Tag: Virendra Heggade

  • ‘ವೀರ ಕಂಬಳ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ

    ‘ವೀರ ಕಂಬಳ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ

    ರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ (Virendra Heggade) ಅವರು ಸಿನಿಮಾವೊಂದಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಕನ್ನಡದ ಹಿರಿಯ ನಿರ್ದೇಶಕ ಎಸ್.ವಿ.ರಾಜೇಂದ್ರ ಸಿಂಗ್ ಬಾಬು (Rajendra Singh Babu) ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ವೀರ ಕಂಬಳ’ (Veera Kambala) ಸಿನಿಮಾದಲ್ಲಿ ಅವರು ಅತಿಥಿ ಪಾತ್ರವನ್ನು ಮಾಡುತ್ತಿದ್ದಾರೆ. ಈ ಸಿನಿಮಾ ಕನ್ನಡ, ತುಳು ಸೇರಿದಂತೆ ಹಲವು ಭಾಷೆಗಳಲ್ಲಿ ಮೂಡಿ ಬರಲಿರುವುದು ವಿಶೇಷ. ಸಂಪೂರ್ಣವಾಗಿ ಕಂಬಳ ಕ್ರೀಡೆಯನ್ನು ಹಿನ್ನೆಲೆಯಾಗಿಟ್ಟುಕೊಂಡು ಮೂಡಿ ಬರುತ್ತಿರುವ ಸಿನಿಮಾ ಇದಾಗಿದೆ.

    ಈ ಚಿತ್ರದಲ್ಲಿ ಹಲವು ವಿಶೇಷತೆಗಳಿವೆ. ಕಂಬಳ ಕೋಣ ಓಡಿಸುವುದರಲ್ಲೇ ಪರಿಣಿತಿ ಹೊಂದಿರುವ ಶ್ರೀನಿವಾಸ್ ಗೌಡ ಕೂಡ ಈ ಸಿನಿಮಾದಲ್ಲಿ ಪಾತ್ರ ಮಾಡಿದ್ದಾರೆ. ಇವರೊಂದಿಗೆ ಕಲಾವಿದ ಸ್ವರಾಜ್ ಶೆಟ್ಟಿ ಕೂಡ ಕಂಬಳದ ಕೋಣ ಓಡಿಸುವ ದೃಶ್ಯದಲ್ಲಿ ಕಾಣಿಸಿಕೊಳ್ಳುತ್ತಿರುವುದು ಮತ್ತೊಂದು ವಿಶೇಷ. ಪ್ರಕಾಶ್ (Prakash Rai), ರವಿಶಂಕರ್, ರಾಧಿಕಾ ಚೇತನ್, ನವೀನ್ ಪಡೀಲ್ ಸೇರಿದಂತೆ ಸಾಕಷ್ಟು ಕಲಾವಿದರು ಈ ಚಿತ್ರದ ತಾರಾಗಣದಲ್ಲಿ ಇದ್ದಾರೆ. ಇದನ್ನೂ ಓದಿ: ನಾನಿಲ್ಲಿ ಗೆದ್ದಿರುವಂಥದ್ದು ನಿಮ್ಮಿಂದ, ನೀವು ನನ್ನನ್ನು ಗೆಲ್ಲಿಸಿದ್ದೀರಿ: ರೂಪೇಶ್ ಶೆಟ್ಟಿ

    ಮಣಿಕಾಂತ್ ಕದ್ರಿ ಸಂಗೀತ ಸಂಯೋಜನೆಯಲ್ಲಿ ಹಾಡುಗಳು ಮೂಡಿ ಬರಲಿದ್ದು, ವೀರ ಕಂಬಳ ಸಿನಿಮಾದ ಕೊನೆಯ ಹಂತದ ಚಿತ್ರೀಕರಣ ಈಗ ನಡೆಯುತ್ತಿದೆ. ಈ ಭಾಗದ ಚಿತ್ರೀಕರಣದಲ್ಲಿ ವೀರೇಂದ್ರ ಹೆಗ್ಗಡೆ ಅವರು ಪಾಲ್ಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಅವರಿಗೆ ಮೇಕಪ್ ಹಚ್ಚುತ್ತಿರುವ ಫೋಟೋಗಳನ್ನು ಹಲವರು ಹಂಚಿಕೊಂಡಿದ್ದಾರೆ. ಆದರೆ, ಯಾವ ರೀತಿಯ ಪಾತ್ರದಲ್ಲಿ ಅವರು ನಟಿಸುತ್ತಿದ್ದಾರೆ ಎನ್ನುವುದು ಸಸ್ಪೆನ್ಸ್.

    Live Tv
    [brid partner=56869869 player=32851 video=960834 autoplay=true]

  • ವೀರೇಂದ್ರ ಹೆಗ್ಗಡೆಯವರ ಅನುಮತಿ ಕೇಳಿ ‘ಕಾಂತಾರ 2’ ಮಾಡುವಂತೆ ನುಡಿದ ದೈವ

    ವೀರೇಂದ್ರ ಹೆಗ್ಗಡೆಯವರ ಅನುಮತಿ ಕೇಳಿ ‘ಕಾಂತಾರ 2’ ಮಾಡುವಂತೆ ನುಡಿದ ದೈವ

    ಕಾಂತಾರ 2 ಸಿನಿಮಾ ಮಾಡಲು ವೀರೇಂದ್ರ ಹೆಗ್ಗಡೆಯವರ ಅನುಮತಿ ಕೇಳುವಂತೆ ದೈವ ನುಡಿದಿರುವುದಾಗಿ ದೈವ ನರ್ತಕ ಉಮೇಶ್ ಪಂಬದ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ. ಈ ಕುರಿತು ಮಾತನಾಡಿದ ಅವರು, ‘ತಿಂಗಳ ಮೊದಲು ರಿಷಬ್ ಶೆಟ್ಟಿ ಹರಕೆ ನೇಮ ಕೊಡುವುದಾಗಿ ಹೇಳಿ ವೀಳ್ಯ ಕೊಟ್ಟಿದ್ದರು. ಮೊನ್ನೆ ರಿಷಬ್ ಮತ್ತು ಅವರ ತಂಡ ಬಂದು ದೈವದ ಹರಕೆ ಕೊಟ್ಟರು. ಚೆಂದದಿಂದ ದೈವ ಹರಕೆ ಸ್ವೀಕರಿಸಿ ಅವರಿಗೆ ಅಭಯ ಕೊಟ್ಟಿದೆ. ನಮಗೆ ಅವರ ಪರಿಚಯ ಇರಲಿಲ್ಲ, ನಡೆಸಿಕೊಟ್ಟವರು ಮಡಿವಾಳ ಕುಟುಂಬದವರು. ದೈವದ ನಡೆಯಲ್ಲಿ ಆದ ವಿಷಯ ನನಗೆ ಗೊತ್ತಿರಲ್ಲ, ಅದು ದೈವಕ್ಕೆ ‌ಮಾತ್ರ ಗೊತ್ತಿರುತ್ತೆ. ದೈವದ ನೇಮೋತ್ಸವ ಆದ ನಂತರ ನನಗೆ ಭಕ್ತರು ಬಂದು ಈ ಬಗ್ಗೆ ಹೇಳಿದರು’ ಎಂದರು.

    ಕಾಂತಾರ 2 ಸಿನಿಮಾ ಅನುಮತಿ ಬಗ್ಗೆ ಮಾತನಾಡಿದ ಉಮೇಶ್, ‘ಕಾಂತಾರ 2 ಸಿನಿಮಾ ‌ಮಾಡಲು ದೈವ ಅನುಮತಿ ಕೊಟ್ಟಿದೆ ಅಂತ ನನಗೆ ಭಕ್ತರು ಹೇಳಿದರು. ರಿಷಬ್ ಶೆಟ್ಟಿ ಎರಡನೇ ಭಾಗದ ಬಗ್ಗೆ ದೈವದ ಬಳಿ ಕೇಳಿದರು. ಆದರೆ ಅದಕ್ಕೆ ಮೊದಲು ಧರ್ಮಸ್ಥಳ ಮಂಜುನಾಥೇಶ್ವರನ ಅನುಮತಿ ಕೇಳಲು ದೈವ ಹೇಳಿದೆಯಂತೆ. ಬಹಳ ಆಲೋಚನೆಯಲ್ಲಿ ಮುಂದಿನ ಸಿನಿಮಾ ಮಾಡಿ ಅಂತ ದೈವ ಹೇಳಿದೆಯಂತೆ. ಮೊದಲ ಚಿತ್ರದಲ್ಲಿ ಒಳ್ಳೆಯದು ಆಗಿದೆ, ಅಪವಾದವೂ ಬಂದಿದೆ. ಹತ್ತು ಹೆಜ್ಜೆ ಇಟ್ಟು ಆ ಸಿನಿಮಾ ‌ಮಾಡಿದ್ದೀರಿ, ಇದಕ್ಕೆ ನೂರು ಹೆಜ್ಜೆ ಇಡಿ ಅಂತ ದೈವ ಹೇಳಿದೆ. ಧರ್ಮ ಪ್ರಕಾರ, ಆಚಾರ ವಿಚಾರದಲ್ಲಿ ಹೋಗಲು ದೈವ ಹೇಳಿದೆ’ ಎಂದಿದ್ದಾರೆ. ಇದನ್ನೂ ಓದಿ: ‘ಸೀತಾ ಸರ್ಕಲ್ ಶ್ರೀ ಕೃಷ್ಣನ್ ಮನೆ’ ಸಿನಿಮಾ ಫಸ್ಟ್ ಲುಕ್ ರಿಲೀಸ್

    ರಿಷಬ್ ಶೆಟ್ಟಿ ಅವರು ಧರ್ಮಸ್ಥಳಕ್ಕೆ ಹೋಗ್ತಾ ಇರ್ತಾರೆ, ಮೊನ್ನೆ ದೈವವೂ ಧರ್ಮಸ್ಥಳಕ್ಕೆ ಹೋಗಲು ಅಪ್ಪಣೆ ಆಗಿದೆ. ಕಾಂತಾರ 2 ಮಾಡುವ ಮುನ್ನ ಖಾವಂದರ(ಹೆಗ್ಗಡೆ) ಬಳಿ ಅನುಮತಿ ಕೇಳಲು ದೈವ ಅಪ್ಪಣೆ ‌ಕೊಟ್ಟಿದೆಯಂತೆ. ರಿಷಬ್ ಬಹಳ ಒಳ್ಳೆಯವರು, ಬಹಳ ಸಂತೋಷದಿಂದ ಎಲ್ಲರಲ್ಲೂ ಇದ್ದರು. ನೇಮೋತ್ಸವದ ವೇಳೆಯೂ ಬಹಳ ಶುದ್ದಾಚಾರದಿಂದ ಅವರು ನಡೆಸಿಕೊಟ್ಟಿದ್ದಾರೆ. ನಾನು ನೋಡಿದ ಮಟ್ಟಿಗೆ ಅವರ ಸೇವೆ ನಮಗೆ ಸಂತೋಷ ಆಗಿದೆ, ಉಳಿದಿದ್ದು ದೈವಕ್ಕೆ ಬಿಟ್ಟಿದ್ದು. ದೈವದ ವಿಷಯದಲ್ಲಿ ಕೆಟ್ಟದ್ದು ಮಾಡಬಾರದು, ತಿಳಿದು ಮಾಡಲೇ ಬಾರದು. ಕಾಂತಾರ ಭಾಗ 2 ಮಾಡಲು ಅವರು ಮತ್ತಷ್ಟು ಶುದ್ದಾಚಾರ ಪಾಲಿಸಬೇಕು. ಮೊದಲ ಚಿತ್ರದಲ್ಲಿ ಬಹಳ ಶುದ್ದಾಚಾರ ಪಾಲಿಸಿ ಭಕ್ತಿಯಿಂದ ‌ಮಾಡಿದ್ದಾರೆ. ಹಾಗಾಗಿ ಎರಡನೇ ಭಾಗವನ್ನೂ ಅವರು ಅಷ್ಟೇ ಶುದ್ದಾಚಾರದಿಂದ ಮಾಡ್ತಾರೆ ಅನ್ನೋ ನಂಬಿಕೆ ಇದೆ’ ಎಂದಿದ್ದಾರೆ ಉಮೇಶ್ ಪಂಬದ.

    Live Tv
    [brid partner=56869869 player=32851 video=960834 autoplay=true]

  • ಧರ್ಮಸ್ಥಳದ ಧರ್ಮಾಧಿಕಾರಿಗಳ ಭೇಟಿ ಮಾಡಿ ಆಶೀರ್ವಾದ ಪಡೆದ ರಿಷಬ್ ಶೆಟ್ಟಿ ದಂಪತಿ

    ಧರ್ಮಸ್ಥಳದ ಧರ್ಮಾಧಿಕಾರಿಗಳ ಭೇಟಿ ಮಾಡಿ ಆಶೀರ್ವಾದ ಪಡೆದ ರಿಷಬ್ ಶೆಟ್ಟಿ ದಂಪತಿ

    ಕಾಂತಾರ ಸಿನಿಮಾದ ಯಶಸ್ಸಿನ ಬೆನ್ನಲ್ಲೇ ನಿರ್ದೇಶಕ, ನಟ ರಿಷಬ್ ಶೆಟ್ಟಿ (Rishabh Shetty) ಧರ್ಮಸ್ಥಳಕ್ಕೆ (Dharmasthala,) ಭೇಟಿ ನೀಡಿ ಮಂಜುನಾಥ ದರ್ಶನ ಪಡೆದಿದ್ದಾರೆ. ನಂತರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿದ ರಿಷಬ್ ದಂಪತಿ, ಕೆಲ ಕಾಲ ಸಿನಿಮಾ ಬಗ್ಗೆ ಅವರೊಂದಿಗೆ ಚರ್ಚೆ ಮಾಡಿದ್ದಾರೆ. ಈ ಸಿನಿಮಾ ಮಾಡುವ ಮುನ್ನವೂ ರಿಷಬ್ ಇಲ್ಲಿಗೆ ಭೇಟಿ ನೀಡಿ ವೀರೇಂದ್ರ ಹೆಗ್ಗಡೆಯವರನ್ನು ಸಿನಿಮಾ ಕುರಿತು ಸಲಹೆ ಪಡೆದಿದ್ದರು. ಇದೀಗ ಮತ್ತೆ ಅವರನ್ನು ಭೇಟಿ ಮಾಡಿ, ಸಿನಿಮಾದ ಯಶಸ್ಸಿನ ಕುರಿತು ಖುಷಿಯನ್ನು ಹಂಚಿಕೊಂಡಿದ್ದಾರೆ.

    ಕಾಂತಾರ (Kantara) ಸಿನಿಮಾ ಆಗಲು ಪರೋಕ್ಷವಾಗಿ ವೀರೇಂದ್ರ ಹೆಗ್ಗಡೆಯವರೂ (Virendra Heggade) ಕಾರಣ ಎಂದು ಈ ಹಿಂದೆಯೇ ರಿಷಬ್ ಹೇಳಿದ್ದರು. ಈ ಚಿತ್ರಕ್ಕಾಗಿ ಹೆಗ್ಗಡೆ ಅವರು ಕೆಲವು ಸಲಹೆಗಳನ್ನೂ ನೀಡಿದ್ದರು ಎಂದೂ ತಿಳಿಸಿದ್ದರು. ಸಿನಿಮಾದ ಟ್ರೇಲರ್ ಬಿಡುಗಡೆ ಸೇರಿದಂತೆ ಹಲವು ಬಾರಿ ಈ ಕ್ಷೇತ್ರಕ್ಕೆ ರಿಷಬ್ ಭೇಟಿ ಮಾಡಿದ್ದಾರೆ. ಮೊನ್ನೆಯಷ್ಟೇ ವೀರೇಂದ್ರ ಹೆಗ್ಗಡೆ ಅವರು ಕೂಡ ಕುಟುಂಬ ಸಮೇತ ಕಾಂತಾರ ಸಿನಿಮಾವನ್ನು ವೀಕ್ಷಿಸಿದ್ದರು. ಮತ್ತು ಚಿತ್ರದ ಕುರಿತು ಮೆಚ್ಚುಗೆಯನ್ನೂ ಸೂಚಿಸಿದ್ದರು. ಹಾಗಾಗಿ ರಿಷಬ್ ಮತ್ತೆ ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡಿದ್ದಾರೆ. ಇದನ್ನೂ ಓದಿ:ಅನುಪಮಾ ಗೌಡ ವಿರುದ್ಧ ಸಿಡಿದೆದ್ದ ರೂಪೇಶ್‌ ರಾಜಣ್ಣ

    ಕಾಂತಾರ ಸಿನಿಮಾ ರಿಲೀಸ್ ಆದ ಬಹುತೇಕ ಕಡೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಅನೇಕ ಗಣ್ಯರು ಈ ಸಿನಿಮಾವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಠಾಧೀಶರು ಮತ್ತು ರಾಜಕೀಯ ಮುಖಂಡರು ಚಿತ್ರವನ್ನು ನೋಡಿ ಪ್ರಶಂಸಿಸುತ್ತಿದ್ದಾರೆ. ಮೊನ್ನೆಯಷ್ಟೇ ಸದ್ಗುರು ಜಗ್ಗಿವಾಸುದೇವ್, ಶ್ರೀ ರವಿಶಂಕರ್ ಗುರೂಜಿ ತಮ್ಮ ಆಶ್ರಮದಲ್ಲೇ ಭಕ್ತರೊಟ್ಟಿಗೆ ಸಿನಿಮಾ ನೋಡಿದ್ದರು. ಈ ಸಿನಿಮಾದ ವಿಶೇಷತೆ ಬಗ್ಗೆ ಮಾತನಾಡಿದ್ದರು. ನಿನ್ನೆಯಷ್ಟೇ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಿನಿಮಾ ನೋಡಿದ್ದಾರೆ.

    ಬೆಂಗಳೂರಿನಲ್ಲಿ ತಮ್ಮ ಆಪ್ತರು ಮತ್ತು ಸ್ವಯಂ ಸೇವಕರ ಜೊತೆ ಸಿನಿಮಾ ನೋಡಿರುವ ನಿರ್ಮಲಾ ಸೀತಾರಾಮನ್ ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ನಮ್ಮ ಶ್ರೀಮಂತ ಸಂಸ್ಕೃತಿಯನ್ನು ಬಿಂಬಿಸುವಂತಹ ಚಿತ್ರ ಇದಾಗಿದೆ ಎಂದು ಬಣ್ಣಿಸಿದ್ದಾರೆ. ಇಂತಹ ಚಿತ್ರಗಳು ಹೆಚ್ಚೆಚ್ಚು ತೆರೆಯ ಮೇಲೆ ಬರಬೇಕು ಎನ್ನುವ ಆಶಯವನ್ನೂ ಅವರು ವ್ಯಕ್ತಪಡಿಸಿದ್ದಾರೆ. ಪ್ರತಿಯೊಬ್ಬರೂ ನೋಡಲೇಬೇಕಾದ ಸಿನಿಮಾವಿದು ಎಂದೂ ಅವರು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕಾಂತಾರ ಸಿನಿಮಾವನ್ನು ಕುಟುಂಬ ಸಮೇತ ನೋಡಲಿದ್ದಾರೆ ವೀರೇಂದ್ರ ಹೆಗ್ಗಡೆ

    ಕಾಂತಾರ ಸಿನಿಮಾವನ್ನು ಕುಟುಂಬ ಸಮೇತ ನೋಡಲಿದ್ದಾರೆ ವೀರೇಂದ್ರ ಹೆಗ್ಗಡೆ

    ಬಿಡುಗಡೆಯಾದ ನಾಲ್ಕೂ ಭಾಷೆಗಳಲ್ಲೂ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಕಾಂತಾರ (Kantara) ಸಿನಿಮಾವನ್ನು ಇಂದು ಸಂಜೆ 7 ಗಂಟೆಗೆ ಡಾ. ವೀರೇಂದ್ರ ಹೆಗ್ಗಡೆಯವರು ನೋಡಲಿದ್ದಾರೆ. ಕುಟುಂಬ ಸಮೇತರಾಗಿ ಮಂಗಳೂರಿನ (Mangalore) ಭಾರತ್ ಮಾಲ್ ನಲ್ಲಿರುವ ಬಿಗ್ ಸಿನಿಮಾಸ್ ನಲ್ಲಿ ಅವರು ಚಿತ್ರವನ್ನು ವೀಕ್ಷಿಸುತ್ತಿದ್ದು, ಸಿನಿಮಾ ತಂಡ ಕೂಡ ಈ ಸಂದರ್ಭದಲ್ಲಿ ಹಾಜರಿರಲಿದೆ. ಕಾಂತಾರ ಸಿನಿಮಾ ಆಗುವಲ್ಲಿ ವೀರೇಂದ್ರ ಹೆಗ್ಗಡೆ (Virendra Heggade) ಅವರು ಕೂಡ ಪ್ರಮುಖ ಪಾತ್ರವಹಿಸಿದ್ದರಿಂದ ಅವರ ಪ್ರತಿಕ್ರಿಯೆ ಕೂಡ ಮಹತ್ವ ಪಡೆದುಕೊಳ್ಳಲಿದೆ.

    ಈಗಾಗಲೇ ಭಾರತೀಯ ಸಿನಿಮಾ ರಂಗದ ಅನೇಕ ಗಣ್ಯರು ಸಿನಿಮಾವನ್ನು ನೋಡಿದ್ದು, ಮೆಚ್ಚಿ ಮಾತನಾಡಿದ್ದಾರೆ. ಬಿಡುಗಡೆಯಾದ ನಾಲ್ಕೂ ಭಾಷೆಯ ಕಲಾವಿದರು ಕೂಡ ಚಿತ್ರವನ್ನು ಕೊಂಡಾಡಿದ್ದಾರೆ. ನಿನ್ನೆಯಷ್ಟೇ ಕಾಂತಾರ ಸಿನಿಮಾವನ್ನು ವೀಕ್ಷಿಸಿರುವ ಕಂಗನಾ ರಣಾವತ್, ಈ ಸಿನಿಮಾದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಅಲ್ಲದೇ, ಆಸ್ಕರ್ ಪ್ರಶಸ್ತಿಗಾಗಿ ಭಾರತದಿಂದ ಈ ಚಿತ್ರವನ್ನು ನೇರವಾಗಿ ಆಯ್ಕೆ ಮಾಡಿ ಎಂದು ಸರಕಾರದ ಗಮನ ಸೆಳೆದಿದ್ದಾರೆ. ಇಂತಹ ಚಿತ್ರಗಳೇ ಭಾರತದಿಂದ ಆಸ್ಕರ್ ಗಾಗಿ ಕಳುಹಿಸಬೇಕು. ಈ ಚಿತ್ರಕ್ಕೆ ಗೆಲ್ಲುವಂತಹ ಎಲ್ಲ ಅರ್ಹತೆಗಳೂ ಇವೆ ಎಂದು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ರಿಷಬ್ ಹೇಳಿದ ಹಿಂದೂ ಪದ ಒಪ್ಪಲ್ಲ, ಭೂತಕೋಲ ಹಿಂದೂ ಸಂಸ್ಕೃತಿ ಅಲ್ಲ: ಸಮರ್ಥಿಸಿದ ಚೇತನ್

    ರಿಷಬ್ ಶೆಟ್ಟಿ (Rishabh Shetty) ನಟಿಸಿ, ನಿರ್ದೇಶನ ಮಾಡಿರುವ ಕಾಂತಾರ ಸಿನಿಮಾವನ್ನು ನೋಡುವುದಾಗಿ ಈ ಹಿಂದೆ ಬಾಲಿವುಡ್ ನಟಿ ಕಂಗನಾ ರಣಾವತ್ ಹೇಳಿದ್ದರು. ಈ ಸಿನಿಮಾವನ್ನು ವೀಕ್ಷಿಸಲು ಕಾತರದಿಂದ ಕಾಯುತ್ತಿದ್ದೇನೆ ಎಂದು ಹೇಳಿದ್ದರು. ಅದರಂತೆ ನಿನ್ನೆ ಸಿನಿಮಾ ನೋಡಿದ್ದಾರೆ. ಥಿಯೇಟರ್ ನಿಂದ ಆಚೆ ಬಂದು ಭಾವುಕರಾಗಿಯೇ ಸಿನಿಮಾ ಬಗ್ಗೆ ಮಾತನಾಡಿದ್ದಾರೆ.

    ಕುಟುಂಬ ಸಮೇತರಾಗಿ ನಾನು ಕಾಂತಾರ ಸಿನಿಮಾವನ್ನು ನೋಡಿದೆ. ಥಿಯೇಟರ್ ನಿಂದ ಆಚೆ ಬಂದ ಮೇಲೂ ಇನ್ನೂ ನಡುಗುತ್ತಲೇ ಇದ್ದೇನೆ. ಚಿತ್ರಕಥೆ, ಅದನ್ನು ತೋರಿಸಿದ ರೀತಿ, ರಿಷಬ್ ನಟನೆಯನ್ನು ಮರೆಯುವುದಕ್ಕೆ ಸಾಧ್ಯವೇ ಇಲ್ಲ. ಅದ್ಭುತವಾದ ಸಿನಿಮಾವನ್ನು ನೋಡಿದ ತೃಪ್ತಿ ನನಗಿದೆ. ಈ ಅನುಭವದಿಂದ ಆಚೆ ಬರಲು ನನಗೆ ಒಂದು ವಾರವಾದರೂ ಬೇಕು. ಆ ರೀತಿಯಲ್ಲಿ ಸಿನಿಮಾ ಮೂಡಿ ಬಂದಿದೆ ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]