Tag: viral

  • ಮಗಳು ಹೇಳಿದಂತೆ ಹೆಜ್ಜೆ ಹಾಕಿದ ಧೋನಿ- ವಿಡಿಯೋ ವೈರಲ್

    ಮಗಳು ಹೇಳಿದಂತೆ ಹೆಜ್ಜೆ ಹಾಕಿದ ಧೋನಿ- ವಿಡಿಯೋ ವೈರಲ್

    ಮುಂಬೈ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್ ಧೋನಿ ಅವರು ತಮ್ಮ ಮಗಳು ಜೀವಾ ಧೋನಿ ತಾಳಕ್ಕೆ ಹೆಜ್ಜೆ ಹಾಕಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಜೀವಾ ತನ್ನ ತಂದೆ ಧೋನಿಗೆ ಈ ಮೊದಲು ಎರಡು ಭಾಷೆಗಳನ್ನು ಹೇಳಿಕೊಟ್ಟಿದ್ದಳು. ಈಗ ಜೀವಾ ತನ್ನ ತಂದೆಗೆ ಡ್ಯಾನ್ಸ್ ಹೇಳಿ ಕೊಡುತ್ತಿರುವ ವಿಡಿಯೋವನ್ನು ಧೋನಿ ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಧೋನಿ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಮಗಳ ಜೊತೆ ಇಂಗ್ಲಿಷ್ ಹಾಡಿಗೆ ಡ್ಯಾನ್ಸ್ ಮಾಡುತ್ತಿರುವ ವಿಡಿಯೋವೊಂದನ್ನು ಹಾಕಿ ಅದಕ್ಕೆ, “ನಾವು ಡ್ಯಾನ್ಸ್ ಮಾಡುವಾಗ ಇನ್ನೂ ಉತ್ತಮವಾಗಿ ಕಾಣುತ್ತೇವೆ” ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

    ಈ ಹಿಂದೆ ಜೀವಾ ಸ್ಕೂಲ್‍ನಲ್ಲಿ ತನ್ನ ಸ್ನೇಹಿತರ ಜೊತೆ ರಂಗೋಲಿ ಬಿಡಿಸುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆ ಫೋಟೋ ದೀಪಾವಳಿಯಲ್ಲಿ ಸೆರೆ ಹಿಡಿದಿದ್ದಾ ಅಥವಾ ಮೊದಲೇ ಕ್ಲಿಕ್ಕಿಸಲಾಗಿತ್ತಾ ಎಂಬುದರ ಬಗ್ಗೆ ಖಚಿತ ಮಾಹಿತಿ ಇಲ್ಲ. ಆದರೆ ಆ ಫೋಟೋ ದೀಪಾವಳಿಯಂದು ವೈರಲ್ ಆಗಿತ್ತು.

     

    View this post on Instagram

     

    Even better when we are dancing @zivasinghdhoni006

    A post shared by M S Dhoni (@mahi7781) on

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಾಮ ಮಾಮ ಹಾಡಿಗೆ ಅಂಬಿ, ಸುಮಲತಾ ಡ್ಯಾನ್ಸ್- ಸಿಕ್ಕಾಪಟ್ಟೆ ವೈರಲ್ ಆಗ್ತಿದೆ ವಿಡಿಯೋ

    ಮಾಮ ಮಾಮ ಹಾಡಿಗೆ ಅಂಬಿ, ಸುಮಲತಾ ಡ್ಯಾನ್ಸ್- ಸಿಕ್ಕಾಪಟ್ಟೆ ವೈರಲ್ ಆಗ್ತಿದೆ ವಿಡಿಯೋ

    ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಶ್ ಅವರು ತಮ್ಮ ಪತ್ನಿ, ನಟಿ ಸುಮಲತಾ ಅವರ ಜೊತೆ ಈ ಮೊದಲು ಮನೆಯಲ್ಲಿ ತೆಲುಗು ಹಾಡಿಗೆ ಡ್ಯಾನ್ಸ್ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಅಂಬರೀಶ್ ಅವರು ತಮ್ಮ ಮನೆಯಲ್ಲಿ ಸುಮಲತಾ ಅವರ ಜೊತೆ ತೆಲುಗು ಚಿತ್ರದ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಚಿರಂಜೀವಿ ಹಾಗೂ ರೋಜ ಅಭಿನಯಿಸಿರುವ ‘ಬಿಗ್ ಬಾಸ್’ ಚಿತ್ರದ ಮಾವ ಮಾವ ಹಾಡಿಗೆ ಅಂಬಿ- ಸುಮಲತಾ ಹೆಜ್ಜೆ ಹಾಕಿದ್ದು, ಇದೀಗ ಈ ವಿಡಿಯೋ ವೈರಲ್ ಆಗಿದೆ. ಇದನ್ನೂ ಓದಿ: ಅಂಬಿ ತಮ್ಮ ಪತ್ನಿ ಫೋನ್ ನಂಬರ್ ಸೇವ್ ಮಾಡಿದ್ದು ಹೀಗೆ

    ಅಂಬರೀಶ್ ಅವರು ಹೆಚ್ಚಾಗಿ ಡ್ಯಾನ್ಸ್ ಮಾಡುವುದಿಲ್ಲ. ಬಾಡಿ ಲ್ಯಾಂಗ್ವೇಜ್ ಹಾಗೂ ಎಕ್ಸ್ ಪ್ರೆಶನ್‍ನಲ್ಲೇ ಎಲ್ಲರ ಮನಸ್ಸು ಗೆಲ್ಲುತ್ತಿದ್ದರು. ಅಂಬರೀಶ್ ಹಾಗೂ ಸುಮಲತಾ ಸಿನಿಮಾದಲ್ಲಿ ಡ್ಯಾನ್ಸ್ ಮಾಡಿದನ್ನು ಅವರ ಅಭಿಮಾನಿಗಳು ನೋಡಿದ್ದಾರೆ. ಆದರೆ ನಿಜ ಜೀವನದಲ್ಲಿ ಅಂಬಿ ತಮ್ಮ ಪತ್ನಿ ಸುಮಲತಾ ಅವರ ಜೊತೆ ಖುಷಿಯಿಂದ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ.

    ಸದ್ಯ ಅಂಬಿ ಹಾಗೂ ಸುಮಲತಾ ಅವರ ಈ ಡ್ಯಾನ್ಸ್ ವಿಡಿಯೋ ಎಲ್ಲರ ವಾಟ್ಸಪ್ ಸ್ಟೇಟಸ್ ಆಗಿದೆ. ಕೆಲವರು ತಮ್ಮ ನೆಚ್ಚಿನ ನಾಯಕ ಅಂಬಿ ಅವರ ಡ್ಯಾನ್ಸ್ ನೋಡಿ ಖುಷಿಪಟ್ಟರೆ, ಕೆಲವರು ಅಂಬಿಯನ್ನು ನೆನೆದು ಭಾವುಕರಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಗೋವಿಂದನ ಹಾಡಿಗೆ ಸ್ಟೆಪ್ ಹಾಕಿದ್ದ ಪಾಕ್ ಎಸ್‍ಐ ಅಮಾನತು: ವಿಡಿಯೋ ನೋಡಿ

    ಗೋವಿಂದನ ಹಾಡಿಗೆ ಸ್ಟೆಪ್ ಹಾಕಿದ್ದ ಪಾಕ್ ಎಸ್‍ಐ ಅಮಾನತು: ವಿಡಿಯೋ ನೋಡಿ

    ಇಸ್ಲಾಮಾಬಾದ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಪಾಕ್ ಪಟ್ಟಣದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ರೊಬ್ಬರು ಬಾಲಿವುಡ್ ನಟ ಗೋವಿಂದ್ ಅವರ ಹಾಡಿಗೆ ಮಹಿಳೆಯೊಂದಿಗೆ ಸ್ಟೆಪ್ಸ್ ಹಾಕಿದ್ದ ವಿಡಿಯೋ ವೈರಲ್ ಆದ ಬೆನ್ನಲ್ಲೇ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

    ಪಾಕ್ ಪಟ್ಟಣದ ಕಲ್ಯಾಣ ಪೊಲೀಸ್ ಠಾಣೆಯ ಅರ್ಷದ್ ಅಮಾನತುಗೊಂಡ ಪೊಲೀಸ್ ಇನ್ಸ್‌ಪೆಕ್ಟರ್. ಇವರು ಓರ್ವ ಮಹಿಳೆಯೊಂದಿಗೆ ಬಾಲಿವುಡ್ ಖ್ಯಾತ ನಟ ಗೋವಿಂದ್ ಅಭಿನಯದ ‘ಬಡೇ ಮಿಂಯಾ, ಚೋಟೆ ಮಿಂಯಾ’ ಸಿನಿಮಾದ `ಕೀಸಿ ಡಿಸ್ಕೋ ಮೇ ಜಾಯೇಂ’ ಹಾಡಿಗೆ ಅರ್ಷದ್ ಮಹಿಳೆ ಜೊತೆ ಹೆಜ್ಜೆ ಹಾಕಿದ್ದರು. ಎಸ್‍ಐ ಸ್ಟೆಪ್ಸ್ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿ ಮಾಡಿತ್ತು. ಅಲ್ಲದೇ ಅರ್ಷದ್ ಪೊಲೀಸ್ ಸಮವಸ್ತ್ರದಲ್ಲೇ ನೃತ್ಯ ಮಾಡಿದ್ದರು.

    ಅರ್ಷದ್ ಜೊತೆಗೆ ಹೆಜ್ಜೆ ಹಾಕಿರುವ ಮಹಿಳೆಯನ್ನು ಅವರ ಗೆಳತಿ ಎಂದು ಹೇಳಲಾಗುತ್ತಿದೆ. ಪೊಲೀಸ್ ಸಮವಸ್ತ್ರದಲ್ಲೇ ಮಹಿಳೆಯೊಂದಿಗೆ ಕುಣಿಯುತ್ತಿರುವ ವಿಡಿಯೋ ವೈರಲ್ ಆದ ಬೆನ್ನಲ್ಲೇ, ಪಾಕ್‍ಪಟ್ಟಣದ ಪೊಲೀಸ್ ಅಧಿಕಾರಿ ಮರಿಯಾ ಮಹಮ್ಮದ್ ಅರ್ಷದ್ ಅವರನ್ನು ಸೇವೆಯಿಂದ ವಜಾಗೊಳಿಸಿ, ತನಿಖೆಗೆ ಆದೇಶಿಸಿದ್ದಾರೆ.

    ಇದೇ ಅರ್ಷದ್ ಬಾಲಿವುಡ್ ನ ಜಾನ್ ಅಬ್ರಾಹಂ ಲೀಡ್ ರೋಲ್ ನಲ್ಲಿ ಅಭಿನಯದ ‘ಶೂಟೌಟ್ ಅಟ್ ವಡಾಲಾ’ ಚಿತ್ರದ ನಟ ಅನಿಲ್ ಕಪೂರ್ ಅವರ ಧ್ವನಿಯನ್ನು ಅನುಕರಣೆ ಮಾಡಿ ಬಿಡುಗಡೆಯನ್ನು ಸಹ ಮಾಡಿದ್ದರು. ಈ ವಿಡಿಯೋ ಸಹ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಮ್ಯಕ್ಕ ಈ ಅಣ್ಣನ ಮಾತು ಕೇಳಿ-ವಿಡಿಯೋ ಹರಿಬಿಟ್ಟ ಬಿಜೆಪಿ ಕಾರ್ಯಕರ್ತ

    ರಮ್ಯಕ್ಕ ಈ ಅಣ್ಣನ ಮಾತು ಕೇಳಿ-ವಿಡಿಯೋ ಹರಿಬಿಟ್ಟ ಬಿಜೆಪಿ ಕಾರ್ಯಕರ್ತ

    ಮಂಡ್ಯ: ರೆಬೆಲ್ ಸ್ಟಾರ್ ಅಂಬರೀಶ್ ಅವರ ಅಂತಿವ ದರ್ಶನ ಬಾರದ ಮಾಜಿ ಸಂಸದೆ, ನಟಿ ರಮ್ಯಾಗೆ ಅವರಿಗೆ ಬಿಜೆಪಿ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯವಾಗಿ ಮಾತನಾಡಿದ್ದಾರೆ.

    ನೀವು ನಮ್ಮ ಸಹೋದರಿಯಂತೆ. ಈಗಲಾದರೂ ಅಂಬರೀಶ್ ಸಮಾಧಿ ಬಳಿ ಬಂದು ವಂದಿಸಿ ನಿಮ್ಮ ತಪ್ಪು ತಿದ್ದಿಕೊಳ್ಳಿ ಎಂದು ಉಪ್ಪರಕನಹಳ್ಳಿ ಗ್ರಾಮದ ಶಿವಕುಮಾರ್ ಆರಾಧ್ಯ ಎಂಬವರು ಅಂಬಿ ದರ್ಶನಕ್ಕೆ ಬಾರದ ರಮ್ಯಾ ವಿರುದ್ಧ ವ್ಯಂಗ್ಯ ಮಾತನಾಡಿದ್ದಾರೆ. ಅಲ್ಲದೇ ಸಹೋದರಿ ತಪ್ಪು ಮಾಡಿದಾಗ ಬೈದು ಹೊಡೆದು ಬುದ್ದಿ ಹೇಳುವುದು ಸಹೋದರರ ಕರ್ತವ್ಯ. ಆದ್ದರಿಂದ ನೀವು ಮಾಡಿದ ತಪ್ಪು ತಿಳಿಸಿ ಬುದ್ದಿ ಹೇಳುತ್ತಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಮ್ಯಾಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ ಮಂಡ್ಯ ಜನತೆ

    ವಿಡಿಯೋದಲ್ಲಿ ಏನಿದೆ?
    ನಮಸ್ಕಾರ ರಮ್ಯಕ್ಕ. ಹಿಂದೆಲ್ಲಾ ನಾವು ನಿಮಗೆ ಬಾಡಿಗೆ ಸಹೋದರ ಎಂದು ಹೇಳಿ ವೈಯಕ್ತಿಕವಾಗಿ ತಮಾಷೆ ಮಾಡಿರಬಹುದು. ಆದರೆ ಈಗ ನಾನು ಬಾಡಿಗೆ ಸಹೋದರ ಎಂದು ತಮಾಷೆ ಮಾಡುವುದಿಲ್ಲ. ನಾನು ಈಗ ನಿಮ್ಮ ಬಳಿ ಗಂಭೀರವಾಗಿ ಸಲಹೆ ನೀಡುತ್ತಿದ್ದೇನೆ. ರಮ್ಯಕ್ಕ ನೀವು ಎಲ್ಲೋ ಒಂದು ಕಡೆ ತಪ್ಪು ಮಾಡುತ್ತಿದ್ದೀರಾ. ನಮ್ಮ ಹಳ್ಳಿ ಕಡೆಯಲ್ಲಿ ಯಾರಾದರೂ ತಪ್ಪು ಮಾಡಿದರೆ, ಅವರ ಅಣ್ಣ-ತಮ್ಮಂದಿರು ಬೈದು ತಲೆ ಮೇಲೆ ಹೊಡೆದು ಬುದ್ಧಿ ಹೇಳುತ್ತಾರೆ. ಇದನ್ನೂ ಓದಿ: ಮಾಜಿ ಸಂಸದೆ ರಮ್ಯಾ ನಿವಾಸಕ್ಕೆ ಪೊಲೀಸ್ ಭದ್ರತೆ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಒಂದು ಫೋಟೋ ನೂರು ಮಾತು- ಅಂಬಿ ಅಂತಿಮ ದರ್ಶನದ ಭಾವನ್ಮಾತಕ ಫೋಟೋ ವೈರಲ್

    ಒಂದು ಫೋಟೋ ನೂರು ಮಾತು- ಅಂಬಿ ಅಂತಿಮ ದರ್ಶನದ ಭಾವನ್ಮಾತಕ ಫೋಟೋ ವೈರಲ್

    ಬೆಂಗಳೂರು: ಕಿಡ್ನಿ ಹಾಗೂ ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ರೆಬೆಲ್ ಸ್ಟಾರ್ ಅಂಬರೀಶ್ ಶನಿವಾರ ರಾತ್ರಿ ಮೃತಪಟ್ಟಿದ್ದರು. ಭಾನುವಾರ ಅಂಬಿ ಅವರ ಪಾರ್ಥಿವ ಶರೀರವನ್ನು ಕಂಠೀರವ ಸ್ಟೇಡಿಯಂನಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಯಿತು. ಈ ವೇಳೆ ಕ್ಲಿಕ್ಕಿಸಿದ ಫೋಟೋ ವೈರಲ್ ಆಗಿದೆ.

    ರೆಬಲ್ ಸ್ಟಾರ್ ಅಂಬರೀಶ್ ಅವರ ಅಂತಿಮ ದರ್ಶನದ ವೇಳೆ ಅವರ ಮಗ ಅಭಿಷೇಕ್ ಭಾವುಕರಾಗಿ ತಮ್ಮ ತಂದೆಯ ಪಾರ್ಥಿವ ಶರೀರವನ್ನು ನೋಡುತ್ತಿದ್ದರೆ, ಸುಮಲತಾ ಅವರು ತಮ್ಮ ಮಗ ಅಭಿಷೇಕ್‍ನನ್ನು ನೋಡುತ್ತಿದ್ದಾರೆ. ಸದ್ಯ ಈ ಮನಕಲಕುವ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಈ ಫೋಟೋ ಭಾವನಾತ್ಮಕವಾಗಿದ್ದು, ಬದುಕಿನ ಕತೆಯನ್ನು ಹೇಳುವಂತಿದೆ. ಸದ್ಯ ಈ ಫೋಟೋವನ್ನು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ವರ್ಣಿಸುತ್ತಿದ್ದಾರೆ. ಈ ಫೋಟೋದಲ್ಲಿ ಅಭಿಷೇಕ್ ಹಾಗೂ ಸುಮಲತಾ ಅವರ ಭಾವನೆ ಫೋಟೋದಲ್ಲಿ ಕಾಣಿಸಿಕೊಂಡಿದೆ.

    ಖಾಸಗಿ ಪ್ರತಿಕೆಯೊಂದರಲ್ಲಿ ಕಳೆದ ಆರು ವರ್ಷದಿಂದ ಕೆಲಸ ಮಾಡುತ್ತಿರುವ ರಂಜಿತ್ ಈ ಫೋಟೋವನ್ನು ಕ್ಲಿಕ್ಕಿಸಿದ್ದಾರೆ. ಫೋಟೋ ಜರ್ನಲಿಸಂ ಮಾಡಿರುವ ಇವರು 50 ಫೋಟೋ ತೆಗೆದು ಕೊನೆಗೆ ಈ ಭಾವನಾತ್ಮಕ ಫೋಟೋವನ್ನು ಓಕೆ ಮಾಡಿದ್ದಾರೆ.

    ಭಾನುವಾರ ಎಲ್ಲರೂ ಅಂಬರೀಶ್ ಅವರ ಫೋಟೋ ಕ್ಲಿಕ್ಕಿಸುತ್ತಿದ್ದರು. ನಾನು ಆಗ ಅವರ ಮೂಡ್ ಹೇಗಿರುತ್ತೆ ಎಂದು ಗಮನಿಸಿ ಸ್ವಲ್ಪ ಜೂಮ್ ಮಾಡಿ ಈ ಫೋಟೋ ಕ್ಲಿಕ್ಕಿಸಿದೆ. ಆದರೆ ಈ ಫೋಟೋದಲ್ಲಿ ಅವರ ಭಾವನೆಗಳು ಸೆರೆಯಾಗಿವೆ ಎಂದು ರಂಜಿತ್ ಪ್ರತಿಕ್ರಿಯಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಗಳ ಜೊತೆಯಿರುವ ಧೋನಿಯ ಮುದ್ದಾದ ವಿಡಿಯೋ ವೈರಲ್

    ಮಗಳ ಜೊತೆಯಿರುವ ಧೋನಿಯ ಮುದ್ದಾದ ವಿಡಿಯೋ ವೈರಲ್

    ಮುಂಬೈ: ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್ ಧೋನಿ ಅವರು ತಮ್ಮ ಮಗಳು ಜೀವಾ ಧೋನಿ ಜೊತೆಯಿರುವ ಮುದ್ದಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಧೋನಿ ಶುಕ್ರವಾರ ತಮ್ಮ ಮಗಳ ಜೊತೆಯಿರುವ ವಿಡಿಯೋವನ್ನು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಜೀವಾ ತನ್ನ ತಂದೆಗೆ ಕ್ಯಾರೆಟ್ ತಿನ್ನಿಸುತ್ತಿದ್ದಾಳೆ. ಸದ್ಯ ಧೋನಿ ಈ ವಿಡಿಯೋಗೆ ‘ಜೀವಾಳ ಬಗ್ಸ್ ಬನ್ನಿ’ ಎಂದು ಕ್ಯಾಪ್ಷನ್ ನೀಡಿ ಪೋಸ್ಟ್ ಮಾಡಿದ್ದಾರೆ.

     

    View this post on Instagram

     

    Ziva’s bugs bunny @zivasinghdhoni006

    A post shared by M S Dhoni (@mahi7781) on

    ಧೋನಿ ಪೋಸ್ಟ್ ಮಾಡಿದ ಈ ವಿಡಿಯೋದಲ್ಲಿ ಯಾವುದೇ ಆಡಿಯೋವಿಲ್ಲ. ಆದರೆ ಮುಖದ ಭಾವನೆಯ ಮೂಲಕವೇ ಜೀವಾ ಎಲ್ಲರ ಗಮನ ಸೆಳೆದಿದ್ದಾಳೆ. ಸದ್ಯ ಧೋನಿ ಹಾಗೂ ಜೀವಾಳ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಏಕದಿನ ಪಂದ್ಯದ ನಂತರ ಧೋನಿ ಅವರನ್ನು ಆಸ್ಟ್ರೇಲಿಯಾ ತಂಡದ ವಿರುದ್ಧ ನಡೆಯುವ ಟಿ20 ಅಂತರಾಷ್ಟ್ರೀಯ ಪಂದ್ಯದಿಂದ ಕೈಬಿಡಲಾಯಿತು. ಸದ್ಯ ಈಗ ವಿಶ್ರಾಂತಿಯಲ್ಲಿರುವ ಧೋನಿ ಅವರು ತಮ್ಮ ಮಗು ಜೀವಾ ಜೊತೆ ಸಮಯವನ್ನು ಕಳೆಯುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಿರಾಟ್ ಆಗಲಿದ್ದಾರೆ ಅಪ್ಪ!- ಅನುಷ್ಕಾ ಬೇಬಿ ಬಂಪ್ ಫೋಟೋ ವೈರಲ್

    ವಿರಾಟ್ ಆಗಲಿದ್ದಾರೆ ಅಪ್ಪ!- ಅನುಷ್ಕಾ ಬೇಬಿ ಬಂಪ್ ಫೋಟೋ ವೈರಲ್

    ಮುಂಬೈ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅಪ್ಪ ಆಗುತ್ತಿದ್ದಾರೆ. ಸದ್ಯ ವಿರಾಟ್ ಪತ್ನಿ, ನಾಯಕಿ ಅನುಷ್ಕಾ ಶರ್ಮಾ ಅವರ ಬೇಬಿ ಬಂಪ್ ಫೋಟೋ ವೈರಲ್ ಆಗಿದ್ದು, ವಿರುಷ್ಕಾ ನಿಜವಾಗಿಯೂ ಅಪ್ಪ- ಅಮ್ಮ ಆಗುತ್ತಿದ್ದಾರಾ ಎಂಬ ಕುತೂಹಲ ಎಲ್ಲರಿಗೂ ಮೂಡಿದೆ.

    ನಟಿ ಅನುಷ್ಕಾ ಅವರ ಒಂದು ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಫೋಟೋದಲ್ಲಿ ಅನುಷ್ಕಾ ಗರ್ಭಿಣಿ ರೀತಿ ಕಾಣಿಸುತ್ತಿದೆ. ಹಾಗಾಗಿ ಅಭಿಮಾನಿಗಳು ವಿರುಷ್ಕಾ ಅಪ್ಪ-ಅಮ್ಮ ಆಗುತ್ತಿದ್ದಾರೆ ಎಂದು ಖುಷಿಯಲ್ಲಿದ್ದಾರೆ.

    ವಿರಾಟ್‍ಗೆ ಮಕ್ಕಳೆಂದರೆ ತುಂಬಾ ಇಷ್ಟ. ಅವರು ಶಿಖರ್ ಧವನ್ ಮಗ ಜೋರಾವರ್, ಎಂ.ಎಸ್ ಧೋನಿ ಅವರ ಪುತ್ರಿ ಝೀವಾ ಹಾಗೂ ಸುರೇಶ್ ರೈನಾ ಅವರ ಪುತ್ರಿ ಗ್ರೇಸಿಯಾ ಜೊತೆ ಹೆಚ್ಚು ಸಮಯ ಕಳೆಯುತ್ತಾರೆ. ಸದ್ಯ ವಿರಾಟ್ ಈಗ ತಮ್ಮ ಸ್ವಂತ ಮಗುವಿನ ಜೊತೆ ಕಾಲ ಕಳೆಯಲು ಇಚ್ಛಿಸುತ್ತಿದ್ದಾರೆ ಎಂದು ಅಭಿಮಾನಿಗಳು ಊಹಿಸಿಕೊಳ್ಳುತ್ತಿದ್ದಾರೆ.

    ಕಳೆದ ವರ್ಷ ಡಿ. 11ರಂದು ಇಟಲಿಯ ಟಸ್ಕನಿ ನಗರದ `ಬೋಗೋ ಫಿನೊಕಿಯೆಟೊ’ ಎಂಬ ದುಬಾರಿ ರೆಸಾರ್ಟ್‍ನಲ್ಲಿ ದ್ರಾಕ್ಷಿ ಹಣ್ಣಿನ ತೋಟದ ನಡುವೆಯಿರುವ ಸ್ವರ್ಗದಂಥಹ ತಾಣದಲ್ಲಿ ವಿರುಷ್ಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆ ಸಿಂಪಲ್ ಆಗಿ ಆದರೂ ಪ್ರತಿಯೊಂದು ವಸ್ತುಗಳು ಕೂಡ ತುಂಬಾ ದುಬಾರಿಯಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ದೀಪ್‍ವೀರ್ ಮದ್ವೆಯ ಮತ್ತೊಂದು ಫೋಟೋ ವೈರಲ್

    ದೀಪ್‍ವೀರ್ ಮದ್ವೆಯ ಮತ್ತೊಂದು ಫೋಟೋ ವೈರಲ್

    ಮುಂಬೈ: ಬಾಲಿವುಡ್ ಸ್ಟಾರ್ ಕಪಲ್ ದೀಪಿಕಾ ಪಡುಕೋಣೆ ಹಾಗೂ ರಣ್‍ವೀರ್ ಸಿಂಗ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಗುರುವಾರ ಸಂಜೆ ಕೇವಲ ಎರಡು ಫೋಟೋಗಳನ್ನು ಜೋಡಿ ಬಿಡುಗಡೆ ಮಾಡಿತ್ತು. ಆದರೆ ಈಗ ದೀಪ್‍ವೀರ್ ಮದುವೆಯ ಫ್ಯಾಮಿಲಿ ಫೋಟೋ ವೈರಲ್ ಆಗಿದೆ.

    ನವೆಂಬರ್ 14ರಂದು ಕೊಂಕಣಿ ಸಂಪ್ರದಾಯದಂತೆ ಮದುವೆಯಾದ ರಣ್‍ವೀರ್-ದೀಪಿಕಾ ತಮ್ಮ ಕುಟುಂಬಸ್ಥರ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ. ಸದ್ಯ ಈ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

     

    View this post on Instagram

     

    Us and ours ❤️❤️❤️ #MrsandMrRanveerSingh #deepveerkishaadi #ranveerkishaadi

    A post shared by Nitasha Gaurav (@nitashagaurav) on

    ರಣ್‍ವೀರ್ ಅವರ ಸ್ಟೈಲಿಸ್ಟ್ ಆದ ನಿತಾಶಾ ಗೌರವ್ ಅವರು ತಮ್ಮ ಇನ್‍ಸ್ಟಾಗ್ರಾಂನಲ್ಲಿ ದೀಪ್‍ವೀರ್ ಫ್ಯಾಮಿಲಿ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಈ ಫೋಟೋದಲ್ಲಿ ನವಜೋಡಿ ಜೊತೆ ರಣ್‍ವೀರ್ ತಾಯಿ ಅಂಜಿ ಭವ್ನಾನಿ, ಅವರ ಸಂಬಂಧಿಕರು ಹಾಗೂ ಅವರ ಸ್ನೇಹಿತರು ಕಾಣಿಸಿಕೊಂಡಿದ್ದಾರೆ.

    ರಣ್‍ವೀರ್ ಸ್ಟೈಲಿಸ್ಟ್ ಫ್ಯಾಮಿಲಿ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಹಾಕಿ ಅದಕ್ಕೆ, “ನನ್ನದು ಹಾಗೂ ನಮ್ಮದು” ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ನಂತರ ಸುದ್ದಿ ಸಂಸ್ಥೆಯೊಂದು ದೀಪಿಕಾ ಕುಟುಂಬದವರ ಫೋಟೋ ಹಾಕಿ ಟ್ವೀಟ್ ಮಾಡಿದ್ದಾರೆ.

    ಸುದ್ದಿ ಸಂಸ್ಥೆ ಟ್ವೀಟ್ ಮಾಡಿದ ಫ್ಯಾಮಿಲಿ ಫೋಟೋದಲ್ಲಿ ದೀಪಿಕಾ ಸ್ಟೈಲಿಸ್ಟ್ ಶಾಲೀನಾ ನತಾನಿ ಹಾಗೂ ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ಗೇಬ್ರಿಲ್ ಗೋರ್ಜಿಯು ಕಾಣಿಸಿಕೊಂಡಿದ್ದಾರೆ. ಈ ಎರಡು ಫೋಟೋಗಳು ದೀಪಿಕಾ ಹಾಗೂ ರಣ್‍ವೀರ್ ಕೊಂಕಣಿ ಸಂಪ್ರದಾಯದಲ್ಲಿ ಮದುವೆಯಾದ ನಂತರ ಕ್ಲಿಕ್ಕಿಸಿದ ಫೋಟೋ ಆಗಿದೆ.

    ನಿತಾಶಾ ಈ ಮೊದಲು ತಮ್ಮ ಇನ್‍ಸ್ಟಾಗ್ರಾಂ ಸ್ಟೋರಿಯಲ್ಲಿ ರಣ್‍ವೀರ್ ತಂದೆ ಜಗ್‍ಜಿತ್ ಸಿಂಗ್ ಭವ್ನಾನಿ ಅವರು ಮದುವೆಯಾದ ನಂತರ ದೀಪಿಕಾಗೆ “ಯೇ ದಿವಾನಿ ತೋ ಭವ್ನಾನಿ ಹೋ ಗಯಿ” ಎಂದು ಹೇಳಿದ್ದಾರೆಂದು ತಮ್ಮ ಇನ್‍ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ವೇದಿಕೆ ಮೇಲೆ ಬಲವಂತವಾಗಿ ಕಾಜಲ್‍ಗೆ ಕಿಸ್ ಕೊಟ್ಟ ಸಹನಟ: ವಿಡಿಯೋ ವೈರಲ್

    ವೇದಿಕೆ ಮೇಲೆ ಬಲವಂತವಾಗಿ ಕಾಜಲ್‍ಗೆ ಕಿಸ್ ಕೊಟ್ಟ ಸಹನಟ: ವಿಡಿಯೋ ವೈರಲ್

    ಹೈದರಾಬಾದ್: ಕಾರ್ಯಕ್ರಮವೊಂದರಲ್ಲಿ ನಟಿ ಕಾಜಲ್ ಅಗರ್ವಾಲ್ ಅವರನ್ನು ಸಹನಟ ಕಿಸ್ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಮಂಗಳವಾರ ಹೈದರಾಬಾದ್‍ನಲ್ಲಿ ‘ಕವಚಂ’ ಚಿತ್ರದ ಟೀಸರ್ ಲಾಂಚ್ ಕಾರ್ಯಕ್ರಮ ನಡೆಯಿತು. ಈ ಚಿತ್ರವನ್ನು ಶ್ರೀನಿವಾಸ್ ಮಾಮಿಲ ನಿರ್ದೇಶನವಿದ್ದು, ಬೆಲ್ಲಂಕೊಂಡ ಶ್ರೀನಿವಾಸ್ ಹಾಗೂ ಮೀಹಿರಿನ್ ಪಿರ್ಜಾದಾ ಚಿತ್ರದಲ್ಲಿ ನಟಿಸಿದ್ದಾರೆ.

    ಈ ಕಾರ್ಯಕ್ರಮದಲ್ಲಿ ಚಿತ್ರತಂಡ ಎಲ್ಲರೂ ಸೇರಿದ್ದಾಗ ಕಾಜಲ್ ನಿರ್ದೇಶಕ ಶ್ರೀನಿವಾಸ್ ಹಾಗೂ ಬೆಲ್ಲಂಕೊಂಡ ಶ್ರೀನಿವಾಸ್ ಹಾಗೂ ಮೀಹಿರಿನ್ ಪಿರ್ಜಾದಾ ಅವರಿಗೆ ಉದ್ದೇಶಿಸಿ ಧನ್ಯವಾದ ತಿಳಿಸಿದರು. ಇದೇ ವೇಳೆ ಕಾಜಲ್ ತಮ್ಮ ಸಹನಟ ಚೋಟಾ ಕೆ. ನಾಯ್ಡು ಬಗ್ಗೆ ಕೂಡ ಮಾತನಾಡಿದರು.

    ಕಾಜಲ್ ಚೋಟಾ ನಾಯ್ಡು ಬಗ್ಗೆ ಮಾತನಾಡಿದಾಗ ಅವರು ಬಂದು ಕಾಜಲ್‍ಗೆ ಬಲವಂತವಾಗಿ ಕಿಸ್ ನೀಡಿದರು. ಚೋಟಾ ನಾಯ್ಡು ಕಿಸ್ ಮಾಡಿದಾಗ ಕಾಜಲ್ ಒಂದು ಕ್ಷಣ ಬೆಚ್ಚಿಬಿದ್ದು ಏನೂ ಮಾತನಾಡಬೇಕು ಎಂದು ಮರೆತು ಹೋದರು.

    ಕಾಜಲ್‍ಗೆ ಕಿಸ್ ಕೊಟ್ಟ ನಂತರ ಮಾತನಾಡಿದ ಚೋಟಾ ನಾಯ್ಡು, “ನೀವು ಮೀಹಿರಿನ್‍ಗೆ ಕಿಸ್ ಕೊಟ್ಟೆ. ನೀವು ಇದನ್ನು ಮಾಡಲು ಆಗುವುದಿಲ್ಲ ಎಂದು ತಮನ್ ಹೇಳಿದರು. ನಾನು ಯಾಕೆ ಇದು ಮಾಡಬಾರದು ಎಂದು ನಿಮಗೆ ಕಿಸ್ ಮಾಡಿದೆ” ಎಂದು ಹೇಳಿದರು.

    ಸದ್ಯ ಚೋಟಾ ನಾಯ್ಡು ಕಿಸ್ ಮಾಡಿದ್ದನ್ನು ಕಾಜಲ್ ನಿರ್ಲಕ್ಷಿಸಿ, “ಪರವಾಗಿಲ್ಲ ಚೋಟು. ನೀವು ನನ್ನ ಕುಟುಂಬದ ಸದಸ್ಯರಿದ್ದಂತೆ” ಎಂದು ಹೇಳಿ ಸುಮ್ಮನೆ ನಕ್ಕು ಬಿಟ್ಟರು. ಸದ್ಯ ಚೋಟಾ ನಾಯ್ಡು ನಟಿ ಕಾಜಲ್ ಅವರನ್ನು ಕಿಸ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

     

    View this post on Instagram

     

    @kajalaggarwal.offl ♥️

    A post shared by KAJAL AGGARWAL ♥️ (@kajalaggarwal.offl) on

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಕಮಲಹಾಸನ್ ಪುತ್ರಿ ಒಳಉಡುಪಿನಲ್ಲಿದ್ದ ಫೋಟೋ ಲೀಕ್: ಅಕ್ಷರಾ ಹೇಳಿದ್ದೇನು?

    ಕಮಲಹಾಸನ್ ಪುತ್ರಿ ಒಳಉಡುಪಿನಲ್ಲಿದ್ದ ಫೋಟೋ ಲೀಕ್: ಅಕ್ಷರಾ ಹೇಳಿದ್ದೇನು?

    ಮುಂಬೈ: ಖ್ಯಾತ ನಟ ಕಮಲ್ ಹಾಸನ್ ಅವರ ಎರಡನೇ ಪುತ್ರಿ ಅಕ್ಷರಾ ಹಾಸನ್ ತನ್ನ ಖಾಸಗಿ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಲೀಕ್ ಆಗಿದ್ದರ ಕುರಿತು ಇದೇ ಮೊದಲ ಬಾರಿಗೆ ಟ್ವಿಟ್ಟರ್‌ನಲ್ಲಿ ಅಸಮಾಧಾನವನ್ನು ತೋಡಿಕೊಂಡಿದ್ದಾರೆ.

    ನನ್ನ ಖಾಸಗಿ ಫೋಟೋಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಲೀಕ್ ಆಗಿದ್ದವು. ಅವುಗಳನ್ನು ಯಾರು ಲೀಕ್ ಮಾಡಿದ್ದಾರೆಂಬುದು ನನಗೆ ತಿಳಿದಿಲ್ಲ. ಆದರೆ ಒಂದು ಹುಡುಗಿಯನ್ನು ಈ ರೀತಿ ಬಳಸಿಕೊಂಡಿರುವುದು ನಿಜಕ್ಕೂ ಬೇಸರದ ಸಂಗತಿ. ಕೆಲ ವಿಕೃತ ಮನಸ್ಸುಗಳ ಆಟಕ್ಕೆ ಈ ರೀತಿ ಬಲಿಯಾಗಿರುವುದನ್ನು ನಾನು ಅರಗಿಸಿಕೊಳ್ಳಲು ಸಾಧ್ಯವೇ ಇಲ್ಲ.

    ಇತ್ತೀಚಿನ ದಿನಗಳಲ್ಲಿ #ಮೀಟೂ ಅಭಿಯಾನ ನಡೆಯುತ್ತಿದೆ. ಆದರೆ ಇದರ ನಡುವೆಯೇ ಕಾಮುಕರು ನನ್ನ ಖಾಸಗಿ ಫೋಟೋಗಳನ್ನು ವೈರಲ್ ಮಾಡಿ, ಜನರ ಮುಂದೆ ತಮ್ಮ ನಡತೆಯನ್ನು ತೋರಿಸಿಕೊಂಡಿದ್ದಾರೆ. ಆದರೆ ಇದರಿಂದಾಗಿ ನನಗೆ ಬಹಳ ನೋವಾಗಿದೆ. ಈಗಾಗಲೇ ಇದರ ಬಗ್ಗೆ ಮುಂಬೈ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದೇನೆ ಎಂದು ಬರೆದುಕೊಂಡಿದ್ದಾರೆ.

    ಕೆಲ ದಿನಗಳ ಹಿಂದೆ ಅಕ್ಷರಾ ಹಾಸನ್ ಪ್ರೈವೇಟ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅಕ್ಷರಾ ಹಾಸನ್ ಅವರು ಇಂದು ಹಾಕಿರುವ ಟ್ವೀಟ್ ಗಮನಿಸಿದರೆ, ಈ ಫೋಟೋಗಳು ಅವರದ್ದೇ ಎಂದು ಖಚಿತಪಡಿಸಿದಂತಿದೆ. ಈ ಬಗ್ಗೆ ತನಿಖೆ ಮಾಡುತ್ತಿರುವ ಸೈಬರ್ ಕ್ರೈಂ ಪೊಲೀಸರು ಈ ಫೋಟೋಗಳನ್ನು ಅಪ್‍ಲೋಡ್ ಮಾಡಿದ್ಯಾರು ಎಂಬುದನ್ನು ಪತ್ತೆ ಹಚ್ಚಬೇಕಿದೆ. ಅಲ್ಲದೆ ಈ ಫೋಟೋಗಳು ಅಪ್‍ಲೋಡ್ ಮಾಡಿದವರಿಗೆ ಸಿಕ್ಕಿದ್ದು ಹೇಗೆ..? ಅಕ್ಷರಾ ಅವರ ಮೊಬೈಲ್‍ನಿಂದಲೇ ಈ ಫೋಟೋ ತಗೊಂಡ್ರಾ ಅಥವಾ ಬೇರೆ ಯಾವುದಾದರೂ ತಂತ್ರಜ್ಞಾನ ಬಳಸಿ ಈ ಕೃತ್ಯವೆಸಗಿದ್ರಾ ಎಂಬ ನಿಟ್ಟಿನಲ್ಲಿ ತನಿಖೆ ಮುಂದುವರಿಯಬೇಕಿದೆ.

    https://www.instagram.com/p/BppAsI1BOi5/?utm_source=ig_web_copy_link

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews