣ ಭಟ್ಕಳದಲ್ಲೇ ಮೊಕ್ಕಾಂ ಹೂಡಿದ್ದಾರೆ.

     

    ಭಟ್ಕಳ ಹಾಗೂ ಪಾಕಿಸ್ತಾನದ ನಡುವೆ ಸ್ವತಂತ್ರ ಪೂರ್ವದಲ್ಲೇ ವೈವಾಹಿಕ (Marriage) ಸಂಬಂಧಗಳು ನಡೆಯುತ್ತಿದ್ದು ಭಟ್ಕಳದ ಮುಸ್ಲಿಂ ಹೆಣ್ಣನ್ನು ಪಾಕಿಸ್ತಾನದ ವರನಿಗೆ ನೀಡಿದರೆ ಪಾಕಿಸ್ತಾನದ ಹೆಣ್ಣನ್ನು ಭಟ್ಕಳಕ್ಕೆ ನೀಡುವುದು ನಡೆದುಕೊಂಡು ಬಂದಿದೆ. ಇದನ್ನೂ ಓದಿ: ಉಗ್ರರು ದಾಳಿ ಮಾಡಿಲ್ಲ ಎಂದ ನ್ಯೂಯಾರ್ಕ್‌ ಟೈಮ್ಸ್‌ – ವರದಿಯನ್ನು ಸರಿ ಮಾಡಿದ ಅಮೆರಿಕ ಸರ್ಕಾರ

    ಈಗಾಗಲೇ ಹಲವು ವರ್ಷದಿಂದ 10 ಪಾಕಿಸ್ತಾನ ಮೂಲದ ಮಹಿಳೆಯರಿದ್ದು ಇವರಲ್ಲಿ ನಾಲ್ಕು ಜನ ಭಾರತದಲ್ಲೇ ಮಕ್ಕಳು ಜನಿಸಿದ್ದಾರೆ. ಪ್ರತಿ ಎರಡು ವರ್ಷಕ್ಕೆ ಒಮ್ಮೆ ಇವರ ವೀಸಾ ನವೀಕರಣವಾಗುತ್ತದೆ.

     

    ಈ ಮಹಿಳೆಯರು ಭಾರತದ ಪೌರತ್ವಕ್ಕಾಗಿ ಕೇಂದ್ರ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದರೂ ಈವರೆಗೂ ಇವರಿಗಾಗಲಿ ಭಾರತದಲ್ಲಿ ಹುಟ್ಟಿದ ಇವರ ಮಕ್ಕಳಿಗೆ ಪೌರತ್ವ ನೀಡಿಲ್ಲ. ದೀರ್ಘಾವಧಿ ವೀಸಾ ಹಾಗೂ ಭಾರತೀಯ ಪುರುಷರನ್ನು ವಿವಾಹವಾಗಿದ್ದರಿಂದ ಸದ್ಯ ಈ 14 ಮಹಿಳೆಯರು ಭಟ್ಕಳದಲ್ಲೇ ಇರಲಿದ್ದಾರೆ. ಇದನ್ನೂ ಓದಿ: ಗಡಿಯಲ್ಲಿ ಭಾರತ ಪಾಕ್‌ ಮಧ್ಯೆ ಗುಂಡಿನ ಚಕಮಕಿ

    ಕೆಲವು ವರ್ಷದ ಹಿಂದೆ ಬಾಂಗ್ಲಾದ ಮಹಿಳೆ ಸಹ ಗಡಿ ಉಲ್ಲಂಘಿಸಿ ಭಟ್ಕಳಕ್ಕೆ ಬಂದು ಇಲ್ಲಿನ ಯುವಕನನ್ನು ವಿವಾಹವಾಗಿದ್ದು ಈಕೆ ಸದ್ಯ ಜೈಲಿನಲ್ಲಿದ್ದು ನ್ಯಾಯಾಲಯದಲ್ಲಿ ಮೊಕದ್ದಮೆ ನಡೆಯುತ್ತಿದೆ.

    ಭಟ್ಕಳದಲ್ಲಿ 14 ಜನ ಪಾಕಿಸ್ತಾನಿ ಮಹಿಳೆಯರಲ್ಲದೇ ಹೆಚ್ಚಿನ ಸಂಖ್ಯೆಯ ಮಹಿಳೆಯರು ಇರುವ ಸಾಧ್ಯತೆ ಇದ್ದು ಈ ಕುರಿತು ಮಾಹಿತಿ ಕಲೆಹಾಕಲು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಂ.ನಾರಾಯಣ್ ಭಟ್ಕಳಕ್ಕೆ ತೆರಳಿದ್ದು ಮಾಹಿತಿ ಕಲೆಹಾಕುತಿದ್ದಾರೆ.

  • ಟ್ರಂಪ್‌ ಬೆದರಿಕೆ ನಡುವೆ ಭಾರತದ ಪ್ರಜೆಗಳಿಗೆ 85,000 ವೀಸಾ ನೀಡಿದ ಚೀನಾ

    ಟ್ರಂಪ್‌ ಬೆದರಿಕೆ ನಡುವೆ ಭಾರತದ ಪ್ರಜೆಗಳಿಗೆ 85,000 ವೀಸಾ ನೀಡಿದ ಚೀನಾ

    – ಭಾರತದ ಜೊತೆ ವ್ಯಾಪಾರ, ಉತ್ತಮ ಸ್ನೇಹ ಸಂಬಂಧಕ್ಕೆ ಚೀನಾ ಒಲವು

    ನವದೆಹಲಿ: ಭಾರತದಲ್ಲಿರುವ ಚೀನೀ ರಾಯಭಾರ ಕಚೇರಿಯು ಈ ವರ್ಷದ ಜನವರಿ 1 ರಿಂದ ಏಪ್ರಿಲ್ 9ರ ವರೆಗೆ ಭಾರತೀಯ (Indian  Citizens) ನಾಗರಿಕರಿಗೆ 85,000 ಕ್ಕೂ ಹೆಚ್ಚು ವೀಸಾಗಳನ್ನು ನೀಡಿದೆ. ಇದು ಎರಡೂ ರಾಷ್ಟ್ರಗಳ ನಡುವಿನ ಸಂಬಂಧವನ್ನು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.

    2025 ರ ಏ.9 ರ ಹೊತ್ತಿಗೆ ಭಾರತದಲ್ಲಿನ ಚೀನೀ ರಾಯಭಾರ ಕಚೇರಿ ಮತ್ತು ದೂತಾವಾಸಗಳು ಈ ವರ್ಷ ಚೀನಾಕ್ಕೆ (China) ಪ್ರಯಾಣಿಸುವ ಭಾರತೀಯ ನಾಗರಿಕರಿಗೆ 85,000 ಕ್ಕೂ ಹೆಚ್ಚು ವೀಸಾಗಳನ್ನು ನೀಡಿವೆ. ಹೆಚ್ಚಿನ ಭಾರತೀಯ ಸ್ನೇಹಿತರು ಚೀನಾಕ್ಕೆ ಭೇಟಿ ನೀಡಲು, ಸುರಕ್ಷಿತ, ರೋಮಾಂಚಕ, ಪ್ರಾಮಾಣಿಕ ಮತ್ತು ಸ್ನೇಹಪರ ಚೀನಾಗೆ ಸ್ವಾಗತ ಎಂದು ಚೀನಾದ ರಾಯಭಾರಿ ಕ್ಸು ಫೀಹಾಂಗ್ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ವಾಹನ ಕಂಪನಿಗಳಿಗೆ ತಾತ್ಕಾಲಿಕ ವಿನಾಯತಿ – ಟ್ರಂಪ್‌ ಯೂಟರ್ನ್‌

    ಭಾರತ ಮತ್ತು ಚೀನಾ ನಡುವಿನ ಸುಗಮ ಪ್ರಯಾಣಕ್ಕೆ ಅನುಕೂಲವಾಗುವಂತೆ ಚೀನಾ ಸರ್ಕಾರ ಹಲವಾರು ಸಡಿಲಿಕೆಗಳನ್ನು ಪರಿಚಯಿಸಿದೆ.

    ಆನ್‌ಲೈನ್ ನೇಮಕಾತಿ ಇಲ್ಲ: ಭಾರತೀಯ ಅರ್ಜಿದಾರರು ಈಗ ಕೆಲಸದ ದಿನಗಳಲ್ಲಿ ಪೂರ್ವ ಆನ್‌ಲೈನ್ ಅಪಾಯಿಂಟ್‌ಮೆಂಟ್‌ಗಳಿಲ್ಲದೆ ವೀಸಾ ಕೇಂದ್ರಗಳಲ್ಲಿ ನೇರವಾಗಿ ತಮ್ಮ ವೀಸಾ ಅರ್ಜಿಗಳನ್ನು ಸಲ್ಲಿಸಬಹುದು.
    ಬಯೋಮೆಟ್ರಿಕ್ ವಿನಾಯಿತಿ: ಅಲ್ಪಾವಧಿಗೆ ಚೀನಾಕ್ಕೆ ಭೇಟಿ ನೀಡುವ ಪ್ರಯಾಣಿಕರಿಗೆ ಬಯೋಮೆಟ್ರಿಕ್ ಡೇಟಾವನ್ನು ಒದಗಿಸುವುದರಿಂದ ವಿನಾಯಿತಿ ನೀಡಲಾಗುತ್ತದೆ. ಇದು ಪ್ರಕ್ರಿಯೆಯ ಸಮಯವನ್ನು ಕಡಿಮೆ ಮಾಡುತ್ತದೆ.
    ವೀಸಾ ಶುಲ್ಕಗಳು: ಈಗ, ಚೀನೀ ವೀಸಾವನ್ನು ತುಂಬಾ ಕಡಿಮೆ ದರದಲ್ಲಿ ಪಡೆಯಬಹುದು. ಇದು ಭಾರತೀಯ ಸಂದರ್ಶಕರಿಗೆ ಪ್ರಯಾಣವನ್ನು ಹೆಚ್ಚು ಕೈಗೆಟುಕುವಂತೆ ಮಾಡುತ್ತದೆ.
    ತ್ವರಿತ ಪ್ರಕ್ರಿಯೆ ಸಮಯಗಳು: ವೀಸಾ ಅನುಮೋದನೆಯ ಸಮಯಸೂಚಿಯನ್ನು ಹೆಚ್ಚು ಸುವ್ಯವಸ್ಥಿತಗೊಳಿಸಲಾಗಿದೆ. ಇದು ತ್ವರಿತ ವಿತರಣೆಗೆ ಅವಕಾಶ ನೀಡುತ್ತದೆ.
    ಪ್ರವಾಸೋದ್ಯಮ: ಚೀನಾ, ಭಾರತೀಯ ಪ್ರವಾಸಿಗರಿಗೆ ಪ್ರಯಾಣವನ್ನು ಸಕ್ರಿಯವಾಗಿ ಉತ್ತೇಜಿಸುತ್ತಿದೆ. ಹಬ್ಬಗಳು ಮತ್ತು ತಾಣಗಳಂತಹ ಸಾಂಸ್ಕೃತಿಕ ಮತ್ತು ಕಾಲೋಚಿತ ಆಕರ್ಷಣೆಗಳನ್ನು ಪ್ರದರ್ಶಿಸುತ್ತಿದೆ.

    ಡೊನಾಲ್ಡ್‌ ಟ್ರಂಪ್‌ ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಹಲವು ದೇಶಗಳ ಮೇಲೆ ಟ್ಯಾರಿಫ್‌ ಅಸ್ತ್ರ ಪ್ರಯೋಗಿಸಿದ್ದಾರೆ. ಮುಖ್ಯವಾಗಿ, ತನ್ನ ಪ್ರಮುಖ ಆರ್ಥಿಕ ಎದುರಾಳಿ ಚೀನಾ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಪ್ರತಿಸುಂಕ ವಿಧಿಸಿದ್ದಾರೆ. ಈ ಬೆದರಿಕೆ ಬೆನ್ನಲ್ಲೇ ಚೀನಾವು ಭಾರತದ ಜೊತೆ ಉತ್ತಮ ಸಂಬಂಧಕ್ಕೆ ಹೆಚ್ಚಿನ ಆದ್ಯತೆ ನೀಡಿದೆ.

  • ಕೊಲಂಬಿಯಾ ವಿಶ್ವವಿದ್ಯಾಲಯ ನನಗೆ ದ್ರೋಹ ಬಗೆದಿದೆ – ಅಮೆರಿಕದಿಂದ ಸ್ವಯಂ ಗಡೀಪಾರಾದ ಭಾರತೀಯ ವಿದ್ಯಾರ್ಥಿನಿ ಅಳಲು

    ಕೊಲಂಬಿಯಾ ವಿಶ್ವವಿದ್ಯಾಲಯ ನನಗೆ ದ್ರೋಹ ಬಗೆದಿದೆ – ಅಮೆರಿಕದಿಂದ ಸ್ವಯಂ ಗಡೀಪಾರಾದ ಭಾರತೀಯ ವಿದ್ಯಾರ್ಥಿನಿ ಅಳಲು

    – ಸಂಸ್ಥೆಯಲ್ಲಿ ವಾರಕ್ಕೆ 100 ಗಂಟೆಗಳ ಕಾಲ ಕೆಲಸ ಮಾಡಿದ್ದೇನೆ: ರಂಜನಿ

    ಒಟ್ಟಾವಾ: ಕೊಲಂಬಿಯಾ ವಿಶ್ವವಿದ್ಯಾಲಯ(Columbia University) ನನಗೆ ದ್ರೋಹ ಬಗೆದಿದೆ ಎಂದು ಅಮೆರಿಕಾದಿಂದ (USA,) ಕೆನಡಾಕ್ಕೆ ಸ್ವಯಂ ಗಡೀಪಾರಾದ ಭಾರತೀಯ (India) ವಿದ್ಯಾರ್ಥಿನಿ ರಂಜಿನಿ ಶ್ರೀನಿವಾಸನ್ (37) (Ranjani Srinivasan) ಅಳಲು ತೋಡಿಕೊಂಡಿದ್ದಾರೆ. ನಾನು ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಐದು ವರ್ಷಗಳನ್ನು ಕಳೆದಿದ್ದೇನೆ. ಕೆಲವೊಮ್ಮೆ ವಾರಕ್ಕೆ 100 ಗಂಟೆಗಳ ಕಾಲ ಕೆಲಸ ಮಾಡಿದ್ದೇನೆ. ಸಂಸ್ಥೆಯು ನನ್ನನ್ನು ನಿರಾಸೆಗೊಳಿಸುತ್ತದೆ ಎಂದು ನಾನು ಎಂದಿಗೂ ಭಾವಿಸಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ.

    ranjani srinivasan

    ಟ್ರಂಪ್ ಅಧ್ಯಕ್ಷ ಸ್ಥಾನಕ್ಕೇರುವ ಒಂದು ತಿಂಗಳ ಮೊದಲು, ಅಂದರೆ ಡಿಸೆಂಬರ್‌ನಲ್ಲಿ ನನ್ನ ವಿದ್ಯಾರ್ಥಿ ವೀಸಾವನ್ನು (ಎಫ್‌ 1 ವೀಸಾ) ನವೀಕರಿಸಲಾಗಿತ್ತು. ನನ್ನ ಪಿಹೆಚ್‌ಡಿಗೆ ಬೇಕಾದ ಎಲ್ಲಾ ಅರ್ಹತೆಗಳು ಮುಗಿದಿವೆ. ಅದಕ್ಕಾಗಿ ನಾನು ಅಮೆರಿಕದಲ್ಲಿ ಇರಬೇಕಾಗಿಲ್ಲ. ಆದ್ದರಿಂದ, ನಾನು ಕೊಲಂಬಿಯಾಕ್ಕೆ ಮನವಿ ಮಾಡಲು ಪ್ರಯತ್ನಿಸುತ್ತಿದ್ದೇನೆ. ದಾಖಲಾತಿಯನ್ನು ಪುನಃಸ್ಥಾಪಿಸುವ ಪ್ರಯತ್ನದಲ್ಲಿದ್ದೇನೆ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಹಮಾಸ್‌ ಬೆಂಬಲಿಸಿದ್ದ ಭಾರತೀಯ ವಿದ್ಯಾರ್ಥಿನಿಯನ್ನು ಹೊರದಬ್ಬಿದ ಅಮೆರಿಕ

    ಅಮೆರಿಕ ಸರ್ಕಾರ ʻಭಯೋತ್ಪಾದನಾ ಬೆಂಬಲಿಗʼ ಎಂಬ ಹಣೆಪಟ್ಟಿ ಕಟ್ಟಿದ್ದರೂ, ನಾನು ಸಕ್ರಿಯವಾಗಿ ಭಾಗಿಯಾಗಿದ್ದೇನೆ ಎಂಬುದಕ್ಕೆ ಯಾವುದೇ ಪುರಾವೆಗಳನ್ನು ಹಂಚಿಕೊಳ್ಳಲಾಗಿಲ್ಲ. ಆರೋಪಗಳಿಗೆ ಕಾರಣಗಳನ್ನು ಸ್ಪಷ್ಟಪಡಿಸಲಾಗಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.

    ರಂಜನಿಯವರ ವೀಸಾವನ್ನು ರದ್ದುಗೊಳಿಸಿದಾಗ ಅವರು ಪಿಹೆಚ್‌ಡಿ ಪೂರ್ಣಗೊಳಿಸುವ ಅಂಚಿನಲ್ಲಿದ್ದರು. ಈ ಮೂಲಕ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಫುಲ್‌ಬ್ರೈಟ್ ಸ್ವೀಕರಿಸುವರಿದ್ದರು. ಅಷ್ಟರಲ್ಲಾಗಲೇ ಅವರ ಗಡಿಪಾರಾಗಿದ್ದು, ತೀವ್ರ ನಿರಾಸೆಗೊಳಗಾಗಿದ್ದರು.

    ಮಾ.5 ರಂದು ಚೆನ್ನೈನಲ್ಲಿರುವ ಯುಎಸ್ ಕಾನ್ಸುಲೇಟ್‌ನಿಂದ ತಮ್ಮ ವಿದ್ಯಾರ್ಥಿ ವೀಸಾವನ್ನು ಅನಿರ್ದಿಷ್ಟವಾಗಿ ರದ್ದುಪಡಿಸಲಾಗಿದೆ ಎಂಬ ಇಮೇಲ್‌ನ್ನು ರಂಜನಿ ಪಡೆದುಕೊಂಡಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ, ಅಮೆರಿಕ ವಲಸೆ ಮತ್ತು ಕಸ್ಟಮ್ಸ್ ಅಧಿಕಾರಿಗಳು ಅವರ ಮನೆ ಬಾಗಿಲಿಗೆ ಬಂದು ರೂಮ್‌ಮೇಟ್‌ನ್ನು ವಿಚಾರಿಸಿದ್ದರು. ಇದಾದ ಬಳಿಕ ದಾಖಲೆಗಳು, ಅಗತ್ಯ ವಸ್ತುಗಳನ್ನು ತೆಗೆದುಕೊಂಡು ನ್ಯೂಯಾರ್ಕ್‌ನಿಂದ ಕೆನಡಾಕ್ಕೆ ಅವರು ಬಂದಿದ್ದರು. ಈ ಘಟನೆಯ ಬಗ್ಗೆ ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

    ಅಮೆರಿಕ ಎರಡು ವಿಧಾನ ಬಳಸಿ ವಿದೇಶಿ ಪ್ರಜೆಗಳನ್ನು ಗಡೀಪಾರು ಮಾಡುತ್ತದೆ. ಒಂದನೇಯದ್ದು ಅಮೆರಿಕದ ಭದ್ರತಾ ಸಿಬ್ಬಂದಿಯೇ ವಿದೇಶಿ ಪ್ರಜೆಗಳನ್ನು ಬಂಧಿಸಿ ಗಡೀಪಾರು ಮಾಡುತ್ತದೆ. ಸ್ವಯಂ ಗಡೀಪಾರಿನಲ್ಲಿ ಅಮೆರಿಕ ವಿದೇಶಿ ಪ್ರಜೆಗಳನ್ನು ಹೊರಗೆ ದಬ್ಬುವುದಿಲ್ಲ. ಬದಲಾಗಿ ಆ ಪ್ರಜೆಗಳೇ ಅಮೆರಿಕವನ್ನು ತೊರೆಯಬೇಕಾಗುತ್ತದೆ.

    ರಂಜನಿ ಶ್ರೀನಿವಾಸನ್ ವಿಮಾನ ನಿಲ್ದಾಣದ ಮೂಲಕ ದೇಶ ತೊರೆಯುತ್ತಿರುವ ವಿಡಿಯೋವನ್ನು ಅಮೆರಿಕದ ಗೃಹ ಕಾರ್ಯದರ್ಶಿ ಕ್ರಿಸ್ಟಿ ನೋಯೆಮ್ ಎಕ್ಸ್‌ನಲ್ಲಿ ಹಂಚಿಕೊಂಡು, ಹಿಂಸೆ ಮತ್ತು ಭಯೋತ್ಪಾದನೆಯನ್ನು ಪ್ರತಿಪಾದಿಸುವ ಯಾರಾದರೂ ದೇಶದಲ್ಲಿ ಇರಬಾರದು ಎಂದು ಪೋಸ್ಟ್‌ ಮಾಡಿದ್ದರು. ಇದನ್ನೂ ಓದಿ: ಪತ್ನಿ ತುಂಡರಿಸಿ ಸೂಟ್‍ಕೇಸ್‍ಗೆ ತುಂಬಿ, ಪುಣೆಯಲ್ಲಿ ವಿಷ ಸೇವಿಸಿದ್ದ ಹಂತಕ!

  • ಹಮಾಸ್‌ ಬೆಂಬಲಿಸಿದ್ದ ಭಾರತೀಯ ವಿದ್ಯಾರ್ಥಿನಿಯನ್ನು ಹೊರದಬ್ಬಿದ ಅಮೆರಿಕ

    ಹಮಾಸ್‌ ಬೆಂಬಲಿಸಿದ್ದ ಭಾರತೀಯ ವಿದ್ಯಾರ್ಥಿನಿಯನ್ನು ಹೊರದಬ್ಬಿದ ಅಮೆರಿಕ

    ವಾಷಿಂಗ್ಟನ್: ಪ್ಯಾಲೆಸ್ತೀನ್‌ ಪರ ಪ್ರತಿಭಟನೆಯಲ್ಲಿ ಭಾಗವಹಿಸಿ ಹಮಾಸ್‌ (Hamas) ಉಗ್ರ ಸಂಘಟನೆಯನ್ನು ಬೆಂಬಲಿಸಿದ್ದಕ್ಕೆ ಭಾರತೀಯ ವಿದ್ಯಾರ್ಥಿನಿಯ ವೀಸಾವನ್ನು (Visa) ಅಮೆರಿಕ ರದ್ದುಗೊಳಿಸಿ ಗಡೀಪಾರು ಮಾಡಿದೆ.

    ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ (Columbia University) ಓದುತ್ತಿದ್ದ ರಂಜನಿ ಶ್ರೀನಿವಾಸನ್ (Ranjani Srinivasan) ಸ್ವಯಂ ಗಡೀಪಾರಾದ ವಿದ್ಯಾರ್ಥಿನಿ. ಎಫ್-1 ವಿದ್ಯಾರ್ಥಿ ಕಲಿಕಾ ವೀಸಾದಲ್ಲಿ ಅಮೆರಿಕಕ್ಕೆ (USA) ತೆರಳಿದ್ದ ರಂಜನಿ ಭಯೋತ್ಪಾದಕ ಸಂಘಟನೆ ಹಮಾಸ್ ಅನ್ನು ಬೆಂಬಲಿಸುವ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಳು ಎಂದು ಹೋಮ್‌ಲ್ಯಾಂಡ್ ಸೆಕ್ಯೂರಿಟಿ ಹೇಳಿದೆ.

    ಹಿಂಸೆ ಮತ್ತು ಭಯೋತ್ಪಾದನೆಯನ್ನು ಪ್ರತಿಪಾದಿಸಿದ್ದಕ್ಕಾಗಿ ಮಾರ್ಚ್ 5 ರಂದು ಅಮೆರಿಕದ ವಿದೇಶಾಂಗ ಇಲಾಖೆ ರಂಜನಿ ಶ್ರೀನಿವಾಸನ್ ವೀಸಾವನ್ನು ರದ್ದುಗೊಳಿಸಿತ್ತು.

     

    ಅಮೆರಿಕ ಎರಡು ವಿಧಾನ ಬಳಸಿ ವಿದೇಶಿ ಪ್ರಜೆಗಳನ್ನು ಗಡೀಪಾರು ಮಾಡುತ್ತದೆ. ಒಂದನೇಯದ್ದು ಅಮೆರಿಕದ ಭದ್ರತಾ ಸಿಬ್ಬಂದಿಯೇ ವಿದೇಶಿ ಪ್ರಜೆಗಳನ್ನು ಬಂಧಿಸಿ ಗಡೀಪಾರು ಮಾಡುತ್ತದೆ. ಸ್ವಯಂ ಗಡೀಪಾರಿನಲ್ಲಿ ಅಮೆರಿಕ ವಿದೇಶಿ ಪ್ರಜೆಗಳನ್ನು ಹೊರಗೆ ದಬ್ಬುವುದಿಲ್ಲ. ಬದಲಾಗಿ ಆ ಪ್ರಜೆಗಳೇ ಅಮೆರಿಕವನ್ನು ತೊರೆಯಬೇಕಾಗುತ್ತದೆ.

    ರಂಜನಿ ಶ್ರೀನಿವಾಸನ್ ವಿಮಾನ ನಿಲ್ದಾಣದ ಮೂಲಕ ದೇಶ ತೊರೆಯುತ್ತಿರುವ ವಿಡಿಯೋವನ್ನು ಅಮೆರಿಕದ ಗೃಹ ಕಾರ್ಯದರ್ಶಿ ಕ್ರಿಸ್ಟಿ ನೋಯೆಮ್ ಎಕ್ಸ್‌ನಲ್ಲಿ ಹಂಚಿಕೊಂಡು, ಹಿಂಸೆ ಮತ್ತು ಭಯೋತ್ಪಾದನೆಯನ್ನು ಪ್ರತಿಪಾದಿಸುವ ಯಾರಾದರೂ ದೇಶದಲ್ಲಿ ಇರಬಾರದು ಎಂದು ಪೋಸ್ಟ್‌ ಮಾಡಿದ್ದಾರೆ.

    ಅಮೆರಿಕದಲ್ಲಿ ವಾಸ ಮಾಡಲು ಮತ್ತು ಅಧ್ಯಯನ ಮಾಡಲು ವೀಸಾ ನೀಡುವುದು ಒಂದು ಸವಲತ್ತು. ಹಿಂಸೆ ಮತ್ತು ಭಯೋತ್ಪಾದನೆಯನ್ನು ಪ್ರತಿಪಾದಿಸಿದಾಗ, ಆ ಸವಲತ್ತನ್ನು ರದ್ದುಗೊಳಿಸಬೇಕಾಗುತ್ತದೆ ಮತ್ತು ನೀವು ಈ ದೇಶದಲ್ಲಿ ಇರಬಾರದು. ಕೊಲಂಬಿಯಾ ವಿಶ್ವವಿದ್ಯಾಲಯದ ಭಯೋತ್ಪಾದಕರ ಪರ ಸಹಾನುಭೂತಿ ಹೊಂದಿದ್ದ ಒಬ್ಬರು ಸ್ವಯಂ ಗಡೀಪಾರು ಮಾಡಲು CBP ಹೋಮ್ ಅಪ್ಲಿಕೇಶನ್ ಅನ್ನು ಬಳಸುವುದನ್ನು ನೋಡಲು ನನಗೆ ಸಂತೋಷವಾಗಿದೆ ಎಂದು ಬರೆದುಕೊಂಡಿದ್ದಾರೆ.  ಇದನ್ನೂ ಓದಿ: ರೈಲು ಹೈಜಾಕ್‌ನಲ್ಲಿ ಸೆರೆಯಾಗಿದ್ದ ಎಲ್ಲಾ 214 ಒತ್ತೆಯಾಳುಗಳ ಸಾಮೂಹಿಕ ಹತ್ಯೆ: ಬಿಎಲ್‌ಎ ಹೇಳಿಕೆ

    ಶ್ರೀನಿವಾಸನ್ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ನಗರ ಯೋಜನೆಯಲ್ಲಿ ಡಾಕ್ಟರೇಟ್ ವಿದ್ಯಾರ್ಥಿಯಾಗಿದ್ದಳು. ಗ್ರಾಜುಯೇಟ್ ಸ್ಕೂಲ್ ಆಫ್ ಆರ್ಕಿಟೆಕ್ಚರ್, ಪ್ಲಾನಿಂಗ್ ಅಂಡ್ ಪ್ರಿಸರ್ವೇಶನ್‌ನಲ್ಲಿ ಸಂಶೋಧನೆ ನಡೆಸುತ್ತಿದ್ದರು. ಅಹಮದಾಬಾದ್‌ನ CEPT ವಿಶ್ವವಿದ್ಯಾಲಯದಿಂದ ಪದವಿ ಮತ್ತು ಫುಲ್‌ಬ್ರೈಟ್ ನೆಹರು ಮತ್ತು ಇನ್‌ಲ್ಯಾಕ್ಸ್ ವಿದ್ಯಾರ್ಥಿವೇತನಗಳೊಂದಿಗೆ ಹಾರ್ವರ್ಡ್‌ನಿಂದ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಳು.

    ಇಸ್ರೇಲ್-ಹಮಾಸ್ ಯುದ್ಧ ನಡೆಯುತ್ತಿದ್ದಾಗ ಪ್ಯಾಲೆಸ್ತೀನ್‌ ಪರವಾಗಿ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಭಾರೀ ಪ್ರತಿಭಟನೆ ನಡೆದಿತ್ತು. ಕಳೆದ ಪರ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿದ್ದ ಪ್ಯಾಲೆಸ್ತೀನ್‌ ಮೂಲದ ಮಾಜಿ ಕೊಲಂಬಿಯಾ ವಿದ್ಯಾರ್ಥಿ ಮಹಮೂದ್ ಖಲೀಲ್‌ನನ್ನು ಅಮೆರಿಕ ಅಧಿಕಾರಿಗಳು ಬಂಧಿಸಿದ್ದರು. ಖಲೀಲ್‌ ಗ್ರೀನ್‌ ಕಾರ್ಡ್‌ ರದ್ದಾಗಿದ್ದರೂ ಫೆಡರಲ್ ನ್ಯಾಯಾಧೀಶರು ಖಲೀಲ್ ಗಡೀಪಾರು ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ತಡೆಹಿಡಿದಿದ್ದಾರೆ.

  • ಅಮೆರಿಕದಲ್ಲಿ ಭೀಕರ ಅಪಘಾತಕ್ಕೆ ಕೋಮಾ ಸ್ಥಿತಿಯಲ್ಲಿ ಭಾರತೀಯ ವಿದ್ಯಾರ್ಥಿನಿ

    ಅಮೆರಿಕದಲ್ಲಿ ಭೀಕರ ಅಪಘಾತಕ್ಕೆ ಕೋಮಾ ಸ್ಥಿತಿಯಲ್ಲಿ ಭಾರತೀಯ ವಿದ್ಯಾರ್ಥಿನಿ

    – ಭಾರತದ ತುರ್ತು ವೀಸಾ ಮನವಿಗೆ ಯುಎಸ್‌ ಒಪ್ಪಿಗೆ

    ಮುಂಬೈ: ಅಪಘಾತದಿಂದ ಕೋಮಾ ಸ್ಥಿತಿಯಲ್ಲಿರುವ ಭಾರತೀಯ ಮೂಲದ ವಿದ್ಯಾರ್ಥಿನಿಗೆ ತುರ್ತು ವೀಸಾ ನೀಡಲು ಅಮೆರಿಕ ಒಪ್ಪಿಗೆ ಸೂಚಿಸಿದೆ.

    ಇದೇ ಫೆ.14 ರಂದು ಕ್ಯಾಲಿಫೋರ್ನಿಯಾದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ 35 ವರ್ಷದ ನೀಲಂ ಶಿಂಧೆ ಸ್ಥಿತಿ ಗಂಭೀರವಾಗಿದೆ. ಕೋಮಾ ಸ್ಥಿತಿಯಲ್ಲಿರುವ ಆಕೆಯನ್ನು ಭಾರತಕ್ಕೆ ವಾಪಸ್‌ ಕರೆತರಲು ಮಹಾರಾಷ್ಟ್ರದ ಸತಾರದಲ್ಲಿರುವ ಆಕೆಯ ತಂದೆ ಅಂದಿನಿಂದ ವೀಸಾ ಪಡೆಯಲು ಪ್ರಯತ್ನಿಸುತ್ತಿದ್ದರು. ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು.

    ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ನೀಲಂ ಶಿಂಧೆ ಅವರ ಎದೆ ಮತ್ತು ತಲೆ ಭಾಗಕ್ಕೆ ತೀವ್ರ ಪೆಟ್ಟಾಗಿತ್ತು. ಎರಡು ದಿನಗಳ ನಂತರ ಅಪಘಾತದ ಬಗ್ಗೆ ಅವರ ಕುಟುಂಬಕ್ಕೆ ತಿಳಿದುಬಂದಿದೆ. ಕುಟುಂಬದವರ ಪ್ರಕಾರ, ಆಸ್ಪತ್ರೆಯು ಅವರ ಮೆದುಳಿನ ಶಸ್ತ್ರಚಿಕಿತ್ಸೆಗೆ ಅನುಮತಿ ಕೋರಿದೆ ಎನ್ನಲಾಗಿದೆ.

    ವೈದ್ಯಕೀಯ ತುರ್ತು ಪರಿಸ್ಥಿತಿಗಳಿಗೆ ಪ್ರಯಾಣ ಪರವಾನಗಿಗಳನ್ನು ಸಾಮಾನ್ಯವಾಗಿ ತ್ವರಿತವಾಗಿ ನೀಡಲಾಗುತ್ತದೆ. ಆದರೆ, ಈ ಪ್ರಕರಣದಲ್ಲಿ ವಿಳಂಬಕ್ಕೆ ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ ಎಂದು ಮೂಲಗಳು ತಿಳಿಸಿವೆ.

  • 2025ರಲ್ಲಿ ಹಜ್‌ ಯಾತ್ರೆಗೆ ಮಕ್ಕಳು ನಿಷೇಧ – ಕಾರಣ ಏನು ಗೊತ್ತಾ?

    2025ರಲ್ಲಿ ಹಜ್‌ ಯಾತ್ರೆಗೆ ಮಕ್ಕಳು ನಿಷೇಧ – ಕಾರಣ ಏನು ಗೊತ್ತಾ?

    2025ರಲ್ಲಿ ಹಜ್‌ (Hajj) ಯಾತ್ರೆಗೆ ಸಂಬಂಧಿಸಿದಂತೆ ಸೌದಿ ಅರೇಬಿಯಾ (Saudi Arabia) ಸರ್ಕಾರ ಹಲವು ನಿರ್ಧಾರಗಳನ್ನು ಕೈಗೊಂಡಿದೆ. ಈ ಬಾರಿ ಹಜ್‌ ಯಾತ್ರೆಗೆ ಮಕ್ಕಳನ್ನು ನಿಷೇಧಿಸಲಾಗಿದೆ ಎಂದು ಅಲ್ಲಿನ ಸರ್ಕಾರ ಘೋಷಿಸಿದೆ. ಅಲ್ಲದೇ ವೀಸಾಗೆ ಸಂಬಂಧಿಸಿದಂತೆ ಹಲವು ಮಹತ್ವದ ಕ್ರಮಗಳನ್ನು ಕೂಡ ಸೌದಿ ಅರೇಬಿಯಾ ಸರ್ಕಾರ ಕೈಗೊಂಡಿದೆ. ಈ ಬಾರಿ ಹಜ್‌ ಯಾತ್ರೆಗೆ ಮಕ್ಕಳ ಮೇಲೆ ನಿಷೇಧವೇಕೆ? ವೀಸಾಗೆ ಸಂಬಂಧಿಸಿದಂತೆ ಸೌದಿ ಅರೇಬಿಯಾ ತೆಗೆದುಕೊಂಡಿರುವ ಕ್ರಮಗಳೇನು ಎಂಬುದರ ಕುರಿತು ಇಲ್ಲಿ ವಿವರಿಸಲಾಗಿದೆ.

    ಹಜ್‌ ಯಾತ್ರೆಯಲ್ಲಿ ಮಕ್ಕಳಿಗೆ ನಿಷೇಧವೇಕೆ?
    2025ರ ಜೂನ್‌ನಲ್ಲಿ ಪ್ರಾರಂಭವಾಗುವ ಹಜ್‌ ಯಾತ್ರೆಗೆ ನೋಂದಣಿ ಆರಂಭವಾಗಿದೆ. ಈ ಬೆನ್ನಲ್ಲೇ ಸೌದಿ ಅರೇಬಿಯಾ ಸರ್ಕಾರ ಈ ಬಾರಿ ಮಕ್ಕಳನ್ನು ಹಜ್‌ ಯಾತ್ರೆಗೆ ಅನುಮತಿಸುವುದಿಲ್ಲ ಎಂದು ಹೇಳಿದೆ. ಈ ವಾರ್ಷಿಕ ಯಾತ್ರೆಯ ಸಂದರ್ಭದಲ್ಲಿ ಜನಸಂಖ್ಯೆ ಹೆಚ್ಚಾಗುವ ಹಿನ್ನೆಲೆ ಮಕ್ಕಳ ಆರೋಗ್ಯ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹಜ್‌ ಮತ್ತು ಉಮ್ರಾ ಸಚಿವಾಲಯ ತಿಳಿಸಿದೆ.

    ಮಕ್ಕಳನ್ನು ಜನದಟ್ಟಣೆಯ ಅಪಾಯದಿಂದ ರಕ್ಷಿಸಲು ಹಾಗೂ ಯಾತ್ರೆಯ ಅನುಭವವನ್ನು ಮತ್ತಷ್ಟು ಸೀಮಾತೀತಗೊಳಿಸಲು ಹಜ್ ಯಾತ್ರೆಗೆ ಮಕ್ಕಳನ್ನು ನಿಷೇಧಿಸಲಾಗಿದೆ. ಅಪಾಯಕಾರಿ ಸನ್ನಿವೇಶಗಳಲ್ಲಿ ಭಾರಿ ಜನಜಂಗುಳಿಯನ್ನು ನಿಯಂತ್ರಿಸಬೇಕಾಗುವುದರಿಂದ ಹಜ್ ಸಂದರ್ಭದಲ್ಲಿ ಸಣ್ಣ ಮಕ್ಕಳು ಗಂಭೀರ ಅಪಾಯಕ್ಕೊಳಗಾಗುವ ಸಾಧ್ಯತೆ ಇದೆ ಎಂದು ಸಚಿವಾಲಯ ಒತ್ತಿ ಹೇಳಿದೆ.

    ಇದರೊಂದಿಗೆ, 2025ರ ಹಜ್ ಯಾತ್ರೆ ಕೈಗೊಳ್ಳಲು ಮೊದಲ ಬಾರಿಯ ಯಾತ್ರಾರ್ಥಿಗಳಿಗೆ ಆದ್ಯತೆ ನೀಡಲಾಗಿದೆ. ಎಷ್ಟು ಸಾಧ್ಯವೊ ಅಷ್ಟು ಮುಸ್ಲಿಮರಿಗೆ ತಮ್ಮ ಜೀವಮಾನದಲ್ಲಿ ಒಮ್ಮೆಯಾದರೂ ಈ ಪವಿತ್ರ ಯಾತ್ರೆಯ ಅವಕಾಶ ಮಾಡಿಕೊಡಲು ಸೌದಿ ಅರೇಬಿಯಾ ಈ ಕ್ರಮಕ್ಕೆ ಮುಂದಾಗಿದೆ.

    ಹಜ್‌ ಯಾತ್ರೆಗೆ ನೋಂದಣಿ ಹೇಗೆ?
    ಈ ವರ್ಷದ ಹಜ್ ನೋಂದಣಿ ಆರಂಭವಾಗಿದೆ. ಸೌದಿ ಪ್ರಜೆಗಳು ಮತ್ತು ವಿದೇಶಿ ನಿವಾಸಿಗಳಿಗೆ ನೋಂದಣಿ ಆರಂಭವಾಗಿದೆ ಎಂದು ಹಜ್ ಮತ್ತು ಉಮ್ರಾ ಸಚಿವಾಲಯವು ತಮ್ಮ ಎಕ್ಸ್ ಖಾತೆಯಲ್ಲಿ ತಿಳಿಸಿದೆ. ‘ನುಸ್ಕ್’ ಆ್ಯಪ್ ಅಥವಾ ಆನ್‌ಲೈನ್ ಪೋರ್ಟಲ್ ಮೂಲಕ ನೋಂದಣಿ ಮಾಡಬೇಕು.

    ಹಜ್‌ಗೆ ಹೋಗಲು ಬಯಸುವವರು ತಮ್ಮ ಆರೋಗ್ಯ ಸ್ಥಿತಿ, ಜೊತೆಯಲ್ಲಿ ಹೋಗುವವರ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕು. ಅರ್ಜಿ ಸ್ವೀಕರಿಸಿದ ನಂತರ, ಪ್ಯಾಕೇಜ್‌ಗಳು ಲಭ್ಯವಾದಾಗ ಬುಕ್ ಮಾಡಲು ಬಯಸುವವರಿಗೆ ಮಾಹಿತಿ ನೀಡಲಾಗುತ್ತದೆ. ಈ ಹಿಂದೆ ಹಜ್ ಮಾಡದವರಿಗೆ ಆದ್ಯತೆ ನೀಡಲಾಗುವುದು ಎಂದು ಸಚಿವಾಲಯ ತಿಳಿಸಿದೆ.

    ಕಠಿಣ ವೀಸಾ ನಿಯಮ:
    ಹಜ್ ಯಾತ್ರೆಯಲ್ಲಿ ಅನಧಿಕೃತ ಪಾಲ್ಗೊಳ್ಳುವಿಕೆಯನ್ನು ತಡೆಯಲು ಸೌದಿ ಅರೇಬಿಯಾ ತನ್ನ ವೀಸಾ ನೀತಿಯಲ್ಲಿ ಪ್ರಮುಖ ಬದಲಾವಣೆಗಳನ್ನು ಘೋಷಿಸಿದೆ. ನಿರ್ದಿಷ್ಟ ದೇಶಗಳಿಂದ ಪ್ರವಾಸೋದ್ಯಮ, ವ್ಯಾಪಾರ ಮತ್ತು ಕುಟುಂಬ ಭೇಟಿಗಳಿಗಾಗಿ ಒಂದು ವರ್ಷದ ಬಹು-ಪ್ರವೇಶ ವೀಸಾಗಳನ್ನು ಸರ್ಕಾರ ಅನಿರ್ದಿಷ್ಟವಾಗಿ ಸ್ಥಗಿತಗೊಳಿಸಿದೆ.

    ಫೆಬ್ರವರಿ 1, 2025ರಿಂದ ಭಾರತ ಸೇರಿದಂತೆ 14 ದೇಶಗಳ ನಿವಾಸಿಗಳು ಮಾತ್ರ ಏಕಪ್ರವೇಶ ವೀಸಾ (Single Entry Visa) ಗಳಿಗೆ ಅರ್ಹರಾಗಲಿದ್ದಾರೆ. ಈ ನಡೆಯು ಬಹುಪ್ರವೇಶ ವೀಸಾಗಳ ದುರ್ಬಳಕೆಯನ್ನು ಮಟ್ಟ ಹಾಕುವ ಉದ್ದೇಶ ಹೊಂದಿದ್ದು, ಕೆಲವು ಪ್ರವಾಸಿಗರು ಅಧಿಕೃತ ನೋಂದಣಿ ಇಲ್ಲದೆ ಹಜ್ ನಲ್ಲಿ ಭಾಗವಹಿಸುತ್ತಿರುವುದಿಂದ ಈ ನೀತಿಯನ್ನು ಜಾರಿಗೊಳಿಸಲಾಗಿದೆ.

    ಫೆಬ್ರವರಿ 1ರಿಂದ ಈ ನಿಯಮಗಳು ಅನ್ವಯವಾಗಿದೆ. ಭಾರತ ಸೇರಿದಂತೆ 14 ದೇಶಗಳ ವ್ಯಕ್ತಿಗಳು 30 ದಿನಗಳವರೆಗೆ ಮಾನ್ಯವಾಗಿರುವ ಏಕ-ಪ್ರವೇಶ ವೀಸಾಗಳಿಗೆ ಮಾತ್ರ ಅರ್ಹರಾಗಿರುತ್ತಾರೆ. ಈ ನಿಯಮಗಳು ಅಲ್ಜೀರಿಯಾ, ಬಾಂಗ್ಲಾದೇಶ, ಈಜಿಪ್ಟ್, ಇಥಿಯೋಪಿಯಾ, ಭಾರತ, ಇಂಡೋನೇಷ್ಯಾ, ಇರಾಕ್, ಜೋರ್ಡಾನ್, ಮೊರಾಕೊ, ನೈಜೀರಿಯಾ, ಪಾಕಿಸ್ತಾನ, ಸುಡಾನ್, ಟುನೀಶಿಯಾ ಮತ್ತು ಯೆಮೆನ್ ದೇಶಗಳಿಂದ ಭೇಟಿ ನೀಡುವ ಜನರಿಗೆ ಅನ್ವಯಿಸುತ್ತದೆ.

    ಈ ಹಿಂದೆ ಸೌದಿ ಅರೇಬಿಯಾಕ್ಕೆ ಬಹು-ಪ್ರವೇಶ ವೀಸಾಗಳನ್ನು ಹೊಂದಿರುವ ಅನೇಕ ಜನರು ನೋಂದಣಿ ಇಲ್ಲದೇ ಹಜ್‌ನಲ್ಲಿ ಭಾಗವಹಿಸಿದ್ದರು. ಇದರಿಂದಾಗಿ ಜನದಟ್ಟಣೆ ಉಂಟಾಗಿತ್ತು. 2022ರಲ್ಲಿ ಸುಮಾರು 2.5 ಮಿಲಿಯನ್ ಭಾರತೀಯರು ಸೌದಿ ಅರೇಬಿಯಾಕ್ಕೆ ಭೇಟಿ ನೀಡಿದ್ದರು.

    2024ರಲ್ಲಿ, 1,200ಕ್ಕೂ ಹೆಚ್ಚು ಯಾತ್ರಿಕರು ತೀವ್ರ ಶಾಖ ಮತ್ತು ಜನದಟ್ಟಣೆಯಿಂದ ಸಾವನ್ನಪ್ಪಿದ್ದರು. ಯಾವುದೇ ನೋಂದಣಿಯಿಲ್ಲದೇ ಅನಧಿಕೃತವಾಗಿ ಹಜ್‌ ಯಾತ್ರೆಗೆ ಆಗಮಿಸಿರುವುದು ಈ ದುರಂತಕ್ಕೆ ಕಾರಣವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    2024ರಲ್ಲಿ 18.3 ಕೋಟಿಗೂ ಹೆಚ್ಚು ಮುಸ್ಲಿಮರು ಹಜ್ ಯಾತ್ರೆ ಮಾಡಿದ್ದಾರೆ. ಈ ಪೈಕಿ 22 ದೇಶಗಳಿಂದ 16 ಕೋಟಿಗೂ ಹೆಚ್ಚು ಜನರು ಆಗಮಿಸಿದ್ದರು. ಸುಮಾರು 2,22,000 ಸೌದಿ ನಾಗರಿಕರು ಮತ್ತು ನಿವಾಸಿಗಳು ಹಜ್‌ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು ಎಂದು ಸೌದಿ ಹಜ್ ಅಧಿಕಾರಿಗಳು ತಿಳಿಸಿದ್ದಾರೆ.

    ಅಸೋಸಿಯೇಟೆಡ್ ಪ್ರೆಸ್ ವರದಿಯ ಪ್ರಕಾರ, 2015ರಲ್ಲಿ, ಹಜ್ ಸಮಯದಲ್ಲಿ ಮಿನಾದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 2,400ಕ್ಕೂ ಹೆಚ್ಚು ಯಾತ್ರಿಕರು ಸಾವನ್ನಪ್ಪಿದ್ದರು. ಹಜ್ ತೀರ್ಥಯಾತ್ರೆಯಲ್ಲಿ ಸಂಭವಿಸಿದ ಅತ್ಯಂತ ದೊಡ್ಡ ದುರಂತ ಇದಾಗಿದೆ. ಇದಕ್ಕೂ ಮೊದಲು 1990ರಲ್ಲಿ ನಡೆದ ಕಾಲ್ತುಳಿತದಲ್ಲಿ 1,426 ಮಂದಿ ಮೃತಪಟ್ಟಿದ್ದರು.

  • ಇನ್ಮುಂದೆ ಚೆನ್ನೈಗೆ ಹೋಗಬೇಕಿಲ್ಲ – ಬೆಂಗಳೂರಿನಲ್ಲಿ ಸಿಗುತ್ತೆ ಅಮೆರಿಕ ವೀಸಾ

    ಇನ್ಮುಂದೆ ಚೆನ್ನೈಗೆ ಹೋಗಬೇಕಿಲ್ಲ – ಬೆಂಗಳೂರಿನಲ್ಲಿ ಸಿಗುತ್ತೆ ಅಮೆರಿಕ ವೀಸಾ

    – ಅಮೆರಿಕ ದೂತವಾಸ ಕಚೇರಿ ಉದ್ಘಾಟನೆ

    ಬೆಂಗಳೂರು: ಇನ್ನು ಮುಂದೆ ಅಮೆರಿಕದ ವೀಸಾ (Visa) ಪಡೆಯಲು ಬೆಂಗಳೂರಿಗರು ಚೆನ್ನೈ, ಹೈದರಾಬಾದ್‌ಗೆ ಹೋಗದೇ ಬೆಂಗಳೂರಿನಲ್ಲೇ (Bengaluru) ಪಡೆಯಬಹುದು. ಬೆಂಗಳೂರಿನಲ್ಲೇ ದೂತವಾಸ ಕಚೇರಿ (US Consulate) ಅಧಿಕೃತವಾಗಿ ಆರಂಭವಾಗಿದ್ದು ಇಂದು (ಜ.17) ಉದ್ಘಾಟನೆಯಾಗಿದೆ.

    ಡಿಸಿಎಂ ಡಿಕೆ ಶಿವಕುಮಾರ್‌, ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್(Jaishankar), ಭಾರತದಲ್ಲಿರುವ ಅಮರಿಕದ ರಾಯಭಾರಿ ಎರಿಕ್ ಗಾರ್ಸೆಟ್ಟಿ ಅವರು ತಾತ್ಕಾಲಿಕ ದೂತವಾಸ ಕಚೇರಿಯನ್ನು ಉದ್ಘಾಟಿಸಿದರು.

    ಬೆಂಗಳೂರಿನ ವಿಠಲ್ ಮಲ್ಯ ರಸ್ತೆಯಲ್ಲಿರುವ ಜೆ.ಡಬ್ಲ್ಯು.ಮಾರಿಯೆಟ್ ಹೋಟೆಲ್‌ನಲ್ಲಿ ತಾತ್ಕಾಲಿಕ ದೂತಾವಾಸ ಕಚೇರಿ ಕಾರ್ಯಾರಂಭವಾಗಿದೆ. ಮುಂದಿನ ದಿನದಲ್ಲಿ ನಗರದ ಆಯಕಟ್ಟಿನ ಭಾಗದಲ್ಲಿ ಶಾಶ್ವತ ಕಚೇರಿ ಸ್ಥಾಪಿಸಲಾಗುವುದು. ಶಾಶ್ವತ ಕಚೇರಿ ಸ್ಥಾಪನೆಯಾಗುವರೆಗೂ ಖಾಸಗಿ ಹೋಟೆಲಿನಲ್ಲಿ ಕಾರ್ಯನಿರ್ವಹಿಸಲಿದೆ.

    ಇಲ್ಲಿಯವರೆಗೆ ಚೆನ್ನೈ, ಹೈದರಾಬಾದ್, ಮುಂಬೈ, ಕೋಲ್ಕತ್ತಾಗಳಲ್ಲಿ ಅಮೆರಿಕದ ದೂತಾವಾಸ ಕಚೇರಿಗಳು ಕಾರ್ಯನಿರ್ವಹಿಸುತ್ತಿದ್ದವು. ಭಾರತ ಮತ್ತು ಅಮೆರಿಕ ಸಂಬಂಧ ಬಲವರ್ಧನೆಯಾಗಿ ಬೆಂಗಳೂರಿನಲ್ಲಿ ಅಮೆರಿಕದ ದೂತಾವಾಸ ಕಚೇರಿ ಆರಂಭವಾಗಿದೆ. ಇದನ್ನೂ ಓದಿ: ಮಹಾ ಕುಂಭಮೇಳದಲ್ಲಿ ಚಿತ್ರವಿಚಿತ್ರ ಸನ್ನಿವೇಶ – 9 ವರ್ಷದಿಂದ ಸಾಧು ತಲೆಯ ಮೇಲೆ ಕುಳಿತ ಪಾರಿವಾಳ!

    ಅಮೆರಿಕದ ಪ್ರಮುಖ ನಗರಗಳಿಂದ ಬೆಂಗಳೂರಿಗೆ ನೇರ ವಿಮಾನಯಾನ ಸೌಲಭ್ಯ ಇದೆ. ಆದರೆ ಆದರೆ ವೀಸಾ ಮತ್ತಿತರ ಕೆಲಸಗಳಿಗೆ ಬೇಕಾದ ಸೌಕರ್ಯ ಇರಲಿಲ್ಲ. ಇನ್ನು ಮುಂದೆ ಅಮೆರಿಕಕ್ಕೆ ಶಿಕ್ಷಣ, ಉದ್ಯೋಗ, ವ್ಯವಹಾರಕ್ಕೆ ಹೋಗೋರಿಗೆ ಇಲ್ಲೇ ವೀಸಾ ಸಿಗಲಿದೆ.

    ಡಿಸಿಎಂ ಡಿಕೆ ಶಿವಕುಮಾರ್, ಸಚಿವ ಎಂಬಿ ಪಾಟೀಲ್, ಸಚಿವ ಪ್ರಿಯಾಂಕ್ ಖರ್ಗೆ, ಸಂಸದರಾದ ತೇಜಸ್ವಿಸೂರ್ಯ, ಪಿ ಸಿ ಮೋಹನ್, ಡಾ ಮಂಜುನಾಥ್, ಐಟಿ ಉದ್ಯಮಿಗಳಾದ ಕಿರಣ್ ಮಜುಂದಾರ್ ಷಾ, ಕ್ರಿಸ್ ಗೋಪಾಲಕೃಷ್ಣನ್, ಯುಎಸ್ ದೂತವಾಸ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

    ಆರಂಭದಲ್ಲಿ ಒಂದು ಒಂದು ಮಿತಿಯಲ್ಲಿ ವೀಸಾ ನೀಡಲಾಗುತ್ತದೆ. ಶಾಶ್ವತ ಕಚೇರಿ ಆರಂಭವಾದ ಬಳಿಕ ಸಂಪೂರ್ಣವಾಗಿ ಕಚೇರಿ ಸಿಬ್ಬಂದಿ ತಮ್ಮ ಕೆಲಸದಲ್ಲಿ ತೊಡಗಲಿದ್ದಾರೆ.

  • ಕೆನಡಾ ಭಾರತೀಯರಿಗೆ ನೀಡುವ ಪ್ರವಾಸಿ ವೀಸಾಗಳನ್ನು ಕಡಿಮೆಗೊಳಿಸುತ್ತಿದೆ ಏಕೆ?

    ಕೆನಡಾ ಭಾರತೀಯರಿಗೆ ನೀಡುವ ಪ್ರವಾಸಿ ವೀಸಾಗಳನ್ನು ಕಡಿಮೆಗೊಳಿಸುತ್ತಿದೆ ಏಕೆ?

    ಕೆನಡಾ ಭಾರತೀಯರಿಗೆ ನೀಡುವ ಪ್ರವಾಸಿ ವೀಸಾಗಳನ್ನು ಕೆಲವು ಮಾನದಂಡಗಳ ಆಧಾರದ ಮೇಲೆ ಕಡಿಮೆಗೊಳಿಸುತ್ತಿದೆ. ಯುಎಸ್-ಕೆನಡಾ ಗಡಿ ದುರುಪಯೋಗ ಆರೋಪ, ಭಾರತ-ಕೆನಡಾ ರಾಜತಾಂತ್ರಿಕ ಗಲಾಟೆ ಇವು ಪ್ರಮುಖ ಪಾತ್ರವನ್ನು ವಹಿಸುತ್ತವೆ.

    ಕೆನಡಾವು ಭಾರತೀಯರಿಗೆ ನೀಡುತ್ತಿರುವ ಪ್ರವಾಸಿ ವೀಸಾಗಳ ಸಂಖ್ಯೆಯನ್ನು ತೀವ್ರವಾಗಿ ಕಡಿತಗೊಳಿಸಿದ್ದು, 80% ರಿಂದ 20% ಇಳಿಸಿದೆ.

    ಇತ್ತೀಚಗೆ ಕೆನಡಾ ತನ್ನ ವೀಸಾ ನೀತಿಯನ್ನು ತಿದ್ದುಪಡಿ ಮಾಡಿದೆ. 10 ವರ್ಷಗಳ ಹಳೆಯವೀಸಾಗಳನ್ನು ಸ್ಥಗಿತಗೊಳಿಸಿದೆ. ಇನ್ನೂ ವಿಸ್ತೃತ ಅವಧಿಯ ವೀಸಾಗಳನ್ನು ವೈಯಕ್ತಿಕ ಮೌಲ್ಯಮಾಪನದ ಆಧಾರದ ಮೇಲೆ ಅನುಮತಿ ನೀಡುತ್ತದೆ. ಈ ವೀಸಾ ನೀತಿಯ ಬದಲಾವಣೆಯು ತಮ್ಮ ಜೀವನ ಮಟ್ಟವನ್ನು ನಿರ್ವಹಿಸಲು, ವಸತಿ ಕೊರತೆಯನ್ನು ಪರಿಹರಿಸಲು, ಜೀವನ ವೆಚ್ಚವನ್ನು ನಿಯಂತ್ರಣಕ್ಕೆ ತರಲು ಸಹಾಯ ಮಾಡುವ ಗುರಿಯನ್ನು ಹೊಂದಿದೆ.

    ಕುಸಿತಕ್ಕೆ ಮೂಲ ಕಾರಣವೇನು?
    ಭಾರತ ಮತ್ತು ಕೆನಡಾ ನಡುವಿನ ಸಂಬಂಧದಲ್ಲಿ ಒತ್ತಡದ ಹೊರತಾಗಿಯೂ, 2024ರ ಮೊದಲಾರ್ಧದಲ್ಲಿ ಕೆನಡಾದಿಂದ ಭಾರತೀಯರಿಗೆ ನೀಡಲಾದ ಪ್ರವಾಸಿ ವೀಸಾಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ. ಜನವರಿ ಮತ್ತು ಜುಲೈ ನಡುವೆ ಭಾರತೀಯರಿಗೆ 3,65,750 ಸಂದರ್ಶಕರ ವೀಸಾಗಳನ್ನು ನೀಡಿದೆ. ಇನ್ನೂ 2023ರ ಇದೇ ಅವಧಿಯಲ್ಲಿ 3,45,631 ವೀಸಾಗಳನ್ನು ನೀಡಲಾಗಿತ್ತು.

    ಈ ಕುರಿತು ಕೆನಡಾದ ವಲಸೆ ಸಚಿವ ಮಾರ್ಕ್ ಮಿಲ್ಲರ್, ಭಾರತದಲ್ಲಿ ಕೆನಡಾ ವಲಸೆ ಅಧಿಕಾರಿಗಳು 2023ರಲ್ಲಿ 27 ಜನರಿದ್ದರು. ಆದರೆ ಇದೀಗ ವಲಸೆ ಅಧಿಕಾರಿಗಳು ಕಡಿಮೆಯಾಗಿದ್ದು, 4ಕ್ಕೆ ಇಳಿದಿದೆ. ಹೀಗಾಗಿ ಇದು ಕೆನಡಾದಲ್ಲಿ ನೀಡಲಾಗುವ ವೀಸಾ ಪ್ರಕ್ರಿಯೆ ಮೇಲೆ ಪರಿಣಾಮ ಬೀರುತ್ತದೆ ಎಂದಿದ್ದಾರೆ.

    ಗಡಿ ದುರ್ಬಳಕೆ: ಭಾರತೀಯ ಪ್ರವಾಸಿಗರು ಅಮೆರಿಕಕ್ಕೆ ಅಕ್ರಮವಾಗಿ ಪ್ರವೇಶಿಸಲು ಕೆನಡಾ ಗಡಿಯನ್ನು ಬಳಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಅಮೆರಿಕಾ ಸರ್ಕಾರ ವೀಸಾ ನೀಡಲು ಕಟ್ಟುನಿಟ್ಟಾದ ವೀಸಾ ನಿಯಮಗಳನ್ನು ಹೊಂದಿದ್ದು, ವೀಸಾ ಪಡೆಯಲು ದೀರ್ಘ ಕಾಲ ಕಾಯಬೇಕಾಗುತ್ತದೆ. ಈ ಕಾರಣದಿಂದ ಯುಎಸ್ ವೀಸಾಗಳನ್ನು ಕೆನಡಾದಲ್ಲಿ ಪಡೆಯುವ ಉದ್ದೇಶದಿಂದ ಕೆನಾಡಕ್ಕೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಇನ್ನೂ ಯುಎಸ್ ಕಸ್ಟಮ್ಸ್ ಮತ್ತು ಬಾರ್ಡರ್ ಪ್ರೊಟೆಕ್ಷನ್ (ಸಿಬಿಪಿ) ಪ್ರಕಾರ, ಜೂನ್ 2024 ರಲ್ಲಿ 5,000ಕ್ಕೂ ಹೆಚ್ಚು ಭಾರತೀಯರು ಕೆನಡಾದಿಂದ ಯುಎಸ್‌ಗೆ ಕಾಲ್ನಡಿಗೆಯಲ್ಲಿ ಸರಿಯಾದ ದಾಖಲೆಗಳಿಲ್ಲದೆ ಪ್ರವೇಶಿದ್ದಾರೆ ಎಂದು ತಿಳಿಸಿದೆ.

    ದೇಶೀಯ ಕಾಳಜಿಗಳು: ದೇಶವು ತಾತ್ಕಾಲಿಕ ನಿವಾಸಿಗಳ ಸಂಖ್ಯೆಯನ್ನು ಮಿತಿಗೊಳಿಸುವ ಉದ್ದೇಶವನ್ನು ಹೊಂದಿದ್ದು, ವೀಸಾಕ್ಕೆ ಅರ್ಜಿ ಸಲ್ಲಿಸುವ ಪ್ರತಿ ಅರ್ಜಿದಾರರ ಪರಿಶೀಲನೆಯ ನಂತರ ವೀಸಾ ನೀಡುತ್ತದೆ. 2023ರ ಜೂನ್‌ನಲ್ಲಿ ಸರ್ರೆಯ ಗುರುದ್ವಾರದ ಹೊರಗೆ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಭಾರತೀಯ ಅಧಿಕಾರಿಗಳ ಸಂಬಂಧವಿದೆ ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಕಳೆದ ವರ್ಷ ಅಕ್ಟೋಬರ್‌ನಲ್ಲಿ ತಮ್ಮ ಸಂಸತ್ತಿನಲ್ಲಿ ಆರೋಪಿಸಿದರು. ಈ ಕಾರಣದಿಂದ ಭಾರತ ಮತ್ತು ಕೆನಡಾ ಸಂಬಂಧದಲ್ಲಿ ಬಿಕ್ಕಟ್ಟು ಉಂಟಾಗಿತ್ತು. ಇದು ಒಂದು ಕಾರಣವಾಗಿದ್ದು, ವೀಸಾ ಕಡಿತಗೊಳಿಸಲು ಇದು ಕಾರಣವಲ್ಲ ಎಂದು ಕೆನಡಾ ಸ್ಪಷ್ಟನೆ ನೀಡಿದೆ.

    ಕೆನಡಾದ ಹೊಸ ವೀಸಾ ಮಾರ್ಗಸೂಚಿಗಳು ಯಾವುವು?
    ಹೊಸ ನಿಯಮದ ಪ್ರಕಾರ, ವೀಸಾ ಅಧಿಕಾರಿಗಳು ಪ್ರತಿ ಅರ್ಜಿದಾರರನ್ನು ಪ್ರತ್ಯೇಕವಾಗಿ ಪರಿಶೀಲನೆ ನಡೆಸುತ್ತಾರೆ. ಏಕ-ಪ್ರವೇಶ ಮತ್ತು ಬಹು-ಪ್ರವೇಶದ ಕೆನಡಿಯನ್ ವೀಸಾದ ವೆಚ್ಚವು ಪ್ರತಿ ವ್ಯಕ್ತಿಗೆ ಕೆನಡಾ ಮೌಲ್ಯ 100 ಆಗಿದೆ. ಒಂದು ಹಾಗೂ ಎರಡು ವೀಸಾಗಳ ನಡುವೆ ಯಾವುದೇ ವೆಚ್ಚದ ವ್ಯತ್ಯಾಸವಿಲ್ಲ. ಸರ್ಕಾರವು ತನ್ನ ವಲಸೆ ಮಟ್ಟದ ಯೋಜನೆಯನ್ನು ಕೂಡ ಪರಿಷ್ಕರಿಸಿದ್ದು, ಅದರ ಗುರಿಯನ್ನು 5,00,000 ಹೊಸ ಶಾಶ್ವತ ನಿವಾಸಿಗಳಿಂದ 2025ರಲ್ಲಿ 3,95,000, 2026ರಲ್ಲಿ 3,80,000 ಮತ್ತು 2027ರಲ್ಲಿ 3,65,000ಕ್ಕೆ ಇಳಿಸಿದೆ.