Tag: viral

  • 60 ಸೆಕೆಂಡ್‍ನಲ್ಲಿ ಮುರಿದ ಜಿಪ್ ಸರಿಮಾಡಿದ ವ್ಯಕ್ತಿ – ವಿಡಿಯೋ ವೈರಲ್

    60 ಸೆಕೆಂಡ್‍ನಲ್ಲಿ ಮುರಿದ ಜಿಪ್ ಸರಿಮಾಡಿದ ವ್ಯಕ್ತಿ – ವಿಡಿಯೋ ವೈರಲ್

    ಲಂಡನ್: ವ್ಯಕ್ತಿಯೊಬ್ಬ ಕೇವಲ 60 ಸೆಕೆಂಡುಗಳಲ್ಲಿ ಮುರಿದು ಹೋಗಿರುವ ಜಿಪ್‍ನನ್ನು ಸರಿಪಡಿಸುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾನೆ. ಇದೀಗ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದೆ.

    ಕಿತ್ತು ಹೋಗಿರುವ ಜಿಪ್‍ನನ್ನು ಸುಲಭವಾಗಿ ಸರಿಪಡಿಸಿಕೊಳ್ಳಲು ತಿಳಿಯದೇ ಗ್ರಾಹಕರು ಹೊಸ ಜಿಪ್ ಹಾಕಲು ಕೇಳುತ್ತಾರೆ. ಅಲ್ಲದೆ ಮುರಿದು ಹೋದ ಹಲವಾರು ರೀತಿಯ ಜಿಪ್‍ಗಳನ್ನು ನೀವು ಮನೆಯಲ್ಲಿರುವ ಕೆಲವು ಸಾಧನಗಳ ಉಪಯೋಗಿಸುವ ಮೂಲಕ ಸರಿಪಡಿಸಿಕೊಳ್ಳಬಹುದು.

    ಕಿತ್ತು ಹೋಗಿರುವ ಜೋಡಿ ಬೂಟ್‍ಗಳನ್ನು ಹಿಡಿದು ಜಿಪ್‍ಗಳನ್ನು ಕಟಿಂಗ್ ಪ್ಲೇಯರ್ ಹಾಗೂ ಸುತ್ತಿಗೆ ಬಳಸಿ ಸರಿ ಮಾಡಿದ್ದಾನೆ. ಈ ವಿಡಿಯೋವನ್ನು ಕೆಂಟ್ ವ್ಯಕ್ತಿಯೊಬ್ಬ ತನ್ನ ಖಾತೆಯಲ್ಲಿ ಹಂಚಿಕೊಂಡಿದ್ದು, ವೀಡಿಯೋ ವೈರಲ್ ಆಗುತ್ತಿದ್ದಂತೆಯೇ 3 ಲಕ್ಷಕ್ಕೂ ಅಧಿಕ ವಿವ್ಸ್ ಪಡೆದಿದೆ.

    https://youtu.be/HTZQyt5SzM0

  • ನಯನತಾರಾ, ವಿಘ್ನೇಶ್‍ಗೆ ಬೆಸ್ಟ್ ಜೋಡಿ ಎಂದ ಅಭಿಮಾನಿಗಳು

    ನಯನತಾರಾ, ವಿಘ್ನೇಶ್‍ಗೆ ಬೆಸ್ಟ್ ಜೋಡಿ ಎಂದ ಅಭಿಮಾನಿಗಳು

    ಚೆನ್ನೈ: ದಕ್ಷಿಣ ಭಾರತದ ಜೋಡಿ ಹಕ್ಕಿಗಳಲ್ಲಿ ಕಾಲಿವುಡ್ ನಟಿ ನಯನತಾರಾ ಮತ್ತು ವಿಘ್ನೇಶ್ ಶಿವನ್ ಜೋಡಿ ಕೂಡ ಒಂದು. ಭಾನುವಾರ ವಿಘ್ನೇಶ್ ಶಿವನ್ ತಮ್ಮ ಇನ್‍ಸ್ಟಾಗ್ರಾಂ ಖಾತೆಯಲ್ಲಿ ನಟಿ ನಯನತಾರಾ ಒಟ್ಟಿಗೆ ಇರುವ ಫೋಟೋವನ್ನು ಶೇರ್ ಮಾಡಿದ್ದಾರೆ. ಇನ್ನೂ ಈ ಫೋಟೋಗೆ ಲಕ್ಷಕ್ಕೂ ಅಧಿಕ ಲೈಕ್ ಬಂದಿದೆ. ಅಲ್ಲದೆ ಅಭಿಮಾನಿಗಳು ಕಮೆಂಟ್ ಸೆಕ್ಷನ್‍ನಲ್ಲಿ ಕಮೆಂಟ್ ಮಾಡುವ ಮೂಲಕ ಈ ಜೋಡಿಗೆ ಪ್ರೀತಿ ವ್ಯಕ್ತಪಡಿಸಿದ್ದಾರೆ.

    ಕಾಲಿವುಡ್ ಬ್ಯೂಟಿ ಕ್ವೀನ್ ನಟಿ ನಯನತಾರಾ ಜೊತೆ ಕ್ಲಿಕ್ಕಿಸಿದ ಸುಂದರವಾದ ಫೋಟೋವನ್ನು ನಿರ್ದೇಶಕ ವಿಘ್ನೇಶ್ ಶಿವನ್ ಜ.24 ರಂದು ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಜೊತೆಗೆ ಎಷ್ಟೊಂದು ಹಾರ್ಟ್ ಸಿಂಬಲ್ ಕೂಡ ಹಾಕಿ ಶೇರ್ ಮಾಡಿದ್ದಾರೆ.

    ಅಷ್ಟಕ್ಕೂ ವಿಘ್ನೇಶ್ ಈ ಫೋಟೋವನ್ನು ನಯನ ಜೊತೆ ಕ್ಲಿಕ್ಕಿಸಿಕೊಳ್ಳಲು ಕಾರಣ ಏನು ಅಂತ ಯೋಚಿಸ್ತಿದ್ದೀರಾ? ಹೌದು ಫ್ಲೈಟ್ ನಲ್ಲಿ ನ ಒಳಗೆ ಸೆರೆ ಹಿಡಿಯಲಾದ ಈ ಲೇಟೆಸ್ಟ್ ಫೋಟೋನಲ್ಲಿ ಇಬ್ಬರು ವಿಶೇಷವಾಗಿ ಒಂದೇ ರೀತಿಯ ಕಪ್ಪು ಬಣ್ಣದ ಟಿ ಶರ್ಟ್ ಧರಿಸಿದ್ದಾರೆ.ಈ ಫೋಟೋವನ್ನು ವಿಘ್ನೇಶ್ ಇನ್ ಸ್ಟಾಗ್ರಾಮ್ ನಲ್ಲಿ ಶೇರ್ ಮಾಡುತ್ತಿದಂತೆಯೇ ಅವರ ಫ್ಯಾನ್ಸ್ ಬೆಸ್ಟ್ ಕಪಲ್ಸ್, ಕ್ಯೂಟಿಸ್.. ಅಲ್ಲದೆ ಹಾರ್ಟ್ ಸಿಂಬಲ್ಸ್ ಕಳುಹಿಸುವ ಮೂಲಕ ಪ್ರೀತಿ ಅಭಿವ್ಯಕ್ತಪಡಿಸುತ್ತಿದ್ದಾರೆ.

    <

     

    View this post on Instagram

     

    A post shared by Vignesh Shivan (@wikkiofficial)

    p style=”text-align: justify;”>ವಿಘ್ನೇಶ್ ಶಿವನ್ ಹಾಗೂ ನಯನತಾರ 6 ವರ್ಷಗಳ ಹಿಂದೆ ಇಮಕೈ ನೋಡಿಗಲ್ ಸಿನಿಮಾದ ಮೂಲಕ ಒಬ್ಬರಿಗೊಬ್ಬರು ಪರಿಚಯವಾದರು. ಈಗ ವಿಘ್ನೇಶ್ ಶಿವನ್ ಆ್ಯಕ್ಷನ್ ಕಟ್ ಹೇಳುತ್ತಿರುವ ಎರಡನೇ ಚಿತ್ರ ಕಾತುವಾಕುಲ ರೆಂಡು ಕಡಲ್ ಸಿನಿಮಾಕ್ಕೆ ನಯನಾ ಬಣ್ಣ ಹಚ್ಚಿದ್ದಾರೆ.

    ಪ್ರಸ್ತುತ ಈ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಈ ಸಿನಿಮಾದಲ್ಲಿ ವಿಜಯ್ ಸೇತುಪತಿ, ನಯನ ತಾರಾ ಮತ್ತು ಸಮಂತಾ ಅಕ್ಕಿನೇನಿ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಸಿನಿಮಾದ ಫಸ್ಟ್ ಶೆಡ್ಯೂಲ್ ವಿಜಯ್ ಸೇತುಪತಿ ಮತ್ತು ಸಮಂತಾ ನಡುವಿನ ಚಿತ್ರೀಕರಣ ಹೈದರಾಬಾದ್ ನಲ್ಲಿ ನಡೆದಿದೆ.

  • ಅಳಿಯನಿಗೆ ಎಕೆ 47 ರೈಫಲ್ ಗಿಫ್ಟ್ ನೀಡಿ ಚುಂಬಿಸಿದ ಅತ್ತೆ

    ಅಳಿಯನಿಗೆ ಎಕೆ 47 ರೈಫಲ್ ಗಿಫ್ಟ್ ನೀಡಿ ಚುಂಬಿಸಿದ ಅತ್ತೆ

    – ಸೋಷಿಯಲ್ ಮಿಡೀಯಾದಲ್ಲಿ ವಿಡಿಯೋ ವೈರಲ್

    ಇಸ್ಲಾಮಾಬಾದ್: ವರದಕ್ಷಿಣೆಯಾಗಿ ಕಾರು, ಬಂಗಲೆ, ಹಣ ನಮ್ಮಲ್ಲಿ ಕೊಟ್ಟರೆ, ಪಾಕಿಸ್ತಾನದಲ್ಲಿ ಮಹಿಳೆಯೊಬ್ಬಳು ತನ್ನ ಅಳಿಯನಿಗೆ ಎಕೆ47 ರೈಫಲ್ ಕೊಟ್ಟಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗಿದೆ.

    ವಿಡಿಯೋದಲ್ಲಿ ಏನಿದೆ?
    ವಧು-ವರರಿಗೆ ಶುಭಕೋರಲು ವೇದಿಕೆ ಮೇಲೆ ಬಂದ ವಧುವಿನ ತಾಯಿ ವರನಿಗೆ ಎಕೆ47 ರೈಫಲ್ ಕೊಟ್ಟು ಚುಂಬಿಸಿದ್ದಾಳೆ. ಅಳಿಯನ ಕೈಯಲ್ಲಿ ರೈಫಲ್ ಹಿಡಿದು ಅತ್ತೆಯೊಂದಿಗೆ ನಿಂತು ಕೊಂಡಿದ್ದಾನೆ. ಈ ವಿಡಿಯೋ ಸಾಮಾಜಿ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

    ಈ ವಿಡಿಯೋಗೆ ಪಾಕಿಸ್ತಾನಿಯರು ಇದು ಕಾಮನ್ ಎಂದು ಶೇರ್ ಮಾಡಿದ್ದಾರೆ. ಇಂತಹ ಅನಿಷ್ಟ ಪದ್ಧತಿಗಳಿಂದಲೇ ಪಾಕಿಸ್ತಾನ ಭಯೋತ್ಪಾದಕರ ನಾಡಗಿದೆ ಎಂದು ವಿರೋಧಿಸಿ ಕೆಲವರು ಟೀಕೆ ಮಾಡಿದ್ದಾರೆ.

    ಈ ಗಿಫ್ಟ್ ವಧುವಿಗೆ ಕೊಡಬೇಕಿತ್ತು. ಜಗಳವಾದಾಗ ಗಂಡನ ಮೇಲೆ ಗುಂಡು ಹಾರಿಸು ಎಂದು ತಾಯಿ ಹೇಳಬೇಕಿತ್ತು ಎಂದು ಹಲವು ಕಮೆಂಟ್‍ಗಳು ಈ ವಿಡಿಯೋಗೆ ಬಂದಿದೆ. ಪಾಕಿಸ್ತಾನದ ಮದುವೆ ಸಮಾರಂಭದ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಇದೀಗ ಸಖತ್ ಸುದ್ದಿಯಲ್ಲಿದೆ.

  • ಮಾದಪ್ಪನ ಸನ್ನಿಧಿಯಲ್ಲಿ ಸೋಜುಗಾದ ಸೂಜುಮಲ್ಲಿಗೆ ಹಾಡು – ಡಿವೈಎಸ್ಪಿ ಗಾನಸುಧೆಗೆ ತಲೆದೂಗಿದ ಸಿಬ್ಬಂದಿ

    ಮಾದಪ್ಪನ ಸನ್ನಿಧಿಯಲ್ಲಿ ಸೋಜುಗಾದ ಸೂಜುಮಲ್ಲಿಗೆ ಹಾಡು – ಡಿವೈಎಸ್ಪಿ ಗಾನಸುಧೆಗೆ ತಲೆದೂಗಿದ ಸಿಬ್ಬಂದಿ

    ಚಾಮರಾಜನಗರ: ಮಹದೇಶ್ವರನ ಮೇಲೆ ಗಾಯಕಿ ಅನನ್ಯ ಭಟ್ ಹಾಡಿರುವ ಸೋಜುಗಾದ ಸೂಜಿ ಮಲ್ಲಿಗೆ ಹಾಡು ಸೂಪರ್ ಹಿಟ್ ಆಗಿರುವುದು ಎಲ್ಲರಿಗೆ ಗೊತ್ತಿರುವ ವಿಚಾರ. ಇದೀಗ ಮಹಿಳಾ ಡಿವೈಎಸ್‍ಪಿ ಒಬ್ಬರು ಹಾಡಿರುವ ಸೋಜುಗಾದ ಸೂಜಿ ಮಲ್ಲಿಗೆ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

    ಇದೇ ತಿಂಗಳು 25ರಂದು ಸಿಎಂ ಯಡಿಯೂರಪ್ಪ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಗಾಗಿ ಮಲೆ ಮಹದೇಶ್ವರ ಬೆಟ್ಟಕ್ಕೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಂದೋಬಸ್ತ್ ಪೂರ್ವ ಪರಿಶೀಲನೆಗೆ ಹಿರಿಯ ಅಧಿಕಾರಿಗಳೊಂದಿಗೆ ಚಾಮರಾಜನಗರ ಡಿವೈಎಸ್ಪಿ ಪ್ರಿಯದರ್ಶನಿ ಸಾಣೆಕೊಪ್ಪ ಸಹ ಭೇಟಿ ನೀಡಿದ್ದರು. ಈ ವೇಳೆ ಮಹದೇಶ್ವರನ ದರ್ಶನ ಪಡೆದ ನಂತರ ಭಕ್ತಿಪರವಶರಾದ ಪ್ರಿಯದರ್ಶನಿ ಗರ್ಭಗುಡಿಯಿಂದ ಹೊರಬಂದು ದೇಗುಲದ ಆವರಣದಲ್ಲೇ ಹಾಡಿ ಎಲ್ಲರ ಗಮನಸೆಳೆದಿದ್ದಾರೆ.

    ಮಹಿಳಾ ಡಿವೈಎಸ್ಪಿ ಹಾಡಿದ ಸೋಜಿಗಾದ ಸೂಜುಮಲ್ಲಿಗೆ ಹಾಡು ಜೊತೆಯಲ್ಲಿದ್ದ ಹಿರಿಯ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿಯನ್ನು ಸೂಜಿಗಲ್ಲಿನಂತೆ ಸೆಳೆದಿದೆ. ಎಲ್ಲರೂ ತಲೆ ತೂಗುವಂತೆ ಮಾಡಿದೆ. ಡಿವೈಎಸ್ಪಿ ಪ್ರಿಯದರ್ಶನಿ ಸಾಣೆಕೊಪ್ಪ ಸುಮಧುರ ಗಾನಕ್ಕೆ ಮನಸೋತ ಅಡಿಷನಲ್ ಎಸ್ಪಿ ಅನಿತಾ ಹದ್ದಣ್ಣನವರ್ ಹಾಡು ಪೂರ್ತಿ ಆಗುವವರೆಗೂ ನಿಂತು ಕೇಳಿದ್ದಾರೆ. ಜೊತೆಗೆ ನೆರೆದಿದ್ದ ಪೊಲೀಸ್ ಸಿಬ್ಬಂದಿ ತಮ್ಮ ಹಿರಿಯ ಮಹಿಳಾ ಅಧಿಕಾರಿಯ ಹಾಡಿಗೆ ಫಿದಾ ಆಗಿ ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಾರೆ.

    ಇದೀಗ ಡಿವೈಎಸ್ಪಿ ಪ್ರಿಯದರ್ಶನಿ ಅವರ ಹಾಡು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರಿಯದರ್ಶನಿ ಸಾಣೆಕೊಪ್ಪ ನಾಲ್ಕು ದಿನಗಳ ಹಿಂದೆ ತಾನೇ ಚಾಮರಾಜನಗರ ವಿಭಾಗದ ಡಿವೈಎಸ್‍ಪಿ ಆಗಿ ವರ್ಗಾವಣೆ ಆಗಿ ಬಂದಿದ್ದಾರೆ.

  • ಆರ್‌ಸಿಬಿ ಐಪಿಎಲ್ ಗೆಲ್ಲಲ್ಲ, ಸಿಎಸ್‍ಕೆ ಪ್ಲೇ ಆಫ್‍ಗೆ ಹೋಗಲ್ಲ: ನಿಖರ ಭವಿಷ್ಯ ಹೇಳಿದ್ದ ಅಭಿಮಾನಿ

    ಆರ್‌ಸಿಬಿ ಐಪಿಎಲ್ ಗೆಲ್ಲಲ್ಲ, ಸಿಎಸ್‍ಕೆ ಪ್ಲೇ ಆಫ್‍ಗೆ ಹೋಗಲ್ಲ: ನಿಖರ ಭವಿಷ್ಯ ಹೇಳಿದ್ದ ಅಭಿಮಾನಿ

    – ವೈರಲ್ ಆಯ್ತು ಕ್ರಿಕೆಟ್ ಅಭಿಮಾನಿಯ ಹಳೆ ಟ್ವೀಟ್

    ಅಬುಧಾಬಿ: ಕ್ರಿಕೆಟ್ ಅಭಿಮಾನಿಯೋರ್ವ ಐಪಿಎಲ್ ಆರಂಭಕ್ಕೂ ಮುನ್ನವೇ ಮಾಡಿರುವ ಟ್ವೀಟ್‍ವೊಂದು ಈಗ ಸಖತ್ ವೈರಲ್ ಆಗಿದೆ.

    ಜುಲೈ 27ರಂದು ಕ್ರಿಕೆಟ್ ಅಭಿಮಾನಿ ಮಿತುಲ್ ಮಾಡಿರುವ ಟ್ವೀಟ್ ಇಂದು ಸಖತ್ ಚರ್ಚೆಗೆ ಗ್ರಾಸವಾಗಿದೆ. ಇನ್ನೂ ಐಪಿಎಲ್ ಆರಂಭ ಆಗವುದಕ್ಕಿಂತ ಮುನ್ನವೇ ಮಿತುಲ್ ಈ ಟ್ವೀಟ್ ಮಾಡಿದ್ದು, ಅವರು ಟ್ವೀಟ್‍ನಲ್ಲಿ ಹೇಳಿದ್ದ ತಂಡಗಳೇ ಐಪಿಎಲ್ ಪ್ಲೇ ಆಫ್‍ಗೆ ಸೆಲೆಕ್ಟ್ ಆಗಿವೆ. ಜೊತೆಗೆ ಆತ ಹೇಳಿರುವ ತಂಡಗಳೇ ಪ್ಲೇ ಆಫ್‍ನಿಂದ ಹೊರಗೆ ಬಿದ್ದಿರುವುದು ಈಗ ಅಶ್ಚರ್ಯಕ್ಕೆ ಕಾರಣವಾಗಿದೆ.

    https://twitter.com/R3Mitul/status/1287794625831489539

    ಈ ಹಿಂದೆ ಟ್ವೀಟ್ ಮಾಡಿರುವ ಮಿತುಲ್, ಕೊಹ್ಲಿ ಈ ಬಾರಿಯ ಐಪಿಎಲ್‍ನಲ್ಲಿ ಸಾಮಾನ್ಯವಾಗಿ ಆಡುತ್ತಾರೆ. ಈ ಬಾರಿಯ ಐಪಿಎಲ್‍ನಲ್ಲಿ ಸಿಎಸ್‍ಕೆ ಪ್ಲೇ ಆಫ್ ತಲುಪುವುದಿಲ್ಲ. ರಾಜಸ್ಥಾನ್ ರಾಯಲ್ಸ್ ತಂಡ ಕೊನೆಯ ಸ್ಥಾನದಲ್ಲಿ ಉಳಿಯಲಿದೆ. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಪ್ಲೇ ಆಫ್ ತಲುಪುವುದಿಲ್ಲ. ಸನ್ ರೈಸರ್ಸ್ ಹೈದರಾಬಾದ್ ತಂಡ ಐಪಿಎಲ್ ಗೆಲ್ಲುತ್ತದೆ. ಆರ್‌ಸಿಬಿ ತಂಡ ಮುಂಬೈ ಮತ್ತು ಡೆಲ್ಲಿ ತಂಡದ ಜೊತೆ ಪ್ಲೇ ಆಫ್ ಹೋಗಲಿದೆ ಎಂದು ಟ್ವೀಟ್ ಮಾಡಿದ್ದಾರೆ.

    ಸದ್ಯ ಮಿತುಲ್ ಟ್ವೀಟ್ ಮಾಡಿದಂತೆ ನಡೆದಿದ್ದು, ಸಿಎಸ್‍ಕೆ ಮೊದಲ ಬಾರಿಗೆ ಪ್ಲೇ ಆಫ್ ಪ್ರವೇಶ ಮಾಡದೇ ಟೂರ್ನಿಯಿಂದ ಹೊರ ಬಿದ್ದಿದೆ. ಮೊದಲ ಮೂರು ತಂಡಗಳಾಗಿ ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇ ಆಫ್ ಪ್ರವೇಶ ಮಾಡಿವೆ. ಇದರ ಜೊತೆಗೆ ಕೊನೆ ಪಂದ್ಯದಲ್ಲಿ ಮುಂಬೈ ವಿರುದ್ಧ ಗೆದ್ದು, ಹೈದರಾಬಾದ್ ತಂಡ ಪ್ಲೇ ಆಫ್ ಪ್ರವೇಶ್ ಮಾಡಿದ್ದು, ಮಿತುಲ್ ಟ್ವೀಟ್ ವೈರಲ್ ಆಗುವಂತೆ ಮಾಡಿದೆ.

    26 ವರ್ಷದ ಮಿತುಲ್ ಅಹಮದಾಬಾದ್‍ನಲ್ಲಿ ವಾಸವಿದ್ದಾರೆ. ಜೊತೆಗೆ ಅವರು ತನ್ನನ್ನು ತಾನು ಜ್ಯೋತಿಷ್ಯತಜ್ಞ ಎಂದು ಕರೆದುಕೊಳ್ಳುತ್ತಾರೆ. ಇವರು ಟ್ವೀಟ್‍ನಲ್ಲಿ ಹೇಳಿದಂತೆಯೇ ಐಪಿಎಲ್‍ನಲ್ಲಿ ನಡೆದಿದ್ದು, ಮಿತುಲ್ ಟ್ವೀಟ್ ಸಖತ್ ವೈರಲ್ ಆಗಿದೆ. ಜೊತೆಗೆ ಇವರ ಟ್ವೀಟ್ ಅನ್ನು ಸುಮಾರು 6 ಸಾವಿರ ಜನ ಲೈಕ್ ಮಾಡಿ ಮೂರು ಸಾವಿರ ಜನ ರೀಟ್ವೀಟ್ ಮಾಡಿದ್ದಾರೆ. ಸದ್ಯ ಮಿತುಲ್ ಹೇಳಿದಂತೆ ಹೈದರಾಬಾದ್ ತಂಡ ಕಪ್ ಗೆಲ್ಲಲಿದ್ಯಾ ಎಂಬುದು ಮುಂದೆ ತಿಳಿಯಲಿದೆ.

  • ಆಂಜನೇಯನ ಗುಡಿಗೆ ತಲೆಯಿಟ್ಟು 20 ನಿಮಿಷ ನಿಂತ ಕುದುರೆ – ವಿಡಿಯೋ ವೈರಲ್

    ಆಂಜನೇಯನ ಗುಡಿಗೆ ತಲೆಯಿಟ್ಟು 20 ನಿಮಿಷ ನಿಂತ ಕುದುರೆ – ವಿಡಿಯೋ ವೈರಲ್

    ಬಾಗಲಕೋಟೆ: ಆಂಜನೇಯನ ಗುಡಿ ಮುಂದೆ ಕುದುರೆ ಪ್ರಾರ್ಥನೆ ಮಾಡುವ ರೀತಿಯಲ್ಲಿ ನಿಂತಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಈ ಘಟನೆ ಬಾಗಲಕೋಟೆ ತಾಲೂಕಿನ ಮುರನಾಳ ಗ್ರಾಮದ ಪುನರ್ ವಸತಿ ಕೇಂದ್ರದ ಸಮೀಪವಿರುವ ದೇವಸ್ಥಾನದ ಬಳಿ ನಡೆದಿದೆ, ಇಲ್ಲಿರುವ ಪುಟ್ಟ ಆಂಜನೇಯ ಸ್ವಾಮಿ ಗುಡಿಗೆ ತಲೆ ಕೊಟ್ಟು ಕುದುರೆ ಪ್ರಾರ್ಥನೆ ಮಾಡುವ ರೀತಿಯಲ್ಲಿ ಹದಿನೈದರಿಂದ ಇಪ್ಪತ್ತು ನಿಮಿಷಗಳ ಕಾಲ ನಿಂತು ಕೊಂಡಿದೆ.

    ಕುದುರೆ ದೇವರ ಗುಡಿಯ ಕಟ್ಟಡಕ್ಕೆ ಹಣೆ ಕೊಟ್ಟು ನಿಂತರು ಹಾವ-ಭಾವ ನೋಡಿ ಸ್ಥಳೀಯರು ಹಾಗೂ ದಾರಿಹೋಕರಿಗೆ ಆಶ್ಚರ್ಯಗೊಂಡಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಶಾಲಾ ಶಿಕ್ಷಕರೊಬ್ಬರ ಮೊಬೈಲ್ ನಲ್ಲಿ ವಿಡಿಯೋ ಸೆರೆ ಹಿಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  • ಪ್ಲೀಸ್ ಅಣ್ಣನನ್ನು ಶಾಶ್ವತವಾಗಿ ಜೈಲಿಗೆ ಹಾಕಿ – ತಂದೆಗೆ ಸಹೋದರಿ ಬರೆದ ಪತ್ರ ವೈರಲ್

    ಪ್ಲೀಸ್ ಅಣ್ಣನನ್ನು ಶಾಶ್ವತವಾಗಿ ಜೈಲಿಗೆ ಹಾಕಿ – ತಂದೆಗೆ ಸಹೋದರಿ ಬರೆದ ಪತ್ರ ವೈರಲ್

    ಬಾಲ್ಯದಲ್ಲಿ ಮನೆಯಲ್ಲಿ ಅಣ್ಣ-ತಂಗಿ ಜಗಳವಾಡುವುದು, ಕಾಡಿಸುವುದು ಸಾಮಾನ್ಯ. ಸಣ್ಣ-ಪುಟ್ಟ ವಿಚಾರಗಳಿಗೂ ಇಬ್ಬರು ಮಧ್ಯೆ ಜೋರಾಗಿ ಗಲಾಟೆ ಕೂಡ ಆಗುತ್ತದೆ. ಕೆಲವೊಮ್ಮ ಕಾರಣಗಳೇ ಇಲ್ಲದೇ ಜಗಳವಾಗುತ್ತದೆ. ಅದೇ ರೀತಿ ಇಲ್ಲೊಬ್ಬ ಸಹೋದರಿ ಅಣ್ಣನನ್ನು ಶಾಶ್ವತವಾಗಿ ಜೈಲಿಗೆ ಕಳುಹಿಸಿ ಎಂದು ತನ್ನ ತಂದೆಗೆ ಪತ್ರ ಬರೆದಿದ್ದಾಳೆ. ಇದೀಗ ಆ ಪತ್ರ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಸ್ವತಃ ಸಹೋದರನೇ ಆ ಪತ್ರವನ್ನು ಶೇರ್ ಮಾಡಿಕೊಂಡಿದ್ದಾರೆ. ಹೀಗಾಗಿ ಟ್ವಿಟ್ಟರಿನಲ್ಲಿ ಈ ಪತ್ರ ಸಖತ್ ವೈರಲ್ ಆಗುತ್ತಿದೆ. ಕ್ರಿಶ್ ಪರ್ಮರ್ ಎಂಬಾತ ಬಾಲ್ಯದಲ್ಲಿ ತನ್ನ ಸಹೋದರಿ ತಮ್ಮ ತಂದೆಗೆ ಬರೆದ ಪತ್ರದ ಫೋಟೋವನ್ನು ಹಂಚಿಕೊಂಡಿದ್ದಾರೆ. ಜೊತೆಗೆ “ನನ್ನ ತಂಗಿ ತಂದೆಗೆ ಬರೆದದ್ದು ಇದನ್ನೇ” ಎಂದು ಕ್ರಿಶ್ ಬರೆದುಕೊಂಡಿದ್ದಾರೆ.

    ಪತ್ರದಲ್ಲಿ ಏನಿದೆ?
    ಪ್ರೀತಿಯ ತಂದೆಗೆ, ದಯವಿಟ್ಟು ಕ್ರಿಶ್ ಪರ್ಮರ್ ನನ್ನು ಶಾಶ್ವತವಾಗಿ ಜೈಲಿಗೆ ಕಳುಹಿಸಿ. ಆತ ನನಗೆ ಕಾರಣವೇ ಇಲ್ಲದೆ ಹೊಡೆಯುತ್ತಿದ್ದಾನೆ. ಅಲ್ಲದೇ ಅವನು ನನ್ನ ಮೇಲೆ ಜಂಪ್ ಮಾಡಿ, ನಾನು ನಿನ್ನನ್ನು ಕೊಲ್ಲುತ್ತೇನೆ ಎಂದು ಹೇಳುತ್ತಾನೆ. ದಯವಿಟ್ಟು ಆದಷ್ಟು ಬೇಗ ಆತನನ್ನು ಜೈಲಿಗೆ ಕಳುಹಿಸಿ” ಎಂದು ಸಹೋದರಿ ಮನವಿ ಮಾಡಿಕೊಂಡಿದ್ದಾಳೆ.

    ಅಲ್ಲದೇ ಕೊನೆಯಲ್ಲಿ ನಿಮ್ಮ ಪ್ರೀತಿಯ ಮಗಳು ಅನಯಾ ಪರ್ಮರ್, ‘Sister of Stupid krisha parmar’ ಎಂದು ಬರೆದು ಸಹಿ ಹಾಕಿದ್ದಾಳೆ. ಇದೀಗ ಈ ತಮಾಷೆಯ ಪತ್ರ ವೈರಲ್ ಆಗಿದ್ದು, ನೆಟ್ಟಿಗರು ಫನ್ನಿ ಫನ್ನಿಯಾಗಿ ಕಮೆಂಟ್ ಮಾಡುವ ಮೂಲಕ ತಮ್ಮ ತಮ್ಮ ಬಾಲ್ಯವನ್ನು ನೆನಪಿಸಿಕೊಳ್ಳುತ್ತಿದ್ದಾರೆ.

    “ನನ್ನ ಸಹೋದರಿ ಈ ಪತ್ರವನ್ನು ಬರೆದಾಗ 8 ಅಥವಾ 9 ವರ್ಷ ವಯಸ್ಸಿನವನಾಗಿದ್ದಳು. ನಾನು ಇದನ್ನು ಒಂದು ತಿಂಗಳ ಹಿಂದೆಯಷ್ಟೆ ತಿಳಿದುಕೊಂಡೆ” ಎಂದು ಕ್ರಿಶ್ ಹೇಳಿದ್ದಾಳೆ.

  • ಯುವಕನ ವೀಲಿಂಗ್ ಹುಚ್ಚಾಟಕ್ಕೆ ಡ್ರ್ಯಾಗರ್ ಹಿಡಿದು ಸಾಥ್ ಕೊಟ್ಟ ಯುವತಿ

    ಯುವಕನ ವೀಲಿಂಗ್ ಹುಚ್ಚಾಟಕ್ಕೆ ಡ್ರ್ಯಾಗರ್ ಹಿಡಿದು ಸಾಥ್ ಕೊಟ್ಟ ಯುವತಿ

    ಬೆಂಗಳೂರು: ಕತ್ತಲಾದ ಮೇಲೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಪುಂಡ ಪೋಕರಿಗಳ ವರ್ತನೆ ನೋಡಿದರೆ ಸಾಮಾನ್ಯ ಜನರಿಗೆ ಭಯವಾಗುತ್ತದೆ. ಆದರೆ ಇಲ್ಲೊಬ್ಬ ಯುವಕ ಯುವತಿಯ ವರ್ತನೆ ನೋಡಿ ನೆಟ್ಟಗರು ಶಾಕ್ ಆಗಿದ್ದಾರೆ.

    ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ವೀಲಿಂಗ್ ಮಾಡುವುದು ಅಪರಾಧವಾದರೂ ಯುವಕರು ಶೋಕಿಗಾಗಿ ವೀಲಿಂಗ್ ಮಾಡುತ್ತಿರುತ್ತಾರೆ. ಆದರೆ ಯುವಕ ವೀಲಿಂಗ್ ಮಾಡುವಾಗ ಬೈಕ್ ಹಿಂಬದಿ ಕುಳಿತಿದ್ದ ಯುವತಿ ಕೈಯಲ್ಲಿ ಡ್ರ್ಯಾಗರ್ ಹಿಡಿದು ಭಯ ಹುಟ್ಟಿಸುವಂತೆ ಪೋಸ್ ನೀಡಿದ್ದಾಳೆ. ಯುವತಿಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    https://www.facebook.com/100011448424143/videos/1379779235747011/?extid=IDHNaMLZjbwg9lQE

    ಬೈಕ್ ಹಿಂಬದಿಯಲ್ಲಿ ಡ್ರ್ಯಾಗರ್ ಹಿಡಿದು ಯುವತಿ ಪೋಸ್ ಕೊಟ್ಟ ವಿಡಿಯೋ ತುಮಕೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಜೊತೆಗೆ ಬೈಕ್ ವೀಲಿಂಗ್‍ನಲ್ಲಿ ತೊಡಗಿರುವ ಯುವಕನ ವರ್ತನೆ ಕೂಡ ಭಯಾನಕವಾಗಿದೆ. ವಿಡಿಯೋದಲ್ಲಿ ಮಾಸ್ಕ್ ಧರಿಸಿ ಕುಳಿತಿರುವ ಯುವತಿ ಕೈಯಲ್ಲಿ ಡ್ರ್ಯಾಗರ್ ಹಿಡಿದು ಬಿಂದಾಸ್ ಆಗಿ ಪೋಸ್ ನೀಡಿದ್ದಾಳೆ.

    ಕೂಡಲೇ ಸಂಬಂಧ ಪಟ್ಟ ಪೊಲೀಸರು ಬೈಕ್ ಅನ್ನು ಪತ್ತೆಹಚ್ಚಿ ಆ ಯುವಕ ಹಾಗೂ ಯುವತಿಯ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಇತ್ತ ರಾತ್ರಿ ವೇಳೆ ನಡೆಯುವ ಈ ಭಯಾನಕ ಬೈಕ್ ರೈಡ್‍ಗೆ ಕಡಿವಾಣವನ್ನು ಪೊಲೀಸರು ಹಾಕಬೇಕಿದೆ.

  • ನಾವು ಕುಟುಂಬದ ಜೊತೆ ಇದ್ದಾಗ ಮಾಸ್ಕ್ ಹಾಕಲ್ಲ- ಚಹರ್ ಕಮೆಂಟ್ ವೈರಲ್

    ನಾವು ಕುಟುಂಬದ ಜೊತೆ ಇದ್ದಾಗ ಮಾಸ್ಕ್ ಹಾಕಲ್ಲ- ಚಹರ್ ಕಮೆಂಟ್ ವೈರಲ್

    ನವದೆಹಲಿ: ನಾವು ಕುಟುಂಬದ ಜೊತೆ ಇದ್ದಾಗ ಮಾಸ್ಕ್ ಹಾಕಲ್ಲ ಎಂದು ಸಿಎಸ್‍ಕೆ ತಂಡದ ವೇಗಿ ದೀಪಕ್ ಚಹರ್ ಈ ಹಿಂದೆ ಮಾಡಿದ್ದ ಕಮೆಂಟ್ ವೈರಲ್ ಆಗಿದೆ.

    ಶುಕ್ರವಾರವಷ್ಟೇ ಯುಎಇಯಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವೇಗಿ ದೀಪಕ್ ಚಹರ್ ಗೆ ಕೊರೊನಾ ಪಾಸಿಟಿವ್ ಬಂದಿತ್ತು. ಇವರ ಜೊತೆ ತಂಡದ 10 ಸಹಾಯಕ ಸಿಬ್ಬಂದಿಗೂ ಕೊರೊನಾ ವೈರಸ್ ತಗುಲಿದ್ದು, ಮಾಸ್ಕ್ ಬಗ್ಗೆ ಚಹರ್ ಈ ಹಿಂದೆ ಮಾಡಿದ್ದ ಇನ್‍ಸ್ಟಾ ಕಮೆಂಟ್ ಈಗ ವೈರಲ್ ಆಗಿದೆ.

    ಯುಎಇಗೆ ಹೊರಡುವ ಮುನ್ನಾ ದೀಪಕ್ ಚಹರ್ ಅವರು, ಮಾಸ್ಕ್ ಧರಿಸದೆ, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳದೇ ಸಿಎಸ್‍ಕೆ ಇತರ ಆಟಗಾರರ ಜೊತೆ ಸೆಲ್ಫಿ ತೆಗೆದುಕೊಂಡಿದ್ದರು. ಈ ಫೋಟೋವನ್ನು ಚಹರ್ ಅವರು, ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಾಕಿಕೊಂಡಿದ್ದರು. ಇದಕ್ಕೆ ಸ್ವತಃ ಅವರ ಸಹೋದರ ರಾಹುಲ್ ಚಹರ್ ಅವರು, ನಿಮ್ಮ ಮಾಸ್ಕ್ ಎಲ್ಲಿ ಸಹೋದರ, ಸಾಮಾಜಿಕ ಅಂತರ ಎಲ್ಲಿ ಎಂದು ಕಮೆಂಟ್ ಮಾಡಿದ್ದರು.

    ಸಹೋದರನ ಕಮೆಂಟ್‍ಗೆ ಪ್ರತಿಕ್ರಿಯೆ ಕೊಟ್ಟಿದ್ದ ಚಹರ್, ನಾನು ಎರಡು ಸಲ ಕೊರೊನಾ ಟೆಸ್ಟ್ ಮಾಡಿಸಿದ್ದೇನೆ ಅದರಲ್ಲಿ ನೆಗೆಟಿವ್ ಬಂದಿದೆ ಸಹೋದರ. ನಾವು ಕುಟುಂಬದ ಜೊತೆ ಇದ್ದಾಗ ಮಾಸ್ಕ್ ಹಾಕಿಕೊಳ್ಳಲ್ಲ ಎಂದಿದ್ದರು. ಈಗ ಅವರಿಗೇ ಯುಎಇಗೆ ತೆರಳಿದ ನಂತರ ಕೊರೊನಾ ಪಾಸಿಟಿವ್ ಬಂದಿದ್ದು, ಈಗ ಈ ಕಮೆಂಟ್ ವೈರಲ್ ಆಗಿದೆ. ಇದನ್ನೇ ಇಟ್ಟುಕೊಂಡು ನೆಟ್ಟಿಗರು ಚಹರ್ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.

    ಚೆನ್ನೈ ಸೂಪರ್ ಕಿಂಗ್ಸ್ ತಂಡ ಅಗಸ್ಟ್ 21ರಂದೇ ಯುಎಇಗೆ ತೆರಳಿತ್ತು. ಎಂದಿನಂತೆ ಎಲ್ಲ ಆಟಗಾರರಿಗೆ ಭಾರತದಲ್ಲೂ ಕೂಡ ಒಂದು ಬಾರಿ ಕೊರೊನಾ ಟೆಸ್ಟ್ ಮಾಡಲಾಗಿತ್ತು. ಅಂತೆಯೇ ಯುಎಇಗೆ ತೆರಳಿದ ತಂಡ ಅಲ್ಲಿ ಆರು ದಿನಗಳ ಕಾಲ ಕ್ವಾರಂಟೈನ್‍ಗೆ ಒಳಗಾಗಿತ್ತು. ಶುಕ್ರವಾರಕ್ಕೆ ಆ ಅವಧಿ ಮುಗಿಯಲಿದ್ದು, ಚೆನ್ನೈ ತಂಡ ಅಭ್ಯಾಸ ನಡೆಸಬೇಕಿತ್ತು. ಆದರೆ ಕೊರೊನಾ ಟೆಸ್ಟ್ ನಲ್ಲಿ ತಂಡದ ಸದಸ್ಯರಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿತ್ತು. ಹೀಗಾಗಿ ತಂಡ ಸೆಪ್ಟೆಂಬರ್ 1ರಿಂದ ಅಭ್ಯಾಸ ಆರಂಭಿಸಲಿದೆ.

  • ಹೆದರಲ್ಲ, ಓಡಲ್ಲ ಈ ಹುಲಿರಾಯ – ಸಫಾರಿಗೆ ಬಂದವರಿಗೆ ಕೊಡ್ತಾನೆ ಫೋಟೋ ಪೋಸ್

    ಹೆದರಲ್ಲ, ಓಡಲ್ಲ ಈ ಹುಲಿರಾಯ – ಸಫಾರಿಗೆ ಬಂದವರಿಗೆ ಕೊಡ್ತಾನೆ ಫೋಟೋ ಪೋಸ್

    ಚಾಮರಾಜನಗರ: ದಕ್ಷಿಣ ಭಾರತದಲ್ಲೇ ಅತಿಹೆಚ್ಚು ಫೋಟೋಗಳನ್ನು ಕ್ಲಿಕ್ಕಿಸಿಕೊಂಡ ಹುಲಿರಾಯ ಎಂಬ ಕೀರ್ತಿಗೆ ಪಾತ್ರವಾಗಿದ್ದ ಪ್ರಿನ್ಸ್ ಟೈಗರ್ ಬಳಿಕ ಅದೇ ಹಾದಿ ತುಳಿಯಲು ಮಯಾರ್ ಕಿಂಗ್ ಎಂಬ ಟೈಗರ್ ಮುಂದಾಗಿದೆ.

    ಕೆಲದಿನಗಳಿಂದ ಟೈಗರ್ ಪೋಸ್ ನೀಡಿರುವ ವಿಡಿಯೋ ವೈರಲ್ ಆಗಿದೆ. ಬಂಡೀಪುರದ ಗಡಿಯಲ್ಲಿ ಈ ಹುಲಿಯಿದ್ದು ಅತ್ಯಂತ ದಷ್ಟಪುಷ್ಟವಾಗಿ ಹಾಗೂ ತುಂಬಾ ಸುಂದರವಾಗಿದೆ. ಕೆಲವೊಮ್ಮೆ ವಾಹನ ಸವಾರರಿಗೆ ದರ್ಶನ ನೀಡಿದೆ, ಪ್ರಿನ್ಸ್ ರೀತಿಯಲ್ಲೇ ಈ ಹುಲಿಯೂ ಕೂಡ ಮನುಷ್ಯರನ್ನು ಕಂಡರೇ ಅಳುಕುವುದಿಲ್ಲ ಎಂದು ಅರಣ್ಯಾಧಿಕಾರಿ ಹೇಳಿದ್ದಾರೆ.

    ಗೋಪಾಲಸ್ವಾಮಿ ಬೆಟ್ಟ ವಲಯ ಅರಣ್ಯಾಧಿಕಾರಿ ನವೀನ್ ಕುಮಾರ್ ಪ್ರತಿಕ್ರಿಯಿಸಿ, ಈ ಹುಲಿ ಪ್ರಿನ್ಸ್ ರೀತಿಯೇ ಫೋಟೋಗೆ ಚೆನ್ನಾಗಿ ಪೋಸ್‌ ನೀಡುತ್ತಿದ್ದು, ಮಾಯಾರ್ ಕಿಂಗ್ ಎಂತಲೇ ಹೆಸರಾಗಿದೆ. ಸಫಾರಿ ವಲಯದಲ್ಲೇ ಮುಂದಿನ ದಿನಗಳಲ್ಲಿ ಮಾಯಾರ್ ಹುಲಿ ಎರಡನೇ ಪ್ರಿನ್ಸ್ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈಗ ಸದ್ಯ ವೈರಲ್ ಆಗಿರುವ ವಿಡಿಯೋವನ್ನು ಅರಣ್ಯ ಇಲಾಖೆ ಸಿಬ್ಬಂದಿಯೊಬ್ಬರು ತೆಗೆದಿದ್ದಾರೆ.