Tag: viral

  • ಮುಂಗುಸಿ-ನಾಗರಹಾವಿನ ನಡುವೆ ಭಯಂಕರ ಕಾದಾಟ

    ಮುಂಗುಸಿ-ನಾಗರಹಾವಿನ ನಡುವೆ ಭಯಂಕರ ಕಾದಾಟ

    ಚಿಕ್ಕಮಗಳೂರು: ಮುಂಗುಸಿ ಹಾಗೂ ನಾಗರಹಾವಿನ ನಡುವೆ ಭಯಂಕರ ಕಾದಾಟ ನಡೆದ ದೃಶ್ಯವೊಂದು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಕಾಮೇನಹಳ್ಳಿ ಗ್ರಾಮದಲ್ಲಿ ಕಂಡುಬಂದಿದೆ.

    ಮುಂಗುಸಿ ಗದ್ದೆ ಬದಿಯಲ್ಲಿ ನಾಗರಹಾವಿನ ಮೇಲೆ ಏಕಾಏಕಿ ದಾಳಿ ಮಾಡಿದೆ. ಈ ವೇಳೆ ಮುಂಗುಸಿಯಿಂದ ತಪ್ಪಿಸಿಕೊಳ್ಳಲು ನಾಗರಹಾವು ಕಾದಾಟ ನಡೆಸಿದೆ. ನಾಗರಹಾವು ಹಾಗೂ ಮುಂಗುಸಿ ನಡುವಿನ ಕಾಳಗ ಕಂಡು ರೈತರು ಗಾಬರಿಗೊಂಡಿದ್ದರು.

    ಗದ್ದೆಯಲ್ಲಿದ್ದ ಯುವಕರು ಮುಂಗುಸಿ ಹಾಗೂ ನಾಗರಹಾವಿನ ಕಾದಾಟದ ವಿಡಿಯೋವನ್ನು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

    ಇತ್ತೀಚೆಗೆ ಮೈಸೂರಿನ ನಾಗರಹೊಳೆ ಅರಣ್ಯದಲ್ಲಿ ಹೆಬ್ಬಾವನ್ನು ನೋಡಿ ಹುಲಿ ಹೆದರಿಕೊಂಡ ಅಪರೂಪದ ದೃಶ್ಯವೊಂದು ಸಫಾರಿಗೆ ತೆರಳಿದ ಪ್ರವಾಸಿಗರ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಅರಣ್ಯದಲ್ಲಿ ಹುಲಿಗೆ ಹೆಬ್ಬಾವು ಎದುರಾಗಿದೆ. ಈ ವೇಳೆ ಹೆಬ್ಬಾವನ್ನು ಕಂಡು ಹುಲಿ ಹೆದರಿಕೊಂಡಿತ್ತು. ಪ್ರವಾಸಿಗರು ಹೆಬ್ಬಾವು ಮತ್ತು ಹುಲಿಯನ್ನು ಒಟ್ಟಿಗೆ ನೋಡಿದ್ದು, ಸಾಮಾನ್ಯವಾಗಿ ಹುಲಿಗಳು ಹೆಬ್ಬಾವನ್ನು ಕಂಡರೆ ಅದನ್ನು ತಿನ್ನುತ್ತದೆ. ಆದರೆ ಇಲ್ಲಿ ಹುಲಿ ಹೆಬ್ಬಾವನ್ನು ಕಂಡು ಹೆದರುಕೊಂಡಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಿಚ್ಚ ಸುದೀಪ್ ವೈರಲ್ ಫೋಟೋದ ರಹಸ್ಯ ಇಲ್ಲಿದೆ

    ಕಿಚ್ಚ ಸುದೀಪ್ ವೈರಲ್ ಫೋಟೋದ ರಹಸ್ಯ ಇಲ್ಲಿದೆ

    ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಈ ಬಾರಿ ಅಭಿಮಾನಿಗಳ ಜೊತೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸುದೀಪ್ ಅವರ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಸೆ. 2 ಅಂದರೆ ನಾಳೆ ಸುದೀಪ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸುದೀಪ್ ಅವರ ಪತ್ನಿ ಪ್ರಿಯಾ ಸುದೀಪ್ ತಮ್ಮ ಪತಿಯ ವಿಶೇಷವಾದ ಫೋಟೋವನ್ನು ಬಿಡುಗಡೆ ಮಾಡಿದ್ದಾರೆ. ಈ ಫೋಟೋದಲ್ಲಿ ಸುದೀಪ್ ಯಾವ ವರ್ಷದಲ್ಲಿ ಯಾವ ಪ್ರಶಸ್ತಿ ಪಡೆದಿದ್ದಾರೆ ಎನ್ನುವ ಕಿರು ಮಾಹಿತಿಯಿದೆ. ಇದನ್ನೂ ಓದಿ:  ಅಭಿಮಾನಿಗಳ ಜೊತೆಗೆ ಈ ಬಾರಿ ನಡೆಯಲಿದೆ ಕಿಚ್ಚನ ಬರ್ತ್ ಡೇ!

    ಯಾವ ವರ್ಷದಲ್ಲಿ ಯಾವ ಪ್ರಶಸ್ತಿ?
    2001- ಹುಚ್ಚ ಚಿತ್ರಕ್ಕಾಗಿ ಫಿಲ್ಮಂಫೇರ್ ಅತ್ಯುತ್ತಮ ನಟ ಪ್ರಶಸ್ತಿ
    2002- ನಂದಿ ಚಿತ್ರಕ್ಕಾಗಿ ಫಿಲ್ಮಂಫೇರ್ ಅತ್ಯುತ್ತಮ ನಟ ಪ್ರಶಸ್ತಿ
    2003- ಸ್ವಾತಿಮುತ್ತು ಚಿತ್ರಕ್ಕಾಗಿ ಫಿಲ್ಮಂಫೇರ್ ಅತ್ಯುತ್ತಮ ನಟ ಪ್ರಶಸ್ತಿ
    2009- ವೀರ ಮದಕರಿ ಚಿತ್ರಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿ
    2011- ವಿಷ್ಣುವರ್ಧನ ಚಿತ್ರಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿ
    2012- ನಾನ್ ಇ ತಮಿಳು ಚಿತ್ರಕ್ಕಾಗಿ ಅತ್ಯುತ್ತಮ ಖಳನಟ ಪ್ರಶಸ್ತಿ
    2012- ಈಗ ಚಿತ್ರಕ್ಕಾಗಿ ಫಿಲ್ಮಂಫೇರ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ (ತೆಲುಗು)
    2012- ಈಗ ಚಿತ್ರಕ್ಕಾಗಿ ಮಡ್ರಿಡ್ ಅಂತರಾಷ್ಟ್ರಿಯ ಫೆಸ್ಟಿವಲ್‍ನಲ್ಲಿ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ
    2012- ನಾನ್ ಇ ತಮಿಳು ಚಿತ್ರಕ್ಕಾಗಿ ಎಡಿಸನ್‍ನ ಅತ್ಯುತ್ತಮ ಖಳನಟ ಪ್ರಶಸ್ತಿ
    2012- ಈಗ ಚಿತ್ರಕ್ಕಾಗಿ ಟೊರಂಟೋ ಫೆಸ್ಟಿವಲ್‍ನಲ್ಲಿ ಅತ್ಯುತ್ತಮ ಖಳನಟ ಪ್ರಶಸ್ತಿ
    2012- ಈಗ ಚಿತ್ರಕ್ಕಾಗಿ ಟಿಒಐ ಅತ್ಯುತ್ತಮ ಖಳನಟ ಪ್ರಶಸ್ತಿ
    2016- ಜೀ ದಶಕದ ಸಂಭ್ರಮದ ಎಂಟರ್‍ಟೈನರ್ ಆಫ್ ದಿ ಡಿಕೇಡ್ ಪ್ರಶಸ್ತಿ
    2017- ಫಾರ್‍ಎವೆರ್ ಮೋಸ್ಟ್ ಡಿಸೈರೆಬಲ್ ಮೆನ್ ಪ್ರಶಸ್ತಿ

    ಸದ್ಯ ಈ ಫೋಟೋವನ್ನು ಸುದೀಪ್ ಅವರ ಕರ್ನಾಟಕ ಕಿಚ್ಚ ಸುದೀಪ್ ಫ್ಯಾನ್ಸ್ ಆಸೋಸಿಯೇಶನ್ ಅವರು ತಯಾರಿಸಿದ್ದಾರೆ. ಅಲ್ಲದೇ ಈ ಫೋಟೋವನ್ನು ಸುದೀಪ್ ಅವರ ಪತ್ನಿ ಪ್ರಿಯಾ ಸುದೀಪ್ ಅವರು ಬಿಡುಗಡೆ ಮಾಡಿದ್ದಾರೆ. ಈ ಫೋಟೋ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್‍ನಲ್ಲಿದೆ. ಅಲ್ಲದೇ ಸಾಕಷ್ಟು ಜನ ಡಿಪಿ (ಡಿಸ್‍ಪ್ಲೈ ಪಿಚ್ಚರ್)ಹಾಗೂ ಪ್ರೋಫೈಲ್ ಪಿಚ್ಚರ್ ಮಾಡಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಾರ್, ಬೈಕ್, ಎತ್ತಿನಗಾಡಿ ನಂತರ ವಿಮಾನದಿಂದ ಇಳಿದು ಕಿಕಿ ಡ್ಯಾನ್ಸ್: ವಿಡಿಯೋ ವೈರಲ್

    ಕಾರ್, ಬೈಕ್, ಎತ್ತಿನಗಾಡಿ ನಂತರ ವಿಮಾನದಿಂದ ಇಳಿದು ಕಿಕಿ ಡ್ಯಾನ್ಸ್: ವಿಡಿಯೋ ವೈರಲ್

    ಕಾರ್, ಬೈಕ್, ಎತ್ತಿನಗಾಡಿ ನಂತರ ವಿಮಾನದಿಂದ ಇಳಿದು ಪೈಲೆಟ್ ಇಬ್ಬರು ಕಿಕಿ ಚಾಲೆಂಜ್‍ಗೆ ಡ್ಯಾನ್ಸ್ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಅಲೆಜಾಂದ್ರ ಹಾಗೂ ಆಕೆಯ ಸಹ ಚಾಲಕಿ ಇಬ್ಬರು ವಿಮಾನದಿಂದ ಇಳಿದು ಕಿಕಿ ಚಾಲೆಂಜ್ ಸ್ವೀಕರಿಸಿದ್ದಾರೆ. ವಿಡಿಯೋದಲ್ಲಿ ಪೈಲೆಟ್ ಇಬ್ಬರು ಚಲಿಸುತ್ತಿರುವ ವಿಮಾನದಿಂದ ಇಳಿದು ‘ಮೈ ಫೀಲಿಂಗ್ಸ್’ ಹಾಡಿಗೆ ಡ್ಯಾನ್ಸ್ ಮಾಡಿ ಕಿಕಿ ಚಾಲೆಂಜ್ ಸ್ವೀಕರಿಸಿದ್ದಾರೆ.

    ಈ ವಿಡಿಯೋದಲ್ಲಿ ಮೊದಲು ಇಬ್ಬರು ಪೈಲೆಟ್ ಕಾಕ್‍ಪಿಟ್‍ನಲ್ಲಿ ಕುಳಿತಿರುತ್ತಾರೆ. ನಂತರ ವಿಮಾನದ ಸ್ಪೀಡ್ ಲೀವರ್ ಕಂಟ್ರೋಲ್ ಮಾಡಿ ವಿಮಾನವನ್ನು ಚಲಿಸುವ ಹಾಗೇ ಮಾಡಿದ್ದಾರೆ. ನಂತರ ಇಬ್ಬರು ವಿಮಾನದಿಂದ ಬೇಗ ಕೆಳಗೆ ಇಳಿದು ಇಂಗ್ಲೀಷ್ ಹಾಡಿಗೆ ಡ್ಯಾನ್ಸ್ ಮಾಡಲು ಶುರು ಮಾಡಿಡಿದ್ದಾರೆ.

    ಸದ್ಯ ಮಹಿಳಾ ಪೈಲೆಟ್ ಇಬ್ಬರು ಕಿಕಿ ಚಾಲೆಂಜ್ ಸ್ವೀಕರಿಸಿ ವಿಮಾನದ ಹೊರಗೆ ಡ್ಯಾನ್ಸ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಈ ವಿಡಿಯೋ 25 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಅಲ್ಲದೇ ಈ ವಿಡಿಯೋಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

    ಏನಿದು ಕಿಕಿ ಚಾಲೆಂಜ್ ?
    ಟ್ರಾಫಿಕ್ ಮಧ್ಯೆ ಚಲಿಸುವ ವಾಹನದಿಂದ ಜಿಗಿದು ಹಾಲಿವುಡ್ ಗಾಯಕ ಡ್ರೇಕ್ ನ “ಇನ್ ಮೈ ಫೀಲಿಂಗ್ಸ್” ಹಾಡು ಹೇಳಿಕೊಂಡು ವಾಹನದ ವೇಗಕ್ಕೆ ರಸ್ತೆಯಲ್ಲಿ ಡ್ಯಾನ್ಸ್ ಮಾಡಬೇಕು. ಮತ್ತೆ ಕಾರಿನೊಳಗೆ ಜಿಗಿದು ಕುಳಿತುಕೊಳ್ಳಬೇಕು. ಈ ಅಪಾಯಕಾರಿ ಚಾಲೆಂಜ್ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿತ್ತು.

    ವಿಶ್ವದಲ್ಲಿರುವ ಎಲ್ಲ ಸೆಲೆಬ್ರಿಟಿಗಳು ಈ ಚಾಲೆಂಜ್ ಸ್ವೀಕರಿಸಿ ತಮ್ಮ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು. ನಟಿ ಆದಾ ಶರ್ಮಾ ಈ ಚಾಲೆಂಜ್ ಸ್ವೀಕರಿಸಿ ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು. ಅಲ್ಲದೇ ಕನ್ನಡದಲ್ಲಿ ಬಿಗ್ ಬಾಸ್ ನಿವೇದಿತಾ ಗೌಡ ಮೊದಲ ಬಾರಿಗೆ ಕಿಕಿ ಚಾಲೆಂಜ್ ಸ್ವೀಕರಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಏನೂ ಬೇಕಾದರೂ ಮಾಡಿ, ಮಾತೃಭೂಮಿಗೆ ಮಾತ್ರ ತೊಂದರೆ ಮಾಡಬೇಡಿ: ಸಲ್ಮಾನ್ ಖಾನ್

    ಏನೂ ಬೇಕಾದರೂ ಮಾಡಿ, ಮಾತೃಭೂಮಿಗೆ ಮಾತ್ರ ತೊಂದರೆ ಮಾಡಬೇಡಿ: ಸಲ್ಮಾನ್ ಖಾನ್

    ಮುಂಬೈ: ಬಾಲಿವುಡ್‍ನ ಬಾಹಿಜಾನ್ ಎಂದೇ ಗುರುತಿಸಿಕೊಂಡಿರುವ ನಟ ಸಲ್ಮಾನ್ ಖಾನ್‍ರವರು ಮಾಡಿರುವ ನೂತನ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿದೆ.

    ಸಲ್ಮಾನ್ ಖಾನ್ ತಮ್ಮ ಟ್ವೀಟ್‍ನಲ್ಲಿ ಭಾರತ ದೇಶ ಸ್ವಚ್ಛ ಇದ್ದರೆ, ನಾವು ಸಹ ಫಿಟ್ ಆಗಿರುತ್ತೇವೆ. ನಾವು ಫಿಟ್ ಆಗಿದ್ದರೆ, ದೇಶ ಕೂಡ ಫಿಟ್ ಆಗಿರುತ್ತದೆ. ನಿಮಗೆ ಏನು ಅನಿಸುತ್ತದೆಯೋ ಅದನ್ನೇ ಮಾಡಿ, ಆದರೆ ಮಾತೃಭೂಮಿಗೆ ಮಾತ್ರ ಯಾವುದೇ ತೊಂದರೆ ಕೊಡಬೇಡಿ ಎಂದು ಬರೆದುಕೊಂಡಿದ್ದಾರೆ.

    ಸಲ್ಲು ಟ್ವೀಟ್ ಮಾಡುತ್ತಿದ್ದಂತೆ ಸಾಕಷ್ಟು ವೈರಲ್ ಆಗಿದ್ದು, 40 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಅಲ್ಲದೇ 5 ಸಾವಿರಕ್ಕೂ ಹೆಚ್ಚು ಮಂದಿ ರೀಟ್ವೀಟ್ ಮಾಡಿ, 1,800 ಮಂದಿ ಕಾಮೆಂಟ್ ಸಹ ಹಾಕಿದ್ದಾರೆ.

    ಸಲ್ಮಾನ್ ಖಾನ್‍ರವರು ತಮ್ಮ ಸಿನಿಮಾ, ರಿಯಾಲಿಟಿ ಶೋ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಒಂದಿಲ್ಲೊಂದು ವಿಷಯಗಳಲ್ಲಿ ಸುದ್ದಿಯಾಗುತ್ತಲೇ ಇರುತ್ತಾರೆ. ಟ್ವೀಟ್‍ನಲ್ಲಿ ಮಾತೃಭೂಮಿಯ ಬಗ್ಗೆ ಕಾಳಜಿಯನ್ನು ಹೊಂದಿರುವ ಅವರು, ತಮ್ಮ ಅಭಿಮಾನಿಗಳಿಗೆ ಮಾತೃಭೂಮಿಯ ಬಗ್ಗೆ ಹೆಚ್ಚು ಅಭಿಮಾನ ಹೊಂದಿರಬೇಕೆಂದು ಪರೋಕ್ಷವಾಗಿ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಅರಬ್ಬಿ ಸಮುದ್ರದ ಹೊಡೆತಕ್ಕೆ ಸಿಲುಕಿ ಮುಳುಗಿದ 2 ದೋಣಿಗಳು: 16 ಮಂದಿಯ ರಕ್ಷಣೆ- ವಿಡಿಯೋ ವೈರಲ್

    ಅರಬ್ಬಿ ಸಮುದ್ರದ ಹೊಡೆತಕ್ಕೆ ಸಿಲುಕಿ ಮುಳುಗಿದ 2 ದೋಣಿಗಳು: 16 ಮಂದಿಯ ರಕ್ಷಣೆ- ವಿಡಿಯೋ ವೈರಲ್

    ಉಡುಪಿ: ಭಟ್ಕಳ ಹಾಗೂ ಗಂಗೊಳ್ಳಿಯ ನಡುವೆ ಮೀನುಗಾರಿಕೆ ಮುಗಿಸಿ ವಾಪಾಸ್ಸಾಗುತ್ತಿದ್ದ ಎರಡು ದೋಣಿಗಳು ಸಮುದ್ರ ನೀರಿನ ಅಲೆಗಳ ಹೊಡೆತಕ್ಕೆ ಸಿಲುಕ್ಕಿ ಮುಳುಗಿ ಹೋಗಿದ್ದು, ದೋಣಿಯಲ್ಲಿದ್ದ 16 ಮಂದಿ ಮೀನುಗಾರರನ್ನು ರಕ್ಷಿಸುತ್ತಿರುವ ವಿಡಿಯೋ ಸಾಕಷ್ಟು ವೈರಲ್ ಆಗಿದೆ.

    ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ ಆಳಸಮುದ್ರ ಮೀನುಗಾರಿಕೆ ದೋಣಿಗಳು ಭಟ್ಕಳದ ಗಂಗೊಳ್ಳಿ ನಡುವೆ ಮುಳುಗಡೆಯಾಗಿದೆ. ಎರಡು ಪ್ರತ್ಯೇಕ ದೋಣಿಗಳು ಮಲ್ಪೆಗೆ ಮರಳುವಾಗ ಮುಳುಗಡೆಯಾಗಿದ್ದು, ದೋಣಿಯಲ್ಲಿದ್ದ 16 ಮಂದಿಯನ್ನು ರಕ್ಷಣೆ ಮಾಡಲಾಗಿದೆ. ರಕ್ಷಣೆಯ ವೀಡಿಯೊ ಬಹಳ ರೋಚಕವಾಗಿದ್ದು, ಕಣ್ಣೆದುರೇ ಎರಡು ಕೋಟಿ ಬೆಲೆಯ ದೋಣಿಗಳು ಮುಳುಗಡೆಯಾಗಿದೆ.

    ಅರಬ್ಬೀ ಸಮುದ್ರದಲ್ಲಿ ವಾತಾವರಣ ಏರುಪೇರಾದ ಹಿನ್ನೆಲೆಯಲ್ಲಿ ಈ ಅವಘಡ ಸಂಭವಿಸಿದೆ. ಶನಿವಾರ ಬೆಳಗ್ಗೆ ಮಲ್ಪೆಯಿಂದ ತೆರಳಿದ 8 ಮಂದಿಯಿದ್ದ ಶಿವ-ಗಣೇಶ ದೋಣಿಯು ಸಂಜೆಯ ವೇಳೆಗೆ ತೀವ್ರವಾದ ಗಾಳಿ-ಮಳೆಯಿಂದಾಗಿ ಸಮುದ್ರದಲ್ಲಿ ನೀರಿನ ಅಲೆಗಳ ಆರ್ಭಟ ಜೋರಾಗಿದ್ದರಿಂದ ದೋಣಿಯಲ್ಲಿ ತೂತು ಬಿದ್ದು, ದೋಣಿ ಮುಳುಗಡೆಯಾಗಲು ಶುರುವಾಗಿದೆ. ದೋಣಿಯಲ್ಲಿದ್ದ ಮೀನುಗಾರರು ಮಲ್ಪೆಗೆ ಕರೆ ಮಾಡಿ ರಕ್ಷಣೆಗೆ ಕರೆದಿದ್ದಾರೆ. ಕೂಡಲೇ ಮಲ್ಪೆಯಿಂದ ತೆರಳಿದ ದೋಣಿಗಳ ಮೂಲಕ ಮುಳುಗಡೆಯಾಗುತ್ತಿದ್ದ ದೋಣಿಯಿಂದ 8 ಮಂದಿ ಮೀನುಗಾರರನ್ನು ರಕ್ಷಿಸಿ ಮಲ್ಪೆಗೆ ಕರೆತರಲಾಗಿದೆ.

    ಇದಲ್ಲದೇ ಇಂದು ಬೆಳಗ್ಗೆ ಮೀನುಗಾರಿಕೆ ಮುಗಿಸಿ ಮಲ್ಪೆಗೆ ಮರಳುತ್ತಿದ್ದ ಪದ್ಮದಾಸ್ ಎಂಬ ದೋಣಿಯು ಗಂಗೊಳ್ಳಿ ಹಾಗೂ ಭಟ್ಕಳದ ನಡುವೆ ಮುಳುಗಡೆಯಾಗಿದೆ. ದೋಣಿಯಲ್ಲಿದ್ದ ಮೀನುಗಾರರ ಮಾಹಿತಿಯಿಂದ ಸ್ಥಳಕ್ಕೆ ತೆರಳಿದ ಮಲ್ಪೆಯ ಭಜರಂಗಿ ದೋಣಿಯ ಮೀನುಗಾರರು 8 ಮಂದಿ ಮೀನುಗಾರರನ್ನು ರಕ್ಷಿಸಿ ಮಲ್ಪೆಗೆ ಕರೆತಂದಿದ್ದಾರೆ.

    ಸಮುದ್ರದ ನಡುವೆ ಗಾಳಿ ಮಳೆ ಬೀಸುತ್ತಿದ್ದರಿಂದ ಮುಳುಗುತ್ತಿದ್ದ ದೋಣಿಯಿಂದ ಮೀನುಗಾರರು ಸಮುದ್ರಕ್ಕೆ ಹಾರಿದ್ದಾರೆ. ರಕ್ಷಣೆಗೆ ತೆರಳಿದ ದೋಣಿಯಿಂದ ಹಗ್ಗ ಎಸೆದು ಅವರನ್ನು ರಕ್ಷಿಸಲಾಗಿದೆ. ಕೆಲ ಮೀನುಗಾರರಿಗೆ ಉಸಿರಾಟದ ಸಮಸ್ಯೆ ಎದುರಾಗಿದ್ದು ಪ್ರಾಥಮಿಕ ಚಿಕಿತ್ಸೆಯನ್ನು ನೀಡಲಾಗಿದ್ದು, ಅವರೆಲ್ಲರೂ ಈಗ ಚೇತರಿಸಿಕೊಂಡಿದ್ದಾರೆ. ಈ ಎರಡು ಮುಳುಗಡೆಯಾಗುವ ದೋಣಿಯಲ್ಲಿದ್ದವರ ರಕ್ಷಣೆಯ ವಿಡಿಯೋ ನೋಡುವವರ ಮೈ ಜುಂ ಎನಿಸುವಷ್ಟು ರೋಮಾಂಚನಕಾರಿಯಾಗಿದ್ದು, ಸಾಕಷ್ಟು ವೈರಲ್ ಆಗಿದೆ.

    https://www.youtube.com/watch?v=XqFcvZYNWYY

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

  • ಪಾಠ ಹೇಳಿಕೊಡುವ ಬದಲು ಶೌಚಾಲಯ, ಬೈಕ್ ತೊಳೆಸಿದ ಶಿಕ್ಷಕ

    ಪಾಠ ಹೇಳಿಕೊಡುವ ಬದಲು ಶೌಚಾಲಯ, ಬೈಕ್ ತೊಳೆಸಿದ ಶಿಕ್ಷಕ

    ಬೆಳಗಾವಿ: ಮಕ್ಕಳನ್ನು ಶೌಚಾಲಯ ಕ್ಲೀನ್ ಮಾಡಲು ಹಾಗೂ ಬೈಕ್ ತೊಳೆಸಲು ಬಳಕೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಬಡಗಿವಾಡ ಗ್ರಾಮದಲ್ಲಿ ನಡೆದಿದೆ.

    ಬಡಗಿವಾಡ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ಜೈಪಾಲ್ ಭಜಂತ್ರಿ ಎಂಬ ಶಿಕ್ಷಕ ಪಾಠದ ಬದಲು ಮಕ್ಕಳಿಂದ ಬೈಕ್ ಕ್ಲೀನ್ ಮಾಡಿಸಿದ್ದಾರೆ ಮತ್ತು ಬಿಸಿಯೂಟ ಪಾತ್ರೆಗಳನ್ನು ತೊಳೆಸಿದ್ದಾರೆ.

    ಶಿಕ್ಷಕ ಮಕ್ಕಳಿಂದ ಕೆಲಸ ಮಾಡಿಸುತ್ತಿರುವ ಸಂಪೂರ್ಣ ದೃಶ್ಯಗಳನ್ನು ಸ್ಥಳೀಯರು ಮೊಬೈಲ್ ನಲ್ಲಿ ಸೆರೆಹಿಡಿದುಕೊಂಡಿದ್ದು, ಇದೀಗ ಸೆರೆಯಾದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗಿದೆ. ಶಿಕ್ಷಕರ ಕೃತ್ಯದ ವಿರುದ್ಧ ಸಾರ್ವಜನಿಕರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.  ಇದನ್ನು ಓದಿ:ವಿದ್ಯಾರ್ಥಿನಿಯರಿಂದ ಮನೆ ಕೆಲಸ – ತಪ್ಪೊಪ್ಪಿಕೊಂಡ ಕೊಪ್ಪಳ ಸ್ಕೂಲ್ ಮಾಸ್ಟರ್

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಸಾರ್ವಜನಿಕ ಸ್ಥಳದಲ್ಲಿ ಸ್ತನಪಾನ ಮಾಡಿಸ್ತಿದ್ದ ಮಹಿಳೆಗೆ ಸ್ತನ ಮುಚ್ಚಿಕೋ ಎಂದು ಸಲಹೆ

    ಸಾರ್ವಜನಿಕ ಸ್ಥಳದಲ್ಲಿ ಸ್ತನಪಾನ ಮಾಡಿಸ್ತಿದ್ದ ಮಹಿಳೆಗೆ ಸ್ತನ ಮುಚ್ಚಿಕೋ ಎಂದು ಸಲಹೆ

    -ಮಹಿಳೆ ಕೊಟ್ಟ ಉತ್ತರ ಹೀಗಿತ್ತು!

    ಮೆಕ್ಸಿಕೋ: ಸಾರ್ವಜನಿಕ ಸ್ಥಳದಲ್ಲಿ ಸ್ತನಪಾನ ಮಾಡಿಸುತ್ತಿದ್ದ ಮಹಿಳೆಗೆ ವ್ಯಕ್ತಿಯೊಬ್ಬ ಸ್ತನ ಮುಚ್ಚಿಕೋ ಎಂದು ಸಲಹೆ ನೀಡಿದ್ದು, ಆ ವ್ಯಕ್ತಿಗೆ ಮಹಿಳೆ ಸರಿಯಾದ ಉತ್ತರವನ್ನು ಕೊಟ್ಟ ಘಟನೆ ಮೆಕ್ಸಿಕೋದ ಕ್ಯಾಬೋ ಸನ್ ಲುಕಾಸ್‍ನಲ್ಲಿ ನಡೆದಿದೆ.

    ಮೆಲಾನಿ ಡ್ಯೂಡ್ಲಿ ಮಗುವಿಗೆ ಎದೆ ಹಾಲುವುಣಿಸುತ್ತಿದ್ದ ಮಹಿಳೆ. ಮೆಲಾನಿ ತನ್ನ 4 ತಿಂಗಳ ಗಂಡು ಮಗುವಿಗೆ ರೆಸ್ಟೋರೆಂಟ್‍ವೊಂದರಲ್ಲಿ ಎದೆಹಾಲು ಉಣಿಸುತ್ತಿದ್ದರು. ಆಗ ಅಲ್ಲಿ ತಿರುಗಾಡುತ್ತಿದ್ದ ವ್ಯಕ್ತಿಯೊಬ್ಬ ಮೆಲಾನಿಗೆ ತನ್ನ ಸ್ತನವನ್ನು ಮುಚ್ಚಿಕೋ ಎಂದು ಸಲಹೆ ನೀಡಿದ್ದಾನೆ.

    ಆ ವ್ಯಕ್ತಿಯ ಮಾತನ್ನು ಕೇಳಿಸಿಕೊಂಡ ಮೆಲಾನಿ ಏನೂ ಪ್ರತಿಕ್ರಿಯಿಸದೇ ತನ್ನ ದುಪಟ್ಟಾದಿಂದ ಸ್ತನವನ್ನು ಮುಚ್ಚಿಕೊಳ್ಳುವುದರ ಬದಲು ತನ್ನ ಮುಖವನ್ನು ಮುಚ್ಚಿಕೊಂಡಿದ್ದಾರೆ. ಈ ವೇಳೆ ಮೆಲಾನಿ ಜೊತೆಯಲ್ಲಿದ್ದ ವ್ಯಕ್ತಿ ಆಕೆಯ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾನೆ.

    ನನ್ನ ಸ್ನೇಹಿತನ ಸೊಸೆ ತನ್ನ ಮಗುವಿಗೆ ಸ್ತನಪಾನ ಮಾಡಿಸುತ್ತಿದ್ದರು. ಆಗ ಅಲ್ಲಿದ್ದ ವ್ಯಕ್ತಿಯೊಬ್ಬ ಆಕೆಗೆ ತನ್ನ ಸ್ತನವನ್ನು ಮುಚ್ಚಿಕೊಳ್ಳುವಂತೆ ಸಲಹೆ ನೀಡಿದ್ದನು. ಆ ವ್ಯಕ್ತಿಯ ಮಾತಿಗೆ ಮೆಲಾನಿ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಅವರನ್ನು ಎಂದಿಗೂ ಭೇಟಿ ಆಗಿಲ್ಲ. ಆದರೆ ಅವರು ಅದ್ಭುತ ಎಂದು ನನಗೆ ಅನಿಸುತ್ತಿದೆ ಎಂದು ಮೆಲಾನಿ ಕುಟುಂಬದ ಆಪ್ತ ಕಾರೋಲ್ ಲಾಕ್‍ವುಡ್ ಫೋಟೋ ಹಾಕಿ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.

    ನಾನು ರಜೆ ಕಳೆಯಲು ನನ್ನ ಇಡೀ ಕುಟುಂಬದ ಜೊತೆ ಕ್ಯಾಬೋ ಸನ್ ಲುಕಾಸ್ ಗೆ ಹೋಗಿದ್ದೇವು. ಆಗ ಅಲ್ಲಿದ್ದ ವ್ಯಕ್ತಿಯೊಬ್ಬ ನನ್ನ ಸ್ತನ ಮುಚ್ಚಿಕೋ ಎಂದು ಸಲಹೆ ನೀಡಿದ್ದನು. ಆಗ ನಾನು ನನ್ನ ದುಪಟ್ಟಾದಿಂದ ನನ್ನ ಮುಖವನ್ನು ಮುಚ್ಚಿಕೊಂಡೆ. ಆದರೆ ರೆಸ್ಟೋರೆಂಟ್‍ನಲ್ಲಿ ನಾವು ಹಿಂದಿನ ಸೀಟ್‍ನಲ್ಲಿ ಕುಳಿತ್ತಿದ್ದೇವು ಎಂದು ಮೆಲಾನಿ ತಿಳಿಸಿದ್ದಾರೆ.

    ಸದ್ಯ ಮೆಲಾನಿ ತನ್ನ ಮಗುವಿಗೆ ಸ್ತನಪಾನ ಮಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಅಲ್ಲದೇ ಹೆಚ್ಚು ಲೈಕ್ಸ್ ಹಾಗೂ ಶೇರ್ ಪಡೆದಿದೆ. ಸದ್ಯ ಮೆಲಾನಿ ಆ ವ್ಯಕ್ತಿಗೆ ನೀಡಿದ ಪ್ರತಿಕ್ರಿಯೆಗೆ ಜನರು ತಮ್ಮ ಮಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಗೂಗ್ಲಿ ಬೆಡಗಿ ಕೃತಿ ಬಾತ್‍ಟಬ್ ಫೋಟೋ ವೈರಲ್- ಅಭಿಮಾನಿಗಳು ಫಿದಾ!

    ಗೂಗ್ಲಿ ಬೆಡಗಿ ಕೃತಿ ಬಾತ್‍ಟಬ್ ಫೋಟೋ ವೈರಲ್- ಅಭಿಮಾನಿಗಳು ಫಿದಾ!

    ಬೆಂಗಳೂರು: ಗೂಗ್ಲಿ ಚಿತ್ರದ ಬೆಡಗಿ ಕೃತಿ ಕರಬಂದ ಅವರ ಬಾತ್‍ಟಬ್ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಇತ್ತೀಚಿಗೆ ಕೃತಿ ಬಾತ್‍ಟಬ್ ಮೇಲೆ ನಿಂತು ಮ್ಯಾಗಜೀನ್‍ಗಾಗಿ ಫೋಟೋಶೂಟ್ ನಡೆಸಿದ್ದರು. ಫೋಟೋಶೂಟ್‍ನಲ್ಲಿ ಕೃತಿ ಸ್ವಿಮ್ ಸೂಟ್ ಧರಿಸಿ, ಅದಕ್ಕೆ ಬಟ್ಟರ್ ಫ್ಲೈ ಟಾಪ್ ಧರಿಸಿದ್ದಾರೆ. ಈ ಸ್ವಿಮ್ ಸೂಟ್‍ಗೆ ಕೃತಿ ಹೈಹೀಲ್ಸ್ ಹಾಕಿ ಫೋಟೋಗೆ ಪೋಸ್ ನೀಡಿದ್ದಾರೆ.

    ಕೃತಿ ತನ್ನ ಈ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ನೋಡಿದ ಎಲ್ಲಾ ಅಭಿಮಾನಿಗಳು ಕೃತಿ ಸೌಂದರ್ಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಕೃತಿ ಈ ಹಿಂದೆ ಕೂಡ ಬಾತ್‍ಟಬ್‍ನಲ್ಲಿ ತೆಗೆದುಕೊಂಡಿರುವ ಫೋಟೋ ಹಾಗೂ ಹಾಟ್ ಫೋಟೋಗಳನ್ನು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು.

    ಕೃತಿ ಚಿರು ಸಿನಿಮಾದ ಮೂಲಕ ಸ್ಯಾಂಡಲ್‍ವುಡ್‍ಗೆ ಎಂಟ್ರಿ ನೀಡಿ ಗೂಗ್ಲಿ ಚಿತ್ರದ ಮೂಲಕ ಪ್ರಖ್ಯಾತಿ ಆದರು. ಕನ್ನಡದಲ್ಲಿ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಮಾಸ್ತಿಗುಡಿ’ ಚಿತ್ರದ ನಂತರ ಕೃತಿ ಬೇರೆ ಯಾವ ಕನ್ನಡ ಸಿನಿಮಾದಲ್ಲಿ ನಟಿಸಲಿಲ್ಲ. ಸದ್ಯ ಕೃತಿ ಬಾಲಿವುಡ್‍ಗೆ ಎಂಟ್ರಿ ಕೊಟ್ಟಿದ್ದಾರೆ. ಅಲ್ಲದೇ ಬಾಲಿವುಡ್‍ನಲ್ಲಿ 2019ರ ವರೆಗೂ ಬ್ಯುಸಿ ಆಗಿದ್ದಾರೆ. ಈಗ ಕೃತಿ ಕನ್ನಡದ ಯಾವ ಚಿತ್ರವನ್ನು ಒಪ್ಪಿಕೊಳ್ಳುತ್ತಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಕುಡಿದ ಮತ್ತಿನಲ್ಲಿ ನಡುರಸ್ತೆಯಲ್ಲೇ ಕಿತ್ತಾಡಿಕೊಂಡ ಪೊಲೀಸ್ ಪೇದೆಗಳು

    ಕುಡಿದ ಮತ್ತಿನಲ್ಲಿ ನಡುರಸ್ತೆಯಲ್ಲೇ ಕಿತ್ತಾಡಿಕೊಂಡ ಪೊಲೀಸ್ ಪೇದೆಗಳು

    ಗದಗ: ಕುಡಿದ ಮತ್ತಿನಲ್ಲಿ ಪೊಲೀಸ್ ಪೇದೆಗಳು ನಡುರಸ್ತೆಯಲ್ಲೇ ಕಿತ್ತಾಡಿಕೊಂಡ ಘಟನೆ ನಗರದ ಬೆಟಗೇರಿ ಬಳಿಯ ಸಹಸ್ರಾರ್ಜುನ ವೃತ್ತದ ಬಳಿ ನಡೆದಿದೆ.

    ನಗರದ ಸಹಸ್ರಾರ್ಜುನ ವೃತ್ತದ ಬಳಿ ಇಬ್ಬರು ಪೊಲೀಸ್ ಪೇದೆಗಳು ಕುಡಿದ ಮತ್ತಿನಲ್ಲೇ ಕಿತ್ತಾಡಿಕೊಂಡು ಸಾರ್ವಜನಿಕರಿಗೆ ಉಚಿತ ಮನರಂಜನೆ ನೀಡಿದ್ದಾರೆ. ಮಹಿಳಾ ಠಾಣೆಯ ಪೇದೆ ಶರಣಪ್ಪ ಬಸಾಪುರ ಹಾಗೂ ಗ್ರಾಮೀಣ ಠಾಣೆಯ ಪೇದೆ ಮಂಜುನಾಥ ಬಾರಕೇರ್ ಕಿತ್ತಾಡಿಕೊಂಡ ಪೊಲೀಸ್ ಪೇದೆಗಳಾಗಿದ್ದಾರೆ.

    ಪೇದೆಗಳು ಕುಡಿದ ಮತ್ತಿನಲ್ಲಿ ನಡುರಸ್ತೆಯಲ್ಲೇ ಕಿತ್ತಾಡಿಕೊಂಡಿರುವುದನ್ನು ಸ್ಥಳೀಯರು ವಿಡಿಯೋ ಮಾಡಿದ್ದಾರೆ. ಬಳಿದ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರಿಂದ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ಜಾಲತಾಣಿಗರು ಹಾಗೂ ಸಾರ್ವಜನಿಕರು ಪೇದೆಗಳ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

    ವಿಡಿಯೋ ವೈರಲ್ ಆದ ಬೆನ್ನಲ್ಲೇ ಕೂಡಲೇ ಎಚ್ಚೆತ್ತ ಜಿಲ್ಲಾವರಿಷ್ಠಾಧಿಕಾರಿ ಸಂತೋಷ ಬಾಬುರವರು, ಪೊಲೀಸ್ ಪೇದೆಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ದೇಶ ಕಾಯೋ ಸೈನಿಕನ ಡ್ಯಾನ್ಸ್ ವಿಡಿಯೋ ನೋಡಿ ಫಿದಾ ಆದ ಜನರು: ವಿಡಿಯೋ ವೈರಲ್

    ದೇಶ ಕಾಯೋ ಸೈನಿಕನ ಡ್ಯಾನ್ಸ್ ವಿಡಿಯೋ ನೋಡಿ ಫಿದಾ ಆದ ಜನರು: ವಿಡಿಯೋ ವೈರಲ್

    ನವದೆಹಲಿ: ದೇಶ ಕಾಯೋ ಸೈನಿಕರೊಬ್ಬರ ಡ್ಯಾನ್ಸ್ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಡ್ಯಾನ್ಸ್ ವಿಡಿಯೋ ನೋಡಿ ಜನರು ಫಿದಾ ಆಗಿದ್ದಾರೆ.

    ವಿಡಿಯೋದಲ್ಲಿ ಯೋಧ ‘ಆಲೂ ಚಾಟ್’ ಚಿತ್ರದ ‘ಮಿಲ್‍ಕರ್ ಸಾರೆ ಏಶ್ ಕರೇ, ಪ್ಯಾರ್ ಕೀ ದೌಲತ್ ಕೇಶ್ ಕರೆ’ ಹಾಡಿಗೆ ತಮ್ಮದೇ ಸ್ಟೈಲಿನಲ್ಲಿ ಡ್ಯಾನ್ಸ್ ಮಾಡಿದ್ದಾರೆ.

    ಯೋಧ ಡ್ಯಾನ್ಸ್ ಮಾಡಲು ಶುರು ಮಾಡುತ್ತಿದ್ದಂತೆ ಉಳಿದ ಯೋಧರು ಅವರನ್ನು ಚಿಯರ್ ಮಾಡಿ ಪ್ರೋತ್ಸಾಹಿಸಿದ್ದಾರೆ. ಈ ವಿಡಿಯೋ 2 ನಿಮಿಷ 24 ಸೆಕೆಂಡ್‍ಗಳಿದ್ದು ಬೇರೆ ಬೇರೆ ಸ್ಟೈಲಿನಲ್ಲಿ ಡ್ಯಾನ್ಸ್ ಮಾಡಿದ್ದಾರೆ. ಪ್ರೊಫೆಶನಲ್ ಡ್ಯಾನ್ಸರ್ ಗಳನ್ನುನಾಚುವಂತೆ ಡ್ಯಾನ್ಸ್ ಮಾಡಿದ ಯೋಧನಿಗೆ ಸಾಮಾಜಿಕ ಜಾಲತಾಣದಲ್ಲಿ ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    https://www.youtube.com/watch?v=YovDvs7dH74