Tag: viral

  • ಬಿಎಸ್‍ಎಫ್ ಯೋಧನ ಹಾಡು ಈಗ ವೈರಲ್: ವಿಡಿಯೋ ನೋಡಿ

    ಬಿಎಸ್‍ಎಫ್ ಯೋಧನ ಹಾಡು ಈಗ ವೈರಲ್: ವಿಡಿಯೋ ನೋಡಿ

    ನವದೆಹಲಿ: ಬಿಎಸ್‍ಎಫ್ ಯೋಧರೊಬ್ಬರು ಹಾಡಿದ ಹಾಡಿನ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

    ಬಿಎಸ್‍ಎಫ್ ಯೋಧ ಸುರಿಂದರ್ ಸಿಂಗ್ ಅವರು 1997ರಲ್ಲಿ ಬಿಡುಗಡೆ ಆದ ‘ಬಾರ್ಡರ್’ ಚಿತ್ರದ ‘ಸಂದೇಸೇ ಆತೇ ಹೈ’ ಹಾಡನ್ನು ಹಾಡಿದ್ದಾರೆ. ಸುರಿಂದರ್ ಸಿಂಗ್ ಅವರು ಈ ಹಿಂದೆ ಹಿಂದಿಯಲ್ಲಿ ನಡೆಯುವ ‘ಇಂಡಿಯನ್ ಐಡಲ್ ಸೀಸನ್-10″ ನಲ್ಲಿ ಭಾಗವಹಿಸಿದ್ದರು.

    ಸುರಿಂದರ್ ಅವರು ಈ ಸೂಪರ್ ಹಿಟ್ ಹಾಡು ಹಾಡುತ್ತಿದ್ದಂತೆ ಜೊತೆಯಲ್ಲಿ ಇದ್ದವರು ಅವರ ಹಾಡಿಗೆ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸುತ್ತಿರುವುದು ವಿಡಿಯೋದಲ್ಲಿ ನೋಡಬಹುದು. ಈ ವಿಡಿಯೋ ಮೊದಲು ಯೂಟ್ಯೂಬ್‍ನಲ್ಲಿ ಶೇರ್ ಆಗಿತ್ತು. ಬಳಿಕ ಸಾಮಾಜಿಕ ಜಾಲತಾಣದಲ್ಲಿ ಶೇರ್ ಆಗಿ ವೈರಲ್ ಆಗುತ್ತಿದೆ.

    ಅನಿತಾ ಚೌಹ್ವಾನ್ ಎಂಬವರು ಈ ವಿಡಿಯೋವನ್ನು ತಮ್ಮ ಟ್ವಿಟ್ಟರಿನಲ್ಲಿ ಶೇರ್ ಮಾಡಿಕೊಂಡಿದ್ದು, 4 ಸಾವಿರಕ್ಕೂ ಹೆಚ್ಚು ಲೈಕ್ಸ್ ಪಡೆದಿದ್ದು, 1 ಸಾವಿರಕ್ಕೂ ಹೆಚ್ಚು ಬಾರಿ ರೀ-ಟ್ವೀಟ್ ಆಗಿದೆ. ಈ ವಿಡಿಯೋ ನೋಡಿದ ಜನರು ಸುರಿಂದರ್ ಸಿಂಗ್ ಅವರಿಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಯೋಧನ ಧ್ವನಿ ಕೇಳಿ ರೋಮಾಂಚನವಾಗಿದೆ ಎಂದು ಒಬ್ಬರು ಟ್ವೀಟ್ ಮಾಡಿದರೆ, ಮತ್ತೊಬ್ಬರು ನಮ್ಮ ಯೋಧರ ಬಗ್ಗೆ ನಮಗೆ ಹೆಮ್ಮೆ ಆಗುತ್ತಿದೆ. ಈ ಹಾಡು ಕೇಳಿ ದೇಶ ಭಕ್ತಿಯ ಫಿಲೀಂಗ್ ಬರುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.

    https://twitter.com/anita_chauhan80/status/1083575725234495490?ref_src=twsrc%5Etfw%7Ctwcamp%5Etweetembed%7Ctwterm%5E1083575725234495490&ref_url=https%3A%2F%2Fwww.timesnownews.com%2Fthe-buzz%2Farticle%2Fthis-bsf-jawan-s-rendition-of-sandese-aate-hain-from-border-is-winning-hearts-watch-video%2F347931

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಎಲ್ಲರೂ ಇದ್ದಾರೆ ಆದ್ರೆ ಮಾತನಾಡೋಕ್ಕೆ ಯಾರು ಇಲ್ಲ- ಕಣ್ಣೀರು ತರಿಸುತ್ತೆ ಆಶಾ ಬೋಸ್ಲೆ ಟ್ವೀಟ್

    ಎಲ್ಲರೂ ಇದ್ದಾರೆ ಆದ್ರೆ ಮಾತನಾಡೋಕ್ಕೆ ಯಾರು ಇಲ್ಲ- ಕಣ್ಣೀರು ತರಿಸುತ್ತೆ ಆಶಾ ಬೋಸ್ಲೆ ಟ್ವೀಟ್

    ಮುಂಬೈ: ಬಾಲಿವುಡ್ ದಂತಕತೆ, ಗಾಯಕಿ ಆಶಾ ಬೋಸ್ಲೆ ಅವರು ಎರಡು ದಿನದ ಹಿಂದೆ ಟ್ವಿಟ್ಟರ್ ನಲ್ಲಿ ಒಂದು ಫೋಟೋ ಅಪ್ಲೋಡ್ ಮಾಡಿದ್ದು ಬಹಳ ಚರ್ಚೆಯಾಗುತ್ತಿದೆ.

    ಆಶಾ ಬೋಸ್ಲೆ ಅವರು ಒಂದು ಕಾರ್ಯಕ್ರಮಕ್ಕೆ ಕೋಲ್ಕತ್ತಾಗೆ ತೆರೆಳಿದ್ದರು. ಈ ವೇಳೆ ಆಶಾ ಅವರ ಜೊತೆ ಗಾಯಕರಾದ ಸುದೇಶ್ ಬೋಸ್ಲೆ ಹಾಗೂ ಸಿದ್ಧಾಂತ್ ಬೋಸ್ಲೆ ಕೂಡ ತೆರೆಳಿದ್ದು, ಅಲ್ಲಿ ವೇಟಿಂಗ್ ರೂಮಿನಲ್ಲಿ ಎಲ್ಲರು ಜೊತೆಯಲ್ಲಿ ಇದ್ದರು.

    ಆಶಾ ವೇಟಿಂಗ್ ರೂಮಿನಲ್ಲಿ ಕುಳಿತ ಫೋಟೋವನ್ನು ಹಾಕಿ ಅದಕ್ಕೆ, “ಬಾಗ್ಡೋಗ್ರದಿಂದ ಕೋಲ್ಕತ್ತಾವರೆಗೂ…. ಎಲ್ಲರೂ ಜೊತೆಯಲ್ಲಿಯೇ ಇದ್ದಾರೆ. ಆದರೆ ಮಾತನಾಡುವುದಕ್ಕೆ ಯಾರೂ ಇಲ್ಲ. ಅಲೆಕ್ಸಾಂಡ್ ಗ್ರಹಾಂ ಬೆಲ್ ಧನ್ಯವಾದಗಳು” ಎಂದು ಟ್ವೀಟ್ ಮಾಡಿದ್ದಾರೆ.

    ಆಶಾ ಅವರು ಟ್ವೀಟ್ ಮಾಡಿದ ಫೋಟೋದಲ್ಲಿ ಅವರ ಜೊತೆ ಐದು ಜನ ಇದ್ದಾರೆ. ಆದರೆ ಬೋಸ್ಲೆ ಅವರನ್ನು ಹೊರತುಪಡಿಸಿ ಉಳಿದ ನಾಲ್ಕು ಮಂದಿ ತಮ್ಮ ತಮ್ಮ ಮೊಬೈಲ್ ನಲ್ಲಿ ಬ್ಯುಸಿಯಾಗಿದ್ದರು. ಆದರೆ ಆಶಾ ಅವರು ಯಾವುದೇ ಮೊಬೈಲ್ ಬಳಸದೇ ತಮ್ಮ ಜೊತೆಯಲ್ಲಿದ್ದವನ್ನು ನೋಡುತ್ತಿದ್ದರು.

    ಆಶಾ ಅವರ ಈ ಟ್ವೀಟ್ ಸಾಕಷ್ಟು ವೈರಲ್ ಆಗುತ್ತಿದೆ. ಈ ಟ್ವೀಟ್ ನೋಡಿ ಕೆಲವರು ಆಶಾ ಅಂತಹ ಮಹಾನ್ ಗಾಯಕರು ನಮ್ಮ ಪಕ್ಕದಲ್ಲಿ ಇದ್ದರೆ, ದಿನ ಪೂರ್ತಿ ಅವರ ಮಾತುಗಳನ್ನೇ ಕೇಳುತ್ತಿದ್ದೇವು ಎಂದು ಟ್ವೀಟ್ ಮಾಡುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಯುವಕನನ್ನು ತಬ್ಬಿಕೊಂಡಿದ್ದಕ್ಕೆ ವಿದ್ಯಾರ್ಥಿನಿ ವಿವಿಯಿಂದ ಡಿಬಾರ್: ವಿಡಿಯೋ ವೈರಲ್

    ಯುವಕನನ್ನು ತಬ್ಬಿಕೊಂಡಿದ್ದಕ್ಕೆ ವಿದ್ಯಾರ್ಥಿನಿ ವಿವಿಯಿಂದ ಡಿಬಾರ್: ವಿಡಿಯೋ ವೈರಲ್

    ಕೈರೋ: ವಿದ್ಯಾರ್ಥಿನಿಯೊಬ್ಬಳು ಯುವಕನನ್ನು ತಬ್ಬಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಆಕೆಯನ್ನು ವಿಶ್ವವಿದ್ಯಾಲಯದಿಂದಲೇ ಡಿಬಾರ್ ಮಾಡಿದ ಘಟನೆಯೊಂದು ಈಜಿಪ್ಟ್ ನಲ್ಲಿ ನಡೆದಿದೆ.

    ವೈರಲ್ ಆಗಿರುವ ವಿಡಿಯೋದಲ್ಲಿ ಯುವಕ ಮಂಡಿಯೂರಿ ಯುವತಿಗೆ ಹೂಗೂಚ್ಚ ನೀಡುವ ಮೂಲಕ ತನ್ನ ಪ್ರೀತಿಯನ್ನು ಹೇಳಿಕೊಂಡಿದ್ದಾನೆ. ಬಳಿಕ ಯುವಕ ತನ್ನ ಉತ್ಸಾಹವನ್ನು ತಾಳಲಾರದೇ ಯುವತಿಯನ್ನು ತಬ್ಬಿಕೊಂಡಿದ್ದಾನೆ. ಯುವಕನನ್ನು ತಬ್ಬಿಕೊಂಡಿದ್ದಕ್ಕೆ ಯುವತಿ ತನ್ನ ಸಂಸ್ಥೆಯ ಗೌರವವನ್ನು ಹಾಳು ಮಾಡಿದ್ದಾಳೆಂದು ಅಲ್- ಅಜರ್ ವಿಶ್ವವಿದ್ಯಾಲಯ ಆಕೆಯನ್ನು ಡಿಬಾರ್ ಮಾಡಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ನೀವು ಸೀಲ್ ಒಡೆದಿರುವ ತಂಪು ಪಾನೀಯ ಖರೀದಿ ಮಾಡುತ್ತೀರಾ : ಕನ್ಯತ್ವದ ಬಗ್ಗೆ ಪ್ರೊಫೆಸರ್ ಪೋಸ್ಟ್

    ವರದಿಗಳ ಪ್ರಕಾರ ಯುವತಿ ಯುವಕನನ್ನು ತಬ್ಬಿಕೊಂಡ ವಿಡಿಯೋ ಅಲ್-ಅಜರ್ ವಿಶ್ವವಿದ್ಯಾಲಯದಲ್ಲಿ ಸೆರೆಯಾಗಿಲ್ಲ. ಬದಲಿಗೆ ಈ ವಿಡಿಯೋ ಮನ್ಸೌರಾ ವಿಶ್ವವಿದ್ಯಾಲಯದಲ್ಲಿ ಸೆರೆ ಹಿಡಿಯಲಾಗಿದೆ. ಅಲ್ – ಅಜರ್ ಈಜಿಪ್ಟಿನ ಅತ್ಯುನ್ನತ ಸುನ್ನಿ ಮುಸ್ಲಿಂ ಜನಾಂಗದ ಪ್ರಮುಖ ಶಾಖೆಯಾಗಿದ್ದು, ಇಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಸಂಪ್ರದಾಯಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂಬ ನಿಯಮವಿದೆ. ಇದನ್ನೂ ಓದಿ: ಶಾಲೆಯಲ್ಲಿ ವಿದ್ಯಾರ್ಥಿನಿಯನ್ನು ಕೆಲ ಸೆಕೆಂಡ್ ತಬ್ಬಿಕೊಂಡಿದ್ದಕ್ಕೆ ವಿದ್ಯಾರ್ಥಿ ಸಸ್ಪೆಂಡ್!

    ಈ ವಿಚಾರದ ಬಗ್ಗೆ ಅಲ್-ಅಜರ್ ವಿವಿಯ ವಕ್ತಾರ ಅಹ್ಮದ್ ಜರೈ ಮಾತನಾಡಿ, “ನಾವು ಆ ವಿದ್ಯಾರ್ಥಿನಿಯನ್ನು ಡಿಬಾರ್ ಮಾಡಲು ನಿರ್ಧರಿಸಿದ್ದೇವೆ. ವಿಡಿಯೋದಿಂದಾಗಿ ಸಾರ್ವಜನಿಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲದೇ ಯುವತಿ ದೇಶದಲ್ಲೇ ಪ್ರತಿಷ್ಠಿತವಾಗಿರುವ ನಮ್ಮ ವಿಶ್ವವಿದ್ಯಾಲಯಕ್ಕೆ ಕೆಟ್ಟ ಹೆಸರು ತಂದಿದ್ದಾಳೆ. ಮದುವೆ ಆಗದ ಯುವಕನನ್ನು ಯುವತಿ ತಬ್ಬಿಕೊಂಡು ಸಮಾಜದ ಮೌಲ್ಯಗಳು ಹಾಗೂ ತತ್ವಗಳನ್ನು ಉಲ್ಲಂಘಿಸಿದ್ದಾಳೆ” ಎಂದು ಹೇಳಿ ವಿವಿಯ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಆಪರೇಷನ್ ಥಿಯೇಟರ್‌ನಲ್ಲಿ ನರ್ಸ್‌ಗೆ ಕಿಸ್ ಮಾಡಿದ ವೈದ್ಯ: ವಿಡಿಯೋ ವೈರಲ್

    ಆಪರೇಷನ್ ಥಿಯೇಟರ್‌ನಲ್ಲಿ ನರ್ಸ್‌ಗೆ ಕಿಸ್ ಮಾಡಿದ ವೈದ್ಯ: ವಿಡಿಯೋ ವೈರಲ್

    ಉಜ್ಜೈನಿ: ವೈದ್ಯನೊಬ್ಬ ಆಪರೇಷನ್ ಥಿಯೇಟರ್‌ನಲ್ಲೇ ನರ್ಸ್‌ಗೆ ಕಿಸ್ ಮಾಡಿದ ಘಟನೆಯೊಂದು ಮಧ್ಯಪ್ರದೇಶದ ಉಜ್ಜೈನಿಯ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದೆ. ವೈದ್ಯ ನರ್ಸ್‌ಗೆ ಕಿಸ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಆತನನ್ನು ಕೆಲಸದಿಂದ ವಜಾ ಮಾಡಲಾಗಿದೆ.

    49 ವರ್ಷದ ಸಿವಿಲ್ ಸರ್ಜನ್‍ನ ವರ್ತನೆಯಿಂದ ಆತನನ್ನು ಕೆಲಸದಿಂದ ವಜಾ ಮಾಡಲಾಗಿದ್ದು, ಘಟನೆ ಬಗ್ಗೆ ವಿವರಣೆ ನೀಡಬೇಕೆಂದು ಆತನಿಗೆ ನೋಟಿಸ್ ಜಾರಿ ಮಾಡಿದ್ದೇನೆ ಎಂದು ಜಿಲ್ಲಾಧಿಕಾರಿ ಶಶಾಂಕ್ ಮಿಶ್ರಾ ತಿಳಿಸಿದ್ದಾರೆ.

    ಡಿವಿಶನಲ್ ಕಮಿಷನರ್ ಈ ಘಟನೆ ಬಗ್ಗೆ ವಿಚಾರಣೆ ನಡೆಸುತ್ತಾರೆ. ವೈದ್ಯ, ನರ್ಸ್‌ಗೆ ಕಿಸ್ ಮಾಡುತ್ತಿರುವ ವಿಡಿಯೋ ಆಸ್ಪತ್ರೆಯಲ್ಲೇ ತೆಗೆದಿರುವುದೋ ಇಲ್ಲವೋ ಎನ್ನುವುದು ಖಚಿತವಾಗಿಲ್ಲ ಎಂದು ಜಿಲ್ಲಾ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಡಾ. ಮೋಹನ್ ಮಾಳವಿಯಾ ತಿಳಿಸಿದ್ದಾರೆ.

    ನರ್ಸಿಂಗ್ ಸ್ಟಾಫ್ ವಾಟ್ಸಪ್ ಗ್ರೂಪಿನಲ್ಲಿ ಈ ಅಸಭ್ಯ ವಿಡಿಯೋ ಬಂತು ಎಂದು ಆಸ್ಪತ್ರೆಯ ಸಿಬ್ಬಂದಿ ತಿಳಿಸಿದ್ದಾರೆ. ಈ ವಿಡಿಯೋ ಆಕಸ್ಮಿಕವಾಗಿ ಗ್ರೂಪಿನಲ್ಲಿ ಸೆಂಡ್ ಆಯ್ತೇ ಅಥವಾ ಉದ್ದೇಶಪೂರ್ವಕವಾಗಿಯೇ ಸೆಂಡ್ ಮಾಡಿದ್ದಾರಾ ಎನ್ನುವುದರ ಬಗ್ಗೆ ಜಿಲ್ಲಾಧಿಕಾರಿ ತನಿಖೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಸ್ತೆಗಿಳಿದ ಕಾಡಿನ ರಾಜರು..!- ವಿಡಿಯೋ ನೋಡಿ

    ರಸ್ತೆಗಿಳಿದ ಕಾಡಿನ ರಾಜರು..!- ವಿಡಿಯೋ ನೋಡಿ

    ಕೇಪ್‍ಟೌನ್: 4 ಸಿಂಹಗಳು ರಾಜಗಾಂಭೀರ್ಯದಿಂದ ರಸ್ತೆಯಲ್ಲಿ ನಡೆದಾಡುತ್ತಿರೋ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ನೋಡುಗರನ್ನು ಬೆರಗಾಗಿಸುತ್ತಿದೆ.

    ದಕ್ಷಿಣ ಆಫ್ರೀಕಾದ ಕ್ರುಗರ್ ರಾಷ್ಟ್ರೀಯ ಉದ್ಯಾನವನದ ರೋಡ್‍ನಲ್ಲಿ ಈ ರೋಚಕ ದೃಶ್ಯ ಕಂಡುಬಂದಿದೆ. ರಸ್ತೆಯಲ್ಲಿ 4 ಸಿಂಹಗಳು ಯಾರ ಭಯವಿಲ್ಲದೆ ವಾಹನಗಳ ಮಧ್ಯೆ ರಾಜಾರೋಷವಾಗಿ ನಡೆದಾಡುತ್ತಿರೋ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ.

    ಈ ವಿಡಿಯೋವನ್ನು `ಲಯನ್ಸ್ ಆಫ್ ಕ್ರುಗರ್ ನ್ಯಾಷನಲ್ ಪರ್ಕ್’ ಹೆಸರಿನ ಫೇಸ್‍ಬುಕ್ ಖಾತೆಯಲ್ಲಿ ಅಪ್ಲೋಡ್ ಮಾಡಲಾಗಿದೆ. ಈ ವಿಡಿಯೋವನ್ನು ಕಳೆದ 2 ವಾರದ ಹಿಂದೆ ಅಷ್ಟೆ ಪೋಸ್ಟ್ ಮಾಡಲಾಗಿದ್ದು, ಇಲ್ಲಿಯವರೆಗೆ ಸರಿ ಸುಮಾರು 2 ಮಿಲಿಯನ್ ಜನರು ವೀಕ್ಷಿಸಿದ್ದಾರೆ. ಅಲ್ಲದೆ ಸಾವಿರಾರು ಜನರು ಕಮೆಂಟ್ ಮಾಡಿದ್ದು, 38 ಸಾವಿರಕ್ಕೂ ಹೆಚ್ಚು ಮಂದಿ ಶೇರ್ ಮಾಡಿದ್ದಾರೆ.

    ಕೇವಲ 33 ಸೆಕೆಂಡ್ ಇರುವ ಈ ರೋಚಕ ವಿಡಿಯೋ ನೋಡಿದ ಜನರು ಅಬ್ಬಾ ಎಂತಹ ಸಿಂಹ ನಡಿಗೆ ಅಂತ ಆಶ್ಚರ್ಯಗೊಂಡಿದ್ದಾರೆ. ಕಾಡನ್ನು ನಾಶ ಮಾಡಿ ರಸ್ತೆಗಳನ್ನು ನಿರ್ಮಿಸಿ, ಅದರ ಮೇಲೆ ತಮ್ಮದೆ ರಾಜ್ಯಭಾರ ಮಾಡುವ ವಾಹನಗಳೆಗೆ ಸಿಂಹಗಳು ತಮ್ಮ ಗತ್ತನ್ನು ತೋರಿಸಿವೆ. ಕಾಡಿನ ರಾಜ ಅಂದ್ರೆ ಯಾರಿಗೂ ಜಗ್ಗಲ್ಲ, ಯಾರಿಗೂ ಹೆದರಲ್ಲ ಅನ್ನೋ ರೀತಿ ಈ 4 ಸಿಂಹಗಳು ರಸ್ತೆಯಲ್ಲಿ ಆರಾಮಾಗಿ ಓಡಾಡಿದೆ.

    https://www.youtube.com/watch?v=4dKOqbK0qKU

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಳವಂಡಿ ಪೀಠತ್ಯಾಗ ಪ್ರಕರಣ – ಸಾಮಾಜಿಕ ಜಾಲತಾಣದಲ್ಲಿ ಸ್ವಾಮೀಜಿ, ವಿದ್ಯಾರ್ಥಿನಿಯ ಫೋಟೋ ವೈರಲ್

    ಅಳವಂಡಿ ಪೀಠತ್ಯಾಗ ಪ್ರಕರಣ – ಸಾಮಾಜಿಕ ಜಾಲತಾಣದಲ್ಲಿ ಸ್ವಾಮೀಜಿ, ವಿದ್ಯಾರ್ಥಿನಿಯ ಫೋಟೋ ವೈರಲ್

    ಕೊಪ್ಪಳ: ಜಿಲ್ಲೆಯ ಅಳವಂಡಿ ಗ್ರಾಮದ ಶ್ರೀ ಸಿದ್ದೇಶ್ವರ ಮಠದ ಸ್ವಾಮೀಜಿಯವರು ಪೀಠತ್ಯಾಗ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಸಾಮಾಜಿಕ ಜಾಲತಾಣದಲ್ಲಿ ಸ್ವಾಮೀಜಿ ಹಾಗೂ ವಿದ್ಯಾರ್ಥಿನಿಯ ಫೋಟೋ ವೈರಲ್ ಆಗಿದೆ.

    ಸ್ವಾಮೀಜಿ ಹಾಗೂ ವಿದ್ಯಾರ್ಥಿನಿಯ ಫೋಟೋವನ್ನು ಎಡಿಟ್ ಮಾಡಿ ಅದಕ್ಕೆ ‘ಮೇಡ್ ಫಾರ್ ಇಚ್ ಅದರ್’ ಎಂದು ಬರೆದು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಅದನ್ನು ವೈರಲ್ ಮಾಡಲಾಗಿದೆ. ಈ ಫೋಟೋ ಈಗ ವಾಟ್ಸಾಪ್ ಗ್ರೂಪಿನಲ್ಲೂ ಹರಿದಾಡುತ್ತಿದೆ.

    ಸ್ವಾಮೀಜಿ ಪ್ರೀತಿಗಾಗಿ ಪೀಠ ತ್ಯಾಗ ಮಾಡಿ ಹೋಗಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಅಲ್ಲದೇ ಪ್ರೀತಿಸಿದ ವಿದ್ಯಾರ್ಥಿನಿಯೊಂದಿಗೆ ಸ್ವಾಮೀಜಿ ಮದುವೆಯಾಗಲು ಪೀಠತ್ಯಾಗ ಮಾಡಿದ್ದಾರೆ ಎಂಬ ಗಾಸಿಪ್ ಹರಿದಾಡುತ್ತಿದೆ. ವಿದ್ಯಾರ್ಥಿನಿ ಸಹ ಈಗ ನಾಪತ್ತೆಯಾಗಿದ್ದು, ಈಗ ಇಬ್ಬರೂ ಎಲ್ಲಿದ್ದಾರೆ ಎಂಬ ಮಾಹಿತಿ ಯಾರಿಗೂ ಗೊತ್ತಿಲ್ಲ. ಇದನ್ನೂ ಓದಿ: ಕಾಲೇಜಿಗೆ ಬರುತ್ತಿದ್ದ ಶಿಷ್ಯೆಯನ್ನೇ ಮದ್ವೆಯಾದ್ರಾ ಸ್ವಾಮೀಜಿ..?

    13ನೇ ವಯಸ್ಸಿನಲ್ಲಿಯೇ ಪೀಠಾಧಿಪತಿಯಾಗಿದ್ದ ಸ್ವಾಮೀಜಿಯವರು ಮುಂಡರಗಿಯ ಕಾಲೇಜಿನಲ್ಲಿ ಪಾಠವನ್ನೂ ಮಾಡುತ್ತಿದ್ದರು. ಇದೀಗ ಕಾಲೇಜಿಗೆ ಬರುತ್ತಿದ್ದ ತಮ್ಮ ವಿದ್ಯಾರ್ಥಿನಿಯನ್ನೇ ಪ್ರೀತಿಸಿ ಮದುವೆಯಾಗಿದ್ದಾರೆ ಅನ್ನೋ ಮಾತುಗಳು ಕೇಳಿ ಬಂದಿದೆ. ಈ ಮಠವೂ ಉಜ್ಜಯನಿಯ ಶಾಖಾ ಪೀಠದಲ್ಲೊಂದಾಗಿದೆ. ಇದೇ ಕಾರಣಕ್ಕಾಗಿ ಪೀಠ ತ್ಯಾಗ ಮಾಡಿ ಹೋಗಿದ್ದಾರೆ ಎನ್ನುವ ಗುಮಾನಿಯೂ ಹರಿದಾಡುತ್ತಿದೆ. ಆದರೆ ಒಂದು ಗುಂಪು ಮಠದ ಅಭಿವೃದ್ಧಿ ಮಾಡಲು ಸಾಧ್ಯವಾಗದೇ ಮನನೊಂದು ಮಠತ್ಯಾಗ ಮಾಡಿದ್ದಾರೆ ಅಂದು ಹೇಳಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಯಾವ ಪಕ್ಷದಲ್ಲಾದರೂ ಇರಿ, ನಮ್ಮ ಕಣ್ಮುಂದೆ ಇರಿ

    ಯಾವ ಪಕ್ಷದಲ್ಲಾದರೂ ಇರಿ, ನಮ್ಮ ಕಣ್ಮುಂದೆ ಇರಿ

    – ರಮೇಶ್ ಜಾರಕಿಹೊಳಿಗೆ ಸ್ನೇಹಿತ ಬರೆದ ಪತ್ರ ವೈರಲ್

    ಬೆಳಗಾವಿ: ಸಮ್ಮಿಶ್ರ ಸರ್ಕಾರ ಸಚಿವ ಸಂಪುಟ ವಿಸ್ತರಣೆ ವೇಳೆ ಸಚಿವ ಸಂಪುಟದಿಂದ ಕೈಬಿಟ್ಟ ಪರಿಣಾಮ ಪಕ್ಷದ ಮುಖಂಡರು, ಮಾಧ್ಯಮ ಹಾಗೂ ಸ್ನೇಹಿತ ಕೈಗೆ ಸಿಗದೆ ಇರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಸ್ನೇಹಿತರೊಬ್ಬರು ಬರೆದಿರುವ ಪತ್ರ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ವಾಟ್ಸಾಪ್ ಮೂಲಕ ವೈರಲ್ ಆಗಿರುವ ಪತ್ರದಲ್ಲಿ ರಮೇಶ್ ಜಾರಕಿ ಹೊಳಿ ಅವರಿಗೆ ಮನವಿ ಮಾಡಿರುವ ಸ್ನೇಹಿತ, ನಿಮ್ಮ ನೇರಮಾತು, ನಿಷ್ಕಪಟ ನಡೆಯನ್ನು ನಾವು ಮಿಸ್ ಮಾಡಿಕೊಳ್ಳುತ್ತಿದ್ದೇವೆ. ನೀವು ಎಂಟು ದಿನಗಳಿಂದ ನಮ್ಮೆಲ್ಲರಿಂದ ದೂರ ಉಳಿದಿರುವುದು ಸರಿಯಲ್ಲ. ನಿಮ್ಮನ್ನು ಹುಡುಕಿ ಸಾಕಾಗಿದೆ ಎಂದು ಅಶೋಕ್ ಚಂದರಗಿ ಎಂಬವರು ಮಾತ್ರ ಬರೆದಿದ್ದಾರೆ.

    ನೀವು ಕಾಂಗ್ರೆಸ್, ಬಿಜೆಪಿ ಯಾವುದೇ ಪಕ್ಷದಲ್ಲಾದರೂ ಇರಿ, ಆದರೆ ಸದಾ ನಮ್ಮ ಕಣ್ಣು ಮುಂದೆಯೇ ಇರಿ. ರಮೇಶ್ ಜಾರಕಿಹೊಳಿ ಎಂದು ನಿಂತ ನೀರಲ್ಲ. ನಿಮ್ಮ ದೀರ್ಘಕಾಲದ ಕಣ್ಮರೆ ನಮಗಷ್ಟೇ ಅಲ್ಲ. ನಿಮ್ಮಿಂದ ದೂರ ಸರಿದವರಿಗೆ ಎಲ್ಲರಿಗೂ ದುಃಖ ಉಂಟು ಮಾಡಿದೆ. ತಾವು ಎಲ್ಲಿದ್ದರೂ ಬೆಳಗಾವಿಗೆ ಮರಳಿ ಬನ್ನಿ ಎಂದು ಮನವಿ ಮಾಡಿಕೊಂಡಿದ್ದಾರೆ.

    ಬೆಳಗಾವಿ ಗಂಡುಮೆಟ್ಟಿನ ನಾಡು. ನಾವು ಅಡಗಿ ಕುಳಿತುಕೊಳ್ಳುವ ಬೆಕ್ಕುಗಳಲ್ಲ. ಘರ್ಜಿಸುವ ಸಿಂಹಗಳು ಇದ್ದಂಗೆ ಎಂದು ರಮೇಶ್ ಅವರ ಸ್ನೇಹಿತ ಅಶೋಕ್ ಪತ್ರ ಬರೆದು ಬೆನ್ನಿಗೆ ನಿಂತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಂಡ್ಯ ಬಸ್ ದುರಂತ ಪ್ರಕರಣ ಹೇಳುತ್ತಿದೆ ಮನಕಲಕುವ ಕಥೆ!

    ಮಂಡ್ಯ ಬಸ್ ದುರಂತ ಪ್ರಕರಣ ಹೇಳುತ್ತಿದೆ ಮನಕಲಕುವ ಕಥೆ!

    ಮಂಡ್ಯ: ಜಿಲ್ಲೆಯ ಬಸ್ ದುರಂತ ಪ್ರಕರಣ ಮನಕಲಕುವ ಕಥೆಯೊಂದು ಹೇಳುತ್ತಿದೆ. ಪ್ರಾಣದ ಹಂಗು ತೊರೆದು ಬಸ್‍ನೊಳಗಿದ್ದವರನ್ನು ರಕ್ಷಿಸಲು ಸ್ಥಳೀಯರು ಹರಸಾಹಸ ಪಟ್ಟ ಮೊಬೈಲ್ ವಿಡಿಯೋವೊಂದು ವೈರಲ್ ಆಗುತ್ತಿದೆ.

    ನವೆಂಬರ್ 24 ರಂದು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕನಗನಮರಡಿ ಗ್ರಾಮದ ಬಳಿ ನಾಲೆಗೆ ಬಸ್ ಉರುಳಿ 30 ಜನ ಮೃತಪಟ್ಟಿದ್ದರು. ಬಸ್ ಬಿದ್ದ ವಿಷಯ ತಿಳಿದು ರಕ್ಷಣೆಗೆ ಧಾವಿಸಿದ ಗ್ರಾಮಸ್ಥರ ಪ್ರಾರಂಭದ ವಿಡಿಯೋ ವೈರಲ್ ಆಗಿದೆ.

    ಪೊಲೀಸ್ ಇಲಾಖೆ ಹಾಗೂ ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯಕ್ಕೆ ಆಗಮಿಸುವ ಮುನ್ನವೇ ಗ್ರಾಮಸ್ಥರು ನಾಲೆ ಬಳಿ ಆಗಮಿಸಿದ್ದರು. ಬಸ್‍ನಲ್ಲಿದ್ದವರನ್ನು ಉಳಿಸಲು ಪ್ರಾಣದ ಹಂಗು ತೊರೆದು ಸ್ಥಳೀಯರು ನಾಲೆಗೆ ಧುಮುಕಿದ್ದರು. ಬಸ್‍ನಲ್ಲಿದ್ದವರನ್ನು ಮೇಲೆತ್ತಲು ಸ್ಥಳೀಯರು ಹಗ್ಗವಿಲ್ಲದೆ ತಮ್ಮ ಪಂಚೆ, ವೇಲ್, ಬಟ್ಟೆಗಳನ್ನೆ ಬಿಚ್ಚಿ ಹಗ್ಗದ ರೀತಿ ಬಳಸಿದ್ದಾರೆ.

    ನೀರಿನಲ್ಲಿ ಬಿದ್ದವರ ಪೂರ್ವಾಪರ ತಿಳಿಯದಿದ್ದರೂ ತಮ್ಮ ಮನೆಯವರನ್ನೇ ಕಳೆದುಕೊಂಡ ರೀತಿ ರಕ್ಷಣಾ ಕಾರ್ಯದಲ್ಲಿ ಗ್ರಾಮಸ್ಥರು ತೊಡಗಿದ್ದರು. ಅಯ್ಯೋ ಬನ್ರೋ ಮಾರಾಯ. ಹಗ್ಗ ಏನಾದ್ರು ತನ್ನಿ. ಪಂಚೆ ಎಸೆಯಿರಿ ಎಂದು ಕೂಗುತ್ತ ನಾಲೆಗೆ ಧುಮುಕಿ ಬಸ್‍ನೊಳಗಿದ್ದವರನ್ನು ಮೇಲೆತ್ತುತ್ತಿರುವ ವಿಡಿಯೋ ವೈರಲ್ ಆಗಿದೆ.

     

    ಒಬ್ಬರನ್ನು ಮೇಲೆತ್ತುತ್ತಿದ್ದಂತೆ ಅಯ್ಯೋ ಎಲ್ಲ ಸತ್ತೋಗವ್ರೇ. ಮಕ್ಕಳನ್ನಾದ್ರು ಇಸ್ಕೊಳ್ಳಿ, ಅಯ್ಯಯ್ಯಪ್ಪೋ ಎಂದು ಗ್ರಾಮಸ್ಥರು ಮಮ್ಮಲ ಮರುಗಿದ್ದಾರೆ. ಸತ್ತವರನ್ನು ಬದುಕಿಸಲಾಗದಿದ್ರೂ, ಬದುಕಿಸಲು ಯತ್ನಿಸಿ ಗ್ರಾಮಸ್ಥರು ಮಾನವೀಯತೆ ಮೆರೆದಿದ್ದಾರೆ.

    ವೈರಲ್ ಆಗಿರೋ ವಿಡಿಯೋದಲ್ಲಿ ಗ್ರಾಮಸ್ಥರ ಮಾನವೀಯತೆ, ಬಸ್‍ನೊಳಗಿದ್ದವರನ್ನು ಮನೆ ಮಕ್ಕಳಂತೆ ರಕ್ಷಿಸಲು ಯತ್ನಿಸಿ ಮರುಗುತ್ತಿರುವುದನ್ನು ನೋಡಿ ಮಂಡ್ಯ ಜನತೆ ಭಾವುಕರಾಗುತ್ತಿದ್ದಾರೆ. ಬಸ್ ದುರಂತದಲ್ಲಿ ಓರ್ವ ಶಾಲಾ ಬಾಲಕ ರೋಹಿತ್ ಮತ್ತು ಯುವಕ ಗಿರೀಶ್ ನನ್ನು ಮಾತ್ರ ಬದುಕಿಸುವಲ್ಲಿ ಗ್ರಾಮಸ್ಥರು ಯಶಸ್ವಿಯಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಆಫೀಸಿಗೆ ನುಗ್ಗಿದ 12 ಅಡಿ ಉದ್ದದ ಹೆಬ್ಬಾವು ಹಿಡಿಯಲು ಹರಸಾಹಸ- ವಿಡಿಯೋ ನೋಡಿ

    ಆಫೀಸಿಗೆ ನುಗ್ಗಿದ 12 ಅಡಿ ಉದ್ದದ ಹೆಬ್ಬಾವು ಹಿಡಿಯಲು ಹರಸಾಹಸ- ವಿಡಿಯೋ ನೋಡಿ

    ಬ್ಯಾಕಾಂಕ್: ಬೆಳಗ್ಗಿನ ಶಿಫ್ಟ್ ಗೆ ಕೆಲಸ ಮಾಡಲು ಫ್ಯಾಕ್ಟರಿಗೆ ಬಂದಿದ್ದ ಸಿಬ್ಬಂದಿ 12 ಅಡಿ ಉದ್ದದ ಹೆಬ್ಬಾವನ್ನು ನೋಡಿ ಬಿಚ್ಚಿಬಿದ್ದ ಘಟನೆ ಥೈಲ್ಯಾಂಡಿನಲ್ಲಿ ನಡೆದಿದೆ.

    ಥೈಲ್ಯಾಂಡ್‍ನ ಚೋಂಬುರಿಯಲ್ಲಿರುವ ಫ್ಯಾಕ್ಟರಿಯ ಕಾಪೌಂಡ್ ಮೇಲೆ ಕಳೆದ ಗುರುವಾರ ಹೆಬ್ಬಾವು ಮಲಗಿತ್ತು. ಬೆಳಗಿನ ಶಿಫ್ಟ್ ಗೆ ಆಗಮಿಸಿದ ಸಿಬ್ಬಂದಿ ಕಾಪೌಂಡ್ ಮೇಲೆ ಮಲಗಿರುವ ಹೆಬ್ಬಾವನ್ನು ನೋಡಿ ಗಾಬರಿಗೊಂಡಿದ್ದಾರೆ.

    ಹೆಬ್ಬಾವು 12 ಅಡಿ ಉದ್ದವಿದ್ದು, 30ರಿಂದ 40 ಕೆ.ಜಿ ತೂಕವಿತ್ತು. ಈ ಹಾವನ್ನು ನೋಡಿ ಅಲ್ಲಿನ ಸಿಬ್ಬಂದಿ ಏನೂ ಮಾಡಬೇಕು ಎಂದು ತಿಳಿಯದೇ ಹಾವು ಹಿಡಿಯುವವರನ್ನು ಕರೆಸಿದರು. ನಂತರ ಹಾವು ಹಿಡಿಯುವವರು ಆಗಮಿಸಿ ಹೆಬ್ಬಾವನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ.

    ಹೆಬ್ಬಾವನ್ನು ಹಿಡಿಯಲು ಹರಸಾಹಸ ಪಡಲಾಗಿದ್ದು, ಯಾರಿಗೂ ಯಾವುದೇ ರೀತಿಯ ಅಪಾಯವಾಗಿಲ್ಲ ಎಂದು ವರದಿಯಾಗಿದೆ. ಹೆಬ್ಬಾವನ್ನು ಹಿಡಿಯುತ್ತಿರುವ ವಿಡಿಯೋವನ್ನು ಅಲ್ಲಿನ ಸಿಬ್ಬಂದಿ ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದು, ಈ ವಿಡಿಯೋ ಇದೀಗ ವೈರಲ್ ಆಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಿರಮಿಡ್ ಮೇಲೆ ಹತ್ತಿ ಬೆತ್ತಲಾಗಿ ಸೆಕ್ಸ್ – ಯೂಟ್ಯೂಬಿನಲ್ಲಿ ವಿಡಿಯೋ ಅಪ್ಲೋಡ್

    ಪಿರಮಿಡ್ ಮೇಲೆ ಹತ್ತಿ ಬೆತ್ತಲಾಗಿ ಸೆಕ್ಸ್ – ಯೂಟ್ಯೂಬಿನಲ್ಲಿ ವಿಡಿಯೋ ಅಪ್ಲೋಡ್

    ಕೈರೋ: ಈಜಿಪ್ಟ್ ವಿಶ್ವ ಪ್ರಸಿದ್ಧ ಗೀಝಾ ಕುಫು ಪಿರಮಿಡ್ ಮೇಲೆ ಹತ್ತಿರದ ಡ್ಯಾನಿಷ್ ಜೋಡಿಯೊಂದು ಬಟ್ಟೆ ಬಿಚ್ಚಿ ಬೆತ್ತಲಾಗಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಜೋಡಿಯ ಅಸಭ್ಯ ವರ್ತನೆಯಿಂದ ಈಜಿಪ್ಟ್ ಅಧಿಕಾರಿಗಳು ಈ ಬಗ್ಗೆ ತನಿಖೆ ಮಾಡುತ್ತಿದ್ದಾರೆ. ಡ್ಯಾನಿಷ್ ಜೋಡಿಯ 3 ನಿಮಿಷಗಳ ವಿಡಿಯೋವನ್ನು ಯೂಟ್ಯೂಬ್ ಗೆ ಅಪ್ಲೋಡ್ ಮಾಡಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿದೆ.

    ವಿಡಿಯೋದಲ್ಲಿ ಏನಿದೆ?
    ಈ ವಿಡಿಯೋದಲ್ಲಿ ಯುವತಿಯೊಬ್ಬಳು ಪಿರಮಿಡ್ ಮೇಲೆ ಕಿರಿದಾದ ಜಾಗದ ಮೂಲಕ ಕತ್ತಲೆಯಲ್ಲಿ ಮೇಲೆ ಹತ್ತಿ ಹೋಗಿದ್ದಾಳೆ. ಬಳಿಕ ಮೇಲೆ ನಿಂತು ಕೈರೋ ಪಟ್ಟಣವನ್ನು ನೋಡಿ ಸಂತೋಷ ಪಟ್ಟಿದ್ದಾಳೆ. ಆದರೆ ಈ ವೇಳೆ ತನ್ನ ಬಟ್ಟೆ ಬಿಚ್ಚಿ ನಗ್ನಳಾಗಿದ್ದಾಳೆ. ಬಳಿಕ ಪಿರಮಿಡ್ ಮೇಲೆ ಜೋಡಿ ಬೆತ್ತಲಾಗಿ ಸೆಕ್ಸ್ ಮಾಡುತ್ತಿರುವ ಫೋಟೋ ಮತ್ತು ಇಬ್ಬರು ಜೋಡಿಯಾಗಿ ನಿಂತು ಪೋಸ್ ಕೊಟ್ಟಿರುವ ಫೋಟೋವನ್ನು ಹಾಕಲಾಗಿದೆ.

    ಈಜಿಪ್ಟ್ ದೇಶದ ಕಾನೂನಿನ ಪ್ರಕಾರ ಈ ರೀತಿ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಇಲ್ಲಿನ ಪುರಾತತ್ವ ಇಲಾಖೆಗಳ ಸಚಿವ ಖಲೀದ್ ಅಲ್ ಅನಾನಿ ಈ ಕುರಿತು ತನಿಖೆ ಮಾಡುವಂತೆ ಆದೇಶಿಸಿದ್ದಾರೆ. ಇಬ್ಬರು ವಿದೇಶಿಗರು ರಾತ್ರಿ ವೇಳೆ ಪಿರಮಿಡ್ ಮೇಲೆ ಹತ್ತಿ ಅಸಭ್ಯವಾಗಿ ವರ್ತಿಸಿರುವ ವಿಡಿಯೋವನ್ನು ರೆಕಾರ್ಡ್ ಮಾಡಿದ್ದು, ಅದನ್ನು ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡಲಾಗಿದೆ. ಆದ್ದರಿಂದ ಶೀಘ್ರವೇ ಆ ಜೋಡಿಯನ್ನು ಪತ್ತೆ ಮಾಡಿ ತನಿಖೆ ಮಾಡುವಂತೆ ಅನಾನಿ ತಿಳಿಸಿದ್ದಾರೆ.

    ಈ ವಿಡಿಯೋವನ್ನು ಬುಧವಾರ ಡ್ಯಾನಿಷ್ ಛಾಯಾಗ್ರಾಹಕ ಆಂಡ್ರಿಯಾಸ್ ಹ್ವಿಡ್ ಅಪ್ಲೋಡ್ ಮಾಡಿದ್ದಾರೆ. ಅವರು ಪ್ರಪಂಚದಾದ್ಯಂತ ಅಧಿಕ ಎತ್ತರದ ವೀವ್ ಪಾಯಿಂಟ್ ಗಳಿಗೆ ಹೋಗಿ ಫೋಟೋಗಳನ್ನು ತೆಗೆದುಕೊಂಡು ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡುತ್ತಾರೆ. ಕೆಲವೊಮ್ಮೆ ನಗ್ನ ಫೋಟೋಗಳನ್ನು ಅಪ್ಲೋಡ್ ಮಾಡುತ್ತಾರೆ ಎಂದು ಈಜಿಪ್ಟ್ ಮಾಧ್ಯಮವೊಂದು ಸುದ್ದಿ ಪ್ರಕಟಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv