Tag: viral

  • SSLCಯಲ್ಲಿ ಮಗ ಶೇ. 60 ಅಂಕಗಳಿಸಿದಕ್ಕೆ ತಾಯಿಯ ಪೋಸ್ಟ್- ಜನರಿಂದ ಮೆಚ್ಚುಗೆ

    SSLCಯಲ್ಲಿ ಮಗ ಶೇ. 60 ಅಂಕಗಳಿಸಿದಕ್ಕೆ ತಾಯಿಯ ಪೋಸ್ಟ್- ಜನರಿಂದ ಮೆಚ್ಚುಗೆ

    ನವದೆಹಲಿ: ಸೋಮವಾರ 10ನೇ ತರಗತಿಯ ಸಿಬಿಎಸ್‍ಸಿ ಫಲಿತಾಂಶ ಹೊರಬಿದಿದ್ದು, 13 ವಿದ್ಯಾರ್ಥಿಗಳು 500ಕ್ಕೆ 499 ಅಂಕಗಳನ್ನು ಪಡೆದಿದ್ದಾರೆ. ಹೀಗಿರುವಾಗ ತಾಯಿಯೊಬ್ಬರು ತನ್ನ ಮಗ 10ನೇ ತರಗತಿ ಪರೀಕ್ಷೆಯಲ್ಲಿ ಶೇ. 60ರಷ್ಟು ಅಂಕಗಳಿಸಿದ್ದಾನೆ ಎಂದು ಹಾಕಿದ ಪೋಸ್ಟ್ ವೈರಲ್ ಆಗುತ್ತಿದೆ.

    ಮಕ್ಕಳು ಪರೀಕ್ಷೆಯಲ್ಲಿ ನೂರಕ್ಕೆ ನೂರು ಅಂಕಗಳಿಸಬೇಕು, ಶೇ. 90 ಕಿಂತ ಹೆಚ್ಚು ಅಂಕಗಳಿಸಬೇಕು ಎಂದು ಮಕ್ಕಳ ಮೇಲೆ ಒತ್ತಡ ಹೇರುವ ಪೋಷಕರಿದ್ದಾರೆ. ಅದರೆ ದೆಹಲಿಯ ಮಹಿಳೆ ತನ್ನ ಮಗ ಶೇ. 60 ಅಂಕಗಳಿಸಿರುವುದಕ್ಕೆ ಖುಷಿಪಟ್ಟು ಅದನ್ನು ತನ್ನ ಫೇಸ್‍ಬುಕ್ ಖಾತೆಯಲ್ಲಿ ಹೆಮ್ಮೆಯಿಂದ ಹಂಚಿಕೊಂಡಿದ್ದಾರೆ.

    ವಂದನಾ ಸುಫಿಯಾ ಕಟೊಚ್ ಎಂಬ ಮಹಿಳೆ ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಮಗ ಶೇ. 60ರಷ್ಟು ಅಂಕಗಳಿಸಿರುವುದಕ್ಕೆ ಹೆಮ್ಮೆ ಇದೆ ಎಂದು ಪೋಸ್ಟ್ ಮಾಡಿದ್ದಾರೆ. ನನಗೆ ನನ್ನ ಮಗ ಶೇ.60 ಅಂಕಗಳನ್ನು ತೆಗೆದಿರುವುದು ಹೆಮ್ಮೆ ಇದೆ. ಹೌದು ಅವನು ಶೇ.90 ತೆಗೆದಿಲ್ಲ ಅದರೂ ನನಗೆ ಖುಷಿ ಇದೆ. ಏಕೆಂದರೆ ಅವನು ಕೆಲವೊಂದು ವಿಷಯದಲ್ಲಿ ತುಂಬ ದುರ್ಬಲನಾಗಿದ್ದನು. ಅದರೆ ಅದನ್ನು ಮೀರಿ ಅಂಕಗಳಿಸಿರುವುದು ನನಗೆ ಸಂತೋಷವಾಗಿದೆ. ನಿನ್ನ ಕುತೂಹಲ ಮತ್ತು ಬುದ್ಧಿವಂತಿಕೆಯನ್ನು ಜೀವಂತವಾಗಿ ಇಟ್ಟಿಕೊ. ನನ್ನ ಪ್ರೀತಿಯ ಮಗನೇ ನಿನಗೆ ಒಳ್ಳೆಯದು ಅಗಲಿ ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

    ತಾಯಿಯ ಈ ಪೋಸ್ಟ್ ಗೆ ಹಲವಾರು ಮಂದಿ ಕಮೆಂಟ್ ಮಾಡಿದ್ದು, ಮಗನಿಗೆ ಶುಭಾಷಯಗಳನ್ನು ತಿಳಿಸಿದ್ದಾರೆ. ಮತ್ತು ಕೆಲವರು ನಿಮ್ಮಂತಹ ತಾಯಿಯನ್ನು ಪಡೆಯಲು ನಿಮ್ಮ ಮಗ ಪುಣ್ಯ ಮಾಡಿದ್ದಾನೆ ಎಂದು ತಾಯಿಯ ಪೋಸ್ಟ್ ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಟ್ರೆಂಡ್ ಆಗ್ತಿದೆ ಮುಖದ್ಮೇಲೆ ಜಿರಳೆ ಬಿಡೋ ಚಾಲೆಂಜ್!- ಎಲ್ಲಿ ನೋಡಿದ್ರು ಜಿರಳೆಯದ್ದೇ ಹವಾ

    ಟ್ರೆಂಡ್ ಆಗ್ತಿದೆ ಮುಖದ್ಮೇಲೆ ಜಿರಳೆ ಬಿಡೋ ಚಾಲೆಂಜ್!- ಎಲ್ಲಿ ನೋಡಿದ್ರು ಜಿರಳೆಯದ್ದೇ ಹವಾ

    ನವದೆಹಲಿ: ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಯುವ ಪೀಳಿಗೆ ವಿಚಿತ್ರ ಚಾಲೆಂಜ್‍ಗಳನ್ನ ಮಾಡೋಡು ಕಾಮನ್ ಆಗಿಬಿಟ್ಟಿದೆ. ಈಗ ಜಿರಳೆಯನ್ನು ಮುಖದ ಮೇಲೆ ಬಿಟ್ಟುಕೊಂಡು ಸೆಲ್ಫಿ ಹಾಕುವ ಹೊಸ ಚಾಲೆಂಜ್ ಸಖತ್ ಸದ್ದು ಮಾಡುತ್ತಿದೆ.

    ಹೌದು, ಮನೆಯಲ್ಲಿ ಜಿರಳೆ ಕಂಡರೆ ಹಿಟ್ ಅಥವಾ ಬೇರೆ ಏನಾದರೂ ಔಷಧಿ ಹೊಡೆದು ಸಾಯಿಸುತ್ತಾರೆ. ಆದ್ರೆ ಈಗ ಕಾಕ್ರೋಚ್ ಚಾಲೆಂಜ್ ಎಂದು ಶುರುಮಾಡಿ ಜಿರಳೆಯನ್ನ ಮುಖದ ಮೇಲೆ ಬಿಟ್ಕೋತ್ತಿದ್ದಾರೆ. ಫೇಸ್‍ಬುಕ್‍ನಲ್ಲಿ ಅಲೆಕ್ಸ್ ಅಂಗ್ ಎಂಬಾತ ಶುರುಮಾಡಿದ ಜಿರಳೆ ಚಾಲೆಂಜ್ ಇದೀಗ ಫುಲ್ ಫೇಮಸ್ಸಾಗುತ್ತಿದೆ. ಮುಖದ ಮೇಲೆ ಜೀರಳೆ ಬಿಟ್ಟುಕೊಂಡು ಅದರ ಸೆಲ್ಫಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದೇ ಈ ಚಾಲೆಂಜ್‍ನ ವಿಶೇಷವಾಗಿದೆ.

    ಏ.20ರಂದು ಇದನ್ನು ಪೋಸ್ಟ್ ಮಾಡಿದ್ದ ಅಂಗ್ ನೀವು ಹೀಗೆ ಮಾಡಲು ಸಾಧ್ಯವೇ? ನೆಟ್ಟಿಗರನ್ನು ಎಂದು ಪ್ರಶ್ನೆ ಮಾಡಿದ್ದ. ಆದಾದ ಬಳಿಕ ಈ ಚಾಲೆಂಜ್ ವೈರಲ್ ಆಗಿದ್ದು, ಯುವ ಪೀಳಿಗೆ ಈ ಚಾಲೆಂಜ್‍ನನ್ನು ಸ್ವಿಕರಿಸಿದ್ದಾರೆ. ಅಲ್ಲದೆ ತಮ್ಮ ಮುಖದ ಮೇಲೆ ಜಿರಳೆ ಬಿಟ್ಟುಕೊಂಡು ಸೆಲ್ಫಿ ತಗೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದಾರೆ.

    ಈವರೆಗೆ ಅಲೆಕ್ಸ್ ಅಂಗ್ ಹಾಕಿದ್ದ ಜಿರಳೆ ಚಾಲೆಂಜ್ ಫೋಸ್ಟ್ ಅನ್ನು 18 ಸಾವಿರಕ್ಕೂ ಅಧಿಕ ಮಂದಿ ಶೇರ್ ಮಾಡಿದ್ದು ಸಾವಿರಾರು ಮಂದಿ ಲೈಕ್ ಮಾಡಿದ್ದಾರೆ.

  • ಉದ್ಯಮಿ ಜೊತೆಗಿನ ನಟಿಯ ಕಿಸ್ಸಿಂಗ್ ವಿಡಿಯೋ ವೈರಲ್

    ಉದ್ಯಮಿ ಜೊತೆಗಿನ ನಟಿಯ ಕಿಸ್ಸಿಂಗ್ ವಿಡಿಯೋ ವೈರಲ್

    ಮುಂಬೈ: ಬಾಲಿವುಡ್ ನಟಿ ಅಂಕಿತ ಲೋಖಾಂಡೆ ಉದ್ಯಮಿ ಜೊತೆ ಕಿಸ್ ಮಾಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ನಟಿ ಅಂಕಿತ ಲೋಖಾಂತೆ ಮುಂಬೈ ಉದ್ಯಮಿ ವಿಕ್ಕಿ ಜೈನ್ ಅವರನ್ನು ಪ್ರೀತಿಸುತ್ತಿದ್ದಾರೆ. ಇತ್ತೀಚೆಗೆ ಇಬ್ಬರು ತಮ್ಮ ಸ್ನೇಹಿತೆಯ ಮದುವೆ ಕಾರ್ಯಕ್ರಮಕ್ಕೆ ಹೋಗಿದ್ದರು. ಈ ವೇಳೆ ಇಬ್ಬರು ಡ್ಯಾನ್ಸ್ ಮಾಡುತ್ತಾ ಪರಸ್ಪರ ಮುತ್ತು ನೀಡಿದ್ದಾರೆ.

    ಕಿರುತರೆ ಕಲಾವಿದರ ಜೊತೆ ಅಂಕಿತ ಹಾಗೂ ವಿಕ್ಕಿ ತಮ್ಮ ಸ್ನೇಹಿತೆಯ ಮದುವೆಗೆ ಆಗಮಿಸಿದ್ದರು. ಈ ವೇಳೆ ಅಲ್ಲಿಗೆ ಬಂದಿದ್ದ ಅತಿಥಿಗಳ ಜೊತೆ ಅಂಕಿತ ಹಾಗೂ ವಿಕ್ಕಿ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋ ನೋಡಿದ ನಂತರ ಅಂಕಿತ ಹಾಗೂ ವಿಕ್ಕಿ ಶೀಘ್ರದಲ್ಲೇ ಮದುವೆ ಆಗಲಿದ್ದಾರೆ ಎಂಬ ಮಾತುಗಳು ಬಿ-ಟೌನ್‍ನಲ್ಲಿ ಹರಿದಾಡುತ್ತಿದೆ.

    ಅಂಕಿತ ಕಿರುತೆರೆಯಿಂದ ‘ಮಣಿಕರ್ಣಿಕಾ- ದಿ ಕ್ವೀನ್ ಆಫ್ ಝಾನ್ಸಿ’ ಚಿತ್ರದ ಮೂಲಕ ಬಾಲಿವುಡ್‍ಗೆ ಎಂಟ್ರಿ ಕೊಟ್ಟಿದ್ದರು. ಅಂಕಿತ ಹಿಂದಿ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಪವಿತ್ರ ರಿಶ್ತಾ’ ಧಾರಾವಾಹಿಯಲ್ಲಿ ನಟ ಸುಶಾಂತ್ ಸಿಂಗ್ ರಜ್‍ಪುತ್ ಜೊತೆ ನಟಿಸಿದ್ದರು.

  • ನೀರಿಗಾಗಿ ಹಾಹಾಕಾರ – ತೊಟ್ಟು ನೀರಿಲ್ಲದೇ ಒದ್ದಾಡುತ್ತಿರುವ ಜಾನುವಾರುಗಳು

    ನೀರಿಗಾಗಿ ಹಾಹಾಕಾರ – ತೊಟ್ಟು ನೀರಿಲ್ಲದೇ ಒದ್ದಾಡುತ್ತಿರುವ ಜಾನುವಾರುಗಳು

    ದಾವಣಗೆರೆ: ಬೇಸಿಗೆ ಶುರುವಾಗುತ್ತಲೇ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ನೀರಿನ ಬವಣೆ ಉಂಟಾಗಿದ್ದು, ಕುಡಿಯಲು ನೀರು ಸಿಗದಿದ್ದಕ್ಕೆ ನೀರಿನ ತೊಟ್ಟಿಗೆ ಎಗರಿದ ಎಮ್ಮೆ ಬಳಿಕ ಒದ್ದಾಟ ನಡೆಸಿದ ಕರುಳು ಹಿಂಡುವಂತಹ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಜಗಳೂರು ತಾಲೂಕಿನ ಹಾಲೇಕಲ್ಲು ಗ್ರಾಮದಲ್ಲಿ ನೀರಿನ ಸಮಸ್ಯೆ ಗಂಭೀರ ಸ್ವರೂಪ ತಾಳಿದೆ. ಗ್ರಾಮದಲ್ಲಿ ಜನರಿಗೆ ಕುಡಿಯುವ ನೀರನ್ನು ಕೇವಲ ಎರಡು ಟ್ಯಾಂಕ್ ಕಳಿಸಿ ಕೊಡಲಾಗುತ್ತದೆ. ಆದರೆ ಜಾನುವಾರುಗಳಿಗೆ ಕುಡಿಯಲು ನೀರಿನ ಸಮಸ್ಯೆ ಎದುರಾಗಿದೆ. ಕುಡಿಯಲು ನೀರಿಲ್ಲದೆ ಜಾನುವಾರುಗಳ ಸ್ಥಿತಿ ನೋಡಿ ಸಂಕಟ ಪಡುವಂತಾಗಿದೆ.

    ಗ್ರಾಮದಲ್ಲಿ ಜಾನುವಾರುಗಳು ನೀರು ಕುಡಿಯಲು ಎರಡು ತೊಟ್ಟಿಗಳಿದ್ದು ಸುಮಾರು ಮೂರು ತಿಂಗಳಿಂದ ಈ ತೊಟ್ಟಿಗೆ ನೀರು ಬಿಟ್ಟಿಲ್ಲ. ಈ ವೇಳೆ ಬಾಯಾರಿಕೆ ತಾಳಲಾರದೇ ಎಮ್ಮೆಯೊಂದು ನೀರು ಕುಡಿಯಲು ಆಗಮಿಸಿದೆ. ತಳದಲ್ಲಿದ್ದ ಅಳಿದುಳಿದ ನೀರು ಸಿಗದೇ ಇದ್ದಾಗ ಬಾಯಾರಿಕೆಯಿಂದ ಎಮ್ಮೆ ತೊಟ್ಟಿಗೆ ಜಿಗಿದು ತಳದಲ್ಲಿದ್ದ ನೀರನ್ನು ಕುಡಿದಿದೆ. ಆದ್ರೆ ಅಲ್ಲಿಂದ ಹೊರಗೆ ಬರಲು ದಾರಿ ತೋಚದೆ ಕಂಗಾಲಾಗಿ ಸಹಾಯಕ್ಕಾಗಿ ಎದುರು ನೋಡುತ್ತಿರುವ ದೃಶ್ಯವನ್ನು ಸ್ಥಳದಲ್ಲಿದ್ದವರು ವಿಡಿಯೋ ಮಾಡಿದ್ದಾರೆ.

    ಬಳಿಕ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ವಿಡಿಯೋ ಫುಲ್ ವೈರಲ್ ಆಗಿದೆ. ಅಷ್ಟೇ ಅಲ್ಲದೆ ಈ ವಿಡಿಯೋದಲ್ಲಿ ಇನ್ನೊಂದು ಎಮ್ಮೆಯೂ ಸಹ ನೀರು ಕುಡಿಯಲು ಬಂದಾಗ ಅದರ ಬಾಯಿಗೆ ನೀರು ಸಿಗುವುದಿಲ್ಲ, ಬಳಿಕ ಎಗರಿ ಎಗರಿ ನೀರು ಕುಡಿಯಲು ಪ್ರಯತ್ನ ಪಡುತ್ತಿರುವ ದೃಶ್ಯ ಕೂಡ ಸೆರೆಯಾಗಿದೆ. ಗ್ರಾಮದಲ್ಲಿ ಎಲ್ಲಾ ಬೋರ್ ವೆಲ್‍ಗಳು ಬತ್ತಿದ್ದು ಜನಗಳಿಗೂ ಸಹ ನೀರಿನ ಸಮಸ್ಯೆ ಎದುರಾಗಿದೆ. ಈ ಬಗ್ಗೆ ಪಿಡಿಓಗೆ ಹಲವು ಭಾರಿ ವಿಷಯ ತಿಳಿಸಿದ್ದರೂ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ, ಜನ ಜಾನುವಾರುಗಳ ಅಗತ್ಯಕ್ಕೆ ಅನುಗುಣವಾಗಿ ನೀರು ಪೂರೈಕೆ ಆಗಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

  • ಕಿಡ್ನಾಪ್‍ಗೈದು ಕಾಡಿನಲ್ಲಿ ಅಪ್ರಾಪ್ತೆ ಮೇಲೆ ಗ್ಯಾಂಗ್ ರೇಪ್ – ವಿಡಿಯೋ ಹರಿಬಿಟ್ಟು ಸಿಕ್ಕಿಬಿದ್ರು

    ಕಿಡ್ನಾಪ್‍ಗೈದು ಕಾಡಿನಲ್ಲಿ ಅಪ್ರಾಪ್ತೆ ಮೇಲೆ ಗ್ಯಾಂಗ್ ರೇಪ್ – ವಿಡಿಯೋ ಹರಿಬಿಟ್ಟು ಸಿಕ್ಕಿಬಿದ್ರು

    ದಿಸ್‍ಪುರ್: ಅಪಹರಣಗೈದು ಕಾಡಿನಲ್ಲಿ ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಆರೋಪಿಗಳನ್ನು ವಿಡಿಯೋ ಆಧಾರದಲ್ಲಿ ಅಸ್ಸಾಂ ಪೊಲೀಸರು ಬಂಧಿಸಿದ್ದಾರೆ.

    ಕಳೆದ ತಿಂಗಳ 25ರಂದು 5 ಮಂದಿ ಕಾಮುಕರು ಅಕಾಶಿಗಂಗಾ ಮೀಸಲು ಅರಣ್ಯ ಪ್ರದೇಶದ ದಿಘಾಲ್ಜಹರುನಿ ಗ್ರಾಮದಲ್ಲಿ 16 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸೆಗಿ, ಆ ದೃಶ್ಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಈ ವಿಡಿಯೋ ಸದ್ಯ ಎಲ್ಲೆಡೆ ವೈರಲ್ ಆದ ಬಳಿಕ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಲು ತನಿಖೆ ಕೈಗೊಂಡಿದ್ದರು. ವಿಡಿಯೋ ಆಧಾರದ ಮೇಲೆಯೇ ಇಂದು ಮೂವರು ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ.

    ಮಾರ್ಚ್ 25ರಂದು ಬಾಲಕಿ ತನ್ನ ಬಾವನ ಜೊತೆ ಸಂಬಂಧಿಕರ ಮನೆಗೆ ತೆರಳುತ್ತಿದ್ದಳು. ಆಗ ದಾರಿಯಲ್ಲಿ 5 ಮಂದಿ ದುಷ್ಕರ್ಮಿಗಳು ಅವರಿಬ್ಬರನ್ನು ಅಡ್ಡಗಟ್ಟಿ ಬಾಲಕಿಯನ್ನು ಕಾಡಿನೊಳಗೆ ಕರೆದೊಯ್ದು ಅತ್ಯಾಚಾರ ಮಾಡಿದ್ದಾರೆ. ಈ ವೇಳೆ ಅವರಲ್ಲಿ ಒಬ್ಬ ಆರೋಪಿ ಅತ್ಯಾಚಾರ ಮಾಡುತ್ತಿರುವ ದೃಶ್ಯವನ್ನು ಮೊಬೈಲ್‍ನಲ್ಲಿ ಸೆರೆಹಿಡಿದು, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾನೆ. ಈ ವಿಡಿಯೋ ಎಲ್ಲೆಡೆ ಭಾರೀ ಸದ್ದು ಮಾಡುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.

    ಈ ಸಂಬಂಧ ಬಾಲಕಿ ಹಾಗೂ ಆಕೆಯ ಪೋಷಕರು ಬುಧವಾರ ಎಫ್‍ಐಆರ್ ದಾಖಲಿಸಿದ್ದು, ಬಿರುಸಿನ ತನಿಖೆ ನಡೆಸಿದ ಪೊಲೀಸರು ಇಂದು ಬಾಲಕಿಯ ಬಾವನನ್ನು ವಿಚಾರಣೆಗೆ ಒಳಪಡಿಸಿದ್ದು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಆದ್ರೆ ಪ್ರಕರಣದಲ್ಲಿ ಶಾಮೀಲಾಗಿದ್ದ ಉಳಿದ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಸದ್ಯ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.

  • ಮದ್ವೆಮನೆಯಲ್ಲಿ ದೀಪಿಕಾ ಸ್ಯಾಂಡಲ್ಸ್ ಹಿಡಿದುಕೊಂಡು ಓಡಾಡಿದ ಪತಿ: ಫೋಟೋ ವೈರಲ್

    ಮದ್ವೆಮನೆಯಲ್ಲಿ ದೀಪಿಕಾ ಸ್ಯಾಂಡಲ್ಸ್ ಹಿಡಿದುಕೊಂಡು ಓಡಾಡಿದ ಪತಿ: ಫೋಟೋ ವೈರಲ್

    ಮುಂಬೈ: ಬಾಲಿವುಡ್ ನಟ ರಣ್‍ವೀರ್ ಸಿಂಗ್ ಮದುವೆ ಕಾರ್ಯಕ್ರಮದಲ್ಲಿ ತನ್ನ ಪತ್ನಿ, ನಟಿ ದೀಪಿಕಾ ಪಡುಕೋಣೆ ಅವರ ಸ್ಯಾಂಡಲ್ಸ್ ಹಿಡಿದುಕೊಂಡು ಓಡಾಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಇತ್ತೀಚೆಗೆ ದೀಪಿಕಾ ಪಡುಕೋಣೆ ಹಾಗೂ ರಣ್‍ವೀರ್ ಸಿಂಗ್ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮದುವೆಯಲ್ಲಿ ದೀಪಿಕಾ ಬೇರೆಯವರ ಜೊತೆ ಮಾತನಾಡುವುದರಲ್ಲಿ ಬ್ಯುಸಿಯಾಗಿದ್ದರು. ಈ ವೇಳೆ ರಣ್‍ವೀರ್ ದೀಪಿಕಾ ಸ್ಯಾಂಡಲ್ಸ್ ಹಿಡಿದು ಅವರ ಹಿಂದೆ ನಿಂತಿದ್ದಾರೆ. ಈ ಫೋಟೋ ಈಗ ವೈರಲ್ ಆಗಿದೆ.

    ಈ ಹಿಂದೆ ಕೂಡ ದೀಪಿಕಾ ಪಡುಕೋಣೆ ಹಾಗೂ ರಣ್‍ವೀರ್ ಸಿಂಗ್ ಡಿನ್ನರಿಗೆಂದು ರೆಸ್ಟೋರೆಂಟ್‍ಗೆ ಹೋಗಿದ್ದರು. ಅಲ್ಲಿಂದ ವಾಪಸ್ ಬರುವಾಗ ಅಲ್ಲಿದ್ದ ಮಾಧ್ಯಮದವರು ದೀಪ್‍ವೀರ್ ಗೆ ಫೋಟೋಗೆ ಪೋಸ್ ಕೊಡಿ ಎಂದು ಕೇಳಿಕೊಂಡಿದರು.

    ಇಬ್ಬರು ಫೋಟೋಗೆ ಪೋಸ್ ಕೊಡುವ ವೇಳೆ ರಣ್‍ವೀರ್, ದೀಪಿಕಾ ಪ್ಯಾಂಟ್ ಮೇಲೆ ಕಸ ಇರುವುದನ್ನು ಗಮನಿಸಿದ್ದರು. ಬಳಿಕ ರಣ್‍ವೀರ್ ಪ್ಯಾಂಟ್‍ನಲ್ಲಿದ್ದ ಕಸ ತೆಗೆದು ದೀಪಿಕಾಳನ್ನು ಗಟ್ಟಿಯಾಗಿ ಅಪ್ಪಿಕೊಂಡು ಆಕೆಯ ಹಣೆ ಮೇಲೆ ಕಿಸ್ ಮಾಡಿದ್ದರು. ನಂತರ ದೀಪಿಕಾ ಫೋಟೋಗ್ರಾಫರ್ ಗಳಿಗೆ ಧನ್ಯವಾದ ತಿಳಿಸಿ ಅಲ್ಲಿಂದ ಹೊರಟು ಹೋಗಿದ್ದರು.

  • ಟೆರೆಸ್ ಮೇಲೆ ವ್ಯಕ್ತಿ ಜೊತೆ ದೀಪಿಕಾ ಪಡುಕೋಣೆ ಕಿಸ್ಸಿಂಗ್: ವಿಡಿಯೋ ವೈರಲ್

    ಟೆರೆಸ್ ಮೇಲೆ ವ್ಯಕ್ತಿ ಜೊತೆ ದೀಪಿಕಾ ಪಡುಕೋಣೆ ಕಿಸ್ಸಿಂಗ್: ವಿಡಿಯೋ ವೈರಲ್

    ಮುಂಬೈ: ಬಾಲಿವುಡ್ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ‘ಚಾಪಾಕ್’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈಗ ಈ ಚಿತ್ರದಲ್ಲಿ ದೀಪಿಕಾ ನಟ ವಿಕ್ರಾಂತ್ ಮಾಸೇ ಜೊತೆ ಟೆರೆಸ್ ಮೇಲೆ ಕಿಸ್ಸಿಂಗ್ ಸೀನ್ ಮಾಡಿದ ವಿಡಿಯೋ ಲೀಕ್ ಆಗಿದೆ.

    ವೈರಲ್ ಆಗಿರುವ ವಿಡಿಯೋದಲ್ಲಿ ದೀಪಿಕಾ ಟೆರೆಸ್ ಮೇಲೆ ನಿಂತು ನಟ ವಿಕ್ರಾಂತ್ ಜೊತೆ ಲಿಪ್ ಲಾಕ್ ಮಾಡುತ್ತಿದ್ದಾರೆ. ಈ ಸೀನ್ ಚಿತ್ರೀಕರಣದ ವೇಳೆ ಅಕ್ಕಪಕ್ಕದ ಮನೆಯವರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

    ಚಾಪಾಕ್ ಚಿತ್ರದ ಚಿತ್ರೀಕರಣ ನವದೆಹಲಿಯಲ್ಲಿ ನಡೆಯುತ್ತಿದೆ. ಈಗಾಗಲೇ ಈ ಚಿತ್ರದ ಕೆಲವು ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ ಈಗ ಈ ಚಿತ್ರದ ಕಿಸ್ಸಿಂಗ್ ಸೀನ್ ಲೀಕ್ ಆಗಿದ್ದು, ಸಾಕಷ್ಟು ವೈರಲ್ ಆಗುತ್ತಿದೆ.

    ದೀಪಿಕಾ ಪಡುಕೋಣೆ ಮದುವೆ ನಂತರ `ಚಾಪಾಕ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರ ಆ್ಯಸಿಡ್ ದಾಳಿಗೊಳಗಾದ ಲಕ್ಷ್ಮಿ ಅಗರ್‍ವಾಲ್ ಜೀವನಚರಿತ್ರೆ ಆಗಿದ್ದು, ದೀಪಿಕಾ ಮಾಲತಿ ಎಂಬ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಲಕ್ಷ್ಮಿ ಅಗರ್‍ವಾಲ್ ಈಗ ಟಿವಿ ನಿರೂಪಕಿ ಹಾಗೂ ಆ್ಯಸಿಡ್ ದಾಳಿ ತಡೆಯ ಪ್ರಚಾರಕಿ ಆಗಿದ್ದಾರೆ.

    ದೀಪಿಕಾ ಪಡುಕೋಣೆ ಮದುವೆಯಾದ ನಂತರ ಚಾಪಾಕ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಅವರು ಫಾಕ್ಸ್ ಸ್ಟಾರ್ ಸ್ಟುಡಿಯೋ ಜೊತೆ ಸೇರಿ ನಿರ್ಮಿಸುತ್ತಿದ್ದಾರೆ. ಈ ಚಿತ್ರ ಮುಂದಿನ ವರ್ಷದ ಜನವರಿ 10ರಂದು ಬಿಡುಗಡೆ ಆಗಲಿದೆ.

  • ಸನ್ನಿ ಲಿಯೋನ್‍ನ ಹೋಳಿ ಹಬ್ಬದ ಫೋಟೋ ವೈರಲ್

    ಸನ್ನಿ ಲಿಯೋನ್‍ನ ಹೋಳಿ ಹಬ್ಬದ ಫೋಟೋ ವೈರಲ್

    ಮುಂಬೈ: ಬಾಲಿವುಡ್ ಬೆಡಗಿ ಸನ್ನಿ ಲಿಯೋನ್ ತನ್ನ ಪತಿ ಹಾಗೂ ಮೂವರು ಮಕ್ಕಳ ಜೊತೆ ಹೋಳಿ ಹಬ್ಬವನ್ನು ಆಚರಿಸಿದ್ದಾರೆ. ಈ ಫೋಟೋ ಅವರು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಈಗ ಅದು ವೈರಲ್ ಆಗಿದೆ.

    ಗುರುವಾರ ಸನ್ನಿ ಲಿಯೋನ್ ತನ್ನ ಪತಿ ಡೇನಿಯಲ್ ವೆಬ್ಬರ್ ಹಾಗೂ ಮೂವರು ಮಕ್ಕಳಾದ ನಿಶಾ, ಆಶೇರ್ ಹಾಗೂ ನೋಹಾ ಜೊತೆ ಹೋಳಿ ಹಬ್ಬವನ್ನು ಆಚರಿಸಿದ್ದಾರೆ. ಬಳಿಕ ಆ ಫೋಟೋಗಳನ್ನು ಇನ್‍ಸ್ಟಾಗ್ರಾಂನಲ್ಲಿ ಹಾಕಿ ಅದಕ್ಕೆ, “ವೆಬ್ಬರ್ ಗಳ ಕಡೆಯಿಂದ ಹೋಳಿ ಹಬ್ಬದ ಶುಭಾಶಯಗಳು” ಎಂದು ಬರೆದುಕೊಂಡಿದ್ದಾರೆ.

     

    View this post on Instagram

     

    Happy Holi from the Weber’s!!

    A post shared by Sunny Leone (@sunnyleone) on

    ಸನ್ನಿ ಲಿಯೋನ್ ಪೋಸ್ಟ್ ಮಾಡಿದ ಈ ಫೋಟೋಗೆ 11 ಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ಅಲ್ಲದೆ ಕೆಲವರು ನಿಮಗೂ ಹೋಳಿ ಹಬ್ಬದ ಶುಭಾಶಯಗಳು ಎಂದು ಕಮೆಂಟ್ ಮಾಡಿ ಶುಭಾಶಯ ತಿಳಿಸಿದರೆ ಮತ್ತೆ ಕೆಲವರು ದೇವರು ನಿಮಗೆ ಚೆನ್ನಾಗಿ ಇಟ್ಟರಲಿ ಎಂದು ಕಮೆಂಟ್ ಮಾಡಿದ್ದಾರೆ.

    ಕಳೆದ ವರ್ಷ ಸರೊಗಸಿ ಮೂಲಕ ಸನ್ನಿ ಲಿಯೋನ್ ಹಾಗೂ ಅವರ ಪತಿ ಡೇನಿಯಲ್ ವೆಬರ್ ಇಬ್ಬರು ಅವಳಿ ಗಂಡು ಮಕ್ಕಳನ್ನು ಪಡೆದಿದ್ದರು. ಅಲ್ಲದೆ ಸನ್ನಿ 2017ರಲ್ಲಿ ಮಹಾರಾಷ್ಟ್ರದ ಲಾತೂರಿನಲ್ಲಿ ನಿಶಾ ಎಂಬ ಮಗುವನ್ನು ದತ್ತು ಪಡೆದುಕೊಂಡಿದ್ದರು.

     

    View this post on Instagram

     

    Happy holi !!!!

    A post shared by Daniel “Dirrty” Weber (@dirrty99) on

  • ಲವ್‍ಗಾಗಿ ಸ್ವಾಮೀಜಿ ಪೀಠತ್ಯಾಗ- ಸೋಶಿಯಲ್ ಮೀಡಿಯಾದಲ್ಲಿ ಲವರ್ ಜೊತೆ ಪ್ರತ್ಯಕ್ಷ..!

    ಲವ್‍ಗಾಗಿ ಸ್ವಾಮೀಜಿ ಪೀಠತ್ಯಾಗ- ಸೋಶಿಯಲ್ ಮೀಡಿಯಾದಲ್ಲಿ ಲವರ್ ಜೊತೆ ಪ್ರತ್ಯಕ್ಷ..!

    ಕೊಪ್ಪಳ: ಪ್ರೀತಿಗಾಗಿ ಪೀಠತ್ಯಾಗ ಮಾಡಿ ನಾಪತ್ತೆಯಾಗಿದ್ದ ಸ್ವಾಮೀಜಿಯೊಬ್ಬರು ಪ್ರೀತಿಸಿದ ಹುಡಗಿಯೊಂದಿಗೆ ಸೋಶಿಯಲ್ ಮೀಡಿಯಾದಲ್ಲಿ ಪ್ರತ್ಯಕ್ಷವಾಗಿದ್ದಾರೆ. ಇಬ್ಬರು ಹುಟ್ಟು ಹಬ್ಬ ಆಚರಣೆ ಮಾಡುತ್ತಿರೋ ಫೋಟೋ ವೈರಲ್ ಆಗಿದೆ.

    ಜಿಲ್ಲೆಯ ಅಳವಂಡಿ ಗ್ರಾಮದ ಸಿದ್ದೇಶ್ವರ ಮಠದ ಸಿದ್ದಲಿಂಗ ಸ್ವಾಮೀಜಿ ಪ್ರೀತಿಗಾಗಿ ಪೀಠತ್ಯಾಗ ಮಾಡಿದ್ದರು. ಕಳೆದ ಜನವರಿಯಲ್ಲಿ ಪೀಠತ್ಯಾಗ ಮಾಡಿ ನಾಪತ್ತೆಯಾಗಿದ್ದ ಸಿದ್ದಲಿಂಗ ಸ್ವಾಮೀಜಿ ಇದೀಗ ಸಾಮಾಜಿಕ ಜಾಲತಾಣದ ಮೂಲಕ ಪತ್ತೆಯಾಗಿದ್ದಾರೆ. ಮುಂಡರಗಿ ಕಾಲೇಜಿನಲ್ಲಿ ಸ್ವಾಮೀಜಿ ಪಾಠ ಮಾಡಲು ಹೋಗುತ್ತಿದ್ದರು. ಆಗ ಕಾಲೇಜಿಗೆ ಬರುತ್ತಿದ್ದ ಹುಡಗಿಯೊಬ್ಬಳ ಮೇಲೆ ಸ್ವಾಮೀಜಿಗೆ ಪ್ರೇಮಾಂಕುರವಾಗಿದೆ. ಬಳಿಕ ಹೇಗೋ ಇಬ್ಬರ ನಡುವೆ ಪ್ರೀತಿ ಹುಟ್ಟಿ, ಕೊನೆಗೆ ಸ್ವಾಮೀಜಿ ಹುಡುಗಿಗಾಗಿ ಪೀಠವನ್ನ ತ್ಯಾಗ ಮಾಡಿ ನಾಪತ್ತೆಯಾಗಿದ್ದರು. ಇದನ್ನೂ ಓದಿ:ಅಳವಂಡಿ ಪೀಠತ್ಯಾಗ ಪ್ರಕರಣ – ಸಾಮಾಜಿಕ ಜಾಲತಾಣದಲ್ಲಿ ಸ್ವಾಮೀಜಿ, ವಿದ್ಯಾರ್ಥಿನಿಯ ಫೋಟೋ ವೈರಲ್

    ಈ ಬಗ್ಗೆ ಮಠದ ಭಕ್ತರು ಹಾಗೂ ಜನರು ಪ್ರಶ್ನಿಸಿದಾಗ, ಸಿದ್ದಲಿಂಗ ಸ್ವಾಮೀಜಿಗಳು ವೈಯಕ್ತಿಕ ಕಾರಣಕ್ಕಾಗಿ ಪೀಠ ತ್ಯಾಗ ಮಾಡಿದ್ದಾರೆಂದು ಮಠದ ಆಡಳಿತ ಮಂಡಳಿ ಉತ್ತರಿಸಿ ಸುಮ್ಮನಾಗಿತ್ತು ಇದೀಗ ಮೂರು ತಿಂಗಳ ಬಳಿಕ ಸ್ವಾಮೀಜಿ ಹುಡಗಿಯೊಂದಿಗೆ ಪ್ರತ್ಯಕ್ಷವಾಗಿದ್ದಾರೆ. ಹುಡುಗಿಯೊಂದಿಗೆ ಸ್ವಾಮೀಜಿ ಹುಟ್ಟುಹಬ್ಬ ಆಚರಿಕೊಳ್ಳುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

  • ಪಾಕಿಸ್ತಾನ ವಿರುದ್ಧ ಬರೆದ ಶಿಕ್ಷಕನ ಹಾಡು ವೈರಲ್!

    ಪಾಕಿಸ್ತಾನ ವಿರುದ್ಧ ಬರೆದ ಶಿಕ್ಷಕನ ಹಾಡು ವೈರಲ್!

    ಕೊಪ್ಪಳ: ಗಡಿಯಲ್ಲಿ ಯುದ್ಧದ ಕಾರ್ಮೋಡ ಕವಿದಿರುವ ಹಿನ್ನೆಲೆ ಪಾಕ್ ವಿರುದ್ಧ ಶಿಕ್ಷಕರೊಬ್ಬರು ಬರೆದ ಹಾಡು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    ಭಾರತ-ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಈ ನಡುವೆ ಕೊಪ್ಪಳದ ಶಿಕ್ಷಕ ಹನುಮಂತಪ್ಪ ಕುರಿ ಪಾಕಿಸ್ತಾನದ ವಿರುದ್ಧ ಸ್ವತಃ ತಾವೇ ಹಾಡು ಬರೆದು ಹಾಡಿದ್ದಾರೆ. ಕೆಣಕಬೇಡಿ, ಕೆಣಕಬೇಡಿ ಪಾಕಿಗಳೆ. ಕೆಣಕಿ, ತಿಣುಕಬೇಡಿ ತಿರುಬೋಕಿಗಳೆ ಎಚ್ಚರ ಎಂದು ಶಿಕ್ಷಕ ಹಾಡಿದ್ದಾರೆ. ಈ ಹಾಡಿನ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರ ಮನ ಗೆದ್ದಿದೆ.

    ಒಟ್ಟು 3 ನಿಮಿಷ 42 ಸೆಕೆಂಡ್ ಇರುವ ಈ ಹಾಡಿನಲ್ಲಿ ಪಾಕಿಸ್ತಾನವನ್ನ ಶಿಕ್ಷಕ ಹನುಮಂತಪ್ಪ ಹಿಗ್ಗಾಮುಗ್ಗ ಜಾಡಿಸಿದ್ದಾರೆ. ಈ ಹಾಡಿನಲ್ಲಿ ನಮ್ಮ ಭಾರತದ ಸರ್ವಧರ್ಮದ ಸೌಹಾರ್ದತೆಯನ್ನು ಹಾಗೂ ಕೆಚ್ಚೆದೆಯ ವೀರರನ್ನು ಹನುಮಂತಪ್ಪ ಅಭಿಮಾನದಿಂದ ಹೊಗಳಿದ್ದಾರೆ. ಜವಾನರಿಗೆ ಜೈಕಾರ ಪಾಕಿ ದಿವಾನರಿಗೆ ಧಿಕ್ಕಾರ ಎಂದು ಆಕ್ರೋಶ ಹೊರಹಾಕಿದ್ದಾರೆ. ತಮ್ಮ ಹಾಡಿನಿಂದಲೇ ಶಿಕ್ಷಕ ಪಾಕ್‍ಗೆ ಚಾಟಿ ಏಟು ನೀಡಿ ಫುಲ್ ವೈರಲ್ ಆಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv