Tag: viral video

  • ವೃದ್ಧನ ಹಣೆಗೆ ಕಿಸ್ ಕೊಟ್ಟು I Love You ಅಂದ ಸುಂದರಿ- ಯುವಕರನ್ನು ರೊಚ್ಚಿಗೆಬ್ಬಿಸಿದ ವೀಡಿಯೋ

    ವೃದ್ಧನ ಹಣೆಗೆ ಕಿಸ್ ಕೊಟ್ಟು I Love You ಅಂದ ಸುಂದರಿ- ಯುವಕರನ್ನು ರೊಚ್ಚಿಗೆಬ್ಬಿಸಿದ ವೀಡಿಯೋ

    ಬ್ಬ ವ್ಯಕ್ತಿಗೆ ಮದುವೆ (Marriage) ಅನ್ನೋದು ಸ್ವರ್ಗದಲ್ಲಿ ನಿಶ್ಚಯವಾಗುತ್ತಂತೆ. ಪ್ರತಿಯೊಬ್ಬರೂ ತಮ್ಮ ಸಂಗಾತಿಯನ್ನು ನಂಬಲಾಗದಂತಹ ಅದೃಷ್ಟದೊಂದಿಗೆ ಪಡೆಯುತ್ತಾರೆ. ಕೆಲವೊಂದು ಬಾರಿ ವಯಸ್ಸಿನ ಅಂತರವೇ ಇರಬಹುದು. ಇದೀಗ ಇಂತದ್ದೇ ಜೋಡಿ (Couple) ಯೊಂದು ದಾಂಪತ್ಯ ಜೀವನಕ್ಕೆ ಕಾಲಿಡುವ ಯುವಕರನ್ನು ರೊಚ್ಚಿಗೆಬ್ಬಿಸಿದೆ.

    ಹೌದು. ಕೆಲ ದಿನಗಳಿಂದ ಸೋಶಿಯಲ್ ಮೀಡಿಯಾ (Social Media) ದಲ್ಲಿ ವೀಡಿಯೋವೊಂದು ವೈರಲ್ ಆಗುತ್ತಿದೆ. ವೀಡಿಯೋದಲ್ಲಿರುವ ಜೋಡಿ ನೋಡಿದ ಎಲ್ಲರೂ ಅಚ್ಚರಿಗೊಳಗಾಗಿದ್ದಾರೆ. ಕಡಿಮೆ ವಯ್ಸಿನ ಅಂತರ ಇರುವ ಜೋಡಿಗಳನ್ನು ನಾವು ನೋಡಿರಬಹುದು. ಆದರೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವೀಡಿಯೋದಲ್ಲಿರೋ ಜೋಡಿ ನೋಡಿ ಯುವಕರೇ ಕಂಗಾಲಾಗಿದ್ದಾರೆ. ಇದನ್ನೂ ಓದಿ: ‘ಲೈಫ್ ಇಸ್ ಬ್ಯುಟಿಫುಲ್’ ಹನಿಮೂನ್ ಮೂಡ್ ನಲ್ಲಿ ಮಹಾಲಕ್ಷ್ಮಿ ಮತ್ತು ರವೀಂದರ್

    ವೀಡಿಯೋದಲ್ಲೇನಿದೆ..?: ವೈರಲ್ ಆಗುತ್ತಿರುವ ವೀಡಿಯೋದಲ್ಲಿ ವಧು ತನ್ನ ಪಕ್ಕದಲ್ಲಿ ಕುಳಿತಿರುವ ವೃದ್ಧನಿಗೆ ಐ ಲವ್ ಯೂ (I Love You) ಎಂದು ಹೇಳುತ್ತಿರುವುದನ್ನು ಕಾಣಬಹುದಾಗಿದೆ. ಈ ಮೂಲಕ ವರ ಈ ವೃದ್ಧನೇ ಎಂದು ಎಲ್ಲರೂ ಹೇಳಿಕೊಳ್ಳುತ್ತಿದ್ದಾರೆ. ಇದು ಅಧಿಕೃತವಾಗಿ ದೃಢಪಟ್ಟಿಲ್ಲವಾದರೂ, ಅವರಿಬ್ಬರೂ ಸತಿ-ಪತಿಗಳು ಎಂಬುದಾಗಿ ಕಾಣಿಸಿಕೊಳ್ಳುತ್ತದೆ. ಸುಂದರವಾದ ವಧು ತನ್ನ ಪಕ್ಕದಲ್ಲಿ ಕುಳಿತಿದ್ದ ಮುದುಕನಿಗೆ I Love You ಎಂದು ಹೇಳಿದಾಗ, ವೃದ್ಧ ಕೂಡ ಅವಳ ಕಡೆ ತಿರುಗಿ ಅದೇ ಮಾತನ್ನು ಹೇಳಿದ್ದಾನೆ. ಇದರಿಂದ ಅವರಿಬ್ಬರೂ ನಗುನಗುತ್ತಾ ತಮ್ಮ ದಾಂಪತ್ಯದಲ್ಲಿ ಸಂತಸದಿಂದಿರುವಂತೆ ಕಂಡುಬರುತ್ತಿದೆ.

    ಐ ಲವ್ ಯೂ ಎಂದು ಹೇಳುತ್ತಾ ವಧು ವೃದ್ಧನ ಹಣೆಗೆ ಮುತ್ತಿಡುತ್ತಾಳೆ. ಇದನ್ನು ನೋಡಿದ ಜನ ಅಚ್ಚರಿಗೊಳಗಾಗಿದ್ದಾರೆ. ಈ ವೀಡಿಯೋವನ್ನು ಇದೀಗ ಎಡಿಟ್ ಮಾಡಲಾಗುತ್ತದೆ. ಒಂದು ವೀಡಿಯೋದಲ್ಲಿ ಯುವತಿ ವೃದ್ಧನಿಗೆ ಐ ಲವ್ ಯೂ ಹಣೆಗೆ ಮುತ್ತಿಡುತ್ತಿದ್ದಂತೆಯೇ ಅದಕ್ಕೆ, ವ್ಯಕ್ತಿಯೊಬ್ಬ ಓಡಿ ಹೋಗಿ ನೀರಿಗೆ ಧುಮುಕುವ ವೀಡಿಯೋವನ್ನು ಎಡಿಟ್ ಮಾಡಿ ವೈರಲ್ ಮಾಡಲಾಗಿದೆ. ಇದನ್ನೂ ಓದಿ: 55 ವರ್ಷದ ವ್ಯಕ್ತಿಯನ್ನು ವರಿಸಿದ 18ರ ಯುವತಿ- ಅಚ್ಚರಿ ಹುಟ್ಟಿಸುತ್ತೆ ಕಾರಣ

    ಅಲ್ಲದೆ ವೀಡಿಯೋದ ಮೇಲೆ “ನಾನು ಒಬ್ಬಂಟಿಯಾಗಿದ್ದೇನೆ” ಎಂದು ಬರೆದುಕೊಳ್ಳಲಾಗಿದೆ. ಕಪಲ್ ಆಫೀಶಿಯಲ್ ಪೇಜ್ ಎಂಬ ಇನ್‍ಸ್ಟಾಗ್ರಾಮ್ ಖಾತೆಯಿಂದ ಈ ವೀಡಿಯೊವನ್ನು ಪೋಸ್ಟ್ ಮಾಡಲಾಗಿದೆ. ಸದ್ಯ ಈ ವೀಡಿಯೋಗೆ ಹಲವಾರು ಮಂದಿ ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: ಮಹಾಲಕ್ಷ್ಮಿ ಮಲಗಲು ಮಂಚಕ್ಕೆ ಬಂಗಾರದ ಲೇಪನ ಮಾಡಿಸಿದ ಪತಿ ರವೀಂದರ್

    Live Tv
    [brid partner=56869869 player=32851 video=960834 autoplay=true]

  • ವಿದ್ಯಾರ್ಥಿಸಂಘದ ಚುನಾವಣೆ – ಯುವತಿಯರ ಕಾಲಿಗೆ ಬಿದ್ದು ವೋಟು ಕೇಳಿದ ಯುವಕ

    ವಿದ್ಯಾರ್ಥಿಸಂಘದ ಚುನಾವಣೆ – ಯುವತಿಯರ ಕಾಲಿಗೆ ಬಿದ್ದು ವೋಟು ಕೇಳಿದ ಯುವಕ

    ಜೈಪುರ: ಚುನಾವಣೆಗಳು ಹತ್ತಿರವಾಗುತ್ತಿದ್ದಂತೆ ತಮ್ಮನ್ನು ಬೆಂಬಲಿಸಿ ಮತ ನೀಡುವಂತೆ ಕೈಮುಗಿದು ಬೇಡಿಕೊಳ್ತಾರೆ, ಕಾಲಿಗೂ ಬೀಳುತ್ತಾರೆ. ಇದರಲ್ಲಿ ಹೊಸತೇನೂ ಇರುವುದಿಲ್ಲ. ಆದರೆ ಇಲ್ಲೊಬ್ಬ ಕಾಲೇಜು ವಿದ್ಯಾರ್ಥಿ ಸಂಘದ ಚುನಾವಣೆಗೆ ಮತ ಕೇಳಲು ವಿನೂತನ ಪ್ರಯತ್ನ ಮಾಡಿದ್ದಾನೆ.

    ಮತದಾನಕ್ಕೂ ಮುನ್ನ ರಸ್ತೆಯಲ್ಲೇ ಯುವತಿಯರನ್ನ ತಡೆದು ನಿಲ್ಲಿಸಿ ಅವರ ಕಾಲಿಗೆ ಬೀಳುತ್ತಾ ನನಗೆ ವೋಟು ಕೊಡಿ ಎಂದು ಅಂಗಲಾಚಿದ್ದಾನೆ. ಯುವಕ ಕಾಲಿಗೆ ಬೀಳುತ್ತಿರುವುದಕ್ಕೆ ಯುವತಿಯರು ನಾಚಿ ನೀರಾಗಿದ್ದರು. ಹೀಗೆಲ್ಲಾ ಮಾಡ್ಬೇಡಿ ಎನ್ನುತ್ತಾ ಕಾಲ್ಕಿತ್ತಿದ್ದರು. ಸದ್ಯ ಯುವಕ ಕಾಲಿಗೆ ಬೀದಿದ್ದ ವೀಡಿಯೋ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಇದನ್ನೂ ಓದಿ: ನಟಿ, ಬಿಜೆಪಿ ನಾಯಕಿ ಸೊನಾಲಿ ಪೋಗಟ್ ಕೊಲೆಗೆ ಮೆಗಾ ಟ್ವಿಸ್ಟ್: ವೈರಲ್ ವಿಡಿಯೋ ಬಗ್ಗೆ ಅನುಮಾನ

    ರಾಜಸ್ಥಾನದ ಬರಾನ್‌ನ ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿ ಸಂಘದ ಚುನಾವಣೆಗೆ ಸ್ಪರ್ಧಿಸಿದ್ದ ಯುವಕ ರಸ್ತೆಯಲ್ಲೇ ಯುವತಿಯರನ್ನು ತಡೆದು ನಿಲ್ಲಿಸಿ ಒಬ್ಬೊಬ್ಬರಿಗೂ ಕಾಲಿಗೆ ಬಿದ್ದು, ಮತ ಕೊಡಿ ಎಂದು ಕೇಳಿದ್ದಾನೆ. ಇದನ್ನೂ ಓದಿ: ಜಮ್ಮು-ಕಾಶ್ಮೀರ ಗಡಿಯಲ್ಲಿ ಪಾಕಿಸ್ತಾನಿ ನುಸುಳುಕೋರನ ಬಂಧಿಸಿದ ಬಿಎಸ್‌ಎಫ್‌

    ಅಂದಹಾಗೆ ಸಂಘದ ಚುನಾವಣೆ ನಿನ್ನೆ (ಶುಕ್ರವಾರ) ನಡೆದಿದೆ. ಇಂದು ಎಣಿಕೆ ನಡೆಯುತ್ತಿದ್ದು, ಸಂಜೆಯ ವೇಳೆ ಫಲಿತಾಂಶ ಹೊರಬೀಳಲಿದೆ. ಆದರೆ ಮತದಾನಕ್ಕೂ ಮುನ್ನ ಯುವಕರು ಪರಿಪರಿಯಾಗಿ ಬೇಡಿಕೊಂಡಿದ್ದ ವೀಡಿಯೋ ವೈರಲ್ ಆಗಿದೆ.

    Live Tv
    [brid partner=56869869 player=32851 video=960834 autoplay=true]

  • ರಸಗುಲ್ಲ ತಿನ್ನಿಸೋ ನೆಪದಲ್ಲಿ ವರನಿಗೆ ಸಿಹಿ ಮುತ್ತಿಟ್ಟ ನಾದಿನಿ – ವೀಡಿಯೋ ವೈರಲ್

    ರಸಗುಲ್ಲ ತಿನ್ನಿಸೋ ನೆಪದಲ್ಲಿ ವರನಿಗೆ ಸಿಹಿ ಮುತ್ತಿಟ್ಟ ನಾದಿನಿ – ವೀಡಿಯೋ ವೈರಲ್

    ನವದೆಹಲಿ: ಮದುವೆ ಅಂದ್ರೇನೆ ಸಂಭ್ರಮ, ಇಲ್ಲಿ ಮೋಜು ಮಸ್ತಿ ಎಲ್ಲವೂ ಸಹಜ. ಇದರೊಂದಿಗೆ ನೂರಾರು ಶಾಸ್ತ್ರ, ಸಂಪ್ರದಾಯ ಇದ್ದೇ ಇರುತ್ತವೆ. ಆಯಾ ಪ್ರದೇಶಕ್ಕೆ ಅನುಸಾರವಾಗಿ ಶಾಸ್ತ್ರ, ಸಂಪ್ರದಾಯಗಳೂ ಬದಲಾಗಿರುತ್ತವೆ. ಕೆಲವೊಂದು ಶಾಸ್ತ್ರಗಳು ಹೆಚ್ಚು ನಗು ತರಿಸುತ್ತವೆ. ಇಂತಹ ಶಾಸ್ತ್ರಗಳೂ ಇವೆಯಾ ಎಂದು ಅನ್ನಿಸುತ್ತದೆ.

     

    View this post on Instagram

     

    A post shared by Bhutni_ke (@bhutni_ke_memes)

    ಆದರೆ ಇಲ್ಲೊಂದು ಪ್ರದೇಶದಲ್ಲಿ ಮದುವೆ ವೇಳೆ ವರನಿಗೆ ನಾದಿನಿ ರಸಗುಲ್ಲ ತಿನ್ನಿಸುವುದು ಸಂಪ್ರದಾಯ. ಇಲ್ಲೊಂದು ಟ್ವಿಸ್ಟ್ ಕೂಡ ಇದೆ. ವರನಿಗೆ ರಸಗುಲ್ಲ ತಿನ್ನಿಸುವ ವೇಳೆ, ವರ ಅದನ್ನು ತಿನ್ನದಂತೆ ನಾದಿನಿಯರು ತಡೆಯುತ್ತಾರೆ. ತಡೆದರೆ ಅವರು ಗೆದ್ದಂತೆ, ಇಲ್ಲವಾದರೆ ವರ ಆಟದ ವಿನ್ನರ್ ಆಗ್ತಾನೆ. ಹೀಗೆ ತಟ್ಟೆಯಲ್ಲಿ ರಸಗುಲ್ಲ ಹಿಡಿದುಕೊಂಡು ನಾದಿನಿ ನಿಂತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಇನ್ನೇನು ನಾದಿನಿ ವರನಿಗೆ ರಸಗುಲ್ಲ ತಿನ್ನಿಸಬೇಕು ಎನ್ನುವಷ್ಟರಲ್ಲಿ ವರ ನಾದಿನಿಯ ಕೈಯನ್ನು ಹಿಡಿದು ಎಳೆಯುತ್ತಾನೆ. ವರನಿಗೋ ಆಟ ಗೆಲ್ಲುವ ತವಕ. ನಾದಿನಿ ಕೂಡಾ ತಾನೇನು ಕಮ್ಮಿ ಎನ್ನುವಂತೆ ತಡೆಯಲು ಪ್ರಯತ್ನಿಸುತ್ತಾಳೆ. ಈ ಕ್ಷಣ ವಿಡಿಯೋದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಪ್ರವೀಣ್ ಕುಮಾರ್ ನೆಟ್ಟಾರು ಹತ್ಯೆ ಪ್ರಕರಣ – ಬೆಳ್ಳಾರೆ, ಸುಬ್ರಹ್ಮಣ್ಯ ಠಾಣಾ ಎಸ್‍ಐಗಳ ಎತ್ತಂಗಡಿ

    ಇಬ್ಬರ ನಡುವಿನ ಪೈಪೋಟಿಯಲ್ಲಿ ರಸಗುಲ್ಲ ಮಾತ್ರ ನೆಲದ ಮೇಲೆ ಬೀಳುತ್ತದೆ. ಅದರ ಮಧ್ಯೆ ಒಂದು ಅಚಾತುರ್ಯವೂ ನಡೆದು ಹೋಗುತ್ತದೆ. ನಾದಿನಿ ಕೈ ಹಿಡಿದು ರಸಗುಲ್ಲ ತಿನ್ನಲು ಎಳೆಯುತ್ತಾನೆ. ಆದರೆ ತಾನೇ ಗೆಲ್ಲಬೇಕು ಎಂದು ರಸಗುಲ್ಲ ತಿನ್ನಲು ನಾದಿನಿ ಮುಂದಾಗುತ್ತಾಳೆ, ರಸಗುಲ್ಲ ಕೆಳಕ್ಕೆ ಬಿದ್ದು, ವರನಿಗೆ ಮುತ್ತಿಡುತ್ತಾಳೆ. ಅಲ್ಲಿದ್ದವರೆಲ್ಲಾ ಇದನ್ನೂ ತಮಾಷೆಯಾಗಿಯೇ ಸ್ವೀಕರಿಸುತ್ತಾರೆ. ಪಕ್ಕದಲ್ಲಿದ್ದ ವಧುವಿಗೆ ಮಾತ್ರ ಏನು ನಡೆಯುತ್ತಿದೆ ಎನ್ನುವುದು ಒಂದು ಕ್ಷಣಕ್ಕೆ ಅರ್ಥವಾದಂತೆ ಕಾಣುವುದಿಲ್ಲ.

    Live Tv
    [brid partner=56869869 player=32851 video=960834 autoplay=true]

  • ಬೀಚ್‍ನಲ್ಲಿ ಬೇಬಿ ಡೈನೋಸಾರ್?- ವೀಡಿಯೋ ವೈರಲ್

    ಬೀಚ್‍ನಲ್ಲಿ ಬೇಬಿ ಡೈನೋಸಾರ್?- ವೀಡಿಯೋ ವೈರಲ್

    ಮೆಕ್ಸಿಕೋ: ಬೀಚ್‍ನಲ್ಲಿ ಬೇಬಿ ಡೈನೋಸಾರ್‌ಗಳ ಗುಂಪು ಓಡುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಈ ವೀಡಿಯೋ ನೋಡಿ ಕೆಲವರು ಆಶ್ಚರ್ಯರಾಗಿದ್ದಾರೆ.

    ಡೈನೋಸಾರ್ ಮರಿಗಳು ಸಮುದ್ರದ ಬೀಚ್‍ನಲ್ಲಿ ಓಡಾಡುತ್ತಿವೆ ಎಂಬ ಶೀರ್ಷಿಕೆಯನ್ನು ನೀಡಿ ಈ ವೀಡಿಯೋ ಒಬ್ಬರು ಹಂಚಿಕೊಂಡಿದ್ದಾರೆ. ಈ ವೀಡಿಯೋ 14 ಸೆಕೆಂಡಿದ್ದು, ನೋಡಗರನ್ನು ಗೊಂದಲಕ್ಕಿಡು ಮಾಡುತ್ತದೆ. ಈಗಾಗಲೇ ಈ ವೀಡಿಯೋವನ್ನು 9.9 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, 47 ಸಾವಿರಕ್ಕೂ ಅಧಿಕ ಲೈಕ್ಸ್ ಬಂದಿದೆ.

    ವೀಡಿಯೋದಲ್ಲಿ ಏನಿದೆ?:
    ಉದ್ದನೆಯ ಕುತ್ತಿಗೆಯ ಡೈನೋಸಾರ್ ಜಾತಿಯ ಪ್ರಾಣಿಯೊಂದು ಸಮುದ್ರದ ಕಡೆಗೆ ಓಡುತ್ತಿವೆ. ಇದನ್ನು ಒಮ್ಮೆಲೆ ನೋಡಿದಾಗ ಡೈನೋಸಾರ್ ರೀತಿಯೇ ಕಾಣುತ್ತದೆ. ಆದರೆ ಸೂಕ್ಷ್ಮವಾಗಿ ನೋಡಿದಾಗ ಡೈನೋಸಾರ್ ಅಲ್ಲ ಎನ್ನುವುದು ನಮ್ಮ ಅರಿವಿಗೆ ಬರುತ್ತದೆ.

    ಅಂದ ಹಾಗೆ ಈ ವೀಡಿಯೋದಲ್ಲಿರುವ ಪ್ರಾಣಿ ಡೈನೋಸಾರ್ ಅಲ್ಲ, ಬದಲಿಗೆ ಕೋಟಿಸ್ ಎನ್ನುವ ಪ್ರಾಣಿ. ಇದರ ಬಾಲ ಉದ್ದವಿರುವುದರಿಂದ ಇದು ನೋಡಲು ಡೈನೋಸಾರ್ ಹಾಗೆ ಕಾಣುತ್ತಿದೆ. ಈ ವೀಡಿಯೋವನ್ನು ಸೂಕ್ಷ್ಮವಾಗಿ ನೋಡಿದಾಗ ಕೋತಿಸ್ ಓಡುತ್ತಿರುವುದನ್ನು ಉಲ್ಟಾ ತೋರಿಸಿದ್ದಾರೆ ಎನ್ನುವುದು ತಿಳಿಯುತ್ತದೆ. ಇದನ್ನೂ ಓದಿ: ನಾನು ಒಳ್ಳೆಯದನ್ನೂ ಮಾಡಿದ್ದೀನಿ, ಅದನ್ನೂ ತೋರಿಸಿ – ಕ್ಯಾಮೆರಾ ಮುಂದೆ ಕೈ ಮುಗಿದ ಕಿಂಗ್‍ಪಿನ್ ಆರ್.ಡಿ.ಪಾಟೀಲ್

    ಕೋಟಿಸ್ ಅಮೆರಿಕ, ಮೆಕ್ಸಿಕೊ ದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಇವು 33 ರಿಂದ 68 ಇಂಚು ಎತ್ತರವಿದ್ದು, 2ರಿಂದ 8 ಕ.ಜಿಯವರೆಗೆ ತೂಕವಿರಲಿದೆ. ಇದನ್ನೂ ಓದಿ: ಹಿಮಾಚಲ ಅಸೆಂಬ್ಲಿ ಗೇಟ್‌ನಲ್ಲಿ ಖಲಿಸ್ತಾನ್ ಧ್ವಜ – ಸಿಎಂ ಜೈರಾಮ್ ಠಾಕೂರ್ ಕಿಡಿ

  • ಹುತಾತ್ಮ ಮಗನ ಫೋಟೋ ನೋಡಿ ಕಣ್ಣೀರಿಟ್ಟ ತಾಯಿ ವೀಡಿಯೋ ವೈರಲ್

    ಹುತಾತ್ಮ ಮಗನ ಫೋಟೋ ನೋಡಿ ಕಣ್ಣೀರಿಟ್ಟ ತಾಯಿ ವೀಡಿಯೋ ವೈರಲ್

    ನವದೆಹಲಿ: ಹುತಾತ್ಮ ಮಗನ ಫೋಟೋಗೆ ಮುತ್ತಿಟ್ಟು ತಾಯಿಯಬ್ಬರು ಭಾವುಕರಾದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಅಲ್ಲದೆ ಈ ವೀಡಿಯೋ ನೋಡುತ್ತಿದ್ದಂತೆಯೇ ನೆಟ್ಟಿಗರು ಕೂಡ ಕಣ್ಣೀರು ಹಾಕಿದ್ದಾರೆ.

    ಈ ಭಾವನಾತ್ಮಕ ವೀಡಿಯೋದಲ್ಲಿ, ತಾಯಿ ಪೋಸ್ಟರ್ ನಲ್ಲಿರುವ ತನ್ನ ಹುತಾತ್ಮ ಮಗನ ಚಿತ್ರವನ್ನು ಪದೇ ಪದೇ ಚುಂಬಿಸುತ್ತಿದ್ದಾರೆ. ಈ ವೀಡಿಯೋ ಎಲ್ಲರ ಮನಕರಗಿಸುವಂತಿದೆ. ಹುತಾತ್ಮ ಯೋಧನಿಗೆ ಎಲ್ಲರೂ ಗೌರವ ವಂದನೆ ಸಲ್ಲಿಸುತ್ತಿದ್ದಾರೆ.

    ತನ್ನ ಹುತಾತ್ಮ ಮಗನ ಚಿತ್ರವನ್ನು ನೋಡುತ್ತಾ ತಾಯಿ ಹೇಗೆ ಭಾವುಕರಾಗುತ್ತಾರೆ ಎಂಬುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಕೆಲವೊಮ್ಮೆ ಮಗನ ಫೋಟೋವನ್ನು ಕರವಸ್ತ್ರದಿಂದ ಒರೆಸುತ್ತಾರೆ ಮತ್ತು ಕೆಲವೊಮ್ಮೆ ಮುತ್ತಿಡುತ್ತಾರೆ. ಹುತಾತ್ಮ ಮಗನ ಮೇಲಿನ ತಾಯಿಯ ಪ್ರೀತಿ, ವಾತ್ಸಲ್ಯವನ್ನು ಕಂಡು ಸ್ಥಳದಲ್ಲಿದ್ದವರು ಭಾವುಕರಾದರು.

    ಈ ವೀಡಿಯೋ ಛತ್ತೀಸ್‍ಗಢದ ಸುಕ್ಮಾ ಜಿಲ್ಲೆಯ ದೋರ್ನಪಾಲ್‍ನದ್ದಾಗಿದೆ. ಹುತಾತ್ಮ ಯೋಧರಿಗಾಗಿ ಇಲ್ಲಿ ಸ್ಮಾರಕವನ್ನು ನಿರ್ಮಿಸಲಾಗಿದೆ. ಈ ಹಿನ್ನೆಲೆಯಲ್ಲಿ ಹುತಾತ್ಮರ ಕುಟುಂಬಗಳು ಆಗಮಿಸಿದ್ದರು. ಇದೇ ವೇಳೆ ಹುತಾತ್ಮ ಯೋಧನ ತಾಯಿ ತನ್ನ ಮಗನ ಫೋಟೋವನ್ನು ನೋಡುತ್ತಿದ್ದಂತೆಯೇ ಅವರ ಕಣ್ಣುಗಳಿಂದ ನೀರು ಜಿನುಗಿದೆ. ಇದನ್ನೂ ಓದಿ: ರಾಜ್ಯದ ಪ್ರತಿಯೊಂದು ನೇಮಕಾತಿಯಲ್ಲೂ ಗೋಲ್ಮಾಲ್ – ಆರೋಪಿ ಗೊತ್ತಿದ್ರೂ ಕೇಸ್ ಮುಚ್ಚಾಕಿದ್ರಾ ಪೊಲೀಸರು?

    ಸದ್ಯ ಈ ವೀಡಿಯೋ ನೆಟ್ಟಿಗರ ಕಣ್ಣುಗಳನ್ನು ಕೂಡ ತೇವಗೊಳಿಸಿದೆ. ಟ್ವಿಟ್ಟರ್ ಬಳಕೆದಾರರೊಬ್ಬರು ಇದನ್ನು ನೋಡಿ ನನ್ನ ಕಣ್ಣೀರು ನಿಲ್ಲುತ್ತಿಲ್ಲ ಎಂದಿದ್ದರೆ ಇನ್ನೊಬ್ಬರು ಆ ತಾಯಿಯ ದುಃಖವನ್ನು ಅನುಭವಿಸಲಾಗುವುದಿಲ್ಲ ಎಂದು ಭಾವುಕರಾಗಿದ್ದಾರೆ. ಒಟ್ಟಿನಲ್ಲಿ ಅನೇಕ ಮಂದಿ ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದ್ದಾರೆ. ದೇಶಕ್ಕಾಗಿ ತ್ಯಾಗ ಮಾಡಿದ ಯೋಧನ ತಾಯಿಗೆ ನಮನಗಳನ್ನು ತಿಳಿಸಿದ್ದಾರೆ.

     

  • ಶಾಂಘೈಯಲ್ಲಿ ಲಾಕ್‍ಡೌನ್ ಎಫೆಕ್ಟ್- 3ನೇ ಮಹಡಿಯಿಂದ ಹಗ್ಗದ ಮೂಲಕ ಶ್ವಾನ ಇಳಿಸಿದ ವ್ಯಕ್ತಿ!

    ಶಾಂಘೈಯಲ್ಲಿ ಲಾಕ್‍ಡೌನ್ ಎಫೆಕ್ಟ್- 3ನೇ ಮಹಡಿಯಿಂದ ಹಗ್ಗದ ಮೂಲಕ ಶ್ವಾನ ಇಳಿಸಿದ ವ್ಯಕ್ತಿ!

    ಬೀಜಿಂಗ್: ಈಗಾಗಲೇ ಚೀನಾದ ಶಾಂಘೈನಲ್ಲಿ ಕೊರೊನಾ ಸೋಂಕು ಹೆಚ್ಚಳದಿಂದ ಲಾಕ್‍ಡೌನ್ ಆಗಿದೆ. ಈ ಮಧ್ಯೆ ವ್ಯಕ್ತಿಯೊಬ್ಬ ಶ್ವಾನವನ್ನು 3ನೇ ಮಹಡಿಯಿಂದ ಇಳಿಸಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಶ್ವಾನ ಪ್ರೇಮಿಗಳು ಇದರಿಂದ ಕೆರಳಿದ್ದಾರೆ.

    ಚೀನಾದ ಅತಿದೊಡ್ಡ ನಗರ ಶಾಂಘೈ ಲಾಕ್‍ಡೌನ್ ಆಗಿದ್ದು, 16 ಮಿಲಿಯನ್ ನಿವಾಸಿಗಳು ಕೊರೊನಾ ಟೆಸ್ಟ್ ಮಾಡಿಸಿಕೊಳ್ಳುತ್ತಿದ್ದಾರೆ. ವ್ಯಕ್ತಿಯೊಬ್ಬ ತನ್ನ ಸಾಕು ನಾಯಿಯನ್ನು 3ನೇ ಮಹಡಿಯ ಕಿಟಕಿಯಿಂದ ಕೆಳಗೆ ಇಳಿಸಿ ವಾಕ್ ಮಾಡಿಸಿದ್ದಾನೆ. ಇದನ್ನು ಪಕ್ಕದ ಮನೆಯವರು ವೀಡಿಯೋ ಮಾಡಿದ್ದು, ಇದೀಗ ಈ ವೀಡಿಯೋ ಸಾಕಷ್ಟು ವೈರಲ್ ಆಗುತ್ತದೆ. ಇದನ್ನು ನೋಡಿದ ನೆಟ್ಟಿಗರು ವ್ಯಕ್ತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ವೀಡಿಯೋದಲ್ಲಿ ಏನಿದೆ?: ಕೊರೊನಾ ಹೆಚ್ಚಳದಿಂದ ಲಾಕ್‍ಡೌನ್ ಆಗಿದೆ. ಇದರಿಂದ ಕೆಲವು ಕಠಿಣ ನಿಯಮಗಳನ್ನು ಜಾರಿಗೆ ತಂದಿದ್ದಾರೆ. ಈ ಮಧ್ಯೆ ವ್ಯಕ್ತಿಯೊಬ್ಬ ತನ್ನ ಅಪಾರ್ಟ್‍ಮೆಂಟ್‍ನ 3ನೇ ಮಹಡಿ ಕಿಟಕಿಯಿಂದ ತನ್ನ ಸಾಕುನಾಯಿಯನ್ನು ಉದ್ದವಾದ ಹಗ್ಗದಿಂದ ಕೆಳಕ್ಕೆ ಇಳಿಸುತ್ತಿದ್ದಾನೆ. ನಾಯಿಯನ್ನು ನಿಧಾನವಾಗಿ ನೆಲಕ್ಕೆ ಇಳಿಸುತ್ತಾನೆ. ನಂತರ ಅದು ಅಲ್ಲಿರುವ ಪಾರ್ಕ್ ಸುತ್ತಲೂ ಆ ನಾಯಿ ಸುತ್ತುತ್ತದೆ. ಅದಾದ ಬಳಿಕ ಅದನ್ನು ಪುನಃ ಹಗ್ಗದ ಸಹಾಯದಿಂದ ಮೇಲಕ್ಕೆತ್ತುತ್ತಾನೆ.

    ವೀಡಿಯೋ ನೋಡಿದ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದು, ನಾಯಿಗೆ ಕಟ್ಟಡದಿಂದ ಇಳಿಸುವಾಗ ಹಾಗೂ ಮೇಲಕ್ಕೆತ್ತುವಾಗ ಕಟ್ಟೆ ತಾಗಿ ಏನಾದರೂ ಗಾಯವಾಗವಹುದು. ಈ ರೀತಿ ಬೇಜವಾಬ್ದಾರಿಯಾಗಿ ವರ್ತಿಸಲು ಹೇಗೆ ಸಾಧ್ಯ. ನಾಯಿಯನ್ನು ನೀವೇ ಹೊರಗೆ ಕರೆದುಕೊಂಡು ಹೋಗಬೇಕಿತ್ತು ಎಂದು ಶ್ವಾನ ಪ್ರೇಮಿಗಳು ಕಿಡಿಕಾರಿದ್ದಾರೆ. ಇದನ್ನೂ ಓದಿ: ಚೀನಾದ ಶಾಂಘೈನಲ್ಲಿ ಲಾಕ್‌ಡೌನ್ ಜಾರಿ – ಭಾರತದ ಮೇಲೆ ಪರಿಣಾಮ ಏನು?

    ವ್ಯಕ್ತಿಯು ಕೋವಿಡ್ ಪಾಸಿಟಿವ್ ಆಗಿದ್ದಾನೆ ಮತ್ತು ಅವನ ಮನೆಯೊಳಗೆ ಬೀಗ ಹಾಕಲಾಗಿದೆಯೇ ಅಥವಾ ಅವನ ಕಾಂಪೌಂಡ್ ಅನ್ನು ಅಧಿಕಾರಿಗಳು ಹೊರಗಿನಿಂದ ಲಾಕ್ ಮಾಡಿದ್ದಾರೆಯೇ ಎನ್ನುವುದರ ಕುರಿತು ಸ್ಪಷ್ಟ ಮಾಹಿತಿಯಿಲ್ಲ. ಅನೇಕ ಟ್ವಿಟ್ಟರ್ ಬಳಕೆದಾರರು ಈ ವೀಡಿಯೊವನ್ನು ಮರುಹಂಚಿಕೊಂಡಿದ್ದಾರೆ. ಇದನ್ನೂ ಓದಿ: ವುಹಾನ್‌ ನಂತರ ಚೀನಾದಲ್ಲಿ ಅತಿದೊಡ್ಡ ಲಾಕ್‌ಡೌನ್: 2.6 ಕೋಟಿ ಜನ ಮನೆಯಲ್ಲೇ ಲಾಕ್

  • ಆಸ್ಪತ್ರೆ ಕಟ್ಟಿಸಿ ಕೊಡ್ತೀನೆಂದು ಮಾತು ಕೊಟ್ಟು ಸೆಕ್ಸ್- ವೈದ್ಯೆಗೆ 1.80 ಕೋಟಿ ರೂ. ವಂಚನೆ

    ಆಸ್ಪತ್ರೆ ಕಟ್ಟಿಸಿ ಕೊಡ್ತೀನೆಂದು ಮಾತು ಕೊಟ್ಟು ಸೆಕ್ಸ್- ವೈದ್ಯೆಗೆ 1.80 ಕೋಟಿ ರೂ. ವಂಚನೆ

    ಭೋಪಾಲ್: ಆಸ್ಪತ್ರೆ ತೆರೆಯುವ ನೆಪದಲ್ಲಿ ಕಿರಾತಕನೊಬ್ಬ ಮಹಿಳಾ ವೈದ್ಯರೊಂದಿಗೆ ಸ್ನೇಹ ಮಾಡಿಕೊಂಡು ಅಶ್ಲೀಲ ವೀಡಿಯೋ ಮಾಡಿ ಕೋಟ್ಯಂತರ ರೂ. ವಸೂಲಿ ಮಾಡಿದ ಘಟನೆ ಮಧ್ಯಪ್ರದೇಶದ ದಿಂಡೋರಿಯಲ್ಲಿ ನಡೆದಿದೆ.

    ಆರೋಪಿಯನ್ನು ಮನೀಶ್ ಶ್ರೀವಾಸ್ತವ್ ಎಂದು ಗುರುತಿಸಲಾಗಿದ್ದು, ಈತ ಜಬಲ್‍ಪುರದ ನಿವಾಸಿ. ಆರೋಪಿಯು ದಿಂಡೋರಿಯಲ್ಲಿ ಆಸ್ಪತ್ರೆ ತೆರೆಯುವ ನೆಪದಲ್ಲಿ ವೈದ್ಯೆಯನ್ನು ದೋಸ್ತಿ ಮಾಡಿಕೊಂಡಿದ್ದಾನೆ. ನಂತರ ಅವರನ್ನು ಪ್ರೇಮದ ಜಾಲಕ್ಕೆ ಬಿಳಿಸಿಕೊಂಡು ಅವರ ಮೇಲೆ ಅತ್ಯಾಚಾರ ಎಸಗಿ ವೀಡಿಯೋ ಮಾಡಿದ್ದಾನೆ. ಇದನ್ನೂ ಓದಿ: ರಷ್ಯಾ-ಉಕ್ರೇನ್ ಯುದ್ಧ: ಕನಿಷ್ಟ 12 ಮಂದಿ ಪತ್ರಕರ್ತರ ಹತ್ಯೆ

    ಈ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿ ಅವರಿಂದ ಕೋಟ್ಯಂತರ ರೂ. ವಸೂಲಿ ಮಾಡಿದ್ದಾನೆ. ಹಾಗೆಯೇ ಆರೋಪಿಯು ಸಂತ್ರಸ್ತೆಗೆ ಇನ್ನೂ ಹೆಚ್ಚಿನ ಹಣಕ್ಕಾಗಿ ಬೇಡಿಕೆಯಿಡಲು ಪ್ರಾರಂಭಿಸಿದ್ದನು. ಮಹಿಳೆಯು ಹೆಚ್ಚಿನ ಹಣ ನೀಡಲು ನಿರಾಕರಿಸಿದಾಗ ಆರೋಪಿ ಮನೀಶ್ ಭೋಪಾಲ್ ಮೂಲದ ಸ್ನೇಹಿತ ಕುಲಭೂಷಣ್‍ನನ್ನು ಐಬಿಯ ನಕಲಿ ಅಧಿಕಾರಿಯನ್ನಾಗಿ ಮಾಡಿ ಬೆದರಿಸಿ ಹಣ ದೋಚಿದ್ದಾನೆ ಎಂದು ತಿಳಿದು ಬಂದಿದೆ.

    STOP RAPE

    ಅತ್ಯಾಚಾರಗೈದ ವೀಡಿಯೋ ಮತ್ತು ಫೋಟೋಗಳನ್ನು ಆರೋಪಿಯು ವೈದ್ಯೆಯ ಪತಿಗೆ ಕಳುಹಿಸುವುದಾಗಿ ಧಮ್ಕಿ ಹಾಕಿದ್ದು ಅವರಿಂದ 1 ಕೋಟಿ 80 ಲಕ್ಷ ರೂ. ದೋಚಿದ್ದಾನೆ. ಇದರ ಮೇಲಾಗಿಯೂ ಇಬ್ಬರೂ ಯುವಕರು ವೈದ್ಯೆ ಬಳಿ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದರು. ಇದರಿಂದ ಬೇಸರಗೊಂಡ ಅವರು ಸಿಟಿ ಕೊತ್ವಾಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ದಿಗ್ವಿಜಯ್ ಸಿಂಗ್ ಸಹಿತ 6 ಮಂದಿಗೆ 1 ವರ್ಷ ಜೈಲು ಶಿಕ್ಷೆ

    ಪೊಲೀಸರು ಆರೋಪಿ ಮನೀಶ್ ಮತ್ತು ಕುಲಭೂಷಣ್ ಇಬ್ಬರ ವಿರುದ್ಧವೂ ಸೆಕ್ಷನ್ 376 (ಅತ್ಯಾಚಾರ), 386 (ಸುಲಿಗೆ), 429 (ದುಷ್ಕೃತ್ಯ), 506 (ಬೆದರಿಕೆ)ಯ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳಿಬ್ಬರನ್ನೂ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

  • ಗೆಳತಿಗೆ ಪ್ರಪೋಸ್ ಮಾಡಿದ ಉಕ್ರೇನ್ ಯೋಧನ ಮನಕರಗುವ ವೀಡಿಯೋ

    ಗೆಳತಿಗೆ ಪ್ರಪೋಸ್ ಮಾಡಿದ ಉಕ್ರೇನ್ ಯೋಧನ ಮನಕರಗುವ ವೀಡಿಯೋ

    ಕೀವ್: ರಷ್ಯಾ ಉಕ್ರೇನ್ ಯುದ್ಧ ಪ್ರಾರಂಭವಾದಾಗಿನಿಂದ ಅಲ್ಲಿನ ಜನರು ಮುಂದಿನ ಭವಿಷ್ಯದ ಬಗ್ಗೆ ಯೋಚನೆಯೂ ಮಾಡಲಾರದಂತಹ ಸ್ಥಿತಿಗೆ ಬಂದಿದ್ದಾರೆ. ಹೀಗಿರುವಾಗ ಭೀಕರ ಯುದ್ಧದ ನಡುವೆಯೂ ಉಕ್ರೇನ್‌ನ ಯೋಧನೊಬ್ಬ ತನ್ನ ಗೆಳತಿಗೆ ಪ್ರಪೋಸ್ ಮಾಡುವ ವೀಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

    ಯೋಧ ತನ್ನ ಗೆಳತಿಗೆ ಪ್ರಪೋಸ್ ಮಾಡುವ ಸಂದರ್ಭ ಎಂತಹವರ ಹೃದಯವನ್ನೂ ಕರಗಿಸುವಂತಿದೆ. ಈ ವೀಡಿಯೋ ಮೂಲಕ ಜೋಡಿ ಯುದ್ಧಕ್ಕಿಂತಲೂ ಪ್ರೀತಿ ಶಕ್ತಿಶಾಲಿ ಎಂಬುದನ್ನು ಸಾಬೀತುಪಡಿಸಿದ್ದಾರೆ.

    ವೀಡಿಯೋದಲ್ಲಿ ಉಕ್ರೇನ್‌ನ ಚೆಕ್ ಪಾಯಿಂಟ್‌ನಲ್ಲಿ ಪಡೆಗಳು ಕಾರೊಂದನ್ನು ನಿಲ್ಲಿಸಿ, ಪ್ರಯಾಣಿಕರ ಮಾಹಿತಿಗಳನ್ನು ಪರಿಶೀಲಿಸುತ್ತಿರುತ್ತಾರೆ. ಈ ಸಂದರ್ಭದಲ್ಲಿ ಪ್ರಯಾಣಿಕರು ತಮ್ಮ ಕೈಗಳನ್ನು ಕಾರುಗಳ ಮೇಲೆ ಇಟ್ಟು ಪರಿಶೀಲನೆಗೆ ಅವಕಾಶ ನೀಡುತ್ತಿರುತ್ತಾರೆ. ಇದನ್ನೂ ಓದಿ: ರಷ್ಯಾ ತೈಲ ನಿಷೇಧ- ಅಮೆರಿಕ ಅಧ್ಯಕ್ಷರ ಫೋನ್‌ ಕರೆಗೂ ಕ್ಯಾರೆ ಎನ್ನದ ಸೌದಿ ಅರೇಬಿಯಾ, ಯುಎಇ

    ಅಷ್ಟರಲ್ಲಿ ಯೋಧನೊಬ್ಬ ಪ್ರಯಾಣಿಕರೊಂದಿಗಿದ್ದ ಯುವತಿಯ ಹಿಂದುಗಡೆ ಮೊಣಕಾಲೂರಿ ಉಂಗುರವನ್ನು ನೀಡಲು ಮುಂದಾಗುತ್ತಾನೆ. ಇದರಿಂದ ಆಶ್ಚರ್ಯಕ್ಕೊಳಗಾದ ಯುವತಿ ಯೋಧ ನೀಡುವ ಉಂಗುರವನ್ನು ತೆಗೆದುಕೊಳ್ಳುತ್ತಾಳೆ. ಅವರಿಬ್ಬರೂ ನಿಜವಾಗಿ ಪ್ರೇಮಿಗಳೇ ಆಗಿರುತ್ತಾರೆ. ಅವರಿಬ್ಬರ ಪ್ರೀತಿಗೆ ಸ್ಥಳದಲ್ಲಿ ನೆರೆದಿದ್ದ ನೂರಾರು ಉಕ್ರೇನ್ ಯೋಧರೂ ಸಾಕ್ಷಿಯಾಗುತ್ತಾರೆ. ಇದನ್ನೂ ಓದಿ: ಉಕ್ರೇನ್‌ ಸರ್ಕಾರ ಉರುಳಿಸಲು ಯತ್ನಿಸಿಲ್ಲ: ರಷ್ಯಾ

    ಈ ಅಪರೂಪದ ಸನ್ನಿವೇಶವನ್ನು ಅವರ ಸ್ನೇಹಿತರು ವೀಡಿಯೋ ರೆಕಾರ್ಡ್ ಮಾಡಿ ಸಾಮಾಜಿ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೋವನ್ನು ಮಾರ್ಚ್ 7 ರಂದು ಟ್ವಿಟ್ಟರ್‌ನಲ್ಲಿ ಹಂಚಿಕೊಳ್ಳಲಾಗಿದೆ. ಈ ಪ್ರಸ್ತಾಪವನ್ನು ಸೋಲಿಸಲು ಕಷ್ಟ (Kinda hard to beat this proposal) ಎಂದು ವೀಡಿಯೋಗೆ ಕ್ಯಾಪ್ಶನ್ ನೀಡಲಾಗಿದೆ.

  • ಮದುವೆಗೂ ಮುನ್ನ ಬಿಂದಾಸ್ ಆಗಿ ಡ್ಯಾನ್ಸ್ ಮಾಡಿದ ವಧು – ವೀಡಿಯೋ ವೈರಲ್

    ಮದುವೆಗೂ ಮುನ್ನ ಬಿಂದಾಸ್ ಆಗಿ ಡ್ಯಾನ್ಸ್ ಮಾಡಿದ ವಧು – ವೀಡಿಯೋ ವೈರಲ್

    ನವದೆಹಲಿ: ಮದುವೆಗೂ ಮುನ್ನ ವಧು ಬಿಂದಾಸ್ ಆಗಿ ಡ್ಯಾನ್ಸ್ ಮಾಡಿದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.

    ಮೋಜಿನ ನೃತ್ಯ ಪ್ರದರ್ಶನಗಳಿಲ್ಲದೆ ಭಾರತೀಯ ವಿವಾಹಗಳು ಅಪೂರ್ಣವಾಗಿರುತ್ತವೆ. ಈ ವೇಳೆ ವಧು ತಮ್ಮ ಮದುವೆಯ ದಿನದಂದು ನಾಚಿಕೆಯಿಂದ ತಮ್ಮ ಸಂಭ್ರಮದ ದಿನವನ್ನು ಎಂಜಾಯ್ ಮಾಡುತ್ತಿರುತ್ತಾರೆ. ಆದರೆ ವಧು ಎಲ್ಲರ ಮುಂದೆ ಡ್ಯಾನ್ಸ್ ಮಾಡುವ ಹಾಗಿರಲಿಲ್ಲ. ಆದರೆ ಈಗ ಕಾಲ ಬದಲಾಗಿದ್ದು, ತಮ್ಮ ಕನಸಿನ ದಿನವನ್ನು ವಧು-ವರರು ಮತ್ತಷ್ಟು ಬಣ್ಣಗಳಿಂದ ತುಂಬಿಸಲು ಪ್ರಯತ್ನಿಸುತ್ತಿರುತ್ತಾರೆ. ಅಂತಹ ಒಂದು ವೀಡಿಯೋ ಈಗ ವೈರಲ್ ಆಗಿದ್ದು, ವಧು ತನ್ನ ಹೃದಯಕ್ಕೆ ತೋಚಿದಂತೆ ಕುಣಿದು ಕುಪ್ಪಳಿಸಿದ್ದಾಳೆ. ಈ ವೀಡಿಯೋ ನೋಡಿದ ನೆಟ್ಟಿಗರು ಫುಲ್ ಖುಷ್ ಆಗಿದ್ದು, ವಧು-ವರನಿಗೆ ಶುಭಕೋರುತ್ತಿದ್ದಾರೆ. ಇದನ್ನೂ ಓದಿ: ಮಲೆಮಹದೇಶ್ವರ ಜಾತ್ರಾಮಹೋತ್ಸವ – ಪೂರ್ವಸಿದ್ಧತೆಗಳ ಕುರಿತಂತೆ ಸಭೆ ನಡೆಸಿದ ಸೋಮಣ್ಣ

    ವೀಡಿಯೋದಲ್ಲಿ ಏನಿದೆ?
    ಸುಂದರವಾದ ಕೆಂಪು ಬಣ್ಣದ ಲೆಹೆಂಗಾ ಧರಿಸಿರುವ ವಧು ಯಾರೂ ನೋಡದ ರೀತಿ ನಾಚಿಕೊಂಡು ನೃತ್ಯ ಮಾಡುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ಈ ವೀಡಿಯೋದಲ್ಲಿ ಧೋಲ್ ಶಬ್ದಕ್ಕೆ ರೋಮಾಂಚನಗೊಂಡ ವಧು ತನ್ನದೇ ಶೈಲಿಯಲ್ಲಿ ಸೂಪರ್ ಆಗಿ ಹೆಜ್ಜೆ ಹಾಕಿದ್ದಾಳೆ.

    ಈ ವೀಡಿಯೋವನ್ನು ಇನ್‍ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದು, ವರರು ಏಕೆ ಎಲ್ಲ ರೀತಿಯ ಸಂಭ್ರಮ, ಸಡಗರ ಹೊಂದಿರಬೇಕು? ‘ನಾಚಿಕೆಯಿಲ್ಲದ ವಧು’ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಆಮ್ ಆದ್ಮಿ, ಕಾಂಗ್ರೆಸ್ ಪಕ್ಷದ Xerox copy: ಮೋದಿ ವ್ಯಂಗ್ಯ

    ವೀಡಿಯೋ ನೋಡಿದ ನೆಟ್ಟಿಗರು, ಒಂದು ವೀಡಿಯೋದಲ್ಲಿ ಎಲ್ಲ ವಧುಗಳ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ‘ವೀಡಿಯೋ ನೋಡಿ ನಗು ತಡೆದುಕೊಳ್ಳಲು ಆಗುತ್ತಿಲ್ಲ, ಬ್ರೈಡ್ ಆಫ್ 2022 ಎಂದು ಬರೆದು ಕಾಮೆಂಟ್ ಮಾಡಿದ್ದಾರೆ.

  • ಆಲೂಗೆಡ್ಡೆ ಚಿಪ್ಸ್ ಪ್ಯಾಕೆಟ್ ಕವರ್‌ನ್ನು ಸೀರೆಯಾಗಿ ಉಟ್ಟ ಮಹಿಳೆ- ನೆಟ್ಟಿಗರು ಹೇಳಿದ್ದೇನು ಗೊತ್ತಾ?

    ಆಲೂಗೆಡ್ಡೆ ಚಿಪ್ಸ್ ಪ್ಯಾಕೆಟ್ ಕವರ್‌ನ್ನು ಸೀರೆಯಾಗಿ ಉಟ್ಟ ಮಹಿಳೆ- ನೆಟ್ಟಿಗರು ಹೇಳಿದ್ದೇನು ಗೊತ್ತಾ?

    ಲೂಗೆಡ್ಡೆ ಚಿಪ್ಸ್ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ನಾಲಿಗೆ ಚಪ್ಪರಿಸಿ ತಿಂದ ನಂತರ ಅದರ ಪ್ಯಾಕೆಟ್‍ನ್ನು ಕಸದ ತೊಟ್ಟಿಯಲ್ಲಿ ಎಸೆಯುತ್ತೇವೆ. ಆದರೆ ಇಲ್ಲೊಬ್ಬಳು ಕ್ರಿಯೇಟಿವ್ ಆಗಿ ಯೋಚನೆ ಮಾಡಿದ್ದಾಳೆ. ಈ ವೀಡಿಯೋ ನೋಡಿದರೆ ಹೀಗೂ ಮಾಡಬಹುದಾ ಎಂದು ನಿಮಗೆ ಅನ್ನಿಸದೇ ಇರುವುದಿಲ್ಲ.

    ವೀಡಿಯೋದಲ್ಲಿ ಏನಿದೆ?: ಆಲೂಗಡ್ಡೆ ಚಿಪ್ಸ್ ಪ್ಯಾಕೆಟ್‍ನ್ನು ಕೈಯಲ್ಲಿ ಹಿಡಿದುಕೊಂಡಿರುವ ಮಹಿಳೆ ಆಲೂಗಡ್ಡೆ ಚಿಪ್ಸ್‍ನ ಕವರ್ ನಿಂದ ಮಾಡಿದ ಬೆಳ್ಳಿ ಬಣ್ಣದ ಸೀರೆಯನ್ನು ಧರಿಸಿರುವ ವೀಡಿಯೋವನ್ನು ನಾವು ನೋಡಬಹುದು. ಅವಳು ಸೀರೆಗೆ ಹೊಂದುವ ಬಳೆ, ಕಿವಿ ಒಲೆಯನ್ನು ಧರಿಸಿದ್ದಾಳೆ. ಈ ವೀಡಿಯೋ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾಳೆ. ನೆಟ್ಟಿಗರು ಮಹಿಳೆಯ ಕ್ರಿಯೆಟಿವಿಟಿಯನ್ನು ಮೆಚ್ಚಿಕೊಂಡು ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: ಅಂತಾರಾಜ್ಯ ಜಲ ವಿವಾದ ಕುರಿತು ಕಾನೂನು ತಜ್ಞರೊಂದಿಗೆ ಬೊಮ್ಮಾಯಿ ಸಭೆ

     

    View this post on Instagram

     

    A post shared by BeBadass.in (@bebadass.in)

    ಕೆಲವರು ಚಿಪ್ಸ್ ಪ್ಯಾಕೆಟ್ ಸೀರೆಯ ಕಲ್ಪನೆಯನ್ನು ಸ್ವಾಗತಿಸಿದರೆ, ಕೆಲವರು ಸೀರೆಯನ್ನು ಧರಿಸಿ ಅಥವಾ ಅದನ್ನು ಧರಿಸಲೇಬೇಡಿ ಎಂದು ತಮಾಷೆಯಾಗಿ ಬರೆದಿದ್ದಾರೆ. ಸೀರೆ ಪ್ರೇಮಿ ಮತ್ತು ಕಲಾವಿದನಾಗಿ, ನಾನು ಇದನ್ನು ನೋಡಿದಾಗ ಸಂಪೂರ್ಣವಾಗಿ ವಿಚಲಿತನಾಗಿದ್ದೇನೆ. ಜನರು ಕಲೆಯ ಹೆಸರಿನಲ್ಲಿ ಏನೆಲ್ಲಾ ಮಾಡುತ್ತಾರೆ ಎಂದು ಹೀಗೆ ಹಲವು ಕಾಮೆಂಟ್‍ಗಳು ಬಂದಿವೆ.