Tag: viral

  • ಕುಡಿದ ಮತ್ತಿನಲ್ಲಿ ಧಾರಾವಾಹಿ ನಟಿಯ ನಗ್ನ ವಿಡಿಯೋ ಸಹೋದರಿಯಿಂದ ಪೋಸ್ಟ್!

    ಕುಡಿದ ಮತ್ತಿನಲ್ಲಿ ಧಾರಾವಾಹಿ ನಟಿಯ ನಗ್ನ ವಿಡಿಯೋ ಸಹೋದರಿಯಿಂದ ಪೋಸ್ಟ್!

    ಮುಂಬೈ: ಬಿಗ್ ಬಾಸ್ ಮಾಜಿ ಸ್ಪರ್ಧಿ ಹಾಗೂ ಧಾರಾವಾಹಿ ನಟಿ ಸಾರಾ ಖಾನ್ ಬಾತ್‍ಟಬ್‍ನಲ್ಲಿ ನಗ್ನವಾಗಿರುವ ವಿಡಿಯೋವನ್ನು ಕುಡಿದ ಮತ್ತಿನಲ್ಲಿ ಆಕೆಯ ಸಹೋದರಿ ಇನ್ ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿರುವ ಸುದ್ದಿ ವೈರಲ್ ಆಗಿದೆ.

    ಸಾರಾ ಖಾನ್ ತನ್ನ ಸಹೋದರಿ ಜೊತೆ ಶ್ರೀಲಂಕಾ ಪ್ರವಾಸಕ್ಕೆ ಹೋಗಿದ್ದರು. ಅಲ್ಲಿ ಸಹೋದರಿಯರಿಬ್ಬರು ಕಾಲ ಕಳೆಯುತ್ತಾ ಬಾತ್‍ಟಬ್‍ನಲ್ಲಿ ಶವರ್ ತೆಗೆದುಕೊಳ್ಳುತ್ತಿದ್ದರು. ಈ ವೇಳೆ ಸಾರಾ ಸಹೋದರಿ ಆರ್ಯ ತನ್ನ ಸಹೋದರಿ ಸಂಪೂರ್ಣ ನಗ್ನವಾಗಿರುವ ವಿಡಿಯೋವನ್ನು ತನ್ನ ಇನ್‍ಸ್ಟಾಗ್ರಾಂ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ.

    ಈ ವಿಡಿಯೋ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಆಗುತ್ತಿದ್ದಂತೆ ಸಾಕಷ್ಟು ವೈರಲ್ ಆಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಆರ್ಯ ಆ ವಿಡಿಯೋವನ್ನು ತಕ್ಷಣ ಡಿಲೀಟ್ ಮಾಡಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ಸಾರಾ, ಇದೆಲ್ಲ ಹೇಗಾಯಿತೋ ಎಂಬುದು ನನಗೆ ತಿಳಿದಿಲ್ಲ. ಎಲ್ಲವೂ ತಪ್ಪಾಗಿ ಹೋಯಿತು. ನನ್ನ ಸಹೋದರಿ ತಮಾಷೆಗಾಗಿ ಈ ವಿಡಿಯೋವನ್ನು ಮಾಡಿದಳು. ನಂತರ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಆಕೆ ಈ ವಿಡಿಯೋವನ್ನು ಡಿಲೀಟ್ ಮಾಡಿದಳು. ವಿಡಿಯೋ ಅಪ್ಲೋಡ್ ಮಾಡುವ ಸಮಯದಲ್ಲಿ ನನ್ನ ಸಹೋದರಿ ಮದ್ಯ ಸೇವಿಸಿದ್ದಳು. ನಾವು ತಮಾಷೆ ಮಾಡುತ್ತಾ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದೇವು. ಆ ಸಮಯದಲ್ಲಿ ಈ ರೀತಿ ಆಯಿತು ಎಂದು ತಿಳಿಸಿದ್ದಾರೆ.

    ಜಗತ್ತಿನಲ್ಲಿ ತಂತ್ರಜ್ಞಾನ ತುಂಬಾ ಮುಂದುವರೆದಿದೆ. ಈ ತಂತ್ರಜ್ಞಾನ ಕೆಲವು ಬಾರಿ ನಮಗೆ ಹಾನಿಕಾರಕವಾಗುತ್ತದೆ. ಎಲ್ಲರು ಎಚ್ಚರದಿಂದಿರಿ ಎಂದು ವಿಡಿಯೋ ವೈರಲ್ ಆದ ನಂತರ ನಟಿ ಸಾರಾ ಪ್ರತಿಕ್ರಿಯಿಸಿದ್ದಾರೆ.

    ತನ್ನ ಸಹೋದರಿಯ ವಿಡಿಯೋ ಡಿಲೀಟ್ ಮಾಡುತ್ತಿದ್ದಂತೆ ಆರ್ಯ ತಾನು ಬಾತ್‍ಟಬ್‍ನಲ್ಲಿರುವ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಸದ್ಯ ಆರ್ಯ ಅವರ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    Hey there ???????? . . . #vacayyyy

    A post shared by Ayra Khan (@immacoolgirll) on

  • ಬಜಾರಿ, ಗಂಡುಬೀರಿ ಅಂತ ಮಹಿಳೆಯರನ್ನು ನಿಂದಿಸಿದ ಪೊಲೀಸ್!

    ಬಜಾರಿ, ಗಂಡುಬೀರಿ ಅಂತ ಮಹಿಳೆಯರನ್ನು ನಿಂದಿಸಿದ ಪೊಲೀಸ್!

    ಬೆಳಗಾವಿ: ಸಮಸ್ಯೆ ಹೊತ್ತು ಪೊಲೀಸರ ಬಳಿ ಹೋದರೆ ಪೊಲೀಸ್ ಅಧಿಕಾರಿಯೊರ್ವ, ಸೌಜನ್ಯವನ್ನೂ ತೋರದೆ ಸಾರ್ವಜನಿಕವಾಗಿ ಮಹಿಳೆಯರನ್ನು ನಿಂದಿಸಿದ ವಿಡಿಯೋ ಇದೀಗ ವೈರಲ್ ಆಗಿದೆ.

    ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಆಲಕನೂರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹಾರೋಗೇರಿ ಪಿಎಸ್‍ಐ ಮೊಹ್ಮದ್ ರಫೀಕ್ ಎಂ. ತಹಶೀಲ್ದಾರ್ ದರ್ಪ ಮೆರೆದ ಅಧಿಕಾರಿ.

    ಸಾರ್ವಜನಿಕರಲ್ಲಿ ಶಾಂತಿ ಮೂಡಿಸಬೇಕಾದ ಪೊಲೀಸ್ ಅಧಿಕಾರಿ ಒಂದು ಸಮುದಾಯದ ಮಹಿಳೆಯರಿಗೆ ಬಜಾರಿ, ಗಂಡುಬೀರಿ ಎಂದು ಕಟುಶಬ್ಧಗಳಲ್ಲಿ ನಿಂದಿಸಿರುವಾಗಿ ಆರೋಪವೊಂದು ಕೇಳಿಬಂದಿದೆ. ಸಾರ್ವಜನಿಕವಾಗಿ ಮಹಿಳೆಯರಿಗೆ ಅವ್ಯಾಚ್ಯ ಶಬ್ಧಗಳಿಂದ ನಿಂದನೆ ಮಾಡಿರುವುದಕ್ಕೆ ಅಲ್ಲಿನ ರೈತರು ಹಾಗೂ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ಬಗ್ಗೆ ಮಾಹಿತಿ ಪಡೆದು ಕ್ರಮಕ್ಕೆ ಆಗ್ರಹಿಸುತ್ತೇನೆ ಎಂದು ಕುಡಚಿ ಶಾಸಕ ಪಿ. ರಾಜೀವ್ ತಿಳಿಸಿದ್ದಾರೆ.

  • ಕೈಯಲ್ಲಿದ್ದ ಸ್ಟಿಕ್ ಎಸೆದು ಡ್ಯಾನ್ಸ್ ಮಾಡಿ ಯುವಕರಿಗೇ ಸೆಡ್ಡು ಹೊಡೆದ್ರು ತಾತ!- ವಿಡಿಯೋ ವೈರಲ್

    ಕೈಯಲ್ಲಿದ್ದ ಸ್ಟಿಕ್ ಎಸೆದು ಡ್ಯಾನ್ಸ್ ಮಾಡಿ ಯುವಕರಿಗೇ ಸೆಡ್ಡು ಹೊಡೆದ್ರು ತಾತ!- ವಿಡಿಯೋ ವೈರಲ್

    ಮುಂಬೈ: ವೃದ್ಧರೊಬ್ಬರು ಯುವಕರಿಗೆ ಸೆಡ್ಡು ಹೊಡೆದು ಕುಣಿದು ಕುಪ್ಪಳಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಮೊದಲು ತನ್ನ ಎರಡೂ ಕೈಯಲ್ಲಿ ಸ್ಟಿಕ್ ಹಿಡಿದು ಕುಣಿಯುತ್ತಿದ್ದ ಹಿರಿಯ ವ್ಯಕ್ತಿ ನಂತರ ಕೆಲವೇ ಸೆಕೆಂಡ್‍ನಲ್ಲಿ ಕೈಯಲ್ಲಿರುವ ಕೋಲನ್ನು ಎಸೆದು ಡ್ಯಾನ್ಸ್ ಮಾಡಿ ಎಲ್ಲರೂ ನಾಚುವಂತೆ ಡ್ಯಾನ್ಸ್ ಮಾಡಿದ್ದಾರೆ.

    ವೃದ್ಧ ಅಲ್ಲಿದ್ದ ಜನರ ಬಗ್ಗೆ ಯೋಚಿಸದೇ ತನ್ನದೇ ಶೈಲಿಯಲ್ಲಿ ಸಂತೋಷದಿಂದ ಕುಣಿಯುತ್ತಿದ್ದರು. ತನ್ನ ಸುತ್ತಮುತ್ತ ಯುವಜನರೇ ತುಂಬಿಕೊಂಡಿದ್ದರು. ಅವರಂತೆ ಕುಣಿಯಲು ಪ್ರಯತ್ನಿಸದೆ ತಮಗೆ ಇಷ್ಟ ಬಂದಂತೆ ಕುಣಿದಿದ್ದಾರೆ.

    ಈ ವಿಡಿಯೋದ ಕೊನೆಯಲ್ಲಿ ವೃದ್ಧನಿಗೆ ಇಬ್ಬರು ಮಹಿಳೆಯರು ಸಾಥ್ ನೀಡಿದ್ದಾರೆ. ಮಹಿಳೆಯರು ವೃದ್ಧನ ಜೊತೆ ಡ್ಯಾನ್ಸ್ ಮಾಡುತ್ತಿರುವುದು ನೋಡಿ ಅಲ್ಲಿದ್ದ ಜನರು ಚಪ್ಪಾಳೆ ತಟ್ಟುತ್ತಾ ಅವರನ್ನು ಪ್ರೋತ್ಸಾಹಿಸಿದ್ದಾರೆ.

    ಈ ವಿಡಿಯೋವನ್ನು ಎಡ್ಗಾರ್ಡ್ ಎಲ್ಯೂಟರಿಯೋ ಡಾಜಾ ತಮ್ಮ ಫೇಸ್‍ಬುಕ್ ಪೇಜ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  • ರಾಕಿಂಗ್ ಸ್ಟಾರ್ ಯಶ್ ನ್ಯೂ ಲುಕ್ – ಅಭಿಮಾನಿಗಳಿಗೆ ನೀಡ್ತಿದೆ ಸಖತ್ ಕಿಕ್

    ರಾಕಿಂಗ್ ಸ್ಟಾರ್ ಯಶ್ ನ್ಯೂ ಲುಕ್ – ಅಭಿಮಾನಿಗಳಿಗೆ ನೀಡ್ತಿದೆ ಸಖತ್ ಕಿಕ್

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯಿಸುತ್ತಿರುವ `ಕೆಜಿಎಫ್, ಸಿನಿಮಾದ ಒಂದೊಂದೇ ಲುಕ್ ಬಿಡಿಗಡೆಯಾಗುತ್ತಿದ್ದು, ಈಗ ಸಾಮಾಜಿಕ ಜಾಲತಾಣಗಳಲ್ಲಿ ಯಶ್ ಅವರ ನಯಾ ಫೋಟೋವೊಂದು ಸಖತ್ ವೈರಲ್ ಆಗಿದೆ.

    ಯಶ್ ದಿನಕ್ಕೊಂದು ವಿಷ್ಯದಿಂದ ಸುದ್ದಿಯಾಗುತ್ತಲ್ಲೇ ಇರುತ್ತಾರೆ. ಇವತ್ತು ನಯಾ ಲುಕ್ ವಿಚಾರವಾಗಿ ಸಿಕ್ಕಾಪಟ್ಟೆ ಸುದ್ದಿಯಾಗಿದ್ದಾರೆ. ಆಗಲೇ ಹೇಳಿದ ಹಾಗೇ ಯಶ್ ಹೊಸ ಹೊಸ ಲುಕ್‍ನ ಟ್ರೈ ಮಾಡುತ್ತಲ್ಲೇ ಇರುತ್ತಾರೆ. ಕೆಜಿಎಫ್‍ನಲ್ಲೂ ಡಿಫರೆಂಟ್- ಡಿಫರೆಂಟ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ಪೋಸ್ಟರ್ ಗಳಲ್ಲಿ ಖಡಕ್ಕಾಗಿ ಮಿಂಚಿ ಸಿನಿಮಾ ಬಗ್ಗೆ ಇನ್ನಿಲ್ಲದ ನಿರೀಕ್ಷೆ ಮೂಡಿಸಿದ್ದಾರೆ.

    ಲಕ್ಕಿ ಸಿನಿಮಾದಲ್ಲಿ ಯಶ್ ಹಾಗೂ ರಮ್ಯಾ ಜತೆ ಶ್ವಾನವೊಂದು ಮಿಂಚಿತ್ತು. ಈಗ ಯಸ್ ಜೊತೆ ಶ್ವಾನ ಕೂಡ ಇರುವುದರಿಂದ ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ವೈರಲ್ ಆಗಿದೆ.

    ಕೆಜಿಎಫ್ ಸಿನಿಮಾದಲ್ಲಿ ಯಸ್ ಜೊತೆ ಶ್ವಾನವೂ ಇರುತ್ತಾ ಅಂತ ಕನ್ ಪ್ಯೂಸ್ ಆಗಬೇಡಿ. ಅದು ಕೆಜಿಎಫ್ ಸಿನಿಮಾದ ಲುಕ್ ಅಲ್ಲ. ಯಶ್ ಅಭಿಮಾನಿಗಳೇ ಸೇರಿಕೊಂಡು ಮಾಸ್ಟರ್ ಪೀಸ್ ಖದರ್ ತೋರಿಸುತ್ತಿರುವ ಪೋಸ್ಟರ್ ವೊಂದನ್ನ ಡಿಸೈನ್ ಮಾಡಿದ್ದಾರೆ.

    ಸದ್ಯಕ್ಕೆ ಕೆಜಿಎಫ್ ಚಿತ್ರೀಕರಣ ನಡೆಯುತ್ತಿದ್ದು, ಒಂದು ಹಾಡಿನ ಶೂಟಿಂಗ್ ಮಾತ್ರ ಬಾಕಿಯಿದೆ. ಯಸ್ ಜತೆ ಶ್ವಾನವು ಇರಬೇಕು. ಸೈನಿಕನಂತೆ ಅಣ್ತಮ್ಮ ಘರ್ಜಿಸಬೇಕು ಅನ್ನೋದು ಅವರ ಅಭಿಮಾನಿಗಳ ಆಶಯ.

  • ಸೋನಮ್ ಕಪೂರ್ ಆರತಕ್ಷತೆಯಲ್ಲಿ ಪ್ರೇಯಸಿಯನ್ನು ನನೆದು ಮೂಲೆಯಲ್ಲಿ ಕುಳಿತಿದ್ದ ರಣ್‍ವೀರ್-ಫೋಟೋ ವೈರಲ್

    ಸೋನಮ್ ಕಪೂರ್ ಆರತಕ್ಷತೆಯಲ್ಲಿ ಪ್ರೇಯಸಿಯನ್ನು ನನೆದು ಮೂಲೆಯಲ್ಲಿ ಕುಳಿತಿದ್ದ ರಣ್‍ವೀರ್-ಫೋಟೋ ವೈರಲ್

    ಮುಂಬೈ: ಬಾಲಿವುಡ್ ಬೆಡಗಿ ಸೋನಮ್ ಕಪೂರ್ ಮದುವೆಗೆ ಆಗಮಿಸಿದ ರಣ್‍ವೀರ್ ಸಿಂಗ್ ತನ್ನ ಪ್ರೇಯಸಿ ದೀಪಿಕಾ ಪಡುಕೋಣೆಯನ್ನು ನೆನೆಸಿಕೊಂಡು ಮೊಬೈಲ್ ಹಿಡಿದು ಮೂಲೆಯಲ್ಲಿ ಕುಳಿತಿರುವ ಫೋಟೋವೊಂದು ವೈರಲ್ ಆಗಿದೆ.

    ಸೋನಮ್ ಮದುವೆಯಲ್ಲಿ ಬಾಲಿವುಡ್‍ನ ಎಲ್ಲ ತಾರೆಯರು ಭಾಗಿಯಾಗಿದ್ದರು. ರಣ್‍ವೀರ್ ಸಿಂಗ್ ಕೂಡ ಸೋನಮ್ ಆರತಕ್ಷತೆಗೆ ಆಗಮಿಸಿದ್ದರು. ಆದರೆ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ಸೋನಮ್ ಮದುವೆಗೆ ಆಗಮಿಸಿರಲಿಲ್ಲ. ಆರತಕ್ಷತೆಯಲ್ಲಿ ದೀಪಿಕಾ ಅನುಪಸ್ಥಿತಿಯಿಂದ ರಣ್‍ವೀರ್ ಮೂಲೆಯಲ್ಲಿ ಕುಳಿತು ಮೊಬೈಲ್ ನೋಡುತ್ತಿದ್ದರು.

    ಮೂಲೆಯಲ್ಲಿ ಕುಳಿತು ರಣ್‍ವೀರ್ ಯಾರೊಂದಿಗೋ ಚಾಟಿಂಗ್ ಮಾಡುತ್ತಿದ್ದರು ಎನ್ನಲಾಗಿದೆ. ಆದರೆ ಯಾರೊಂದಿಗೆ ಚಾಟಿಂಗ್ ಮಾಡುತ್ತಿರುವುದು ಎಂಬುದು ಸರಿಯಾಗಿ ತಿಳಿದಿಲ್ಲ. ಆದರೆ ರಣ್‍ವೀರ್ ತನ್ನ ಗೆಳತಿ ದೀಪಿಕಾ ಪಡುಕೋಣೆಯನ್ನು ಮಿಸ್ ಮಾಡಿಕೊಳ್ಳುತ್ತಿದ್ದರು. ಹಾಗಾಗಿ ಅವರು ದೀಪಿಕಾ ಜೊತೆ ಚಾಟಿಂಗ್ ನಡೆಸುತ್ತಿದ್ದರು ಎಂದು ಬಿ-ಟೌನ್‍ನಲ್ಲಿ ಸುದ್ದಿಯಾಗಿದೆ.

    ದೀಪಿಕಾ ಪಡುಕೋಣೆ ಮೆಟ್ ಗಾಲಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಾರಣ ಸೋನಮ್ ಮದುವೆಗೆ ಆಗಮಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ರಣ್‍ವೀರ್ ಸಿಂಗ್ ದೀಪಿಕಾರನ್ನು ಮಿಸ್ ಮಾಡಿಕೊಳ್ಳುತ್ತಿದ್ದರು. ಗೆಳತಿ ಜೊತೆಯಲ್ಲಿ ಇಲ್ಲದ ಕಾರಣ ರಣ್‍ವೀರ್ ಸ್ವಲ್ಪ ಬೇಜಾರಿನಲ್ಲಿ ಕಾರ್ಯಕ್ರಮದಿಂದ ಹೊರಬಂದು ದೀಪಿಕಾ ಜೊತೆ ಫೋನಿನಲ್ಲಿ ಮಾತನಾಡಿದ್ದರು ಎಂದು ಬಾಲಿವುಡ್‍ನಲ್ಲಿ ಸುದ್ದಿಯಾಗಿದೆ.

    ಸದ್ಯ ರಣ್‍ವೀರ್ ಸಿಂಗ್ ಸೋನಮ್ ಮದುವೆಯಲ್ಲಿ ಮೂಲೆಯಲ್ಲಿ ಕುಳಿತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  • ರೂಮಿನಲ್ಲಿ ಮಲಗ್ಬೇಡ ಎಂದಿದ್ದಕ್ಕೆ 5ನೇ ಮಹಡಿ ಕಿಟಕಿಯ ಮೇಲೆ ಮಲಗಿದ 12ರ ಪೋರ: ವಿಡಿಯೋ

    ರೂಮಿನಲ್ಲಿ ಮಲಗ್ಬೇಡ ಎಂದಿದ್ದಕ್ಕೆ 5ನೇ ಮಹಡಿ ಕಿಟಕಿಯ ಮೇಲೆ ಮಲಗಿದ 12ರ ಪೋರ: ವಿಡಿಯೋ

    ಬೀಜಿಂಗ್: ರೂಮಿನಲ್ಲಿ ಮಲಗಬೇಡ ಎಂದಿದ್ದಕ್ಕೆ 12 ವರ್ಷದ ಬಾಲಕಿನೊಬ್ಬ 5ನೇ ಮಹಡಿಯ ಕಿಟಕಿಯ ಲೇಡ್ಜ್ ಮೇಲೆ ಮಲಗಿದ ಘಟನೆ ಚೀನಾದಲ್ಲಿ ನಡೆದಿದ್ದು, ವಿಡಿಯೋ ವೈರಲ್ ಆಗಿದೆ.

    ಬಾಲಕ ರೂಮಿನಲ್ಲಿ ಮಲಗಿದ ಮೇಲೆ ಹಾಸಿಗೆಯಿಂದ ಎದ್ದು ಬರಲು ಸೋಮಾರಿ ಆಗುತ್ತಿದ್ದನು. ಇದನ್ನು ನೋಡಿ ಕೋಪಗೊಂಡ ಆತನ ತಂದೆ ಬಾಲಕನಿಗೆ ರೂಮಿನಲ್ಲಿ ಮಲಗಬೇಡ ಎಂದು ಆತನನ್ನು ಬೈದಿದ್ದಾರೆ ಎಂದು ವರದಿಯಾಗಿದೆ.

    ತಂದೆ ಬೈದಿದ್ದರಿಂದ ಕೋಪಗೊಂಡ ಬಾಲಕ ಕಿಟಕಿಯ ಮೇಲೆ ಮಲಗಲು ನಿರ್ಧರಿಸಿದ್ದನು. ನಂತರ ಹಾಸಿಗೆ ಮೇಲೆ ಹತ್ತಿ, ತನ್ನ ಎರಡೂ ಕೈಗಳನ್ನು ಕಟ್ಟಿಕೊಂಡು ಕಿಟಕಿ ಮೇಲೆ ಮಲಗಿದ್ದಾನೆ. ಹೀಗೆ ಮಲಗಿದ ಬಾಲಕನನ್ನು ರಕ್ಷಿಸಲು ಅಗ್ನಿಶಾಮಕ ಸಿಬ್ಬಂದಿ ಬಂದರು ಎಂದು ಹೇಳಲಾಗಿದೆ.

    ಸದ್ಯ ಬಾಲಕ 5ನೇ ಮಹಡಿಯ ಕಿಟಕಿ ಮೇಲೆ ಮಲಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಬಾಲಕ ಸಿಟ್ಟಿನಿಂದ ಕಿಟಕಿಯ ಮೇಲೆ ಮಲಗಿದ್ದು, ಅಗ್ನಿಶಾಮಕ ಸಿಬ್ಬಂದಿ ಬಾಲಕನನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.

  • ಸೆಕ್ಸ್ ವಿಡಿಯೋ ವೈರಲ್ ಆಗಿದ್ದಕ್ಕೆ ಅಪ್ರಾಪ್ತೆ ಆತ್ಮಹತ್ಯೆ!

    ಸೆಕ್ಸ್ ವಿಡಿಯೋ ವೈರಲ್ ಆಗಿದ್ದಕ್ಕೆ ಅಪ್ರಾಪ್ತೆ ಆತ್ಮಹತ್ಯೆ!

    ಭುವನೇಶ್ವರ್: ತನ್ನ ಪ್ರಿಯಕರ ಜೊತೆಗಿನ ಸೆಕ್ಸ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಕ್ಕೆ ಅಪ್ರಾಪ್ತ ಬಾಲಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಒಡಿಶಾದ ನಾಬರಂಗ್‍ಪುರದಲ್ಲಿ ನಡೆದಿದೆ.

    ಬಾಲಕಿ ತನ್ನದೇ ಏರಿಯಾದ ಯುವಕನನ್ನು ಪ್ರೀತಿಸುತ್ತಿದ್ದಳು. ಆತನ ಜೊತೆ ದೈಹಿಕ ಸಂಪರ್ಕ ಕೂಡ ಬೆಳೆಸಿದ್ದಳು. ದೈಹಿಕ ಸಂಪರ್ಕ ಬೆಳೆಸಿದ ಆ ವಿಡಿಯೋವನ್ನು ಯುವಕ ಸಾಮಾಜಿಕ ಜಾಲತಾಣದಲ್ಲಿ ಹಾಕಿ ವೈರಲ್ ಮಾಡಿದ್ದಾನೆ.

    ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಬಾಲಕಿ ಇಂದು ಬೆಳಗ್ಗೆ ಹತ್ತಿರದ ಕಾಡಿಗೆ ಹೋಗಿ ಅಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಕಾಡಿನ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಬಾಲಕಿಯ ಶವ ದೊರೆತ್ತಿದ್ದು, ನಂತರ ಆಕೆಯ ಮೃತದೇಹವನ್ನು ಮನೆಗೆ ಕರೆತರಲಾಗಿತ್ತು.

    ಗ್ರಾಮಸ್ಥರು ಆಕೆಯ ಮೃತದೇಹವನ್ನು ಕಾಡಿನಿಂದ ಆಕೆಯ ಮನೆಗೆ ತಂದರು. ನಂತರ ವೈರಲ್ ಆಗಿದ ಆಕೆಯ ವಿಡಿಯೋವನ್ನು ಗ್ರಾಮಸ್ಥರು ಬಾಲಕಿಯ ತಂದೆಗೆ ತೋರಿಸಿದ್ದರು. ಈ ವಿಡಿಯೋ ವೈರಲ್ ಆಗಿದ್ದಕ್ಕೆ ನಿನ್ನ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಗ್ರಾಮಸ್ಥರು ಬಾಲಕಿಯ ತಂದೆಗೆ ತಿಳಿಸಿದ್ದಾರೆ.

    ಈ ಬಗ್ಗೆ ಬಾಲಕಿಯ ತಂದೆ ಜರಿಗಾಂವ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ತನಿಖೆ ಶುರು ಮಾಡಿದ್ದಾರೆ. ಈ ಪ್ರಕರಣದ ನಂತರ ಯುವಕ ಪರಾರಿಯಾಗಿದ್ದಾನೆ. ಇನ್ನೂ ಬಾಲಕಿಯ ಶವವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

  • ದೇವಸ್ಥಾನದ ಪೂಜಾರಿಯಿಂದ ಮಹಿಳೆಗೆ ಲೈಂಗಿಕ ಕಿರುಕುಳ- ವಿಡಿಯೋ ವೈರಲ್!

    ದೇವಸ್ಥಾನದ ಪೂಜಾರಿಯಿಂದ ಮಹಿಳೆಗೆ ಲೈಂಗಿಕ ಕಿರುಕುಳ- ವಿಡಿಯೋ ವೈರಲ್!

    ಭುವನೇಶ್ವರ: ದೇವಸ್ಥಾನದ ಪೂಜಾರಿಯೊಬ್ಬ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿ ಆಕೆ ಜೊತೆ ಅಸಭ್ಯವಾಗಿ ಫೋಟೋ, ವಿಡಿಯೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಘಟನೆ ಒಡಿಶಾದಲ್ಲಿ ನಡೆದಿದೆ.

    ಸರೋಜ್ ಕುಮಾರ್ ಡಾಶ್ ಮಹಿಳೆ ಜೊತೆ ಅಸಭ್ಯವಾಗಿ ಫೋಟೋ, ವಿಡಿಯೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಪೂಜಾರಿ. ಸರೋಜ್ ಕುಮಾರ್ ಮಹಿಳೆಯ ಚಿನ್ನವನ್ನು ಅಡವಿಟ್ಟು ಆಕೆಗೆ ಹಣ ನೀಡುವುದಾಗಿ ಹೇಳಿ ಮಹಿಳೆಯನ್ನು ತನ್ನ ಮನೆಗೆ ಕರೆಸಿಕೊಂಡಿದ್ದ.

    ಸರೋಜ್ ಕುಮಾರ್ ಮಾತನ್ನು ನಂಬಿದ ಮಹಿಳೆ ಹಣ ಪಡೆಯಲು ತನ್ನ ಚಿನ್ನಭಾರಣವನ್ನು ಅಡವಿಡಲು ಆತನ ಮನೆಗೆ ತೆಗೆದುಕೊಂಡು ಹೋಗಿದ್ದಳು. ಮನೆಗೆ ಬಂದ ಮಹಿಳೆಗೆ ಸರೋಜ್ ಕುಮಾರ್ ಮತ್ತು ಬರುವ ಔಷಧಿಯನ್ನು ಜ್ಯೂಸಿನಲ್ಲಿ ಹಾಕಿ ಆಕೆಗೆ ನೀಡಿದ್ದನು ಎಂದು ವರದಿಯಾಗಿದೆ.

                                          ಕೃಪೆ: ಕಳಿಂಗ

    ಮಹಿಳೆ ಆ ಜ್ಯೂಸನ್ನು ಕುಡಿದ ಮೇಲೆ ಪ್ರಜ್ಞೆ ತಪ್ಪಿ ಬಿದಿದ್ದಾಳೆ. ಆಗ ಸರೋಜ್ ಕುಮಾರ್ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿ, ಅದ್ದನ್ನು ತನ್ನ ಫೋನಿನಲ್ಲಿ ರೆಕಾರ್ಡ್ ಮಾಡಿದ್ದಾನೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.

    ಸರೋಜ್ ಕುಮಾರ್ ಆ ವಿಡಿಯೋವನ್ನು ಮಹಿಳೆಗೆ ತೋರಿಸಿ ತನ್ನ ಜೊತೆ ದೈಹಿಕ ಸಂಪರ್ಕ ಬೆಳೆಸುವಂತೆ ಬ್ಲಾಕ್‍ಮೇಲ್ ಮಾಡುತ್ತಿದ್ದನು. ಆದರೆ ಮಹಿಳೆ ಅದಕ್ಕೆ ಒಪ್ಪಲಿಲ್ಲ. ನಂತರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೂಜಾರಿ ಸರೋಜ್ ವಿರುದ್ಧ ದೂರು ದಾಖಲಿಸಿದ್ದಾರೆ.

    ಆರೋಪಿ ಸರೋಜ್ ಕುಮಾರ್ ಮಹಿಳೆ ಜೊತೆ ತೆಗೆದ ಅಸಭ್ಯ ವಿಡಿಯೋವನ್ನು ಆಕೆಯ ಪತಿ, ಸ್ನೇಹಿತರಿಗೆ ಹಾಗೂ ಆಕೆಯ ಸಂಬಂಧಿಕರಿಗೆ ಫೇಸ್‍ಬುಕ್ ಮತ್ತು ವಾಟ್ಸಾಪ್ ಮೂಲಕ ಕಳುಹಿಸಿದ್ದನು. ಸದ್ಯ ಪೊಲೀಸರು ಮಹಿಳೆಯ ದೂರು ಆಧರಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಖಾಸಗಿ ವಾಹಿನಿಯ ಡ್ಯಾನ್ಸ್ ರಿಯಾಲಿಟಿ ಶೋ ವಿನ್ನರ್ ಯುವತಿಯ ಸೆಕ್ಸ್ ವಿಡಿಯೋ ವೈರಲ್!

  • ಮಹಿಳೆಯನ್ನು ತಬ್ಬಿಕೊಂಡು ಕಿಸ್ ಮಾಡಿ ಪೋಸ್ ಕೊಟ್ಟ ಕಾರ್ಪೋರೇಟರ್- ಫೋಟೋ ವೈರಲ್

    ಮಹಿಳೆಯನ್ನು ತಬ್ಬಿಕೊಂಡು ಕಿಸ್ ಮಾಡಿ ಪೋಸ್ ಕೊಟ್ಟ ಕಾರ್ಪೋರೇಟರ್- ಫೋಟೋ ವೈರಲ್

    ತುಮಕೂರು: ಇಲ್ಲಿನ ಮಹಾನಗರ ಪಾಲಿಕೆ ಕಾರ್ಪೋರೇಟರೊಬ್ಬರ ಪಲ್ಲಂಗ ಪುರಾಣದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಪರಸ್ತ್ರೀಯೊಂದಿಗೆ ನಗ್ನವಾಗಿ ಮಲಗಿರೋ ಫೋಟೊಗಳು ಎಲ್ಲೆಡೆ ಹರಿದಾಡುತ್ತಿದ್ದು, ತೀವ್ರ ಚರ್ಚೆಗೆ ಕಾರಣವಾಗಿದೆ. ಮಹಾನಗರ ಪಾಲಿಕೆಯ 11ನೇ ವಾರ್ಡ್ ಮೆಳೆಕೋಟೆಯ ಬಿಜೆಪಿ ಸದಸ್ಯ ವೆಂಕಟೇಶ್ ಹಾಗೂ ಮಹಿಳೆಯೊಬ್ಬರು ಅರೆನಗ್ನವಾಗಿ ಮಲಗಿ ಚುಂಬಿಸುತ್ತಿರುವ ಫೋಟೋಗಳು ವೈರಲ್ ಆಗಿದೆ.

    ಕಿಸ್ ನೀಡಿ ಪೋಸ್ ಕೊಟ್ಟಿರುವ ಕಾರ್ಪೋರೇಟರ್ ನ ಅಸಭ್ಯ ಭಂಗಿಗಳಿಂದ ಜನಪ್ರತಿನಿಧಿಯ ಮಾನ ಹರಾಜಾಗಿದೆ. ವಾರ್ಡ್ ನ ಸಮಸ್ಯೆ ಆಲಿಸಲು ಬಾರದ ಕಾರ್ಪೋರೇಟರ್, ಇದೀಗ ಈ ರೀತಿ ಸುದ್ದಿಯಾಗಿರೋದಕ್ಕೆ ಜನರು ಹಿಡಿಶಾಪ ಹಾಕುತ್ತಿದ್ದಾರೆ.

  • ಪ್ರೇಯಸಿ ಮಾತನಾಡದ್ದಕ್ಕೆ ಪ್ರಿಯಕರನಿಂದಲೇ ಆಕೆಯ ಖಾಸಗಿ ಫೋಟೋ ವೈರಲ್!

    ಪ್ರೇಯಸಿ ಮಾತನಾಡದ್ದಕ್ಕೆ ಪ್ರಿಯಕರನಿಂದಲೇ ಆಕೆಯ ಖಾಸಗಿ ಫೋಟೋ ವೈರಲ್!

    ಭುವನೇಶ್ವರ: ಯುವಕನೊಬ್ಬ ತನ್ನ ಪ್ರೇಯಸಿ ಮಾತನಾಡುತ್ತಿಲ್ಲವೆಂದು ಆಕೆಗೆ ಮದ್ಯ ಕುಡಿಸಿ ಆಕೆಯ ಮೇಲೆ ಅತ್ಯಾಚಾರವೆಸಗಿ ಅಶ್ಲೀಲ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಘಟನೆ ಒಡಿಶಾದ ರೈಮಾಲಾದಲ್ಲಿ ನಡೆದಿದೆ.

    ರುಶಿಕೇಶ್ ಬಿಸ್ವಾಲ್ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಾಕಿ ಬಂಧನಕ್ಕೆ ಒಳಗಾದ ಪ್ರಿಯಕರ. ಯುವತಿಗೆ ಮದ್ಯ ಕುಡಿಸಿ ಆಕೆಯ ಜೊತೆ ಅಶ್ಲೀಲ ಫೋಟೋ ತೆಗೆದುಕೊಂಡು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ಆ ಫೋಟೋಗಳು ಈಗ ಸಾಕಷ್ಟು ವೈರಲ್ ಆಗಿದೆ.

     

    ಸದ್ಯ ಪೊಲೀಸ್ ಆರೋಪಿಯನ್ನು ಬಂಧಿಸಿದ್ದಾರೆ. ರುಶಿಕೇಶ್ ಆಟೋ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದನು. ವಿಚಾರಣೆ ವೇಳೆ ತನ್ನ ಪ್ರೇಯಸಿ ಮೇಲೆ ಸೇಡು ತೀರಿಸಿಕೊಳ್ಳಲು ಈ ರೀತಿ ಮಾಡಿದ್ದೇನೆ ಎಂದು ಪೊಲೀಸರ ಹತ್ತಿರ ಒಪ್ಪಿಕೊಂಡಿದ್ದಾನೆ.

    ರಿಶಿಕೇಶ್ ಹಾಗೂ ಯುವತಿ ನಡುವೆ ಮಾರ್ಚ್ 31ರಿಂದ ವಾಗ್ವಾದ ನಡೆಯುತ್ತಿತ್ತು. ಹಾಗಾಗಿ ಆರೋಪಿ ಈ ರೀತಿ ಫೋಟೋ ತೆಗೆದು ವೈರಲ್ ಮಾಡಿದ್ದಾನೆ ಎಂದು ಹೇಳಲಾಗಿದೆ. ಆರೋಪಿ ಸಾಕಷ್ಟು ಸಿಮ್ ಗಳನ್ನು ಹೊಂದಿದ್ದ ವಿಚಾರ ತನಿಖೆ ವೇಳೆ ಬೆಳಕಿಗೆ ಬಂದಿದೆ.

    ನನ್ನ ಹಾಗೂ ಆಕೆಯ ಮಧ್ಯೆ ಸಂಬಂಧವಿತ್ತು. ಆಕೆ ನನ್ನ ಆಟೋವನ್ನು ಬಾಡಿಗೆಗೆಂದು ತೆಗೆದುಕೊಂಡು ಹೋಗುತ್ತಿದ್ದಳು ಹಾಗೂ ನನ್ನ ಹತ್ತಿರ ಹಣ ಕೂಡ ಪಡೆದಿದ್ದಳು. ಕೆಲವು ಕಾರಣಗಳಿಂದ ಆಕೆ ನನ್ನ ಜೊತೆ ಮಾತನಾಡುತ್ತಿರಲಿಲ್ಲ. ಹಾಗಾಗಿ ನಾನು ಆ ಫೋಟೋಗಳನ್ನು ಮಾರ್ಚ್ 31ರಂದೇ ವೈರಲ್ ಮಾಡಿದ್ದೆ ಎಂದು ಆರೋಪಿ ರಿಶಿಕೇಶ್ ತಿಳಿಸಿದ್ದಾನೆ.