ಲಕ್ನೋ: ಉತ್ತರ ಪ್ರದೇಶದ ಪೋಲಿಸ್ ಠಾಣೆಯೊಂದರಲ್ಲಿ ಹೆಡ್‍ಕಾನ್‍ಸ್ಟೇಬಲ್ ಒಬ್ಬ ಒಳಉಡುಪಿನಲ್ಲಿಯೇ ತಿರುಗಾಡುತ್ತಿದ್ದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ವೀಡಿಯೋ ನೋಡಿದ ಠಾಣೆಯ ಎಸ್‍ಪಿ ಪೇದೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಭಾನುವಾರ ಸಂಜೆ ಇದ್ದಕ್ಕಿದ್ದಂತೆ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗತೊಡಗಿತು. ವೀಡಿಯೋದಲ್ಲಿ ಪೊಲೀಸ್ ಠಾಣೆಯ ಹೆಡ್‍ಕಾನ್‍ಸ್ಟೇಬಲ್ ಒಳಉಡುಪು ಧರಿಸಿ ಆವರಣದಲ್ಲಿ ಓಡಾಡುತ್ತಿದ್ದನು. ಪೊಲೀಸ್ ಠಾಣೆಯಲ್ಲಿ ಮಹಿಳಾ ಪೊಲೀಸರನ್ನೂ ನಿಯೋಜಿಸಲಾಗಿದೆ. ಇದಲ್ಲದೇ ಮಹಿಳಾ ದೂರುದಾರರೂ ಅಲ್ಲಿಗೆ ಬರುತ್ತಿರುತ್ತಾರೆ. ಹೀಗಿರುವಾಗ ಆತ ಈ ರೀತಿ ಅರೆ ನಗ್ನವಾಗಿ ಓಡಾಡಿರುವುದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.
ಈ ಕುರಿತು ಎಸ್‍ಪಿ ಅವರು, ಎಲ್ಲ ಪೊಲೀಸರಿಗೂ ಸಮವಸ್ತ್ರ ಧರಿಸಿ ಶಿಸ್ತಿನಿಂದ ಇರುವಂತೆ ಸೂಚಿಸಿ ಆದೇಶ ಹೊರಡಿಸಿದ್ದಾರೆ. ಪೊಲೀಸ್ ಠಾಣೆ ಆವರಣದಲ್ಲಿ ಒಳ ಉಡುಪು ಧರಿಸುವುದು ಸಲ್ಲದು. ಅಲ್ಲಿಗೆ ಮಹಿಳೆಯರೂ ದೂರುಗಳೊಂದಿಗೆ ಬರುತ್ತಲೇ ಇರುತ್ತಾರೆ. ವೀಡಿಯೋ ಆಧಾರದ ಮೇಲೆ ಪೇದೆಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಮುಂಬೈ: ಸಿಎಸ್‍ಕೆ ತಂಡದ ನಾಯಕ ಎಂಎಸ್ ಧೋನಿ ಮತ್ತು ಚೆನ್ನೈ ತಂಡದ ಆಟಗಾರರು ಇಂದು ರಂಜಾನ್ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಿದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ತೆಲಂಗಾಣ ರಾಜ್ಯದ ಅಧಿಕೃತ ಚಂದ್ರ-ವೀಕ್ಷಕ ಸಮಿತಿಯು ಮೇ 2, ಸೋಮವಾರ, ಈದ್-ಉಲ್-ಫಿತರ್ ಎಂದು ಘೋಷಿಸಿತ್ತು. ಇಸ್ಲಾಮಿಕ್ ಕ್ಯಾಲೆಂಡರ್‍ನ 10 ನೇ ತಿಂಗಳಾಗಿರುವ ಶವ್ವಾಲ್‍ನ ಅರ್ಧಚಂದ್ರಾಕೃತಿಯು ಹೈದರಾಬಾದ್‍ನಲ್ಲಿ ಮತ್ತು ದೇಶದ ಇತರ ಭಾಗಗಳಲ್ಲಿ ಗೋಚರಿಸದ ಕಾರಣ ಮಂಗಳವಾರ ಆಚರಿಸಲಾಗುತ್ತಿದೆ. ಇದನ್ನೂ ಓದಿ: ರಾಜಸ್ಥಾನಕ್ಕೆ ಮುಳುವಾದ ರಿಂಕು, ರಾಣಾ ಜೊತೆಯಾಟ – ಕೋಲ್ಕತ್ತಾಗೆ 7 ವಿಕೆಟ್‍ಗಳ ಜಯ
ಚೆನ್ನೈ ತಂಡದ ಆಟಗಾರರಾದ ಧೋನಿ, ರಾಬಿನ್ ಉತ್ತಪ್ಪ, ಶಿವಂ ದುಬೆ, ರುತುರಾಜ್ ಗಾಯಕ್‍ವಾಡ್, ಮೊಯಿನ್ ಅಲಿ ಸೇರಿದಂತೆ ಅನೇಕ ಆಟಗಾರರು ಕೆಲವು ಬಗೆ ಬಗೆಯ ಖಾದ್ಯಗಳನ್ನು ಸೇವಿಸಿ ಸಂಭ್ರಮಿಸಿದ್ದಾರೆ.
ಈಗಾಗಲೇ ತಂಡವು ಒಟ್ಟು 9 ಪಂದ್ಯಗಳನ್ನಾಡಿ 2 ಜಯ, 6 ಸೋಲುಗಳನ್ನೊಳಗೊಂಡಿದ್ದು, ಪಾಯಿಂಟ್ಸ್ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಈ ಮಧ್ಯೆ, ರವೀಂದ್ರ ಜಡೇಜಾ ಅವರು ನಾಯಕತ್ವ ಸ್ಥಾನದಿಂದ ಕೆಳಗಿಳಿದಿದ್ದು, ಧೋನಿಗೆ ನಾಯಕ ಪಟ್ಟ ನೀಡಿದ್ದರು.
ಭಾನುವಾರ ಮೇ 1 ರಂದು ಸನ್‍ರೈಸರ್ಸ್ ಹೈದರಾಬಾದ್ (ಎಸ್‍ಆರ್‌ಎಚ್ಈದ್ ಹಬ್ಬವನ್ನು ಆಚರಿಸಿದ ಧೋನಿ ಬಳಗ ವೀಡಿಯೋ ವೈರಲ್ ) ಅನ್ನು ಸೋಲಿಸಿದ ನಂತರ ಧೋನಿ ಬಳಗವು ಆತ್ಮವಿಶ್ವಾಸದಲ್ಲಿದೆ. ಸಿಎಸ್‍ಕೆ ಮುಂದಿನ ಪಂದ್ಯದಲ್ಲಿ ಫಾಫ್ ಡು ಪ್ಲೆಸಿಸ್ ಅವರ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧ ಬುಧವಾರ ಸೆಣಸಲಿದೆ.
ಗಾಂಧಿನಗರ: ಗುಜರಾತ್‍ನ ರಾಜ್‍ಕೋಟ್‍ನಲ್ಲಿ ಮದುವೆ ಸಮಾರಂಭದಲ್ಲಿ ಸ್ನೇಹಿತರು ಮತ್ತು ಸಂಬಂಧಿಗಳು ಸೇರಿ ವರನಿಗೆ ಉಡುಗೊರೆಯಾಗಿ ನಿಂಬೆ ಹಣ್ಣನ್ನು ನೀಡಿದ್ದಾರೆ. ಇದೀಗ ಈ ಫೋಟೋ ವೈರಲ್ ಆಗುತ್ತಿದೆ.
ದಿನೇ ದಿನೇ ನಿಂಬೆ ಬೆಲೆ ಗಗನಕ್ಕೇರುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್‍ಕೋಟ್‍ನ ಧರೋಜಿ ಪಟ್ಟಣದಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ವರನಿಗೆ ಉಡುಗೋರೆ ನೀಡಲು ಆತನ ಸ್ನೇಹಿತರು ನಿಂಬೆ ಹಣ್ಣನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇದೀಗ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ವರನ ಸಂಬಂಧಿಕರು ಈ ಬಗ್ಗೆ ಮಾತನಾಡಿ, ರಾಜ್ಯ ಮತ್ತು ದೇಶದಲ್ಲಿ ನಿಂಬೆ ಹಣ್ಣಿನ ಬೆಲೆ ಸಾಕಷ್ಟು ಹೆಚ್ಚಾಗಿದೆ. ರಾಜ್‍ಕೋಟ್‍ನಲ್ಲಿ ಕೆಜಿಗೆ 250 ರೂ.ವನ್ನು ದಾಟಿದೆ. ಆದರೆ ಬೇಸಿಗೆ ಕಾಲದಲ್ಲಿ ನಿಂಬೆ ಹಣ್ಣಿನ ಅವಶ್ಯಕತೆ ಇರುತ್ತದೆ. ಅದಕ್ಕಾಗಿಯೇ ನಿಂಬೆ ಹಣ್ಣುಗಳನ್ನು ನೀಡಿದ್ದೇವೆ ಎಂದರು. ಇದನ್ನೂ ಓದಿ: 1 ಗಂಟೆ ಪುಸ್ತಕ ಓದಿದರೆ ಒಂದು ಉಡುಗೊರೆ – ಶಿಕ್ಷಣ ಪ್ರೇಮಿಯ ವಿನೂತನ ಪ್ರಯತ್ನ
गुजरात: राजकोट के धोराजी शहर में एक शादी समारोह के दौरान लोगों ने दूल्हे को नींबू भेंट किए।
दिनेश ने बताया, “इस समय राज्य और देश में नींबू की कीमतें बहुत बढ़ गई हैं। इस मौसम में नींबू की बहुत जरूरत पड़ती है। इसलिए मैंने नींबू भेंट किए हैं।” (16.04) pic.twitter.com/ciQ9MlwIC3
ಪ್ರಸ್ತುತ ಬೇಸಿಗೆ ಕಾಲದಲ್ಲಿ ಪೂರೈಕೆಯಲ್ಲಿನ ಕೊರತೆ ಮತ್ತು ಹೆಚ್ಚಿನ ಬೇಡಿಕೆಯಿಂದಾಗಿ ನಿಂಬೆ ಬೆಲೆ ಏರಿಕೆಯಾಗಿದೆ. ಈ ಬಾರಿ ನಿಂಬೆ ಹಣ್ಣಿನ ಉತ್ಪಾದನೆ ಕಡಿಮೆಯಾಗಿದ್ದು, ಹೆಚ್ಚುತ್ತಿರುವ ತಾಪಮಾನ ಹಾಗೂ ಹಬ್ಬ ಹರಿದಿನಗಳಿಂದ ಬೇಡಿಕೆ ಹೆಚ್ಚಿದೆ. ಇದನ್ನೂ ಓದಿ: ನೇಣು ಬಿಗಿದ ಸ್ಥಿತಿಯಲ್ಲಿ ಶಿವಸೇನೆ ಶಾಸಕನ ಪತ್ನಿ ಶವ ಪತ್ತೆ
ತೆಲಂಗಾಣ, ರಾಜಸ್ಥಾನ ಮತ್ತು ದೇಶದ ಹಲವಾರು ಭಾಗಗಳಲ್ಲಿ ನಿಂಬೆ ಬೆಲೆ ಗಗನಕ್ಕೇರಿದೆ. ದೆಹಲಿಯ ಅತಿದೊಡ್ಡ ಸಗಟು ಮಾರುಕಟ್ಟೆಯಾಗಿರುವ ಆಜಾದ್‍ಪುರ ಮಂಡಿಯಲ್ಲಿ ನಿಂಬೆಹಣ್ಣು ಕೆಜಿಗೆ 70 ರಿಂದ 90 ರೂ.ಗೆ ಮಾರಾಟವಾಗುತ್ತಿದೆ. ನಿಂಬೆ ಹಣ್ಣಿನ ಬೆಲೆ ಗುಜರಾತ್‍ನಲ್ಲಿ ಕೆಜಿಗೆ 240 ರೂ.ಗೆ ಏರಿಕೆಯಾಗಿದ್ದು, ಕರ್ನಾಟಕದಲ್ಲಿ ಹಾಗೂ ಜೈಪುರದಲ್ಲಿ ನಿಂಬೆಹಣ್ಣು ಕೆಜಿಗೆ 200 ರೂ.ಕ್ಕೂ ಅಧಿಕ ಬೆಲೆಗೂ ದಾಟಿದೆ
ಬೆಳಗಾವಿ: ಮೊನ್ನೆಯಿಂದ ನಾನು ಕೂಡ ಮಾಧ್ಯಮಗಳಲ್ಲಿ ನನ್ನ ಫೋಟೋ ನೋಡುತ್ತಿದ್ದೇನೆ. ಸಂತೋಷ್ ಪಾಟೀಲ್ ಅನ್ನುವ ವ್ಯಕ್ತಿಗೂ ನಮಗೂ ಯಾವುದೇ ರೀತಿ ಸಂಬಂಧಗಳು ಇಲ್ಲ ಎಂದು ಬೈಲಹೊಂಗಲದ ಡಾ. ವೇದಮೂರ್ತಿ ಮಹಾಂತಯ್ಯ ಶಾಸ್ತ್ರಿ ಆರಾದ್ರಿಮಠ ಹೇಳಿದರು.
ಸಚಿವ ಈಶ್ವರಪ್ಪ ಹಾಗೂ ಸಂತೋಷ್ ಪಾಟೀಲ್ ಭೇಟಿ ವೇಳೆ ಆರಾದ್ರಿಮಠ ಫೋಟೋ ವೈರಲ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, 2021ರ ಜಾತ್ರಾ ಮಹೋತ್ಸವಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಚಾನಕ್ ಆಗಿ ಈಶ್ವರಪ್ಪ ಭೇಟಿಯಾಗಲು ಹೋಗಿದ್ದೆ. ನೀವು ಬೈಲಹೊಂಗಲ ಸ್ವಾಮೀಜಿ ಅಲ್ವಾ ಎಂದರು. ಹೌದು ಅಂದೆ. ಒಂದು ಫೋಟೋ ತೆಗೆಸಿಕೊಳ್ಳೋಣ ಅಂತಾ ಫೋಟೋ ತೆಗೆಸಿಕೊಂಡಿದ್ದೇನೆ ಎಂದರು. ಇದನ್ನೂ ಓದಿ: ಈಶ್ವರಪ್ಪ ರಾಜೀನಾಮೆ ಯಾವಾಗ? – ಬಿಜೆಪಿಯ ನೈತಿಕತೆ ಎಲ್ಲಿ ಹೋಯ್ತು?
ಫೋಟೋ ತೆಗೆಸಿಕೊಂಡಿರೋದು ಮಾತ್ರ ನಮಗೆ ಗೊತ್ತು. ಅದಕ್ಕಿಂತ ಪೂರ್ವದಲ್ಲಿ ಸಂತೋಷ್ ಪಾಟೀಲ್‍ಗಾಗಲಿ ನಮಗಾಗಲಿ ಭೇಟಿ, ಸಂಭಾಷಣೆ ಇಲ್ಲ. ಮಾಧ್ಯಮಗಳಲ್ಲಿ ಒನ್‍ಸೈಡ್ ಫೋಟೋ ಮಾತ್ರ ಇದೆ. ಇನ್ನೊಂದೆಡೆ ನಮ್ಮ ಪುರೋಹಿತರು ಇರುವ ಫೋಟೋ ಕಟ್ ಮಾಡಿ ಮಾಧ್ಯಮಗಳಲ್ಲಿ ತೋರಿಸುತ್ತಿದ್ದಾರೆ. ಇದಕ್ಕೂ ನಮಗೂ ಸಂಬಂಧ ಇರದ ವಿಷಯ ಎಂದು ಹೇಳಿದರು. ಇದನ್ನೂ ಓದಿ: ಸಂತೋಷ್ ಕೇಸ್ ಹಿಂದೆಯೂ ‘ಮಹಾನಾಯಕ’ ಇದ್ದಾನೆ: ರಮೇಶ್ ಜಾರಕಿಹೊಳಿ
ಮಾದಕ ಸುಂದರಿ ದಿಶಾ ಪಟಾನಿ ಬಾಲಿವುಡ್ ಅಂಗಳದಲ್ಲಿ ಸದಾ ಪಡ್ಡೆ ಹುಡುಗರ ನಿದ್ದೆ ಕೆಡಿಸುತ್ತಲೇ ಇರುತ್ತಾರೆ. ಅಭಿಮಾನಿಗಳಿಗಾಗಿ ಒಂದಲ್ಲಾ ಒಂದು ರೀತಿ ಹೊಸ ಹೊಸ ಉಡುಗೆ ತೊಟ್ಟು ಸಾಮಾಜಿಕ ಜಾಲತಾಣದಲ್ಲಿ ಆ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಅವರ ವಿವಿಧ ಹಾಟ್ ಫೋಟೋ ಶೂಟ್ ಭಂಗಿಗಳಿಂದ ಕೂಡಿದ ಫೋಟೋಗಳು ನೋಡುಗರ ಎದೆಯಲ್ಲಿ ಕಿಚ್ಚು ಹಚ್ಚುವ ಕಲೆಯನ್ನು ಚೆನ್ನಾಗಿಯೇ ಕರಗತ ಮಾಡಿಕೊಂಡಿವೆ. ಸೋಮವಾರ ದಿಶಾ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಮತ್ತೊಂದು ಫೋಟೋ ಹಂಚಿಕೊಂಡಿರುವ ಚಿತ್ರ ಇದಕ್ಕೆ ಮತ್ತೊಂದು ಉದಾಹರಣೆ ಎನ್ನಬಹುದು. ಇದನ್ನೂ ಓದಿ: ಲಿವ್ ಇನ್ ರಿಲೇಶನ್‍ಶಿಪ್ – ಮದುವೆ ಬಗ್ಗೆ ವಿದ್ಯಾ ಬಾಲನ್ ಹೇಳೋದೇನು?
ಹೌದು, ದಿಶಾ ಈ ಬಾರಿ ಅದ್ಭುತ ಚಿತ್ರವೊಂದನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಹೆಚ್ಚಾಗಿ ಟೈಗರ್ ಶ್ರಾಫ್ ಜೊತೆಗೆ ಬಿಕಿನಿ ತೊಟ್ಟು ಬೀಚ್ ಡೈರಿಗಳಿಂದ ಅಥವಾ ಜಿಮ್‍ನಲ್ಲಿರುವ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದರು ದಿಶಾ. ಆದರೆ ಈ ಬಾರಿ ಸಿಂಗಲ್ ಗ್ಲಾಮರಸ್ ಫೋಟೋ ಹಂಚಿಕೊಂಡಿದ್ದು, ಸ್ವತಃ ತಾವೇ ತಮ್ಮ ಕೂದಲು ಮತ್ತು ಮೇಕಪ್ ಅನ್ನು ಮಾಡಿಕೊಂಡಿರುವುದಾಗಿ ಶೀರ್ಷಿಕೆ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಬ್ಲಾಕ್ ಹಾಟ್ ಗೌನ್ ನಲ್ಲಿ ರಿಚಾ ಚಡ್ಡಾ : ಪಡ್ಡೆಗಳ ರಾಣಿಜೇನಿನ ಹಾಟ್ ಫೋಟೋ ಶೂಟ್
ಸದ್ಯ ಆ ಫೋಟೋ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಫೋಟೋಗೆ ವಾವ್ಹ್! ಅದ್ಭುತ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. ಬಾಲಿವುಡ್‍ನಲ್ಲಿ ತಮ್ಮ ಮಾದಕ ಭಂಗಿಗಳ ಫೋಟೋಗಳಿಂದಲೇ ಫೇಮಸ್ ಆಗಿರುವ ಇವರಿಗೆ ಅಪಾರ ಅಭಿಮಾನಿ ಬಳಗವಿದೆ. ದಿಶಾ ಅವರು ‘ಏಕ್ ವಿಲನ್ -2’ ಸಿನಿಮಾದಲ್ಲಿ ಅರ್ಜುನ್ ಕಪೂರ್ ಮತ್ತು ಜಾನ್ ಅಬ್ರಹಾಂ ಅವರೊಂದಿಗೆ ಕಾಣಿಕೊಳ್ಳಲಿದ್ದಾರೆ. ದಿಶಾ ಮತ್ತು ಟೈಗರ್ ಲವ್ವಿ ಡವ್ವಿ ಸದಾ ಬಿ-ಟೌನ್‍ನಲ್ಲಿ ಹಾಟ್ ಟಾಪಿಕ್.
ಮಂಗಳೂರು: ಡಾ. ಪುನೀತ್ ರಾಜ್‍ಕುಮಾರ್ ಎಲ್ಲರನ್ನು ಬಿಟ್ಟು ಅಗಲಿದರೂ ಅಭಿಮಾನಿಗಳು ಒಂದಲ್ಲ ಒಂದು ರೀತಿ ಇಂದಿಗೂ ಅಭಿಮಾನವನ್ನು ತೋರಿಸುತ್ತಿದ್ದಾರೆ. ಇಂದು ಪುನೀತ್ ರಾಜ್‍ಕುಮಾರ್ ಅವರ ಹುಟ್ಟುಹಬ್ಬವಾಗಿದ್ದು, ಅಭಿಮಾನಿಗಳು ‘ಅಪ್ಪು’ ಹುಟ್ಟುಹಬ್ಬದ ಪ್ರಯುಕ್ತ ಬೇರೆ ಬೇರೆ ರೀತಿಯಲ್ಲಿ ತಮ್ಮ ಅಭಿಮಾನವನ್ನು ವ್ಯಕ್ತಪಡಿಸುತ್ತಿದ್ದಾರೆ.
ಅಂತೆಯೇ ಮಂಗಳೂರಿನ ಅಪ್ಪಟ ‘ಅಪ್ಪು’ ಅಭಿಮಾನಿಯೊಬ್ಬರು ‘ಲೈಫ್ ಬಾಯ್’ ಬಾತ್ ಸೋಪ್‍ನಲ್ಲಿ ಪುನೀತ್ ರಾಜಕುಮಾರ್ ಚಿತ್ರ ಬಿಡಿಸಿ ವಿಶಿಷ್ಟ ರೀತಿಯಲ್ಲಿ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ. ಕೇವಲ ಎರಡು ಗಂಟೆಯಲ್ಲಿ ಸೋಪ್‍ನಲ್ಲಿ ಅಪ್ಪು ಚಿತ್ರವನ್ನು ಗುಂಡು ಪಿನ್ ಮೂಲಕ ಚಿತ್ರಿಸಿದ್ದಾರೆ. ಇದನ್ನೂ ಓದಿ: ರವಿವರ್ಮಾ ಸ್ಟಂಟ್‌ಗೆ ಪವರ್ ಸ್ಟಾರ್ ಫಿದಾ: ಫೋನ್ ಮಾಡಿ ಪುನೀತ್ ಹೇಳಿದ್ದೇನು?
ಮಂಗಳೂರಿನ ಗಣೇಶಪುರದ ದೇವಿಕಿರಣ್ ಬೇರೆ ಸೋಪ್‍ನಿಂದ ಅಪ್ಪು ಚಿತ್ರ ರಚಿಸಲು ಟ್ರೈ ಮಾಡಿದರೂ ಸಾಧ್ಯವಾಗಿರಲಿಲ್ಲ. ಆ ಬಳಿಕ ಲೈಫ್‍ಬಾಯ್ ಸೋಪ್‍ನಿಂದ ಅಪ್ಪು ಚಿತ್ರ ಮಾಡಿ ಯಶಸ್ಸು ಕಂಡಿದ್ದಾರೆ. ಅಪ್ಪು ಚಿತ್ರ ರಚನೆಯ ವೀಡಿಯೋವನ್ನು ದೇವಿಕಿರಣ್ ಫೇಸ್‌ಬುಕ್‌ನಲ್ಲಿ ಅಪ್ಲೋಡ್ ಮಾಡಿದ್ದು ನೆಟ್ಟಿಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ವೀಡಿಯೋ ಸಾಕಷ್ಟು ವೈರಲ್ ಕೂಡಾ ಆಗುತ್ತಿದೆ. ಇದನ್ನೂ ಓದಿ: ಪುನೀತ್ ರಾಜ್‍ಕುಮಾರ್ ‘ಜೇಮ್ಸ್’ ಸಿನಿಮಾ: ಅಭಿಮಾನಿಗಳ ಫಸ್ಟ್ ರಿಯಾಕ್ಷನ್
ಮುಂಬೈ: ಬಾಲಿವುಡ್ ನ ಮೋಸ್ಟ್ ಎಲಿಜಬಲ್ ಬ್ಯಾಚುಲರ್ ಸಲ್ಮಾನ್ ಖಾನ್ ಕೊನೆಗೂ ಮದುವೆಯಾದರು ಎಂದು ಬಿಟೌನ್ ನಿಟ್ಟುಸಿರಿಟ್ಟಿತ್ತು. ಅದರಲ್ಲೂ ದಬಂಗ್ ಸಿನಿಮಾದಲ್ಲಿ ತಮ್ಮೊಂದಿಗೆ ನಟಿಸಿದ್ದ ಸೋನಾಕ್ಷಿ ಸಿನ್ಹಾ ಅವರೇ ಸಲ್ಮಾನ್ ಪತ್ನಿ ಎಂದು ಹಿರಿಹಿರಿ ಹಿಗ್ಗಿತ್ತು. ಈ ಖುಷಿ ಒಂದೇ ಠುಸ್ಸು ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಇವರಿಬ್ಬರ ಮದುವೆ ಫೋಟೋದ ಹಿಂದೆ ಹೊಸದೊಂದು ಕಹಾನಿಯೇ ಅಡಗಿದೆ.
ಮೋಸ್ಟ್ ಎಲಿಜಬಲ್ ಬ್ಯಾಚುಲರ್ ಸಲ್ಮಾನ್ ಹಲವರ ಜೊತೆ ಡೇಟಿಂಗ್ ಮಾಡಿದ್ದರು ಎನ್ನುವುದು ಅವರ ಸಿನಿಮಾಗಳಷ್ಟೇ ಸತ್ಯ. ಆದರೆ ಯಾರೂ ಕೂಡ ಸಲ್ಲು ಜೊತೆ ಮದುವೆ ಆಗಲು ಮುಂದೆ ಬಂದಿರಲಿಲ್ಲ. ಈಗ ಸಲ್ಮಾನ್ ಖಾನ್ ಮತ್ತು ಸೋನಾಕ್ಷಿ ಸಿನ್ಹಾ ಮದುವೆ ಆಗಿದ್ದಾರೆ ಎಂಬ ಗಾಸಿಪ್ ಬಿಟೌನ್ ತುಂಬಾ ಸದ್ದು ಮಾಡುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಫೋಟೋವೊಂದು ಈ ಗಾಸಿಪ್‍ಗೆ ಕಾರಣವಾಗಿದೆ. ಸಲ್ಲು ಮತ್ತು ಸೋನಾಕ್ಷಿ ಸಿನ್ಹಾ ನವ ದಂಪತಿಯ ರೀತಿಯಲ್ಲಿ ಕಂಗೊಳಿಸುತ್ತಿದ್ದ ಆ ಫೋಟೋ ವೈರಲ್ ಕೂಡ ಆಗಿದೆ. ಆದರೆ, ಅದರ ಹಿಂದಿನ ಅಸಲಿಯತ್ತೇ ಬೇರೆ ಇದೆ. ಇದನ್ನೂ ಓದಿ : ಮಾಜಿ ಪತಿಯ ಬಗ್ಗೆ ಬೆಂಕಿಯುಗುಳಿದ ಪೂನಂ ಪಾಂಡೆ : ಟಾಪ್ ನಟಿಯ ದಾಂಪತ್ಯ ಹೀಗೂ ಇತ್ತಾ?
ಸಲ್ಲು ಮತ್ತು ಸೋನಾಕ್ಷಿ ಜೋಡಿಯ ಮಧ್ಯೆ ಒಂದೊಳ್ಳೆ ಭಾಂದವ್ಯ ಇರುವುದು ನಿಜ. ಆದರೆ ಮದುವೆ ಆಗಿದ್ದಾರೆ ಎಂಬುದೆಲ್ಲ ಒಂದು ಸುಳ್ಳು. ಗಾಸಿಪ್‍ಗೆ ಕಾರಣವಾಗಿರುವ ಈ ಫೋಟೋವನ್ನು ಎಡಿಟ್ ಮಾಡಲಾಗಿದ್ದು, ಬೇರೊಬ್ಬ ದಂಪತಿ ತೆಗೆಸಿಕೊಂಡಿದ್ದ ಮದುವೆ ಫೋಟೋ ಅದಾಗಿದೆ. ಅವರ ಮುಖಕ್ಕೆ ಸೋನಾಕ್ಷಿ ಹಾಗೂ ಸಲ್ಮಾನ್ ಅವರ ಮುಖವನ್ನು ಫಿಕ್ಸ್ ಮಾಡಲಾಗಿದೆ. ವೈರಲ್ ಆದ ಫೋಟೋ ನೋಡಿದ ಎಷ್ಟೋ ನೆಟ್ಟಗರು ಅದನ್ನು ನಿಜ ಎಂದು ನಂಬಿದ್ದರು. ಗುಟ್ಟು ರಟ್ಟಾದ ನಂತರ ಪೆಚ್ಚಾಗಿದ್ದಾರೆ. ಇದನ್ನೂ ಓದಿ : ಕಾಲಿಂದ ಕುಡಿಕೆಯೊದ್ದ ರಾಣಾ: ಪವರ್ ಸ್ಟಾರ್ ಪವನ್ ಕಲ್ಯಾಣ್ ಸಿನಿಮಾ ವಿರುದ್ಧ ದೂರು ದಾಖಲು
ಸೋನಾಕ್ಷಿ ಸಿನ್ಹಾ 2010ರಲ್ಲಿ ಸಲ್ಲು ಭಾಯ್ ಜೊತೆ ದಬಂಗ್ ಚಿತ್ರದಲ್ಲಿ ಸ್ಕ್ರೀನ್ ಶೇರ್ ಮಾಡಿದ್ದರು. ನಟಿಸಿದ ಮೊದಲ ಸಿನಿಮಾದಲ್ಲಿಯೇ ಅವರಿಗೆ ಭರ್ಜರಿ ಯಶಸ್ಸು ಸಿಕ್ಕಿತ್ತು. ಈ ಗೆಲುವೇ ಸಲ್ಮಾನ್ ಜೊತೆ ಸೋನಾಕ್ಷಿ ಉತ್ತಮ ಒಡನಾಟ ಇಟ್ಟುಕೊಳ್ಳಲು ಸಾಧ್ಯವಾಯಿತು. ಸದ್ಯ ಕೆಲವು ಸಿನಿಮಾಗಳ ಕೆಲಸಗಳಲ್ಲಿ ಬ್ಯುಸಿಯಾಗಿರುವ ಸೋನಾಕ್ಷಿ ಬ್ಯುಸಿ, ಸದ್ಯಕ್ಕಂತೂ ಮದುವೆ ಬಗ್ಗೆ ಆಲೋಚನೆ ಮಾಡಿಲ್ಲವಂತೆ.
ಚೆನ್ನೈ: ಐಪಿಎಲ್ 2022ಕ್ಕೂ ಮುನ್ನ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಮ್ ಎಸ್ ಧೋನಿಯ ಹೊಸ ಮೀಸೆ ನೋಟವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಭಿಮಾನಿಗಳು ಧೋನಿಯ ಈ ಹೊಸ ಲುಕ್‍ಗೆ ‘ತಲೈವರ್ ಸೂಪರ್ ಸ್ಟಾರ್’ ನಂತೆ ಕಾಣುತ್ತೀರಾ ಎಂದು ಬರೆದುಕೊಂಡಿದ್ದಾರೆ.
Presenting, a new-look MS Dhoni! What do you think he’s up to? ????
ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಧೋನಿಯವರು ತಮ್ಮ ನಾಯಕತ್ವ ಮತ್ತು ವಿಕೆಟ್ ಕೀಪಿಂಗ್ ಕೌಶಲ್ಯಗಳಿಂದಲೇ ಹೆಸರುವಾಸಿಯಾದವರು. ಆದರೆ ಅವರು ಪ್ರತೀ ಐಪಿಎಲ್ ಸೀಸನ್‍ಗಳ ಜಾಹೀರಾತಿನಲ್ಲಿ ವಿಭಿನ್ನ ರೀತಿಯ ಗೆಟಪ್‍ಗಳನ್ನು ಧರಿಸುವುದರಲ್ಲಿ ಪ್ರಸಿದ್ಧರಾಗಿದ್ದಾರೆ. ಅವರ ಈ ಗೆಟಪ್‍ಗಳಿಗೆ ಅಭಿಮಾನಿಗಳು ಸಹ ಹೆಚ್ಚಾಗಿ ಪ್ರಶಂಸುತ್ತಿರುತ್ತಾರೆ. ಇದನ್ನೂ ಓದಿ: ಅಲಿಯಾಗೆ ನನ್ನ ಮೇಲೆ ಕೈ ಮಾಡಲು 20 ಟೇಕ್ ತೆಗೆದುಕೊಂಡಿದ್ರು: ‘ಗಂಗೂಬಾಯಿ’ನಲ್ಲಿ ಶಂತನು
ಧೋನಿಯವರು ಮುಂಬರುವ ಐಪಿಎಲ್ 2022ರ ಪ್ರೋಮೋಗಳ ಟೀಸರ್‌ಗಳಲ್ಲಿ ಒಂದಕ್ಕೆ ಅವರು ಮತ್ತೊಂದು ಹೊಸ ನೋಟವನ್ನು ಪ್ರದರ್ಶಿಸಿಸುತ್ತಿದ್ದಾರೆ. ಅವರ ಈ ಹೊಸ ಅವತಾರದಲ್ಲಿ ಮೀಸೆಯನ್ನು ಬಿಟ್ಟು ಬಹುತೇಕ ಗುರುತಿಸಲಾಗದಂತೆ ಕಾಣುತ್ತಿದ್ದಾರೆ.
ಧೋನಿಯ ಅವರು ಜಗತ್ತಿನಾದ್ಯಂತ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದು, ಅವರ ಈ ಹೊಸ ಅವತಾರಕ್ಕೆ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಅಮೂಲ್ಯ ಸೀಮಂತದ ಪಾರ್ಟಿಗೆ ಸ್ಯಾಂಡಲ್‍ವುಡ್ ತಾರೆಯರ ಮೆರುಗು
ಈ ಹಿಂದೆ ಬೆಂಗಳೂರಿನಲ್ಲಿ ನಡೆದ ಐಪಿಎಲ್ 2022ರ ಮೆಗಾ ಹರಾಜಿನಲ್ಲಿ 12 ಕೋಟಿ ರೂ.ಗೆ ಬೀಡ್ ಮಾಡಿ ಧೋನಿ ಅವರನ್ನು ಚೆನ್ನೈ ತಂಡದಲ್ಲಿಯೇ ಉಳಿಸಿಕೊಂಡಿದೆ. ಮುಂಬರುವ ಐಪಿಎಲ್‍ನಲ್ಲಿ ಅವರು ಸಿಎಸ್‍ಕೆ ತಂಡದ ನಾಯಕನಾಗಿ ಹಾಲಿ ಚಾಂಪಿಯನ್ನ್ ತಂಡವನ್ನು ಮುನ್ನಡೆಸಲಿದ್ದಾರೆ. ತಂಡದ ನಾಯಕನಾಗಿ ಅವರು ಈಗಾಗಲೇ ಚೆನ್ನೈ ತಂಡಕ್ಕೆ 4 ಪ್ರಶಸ್ತಿಗಳನ್ನು ಸಹ ತಂದುಕೊಟ್ಟಿದ್ದಾರೆ.
????????????: This sound can only mean one thing… ????
Get ready for the #TATAIPL ???? extravaganza, this time even bigger & better with ???? teams!
ಐಪಿಎಲ್‍ನ ಹೊಸ ಸ್ವರೂಪದ ಪ್ರಕಾರ ಈ ಬಾರಿ ಸಿಎಸ್‍ಕೆ ತಂಡವನ್ನು ಸನ್ ರೈಸರ್ಸ್ ಹೈದರಾಬಾದ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್, ಮತ್ತು ಗುಜರಾತ್ ಟೈಟನ್ಸ್ ತಂಡಗಳ ಜೊತೆಗೆ ಬಿ ಗುಂಪಿನಲ್ಲಿ ಇರಿಸಲಾಗಿದೆ. ಚೆನ್ನೈ ತಂಡವು ಮೇಲೆ ತಿಳಿಸಿದ ಎಲ್ಲಾ ತಂಡಗಳ ವಿರುದ್ಧ 2 ಪಂದ್ಯಗಳನ್ನು ಆಡುತ್ತದೆ. ಆದರೆ ಎ ಗುಂಪಿನ ಮುಂಬೈ ತಂಡದ ವಿರುದ್ಧ ಮಾತ್ರ 2 ಬಾರಿ ಸೆಣಸಾಡಲಿದ್ದು, ಇತರ ಎ ಗುಂಪಿನ ಎಲ್ಲಾ ತಂಡಗಳ ವಿರುದ್ಧ ಕೇವಲ 1 ಬಾರಿ ಮಾತ್ರ ಆಡಲಿದೆ.
ಐಪಿಎಲ್ 2022 ಸ್ವರೂಪದ ವೇಳಾಪಟ್ಟಿಯ ಗುಂಪು ವಿವರಗಳು:
ಪ್ರತಿ ತಂಡವು ಒಟ್ಟು 14 ಪಂದ್ಯಗಳನ್ನು ಆಡುತ್ತದೆ – ಐದು ತಂಡಗಳ ವಿರುದ್ಧ ಎರಡು ಬಾರಿ ಅವರ ಗುಂಪಿನಿಂದ 4 ತಂಡಗಳು ಮತ್ತು ಇತರ ಗುಂಪಿನಿಂದ 1 ತಂಡ, ಒಮ್ಮೆ ಇತರ ಗುಂಪಿನ ನಾಲ್ಕು ತಂಡಗಳ ವಿರುದ್ಧ ಆಡಲಿವೆ.
ಗುಂಪು ಎ – ಮುಂಬೈ ಇಂಡಿಯನ್ಸ್, ಕೋಲ್ಕತ್ತಾ ನೈಟ್ ರೈಡರ್ಸ್, ರಾಜಸ್ಥಾನ್ ರಾಯಲ್ಸ್, ದೆಹಲಿ ಕ್ಯಾಪಿಟಲ್ಸ್, ಲಕ್ನೋ ಸೂಪರ್ ಜೈಂಟ್ಸ್
ಗುಂಪು ಬಿ – ಚೆನ್ನೈ ಸೂಪರ್ ಕಿಂಗ್ಸ್, ಸನ್ ರೈಸರ್ಸ್ ಹೈದರಾಬಾದ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್, ಗುಜರಾತ್ ಟೈಟಾನ್ಸ್
ಪಂದ್ಯಾವಳಿಯು ಮಾರ್ಚ್ 26 ರಂದು ಪ್ರಾರಂಭಗೊಳ್ಳುತ್ತದೆ. ಮೇ 29 ರಂದು ಕೊನೆಗೊಳ್ಳುತ್ತದೆ. ಕೋವಿಡ್ -19 ಸೋಂಕಿನ ಹಿಂದಿನ ಪ್ರಮುಖ ಕಾರಣವೆಂದು ಪರಿಗಣಿಸಲಾದ ವಿಮಾನ ಪ್ರಯಾಣವನ್ನು ತಪ್ಪಿಸಲು ಎಲ್ಲಾ ಪಂದ್ಯಗಳನ್ನು ಒಂದೇ ಹಬ್‍ನಲ್ಲಿ ಜೈವಿಕ-ಸುರಕ್ಷಿತ ವಾತಾವರಣದಲ್ಲಿ ಮಹಾರಾಷ್ಟ್ರದಲ್ಲಿ ಆಡಲಾಗುತ್ತದೆ.
ಐಪಿಎಲ್ 2022ಗಾಗಿ ಸಿಎಸ್‍ಕೆ ತಂಡ ಪ್ರಕಟವಾಗಿದ್ದು, ಎಂಎಸ್ ಧೋನಿ, ರವೀಂದ್ರ ಜಡೇಜಾ, ಮೊಯಿನ್ ಅಲಿ, ರುತುರಾಜ್ ಗಾಯಕ್ವಾಡ್, ಅಂಬಟಿ ರಾಯಡು, ಡ್ವೇನ್ ಬ್ರಾವೋ, ರಾಬಿನ್ ಉತ್ತಪ್ಪ, ದೀಪಕ್ ಚಾಹರ್, ಕೆಎಂ ಆಸಿಫ್, ಶಿವಂ ದುಬೆ, ಮಹೇಶ್ ತೀಕ್ಷಣ, ರಾಜವರ್ಧನ್ ಹಂಗರ್‍ಗೇಕರ್, ಡಿ ಪ್ರೇಮ್‍ಜೀತ್ ಸಿಂಗ್, ಡಿ ಪ್ರೇಮ್‍ಜೀತ್ ಸಿಂಗ್ , ಮಿಚ್ ಸ್ಯಾಂಟ್ನರ್, ಆಡಮ್ ಮಿಲ್ನೆ, ಸುಭ್ರಾಂಶು ಸೇನಾಪತಿ, ಪ್ರಶಾಂತ್ ಸೋಲಂಕಿ, ಮುಖೇಶ್ ಚೌಧರಿ, ಸಿ ಹರಿ ನಿಶಾಂತ್, ಎನ್ ಜಗದೀಸನ್, ಕ್ರಿಸ್ ಜೋರ್ಡಾನ್, ಭಗತ್ ವರ್ಮಾ
ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ ಮತ್ತು ಚೆನ್ನೈನಲ್ಲಿ ರಾಷ್ಟ್ರೀಯ ಪ್ರಶಸ್ತಿ ವಿಜೇತ, ನಟ ವಿಕ್ರಮ್ ಅವರೊಂದಿಗೆ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಈ ಫೋಟೋವನ್ನು ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳ ಕ್ಲಬ್‍ನ ಅಧಿಕೃತ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಫೋಟೋದಲ್ಲಿ ನಟ ವಿಕ್ರಮ್ ಹಾಗೂ ಎಂಎಸ್ ಧೋನಿ ಒಟ್ಟಿಗೆ ನಿಂತು ಪೋಸ್ ನೀಡುತ್ತಿದ್ದಾರೆ. ಈ ಫೋಟೋ ಭಾರೀ ವೈರಲ್ ಆಗಿದೆ.
ತಮಿಳು ಚಿತ್ರರಂಗದ ಸೂಪರ್‍ಸ್ಟಾರ್ ವಿಕ್ರಮ್ ಅವರು ಬಾಲಿವುಡ್‍ನ ರಾವಣ ಚಿತ್ರದಲ್ಲಿ ನಟಿಸಿದ್ದರು. ವಿಕ್ರಮ್ ಅವರು ಮಹೇಂದ್ರಸಿಂಗ್ ಧೋನಿಯ ಅಭಿಮಾನಿಯಾಗಿದ್ದಾರೆ. ವಿಕ್ರಮ್ ಅವರ ಮಹಾನ್ ಚಿತ್ರದ ಟೀಸರ್ ಬಿಡುಗಡೆಯಾದ ದಿನದಂದು ಭೇಟಿಯಾಗಿದ್ದಾರೆ. ಇದನ್ನೂ ಓದಿ:ಖ್ಯಾತ ಯೂಟ್ಯೂಬರ್ ಹಿಂದೂಸ್ತಾನಿ ಭಾವು ಅರೆಸ್ಟ್
ಫೆಬ್ರವರಿ 12 ಮತ್ತು 13 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಮುಂಬರುವ ಐಪಿಎಲ್ 2022 ರ ಮೆಗಾ ಹರಾಜಿಗೆ ತಯಾರಿ ನಡೆಸಲು ಧೋನಿ ಪ್ರಸ್ತುತ ಚೆನ್ನೈನಲ್ಲಿದ್ದಾರೆ. ಈ ಬಾರಿಯ ಐಪಿಎಲ್ ಟೀಂನಲ್ಲಿ ಚೈನ್ನೈ ಸೂಪರ್‍ಕಿಂಗ್ಸ್ ಧೋನಿ, ರವೀಂದ್ರ ಜಡೇಜಾ ಮತ್ತು ರುತುರಾಜ್ ಗಾಯಕ್ವಾಡ್ ಅವರನ್ನು ಉಳಿಸಿಕೊಂಡಿದೆ. ಇದನ್ನೂ ಓದಿ:ಒಡಿಶಾದ ಕೋವಿಡ್ ಸೋಂಕಿತ ಸರ್ಕಾರಿ ನೌಕರರಿಗೆ ಒಂದು ವಾರ ರಜೆ
ಮುಂಬೈ: ಬಾಲಿವುಡ್ ನಟಿ ಇಷಾ ಗುಪ್ತ ಟಾಪ್‌ಲೆಸ್ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಇಷಾ ಗುಪ್ತ ಹಾಟ್ ಲುಕ್ ಪಡ್ಡೆ ಹುಡುಗರ ನಿದ್ದೆ ಗೇಡಿಸುತ್ತಿದೆ.
2007ರಲ್ಲಿ ಮಿಸ್ ಇಂಡಿಯಾ ಇಂಟರ್ ನ್ಯಾಷನಲ್ ಟೈಟಲ್ ಗೆದ್ದಿದ್ದ ಇಷಾ ಗುಪ್ತ, ಬಾಲಿವುಡ್‍ನ ಜನ್ನತ್, ರಾಝ್, ರುಸ್ತುಂ, ಕಮಾಂಡೋ, ಬಾದ್ಷಾಹೋ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇದನ್ನೂ ಓದಿ: ಆಲಿಯಾ ಹಾಟ್ ಫಿಟ್ನೆಸ್ ಫೋಟೋ ವೈರಲ್ – ಬೆರಗಾದ ಕತ್ರಿನಾ
35 ವರ್ಷ ವಯಸ್ಸಿನ ಇಷಾ ಗುಪ್ತ ಇತ್ತೀಚೆಗಷ್ಟೇ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಟಾಪ್‌ಲೆಸ್ ಫೋಟೋವನ್ನು ಶೇರ್ ಮಾಡಿಕೊಂಡಿದ್ದು, ಫೋಟೋದಲ್ಲಿ ಇಷಾ, ಬ್ಲೂ ಕಲರ್ ಜೀನ್ಸ್ ಪ್ಯಾಂಟ್ ತೊಟ್ಟು, ಟಾಪ್ ಧರಿಸದೇ ಬಾಲ್ಕಾನಿಯಲ್ಲಿ ನಿಂತು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಜೊತೆಗೆ ಲವ್ ಟುಡೇ ಲವ್ ಟೂಮಾರೋ ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಕತ್ರಿನಾ ಜೊತೆಗಿನ ಎಂಗೇಜ್‍ಮೆಂಟ್ ಬಗ್ಗೆ ಸುಳಿವು ಕೊಟ್ರಾ ವಿಕ್ಕಿ ಕೌಶಲ್ ?
ಈ ಫೋಟೋಗೆ ಇಲ್ಲಿಯವರೆಗೂ 6 ಲಕ್ಷಕ್ಕೂ ಅಧಿಕ ಲೈಕ್ಸ್ ಮತ್ತು 9 ಸಾವಿಕ್ಕೂ ಹೆಚ್ಚು ಕಾಮೆಂಟ್ಸ್ ಹರಿದು ಬಂದಿದ್ದು, ಕೆಲವರು ಫೋಟೋ ನೋಡಿ ಸೂಪರ್ ಎಂದು ಕಾಮೆಂಟ್ ಮಾಡಿದರೆ, ಇನ್ನೂ ಕೆಲವರು ಸರಿಯಾಗಿ ಬಟ್ಟೆ ಹಾಕಿಕೊಳ್ಳಿ ಎಂದು ಕಾಮೆಂಟ್ ಮಾಡುವ ಮೂಲಕ ಟೀಕಿಸಿದ್ದಾರೆ.
ಒಟ್ಟಾರೆ ಇಷಾ ಹಾಟ್ ಆ್ಯಂಡ್ ಬೋಲ್ಡ್ ಅವತಾರ ತುಂಡೈಕ್ಳ ಎದೆ ಬಡಿತ ಏರಿಸಿದೆ ಎಂದರೆ ತಪ್ಪಾಗಲಾರದು.