Tag: viral

  • ಮಹಿಳೆಯೊಬ್ಬರ ಜೊತೆ ಸರಸ ಸಲ್ಲಾಪ? ಶಾಸಕ ಸಿದ್ದು ನ್ಯಾಮಗೌಡಗೆ ಸೇರಿದ್ದು ಎನ್ನಲಾದ ಆಡಿಯೋ ವೈರಲ್!

    ಮಹಿಳೆಯೊಬ್ಬರ ಜೊತೆ ಸರಸ ಸಲ್ಲಾಪ? ಶಾಸಕ ಸಿದ್ದು ನ್ಯಾಮಗೌಡಗೆ ಸೇರಿದ್ದು ಎನ್ನಲಾದ ಆಡಿಯೋ ವೈರಲ್!

    ಬಾಗಲಕೋಟೆ: ಚುನಾವಣೆ ಹತ್ತಿರವಾಗುತ್ತಿದ್ದಂತೆ ಜಿಲ್ಲೆಯ ಜಮಖಂಡಿ ಶಾಸಕ ಸಿದ್ದು ನ್ಯಾಮಗೌಡ ಅವರು ಮಾತನಾಡಿದ್ದಾರೆ ಎನ್ನಲಾಗಿರುವ ಮೊಬೈಲ್ ಆಡಿಯೋ ಒಂದು ಹೊರಬಿದ್ದಿದ್ದು, ಸಖತ್ ವೈರಲ್ ಆಗಿದೆ.

    ಈ ಆಡಿಯೋದಲ್ಲಿ ಇರುವ ವ್ಯಕ್ತಿಯ ಧ್ವನಿ ಶಾಸಕ ಸಿದ್ದು ನ್ಯಾಮಗೌಡ ಅವರ ಧ್ವನಿಗೆ ಹೋಲಿಕೆ ಇದ್ದು, ಕಾಂಗ್ರೆಸ್ ಮಹಿಳಾ ಕಾರ್ಯಕರ್ತರ ಜೊತೆ ಮೊಬೈಲ್ ನಲ್ಲಿ ಸಂಭಾಷಣೆ ನಡೆಸಿದ್ದಾರೆ ಎಂಬ ಚರ್ಚೆ ಆರಂಭವಾಗಿದೆ. ಸಂಭಾಷಣೆಯಲ್ಲಿ ಮಹಿಳೆ ಹಾಗೂ ವ್ಯಕ್ತಿಯ ನಡುವೆ ನಿಕಟ ಪರಿಚಯ ಇರುವುದು ಸ್ಪಷ್ಟವಾಗುತ್ತದೆ.

    21 ನಿಮಿಷವಿರುವ ಆಡಿಯೋದಲ್ಲಿ ಮಹಿಳೆಯೊಂದಿಗೆ ಸರಸ ಸಲ್ಲಾಪ ನಡೆಸಿದ್ದಾರೆ. ಇನ್ನು ಮಹಿಳೆಗೆ ನಿನ್ನನ್ನು ನಗರಸಭೆ ಅಧ್ಯಕ್ಷೆಯನ್ನಾಗಿ ಮಾಡುತ್ತೇನೆ ಎಂದು ಪುಸಲಾಯಿಸಲಾಗಿದೆ. ಕಳೆದ ಮೂರು ದಿನಗಳ ಹಿಂದೆಯೇ ಆಡಿಯೋ ಬಿಡುಗಡೆಯಾಗಿದ್ದು, ಕ್ಷೇತ್ರದ ಎಲ್ಲೆಡೆ ವೈರಲ್ ಆಗಿದೆ.

    ಈ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿರುವ ಶಾಸಕ ನ್ಯಾಮಗೌಡ, ಚುನಾವಣೆ ಸಮೀಪವಾಗುತ್ತಿದಂತೆ ನನ್ನ ವಿರುದ್ಧ ಅಪಪ್ರಚಾರ ನಡೆಲು ಇಂತಹ ನಕಲಿ ಆಡಿಯೋ ಬಿಡುಗಡೆ ಮಾಡಲಾಗಿದೆ. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಎಸ್‍ಪಿ ಅವರಿಗೆ ಈಗಾಗಲೇ ದೂರು ನೀಡಿದ್ದೇನೆ. ತನಿಖೆ ಬಳಿಕ ಸತ್ಯಾಂಶ ಹೊರಬರಲಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

    https://www.youtube.com/watch?v=9tl4el4G4-4

  • ಸಾಮಾಜಿಕ ಜಾಲತಾಣದಲ್ಲಿ ಶಾರೂಖ್ ಪುತ್ರಿಯ ಬಿಕಿನಿ ಫೋಟೋ ವೈರಲ್!

    ಸಾಮಾಜಿಕ ಜಾಲತಾಣದಲ್ಲಿ ಶಾರೂಖ್ ಪುತ್ರಿಯ ಬಿಕಿನಿ ಫೋಟೋ ವೈರಲ್!

    ಮುಂಬೈ: ನಟ ಶಾರೂಖ್ ಖಾನ್ ಪುತ್ರಿ ಸುಹಾನ ಖಾನ್ ಇತ್ತೀಚೆಗೆ ತನ್ನ ವಿದೇಶಿ ಗೆಳತಿಯರ ಜೊತೆ ಬಿಕಿನಿಯಲ್ಲಿ ತೆಗೆಸಿಕೊಂಡ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಈ ಮೊದಲು ತನ್ನ ಶಾಲೆಯಲ್ಲಿ ನಡೆದ ರೋಮಿಯೋ ಜೂಲಿಯಟ್ ನಾಟಕದಲ್ಲಿ ಜೂಲಿಯಟ್ ಆಗಿ ನಟಿಸಿದ್ದ ಸುಹಾನ, ತನ್ನ ತಂದೆಯಿಂದ ಬಳುವಳಿಯಾಗಿ ಬಂದ ಪ್ರತಿಭೆಯನ್ನ ಎಲ್ಲರಿಗೂ ತೋರಿಸಿ ಮೆಚ್ಚುಗೆಯನ್ನ ಪಡೆದುಕೊಂಡಿದ್ದರು.

    ಶಾರೂಖ್ ಮಕ್ಕಳಾದ ಆರ್ಯನ್ ಖಾನ್ ಮತ್ತು ಸುಹಾನಾ ಖಾನ್ ಇಬ್ಬರು ವಿದೇಶದಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದು, ಇಬ್ಬರು ತಮ್ಮ ಓದು ಮುಗಿದ ಮೇಲೆ ಅವರ ಕನಸನ್ನು ನನಸು ಮಾಡಲು ಸಂಪೂರ್ಣ ಅನುಮತಿ ನೀಡಿದ್ದೇನೆ ಎಂದು ಶಾರೂಖ್ ಖಾನ್ ತಿಳಿಸಿದ್ದರು.

    ಇನ್ನು ಗೌರಿ ಖಾನ್ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಇಂಟೀರಿಯರ್ ಡಿಸೈನ್ ಉದ್ಯಮದ ಸಾಧನೆಗಳ ಬಗ್ಗೆ ಸಾಕಷ್ಟು ಫೋಟೋ ಹಂಚಿಕೊಳ್ಳುತ್ತಿದ್ದು, ಗೌರಿ ಮತ್ತು ಶಾರೂಖ್ ಖಾನ್ ತಮ್ಮ ಮಕ್ಕಳ ಜೊತೆಗಿರುವ ಫೋಟೋವನ್ನ ಹಂಚಿಕೊಳ್ಳುತ್ತಾರೆ. ಮಕ್ಕಳ ಆಯ್ಕೆಗೆ ಒತ್ತು ಕೊಡುವ ಗೌರಿ ಮತ್ತು ಶಾರೂಖ್ ಖಾನ್ ದಂಪತಿ ಅವರ ಆಯ್ಕೆಯ ಕ್ಷೇತ್ರಕ್ಕೆ ಪ್ರವೇಶಿಸಲು ಸಮ್ಮತಿ ಸೂಚಿಸಿದ್ದಾರೆ.

    ಸುಹಾನ ಖಾನ್ ಬಾಲಿವುಡ್‍ಗೆ ಪ್ರವೇಶ ಮಾಡಿದರೆ ಸೈಫ್ ಅಲಿ ಖಾನ್ ಪುತ್ರಿ ಸಾರಾ ಮತ್ತು ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ಗೆ ನಟನೆ ಮತ್ತು ತನ್ನ ಮೋಹಕ ಚೆಲುವಿನಿಂದ ಸೆಡ್ಡು ಹೊಡೆಯೊದರಲ್ಲಿ ಯಾವುದೇ ಅನುಮಾನವಿಲ್ಲ.

    Suhana Khan #suhanakhan #fbsuhanakhan

    A post shared by ғᴜᴛᴜʀᴇ ʙoʟʟʏᴡᴏᴏᴅ (@future.bollywood) on

    Suhana Khan #suhanakhan #fbsuhanakhan

    A post shared by ғᴜᴛᴜʀᴇ ʙoʟʟʏᴡᴏᴏᴅ (@future.bollywood) on

  • ‘ಸುಯಿ ಧಾಗಾ’ ಶೂಟಿಂಗ್ ನಿಂದ ದಿಢೀರ್ ರಜೆ ತೆಗೆದುಕೊಂಡ ಅನುಷ್ಕಾ!

    ‘ಸುಯಿ ಧಾಗಾ’ ಶೂಟಿಂಗ್ ನಿಂದ ದಿಢೀರ್ ರಜೆ ತೆಗೆದುಕೊಂಡ ಅನುಷ್ಕಾ!

    ಮುಂಬೈ: ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾ ‘ಸುಯಿ ಧಾಗಾ’ ಶೂಟಿಂಗ್ ನಿಂದ ದಿಡೀರ್ ಅಂತಾ ರಜೆ ತೆಗೆದುಕೊಂಡಿದ್ದಾರೆ.

    ವರುಣ್ ಧವನ್ ಮತ್ತು ಅನುಷ್ಕಾ ನಟನೆಯ ‘ಸುಯಿ ಧಾಗಾ’ ಸಿನಿಮಾದ ಶೂಟಿಂಗ್ ನವದೆಹಲಿ ಯಲ್ಲಿ ನಡೆಯುತ್ತಿದ್ದು, ಅದಕ್ಕೆ ಅನುಷ್ಕಾ ತನ್ನ ಪತಿ ಜೊತೆ ಸಮಯ ಕಳೆಯಲು 2 ದಿನ ರಜೆ ತೆಗೆದುಕೊಂಡಿದ್ದಾರೆಂದು ಮಾಧ್ಯಮವೊಂದು ವರದಿ ಮಾಡಿದೆ.

    ವಿರುಷ್ಕಾರ ಬಿಡುವಿಲ್ಲದ ವೇಳಾಪಟ್ಟಿಯಿಂದ ದಂಪತಿ ಹೆಚ್ಚು ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲ, ಆದ್ದರಿಂದ ಅನುಷ್ಕಾ ಅವರು ಎರಡು ದಿನ ರಜೆ ತೆಗೆದುಕೊಂಡಿದ್ದಾರೆ ಅಂತಾ ಹೇಳಲಾಗುತ್ತಿದೆ.

    ವಿರುಷ್ಕಾ ಪರಸ್ಪರ ದೂರದಲ್ಲಿದ್ದರೂ ಇವರು ನಿರಂತರವಾಗಿ ಸಾಮಾಜಿಕ ಜಾಲಾತಾಣದಲ್ಲಿ ಫೋಟೋಗಳನ್ನು ಮತ್ತು ಸಂದೇಶಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ. ಈ ಜೋಡಿಯ ಭಾನುವಾರ ಪೇಂಟಿಂಗ್ ಅಂತರ್ಜಾಲದಲ್ಲಿ ವೈರಲ್ ಆಗಿತ್ತು. ಮತ್ತೊಂದೆಡೆ, ವರದಿಗಳ ಪ್ರಕಾರ ‘ಕರಣ್ ಜೋಹರ್ ಕಾಫಿ ವಿಥ್ ಕರಣ್’ ಶೋ ನಲ್ಲಿ ಈ ದಂಪತಿಗಳು ಕಾಣಿಸಿಕೊಳ್ಳುತ್ತಾರೆಂಬ ಸುದ್ದಿ ಹರಿದಾಡುತ್ತಿದೆ.

    ವಿಶ್ರಾಂತಿ ಪಡೆದ ನಂತರ, ವಿರಾಟ್ ಕೊಹ್ಲಿ ಐಪಿಎಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮುನ್ನಡೆಸಲಿದ್ದಾರೆ. ಅನುಷ್ಕಾ ಶರ್ಮಾ ಪ್ರಸ್ತುತ ನವ ದೆಹಲಿಯಲ್ಲಿ ವರುಣ್ ಧವನ್ ಜೊತೆ `ಸುಯಿ ಧಾಗಾ’ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಆನಂದ್ ಎಲ್. ರಾಯ್ ಅವರ `ಜೀರೋ’ ಚಿತ್ರದಲ್ಲಿ ಶಾರುಖ್ ಖಾನ್ ಮತ್ತು ಕತ್ರಿನಾ ಕೈಫ್ ಜೊತೆ ಅನುಷ್ಕಾ ನಟಿಸುತ್ತಿದ್ದಾರೆ.

    `ಸುಯಿ ಧಾಗಾ’ ಸಿನಿಮಾದಲ್ಲಿ ಅನುಷ್ಕಾ ಸೀರೆಯುಟ್ಟ ಚಿತ್ರಗಳು ವೈರಲ್ ಆಗಿತ್ತು. ಈ ಸಿನಿಮಾವನ್ನು ಶರತ್ ಕಟಾರಿಯಾ ಅವರು ನಿರ್ದೇಶನ ಮಾಡುತ್ತಿದ್ದು, ಇದು ಸೆಪ್ಪೆಂಬರ್ 29 ರಂದು ರಿಲೀಸ್ ಆಗಲಿದೆ ಅಂತಾ ಚಿತ್ರತಂಡ ತಿಳಿಸಿದೆ.

    2017 ಡಿಸೆಂಬರ್ ನಲ್ಲಿ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಲಂಡನ್ ನಲ್ಲಿ ವಿವಾಹವಾಗಿದ್ದರು. ಈ ದಂಪತಿ ಮದುವೆಯಾದ ನಂತರ ಹೊಸ ವರ್ಷವನ್ನು ಆಚರಿಸಲು ದಕ್ಷಿಣ ಆಫ್ರಿಕಾಕ್ಕೆ ಪ್ರಯಾಣ ಬೆಳೆಸಿದ್ದರು. ಭಾರತಕ್ಕೆ ಮರಳಿದ ಬಳಿಕ ಇಬ್ಬರು ತಮ್ಮ ವೃತ್ತಿಯತ್ತ ಗಮನ ಹರಿಸಿದ್ದರು.

     

  • ಇದ್ದಕ್ಕಿದ್ದಂತೆ ಬ್ಲಾಸ್ಟ್ ಆಯ್ತು ಫ್ರಿಡ್ಜ್!- ವಿಡಿಯೋ

    ಇದ್ದಕ್ಕಿದ್ದಂತೆ ಬ್ಲಾಸ್ಟ್ ಆಯ್ತು ಫ್ರಿಡ್ಜ್!- ವಿಡಿಯೋ

    ಬೀಜಿಂಗ್: ಸಾಮಾನ್ಯವಾಗಿ ಮೊಬೈಲ್ ಬ್ಲಾಸ್ಟ್ ಆಗಿರುವ ಸುದ್ದಿ ಕೇಳಿರ್ತೀರ. ಆದರೆ ಚೀನಾದ ಕೆಫೆಯೊಂದರಲ್ಲಿ ಫ್ರಿಡ್ಜ್ ವೊಂದು ಸ್ಫೋಟಗೊಂಡ ಘಟನೆ ನಡೆದಿದೆ.

    ಮಾರ್ಚ್ 19ರಂದು ಚೀನಾದ ಪಿಂಗ್‍ದಿನ್‍ಶಾನ್ ಸಿಟಿಯಲ್ಲಿ ಈ ಘಟನೆ ನಡೆದಿದ್ದು, ಸಿಸಿಟಿವಿ ಕ್ಯಾಮೆರಾದಲ್ಲಿ ಸ್ಫೋಟದ ದೃಶ್ಯ ಸೆರೆಯಾಗಿದೆ. ಈ ವಿಡಿಯೋವನ್ನು ಇದೀಗ ಇಲ್ಲಿನ ಮಾಧ್ಯಮವೊಂದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದೆ.

    ಚೀನಾದ ಇಂಟರ್ ನೆಟ್ ಕೆಫೆಯೊಂದರಲ್ಲಿ ಈ ಘಟನೆ ನಡೆದಿದೆ. ಅಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಈ ದೃಶ್ಯಾವಳಿಗಳು ಸೆರೆಯಾಗಿ ಇದೀಗ ವಿಡಿಯೋ ವೈರಲ್ ಆಗಿದೆ. ಈ ಘಟನೆಯಲ್ಲಿ ಕೆಫೆಯಲ್ಲಿದ್ದವರಿಗೆ ಯಾವುದೇ ಪ್ರಾಣಾಹಾನಿ ಆಗಿಲ್ಲ ಎಂದು ವರದಿಯಾಗಿದೆ.

    ಈ ವಿಡಿಯೋ ಸುಮಾರು 30 ಸೆಕೆಂಡ್‍ಗಳಿದ್ದು, ಗ್ರಾಹಕರೊಬ್ಬರು ಕ್ಯಾಶ್ ಕೌಂಟರ್ ಬಳಿ ನಡೆದುಕೊಂಡು ಹೋಗುವಾಗ ಆತನ ಹಿಂದೆ ಇದ್ದ ಫ್ರಿಡ್ಜ್ ಸ್ಫೋಟಗೊಂಡಿದೆ. ಬೆಂಕಿ ಹೊತ್ತಿಕೊಂಡು ಫ್ರಿಡ್ಜ್ ಸ್ಫೋಟವಾಗುತ್ತಿದ್ದಂತೆ ಅಲ್ಲಿದ್ದ ಗ್ರಾಹಕರು ಓಡಿ ಹೋಗಿದ್ದಾರೆ.

    ಸದ್ಯ ಈ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

  • ಸೆಕ್ಸ್ ಮಾಡಿದ್ದಾರೆಂದು ರೂಮಿನಿಂದ ಹೊರಗೆಳೆದು ಜೋಡಿಯ ಮೇಲೆ ಚರಂಡಿ ನೀರು ಹಾಕಿದ್ರು- ವಿಡಿಯೋ ವೈರಲ್

    ಸೆಕ್ಸ್ ಮಾಡಿದ್ದಾರೆಂದು ರೂಮಿನಿಂದ ಹೊರಗೆಳೆದು ಜೋಡಿಯ ಮೇಲೆ ಚರಂಡಿ ನೀರು ಹಾಕಿದ್ರು- ವಿಡಿಯೋ ವೈರಲ್

    ಜಕಾರ್ತಾ: ಯುವತಿಯೊಬ್ಬಳು ತನ್ನ ಪ್ರಿಯಕರನನ್ನು ಭೇಟಿಯಾಗಲು ಆತನ ರೂಮಿಗೆ ಹೋಗಿದಾಗ ಅಲ್ಲಿದ್ದ ಸಾರ್ವಜನಿಕರು ಅವರಿಬ್ಬರು ದೈಹಿಕ ಸಂಬಂಧ ಬೆಳೆಸಿದ್ದಾರೆಂದು ಅನುಮಾನಗೊಂಡು ಅವರನ್ನು ರೂಮಿನಿಂದ ಎಳೆದು ತಂದು ಚರಂಡಿ ನೀರನ್ನು ಹಾಕಿದ ಘಟನೆ ಸುಮಾತ್ರಾ ದ್ವೀಪದ ಕೇಯಿ ಲೀ ಗ್ರಾಮದಲ್ಲಿ ನಡೆದಿದೆ.

    ಈ ಘಟನೆ ಮಾರ್ಚ್ 7ರಂದು ನಡೆದಿದ್ದು, ಈಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಯುವಕ ಕಂದು ಬಣ್ಣದ ಶರ್ಟ್, ಜಿನ್ಸ್ ಧರಿಸಿ ಚರಂಡಿ ಮುಂದೆ ತಲೆ ತಗ್ಗಿಸಿ ನಿಂತಿದ್ದು, ಯುವತಿ ಆತನ ಪಕ್ಕದಲ್ಲೇ ಕುಳಿತಿದ್ದಾಳೆ.

    ನಂತರ ವ್ಯಕ್ತಿಯೊಬ್ಬ ಇವರ ಮೇಲೆ ಚರಂಡಿ ನೀರನ್ನು ಹಾಕಿ ನೀನು ಮಾಡಿದ್ದು ಇಸ್ಲಾಂ ಧರ್ಮಕ್ಕೆ ವಿರುದ್ಧ. ಇದು ನಿನಗೆ ತಕ್ಕ ಪಾಠ ಎಂದು ಗುಂಪಿನಲ್ಲಿ ಸಾರ್ವಜನಿಕರು ಹೇಳಿದ್ದಾರೆ. ಸ್ವಲ್ಪ ಸಮಯದ ಬಳಿಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಆ ಜೋಡಿಯನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋದರು ಎಂದು ಪ್ರತಿಕೆಯೊಂದರಲ್ಲಿ ವರದಿಯಾಗಿದೆ.

    18 ವರ್ಷದ ಯುವತಿ ತನ್ನ ಪ್ರಿಯಕರನನ್ನು ಭೇಟಿ ಮಾಡಲು ಯಾರೂ ಇಲ್ಲದ ವೇಳೆ ಆತನ ರೂಮಿಗೆ ಹೋಗಿದ್ದಳು. ಅಕ್ಕಪಕ್ಕದ ಮನೆಯವರ ಪ್ರಕಾರ ಅವರಿಬ್ಬರು ಅಲ್ಲಿ ಸೆಕ್ಸ್ ಮಾಡಲು ಯೋಚಿಸುತ್ತಿದ್ದರು. ನಂತರ ಸಾರ್ವಜನಿಕರು ಅವರನ್ನು ಎಳೆದು ತಂದು ಶಿಕ್ಷೆ ನೀಡಿದ್ದಾರೆ ಎಂದು ಇಂಗಿನ್ ಜಯಾ ಪೊಲೀಸ್ ಅಧಿಕಾರಿಯಾದ ನಜರುಲ್ ಪಿತ್ರಾ ತಿಳಿಸಿದ್ದಾರೆ.

    ಸದ್ಯ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ. ಈ ಜೋಡಿಯ ಮೇಲಿರುವ ಆರೋಪ ನಿಜವಾದರೆ 100 ಹೊಡೆತ ಹಾಗೂ 15 ತಿಂಗಳ ಬಂಧನ ಅಥವಾ 150 ಗ್ರಾಂ ಚಿನ್ನಕ್ಕೆ ಸಮನಾದ ಹಣವನ್ನು ನೀಡಬೇಕೆಂದು ಪಿತ್ರಾ ಹೇಳಿದ್ದಾರೆ.

    https://www.youtube.com/watch?v=LBtKc85tZBE

  • ಅಯ್ಯಪ್ಪ ಸ್ವಾಮಿ ಭಕ್ತಿ ಗೀತೆಗೆ ಅವಮಾನ- ಶಾಸಕ ಮೊಯ್ದೀನ್ ಬಾವಾ ವಿರುದ್ಧ ದೂರು ದಾಖಲು

    ಅಯ್ಯಪ್ಪ ಸ್ವಾಮಿ ಭಕ್ತಿ ಗೀತೆಗೆ ಅವಮಾನ- ಶಾಸಕ ಮೊಯ್ದೀನ್ ಬಾವಾ ವಿರುದ್ಧ ದೂರು ದಾಖಲು

    ಮಂಗಳೂರು: ಶಬರಿಮಲೆಯ ಅಯ್ಯಪ್ಪ ಸ್ವಾಮಿ ಭಕ್ತಿಗೀತೆ ಅನುಕರಿಸಿ ಚುನಾವಣಾ ಪ್ರಚಾರಕ್ಕೆ ಬಳಕೆ ಮಾಡಿ ಹಿಂದೂಗಳ ಭಾವನೆ ದಕ್ಕೆ ಉಂಟು ಮಾಡಲಾಗಿದೆ ಎಂದು ಆರೋಪಿಸಿ ಶಾಸಕ ಮೊಯಿದ್ದೀನ್ ಬಾವಾ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

    ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಎಂಬವರು ಶಾಸಕ ಬಾವಾ ಅವರ ವಿರುದ್ಧ ದೂರು ದಾಖಲಿಸಿದ್ದಾರೆ.

    ಏನಿದು ಪ್ರಕರಣ?
    ಶಬರಿಮಲೆಯ ಅಯ್ಯಪ್ಪ ಸ್ವಾಮಿಯ ಭಕ್ತಿಗೀತೆಯಾದ ಕಲ್ಲು ಮುಳ್ಳು ಶಬರಿಮಲೆಕ್ಕ್ ಎನ್ನುವ ಭಕ್ತಿಗೀತೆಯನ್ನೇ ಅನುಕರಿಸುವ ಮೊಯ್ದೀನ್ ಬಾವಾ ಅವರ ಹೆಸರಿನ ಮೇಲೆ ರಚಿಸಿದ ಹಾಡು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಶಾಸಕ ಬಾವಾ ಅವರ ಮೇಲೆ ರಚಿತವಾದ ಈ ಹಾಡಲ್ಲಿ ಪ್ರಚಾರಕ್ಕಾಗಿ ಪ್ರಸಿದ್ಧ ಭಕ್ತಿಗೀತೆಯ ದಾಟಿಯಲ್ಲಿ ಅವರನ್ನು ಹೊಗಳಿ ರಚನೆ ಮಾಡಿರುವುದರಿಂದ ಹಿಂದೂಗಳ ಭಾವನೆಗೆ ಅವಮಾನ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು.

    ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಿಂದು ಸಂಘಟನೆಗಳ ಕಾರ್ಯಕರ್ತರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದರು. ಕ್ಷೇತ್ರ ವ್ಯಾಪ್ತಿಯ ಅಭಿವೃದ್ಧಿ ಕಾರ್ಯಗಳನ್ನು ಉಲ್ಲೇಖಿಸಿ ತುಳು ಭಾಷೆಯಲ್ಲಿ ಹಾಡು ರಚಿಸಲಾಗಿದ್ದು ಹಿಂದುಗಳ ಆಕ್ರೋಶ ಕಟ್ಟಿಕೊಳ್ಳುವಂತಾಗಿತ್ತು.

  • ಮಾರುಕಟ್ಟೆಗೆ ಬಂದಿದೆ 6 ಸಾವಿರ ರೂಪಾಯಿಯ ಝರಾ ಲುಂಗಿ!

    ಮಾರುಕಟ್ಟೆಗೆ ಬಂದಿದೆ 6 ಸಾವಿರ ರೂಪಾಯಿಯ ಝರಾ ಲುಂಗಿ!

    ನವದೆಹಲಿ: ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಫ್ಯಾಶನ್ ಟ್ರೆಂಡ್ ಬದಲಾಗುತ್ತಿದೆ. ಇತ್ತೀಚಿನ ಫ್ಯಾಶನ್‍ಗಳನ್ನು ಸೂಕ್ಷ್ಮವಾಗಿ ಗಮನಿಸಿದ್ರೆ ದೇಸಿ ಲುಕ್‍ಗಳಲ್ಲಿ ವಿದೇಶಿ ಟಚ್ ನೀಡಲಾಗುತ್ತಿದೆ. ಲುಂಗಿ ಭಾರತದಲ್ಲಿ ಎಲ್ಲ ವರ್ಗದ ಜನರು ಧರಿಸ್ತಾರೆ. ಆದ್ರೆ ಇದೇ ಲುಂಗಿಯನ್ನು ‘ಝರಾ’ ಎಂಬ ಕಂಪನಿ ಸ್ಕರ್ಟ್ ಮಾದರಿಯಲ್ಲಿ ವಿನ್ಯಾಸಗೊಳಿಸಿ ಮಾರುಕಟ್ಟೆಗೆ ಪರಿಚಯಿಸಿದೆ.

    ಲುಂಗಿ ಕೇವಲ ಭಾರತದಲ್ಲಿ ಮಾತ್ರವಲ್ಲದೇ ಬಾಂಗ್ಲಾದೇಶ, ಪಾಕಿಸ್ತಾನ ಸೇರಿದಂತೆ ಏಷ್ಯಾದ ನೈಋತ್ಯ ರಾಷ್ಟ್ರಗಳಲ್ಲಿ ಬಳಕೆಯಲ್ಲಿದೆ. ಒಂದು ಲುಂಗಿಗೆ ಮಾರುಕಟ್ಟೆಯಲ್ಲಿ 300 ರೂ. ಬೆಲೆಯಿದೆ. ವಿನೂತನವಾಗಿ ಸ್ಕರ್ಟ್ ಮಾದರಿಗೆ ಝರಾ ಕಂಪೆನಿ ಅಂದಾಜು 5,700 ರೂ. (89.90 ಡಾಲರ್) ನಿಗದಿ ಮಾಡಿದೆ.

    ಆನ್‍ಲೈನ್ ಮಾರುಕಟ್ಟೆಯಲ್ಲಿ ಝರಾ ಲುಂಗಿ ವಿನ್ಯಾಸ ಸ್ಕರ್ಟ್ ಗಳನ್ನು ಪರಿಚಯಿಸಿದ ಬಳಿಕ ಟ್ವಿಟ್ಟರ್ ನಲ್ಲಿ ಫನ್ನಿ ಕಮೆಂಟ್ ಗಳನ್ನು ಮಾಡಿದ್ದಾರೆ. ಟ್ವಿಟರ್‍ನಲ್ಲಿ ನಮ್ಮ ತಂದೆಯ ಮೂರು ಲುಂಗಿಗಳ ಬೆಲೆ 3 ಡಾಲರ್‍ಗಿಂತ ಕಡಿಮೆ ಎಂದು ಝರಾ ಸ್ಕರ್ಟ್ ಮತ್ತು ಲುಂಗಿಗಳ ಫೋಟೋಗಳನ್ನು ಹಾಕಿ ಟ್ರೋಲ್ ಮಾಡುತ್ತಿದ್ದಾರೆ.

    ಈ ಝಾರಾ ಸ್ಕರ್ಟ್ ಕೇವಲ ಕಂದು (ಬ್ರೌನ್) ಬಣ್ಣದಲ್ಲಿ ದೊರೆಯುತ್ತದೆ. ಆದರೆ ಭಾರತದ ಲುಂಗಿಗಳು ಯಾವುದೇ ಡಿಸೈನ್ ಹಾಗೂ ಕಲರ್‍ಗಳಲ್ಲಿ ದೊರೆಯುತ್ತದೆ.

  • ಧಗಧಗನೆ ಉರಿಯುತ್ತಿದ್ದ ಕಾಳ್ಗಿಚ್ಚಿನಿಂದ ಮೊಲವನ್ನು ರಕ್ಷಿಸಿದ ವ್ಯಕ್ತಿ: ವಿಡಿಯೋ ವೈರಲ್

    ಧಗಧಗನೆ ಉರಿಯುತ್ತಿದ್ದ ಕಾಳ್ಗಿಚ್ಚಿನಿಂದ ಮೊಲವನ್ನು ರಕ್ಷಿಸಿದ ವ್ಯಕ್ತಿ: ವಿಡಿಯೋ ವೈರಲ್

    ಕ್ಯಾಲಿಫೋರ್ನಿಯಾ: ತನ್ನ ಪ್ರಾಣವನ್ನು ಲೆಕ್ಕಿಸದೇ ವ್ಯಕ್ತಿಯೊಬ್ಬ ಧಗಧಗನೆ ಉರಿಯುತ್ತಿದ್ದ ಕಾಳ್ಗಿಚ್ಚಿನಿಂದ ಮೊಲವನ್ನು ರಕ್ಷಿಸಿದ ಘಟನೆ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ.

    ಕ್ಯಾಲಿಫೋರ್ನಿಯಾದಲ್ಲಿ ಕಾಣಿಸಿಕೊಂಡಿರೋ ಕಾಳ್ಗಿಚ್ಚಿನಿಂದಾಗಿ ಮೊಲವೊಂದು ದಾರಿ ತಪ್ಪಿದ್ದು, ಬೆಂಕಿಯ ಕಡೆಗೆ ಓಡಿ ಹೋಗುತ್ತಿತ್ತು. ಆಗ ಅಲ್ಲಿಯೇ ಇದ್ದ ಒಬ್ಬ ವ್ಯಕ್ತಿ ಮೊಲವನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ. ನ್ಯಾಷನಲ್ ಜಿಯೋಗ್ರಫಿ ಟ್ವಿಟ್ಟರ್ ಖಾತೆಯಲ್ಲಿ ಗುರುವಾರದಂದು ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಈ 35 ಸೆಕೆಂಡ್ ವಿಡಿಯೋದಲ್ಲಿ ವ್ಯಕ್ತಿ ಆ ಚಿಕ್ಕ ಪ್ರಾಣಿಯನ್ನು ಹೇಗೆ ಉಳಿಸಿಕೊಳ್ಳುತ್ತಾರೆ ಎಂಬುದು ಸೆರೆಯಾಗಿದೆ. ಟ್ವಿಟ್ಟರ್ ನಲ್ಲಿ ಈ ವಿಡಿಯೋ ಸುಮಾರು 6,000 ಬಾರಿ ರೀಟ್ವೀಟ್ ಆಗಿದ್ದು, 13,000ಕ್ಕೂ ಹೆಚ್ಚು ಲೈಕ್ಸ್ ಬಂದಿವೆ.

    ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ 4 ದಿನಗಳಿಂದ ಕಾಳ್ಗಿಚ್ಚು ಆವರಿಸಿದೆ. ಈ ಬೆಂಕಿಯಿಂದ ನೂರಾರು ಮನೆಗಳಿಗೆ ಹಾನಿಯಾಗಿದೆ. ಅಷ್ಟೇ ಅಲ್ಲದೇ ಲಾಸ್-ಏಂಜಲೀಸ್ ನಲ್ಲಿ ಶಾಲೆಗಳನ್ನು ಮುಚ್ಚಲಾಗಿದೆ. 2 ಲಕ್ಷಗಿಂತ ಹೆಚ್ಚು ನಿವಾಸಿಗಳನ್ನ ಸ್ಥಳಾಂತರಿಸಲಾಗಿದೆ.

  • ಈಕೆ ಪೊಲೀಸ್ ಅಧಿಕಾರಿ ಅಂತ ನೀವೂ ನಂಬಿದ್ರಾ?- ವೈರಲ್ ಫೋಟೋ ಹಿಂದಿನ ಅಸಲಿ ಕಥೆ ಓದಿ

    ಈಕೆ ಪೊಲೀಸ್ ಅಧಿಕಾರಿ ಅಂತ ನೀವೂ ನಂಬಿದ್ರಾ?- ವೈರಲ್ ಫೋಟೋ ಹಿಂದಿನ ಅಸಲಿ ಕಥೆ ಓದಿ

    ಚಂಡೀಗಢ: ಪೊಲೀಸ್ ಸಮವಸ್ತ್ರದಲ್ಲಿರೋ ಮಹಿಳೆಯೊಬ್ಬರ ಫೋಟೋ ಇತ್ತೀಚೆಗೆ ವೈರಲ್ ಆಗಿದೆ. ನೀವೂ ಕೂಡ ಅದನ್ನ ನೋಡಿರಬಹುದು.

    ಈ ಫೋಟೋ ನೋಡಿದವರು ಮಹಿಳೆಯ ಅಂದಕ್ಕೆ ಬೆರಗಾಗಿ ದಯವಿಟ್ಟು ನನ್ನನ್ನು ಅರೆಸ್ಟ್ ಮಾಡಿ, ನಿಮ್ಮಿಂದ ಅರೆಸ್ಟ್ ಆಗೋಕೆ ಜನ ಕ್ಯೂ ನಿಂತಿದ್ದಾರೆ, ನಾನು ಶರಣಾಗತಿ ಆಗ್ತೀನಿ ಎಂತೆಲ್ಲಾ ಕಮೆಂಟ್ ಮಾಡಿದ್ದಾರೆ. ಫೇಸ್‍ಬುಕ್, ವಾಟ್ಸಪ್, ಟ್ವಿಟ್ಟರ್ ಮುಂತಾದ ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ಹರಿದಾಡ್ತಿದ್ದು, ಬಿಸಿ ಬಿಸಿ ಚರ್ಚೆಯಾಗ್ತಿದೆ. ಆದ್ರೆ ಈ ಫೋಟೋ ಹಿಂದೆ ಇರೋ ಕಥೆಯೇ ಬೇರೆ.

    ನಟಿಯೊಬ್ಬರು ಸಿನಿಮಾಕ್ಕಾಗಿ ಪಂಜಾಬ್ ಪೊಲೀಸ್ ಸಮವಸ್ತ್ರವನ್ನು ಧರಿಸಿದ್ರು. ಆದರೆ ಅವರು ನಿಜವಾದ ಪೊಲೀಸ್ ಎಂದು ತಿಳಿದು ಸಾಮಾಜಿಕ ಜಾಲತಾಣದಲ್ಲಿ ಅವರ ಫೋಟೋ ಸಖತ್ ವೈರಲ್ ಆಗಿದೆ. ಫೋಟೋದಲ್ಲಿ ಕಾಣುವ ಯುವತಿ ಪಂಜಾಬ್ ಪೊಲೀಸ್‍ನ ಸ್ಟೇಷನ್ ಹೌಸ್ ಆಫೀಸರ್ ಹರ್ಲೀನ್ ಮನ್ ಎಂದು ಹೇಳಿ ಜನ ಫೋಟೋ ಹಂಚಿಕೊಂಡಿದ್ದಾರೆ.

    ಆದ್ರೆ ಅಸಲಿಗೆ ಈ ನಟಿಯ ಹೆಸರು ಕೈನಾತ್ ಅರೋರಾ. `ಜಗ್ಗ ಜಿಂಡೇ’ ಎಂಬ ಪಂಜಾಬಿ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿ ಹರ್ಲೀನ್ ಮನ್ ಪಾತ್ರವನ್ನು ಮಾಡುತ್ತಿದ್ದಾರೆ. ಈಗಾಗಲೇ ಇವರು ಗ್ರ್ಯಾಂಡ್ ಮಸ್ತಿ ಹಾಗೂ ಕಟ್ಟಾ ಮೀಟಾ ಸಿನಿಮಾಗಳಲ್ಲಿ ನಟಿಸಿದ್ದಾರೆ. ಫೋಟೋ ವೈರಲ್ ಆಗಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸಂದೇಶಗಳು ಬರಲಾರಂಭಿಸಿದ್ದರಿಂದ ಸ್ವತಃ ಕೈನಾತ್ ಇನ್‍ಸ್ಟಾಗ್ರಾಮ್‍ನಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಹರ್ಲೀನಿ ಮನ್ ಎಂಬುದು ನಾನು ನಿರ್ವಹಿಸುತ್ತಿರೋ ಪಾತ್ರದ ಹೆಸರು. ನಾನು ನಿಜವಾದ ಪೊಲೀಸ್ ಅಧಿಕಾರಿ ಅಲ್ಲ ಅಂತ ಹೇಳಿದ್ದಾರೆ.

    ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನ ಹಂಚಿಕೊಳ್ಳೋ ಮುನ್ನ ಅದರ ಹಿನ್ನೆಲೆ ತಿಳಿದುಕೊಳ್ಳೋದು ಅಗತ್ಯ.

    https://twitter.com/SelvaSelya/status/932469502297509888

    https://twitter.com/MrRakeshTiwari/status/932997640576417793

    https://twitter.com/MrRakeshTiwari/status/932146530521194496

    https://twitter.com/dukelko/status/931721148642951168

    https://www.instagram.com/p/BbpLMnhlylQ/?hl=en&taken-by=ikainaatarora

  • ಬಿಜೆಪಿ ಹೆಸರಲ್ಲಿ ಕನ್ನಡ ವಿರೋಧಿ ಟ್ವೀಟ್!

    ಬಿಜೆಪಿ ಹೆಸರಲ್ಲಿ ಕನ್ನಡ ವಿರೋಧಿ ಟ್ವೀಟ್!

    ಬೆಂಗಳೂರು: ಬಿಜೆಪಿ ಹೆಸರಲ್ಲಿ ಕನ್ನಡ ವಿರೋಧಿ ಟ್ವೀಟ್ ಒಂದು ಸಾಮಾಜಿಕ ಜಾಲತಾಣದದಲ್ಲಿ ವೈರಲ್ ಆಗುತ್ತಿದೆ.

    ಕರ್ನಾಟಕ, ಕೇರಳ ನಡುವೆ ತುಳುನಾಡು ಹಂಚಿ ಹೋಗಿದ್ದು, ಕರ್ನಾಟಕ ರಾಜ್ಯೋತ್ಸವ ತುಳುನಾಡಿನ ಪಾಲಿಗೆ ಕರಾಳ ದಿನಾಚರಣೆ ಎಂದು `@Bjp4Tulunad ಹೆಸರಿನ ಟ್ವಿಟ್ಟರ್ ಖಾತೆಯೊಂದು ಟ್ವೀಟ್ ಮಾಡಿತ್ತು.

    ಆದರೆ ಈ ಖಾತೆ ಬಿಜೆಪಿಯ ದಕ್ಷಿಣ ಕನ್ನಡದ ಅಧಿಕೃತ ಟ್ವಿಟ್ಟರ್ ಖಾತೆ ಅಲ್ಲ. @BjpMangaluru ಹೆಸರಿನ ಖಾತೆ ದಕ್ಷಿಣ ಕನ್ನಡ ಬಿಜೆಪಿಯ ಅಧಿಕೃತ ಟ್ವಿಟ್ಟರ್ ಖಾತೆಯಾಗಿದೆ.

    ಈಗ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಟ್ವೀಟ್ ಟ್ರೋಲ್ ಆಗುತ್ತಿದ್ದು, ಬಿಜೆಪಿಯ ದಕ್ಷಿಣ ಕನ್ನಡ ಘಟಕವೇ ಈ ಟ್ವೀಟ್ ಮಾಡಿದೆ ಎಂದು ಭಾವಿಸಿ ಜನ ಬಿಜೆಪಿಯನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. @Bjp4Tulunad ಖಾತೆಯೇ ಇದು ಬಿಜೆಪಿಯ ಅನಧಿಕೃತ ಟ್ವಿಟ್ಟರ್ ಖಾತೆ ಎಂಬುದಾಗಿ ತನ್ನ ಪ್ರೊಪೈಲ್ ನಲ್ಲಿ ಬರದುಕೊಂಡಿದೆ.

    https://twitter.com/Bjp4Tulunad/status/925664954581106688