Tag: Virtual Climate

  • ಜೋ ಬೈಡನ್ ಅವರ ವರ್ಚುವಲ್ ಹವಾಮಾನ ಶೃಂಗಸಭೆಯ ಆಹ್ವಾನವನ್ನು ಸ್ವೀಕರಿಸಿದ ಮೋದಿ

    ಜೋ ಬೈಡನ್ ಅವರ ವರ್ಚುವಲ್ ಹವಾಮಾನ ಶೃಂಗಸಭೆಯ ಆಹ್ವಾನವನ್ನು ಸ್ವೀಕರಿಸಿದ ಮೋದಿ

    ನವದೆಹಲಿ: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷರಾದ ಜೋ ಬೈಡನ್ ಅವರು ನಡೆಸುವ ನಾಯಕರ ವರ್ಚುವಲ್ ಹವಾಮಾನ ಶೃಂಗಸಭೆಯ ಆಹ್ವಾನವನ್ನು ಸ್ವೀಕರಿಸಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

    ನಾಯಕರ ವರ್ಚುವಲ್ ಹವಾಮಾನ ಶೃಂಗಸಭೆಯು ಆನ್‍ಲೈನ್ ಮೂಲಕ ಎಪ್ರಿಲ್ 22 ಮತ್ತು 23ರಂದು ನಡೆಯಲಿದೆ. ಜಾನ್ ಕರ್ರಿ ಎಪ್ರಿಲ್ 5 ರಿಂದ 8ರ ವರೆಗೆ ಭಾರತ ಪ್ರವಾಸ ಕೈಗೊಳ್ಳಲಿದ್ದು, ಈ ವೇಳೆ ಅಮೆರಿಕದ ಅಧ್ಯಕ್ಷರಾದ ಜೋ ಬಿಡೆನ್ ಅವರ ಹವಾಮಾನ ಶೃಂಗಸಭೆಗೆ ಪೂರಕವಾದ ಮಾಹಿತಿಯನ್ನು ಕಲೆ ಹಾಕಲಿದ್ದಾರೆ. ಈ ಹಿಂದೆ ಭಾರತದಲ್ಲಿ ಹವಾಮಾನ ಕುರಿತು ಮಹತ್ವದ ಸಭೆ ನಡೆದಿತ್ತು ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

    ಈ ಕುರಿತು ಪ್ರತಿಕ್ರಿಯಿಸಿರುವ ಎಂಇಎ ವಕ್ತಾರ ಅರಿಂದಮ್ ಬಾಗ್ಚಿ, ಅಮೆರಿಕ ಅಧ್ಯಕ್ಷರಾದ ಜೋ ಬೈಡನ್ ಅವರು ಭಾರತ ಪ್ರಧಾನಿ ನರೇಂದ್ರ ಮೋದಿ ಅವರನ್ನು ಎಪ್ರಿಲ್ 22 ಮತ್ತು 23ರಂದು ನಡೆಯಲಿರುವ ನಾಯಕರ ವರ್ಚುವಲ್ ಹವಾಮಾನ ಶೃಂಗಸಭೆಯಲ್ಲಿ ಭಾಗವಹಿಸುವಂತೆ ಕೇಳಿಕೊಂಡಿದ್ದಾರೆ ಇದಕ್ಕೆ ಮೋದಿ ಒಪ್ಪಿಗೆ ಸೂಚಿಸಿದ್ದಾರೆ. ಈ ಸಭೆಯು ಇಂಧನ ಮತ್ತು ಹವಾಮಾನದ ಕುರಿತು ನಡೆಯಲಿರುವ ಪ್ರಮುಖ ಆರ್ಥಿಕ ಸಮಾಲೋಚನೆಗೆ ವೇದಿಕೆಯಾಗಲಿದೆ ಎಂದು ತಿಳಿಸಿದ್ದಾರೆ.

    ಬೈಡನ್ ಅವರು ಈಗಾಗಲೇ ಮೋದಿಸಹಿತ ಒಟ್ಟು 40 ವಿವಿಧ ರಾಷ್ಟ್ರಗಳ ನಾಯಕರನ್ನು ಈ ಸಭೆಗಾಗಿ ಆಹ್ವಾನಿಸಿದ್ದಾರೆ ಎಂದು ಅಮೆರಿಕದ ಶ್ವೇತಭವನದಿಂದ ವರದಿಯಾಗಿದೆ.

    ಎರಡು ದಿನಗಳ ಈ ಸಭೆಯಲ್ಲಿ ಅಮೆರಿಕಾ 2030ರ ವೇಳೆಗೆ ಇಂಗಾಲದ ಹೊರಸೂಸುವಿಕೆ ಪ್ರಮಾಣವನ್ನು ಕಡಿಮೆ ಮಾಡುವ ತನ್ನ ಗುರಿಯ ಕುರಿತು ಎಲ್ಲಾ ದೇಶಗಳ ನಾಯಕರೊಂದಿಗೆ ಚರ್ಚೆ ನಡೆಸಲಿದೆ.