Tag: viral

  • ಜೆಸಿಬಿ ನುಗ್ಗಿಸಿ ಗೋಡೆ ಒಡೆದು ಎಟಿಎಂ ಯಂತ್ರವನ್ನೇ ಕಾರಿಗೆ ತುಂಬಿಸಿದ್ರು

    ಜೆಸಿಬಿ ನುಗ್ಗಿಸಿ ಗೋಡೆ ಒಡೆದು ಎಟಿಎಂ ಯಂತ್ರವನ್ನೇ ಕಾರಿಗೆ ತುಂಬಿಸಿದ್ರು

    ಡಬ್ಲಿನ್: ಎಟಿಎಂಗೆ ಕಳ್ಳರು ನುಗ್ಗಿ ಯಂತ್ರವನ್ನು ಹೊತ್ತುಕೊಂಡು ಹೋಗಿರುವುದನ್ನು ನೀವು ಕೇಳಿರಬಹುದು. ಆದರೆ ಈಗ ಕಳ್ಳರು ಮತ್ತಷ್ಟು ಮುಂದುವರಿದಿದ್ದು ಜೆಸಿಬಿಯನ್ನೇ ಎಟಿಎಂಗೆ ನುಗ್ಗಿಸಿ ಕಳ್ಳತನ ಮಾಡಿದ್ದಾರೆ.

    ಐರ್ಲೆಂಡಿನ ಖತರ್ನಾಕ್ ಕಳ್ಳರು ಜೆಸಿಬಿ, ಕಾರು ಬಳಸಿಕೊಂಡು ಎಟಿಎಂ ಯಂತ್ರವನ್ನು ಕದ್ದಿದ್ದಾರೆ. ಎಟಿಎಂ ಯಂತ್ರವನ್ನು ಕದಿಯುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    https://twitter.com/RT_com/status/1183553004227706880

    ಕದ್ದಿದ್ದು ಹೇಗೆ?
    ಮುಸುಕುಧಾರಿ ಕಳ್ಳರ ಗುಂಪೊಂದು ಜೆಸಿಬಿ ಮೂಲಕ ಮೊದಲು ಗ್ಯಾಸ್ ಸ್ಟೇಷನ್ನಿನ ಗೋಡೆಯನ್ನು ಬೀಳಿಸಿದ್ದಾರೆ. ಬಳಿಕ ಅದರೊಳಗಿದ್ದ ಎಟಿಎಂ ಯಂತ್ರವನ್ನು ಜೆಸಿಬಿ ಮೂಲಕ ಎತ್ತಿದ್ದಾರೆ. ನಂತರ ಅಲ್ಲೇ ಸಿದ್ಧವಾಗಿ ನಿಂತುಕೊಂಡಿದ್ದ ಕಾರಿಗೆ ಯಂತ್ರವನ್ನು ತುಂಬಿಸಿದ್ದಾರೆ.

    ಕಳ್ಳರು ಎಟಿಎಂ ಯಂತ್ರ ತುಂಬಲೆಂದೇ ಕಾರನ್ನು ವಿಶೇಷವಾಗಿ ವಿನ್ಯಾಸ ಮಾಡಿಕೊಂಡು ಬಂದಿದ್ದರು. ಕಾರಿನ ಸನ್ ರೂಫ್ ಜಾಗವನ್ನು ಎಟಿಎಂ ಯಂತ್ರ ಒಳ ಹೋಗುವಷ್ಟು ದೊಡ್ಡದಾಗಿ ವಿನ್ಯಾಸ ಮಾಡಿದ್ದರು. ಫಿಲ್ಮಿ ಸ್ಟೈಲ್ ಕಳ್ಳತನದ ಸಂಪೂರ್ಣ ವಿಡಿಯೋ ಪಕ್ಕದ ಕಟ್ಟಡದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

  • ರಿಯಾಲಿಟಿ ಚೆಕ್ – ಛೋಟಾ ರಾಜನ್ ಜೊತೆಗೆ ಮೋದಿ ಫೋಟೋ ವೈರಲ್

    ರಿಯಾಲಿಟಿ ಚೆಕ್ – ಛೋಟಾ ರಾಜನ್ ಜೊತೆಗೆ ಮೋದಿ ಫೋಟೋ ವೈರಲ್

    ನವದೆಹಲಿ: ಇತ್ತೀಚಿನ ದಿನಗಳಲ್ಲಿ ಪ್ರಧಾನಿ ಮೋದಿ ಅವರ ಜೊತೆ ಭೂಗತ ಪಾತಕಿ ಛೋಟಾ ರಾಜನ್ ಇರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

    ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಫೋಟೋದಲ್ಲಿ ಮೋದಿ ಅವರು ಬಿಳಿ ಬಣ್ಣದ ಶರ್ಟ್ ಹಾಕಿಕೊಂಡಿದ್ದಾರೆ. ಇವರ ಜೊತೆಗೆ ಮೋದಿಯ ಹಿಂಬದಿಯಲ್ಲಿ ಡಾನ್ ಛೋಟಾ ರಾಜನ್ ಕೂಡ ಇರುವುದು ಕಂಡು ಬಂದಿದೆ. ಇವರ ಜೊತೆ ಪ್ರಸ್ತುತ ಮಹಾರಾಷ್ಟ್ರದ ಸಿಎಂ ದೇವೇಂದ್ರ ಫಡ್ನವೀಸ್ ಕೂಡ ಇದ್ದಾರೆ.

    ಈ ಫೋಟೋವನ್ನು ಫೇಸ್‍ಬುಕ್ ಟ್ವಿಟ್ಟರ್‍ನಲ್ಲಿ ಮೊದಲಿಗೆ ವಿಜಯ್ ಅಕ್ಷಿತ್ ಎಂಬವರ ಖಾತೆಯಿಂದ ಶೇರ್ ಆಗಿದ್ದು, ಭೂಗತ ಪಾತಕಿಗೂ ಪ್ರಧಾನಿ ಮೋದಿ ಅವರಿಗೂ ಯಾವ ರೀತಿಯ ಸಂಬಂಧ ಎಂದು ಬರೆದುಕೊಂಡಿದ್ದಾರೆ. ಈ ಫೋಟೋ ಎಲ್ಲ ಕಡೆ ತುಂಬ ವೈರಲ್ ಆಗುತ್ತಿದೆ.

    ಈ ರೀತಿಯ ಫೋಟೋ ವೈರಲ್ ಆಗುತ್ತಿದ್ದಂತೆ ಈ ಫೋಟೋ ನಿಜವೋ ಸಳ್ಳೋ, ಮೋದಿ ಅವರಿಗೆ ಛೋಟಾ ರಾಜನ್‍ಗೂ ಈ ಹಿಂದೆ ಸಂಪರ್ಕ ಇತ್ತ ಎಂದು ಅನುಮಾನಗಳು ಮೂಡಿದ್ದವು. ಆದರೆ ಈಗ ಈ ಫೋಟೋ ಅಸಲಿಯತ್ತು ಬಯಲಾಗಿದ್ದು, ಈ ಫೋಟೋ ನಿಜವಲ್ಲ ಯಾರೋ ಕಿಡಿಗೇಡಿಗಳು ಫೋಟೋಶಾಪ್ ಮಾಡಿ ಎಡಿಟ್ ಮಾಡಿ ಈ ರೀತಿಯ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ ಎಂದು ತಿಳಿದು ಬಂದಿದೆ.

    https://www.facebook.com/photo.php?fbid=2346207449030344&set=a.1411675955816836&type=3&theater

    ಈ ಫೋಟೋ ಬಗ್ಗೆ ಸುದ್ದಿ ಸಂಸ್ಥೆಯೊಂದು ಈ ಹಿಂದಿನ ಇಮೇಜ್‍ಗಳನ್ನು ಪರಿಶೀಲಿಸಿದಾಗ. ಈ ಫೋಟೋ ಮೋದಿ ಅವರು 1990 ರಲ್ಲಿ ಅಮೆರಿಕ ಪ್ರವಾಸಕ್ಕೆ ಹೋದಾಗ ತೆಗೆಸಿಕೊಂಡ ಫೋಟೋ ಆಗಿದ್ದು, ಆ ವೇಳೆ ಅವರ ಜೊತೆ ದೇವೇಂದ್ರ ಫಡ್ನವೀಸ್ ಅವರು ಹೋಗಿದ್ದರು ಎಂದು ತಿಳಿದು ಬಂದಿದೆ. ಈ ಫೋಟೋವನ್ನು 2014 ರಲ್ಲಿ ದಿ ಟೈಮ್ಸ್ ಆಫ್ ಇಂಡಿಯಾ ಒಂದು ಲೇಖನದ ಮೂಲಕ ಪ್ರಕಟಮಾಡಿತ್ತು.

    ಈ ಫೋಟೋವನ್ನು ತೆಗೆದುಕೊಂಡ ಕೆಲ ಕಿಡಿಗೇಡಿಗಳು ಮೋದಿ ಅವರ ಹಿಂದೆ ನಿಂತಿದ್ದ ವ್ಯಕ್ತಿಯ ಮುಖಕ್ಕೆ ಛೋಟಾ ರಾಜನ್ ಅವರ ಮುಖವನ್ನು ಫೋಟೋಶಾಪ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

  • ಶನಿವಾರ ರಾತ್ರಿ ಹೀಗಿರುತ್ತೆ – ಅಮಿರ್ ಮಗ್ಳ ಹಾಟ್ ಫೋಟೋ ವೈರಲ್

    ಶನಿವಾರ ರಾತ್ರಿ ಹೀಗಿರುತ್ತೆ – ಅಮಿರ್ ಮಗ್ಳ ಹಾಟ್ ಫೋಟೋ ವೈರಲ್

    ಮುಂಬೈ: ಬಾಲಿವುಡ್ ಮಿ. ಪರ್ಫೆಕ್ಟ್ ಅಮಿರ್ ಖಾನ್ ಅವರ ಮಗಳು ಇರಾ ಖಾನ್ ಅವರ ಹಾಟ್ ಫೋಟೋವೊಂದು ವೈರಲ್ ಆಗುತ್ತಿದೆ.

    ಇರಾ ಖಾನ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಫೋಟೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಈ ಫೋಟೋದಲ್ಲಿ ಅವರು ತುಂಬಾ ಹಾಟ್ ಹಾಗೂ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಇರಾ ಕೆಂಪು ಬಣ್ಣದ ಉಡುಪು ಧರಿಸಿ ಡಾರ್ಕ್ ಮೇಕಪ್ ಹಾಕಿದ್ದಾರೆ.


    ಈ ಫೋಟೋವನ್ನು ಪೋಸ್ಟ್ ಮಾಡಿದ ಇರಾ ಅದಕ್ಕೆ ‘ಶನಿವಾರ ರಾತ್ರಿ ಹೀಗಿರುತ್ತೆ’ ಎಂದು ಬರೆದುಕೊಂಡಿದ್ದಾರೆ. ಸದ್ಯ ಇರಾ ನಟನೆ ಬದಲು ನಿರ್ದೇಶನದತ್ತ ಒಲವು ತೋರಿದ್ದಾರೆ. ಇರಾ ಈಗ ಧಾರಾವಾಹಿಗಳನ್ನು ನಿರ್ದೇಶಿಸುತ್ತಿದ್ದಾರೆ. ಇದು ಹೊರತಾಗಿ ಇರಾ ಮಾಡೆಲಿಂಗ್ ಕೂಡ ಮಾಡುತ್ತಿದ್ದಾರೆ.


    ಕಳೆದ ತಿಂಗಳು ಅಂದರೆ ಅಗಸ್ಟ್ ತಿಂಗಳಿನಲ್ಲಿ ಇರಾ ಖಾನ್ ಬೋಲ್ಡ್ ಹಾಗೂ ಗ್ಲಾಮರಸ್ ಫೋಟೋಶೂಟ್ ಮಾಡಿಸಿ, ಫೋಟೋಗಳನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಈ ಫೋಟೋದಲ್ಲಿ ಇರಾ ಬಿಕಿನಿ ಬ್ಲೌಸ್ ಹಾಕಿ, ಅದಕ್ಕೆ ಡೆನಿಮ್ ಹಾಟ್ ಪ್ಯಾಂಟ್ ಧರಿಸಿದ್ದರು.

    ಇರಾ ಅವರು ಪೋಸ್ಟ್ ಮಾಡಿದ ಫೋಟೋದಲ್ಲಿ ಅವರು ಹೊಕ್ಕಳುಗೆ ಪಿಯರ್ಸ್ ಮಾಡಿಸಿದ್ದರು. ಅಲ್ಲದೆ ಇರಾ ಅವರು ಮೇಕಪ್ ಇಲ್ಲದೇ ಫೋಟೋಶೂಟ್ ಮಾಡಿಸಿದ್ದರು. ಈ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಹಾಕಿ ಅದಕ್ಕೆ, “ನೀವು ಯಾರು” ಎಂದು ಬರೆದು ಪೋಸ್ಟ್ ಮಾಡಿಕೊಂಡಿದ್ದರು.

    ಇರಾ ಖಾನ್, ಅಮಿರ್ ಖಾನ್‍ನ ಮೊದಲ ಪತ್ನಿ ರೀನಾ ದತ್ತ ಅವರ ಎರಡನೇ ಮಗಳು. ಇರಾ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯರಾಗಿರುತ್ತಾರೆ. ಅಲ್ಲದೆ ಅವರು ತಮ್ಮ ಬಾಯ್ ಫ್ರೆಂಡ್ ಜೊತೆ ಇರುವ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

  • ಒಂದೇ ಬೈಕ್‍ನಲ್ಲಿ 7 ಜನ, 2 ಶ್ವಾನ ಸಮೇತ ಲಗೇಜ್ ಸಾಗಿಸಿದ ವ್ಯಕ್ತಿ: ವಿಡಿಯೋ ನೋಡಿ

    ಒಂದೇ ಬೈಕ್‍ನಲ್ಲಿ 7 ಜನ, 2 ಶ್ವಾನ ಸಮೇತ ಲಗೇಜ್ ಸಾಗಿಸಿದ ವ್ಯಕ್ತಿ: ವಿಡಿಯೋ ನೋಡಿ

    ನವದೆಹಲಿ: ನಾವು ಒಂದು ಬೈಕ್‍ನಲ್ಲಿ ಇಬ್ಬರು ಅಥವಾ ಮೂವರು ಕುಳಿತುಕೊಳ್ಳವುದನ್ನು ನೋಡಿರುತ್ತೇವೆ. ಆದರೆ ಇಲ್ಲೊಬ್ಬ ವ್ಯಕ್ತಿ ಪೂರ್ತಿ ಅವನ ಕುಟುಂಬವನ್ನು ಲಗೇಜ್ ಸಮೇತ ಒಂದೇ ಬೈಕ್‍ನಲ್ಲಿ ಸಾಗಿಸಿದ್ದಾನೆ.

    ಒಂದು ಬೈಕ್‍ನಲ್ಲಿ ತನ್ನ ಐದು ಜನ ಮಕ್ಕಳು ಮತ್ತು ಹೆಂಡತಿ ಹಾಗೂ ಎರಡು ನಾಯಿ ಮರಿಯ ಜೊತೆಗೆ ತನ್ನ ಮನೆಯ ಎಲ್ಲ ಲಗೇಜ್‍ನ್ನು ಕಟ್ಟಿಕೊಂಡು ಒಬ್ಬ ವ್ಯಕ್ತಿ ಸಾಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

    https://twitter.com/rishadcooper/status/1166931979138260994

    ಈ ವಿಡಿಯೋವನ್ನು ಟ್ವಿಟ್ಟರ್ ಬಳಕೆದಾರ ರಿಷಾದ್ ಕೂಪರ್ ಎಂಬವರು ತಮ್ಮ ಟ್ವಿಟ್ಟರ್‍ ನಲ್ಲಿ ಹಾಕಿಕೊಂಡಿದ್ದು, ಈ ವಿಡಿಯೋ ಸಖತ್ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಬೈಕಿನ ಹಿಂಬದಿಯಲ್ಲಿ ಮೂರು ಮಕ್ಕಳು ಕುಳಿತಿದ್ದಾರೆ. ನಂತರ ಆತನ ಮಡದಿ ಕುಳಿತಿದ್ದಾಳೆ. ಆತ ಬೈಕ್ ಓಡಿಸುತ್ತಿದ್ದು, ಮುಂಭಾಗದಲ್ಲಿ ಇಬ್ಬರು ಮಕ್ಕಳು ಕುಳಿತಿರುತ್ತಾರೆ. ಬೈಕಿನ ಸುತ್ತಾ ಲಗೇಜ್‍ನ್ನು ಕಟ್ಟಿದ್ದು, ಬೈಕ್ ಬಲಭಾಗದಲ್ಲಿರುವ ಲಗೇಜ್ ಮೇಲೆ ಒಂದು ನಾಯಿ ಆರಾಮವಾಗಿ ಕುಳಿತಿದೆ. ಇನ್ನೊಂದು ನಾಯಿಯನ್ನು ಮುಂದೆ ಕುಳಿತಿರುವ ಹುಡುಗ ಹಿಡಿದುಕೊಂಡಿರುವುದನ್ನು ಕಾಣಬಹುದು.

    ಒಟ್ಟು ಈ ವಿಡಿಯೋದಲ್ಲಿ ನಾಯಿಗಳನ್ನು ಸೇರಿಸಿದರೆ ಒಟ್ಟು 9 ಜನ ಕುಳಿತಿದ್ದಾರೆ. ಈ ವಿಡಿಯೋ ಆಪ್ಲೋಡ್ ಮಾಡಿರುವ ಕೂಪರ್ ಇದಕ್ಕೆ ಭಾರತದಲ್ಲಿ ಮಾತ್ರ ಎಂದು ಶೀರ್ಷಿಕೆ ಕೊಟ್ಟಿದ್ದು, ವಿಡಿಯೋ ನೋಡಿದ ಜನರು ಅಶ್ಚರ್ಯದ ಜೊತೆಗೆ ಅತಂಕವನ್ನು ವ್ಯಕ್ತಪಡಿಸಿದ್ದಾರೆ.

  • ಹುಲ್ಲು ತಿಂದ ಸಿಂಹ – ಸಸ್ಯಾಹಾರಿ ಲಯನ್ ಎಂದ ಜನರು

    ಹುಲ್ಲು ತಿಂದ ಸಿಂಹ – ಸಸ್ಯಾಹಾರಿ ಲಯನ್ ಎಂದ ಜನರು

    ಗಾಂಧಿನಗರ: ಗುಜರಾತಿನ ಗಿರ್ ಕಾಡಿನಲ್ಲಿ ಸಿಂಹವೊಂದು ಹುಲ್ಲು ತಿನ್ನುತ್ತಿರುವ ವಿಡಿಯೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ಚರ್ಚೆಯಾಗುತ್ತಿದೆ.

    ಅಪ್ಪಟ ಮಾಂಸಹಾರಿಯಾಗಿರುವ ಸಿಂಹ ಪ್ರಾಣಿಗಳನ್ನು ಬೇಟೆಯಾಡಿ ತಿನ್ನುವುದನ್ನು ನಾವು ನೋಡಿದ್ದೇವೆ. ಆದರೆ ಈ ಸಿಂಹ ಕಾಡಿನಲ್ಲಿ ಇರುವ ಗರಿಕೆ ಹುಲ್ಲು ಮತ್ತು ಗಿಡಮೂಲಿಕೆಯನ್ನು ತಿನ್ನುತ್ತಿರುವುದು ವಿಚಿತ್ರ ಎಂದು ತೋರುತ್ತದೆ.

    ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ನೋಡಿದ ಕೆಲವರು ಆಶ್ಚರ್ಯ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಸಿಂಹಗಳು ಹುಲ್ಲು ತಿನ್ನುವುದು ಸಹಜ ಎಂದು ಕಮೆಂಟ್ ಮಾಡಿದ್ದಾರೆ. ಇದನ್ನು ಒಪ್ಪಿಕೊಂಡಿರುವ ಪ್ರಾಣಿ ತಜ್ಞರು ಸಿಂಹಗಳು ಹಸಿ ಮಾಂಸವನ್ನು ತಿನ್ನುವುದರಿಂದ ಅದು ಬೇಗ ಜೀರ್ಣವಾಗುವುದಿಲ್ಲ. ಅದ್ದರಿಂದ ಜೀರ್ಣಕ್ರಿಯೇಗೆ ತೊಂದರೆಯಾದಾಗ ಸಿಂಹಗಳು ಹುಲ್ಲನ್ನು ತಿಂದು ಹೊಟ್ಟೆಯನ್ನು ಸ್ವಚ್ಛಮಾಡಿಕೊಳ್ಳುತ್ತವೆ ಎಂದು ಹೇಳಿದ್ದಾರೆ.

    ಎಲ್ಲಾ ಜಾತಿಯ ಮಾಂಸಹಾರಿ ಪ್ರಾಣಿಗಳು ಹುಲ್ಲನ್ನು ತಿನ್ನುತ್ತವೆ. ಏಕೆಂದರೆ ಅವುಗಳು ಬೇಟೆಯಾಡಿ ಹಸಿ ಮಾಂಸವನ್ನು ತಿನ್ನುವ ಕಾರಣ ಅವುಗಳ ದೇಹಕ್ಕೆ ಫೈಬರ್ ಅಂಶವು ಜಾಸ್ತಿ ಸೇರುತ್ತದೆ. ಇದರಿಂದ ಅವು ತಮ್ಮ ಕರುಳುಗಳನ್ನು ಸ್ವಚ್ಛಮಾಡಿಕೊಳ್ಳಲು ಆಗಾಗ ಈ ರೀತಿ ಹುಲ್ಲುಗಳನ್ನು ತಿನ್ನುತ್ತವೆ ಎಂದು ಪ್ರಾಣಿ ತಜ್ಞರು ತಿಳಿಸಿದ್ದಾರೆ.

    https://twitter.com/Adamiington/status/1167016863802355712

    ಈ ವಿಡಿಯೋ ನೋಡಿದ ಕೆಲವರು ವ್ಯಂಗ್ಯವಾಗಿ ಕೂಡ ಕಮೆಂಟ್ ಮಾಡಿದ್ದು, ಪಾಪ ಆದರ ಗಂಡ ಡಯಟ್ ಮಾಡು ಎಂದು ಹೇಳಿರಬೇಕು ಅದಕ್ಕೆ ಅ ಸಿಂಹಿಣಿ ಹಲ್ಲು ತಿನ್ನುತ್ತಿದೆ ಎಂದು ಹೇಳಿದ್ದಾರೆ. ಇನ್ನೂ ಕೆಲವರು ಇದು ಸಸ್ಯಾಹಾರಿ ಸಿಂಹ ಎಂದು ತಮಾಷೆಯಾಗಿ ಕಮೆಂಟ್ ಮಾಡಿದ್ದಾರೆ.

  • ವೈರಲ್ ಆಯ್ತು ಐಟಿಬಿಪಿ ಪೇದೆಯ ‘ಸಂದೇಸೆ ಆತೇ ಹೈ’ ಹಾಡು

    ವೈರಲ್ ಆಯ್ತು ಐಟಿಬಿಪಿ ಪೇದೆಯ ‘ಸಂದೇಸೆ ಆತೇ ಹೈ’ ಹಾಡು

    ನವದೆಹಲಿ: ಇಂಡೋ-ಟಿಬೆಟ್ ಗಡಿ ಪೊಲೀಸ್(ಐಟಿಬಿಪಿ) ಪೇದೆಯೊಬ್ಬರು 73ನೇ ಸ್ವಾತಂತ್ರ್ಯ ದಿನದ ಪ್ರಯುಕ್ತ ತಮ್ಮ ಸಹೋದ್ಯೋಗಿಗಳಿಗೆ ‘ಸಂದೇಸೆ ಆತೇ ಹೈ’ ಹಾಡನ್ನು ಹೇಳಿ ಶುಭಕೋರಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

    ಇಂದು 73ನೇ ಸ್ವಾತಂತ್ರ್ಯ ದಿನವನ್ನು ದೇಶಾದಂತ ಸಡಗರ, ಸಂಭ್ರಮದಿಂದ ಆಚರಿಸಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಂಭ್ರಮಾಚರಣೆಯ ಸಂದೇಶಗಳು, ಚಿತ್ರಗಳು, ವಿಡಿಯೋಗಳೇ ರಾರಾಜಿಸುತ್ತಿದೆ. ಅವುಗಳ ಪೈಕಿ, ಇಂಡೋ-ಟಿಬೆಟ್ ಐಟಿಬಿಪಿ ಪೇದೆ ಲವ್ಲಿ ಸಿಂಗ್ ತಮ್ಮ ಮಧುರ ಕಂಠದಿಂದ ಹಾಡೊಂದನ್ನು ಹೇಳಿ ಸಹೋದ್ಯೋಗಿಗಳಿಗೆ ಸಮರ್ಪಿಸಿದ್ದಾರೆ. ಅವರ ಜೊತೆ ಇತರೆ ಸೈನಿಕರು ಕೂಡ ಹಾಡಿ ಸಾಥ್ ನೀಡಿದ್ದಾರೆ. ಈ ಹಾಡಿನ ವಿಡಿಯೋ ನೋಡಿದವರು ಪೇದೆಯ ಕಂಠಸಿರಿಗೆ ಫಿದಾ ಆಗಿಬಿಟ್ಟಿದ್ದಾರೆ.

    1997ರಲ್ಲಿ ತೆರೆಕಂಡ ಬಾಲಿವುಡ್‍ನ ಬ್ಲಾಕ್ ಬಸ್ಟರ್ ಚಿತ್ರ ‘ಬಾರ್ಡರ್’ನ ಹಿಟ್ ಹಾಡು ‘ಸಂದೇಸೆ ಆತೇ ಹೈ’ ಹಾಡನ್ನು ಐಟಿಬಿಪಿ ಪೇದೆ ಗುನುಗುತ್ತಿರುವ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರ ಮನಗೆಲ್ಲುತ್ತಿದೆ.

    ಈ ಹಾಡಿನ ವಿಡಿಯೋವನ್ನು ಐಟಿಬಿಪಿ ಅಧಿಕೃತ ಟ್ವಿಟರ್ ಪೇಜ್‍ನಲ್ಲಿ ಶೇರ್ ಮಾಡಲಾಗಿದೆ. ಈ ವಿಡಿಯೋ ನೋಡಿದವರು ಪೇದೆಯ ಮಧುರ ಸ್ವರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಈ ಹಿಂದೆ ಬಿಎಸ್‍ಎಫ್ ಯೋಧ ಸುರಿಂದರ್ ಸಿಂಗ್ ಅವರು ಇದೇ ಹಾಡನ್ನು ಹಾಡಿದ್ದರು. ಸುರಿಂದರ್ ಸಿಂಗ್ ಅವರ ಹಾಡು ವೈರಲ್ ಆಗಿತ್ತು.

    https://twitter.com/anita_chauhan80/status/1083575725234495490

  • ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಮಹಿಳೆ ಈಗ ರಿಯಾಲಿಟಿ ಶೋಗೆ ಎಂಟ್ರಿ

    ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಮಹಿಳೆ ಈಗ ರಿಯಾಲಿಟಿ ಶೋಗೆ ಎಂಟ್ರಿ

    ಕೋಲ್ಕತ್ತಾ: ಕಳೆದ ತಿಂಗಳು ರೈಲ್ವೆ ನಿಲ್ದಾಣದಲ್ಲಿ ಮಹಿಳೆಯೊಬ್ಬರು ಹಾಡು ಹಾಡುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಮಹಿಳೆ ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟಿದ್ದಾರೆ.

    ಕಳೆದ ತಿಂಗಳು ಪಶ್ಚಿಮ ಬಂಗಾಳದ ರಣಘಾಟ್ ನಿಲ್ದಾಣದಲ್ಲಿ ಮೊಂಡಲ್ ಎಂಬವರು 1972ರಲ್ಲಿ ಬಿಡುಗಡೆಯಾದ ‘ಶೋರ್’ ಚಿತ್ರದ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರು ಹಾಡಿದ “ಏಕ್ ಪ್ಯಾರ್ ಕಾ ನಗ್ಮಾ ಹೇ” ಚಿತ್ರದ ಹಾಡನ್ನು ಹಾಡುತ್ತಿದ್ದ ವಿಡಿಯೋ ವೈರಲ್ ಆಗಿತ್ತು.

    ಮೊಂಡಲ್ ಅವರ ಈ ವಿಡಿಯೋವನ್ನು ‘ಬಾರ್ಪೆಟಾ ಟೌನ್ ದಿ ಪ್ಲೇಸ್ ಆಫ್ ಪೀಸ್’ ಪೇಜ್ ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿತ್ತು. ಈ ವಿಡಿಯೋ ವೈರಲ್ ಆಗಿದ್ದು, ಮೊಂಡಲ್ ಅವರಿಗೆ ಈಗ ಮುಂಬೈನಲ್ಲಿ ನಡೆಯುವ ರಿಯಾಲಿಟಿ ಶೋನಲ್ಲಿ ಅವಕಾಶ ಸಿಕ್ಕಿದೆ. ಮಹಿಳೆಯೊಬ್ಬರು ಮೊಂಡಲ್ ಅವರನ್ನು ಗುರುತಿಸಿ ಅವರನ್ನು ಸಂಪೂರ್ಣವಾಗಿ ಬದಲಾಯಿಸಿದ್ದಾರೆ.

    ರಿಯಾಲಿಟಿ ಶೋಗಾಗಿ ಮೊಂಡಲ್ ಪಾರ್ಲರ್ ನಲ್ಲಿ ತಯಾರಾಗುತ್ತಿರುವ ಫೋಟೋಗಳು ವೈರಲ್ ಆಗಿದ್ದು, ಈ ಕಾರ್ಯಕ್ರಮಕ್ಕಾಗಿ ಮೊಂಡಲ್ ಹೊಸ ಹೇರ್ ಸ್ಟೈಲ್ ಕೂಡ ಮಾಡಿಸಿದ್ದಾರೆ. ಮೊಂಡಲ್ ಅವರು ಹಾಡಿದ ವಿಡಿಯೋ ಇದುವರೆಗೂ 39 ಲಕ್ಷಕ್ಕೂ ಹೆಚ್ಚು ವ್ಯೂ ಪಡೆದಿದ್ದು, 59 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ಅಲ್ಲದೆ 5 ಸಾವಿರಕ್ಕೂ ಹೆಚ್ಚು ಕಮೆಂಟ್ಸ್ ಬಂದಿದೆ.

    ಮುಂಬೈ ಅಲ್ಲದೆ ಕೇರಳ, ಕೋಲ್ಕತ್ತಾ ಹಾಗೂ ಬಾಂಗ್ಲಾದೇಶದ ರಿಯಾಲಿಟಿ ಶೋಗಳಲ್ಲಿ ಭಾಗವಹಿಸುವಂತೆ ಮೊಂಡಲ್ ಅವರಿಗೆ ಮನವಿ ಮಾಡಲಾಗುತ್ತಿದೆ. ಅಲ್ಲದೆ ತನ್ನದೆ ಸ್ವಂತ ಮ್ಯೂಸಿಕ್ ಆಲ್ಬಂ ಶುರು ಮಾಡುವಂತೆ ಮೊಂಡಲ್ ಅವರಿಗೆ ಅವಕಾಶ ಬರುತ್ತಿದೆ.

  • ‘ನೀನಂದ್ರೆ ನನಗೆ ತುಂಬಾ ಇಷ್ಟ’ -ದೇವರಕೊಂಡಗೆ ಪ್ರಿಯಾ ಫಿದಾ

    ‘ನೀನಂದ್ರೆ ನನಗೆ ತುಂಬಾ ಇಷ್ಟ’ -ದೇವರಕೊಂಡಗೆ ಪ್ರಿಯಾ ಫಿದಾ

    ಹೈದರಾಬಾದ್: ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಕಣ್ಣಿನ ಮೂಲಕ ಸದ್ದು ಮಾಡಿದ್ದ ಪ್ರಿಯಾ ಪ್ರಕಾಶ್ ವಾರಿಯರ್ ಅರ್ಜನ್ ರೆಡ್ಡಿ ಖ್ಯಾತಿಯ ನಟ ವಿಜಯ್ ದೇವರಕೊಂಡ ಅವರ ಜೊತೆ ತೆಗೆಸಿಕೊಂಡಿರುವ ಫೋಟೋವನ್ನು ಇನ್‍ಸ್ಟಾಗ್ರಾಮ್ ನಲ್ಲಿ ಹಾಕಿದ್ದಾರೆ.

    ಪ್ರಿಯಾ ವಾರಿಯರ್ ಇತ್ತೀಚಿಗೆ ವಿಜಯ್ ದೇವರಕೊಂಡ ಅವರನ್ನು ಭೇಟಿಯಾಗಿದ್ದು, ಈ ವೇಳೆ ಅವರ ಜೊತೆ ತೆಗೆಸಿಕೊಂಡಿರುವ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ ಮತ್ತು ನೀನಂದ್ರೆ ನನಗೆ ತಂಬಾ ಇಷ್ಟ ಎಂದು ತೆಲುಗಿನಲ್ಲಿ ಬರೆದುಕೊಂಡಿದ್ದಾರೆ.

    https://www.instagram.com/p/B05Hbw8gtR9/?utm_source=ig_embed

    ಈಗ ಪ್ರಿಯಾ ವಾರಿಯರ್ ಅವರ ಈ ಪೋಸ್ಟ್ ಸಾಮಾಜಿಕ ಜಾಲಯಾಣದಲ್ಲಿ ಸಖತ್ ವೈರಲ್ ಆಗಿದ್ದು, ಈ ಚಿತ್ರವನ್ನು ಇಲ್ಲಿವರಿಗೆ 4.93 ಲಕ್ಷ ಮಂದಿ ಇಷ್ಟಪಟ್ಟಿದ್ದಾರೆ.

    ಪ್ರಿಯಾ ವಾರಿಯರ್ ಅವರು ಸಾಮಾಜಿಕ ಜಾಲತಾಣದ ಮೂಲಕವೇ ತುಂಬ ಹಿಟ್ ಆದ ನಟಿ. ತನ್ನ ಮಲೆಯಾಳಂ ಚಿತ್ರ “ಒರು ಅದಾರ್ ಲವ್” ನ ಮಾಣಿಕ್ಯ ಮಲರಾಯ ಪೂವಿ ಹಾಡಿನಲ್ಲಿ ತನ್ನ ಕಣ್ಣು ಹುಬ್ಬುಗಳ ಮೂಲಕವೇ ರಾತ್ರೋ ರಾತ್ರಿ ಸ್ಟಾರ್ ಆದವರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಿಟ್ ಆದ ಕೂಡಲೇ ಒರು ಅದಾರ್ ಲವ್ ಸಿನಿಮಾ ತೆಲುಗು, ಕನ್ನಡಕ್ಕೂ ಡಬ್ ಮಾಡಲಾಗಿತ್ತು.

    2017ರಲ್ಲಿ ತೆರೆಕಂಡ ಅರ್ಜುನ್ ರೆಡ್ಡಿ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆದ ಕೂಡಲೇ ವಿಜಯ್ ದೇವರಕೊಂಡ ಅವರಿಗೆ ಅಪಾರ ಖ್ಯಾತಿ ಬಂತು. ನಂತರ ಇವರಿಗೆ ಈ ಚಿತ್ರಕ್ಕೆ ತೆಲುಗು ಚಿತ್ರರಂಗದ ಅತ್ಯತ್ತಮ ನಟ ಎಂಬ ಪ್ರಶಸ್ತಿ ಕೂಡ ಲಭಿಸಿತ್ತು. ಈಗ ಇತ್ತೀಚೆಗೆ ತೆರೆಕಂಡ ಡಿಯರ್ ಕಾಮ್ರೇಡ್ ಸಿನಿಮಾ ಕೂಡ ಉತ್ತಮ ಪ್ರದರ್ಶನ ಕಾಣುತ್ತಿದೆ.

  • ನಟಿ ಸೋನಾಕ್ಷಿ ಸಿನ್ಹಾ ಅರೆಸ್ಟ್?: ವಿಡಿಯೋ ವೈರಲ್

    ನಟಿ ಸೋನಾಕ್ಷಿ ಸಿನ್ಹಾ ಅರೆಸ್ಟ್?: ವಿಡಿಯೋ ವೈರಲ್

    ಮುಂಬೈ: ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಅವರನ್ನು ಅರೆಸ್ಟ್ ಮಾಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಸೋನಾಕ್ಷಿ ಸಿನ್ಹಾ ಅವರ ಕೈಯಿಗೆ ಕೋಳ ಹಾಕುತ್ತಿದ್ದಾರೆ. ಈ ವೇಳೆ ಸೋನಾಕ್ಷಿ ಸಿನ್ಹಾ ‘ಏನೂ ಮಾಡುತ್ತಿದ್ದೀರಾ? ನೀವು ನನಗೆ ಹೀಗೆ ಹೇಗೆ ಅರೆಸ್ಟ್ ಮಾಡಲು ಸಾಧ್ಯ? ಎಂದು ಹೇಳುತ್ತಿದ್ದಾರೆ.

    ಸೋನಾಕ್ಷಿ ಅವರ ಈ ವಿಡಿಯೋ ಅಸಲಿಯೋ, ನಕಲಿಯೋ ಎಂಬುದು ಗೊತ್ತಿಲ್ಲ. ಈ ವಿಡಿಯೋ ಮೂಲಕ ಸೋನಾಕ್ಷಿ ಅವರ ಮುಂಬರುವ ‘ಮಿಶನ್ ಮಂಗಲ್’ ಚಿತ್ರವನ್ನು ಪ್ರಮೋಟ್ ಮಾಡುತ್ತಿದ್ದಾರಾ ಎಂಬುದು ಕೂಡ ತಿಳಿದು ಬಂದಿಲ್ಲ. ಆದರೆ ಈ ವಿಡಿಯೋ ನೋಡಿ ಹಲವರು ಸೋನಾಕ್ಷಿ ಕಾನೂನು ಸಮಸ್ಯೆಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಹೇಳುತ್ತಿದ್ದಾರೆ.

    ಈ ವಿಡಿಯೋ ಜೊತೆಗೆ ಸೋನಾಕ್ಷಿ ಅವರ ಮತ್ತೊಂದು ವಿಡಿಯೋ ಕೂಡ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಸೋನಾಕ್ಷಿ ಬಂಧನದಿಂದ ತಪ್ಪಿಸಿಕೊಂಡು ಹೊರ ಹೋಗುತ್ತಿರುವುದು ಕ್ಯಾಮೆರಾದಲ್ಲಿ ಸೆರೆ ಆಗಿದೆ.

    ಸದ್ಯ ಸೋನಾಕ್ಷಿ ಅವರ ಮಿಶನ್ ಮಂಗಲ್ ಚಿತ್ರ ಚಂದ್ರಯಾನದ ಕತೆಯಾಗಿದ್ದು, ಈ ಚಿತ್ರದಲ್ಲಿ ನಟ ಅಕ್ಷಯ್ ಕುಮಾರ್, ನಟಿಯರಾದ ವಿದ್ಯಾ ಬಾಲನ್, ತಾಪ್ಸಿ ಪನ್ನು, ನಿತ್ಯಾ ಮೆನನ್ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ.

  • ಟಿಎಂಸಿ ಸಂಸದೆಯ ಹನಿಮೂನ್ ಫೋಟೋಗಳು ವೈರಲ್

    ಟಿಎಂಸಿ ಸಂಸದೆಯ ಹನಿಮೂನ್ ಫೋಟೋಗಳು ವೈರಲ್

    ನವದೆಹಲಿ: ಮೊದಲ ಬಾರಿಗೆ ಸಂಸದೆ ಆಗಿ ಆಯ್ಕೆಯಾಗಿರುವ ತೃಣಮೂಲ ಕಾಂಗ್ರೆಸ್ ಸಂಸದೆ(ಟಿಎಂಸಿ) ನುಸ್ರತ್ ಜಹಾನ್ ಅವರು ಸದಾ ಸುದ್ದಿಯಲ್ಲಿರುತ್ತಾರೆ. ಹಾಗೆಯೇ ಈ ಬಾರಿ ಅವರು ರೊಮ್ಯಾಂಟಿಕ್ ಲುಕ್‍ನಲ್ಲಿ ಪತಿ ಜೊತೆ ಕಾಣಿಸಿಕೊಂಡಿರುವ ಫೋಟೋಗಳ ಮೂಲಕ ಸುದ್ದಿಯಾಗಿದ್ದಾರೆ.

    ಬಂಗಾಳಿ ನಟಿ ಹಾಗೂ ಸಂಸದೆ ನುಸ್ರತ್ ಅವರು ರಾಜಕೀಯಕ್ಕೆ ಪ್ರವೇಶ ಮಾಡಿದ ಬಳಿಕ ನಿರಂತರ ಚರ್ಚೆಯಲ್ಲಿದ್ದಾರೆ. ಮೊದಲು ಡ್ರೆಸ್ ವಿಚಾರಕ್ಕೆ ನುಸ್ರತ್ ಚರ್ಚೆಗೆ ಬಂದಿದ್ದರು. ನಂತರ ಹಣೆಗೆ ಸಿಂಧೂರ, ಕೈಗೆ ಬಳೆ ತೊಟ್ಟು ಕಲಾಪಕ್ಕೆ ಬಂದಿದ್ದು ಭಾರೀ ಚರ್ಚೆಗೆ ಕಾರಣವಾಗಿತ್ತು. ಇತ್ತೀಚಿಗಷ್ಟೆ ನುಸ್ರತ್ ಅವರು ತಮ್ಮ ಬಹುಕಾಲದ ಗೆಳೆಯ ನಿಖಿಲ್ ಜೈನ್ ಅವರನ್ನು ವರಿಸಿದ್ದರು. ಆದರೆ ರಾಜಕೀಯದಲ್ಲಿ ಬ್ಯುಸಿಯಿದ್ದ ಕಾರಣಕ್ಕೆ ಮದುವೆಯಾದ ಎರಡು ತಿಂಗಳ ಬಳಿಕ ಬ್ರೆಕ್ ತೆಗೆದುಕೊಂಡು ನುಸ್ರತ್ ಪತಿಯೊಂದಿಗೆ ಹನಿಮೂನ್‍ಗೆ ಹೋಗಿದ್ದಾರೆ. ಅಲ್ಲಿ ನುಸ್ರತ್ ಅವರು ಪತಿಯೊಂದಿಗೆ ತೆಗೆಸಿಕೊಂಡಿರುವ ರೊಮ್ಯಾಂಟಿಕ್ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    https://www.instagram.com/p/B0nSOhnHZ_-/?utm_source=ig_embed

    ಪತಿಯೊಂದಿಗೆ ನುಸ್ರತ್ ಕಳೆದಿರುವ ಮಧುರ ಕ್ಷಣಗಳ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಮ್ ಹಾಗೂ ಇತರೇ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಅವರ ಪತಿ ನಿಖಿಲ್ ಅವರು ಕೂಡ ಕೆಲ ಫೋಟೋಗಳನ್ನು ತಮ್ಮ ಇನ್‍ಸ್ಟಾ ಹಾಗೂ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ನುಸ್ರತ್ ಅವರು ಪೋಸ್ಟ್ ಮಾಡಿರುವ ಫೋಟೋದಲ್ಲಿ ಅವರು ಕಪ್ಪು ಹಾಗೂ ಬಿಳಿ ಬಣ್ಣದ ಸ್ಟ್ರೈಪ್ಸ್ ಇರುವ ಟಾಪ್ ಹಾಗೂ ಬಿಳಿ ಶಾಟ್ಸ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫೋಟೋ ಲುಕ್‍ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

    ನುಸ್ರತ್ ಜಹಾನ್ ಅವರು ಅಂತರ ಧರ್ಮ ವಿವಾಹವಾಗಿರುವುದು ಈ ಹಿಂದೆ ಭಾರಿ ಚರ್ಚೆಗೆ ಕಾರಣವಾಗಿತ್ತು. ಆಗ ಧೈರ್ಯದಿಂದ ನುಸ್ರತ್ ಅವರು ಇದು ನನ್ನ ವೈಯಕ್ತಿಕ ವಿಚಾರ, ಬೇರೆಯವರು ತಲೆಹಾಕುವುದು ಸರಿಯಲ್ಲ. ನನ್ನ ಜೀವನದ ನಿರ್ಧಾರವನ್ನು ಯಾರು ತೆಗೆದುಕೊಳ್ಳಲು ಆಗುವುದಿಲ್ಲ. ನಾನು ಜನರನ್ನು ಮನುಷ್ಯತ್ವದಿಂದ ಅಳಿಯುತ್ತೇನೆ. ನಿಖಿಲ್ ಅವರು ಒಳ್ಳೆಯ ಮನುಷ್ಯ, ಆದ್ದರಿಂದ ನಾನು ಈ ನಿರ್ಧಾರಕ್ಕೆ ಬಂದೆ. ಈಗಿನ ಕಾಲದಲ್ಲೂ ಜನ ಧರ್ಮದ ಚೌಕಟ್ಟಿನಲ್ಲಿ ಬದುಕುತ್ತಿದ್ದಾರೆ ಎಂದರೆ ಅಚ್ಚರಿಯಾಗುತ್ತೆ ಎಂದು ತಿರುಗೇಟು ನೀಡಿದ್ದರು.

    ನುಸ್ರತ್ ಅವರು ಸಂಸದೆಯಾದ ಬಳಿಕ ಹಲವು ವಿವಾದಗಳನ್ನು ಮಾಡಿಕೊಂಡಿದ್ದಾರೆ. ಅವರ ಉಡುಗೆ, ತೊಡುಗೆ, ಮದುವೆಯಾದ ಬಳಿಕ ಪತಿಯ ಜೈನ್ ಕುಟುಂಬಕ್ಕೆ ಸೇರಿದ್ದು ಹಾಗೂ ಹಿಂದೂ ಸಂಪ್ರದಾಯಗಳಲ್ಲಿ ಭಾಗಿಯಾಗಿರುವುದು ಸಖತ್ ಸುದ್ದಿಯಾಗಿತ್ತು. ಹಲವು ಟೀಕೆ ಟಿಪ್ಪಣಿಗಳ ನಡುವೆಯೂ ನುಸ್ರತ್ ಜಹಾನ ಇಸ್ಕಾನ್ ಮಂದಿರದ ಜಗನ್ನಾಥ ಯಾತ್ರೆಯಲ್ಲಿ ಭಾಗಿಯಾಗಿದ್ದರು. ಈ ಮೂಲಕ ತಮ್ಮ ವಿರುದ್ಧ ಫತ್ವಾ ಹೊರಡಿಸಿದ ಮುಸ್ಲಿಂ ಧರ್ಮಗುರುಗಳು ಮತ್ತು ಟೀಕಾಕಾರರಿಗೆ ಖಡಕ್ ಉತ್ತರ ನೀಡಿದ್ದರು.