Tag: viral

  • 120 ಮಹಿಳೆಯರನ್ನ ರೇಪ್ ಮಾಡಿದ್ದ 60 ವರ್ಷದ ಸ್ವಾಮೀಜಿಯ ಬಂಧನ

    120 ಮಹಿಳೆಯರನ್ನ ರೇಪ್ ಮಾಡಿದ್ದ 60 ವರ್ಷದ ಸ್ವಾಮೀಜಿಯ ಬಂಧನ

    -120 ಸೆಕ್ಸ್ ಸಿಡಿ ವಶಕ್ಕೆ ಪಡೆದ ಪೊಲೀಸರು

    ಫತೇಹಬಾದ್: ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ನಡೆಸಿದ ವಿಡಿಯೋ ವೈರಲ್ ಆದ ಬಳಿಕ ಸ್ವಾಮೀಜಿಯನ್ನು ಬಂಧಿಸಿರುವ ಘಟನೆ ಹರಿಯಾಣದ ಫತೇಹಬಾದ್ ಪ್ರದೇಶದಲ್ಲಿ ನಡೆದಿದೆ.

    ಬಾಬಾ ಅಮರ್ ಪೂರಿ (60) ಬಂಧಿತ ಆರೋಪಿಯಾಗಿದ್ದು, ಸದ್ಯ ಈತನ ಮೇಲೆ 120 ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ ಆರೋಪ ಕೇಳಿಬಂದಿದೆ.

    ಈ ಕುರಿತು ಮಾಹಿತಿ ನೀಡಿರುವ ಪೊಲೀಸರು, ಸ್ವಾಮೀಜಿಯ ವಿರುದ್ಧ ಶುಕ್ರವಾರ ಪ್ರಕರಣ ದಾಖಲಿಸಿ ಬಂಧಿಸಲಾಗಿದ್ದು, ಆತನಿಗೆ ಸಂಬಂಧಿಸಿದ ಕೆಲ ಪ್ರದೇಶಗಳ ಮೇಲೆ ದಾಳಿ ನಡೆಸಿ ಅನುಮಾನಸ್ಪದಾಗಿ ಕಂಡು ಬಂದ ಫೈಲ್ ಗಳನ್ನು ವಶಕ್ಕೆ ಪಡೆದಿದ್ದು, ಬಾಬಾ ವಿರುದ್ಧ ಇಬ್ಬರು ಮಹಿಳೆಯರು ನೀಡಿರುವ ಹೇಳಿಕೆಯನ್ನು ದಾಖಲಿಸಿಕೊಂಡಿರುವುದಾಗಿ ಮಾಹಿತಿ ನೀಡಿದ್ದಾರೆ.

    ಅಂದಹಾಗೇ ಮಹಿಳೆ ಮೇಲೆ ಅತ್ಯಾಚಾರ ನಡೆಸುತ್ತಿದ್ದ ಸ್ವಾಮೀಜಿ ಈ ದೃಶ್ಯಗಳನ್ನು ಸೆರೆ ಹಿಡಿದು ಬಳಿಕ ಮಹಿಳೆಯರಿಗೆ ಬ್ಲಾಕ್ ಮೇಲ್ ಮಾಡುತ್ತಿದ್ದ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಅಲ್ಲದೇ ಈ ಸಂಬಂಧ ಪೊಲೀಸರು ದಾಳಿ ನಡೆಸಿದ ವೇಳೆ 120 ವಿಡಿಯೋ ಕ್ಲೀಪ್ ಗಳನ್ನು ವಶಕ್ಕೆ ಪಡೆದಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

    ಬಂಧಿತ ಅಮರ್ ಪೂರಿ ಸ್ವಾಮೀಜಿ ಹರಿಯಾಣದ ಫತೇಹಬಾದ್ ನ ಬಾಬಾ ಬಾಲ್ಕಾನಾಥ್ ದೇವಾಲಯದ ಸ್ವಾಮೀಜಿಯಾಗಿದ್ದು, ಈತನನ್ನು 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಬಾಬಾ ವಿರುದ್ಧ ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದರು. ಈ ವೇಳೆ ಸ್ವಾಮೀಜಿ ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದ ಅತ್ಯಾಚಾರದ ದೃಶ್ಯಗಳ ಸಿಡಿಯನ್ನು ಸಹ ಪೊಲೀಸರಿಗೆ ಸಲ್ಲಿಸಿದ್ದಾರೆ. ಕಳೆದ 9 ತಿಂಗಳ ಹಿಂದೆಯಷ್ಟೇ ಮಹಿಳೆಯೊಬ್ಬರು ಸ್ವಾಮೀಜಿಯ ತಮ್ಮ ಮೇಲೆ ದೇವಾಲಯದಲ್ಲೇ ಲೈಂಗಿಕ ದೌರ್ಜನ್ಯ ನಡೆಸಿದ್ದಾಗಿ ದೂರು ನೀಡಿದ್ದರು.

  • ವಿರುಷ್ಕಾ ದಂಪತಿಯ ಕ್ಯೂಟ್ ಫೋಟೋ ವೈರಲ್

    ವಿರುಷ್ಕಾ ದಂಪತಿಯ ಕ್ಯೂಟ್ ಫೋಟೋ ವೈರಲ್

    ನವದೆಹಲಿ: ವಿರಾಟ್ ಮತ್ತು ಅನುಷ್ಕಾರವರು ಕ್ಯೂಟ್ ಫೋಟೋವೊಂದನ್ನು ಕ್ಲಿಕ್ ಮಾಡಿ ಇನ್ಸಟಾ ದಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಅದು ಹೆಚ್ಚಿನ ಜನರ ಮೆಚ್ಚುಗೆಯನ್ನು ಪಡೆದಿಕೊಂಡಿದ್ದು, ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಅವರು ಶುಕ್ರವಾರ ರಾತ್ರಿ ಹೋಟೆಲ್‍ವೊಂದಕ್ಕೆ ಊಟ ಮಾಡುವುದಕ್ಕೆ ತೆರಳಿದ್ದರು. ಆ ವೇಳೆ ಫೋಟೋವನ್ನು ಕ್ಲಿಕ್ ಮಾಡಿ, ಇನ್ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿ, ‘ನನ್ನ ಸಂಗಾತಿ ಜೊತೆ ಅತ್ಯುತ್ತಮವಾದ ಭೋಜನ’ ಎಂದು ಬರೆದುಕೊಂಡಿದ್ದಾರೆ. ಇದು ಒಂದು ದಿನದಲ್ಲೇ ಮಿಲಿಯನ್ ಲೈಕ್ಸ್ ಪಡೆದುಕೊಂಡಿದೆ.

    ಈ ಫೋಟೋವಿಗೆ ನೆಟ್ಟಿಗರು ಮೆಚ್ಚುಗೆಯನ್ನು ಸೂಚಿಸಿದ್ದು, ‘ಕಪಲ್ ಗೋಲ್ಸ್’ ಎಂದು ಕಮೆಂಟ್ ಮಾಡಿದ್ದಾರೆ.

    ಈ ತಿಂಗಳಲ್ಲೇ ವಿರುಷ್ಕಾ ಸಾಲು ಸಾಲದ ಫೋಟೋಗಳನ್ನು ಅಪ್ಲೋಡ್ ಮಾಡಿದ್ದರು. ಎಲ್ಲವೂ ಹೆಚ್ಚಿನ ಲೈಕ್ಸ್ ಪಡೆದುಕೊಂಡಿದೆ. ಅಷ್ಟೇ ಅಲ್ಲದೇ ಭಾರತ ಇಂಗ್ಲೆಂಡ್ ವಿರುದ್ಧ ಏಕದಿನ ಪಂದ್ಯ ವೀಕ್ಷಣೆಗಾಗಿ ಅನುಷ್ಕಾರವರು ವಿರಾಟ್‍ರೊಂದಿಗೆ ಲಂಡನ್ ಗೆ ತೆರಳಿದ್ದಾರೆ. ಆ ವೇಳೆ ಅನುಷ್ಕಾರವರು ಶಿಖರ್ ಧವನ್ ಕುಟುಂಬ ಮತ್ತು ಎಂ ಎಸ್ ಧೋನಿ ಪತ್ನಿ ಸಾಕ್ಷಿರವರೊಂದಿಗೆ ಕ್ಲಿಕ್ ಮಾಡಿದ ಫೋಟೋಗಳನ್ನು ಕೂಡ ಅಪ್ಲೋಡ್ ಮಾಡಿಕೊಂಡಿದ್ದರು.

    https://www.instagram.com/p/Bld697WAlaz/?utm_source=ig_embed

    https://www.instagram.com/p/Bla3P77gTYe/?taken-by=virat.kohli

    https://www.instagram.com/p/Bk-qhasFPQC/?taken-by=sakshisingh_r

  • ಪಲಿಮಾರು ಶ್ರೀಗೆ 50, ಅಜ್ಜಗೆ 50ಲಕ್ಷ, 1 ಕೋಟಿ ಕೊಟ್ರೆ ಮ್ಯಾಟರ್ ಫಿನಿಶ್- ಶಿರೂರು ಶ್ರೀಗಳ ಆಡಿಯೋ ವೈರಲ್

    ಪಲಿಮಾರು ಶ್ರೀಗೆ 50, ಅಜ್ಜಗೆ 50ಲಕ್ಷ, 1 ಕೋಟಿ ಕೊಟ್ರೆ ಮ್ಯಾಟರ್ ಫಿನಿಶ್- ಶಿರೂರು ಶ್ರೀಗಳ ಆಡಿಯೋ ವೈರಲ್

    ಉಡುಪಿ: ಶಿರೂರು ಸ್ವಾಮೀಜಿ ಅವರು ತುಳುವಿನಲ್ಲಿ ಮಾತನಾಡಿರುವ ವಾಟ್ಸಪ್ ವಾಯ್ಸ್ ನೋಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಅಜ್ಜರಿಗೆ ಒಂದು ಕೋಟಿ ಕೊಟ್ರೆ ಮ್ಯಾಟರ್ ಫಿನಿಶ್ ಆಗುತ್ತೆ. 50 ಲಕ್ಷ ಪಲಿಮಾರು ಸ್ವಾಮೀಜಿಗೆ. 50 ಲಕ್ಷ ಅವರಿಗೆ ಕೊಡಬೇಕಂತೆ ಎಂದು ಮಾತನಾಡಿದ್ದಾರೆ. ಸೋದೆ ಸ್ವಾಮೀಜಿ ವಿಶ್ವವಲ್ಲಭ ತೀರ್ಥಶ್ರಿಗಳ ಹೆಸರು ಪ್ರಸ್ತಾಪ ಮಾಡಿದ್ದಾರೆ.

    ಅವರ ಎಂಟು ಸಾವಿರ ಭಕ್ತರಿಂದ ಪ್ರತಿ ಮನೆಯಿಂದ ಒಂದು ಪವನ್ ಚಿನ್ನ ಒಟ್ಟುಗೂಡಿಸ್ತಾರಂತೆ. ಆದ್ರೆ ಆಡಿಯೋದಲ್ಲಿ ಯಾವುದೂ ಸ್ಪಷ್ಟ ಮಾಹಿತಿ ಇಲ್ಲ. ಯಾವ ಸಂದರ್ಭದಲ್ಲಿ ಯಾರಿಗೆ ಈ ಆಡಿಯೋ ಕಳುಹಿಸಿದ್ದಾರೋ ಎಂಬ ಬಗ್ಗೆ ಮಾಹಿತಿಯಿಲ್ಲ.

    ಪಟ್ಟದ ದೇವರನ್ನು ಮರಳಿ ನೀಡುವ ವಿಚಾರದಲ್ಲಿ ವ್ಯವಹಾರ ಮಾತುಕತೆ ನಡೆದಿತ್ತಾ? ಅಥವಾ ಯಾವುದೊ ಮಹತ್ವದ ಯೋಜನೆಗೆ ಹಣ ಸಂಗ್ರಹಿಸುವ ಬಗ್ಗೆ ನಡೆದ ಮಾತುಕತೆಯೋ ಸ್ಪಷ್ಟವಾಗಿಲ್ಲ. ಆಡಿಯೊದ ಮೂಲ ತನಿಖೆ ಮಾಡಿದ್ರೆ ಸಾಕಷ್ಟು ವಿಚಾರ ಬೆಳಕಿಗೆ ಬರುವ ಸಾಧ್ಯತೆ ಇದೆ.

    ಶಿರೂರು ಶ್ರೀ ವಾಟ್ಸಾಪ್ ವಾಯ್ಸ್ ನೋಟ್:

    ಆಗ ನೋಡಿದೆ ನಿನ್ನ ವಾಟ್ಸಪ್…
    ಭಾರಿ ಖುಷಿ ಆಯ್ತು.
    ಅಜ್ಜರದ್ದು ಒಂದು ಡಿಮ್ಯಾಂಡ್ ಉಂಟು ಮಾರಾಯಾ.
    ಅವರಿಗೆ ಒಂದು ಕೋಟಿ ಕೊಡಬೇಕಂತೆ.
    ಐವತ್ತು ಲಕ್ಷ ಪಲಿಮಾರು ಸ್ವಾಮೀಜಿಗೆ ಕೊಡಬೇಕಂತೆ.
    ಐವತ್ತು ಲಕ್ಷ ಅವರಿಗೆ (ಪೇಜಾವರ?) ಬೇಕಂತೆ.
    ಆಮೇಲೆ ಈ ಮ್ಯಾಟರ್ ಫಿನೀಷ್ ಅಂತೆ.

    ಆಮೇಲೆ ಏನೂಂತ ಅಂದ್ರೆ… ಕರ್ನಾಟಕದಲ್ಲಿ ಸೋದೆ ಮಠದ ಶಿಷ್ಯಂದಿರ ಒಟ್ಟು ಎಂಟು ಸಾವಿರ ಮನೆ ಉಂಟಂತೆ. ಎಂಟು ಸಾವಿರ ಮನೆಗೆ ಒಂದೊಂದು ಮನೆಯಿಂದ ಒಂದೊಂದು ಪವನ್ ಚಿನ್ನ ವ್ಯವಸ್ಥೆ ಮಾಡಿ ಕೊಡುತ್ತೇನೆ ಅಂತ ಹೇಳಿದ್ದಾನೆ. ವಿಶ್ವವಲ್ಲಭ (ಸೋದೆ ಮಠಾಧೀಶರು) ಹೇಳಿದ್ದಾನೆ. ಅದನ್ನು ಇವರು ಬೇಡುತ್ತಿದ್ದಾರೆ.

    ವಿಷಯ ಇವತ್ತು ಬೆಳಗ್ಗೆ ಗೊತ್ತಾಯ್ತು. ಇಷ್ಟೇ ವಿಷಯ, ಎಲ್ಲರಿಗೂ ತಿಳಿಸು ಆಯ್ತಾ ಅಂತ ಹೇಳಿದ್ದಾರೆ.

  • ವಿದ್ಯಾರ್ಥಿ ಮೇಲೆ ಎಎಸ್‍ಐ ದರ್ಪ

    ವಿದ್ಯಾರ್ಥಿ ಮೇಲೆ ಎಎಸ್‍ಐ ದರ್ಪ

    ದಾವಣಗೆರೆ: ವಾಹನ ತಪಾಸಣೆ ವೇಳೆ ವಿದ್ಯಾರ್ಥಿಯ ಮೇಲೆ ಎಎಸ್‍ಐ ದರ್ಪ ತೋರಿದ ಘಟನೆ ನಗರದ ಕೆಟಿಜೆ ಪೊಲೀಸ್ ಠಾಣೆ ಬಳಿ ನಡೆದಿದೆ.

    ಗುರುವಾರ ರಾತ್ರಿ ಕೆಟಿಜೆ ನಗರ ಪೊಲೀಸ್ ಠಾಣೆಯ ಎಎಸ್‍ಐ ಮಹೇಶ್ವರಪ್ಪ ಹಾಗೂ ಪೇದೆಗಳು ಸರ್ಕಲ್ ಬಳಿ ವಾಹನ ತಪಾಸಣೆ ಮಾಡುತ್ತಿದ್ದರು. ಈ ವೇಳೆ ವಾಹನ ದಾಖಲೆ ತೋರಿಸುವ ವಿಚಾರಕ್ಕೆ ವಿದ್ಯಾರ್ಥಿಗಳು ಹಾಗೂ ಎಎಸ್‍ಐ ನಡುವೆ ಮಾತಿನ ಚಕಮಕಿ ನಡೆದಿದೆ. ಇದರಿಂದ ಸಿಟ್ಟಿಗೆದ್ದ ಮಹೇಶ್ವರಪ್ಪ ವಿದ್ಯಾರ್ಥಿಗಳ ಪುಸ್ತಕಗಳನ್ನು ಕಸಿದುಕೊಂಡು, ರಸ್ತೆಯ ಕೆಸರಿನಲ್ಲಿ ಹಾಕಿದ್ದಾರೆ. ಅಲ್ಲದೇ ವಿದ್ಯಾರ್ಥಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

    ಮಹೇಶ್ವರಪ್ಪ ಈ ರೀತಿ ದಬ್ಬಾಳಿಕೆ ನಡೆಸುತ್ತಿರುವುದು ಮೊದಲೇನಲ್ಲ, ಈ ಮೊದಲು ಸಾರ್ವಜನಿಕರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದಾರೆ ಎನ್ನುವ ದೂರುಗಳು ಕೇಳಿ ಬಂದಿದ್ದವು. ಎಎಸ್‍ಐ ಮಹೇಶ್ವರಪ್ಪ ವಿದ್ಯಾರ್ಥಿಗಳ ಮೇಲೆ ದಬ್ಬಾಳಿಕೆ ನಡೆಸುತ್ತಿರುವುದನ್ನು ಸ್ಥಳೀಯರು ವಿಡಿಯೋ ಮಾಡಿ ಸಾಮಾಜಿಕ ತಾಣಗಳಲ್ಲಿ ಹರಿಬಿಟ್ಟಿದ್ದಾರೆ. ವಿಡಿಯೋ ವೈರಲ್ ಆದ ಬೆನ್ನಲ್ಲೇ ಎಎಸ್‍ಐ ಮಹೇಶ್ವರಪ್ಪನ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

  • ಪಂಜಾಬ್ ಪೊಲೀಸರ ಗ್ರೂಪ್ ಫೋಟೋ ವೈರಲ್: ನೆಟ್ಟಿಗರಿಂದ ಭಾರೀ ಕಮೆಂಟ್ಸ್

    ಪಂಜಾಬ್ ಪೊಲೀಸರ ಗ್ರೂಪ್ ಫೋಟೋ ವೈರಲ್: ನೆಟ್ಟಿಗರಿಂದ ಭಾರೀ ಕಮೆಂಟ್ಸ್

    ಚಂಡೀಗಢ: ಕಳ್ಳರನ್ನು ಹಿಡಿದ ಮೇಲೆ ಪೊಲೀಸರು ಗ್ರೂಪ್ ಫೋಟೋ ತೆಗೆಸಿಕೊಳ್ಳುವುದು ಸಾಮಾನ್ಯ ಪ್ರಕ್ರಿಯೆ. ಆದರೆ ಪಂಜಾಬ್ ಪೊಲೀಸರು ಈಗ ಇಂತಹದ್ದೇ ಗ್ರೂಪ್ ಫೋಟೋ ಸಾಮಾಜಿಕ ಜಾಲತಾಣಲದಲ್ಲಿ ವೈರಲ್ ಆಗಿದ್ದು, ಪರ ಹಾಗೂ ವಿರೋಧ ಕಮೆಂಟ್ಸ್‍ಗಳು ಹರಿದಾಡುತ್ತಿವೆ.

    ಏನಿದೆ ಫೋಟೋದಲ್ಲಿ?
    ಗ್ರೂಪ್ ಫೋಟೋ ತೆಗೆಸುತ್ತಿರುವ ವೇಳೆ ಆರೋಪಿಗಳನ್ನು ಕುರ್ಚಿ ಮೇಲೆ ಕೂರಿಸಲಾಗಿರುತ್ತದೆ. ಆದರೆ ತಮ್ಮ ತಪ್ಪಿನಿಂದ ಎಚ್ಚೆತ್ತ ಪೊಲೀಸರು ಪುನಃ ಆರೋಪಿಗಳನ್ನು ಕೆಳಗೆ ಕೂರಿಸಿ ಫೋಟೋ ತೆಗೆಸಿಕೊಂಡಿದ್ದಾರೆ. ಈ ಎರಡು ಫೋಟೋಗಳನ್ನು ಸೇರಿಸಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಲಾಗಿದ್ದು, ನೆಟ್ಟಿಗರಿಂದ ಭಾರೀ ಕಮೆಂಟ್ಸ್ ಕೇಳಿಬರುತ್ತಿವೆ.

    ಪಂಜಾಬ್ ಪೊಲೀಸರು ಇಂತಹದಕ್ಕೆ ಉತ್ತಮರು. ದರೋಢೆಕೊರರ ಜೊತೆ ಪೂರ್ಣ ಗೌರವ ನೀಡುವ ಗ್ರೂಪ್ ಫೋಟೋ ತಗೆಸಿಕೊಂಡಿದ್ದಾರೆ ಎಂದು ಬರೆದು ಅಮನ್ ಸಿಂಗ್ ಟ್ವೀಟ್ ಮೂಲಕ ವ್ಯಂಗ್ಯವಾಡಿದ್ದಾರೆ.

    ಇದರಲ್ಲಿ ಯಾವುದೇ ತಪ್ಪಿಲ್ಲ. ಇದೊಂದು ಸೌಜನ್ಯದ ಸಂಕೇತ. ಆರೋಪ ಸಾಬೀತು ಆಗುವವರೆಗೆ ಅವರು ಮುಗ್ಧರು ಎಂದು ಕಾನೂನಿನಲ್ಲಿದೆ ಎಂದು ಬರೆದು ಗುರ್ಸಾಟಿಂದರ್ ಸಿಂಗ್ ಟ್ವೀಟ್ ಮಾಡಿ, ಪೊಲೀಸರನ್ನು ಬೆಂಬಲಿಸಿದ್ದಾರೆ.

    https://twitter.com/Gursatinder68/status/1019808763258081280

  • ಧೋನಿ ನಿವೃತ್ತಿ ವದಂತಿ: ಕೋಚ್ ರವಿಶಾಸ್ತ್ರಿ ಸ್ಪಷ್ಟನೆ!

    ಧೋನಿ ನಿವೃತ್ತಿ ವದಂತಿ: ಕೋಚ್ ರವಿಶಾಸ್ತ್ರಿ ಸ್ಪಷ್ಟನೆ!

    ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯವರು ಎಲ್ಲಿಯೂ ಹೋಗುವುದಿಲ್ಲ, ಅವರು ತಂಡದಲ್ಲಿಯೇ ಇರುತ್ತಾರೆ ಎಂದು ಭಾರತ ಕ್ರಿಕೆಟ್ ತಂಡದ ತರಬೇತುದಾರ ರವಿಶಾಸ್ತ್ರೀಯವರು ಸ್ಪಷ್ಟನೆ ನೀಡಿದ್ದಾರೆ.

    ಧೋನಿ ನಿವೃತ್ತಿ ವದಂತಿ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಅವರು, ಧೋನಿಯವರು ಕೇವಲ ಬಾಲನ್ನು ಪರೀಕ್ಷೆಗೆ ಒಳಪಡಿಸುವುದಕ್ಕೋಸ್ಕರ ತೆಗೆದುಕೊಂಡಿದ್ದಾರೆ. ಧೋನಿಯವರು ಬಾಲ್ ತೆಗೆದುಕೊಂಡಿದ್ದಕ್ಕೆ ಅವರು ನಿವೃತ್ತಿ ಹೊಂದುತ್ತಾರೆ ಎನ್ನುವ ವಂದತಿ ಹಬ್ಬಿರುವುದು ದುರದೃಷ್ಟಕರ ಸಂಗತಿ. ಧೋನಿಯವರು ಎಲ್ಲಿಯೂ ಹೋಗಲ್ಲ, ಅವರು ಭಾರತ ಕ್ರಿಕೆಟ್ ತಂಡದಲ್ಲಿಯೇ ಇರುತ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ.

    ಇಂಗ್ಲೆಂಡ್ ವಿರುದ್ಧದ ಅಂತಿಮ ಪಂದ್ಯದಲ್ಲಿ ಭಾರತ ತಂಡ ಬೌಲಿಂಗ್ ಮಾಡುವಾಗ 45 ಓವರ್ ಗಳ ಬಳಿಕವು ಬಾಲ್ ವೇಗಿಗಳಿಗೆ ಕೈಕೊಟ್ಟಿತ್ತು. ಈ ಹಿನ್ನೆಲೆಯಲ್ಲಿ ಅನುಮಾನಗೊಂಡ ಧೋನಿ ಬಾಲನ್ನು ಪಡೆದು ತಂಡದ ಭಾರತ್ ಅರುಣ್ ಎಂಬ ಬಾಲ್ ತಜ್ಞರಿಗೆ ತೋರಿಸಿ, ಬಾಲ್ ನ ಸ್ಥಿತಿಗತಿಯ ಬಗ್ಗೆ ತಿಳಿದುಕೊಳ್ಳಲು ಅಂಪೈರ್ ನಿಂದ ಪಡೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧದ ಕೊನೆಯ ಪಂದ್ಯದಲ್ಲಿ ವಿದಾಯದ ಮುನ್ಸೂಚನೆ ನೀಡಿದ್ರಾ ಧೋನಿ?

    ಏನಿದು ವದಂತಿ?
    ಇಂಗ್ಲೆಂಡಿನಲ್ಲಿ ನಡೆದ ಅಂತಿಮ ಪಂದ್ಯದ ವೇಳೆ ಧೋನಿಯವರು ಅಂಪೈರ್ ನಿಂದ ಬಾಲನ್ನು ಪಡೆದುಕೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು. ಅಲ್ಲದೇ ಜಾಲತಾಣಿಗರು ವಿಡಿಯೋವನ್ನು ನೋಡಿ ಧೋನಿಯವರು ನಿವೃತ್ತಿಗಾಗಿ ಬಾಲನ್ನು ಪಡೆದುಕೊಂಡಿದ್ದಾರೆ ಎಂದು ವದಂತಿ ಹರಿಬಿಟ್ಟಿದ್ದರು. ಧೋನಿಯವರು ಬಾಲ್ ಪಡೆದ ಬಗ್ಗೆ ಸಾಕಷ್ಟು ಉಹಾಪೋಹಗಳು ಕೇಳಿಬಂದಿದ್ದವು.

  • ಯುವತಿಯ ನಗ್ನ ಫೋಟೋ ವೈರಲ್ ಮಾಡಿದವರು ಅರೆಸ್ಟ್!

    ಯುವತಿಯ ನಗ್ನ ಫೋಟೋ ವೈರಲ್ ಮಾಡಿದವರು ಅರೆಸ್ಟ್!

    ಮಂಗಳೂರು: ಯುವತಿಯ ನಗ್ನ ಫೋಟೋವನ್ನು ವೈರಲ್ ಮಾಡಿದ ಮೂವರು ಆರೋಪಿಗಳನ್ನು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಪೊಲೀಸರು ಬಂಧಿಸಿದ್ದಾರೆ.

    ಸಂದೇಶ್, ಜಗದೀಶ್ ಮತ್ತು ನವೀನ್ ಬಂಧಿತ ಆರೋಪಿಗಳು. ಮೊದಲು ಸಂದೇಶ್ ಯುವತಿಯನ್ನು ಪರಿಚಯ ಮಾಡಿಕೊಂಡು ಪುಸಲಾಯಿಸಿ ನಗ್ನ ಚಿತ್ರಗಳನ್ನು ಸೆರೆ ಹಿಡಿಯುತ್ತಿದ್ದನು. ಈತನ ನೀಚ ಕೃತ್ಯ ತಿಳಿದ ಬಳಿಕ ಯುವತಿ ದೂರವಾಗಿದ್ದಳು.

    ಆರೋಪಿ ಸಂದೇಶ್ ಆಕೆಯ ಬಳಿ ಪಡೆದಿದ್ದ ನಗ್ನ ಫೋಟೋಗಳನ್ನು ತನ್ನ ಸ್ನೇಹಿತರಾದ ಜಗದೀಶ್ ಮತ್ತು ನವೀನ್ ಜೊತೆ ಸೇರಿ ಸಾಮಾಜಿಕ ಜಾಲತಾಣದಲ್ಲಿ ಚಿತ್ರಗಳನ್ನು ಅಪ್ಲೋಡ್ ಮಾಡಿದ್ದನು. ಫೋಟೋಗಳು ವೈರಲ್ ಆದ ಬಳಿಕ ಪೊಲೀಸರು ವಿಚಾರಣೆ ಮಾಡಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

  • ಮಾಲ್ ನಲ್ಲಿ ಯುವಕನ ಡ್ಯಾನ್ಸ್ ಗೆ ಜನ ಫುಲ್ ಫಿದಾ: ವಿಡಿಯೋ ವೈರಲ್

    ಮಾಲ್ ನಲ್ಲಿ ಯುವಕನ ಡ್ಯಾನ್ಸ್ ಗೆ ಜನ ಫುಲ್ ಫಿದಾ: ವಿಡಿಯೋ ವೈರಲ್

    ಇಸ್ಲಾಮಾಬಾದ್: ಕರಾಚಿ ಮಾಲ್‍ವೊಂದರಲ್ಲಿ ಪಂಜಾಬಿ ಹಾಡಿಗೆ ಪಾಕಿಸ್ತಾನಿ ಯುವಕನೊಬ್ಬ ಸಖತ್ ಸ್ಟೆಪ್ಸ್ ಹಾಕಿರುವ ವಿಡಿಯೋ ಫೇಸ್‍ಬುಕ್ ನಲ್ಲಿ ವೈರಲ್ ಆಗಿದ್ದು ಸಾಕಷ್ಟು ಜನರ ಮೆಚ್ಚುಗೆಯನ್ನ ಪಡೆದಿದೆ.

    ಪಾಕಿಸ್ತಾನಿ ಮೂಲದ ಮೆಹರೋಜ್ ಬೇಗ್ ಬೇಬಿ ಪಿಂಕ್ ಶರ್ಟ್ ಹಾಗೂ ಕಪ್ಪು ಪ್ಯಾಂಟ್ ಧರಿಸಿಕೊಂಡು ಹೈಪಸ್ರ್ಟಾರ್ ಮಾಲ್‍ವೊಂದರಲ್ಲಿ ‘ಲಾಂಗ್ ಲಾಚಿ’ ಎಂಬ ಪಂಜಾಬಿ ಹಾಡಿಗೆ ಕುಣಿದ ವಿಡಿಯೋ ವೈರಲ್ ಆಗಿ ಸುಮಾರು 6.8 ಲಕ್ಷಕ್ಕೂ ವೀಕ್ಷಣೆಯನ್ನ ಪಡೆದುಕೊಂಡಿದೆ.

    ಅವರು ಪೊಸ್ಟ್ ಮಾಡಿರುವ ಶೀರ್ಷಿಕೆಯನ್ನ ನೋಡಿದರೆ ಡ್ಯಾನ್ಸ್ ಪ್ರದರ್ಶನವು ಒಂದು ಧೈರ್ಯದ ಮಾತು ಎಂಬುದು ತಿಳಿದಿದೆ. ಒಬ್ಬ ವಿದ್ಯಾರ್ಥಿಯಾಗಿರುವ ಬೇಗ್ ನೃತ್ಯವನ್ನು ಎಷ್ಟು ಇಷ್ಟಪಡುತ್ತಾರೆ ಹಾಗೂ ಎಷ್ಟು ಪ್ರೀತಿಸುತ್ತಾರೆ ಎಂಬುದು ಅವರ ಫೇಸ್‍ಬುಕ್ ಪೋಸ್ಟ್ ನಿಂದ ತಿಳಿಯುತ್ತದೆ.

    ಅವರ ಈ ಸೂಪರ್ ಡ್ಯಾನ್ಸ್ ನ್ನು ವೀಕ್ಷಿಸಿದ ಜನರು ಸಾಕಷ್ಟು ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದಾರೆ. ಕಮೆಂಟ್ಸ್ ಇಲ್ಲಿದೆ ನೋಡಿ,

    ಫಹಾದ್ ಬಶೀರ್-” ಅದ್ಭುತ ಮೆಹರೋಝ್ ಬೇಗ್, ಪಾಕಿಸ್ತಾನದಲ್ಲಿ ಈ ರೀತಿಯ ನಡೆಯುವುದು ತುಂಬ ಸಹಜ, ಇದೇ ರೀತಿ ಎಲ್ಲರನ್ನ ಆನಂದಿಸುತ್ತ ಎಲ್ಲರಲ್ಲಿ ಸಂತೋಷವನ್ನು ಹರಡಿ”

    ಮಹೆಕ್ ನಬೀಲ್-“ಎಂತಹ ಪೋಸಿಟಿವ್ ಡ್ಯಾನ್ಸ್, ನಿಮ್ಮ ನಗು ಹಾಗೂ ಖುಷಿ ನಿಮ್ಮ ನೃತ್ಯವನ್ನ ಇನ್ನಷ್ಟು ಅದ್ಭುತಗೊಳಿಸಿದೆ. ಗುಡ್ ಜಾಬ್, ನಿಮ್ಮ ಈ ನೃತ್ಯದಿಂದ ಎಲ್ಲರೂ ಖುಷಿಪಡುತ್ತಾರೆ. ಸೂಪರ್ ಎಸ್.ಐ.ಸಿ”.

    ಸನಂ ಫಹೀಮ್-” ನಾನು ಇಲ್ಲಿಯವರೆಗೆ ಕಂಡ ಡ್ಯಾನ್ಸ್ ಗಳಲ್ಲಿ ಇದು ಅದ್ಭುತವಾದ ನೃತ್ಯ! ಹೀಗೆ ಮುಂದುವರೆಸಿ”

  • ಕಳ್ಳತನಕ್ಕೂ ಮುಂಚೆ ಕಳ್ಳನ ಸಖತ್ ಡ್ಯಾನ್ಸ್: ವಿಡಿಯೋ ವೈರಲ್

    ಕಳ್ಳತನಕ್ಕೂ ಮುಂಚೆ ಕಳ್ಳನ ಸಖತ್ ಡ್ಯಾನ್ಸ್: ವಿಡಿಯೋ ವೈರಲ್

    ನವದೆಹಲಿ: ಸಾಮಾನ್ಯವಾಗಿ ಕಳ್ಳರು ಕಳ್ಳತನ ಮಾಡುವಾಗ ಹತ್ತಿರದಲ್ಲಿರುವ ಸಿಸಿಟಿವಿ ಕ್ಯಾಮೆರಾಗಳನ್ನು ನಾಶಪಡಿಸುವುದು ಸಾಮಾನ್ಯ, ಆದರೆ ದೆಹಲಿಯ ವಾಣಿಜ್ಯಮಳಿಗೆಗಳ ಕಳ್ಳತನಕ್ಕೆ ಬಂದ ಕಳ್ಳನೊಬ್ಬ ಸಿಸಿಟಿವಿ ಕಡೆ ಮುಖ ಮಾಡಿ ಸಖತ್ ಡ್ಯಾನ್ಸ್ ಮಾಡಿದ್ದಾನೆ. ಇವನ ಈ ವಿಡಿಯೋ ಸದ್ಯ ಸಾಮಾಜಿಕ ಜಾಲಾತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

    ಸಿಸಿಟಿವಿ ದೃಶ್ಯದ ಪ್ರಕಾರ ಘಟನೆ ಜುಲೈ 10 ರ ಬೆಳಗಿನ ಜಾವದಂದು ನಡೆದಿದ್ದು, ಕಳ್ಳರ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿ ವಿಡಿಯೋ ವೈರಲ್ ಆಗಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ.

    ಕಳ್ಳರು ದೆಹಲಿಯ ವಾಣಿಜ್ಯ ಪ್ರದೇಶಗಳಲ್ಲಿರುವ ಅಂಗಡಿಯ ಶಟರ್‍ಗಳನ್ನು ಕಿತ್ತು, ದರೋಡೆ ಮಾಡಿದ್ದಾರೆ. ಈ ವೇಳೆ ಕಳ್ಳತನಕ್ಕೂ ಮುಂಚೆ ಕಳ್ಳನೊಬ್ಬ ಮುಖಕ್ಕೆ ಮಾಸ್ಕ್ ಕಟ್ಟಿಕೊಂಡು, ಮಸ್ತ್ ಡ್ಯಾನ್ಸ್ ಸ್ಟೆಪ್ ಹಾಕಿದ್ದಾನೆ.

    ಘಟನೆ ಕುರಿತು ಸಿಸಿಟಿಯ ದೃಶ್ಯ ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದರಿಂದ, ಕಳ್ಳನ ಡ್ಯಾನ್ಸ್ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ವಿಡಿಯೋ ವೈರಲ್ ಆದ ಬೆನ್ನಲ್ಲೇ ದೆಹಲಿ ಪೊಲೀಸರು ಆರೋಪಿಗಳನ್ನು ಗುರುತು ಹಿಡಿದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳ್ಳರು ಅದೇ ದಿನ ರಾತ್ರಿ ಸುಮಾರು 4 ಅಂಗಡಿಗಳಿಗೆ ಕನ್ನ ಹಾಕಿ, ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ಅಪಹರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

  • ಸೆಹ್ವಾಗ್ ರ `ಮೆಸ್ಸಿ ಕಿ ಚಾಚಾ’ ಟ್ವೀಟ್ ವೈರಲ್: ವಿಡಿಯೋ ನೋಡಿ

    ಸೆಹ್ವಾಗ್ ರ `ಮೆಸ್ಸಿ ಕಿ ಚಾಚಾ’ ಟ್ವೀಟ್ ವೈರಲ್: ವಿಡಿಯೋ ನೋಡಿ

    ನವದೆಹಲಿ: ಭಾರತದ ಮಾಜಿ ಓಪನಿಂಗ್ ಬ್ಯಾಟ್ಸ್ ಮನ್ ವಿರೇಂದ್ರ ಸೆಹ್ವಾಗ್ ರವರು ಹಾಕಿದ್ದ `ಮೆಸ್ಸಿ ಕಿ ಚಾಚಾ’ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

    ಜಗತ್ತಿನಾದ್ಯಂತ ಫುಟ್ಬಾಲ್ ಜ್ವರದ ನಡುವೆ ವಿರೇಂದ್ರ ಸೆಹ್ವಾಗ್ ರವರು ಮಾಡಿರುವ ಟ್ವೀಟ್ ಭಾರೀ ಸದ್ದು ಮಾಡುತ್ತಿದೆ. ಟ್ವೀಟ್ ನಲ್ಲಿ ಓರ್ವ ಹಿರಿಯ ವ್ಯಕ್ತಿ ಫುಟ್ಬಾಲ್ ನ್ನು ತನ್ನ ಬರಿಗಾಲಿನಲ್ಲಿ ಒದೆಯುತ್ತಿರುವ ವಿಡಿಯೋ ಹಾಕಿ ಇವರು ಅಂತರಾಷ್ಟ್ರೀಯ ಫುಟ್ಬಾಲ್ ಆಟಗಾರ ಮೆಸ್ಸಿಯವರ ಅಜ್ಜ ಎಂದು ಫುಟ್ಬಾಲ್ ಅಭಿಮಾನಿಗಳ ಕಾಲೆಳೆದಿದ್ದಾರೆ.

    ವಿಡಿಯೋದಲ್ಲಿ ಹಿರಿಯರೊಬ್ಬರು  ಸತತವಾಗಿ ಮೂರು ಬಾರಿ ವಿಭಿನ್ನ ರೀತಿಯಲ್ಲಿ ಫುಟ್ಬಾಲನ್ನು ಒಂದೇ ಮನೆಯೊಂದರ ತೆರೆದ ಸಣ್ಣ ಕಿಟಕಿಯಲ್ಲಿ ಹಾಕುತ್ತಿದ್ದಾರೆ. ಈ ವಿಡಿಯೋಗೆ ಫ್ರಾನ್ಸ್, ಇಂಗ್ಲೆಂಡ್, ಕ್ರೋಷಿಯಾವನ್ನು ಮರೆತುಬಿಡಿ ಎಂದು ಬರೆದಿದ್ದಾರೆ, ಇನ್ ಸ್ಟಾಗ್ರಾಮ್ ನಲ್ಲಿ `ಮೆಸ್ಸಿ ಕಾ ಚಾಚಾ’ ಹ್ಯಾಶ್‍ಟ್ಯಾಗ್ ಹಾಕಿ ವಿಡಿಯೋ ಪೋಸ್ಟ್ ಮಾಡಿದ್ದಾರೆ.

    ಟ್ವೀಟ್ಟರ್ ನಲ್ಲಿ ಸೆಹ್ವಾಗ್ ಈ ವಿಡಿಯೋವನ್ನು ಪೋಸ್ಟ್ ಮಾಡುತ್ತಲೇ, ಸುಮಾರು 26 ಸಾವಿರಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದು, 4,600 ಮಂದಿ ರೀ ಟ್ವೀಟ್ ಮಾಡಿದ್ದಾರೆ. ಅಲ್ಲದೇ ಇನ್ ಸ್ಟಾಗ್ರಾಮ್‍ನಲ್ಲಿ ಈ ವಿಡಿಯೋವನ್ನು 3.76 ಲಕ್ಷ ಮಂದಿ ನೋಡಿದ್ದಾರೆ.

    ವಿರೇಂದ್ರ ಸೆಹ್ವಾಗ್ ರವರು ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಆಟಗಾರರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹಾಸ್ಯ ಶೈಲಿಯಲ್ಲಿ ಪೋಸ್ಟ್ ಮಾಡಿ ಕಾಲೆಳೆಯುತ್ತಲೇ ಇರುತ್ತಾರೆ.

    https://www.instagram.com/p/BlE40ZcnsxD/?hl=en&taken-by=virendersehwag