Tag: viral video

  • ಬೀದಿ ಹುಡುಗನ ಡ್ಯಾನ್ಸ್ ಗೆ ವಿಸ್ಮಯಗೊಂಡ ನೆಟ್ಟಿಗರು – ವೀಡಿಯೋ ವೈರಲ್

    ಬೀದಿ ಹುಡುಗನ ಡ್ಯಾನ್ಸ್ ಗೆ ವಿಸ್ಮಯಗೊಂಡ ನೆಟ್ಟಿಗರು – ವೀಡಿಯೋ ವೈರಲ್

    ನವದೆಹಲಿ: ಬೀದಿಯಲ್ಲಿ ಹುಡುಗನೊಬ್ಬ ನೃತ್ಯ ಮಾಡುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ವೀಕ್ಷಕರ ಗಮನ ಸೆಳೆಯುತ್ತಿದೆ.

    ಮೈಕೆಲ್ ಜಾಕ್ಸನ್ ಅವರ ಜನಪ್ರಿಯ ಹಾಡಿಗೆ ಬೀದಿಯಲ್ಲಿ ಹುಡುಗನೊಬ್ಬ ನೃತ್ಯ ಮಾಡುತ್ತಿರುವ ವೀಡಿಯೋವನ್ನು ಕಾವೇರಿ ರನ್ನವವರು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೋ ವೇಗವಾಗಿ ವೈರಲ್ ಆಗುತ್ತಿದ್ದು, ನೆಟ್ಟಿಗರನ್ನು ಸಾಕಷ್ಟು ಗಮನ ಸೆಳೆದಿದೆ. ಈ ವೀಡಿಯೋ ನೊಡಿದವರಂತು ವಿಸ್ಮಯಗೊಳ್ಳುತ್ತಾರೆ. ಇದನ್ನೂ ಓದಿ: ಸಿಪಿ ಯೋಗೇಶ್ವರ್ ಪುತ್ರಿಗೆ ಕಾನೂನು ಕಂಟಕ

    ಮೈಕೆಲ್ ಜಾಕ್ಸನ್ ಅವರ ಡೇಂಜರಸ್ ಹಾಡಿಗೆ ಈ ಯುವಕ ಹೆಜ್ಜೆಯಾಕಿದ್ದು, ಹಾಡು ಪ್ಲೇ ಆಗುತ್ತಿದ್ದಂತೆ ಮೈಕೆಲ್ ಡ್ಯಾನ್ಸ್ ಮಾಡಿದ ರೀತಿಗೆ ಅನುಸರಿಸುತ್ತಿರುವುದನ್ನು ನಾವು ವೀಡಿಯೋದಲ್ಲಿ ಕಾಣಬಹುದು. ಈ ವೀಡಿಯೋವನ್ನು ಟ್ವೀಟ್ ಮಾಡಿದ ಕಾವೇರಿ, ಇವನ ಮೈಯಲ್ಲಿ ಮೈಕಲ್ ಅವರ ಭೂತವು ಸೇರಿಕೊಂಡಿದೆ ಎಂದು ಬರೆದಿದ್ದಾರೆ. ಇದನ್ನೂ ಓದಿ: ಗಾಂಧಿ ಜಯಂತಿ ವಿಶೇಷ – ವಿಜಯಪುರದ ಗ್ರಾಮ ಸಭೆ ವೀಕ್ಷಣೆ ಮಾಡಲಿದ್ದಾರೆ ಮೋದಿ

    ಪಾಪ್ ಕಿಂಗ್ ಮೈಕೆಲ್ ಜಾಕ್ಸನ್ ಅವರ ಡೇಂಜರಸ್ ಹಾಡು ಹೆಚ್ಚು ಮಾರಾಟವಾದ ಆಲ್ಬಂಗಳಲ್ಲಿ ಒಂದಾಗಿದೆ. ಇದು 1991 ರಲ್ಲಿ ಬಿಡುಗಡೆಯಾಗಿತ್ತು.

  • ವೀಡಿಯೋ: ಸೂಪರ್ ಹಿಟ್ ಹಾಡು ಹಾಡಿ ರಾನು ಮೊಂಡಲ್ ಮತ್ತೆ ವೈರಲ್

    ವೀಡಿಯೋ: ಸೂಪರ್ ಹಿಟ್ ಹಾಡು ಹಾಡಿ ರಾನು ಮೊಂಡಲ್ ಮತ್ತೆ ವೈರಲ್

    ಮುಂಬೈ: ರೈಲ್ವೇ ಫ್ಲಾಟ್‍ಫಾರಂನಲ್ಲಿ ಕುಳಿತು ಹಾಡು ಹೇಳಿ ರಾತ್ರೋರಾತ್ರಿ ಸ್ಟಾರ್ ಆಗಿದ್ದ ಗಾಯಕಿ ರಾನು ಮೊಂಡಲ್ ವೀಡಿಯೋ ಇದೀಗ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಹೌದು. 2 ವರ್ಷಗಳ ಹಿಂದೆ ಹಾಡು ಹಾಡಿ ಸೋಶಿಯಲ್ ಮೀಡಿಯಾದಲ್ಲೇ ಧೂಳೆಬ್ಬಿಸಿದ್ದ ರಾನು ಅವರು ಇದೀಗ ಮತ್ತೆ ಹೊಸ ಹಾಡಿನೊಂದಿಗೆ ವೈರಲ್ ಆಗಿದ್ದಾರೆ. ಮನಿಕೆ ಮಗೆ ಹಿತೆ… ಹಾಡು ಹಾಡುತ್ತಿರುವ ವಿಡಿಯೋವನ್ನು ರೊಂಧೋನ್ ಪೊರಿಚೋಯ್ ಎಂಬ ಯೂಟ್ಯೂಬರ್ ಹಂಚಿಕೊಂಡಿದ್ದಾರೆ. ಸದ್ಯ ಈ ವೀಡಿಯೋವನ್ನು ಸುಮಾರು 54,000 ಜನರಿಗೂ ಹೆಚ್ಚು ಮಂದಿ ನೋಡಿದ್ದಾರೆ. ಇದನ್ನೂ ಓದಿ: ರಾತ್ರೋರಾತ್ರಿ ಸ್ಟಾರ್ ಆಗಿದ್ದ ರಾನು ಮೊಂಡಲ್ ಬದುಕಿನಲ್ಲಿ ಮತ್ತೆ ಕತ್ತಲು

    ಈ ಹಾಡು ಹಾಡುವಾಗ ರಾನು ಮೊಂಡಲ್ ಅವರು, ಕೆಂಪು ಟೀ ಶರ್ಟ್ ಹಾಗೂ ಜೀನ್ಸ್ ಪ್ಯಾಂಟ್ ಧರಿಸಿದ್ದಾರೆ. ಸದ್ಯ ವಿಡಿಯೋ ಈಗ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದಕ್ಕೂ ಮೊದಲೇ ಮನಿಕೆ ಮಗೆ ಹಿತೆ.. ಹಾಡು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದೀಗ ರಾನು ಮಂಡಲ್ ಧ್ವನಿಯಲ್ಲಿ ಆ ಹಾಡು ಹೆಚ್ಚು ವೀಕ್ಷಕರನ್ನು ಗಳಿಸುತ್ತಿದೆ. ಮನಿಕೆ ಮಗೆ ಹಿತೆ ಎಂಬುದು ಸಿಂಹಳ ಭಾಷೆಯ ಶ್ರೀಲಂಕಾದ ಹಾಡಾಗಿದ್ದು, ಶ್ರೀಲಂಕಾದ ಹಾಡುಗಾರ್ತಿ ಯೋಹಾನಿ ದಿಲೋಕ ಡ ಸಿಲ್ವಾ ಎಂಬಾಕೆ ಹಾಡಿದ್ದಾರೆ.  ಇದನ್ನೂ ಓದಿ: ರಾನು ಮೊಂಡಲ್‍ಗೆ ಅವಕಾಶ ನೀಡಿದ್ದೇಕೆ – ಹಿಮೇಶ್ ಸ್ಪಷ್ಟನೆ

    ಕೊರೊನಾ ಮತ್ತು ಲಾಕ್‍ಡೌನ್ ನಿಂದಾಗಿ ರಾನು ಮೊಂಡಲ್ ಕಾರ್ಯಕ್ರಮಗಳಿಲ್ಲದೇ ಮನೆಯಲ್ಲಿಯೇ ಉಳಿದುಕೊಂಡಿದ್ದರು. ಮುಂಬೈನ ಸಂಬಂಧಿಯೊಬ್ಬರ ಮನೆಯಲ್ಲಿದ್ದ ರಾನು ಮೊಂಡಲ್ ಲಾಕ್‍ಡೌನ್ ಮುಂಚೆ ಗಳಿಸಿದ ಹಣದಲ್ಲಿಯೇ ಕಷ್ಟಕರ ಜೀವನ ನಡೆಸುತ್ತಿದ್ದರು. ಉದ್ಯೋಗಕ್ಕಾಗಿ ಮುಂಬೈಗೆ ಬಂದ ನೆಲೆಸಿದ್ರೂ ರಾನು ಕೈ ಮಾತ್ರ ಖಾಲಿಯಾಗಿತ್ತು. ಇದನ್ನೂ ಓದಿ: ಮತ್ತೆ ರಾನು ವರ್ತನೆ ನೋಡಿ ನೆಟ್ಟಿಗರು ಗರಂ: ವಿಡಿಯೋ ವೈರಲ್

  • ಸೀರೆ ಉಟ್ಟವರಿಗೆ ರೆಸ್ಟೋರೆಂಟ್‍ಗೆ ಪ್ರವೇಶ ಇಲ್ಲ- ವೀಡಿಯೋ ವೈರಲ್

    ಸೀರೆ ಉಟ್ಟವರಿಗೆ ರೆಸ್ಟೋರೆಂಟ್‍ಗೆ ಪ್ರವೇಶ ಇಲ್ಲ- ವೀಡಿಯೋ ವೈರಲ್

    ನವದೆಹಲಿ: ಸೀರೆ ಎಂಬುದು ಭಾರತೀಯ ಸಂಪ್ರದಾಯದ ಪ್ರತೀಕವಾಗಿದೆ. ಇಂತಹ ಸೀರೆ ಉಟ್ಟವರಿಗೆ ರೆಸ್ಟೋರೆಂಟ್‍ಗೆ ಪ್ರವೇಶ ಇಲ್ಲ ಎಂದು ಮಹಿಳೆಯನ್ನು ಸಿಬ್ಬಂದಿ ಹೊರಗೆ ಕಳುಹಿಸಿದ ಘಟನೆ ದೆಹಲಿಯಲ್ಲಿ ನಡೆದಿದೆ.

    ಸೀರೆಯುಟ್ಟ ಮಹಿಳೆಯೊಬ್ಬರಿಗೆ ಆಧುನಿಕ ರೆಸ್ಟೋರೆಂಟ್‍ನಲ್ಲಿ ಪ್ರವೇಶ ನಿರಾಕರಿಸಲಾಗಿದೆ. ದೆಹಲಿಯ ಅತ್ಯಾಧುನಿಕ ರೆಸ್ಟೋರೆಂಟ್‍ನಲ್ಲಿ ಸೀರೆ ತೊಟ್ಟವರಿಗೆ ಯಾವುದೇ ಕಾರಣಕ್ಕೂ ಪ್ರವೇಶ ಇಲ್ಲವಂತೆ. ಇದನ್ನು ತಿಳಿಯದ ಮಹಿಳೆಯೊಬ್ಬರು ಸೀರೆಯುಟ್ಟು  ರೆಸ್ಟೋರೆಂಟ್ ಪ್ರವೇಶ ಮಾಡಿದ್ದಾರೆ. ಇದನ್ನು ಕಂಡ ಅಲ್ಲಿನ ಸಿಬ್ಬಂದಿ ಈ ಹೋಟೆಲ್‍ನಲ್ಲಿ ಸೀರೆ ತೊಟ್ಟವರಿಗೆ ಪ್ರವೇಶ ಇಲ್ಲ. ಸೀರೆಯನ್ನು ಸಾಮಾನ್ಯ ಉಡುಪು ಎಂದು ನಾವು ಪರಿಗಣಿಸುವುದಿಲ್ಲ. ಇಲ್ಲಿ ಏನಿದ್ದರೂ ಸ್ಮಾರ್ಟ್ ಕ್ಯಾಶುಯಲ್ ಉಡುಪಿಗೆ ಮಾತ್ರ ಅನುಮತಿ ನೀಡಲಾಗುವುದು ಎಂದು ಗ್ರಾಹಕ ಮಹಿಳೆಯನ್ನು ಹೊರಗೆ ಕಳುಹಿಸಲಾಗಿದೆ.

    ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು, ಹಲವರ ಕೆಂಗಣ್ಣಿಗೆ ಗುರಿಯಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ತಮಗಾದ ಅನುಭವ ಬರೆದಿರುವ ಪತ್ರಕರ್ತೆ ಅನಿತಾ ಚೌಧರಿ ಭಾರತೀಯ ಸೀರೆ ಸ್ಮಾರ್ಟ್ ಉಡುಗೆ ಅಲ್ಲ ಎಂಬ ಮಾತ್ರಕ್ಕೆ ತಮಗೆ ರೆಸ್ಟೋರೆಂಟ್‍ಗೆ ಅವಕಾಶ ನೀಡಲಿಲ್ಲ. ಈ ಸ್ಮಾರ್ಟ್ ಉಡುಗೆ ಎಂದರೆ ಏನು ತಿಳಿಸಿ. ಆಗ ನಾನು ಸೀರೆ ಧರಿಸುವುದನ್ನು ನಿಲ್ಲಿಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ:  ಭಾರತದ ಎಚ್ಚರಿಕೆ ಬೆನ್ನಲ್ಲೇ ಇಂಗ್ಲೆಂಡ್‍ನ ಅನುಮೋದಿತ ಲಸಿಕೆಗಳ ಪಟ್ಟಿಗೆ ಕೋವಿಶೀಲ್ಡ್ ಸೇರ್ಪಡೆ

    ನನಗೆ ಮದುವೆಯಾಗಿದೆ. ಸೀರೆಯಲ್ಲಿ ನಾನು ಮದುವೆಯಾಗಿದ್ದೆ. ಇಬ್ಬರು ಹೆಣ್ಣು ಮಕ್ಕಳನ್ನು ಹೊಂದಿರುವ ಕುಟುಂಬ ನನ್ನದು. ನಾನು ಸೀರೆ ಉಡುವುದು ನನಗೆ ತುಂಬಾ ಇಷ್ಟವಾಗುತ್ತದೆ. ಸೀರೆ ಎಂದರೆ ನನಗೆ ತುಂಬಾ ಇಷ್ಟ. ಭಾರತೀಯ ಉಡುಪುನನ್ನು ಪ್ರೀತಿಸುತ್ತೇನೆ. ಇದು ಭಾರತೀಯ ಸಂಸ್ಕೃತಿ ಆಗಿದೆ. ಸೀರೆ ಸರ್ವಕಾಲಿಕಕ್ಕೂ ಒಪ್ಪುವ ಸರಳ ಸುಂದರ ಉಡುಪು ಎಂಬುದನ್ನು ನಾನು ನಂಬುತ್ತೇನೆ .ಸ್ಮಾರ್ಟ್ ಉಡುಪಿನ ಬಗ್ಗೆ ನನಗೆ ಪ್ರಧಾನ ಮಂತ್ರಿ, ಗೃಹ ಸಚಿವ, ದೆಹಲಿ ಸಿಎಂ, ದೆಹಲಿ ಪೊಲೀಸ್ ಮತ್ತು ರಾಷ್ಟ್ರೀಯ ಮಹಿಳಾ ಆಯೋಗ ವ್ಯಾಖ್ಯಾನ ನೀಡಿದರೆ, ನಾನು ಈ ಸೀರೆ ಉಡುವುದನ್ನು ನಿಲ್ಲಿಸುತ್ತೇನೆ ಎಂದು ಇದೇ ವೇಳೆ ರೆಸ್ಟೋರೆಂಟ್ ಕಾರ್ಯದ ವಿರುದ್ಧ ಹರಿಹಾಯ್ದಿದ್ದಾರೆ. ಇದನ್ನೂ ಓದಿ: ಫೋಟೋ ಪಾಲಿಟಿಕ್ಸ್-ಮೋದಿ ಭಾವಚಿತ್ರ ಅಳವಡಿಕೆಗೆ ಜೆಡಿಎಸ್ ವಿರೋಧ

    ಕಳೆದ ವರ್ಷ ಕೂಡ ದೆಹಲಿಯಲ್ಲಿ ಇಂತಹದ್ದೆ ಘಟನೆ ನಡೆದಿತ್ತು. 2020ರ ಮಾರ್ಚ್‍ನಲ್ಲಿ ಇಲ್ಲಿನ ವಸಂತ್ ಕುಂಜ್ ಮಾಲ್‍ನ ರೆಸ್ಟೋರೆಂಟ್ ಬಾರ್‍ಗೆ ಸೀರೆಯುಟ್ಟ ಮಹಿಳೆಗೆ ಪ್ರವೇಶ ನಿರಾಕರಿಸಲಾಗಿತ್ತು.

  • ನೆಚ್ಚಿನ ನಟನನ್ನು ಮಾತಾಡಿಸುತ್ತಾ ವೀಡಿಯೋ ಕಾಲ್‍ನಲ್ಲೇ ಗಳಗಳನೇ ಅತ್ತ ವೃದ್ಧೆ!

    ನೆಚ್ಚಿನ ನಟನನ್ನು ಮಾತಾಡಿಸುತ್ತಾ ವೀಡಿಯೋ ಕಾಲ್‍ನಲ್ಲೇ ಗಳಗಳನೇ ಅತ್ತ ವೃದ್ಧೆ!

    – ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ವೈರಲ್
    – ಅಜ್ಜಿಯ ವೀಡಿಯೋ ನೋಡಿ ನೆಟ್ಟಿಗರೂ ಕಣ್ಣೀರು

    ಹೈದರಾಬಾದ್: ವೃದ್ಧೆ ಅಭಿಮಾನಿಯೊಬ್ಬರ ಆಸೆಯನ್ನು ಮಲಯಾಳಂ ಸ್ಟಾರ್ ನಟ ಮೋಹನ್ ಲಾಲ್ ಈಡೇರಿಸಿದ್ದಾರೆ. ಈ ಮೂಲಕ ಅಭಿಮಾನಿಯ ಮೊಗದಲ್ಲಿ ಸಂತಸ ಮೂಡಿಸಿದ್ದಾರೆ.

    ರುಕ್ಮಿಣಿ ಮಾಮಿಯವರು ಮೋಹನ್ ಲಾಲ್ ಅವರ ಅಪ್ಪಟ ಅಭಿಮಾನಿಯಾಗಿದ್ದು, ಅವರನ್ನು ನೋಡುವ ಬಯಕೆಯನ್ನು ವೀಡಿಯೋ ಮೂಲಕ ಹೊರಹಾಕಿದ್ದರು. ಈ ಅಜ್ಜಿಯ ವೀಡಿಯೋವನ್ನು ಅಭಿಮಾನಿಗಳು ನಟನಿಗೆ ತಲುಪಿಸಿದ್ದಾರೆ. ಈ ಹೃದಯ ಸ್ಪರ್ಶಿ ವೀಡಿಯೋ ನೋಡಿದ ನಟ ಮೋಹನ್‌ ಲಾಲ್‌, ರುಕ್ಮಿಣಿ ಮಾಮಿಯವರಿಗೆ ವೀಡಿಯೋ ಕಾಲ್ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಇದನ್ನೂ ಓದಿ: ನೀರಜ್ ಚೋಪ್ರಾ ಬ್ರ್ಯಾಂಡ್‍ನ ಜೆರ್ಸಿ ನೀರಿನ ಬಾಟಲಿ ಮಾರುಕಟ್ಟೆಗೆ

    https://twitter.com/MohanlalMFC/status/1439976831768150016

    ರುಕ್ಮಿಣಿ ಮಾಮಿ ಮೂಲತಃ ಕೇರಳ ತ್ರಿಶೂರಿನ ಪುಂಕನ್ನಂಲ್ಲಿರುವ ಅನಾಥಾಶ್ರಮದಲ್ಲಿ ನೆಲೆಸಿದ್ದಾರೆ. ದೇವಸ್ಥಾನದ ಅರ್ಚಕರಾಗಿದ್ದ ಆಕೆಯ ಪತಿ ಕೆಲ ವರ್ಷಗಳ ಹಿಂದೆ ತೀರಿಕೊಂಡಿದ್ದರು. ಸದಾ ಮೋಹನ್ ಲಾಲ್ ಬಗ್ಗೆ ಮಾತನಾಡುತ್ತಿದ್ದ ಆಕೆಯನ್ನು ಜೊತೆಗಿದ್ದವರು ಚುಡಾಯಿಸುತ್ತಿದ್ದರು. ಇದರ ಬಗ್ಗೆ ಅಳಲು ತೋಡಿಕೊಂಡಿರುವ ರುಕ್ಮಿಣಿ ಮಾಮಿಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದನ್ನೂ ಓದಿ: ಐಪಿಎಲ್‍ನಲ್ಲಿ ವಾರ್ನರ್ ದಾಖಲೆ ಹಿಂದಿಕ್ಕಿದ ಕನ್ನಡಿಗ ಕೆ.ಎಲ್ ರಾಹುಲ್

    ಇದನ್ನು ಅರಿತ ನಟ ಮೋಹನ್ ಲಾಲ್, ಅಜ್ಜಿಯ ಜೊತೆ ವೀಡಿಯೋ ಕಾಲ್‍ನಲ್ಲಿ ಮಾತನಾಡಿ ಸಂತಸ ಮೂಡಿಸಿದ್ದಾರೆ. ಅಲ್ಲದೆ ಕೋವಿಡ್ ಕಡಿಮೆಯಾದ ನಂತರ ಅಜ್ಜಿಯನ್ನು ಭೇಟಿಯಾಗುವ ಭರವಸೆಯನ್ನು ಕೂಡ ನೀಡಿದ್ದಾರೆ. ಸದ್ಯ ಹೈದರಾಬಾದ್‍ನಲ್ಲಿ ಸಿನಿಮಾ ಶೂಟಿಂಗ್‍ನಲ್ಲಿ ಬ್ಯುಸಿಯಾಗಿರುವ ನಟ ಮೋಹನ್ ಲಾಲ್, ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

  • ಮಕ್ಕಳೊಂದಿಗೆ ತವರಿಗೆ ಹೊರಟ ಕರೀನಾ

    ಮಕ್ಕಳೊಂದಿಗೆ ತವರಿಗೆ ಹೊರಟ ಕರೀನಾ

    ಮುಂಬೈ: ಬಾಲಿವುಡ್ ನಟಿ ಕರೀನಾ ಕಪೂರ್ ಸಿನಿಮಾಗಿಂತ ಹೆಚ್ಚಾಗಿ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಅವರು ತಮ್ಮ ಮಕ್ಕಳನ್ನು ಕರೆದುಕೊಂಡು ತವರಿಗೆ ಹೊರಡಲು ಸಿದ್ಧರಾಗಿದ್ದಾರೆ. ಈ ವೇಳೆ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ.

    ಬಾಲಿವುಡ್‍ನಲ್ಲಿ ತಮ್ಮ ಹಿಟ್ ಚಿತ್ರಗಳಿಂದ ಅವರು ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ. ಪ್ರಸ್ತುತ ನಟನೆಯಿಂದ ಬ್ರೇಕ್ ತೆಗೆದುಕೊಂಡಿರುವ ಅವರು, ಮಕ್ಕಳ ಪಾಲನೆಯಲ್ಲಿ ನಿರತರಾಗಿದ್ದಾರೆ. ಅವರು ಇತ್ತೀಚೆಗಷ್ಟೇ ಪತಿಯೊಂದಿಗೆ ಮಾಲ್ಡೀವ್ಸ್‌ಗೆ ತೆರಳಿದ್ದು ಸಖತ್ ಸುದ್ದಿಯಾಗಿತ್ತು. ಇದೀಗ ಅವರು ಮಕ್ಕಳೊಂದಿಗೆ ತಮ್ಮ ತಂದೆ ರಣಧೀರ್ ಕಪೂರ್ ಅವರನ್ನು ಭೇಟಿಯಾಗಲು ತೆರಳಿದ್ದಾರೆ.

    ವೀಕೆಂಡ್ ಆದ ಕಾರಣ, ಕರೀನಾ ತಮ್ಮ ಮಕ್ಕಳೊಂದಿಗೆ ತಂದೆ ರಣಧೀರ್ ಕಪೂರ್ ಮನೆಗೆ ತೆರಳಿದ್ದಾರೆ.

    ತಾತನನ್ನು ಭೇಟಿಯಾಗಲು ತೆರಳುತ್ತಿದ್ದ ತೈಮೂರ್ ತನ್ನ ಚುರುಕುತನದಿಂದಾಗಿ ಎಲ್ಲರ ಗಮನ ಸೆಳೆದಿದ್ದಾನೆ.

    ತೈಮೂರ್ ತಾಯಿ ಕರೀನಾ ಜೊತೆಗೆ ಹೊರಗೆ ಬರುತ್ತಿದ್ದಂತೆ ಕುಣಿಯುತ್ತಾ ಬಂದು ಓಡಿ ಹೋಗಿ ಕಾರ್ ಹತ್ತಿ ಕುಳಿತ್ತಿದ್ದಾನೆ.

    ಕಿರಿಯ ಪುತ್ರ ಜೇಹ್‍ನನ್ನು ಕರೀನಾ ತನ್ನ ಕಂಕುಳಲ್ಲಿ ಎತ್ತಿಕೊಂಡು ಹೋಗುತ್ತಿರುವ ದೃಶ್ಯ ಛಾಯಾಗ್ರಾಹಕರ ಕಣ್ಣಲ್ಲಿ ಸೆರೆಯಾಗಿದೆ.

    ಕರೀನಾ ವೈಟ್ ಕಲರ್ ಟಿ ಶರ್ಟ್ ತೊಟ್ಟು, ನೀಲಿ ಬಣ್ಣದ ಪ್ಯಾಂಟ್ ತೊಟ್ಟು ಸಿಂಪಲ್ ಲುಕ್‍ನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

    ಕರೀನಾ ತೊಟ್ಟಿರುವ ಟೀ ಶರ್ಟ್‍ನಲ್ಲಿ ಹಾರ್ಟ್ ಬ್ರೇಕರ್ ಎಂದು ಬರೆದುಕೊಂಡಿದೆ.

    ಜೇಹ್, ತೈಮೂರ್ ಎಂದಿನಂತೆ ಸಖತ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ಕರೀನಾ  ಈ ವರ್ಷದ ಆರಂಭದಲ್ಲಿ ಎರಡನೇ ಮಗು ಜೇಹ್‍ಗೆ ಜನ್ಮ ನೀಡಿದ್ದರು.

    ಇತ್ತೀಚೆಗೆ ಮಾಲ್ಡೀವ್ಸ್‌ಗೆ ತೆರಳಿದ್ದಾಗ ಸೈಫ್ ಜನ್ಮದಿನದ ಜೊತೆಗೆ ಜೇಹ್‍ಗೆ 6 ತಿಂಗಳು ಪೂರೈಸಿದ ಸಂಭ್ರಮವನ್ನೂ ಕರೀನಾ ಆಚರಿಸಿಕೊಂಡಿದ್ದರು.

    ಪ್ರೆಗ್ನೆಸ್ಸಿಯ ಅನುಭವಗಳನ್ನು ಬರೆದಿರುವ ಪ್ರೆಗ್ನೆನ್ಸಿ ಬೈಬಲ್ ಎಂಬ ಪುಸ್ತಕವನ್ನೂ ಇತ್ತೀಚೆಗೆ ಬಿಡುಗಡೆ ಮಾಡಿದ್ದಾರೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

  • ಸಿದ್ಧಾರ್ಥ್ ಶುಕ್ಲಾ ಕುಸಿದ ವೀಡಿಯೋ ವೈರಲ್ – ಸತ್ಯ ಇಲ್ಲಿದೆ

    ಸಿದ್ಧಾರ್ಥ್ ಶುಕ್ಲಾ ಕುಸಿದ ವೀಡಿಯೋ ವೈರಲ್ – ಸತ್ಯ ಇಲ್ಲಿದೆ

    ಮುಂಬೈ: ಕಿರುತೆರೆ ನಟ ಸಿದ್ಧಾರ್ಥ್ ಶುಕ್ಲಾ ಕುಸಿದ ಎನ್ನಲಾದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆದ್ರೆ ಈ ವೀಡಿಯೋ ಸತ್ಯಾಸತ್ಯವನ್ನು ಮಾಧ್ಯಮ ಅಲ್ಲಗಳೆದಿದೆ.

    ಮೆಟ್ಟಿಲುಗಳ ಮೇಲೆ ಕುಳಿತ ಯುವಕನೋರ್ವ ಕುಸಿದು ಬೀಳುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ವೀಡಿಯೋದಲ್ಲಿರುವ ಯುವಕ ಸಿದ್ಧಾರ್ಥ್ ಶುಕ್ಲಾ ಎಂದು ಹೇಳಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ವೀಡಿಯೋ ಸತ್ಯ:
    ವೀಡಿಯೋದಲ್ಲಿರುವ ಘಟನೆ ನಡೆದಿದ್ದು ಬೆಂಗಳೂರಿನಲ್ಲಿ. ನಗರದ ಬನಶಂಕರಿ ಗೋಲ್ಡ್ ಜಿಮ್ ನಲ್ಲಿ ನಡೆದಿದೆ. ಜಿಮ್ ನಲ್ಲಿ ಯುವಕ ಹೃದಯಾಘಾತದಿಂದ ಸಾವನ್ನಪ್ಪಿರೋದನ್ನು ಜಿಮ್ ಮಾಲೀಕ ಮತ್ತು ಸಿ.ಕೆ. ಅಚ್ಚುಕಟ್ಟು ಠಾಣೆಯ ಪೊಲೀಸರು ಖಚಿತಪಡಿಸಿದ್ದಾರೆ. ಇದನ್ನೂ ಓದಿ: ಫಿಟ್ ಆಗಿದ್ದ ಸಿದ್ಧಾರ್ಥ್ ಹೃದಯಾಘಾತಕ್ಕೆ ಕಾರಣವೇನು?

    ಸಿದ್ಧಾರ್ಥ್ ಶುಕ್ಲಾ ಅಂತ್ಯಕ್ರಿಯೆ ಬ್ರಹ್ಮಕುಮಾರಿ ಅನುಯಾಯಿಗಳ ಸಂಪ್ರದಾಯದಂತೆ ಮುಂಬೈನ ಓಶಿವಾರ ಸ್ಮಶಾನದಲ್ಲಿ ನೆರವೇರಿದೆ. ಸಿದ್ದಾರ್ಥ್ ಶುಕ್ಲಾ ತಾಯಿ ರೀಟಾ ಶುಕ್ಲಾ, ಗೆಳತಿ ಶೆಹ್ನಾಜ್ ಗಿಲ್, ಆಪ್ತರ ಸಮ್ಮುಖದಲ್ಲಿ ಅಂತ್ಯಕ್ರಿಯೆಯ ವಿಧಿ ವಿಧಾನಗಳು ನೆರವೇರಿದವು. ಇದನ್ನೂ ಓದಿ: ಪಂಜ್‍ಶೀರ್ ವಶಕ್ಕೆ ಪಡೆದ ತಾಲಿಬಾನಿಗಳಿಂದ ಗಾಳಿಯಲ್ಲಿ ಗುಂಡು!

  • ಕಾಬೂಲ್‍ನಿಂದ ಭಾರತಕ್ಕೆ ಮರಳ್ತಿದ್ದಂತೆ ತಮ್ಮನಿಗೆ ಕಿಸ್ ಕೊಟ್ಟ ಅಕ್ಕ- ಭಾವನಾತ್ಮಕ ವೀಡಿಯೋ ವೈರಲ್

    ಕಾಬೂಲ್‍ನಿಂದ ಭಾರತಕ್ಕೆ ಮರಳ್ತಿದ್ದಂತೆ ತಮ್ಮನಿಗೆ ಕಿಸ್ ಕೊಟ್ಟ ಅಕ್ಕ- ಭಾವನಾತ್ಮಕ ವೀಡಿಯೋ ವೈರಲ್

    ನೋಯ್ಡಾ: ಅಫ್ಘಾನಿಸ್ತಾನದಿಂದ ಭಾನುವಾರ ಸುಮಾರು 168 ಮಂದಿ ಗಾಜಿಯಾಬಾದ್‍ನ ಹಿಂಡನ್ ವಾಯುನೆಲೆಗೆ ಬಂದಿಳಿದರು. ಇದರಲ್ಲಿ ಮಕ್ಕಳು ಸಹ ಇದ್ದು, ಇದೀಗ ಇಬ್ಬರು ಮಕ್ಕಳು ನೆಟ್ಟಿಗರ ಗಮನ ಸೆಳೆದಿದ್ದಾರೆ. ತಾಯಿಯ ಮಡಿಲಲ್ಲಿದ್ದ ಪುಟ್ಟ ಕಂದಮ್ಮನಿಗೆ ಆತನ ಅಕ್ಕ ಮುತ್ತಿಟ್ಟ ಭಾವನಾತ್ಮಕ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

    ವೀಡಿಯೋದಲ್ಲಿ, ಜನರ ಮಧ್ಯೆ ತಾಯಿಯೊಬ್ಬಳು ತನ್ನ ಪುಟ್ಟ ಕಂದಮ್ಮನನ್ನು ಮಡಿಲಲ್ಲಿ ಕೂರಿಸಿಕೊಂಡಿದ್ದಾಳೆ. ಈ ವೇಳೆ ಅಲ್ಲೆ ಇದ್ದ ಪುಟ್ಟ ಹುಡುಗಿಯೊಬ್ಬಳು ಆ ಮಗುವಿನ ಮುಂದೆ ಕುಣಿಯುತ್ತಾ ಕಿಸ್ ಕೊಡುತ್ತಾ ಮುದ್ದಾಡುತ್ತಿರುವುದನ್ನು ಕಾಣಬಹುದಾಗಿದೆ. ಮೇಲ್ನೋಟಕ್ಕೆ ಪುಟ್ಟ ಹುಡುಗಿ ಕಂದಮ್ಮನ ಸಹೋದರಿಯಂತೆ ಕಾಣುತ್ತದೆ. ಸದ್ಯ ಈ ಹೃದಯಸ್ಪರ್ಶಿ ವೀಡಿಯೋಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಇದನ್ನೂ ಓದಿ: ಪಂಜಶೀರ್ ವಶಕ್ಕೆ ಮುಂದಾಗಿದ್ದ 300 ತಾಲಿಬಾನಿಗಳು ಮಟಾಷ್!

    ಈ ವೀಡಿಯೋವನ್ನು ಸರಿಯಾಗಿ ಗಮನಿಸಿದಾಗ ಮಹಿಳೆ, ಕಳೆದ ಏಳು ದಿನಗಳಿಂದ ಅನುಭವಿಸುತ್ತಿರುವ ನರಕಯಾತನೆಯ ಬಗ್ಗೆ ಮಾತನಾಡುವುದನ್ನು ಸಹ ಕೇಳಬಹುದಾಗಿದೆ. ತಾಲಿಬಾನ್ ಉಗ್ರರು ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದುಕೊಳ್ಳುತ್ತಿದ್ದಂತೆಯೇ ಅಲ್ಲಿ ನೆಲೆಸಿದ್ದ ಸಾವಿರಾರು ಮಂದಿ ನರಕಯಾತನೆ ಅನುಭವಿಸಿದ್ದಾರೆ. ಅನೇಕರು ದೇಶ ಬಿಟ್ಟು ತೆರಳಿದ್ದಾರೆ. ಇತ್ತ ಕನ್ನಡಿಗರನ್ನು ಭಾರತಕ್ಕೆ ಕರೆತರುವ ಪ್ರಯತ್ನವೂ ನಡೆಯುತ್ತಿದ್ದು, ಈಗಾಗಲೇ ಹಲವಾರು ಮಂದಿ ತಮ್ಮ ತಾಯ್ನಾಡಿಗೆ ವಾಪಸ್ ಆಗಿದ್ದಾರೆ.  ಇದನ್ನೂ ಓದಿ: ನೀನು ಮಹಿಳೆ ಉದ್ಯೋಗ ಮಾಡುವಂತಿಲ್ಲ, ಮನೆಗೆ ತೆರಳು – ಮಹಿಳಾ ಪತ್ರಕರ್ತೆಗೆ ಗೇಟ್‍ಪಾಸ್

    ಉಗ್ರರು ದೇಶವನ್ನು ವಶಕ್ಕೆ ಪಡೆದುಕೊಳ್ಳುತ್ತಿದ್ದಂತೆಯೇ ತಮ್ಮ ಕಣ್ಣ ಮುಂದೆ ನಡೆದಿದ್ದ ಘಟನೆಯನ್ನು ವಿವರಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಮಹಿಳೆಯೊಬ್ಬರ ಆರ್ತನಾದ ಕೇಳಲಾಗದೇ ಏರ್‍ಪೋರ್ಟ್‍ನ ಮುಳ್ಳುತಂತಿ ಗೋಡೆಯ ಮೇಲೆ ಹತ್ತಿದ ಅಮೆರಿಕ ಸೈನಿಕರು, ಆ ಮಹಿಳೆ ಮತ್ತು ಮಗುವೊಂದನ್ನು ಏರ್‍ಪೋರ್ಟ್ ಒಳಗೆ ಎಳೆದುಕೊಂಡಿದ್ದರು. ಕೆಲ ಪೋಷಕರು ತಮ್ಮ ಮುಂದಿನ ತಲೆಮಾರಾದ್ರೂ ತಾಲಿಬಾನಿಗಳ ಕ್ರೂರದೃಷ್ಟಿಗೆ ಬೀಳದಿರಲಿ ಎಂದು ಏರ್‍ಪೋರ್ಟ್ ಕಾಂಪೌಂಡ್ ಬಳಿ ನಿಂತು ಮಕ್ಕಳನ್ನು ಒಳಗೆ ಎಸೆದಿದ್ದು, ಹೀಗೆ ಎಸೆಯುವಾಗ ಕೆಲ ಮಕ್ಕಳು ಮುಳ್ಳಿನ ತಂತಿಗೆ ಸಿಲುಕಿ ಒದ್ದಾಡೋದನ್ನು ನೋಡಲು ಆಗ್ತಿಲ್ಲ ಎಂದು ಅಧಿಕಾರಿಯೊಬ್ಬರು ಕಣ್ಣೀರು ಇಟ್ಟಿದ್ದರು. ಇದನ್ನೂ ಓದಿ: ತಾನು ಸೆಲೆಕ್ಟ್ ಮಾಡಿದ ಹಾಡು ಹಾಕೋವರೆಗೂ ಮದುವೆ ಹಾಲ್‍ಗೆ ತೆರಳಲು ನಿರಾಕರಿಸಿದ ವಧು!

    https://twitter.com/ANI/status/1429324388420112384

  • ವೈರಲ್ ಆಯ್ತು ಚಿನ್ನದ ಹುಡುಗನ ಮೂರು ವರ್ಷದ ಹಳೆಯ ವೀಡಿಯೋ

    ವೈರಲ್ ಆಯ್ತು ಚಿನ್ನದ ಹುಡುಗನ ಮೂರು ವರ್ಷದ ಹಳೆಯ ವೀಡಿಯೋ

    ನವದೆಹಲಿ: ಟೋಕಿಯೋ ಒಲಿಂಪಿಕ್ಸ್ ಚಿನ್ನದ ಹುಡುಗ ನೀರಜ್ ಚೋಪ್ರಾ ಅವರ ಮೂರು ವರ್ಷದ ಹಳೆಯ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನೀರಜ್ ಚೋಪ್ರಾ ಅವರ ಮಾತುಗಳಿಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

    ಟೋಕಿಯೋದಿಂದ ಭಾರತಕ್ಕೆ ಬಂದ ಬಳಿಕ ನೀರಜ್ ಚೋಪ್ರಾ ಅವರನ್ನು ಸರ್ಕಾರ ಸೇರಿದಂತೆ ವಿವಿಧ ಸಂಘಟನೆಗಳು ಸನ್ಮಾನಿಸುತ್ತಿವೆ. ಇಡೀ ದೇಶದ ತುಂಬೆಲ್ಲ ನೀರಜ್ ಚೋಪ್ರಾ ಅವರಿಗೆ ಕಾರ್ಯಕ್ರಮಗಳಿಗೆ ಆಹ್ವಾನ ಬರುತ್ತಿವೆ ಎಂದು ವರದಿಯಾಗಿದೆ. ಮೂರು ವರ್ಷಗಳ ಹಿಂದೆ ಕಾಲೇಜಿನ ಕ್ರೀಡಾ ಸಮಾರಂಭದಲ್ಲಿ ನೀರಜ್ ಚೋಪ್ರಾ ಅತಿಥಿಯಾಗಿ ಭಾಗವಹಿಸಿದ್ದರು. ಅಂದು ನೀರಜ್ ಚೋಪ್ರಾ ವಿದ್ಯಾರ್ಥಿ ಜೊತೆ ಮಾತನಾಡಿದ ವೀಡಿಯೋ ಕ್ಲಿಪ್ ವೈರಲ್ ಆಗಿದೆ.

    ಅಂದು ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಇಂಗ್ಲಿಷ್ ನಲ್ಲಿ ನೀರಜ್ ಚೋಪ್ರಾ ಅವರಿಗೆ ಪ್ರಶ್ನೆ ಕೇಳಿದ್ದನು. ಆಗ ನಿಮಗೆ ಹಿಂದಿ ಬರಲ್ಲವಾ ಎಂದು ನೀರಜ್ ಪ್ರಶ್ನೆ ಮಾಡಿದ್ದರು. ಆಗ ವಿದ್ಯಾರ್ಥಿ ಹಿದಿ ಚೆನ್ನಾಗಿಯೇ ಬರುತ್ತೆ ಹೇಳಿದ್ದಕ್ಕೆ ಆ ಭಾಷೆಯಲ್ಲಿಯೇ ಸರಳವಾಗಿ ಪ್ರಶ್ನೆ ಕೇಳಬಹುದಲ್ವಾ ಎಂದು ಹೇಳಿದ್ದರು. ಇದನ್ನೂ ಓದಿ: ನೀರಜ್ ಚೋಪ್ರಾರಂತೆ ಜಾವೆಲಿನ್ ಎಸೆದ ರಾಖಿ ಸಾವಂತ್- ವೀಡಿಯೋ ವೈರಲ್

    ಇನ್ನೂ ವಿದ್ಯಾರ್ಥಿಯ ಪ್ರಶ್ನೆಗೆ ಉತ್ತರಿಸಿದ ನೀರಜ್ ಚೋಪ್ರಾ, ಆಟಗಾರ ಸದಾ ಗಾಯಗಳಿಂದ ದೂರವಾಗಿರಬೇಕಾಗುತ್ತದೆ. ತರಬೇತಿ ಅಥವಾ ಸ್ಪರ್ಧೆಯಲ್ಲಿ ಗಾಯಗಳಾಗದಂತೆ ಎಚ್ಚರಿಕೆ ತೆಗೆದುಕೊಳ್ಳಬೇಕಾಗುತ್ತದೆ. ಕೆಲವೊಮ್ಮೆ ಎಷ್ಟೇ ಪ್ರ್ಯಾಕ್ಟಿಸ್ ಮಾಡಿದ್ರೂ ಕೊನೆ ಕ್ಷಣದವರೆಗೂ ಒತ್ತಡ ಇರುತ್ತೆ. ಒಂದು ವೇಳೆ ಗಾಯಗೊಂಡ್ರೆ ನಾವು ಮತ್ತೆ ನಮ್ಮ ಹಳೆ ಲಯಕ್ಕೆ ಹಿಂದಿರುಗಲು ಸುಮಾರು ಎರಡು ವರ್ಷವಾದ್ರೂ ಸಮಯ ಬೇಕಾಗುತ್ತದೆ ಎಂದು ಉತ್ತರಿಸಿದ್ದರು. ಇದನ್ನೂ ಓದಿ: ನೀರಜ್ ಚೋಪ್ರಾಗೆ ಸಿನಿಮಾ ಆಫರ್ ನೀಡಿದ ಅಕ್ಷಯ್ ಕುಮಾರ್

    https://www.youtube.com/watch?v=F4Fw_LyMHCo

    ನಾನು ಸಿಂಗಲ್:
    ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ತಾವು ಸಿಂಗಲ್ ಮತ್ತು ಆಟದ ಮೇಲೆ ನನ್ನ ಗಮನ ಇರಲಿದೆ ಎಂದು ನೀರಜ್ ಚೋಪ್ರಾ ಹೇಳಿದ್ದರು. ಮಹಿಳಾ ಅಭಿಮಾನಿಗಳಿಂದ ಇಷ್ಟೊಂದು ಪ್ರಿತಿ, ಮೆಚ್ಚುಗೆ ಬರುತ್ತಿದೆ ಈ ಕುರಿತಾಗಿ ಏನು ಹೇಳುತ್ತೀರಿ ಎಂಬ ಪ್ರಶ್ನೆಗೆ ನೀರಜ್, ಇದು ಒಳ್ಳೆಯದು. ಆದರೆ ಸತ್ಯವನ್ನು ಹೇಳಬೇಕು ಎಂದರೆ, ನಾನು ಇನ್ನೂ ಸಿಂಗಲ್. ನಾನು ಅಭಿಮಾನಿಗಳಿಂದ ತುಂಬಾ ಪ್ರೀತಿಯನ್ನು ಪಡೆಯುತ್ತಿದ್ದೇನೆ. ಇದು ಸಂತೋಷದ ವಿಚಾರವಾಗಿದೆ. ಮುಂಬರುವ ಏಷ್ಯನ್ ಗೇಮ್ಸ್ ಮತ್ತು ವಿಶ್ವ ಚಾಂಪಿಯನ್‍ಶಿಪ್ ಮೇಲೆ ಕಣ್ಣಿಟ್ಟಿದ್ದೇನೆ. ಹಾಗಾಗಿ ನಾನು ನನ್ನ ಆಟದ ಮೇಲೆ ಗಮನ ಹರಿಸಲು ಬಯಸುತ್ತೇನೆ ಎಂದು ಹೇಳಿದ್ದರು. ಇದನ್ನೂ ಓದಿ: ರೈತನ ಮಗ 23 ವರ್ಷದ ನೀರಜ್ ಚೋಪ್ರಾ ಚಿನ್ನದ ಸಾಧನೆ

  • ಅತ್ತ ರೈಲು ಬರ್ತಿತ್ತು, ಇತ್ತ ಹಳಿಯಲ್ಲಿ ಸ್ಕೂಟಿ ಸಿಲುಕಿತ್ತು!

    ಅತ್ತ ರೈಲು ಬರ್ತಿತ್ತು, ಇತ್ತ ಹಳಿಯಲ್ಲಿ ಸ್ಕೂಟಿ ಸಿಲುಕಿತ್ತು!

    – ಕ್ಷಣ ಕ್ಷಣಕ್ಕೂ ಆತಂಕ!

    ಗಾಂಧೀನಗರ: ಗುಜರಾತಿನ ಜಮಾನಗರದಲ್ಲಿ ಸಿನಿಮಾ ಶೈಲಿಯ ಶಾಕಿಂಗ್ ವೀಡಿಯೋ ವೈರಲ್ ಆಗಿದೆ. ಒಂದು ಕಡೆ ರೈಲು ಬರುತ್ತಿದ್ರೆ, ಇತ್ತ ಓರ್ವ ವ್ಯಕ್ತಿ ಹಳಿಯಲ್ಲಿ ಸಿಲುಕಿದ್ದ ಸ್ಕೂಟಿ ತೆಗೆಯಲು ಹರಸಾಹಸ ಪಡುತ್ತಿರೋ ವೀಡಿಯೋ ಸ್ಥಳೀಯ ಮಟ್ಟದಲ್ಲಿ ಹರಿದಾಡುತ್ತಿದೆ.

    ಯುವಕನೋರ್ವ ತನ್ನ ಸ್ಕೂಟಿ ಜೊತೆ ರೈಲ್ವೇ ಹಳಿಯನ್ನ ಕ್ರಾಸ್ ಮಾಡುತ್ತಿದ್ದನು. ಅಷ್ಟರಲ್ಲಿಯೇ ರೈಲು ಆಗಮಿಸುತ್ತಿರೋದು ಕಾಣಿಸಿದೆ. ಯುವಕ ಸಹ ಅವಸರದಲ್ಲಿ ಹಳಿ ಕ್ರಾಸ್ ಮಾಡುವಾಗ ಸ್ಕೂಟರ್ ಅಲ್ಲಿಯೇ ಸಿಲುಕಿಕೊಂಡಿದೆ. ಯುವಕ ಹಳಿಯಿಂದ ಸ್ಕೂಟಿ ಹೊರಗೆ ತೆಗೆಯಲು ಪ್ರಯತ್ನಿಸುತ್ತಿದ್ರೆ, ದೂರದಲ್ಲಿದ್ದ ಜನರ ಎದೆ ಬಡಿತ ಪಕ್ಕದಲ್ಲಿದವರಿಗೂ ಕೇಳಿಸುತ್ತಿತ್ತು.

    ಯುವಕ 100 ಮೀಟರ್ ಸಮೀಪ ಬರೋವರೆಗೂ ಸ್ಕೂಟಿ ತೆಗೆಯಲು ಪ್ರಯತ್ನಿಸಿದ್ದಾನೆ. ಆದ್ರೆ ಸ್ಕೂಟಿ ಅಲ್ಲಿಯೇ ಸಿಲುಕಿದ ಪರಿಣಾಮ ರೈಲು ಸಮೀಪಕ್ಕೆ ಬರುತ್ತಿದ್ದಂತೆ ಪಕ್ಕಕ್ಕೆ ಜಿಗಿದು ಜೀವ ಉಳಿಸಿಕೊಂಡಿದ್ದಾನೆ. ರೈಲು ಸ್ಕೂಟಿಯನ್ನ ಸುಮಾರು 100 ಮೀಟರ್ ವರೆಗೂ ಎಳೆದೊಯ್ದು ನಿಂತಿದೆ. ರೈಲು ನಿಲ್ಲಿಸಿದ ಬಳಿಕ ಚಾಲಕರು ಅಪ್ಪಚ್ಚಿಯಾಗಿದ್ದ ಸ್ಕೂಟಿಯನ್ನ ತೆಗೆದಿದ್ದಾರೆ.

    ಈ ಎಲ್ಲ ದೃಶ್ಯಗಳನ್ನು ಸ್ಥಳೀಯರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಎದೆ ಝಲ್ಲೆನ್ನಿಸುವ ವೀಡಿಯೋ ಹೆಚ್ಚು ಶೇರ್ ಆಗುತ್ತಿದೆ. ವಾಹನ ಸವಾರರು ಸೂಚಿತ ಮಾರ್ಗದಲ್ಲಿಯೇ ರೈಲು ಹಳಿಯನ್ನ ಕ್ರಾಸ್ ಮಾಡಬೇಕೆಂದು ಅಧಿಕಾರಿಗಳು ತಿಳಿಸಿದ್ದಾರೆ.

  • 36 ಪತ್ನಿಯರ ಎದುರು 37ನೇ ಮದುವೆಯಾದ- ವೀಡಿಯೋ ವೈರಲ್

    36 ಪತ್ನಿಯರ ಎದುರು 37ನೇ ಮದುವೆಯಾದ- ವೀಡಿಯೋ ವೈರಲ್

    ಹಿಂದೆಲ್ಲ ರಾಜರು ಡಜನ್‍ಗಟ್ಟಲೆ ಮದುವೆಯಾಗುತ್ತಿದ್ದರು ಎಂಬ ಕತೆಗಳನ್ನು ಓದಿದ್ದೇವೆ. ರಾಜ ಎಷ್ಟೇ ಮದುವೆಯಾದರೂ ಉಳಿದ ಪತ್ನಿಯರು ಅದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿರಲಿಲ್ಲ. ಇಂತಹದ್ದೆ ಒಂದು ಘಟನೆ ಇದೀಗ ಸುದ್ದಿಯಾಗಿದೆ.

    21ನೇ ಶತಮಾನದಲ್ಲೂ ವ್ಯಕ್ತಿಯೊಬ್ಬ ಬರೋಬ್ಬರಿ 37 ಮದುವೆಯಾಗಿದ್ದಾನೆ. ಅದೂ, ಉಳಿದ  ಪತ್ನಿಯರ ಎದುರಿಗೇ 37ನೇ ಪತ್ನಿಯನ್ನು ವರಿಸಿದ್ದಾನೆ. ಮದುವೆಯಾಗುತ್ತಿರುವ ವೀಡಿಯೋ ವೈರಲ್ ಆಗಿದೆ. ಇದನ್ನೂ ಓದಿ: ತೆರಿಗೆ ಕಟ್ಟಲು ಆಗ್ತಿಲ್ಲ – ಅಳಲು ತೋಡಿಕೊಂಡ ಕಂಗನಾ

    ಇದು ಅವರ 37ನೇ ಮದುವೆ ಎಂದು ಹೇಳಲಾಗಿದ್ದು, ಈ ವಿವಾಹಕ್ಕೆ ಅವರ ಉಳಿದ 28 ಪತ್ನಿಯರು, 35 ಮಕ್ಕಳು ಮತ್ತು 126 ಮರಿಮೊಮ್ಮಕ್ಕಳು ಸಾಕ್ಷಿಯಾಗಿದ್ದಾರೆ. ಈ ವೀಡಿಯೋ ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿದೆ.

    ಐಪಿಎಸ್ ಅಧಿಕಾರಿ ರುಪಿನ್ ಶರ್ಮಾ ಎಂಬುವರು 45 ಸೆಕೆಂಡ್‍ಗಳ ವೀಡಿಯೋವನ್ನು ಪೋಸ್ಟ್ ಮಾಡಿದ್ದು, ಅತ್ಯಂತ ಧೈರ್ಯಶಾಲಿ ವ್ಯಕ್ತಿ ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ. ಆದರೆ ಈ ವೀಡಿಯೋ ಎಲ್ಲಿ, ಯಾವಾಗ ಚಿತ್ರೀಕರಿಸಿದ್ದು ಎಂಬುದು ಗೊತ್ತಾಗಿಲ್ಲ. ಆದರೆ ನೆಟ್ಟಿಗರು ವಿವಿಧ ಕಾಮೆಂಟ್‍ಗಳನ್ನು ಹಾಕಿದ್ದಾರೆ.

    ಈ ಹಿಂದೆ ತೈವಾನ್‍ನ ವ್ಯಕ್ತಿಯೊಬ್ಬ ಒಂದೇ ಮಹಿಳೆಯನ್ನು 37 ದಿನಗಳಲ್ಲಿ, ನಾಲ್ಕು ಬಾರಿ ಮದುವೆಯಾಗಿ, ಮೂರು ಬಾರಿ ವಿಚ್ಛೇದನ ನೀಡಿ ಸುದ್ದಿಯಾಗಿದ್ದರು.