Tag: viral video

  • ಜಿಮ್‍ನಲ್ಲಿ ಅತೀ ಉತ್ಸಾಹದಿಂದ ವರ್ಕ್ ಔಟ್ ಮಾಡೋ ಮುನ್ನ ಈ ವೈರಲ್ ವೀಡಿಯೋ ನೋಡಿ

    ಜಿಮ್‍ನಲ್ಲಿ ಅತೀ ಉತ್ಸಾಹದಿಂದ ವರ್ಕ್ ಔಟ್ ಮಾಡೋ ಮುನ್ನ ಈ ವೈರಲ್ ವೀಡಿಯೋ ನೋಡಿ

    ನವದೆಹಲಿ: ಜಿಮ್‍ನಲ್ಲಿ ಸಖತ್ತಾಗಿ ವರ್ಕ್ ಔಟ್ ಮಾಡಿ ಫಿಟ್ ಆಗಬೇಕು ಅಂತ ಈಗಿನ ಯುವಪೀಳಿಗೆಯವರು ಬಯಸುತ್ತಾರೆ. ಹಾಗೆ ವರ್ಕ್ ಔಟ್ ಮಾಡುವಾಗ ಅತೀ ಉತ್ಸಾಹದಲ್ಲಿ ಹೆಚ್ಚಿನ ತೂಕ ಹಾಕಿಕೊಂಡು ಕಸರತ್ತು ಮಾಡಲು ಹೋದ್ರೆ ಏನಾಗಬಹುದು ಅನ್ನೋದಕ್ಕೆ ಈ ವೀಡಿಯೋ ಉದಾಹರಣೆ.

    ಯುವಕನೊಬ್ಬ ಜಿಮ್‍ನಲ್ಲಿ ಕಸರತ್ತು ಮಾಡಲು ಹೋಗಿ ಕಾಲು ಮುರಿದುಕೊಂಡಿದ್ದಾನೆ. ಕಾಲಿನ ವರ್ಕ್ ಔಟ್ ಮಾಡುತ್ತಿದ್ದ ಯುವಕ ಒದ್ದಾಡುತ್ತಲೇ ನಿಧಾನವಾಗಿ ತೂಕವನ್ನು ಎತ್ತಿದ್ದಾನೆ. ಕೆಲವೇ ನಿಮಿಷಗಳಲ್ಲಿ ಆತನ ಎಡಗಾಲು ಮುರಿದು ಮಂಡಿಯ ಭಾಗದಲ್ಲಿ ಹಿಂದಕ್ಕೆ ಬಾಗಿದೆ. ವೀಡಿಯೋ ಮಾಡುತ್ತಿದ್ದ ಮತ್ತೊಬ್ಬ ಯುವಕ ಇದನ್ನ ನೋಡಿ ಗಾಬರಿಯಿಂದ ಗಾಯಗೊಂಡು ಯುವಕನ ಬಳಿ ಧಾವಿಸಿದ್ದಾನೆ. ಈ ವೀಡಿಯೋ ಚಿತ್ರೀಕರಣ ಮಾಡಲಾದ ಸ್ಥಳದ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ.

    ಇದನ್ನೂ ಓದಿ: ಸಿಕ್ಸ್ ಪ್ಯಾಕ್ ಮಾಡೋಕೆ ಹೋಗಿ ಪ್ರಾಣ ತೆತ್ತ ಬೆಂಗಳೂರು ಯುವಕ

    ವರ್ಕ್ ಔಟ್ ಮಾಡುವಾಗ ಎಷ್ಟು ಎಚ್ಚರವಾಗಿರಬೇಕು ಎನ್ನುವುದರ ಬಗ್ಗೆ ಎಚ್ಚರಿಕೆ ನೀಡಲು ಈ ವೀಡಿಯೋವನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದ್ದು ಇದೀಗ ವೈರಲ್ ಆಗಿದೆ. ಒಂದೇ ದಿನದಲ್ಲಿ 14 ಲಕ್ಷಕ್ಕೂ ಹೆಚ್ಚು ವ್ಯೂವ್ ಕಂಡಿದ್ದು, 45 ಸಾವಿರಕ್ಕೂ ಹೆಚ್ಚು ಬಾರಿ ಶೇರ್ ಆಗಿದೆ.

    https://www.facebook.com/TheDheerajDC/videos/291569887940551/

    https://www.facebook.com/TheDheerajDC/videos/291569811273892/

  • ಟ್ರಾಫಿಕ್ ಪೊಲೀಸ್ ಲಂಚ ಸ್ವೀಕರಿಸಿದ ವೀಡಿಯೋ ವೈರಲ್, ಕೆಲಸದಿಂದ ವಜಾ

    ಟ್ರಾಫಿಕ್ ಪೊಲೀಸ್ ಲಂಚ ಸ್ವೀಕರಿಸಿದ ವೀಡಿಯೋ ವೈರಲ್, ಕೆಲಸದಿಂದ ವಜಾ

    ಹೈದರಾಬಾದ್: ಟ್ರಾಫಿಕ್ ಪೊಲೀಸರೊಬ್ಬರು ಲಂಚ ಸ್ವೀಕರಿಸಿದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆ ಪೇದೆಯ ವಿರುದ್ಧ ಹೈದರಾಬಾದ್ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ.

    ಹೈದರಾಬಾದ್ ನಿವಾಸಿಯಾದ ಶ್ರೀಧರ್ ವೇಮುಲಾ ಎಂಬವರು ಟ್ರಾಫಿಕ್ ಪೊಲೀಸರು ದ್ವಿಚಕ್ರವಾಹನ ಸವಾರರೊಬ್ಬರಿಂದ ಲಂಚ ಸ್ವೀಕರಿಸುತ್ತಿರುವ ವೀಡಿಯೋವನ್ನ ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದರು. ಹೆಲ್ಮೆಟ್ ಧರಿಸದ ಕಾರಣಕ್ಕೆ ಟ್ರಾಫಿಕ್ ಪೊಲೀಸ್ ಸವಾರರನ್ನ ತಡೆದಿದ್ದಾರೆ. ಆ ವ್ಯಕ್ತಿ ಪೊಲೀಸರೊಂದಿಗೆ ಸ್ವಲ್ಪ ಹೊತ್ತು ಚರ್ಚೆ ನಡೆಸಿದ ನಂತರ ಪರ್ಸ್ ತೆಗೆದು ಹಣ ನೀಡುವುದು ಕಾಣುತ್ತದೆ. ಹಣ ಸ್ವೀಕರಿಸಿದ ಟ್ರಾಫಿಕ್ ಪೊಲೀಸ್ ಸವಾರನನ್ನು ಬಿಟ್ಟು ಕಳಿಸಿದ್ದಾರೆ.

    ಇದರ ದೃಶ್ಯಾವಳಿಗಳನ್ನ ಶ್ರೀಧರ್ ಮೊಬೈಲ್‍ನಲ್ಲಿ ಸೆರೆಹಿಡಿದಿದ್ದು, ಮಾರ್ಚ್ 17ರಂದು ಹೈದರಾಬಾದ್ ಪೊಲೀಸರ ಅಧಿಕೃತ ಫೇಸ್‍ಬುಕ್ ಪೇಜ್‍ಗೆ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಹೈದರಾಬಾದ್ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಕಮೆಂಟ್ ಮಾಡಿದ್ದಾರೆ. ಈ ನಡುವೆ ಈ ವೀಡಿಯೋ 5 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆಯಾಗಿದ್ದು ವೈರಲ್ ಆಗಿದೆ. ಇದನ್ನ 10 ಸಾವಿರಕ್ಕೂ ಹೆಚ್ಚು ಬಾರಿ ಶೇರ್ ಮಾಡಲಾಗಿದೆ.

    ಮಾರ್ಚ್ 20ರಂದು ಹೈದರಾಬಾದ್ ಪೊಲೀಸರು ಮತ್ತೆ ಕಮೆಂಟ್ ಮಾಡಿದ್ದು, ಟ್ರಾಫಿಕ್ ಇಲಾಖೆಯಿಂದ ಇವರನ್ನು ತೆಗೆದುಹಾಕಲಾಗುತ್ತಿದೆ. ನಿಯಮದ ಪ್ರಕಾರ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

    ಟ್ರಾಫಿಕ್ ಪೊಲೀಸರ ವಿರುದ್ಧ ತೆಗೆದುಕೊಂಡಿರುವ ಕ್ರಮವನ್ನ ಕೆಲವರು ಒಪ್ಪಿದ್ದರೆ ಇನ್ನೂ ಕೆಲವರು ಲಂಚ ಕೊಟ್ಟ ವ್ಯಕ್ತಿಯ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.

    https://www.youtube.com/watch?v=KgRRr8Pwdwc

  • ವೀಡಿಯೋ: ಗೂಡಿನಿಂದ ಹೊರಬಂದ ದೈತ್ಯ ಕೋಳಿ ಕಂಡು ನೋಡುಗರು ದಂಗಾದ್ರು!

    ವೀಡಿಯೋ: ಗೂಡಿನಿಂದ ಹೊರಬಂದ ದೈತ್ಯ ಕೋಳಿ ಕಂಡು ನೋಡುಗರು ದಂಗಾದ್ರು!

    ಪ್ರಿಸ್ಟೀನಾ: ಸಾಮಾನ್ಯಕ್ಕಿಂತ ದೊಡ್ಡ ಗಾತ್ರದ ಕೋಳಿಯೊಂದರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದೆ. ಗೂಡಿನಿಂದ ಹೊರಬರಲು ಕೊಸರಾಡಿ ಕೊನೆಗೆ ಕೋಳಿ ಹೊರಬಂದ ಮೇಲೆ ಅದರ ಗಾತ್ರವನ್ನು ನೋಡಿ ಜನ ದಂಗಾಗಿದ್ದಾರೆ.

    ದೈತ್ಯ ಕಾಲುಗಳು ಹಾಗೂ ಸಾಮಾನ್ಯಕ್ಕಿಂತ ದೊಡ್ಡದಾದ ಪುಕ್ಕಗಳನ್ನ ಹೊಂದಿರೋ ಈ ಕೋಳಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸ್ಟಾರ್ ಆಗಿದೆ. ಕೊಸೋವೋದ ಫಿತಿಮ್ ಸೆಜ್ಫಿಜಾಜ್ ಎಂಬವರು ಸಾಕಿರುವ ಈ ಕೋಳಿ ಹೆಸರು ಮೆರಾಕ್ಲಿ. ಮೊದಲಿಗೆ ಈ ಕೋಳಿಯ ವೀಡಿಯೋ ನೋಡಿದವರು ಯಾರೋ ಮನುಷ್ಯರೇ ಕೋಳಿಯ ವೇಷ ಧರಿಸಿದ್ದಾರೆ ಎಂದು ಕಮೆಂಟ್ ಮಾಡಿದ್ದರು. ಆದ್ರೆ ಇದು ನಿಜಕ್ಕೂ ಕೊಳಿಯೇ. ಇದು ಬ್ರಹ್ಮ ಚಿಕನ್ ತಳಿಯ ಕೋಳಿ. ಸಾಮಾನ್ಯವಾಗಿ ಬ್ರಹ್ಮ ತಳಿಯ ಕೋಳಿಗಳು ಗಾತ್ರದಲ್ಲಿ ದೊಡ್ಡದಾಗಿರುತ್ತವೆ. ಇವನ್ನ ಕೋಳಿಗಳ ರಾಜ ಎಂದೇ ಕರೆಯಲಾಗುತ್ತದೆ.

    ಈ ತಳಿಯ ಉಗಮದ ಬಗ್ಗೆ ಹಲವು ವಾದಗಳಿವೆ. ಆದರೂ ಇವನ್ನು ಚೀನಾದ ಶಾಂಘೈನಿಂದ ಆಮದು ಮಾಡಿಕೊಳ್ಳಲಾದ ದೊಡ್ಡ ಗಾತ್ರದ ಪಕ್ಷಿಗಳನ್ನ ಬಳಸಿ ಅಮೆರಿಕದಲ್ಲಿ ಅಭಿವೃದ್ಧಿ ಪಡಿಸಲಾಗಿದ್ದು ಎಂದು ಹೇಳಲಾಗಿದೆ. ಬ್ರಹ್ಮ ತಳಿಯ ಕೋಳಿಗಳ ಸರಸರಿ ತೂಕ 600 ಗ್ರಾಂನಿಂದ 3.6 ಕೆಜಿವರೆಗೆ ಇರುತ್ತದೆ. ಬ್ರಹ್ಮ ತಳಿಯ ಹುಂಜ ಬರೋಬ್ಬರಿ 8 ಕೆಜಿವರೆಗೆ ತೂಗುತ್ತವೆ.

    ಈ ಕೋಳಿಯ ವೀಡಿಯೋವನ್ನ ಫೇಸ್‍ಬುಕ್ ಪೇಜ್‍ವೊಂದರಲ್ಲಿ ಹಂಚಿಕೊಳ್ಳಲಾಗಿದ್ದು, 8 ಕೋಟಿಗೂ ಹೆಚ್ಚು ಬಾರಿ ವೀಕ್ಷಣೆಯಾಗಿದೆ.

    https://www.youtube.com/watch?v=-An6juRiTyc

     

  • ವೀಡಿಯೋ: ಜೋರಾಗಿ ಬೀಸಿದ ಗಾಳಿಗೆ ಬಾಗಿಲಿನೊಂದಿಗೆ ತೂರಿಕೊಂಡು ಹೋದ 4ರ ಬಾಲಕಿ!

    ವೀಡಿಯೋ: ಜೋರಾಗಿ ಬೀಸಿದ ಗಾಳಿಗೆ ಬಾಗಿಲಿನೊಂದಿಗೆ ತೂರಿಕೊಂಡು ಹೋದ 4ರ ಬಾಲಕಿ!

    ವಾಷಿಂಗ್ಟನ್: 4 ವರ್ಷದ ಬಾಲಕಿಯೊಬ್ಬಳು ಮನೆಯ ಬಾಗಿಲು ತೆರೆಯೋಕೆ ಹೋದಾಗ ಜೋರಾಗಿ ಬೀಸಿದ ಗಾಳಿಗೆ ಬಾಗಿಲನ್ನ ಹಿಡಿದುಕೊಂಡೇ ಪಕ್ಕಕ್ಕೆ ತೂರಿಕೊಂಡು ಹೋದ ಘಟನೆ ಅಮೆರಿಕದ ಒಹಿಯೋದಲ್ಲಿ ನಡೆದಿದ್ದು, ಇದರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗಿದೆ.

    ಕಾರಿನಿಂದ ಇಳಿದ 4 ವರ್ಷದ ಮ್ಯಾಡಿಸನ್ ಗರ್ಡನರ್ ತನ್ನ ತಾಯಿಗಿಂತಲೂ ಮೊದಲೇ ಬಂದು ಮನೆಯ ಬಾಗಿಲನ್ನ ತೆರೆಯುತ್ತಾಳೆ. ಬಾಗಿಲು ತೆರೆದೊಡನೆ ಜೋರಾಗಿ ಗಾಳಿ ಬೀಸಿದ್ದು, ಬಾಗಿಲಿನ ಸಮೇತ ಪಕ್ಕಕ್ಕೆ ತೂರಿಕೊಂಡು ಹೋಗಿದ್ದಾಳೆ. ಆಕೆ ಬಗಿಲಿನ ಚಿಲಕ ಹಿಡಿದುಕೊಂಡಿದ್ದರಿಂದ ಬಾಗಿಲಲ್ಲೇ ನೇತಾಡಿದ್ದು ಯಾವುದೇ ಹೆಚ್ಚಿನ ಅಪಾಯವಾಗಿಲ್ಲ. ಬಳಿಕ ಮ್ಯಾಡಿಸನ್ ತಾಯಿ ಬ್ರಿಟನಿ ಓಡಿಬಂದು ಮಗಳನ್ನ ರಕ್ಷಿಸಿದ್ದಾರೆ. ಈ ಎಲ್ಲಾ ದೃಶ್ಯಾವಳಿ ಮನೆ ಮುಂದೆ ಹಾಕಿದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಈ 9 ಸೆಕೆಂಡ್‍ಗಳ ವೀಡಿಯೋವನ್ನ ಬ್ರಿಟನಿ ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದು ಈವರೆಗೆ 15 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆಯಾಗಿದೆ. ಅಲ್ಲದೆ 15 ಸಾವಿರಕ್ಕೂ ಹೆಚ್ಚು ಬಾರಿ ಶೇರ್ ಆಗಿದೆ.

    https://www.facebook.com/brittanygardner11/videos/10211952487671221/

  • ನಾಯಿಗಳ ದಾಳಿಗೆ ಹೆದರಿ ಸ್ಥಳದಿಂದ ಓಡಿದ ಚಿರತೆ: ವಿಡಿಯೋ ನೋಡಿ

    ನಾಯಿಗಳ ದಾಳಿಗೆ ಹೆದರಿ ಸ್ಥಳದಿಂದ ಓಡಿದ ಚಿರತೆ: ವಿಡಿಯೋ ನೋಡಿ

    ಮುಂಬೈ: ಸಾಮಾನ್ಯವಾಗಿ ಚಿರತೆಗಳು ನಾಯಿಗಳ ಮೇಲೆ ದಾಳಿ ಮಾಡಿ ಕೊಂದು ಹಾಕುತ್ತವೆ. ಆದರೆ ಮಹಾರಾಷ್ಟ್ರದಲ್ಲಿ ಮೂರು ನಾಯಿಗಳು ಚಿರತೆ ಮೇಲೆ ದಾಳಿ ನಡೆಸಿ ಅದನ್ನು ಸ್ಥಳದಿಂದ ಓಡಿಸುವಲ್ಲಿ ಯಶಸ್ವಿಯಾಗಿದೆ.

    ಸಂಜಯ್ ಗಾಂಧಿ ನ್ಯಾಷನಲ್ ಪಾರ್ಕ್ (ಎಸ್‍ಜಿಎನ್‍ಪಿ) ಸಮೀಪದ ಇರುವ ದಿಂದೋಶಿ ಎಂಬಲ್ಲಿ ಮಂಗಳವಾರ ರಾತ್ರಿ ನಾಯಿಗಳು ಚಿರತೆಯನ್ನು ಓಡಿಸುವ ದೃಶ್ಯ ಮನೆಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಜನವರಿ ಕೊನೆಯ ವಾರ ಮತ್ತು ಫೆಬ್ರವರಿ ಮೊದಲ ವಾರದಲ್ಲಿ ಚಿರತೆ ರಸ್ತೆಯನ್ನು ದಾಟುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸರೆಯಾಗಿತ್ತು. ಆದರೆ ಮನೆ ಹತ್ತಿರ ಇದೂವರೆಗೆ ಬಂದಿರಲಿಲ್ಲ ಎಂದು ನಿವಾಸಿಯೊಬ್ಬರು ತಿಳಿಸಿದ್ದಾರೆ.

    2014ರ ಡಿಸೆಂಬರ್‍ನಿಂದ ಏಪ್ರಿಲ್ 2015ರ ವರೆಗೆ ವೈಲ್ಡ್ ಲೈಫ್ ಇನ್‍ಸ್ಟಿಟ್ಯೂಟ್ ಜೊತೆ ಎಸ್‍ಜಿಎನ್‍ಪಿ ಅಧ್ಯಯನ ನಡೆಸಿದ್ದು, ಈ ವೇಳೆ 140 ಚದರ. ಕಿ.ಮೀ ವ್ಯಾಪ್ತಿಯಲ್ಲಿ 35 ಚಿರತೆಗಳು ವಿಹರಿಸುತ್ತಿರುವುದು ವಿಚಾರ ಬೆಳಕಿಗೆ ಬಂದಿತ್ತು.

    2012ರಲ್ಲಿ ಚಿರತೆಯೊಂದು ಅಪಾರ್ಟ್‍ಮೆಂಟ್‍ಗೆ ನುಗ್ಗಿ ನಾಯಿಯ ಮೇಲೆ ದಾಳಿ ಮಾಡಿತ್ತು. ಈ ಘಟನೆಯ ಬಳಿಕ ಯಾವೊಂದು ಚಿರತೆ ಈ ಸ್ಥಳಕ್ಕೆ ಬಂದಿಲ್ಲ ಎಂದು ಮತ್ತೊಬ್ಬ ಸ್ಥಳಿಯ ನಿವಾಸಿ ತಿಳಿಸಿದ್ದಾರೆ.

  • ವೀಡಿಯೋ: ಹೆಬ್ಬಾವು ನುಂಗಿದ್ದ ಟೆನ್ನಿಸ್ ಬಾಲ್ ಹೊರತೆಗೆದ್ರು!

    ಸಿಡ್ನಿ: ಸಾಮಾನ್ಯವಾಗಿ ಹೆಬ್ಬಾವುಗಳು ಮೊಲ, ನಾಯಿ, ಕುರಿಯಂತಹ ಪ್ರಾಣಿಗಳನ್ನ ತಿಂದು ಅವುಗಳ ಹೊಟ್ಟೆ ಊದಿಕೊಂಡಿರೋದನ್ನ ನೋಡಿರ್ತೀರ. ಹಾಗೆ ಕೆಲವೊಮ್ಮೆ ಹೆಬ್ಬಾವುಗಳು ಸಿಕ್ಕ ಸಿಕ್ಕ ವಸ್ತುಗಳನ್ನೆಲ್ಲಾ ನುಂಗಿಬಿಡುತ್ತವೆ ಅನ್ನೋದಕ್ಕೆ ಇಲ್ಲೊಂದು ಉದಾಹರಣೆ ಇದೆ. ಹೆಬ್ಬಾವೊಂದರ ಬಾಯಿಯಿಂದ ಟೆನ್ನಿಸ್ ಬಾಲ್ ಹೊರತೆಗೆಯೋ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಸುಮಾರು 20 ನಿಮಿಷಗಳ ಕಾಲ ಪ್ರಯತ್ನಿಸಿ ಕೊನೆಗೂ ಹಾವು ನುಂಗಿದ್ದ ಟೆನ್ನಿಸ್ ಬಾಲ್ ಹೊರತೆಗೆಯಲಾಗಿದೆ.

    ಆಸ್ಟ್ರೇಲಿಯಾದ ಟೌನ್ಸ್ ವಿಲ್ಲೆಯ ಬೆಲ್ಜಿಯನ್ ಗಾಡನ್ಸ್ ನಿವಾಸಿಯೊಬ್ಬರು ತಮ್ಮ ಮನೆಯ ಹಿತ್ತಲಿನಲ್ಲಿ ಈ ಹಾವು ಹರಿದಾಡೋದನ್ನ ನೋಡಿದ್ದರು. ಅದರ ದೇಹದಲ್ಲಿ ಏನೋ ಗೆಡ್ಡೆಯಂತಿರುವುದನ್ನು ನೋಡಿ ಉರಗ ತಜ್ಞ ಬ್ರೇನ್ ವೆಸ್ಟ್ ಅವರಿಗೆ ವಿಷಯ ತಿಳಿಸಿದ್ರು. ಬ್ರೇನ್ ವೆಸ್ಟ್ ಈ ಹಾವನ್ನು ಟೌನ್ಸ್ ವಿಲ್ಲೆಯ ಪಶುವೈದ್ಯಾಲಯಕ್ಕೆ ಕರೆದೊಯ್ದರು.

    ಅಲ್ಲಿನ ವೈದ್ಯರಾದ ಟ್ರಿಶ್ ಪ್ರೆಂಡರ್‍ಗಾಸ್ಟ್, ಹಾವಿನ ಎಕ್ಸ್- ರೇ ತೆಗೆದರು. ಹಾವು ನುಂಗಿದ್ದ ಚೆಂಡು ಗಂಟಲಿನಿಂದ ತುಂಬಾ ಒಳಗೆ ಹೋಗಿಲ್ಲವಾದ್ದರಿಂದ ಅದನ್ನು ಹೊರತೆಗೆಯಬಹುದು ಎಂದು ವೈದ್ಯರು ಹೇಳಿದ್ದರು. ನಂತರ ಹಾವಿನ ಗಂಟಲಿನ ಭಾಗದಲ್ಲಿ ಮಸಾಜ್ ಮಾಡಿ ಬಾಲ್ ಹೊರತೆಗೆದಿದ್ದಾರೆ. ಈ ಹಾವಿಗೆ ಕೆಲ ದಿನ ಚಿಕಿತ್ಸೆ ನೀಡಿ ನಂತರ ಅರಣ್ಯಕ್ಕೆ ಬಿಡಲಾಗುತ್ತದೆ ಎಂದು ಹೇಳಿದ್ದಾರೆ.

    ಬುಧವಾರದಂದು ಫೇಸ್‍ಬುಕ್‍ನಲ್ಲಿ ಅಪ್‍ಲೋಡ್ ಆಗಿರೋ ಈ ವೀಡಿಯೋ ಈಗಾಗಲೇ 1 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆಯಾಗಿದೆ.

    https://www.youtube.com/watch?v=P1diUY5WGO4

  • ಉತ್ತರಾಖಂಡ್ ಚುನಾವಣೆ: ಬಾಹುಬಲಿ ಅವತಾರದಲ್ಲಿ ಹರೀಶ್ ರಾವತ್- ವೀಡಿಯೋ ವೈರಲ್

    ಡೆಹ್ರಾಡೂನ್: 5 ರಾಜ್ಯಗಳ ವಿಧಾನಸಭೆ ಚುನಾವಣೆಗೆ ಭರದ ಸಿದ್ಧತೆ ನಡೆಯುತ್ತಿದೆ. ಇದರ ಮಧ್ಯೆ ಉತ್ತರಾಖಂಡ್ ಮುಖ್ಯಮಂತ್ರಿ ಹರೀಶ್ ರಾವತ್‍ರನ್ನು ಬಾಹುಬಲಿಗೆ ಹೋಲಿಸಲಾದ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

    ಬಾಹುಬಲಿ ಸಿನಿಮಾದಲ್ಲಿ ನಾಯಕ ಪ್ರಭಾಸ್ ಶಿವಲಿಂಗವನ್ನು ಹೊತ್ತು ಸಾಗ್ತಾರೆ. ಆದ್ರೆ ಈ ವೀಡಿಯೋದಲ್ಲಿ ಹರೀಶ್ ರಾವತ್ ಉತ್ತರಾಖಂಡನ್ನು ಹೊತ್ತೊಯ್ಯವಂತೆ ಬಿಂಬಿಸಲಾಗಿದೆ. ಅಲ್ಲದೆ ಪ್ರಧಾನಿ ಮೋದಿ ಮತ್ತು ಅಮಿತ್ ಷಾ ಸೇರಿದಂತೆ ಮತ್ತಿತ್ತರ ನಾಯಕರು ಹರೀಶ್ ರಾವತ್‍ರನ್ನು ಆಶ್ಚರ್ಯದಿಂದ ನೋಡುತ್ತಿರುವಂತೆ ಬಿಂಬಿಸಲಾಗಿದೆ.

    ಈ ವೀಡಿಯೋವನ್ನ ಯುಪಿ/ಯುಕೆ ಲೈವ್ ಫೇಸ್‍ಬುಕ್ ಪೇಜ್‍ನಲ್ಲಿ ಹಂಚಿಕೊಳ್ಳಲಾಗಿದ್ದು, ಹರೀಶ್ ರಾವತ್‍ರನ್ನು ಉತ್ತರಾಖಂಡ್‍ನ ರಕ್ಷಕ ಎಂದು ವೀಡಿಯೋದಲ್ಲಿ ತೋರಿಸಲಾಗಿದೆ. ಈ ಬಗ್ಗೆ ಸಿಎಂ ಹರೀಶ್ ರಾವತ್ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದು, ವೀಡಿಯೋ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದಿದ್ದಾರೆ.

    ಫೆಬ್ರವರಿ 15ರಂದು ಉತ್ತರಾಖಂಡ್‍ನಲ್ಲಿ ಚುನಾವಣೆ ನಡೆಯಲಿದೆ.

    https://www.youtube.com/watch?v=3SWPC1Vxgjk