Tag: viral

  • ನಟಿ ಮಹಾಲಕ್ಷ್ಮಿ ಮತ್ತು ನಿರ್ಮಾಪಕ ರವೀಂದರ್ ಜೋಡಿಯ ಹನಿಮೂನ್ ಫೋಟೋ ವೈರಲ್

    ನಟಿ ಮಹಾಲಕ್ಷ್ಮಿ ಮತ್ತು ನಿರ್ಮಾಪಕ ರವೀಂದರ್ ಜೋಡಿಯ ಹನಿಮೂನ್ ಫೋಟೋ ವೈರಲ್

    ಮಿಸ್ ಮ್ಯಾಚ್ ಜೋಡಿ ಎಂದೇ ಟ್ರೋಲ್ ಆಗುತ್ತಿರುವ ನಟಿ ಮಹಾಲಕ್ಷ್ಮಿ (Mahalakshmi) ಹಾಗೂ ನಿರ್ಮಾಪಕ ರವೀಂದರ್ ಜೋಡಿಯ ಹನಿಮೂನ್ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಮದುವೆಯಾಗಿ (Wedding) ಅಚ್ಚರಿ ಮೂಡಿಸಿದ್ದ ಈ ಜೋಡಿ, ಮದುವೆಯಾದ ಮೂರನೇ ದಿನಕ್ಕೆ ಹನಿಮೂನ್ ಟೂರ್ ಮಾಡಿದ್ದಾರೆ. ಹನಿಮೂನ್ ಸ್ಪಾಟ್‍ ನಿಂದಲೇ ಅವರು ಫೋಟೋಗಳನ್ನು (Photo) ಶೇರ್ ಮಾಡಿದ್ದಾರೆ. ಆ ಫೋಟೋ ಸಖತ್ ವೈರಲ್  (Viral) ಕೂಡ ಆಗಿವೆ. ಇದನ್ನೂ ಓದಿ:ಬಾಲಿವುಡ್‌ನಲ್ಲಿ ರಶ್ಮಿಕಾ ಮಂದಣ್ಣಗೆ ಭರ್ಜರಿ ಡಿಮ್ಯಾಂಡ್

    ಮಹಾಲಕ್ಷ್ಮಿ ಮತ್ತು ರವೀಂದರ್ (Ravinder Chandrasekaran) ಜೋಡಿ ಮೇಲೆ ಸಾಕಷ್ಟು ಜೋಕ್ ಗಳು ಹರಿದಾಡುತ್ತಿದ್ದರೂ, ಗಾಸಿಪ್ ಗಳು ಸೃಷ್ಟಿ ಆಗುತ್ತಿದ್ದರೂ ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳದೇ ಹನಿಮೂನ್ ಎಂಜಾಯ್ ಮಾಡುತ್ತಿದೆ ಈ ಜೋಡಿ. ಸದ್ಯ ಈ ದಂಪತಿ ಮಹಾಬಲಿಪುರಂ ಇಂಟರ್ ಕಾಂಟಿನೆಂಟಲ್ ರೆಸಾರ್ಟ್ ನಲ್ಲಿ ತಂಗಿದ್ದು, ಅಲ್ಲಿಂದಲೇ ಅಭಿಮಾನಿಗಳು ಸಂದೇಶ ರವಾನಿಸಿದ್ದಾರೆ. ಮಹಾಲಕ್ಷ್ಮಿ ‘ಲೈಫ್ ಇಸ್ ಬ್ಯೂಟಿಫುಲ್’ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರೆ, ರವೀಂದರ್ ‘ಲೈಫ್‍ ಗೆ ಪ್ರೀತಿ ಬೇಕು, ಈ ಪ್ರೀತಿಗೆ ಮಹಾಲಕ್ಷ್ಮಿ ಇರಬೇಕು’ ಎಂದು ಕಾವ್ಯಾತ್ಮಕವಾಗಿ ಭಾವನೆ ಹೊರ ಹಾಕಿದ್ದಾರೆ.

    ಮಹಾಲಕ್ಷ್ಮಿ ಮತ್ತು ರವೀಂದರ್ ಜೋಡಿ ಹನಿಮೂನ್ (Honeymoon) ಅನ್ನು ಎಂಜಾಯ್ ಮಾಡುತ್ತಿದ್ದರೆ ಈ ನಡುವೆ ಮತ್ತೊಂದು ಸ್ಪೂಟಕ ಸುದ್ದಿ ಹೊರ ಬಂದಿದ್ದು, ಮಹಾಲಕ್ಷ್ಮಿಗೆ ಈ ಮೊದಲೇ ಮದುವೆ ಆಗಿತ್ತು. ಎರಡು ಮಕ್ಕಳು ಕೂಡ ಇವೆ. ಮೊದಲ ಗಂಡನಿಂದ ಡಿವೋರ್ಸ್ ಪಡೆದ ನಂತರ ತಮ್ಮೊಂದಿಗೆ ನಟಿಸುತ್ತಿದ್ದ ಸಹ ನಟ ಈಶ್ವರ್ ಎನ್ನುವವರ ಜತೆ ಅಫೇರ್ ಇಟ್ಟುಕೊಂಡಿದ್ದರು ಎಂದು ಸ್ವತಃ ಈಶ್ವರ್ ಅವರ ಪತ್ನಿಯೇ ಆರೋಪ ಮಾಡಿದ್ದಾರೆ. ನನ್ನ ಗಂಡನ ಜೊತೆ ಮಹಾಲಕ್ಷ್ಮಿ ದಿನ ರಾತ್ರಿಯೂ ವಿಡಿಯೋ ಕಾಲ್ ಮಾಡಿ ಮಾತನಾಡುತ್ತಿದ್ದಳು. ಅದಕ್ಕೆ ಬೇಕಾದ ಸಾಕ್ಷಿ ನನ್ನ ಬಳಿ ಇದೆ ಎಂದು ಈಶ್ವರ್ ಪತ್ನಿ ಜಯಶ್ರೀ ಆರೋಪ ಮಾಡಿದ್ದರು.

    ರವೀಂದರ್ ಚಂದ್ರಶೇಖರನ್ ಜೊತೆ ಮಹಾಲಕ್ಷ್ಮಿ ಮದುವೆ ಆಗುತ್ತಿದ್ದಂತೆಯೇ ಈ ವಿಷಯ ತಮಿಳು ಮಾಧ್ಯಮದಲ್ಲಿ ಮತ್ತೆ ಪ್ರಮುಖ ಸುದ್ದಿಯಾಗಿದೆ. ಮಹಾಲಕ್ಷ್ಮಿ ಮತ್ತು ಈಶ್ವರ್ ಲವ್ವಿ ಡವ್ವಿ ವಿಚಾರ ರವೀಂದರ್ ಅವರಿಗೂ ಗೊತ್ತಿತ್ತು ಎಂದು ವರದಿಯಾಗಿದೆ. ಎಲ್ಲ ಗೊತ್ತಿದ್ದರೂ ಮಹಾಲಕ್ಷ್ಮಿಯನ್ನು ರವೀಂದರ್ ಮದುವೆ ಆಗಿದ್ದಾರೆ ಎಂದು ವರದಿಗಳಲ್ಲಿ ಉಲ್ಲೇಖಿಸಲಾಗುತ್ತಿದೆ. ಮದುವೆ ಅವರ ಸ್ವಂತ ವಿಚಾರ. ಅಷ್ಟಕ್ಕೂ ಇಬ್ಬರೂ ಕಾನೂನು ಬದ್ಧವಾಗಿಯೇ ಮದುವೆಯಾಗಿದ್ದಾರೆ. ಆದರೂ, ಜಯಶ್ರೀ ಆರೋಪ ಇದೀಗ ಮುನ್ನೆಲೆಗೆ ಬಂದಿದೆ.

    Live Tv
    [brid partner=56869869 player=32851 video=960834 autoplay=true]

  • ಪ್ಯಾಂಟ್ ಜೇಬಲ್ಲಿ ಗ್ಲಾಸ್ ಇಟ್ಕೊಂಡೇ ಪಾರ್ಟಿಗೆ ಬಂದ ನಟ ಸಲ್ಮಾನ್ ಖಾನ್

    ಪ್ಯಾಂಟ್ ಜೇಬಲ್ಲಿ ಗ್ಲಾಸ್ ಇಟ್ಕೊಂಡೇ ಪಾರ್ಟಿಗೆ ಬಂದ ನಟ ಸಲ್ಮಾನ್ ಖಾನ್

    ಬಾಲಿವುಡ್ ಖ್ಯಾತ ನಟ ಸಲ್ಮಾನ್ ಖಾನ್ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಾರ್ಟಿ ಮೂಡ್ ನಲ್ಲಿರುವ ಸಲ್ಮಾನ್ ಖಾನ್ ತಮ್ಮ ಐಷಾರಾಮಿ ಕಾರು ಹತ್ತಿಕೊಂಡು ನಿರ್ಮಾಪಕ ಮುರಾದ್ ಖೇತನಿ ಅವರ ಹುಟ್ಟು ಹಬ್ಬದ ಪಾರ್ಟಿಗೆ ಆಗಮಿಸುತ್ತಾರೆ. ಕಾರಿನಿಂದ ಕೆಳಗೆ ಇಳಿಯುತ್ತಿದ್ದಂತೆಯೇ ಅವರನ್ನು ಕ್ಯಾಮೆರಾಗಳು ಮುತ್ತಿಕೊಳ್ಳುತ್ತವೆ. ತಕ್ಷಣವೇ ತಮ್ಮ ಕೈಯಲ್ಲಿ ಗ್ಲಾಸ್ ಇದೆ ಎಂದು ನೆನಪಾಗಿದೆ ಅನ್ನು ಪ್ಯಾಂಟ್ ಜೇಬಿಗೆ ಇಳಿಸುತ್ತಾರೆ.

    ಕಾರಿನಲ್ಲಿ ಬರುವಾಗಲೇ ಗ್ಲಾಸ್ ಹಿಡಿದುಕೊಂಡು ಬಂದಿದ್ದ ಸಲ್ಮಾನ್, ಗ್ಲಾಸ್ ಅರ್ಧ ತುಂಬಿದ್ದರೂ ಕ್ಯಾಮೆರಾಗಳು ಕಾಣುತ್ತಿದ್ದಂತೆಯೇ ಅದನ್ನು ಜೇಬಿನಲ್ಲಿ ಇಟ್ಟುಕೊಂಡು ಏನೂ ನಡೆದೇ ಇಲ್ಲ ಎನ್ನುವಂತೆ ಕೂಲ್ ಆಗಿ ನಡೆದುಕೊಂಡು ಹೋಗುತ್ತಾರೆ. ಈ ವಿಡಿಯೋವನ್ನು ಹಲವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಆ ಗ್ಲಾಸ್ ನಲ್ಲಿ ಇರುವುದು ಏನು ಎನ್ನುವ ಕಾಮೆಂಟ್ ಅನ್ನು ಮಾಡುತ್ತಿದ್ದಾರೆ. ದೊಡ್ಡ ನಟ ಗ್ಲಾಸ್ ಹಿಡಿದುಕೊಂಡು ಪಾರ್ಟಿಗೆ ಬಂದಿದ್ದು ಯಾಕೆ? ಎಂದು ಹಲವರು ಪ್ರಶ್ನಿಸಿದ್ದಾರೆ.

    ಸಲ್ಮಾನ್ ಜೇಬಿನಲ್ಲಿ ಇಟ್ಟುಕೊಂಡಿದ್ದ ಗ್ಲಾಸ್ ನಲ್ಲಿ ಮದ್ಯ ಇತ್ತಾ? ಅಥವಾ ಅವರು ನೀರು ಕುಡಿಯುತ್ತಿದ್ದರಾ ಎನ್ನುವುದು ಅವರಿಗಷ್ಟೇ ಗೊತ್ತು. ಆದರೆ, ಕೆಲವರಂತೂ ವಿಪರೀತ ಕಲ್ಪನೆ ಮಾಡಿಕೊಂಡು ಆ ವಿಡಿಯೋಗೆ ಕಾಮೆಂಟ್ ಬರೆಯುತ್ತಿದ್ದಾರೆ. ಮನೆಯಿಂದಲೇ ಬರುವಾಗಲೇ ಕಾರಿನಲ್ಲಿ ಸಲ್ಮಾನ್ ಕುಡಿಯುತ್ತಾ ಬಂದಿದ್ದಾರೆ ಎಂದು ಕೆಲವರು ಬರೆದಿದ್ದರೆ, ಫೆವರೆಟ್ ಗ್ಲಾಸ್ ನಲ್ಲಿ ಕುಡಿಯಬೇಕು ಎನ್ನುವ ಕಾರಣಕ್ಕಾಗಿ ತಮ್ಮದೇ ಗ್ಲಾಸ್ ತಗೆದುಕೊಂಡು ಹೋಗುತ್ತಾರಾ ಎಂದು ಕೆಲವರು ಬರೆದಿದ್ದಾರೆ. ಒಟ್ಟಿನಲ್ಲಿ ಪ್ಯಾಂಟ್ ನಲ್ಲಿ ಗ್ಲಾಸ್ ಇಟ್ಟುಕೊಳ್ಳುವುದು ಭಾರೀ ಚರ್ಚೆಗೆ ಅಂತೂ ಕಾರಣವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಕಾಫಿನಾಡು ಚಂದುಗೆ ತವರೂರಿನಲ್ಲೇ ನಿಂದನೆ: ನಮ್ಮಿಂದ ನೀನು ಹೋಗಲೋ ಎಂದ ಅಭಿಮಾನಿ

    ಕಾಫಿನಾಡು ಚಂದುಗೆ ತವರೂರಿನಲ್ಲೇ ನಿಂದನೆ: ನಮ್ಮಿಂದ ನೀನು ಹೋಗಲೋ ಎಂದ ಅಭಿಮಾನಿ

    ದಿನದಿಂದ ದಿನಕ್ಕೆ ಕಾಫಿನಾಡು ಚಂದು ಜನಪ್ರಿಯತೆ ಹೆಚ್ಚಾಗುತ್ತಿದೆ. ನಾನು ಪುನೀತ್ ಅಣ್ಣ, ಶಿವಣ್ಣನ ಅಭಿಮಾನಿ ಎಂದು ಹೇಳುತ್ತಲೇ ಸೋಷಿಯಲ್ ಮೀಡಿಯಾದಲ್ಲಿ ಚಂದು ಟ್ರೆಂಡ್ ಸೆಟ್ ಮಾಡುತ್ತಿದ್ದಾರೆ. ಅಭಿಮಾನಿಗಳ ಸಂಖ್ಯೆಯನ್ನೂ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಮೊನ್ನೆಯಷ್ಟೇ ತಮ್ಮ ನೆಚ್ಚಿನ ನಟ ಶಿವರಾಜ್ ಕುಮಾರ ಅವರನ್ನು ಭೇಟಿ ಮಾಡಿ ಖುಷಿಯಲ್ಲಿದ್ದರು. ಆ ಖುಷಿ ತುಂಬಾ ದಿನ ಉಳಿದಿಲ್ಲ.

    ಕಾಫಿನಾಡು ಚಂದು ಕೇವಲ ಬರ್ತಡೇ ಸಾಂಗ್ ಮೂಲಕ ಹೊಟ್ಟೆ ತುಂಬಿಸಿಕೊಳ್ಳುತ್ತಿಲ್ಲ. ಅವರ ವೃತ್ತಿ ಆಟೋ ಓಡಿಸುವುದು. ನಿತ್ಯವೂ ಬರೀ ಹಾಡುಗಳನ್ನೇ ಹಾಡುತ್ತಾ ಕೂತರೆ ಹೊಟ್ಟೆ ತುಂಬಬೇಕಲ್ಲ. ಹಾಗಾಗಿ ಇಂತಿಷ್ಟು ವೇಳೆಯನ್ನು ಅವರು ಆಟೋ ಓಡಿಸುವುದಕ್ಕಾಗಿ ಮೀಸಲಿಟ್ಟಿದ್ದಾರೆ. ಈಗ ಅದೇ ಅವರ ನಿಂದನೆಗೆ ಕಾರಣವಾಗಿದೆ. ಆಟೋ ಓಡಿಸುವ ವೇಳೆ ಅಹಿತಕರ ಘಟನೆಯೊಂದು ನಡೆದಿದ್ದು, ಅದೂ ಚಂದು ಅವರ ತವರೂರಿನಲ್ಲೇ ಎನ್ನುವುದು ವಿಷಾದನೀಯ. ಇದನ್ನೂ ಓದಿ:ಜಯಶ್ರೀ ಜೊತೆ ಸೋನು ಶ್ರೀನಿವಾಸ್ ಗೌಡ ಕಿರಿಕ್

    ಚಂದು ಆಟೋ ಓಡಿಸುತ್ತಿದ್ದಾಗ ವ್ಯಕ್ತಿಯೊಬ್ಬ ಹಾಡೊಂದನ್ನು ಮಾಡಿಕೊಡುವಂತೆ ಕೇಳುತ್ತಾರೆ. ಅದಕ್ಕೆ ಚಂದು ಒಪ್ಪುವದಿಲ್ಲ. ನಾನೀಗ ಆಟೋ ಓಡಿಸುತ್ತಿದ್ದೇನೆ. ಸಂಜೆ ನಂತರ ಬನ್ನಿ ಮಾಡಿಕೊಡುವೆ ಎಂದು ಕೇಳಿಕೊಳ್ಳುತ್ತಾರೆ. ಆದರೆ, ಆ ವ್ಯಕ್ತಿ ಅದನ್ನು ಒಪ್ಪುವುದಿಲ್ಲ. ಈಗಲೇ ಮಾಡಿಕೊಡುವಂತೆ ಒತ್ತಡ ಹಾಕುತ್ತಾರೆ. ಅದಕ್ಕೆ ಜಗ್ಗದ ಚಂದು ಅಲ್ಲಿಂದ ಹೊರಡಲು ಯತ್ನಿಸುತ್ತಾರೆ. ಆಗ ಆ ವ್ಯಕ್ತಿಯು ‘ನೀನು ಇದೀಗ ಬದುಕ್ತಿರೋದೇ ನಮ್ಮಂಥವರಿಂದ. ಹೋಗಲೋ ಎಂದು ನಿಂದಿಸುತ್ತಾರೆ. ಆ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    Live Tv
    [brid partner=56869869 player=32851 video=960834 autoplay=true]

  • ಸಾವಿನ ದವಡೆಯಿಂದ ಹದ್ದುವನ್ನು ಕಾಪಾಡಿದ ಮೀನುಗಾರ

    ಸಾವಿನ ದವಡೆಯಿಂದ ಹದ್ದುವನ್ನು ಕಾಪಾಡಿದ ಮೀನುಗಾರ

    ಒಟ್ಟಾವಾ: ಯಾರಿಗಾದರೂ ಸಹಾಯ ಮಾಡಬೇಕು ಎಂದು ಅನಿಸಿದ್ರೆ ಮನುಷ್ಯ ನಾನಾ ರೀತಿಯ ಉಪಾಯಗಳನ್ನು ಮಾಡುತ್ತಾನೆ. ಅದಕ್ಕೆ ಸಾಮಾನ್ಯವಾಗಿ ನಾವು ಯಾರಾದರೂ ತುಂಬಾ ಅವಶ್ಯಕತೆ ಇದ್ದಾಗ ಸಹಾಯ ಮಾಡಿಲ್ಲವೆಂದರೆ ಆತನಿಗೆ ಮಾನವೀಯತೆಯಿಲ್ಲ ಎಂದು ಕರೆಯುತ್ತೇವೆ. ಅದೇ ರೀತಿ ಇಲ್ಲೊಬ್ಬ ಮೀನುಗಾರ ಆಕ್ಟೋಪಸ್‍ನ ಹಿಡಿತದಲ್ಲಿದ್ದ ಹದ್ದುವನ್ನು ಹೇಗೆ ಕಾಪಾಡುತ್ತಾನೆ ಎಂಬ ವೀಡಿಯೋ ಅಂತರ್ಜಾಲದಲ್ಲಿ ಹರಿದಾಡುತ್ತಿದೆ.

    ಕೆನಡಾದ ವ್ಯಾಂಕೋವರ್‌ನಲ್ಲಿ ಮೀನುಗಾರರ ಗುಂಪು ವೀಡಿಯೋವನ್ನು ಸೆರೆಹಿಡಿದಿದೆ. ಹದ್ದುವನ್ನು ಆಕ್ಟೋಪಸ್ ಪೂರ್ತಿಯಾಗಿ ಆಕ್ರಮಿಸಿಕೊಂಡಿದ್ದು, ತನ್ನನ್ನು ಬಿಡಿಸಿಕೊಳ್ಳಲು ಹದ್ದು ಹೆಣಗಾಡುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದು. ಮೀನುಗಾರರು ಮನೆಗೆ ಹೋಗುತ್ತಿದ್ದಾಗ ಹದ್ದಿನ ಕೂಗು ಕೇಳಿಸಿಕೊಂಡಿದ್ದು, ಸಹಾಯಕ್ಕೆ ಮುಂದಾಗಿದ್ದಾರೆ. ಈ ವೇಳೆ ತಮ್ಮ ಬಳಿ ಇದ್ದ ಕುಕ್ಕೆಯ ಸಹಾಯದಿಂದ ಮೀನುಗಾರರು ಹದ್ದುವನ್ನು ಬಚಾವ್ ಮಾಡಿದ್ದಾರೆ. ಇದನ್ನೂ ಓದಿ:  ಝವಾಹಿರಿಗೆ ಆಶ್ರಯ ನೀಡುವ ಮೂಲಕ ತಾಲಿಬಾನ್ ದೋಹಾ ಒಪ್ಪಂದ ಉಲ್ಲಂಘಿಸಿದೆ: ಆಂಟನಿ ಬ್ಲಿಂಕೆನ್

    ವೀಡಿಯೋ ಮುಗಿಯುತ್ತಿದ್ದಂತೆ, ಹದ್ದು ಮರದ ಬುಡದಲ್ಲಿ ಕುಳಿತಿರುವುದು ಕಂಡುಬರುತ್ತದೆ. ನಂತರ ಆಕ್ಟೋಪಸ್ ನೀರಿಗೆ ಬಿಡಲಾಗುತ್ತೆ. ವೀಡಿಯೋ ನೋಡಿದ ನೆಟ್ಟಿಗರು ಖುಷ್ ಆಗಿ ‘ಒಳ್ಳೆಯ ಕೆಲಸ’ ಎಂದು ಕಾಮೆಂಟ್ ಮಾಡಿದ್ದಾರೆ. ಇದು ಇದೇ ರೀತಿ ಮುಂದುವರೆಯಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಈ ವೀಡಿಯೋ ಹಲವು ವರ್ಷಗಳ ಹಿಂದೆ ಸೆರೆಯಿಡಿದಿದ್ದು, ಈಗ ವೈರಲ್ ಆಗಿದೆ.

    Live Tv
    [brid partner=56869869 player=32851 video=960834 autoplay=true]

  • ರೆಡ್ ಡ್ರೆಸ್ ನಲ್ಲಿ ಮಿರಮಿರ ಮಿಂಚಿದ ರಶ್ಮಿಕಾ ಮಂದಣ್ಣ

    ರೆಡ್ ಡ್ರೆಸ್ ನಲ್ಲಿ ಮಿರಮಿರ ಮಿಂಚಿದ ರಶ್ಮಿಕಾ ಮಂದಣ್ಣ

    ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಎಲ್ಲಿರುತ್ತಾರೋ ಅಲ್ಲಿ ಕ್ಯಾಮೆರಾಗಳಿಗೆ ಬರವಿರುವುದಿಲ್ಲ. ಅದರಲ್ಲೂ ಅವರು ಎಲ್ಲಿಗೆ ಹೋದರೂ, ಏನೇ ಮಾಡಿದರೂ ಸುದ್ದಿಗೆ ಬರುತ್ತಾರೆ. ಪುಷ್ಪಾ ಸಿನಿಮಾದ ನಂತರ ರಶ್ಮಿಕಾ ಮಂದಣ್ಣ ಕ್ಯಾಮೆರಾಮನ್ ಪಾಲಿನ ದೇವತೆಯಂತಾಗಿದ್ದಾರೆ. ಅಷ್ಟರ ಮಟ್ಟಿಗೆ ಕ್ಯಾಮೆರಾಗಳನ್ನು ಅವರನ್ನು ಆಬ್ಸರ್ ಮಾಡುತ್ತವೆ.

    ನಿನ್ನೆ ಮುಂಬೈನಲ್ಲಿ ನಡೆದ ಫ್ಯಾಶನ್ ಶೋನಲ್ಲಿ ಭಾಗಿಯಾಗಿದ್ದ ರಶ್ಮಿಕಾ ಕೆಂಪು ಬಣ್ಣದ ತುಂಡುಡುಗೆಯಲ್ಲಿ ಮಿರಮಿರ ಮಿಂಚುತ್ತಿದ್ದರು. ಇವರು ತೊಟ್ಟ ಕಾಸ್ಟ್ಯೂಮ್ ನಿಂದಾಗಿ ಇಡೀ ಕಾರ್ಯಕ್ರಮವೇ ರಂಗೇರಿತ್ತು. ಅಷ್ಟರ ಮಟ್ಟಿಗೆ ಕಣ್ಣಿಗೆ ಕಕ್ಕುತ್ತಿದ್ದರಂತೆ ರಶ್ಮಿಕಾ. ಶೋ ಮುಗಿದ ತಕ್ಷಣ ನೆರದಿದ್ದ ಫೋಟೋಗ್ರಾಫರ್ ಕೂಡ ರಶ್ಮಿಕಾ ಜೊತೆ ಫೋಟೋ ತಗೆಸಿಕೊಂಡಿದ್ದಾರೆ ಎನ್ನುವುದು ಲೆಟೆಸ್ಟ್ ಸುದ್ದಿ. ಇದನ್ನೂ ಓದಿ : ‘ಮದುವೆನೂ ಇಲ್ಲ, ರಿಂಗೂ ಇಲ್ಲ’ ಲಲಿತ್ ಮೋದಿಗೆ ತಿವಿದ ಸುಶ್ಮಿತಾ ಸೇನ್

    ಕನ್ನಡ ಸಿನಿಮಾ ರಂಗದಿಂದ ಬಣ್ಣದ ಜಗತ್ತಿಗೆ ರಶ್ಮಿಕಾ ಕಾಲಿಟ್ಟರೂ, ಇದೀಗ ಅವರು ಕೇವಲ ಸ್ಯಾಂಡಲ್ ವುಡ್ ನಟಿಯಾಗಿ ಉಳಿದಿಕೊಂಡಿಲ್ಲ. ದಕ್ಷಿಣದ ತಾರೆಯ ಪಟ್ಟವನ್ನೂ ದಾಟಿ ಬಾಲಿವುಡ್ ನಟಿಯಾಗಿ ಬೆಳೆಯುತ್ತಿದ್ದಾರೆ. ಇದೀಗ ಅವರು ಬಾಲಿವುಡ್ ನಲ್ಲಿ ಒಟ್ಟು ಮೂರು ಚಿತ್ರಗಳನ್ನು ಒಪ್ಪಿಕೊಂಡಿದ್ದಾರಂತೆ. ಸದ್ಯದಲ್ಲೇ ಅವರು ಕರಣ್ ಜೋಹಾರ್ ಸಿನಿಮಾಗೂ ಸಹಿ ಮಾಡಲಿದ್ದಾರಂತೆ.

    ತಮಿಳು ಮತ್ತು ತೆಲುಗು ಸಿನಿಮಾ ರಂಗಕ್ಕೆ ಹೋದ ನಂತರ ಮತ್ತೆ ಅವರು ಕನ್ನಡ ಸಿನಿಮಾ ರಂಗದ ಬಗ್ಗೆ ಯೋಚನೆ ಕೂಡ ಮಾಡಿಲ್ಲ ಎನ್ನುವ ಆರೋಪವಿದೆ. ಕನ್ನಡ ಸಿನಿಮಾಗಳನ್ನು ಅವರು ಒಪ್ಪುವುದಿಲ್ಲ ಎಂದೂ ಹೇಳಲಾಗುತ್ತಿದೆ. ಆದರೆ, ಈವರೆಗೂ ಅವರನ್ನು ಯಾರು ಅಪ್ರೋಚ್ ಮಾಡಿದ್ದಾರೆ, ಯಾರಿಗೆ ಅವರು ಕಾಲ್ ಶೀಟ್ ಕೊಟ್ಟಿಲ್ಲ ಅನ್ನುವುದು ಮಾತ್ರ ಬಹಿರಂಗವಾಗಿಲ್ಲ.

    Live Tv
    [brid partner=56869869 player=32851 video=960834 autoplay=true]

  • ಪುನೀತ್ ರಾಜ್ ಕುಮಾರ್ ‘ಕಾಣೆಯಾಗಿದ್ದಾರೆ’ ಪೋಸ್ಟರ್ ವೈರಲ್

    ಪುನೀತ್ ರಾಜ್ ಕುಮಾರ್ ‘ಕಾಣೆಯಾಗಿದ್ದಾರೆ’ ಪೋಸ್ಟರ್ ವೈರಲ್

    ಪುನೀತ್ ರಾಜ್ ಕುಮಾರ್ ನಿಧನವನ್ನು ಇನ್ನೂ ಅವರ ಅಭಿಮಾನಿಗಳು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಪ್ಪು ಅಗಲಿ ಎಂಟು ತಿಂಗಳು ಕಳೆದರೂ, ಅಭಿಮಾನಿಗಳು ಇನ್ನೂ ಅವರನ್ನು ನಾನಾ ರೀತಿಯಲ್ಲಿ ನೆನಪಿಸಿಕೊಳ್ಳುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ‘ಕಾಣೆಯಾಗಿದ್ದಾರೆ’ ಎನ್ನುವ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಪ್ಪು ಅಭಿಮಾನಿಗಳು ತಮ್ಮ ನೆಚ್ಚಿನ ನಟ ಕಾಣೆಯಾಗಿದ್ದಾರೆ ಹುಡುಕಿಕೊಟ್ಟವರಿಗೆ ಕೇಳಿದ್ದನ್ನು ಕೊಡಲಾಗುವುದು ಎಂದು ಭಿತ್ತಿ ಪತ್ರವನ್ನು ಅಂಟಿಸುತ್ತಿದ್ದಾರೆ.

    ಹುಡುಗನೊಬ್ಬ ಭಿತ್ತಿ ಪತ್ರವನ್ನು ಗೋಡೆಗೆ ಅಂಟಿಸಿ ಕಾಣೆಯಾಗಿರುವ ತಮ್ಮ ನೆಚ್ಚಿನ ನಟನನ್ನು ಹುಡುಕಿಕೊಡಿ ಎಂದು ಕೇಳುವ ವಿಡಿಯೋ ಕೂಡ ವೈರಲ್ ಆಗಿದೆ. ಹೀಗೆ ಅಪ್ಪು ಅವರನ್ನು ಹುಡುಕುವ ಪ್ರಯತ್ನವನ್ನು ಇನ್ನೂ ಅಭಿಮಾನಿಗಳು ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಅಪ್ಪು ನಮ್ಮಿಂದ ಅಗಲಿಲ್ಲ, ಅಗಲುವುದೂ ಇಲ್ಲ ಎನ್ನುವ ಸಂದೇಶವನ್ನು ಸಾರಿದ್ದಾರೆ. ಜೊತೆಗಿರದ ಜೀವ ಸದಾ ಜೀವಂತ ಎನ್ನುವುದನ್ನು ಮತ್ತೆ ಮತ್ತೆ ಹೇಳುತ್ತಿದ್ದಾರೆ. ಇದನ್ನೂ ಓದಿ : Breaking- ಫಹಾದ್ ಫಾಸಿಲ್ ಗಾಗಿ ಸಿನಿಮಾ ಮಾಡಲು ಮತ್ತೆ ತಮಿಳಿಗೆ ಹೊರಟ ಪವನ್ ಕುಮಾರ್

    ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ಅಭಿಮಾನಿಗಳು ಸಾಕಷ್ಟು ಕೆಲಸ ಮಾಡುತ್ತಿದ್ದಾರೆ. ನಿತ್ಯವೂ ಪುನೀತ್ ಪುಣ್ಯಭೂಮಿಗೆ ಸಾವಿರಾರು ಜನರು ಬರುತ್ತಿದ್ದಾರೆ. ಅಲ್ಲದೇ, ಪುನೀತ್ ಅವರ ಹೆಸರಿನಲ್ಲಿ ಅಲ್ಲಲ್ಲಿ ನಿತ್ಯವೂ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದಾರೆ. ಅಲ್ಲದೇ, ತಮ್ಮ ಊರಿಗೆ, ಬೀದಿಗೆ ಪುನೀತ್ ರಾಜ್ ಕುಮಾರ್ ಹೆಸರನ್ನೂ ಇಟ್ಟಿದ್ದಾರೆ. ಹೀಗೆ ಪುನೀತ್ ಅವರನ್ನು ತಮಗಿಷ್ಟ ಬಂದಂತೆ ಆರಾಧಿಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬೆಳಗಾವಿಯ ಸುವರ್ಣಸೌಧ ಎದುರು ಶಾವಿಗೆ ಒಣಹಾಕಿದ ಫೋಟೋ ವೈರಲ್

    ಬೆಳಗಾವಿಯ ಸುವರ್ಣಸೌಧ ಎದುರು ಶಾವಿಗೆ ಒಣಹಾಕಿದ ಫೋಟೋ ವೈರಲ್

    ಬೆಳಗಾವಿ: ಕುಂದಾನಗರಿಯ ಸುವರ್ಣ ಸೌಧದಲ್ಲಿ ಬಿಗಿ ಪೊಲೀಸ್ ಭದ್ರತೆಯ ನಡುವೆಯೂ ಶಾವಿಗೆ ಒಣಹಾಕಿರುವ ಫೋಟೋ ವೈರಲ್ ಆಗಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು, ಹಪ್ಪಳ, ಸಂಡಿಗೆ, ಶಾವಿಗೆ ಒಣಗಿಸೋಕೆ ಸುವರ್ಣ ಸೌಧ ಬಳಕೆಯಾಗುತ್ತಿದೆಯೇ ಎಂದು ಅಸಮಾಧಾನವ್ಯಕ್ತವಾಗಿದೆ.

    ಬೆಳಗಾವಿ ತಾಲೂಕಿನ ಹಲಗಾ ಮತ್ತು ಬಸ್ತವಾಡ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಪೂರಕವಾಗಲೆಂಬ ಕಾರಣಕ್ಕೆ 400ಕ್ಕೂ ಅಧಿಕ ಕೋಟಿ ರೂಪಾಯಿ ಖರ್ಚು ಮಾಡಿ ಸುವರ್ಣ ಸೌಧ ನಿರ್ಮಾಣ ಮಾಡಲಾಗಿದೆ. ಉತ್ತರ ಕರ್ನಾಟಕದ ಜನರ ಸಮಸ್ಯೆಗಳಿಗೆ ಪರಿಹಾರ ಕೊಡಬೇಕು ಅಂತಾ ಸುವರ್ಣ ಸೌಧವನ್ನು ಕಟ್ಟಲಾಗಿದೆ. ಆದರೆ ಇಲ್ಲಿನ ಜನರ ಸಮಸ್ಯೆಗಳಿಗೆ ಪರಿಹಾರ ನೀಡುವ ಬದಲಾಗಿ ಶಾವಿಗೆ, ಹಪ್ಪಳ, ಸಂಡಿಗೆ ಒಣಗಿಸೋಕೆ ಈ ಸುವರ್ಣ ಸೌಧ ಬಳಕೆಯಾಗುತ್ತಿದೆ ಎಂಬ ಪ್ರಶ್ನೆ ಎದ್ದಿದೆ. ಇದನ್ನೂ ಓದಿ: ಹಿಂದೂಗಳ ಬಗ್ಗೆ ಅವಹೇಳನಕಾರಿ ಭಾಷಣ – ಪರಿಸ್ಥಿತಿ ತಿಳಿಗೊಳಿಸಿದ ಪೊಲೀಸ್ ಅಧಿಕಾರಿಗಳು

    ಈ ಕುರಿತಂತೆ ಬೆಳಗಾವಿಯ ನಾಗರಿಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಾಸ್ಯಾಸ್ಪದ ರೀತಿಯಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದು, ಸರ್ಕಾರ ಮತ್ತು ಜಿಲ್ಲಾಡಳಿತಗಳ ದಿವ್ಯ ನಿರ್ಲಕ್ಷಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಇದೀಗ ಈ ಫೋಟೊಗಳು ಸಾಕಷ್ಟು ವೈರಲ್ ಆಗಿವೆ. ಇನ್ನೂ ಇದರ ನಿರ್ವಣೆಯ ಹೊಣೆ ಹೊತ್ತಿರುವ ಪಿಡಬ್ಲ್ಯೂಡಿ ಅಧಿಕಾರಿಗಳು ಸುವರ್ಣ ಸೌಧದ ಕಡೆಗೆ ತಿರುಗಿ ನೋಡಿಲ್ಲ. ಇನ್ನು ಈ ಕಟ್ಟಡದ ಭದ್ರತೆಯ ಜವಾಬ್ದಾರಿಯನ್ನು ಹೊತ್ತಿರುವ ಕೈಗಾರಿಕಾ ಭದ್ರತಾ ಪೊಲೀಸ್ ಸರಿಯಾಗಿ ಕರ್ತವ್ಯ ಮಾಡದ ಹಿನ್ನೆಲೆ ಈ ಅವಾಂತರಕ್ಕೆ ಕಾರಣವಾಗಿದೆ. ಒಟ್ಟಾರೆ ಜನರ ಸಮಸ್ಯೆಗಳಿಗೆ ಧ್ವನಿಯಾಗುವ ಸುವರ್ಣ ಸೌಧದ ಮುಂದೆ ಶಾವಿಗೆ ಹಾಕಿರೋದು ಎಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿದೆ.

  • ತಾಯಿ ಹೀರಾಬೆನ್ ಸ್ಕೆಚ್‍ನ್ನು ಮೋದಿಗೆ ಉಡುಗೊರೆಯಾಗಿ ನೀಡಿದ ಮಹಿಳಾ ಅಭಿಮಾನಿ

    ತಾಯಿ ಹೀರಾಬೆನ್ ಸ್ಕೆಚ್‍ನ್ನು ಮೋದಿಗೆ ಉಡುಗೊರೆಯಾಗಿ ನೀಡಿದ ಮಹಿಳಾ ಅಭಿಮಾನಿ

    ಶಿಮ್ಲಾ: ಗರೀಬ್ ಕಲ್ಯಾಣ್ ಸಮ್ಮೇಳನವನ್ನು ಉದ್ದೇಶಿಸಿ ಪ್ರಧಾನಿ ಮೋದಿಯವರು ಮಂಗಳವಾರ ಹಿಮಾಚಲ ಪ್ರದೇಶಕ್ಕೆ ಬಂದಿಳಿದಿದ್ದು, ಅವರನ್ನು ಸ್ವಾಗತಿಸಲು ನಗರದ ಮಾಲ್ ರಸ್ತೆಯ ಬೀದಿಗಳಲ್ಲಿ ಅಪಾರ ಬೆಂಬಲಿಗರು ಸಾಲುಗಟ್ಟಿ ನಿಂತಿದ್ದರು. ಈ ವೇಳೆ ಜನಸಮೂಹದ ನಡುವೆ ಒಬ್ಬ ಮಹಿಳೆ ಹೀರಾಬೆನ್ ಮೋದಿಯವರ ಪೆನ್ಸಿಲ್ ಸ್ಕೆಚ್ ಅನ್ನು ಪ್ರಧಾನಿಗೆ ಉಡುಗೊರೆಯಾಗಿ ನೀಡಿದ್ದಾರೆ.

    ನಂತರದಲ್ಲಿ ಮಹಿಳೆಯು ಪ್ರಧಾನಿಯವರ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆದಿದ್ದಾರೆ. ಅವರು ತಮ್ಮ ಬೆಂಬಲಿಗರಿಂದ ಈ ಅದ್ಭುತ ಉಡುಗೊರೆಯನ್ನು ಸ್ವೀಕರಿಸಲು ಸಂಪೂರ್ಣವಾಗಿ ಉತ್ಸುಕರಾಗಿದ್ದರು. ಅಷ್ಟೇ ಅಲ್ಲದೇ ಮಹಿಳೆಯು ಪ್ರಧಾನಿಯವರ ಚಿತ್ರವನ್ನು ಸಹ ಚಿತ್ರಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ವೇಳೆ ಅವರು ಮಹಿಳೆಯೊಂದಿಗೆ ಸಂಭಾಷಣೆ ನಡೆಸುತ್ತಿರುವ ಸಂದರ್ಭವು ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ವೈರಲ್ ಆಗುತ್ತಿದೆ. ಇದನ್ನೂ ಓದಿ: ವಿದ್ಯಾಭ್ಯಾಸ ಕೊಡಿಸಲು ಆತ್ಮಹತ್ಯೆಗೆ ಶರಣಾಗಿದ್ದ ರೈತನ ಮಗಳು ಯುಪಿಎಸ್‍ಸಿಯಲ್ಲಿ ಟಾಪರ್ 

    ವೈರಲ್ ಆಗಿರುವ ವೀಡಿಯೊದಲ್ಲಿ, ಪ್ರಧಾನಿ ಅವರು ತಮ್ಮ ಬೆಂಬಲಿಗರಿಂದ ತಮ್ಮ ತಾಯಿಯ ಸ್ಕೆಚ್‍ನ್ನು ಉಡುಗೊರೆಯಾಗಿ ಸ್ವೀಕರಿಸುತ್ತಿದ್ದಾರೆ. ಈ ಅಮೂಲ್ಯವಾದ ಪೋಟೋವನ್ನು ಉಡುಗೊರೆಯಾಗಿ ನೀಡಿದ ಮಹಿಳೆಯೊಂದಿಗೆ ಸಂಭಾಷಣೆಯನ್ನು ನಡೆಸಿದ ಅವರು, ಇದನ್ನು ನೀವೇ ತಯಾರಿಸಿದ್ದೀರಾ? ಇದನ್ನು ಮಾಡಲು ನೀವು ಎಷ್ಟು ಸಮಯ ತೆಗೆದುಕೊಂಡಿದ್ದೀರಿ ಎಂದು ಕೇಳಿದ್ದಾರೆ. ಇದನ್ನೂ ಓದಿ:  ಕಪಿಲೇಶ್ವರ ಮಂದಿರ ಕೆಡವಿ ಏನು ಕಟ್ಟಿದ್ದಾರೆ ಎಂಬ ಬಗ್ಗೆಯೂ ಸರ್ವೇ ಆಗಲಿ: ಲತೀಫ್‍ಖಾನ್ ಹೊಸ ಬಾಂಬ್ 

    ಗರೀಬ್ ಕಲ್ಯಾಣ್ ಸಮ್ಮೇಳನವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಂಗಳವಾರ ಬೆಳಗ್ಗೆ ಶಿಮ್ಲಾ ತಲುಪಿದ್ದಾರೆ. ಅವರು 16 ಕೇಂದ್ರ ಪ್ರಾಯೋಜಿತ ಕಲ್ಯಾಣ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಮೋದಿ ಸರ್ಕಾರದ ಎಂಟು ವರ್ಷಗಳ ವಾರ್ಷಿಕೋತ್ಸವದ ಅಂಗವಾಗಿ ದೇಶಾದ್ಯಂತ ಇದೇ ರೀತಿಯ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.

  • ಬಿಜೆಪಿ ಮುಖಂಡ ಆತ್ಮಹತ್ಯೆ ಪ್ರಕರಣ – ಅನಂತರಾಜು ಜೊತೆಗಿನ ಖಾಸಗಿ ವೀಡಿಯೋ ಇದೆ ಎಂಬ ಗೆಳತಿ ಚಾಟಿಂಗ್ ವೈರಲ್

    ಬಿಜೆಪಿ ಮುಖಂಡ ಆತ್ಮಹತ್ಯೆ ಪ್ರಕರಣ – ಅನಂತರಾಜು ಜೊತೆಗಿನ ಖಾಸಗಿ ವೀಡಿಯೋ ಇದೆ ಎಂಬ ಗೆಳತಿ ಚಾಟಿಂಗ್ ವೈರಲ್

    ಬೆಂಗಳೂರು: ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆಯ ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿದ್ದ ಗೆಳತಿಗೆ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.

    ಪ್ರಕರಣದ ಮೂವರು ಆರೋಪಿಗಳಿಗೆ ಜಾಮೀನು ದೊರಕ್ಕಿದ್ದು, ಅನಂತರಾಜು ಗೆಳತಿ ಹಾಗೂ ಇನ್ನುಳಿದ ಇಬ್ಬರು ಆರೋಪಿಗಳಾದ ಸ್ಪಂದನಾ ಹಾಗೂ ವಿನೋದ್‍ಗೆ ನಿರೀಕ್ಷಣಾ ಜಾಮೀನು ನೀಡಲಾಗಿದೆ. ಅನಂತರಾಜು ಇದೇ ತಿಂಗಳು 12 ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದನ್ನೂ ಓದಿ: ಇಂದು ರಾಜ್ಯಕ್ಕೆ ಕೇಂದ್ರ ಸಚಿವ ರಾಜನಾಥ್ ಸಿಂಗ್ ಭೇಟಿ

    court order law

    ಇದೀಗ ಅನಂತರಾಜು ಆತ್ಮಹತ್ಯೆ ಪ್ರಕರಣವು ಮತ್ತೊಂದು ತಿರುವು ಪಡೆದುಕೊಂಡಿದೆ. ಅನಂತರಾಜು ಗೆಳತಿ ಅಪರಿಚಿತ ವ್ಯಕ್ತಿಯೊಂದಿಗೆ ಚಾಟಿಂಗ್ ಮಾಡಿರುವುದು ವೈರಲ್ ಆಗಿದೆ. ಇದನ್ನೂ ಓದಿ: ಪಾಟಿದರ್ ಸ್ಫೋಟಕ ಶತಕ, ಡಿ.ಕೆ ಅಬ್ಬರ – ಅಹಮದಾಬಾದ್‌ಗೆ ಹಾರಿದ ಬೆಂಗ್ಳೂರು

    ವೈರಲ್ ಆದ ಚಾಟಿಂಗ್‍ನಲ್ಲೇನಿದೆ?
    ಅನಂತರಾಜು ನನಗೆ ಮೋಸ ಮಾಡಿದ್ದಾನೆ. ನನ್ನ ಮಾನ ಮರ್ಯಾದೆಗೆ ಧಕ್ಕೆ ತಂದಿದ್ದಾನೆ. ನನ್ನ ಮಕ್ಕಳಿಗಾಗಿ ನಾನು ಯಾರ ಮಾರ್ಯಾದೆ ಕಳೆಯೋದಕ್ಕೂ ಸಿದ್ಧ. ಅನಂತರಾಜು ನನ್ನ ಜೊತೆ ಕಳೆದ ಖಾಸಗಿ ವಿಡಿಯೋಗಳು ನನ್ನ ಬಳಿ ಇವೆ. ಅದನ್ನು ಅವನ ಹೆಂಡ್ತಿಗೆ ಕಳುಹಿಸಿದರೆ ಅವಳೇ ಅನಂತರಾಜುನ ಸಾಯಿಸ್ತಾಳೆ. ಅಷ್ಟೊಂದು ಅಶ್ಲೀಲವಾಗಿವೆ ಆ ವೀಡಿಯೋಗಳು. ಆ ರೀತಿ ಆಗಬಾರದು ಅನ್ನೋದಾದರೆ ಅನಂತರಾಜು ಮೇ 15ರ ಒಳಗೆ ನನ್ನ ಭೇಟಿ ಮಾಡಬೇಕು. ಸೆಟಲ್ಮೆಂಟ್ ಮಾಡಿಕೊಂಡು ಅನಂತರಾಜು ನೆಮ್ಮದಿಯಾಗಿರಲಿ ಎಂದು ಅನಂತರಾಜು ಗೆಳತಿ ಚಾಟಿಂಗ್ ಮಾಡಿದ್ದಳು. ಇದರ ಜೊತೆಗೆ ಅನಂತರಾಜು ಗೆಳತಿ ತನ್ನ ಇತರೆ ಗೆಳತಿಯರೊಂದಿಗೆ ಮೋಜು ಮಸ್ತಿಯಲ್ಲಿ ತೊಡಗಿರುವ ವೀಡಿಯೋ ಕೂಡ ವೈರಲ್.

    https://youtu.be/WlJqcDTsNiE

  • ನಾನು ಮಗನಷ್ಟು ಒಳ್ಳೆಯವನಲ್ಲ: ಅಮ್ಮನಿಗೆ ಆರ್‌ಜಿವಿ ವಿಶ್

    ನಾನು ಮಗನಷ್ಟು ಒಳ್ಳೆಯವನಲ್ಲ: ಅಮ್ಮನಿಗೆ ಆರ್‌ಜಿವಿ ವಿಶ್

    ಕ್ಷಿಣ ಭಾರತದ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ಸದಾ ಒಂದಲ್ಲಾ ಒಂದು ವಿಚಾರಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಲ್ಲಿರುತ್ತಾರೆ. ಸಿನಿಮಾಗಳಿಗಿಂತ ಇತರೆ ವಿಚಾರಗಳಿಂದ ಹೆಚ್ಚು ಸುದ್ದಿಯಾಗುವ ಆರ್‌ಜಿವಿ ಇದೀಗ ಮದರ್ಸ್ ಡೇಯಂದು ಅಮ್ಮನಿಗೆ ವಿಶೇಷವಾಗಿ ವಿಶ್ ಮಾಡಿದ್ದಾರೆ.

    ಅಮ್ಮಾ ಈ ಎರಡು ಅಕ್ಷರವೇ ಅದ್ಭುತ ಅವಳಿಗೆ ಅವಳೇ ಸಾಟಿ. ಮಹಾನ್ ದೈವ ಸ್ವರೂಪಿ ಆ ತಾಯಿ. ತೆರೆಯ ಮೇಲೆ ವಿಜೃಂಭಿಸುವ ತಾರೆಯರ ಬದುಕಲ್ಲೂ ತಾಯಿಯೇ ಶಕ್ತಿ, ತಾಯಿಯೇ ಸ್ಫೂರ್ತಿ. ಅಂತಹ ತಾಯಿಗೆ ಭಿನ್ನವಾಗಿ ವಿಶ್ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಾರೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ.‌ ಇದನ್ನೂ ಓದಿ: ವೈರಲ್ ಆಯ್ತು ಸಂಜನಾ ಗಲ್ರಾನಿ ಬೇಬಿ ಶವರ್ ಸಮಾರಂಭದ ಫೋಟೋಗಳು

    ಭಿನ್ನ ಸಿನಿಮಾಗಳನ್ನ ತೆರೆಯ ಮೇಲೆ ತೋರಿಸೋದ್ರಲ್ಲಿ ಆರ್‌ಜಿವಿ ಯಾವಾಗಲೂ ಮುಂದು, ಇನ್ನು ಸಿನಿಮಾಗಿಂತ ಹೆಚ್ಚು ಕಾಂಟ್ರವರ್ಸಿಯಿಂದಲೇ ಸದ್ದು ಮಾಡುವ ಆರ್‌ಜಿವಿ ಇದೀಗ ವಿಶ್ವ ಅಮ್ಮಂದಿರ ದಿನದಂದು ವಿಶೇಷವಾಗಿ ವಿಶ್ ಮಾಡಿದ್ದಾರೆ. ತಾಯಂದಿರ ದಿನದ ಶುಭಾಶಯಗಳು ಅಮ್ಮಾ, ನಾನು ಮಗನಷ್ಟು ಒಳ್ಳೆಯವನಲ್ಲ. ಆದರೆ ನೀನು ತಾಯಿಗಿಂತ ಹೆಚ್ಚು ಒಳ್ಳೆಯವಳು ಎಂದು ಅಮ್ಮನ ಜತೆಯಿರೋ ಫೋಟೋ ಶೇರ್ ಮಾಡಿ, ಆರ್‌ಜಿವಿ ಟ್ವೀಟ್ ಮಾಡಿದ್ದಾರೆ. ಈ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ.