Tag: ViralVideo

  • ಚಾಮರಾಜನಗರದ ಲಿಪ್‌ಲಾಕ್ ಪ್ರೇಮಿಗಳಿಗೆ ಶಾಕ್ ಕೊಟ್ಟ ಪೊಲೀಸರು

    ಚಾಮರಾಜನಗರದ ಲಿಪ್‌ಲಾಕ್ ಪ್ರೇಮಿಗಳಿಗೆ ಶಾಕ್ ಕೊಟ್ಟ ಪೊಲೀಸರು

    ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ನಡುರಸ್ತೆಯಲ್ಲೇ ಬೈಕ್‌ನಲ್ಲಿ ರೈಡ್ ಹೋಗುತ್ತಾ ಸಾರ್ವಜನಿಕವಾಗಿ ಲಿಪ್‌ಲಾಕ್ (ಪರಸ್ಪರ ಚುಂಬನ) ಮಾಡಿದ್ದ ಪ್ರೇಮಿಗಳಿಗೆ ಇದೀಗ ಪೊಲೀಸರು ಶಾಕ್ ಕೊಟ್ಟಿದ್ದಾರೆ.

    ಈ ಬಗ್ಗೆ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗುತ್ತಿದ್ದಂತೆ, ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದು ಪತ್ತೆಹಚ್ಚಲು ಕ್ರಮ ಕೈಗೊಳ್ಳಲಾಗಿದೆ. ಬೈಕ್ ಸವಾರನ ವಿರುದ್ಧ ಚಾಮರಾಜನಗರ ಸಂಚಾರ ಠಾಣೆಯ ಪೊಲೀಸರು ಸಂಚಾರ ನಿಯಮ ಕಾನೂನು ಉಲ್ಲಂಘನೆ ಅಡಿಯಲ್ಲಿ ಸ್ವಪ್ರೇರಿತ ದೂರು ತಯಾರಿಸಿ ಮೊ.ನಂ: 39/2022 ಕಲಂ 279 IPC ಮತ್ತು 184 IMV ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಬೈಕ್ ಟ್ಯಾಂಕ್ ಮೇಲೆ ಕುಳಿತು ಪ್ರೇಮಿಗಳ ಲಿಪ್‍ಲಾಕ್ – ಲವರ್ಸ್ ಜಾಲಿ ರೈಡ್ ವೀಡಿಯೋ ವೈರಲ್

    LETTER

    KA-10-EA-5121 ಪಲ್ಸರ್ ಬೈಕ್‌ನ RC ಮಾಲೀಕನಿಂದ ವಿವರ ಪಡೆದು, ಬೈಕ್ ಸವಾರ ಹೆಚ್.ಡಿ.ಕೋಟೆ ತಾಲೂಕಿನ ಶಿವಪುರ ಗ್ರಾಮದ ನಿವಾಸಿ ಎಸ್.ಸಿಸ್ವಾಮಿ ಅನ್ನು ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಕಟಣೆ ಮೂಲಕ ತಿಳಿಸಿದ್ದಾರೆ.  ಇದನ್ನೂ ಓದಿ : ಅಪ್ಪ ಸರಿ, ಮಕ್ಕಳು ತಪ್ಪು ಸರಕಾರಕ್ಕೆ ಟಾಂಗ್ ಕೊಟ್ಟ ನಟ ಉಪೇಂದ್ರ

    ಚಾಮರಾಜನಗರದ ಪೊಲೀಸ್ ಅಧೀಕ್ಷಕರ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕ ತಿಮ್ಮರಾಜು, ಪಿಎಸ್‌ಐ ನಂದೀಶ್‌ಕುಮಾರ್ ಅವರ ನೇತೃತ್ವದಲ್ಲಿ ಸಿಬ್ಬಂದಿ ಸಿ.ಚಿಕ್ಕಣ್ಣ, ಬಿ.ಕೆ.ಜಯರಾಮು, ಜಿ.ಬಿ.ಮಹದೇವಸ್ವಾಮಿ, ಟಿ.ಕೆ.ಜಗದೀಶ್, ಪಿ.ನವೀನ್‌ಕುಮಾರ್ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ : CFI, PFI ಸಂಘಟನೆಗಳೇ ಮಕ್ಕಳ ಭವಿಷ್ಯ ಹಾಳಾಗೋದಕ್ಕೆ ಕಾರಣ: ಬಿ.ಸಿ.ನಾಗೇಶ್

    lovers

    ಲಿಪ್‌ಲಾಕ್ ಸ್ವಾರಸ್ಯವೇನು?: ಇಂದು ಮಧ್ಯಾಹ್ನ ಚಾಮರಾಜನಗರದ ಗುಂಡ್ಲುಪೇಟೆ ರಸ್ತೆಯಲ್ಲಿ ಪ್ರೇಮಿಗಳಿಬ್ಬರು ನಡುರಸ್ತೆಯಲ್ಲಿ ಬೈಕ್ ಮೇಲೆ ರೈಡ್ ಹೋಗುತ್ತಾ, ಸಾರ್ವಜನಿಕವಾಗಿ ಲಿಪ್‌ಲಾಕ್ ಮಾಡಿದ್ದಾರೆ. ಪಲ್ಸರ್ ಬೈಕ್‌ನ ಪೆಟ್ರೋಲ್ ಟ್ಯಾಂಕ್ ಮೇಲೆ ಎದುರು-ಬದುರಾಗಿ ಕುಳಿತ ಯುವತಿ ತನ್ನ ಪ್ರಿಯಕರನನ್ನು ಬಿಗಿದಪ್ಪಿಕೊಂಡು ಚುಂಬಿಸಿದ್ದಾಳೆ. ಜನರು, ಬಸ್ಸು, ಲಾರಿಗಳ ಸಂಚಾರದ ಪರಿವೇ ಇಲ್ಲದೇ ಹೆದ್ದಾರಿಯಲ್ಲಿ ಪ್ರೇಮಿಗಳು ಹುಚ್ಚಾಟ ನಡೆಸಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಎಲ್ಲೆಡೆ ಆಕ್ಷೇಪ ವ್ಯಕ್ತವಾಗಿತ್ತು.

  • ನೀರಿನ ಪೈಪ್ ಲೈನ್ ಒಡೆದು ಗಾಳಿಯಲ್ಲಿ ಹಾರಿದ 1.5 ಟನ್ ತೂಕದ ಬೋಲೆರೋ- ವಿಡಿಯೋ ವೈರಲ್

    ನೀರಿನ ಪೈಪ್ ಲೈನ್ ಒಡೆದು ಗಾಳಿಯಲ್ಲಿ ಹಾರಿದ 1.5 ಟನ್ ತೂಕದ ಬೋಲೆರೋ- ವಿಡಿಯೋ ವೈರಲ್

    ಮುಂಬೈ: ಸಾಮಾನ್ಯವಾಗಿ ಭಾರೀ ಮಳೆಯಾದ ಸಂದರ್ಭದಲ್ಲಿ ಕಾರುಗಳು ನೀರಿನಲ್ಲಿ ಕೊಚ್ಚಿಕೊಂಡು ಹೋದ ಘಟನೆಗಳನ್ನು ನಾವು ನೋಡಿದ್ದೆವೆ. ಆದರೆ ಮುಂಬೈನ ಬೋರಿವಲಿ ಎಂಬ ಪ್ರದೇಶದಲ್ಲಿ ನೀರಿನ ಪೈಪ್ ಒಡೆದ ರಭಸಕ್ಕೆ ಬೋಲೆರೋ ವಾಹನವೊಂದು ಗಾಳಿಯಲ್ಲಿ ಹಾರಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಲದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

    ಮುಂಬೈನ ಬೋರಿವಲಿ ಮತ್ತು ಕಂಡಿವಾಲಿ ನಡುವೆ ನೀರು ಪೂರೈಸುವ ಪೈಪ್ ಲೈನ್ ಒಡೆದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಪೈಪ್ ಒಡೆದು ಭಾರೀ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದ ಕಾರಣ ಹಲವು ವಾಹನಗಳು ನೀರಿನಲ್ಲಿ ಸಿಲುಕ್ಕಿದ್ದವು. ಈ ವೇಳೆ ಸುಮಾರು 1.5 ಟನ್ ತೂಕದ ಮಹಿಂದ್ರಾ ಬೋಲೆರೊ ವಾಹನವು ನೀರಿನ ರಭಸಕ್ಕೆ ಮೇಲೆ ಹಾರಿ ಜಖಂಗೊಂಡಿದೆ. ಘಟನೆ ವೇಳೆ ವಾಹನದಲ್ಲಿ ಯಾರು ಇಲ್ಲದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

    ಘಟನೆ ಕುರಿತು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಮುಂಬೈ ನೀರು ಪೂರೈಕೆ ಮಂಡಳಿ ಯಾವ ರೀತಿ ಕಾರ್ಯನಿವಹಿಸುತ್ತಿದೆ ಎಂಬುವುದಕ್ಕೆ ಸ್ಪಷ್ಟ ಉದಾಹಣೆ ಎಂದು ಕಿಡಿಕಾರಿದ್ದಾರೆ. ನೀರಿನ ಸಂಪರ್ಕ ವ್ಯವಸ್ಥೆ ಸರಿಯಾದ ರೀತಿ ನಿರ್ವಹಣೆ ಮಾಡದೆ ಇರುವುದರಿಂದ ಭಾರೀ ಪ್ರಮಾಣದ ನೀರು ವ್ಯರ್ಥವಾಗುತ್ತಿದೆ ಎಂದು ಆರೋಪಿಸಿದ್ದಾರೆ.