Tag: viral video

  • ಸನ್ನಿ ಲಿಯೋನ್‍ಗೆ ಬಟ್ಟೆ ತೊಡಿಸಿ ಸುಸ್ತಾದ ಆರ್ಮಿ ತಂಡ

    ಸನ್ನಿ ಲಿಯೋನ್‍ಗೆ ಬಟ್ಟೆ ತೊಡಿಸಿ ಸುಸ್ತಾದ ಆರ್ಮಿ ತಂಡ

    ಮುಂಬೈ: ಮಾದಕ ನಟಿ ಸನ್ನಿ ಲಿಯೋನ್ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಾಗುತ್ತಿರುತ್ತಾರೆ. ನಾನಾ ವಿಚಾರಕ್ಕೆ ಸುದ್ದಿಯಾಗುವ ಬೇಬಿ ಡಾಲ್ ಬಟ್ಟೆ ತೊಟ್ಟುಕೊಳ್ಳಲು ಕಷ್ಟ ಪಡುತ್ತಿರುವ ವೀಡಿಯೋ ಸಖತ್ ವೈರಲ್ ಆಗಿದೆ.

    ಸನ್ನಿ ಲಿಯೋನ್ ರಿಯಾಲಿಟಿ ಶೋವೊಂದರಲ್ಲಿ ನಿರೂಪಕಿಯಾಗಿ ಕಾಣಿಸಿಕೊಂಡಿದ್ದಾರೆ. ಬಾಲಿವುಡ್‍ನ ಜನಪ್ರಿಯ Splitsvilla ಶೋಗೆ ನಿರೂಪಕಿಯಾಗಿದ್ದಾರೆ. ಇದೀಗ ಈ ಕಾರ್ಯಕ್ರಮಕ್ಕೆ ತಯಾರಾಗುತ್ತಿರುವ ಹಿನ್ನಲೆಯಲ್ಲಿ ತನಗೆ ಕಾಸ್ಟ್ಯೂಮ್ ತೊಡಿಸಲು ಕಷ್ಟ ಪಟ್ಟ ತಂಡವೊಂದರ ಚಿತ್ರವನ್ನು ಸನ್ನಿ ಲಿಯೋನ್ ತಮ್ಮ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

     

    View this post on Instagram

     

    A post shared by Sunny Leone (@sunnyleone)

    ಸೆಲೆಬ್ರಿಟಿಗಳು ಯಾವುದಾದರು ಒಂದು ಕಾರ್ಯಕ್ರಮಕ್ಕೆ ಅತಿಥಿಯಾಗಿ ಹೋದಾಗ ಅಥವಾ ಭೇಟಿ ನೀಡಿದಾಗ ಅವರ ಚಂದವನ್ನು ಇಮ್ಮಡಿಗೊಳಿಸಲು ತಂಡವೊಂದಿರುತ್ತದೆ. ಅವರೇ ನಟಿ-ನಟರ ಮೇಕಪ್, ಹೇರ್ ಸ್ಟೈಲ್, ಕಾಸ್ಟ್ಯೂಮ್ ನೀಡಿ ಚಂದಕಾಣುವಂತೆ ಮಾಡುತ್ತಾರೆ. ಅದರಂತೆ ತಂಡವೊಂದು ಸನ್ನಿ ಲಿಯೋನ್ ಅವರು Splitsvilla ಕಾರ್ಯಕ್ರಮಕ್ಕೆ ಗೌನ್ ಧರಿಸಿ ಸಿದ್ಧಗೊಳಿಸುತ್ತಿದ್ದರು. ಆ ಸಮಯದಲ್ಲಿ ಬೆನ್ನಿನ ಭಾಗದಲ್ಲಿದ್ದ ಜಿಪ್ ಮೇಲೇರಿಸಲು ಆಗದೆ ಅವರ ಕಾಸ್ಟ್ಯೂಮ್ ತಂಡವೊಂದು ಹರಸಾಹಸಪಟ್ಟಿದೆ. ಅಂದಹಾಗೆಯೇ ತೆರೆ ಹಿಂದೆ ಸನ್ನಿ ರೆಡಿಯಾಗುತ್ತಿರುವ ದೃಶ್ಯ ಇದಾಗಿದ್ದು, ಈ ತಂಡವನ್ನು ಮಾದಕ ನಟಿ ಆರ್ಮಿ ಎಂದು ಕರೆದಿದ್ದಾರೆ.

     

    View this post on Instagram

     

    A post shared by Sunny Leone (@sunnyleone)

    ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಈ ವೀಡಿಯೋಗೆ ಗೌನ್ ಸರಿಯಾಗಿ ಕಾಣಿವಂತೆ ಮಾಡಲು ಆರ್ಮಿಯೇ ಬೇಕಾಗುತ್ತದೆ ಎಂದು ಅಡಿಬರಹ ನೀಡಿದ್ದಾರೆ. ಈ ವೀಡಿಯೋ ವೀಕ್ಷಿಸಿದ ಅಭಿಮಾನಿಗಳು ಬಗೆ ಬಗೆಯ ಕಾಮೆಂಟ್ ಬರೆದಿದ್ದಾರೆ. ಅದರಲ್ಲಿ ಕೆಲವರು ಕೊನೆಗೆ ಏನಾಯಿತು ಹೇಳಿ ಎಂದು ಸಖತ್ ಮಜಾವಗಿ ಕಮೆಂಟ್ ಮಾಡಿದ್ದಾರೆ.

  • ಮದುವೆ ಆಗೋಕೆ ಸ್ವಲ್ಪ ಟೈಮ್ ಕೊಡಿ: ಅರವಿಂದ್

    ಮದುವೆ ಆಗೋಕೆ ಸ್ವಲ್ಪ ಟೈಮ್ ಕೊಡಿ: ಅರವಿಂದ್

    ಬೆಂಗಳೂರು: ಬಿಗ್‍ಬಾಸ್ ರಿಯಾಲಿಟಿ ಶೋನಿಂದ ಎಲ್ಲರ ಮೆಚ್ಚುಗೆಗೆ ಪಾತ್ರವಾದ ಅರವಿಂದ್ ಒಂಟಿ ಮನೆಯಿಂದ ಆಚೆ ಬಂದ ಮೇಲೂ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಾಗುತ್ತಿದ್ದಾರೆ.

    ಬಿಗ್‍ಬಾಸ್ ಮನೆಯಿಂದ ಆಚೆ ಬರುತ್ತಿದ್ದಂತೆ ದಿವ್ಯಾ, ಅರವಿಂದ್ ಅವರು ಬಿಗ್‍ಬಾಸ್ ಮನೆಯಲ್ಲಿ ಕಳೆದಿರುವ ಕೆಲವು ಕ್ಯೂಟ್ ವೀಡಿಯೋಗಳು ಸಖತ್ ವೈರಲ್ ಆಗಿದ್ದವು. ಇದೀಗ ಅವರ ಕೆಲವು ಹೇಳಿಕೆಯ ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಮದುವೆ, ಸಿನಿಮಾ, ದಿವ್ಯಾ ಅವರ ಕುರಿತಾಗಿ ಅರವಿಂದ್ ಅವರಿಗೆ ಸಾಕಷ್ಟು ಪ್ರಶ್ನೆಗಳು ಎದುರಾಗುತ್ತಿವೆ. ಅರವಿಂದ್ ಕೊಟ್ಟಿರುವ ಉತ್ತರಗಳು ಮಾತ್ರ ಬುದ್ಧಿವಂತಿಕೆಯಿಂದ ಕೂಡಿದೆ.

    ಮನೆಯಲ್ಲಿರುವ 20 ಜನರ ಜೊತೆಗೂ ಉತ್ತಮ ಬಾಂಧವ್ಯ ಹೊಂದಿದ್ದ ಅರವಿಂದ್, ಜೋಡಿ ಟಾಸ್ಕ್ ನಂತರ ನಟಿ ದಿವ್ಯಾ ಉರುಡುಗ ಜೊತೆಯಾಗಿದ್ದರು. ಆಗಿನಿಂದ ಇಬ್ಬರ ನಡುವೆ ಒಂದು ಉತ್ತಮವಾದ ಸ್ನೇಹವಿತ್ತು. ಬಿಗ್‍ಬಾಸ್‍ನಲ್ಲಿ ಇಬ್ಬರು ಒಟ್ಟಿಗೆ ಇರುವ ಕೆಲವಷ್ಟು ಕ್ಯೂಟ್ ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದವು.

    ಬಿಗ್‍ಬಾಸ್ ಮನೆಯಿಂದ ಹೊರ ಬಂದ ನಂತರ ಸ್ಪರ್ಧಿಗಳು ಸೋಷಿಯಲ್ ಮೀಡಿಯಾದಲ್ಲಿ ಲೈವ್ ಚಾಟ್ ಮೂಲಕ ಅಭಿಮಾನಿಗಳ ಜೊತೆ ಹಾಗೂ ಬಿಗ್ ಬಾಸ್ ಸ್ಪರ್ಧಿಗಳು ಮಾತನಾಡುತ್ತಿದ್ದಾರೆ. ಪ್ರತಿ ಸಲ ಲೈವ್ ಬಂದಾಗಲೂ ಅರವಿಂದ್‍ಗೆ ದಿವ್ಯಾ ಕುರಿತಾಗಿ ಪ್ರಶ್ನೆಗಳು ಬಂದಿವೆ. ಅರವಿಂದ್ ನೀಡಿರುವ ಉತ್ತರಗಳು ಮಾತ್ರ ಸಖತ್ ವೈರಲ್ ಆಗುತ್ತಿವೆ.

    ಸಿನಿಮಾ, ಸೀರಿಯಲ್ ಅಥವಾ ವೆಬ್‍ಸಿರೀಸ್ ಯಾವುದೇ ಅವಕಾಶಗಳು ಸಿಕ್ಕರೂ ಕೂಡ ನಾನು ಬಳಸಿಕೊಳ್ಳಲು ಇಷ್ಟಪಡುತ್ತೇನೆ. ಸದ್ಯ ಗಾಡಿ ಓಡಿಸಲು ಆಗ್ತಿಲ್ಲ, ಫಿಟ್‍ನೆಸ್ ಮುಖ್ಯ, ಹೀಗಾಗಿ ನಾನು ತಯಾರಿ ನಡೆಸುತ್ತಿದ್ದೇನೆ. ಬಿಗ್‍ಬಾಸ್ ಯಾರಿಗೂ ಅನ್ಯಾಯ ಮಾಡಲ್ಲ ಎನ್ನುವ ನಂಬಿಕೆ ಇದೆ. ವಿನ್ನರ್ ಯಾರು ಎಂದು ಹೇಳುತ್ತಾರೆ.

    ದಿವ್ಯಾ ನನಗೆ ಲಕ್ಕಿ ಚಾರ್ಮ್…ಆಕೆ ಜೊತೆಗೆ ನಾನು ಒಂದು ಟಾಸ್ಕ್ ಕೂಡ ಸೋತಿಲ್ಲ. ಒಳ್ಳೆಯ ವ್ಯಕ್ತಿ ಹಾಗೂ ತುಂಬಾನೇ ಪಾಸಿಟಿವ್ ಆಗಿರುತ್ತಾರೆ. ಮನೆಯಲ್ಲಿದ್ದ ಎಲ್ಲಾ ಸ್ಪರ್ಧಿಗಳಿಗೂ ಕಾಂಪಿಟೇಷನ್ ಕೊಡುವ ಹುಡುಗಿ ಈಕೆ. ಇಬ್ಬರ ಸ್ನೇಹ ಹೀಗೆ ಮುಂದುವರಿದುಕೊಂಡು ಹೋಗಬೇಕು ಅಂದುಕೊಂಡಿರುವೆ. ನೋಡೋಣ ಹೇಗೆ ಏನು ಆಗುತ್ತದೆ ಎಂದು…ಮದುವೆ ಆಗೋಕೆ ಸ್ವಲ್ಪ ಟೈಮ್ ಕೊಡಿ ಎಂದ ಬಿಗ್ ಬಾಸ್ ಕೆಪಿ ಅರವಿಂದ್ ಹೇಳಿದ್ದಾರೆ

    ಅರವಿಂದ್, ದಿವ್ಯಾ ಜೋಡಿಯನ್ನು ಅಭಿಮಾನಿಗಳು ಮೆಚ್ಚಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಇಬ್ಬರ ಜೋಡಿ ಕುರಿತಾಗಿ ನೆಟ್ಟಿಗರು ತುಂಬಾ ಪ್ರೀತಿಯಿಂದ ಮಾತನಾಡಿಕೊಳ್ಳುತ್ತಿದ್ದಾರೆ.

  • ದಿವ್ಯಾ ಉರುಡುಗ ನನ್ನ ಲಕ್ಕಿ ಚಾರ್ಮ್: ಅರವಿಂದ್

    ದಿವ್ಯಾ ಉರುಡುಗ ನನ್ನ ಲಕ್ಕಿ ಚಾರ್ಮ್: ಅರವಿಂದ್

    ಬೆಂಗಳೂರು: ಬಿಗ್‍ಬಾಸ್ ಸ್ಪರ್ಧಿ ಅರವಿಂದ್ ಮನೆಯಿಂದ ಹೊರ ಬಂದ ನಂತರ ಹಲವು ಕಡೆ ಸಂದರ್ಶನ ನೀಡಿದ್ದಾರೆ. ಅವುಗಳಲ್ಲಿ ಬಹುತೇಕ ಸಂದರ್ಶನಗಳಲ್ಲಿ ಅರವಿಂದ್ ದಿವ್ಯಾಳನ್ನು ಹಾಡಿಹೋಗಳಿರುವ ವೀಡಿಯೋಗಳು ಸಖತ್ ವೈರಲ್ ಆಗಿವೆ.

    ಮನೆಯಲ್ಲಿರುವ 20 ಜನರ ಜೊತೆಗೂ ಉತ್ತಮ ಬಾಂಧವ್ಯ ಹೊಂದಿದ್ದ ಅರವಿಂದ್, ಜೋಡಿ ಟಾಸ್ಕ್ ನಂತರ ನಟಿ ದಿವ್ಯಾ ಉರುಡುಗ ಜೊತೆಯಾಗಿದ್ದರು. ಆಗಿನಿಂದ ಇಬ್ಬರ ನಡುವೆ ಒಂದು ಉತ್ತಮವಾದ ಸ್ನೇಹವಿತ್ತು. ಬಿಗ್‍ಬಾಸ್‍ನಲ್ಲಿ ಇಬ್ಬರು ಒಟ್ಟಿಗೆ ಇರುವ ಕೆಲವಷ್ಟು ಕ್ಯೂಟ್ ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದವು. ಆದರೆ ಇದೀಗ ಮನೆಯಿಂದ ಹೊರಬಂದ ಮೇಲೆ ಸಂದರ್ಶನ ವೀಡಿಯೋಗಳು ವೈರಲ್ ಆಗಿವೆ.

    ಬಿಗ್‍ಬಾಸ್ ಮನೆಯಿಂದ ಹೊರ ಬಂದ ನಂತರ ಸ್ಪರ್ಧಿಗಳು ಸೋಷಿಯಲ್ ಮೀಡಿಯಾದಲ್ಲಿ ಲೈವ್ ಚಾಟ್ ಮೂಲಕ ಅಭಿಮಾನಿಗಳ ಜೊತೆ ಹಾಗೂ ಬಿಗ್ ಬಾಸ್ ಸ್ಪರ್ಧಿಗಳು ಮಾತನಾಡುತ್ತಿದ್ದಾರೆ. ಪ್ರತಿ ಸಲ ಲೈವ್ ಬಂದಾಗಲೂ ಅರವಿಂದ್‍ಗೆ ದಿವ್ಯಾ ಕುರಿತಾಗಿ ಪ್ರಶ್ನೆಗಳು ಬಂದಿವೆ. ಅರವಿಂದ್ ನೀಡಿರುವ ಉತ್ತರಗಳು ಮಾತ್ರ ಸಖತ್ ವೈರಲ್ ಆಗುತ್ತಿವೆ.

    ದಿವ್ಯಾ ನನಗೆ ಲಕ್ಕಿ ಚಾರ್ಮ್…ಆಕೆ ಜೊತೆಗೆ ನಾನು ಒಂದು ಟಾಸ್ಕ್ ಕೂಡ ಸೋತಿಲ್ಲ. ಒಳ್ಳೆಯ ವ್ಯಕ್ತಿ ಹಾಗೂ ತುಂಬಾನೇ ಪಾಸಿಟಿವ್ ಆಗಿರುತ್ತಾರೆ. ಮನೆಯಲ್ಲಿದ್ದ ಎಲ್ಲಾ ಸ್ಪರ್ಧಿಗಳಿಗೂ ಕಾಂಪಿಟೇಷನ್ ಕೊಡುವ ಹುಡುಗಿ ಈಕೆ. ಇಬ್ಬರ ಸ್ನೇಹ ಹೀಗೆ ಮುಂದುವರಿದುಕೊಂಡು ಹೋಗಬೇಕು ಅಂದು ಕೊಂಡಿರುವೆ. ನೋಡೋಣ ಹೇಗೆ ಏನು ಆಗುತ್ತದೆ ಎಂದು… ನಮ್ಮನ್ನು ಜನ ಸ್ವೀಕರಿಸಿರುವ ರೀತಿ ನೋಡಿ ಶಾಕ್ ಆಗಿದೆ. ತುಂಬಾ ಸ್ಪೆಷಲ್ ಫೀಲ್ ಆಗುತ್ತಿದೆ. ಅದರಲ್ಲೂ ಆರ್ವಿಯಾ, ಆರ್ವಿ ಅಂತ ಹ್ಯಾಷ್‍ಟ್ಯಾಗ್ ಕ್ರಿಯೇಟ್ ಮಾಡಿದ್ದಾರೆ.ನಾನು 15 ವರ್ಷಗಳು ಡಾಕಾದಲ್ಲಿ ಮಾಡಿರುವ ಸಾಧನೆಯನ್ನು ಜನರು ಈಗ ಈ ಶೋ ಮೂಲಕ ಗುರುತಿಸುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಕೇವಲ 44 ಸಾವಿರ ಫಾಲೋವರ್ಸ್ ಇದ್ದರು ನಂಗೆ. ಇದೀಗ 2 ಲಕ್ಷ ಫಾಲೋವರ್ಸ್ ಆಗಿದ್ದಾರೆ ಎಂದು ಅರವಿಂದ್ ಹೇಳಿದ್ದಾರೆ.

    ಅರವಿಂದ್, ದಿವ್ಯಾ ಜೋಡಿಯನ್ನು ಅಭಿಮಾನಿಗಳು ಮೆಚ್ಚಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಇಬ್ಬರ ಜೋಡಿ ಕುರಿತಾಗಿ ನೆಟ್ಟಿಗರು ತುಂಬಾ ಪ್ರೀತಿಯಿಂದ ಮಾತನಾಡಿಕೊಳ್ಳುತ್ತಿದ್ದಾರೆ. ಸಿಕ್ಕರೆ ದಿವ್ಯಾ ತರ ಹುಡುಗಿ ಸಿಗಬೇಕು ಎಂದು ಹುಡುಗರು ಹೇಳಿದರೆ, ಅರವಿಂದ್ ಸಿಗಲಿಲ್ಲಾ ಅಂದ್ರ ಓಕೆ ಆದರೆ ಅರವಿಂದ್ ತರ ಇರುವ ಹುಡುಗನೇ ಬೇಕು ಎಂದು ಹೆಂಗಳೆಯರು ಕಾಮೆಂಟ್ ಮಾಡುತ್ತಿದ್ದಾರೆ.

  • ಕಿಚ್ಚ ಸರ್ ನನ್ನ ಆಯಸ್ಸೆಲ್ಲ ನಿಮಗಿರಲಿ : ಅಭಿಮಾನಿ

    ಕಿಚ್ಚ ಸರ್ ನನ್ನ ಆಯಸ್ಸೆಲ್ಲ ನಿಮಗಿರಲಿ : ಅಭಿಮಾನಿ

    ಬೆಂಗಳೂರು: ಸುದೀಪ್ ಅವರು ತಮ್ಮ ಟ್ರಸ್ಟ್ ಮೂಲಕ ಅನೇಕ ಸಾಮಾಜಿಕ ಕೆಲಸಗಳನ್ನು ಮಾಡುತ್ತಿದ್ದಾರೆ.  ನಟಿ ಸೋನು ಪಾಟೀಲ್ ತಾಯಿಯ ಆರೋಗ್ಯದ ಚಿಕಿತ್ಸಾ ವೆಚ್ಚವನ್ನು ಭರಿಸಿದ್ದರು. ಈಗ ಅಭಿಮಾನಿಯೊಬ್ಬರಿಗೆ ಸಹಾಯ ಮಾಡಿದ್ದಾರೆ.

    ಕಿಚ್ಚ ಸುದೀಪ್ ಅವರ ಅಭಿಮಾನಿ ಸೌಮ್ಯಾ. ಸುದೀಪ್ ಸಹಾಯ ಮಾಡಿರುವ ಕುರಿತು ಅವರೊಂದು ವೀಡಿಯೋ ಶೇರ್ ಮಾಡಿದ್ದಾರೆ. ಅದರಲ್ಲಿ ಅವರು ಸುದೀಪ್‍ಗೆ ಧನ್ಯವಾದ ತಿಳಿಸಿದ್ದಾರೆ. ಸಾಯುವವರೆಗೂ ನಿಮ್ಮ ಹೆಸರು ಹೇಳಿಕೊಂಡು ನಮ್ಮ ಮನೆಯಲ್ಲಿ ದೀಪ ಹಚ್ಚುತ್ತೇನೆ. ನನ್ನ ತಾಳಿ ಭಾಗ್ಯವನ್ನು ಉಳಿಸಿದ್ದೀರಾ ನೀವು ಎಂದು ಸೌಮ್ಯಾ ವೀಡಿಯೋದಲ್ಲಿ ಹೇಳಿದ್ದಾರೆ.

    ಕಳೆದ ತಿಂಗಳು ನನ್ನ ಪತಿಗೆ ರಕ್ತದಲ್ಲಿ ಸೋಂಕು ಆಗಿ ಆಸ್ಪತ್ರೆಗೆ ದಾಖಲಿಸಿದ್ದೆವು. ಆನಂತರ ಅದರಿಂದ ಅವರು ಚೇತರಿಸಿಕೊಂಡಿದ್ದರು. ಬಳಿಕ ಆಸ್ಪತ್ರೆಯಿಂದ ಮನೆಗೆ ಕರೆದುಕೊಂಡು ಬಂದೆವು. ಆಗಲೇ ತುಂಬ ಖರ್ಚು ಆಗಿತ್ತು. ನಂತರ ಮನೆಗೆ ಬಂದಮೇಲೇ ಕೊರೊನಾ ತಗುಲಿತು. ನನಗೆ, ಪತಿಗೆ, ತಾಯಿಗೆ ಕೊರೊನಾ ಪಾಸಿಟಿವ್ ಆಯಿತು. ಆ ಸಮಯದಲ್ಲಿ ಅವರನ್ನು ಮತ್ತೆ ಆಸ್ಪತ್ರೆಗೆ ದಾಖಲಿಸಬೇಕಾದ ಅನಿವಾರ್ಯತೆ ಎದುರಾಯ್ತು. ಆದರೆ ರೆಮಿಡಿಸಿವರ್ ಇಂಜೆಕ್ಷನ್ ತಂದರೆ ಮಾತ್ರ ದಾಖಲು ಮಾಡಿಕೊಳ್ಳುತ್ತೇವೆ ಎಂದು ಖಾಸಗಿ ಆಸ್ಪತ್ರೆಯವರು ಹೇಳಿದರು. ರೆಮಿಸಿಡಿವರ್ ಇಂಜೆಕ್ಷನ್‍ಗಾಗಿ ಹುಡುಕಿದರೂ ಸಿಗಲಿಲ್ಲ ಎಂದಿದ್ದಾರೆ ಸೌಮ್ಯ.

    20 ಸಾವಿರ ರೂ. ನೀಡಿ ಸೌಮ್ಯಾ ಇಂಜೆಕ್ಷನ್ ಕೊಂಡುಕೊಂಡಿದ್ದಾರೆ. ಆದರೆ, ಆ ವೇಳೆಗಾಗಲೇ ಅವರಿಗೆ ಸುಮಾರು 1.50 ಲಕ್ಷ ರೂ. ಖರ್ಚಾಗಿತ್ತು. ಇಂತಹ ಸಂದರ್ಭದಲ್ಲಿ 50 ಸಾವಿರ ರೂ. ಮುಂಗಡ ಹಣ ನೀಡಬೇಕು ಎಂದು ಆಸ್ಪತ್ರೆಯವರು ಹೇಳಿದರು. ಅದು ನಮಗೆ ಕಷ್ಟದ ಪರಿಸ್ಥಿತಿ ಆಗಿತ್ತು. ಆದರೂ, ಹೇಗೋ ಹೊಂದಿಸಿಕೊಂಡು ಕಟ್ಟಿದೆವು. ಚಿಕಿತ್ಸೆ ಮುಗಿದ ಮೇಲೆ 1.30 ಲಕ್ಷ ರೂಪಾಯಿ ಬಿಲ್ ಆಗಿತ್ತು. ಅಷ್ಟೊಂದು ದುಡ್ಡು ನಮ್ಮ ಬಳಿ ಇರಲಿಲ್ಲ. ಎಲ್ಲ ಪ್ರಯತ್ನ ಮಾಡಿದರೂ, ದುಡ್ಡು ಹೊಂದಿಸಲು ಆಗಲಿಲ್ಲ. ಆಗ ಸಹಾಯಕ್ಕೆ ಸುದೀಪ್ ಅವರು ಬಂದರು ಎಂದು ಸೌಮ್ಯಾ ವೀಡಿಯೋದಲ್ಲಿ ತಿಳಿಸಿದ್ದಾರೆ.

    ಸುದೀಪ್ ಅವರ ಮೊದಲು ಮಾನವನಾಗು ಟ್ರಸ್ಟ್ ಬಗ್ಗೆ ಮಾಹಿತಿ ಪಡೆದುಕೊಂಡ ಆ ಟ್ರಸ್ಟ್ನ ಸಂಪರ್ಕಿಸಿದೆ. ನಂತರ ವಿಷಯ ಸುದೀಪ್ ಅವರಿಗೆ ತಲುಪಿದೆ. ಅವರು ಕೂಡಲೇ ಸೌಮ್ಯಾಗೆ ಆರ್ಥಿಕ ಸಹಾಯ ಮಾಡಿದ್ದಾರೆ. ನಾನು ಸುದೀಪ್ ಅವರಿಗೆ 10 ವರ್ಷಗಳಿಂದ ಅಭಿಮಾನಿ. ನಾನು ಗುಣ, ವ್ಯಕ್ತಿತ್ವ ನೋಡಿ, ಅಭಿಮಾನಿಯಾದವಳು. ಈಗ ನಮಗೆ ಸಹಾಯ ಮಾಡಿದ್ದಾರೆ. ಮುಂದಿನ ಜನ್ಮದಲ್ಲೂ ನಾನು ಅವರ ಅಭಿಮಾನಿಯಾಗಿಯೇ ಹುಟ್ಟುತ್ತೇನೆ. ನಾನು ಸಾಯುವವರೆಗೂ ಸುದೀಪ್ ಅವರ ಹೆಸರು ಹೇಳಿ ನಮ್ಮ ಮನೆಯಲ್ಲಿ ದೀಪ ಹಚ್ಚುತ್ತೇನೆ. ನನ್ನ ಆಯಸ್ಸು ಎಲ್ಲವೂ ಸುದೀಪ್ ಅವರಿಗೆ ಇರಲಿ’ ಎಂದು ಸೌಮ್ಯಾ ಹೇಳಿದ್ದಾರೆ.

  • ಪತಿಯನ್ನ ಎತ್ತಿದ ಅನುಷ್ಕಾ ಶರ್ಮಾ – ವೀಡಿಯೋ ವೈರಲ್

    ಪತಿಯನ್ನ ಎತ್ತಿದ ಅನುಷ್ಕಾ ಶರ್ಮಾ – ವೀಡಿಯೋ ವೈರಲ್

    ಮುಂಬೈ: ನಟಿ ಅನುಷ್ಕಾ ಶರ್ಮಾ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಆ್ಯಕ್ಟಿವ್ ಆಗಿರ್ತಾರೆ. ವೃತ್ತಿ, ಖಾಸಗಿ ಜೀವನದ ಕುರಿತ ಪೋಸ್ಟ್ ಗಳನ್ನ ಅಪ್‍ಡೇಟ್ ಮಾಡುತ್ತಿರುತ್ತಾರೆ. ಪತಿಯ ಜೊತೆಗಿನ ರೊಮ್ಯಾಂಟಿಕ್ ಕ್ಷಣಗಳ ಫೋಟೋಗಳನ್ನ ಹಂಚಿಕೊಳ್ಳುತ್ತಿದ್ದ ಪರಿ, ಇವತ್ತು ಯಜಮಾನನನ್ನು ಎರಡು ಬಾಹುಗಳಲ್ಲಿ ಬಂಧಿಸಿ ಎತ್ತಿ ತಮ್ಮ ಬೈಸೆಪ್ಸ್ ತೋರಿಸಿದ್ದಾರೆ.

    ಪತಿಯನ್ನ ಎತ್ತಿದ್ದ ಅನುಷ್ಕಾ: ಸದ್ಯ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ವೀಡಿಯೋ ವೈರಲ್ ಆಗಿದೆ. ಇದರಲ್ಲಿ ಅನುಷ್ಕಾ ಶರ್ಮಾ ಪತಿಯನ್ನ ಎತ್ತುವ ಪ್ರಯತ್ನ ಮಾಡಿ ಸಕ್ಸಸ್ ಆಗಿದ್ದಾರೆ. ಅದು ಒಂದಲ್ಲ ಎರಡು ಬಾರಿ. ನಂತರ ನೋಡಿ ಅಂತ ಬೈಸೆಪ್ಸ್ ತೋರಿಸಿ ಪೋಸ್ ಕೊಟ್ಟಿದ್ದಾರೆ. ಅಭಿಮಾನಿಗಳು ಅನುಷ್ಕಾ ಶಕ್ತಿಯನ್ನ ಕಂಡು ಚಕಿತರಾಗಿದ್ದು, ಲೈಕ್ಸ್ ಮತ್ತು ವೀಡಿಯೋ ಶೇರ್ ಮಾಡಿಕೊಳ್ಳುವ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ.

    ಈ ವೀಡಿಯೋ ಶೇರ್ ಮಾಡಿಕೊಂಡಿರುವ ಅನುಷ್ಕಾ ಶರ್ಮಾ, ನಾನು ಇದನ್ನು ಮಾಡಬಲ್ಲೆ ಎಂದು ಬರೆದುಕೊಂಡಿದ್ದಾರೆ. ಈ ವೀಡಿಯೋ ಹಂಚಿಕೊಂಡು ಕೆಲವೇ ಗಂಟೆಯಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಕ್ರಿಯೇಟ್ ಮಾಡಿದೆ. ತಾಯಿಯಾದ ಬಳಿಕ ಮತ್ತೆ ಕೆಲಸಕ್ಕೆ ಅನುಷ್ಕಾ ಶರ್ಮಾ ಕೆಲಸಕ್ಕೆ ಹಾಜರಾಗಿದ್ದಾರೆ.

     

    View this post on Instagram

     

    A post shared by AnushkaSharma1588 (@anushkasharma)

  • ನನ್ನ ಮೇಲೆ ಹಲ್ಲೆ ನಡೆದಿಲ್ಲ: ಅಜಯ್ ದೇವಗನ್ ಸ್ಪಷ್ಟನೆ

    ನನ್ನ ಮೇಲೆ ಹಲ್ಲೆ ನಡೆದಿಲ್ಲ: ಅಜಯ್ ದೇವಗನ್ ಸ್ಪಷ್ಟನೆ

    ಮುಂಬೈ: ನನ್ನ ಮೇಲೆ ಯಾವುದೇ ಹಲ್ಲೆ ನಡೆದಿಲ್ಲ ಎಂದು ನಟ ಅಜಯ್ ದೇವಗನ್ ಸ್ಪಷ್ಟನೆ ನೀಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅಜಯ್ ದೇವಗನ್ ಹೋಲಿಕೆಯುಳ್ಳಿ ವ್ಯಕ್ತಿಯೋರ್ವನ ಮೇಲೆ ಹಲ್ಲೆ ನಡೆದಿರುವ ವೀಡಿಯೋ ವೈರಲ್ ಆಗಿದೆ.

    ಅಜಯ್ ಸ್ಪಷ್ಟನೆ: ನನ್ನ ಹಾಗೆ ಇರೋ ವ್ಯಕ್ತಿ ಕಷ್ಟದಲ್ಲಿ ಸಿಲುಕಿರಬಹುದು. ಈ ವೀಡಿಯೋಗೆ ಸಂಬಂಧಿಸಿದಂತೆ ಹಲವರು ನನ್ನನ್ನು ಸಂಪರ್ಕಿಸಿ ಆರೋಗ್ಯ ವಿಚಾರಿಸುತ್ತಿದ್ದಾರೆ. ಇನ್ನು ಕೆಲವರು ಘಟನೆ ಬಗ್ಗೆ ಸ್ಪಷ್ಟನೆ ಕೇಳುತ್ತಿದ್ದಾರೆ. ನಾನು ಯಾವುದೇ ಪ್ರವಾಸದಲ್ಲಿಲ್ಲ. ನನ್ನ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳು ನಿರಾಧಾರ. ನಾನು ಚೆನ್ನಾಗಿದ್ದೇನೆ. ಹೋಳಿ ಹಬ್ಬದ ಶುಭಾಶಗಳು ಎಂದು ಬರೆದು ಸ್ಪಷ್ಟನೆ ನೀಡಿದ್ದಾರೆ.

    ಅಜಯ್ ದೇವಗನ್ ಮೇಲೆ ಹಲ್ಲೆ ನಡೆದಿದೆ ಎಂದು ಕೆಲ ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗಿದೆ. ಇದೆಲ್ಲ ಅಪ್ಪಟ ಸುಳ್ಳು. ಈ ಸಂಬಂಧ ನ್ಯೂಸ್ ಏಜೆನ್ಸಿ, ಪತ್ರಕರ್ತರಿಗೂ ಮಾಹಿತಿ ನೀಡಲಾಗಿದೆ. ತಮ್ಮ ತಂಡದೊಂದಿಗೆ ಮುಂಬೈನಲ್ಲಿ ‘ಮೈದಾನ್’, ‘ಮೆಡೆ’ ಮತ್ತು ‘ಗಂಗೂಬಾಯಿ ಕಾಠಿಯಾಬಾಡಿ’ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಕಳೆದ 14 ತಿಂಗಳಿನಿಂದ ದೆಹಲಿಗೆ ಪ್ರಯಾಣ ಬೆಳೆಸಿಲ್ಲ ಎಂದು ಅಜಯ್ ದೇವಗನ್ ಆಪ್ತ ಹೇಳಿದ್ದಾರೆ. ಇದನ್ನೂ ಓದಿ: ಅಜಯ್ ದೇವಗನ್‍ರನ್ನು ಭೇಟಿಯಾದ ಕಿಚ್ಚ – ಪತಿ ಕಾಲೆಳೆದ ಪ್ರಿಯಾ

    2020 ಜನವರಿಯಲ್ಲಿ ಕೊನೆಯ ಬಾರಿ ಅಜಯ್ ದೇವಗನ್ ದೆಹಲಿಗೆ ಭೇಟಿ ನೀಡಿದ್ದರು. ಅದು ತಾನ್ಹಾಜಿ ಸಿನಿಮಾ ಪ್ರಮೋಷನ್ ಗಾಗಿ ಚಿತ್ರತಂಡದ ಜೊತೆ. ವೈರಲ್ ಆಗಿರುವ ವೀಡಿಯೋ ನಕಲಿ. ಅಲ್ಲಿರುವ ವ್ಯಕ್ತಿಯೂ ಅಜಯ್ ಅವರಿಗೂ ಹೋಲಿಕೆ ಇರಬಹುದು. ಸುದ್ದಿ ಪ್ರಸಾರಕ್ಕೂ ಮುನ್ನ ಸ್ಪಷ್ಟನೆ ಪಡೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅಜಯ್ ದೇವಗನ್ ಕಾರು ತಡೆದು ಯುವಕ ರಂಪಾಟ – ವೀಡಿಯೋ ವೈರಲ್

  • ಹೊಳೆಯಂತೆ ಹರಿದ ಲಾವಾರಸ – ಡ್ರೋನ್‍ನಲ್ಲಿ ಜ್ವಾಲಾಮುಖಿ ಸ್ಫೋಟ ಸೆರೆ

    ಹೊಳೆಯಂತೆ ಹರಿದ ಲಾವಾರಸ – ಡ್ರೋನ್‍ನಲ್ಲಿ ಜ್ವಾಲಾಮುಖಿ ಸ್ಫೋಟ ಸೆರೆ

    ಫಾಗ್ರಾಡಾಲ್ಸ್: ಜ್ವಾಲಾಮುಖಿ ಸ್ಫೋಟದ ವೀಡಿಯೋದಲ್ಲಿ ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಭೂಗರ್ಭದಿಂದ ಹೊರ ಬಂದ ಲಾವಾರಸ ಹೊಳೆಯಂತೆ ಹರಿದಿರೋ ಭಯಾನಕ ದೃಶ್ಯ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ಆಂಥೋನಿ ಕ್ವಿಂಟನೋ ಫೋಟೋಗ್ರಾಫಿ ಹೆಸರಿನ ಟ್ವಿಟ್ಟರ್ ಖಾತೆಯಲ್ಲಿ ಅಪ್ಲೋಡ್ ಮಾಡಲಾಗಿದ್ದು, 30 ಸಾವಿರಕ್ಕೂ ಅಧಿಕ ಬಾರಿ ರೀಟ್ವಿಟ್ ಆಗಿದೆ. ಈ ಜ್ವಾಲಾಮುಖಿ ನೋಡಲು ಸ್ಥಳೀಯರು ಸೇರಿದಂತೆ ದೂರ ದೂರಿಂದ ಬಂದಂತಹ ಛಾಯಾಗ್ರಾಹಕರ ಸ್ಫೋಟದ ಸಮೀಪ ತೆರಳಿ, ಅದರ ರೌದ್ರತೆಯನ್ನ ಕಂಡು ಹಿಂದಿರುಗಿದ್ದಾರೆ. ಡ್ರೋನ್ ನಿಂದ ಈ ಎಲ್ಲ ಲಾವಾರಸ ಹರಿಯೋದನ್ನ ಸೆರೆ ಹಿಡಿಯಲಾಗಿದೆ.

    ಫಾಗ್ರಾಡಾಲ್ಸ್ ಫಾಲ್ ಐಲ್ಯಾಂಡ್ ಪರ್ವತದ ಮೇಲಿರುವ ಈ ಜ್ವಾಲಾಮುಖಿ ಸುಮಾರು ಆರು ಸಾವಿರ ವರ್ಷಗಳಿಂದ ಶಾಂತವಾಗಿತ್ತು. ಸ್ಫೋಟಕ್ಕೂ ಮುನ್ನ ಜ್ವಾಲಾಮುಖಿಯ ಪ್ರಖರತೆ ಮಿಂಚು ರೇಕ್ ಜಾವಿಕ್ ನಿಂದ ಗೋಚರಿಸುತ್ತಿತ್ತು ಎಂದು ಸ್ಥಳೀಯರು ಹೇಳಿದ್ದಾರೆ. ಜ್ವಾಲಾಮುಖಿ ಸ್ಫೋಟವಾದ ಸ್ಥಳದಿಂದ ಸುಮಾರು 30 ರಿಂದ 32 ಕಿಲೋ ಮೀಟರ್ ವರೆಗೆ ಇದರ ಶಾಖವಿತ್ತು ಎಂದು ವರದಿಯಾಗಿದೆ.

    https://twitter.com/AnthonyQuintano/status/1373787472493170695

  • ತಂದೂರಿ ರೋಟಿಯನ್ನ ಉಗುಳಿ ಬೇಯಿಸೋ ವ್ಯಕ್ತಿ – ವೀಡಿಯೋ ವೈರಲ್

    ತಂದೂರಿ ರೋಟಿಯನ್ನ ಉಗುಳಿ ಬೇಯಿಸೋ ವ್ಯಕ್ತಿ – ವೀಡಿಯೋ ವೈರಲ್

    – ಮೀರತ್ ಬಳಿಕ ಮತ್ತೊಂದು ವೀಡಿಯೋ

    ನವದೆಹಲಿ: ಉತ್ತರ ಪ್ರದೇಶದ ಮೀರತ್ ನಲ್ಲಿ ಯುವಕನೋರ್ವ ಉಗುಳಿ ತಂದೂರಿ ರೋಟಿ ತಯಾರಿಸುತ್ತಿದ್ದ ವೀಡಿಯೋ ಕೆಲ ದಿನಗಳ ಹಿಂದೆ ವೈರಲ್ ಆಗಿತ್ತು. ಇದೀಗ ಅಂತಹುವುದೇ ಮತ್ತೊಂದು ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೊಲೀಸರು ಬಾಣಸಿಗ ಮತ್ತು ಆತನ ಸಹಾಯಕನನ್ನು ಬಂಧಿಸಿದ್ದಾರೆ.

    ಮೊಹಮದ್ ಇಬ್ರಾಹಿಂ (40) ಮತ್ತು ಸಾಬಿ ಅನ್ವರ್ (22) ಬಂಧಿತರು. ಪಶ್ಚಿಮ ದೆಹಲಿಯ ಖ್ಯಾಲಾ ಇಲಾಖೆಯ ಚಾಂದ್ ಹೆಸರಿನಲ್ಲಿ ಬಂಧಿತರು ಅಡುಗೆ ಕೆಲಸ ಮಾಡಿಕೊಂಡಿದ್ದರು. ಗ್ರಾಹಕರೊಬ್ಬರು ಇಬ್ಬರು ತಂದೂರಿ ರೋಟಿ ತಯಾರಿಸುವ ವೀಡಿಯೋ ಚಿತ್ರೀಕರಿಸಿ ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿ, ದೆಹಲಿ ಪೊಲೀಸರು ಮತ್ತು ಪಶ್ಚಿಮ ದೆಹಲಿಯ ಡಿಸಿಪಿ ಅವರ ಖಾತೆಗೆ ಟ್ಯಾಗ್ ಮಾಡಿದ್ದರು. ಇದನ್ನೂ ಓದಿ: ಮದುವೆ ಮನೆಯಲ್ಲಿ ರೋಟಿಗೆ ಉಗುಳಿ ಬೇಯಿಸ್ತಿದ್ದ ವ್ಯಕ್ತಿಯ ವೀಡಿಯೋ ವೈರಲ್

    ವೀಡಿಯೋ ಗಮನಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಇಬ್ಬರನ್ನ ಬಂಧಿಸಿದ್ದಾರೆ. ಐಪಿಸಿ ಸೆಕ್ಷನ್ 269, 270 ಮತ್ತು 273 ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನು ಹೋಟೆಲ್ ಯಾವುದೇ ಅನುಮತಿ ಪಡೆಯದಿರುವ ವಿಷಯ ದಾಳಿ ವೇಳೆ ಬೆಳಕಿಗೆ ಬಂದಿದೆ. ಹೋಟೆಲ್ ಮಾಲೀಕನಿಗೆ ದಂಡ ವಿಧಿಸಲಾಗಿದೆ. ಸದ್ಯ ಇಬ್ಬರು ಜಾಮೀನಿನ ಮೇಲೆ ಹೊರ ಬಂದಿದ್ದಾರೆ.

  • ಹಿರಿಯ ಅಭಿಮಾನಿ ಜೊತೆ ಚಕ್ರವರ್ತಿಯ ಮಾತು

    ಹಿರಿಯ ಅಭಿಮಾನಿ ಜೊತೆ ಚಕ್ರವರ್ತಿಯ ಮಾತು

    – ಅಜ್ಜಿ ಬಳಿ ದಾಸನ ಮನವಿ

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂದ್ರೆ ಅಭಿಮಾನಿಗಳ ಬಳಗಕ್ಕೆ ಏನೋ ಒಂದು ಖುಷಿ. ಒಂದನೇ ಕ್ಲಾಸ್ ಹುಡುಗನಿಂದ 60ರ ಅಜ್ಜನಿಗೂ ದರ್ಶನ್ ಅಚ್ಚುಮೆಚ್ಚು. ವಿಭಿನ್ನ ಸಿನಿಮಾಗಳ ಮೂಲಕ ಎಲ್ಲ ವರ್ಗಕ್ಕೂ ಯಜಮಾನ ಅಚ್ಚುಮೆಚ್ಚು. ಇನ್ನೂ ಒಡೆಯನ ಸಿನ್ಮಾ ಬಂದ್ರೆ ಸಾಕು ಡಿ ಬಾಸ್ ಹುಡುಗರಿಗೆ ಜಾತ್ರೆ ಬಂದಂಗೆ. ಸಿನಿಮಾ ಬಿಡುಗಡೆಗೂ ಮುನ್ನವೇ ಥಿಯೇಟರ್ ಮುಂದೆ ಸಾರಥಿಯ ಕಟೌಟ್ ನಿಲ್ಲಿಸಿ, ಹಲಗೆ ಬೀಟ್‍ಗೆ ಎರಡು ಟಪ್ಪಾಂಗುಚ್ಚಿ ಹಾಕೇ ಬಿಡ್ತಾರೆ. ಇದೀಗ ಜಗ್ಗುದಾದಾ ಹಿರಿಯ ಅಭಿಮಾನಿಯನ್ನ ಭೇಟಿಯಾಗಿ ಮನೆಯ ಮಗನಂತೆ ಸರಳವಾಗಿ ಮಾತನಾಡಿರೋ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸುಂಟರಗಾಳಿ ಎಬ್ಬಿಸಿದೆ.

    ಡಿ ಬಾಸ್ ಹುಡುಗರು ಸಹ ವೀಡಿಯೋ ಶೇರ್ ಮಾಡಿಕೊಂಡು ದಾಸನ ಸರಳತೆ ಗುಣಗಾನ ಮತ್ತು ಚಿತ್ರರಂಗದ ಬಗ್ಗೆ ದತ್ತನಿಗಿರುವ ಕಾಳಜಿಯನ್ನ ಹಾಡಿ ಹೊಗಳುತ್ತಿದ್ದಾರೆ. ದರ್ಶನ್ ಫಾರ್ಮ್ ಹೌಸ್‍ಗೆ ಬಂದ ವೃದ್ಧೆ ತನ್ನ ಬಹುದಿನಗಳ ಕನಸು ಈಡೇರಿಸಿಕೊಂಡರು. ಈ ವೇಳೆ ಮಾತನಾಡಿದ ಬಳಿಕ ಮಹಿಳೆಯನ್ನ ಮನೆಗೆ ತಲುಪಿಸುವಂತೆ ತಮ್ಮ ಹುಡುಗರಿಗೆ ಹೇಳಿದರು.

    ಅಜ್ಜಿ ಬಳಿ ದಾಸನ ಮನವಿ: ದರ್ಶನ್ ಕಾಣುತ್ತಲೇ ಖುಷಿಯಾದ ಅಜ್ಜಿ, ನಾನು ನಿನ್ನ ಸಿನಿಮಾಗಳನ್ನೇ ನೋಡ್ತೀನಿ ಅಪ್ಪ. ಬೇರೆ ಚಿತ್ರಗಳನ್ನ ನೋಡಲು ಹೋಗಲ್ಲ ಅಂದ್ರು. ಇನ್ನೊಂದು ನೂರೈವತ್ತು ರೂಪಾಯಿ ಕೊಟ್ರೆ ನಮ್ಮಂತವರು ಇನ್ನು ಹಲವರು ಬದುಕುತ್ತಾರೆ ಅಂತ ಹೇಳುವ ಮೂಲಕ ಚಂದನವನದ ಕಾಳಜಿಯನ್ನ ವ್ಯಕ್ತಪಡಿಸಿದರು. ದರ್ಶನ್ ನನ್ನು ಕಣ್ತುಂಬಿಕೊಂಡು ಅಜ್ಜಿ ಫೋನ್ ನಂಬರ್ ನೀಡುವಂತೆ ಕೇಳಿಕೊಂಡರು.

    ನೀವು ನೋಡಬೇಕೆಂದಾಗ ರವಿಯನ್ನ ಭೇಟಿಯಾಗಿ. ಆತ ನಿಮ್ಮನ್ನು ಇಲ್ಲಿಗೆ ಕರೆದುಕೊಂಡು ಬರುತ್ತಾನೆ. ನನ್ನ ಜೀವ ಇರೋವರೆಗೂ ದರ್ಶನ್ ಅಣ್ಣನನ್ನು ತೋರಿಸಿ ಅಂತ ಹೇಳಿದರು.

    ಡಿ ಬಾಸ್ ಅಭಿನಯದ ಬಹುನಿರೀಕ್ಷಿತ ರಾಬರ್ಟ್ ಚಿತ್ರದ ಪ್ರಿ-ರಿಲೀಸ್ ಕಾರ್ಯಕ್ರಮ ಭಾನುವಾರ ಹುಬ್ಬಳ್ಳಿಯಲ್ಲಿ ನಡೆಯಿತು. ಲಕ್ಷಾಂತರ ಅಭಿಮಾನಿಗಳು ಡಿ ಬಾಸ್ ದರ್ಶನ ಪಡೆದ್ರು. ನಗರದ ರೈಲ್ವೆ ಮೈದಾನದಲ್ಲಿ ನಡೆದ ರಾಬರ್ಟ್’ ಚಿತ್ರದ ಪ್ರಿ-ರಿಲೀಸ್ ಕಾರ್ಯಕ್ರಮದಲ್ಲಿ ಲಕ್ಷದಷ್ಟು ಅಭಿಮಾನಿಗಳು ಜಮಾಯಿಸಿದ್ರು. ದರ್ಶನ್ ಆಗಮಿಸುತ್ತಿದ್ದಂತೆ ಅಭಿಮಾನಿಗಳ ಶಿಳ್ಳೆ, ಕೇಕೆ ಮುಗಿಲುಮುಟ್ಟಿತ್ತು. ಸಮಾರಂಭದಲ್ಲಿ ನಾಯಕಿ ನಟಿ ಆಶಾ ಭಟ್, ದೇವರಾಜ್, ಅಭಿಷೇಕ್ ಅಂಬರೀಶ್, ಚಿಕ್ಕಣ್ಣ, ರವಿಶಂಕರ್, ವಿನೋದ್ ಪ್ರಭಾಕರ್, ತರುಣ್ ಸುಧೀರ್ ಸೇರಿದಂತೆ ಇಡೀ ಚಿತ್ರ ತಂಡ ಭಾಗವಹಿಸಿತ್ತು.

  • ಸೂಪರ್ ಮಾರ್ಕೆಟ್‍ನಲ್ಲೇ ಅಂಡರ್‌ವೇರ್ ಕಳಚಿ ಮಾಸ್ಕ್ ಮಾಡ್ಕೊಂಡ ಯುವತಿ – ವೀಡಿಯೋ ವೈರಲ್

    ಸೂಪರ್ ಮಾರ್ಕೆಟ್‍ನಲ್ಲೇ ಅಂಡರ್‌ವೇರ್ ಕಳಚಿ ಮಾಸ್ಕ್ ಮಾಡ್ಕೊಂಡ ಯುವತಿ – ವೀಡಿಯೋ ವೈರಲ್

    ಕೇಪ್‍ಟೌನ್: ಮಹಾಮಾರಿ ಕೊರೊನಾ ವೈರಸ್ ಬಂದ ಬಳಿಕ ಮಾಸ್ಕ್, ಸ್ಯಾನಿಟೈಸರ್ ಕಡ್ಡಾಯ ಮಾಡಲಾಗಿದ್ದು, ಇದರಿಂದ ಅನೇಕ ರೀತಿಯ ತಮಾಷೆಯ ಘಟನೆಗಳು ನಡೆದಿವೆ. ಕೆಲವರಂತೂ ಮಾಸ್ಕ್ ಹಾಕೋದನ್ನೇ ಮರೆತು ಬಿಡುತ್ತಾರೆ. ಅಂತೆಯೇ ಇದೀಗ ಯುವತಿಯೊಬ್ಬಳು ಸೂಪರ್ ಮಾರ್ಕೆಟ್ ನಲ್ಲಿ ತನ್ನ ಒಳಉಡುಪನ್ನೇ ಮಾಸ್ಕ್ ಆಗಿ ಮಾಡಿಕೊಳ್ಳುವ ಮೂಲಕ ಪೇಚಿಗೆ ಸಿಲುಕಿದ ಘಟನೆ ದಕ್ಷಿಣ ಆಫ್ರಿಕಾದಲ್ಲಿ ನಡೆದಿದೆ.

    ಹೌದು. ಯುವತಿಯೊಬ್ಬಳು ನಗರದ ಸೂಪರ್ ಮಾರ್ಕೆಟ್ ಗೆ ಮಾಸ್ಕ್ ಮರೆತು ಬಂದಿದ್ದಳು. ಈಕೆಯನ್ನು ಗಮನಿಸಿದ ಅಲ್ಲಿನ ಸಿಬ್ಬಂದಿ ಮಾಸ್ಕ್ ಯಾಕೆ ಧರಿಸಿಲ್ಲ ಎಂದು ಕೇಳಿದ್ದಾರೆ. ಇದರಿಂದ ಗಲಿಬಿಲಿಗೊಂಡ ಯುವತಿ ಕೂಡಲೇ ತನ್ನ ಅಂಡರ್‍ವೇರ್ ಕಳಚಿ ಅದನ್ನೇ ಮಾಸ್ಕ್ ನಂತೆ ಬಳಸಿಕೊಂಡಿದ್ದಾಳೆ. ಸದ್ಯ ಇದರ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

    ವೀಡಿಯೋದಲ್ಲಿ ಸೂಪರ್ ಮಾರ್ಕೆಟ್ ಸೆಕ್ಯೂರಿಟಿ ಗಾರ್ಡ್ ಯುವತಿ ಬಳಿ ಬಂದು ಮಾಸ್ಕ್ ಧರಿಸದ ಬಗ್ಗೆ ವಿಚಾರಿಸಿದ್ದಾರೆ. ಅಲ್ಲದೆ ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸದೇ ಅಂಗಡಿ ಒಳಕ್ಕೆ ಬರಲು ಬಿಡುವುದಿಲ್ಲ. ನೀವು ಹೇಗೆ ಒಳಗೆ ಬಂದ್ರಿ ಎಂದು ಗದರಿಸಿದ್ದಾನೆ. ಸೆಕ್ಯೂರಿಟಿ ಗಾರ್ಡ್ ಬೈಗುಳದಿಂದ ಆತಂಕಗೊಂಡ ಯುವತಿ ಎಲ್ಲರ ಮುಂದೆಯೇ ಕೂಡಲೇ ತನ್ನ ಅಂಡರ್ ವೇರ್ ಕಳಚಿದ್ದಾಳೆ. ಅಲ್ಲದೆ ನಂತರ ಅದನ್ನೇ ಮಾಸ್ಕ್ ಆಗಿ ಮುಖಕ್ಕೆ ಕಟ್ಟಿಕೊಂಡಿದ್ದನ್ನು ಕಾಣಬಹುದಾಗಿದೆ.

    ಈ ವೈರಲ್ ವೀಡಿಯೋ ನೋಡಿದ ನೆಟ್ಟಿಗರು ಏನಿದು..? ಇಲ್ಲಿ ಏನು ನಡೀತಾ ಇದೆ ಎಂದೆಲ್ಲ ಪ್ರಶ್ನಿಸಿದ್ದಾರೆ. ಘಟನೆಗೆ ಸಾಕ್ಷಿಯಾದ ಮಹಿಳೆಯೊಬ್ಬರು ಯುವತಿಯ ಕೆಲಸವನ್ನು ಸಮರ್ಥಿಸಿಕೊಂಡಿದ್ದಾರೆ. ಆಕೆ ಮಾಡಿದ್ದನ್ನು ನಾನು ಸ್ವಾಗತಿಸುತ್ತೇನೆ. ಒಳ ಉಡುಪಿಗಿಂದ ಹೆಚ್ಚು ಬ್ಯಾಕ್ಟೀರಿಯಾ ನಾವು ಧರಿಸುವ ಮಾಸ್ಕ್ ಮೇಲೆಯೇ ಇರುತ್ತದೆ. ಹೀಗಾಗಿ ಯುವತಿ ಉತ್ತಮ ಕೆಲಸವನ್ನೇ ಮಾಡಿದ್ದಾಳೆ ಎಂದು ತಿಳಿಸಿದ್ದಾರೆ.

    https://twitter.com/YB_JLN/status/1364253718904979462