Tag: viral

  • ಬಂಡೀಪುರ ಕಾಡ್ಗಿಚ್ಚು- ಗಮನಿಸಿ, ವೈರಲ್ ಆಗ್ತಿದೆ ಫೇಕ್ ಚಿತ್ರಗಳು

    ಬಂಡೀಪುರ ಕಾಡ್ಗಿಚ್ಚು- ಗಮನಿಸಿ, ವೈರಲ್ ಆಗ್ತಿದೆ ಫೇಕ್ ಚಿತ್ರಗಳು

    ಚಾಮರಾಜನಗರ: ಬಂಡೀಪುರದಲ್ಲಿ ಕಾಣಿಸಿಕೊಂಡಿರುವ ಕಾಡ್ಗಿಚ್ಚಿನಲ್ಲಿ ಸುಮಾರು 2,500 ಹೆಕ್ಟೇರ್ ಪ್ರದೇಶ ಸುಟ್ಟು ಹೋಗಿದ್ದು, ಸಾಕಷ್ಟು ವನ್ಯಜೀವಿಗಳು ಮೃತಪಟ್ಟಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಫೋಟೋಗಳು ಹರಿದಾಡುತ್ತಿವೆ.

    ಕೊಲಂಬಿಯಾ, ಸ್ಪೇನ್, ಕ್ಯಾಲಿಫೋರ್ನಿಯಾ, ಇಂಡೊನೇಷ್ಯಾ ಹೀಗೇ ಹಲವೆಡೆ ಅರಣ್ಯ ಪ್ರದೇಶಗಳಲ್ಲಿ ಕಾಣಿಸಿಕೊಂಡಿದ್ದ ಕಾಡ್ಗಿಚ್ಚಿಗೆ ಬಲಿಯಾದ ಪ್ರಾಣಿಗಳ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಇದೇ ಬಂಡೀಪುರ ಅರಣ್ಯದ ಕಾಡ್ಗಿಚ್ಚಿಗೆ ಸಾವನ್ನಪ್ಪಿದ ವನ್ಯಜೀವಿಗಳು ಅಂತ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ.

    ಈ ಬಗ್ಗೆ ಪ್ರತಿಕ್ರಿಯಿಸಿರುವ ಅರಣ್ಯ ರಕ್ಷಣೆಯ ಪ್ರಧಾನ ಅಧಿಕಾರಿ ಪುನ್ನತಿ ಶ್ರೀಧರ್ ಅವರು, ಬಂಡೀಪುರದಲ್ಲಿ ಕಾಡ್ಗಿಚ್ಚನ್ನು ನಿಯಂತ್ರಣಕ್ಕೆ ತರುವ ಪ್ರಯತ್ನ ನಡೆಯುತ್ತಿದೆ. ಇಲ್ಲಿಯವರೆಗೆ ಯಾವುದೇ ಪ್ರಾಣಿಗಳು ಮೃತದೇಹ ಪತ್ತೆಯಾಗಿಲ್ಲ. ಬೆಂಕಿ ಕಾವು ತಗುಲುತ್ತಿದ್ದಂತೆ ಪ್ರಾಣಿಗಳೆಲ್ಲಾ ಬೇರೆಡೆಗೆ ಹೋಗುತ್ತವೆ. ಸುಮ್ಮನೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

    ವಾಯುವ್ಯ ಕೊಲಂಬಿಯಾದ ನೆಕೊಕ್ಲಿ ಅರಣ್ಯ ಪ್ರದೇಶದಲ್ಲಿ ಕಾಣಿಕೊಂಡಿದ್ದ ಕಾಡ್ಗಿಚ್ಚಿನಲ್ಲಿ ಸುಟ್ಟು ಕರಕಲಾದ ಹಾವಿನ ಚಿತ್ರ ಈದಾಗಿದ್ದು, 2015ರ ಏಪ್ರೀಲ್ 15ರಂದು ಈ ಚಿತ್ರ ಕೊಲಂಬಿಯಾದ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು.

    ಬೆಂಕಿಗೆ ಪ್ರಾಣಬಿಟ್ಟ ಈ ಮೊಲದ ಫೋಟೋವನ್ನು ಜುಮಾ ಪ್ರೆಸ್‍ನ ಕ್ರಿಸ್ ರುಸಾನೊಸ್ಕಿ 2018ರಲ್ಲಿ ಕ್ಲಿಕ್ಕಿಸಿದ್ದರು. ಅಲ್ಲದೆ ಈ ಚಿತ್ರವು 2018ರ ನವೆಂಬರ್ 8ರಂದು ಕ್ಯಾಲಿಫೋರ್ನಿಯಾದ ಮಲ್ಲಿಬುಲ್ಲಿ ಅರಣ್ಯ ಪ್ರದೇಶದಲ್ಲಿ ಉಂಟಾದ ಕಾಡ್ಗಿಚ್ಚಿಗೆ ಪ್ರಾಣಬಿಟ್ಟ ಮೊಲದ ಫೋಟೋವಾಗಿದೆ.

    ಮೃತ ಒರಂಗುಟಾವ್ ಚಿತ್ರವು 2016ರ ಫೆಬ್ರವರಿಯಲ್ಲಿ ಕ್ಲಿಕ್ಕಿಸಲಾಗಿದ್ದು, ಸೆಂಟರ್ ಆಫ್ ಒರಂಗುಟಾವ್ ಪ್ರೋಟೆಕ್ಷನ್ ಸಂಸ್ಥೆಯೂ ಈ ಫೋಟೋವನ್ನು ಪತ್ರಿಕೆಯೊಂದರಲ್ಲಿ ಪ್ರಕಟಿಸಿತ್ತು.

    ಕೊನೆಗಿರುವ ಈ ಚಿತ್ರವು ಸ್ಪೇನ್- ಫ್ರಾನ್ಸ್ ಗಡಿಯಲ್ಲಿರುವ ಡಾರ್ನಿಯಸ್‍ನಲ್ಲಿ ಕಾಣಿಸಿಕೊಂಡಿದ್ದ ಕಾಡ್ಗಿಚ್ಚಿನಲ್ಲಿ ಪ್ರಾಣಬಿಟ್ಟ ಕಾಡುಕುರಿಗಳ ಫೋಟೋವಾಗಿದೆ. ಈ ಫೋಟೋವನ್ನು ಸುದ್ದಿಸಂಸ್ಥೆಯೊಂದರ ಛಾಯಾಗ್ರಾಹಕ ಲೂಯಿಸ್ ಜೆನೆ ಕ್ಲಿಕ್ಕಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೊಬೈಲ್ ಸಂಭಾಷಣೆ ವೈರಲ್ – ಆರ್‌ಟಿಐ ಕಾರ್ಯಕರ್ತ, ಸಿಬ್ಬಂದಿಯನ್ನು ಬಲಿಪಶು ಮಾಡಲು ಮುಂದಾದ ತಹಶೀಲ್ದಾರ್

    ಮೊಬೈಲ್ ಸಂಭಾಷಣೆ ವೈರಲ್ – ಆರ್‌ಟಿಐ ಕಾರ್ಯಕರ್ತ, ಸಿಬ್ಬಂದಿಯನ್ನು ಬಲಿಪಶು ಮಾಡಲು ಮುಂದಾದ ತಹಶೀಲ್ದಾರ್

    ಮೈಸೂರು: ಜಿಲ್ಲೆಯ ತಹಶೀಲ್ದಾರ್ ಹುದ್ದೆಗೆ ಒಂದೇ ಸಮುದಾಯದ ಇಬ್ಬರು ಅಧಿಕಾರಿಗಳ ನಡುವೆ ನಡೆದಿದ್ದ ಮೊಬೈಲ್ ಸಂಭಾಷಣೆ ವೈರಲ್ ಆಗಿದ್ದು, ಈ ಸಂಬಂಧ ಆರ್‌ಟಿಐ ಕಾರ್ಯಕರ್ತನನ್ನು ಹಾಗೂ ಕಚೇರಿಯ ಸಿಬ್ಬಂದಿಯನ್ನು ಬಲಿಪಶು ಮಾಡಲು ಮೈಸೂರು ತಹಶೀಲ್ದಾರ್ ಮುಂದಾಗಿರುವ ವಿಚಾರವೊಂದು ಬೆಳಕಿಗೆ ಬಂದಿದೆ.

    ಆರ್‌ಟಿಐ ಕಾರ್ಯಕರ್ತ ನಾಗೇಂದ್ರ ಹಾಗೂ ಮೈಸೂರು ತಾಲೂಕು ಕಚೇರಿ ಸಿಬ್ಬಂದಿ ವಿರುದ್ಧ ಮೈಸೂರು ತಾಲೂಕು ತಹಶೀಲ್ದಾರ್ ರಮೇಶ್ ಬಾಬು ಅವರು ಈ ಬಗ್ಗೆ ಅಶೋಕಪುರಂನಲ್ಲಿರುವ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ.

    ದೂರಿನಲ್ಲೇನಿದೆ..?
    ನಾನು ರೇಣುಕುಮಾರ್ ಮಾತನಾಡಿದ್ದು ನನ್ನ ಮೊಬೈಲ್‍ನಲ್ಲಿಯೇ ರೆಕಾರ್ಡ್ ಆಗಿದೆ. ಕಣ್ತಪ್ಪಿನಿಂದ ನಮ್ಮ ಆಫೀಸ್ ವಾಟ್ಸಾಪ್ ಗ್ರೂಪ್‍ಗೆ ಶೇರ್ ಮಾಡಿದ್ದೇನೆ. ನಾನು ಸರಿಯಾಗಿ ಡಿಲೀಟ್ ಮಾಡಿರಲಿಲ್ಲ. ಹೀಗಾಗಿ ನಮ್ಮ ಕಚೇರಿ ಸಿಬ್ಬಂದಿ ಆರ್‌ಟಿಐ ನಾಗೇಂದ್ರಗೆ ಆಡಿಯೋ ಕಳುಹಿಸಿಕೊಟ್ಟಿದ್ದಾರೆ. ಅದನ್ನು ಆರ್‌ಟಿಐ ಕಾರ್ಯಕರ್ತ ನಾಗೇಂದ್ರ ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

    ಮೈಸೂರು ತಹಶೀಲ್ದಾರ್ ಕುರ್ಚಿ ಉಳಿಸಿಕೊಳ್ಳಲು ಇಬ್ಬರು ಅಧಿಕಾರಿಗಳು ಭ್ರಷ್ಟಾಚಾರದ ಮಾತುಗಳನ್ನಾಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಪ್ರಕರಣದ ನಂತರ ತನ್ನ ಚೇಂಬರ್ ಬಾಗಿಲಿಗೆ ಬೀಗ ಹಾಕಿಸಿ ಗುಪ್ತವಾಗಿ ಕೆಲಸ ಮಾಡುತ್ತಿರುವ ಸರ್ಕಾರಿ ಅಧಿಕಾರಿ ಈಗ ತಾವು ಮಾಡಿದ ತಪ್ಪಿಗೆ ಆರ್‌ಟಿಐ ಕಾರ್ಯಕರ್ತನನ್ನು ಹಾಗೂ ಕಚೇರಿ ಸಿಬ್ಬಂದಿಯನ್ನು ಬಲಿಪಶು ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಣ್ಸನ್ನೆ ವಿಡಿಯೋ ವೈರಲ್ ಆಗ್ತಿದ್ದಂತೆ ಮನೆಯಲ್ಲಿ ಕೂಡಿ ಹಾಕಿದ್ದರು: ಪ್ರಿಯಾ ವಾರಿಯರ್

    ಕಣ್ಸನ್ನೆ ವಿಡಿಯೋ ವೈರಲ್ ಆಗ್ತಿದ್ದಂತೆ ಮನೆಯಲ್ಲಿ ಕೂಡಿ ಹಾಕಿದ್ದರು: ಪ್ರಿಯಾ ವಾರಿಯರ್

    ತಿರುವನಂತಪುರಂ: ಕಣ್ಸನ್ನೆ ವಿಡಿಯೋ ವೈರಲ್ ಆಗುತ್ತಿದ್ದಂತೆ ನನ್ನ ಕುಟುಂಬದವರು ನನ್ನನ್ನು ಗೃಹಬಂಧನದಲ್ಲಿಟ್ಟಿದ್ದರು ಎಂದು ನಟಿ ಪ್ರಿಯಾ ವಾರಿಯರ್ ಹೇಳಿದ್ದಾರೆ.

    ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ತಾವು ನಟಿಸಿದ ‘ಒರು ಅಡಾರ್ ಲವ್’ ಚಿತ್ರದ ಬಗ್ಗೆ ಮಾತನಾಡಿ ಇದು ಶಾಲಾ ಜೀವನದ ಕತೆ ಎಂದು ಹೇಳಿದ್ದಾರೆ. ಇದಾದ ಬಳಿಕ ಪ್ರಿಯಾ ತಮ್ಮ ಕುಟುಂಬದ ಬಗ್ಗೆ ಮಾತನಾಡಿದ್ದಾರೆ.

    ನನ್ನ ಕಣ್ಸನ್ನೆ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ನಾನು ಹಾಗೂ ನನ್ನ ಕುಟುಂಬದವರು ಎಲ್ಲರೂ ಒಟ್ಟಿಗೆ ಸೇರಿ ಅಭಿಮಾನಿಗಳನ್ನು ನಿಭಾಯಿಸುತ್ತಿದ್ದೆವು. ಏಕೆಂದರೆ ಇದು ನನಗೆ ಹಾಗೂ ನನ್ನ ಕುಟುಂಬಕ್ಕೆ ತುಂಬಾ ಹೊಸದು. ನನ್ನ ಕುಟುಂಬದವರು ನನಗೆ ಮೊಬೈಲ್ ನೀಡುತ್ತಿರಲಿಲ್ಲ. ಕೆಲವು ದಿನಗಳವರೆಗೆ ನಾನು ಮನೆಯಲ್ಲಿ ಬಂಧಿ ಆಗಿದೆ. ಅಲ್ಲದೆ ನನ್ನ ಪೋಷಕರು ನನಗೆ ಹೊರಗೆ ಹೋಗಲು ಬಿಡುತ್ತಿರಲಿಲ್ಲ. ಮಾಧ್ಯಮದವರು ಕೂಡ ನಮಗೆ ಮಾಹಿತಿ ನೀಡದೆ ಮನೆ ಮುಂದೆ ಬರುತ್ತಿದ್ದರು ಎಂದು ಪ್ರಿಯಾ ಹೇಳಿದ್ದಾರೆ. ಇದನ್ನೂ ಓದಿ: ಕಣ್ಸನ್ನೆ ನಂತ್ರ ಪ್ರಿಯಾ ವಾರಿಯರ್ ಕಿಸ್ಸಿಂಗ್ ವಿಡಿಯೋ ವೈರಲ್

    ನಾನು ಕಾಲೇಜು ಮುಗಿಸಿ ಬರುತ್ತಿದ್ದಂತೆಯೇ ಯೂನಿಫಾರಂನಲ್ಲೇ ಮಾಧ್ಯಮದವರಿಗೆ ಸಂದರ್ಶನ ನೀಡುತ್ತಿದ್ದೆ. ಕೆಲ ಅಭಿಮಾನಿಗಳು ನನ್ನ ಮನೆಗೆ ಬಂದು ಇದು ಪ್ರಿಯಾ ವಾರಿಯರ್ ಮನೆನಾ? ನಾವು ಅವರನ್ನು ನೋಡಬಹುದಾ? ಎಂದು ಕೇಳುತ್ತಿದ್ದರು. ಆಗ ನನ್ನ ತಂದೆ ಆಕೆ ಮನೆಯಲ್ಲಿ ಇಲ್ಲ. ಆಕೆ ಹಾಸ್ಟಲ್‍ನಲ್ಲಿ ಇದ್ದಾಳೆ ಎಂದು ನೆಪ ಹೇಳಿ ಅಭಿಮಾನಿಗಳನ್ನು ವಾಪಸ್ ಕಳುಹಿಸುತ್ತಿದ್ದರು ಎಂದು ಕಣ್ಸನ್ನೆ ಬೆಡಗಿ ತಿಳಿಸಿದ್ದಾರೆ.

    ಒರು ಅಡಾರ್ ಲವ್ ಚಿತ್ರ ಹೈಸ್ಕೂಲ್ ರೊಮ್ಯಾಂಟಿಕ್ ಚಿತ್ರವಾಗಿದ್ದು, ಫೆ. 14ರಂದು ಬಿಡುಗಡೆ ಆಗುತ್ತಿದೆ. ಈ ಚಿತ್ರದಲ್ಲಿ ಪ್ರಿಯಾಗೆ ನಟನಾಗಿ ರೋಶನ್ ಅಬ್ದುಲ್ ರಹೂಫ್ ನಟಿಸಿದ್ದು, ಓಮರ್ ಲುಲು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಮಲಯಾಳಂ ಭಾಷೆಯಲ್ಲಿ ಸೇರಿದಂತೆ ಕನ್ನಡ ಹಾಗೂ ತೆಲುಗು ಭಾಷೆಯಲ್ಲೂ ಈ ಚಿತ್ರ ಬಿಡುಗಡೆ ಆಗುತ್ತಿದೆ. ಕನ್ನಡದಲ್ಲಿ `ಕಿರಿಕ್ ಲವ್ ಸ್ಟೋರಿ’ ಎಂಬ ಹೆಸರಿನಲ್ಲಿ ಚಿತ್ರ ತೆರೆ ಕಾಣಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಾಲೀಕರ ಸೂಚನೆಯಿಲ್ಲದೆ ಚಕ್ಕಡಿಗಾಡಿ ಹೊತ್ತು ಸಾಗಿದ ಎತ್ತುಗಳು: ವಿಡಿಯೋ ವೈರಲ್

    ಮಾಲೀಕರ ಸೂಚನೆಯಿಲ್ಲದೆ ಚಕ್ಕಡಿಗಾಡಿ ಹೊತ್ತು ಸಾಗಿದ ಎತ್ತುಗಳು: ವಿಡಿಯೋ ವೈರಲ್

    ತುಮಕೂರು: ಮಾಲೀಕರ ಸೂಚನೆ ಇಲ್ಲದೆ ಎತ್ತುಗಳು ತಮ್ಮ ಪಾಡಿಗೆ ತಾವೇ ಚಕ್ಕಡಿಗಾಡಿ ಹೊತ್ತು ಸಾಗಿದ ದೃಶ್ಯವೊಂದು ತುಮಕೂರು ಜಿಲ್ಲೆಯ ಪಾವಗಡ- ಚೆಳ್ಳಕೆರೆ ರಸ್ತೆಯಲ್ಲಿ ನಡೆದಿದೆ.

    ಒಟ್ಟು ಮೂರು ಜೋಡಿಯ ಎತ್ತುಗಳು ಮಾಲೀಕರ ಸೂಚನೆ ಇಲ್ಲದೆ ರಸ್ತೆಯಲ್ಲಿ ತಮ್ಮ ಪಾಡಿಗೆ ನಡೆದುಕೊಂಡು ಹೋಗಿದೆ. ಎತ್ತುಗಳು ತಮ್ಮ ಪಾಡಿಗೆ ಹೋಗುತ್ತಿದ್ದರೆ, ಎತ್ತಿನಗಾಡಿಯ ಹಿಂಬದಿಯಲ್ಲಿ ರೈತರು ನಿದ್ದೆ ಮಾಡುತ್ತಿರುವುದು ಕಂಡು ಬಂದಿದೆ.

    ವೈರಲ್ ಆಗಿರುವ ಈ ವಿಡಿಯೋದಲ್ಲಿ ಯಾರು ಕೂಡ ಮೂಗು ದಾರ ಹಿಡಿದು ಎತ್ತುಗಳನ್ನು ಓಡಿಸುತ್ತಿಲ್ಲ. ಎತ್ತುಗಳ ಜೋಡಿ ತಮ್ಮ ಪಾಡಿಗೆ ರಸ್ತೆ ಒಂದು ಬದಿಯಲ್ಲಿ ನಡೆದುಕೊಂಡು ಹೋಗುತ್ತಿದೆ. ರಸ್ತೆಯಲ್ಲಿ ಬಸ್, ಲಾರಿ ಹಾಗೂ ಬೈಕ್‍ಗಳು ಬಂದರೂ ಕ್ಯಾರೆ ಎನ್ನದೇ ಎತ್ತುಗಳು ರಸ್ತೆಯಲ್ಲಿ ಸಾಗಿವೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಣ್ಸನ್ನೆ ನಂತ್ರ ಪ್ರಿಯಾ ವಾರಿಯರ್ ಕಿಸ್ಸಿಂಗ್ ವಿಡಿಯೋ ವೈರಲ್

    ಕಣ್ಸನ್ನೆ ನಂತ್ರ ಪ್ರಿಯಾ ವಾರಿಯರ್ ಕಿಸ್ಸಿಂಗ್ ವಿಡಿಯೋ ವೈರಲ್

    ತಿರುವನಂತಪುರಂ: ಕಣ್ಸನ್ನೆ ಮೂಲಕ ರಾತ್ರೋರಾತ್ರಿ ನ್ಯಾಷನಲ್ ಸ್ಟಾರ್ ಆದ ಮಲಯಾಳಂ ನಟಿ ಪ್ರಿಯಾ ವಾರಿಯರ್ ಅವರ ಲಿಪ್ ಲಾಕ್ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಪ್ರಿಯಾ ತಮ್ಮ ಮುಂಬರುವ ‘ಒರು ಅಡಾರ್ ಲವ್’ ಚಿತ್ರದಲ್ಲಿ ನಟ ರೋಶನ್ ಅಬ್ದುಲ್ ರಹೂಫ್ ಅವರಿಗೆ ಕಣ್ಣು ಹೊಡೆದ ವಿಡಿಯೋ ವೈರಲ್ ಆಗಿತ್ತು. ಈಗ ಇದೇ ಚಿತ್ರದ ಪ್ರೋಮೋವೊಂದು ಬಿಡುಗಡೆ ಆಗಿದೆ. ಈ ಪ್ರೋಮೋದಲ್ಲಿ ರೋಶನ್ ಹಾಗೂ ಪ್ರಿಯಾ ಲಿಪ್ ಲಾಕ್ ಮಾಡಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗುತ್ತಿದೆ.

    ವೈರಲ್ ಆಗಿರುವ ಹೊಸ ವಿಡಿಯೋದಲ್ಲಿ ನಟ ರೋಶನ್ ಅಬ್ದುಲ್ ಅವರು ಪ್ರಿಯಾ ವಾರಿಯರ್ ಅವರ ತುಟಿಗೆ ಮುತ್ತು ನೀಡಿದ್ದಾರೆ. ಈ ವಿಡಿಯೋ ಕೇವಲ 10 ಸೆಕೆಂಡ್ ಇದ್ದು, ಚಿತ್ರದಲ್ಲಿ ಇಬ್ಬರು ಸ್ಕೂಲ್ ಯೂನಿಫಾರ್ಮ್‍ನಲ್ಲಿ ಕಾಣಿಸಿಕೊಂಡಿದ್ದಾರೆ.

    ಒರು ಅಡಾರ್ ಲವ್ ಚಿತ್ರ ಹೈಸ್ಕೂಲ್ ರೋಮ್ಯಾಂಟಿಕ್ ಚಿತ್ರವಾಗಿದ್ದು, ಫೆ. 14ರಂದು ಬಿಡುಗಡೆ ಆಗುತ್ತಿದೆ. ಈ ಚಿತ್ರವನ್ನು ಓಮರ್ ಲುಲು ನಿರ್ದೇಶನ ಮಾಡಿದ್ದಾರೆ. ಮಲಯಾಳಂ ಭಾಷೆಯಲ್ಲಿ ಸೇರಿದಂತೆ ಕನ್ನಡ ಹಾಗೂ ತೆಲುಗು ಭಾಷೆಯಲ್ಲೂ ಈ ಚಿತ್ರ ಬಿಡುಗಡೆ ಆಗುತ್ತಿದೆ. ಕನ್ನಡದಲ್ಲಿ ‘ಕಿರಿಕ್ ಲವ್ ಸ್ಟೋರಿ’ ಎಂಬ ಹೆಸರಿನಲ್ಲಿ ಚಿತ್ರ ತೆರೆ ಕಾಣಲಿದೆ.

    https://www.youtube.com/watch?time_continue=10&v=eewLv2yZAtg

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಇಂಟರ್‌ನೆಟ್‌ನಲ್ಲಿ ವೈರಲ್ ಆಗ್ತಿದೆ ಸೆಲ್ಫಿ ಫೋಟೋ

    ಇಂಟರ್‌ನೆಟ್‌ನಲ್ಲಿ ವೈರಲ್ ಆಗ್ತಿದೆ ಸೆಲ್ಫಿ ಫೋಟೋ

    ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಫೋಟೋಗಳು ಹಾಗೂ ವಿಡಿಯೋಗಳು ವೈರಲ್ ಆಗುತ್ತಿರುತ್ತದೆ. ಆದರೆ ಮುದ್ದಾದ ಮಕ್ಕಳು ಚಪ್ಪಲಿ ಹಿಡಿದು ಸೆಲ್ಫಿ ತೆಗೆದುಕೊಳ್ಳುತ್ತಿರುವ ವೈರಲ್ ಫೋಟೋವೊಂದು ಎಲ್ಲರ ಮನಸ್ಸು ಗೆಲ್ಲುತ್ತಿದೆ.

    ಐದು ಜನ ಮುದ್ದಾದ ಮಕ್ಕಳು ಚಪ್ಪಲಿ ನೋಡಿ ಸೆಲ್ಫಿಗೆ ಪೋಸ್ ನೀಡಿದ್ದಾರೆ. ಮಕ್ಕಳು ಸೆಲ್ಫಿಗೆ ಪೋಸ್ ನೀಡುವಾಗ ಅನಾಮಿಕ ವ್ಯಕ್ತಿಯೊಬ್ಬರು ಆ ಫೋಟೋವನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಈ ವೈರಲ್ ಫೋಟೋವನ್ನು ಎಲ್ಲರೂ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಳ್ಳುತ್ತಿದ್ದಾರೆ.

    ವೈರಲ್ ಆಗಿರುವ ಈ ಫೋಟೋ ಎಲ್ಲಿ ಸೆರೆ ಹಿಡಿದಿದ್ದು ಎಂಬ ಖಚಿತ ಮಾಹಿತಿ ಲಭ್ಯವಾಗಿಲ್ಲ. ಆದರೆ ಈ ಸೆಲ್ಫಿಗೆ ಬಾಲಿವುಡ್ ಕಲಾವಿದರಾದ ಸುನೀಲ್ ಶೆಟ್ಟಿ, ಬೋಮನ್ ಇರಾನಿ ಹಾಗೂ ಅತುಲ್ ಕಸ್ಬೆಕರ್ ಈ ವೈರಲ್ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಪೋಸ್ಟ್ ಹಾಗೂ ಟ್ವೀಟ್ ಮಾಡಿದ್ದಾರೆ.

    ಸುನೀಲ್ ಶೆಟ್ಟಿ ಈ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ ಅದಕ್ಕೆ, “ಈ ಸುಂದರವಾದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಿದೆ. ಈ ಫೋಟೋ ಹಂಚಿಕೊಳ್ಳಬೇಕು ಎಂದು ಅನಿಸಿತು” ಎಂದು ಪೋಸ್ಟ್ ಮಾಡಿದ್ದಾರೆ. ನಟ ಬೋಮನ್ ಇರಾನಿ ಕೂಡ ಈ ಫೋಟೋವನ್ನು ಟ್ವಿಟ್ಟರಿನಲ್ಲಿ ಹಾಕಿ, “ನೀವು ಇಚ್ಚಿಸಿದಂತೆ ಮಾತ್ರ ನೀವು ಸಂತೋಷವಾಗಿರುತ್ತೀರಿ. ಈ ಸೆಲ್ಫಿಯನ್ನು ಹೆಚ್ಚು ಮಂದಿ ಇಷ್ಟಪಡುತ್ತಾರೆ” ಎಂದು ಟ್ವೀಟ್ ಮಾಡಿದ್ದಾರೆ.

     

    View this post on Instagram

     

    Came across this beauuuuuutiful picture which I had to share . “HAPPINESS “ truly a state of mind !!!

    A post shared by Suniel Shetty (@suniel.shetty) on

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ವಿದ್ಯಾರ್ಥಿಯ ನೀತಿ ಪಾಠದ ಎಫೆಕ್ಟ್ – ದಾಸೋಹದಲ್ಲಿ ಅನ್ನ ಬಿಡದೇ ತಟ್ಟೆ ಖಾಲಿ ಮಾಡಿದ ಭಕ್ತರು

    ವಿದ್ಯಾರ್ಥಿಯ ನೀತಿ ಪಾಠದ ಎಫೆಕ್ಟ್ – ದಾಸೋಹದಲ್ಲಿ ಅನ್ನ ಬಿಡದೇ ತಟ್ಟೆ ಖಾಲಿ ಮಾಡಿದ ಭಕ್ತರು

    ತುಮಕೂರು: ಸಿದ್ದಗಂಗಾ ಶ್ರೀಗಳ 11ನೇ ದಿನದ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಭಕ್ತರು ಹಾಕಿಕೊಂಡ ಅನ್ನವನ್ನು ವ್ಯರ್ಥ ಮಾಡದೇ ತಟ್ಟೆಯನ್ನು ಖಾಲಿ ಮಾಡಿ ಸಂತಸಪಟ್ಟಿದ್ದಾರೆ.

    ಶಿವಕುಮಾರ ಸ್ವಾಮೀಜಿ ಅವರು ಲಿಂಗೈಕ್ಯರಾದ ವೇಳೆ ಅನ್ನ ಎಸೆಯುವ ವಿಚಾರಕ್ಕೆ ಸಂಬಂಧಿಸಿದಂತೆ ಭಕ್ತರೊಬ್ಬರಿಗೆ ಮಠದ ವಿದ್ಯಾರ್ಥಿ ಅನ್ನದ ಮಹತ್ವವನ್ನು ತಿಳಿಸಿದ್ದ ವಿಡಿಯೋ ಒಂದು ವೈರಲ್ ಆಗಿತ್ತು. ಈ ವಿಡಿಯೋದ ಪ್ರಭಾವ ಏನೋ ಎಂಬಂತೆ ಭಕ್ತರು ಇಂದು ಎಷ್ಟು ಅನ್ನಬೇಕೋ ಅಷ್ಟೇ ಪ್ರಮಾಣದ ಅನ್ನವನ್ನು ಹಾಕಿಕೊಂಡು ತಿಂದಿದ್ದಾರೆ. ಇದನ್ನು ಓದಿ: ಅನ್ನ ಚೆಲ್ಲಲು ಬಂದ ಭಕ್ತನಿಗೆ ಮಠದ ವಿದ್ಯಾರ್ಥಿಯಿಂದ ಅನ್ನದ ಪಾಠ! – ವಿಡಿಯೋ ನೋಡಿ

    ಪುಣ್ಯಾರಾಧನೆಗೆ ಆಗಮಿಸಿದ 5 ಲಕ್ಷ ಭಕ್ತರಿಗಾಗಿ ನಿರಂತರವಾಗಿ ವಿವಿಧ ರೀತಿಯ ಪ್ರಸಾದವನ್ನು ತಯಾರಿಸಲಾಗುತ್ತಿದೆ. ಮಠದ ಆವರಣದಲ್ಲಿ ವಿವಿಧ ರೀತಿಯ ಪ್ರಸಾದವನ್ನು ಸಿದ್ಧ ಮಾಡುತ್ತಿದ್ದಾರೆ. ನೂರಾರು ಭಕ್ತರು ಸ್ವಯಂ ಪ್ರೇರಿತವಾಗಿ ದಾಸೋಹದ ಸಿದ್ಧತಾ ಕಾರ್ಯದಲ್ಲಿ ರಾತ್ರಿಯಿಡಿ ತೊಡಗಿಕೊಂಡಿದ್ದರು. ಈಗಾಗಲೇ 69 ಕ್ವಿಂಟಾಲ್ ಸಿಹಿ ಬೂಂದಿ ತಯಾರಿಸಲಾಗಿದೆ. ಇದನ್ನು ಓದಿ: ಜನ ಈಗ ಸಾಹುಕಾರರಾಗಿದ್ದಾರೆ, ಹೀಗಾಗಿ ಅನ್ನದ ಬೆಲೆ ಗೊತ್ತಿಲ್ಲ: ಸಿದ್ದಗಂಗಾ ಮಠದ ವಿದ್ಯಾರ್ಥಿ

    ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಶಿವೈಕ್ಯರಾದ ವೇಳೆ ಭಕ್ತಾದಿಗಳಿಗೆ ಅನ್ನದಾಸೋಹ ಮಾಡಲಾಗಿತ್ತು. ಈ ವೇಳೆ ಭಕ್ತರೊಬ್ಬರು ಅನ್ನ ಚೆಲ್ಲಲು ಮುಂದಾದಾಗ ಮಠದ ಬಾಲಕ ಶಿವು ಅವರಿಗೆ ಅನ್ನದ ಮಹತ್ವವನ್ನು ತಿಳಿಸಿದ್ದನು. ಶ್ರೀಗಳ ದರ್ಶನಕ್ಕೆ ಬಂದಿದ್ದ ಭಕ್ತರಿಗೆ ಉಚಿತ ಅನ್ನದಾಸೋಹ ಸಂದರ್ಭದಲ್ಲಿ ಮೇಲುಸ್ತುವಾರಿ ಮಾಡುತ್ತಿದ್ದ ಮಠದ ವಿದ್ಯಾರ್ಥಿ, ಅನ್ನದ ಮಹತ್ವ ತಿಳಿಸಿಕೊಟ್ಟಿದ್ದನು. ಅಲ್ಲದೇ ಪ್ರಸಾದ ಚೆಲ್ಲಬೇಡಿ, ಮುಂದೆ ಅನ್ನ ಸಿಗದ ಕಾಲ ಬರುತ್ತೆ ಎಂದು ವಿದ್ಯಾರ್ಥಿ ಹೇಳಿದ್ದ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

    https://www.youtube.com/watch?v=Ku2W_RqZM9M

    https://www.youtube.com/watch?v=5uh3fpEysn8

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಿಗ್-ಬಿ ಫೋಟೋ ನೋಡಿ ನಿಂತ ಜಾಗ ಖಾಲಿ ಮಾಡಿದ ರೇಖಾ- ವಿಡಿಯೋ ವೈರಲ್

    ಬಿಗ್-ಬಿ ಫೋಟೋ ನೋಡಿ ನಿಂತ ಜಾಗ ಖಾಲಿ ಮಾಡಿದ ರೇಖಾ- ವಿಡಿಯೋ ವೈರಲ್

    ಮುಂಬೈ: ಬಾಲಿವುಡ್ ಹಿರಿಯ ನಟಿ ರೇಖಾ ಕಾರ್ಯಕ್ರಮವೊಂದರಲ್ಲಿ ಫೋಟೋಗೆ ಪೋಸ್ ನೀಡುವಾಗ ತನ್ನ ಹಿಂದೆ ಇದ್ದ ಬಿಗ್-ಬಿ ಅಮಿತಾಬ್ ಬಚ್ಚನ್ ಫೋಟೋ ನೋಡಿ ನಿಂತ ಜಾಗವನ್ನು ಖಾಲಿ ಮಾಡಿದ್ದಾರೆ.

    ಸೆಲೆಬ್ರಿಟಿ ಫೋಟೋಗ್ರಾಫರ್ ದಾಬೂ ರತ್ನಾನಿ ಇತ್ತೀಚೆಗೆ ಕ್ಯಾಲೆಂಡರ್ ಲಾಂಚ್ ಪಾರ್ಟಿಯನ್ನು ಆಯೋಜಿಸಿದ್ದರು. ಈ ಪಾರ್ಟಿಯಲ್ಲಿ ರೇಖಾ ಅವರು ಕಾಂಚಿಪುರಂ ರೇಷ್ಮೆ ಸೀರೆ ಬದಲು ಕಪ್ಪು ಬಣ್ಣದ ಔಟ್‍ಫಿಟ್‍ನಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು.

    ರೇಖಾ ಅವರು ಕಾರ್ಯಕ್ರಮಕ್ಕೆ ಬಂದು ಅಲ್ಲಿ ಫೋಟೋಗ್ರಾಫರ್ ಗಳಿಗೆ ಪೋಸ್ ನೀಡುತ್ತಿದ್ದರು. ಫೋಟೋಗೆ ಪೋಸ್ ನೀಡುವಾಗ ರೇಖಾ ತಮ್ಮ ಹಿಂದೆ ಇದ್ದ ಗೋಡೆಯನ್ನು ತಿರುಗಿನೋಡಿದ್ದಾರೆ. ಈ ವೇಳೆ ಅಲ್ಲಿ ಅಮಿತಾಬ್ ಬಚ್ಚನ್ ಫೋಟೋ ಇರುವುದನ್ನು ನೋಡಿ ಅಲ್ಲಿಂದ ಜಾಗ ಖಾಲಿ ಮಾಡಿ ಬೇರೆ ಕಡೆ ನಿಂತಿದ್ದಾರೆ.

    ರೇಖಾ ಅವರು ಬಿಗ್-ಬಿ ಫೋಟೋ ನೋಡಿ ಓಡಿ ಹೋಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಕಾರ್ಯಾಕ್ರಮದಲ್ಲಿ ನಟ ಟೈಗರ್ ಶ್ರಾಫ್, ಕಾರ್ತಿಕ್ ಆರ್ಯನ್, ನಟಿಯರಾದ ವಿದ್ಯಾ ಬಾಲನ್, ಟ್ವಿಂಕಲ್ ಖನ್ನಾ, ಕೃತಿ ಸನೋನ್, ಕೈರಾ ಅಡ್ವಾನಿ, ಸನ್ನಿ ಲಿಯೋನ್ ಹಾಗೂ ಅಂಕಿತಾ ಲೋಕಂಡೆ ಹಲವರು ಭಾಗಿಯಾಗಿದ್ದರು.

    https://twitter.com/Ranveerianworld/status/1090231729720180736?ref_src=twsrc%5Etfw%7Ctwcamp%5Etweetembed%7Ctwterm%5E1090231729720180736&ref_url=https%3A%2F%2Fzeenews.india.com%2Fpeople%2Frekha-accidentally-poses-in-front-of-amitabh-bachchans-photo-and-her-reaction-is-hilarious-watch-2175357.html

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನೆಚ್ಚಿನ ನಟನ ಸಿನಿಮಾ ನೋಡಲು ರಜೆ ಪತ್ರ ಬರೆದ ವಿದ್ಯಾರ್ಥಿನಿ

    ನೆಚ್ಚಿನ ನಟನ ಸಿನಿಮಾ ನೋಡಲು ರಜೆ ಪತ್ರ ಬರೆದ ವಿದ್ಯಾರ್ಥಿನಿ

    ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಟಿಸಿದ ಬಹುನಿರೀಕ್ಷಿತ ‘ನಟಸಾರ್ವಭೌಮ’ ಚಿತ್ರವನ್ನು ವೀಕ್ಷಿಸಲು ವಿದ್ಯಾರ್ಥಿನಿಯೊಬ್ಬಳು ರಜೆ ಕೋರಿ ಪತ್ರ ಬರೆದಿರುವ ಫೋಟೋ ವೈರಲ್ ಆಗಿದೆ.

    ಮೈಸೂರಿನ ಮಹಾರಾಣಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ವಿದ್ಯಾರ್ಥಿನಿ ಆಗಿರುವ ನಿಸರ್ಗ ಸಿನಿಮಾ ವೀಕ್ಷಿಸಲು ರಜೆ ನೀಡುವುದಾಗಿ ಪತ್ರ ಬರೆದಿದ್ದಾರೆ. ಈ ಪತ್ರದ ಫೋಟೋವನ್ನು ಚಿತ್ರದ ನಿರ್ದೇಶಕ ಪವನ್ ಒಡೆಯರ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಾಕಿ ಅದಕ್ಕೆ, “ಸಾಮಾಜಿಕ ಜಾಲತಾಣದಲ್ಲಿ ನೋಡಿದೆ. ನನಗೆ ನಗು ತಡೆಯಲು ಆಗುತ್ತಿಲ್ಲ” ಎಂದು ಟ್ವೀಟ್ ಮಾಡಿದ್ದಾರೆ.

    ಪತ್ರದಲ್ಲಿ ಏನಿದೆ?
    ನಟಸಾರ್ವಭೌಮ ಚಿತ್ರ ಫೆಬ್ರವರಿ 7ರಂದು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ಈ ಚಿತ್ರ ಕುಟುಂಬದ ಎಲ್ಲ ಸದಸ್ಯರು ಹಾಗೂ ಎಲ್ಲ ವಯಸ್ಸಿನವರು ನೋಡುವಂತಹ ಒಳ್ಳೆಯ ಚಿತ್ರವಾಗಿದ್ದು ಹಾಗೂ ಚಿತ್ರದ ನಾಯಕನಟ ನಮ್ಮ ರಾಜ್‍ಕುಮಾರ್ ಅವರ ಹೆಮ್ಮೆಯ ತೃತೀಯ ಸುಪುತ್ರನಾದ ಪುನೀತ್ ರಾಜ್‍ಕುಮಾರ್ ಅವರಾಗಿದ್ದು, ಹಾಗೂ ಹೀಗಿನ ಮಕ್ಕಳ ಅಚ್ಚುಮೆಚ್ಚಿನ ನಟರಾಗಿದ್ದಾರೆ. ಹಾಗಾಗಿ ನಾನು ನಟಸಾರ್ವಭೌಮ ಚಿತ್ರವನ್ನು ನೋಡಲು ಫೆ.8ರಂದು ಆನ್‍ಲೈನ್‍ನಲ್ಲಿ ಟಿಕೆಟ್ ಬುಕ್ ಮಾಡಿರುವುದರಿಂದ ನಾನು ತರಗತಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನೀವು ರಜೆ ನೀಡಬೇಕೆಂದು ತಮ್ಮಲ್ಲಿ ಸವಿನಯ ಪ್ರಾರ್ಥನೆ ಎಂದು ಬರೆದಿದ್ದಾರೆ.

    ಈ ಚಿತ್ರದಲ್ಲಿ ಪುನೀತ್ ರಾಜ್‍ಕುಮಾರ್ ಜೊತೆ ಡಿಂಪಲ್ ಬೆಡಗಿ ರಚಿತಾ ರಾಮ್, ಅನುಪಮಾ ಪರಮೇಶ್ವರ್, ಸಾಧುಕೋಕಿಲಾ, ಬಿ.ಸರೋಜಾ ದೇವಿ, ಚಿಕ್ಕಣ್ಣ, ರವಿಶಂಕರ್ ನಟಿಸಿದ್ದಾರೆ. ಈ ಚಿತ್ರವನ್ನು ರಾಕ್‍ಲೈನ್ ವೆಂಕಟೇಶ್ ಅವರು ನಿರ್ಮಿಸಿದ್ದು, ಪವನ್ ಒಡೆಯರ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ‘ರಣವಿಕ್ರಮ’ ಸಿನಿಮಾದ ಬಳಿಕ ಪುನೀತ್ ರಾಜ್‍ಕುಮಾರ್ ಹಾಗೂ ಪವನ್ ಒಡೆಯರ್ ಒಂದಾಗಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕುಡಚಿ ಶಾಸಕ ಕಾರ್ಮಿಕನಾಗಿ ಕಲ್ಲು ಒಡೆಯುತ್ತಿರುವ ವಿಡಿಯೋ ವೈರಲ್

    ಕುಡಚಿ ಶಾಸಕ ಕಾರ್ಮಿಕನಾಗಿ ಕಲ್ಲು ಒಡೆಯುತ್ತಿರುವ ವಿಡಿಯೋ ವೈರಲ್

    ಬೆಳಗಾವಿ/ಚಿಕ್ಕೋಡಿ: ಜಿಲ್ಲೆಯ ಕುಡಚಿ ಕ್ಷೇತ್ರದ ಬಿಜೆಪಿ ಶಾಸಕ ಪಿ. ರಾಜೀವ್ ಸದಾ ಒಂದಿಲ್ಲೊಂದು ವಿವಾದವನ್ನು ಮೈ ಮೇಲೆ ಎಳೆದುಕೊಂಡು ಸುದ್ದಿಯಾಗುತ್ತಾರೆ. ಆದರೆ ಶಾಸಕ ಪಿ. ರಾಜೀವ್ ಕ್ಷೇತ್ರದ ಜನರಿಗೆ ಅಷ್ಟೇ ಸ್ನೇಹ ಜೀವಿ ಕೂಡ ಆಗಿದ್ದಾರೆ.

    ಬಹಳಷ್ಟು ಕ್ಷೇತ್ರದ ಶಾಸಕರು ಕ್ಷೇತ್ರದಲ್ಲೇ ಇರುವುದಿಲ್ಲ ಎಂದು ಜನರು ಆರೋಪವನ್ನು ಮಾಡುತ್ತಾರೆ. ಆದರೆ ಕುಡಚಿ ಶಾಸಕ ಪಿ. ರಾಜೀವ್ ಕ್ಷೇತ್ರದಲ್ಲಿ ಕಲ್ಲು ಒಡೆಯುವ ಕಾರ್ಯ ನಿರ್ವಹಿಸಿರುವ ವಿಡಿಯೋ ಈಗ ವೈರಲ್ ಆಗಿದೆ.

    ಶಾಸಕ ಪಿ. ರಾಜೀವ್ ಕಾಮಗಾರಿ ವೀಕ್ಷಣೆಗೆ ಹೋಗಿ ತಾವೇ ಕಾರ್ಮಿಕನಾಗಿ ಕೆಲಸ ಮಾಡಿದ್ದಾರೆ. ರಾಯಬಾಗ ತಾಲೂಕಿನ ಕುಡಚಿ ಮತ ಕ್ಷೇತ್ರದ ಯಲ್ಪಾರಟ್ಟಿ ಗ್ರಾಮದಿಂದ ಪರಮಾನಂದವಾಡಿ ಗ್ರಾಮದ ರಸ್ತೆ ಕಾಮಗಾರಿ ವೀಕ್ಷಣೆಗೆ ಹೋಗಿ ಶಾಸಕರೇ ಕಾಮಗಾರಿಯಲ್ಲಿ ಬಳಸುವ ಕಲ್ಲು ಒಡೆದಿರುವ ದೃಶ್ಯಗಳು ವೈರಲ್ ಆಗಿವೆ.

    ಅಲ್ಲದೇ ಮಧ್ಯಾಹ್ನ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳ ಬಿಸಿಯೂಟ ಯೋಜನೆ ಪರಿಶೀಲನೆ ನಡೆಸಿದ್ದಾರೆ. ಬಳಿಕ ಶಾಸಕರು ಶಾಲೆಯಲ್ಲಿ ಮಕ್ಕಳೊಂದಿಗೆ ಊಟ ಮಾಡಿದ್ದಾರೆ. ಶಾಸಕರ ಇಂತಹ ಕಾರ್ಯಗಳಿಗೆ ಕ್ಷೇತ್ರದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಜೊತೆಗೆ ಸದಾ ಕ್ಷೇತ್ರದ ಜನರಲ್ಲಿ ಬೆರೆಯುವ ಶಾಸಕರ ಕಾರ್ಯಕ್ಕೆ ಜನ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv