Tag: Virendra Sehwag

  • ಇತಿಹಾಸ ತಪ್ಪು – ಪವರ್ ಫುಲ್ ಪೀಪಲ್ ಮೇಕ್ ಪ್ಲೇಸ್ ಪವರ್ ಫುಲ್: ಶಿವಾಜಿ ಜಯಂತಿ ಶುಭಕೋರಿದ ಸೆಹ್ವಾಗ್

    ಇತಿಹಾಸ ತಪ್ಪು – ಪವರ್ ಫುಲ್ ಪೀಪಲ್ ಮೇಕ್ ಪ್ಲೇಸ್ ಪವರ್ ಫುಲ್: ಶಿವಾಜಿ ಜಯಂತಿ ಶುಭಕೋರಿದ ಸೆಹ್ವಾಗ್

    ಮುಂಬೈ: ಪವರ್ ಫುಲ್ ಪೀಪಲ್ ಕಮ್ ಫ್ರಮ್ ಪವರ್ ಫುಲ್ ಪ್ಲೇಸಸ್. ಇತಿಹಾಸ ತಪ್ಪು ಪವರ್ ಫುಲ್ ಪೀಪಲ್ ಮೇಕ್ ಪ್ಲೇಸ್ ಪವರ್ ಫುಲ್ ಎಂದು ಭಾರತದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಶಿವಾಜಿ ಜಯಂತಿಯ ಶುಭಕೋರಿದ್ದಾರೆ.

    ಶಿವಾಜಿ ಜಯಂತಿಯ ಪ್ರಯುಕ್ತ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಸೆಹ್ವಾಗ್, ಪವರ್ ಫುಲ್ ಪೀಪಲ್ ಕಮ್ ಫ್ರಮ್ ಪವರ್ ಫುಲ್ ಪ್ಲೇಸಸ್. ಇತಿಹಾಸ ತಪ್ಪು ಪವರ್ ಫುಲ್ ಪೀಪಲ್ ಮೇಕ್ ಪ್ಲೇಸ್ ಪವರ್ ಫುಲ್ ದಿ ಗ್ರೇಟ್ ಛತ್ರಪತಿ ಶಿವಾಜಿ ಜಯಂತಿಯ ಶುಭಾಶಯಗಳು ಎಂದು ಬರೆದುಕೊಂಡು ಶಿವಾಜಿಯ ಫೋಟೋ ಒಂದನ್ನು ಪೋಸ್ಟ್ ಮಾಡಿದ್ದಾರೆ. ಇದನ್ನು ಓದಿ: ಡಾ.ವಿಷ್ಣು ಪುತ್ಥಳಿ ಅನಾವರಣಕ್ಕೆ ಹಿಜಬ್ -ಕೇಸರಿ ವಿವಾದ ಅಡ್ಡಿ

    ಪ್ರಧಾನಿ ನರೇಂದ್ರ ಮೋದಿ ಕೂಡ ಸಾಮಾಜಿಕ ಜಾಲತಾಣದ ಮೂಲಕ ಶಿವಾಜಿ ಜಯಂತಿಯ ಶುಭಕೋರಿದ್ದು, ನಾನು ಶಿವಾಜಿಯ ಸಾಧನೆಗೆ ಹೆಮ್ಮೆ ಪಡುತ್ತೇನೆ. ಅವರ ಆಡಳಿತ, ನಾಯಕತ್ವದ ಗುಣ, ಸಾಮಾಜಿಕ ಕಳಕಳಿ ಎಲ್ಲರಿಗೂ ಮಾದರಿ. ಸತ್ಯ ಮತ್ತು ನ್ಯಾಯದ ಪರ ನಿಲ್ಲುವ ಅವರ ಗುಣ ಅದ್ಭುತ. ಅವರ ಕನಸುಗಳನ್ನು ನನಸು ಮಾಡಲು ಪ್ರಯತ್ನಿಸೋಣ ಎಂದು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ:  ಕೃಷಿ ಕ್ಷೇತ್ರದಲ್ಲಿ ಕ್ರಾಂತಿ – 100 ʼಕಿಸಾನ್‌ ಡ್ರೋನ್‌ʼಗಳಿಗೆ ಪ್ರಧಾನಿ ಮೋದಿ ಚಾಲನೆ

  • ಒಂದೆರಡು ಪಂದ್ಯದಲ್ಲಿ ಆಡಿದ ಮಾತ್ರಕ್ಕೆ ಆತ ಸೆಹ್ವಾಗ್ ಆಗಲ್ಲ: ಸಲ್ಮಾನ್ ಬಟ್

    ಒಂದೆರಡು ಪಂದ್ಯದಲ್ಲಿ ಆಡಿದ ಮಾತ್ರಕ್ಕೆ ಆತ ಸೆಹ್ವಾಗ್ ಆಗಲ್ಲ: ಸಲ್ಮಾನ್ ಬಟ್

    ಇಸ್ಲಾಮಾಬಾದ್: ಒಂದೆರಡು ಪಂದ್ಯಗಳಲ್ಲಿ ಆತ ಆರಂಭಿಕನಾಗಿ ಬಂದು ಅಬ್ಬರದ ಬ್ಯಾಟಿಂಗ್ ಮಾಡಿದ ತಕ್ಷಣ ಆತ ವಿರೇಂದ್ರ ಸೆಹ್ವಾಗ್ ಆಗಲು ಸಾಧ್ಯವಿಲ್ಲ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಸಲ್ಮಾನ್ ಬಟ್ ಭಾರತದ ಯುವ ಆಟಗಾರನ ಕಾಲೆಳೆದಿದ್ದಾರೆ.

    ಇತ್ತೀಚೆಗೆ ಮುಕ್ತಾಯಗೊಂಡ ಭಾರತ ಹಾಗೂ ಶ್ರೀಲಂಕಾ ನಡುವಿನ ಏಕದಿನ ಪಂದ್ಯದಲ್ಲಿ ಆರಂಭಿಕನಾಗಿ ಬಂದು ಅಬ್ಬರದ ಬ್ಯಾಟಿಂಗ್ ಮಾಡುವ ಮೂಲಕ ಯುವ ಆಟಗಾರ ಪೃಥ್ವಿ ಶಾ ಬ್ಯಾಟಿಂಗ್‍ನಲ್ಲಿ ಮಿಂಚು ಹರಿಸಿದ್ದರು. ಇದನ್ನು ಗಮನಿಸಿ ಹಲವರು ಈತ ಭಾರತದ ಮರಿ ಸೆಹ್ವಾಗ್ ಎಂದು ಹಾಡಿ ಹೊಗಳಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಲ್ಮಾನ್ ಬಟ್, ಒಂದೆರಡು ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಮಾಡಿದ ತಕ್ಷಣ ಆತನನ್ನು ಸೆಹ್ವಾಗ್‍ಗೆ ಹೋಲಿಸುವುದು ಸರಿಯಲ್ಲ. ಆತ ಸೆಹ್ವಾಗ್ ಆಗಲು ಸಾಧ್ಯವಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಐಪಿಎಲ್ ಸೆಕೆಂಡ್ ಇನ್ನಿಂಗ್ಸ್ ಮೊದಲ ಪಂದ್ಯದಲ್ಲಿ ಚೆನ್ನೈ- ಮುಂಬೈ ಸೆಣಸಾಟ

    ಪೃಥ್ವಿ ಶಾ ಅವರನ್ನು ಈಗಲೇ ಕ್ರಿಕೆಟ್‍ನ ಸರ್ವಶ್ರೇಷ್ಠ ಆಟಗಾರರಾದ ವೀರೇಂದ್ರ ಸೆಹ್ವಾಗ್ ಅಥವಾ ವಿವಿಯನ್ ರಿಚರ್ಡ್ಸ್ ಅವರಿಗೆ ಹೋಲಿಕೆ ಮಾಡಬೇಡಿ. ಆ ದಿಗ್ಗಜ ಆಟಗಾರರು ದೊಡ್ಡ ಇನ್ನಿಂಗ್ಸ್ ಗಳನ್ನು ಆಡಿ ರನ್ ಕಲೆಹಾಕಿದ್ದಾರೆ. ಅವರಂತೆ ಪೃಥ್ವಿ ಶಾ ದೊಡ್ಡ ಇನ್ನಿಂಗ್ಸ್ ಗಳನ್ನು ಆಡಲಿ ಬಳಿಕ ಹೋಲಿಕೆ ಮಾಡುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ.

    ಪೃಥ್ವಿ ಶಾ ಕ್ರೀಸ್ ಬಂದ ತಕ್ಷಣ ದೊಡ್ಡ ಹೊಡೆತಗಳನ್ನು ಆಡಲು ಪ್ರಯತ್ನಿಸುತ್ತಾರೆ. ಇದು ತಪ್ಪು ಬ್ಯಾಟಿಂಗ್ ನಡೆಸಿ ನೆಲೆಯೂರಿ ಬಳಿಕ ದೊಡ್ಡ ಹೊಡೆತಗಳನ್ನು ಆಡಬೇಕು ಎಂದು ಬಟ್ ಸಲಹೆಯನ್ನು ಕೂಡ ಕೊಟ್ಟಿದ್ದಾರೆ. ಸಲ್ಮಾನ್ ಬಟ್ ಈ ಹಿಂದೆ ಪಾಕಿಸ್ತಾನ ಕ್ರಿಕೆಟ್‍ನಲ್ಲಿ ಫಿಕ್ಸಿಂಗ್ ಆರೋಪದಲ್ಲಿ ನಿಷೇಧ ಶಿಕ್ಷೆಗೆ ಗುರಿಯಾಗಿದ್ದರು. ಇದೀಗ ಸದಾ ಕ್ರಿಕೆಟ್ ಕುರಿತಾದ ಒಂದಲ್ಲ ಒಂದು ವಿಷಯದ ಬಗ್ಗೆ ಹೇಳಿಕೆ ನೀಡುವ ಮೂಲಕ ಸುದ್ದಿಯಾಗುತ್ತಿದ್ದಾರೆ.

  • ತಳ್ಳುವ ಗಾಡಿ ತಳ್ಳಲು ದಂಪತಿಗೆ ಸಹಾಯ ಮಾಡಿದ ಬೈಕರ್: ಸೆಹ್ವಾಗ್ ಶ್ಲಾಘನೆ

    ತಳ್ಳುವ ಗಾಡಿ ತಳ್ಳಲು ದಂಪತಿಗೆ ಸಹಾಯ ಮಾಡಿದ ಬೈಕರ್: ಸೆಹ್ವಾಗ್ ಶ್ಲಾಘನೆ

    ನವದೆಹಲಿ: ಫೈ ಓವರ್ ಮೇಲೆ ಕಷ್ಟಪಟ್ಟು ತಳ್ಳುವ ಗಾಡಿ (ರಿಕ್ಷಾ) ತಳ್ಳುತ್ತಿದ್ದ ದಂಪತಿಗೆ ಬೈಕ್ ಸವಾರನೊಬ್ಬ ಒಬ್ಬ ಸಹಾಯ ಮಾಡಿದ ವೀಡಿಯೋವನ್ನು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೆ ಜಿಂದಾಬಾದ್ ಹೇಳುವ ಮೂಲಕ ಆತನ ಕಾರ್ಯಕ್ಕೆ ಶಹಬ್ಬಾಸ್ ಗಿರಿ ನೀಡಿದ್ದಾರೆ.

    ಯೂಟ್ಯೂಬ್ ವೀಡಿಯೋದಿಂದ ಈ ಕ್ಲಿಪ್‍ನನ್ನು ಹೊರ ತೆಗೆಯಲಾಗಿದ್ದು, ತಳ್ಳುವ ಗಾಡಿ ಮೇಲೆ ಭಾರವಾದ ಲೋಡ್ ತುಂಬಿಕೊಂಡು ದಂಪತಿ ಹೋಗುತ್ತಿದ್ದರು. ಪತಿ ಗಾಡಿ ಪೆಡಲ್ ತುಳಿಯುತ್ತಿದ್ದರೆ ಪತ್ನಿ ಉರಿಬಿಸಿಲಿನಲ್ಲಿಯೂ ಗಾಡಿಯನ್ನು ತಳ್ಳುತ್ತಿದ್ದಳು. ಅದೇ ವೇಳೆ ಸೇತುವೆ ಮೇಲೆ ಹೋಗುತ್ತಿದ್ದ ಬೈಕರ್ ಒಬ್ಬ ಇದನ್ನು ನೋಡಿ ಮಹಿಳೆಯನ್ನು ತಳ್ಳುವ ಗಾಡಿಯಲ್ಲಿ ಕುಳಿತುಕೊಳ್ಳುವಂತೆ ವಿನಂತಿಸಿ ತನ್ನ ಕಾಲುಗಳ ಮೂಲಕ ರಿಕ್ಷಾವನ್ನು ಮುಖ್ಯ ರಸ್ತೆ ಬರುವವರೆಗೂ ತಳ್ಳುತ್ತಾನೆ.

    ಈ ವೀಡಿಯೋದಲ್ಲಿನ ಬೈಕ್ ಸವಾರ ತನ್ನ ಯೂಟ್ಯೂಬ್ ಚಾನಲ್ ಎನ್‍ಸಿಆರ್ ಬೈಕರ್ಜ್‍ನಲ್ಲಿ ರಮ್ಮಿ ರೈಡರ್ ಎಂದು ಗುರುತಿಸಿಕೊಂಡಿರುವುದಾಗಿ ತಿಳಿದು ಬಂದಿದೆ.

    ಇನ್ಸಾನಿಯತ್ ಜಿಂದಾಬಾದ್ ಎಂದು ಹೇಳುವ ಮೂಲಕ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ತಮ್ಮ ಟ್ವಿಟ್ಟರ್‍ನಲ್ಲಿ ಕ್ಲಿಪ್ ಹಂಚಿಕೊಂಡಿದ್ದಾರೆ. ಲೋಡ್ ಮಾಡಿದ ರಿಕ್ಷಾದ ಜೊತೆ ದಂಪತಿ ಮೇಲ್ಸೇತುವೆ ಮೇಲೆ ಹೋಗುತ್ತಿದ್ದರು. ಗಂಡ ರಿಕ್ಷಾವನ್ನು ಎಳೆಯುತ್ತಿದ್ದರೆ, ಪತ್ನಿ ರಿಕ್ಷಾವನ್ನು ತಳ್ಳುತ್ತಿದ್ದಳು. ಇದನ್ನು ನೋಡಿ ಬೈಕರ್ ಮಹಿಳೆಯನ್ನು ರಿಕ್ಷಾದಲ್ಲಿ ಕುಳಿತುಕೊಳ್ಳಲು ವಿನಂತಿಸಿದ್ದಾನೆ ಬಳಿಕ ರಿಕ್ಷಾವನ್ನು ತನ್ನ ಕಾಲುಗಳ ಮುಖಾಂತರ ತನ್ನ ಬೈಕ್‍ನೊಂದಿಗೆ ತಳ್ಳಿದರು ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.

    ವಿಡಿಯೋವನ್ನು ಒಂದು ದಿನದ ಹಿಂದೆ ಮೈಕ್ರೋಬ್ಲಾಗಿಂಗ್ ಪ್ಲಾಟ್‍ಫಾರ್ಮ್‍ನಲ್ಲಿ ಶೇರ್ ಮಾಡಿದ್ದು, ಇಲ್ಲಿಯವರೆಗೂ ಸುಮಾರು 2 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಹಾಗೂ ಬೈಕರ್ ರಿಕ್ಷಾ ತಳ್ಳಲು ಸಹಾಯ ಮಾಡಿದ್ದಕ್ಕಾಗಿ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ. ಜೊತೆಗೆ ಕಮೆಂಟ್‍ಗಳ ಸುರಿಮಳೆ ಹರಿದು ಬರುತ್ತಿದೆ.

  • ಆರ್‌ಸಿಬಿ ವಿರುದ್ಧ ಮಯಾಂಕ್ ಜೊತೆ ಗೇಲ್ ಓಪನರ್ ಆಗ್ಬೇಕು: ಸೆಹ್ವಾಗ್

    ಆರ್‌ಸಿಬಿ ವಿರುದ್ಧ ಮಯಾಂಕ್ ಜೊತೆ ಗೇಲ್ ಓಪನರ್ ಆಗ್ಬೇಕು: ಸೆಹ್ವಾಗ್

    – ರಾಹುಲ್ 3ನೇ ಕ್ರಮಾಂಕದಲ್ಲಿ ಆಡುವುದು ಸೂಕ್ತ

    ನವದೆಹಲಿ: ಇಂದು ನಡೆಯಲಿರುವ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ತಂಡಕ್ಕಾಗಿ ಮಯಾಂಕ್ ಅಗರ್ವಾಲ್ ಜೊತೆ ಕ್ರಿಸ್ ಗೇಲ್ ಓಪನರ್ ಆಗಬೇಕು ಎಂದು ವಿರೇಂದ್ರ ಸೆಹ್ವಾಗ್ ಹೇಳಿದ್ದಾರೆ.

    ಇಂದು ಐಪಿಎಲ್-2020ಯ 31ನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಖಾಮುಖಿಯಾಗಲಿದೆ. ಆಡಿದ ಏಳು ಪಂದ್ಯಗಳಲ್ಲಿ ಕೇವಲ ಒಂದರಲ್ಲಿ ಗೆದ್ದು ಸೋಲಿನ ಸುಳಿಯಲ್ಲಿರುವ ರಾಹುಲ್ ಪಡೆ, ಗೆಲುವಿನ ಹುಡುಕಾಟದಲ್ಲಿದೆ. ಇತ್ತ ಐದು ಪಂದ್ಯಗಳನ್ನು ಗೆದ್ದು ಬೀಗಿರುವ ಕೊಹ್ಲಿ ಪಡೆ ಗೆಲುವಿನ ನಾಗಲೋಟವನ್ನು ಮುಂದುವರಿಸುವ ತವಕದಲ್ಲಿದೆ.

    ಐಪಿಎಲ್ ಬಗ್ಗೆ ತಮ್ಮ ಯೂಟ್ಯೂಬ್ ಶೋ ವಿರು ಕಿ ಬೈಥಕ್‍ನಲ್ಲಿ ಮಾತನಾಡಿರುವ ಸೆಹ್ವಾಗ್, ಬೆಂಗಳೂರು ವಿರುದ್ಧ ಗೇಲ್ ಉತ್ತಮ ದಾಖಲೆಯನ್ನು ಹೊಂದಿದ್ದಾರೆ. ಅವರು 54 ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. ಅವರ ಬ್ಯಾಟಿಂಗ್ ಸ್ಟ್ರೈಕ್ ರೇಟ್ ಎಲ್ಲಾ ಬೌಲರ್ ಗಳಿಗೆ ತಿಳಿದಿದೆ. ಈ ಕಾರಣದಿಂದ ಇಂದಿನ ಪಂದ್ಯದಲ್ಲಿ ಗೇಲ್ ಸೀರಿಯಸ್ ಮ್ಯಾನ್ ಮಾಯಾಂಕ್ ಅಗರ್ವಾಲ್ ಅವರೊಂದಿಗೆ ಓಪನರ್ ಆಗಿ ಬರಬೇಕು. ನಂತರ ಕೆಎಲ್ 3ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದರೆ, ತಂಡ ಬ್ಯಾಲೆನ್ಸ್ ಆಗಿ ಕಾಣುತ್ತೆ ಎಂದಿದ್ದಾರೆ.

    https://www.instagram.com/p/CGWj-lRgWRV/

    ಕಳೆದ ಐದು ದಿನದ ಹಿಂದೆ ಕ್ರಿಸ್ ಗೇಲ್ ಅವರಿಗೆ ಫುಡ್ ಪಾಯಿಸನ್ ಆಗಿತ್ತು. ಈ ಕಾರಣದಿಂದ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಹೊಟ್ಟೆನೋವಿನ ಕಾರಣದಿಂದ ಕ್ರಿಸ್ ಗೇಲ್ ಅವರು ಎರಡು ಪಂದ್ಯಗಳಿಂದ ಹೊರಗೆ ಉಳಿದಿದ್ದರು. ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್‍ರೈಸರ್ಸ್ ಹೈದರಾಬಾದ್ ವಿರುದ್ಧ ಪಂದ್ಯಗಳಿಗೆ ಗೇಲ್ ಲಭ್ಯವಿರಲಿಲ್ಲ. ಆದರೆ ಈಗ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಇಂದಿನ ಪಂದ್ಯದಲ್ಲಿ ಆಡುವ ನಿರೀಕ್ಷೆ ಇದೆ.

    ಕ್ರಿಸ್ ಗೇಲ್ ಐಪಿಎಲ್‍ನಲ್ಲಿ 125 ಪಂದ್ಯಗಳಲ್ಲಿ 4484 ರನ್ ಗಳಿಸಿ ಐಪಿಎಲ್‍ನಲ್ಲಿ ಅತೀ ಹೆಚ್ಚು ರನ್ ಗಳಿಸಿದ್ದವರ ಪೈಕಿ 9 ನೇ ಸ್ಥಾನದಲ್ಲಿದ್ದಾರೆ. 41.13 ಸರಾಸರಿಯಲ್ಲಿ 6 ಶತಕ ಮತ್ತು 28 ಅರ್ಧಶತಕ ಭಾರಿಸಿದ್ದಾರೆ. ಐಪಿಎಲ್‍ನಲ್ಲಿ ಅತೀ ಹೆಚ್ಚು ಸಿಕ್ಸರ್ (326), ಸತಿ ಹೆಚ್ಚು ಶತಕಗಳು (6), ಅತಿ ಹೆಚ್ಚು ವೈಯಕ್ತಿಕ ಸ್ಕೋರ್ (175 ನಾಟ್ ಔಟ್) ಸೇರಿದಂತೆ ಅನೇಕ ಬ್ಯಾಟಿಂಗ್ ದಾಖಲೆಗಳನ್ನು ಹೊಂದಿದ್ದಾರೆ.

  • ಧೋನಿ ನಾಲ್ಕನೇ ಕ್ರಮಾಂಕದಲ್ಲಿ ಆಡುವಷ್ಟರಲ್ಲಿ ಭಾರತಕ್ಕೆ ಬುಲೆಟ್ ಟ್ರೈನ್ ಬರುತ್ತೆ: ಸೆಹ್ವಾಗ್

    ಧೋನಿ ನಾಲ್ಕನೇ ಕ್ರಮಾಂಕದಲ್ಲಿ ಆಡುವಷ್ಟರಲ್ಲಿ ಭಾರತಕ್ಕೆ ಬುಲೆಟ್ ಟ್ರೈನ್ ಬರುತ್ತೆ: ಸೆಹ್ವಾಗ್

    – ಮುರುಳಿ ವಿಜಯ್ ಟಿ-20 ಆಡುವಂತೆ ಕಾಣುತ್ತಿಲ್ಲ

    ನವದೆಹಲಿ: ಎಂಎಸ್ ಧೋನಿಯವರು ಚೆನ್ನೈ ತಂಡಕ್ಕಾಗಿ ನಾಲ್ಕನೇ ಕ್ರಮಾಂಕದಲ್ಲಿ ಆಡುವಷ್ಟರಲ್ಲಿ ಭಾರತಕ್ಕೆ ಬುಲೆಟ್ ಟ್ರೈನ್ ಬರುತ್ತೆ ಎಂದು ಭಾರತದ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್ ಅವರ ಹಾಸ್ಯ ಮಾಡಿದ್ದಾರೆ.

    ಐಪಿಎಲ್‍ನಲ್ಲಿ ಮೂರು ಬಾರಿ ಚಾಂಪಿಯನ್ ಆಗಿರುವ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ, ಈ ಬಾರಿಯ ಐಪಿಎಲ್‍ನಲ್ಲಿ ನಿರಾಸೆಯ ಪ್ರದರ್ಶನ ತೋರುತ್ತಿದೆ. ಅನುಭವಿ ಆಟಗಾರ ಗೈರು, ಉತ್ತಮ ಆಟಗಾರ ಗಾಯದ ಸಮಸ್ಯೆಯಿಂದ ಚೆನ್ನೈ ತಂಡ ವೀಕ್ ಆದಂತೆ ಕಾಣುತ್ತಿದೆ. ಈ ನಡುವೆ ಧೋನಿ ಬ್ಯಾಟಿಂಗ್ ಕ್ರಮಾಂಕದ ಬಗ್ಗೆಯೂ ಚರ್ಚೆಯಾಗುತ್ತಿದೆ.

    ಈ ನಡುವೆ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಮಾತನಾಡಿರುವ ಸೆಹ್ವಾಗ್ ಅವರು, ಸಿಎಸ್‍ಕೆ ತಂಡದ ಆರಂಭ ಉತ್ತಮವಾಗಿತ್ತು. ಆದರೆ ಕಳೆದ ಎರಡು ಪಂದ್ಯಗಳಿಂದ ಚೆನ್ನೈ ತಂಡ ಮಂಕಾಗಿದೆ. ಮುರುಳಿ ವಿಜಯ್ ಟಿ-20 ಆಡುವಂತೆ ಕಾಣುತ್ತಿಲ್ಲ. ಶೇನ್ ವಾಟ್ಸನ್ ಹಳೆಯ ಇಂಜಿನ್‍ನಂತೆ. ಅವರಿಗೆ ಸ್ಟಾರ್ಟಿಂಗ್ ಟ್ರಬಲ್ ಇದೆ. ಫಾಪ್ ಡು ಫ್ಲೆಸಿಸ್ ಅವರು ಬಂದು ತಮ್ಮ ತಂಡಕ್ಕೆ ನಾವು ಆಡುತ್ತಿರುವುದು ಟಿ-20, ಟೆಸ್ಟ್ ಅಲ್ಲ ಎಂಬುದನ್ನು ಆರ್ಥ ಮಾಡಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

    ಇದೇ ವೇಳೆ ಧೋನಿ ಬ್ಯಾಟಿಂಗ್ ಕ್ರಮಾಂಕದ ಕುರಿತು ಮಾತನಾಡಿರುವ ಸೆಹ್ವಾಗ್, ತಂಡ ತೊಂದರೆಯಲ್ಲಿ ಇದ್ದರೂ ಕೂಡ ಎಂಎಸ್ ಧೋನಿಯವರು ಬ್ಯಾಟ್ ಮಾಡಲು ಬರುತ್ತಿಲ್ಲ. ಎಂಎಸ್ ಧೋನಿ ತಂಡಕ್ಕಾಗಿ 4ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಮನಸ್ಸು ಮಾಡುವುದರೊಳಗೆ ಭಾರತಕ್ಕೆ ಬುಲೆಟ್ ಟ್ರೈನ್ ಬರುತ್ತದೆ ಎಂದು ವ್ಯಂಗ್ಯವಾಡಿದ್ದಾರೆ. ಸದ್ಯ ಸೆಹ್ವಾಗ್ ಅವರ ಈ ವಿಡಿಯೋ ವೈರಲ್ ಆಗಿದೆ.

    ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಹೀನಾಯ ಸೋಲನ್ನು ಕಂಡಾಗ ಟ್ವೀಟ್ ಮಾಡಿದ್ದ ಸೆಹ್ವಾಗ್ ಅವರು, ಚೆನ್ನೈ ಬ್ಯಾಟ್ಸ್ ಮನ್ಸ್ ಸರಿಯಾಗಿ ಆಡುತ್ತಿಲ್ಲ. ಮುಂದಿನ ಪಂದ್ಯದಲ್ಲಿ ಬ್ಯಾಟಿಂಗ್ ಹೋಗುವ ಮೊದಲು ಗ್ಲುಕೋಸ್ ತೆಗೆದುಕೊಂಡು ಬರುವಂತೆ ಹೇಳಿದ್ದರು. ಜೊತೆಗೆ ಧೋನಿ ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಬರುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದರು.

    ಚೆನ್ನೈ ತಂಡದ ಕೀ ಪ್ಲೇಯರ್ಸ್ ಟೀಮಿನಲ್ಲಿ ಇಲ್ಲದೇ ಇರುವುದು ಚೆನ್ನೈಗೆ ಮುಳುವಾಗಿ ಕಾಡುತ್ತಿದೆ. ವೈಯಕ್ತಿಕ ಕಾರಣ ಹೇಳಿ ರೈನಾ ಅವರು ಟೂರ್ನಿಯಿಂದ ಹೊರಬಂದಿದ್ದಾರೆ. ಜೊತೆಗೆ ಉತ್ತಮ ಲಯದಲ್ಲಿದ್ದ ಅಂಬಾಟಿ ರಾಯುಡು ಗಾಯದ ಸಮಸ್ಯೆಗೆ ತುತ್ತಾಗಿದ್ದಾರೆ. ಹೀಗಾಗಿ ತಂಡದಲ್ಲಿ ಬ್ಯಾಟಿಂಗ್ ಲೈನಪ್ ಜೋಡಣೆ ಮಾಡುವುದು ಕಷ್ಟವಾಗುತ್ತಿದೆ ಎಂದು ತಂಡದ ಕೋಚ್ ಸ್ಟೀಫನ್ ಫ್ಲೆಮಿಂಗ್ ಅವರು ಅಭಿಪ್ರಾಯ ಪಟ್ಟಿದ್ದಾರೆ. ಚೆನ್ನೈ ಮುಂದಿನ ಪಂದ್ಯವನ್ನು ಅಕ್ಟೋಬರ್ 2ರಂದು ಆಡಲಿದ್ದು, ಈ ತಂಡದಲ್ಲಿ ಉತ್ತಮ ಆಟದೊಂದಿಗೆ ತಂಡ ಕಮ್‍ಬ್ಯಾಕ್ ಮಾಡಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದರು.

  • ಮುಂದಿನ ಪಂದ್ಯದಲ್ಲಿ ಗ್ಲುಕೋಸ್ ತೆಗೆದುಕೊಂಡು ಬನ್ನಿ- ಸಿಎಸ್‍ಕೆಗೆ ಸೆಹ್ವಾಗ್ ಸಲಹೆ

    ಮುಂದಿನ ಪಂದ್ಯದಲ್ಲಿ ಗ್ಲುಕೋಸ್ ತೆಗೆದುಕೊಂಡು ಬನ್ನಿ- ಸಿಎಸ್‍ಕೆಗೆ ಸೆಹ್ವಾಗ್ ಸಲಹೆ

    ನವದೆಹಲಿ: ಡೆಲ್ಲಿ ಕ್ಯಾಪಿಟಲ್ಸ್ ತಂಡ ಅನುಭವಿ ಆಟಗಾರರನ್ನೇ ಹೊಂದಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಿ ಐಪಿಎಲ್ 2020ರ ಆವೃತ್ತಿಯ ಅಂಕಪಟ್ಟಿಯಲ್ಲಿ ಅರ್ಹವಾಗಿಯೇ ಅಗ್ರಸ್ಥಾನವನ್ನು ಪಡೆದುಕೊಂಡಿದೆ.

    ಶ್ರೇಯಸ್ ಅಯ್ಯರ್ ನೇತೃತ್ವದ ಡೆಲ್ಲಿ ತಂಡ ಸಿಎಸ್‍ಕೆ ವಿರುದ್ದದ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿಯೂ ಉತ್ತಮ ಪ್ರದರ್ಶನ ನೀಡಿತ್ತು. 175 ರನ್ ಮೊತ್ತವನ್ನು ಬೆನ್ನತ್ತಿದ್ದ ಸಿಎಸ್‍ಕೆ 131 ರನ್ ಗಳಿಗೆ ಆಲೌಟ್ ಆಯ್ತು.

    ಚೆನ್ನೈ ಸೋಲಿನ ಕುರಿತು ಪ್ರತಿಕ್ರಿಯೆ ನೀಡಿರುವ ಟೀಂ ಇಂಡಿಯಾ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್, ಚೆನ್ನೈ ಬ್ಯಾಟ್ಸ್ ಮನ್ಸ್ ಸರಿಯಾಗಿ ಆಡುತ್ತಿಲ್ಲ. ಮುಂದಿನ ಪಂದ್ಯದಲ್ಲಿ ಬ್ಯಾಟಿಂಗ್ ಹೋಗುವ ಗ್ಲುಕೋಸ್ ತೆಗೆದುಕೊಂಡು ಬರುವಂತೆ ಹೇಳಿದ್ದಾರೆ.

    ಸುರೇಶ್ ರೈನಾ, ರಾಯುಡು ಅನುಪಸ್ಥಿತಿಯಲ್ಲಿ ಚೆನ್ನೈ ತಂಡದ ಬ್ಯಾಟಿಂಗ್ ಪ್ರದರ್ಶನ ಕಳಪೆಯಿಂದ ಕೂಡಿದೆ. ಅದರಲ್ಲೂ ಡೆಲ್ಲಿ ವಿರುದ್ಧದ ಸೋಲಿನ ಬಳಿಕ ಸಿಎಸ್‍ಕೆ ಅಭಿಮಾನಿಗಳು ಕೂಡ ಬ್ಯಾಟಿಂಗ್ ಶೈಲಿಯನ್ನು ಟೀಕಿಸಿದ್ದಾರೆ. ಅಲ್ಲದೇ ಡೆಲ್ಲಿ ವಿರುದ್ಧದ ಪಂದ್ಯದಲ್ಲಿಯೂ ನಾಯಕ ಧೋನಿ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‍ಗೆ ಇಳಿದಿದ್ದು ಕೂಡ ಟೀಕೆಗೆ ಗುರಿಯಾಗಿದೆ.

    ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ತಂಡದ ಪರ ಧವನ್, ಪೃಥ್ವಿ ಶಾ 94 ರನ್ ಗಳ ಜೊತೆಯಾಟದ ಮೂಲಕ ಉತ್ತಮ ಆರಂಭ ನೀಡಿದ್ದರು. 20 ವರ್ಷದ ಪೃಥ್ವಿ ಶಾ 43 ಎಸೆತಗಳಲ್ಲಿ 64 ರನ್ ಸಿಡಿಸಿದ್ದರು. ಧವನ್ ಔಟಾದ ಬಳಿಕ ನಾಯಕ ಅಯ್ಯರ್, ಪೃಥ್ವಿ ಶಾರೊಂದಿಗೆ ಕೂಡಿಕೊಂಡು 58 ರನ್‍ಗಳ ಜೊತೆಯಾಟ ನೀಡಿದ್ದರು.

    ಟೂರ್ನಿಯಲ್ಲಿ ಸತತ ಎರಡು ಸೋಲುಗಳನ್ನು ಪಡೆದಿರುವ ಚೆನ್ನೈ ತಂಡದ ಮುಂದಿನ ಪಂದ್ಯಕ್ಕೆ ಒಂದು ವಾರಗಳ ಸಮಯವನ್ನು ಹೊಂದಿದೆ. ಸಿಎಸ್‍ಕೆ ಅಕ್ಟೋಬರ್‌ 2 ರಂದು ಮುಂದಿನ ಪಂದ್ಯವನ್ನು ಆಡಲಿದ್ದು, ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸನ್‍ರೈಸರ್ಸ್ ತಂಡವನ್ನು ಎದುರಿಸಲಿದೆ.

  • ಏನಾಗ್ತಿದೆ, ಒಬ್ಬರ ಹಿಂದೆ ಮತ್ತೊಬ್ಬರು ಹೋಗ್ತಿದ್ದಾರೆ- ಸುಶಾಂತ್ ನಿಧನಕ್ಕೆ ವೀರು ಸಂತಾಪ

    ಏನಾಗ್ತಿದೆ, ಒಬ್ಬರ ಹಿಂದೆ ಮತ್ತೊಬ್ಬರು ಹೋಗ್ತಿದ್ದಾರೆ- ಸುಶಾಂತ್ ನಿಧನಕ್ಕೆ ವೀರು ಸಂತಾಪ

    ನವದೆಹಲಿ: ಬಾಲಿವುಡ್ ಪ್ರತಿಭಾವಂತ ಯುವ ನಟ ಸುಶಾಂತ್ ಸಿಂಗ್ ರಜಪೂತ್ ಅವರ ನಿಧನಕ್ಕೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗರಾದ ವೀರೆಂದ್ರ ಸೆಹ್ವಾಗ್, ಸಚಿನ್ ತೆಂಡೂಲ್ಕರ್, ಇಫ್ರಾನ್ ಪಠಾಣ್ ಸೇರಿದಂತೆ ಅನೇಕರು ಸಂತಾಪ ವ್ಯಕ್ತಪಡಿಸಿದ್ದಾರೆ.

    ವೀರೆಂದ್ರ ಸೆಹ್ವಾಗ್ ಟ್ವೀಟ್ ಮಾಡಿ, ಜೀವನ ತುಂಬಾ ಚಿಕ್ಕದಾಗುತ್ತಿದೆ. ಏನಾಗುತ್ತಿದೆ ಎನ್ನುವುದೇ ಅರ್ಥವಾಗುತ್ತಿಲ್ಲ. ಒಬ್ಬರ ಹಿಂದೆ ಮತ್ತೊಬ್ಬರು ಸಾಗುತ್ತಲೇ ಇದ್ದಾರೆ. ಸುಶಾಂತ್ ಸಿಂಗ್ ಒಳ್ಳೆಯ ವ್ಯಕ್ತಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಂತಾಪ ಸೂಚಿಸಿದ್ದಾರೆ.

    ಟ್ವೀಟ್ ಮೂಲಕ ಸಂತಾಪ ಸೂಚಿಸಿರುವ ಸಚಿನ್ ತೆಂಡೂಲ್ಕರ್, ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಸುದ್ದಿ ಕೇಳಿ ಆಘಾತ ಮತ್ತು ದುಃಖವಾಗಿದೆ. ಅವರು ಯುವ ಮತ್ತು ಪ್ರತಿಭಾವಂತ ನಟ. ಅವರ ಕುಟುಂಬ ಮತ್ತು ಸ್ನೇಹಿತರಿಗೆ ನೋವವನ್ನು ಭರಿಸುವ ಶಕ್ತಿ ಸಿಗಲಿ. ಸುಶಾಂತ್ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬರೆದುಕೊಂಡಿದ್ದಾರೆ.

    ಟೀಂ ಇಂಡಿಯಾ ಮಾಜಿ ಆಲ್‍ರೌಂಡರ್ ಇಫ್ರಾನ್ ಪಠಾಣ್ ಟ್ವೀಟ್ ಮಾಡಿ, ಸುಶಾಂತ್ ಸಿಂಗ್ ರಾಜ್‍ಪುತ್ ಅವರ ಆತ್ಮಹತ್ಯೆಯ ಬಗ್ಗೆ ಕೇಳಿ ನನಗೆ ತುಂಬಾ ಆಘಾತವಾಗಿದೆ ಮತ್ತು ದುಃಖವಾಗಿದೆ. ಸುಶಾಂತ್ ಅಗಲಿಕೆಯನ್ನು ಸಹಿಸಿಕೊಳ್ಳುವ ಶಕ್ತಿ ಅವರ ಕುಟುಂಬಕ್ಕೆ ಸಿಗಲಿ ಎಂದು ಸಂತಾಪ ಸೂಚಿಸಿದ್ದಾರೆ.

    ಇತ್ತೀಚೆಗೆ ತಾಜ್ ಹೋಟೆಲ್ ಜಿಮ್‍ನಲ್ಲಿ ಕೊನೆಯದಾಗಿ ಸುಶಾಂತ್ ಜೊತೆಗೆ ಮಾತನಾಡಿದ್ದೆ. ಕೇದಾರನಾಥದಲ್ಲಿ ಅವರ ಕೆಲಸಕ್ಕಾಗಿ ನಾನು ಅವರನ್ನು ಹೊಗಳಿದ್ದೆ. ಆಗ ಅವರು ಪ್ರೀತಿಯ ಸಹೋದರ  ‘ಚಿಚೋರ್’ ಸಿನಿಮಾವನ್ನು ನೋಡಿ (ಭಾಯ್ ಪ್ಲೀಸ್ ಡು ವಾಚ್ ಚಿಚೋರ್) ನೀವು ಅದನ್ನು ಇಷ್ಟಪಡುತ್ತೀರಿ ಎಂದಿದ್ದರು ಎಂದು ಇಫ್ರಾನ್ ಪಠಾಣ್ ನೆನಿದ್ದಾರೆ.

    ಇದೇ ವರ್ಷ ಮಾರ್ಚ್ ನಲ್ಲಿ ಖ್ಯಾತ ಹಾಸ್ಯ ನಟ ಸಂತಾನಂ ಸ್ನೇಹಿತ ನಟ, ವೈದ್ಯ ಸೇತುರಾಮನ್ (36) ಹೃದಯಾಘಾತದಿಂದ ಮೃತಪಟ್ಟಿದ್ದರು. ಬಾಲಿವುಡ್‍ನ ಹೆಮ್ಮೆಯ ನಟ ಇರ್ಫಾನ್ ಖಾನ್ (53) ಬೆನ್ನಲ್ಲೇ ಸ್ಯಾಂಡಲ್‍ವುಡ್ ನಟ ಚಿರಂಜೀವಿ ಸರ್ಜಾ (36) ಸಾವನ್ನಪ್ಪಿದ್ದರು. ಈಗ ಸುಶಾಂತ್ ಸಿಂಗ್ ಕೇವಲ 34 ವರ್ಷ ಮೃತಪಟ್ಟಿರುವುದು ಸಿನಿಮಾ ರಂಗಕ್ಕೆ ಆಘಾತವನ್ನುಂಟು ಮಾಡಿದೆ.

  • ಧೋನಿಯಂತೆ ರಾಹುಲ್‍ಗೆ ಹೆಚ್ಚು ಅವಕಾಶ ಸಿಗಲಿ- ಕನ್ನಡಿಗನ ಬೆಂಬಲಕ್ಕೆ ನಿಂತ ವೀರು

    ಧೋನಿಯಂತೆ ರಾಹುಲ್‍ಗೆ ಹೆಚ್ಚು ಅವಕಾಶ ಸಿಗಲಿ- ಕನ್ನಡಿಗನ ಬೆಂಬಲಕ್ಕೆ ನಿಂತ ವೀರು

    – ರಾಹುಲ್ ಭವಿಷ್ಯದ ಉತ್ತಮ ಫಿನಿಶರ್

    ನವದೆಹಲಿ: ಕನ್ನಡಿಗ ಕೆ.ಎಲ್.ರಾಹುಲ್ ಟೀಂ ಇಂಡಿಯಾ ಪರ ಬ್ಯಾಟಿಂಗ್ ಮಾತ್ರವಲ್ಲದೆ, ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ವಿಕೆಟ್ ಕೀಪರ್ ಆಗಿ ಉತ್ತಮ ಪ್ರದರ್ಶನ ನೀಡಿದರು. ಇದರಿಂದ ಆಕರ್ಷಿತರಾದ ಭಾರತದ ಮಾಜಿ ಕ್ರಿಕೆಟರ್ ವೀರೇಂದ್ರ ಸೆಹ್ವಾಗ್ ಸೋಮವಾರ ರಾಹುಲ್ ಪರ ಬ್ಯಾಟಿಂಗ್ ಮಾಡಿದ್ದಾರೆ.

    ಕೆ.ಎಲ್.ರಾಹುಲ್ ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್.ಧೋನಿ ಅವರಂತೆ ಹೆಚ್ಚಿನ ಅವಕಾಶಗಳನ್ನು ಪಡೆಯಬೇಕು. 5ನೇ ಕ್ರಮಾಂಕದಲ್ಲಿ ರಾಹುಲ್ ಬ್ಯಾಟಿಂಗ್ ಮಾಡಿ ತಂಡಕ್ಕೆ ಅತ್ಯುತ್ತಮ ಫಿನಿಶರ್ ಪಾತ್ರವನ್ನು ವಹಿಸಬಹುದು. ಅಷ್ಟೇ ಅಲ್ಲದೆ ತಂಡಕ್ಕೆ ಉತ್ತಮ ವಿಕೆಟ್ ಕೀಪರ್ ಸಹ ಸಿಕ್ಕಂತೆ ಆಗುತ್ತದೆ ಎಂದು ಸೆಹ್ವಾಗ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬಿಸಿಸಿಐ ಆಟಗಾರರ ಒಪ್ಪಂದದ ಪಟ್ಟಿಯಿಂದ ಧೋನಿ ಔಟ್

    ಕೆ.ಎಲ್.ರಾಹುಲ್ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ನಾಲ್ಕು ಬಾರಿ ವಿಫಲವಾದರೆ ತಂಡದ ಆಯ್ಕೆ ಸಮಿತಿ ಅವರನ್ನು ಬದಲಾಯಿಸುತ್ತದೆ. ಆದರೆ ಎಂ.ಎಸ್.ಧೋನಿ ಅವರ ವಿಚಾರದಲ್ಲಿ ಇಂತಹ ಯಾವುದೇ ಬದಲಾವಣೆ ಬರಲಿಲ್ಲ. ಆಟಗಾರರಿಗೆ ಸಮಯ ನೀಡದಿದ್ದರೆ ಅವರು ಹೇಗೆ ಬೆಳೆಯಲು ಹಾಗೂ ಕಲಿಯಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಮಿಂಚಿನ ವೇಗದ ರಾಹುಲ್ ಸ್ಟಂಪಿಂಗ್‍ಗೆ ಅಭಿಮಾನಿಗಳು ಫಿದಾ- ಟ್ರೋಲ್‍ಗೆ ಸಿಲುಕಿದ ಪಂತ್

    ನಾನು ಪ್ರಾರಂಭದ ಮೊದಲು ಮಿಡಲ್ ಆರ್ಡರ್ ನಲ್ಲಿ ಬ್ಯಾಟಿಂಗ್ ಮಾಡಲು ಬರುತ್ತಿದ್ದೆ. ಈ ವೇಳೆ ಅನೇಕ ತಪ್ಪುಗಳನ್ನು ಮಾಡಿದ್ದೇನೆ. ಇದರಿಂದಾಗಿ ತಂಡವು ಸಹ ಅನೇಕ ಬಾರಿ ಸೋಲನ್ನು ಎದುರಿಸಬೇಕಾಯಿತು. ಆದರೆ ಆಟಗಾರರು ಬೆಂಚ್ ಮೇಲೆ ಕುಳಿತು ದೊಡ್ಡವರಾಗಲು ಸಾಧ್ಯವಿಲ್ಲ. ಆಟಗಾರರಿಗೆ ಸಮಯ ನೀಡುವುದು ಮುಖ್ಯ ಎಂದು ತಿಳಿಸಿದ್ದಾರೆ.

    ಕೆ.ಎಲ್.ರಾಹುಲ್ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಮೊದಲನೇ ಪಂದ್ಯದಲ್ಲಿ 47 ರನ್ ಮತ್ತು ಎರಡನೇ ಪಂದ್ಯದಲ್ಲಿ 5ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಿ 80ರನ್ ಗಳಿಸಿದರು. ಇದಲ್ಲದೆ ಎರಡನೇ ಪಂದ್ಯದಲ್ಲಿ ಅವರು ಆ್ಯರನ್ ಫಿಂಚ್ ಅವರನ್ನು ಉತ್ತಮ ಶೈಲಿಯಲ್ಲಿ ಸ್ಟಂಪ್ ಮಾಡಿದ್ದರು. ಇದರ ನಂತರ ರಾಹುಲ್ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸಿಸಲಾಯಿತು. ಮೂರನೇ ಏಕದಿನ ಪಂದ್ಯದಲ್ಲಿ ಶಿಖರ್ ಧವನ್ ಗಾಯಗೊಂಡ ನಂತರ ರಾಹುಲ್ ಆರಂಭಿಕ  ಬ್ಯಾಟ್ಸ್‌ಮನ್‌ ಆಗಿ ಮೈದಾಕ್ಕಿಳಿದು 19 ರನ್ ಗಳಿಸಿದ್ದರು.

  • ಅಭಿಮಾನಿಯ ಟ್ವೀಟ್ ರಿಟ್ವೀಟ್ ಮಾಡಿ ಸೆಹ್ವಾಗ್ ಕಾಲೆಳೆದ ಜಡೇಜಾ

    ಅಭಿಮಾನಿಯ ಟ್ವೀಟ್ ರಿಟ್ವೀಟ್ ಮಾಡಿ ಸೆಹ್ವಾಗ್ ಕಾಲೆಳೆದ ಜಡೇಜಾ

    ಬೆಂಗಳೂರು: ಅಭಿಮಾನಿಯೊಬ್ಬರು ಟ್ವಿಟ್ಟರ್ ನಲ್ಲಿ ತನ್ನ ಬಗ್ಗೆ ವಿರೇಂದ್ರ ಸೆಹ್ವಾಗ್ ಬಳಿ ಕೇಳಿಕೊಂಡ ಪ್ರಶ್ನೆಯನ್ನು ಟೀಂ ಇಂಡಿಯಾದ ಆಲ್‍ರೌಂಡರ್ ರವೀಂದ್ರ ಜಡೇಜಾ ರಿಟ್ವೀಟ್ ಮಾಡಿದ್ದಾರೆ.

    ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು ಭಾರತ 203 ರನ್ ಗಳಿಂದ ಪಂದ್ಯವನ್ನು ಗೆದ್ದ ಹಿನ್ನೆಲೆಯಲ್ಲಿ ಸೆಹ್ವಾಗ್ ಟೀಂ ಇಂಡಿಯಾವನ್ನು ಟ್ವಿಟ್ಟರ್ ನಲ್ಲಿ ಅಭಿನಂದಿಸಿದ್ದರು.

    ರೋಹಿತ್ ಶರ್ಮಾ ಉತ್ತಮವಾಗಿ ಆಡಿದ್ದೀರಿ. ಮಯಾಂಕ್, ಶಮಿ, ಅಶ್ವಿನ್, ಪುಜಾರಾ ಅವರ ಸಂಘಟಿತ ಆಟದಿಂದ ಭಾರತ ಜಯಗಳಿಸಿದೆ ಎಂದು ಬರೆದು ಟ್ವೀಟ್ ಮಾಡಿದ್ದರು.

    ಈ ಟ್ವೀಟ್ ಗಮನಿಸಿದ ಬಿನೀತ್ ಪಟೇಲ್ ಎಂಬವರು ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ನಲ್ಲಿ ಜಡೇಜಾ ಉತ್ತಮ ಪ್ರದರ್ಶನ ನೀಡಿದ್ದರೂ ಯಾಕೆ ಅವರ ಹೆಸರನ್ನು ಉಲ್ಲೇಖ ಮಾಡಿಲ್ಲ ಎಂದು ಪ್ರಶ್ನಿಸಿದ್ದರು.

    ಬಿನೀತ್ ಪಟೇಲ್ ಟ್ವೀಟ್ ನಲ್ಲಿ ಟ್ಯಾಗ್ ಆಗಿದ್ದ ಕಾರಣ ರವೀಂದ್ರ ಜಡೇಜಾ ಅವರು ಈ ಟ್ವೀಟ್ ರಿಟ್ವೀಟ್ ಮಾಡಿ ಸೆಹ್ವಾಗ್ ಕಾಲೆಳೆದಿದ್ದಾರೆ. ಈ ಟ್ವೀಟ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೊದಲ ಇನ್ನಿಂಗ್ಸ್ ನಲ್ಲಿ ಔಟಾಗದೇ 30 ರನ್ (46 ಎಸೆತ, 1 ಸಿಕ್ಸರ್) ಹೊಡೆದಿದ್ದ ಜಡೇಜಾ ಎರಡನೇ ಇನ್ನಿಂಗ್ಸ್ ನಲ್ಲಿ 40 ರನ್(32 ಎಸೆತ, 3 ಸಿಕ್ಸರ್) ಹೊಡೆದಿದ್ದರು.

    ಮೊದಲ ಇನ್ನಿಂಗ್ಸ್ ನಲ್ಲಿ 2 ವಿಕೆಟ್ ಕಿತ್ತಿದ್ದ ಜಡೇಜಾ ಎರಡನೇ ಇನ್ನಿಂಗ್ಸ್ ನಲ್ಲಿ 4 ವಿಕೆಟ್ ಪಡೆದಿದ್ದರು.

  • ಸೆಹ್ವಾಗ್ ರ `ಮೆಸ್ಸಿ ಕಿ ಚಾಚಾ’ ಟ್ವೀಟ್ ವೈರಲ್: ವಿಡಿಯೋ ನೋಡಿ

    ಸೆಹ್ವಾಗ್ ರ `ಮೆಸ್ಸಿ ಕಿ ಚಾಚಾ’ ಟ್ವೀಟ್ ವೈರಲ್: ವಿಡಿಯೋ ನೋಡಿ

    ನವದೆಹಲಿ: ಭಾರತದ ಮಾಜಿ ಓಪನಿಂಗ್ ಬ್ಯಾಟ್ಸ್ ಮನ್ ವಿರೇಂದ್ರ ಸೆಹ್ವಾಗ್ ರವರು ಹಾಕಿದ್ದ `ಮೆಸ್ಸಿ ಕಿ ಚಾಚಾ’ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

    ಜಗತ್ತಿನಾದ್ಯಂತ ಫುಟ್ಬಾಲ್ ಜ್ವರದ ನಡುವೆ ವಿರೇಂದ್ರ ಸೆಹ್ವಾಗ್ ರವರು ಮಾಡಿರುವ ಟ್ವೀಟ್ ಭಾರೀ ಸದ್ದು ಮಾಡುತ್ತಿದೆ. ಟ್ವೀಟ್ ನಲ್ಲಿ ಓರ್ವ ಹಿರಿಯ ವ್ಯಕ್ತಿ ಫುಟ್ಬಾಲ್ ನ್ನು ತನ್ನ ಬರಿಗಾಲಿನಲ್ಲಿ ಒದೆಯುತ್ತಿರುವ ವಿಡಿಯೋ ಹಾಕಿ ಇವರು ಅಂತರಾಷ್ಟ್ರೀಯ ಫುಟ್ಬಾಲ್ ಆಟಗಾರ ಮೆಸ್ಸಿಯವರ ಅಜ್ಜ ಎಂದು ಫುಟ್ಬಾಲ್ ಅಭಿಮಾನಿಗಳ ಕಾಲೆಳೆದಿದ್ದಾರೆ.

    ವಿಡಿಯೋದಲ್ಲಿ ಹಿರಿಯರೊಬ್ಬರು  ಸತತವಾಗಿ ಮೂರು ಬಾರಿ ವಿಭಿನ್ನ ರೀತಿಯಲ್ಲಿ ಫುಟ್ಬಾಲನ್ನು ಒಂದೇ ಮನೆಯೊಂದರ ತೆರೆದ ಸಣ್ಣ ಕಿಟಕಿಯಲ್ಲಿ ಹಾಕುತ್ತಿದ್ದಾರೆ. ಈ ವಿಡಿಯೋಗೆ ಫ್ರಾನ್ಸ್, ಇಂಗ್ಲೆಂಡ್, ಕ್ರೋಷಿಯಾವನ್ನು ಮರೆತುಬಿಡಿ ಎಂದು ಬರೆದಿದ್ದಾರೆ, ಇನ್ ಸ್ಟಾಗ್ರಾಮ್ ನಲ್ಲಿ `ಮೆಸ್ಸಿ ಕಾ ಚಾಚಾ’ ಹ್ಯಾಶ್‍ಟ್ಯಾಗ್ ಹಾಕಿ ವಿಡಿಯೋ ಪೋಸ್ಟ್ ಮಾಡಿದ್ದಾರೆ.

    ಟ್ವೀಟ್ಟರ್ ನಲ್ಲಿ ಸೆಹ್ವಾಗ್ ಈ ವಿಡಿಯೋವನ್ನು ಪೋಸ್ಟ್ ಮಾಡುತ್ತಲೇ, ಸುಮಾರು 26 ಸಾವಿರಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದು, 4,600 ಮಂದಿ ರೀ ಟ್ವೀಟ್ ಮಾಡಿದ್ದಾರೆ. ಅಲ್ಲದೇ ಇನ್ ಸ್ಟಾಗ್ರಾಮ್‍ನಲ್ಲಿ ಈ ವಿಡಿಯೋವನ್ನು 3.76 ಲಕ್ಷ ಮಂದಿ ನೋಡಿದ್ದಾರೆ.

    ವಿರೇಂದ್ರ ಸೆಹ್ವಾಗ್ ರವರು ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಆಟಗಾರರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹಾಸ್ಯ ಶೈಲಿಯಲ್ಲಿ ಪೋಸ್ಟ್ ಮಾಡಿ ಕಾಲೆಳೆಯುತ್ತಲೇ ಇರುತ್ತಾರೆ.

    https://www.instagram.com/p/BlE40ZcnsxD/?hl=en&taken-by=virendersehwag