Tag: viral

  • ಆಸ್ಟ್ರೇಲಿಯಾ ವಿರುದ್ಧ ಭಾರತದ ಗೆಲುವು – ಸಂಭ್ರಮದಲ್ಲಿ ಅರೆಬೆತ್ತಲೆ ಫೋಟೋ ಹಂಚಿಕೊಂಡು ಪೂನಂ ಪಾಂಡೆ

    ಆಸ್ಟ್ರೇಲಿಯಾ ವಿರುದ್ಧ ಭಾರತದ ಗೆಲುವು – ಸಂಭ್ರಮದಲ್ಲಿ ಅರೆಬೆತ್ತಲೆ ಫೋಟೋ ಹಂಚಿಕೊಂಡು ಪೂನಂ ಪಾಂಡೆ

    ಮುಂಬೈ: ಬಾಲಿವುಡ್ ಹಾಟ್ ಬೆಡಗಿ ಪೂನಂ ಪಾಂಡೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟಿ. ವಿಶ್ವಕಪ್‍ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಗೆದ್ದ ನಂತರದಲ್ಲಿ ತನ್ನ ಅರೆಬೆತ್ತಲೆ ಫೋಟೋ ಹಾಕಿದ್ದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ವಿಶ್ವಕಪ್ ಟೂರ್ನಿಯಲ್ಲಿ ಭಾರತ ತನ್ನ ಎರಡನೇ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಆಡಿತ್ತು. ಆ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ದಾಖಲಿಸಿದ್ದು ಈ ಸಂಭ್ರಮ ಆಚರಣೆಗೆ ಬಾಲಿವುಡ್ ನಟಿ ಪೂನಂ ಪಾಂಡೆ ಬೆತ್ತಲಾಗಿರುವ ಫೋಟೋ ತನ್ನ ಇನ್‍ಸ್ಟಾಗ್ರಾಮ್‍ನಲ್ಲಿ ಹಾಕಿ ಸಂಭ್ರಮ ಪಟ್ಟಿದ್ದಾರೆ.

    ಲಂಡನ್‍ನಲ್ಲಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ 36 ರನ್ ಗಳಿಗೆ ಭರ್ಜರಿ ಗೆಲುವು ದಾಖಲಿಸಿತ್ತು. ಇದು ನಿಜಕ್ಕೂ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂಭ್ರಮ ದಿನವಾಗಿತ್ತು. ಹಾಗೆಯೆ ಪೂನಂ ಪಾಂಡೆ ಸಹ 2019ರ ವಿಶ್ವಕಪ್ ಎಂಬ ಹ್ಯಾಶ್‍ಟ್ಯಾಗ್ ಬಳಸಿ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.

    https://www.instagram.com/p/Byf59EoAQO-/?utm_source=ig_web_copy_link

    ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಆಡಿದ ಎರಡು ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. ಇನ್ನು ಜೂನ್ 13ರಂದು ನ್ಯೂಜಿಲ್ಯಾಂಡ್ ವಿರುದ್ಧ ಟೀಂ ಇಂಡಿಯಾ ಸೆಣೆಸಾಡಲಿದೆ.

  • ಬಾಲಿಯ ಕಡಲ ಕಿನಾರೆಯಲ್ಲಿ ವಿದ್ಯಾ ಬಾಲನ್ ಹಾಟ್ ಪೋಸ್

    ಬಾಲಿಯ ಕಡಲ ಕಿನಾರೆಯಲ್ಲಿ ವಿದ್ಯಾ ಬಾಲನ್ ಹಾಟ್ ಪೋಸ್

    ಬಾಲಿ: ಸದ್ಯ ಸಿನಿಮಾದಿಂದ ದೂರವಿರುವ ಬಾಲಿವುಡ್ ನಟಿ ವಿದ್ಯಾ ಬಾಲನ್ ತಮ್ಮ ಅಮೂಲ್ಯ ಸಮಯವನ್ನು ಕುಟುಂಬ ಹಾಗೂ ಸ್ನೇಹಿತರ ಜೊತೆ ಕಳೆಯುತ್ತಿದ್ದಾರೆ. ಬಾಲಿಯಲ್ಲಿ ವಿದ್ಯಾ ಸ್ನೇಹಿತರ ಜೊತೆ ಹಾಲಿಡೇ ಎಂಜಾಯ್ ಮಾಡುತ್ತಿರುವ ಬೋಲ್ಡ್ ಲುಕ್ ಫೋಟೋಗಳನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ.

    ವಿದ್ಯಾ ಬಾಲನ್ ಪೋಸ್ಟ್ ಮಾಡಿರುವ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಕಡಲ ಕಿನಾರೆಯಲ್ಲಿ ಎಂಜಾಯ್ ಮಾಡ್ತಿರುವ ಫೋಟೋಗಳನ್ನು ಹಾಕಿ, ತಮ್ಮ ಸ್ನೇಹಿತರನ್ನು ಟ್ಯಾಗ್ ಮಾಡಿ ಒಳ್ಳೆಯ ಕ್ಯಾಂಡಿಡ್ ಫೋಟೋಗಳಿಗೆ ಧನ್ಯವಾದ. ಐ ಲವ್ ಮೈ ಡ್ರೆಸ್ ಎಂದು ಬರೆದು ವಿದ್ಯಾ ಪೋಸ್ಟ್ ಮಾಡಿದ್ದಾರೆ.

    ಈ ಫೋಟೋಗಳಲ್ಲಿ ವಿದ್ಯಾ ಲಾಂಗ್ ಡ್ರೆಸ್‍ನಲ್ಲಿ ಸಖತ್ ಹಾಟಾಗಿ ಕಾಣಿಸಿಕೊಂಡಿದ್ದು, ಸುಂದರ ಸ್ಥಳದಲ್ಲಿ ವಿದ್ಯಾ ಅವರ ಬೋಲ್ಡ್ ಲುಕ್‍ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಇತ್ತೀಚಿಗೆ ಹೆಚ್ಚಾಗಿ ಕಾಣಿಸಿಕೊಳ್ಳದ ವಿದ್ಯಾರನ್ನು ಹಾಟ್ ಲುಕ್‍ನಲ್ಲಿ ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ.

    ಬಾಲಿವುಡ್‍ನ ಅನೇಕ ಕಲಾವಿದರು ವಿದ್ಯಾ ಫೋಟೋಗೆ ಪ್ರತಿಕ್ರಿಯೆ ನೀಡಿದ್ದಾರೆ. ಸೋನಾಕ್ಷಿ ಸಿನ್ಹಾ ಪ್ರತಿಕ್ರಿಯಿಸಿ `ನನ್ನನ್ನು ಯಾಕೆ ನಿಮ್ಮ ಜೊತೆ ಕರೆದುಕೊಂದು ಹೋಗಿಲ್ಲಾ’ ಎಂದು ಪ್ರಶ್ನಿಸಿದರೆ, ಪ್ರಿಯಾಂಕ ಚೋಪ್ರಾ `ಸ್ಟನ್ನರ್’ ಎಂದು, ಏಕ್ತಾ ಕಪೂರ್ `ಗಾರ್ಜಿಯ್ಸ್’ ಎಂದು ಕಮೆಂಟ್ ಮಾಡಿದ್ದಾರೆ. ಅಲ್ಲದೆ ವಿದ್ಯಾ ಅವರು ಈ ಫೋಟೋಗಳನ್ನು ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ 1 ಲಕ್ಷಕ್ಕಿಂತಲೂ ಹೆಚ್ಚು ಲೈಕ್ಸ್ ಸಿಕ್ಕಿದೆ.

    https://www.instagram.com/p/Byjcgc2nVUf/?utm_source=ig_embed

    ಇತ್ತೀಚಿಗೆ ವಿದ್ಯಾ ತಮ್ಮ ಮೊದಲ ಸಿನಿಮಾ ಪರಿನಿತಾ ತೆರೆಕಂಡು 14 ವರ್ಷಗಳ ಕಳೆದಿದೆ ಎಂದು ಸಂಭ್ರಮಾಚರಣೆ ಮಾಡಿದ್ದರು. ಅಲ್ಲದೆ ಅದೇ ವರ್ಷದ ಫಿಲಂ ಫೇರ್ ಅವಾರ್ಡ್ ಕಾರ್ಯಕ್ರಮದಲ್ಲಿ ಅವರು ಉತ್ತಮ ನಟಿ ಪ್ರಶಸ್ತಿ ಗಳಿಸಿದ್ದರು. ಆ ಖುಷಿಯನ್ನು ನೆನೆದು ಅವರು ಪರಿನಿತಾ ಚಿತ್ರದ ಶೂಟಿಂಗ್ ವೇಳೆ ನಡೆದ ಕೆಲ ಫನ್ನಿ ದೃಶ್ಯಗಳ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.

    https://www.instagram.com/p/ByiATi3ncES/

  • ಬೆಂಗ್ಳೂರಿನಲ್ಲಿ ಲವರ್ಸ್ ಡೇಂಜರಸ್ ವೀಲ್ಹಿಂಗ್- ವಿಡಿಯೋ ವೈರಲ್

    ಬೆಂಗ್ಳೂರಿನಲ್ಲಿ ಲವರ್ಸ್ ಡೇಂಜರಸ್ ವೀಲ್ಹಿಂಗ್- ವಿಡಿಯೋ ವೈರಲ್

    ಬೆಂಗಳೂರು: ಲವರ್ ಬೈಕ್‍ನಲ್ಲಿ ತಬ್ಬಿಕೊಂಡು ಜಾಲಿ ರೈಡ್ ಮಾಡೋದು ಕಾಮನ್. ಆದ್ರೆ ಬೆಂಗಳೂರು ಹೊರವಲಯದಲ್ಲಿ ಯುವಕನೊಬ್ಬ ತನ್ನ ಪ್ರೇಯಸಿಯನ್ನು ಸ್ಕೂಟಿ ಹಿಂದೆ ಕೂರಿಸಿಕೊಂಡು ಅಪಾಯಕಾರಿ ವಿಲ್ಹಿಂಗ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

    ಹೌದು. ಏನೋ ಸಿನಿಮಾಗಳಲ್ಲಿ ತೋರಿಸುವ ಹಾಗೇ ಬೈಕ್‍ನಲ್ಲಿ ಸ್ಟಂಟ್ಸ್ ಗಳನ್ನು ಮಾಡಲು ಹೋಗಿ ಆಸ್ಪತ್ರೆ ಸೇರಿದವರ ಸಂಖ್ಯೆಯೇ ಹೆಚ್ಚು. ಅಲ್ಲದೆ ವಿಲ್ಹಿಂಗ್, ಸ್ಟಂಟ್ಸ್ ಗಳನ್ನು ಮಾಡಿ ಬಹಳಷ್ಟು ಮಂದಿ ಯುವಕರು ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ ಈ ವಿಲ್ಹಿಂಗ್, ಸ್ಟಂಟ್ಸ್ ಗಳನ್ನು ರೋಡ್‍ಗಳಲ್ಲಿ ಮಾಡಬೇಡಿ ಎಂದು ಎಷ್ಟು ಸಾರಿ ಸಂಚಾರಿ ಪೊಲೀಸರು ಹೇಳಿದರೂ ಯುವಕರು ಕ್ಯಾರೆ ಅಂತಿಲ್ಲ. ಇದಕ್ಕೆ ದೇವನಹಳ್ಳಿ ರಸ್ತೆಯಲ್ಲಿ ವಿಲ್ಹಿಂಗ್ ಮಾಡಿದ್ದ ಲವರ್ಸ್ ವಿಡಿಯೋ ತಾಜಾ ಉದಾಹರಣೆಯಾಗಿದೆ.

    ಓರ್ವ ಯುವಕ ಸ್ಕೂಟಿ ಹಿಂದೆ ಪ್ರೇಯಸಿಯನ್ನು ಕೂರಿಸಿಕೊಂಡು ದೇವನಹಳ್ಳಿ ರಸ್ತೆಯಲ್ಲಿ ವಿಲ್ಹಿಂಗ್ ಮಾಡಿದ್ದಾನೆ. ಇದನ್ನು ಹಿಂದೆ ಬರುತಿದ್ದವರು ವಿಡಿಯೋ ಮಾಡಿದ್ದಾರೆ. ಅಷ್ಟೇ ಅಲ್ಲದೆ ಸಾಮಾಜಿಕ ಜಾಲತಾಣ ‘ಹಲೋ’ ಆ್ಯಪ್‍ನಲ್ಲಿ ಈ ವಿಡಿಯೋವನ್ನು ಯುವತಿಯೊಬ್ಬಳು ಪೋಸ್ಟ್ ಮಾಡಿದ್ದಾಳೆ. ಸೋನು ಎಂಬ ಅಕೌಂಟ್‍ನಿಂದ ವಿಡಿಯೋ ಅಪ್ಲೋಡ್ ಮಾಡಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಲ್ಹಿಂಗ್ ದೃಶ್ಯ ವೈರಲ್ ಆಗುತ್ತಿದೆ.

    ಟ್ರಾಫಿಕ್ ಪೊಲೀಸರು ಎಷ್ಟೇ ಈ ರೀತಿ ಅಪಾಯಕಾರಿ ವಿಲ್ಹಿಂಗ್‍ಗಳನ್ನ ಮಾಡಬೇಡಿ, ಅದು ನಿಮ್ಮ ಜೀವಕ್ಕೆ ಕುತ್ತು ಎಂದು ಜಾಗೃತಿ ಮೂಡಿಸಿದರು ಪುಂಡರು ಮಾತ್ರ ನಮ್ಮ ಬೈಕ್, ನಮ್ಮ ಜೀವ ನಿಮಗೇನು ಎಂದು ಸಂಚಾರಿ ನಿಯಮವನ್ನು ಉಲ್ಲಂಘನೆ ಮಾಡುತ್ತಲೇ ಇದ್ದಾರೆ.

    https://www.youtube.com/watch?v=6DX7fyJxZt8

  • ಸ್ವಚ್ಛ ಭಾರತ್ ಶೌಚಾಲಯದ ಟೈಲ್ಸ್ ಮೇಲೆ ಮಹಾತ್ಮ ಗಾಂಧಿ, ಅಶೋಕ ಚಕ್ರ

    ಸ್ವಚ್ಛ ಭಾರತ್ ಶೌಚಾಲಯದ ಟೈಲ್ಸ್ ಮೇಲೆ ಮಹಾತ್ಮ ಗಾಂಧಿ, ಅಶೋಕ ಚಕ್ರ

    ನವದೆಹಲಿ: ಗಾಂಧಿ ಜಯಂತಿಯಂದು ಆರಂಭಗೊಂಡಿದ್ದ ಸ್ವಚ್ಛಭಾರತ ಯೋಜನೆ ಅಡಿಯಲ್ಲಿ ನಿರ್ಮಾಣ ಮಾಡಲಾಗಿದ್ದ ಶೌಚಾಲಯದಲ್ಲಿ ಗಾಂಧೀಜಿ ಮತ್ತು ಅಶೋಕ ಚಕ್ರದ ಚಿತ್ರಗಳುಳ್ಳ ಟೈಲ್ಸ್ ಗಳನ್ನು ಬಳಸಿ ಅವಮಾನ ಮಾಡಲಾಗಿದೆ.

    ಉತ್ತರ ಪ್ರದೇಶದ ಬುಲಂದ್ ಶಹರ್ ಜಿಲ್ಲೆಯಲ್ಲಿ ಸ್ವಚ್ಛ ಭಾರತ ಯೋಜನೆಯ ಅಭಿಯಾನದ ಅಡಿ ನಿರ್ಮಿಸಲಾದ ಶೌಚಾಲಯದ ಬಗ್ಗೆ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದು, ಪೂಜ್ಯ ಗಾಂಧೀಜಿ ಅವರ ಭಾವಚಿತ್ರವುಳ್ಳ ಟೈಲ್ಸ್ ಗಳನ್ನು ಬಳಸಿ ಶೌಚಾಲಯ ನಿರ್ಮಿಸಿರುವುದು ತಪ್ಪು. ಈ ರೀತಿ ಮಾಡಿ ರಾಷ್ಟ್ರಪಿತ ಹಾಗೂ ಆಶೋಕ ಚಕ್ರಕ್ಕೆ ಅವಮಾನ ಮಾಡಲಾಗಿದೆ ಎಂದು ಸಾರ್ವಜನಿಕರು ಅಧಿಕಾರಿಗಳ ವಿರುದ್ಧ ಸಿಡಿದೆದ್ದಿದ್ದಾರೆ.

    ಸದ್ಯ ಈ ಶೌಚಾಲಯದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಲ್ಲದೆ ಈ ಬಗ್ಗೆ ಎಲ್ಲೆಡೆ ಬಾರೀ ವಿರೋಧ ವ್ಯಕ್ತವಾಗುತ್ತಿದೆ.

    ದಿಬಾಯ್ ತಹಸೀಲ್‍ನ ಇಚ್ಚವರಿ ಗ್ರಾಮದಲ್ಲಿ `ಸ್ವಚ್ಛ ಭಾರತ’ ಅಭಿಯಾನದಡಿ ಸುಮಾರು 508 ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಇವುಗಳಲ್ಲಿ 13 ಶೌಚಾಲಯಗಳಲ್ಲಿ ಗಾಂಧೀಜಿ ಹಾಗೂ ಅಶೋಕ ಚಕ್ರ ಚಿತ್ರವಿರುವ ಟೈಲ್ಸ್ ಗಳನ್ನು ನಿರ್ಮಾಣಕ್ಕೆ ಬಳಸಲಾಗಿದೆ. ಈಗಾಗಲೇ ಇದಕ್ಕೆ ಕಾರಣರಾದ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ. ಗ್ರಾಮದ ಸರಪಂಚ್ ವಿರುದ್ಧವೂ ಕ್ರಮಕೈಗೊಂಡಿದ್ದೇವೆ ಎಂದು ಜಿಲ್ಲಾ ಪಂಚಾಯತ್ ಅಧಿಕಾರಿ ಅಮರ್ಜಿತ್ ಸಿಂಗ್ ಹೇಳಿದ್ದಾರೆ.

    ವಾರದ ಹಿಂದೆಯೇ ಶೌಚಾಲಯಗಳನ್ನು ನಿರ್ಮಿಸಲು ಈ ಟೈಲ್ಸ್ ಗಳನ್ನು ಬಳಸಲಾಗಿದೆ. ಹಾಗೆಯೇ ಇದನ್ನು ಸ್ಥಳೀಯ ಮಾರುಕಟ್ಟೆಯಿಂದ ಖರೀದಿಸಲಾಗಿತ್ತು. ಆದರೆ ಈ ಬಗ್ಗೆ ನಮಗೆ ತಿಳಿಯುತ್ತಿದ್ದಂತೆ ನಾವು ಕ್ರಮ ಕೈಗೊಂಡಿದ್ದೇವೆ ಎಂದು ಜಿಲ್ಲಾಡಳಿತ ತಿಳಿಸಿದೆ.

    ಏಪ್ರಿಲ್‍ನಲ್ಲಿ ಜಟ್ವಾಡ ಗ್ರಾಮದಲ್ಲಿ ಸ್ವಚ್ಛ ಭಾರತ ಅಭಿಯಾನದಡಿ ನಿರ್ಮಿಸಲಾಗಿದ್ದ ಶೌಚಾಲಯಗಳಲ್ಲಿ ನೀರಿನ ವ್ಯವಸ್ಥೆ ಇಲ್ಲದೆ ಜನರು ಪರದಾಡುವಂತಾಗಿತ್ತು. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಹೀಗಾಗಿ ಜನರು ಮತ್ತೆ ಶೌಚಕ್ಕಾಗಿ ಬಯಲುಗಳಿಗೆ ಹೋಗಲು ಶುರುಮಾಡಿದ್ದಾರೆ.

    ಈ ಪ್ರದೇಶಗಳಲ್ಲಿ ವಾಸಿಸುವವರು ದಿನ ಕೂಲಿ ಕಾರ್ಮಿಕರು. ಹೀಗಾಗಿ ಪ್ರತಿನಿತ್ಯ ಈ ಶೌಚಾಲಯಗಳಿಗೆ ಹಣ ನೀಡಿ ಹೋಗಲು ನಮಗೆ ಸಾಧ್ಯವಿಲ್ಲ, ಅದಕ್ಕೆ ಬಯಲುಗಳಿಗೆ ಹೋಗುತ್ತೇವೆ ಎಂದು ಜನರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

  • ಮೌತ್ ಪರ್ಸ್ ವಿಡಿಯೋ ನೋಡಿ ದಂಗಾದ ನೆಟ್ಟಿಗರು

    ಮೌತ್ ಪರ್ಸ್ ವಿಡಿಯೋ ನೋಡಿ ದಂಗಾದ ನೆಟ್ಟಿಗರು

    ಟೋಕಿಯೋ: ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿ ದಿನವು ಹಲವಾರು ವಿಚಿತ್ರ ವಿಷಯಗಳು, ವಿಡಿಯೋ ಹಾಗೂ ಫೋಟೋಗಳು ವೈರಲ್ ಆಗುತ್ತಲೇ ಇರುತ್ತವೆ. ಅದೇ ಸಾಲಿಗೆ ಸದ್ಯ ಮನುಷ್ಯನ ಬಾಯಿ ಆಕಾರದ ನಾಣ್ಯ ಸಂಗ್ರಹಿಸುವ ಮೌತ್ ಪರ್ಸ್ ಸೇರಿಕೊಂಡಿದೆ.

    ಜಪಾನ್ ಮೂಲದ ಡಿಜೆಯೊಬ್ಬರು ಈ ವಿಚಿತ್ರ ಪರ್ಸ್ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಈ ಪರ್ಸ್ ವಿಶೇಷತೆ ಏನೆಂದರೆ ಇದರ ಆಕಾರ. ಹೌದು. ಮನುಷ್ಯನ ಬಾಯಿ ಆಕಾರದಲ್ಲಿ ಈ ಪರ್ಸ್ ವಿನ್ಯಾಸಗೊಂಡಿದೆ. ಪರ್ಸ್ ಗೆ ತುಟಿ, ಹಲ್ಲು ಕೂಡ ಇದೆ. ಇದನ್ನು ನೋಡಿದರೆ ನಿಜವಾದ ಮನುಷ್ಯನ ಬಾಯಿಯೇ ಇರಬೇಕು ಎನಿಸುತ್ತದೆ. ಈ ವಿಚಿತ್ರ ಪರ್ಸ್ ವಿಡಿಯೋ ಸದ್ಯ ಎಲ್ಲೆಡೆ ವೈರಲ್ ಆಗಿದ್ದು, ಬರೋಬ್ಬರಿ 13 ಮಿಲಿಯನ್‍ಗೂ ಅಧಿಕ (1 ಕೋಟಿ 30 ಲಕ್ಷಕ್ಕೂ ಹೆಚ್ಚು) ಮಂದಿ ವೀಕ್ಷಿಸಿದ್ದಾರೆ.

    ವಿಡಿಯೋವನ್ನು ನೋಡಿದರೆ ನಿಜಕ್ಕೂ ವಿಚಿತ್ರ ಅನಿಸುತ್ತೆ. ಪರ್ಸ್‍ಗೆ ಇರುವ ತುಟಿಯನ್ನು ತೆರೆದು, ಅದರೊಳಗೆ ನಾಣ್ಯ ಹಾಕುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಈ ಪರ್ಸ್ ಬರೀ ಹೊರಗಿಂದ ಮಾತ್ರ ಬಾಯಿ ಆಕಾರದಲ್ಲಿಲ್ಲ. ಇದರ ಒಳಗೆ ಕೂಡ ಬಾಯಿ ಒಳಗೆ ಹೇಗಿರುತ್ತದೆಯೇ ಹಾಗೆಯೇ ವಿನ್ಯಾಸ ಮಾಡಲಾಗಿದೆ.

    https://twitter.com/44doooo/status/1134776852784877569

    ಈ ವಿಡಿಯೋ ನೋಡಿದ ನೆಟ್ಟಿಗರು ದಂಗಾಗಿದ್ದಾರೆ. ಅಲ್ಲದೆ ಕೆಲವರು ಇದು ನೋಡಿದರೆ ಅಸಹ್ಯವಾಗುತ್ತದೆ ಎಂದು ಮೂಗು ಮುರಿದಿದ್ದಾರೆ. ಅದೇನೇಯಾಗಲಿ ವಿಚಿತ್ರವಾಗಿದ್ದರೂ ಕೂಡ ಈ ಪರ್ಸ್ ಸದ್ಯ ಬಾರೀ ಚರ್ಚೆಯಲ್ಲಿದೆ.

  • ರಾಯಲ್ ಲುಕ್‍ನಲ್ಲಿ ರಾಕಿ ಭಾಯ್

    ರಾಯಲ್ ಲುಕ್‍ನಲ್ಲಿ ರಾಕಿ ಭಾಯ್

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಸದ್ಯಕ್ಕೆ ‘ಕೆಜಿಎಫ್-2’ ಸಿನಿಮಾಗಾಗಿ ವರ್ಕೌಟ್ ಮಾಡುತ್ತಿದ್ದು, ಇದೀಗ ರಾಕಿಭಾಯ್ ಯಶ್ ಅವರ ಹೊಸ ಲುಕ್‍ನ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

    ಫೋಟೋದಲ್ಲಿ ಯಶ್ ಉದ್ದ ಕೂದಲು ಮತ್ತು ಗಡ್ಡ ಬಿಟ್ಟಿದ್ದು, 90ರ ದಶಕದ ರಾಯಲ್ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಚೇರ್ ಮೇಲೆ ಕುಳಿತು ಕೈಯಲ್ಲಿ ಕೋಲಿನ ಸ್ಟಿಕ್ ಹಿಡಿದುಕೊಂಡಿದ್ದಾರೆ. ಯಶ್ ಅವರ ನ್ಯೂ ಲುಕ್‍ಗೆ ಅಭಿಮಾನಿಗಳು ಫಿದಾ ಆಗಿದ್ದು, ಇದು ಯಾವ ಸಿನಿಮಾದ ಲುಕ್ ಎಂದು ತಲೆಕೆಡಿಸಿಕೊಳ್ಳುತ್ತಿದ್ದಾರೆ.

    ಈ ಫೋಟೋ ಯಾವ ಸಿನಿಮಾದ್ದು ಅಲ್ಲ. ಬದಲಾಗಿ ಜಾಹೀರಾತಿನ ಫೋಟೋಶೂಟ್‍ಗೆ ಯಶ್ ಈ ರೀತಿ ಪೋಸ್ ಕೊಟ್ಟಿದ್ದಾರೆ. ಯಶ್ ‘ಕೆಜಿಎಫ್’ ಸಿನಿಮಾದಲ್ಲಿ ಉದ್ದ ಕೂದಲು ಮತ್ತು ದಾಡಿ ಬಿಟ್ಟಿದ್ದರು. ‘ಪಾರ್ಟ್ 2’ ನಲ್ಲೂ ಅದೇ ಲುಕ್‍ನಲ್ಲಿ ಯಶ್ ಮಿಂಚಲಿದ್ದಾರೆ.

    ಸದ್ಯಕ್ಕೆ ನಟ ಯಶ್ ಇದೇ ಜೂನ್ 6 ರಂದು ‘ಕೆಜಿಎಫ್-2’ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಮೊದಲಿಗೆ ಮೈಸೂರಿನಲ್ಲಿ ನಡೆಯುವ ಶೂಟಿಂಗ್‍ನಲ್ಲಿ ಪಾಲ್ಗೊಳ್ಳಲಿದ್ದಾರೆ.

  • ಹಾವನ್ನೇ ಕಚ್ಚಿ ಕಚ್ಚಿ ತಿಂದ ಅಳಿಲು- ಫೋಟೋ ವೈರಲ್

    ಹಾವನ್ನೇ ಕಚ್ಚಿ ಕಚ್ಚಿ ತಿಂದ ಅಳಿಲು- ಫೋಟೋ ವೈರಲ್

    ವಾಷಿಂಗ್ಟನ್: ಒಂದು ಹಾವು ಹಾಗೂ ಅಳಿಲಿನ ಮಧ್ಯೆ ಮುಖಾಮುಖಿಯಾದರೆ ಏನಾಗುತ್ತೆ? ಸಾಮಾನ್ಯವಾಗಿ ಅಳಿಲು ಇಹಲೋಕ ತ್ಯಜಿಸುತ್ತೆ. ಆದರೆ ಯುಎಸ್‍ಎನಲ್ಲಿ ಒಂದು ಅಚ್ಚರಿ ನಡೆದಿದೆ. ಇಲ್ಲಿ ಅಳಿಲೊಂದು ಹಾವನ್ನು ತಿಂದು ಸದ್ಯ ಸಖತ್ ಸುದ್ದಿಯಲ್ಲಿದೆ.

    ಹೌದು. ಹೀಗೆ ಹಾವೊಂದನ್ನು ಅಳಿಲು ಹಿಡುದು ತಿನ್ನುತ್ತಿರುವ ಫೋಟೋವೊಂದನ್ನು ಅಮೆರಿಕದ ನ್ಯಾಷನಲ್ ಪಾರ್ಕ್ ಸರ್ವಿಸ್ ತನ್ನ ಅಧಿಕೃತ ಫೇಸ್‍ಬುಕ್ ಖಾತೆಯಲ್ಲಿ ಅಪ್ಲೋಡ್ ಮಾಡಿದೆ. ಹಾಗೆಯೇ ಈ ಫೋಟೋವನ್ನು ಗಡಾಲ್ಪೆ ಶಿಖರದ ನ್ಯಾಷನಲ್ ಪಾರ್ಕ್ ನಲ್ಲಿ ಸೆರೆ ಹಿಡಿದಿದ್ದು ಅಲ್ಲಿನ ಅಳಿಲುಗಳು ಸಾಧಾರಣವಾಗಿ ಸಸ್ಯವನ್ನೇ ಸೇವಿಸುತ್ತವೆ. ಹಣ್ಣು, ಒಣ ಹಣ್ಣು ಇತ್ಯಾದಿ ಹೀಗೆ. ಆದರೆ, ಹಕ್ಕಿಯ ಮೊಟ್ಟೆ, ಹಲ್ಲಿ ಹಾಗೂ ಹಾವನ್ನು ಕೂಡ ಅಳಿಲುಗಳು ತಿನ್ನುತ್ತವೆ ಎಂಬುದು ಗೊತ್ತಾ? ಅಷ್ಟೇ ಅಲ್ಲದೆ ಈ ಫೊಟೋವನ್ನು ಕ್ಲಿಕ್ಕಿಸಿದ ಕೆಲ ಸಮಯದಲ್ಲೇ ಅಳಿಲು ಹಾವನ್ನು ಇಡಿಯಾಗಿ ತಿಂದು, ಕೊನೆಯದಾಗಿ ಎರಡು ಇಂಚಷ್ಟೇ ಉಳಿಸಿತ್ತು ಎಂದು ಫೋಟೋಗೆ ಕ್ಯಾಪ್ಷನ್ ಕೂಡ ಬರೆಯಲಾಗಿದೆ.

    https://www.facebook.com/nationalparkservice/photos/a.10151984491216389/10156047373616389

    ಹಫಿಂಗ್ಟನ್ ಪೋಸ್ಟ್ ಪ್ರಕಾರ, ಈ ಫೋಟೋ ಹತ್ತು ವರ್ಷದಷ್ಟು ಹಳೆಯದು. ಉದ್ಯಾನದ ರೇಂಜರ್ ವಿಲಿಯಂ ಲೆಗೆಟ್ 2009ರಲ್ಲಿ ಈ ಸೆರೆ ಹಿಡಿದ ಫೋಟೋವನ್ನು ಸೆರೆಹಿಡಿದಿದ್ದರು. ಆದರೆ ಮೇ 10ರಂದು ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ. ಹಾವನ್ನು ನೋಡಿದ ಮೇಲೆ ಸ್ವರಕ್ಷಣೆಗೆ ಹೀಗೆ ಮಾಡಿದೆ ಎಂದು ಅಮೆರಿಕದ ನ್ಯಾಷನಲ್ ಪಾರ್ಕ್ ಸರ್ವೀಸ್ ಹೇಳಿದೆ.

    ಇಲ್ಲಿಯರೆಗೆ ಈ ಫೋಟೋವನ್ನು ಸುಮಾರು 3 ಸಾವಿರಕ್ಕೂ ಅಧಿಕ ಬಾರಿ ಷೇರ್ ಮಾಡಿದ್ದು, 7 ಸಾವಿರಕ್ಕೂ ಅಧೀಕ ಮಂದಿ ರಿಯಾಕ್ಟ್ ಮಾಡಿದ್ದಾರೆ. ತುಂಬಾ ಹಳೆಯ ಫೋಟೋವಾಗಿದ್ದರೂ ಈಗ ಇದು ನೆಟ್ಟಿಗರನ್ನು ಅಚ್ಚರಿಗೊಳಿಸುತ್ತಿದೆ.

  • ಕಾರಿಗೆ ಸಗಣಿ ಲೇಪನ – ಮಾಲಕಿಯ ಉಪಾಯಕ್ಕೆ ನೆಟ್ಟಿಗರಿಂದ ಮೆಚ್ಚುಗೆ

    ಕಾರಿಗೆ ಸಗಣಿ ಲೇಪನ – ಮಾಲಕಿಯ ಉಪಾಯಕ್ಕೆ ನೆಟ್ಟಿಗರಿಂದ ಮೆಚ್ಚುಗೆ

    ಅಹಮದಾಬಾದ್: ಇತ್ತಿಚಿಗೆ ಸಾಮಾಜಿಕ ಜಾಲತಾಣದಲ್ಲಿ ಸಗಣಿ ಹಚ್ಚಿದ ಕಾರೊಂದು ಭಾರಿ ಸುದ್ದಿಯಾಗಿತ್ತು. ಈಗ ಆ ಕಾರಿನ ಮಾಲಕಿ ಸಿಕ್ಕಿದ್ದು, ಯಾಕೆ ಸಗಣಿ ಹಚ್ಚಿದ್ದೇನೆ ಎನ್ನುವ ವಿಚಾರವನ್ನು ಬಹಿರಂಗ ಮಾಡಿದ್ದಾರೆ.

    ಅಹಮದಾಬಾದ್‍ನ ಸೀಜಾಲ್ ಷಾ ತನ್ನ ಟೊಯೋಟಾ ಆಲ್ಟಿಸ್ ಕಾರಿನ ಎಲ್ಲಾ ಹೊರ ಭಾಗಗಳಿಗೂ ಸಗಣಿಯ ಲೇಪನ ಮಾಡಿದ್ದರು. ಇದನ್ನು ರೂಪೇಶ್ ಗೌರಂಗಾ ದಾಸ್ ಎಂಬುವವರು ಫೋಟೋ ತೆಗೆದು ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

    ಈ ಬಾರಿ ಬಿಸಿಲಿನ ತಾಪಮಾನ ಹೆಚ್ಚಾಗಿದ್ದು ಜನರು ಬಿರು ಬಿಸಲಿನಿಂದ ಪಾರಾಗಲು ನಾನಾ ರೀತಿಯ ಸರ್ಕಸ್ ಮಾಡುತ್ತಿದ್ದಾರೆ. ಇದಕ್ಕೆ ಸೀಜಾಲ್ ಷಾ ತಮ್ಮ ಕಾರನ್ನು ತಂಪಾಗಿ ಇಡಲು ಹಸುವಿನ ಸಗಣಿಯನ್ನು ಕಾರಿನ ಹೊರಭಾಗಕ್ಕೆ ಲೇಪನ ಮಾಡಿದ್ದಾರೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಸೀಜಾಲ್ ಷಾ, “ಈ ರೀತಿ ಸಗಣಿ ಲೇಪನ ಮಾಡುವುದರಿಂದ ನನ್ನ ಕಾರು ತಂಪಾಗಿ ಇರುತ್ತದೆ. ಜೊತೆಗೆ ಪರಿಸರ ಮಾಲಿನ್ಯವನ್ನು ತಡೆಗಟ್ಟಲು ಸಹಾಯವಾಗುತ್ತದೆ. ಕಾರಿನಲ್ಲಿ ಎಸಿ ಬಳಸುವುದರಿಂದ ಹಾನಿಕಾರಕ ಅನಿಲಗಳು ಬಿಡುಗಡೆಯಾಗಿ ಪರಿಸರ ಮಾಲಿನ್ಯವಾಗುತ್ತದೆ. ಅದಕ್ಕೆ ನಾನು ಕಾರನ್ನು ಚಲಿಸುವಾಗ ಎಸಿಯನ್ನು ಹಾಕಿಕೊಳ್ಳುವುದಿಲ್ಲ” ಎಂದು ಹೇಳಿದ್ದಾರೆ.

    ಬಿಸಿಲಿನಿಂದ ತಪ್ಪಿಸಿಕೊಳ್ಳಲು ನಾನು ನನ್ನ ಮನೆಯ ಗೋಡೆಗಳಿಗೆ ಮತ್ತು ನೆಲಗಳಿಗೆ ಸಗಣಿ ಹಾಕಿಸುತ್ತೇನೆ. ಮನೆಯಲ್ಲಿ ತಂಪಾದ ವಾತಾವರಣ ನಿರ್ಮಾಣವಾದ ಹಿನ್ನೆಲೆಯಲ್ಲಿ ಕಾರಿಗೂ ಲೇಪನ ಮಾಡಿದರೆ ಹೇಗೆ ಎಂದು ಆಲೋಚಿಸಿದೆ. ಈ ಕಾರಣಕ್ಕೆ ನಾನು ಕಾರಿಗೂ ಸಗಣಿ ಮಾಡಿದೆ ಎಂದು ತಿಳಿಸಿದ್ದಾರೆ.

    ಸಗಣಿ ಹಚ್ಚಿದ ಕಾರಿನ ಫೋಟೋ ವೈರಲ್ ಆಗಿದ್ದು ನೆಟ್ಟಿಗರು ಮಾಲಕಿಯ ಐಡಿಯಾಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

  • ಮದುವೆ ಮನೆಯಲ್ಲಿ ಐಪಿಎಲ್ ಹವಾ – ಕುಣಿದು ಕುಪ್ಪಳಿಸಿದ ಅತಿಥಿಗಳು

    ಮದುವೆ ಮನೆಯಲ್ಲಿ ಐಪಿಎಲ್ ಹವಾ – ಕುಣಿದು ಕುಪ್ಪಳಿಸಿದ ಅತಿಥಿಗಳು

    ನವದೆಹಲಿ: ಮದುವೆ ಮನೆ ಎಂದರೆ ಅಲ್ಲಿ ವಧು – ವರರೇ ಆಕರ್ಷಣೆಯ ಕೇಂದ್ರ ಬಿಂದು ಆಗಿರುತ್ತಾರೆ. ಆದರೆ ಇಲ್ಲೊಂದು ಮದುವೆಯಲ್ಲಿ ಮನೆಯವರು ಮತ್ತು ಅತಿಥಿಗಳು ವಧು ವರರನ್ನು ನೋಡುವುದನ್ನು ಬಿಟ್ಟು ಐಪಿಎಲ್ ಫೈನಲ್ ನೋಡಿ ಕುಣಿದು ಕುಪ್ಪಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ಕಳೆದ ಭಾನುವಾರ ನಡೆದ ಐಪಿಎಲ್ 12 ರ ಅವೃತ್ತಿಯ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯವನ್ನು ಮದುವೆ ಮನೆಯಲ್ಲಿ ರಿಸೆಪ್ಷನ್ ನಡೆಯುತ್ತಿರುವಾಗ ದೊಡ್ಡ ಟಿವಿಯಲ್ಲಿ ಪ್ರಸಾರ ಮಾಡಲಾಗಿತ್ತು.

    ಕೊನೆಯ ಓವರಿನಲ್ಲಿ ಪಂದ್ಯ ತಿರುವು ಪಡೆದಕೊಂಡ ಕಾರಣ ಅತಿಥಿಗಳು ಕುತೂಹಲದಿಂದ ಪಂದ್ಯ ವೀಕ್ಷಿಸುತ್ತಿದ್ದರು. ಕೊನೆಯ ಎಸೆತದಲ್ಲಿ ಮುಂಬೈ ತಂಡ ಗೆದ್ದ ಕೂಡಲೇ ಅತಿಥಿಗಳು ಎದ್ದು ನಿಂತು ಗಟ್ಟಿ ಮೇಳದವರು ಬಾರಿಸಿದ ಸಂಗೀತಕ್ಕೆ ಕುಣಿದು ಕುಪ್ಪಳಿಸಿದ್ದಾರೆ.

  • ಮೃತಪಟ್ಟ 5 ತಿಂಗಳ ಬಳಿಕ ಫ್ಯಾಮಿಲಿ ಫೋಟೋದಲ್ಲಿ ಕಾಣಿಸಿಕೊಂಡ ತಾಯಿ!

    ಮೃತಪಟ್ಟ 5 ತಿಂಗಳ ಬಳಿಕ ಫ್ಯಾಮಿಲಿ ಫೋಟೋದಲ್ಲಿ ಕಾಣಿಸಿಕೊಂಡ ತಾಯಿ!

    ಮಲೇಷ್ಯಾ: ವ್ಯಕ್ತಿಯೊಬ್ಬರು ಮೃತಪಟ್ಟ ಬಳಿಕವೂ ಫೋಟೋಗಳಲ್ಲಿ ಕಾಣಿಸಿಕೊಂಡರೆ ನಂಬಲು ಅಸಾಧ್ಯ. ಆದರೆ ಮಲೇಷ್ಯಾ ಇಂತಹದೊಂದು ಘಟನೆ ನಡೆದಿದೆ. ಹೆರಿಗೆ ಸಮಯದಲ್ಲಿ ಮೃತಪಟ್ಟಿದ್ದ ತಾಯಿ 5 ತಿಂಗಳ ಬಳಿಕ ಫ್ಯಾಮಿಲಿ ಫೋಟೋದಲ್ಲಿ ಕಾಣಿಸಿಕೊಂಡಿದ್ದಾರೆ.

    ಹೌದು. ಇದೇನಪ್ಪ ಸಾವನ್ನಪ್ಪಿದವರು ಫೋಟೋದಲ್ಲಿ ಹೇಗೆ ಬಂದರು ಎಂದು ಅಚ್ಚರಿ ಆಗಬಹುದು, ಆದರೆ ತಂತ್ರಜ್ಞಾನದಿಂದ ಇದು ನಿಜವಾಗಿದೆ. ಮಲೇಷ್ಯಾದ ಮಹಿಳಾ ಫೋಟೋಗ್ರಾಫರ್ ಜಾರಾ ಹಲೀನಾ ಅವರ ಸೃಜನಶೀಲತೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರಶಂಸೆ ಪಡೆದಿದೆ.

    ಮಲೇಷ್ಯಾದ ಅಡೆಲಿನ್ ನೆಲ್ಡಾ ನಾಲ್ಕನೇ ಮಗುವಿಗೆ ತಾಯಿಯಾಗುವ ಸಂತಸದಲ್ಲಿದ್ದರು. ನಾಲ್ಕನೇ ಮಗು ಜನಿಸಿದ ಬಳಿಕ ಫ್ಯಾಮಿಲಿ ಫೋಟೋ ಶೂಟ್ ಮಾಡಿಸಬೇಕೆಂಬ ಆಸೆ ಹೊಂದಿದ್ದರು. ಆದರಿಂದ ಅವರು ಫೋಟೋಗ್ರಾಫರ್ ಜಾರಾರನ್ನು ಸಂಪರ್ಕಿಸಿ, ಡೆಲಿವರಿ ಬಳಿಕ ಫ್ಯಾಮಿಲಿ ಫೋಟೋಶೂಟ್ ಮಾಡಿಸಲು ನಿರ್ಧರಿಸಿದ್ದರು. ಆದರೆ ದುರಾದೃಷ್ಟವಶಾತ್ ಡೆಲಿವರಿ ವೇಳೆ ಅಡೆಲಿನಾ ಮೃತಪಟ್ಟಿದ್ದಾರೆ.

    ಅಡೆಲಿನ್ ಸಾವಿನಿಂದ ಆಕೆಯ ಕುಟುಂಬ ಸದಸ್ಯರು ಮಾತ್ರವಲ್ಲದೇ ಛಾಯಾಗ್ರಾಹಕಿ ಜಾರಾ ಕೂಡಾ ಬಹಳಷ್ಟು ದುಃಖಿತರಾಗಿದ್ದರು. ಅಲ್ಲದೇ ಅಡೆಲಿನ್ ಸಾವಿನಿಂದ ಆಕೆ ಕನಸಾಗಿದ್ದ ಫ್ಯಾಮಿಲಿ ಫೋಟೋಶೂಟ್ ಕೂಡಾ ಕನಸಾಗಿಯೇ ಉಳಿದಿತ್ತು. ಆದರೆ ಛಾಯಾಗ್ರಾಹಕಿ ಆ ಕನಸನ್ನ ನನಸು ಮಾಡಿದ್ದಾರೆ.

    ಅಡೆಲಿನ್ ಸಾವನ್ನಪ್ಪಿದ 5 ತಿಂಗಳಲ್ಲೇ ಫ್ಯಾಮಿಲಿ ಫೋಟೋಶೂಟ್ ಆಯೋಜಿಸಿದ ಜಾರಾ ತಂತ್ರಜ್ಞಾನವನ್ನು ಬಳಸಿ ಅಡೆಲಿನ್‍ರನ್ನು ಕೂಡಾ ಈ ಫೋಟೋಗಳಲ್ಲಿ ಕಾಣುವಂತೆ ಕ್ರಿಯೇಟಿವ್ ಎಡಿಟಿಂಗ್ ಮಾಡಿ ಬೇಷ್ ಅನ್ನಿಸಿಕೊಂಡಿದ್ದಾರೆ.

    ಸದ್ಯ ಈ ಫೋಟೋಶೂಟ್‍ನಲ್ಲಿ ತೆಗೆದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದ್ದು, ಬಹುತೇಕ ಎಲ್ಲಾ ಛಾಯಾಗ್ರಾಹಕರು ಜಾರಾರ ಈ ಪ್ರಯತ್ನಕ್ಕೆ ಫಿದಾ ಆಗಿದ್ದಾರೆ.