Tag: viral video

  • ಎಂಗೇಜ್‍ಮೆಂಟ್ ಆದ್ರೂ ತನ್ನ ಜೊತೆ ಎಂಗೇಜ್ ಆಗೆಂದ ಹುಡ್ಗ-ಮುಂದೆ ಏನ್ ಮಾಡ್ದಾ ಗೊತ್ತಾ?

    ಎಂಗೇಜ್‍ಮೆಂಟ್ ಆದ್ರೂ ತನ್ನ ಜೊತೆ ಎಂಗೇಜ್ ಆಗೆಂದ ಹುಡ್ಗ-ಮುಂದೆ ಏನ್ ಮಾಡ್ದಾ ಗೊತ್ತಾ?

    ತುಮಕೂರು: ಜಿಲ್ಲೆಯ ಶಿರಾ ಪಟ್ಟಣದಲ್ಲಿ ಪ್ರೀತಿಸಿದ ಯುವತಿಗೆ ಬೇರೊಬ್ಬನ ಜೊತೆ ಎಂಗೇಜ್‍ಮೆಂಟ್ ಆಗಿದ್ದರಿಂದ ರೊಚ್ಚಿಗೆದ್ದ ಪಾಗಲ್ ಪ್ರೇಮಿಯೊಬ್ಬ ತಮ್ಮಿಬ್ಬರ ಪ್ರೇಮ ಸಲ್ಲಾಪದ ದೃಶ್ಯಾವಳಿಯನ್ನು ಯೂಟ್ಯೂಬ್ ಗೆ ಅಪ್ಲೋಡ್ ಮಾಡಿದ್ದಾನೆ.

    ಮಂಜುನಾಥ್ ಎಂಬಾತನೇ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಯುವಕ. ಮಂಜುನಾಥ್ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದನು. ಯುವತಿಯೂ ಸಹ ಮಂಜುನಾಥ್ ನನ್ನು ಪ್ರೀತಿಸುತ್ತಿದ್ದಳು ಎಂದು ಹೇಳಲಾಗುತ್ತಿದೆ. ಆದರೆ ಯುವತಿಗೆ ಕೆಲವು ದಿನಗಳ ಹಿಂದೆ ಬೇರೊಬ್ಬ ಯುವಕನೊಂದಿಗೆ ನಿಶ್ಚಿತಾರ್ಥವಾಗಿತ್ತು.

    ನಿಶ್ಚಿತಾರ್ಥದ ವಿಷಯ ತಿಳಿದ ಮಂಜುನಾಥ್ ಯುವತಿಯನ್ನು ಶಿರಾ ಪಟ್ಟಣದ ಸೈಬರ್ ಸೆಂಟರ್‍ಗೆ ಕರೆಸಿದ್ದಾನೆ. ಈ ವೇಳೆ ಮಂಜುನಾಥ್ ತನ್ನ ಸ್ನೇಹಿತರ ಸಹಾಯದಿಂದ ತಮ್ಮಿಬ್ಬರ ಸಲುಗೆಯ ವಿಡಿಯೋ ಮಾಡಿಸಿದ್ದಾನೆ. ಪ್ರೀತಿಸಿದ ಯುವತಿ ತನಗೆ ಮೋಸ ಮಾಡಿದ್ದಾಳೆಂದು ಕೋಪಗೊಂಡ ಮಂಜುನಾಥ್ ವಿಡಿಯೋವನ್ನು ಯುಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾನೆ.

    ಇವರಿಬ್ಬರ ಪ್ರೇಮದ ವಿಡಿಯೋ ಪಟ್ಟಣದಲ್ಲಿ ವೈರಲ್ ಆಗುತ್ತಿದ್ದಂತೆ ಯುವತಿಯ ಮದುವೆ ಸಹ ಮುರಿದು ಬಿದ್ದಿದೆ. ವಿಡಿಯೋವನ್ನು ನೋಡಿದ ಶಿರಾ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಮಂಜುನಾಥ್‍ನನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

  • ಹೆದ್ದಾರಿಯಲ್ಲಿ ನಿಂತಿದ್ದ ಲಾರಿಯಿಂದ ಆಲೂಗಡ್ಡೆಯನ್ನ ತಿಂದ ಆನೆ- ವಿಡಿಯೋ

    ಹೆದ್ದಾರಿಯಲ್ಲಿ ನಿಂತಿದ್ದ ಲಾರಿಯಿಂದ ಆಲೂಗಡ್ಡೆಯನ್ನ ತಿಂದ ಆನೆ- ವಿಡಿಯೋ

    ಕೋಲ್ಕತ್ತಾ: ಆನೆಯೊಂದು ಹೆದ್ದಾರಿಯಲ್ಲಿ ನಿಂತಿದ್ದ ಲಾರಿಯಲ್ಲಿನ ಆಲೂಗಡ್ಡೆಗಳನ್ನು ತನ್ನ ಸೊಂಡಿಲಿನ ಸಹಾಯದಿಂದ ತಿನ್ನುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಪಶ್ಚಿಮ ಬಂಗಾಳ ರಾಜ್ಯದ ಪಶ್ಚಿಮ ಮಿಡ್ನಾಪುರ ಜಿಲ್ಲೆಯ ಗರ್‍ಬೇಟಾ ಅರಣ್ಯ ಪ್ರದೇಶದ ರಾಷ್ಟ್ರೀಯ ಹೆದ್ದಾರಿ 60ರಲ್ಲಿ ಆಲೂಗಡ್ಡೆಗಳನ್ನು ತುಂಬಿರುವ ಲಾರಿಯೊಂದು ನಿಂತಿತ್ತು. ಈ ವೇಳೆ ಲಾರಿ ಬಳಿ ಬಂದ ಕಾಡು ಆನೆ ನೇರವಾಗಿ ತನ್ನ ಸೊಂಡಿಲಿನ ಸಹಾಯದ ಮೂಲಕ ಆಲೂಗಡ್ಡೆಗಳನ್ನು ತಿಂದಿದೆ.

    ಆಲೂಗಡ್ಡೆಗಳನ್ನು ಮುಚ್ಚಿರುವ ಪ್ಲಾಸ್ಟಿಕ್ ಕವರ್ ತೆಗೆದು ಆಲೂಗಡ್ಡೆಗಳನ್ನು ಕೆಳಗೆ ಬೀಳಿಸಿ ಒಂದೊಂದನ್ನಾಗಿ ತಿನ್ನುವ ದೃಶ್ಯಗಳನ್ನು ವಿಡಿಯೋದಲ್ಲಿ ಕಾಣಬಹುದು. ಇನ್ನೂ ಲಾರಿಯಲ್ಲಿದ್ದ ಚಾಲಕ ಹೊರಗೆ ಬಂದಿದ್ದಾನೆ. ಲಾರಿ ಚಾಲಕ ಮತ್ತು ಸ್ಥಳೀಯರು ಆನೆಯನ್ನು ಓಡಿಸಲು ಪಟಾಕಿಯನ್ನು ಸಹ ಸಿಡಿಸಿದ್ದಾರೆ. ಆದರೂ ಆನೆ ಯಾವುದನ್ನು ಲೆಕ್ಕಿಸದೇ ತನ್ನ ಪಾಡಿಗೆ ಅದು ಆಲೂಗಡ್ಡೆಗಳನ್ನು ತಿಂದು ತನ್ನ ಹೊಟ್ಟೆ ತುಂಬಿಸಿಕೊಂಡಿದೆ.

    https://www.youtube.com/watch?v=cq6s7vsMhaQ

  • ವಿಡಿಯೋ ಲೀಕ್ ಬಗ್ಗೆ ನಟಿ ಸಂಜನಾ ಗಲ್ರಾನಿ ಹೇಳಿದ್ದು ಹೀಗೆ

    ವಿಡಿಯೋ ಲೀಕ್ ಬಗ್ಗೆ ನಟಿ ಸಂಜನಾ ಗಲ್ರಾನಿ ಹೇಳಿದ್ದು ಹೀಗೆ

    ಬೆಂಗಳೂರು: ದಂಡುಪಾಳ್ಯ ಪಾರ್ಟ್-2 ಸಿನಿಮಾದ ವಿಡಿಯೋ ಲೀಕ್ ಆಗಿದ್ದು, ಈ ಕುರಿತು ನಟಿ ಸಂಜನಾ ಪ್ರತಿಕ್ರಿಯಿಸಿದ್ದು, ಇದರ ಯಾವುದರ ಬಗ್ಗೆ ನನಗೆ ಗೊತ್ತಿಲ್ಲ ಎಂದು ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    ಶುಕ್ರವಾರ ರಾಜ್ಯಾದ್ಯಂತ ಬಹು ನಿರೀಕ್ಷಿತ ಸಿನಿಮಾ ದಂಡುಪಾಳ್ಯ-2 ತೆರೆಕಂಡಿದ್ದು, ಈಗ ಸೆನ್ಸಾರ್ ಮಂಡಳಿ ಕತ್ತರಿ ಹಾಕಿದ್ದ ಸಂಜನಾರ ವಿಡಿಯೋ ಲೀಕ್ ಆಗಿ ವೈರಲ್ ಆಗಿದೆ. ಇದು ನನಗೆ ಆಶ್ಚರ್ಯವನ್ನು ಉಂಟು ಮಾಡಿದೆ. ಈ ವಿಡಿಯೋ ಯಾರು ಲೀಕ್ ಮಾಡಿದ್ದಾರೆ ಎಂಬುವುದು ನನಗೆ ಗೊತ್ತಿಲ್ಲ. ಈ ಬಗ್ಗೆ ಚಿತ್ರತಂಡದವರು ಸೇರಿ ಚರ್ಚೆ ಮಾಡುತ್ತಿದ್ದೇವೆ. ಈ ವೇಳೆ ನನಗೆ ಏನು ಹೇಳಲು ತೋಚುತ್ತಿಲ್ಲ ಎಂದು ನಟಿ ಸಂಜನಾ ಬೇಸರ ವ್ಯಕ್ತಪಡಿಸಿದ್ರು.

    ಇದೇ ತಿಂಗಳು 21ರಂದು ಸಿನಿಮಾ ಹೈದ್ರಾಬಾದ್‍ನಲ್ಲಿ ತೆರೆಕಾಣಲಿದೆ. ಈ ಸಂಬಂಧ ಇಂದು ಬೆಳಗ್ಗೆ ಸಿನಿಮಾ ನಿರ್ದೇಶಕ ಶ್ರೀನಿವಾಸ ರಾಜು ಹೈದ್ರಾಬಾದ್ ಗೆ ತೆರಳಿದ್ದಾರೆ. ಅವರು ಬಂದ್ಮೇಲೆ ಲೀಕ್ ಆಗಿರೋ ಕುರಿತು ಚಿತ್ರತಂಡದೊಂದಿಗೆ ಬಂದು ಎಲ್ಲ ಪ್ರಶ್ನೆಗಳಿಗೆ ಸ್ಪಷ್ಟೀಕರಣ ನೀಡ್ತೀನಿ ಎಂದು ಸಂಜನಾ ಹೇಳಿದ್ದಾರೆ.

    ಚಿತ್ರತಂಡ ನನ್ನೊಂದಿಗೆ ಇದೆ. ಈಗಾಗಲೇ ಪಾರ್ಟ್-3 ಸಿನಿಮಾದ ಚಿತ್ರೀಕರಣ ಸಹ ಮುಕ್ತಾಯವಾಗಿದೆ. ಚಿತ್ರತಂಡ ಸದಸ್ಯರ ನಡುವೆ ಯಾವುದೇ ವೈಮನಸ್ಸುಗಳಿಲ್ಲ. ಸಿನಿಮಾ ರಾಜ್ಯಾದ್ಯಂತ ಹೌಸ್ ಫುಲ್ ಪ್ರದರ್ಶನ ಕಾಣ್ತಾಯಿದೆ. ಇದು ಸಿನಿಮಾ ಪ್ರಚಾರ ಮಾಡುವ ಗಿಮಿಕ್ ಅಲ್ಲ ಎಂದು ಸಂಜನಾ ಸ್ಪಷ್ಟಪಡಿಸಿದ್ದಾರೆ.

    ಏನಿದು ವಿವಾದ?: ನಟಿ ಸಂಜನಾ ಗಲ್ರಾನಿ ಬೆತ್ತಲಾಗಿರೋ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗ್ಯಾಂಗ್-2 ಸಿನಿಮಾದಲ್ಲಿ ಚಿತ್ರೀಕರಿಸಿದ್ದ ದೃಶ್ಯ ಇದೀಗ ಲೀಕ್ ಆಗಿ ಹಲ್ ಚಲ್ ಎಬ್ಬಿಸಿದೆ. ಸೆನ್ಸಾರ್ ಮಂಡಳಿ ಈ ದೃಶ್ಯಕ್ಕೆ ಕತ್ತರಿ ಹಾಕಿದೆ. ಹೀಗಾಗಿ ಸಿನಿಮಾದಲ್ಲಿ ಈ ದೃಶ್ಯ ಕಾಣಿಸೋದಿಲ್ಲ. ರವಿಶಂಕರ್ ಪೋಲೀಸ್ ಆಫೀಸರ್ ಆಗಿದ್ದು ಸಂಜನಾಗೆ ಶಿಕ್ಷೆ ಕೊಡೋ ದೃಶ್ಯ ಇದಾಗಿದೆ. ಇನ್ನೂ ಸೆನ್ಸಾರ್ ಮಂಡಳಿ ಕೂಡ ಸ್ಪಷ್ಟನೆ ನೀಡಿದ್ದು, ನಮ್ಮಿಂದ ಯಾವುದೇ ದೃಶ್ಯ ಲೀಕ್ ಆಗಿಲ್ಲ ಅಂತ ತಿಳಿಸಿದೆ.

    https://www.youtube.com/watch?v=65jqMqngd2g&feature=youtu.be

     

     

  • ಸೆಲ್ಫಿ ಕ್ಲಿಕ್ಕಿಸುತ್ತಲೇ ಸಾವಿನ ಮನೆ ಸೇರಿದ್ರು- ವೈರಲಾಯ್ತು ಯುವಕರ ಕೊನೇ ಕ್ಷಣದ ವಿಡಿಯೋ

    ಸೆಲ್ಫಿ ಕ್ಲಿಕ್ಕಿಸುತ್ತಲೇ ಸಾವಿನ ಮನೆ ಸೇರಿದ್ರು- ವೈರಲಾಯ್ತು ಯುವಕರ ಕೊನೇ ಕ್ಷಣದ ವಿಡಿಯೋ

    ನಾಗ್ಪುರ: ಮಹಾರಾಷ್ಟ್ರದ ನಾಗ್ಪುರದಲ್ಲಿ ದೋಣಿ ಮಗುಚಿ 8 ಯುವಕರು ದಾರುಣವಾಗಿ ಮೃತಪಟ್ಟಿರೋ ಘಟನೆ ಇಂದು ಬೆಳಕಿಗೆ ಬಂದಿದೆ. ಸಾವಿಗೂ ಮುನ್ನ ಯುವಕರು ಸೆಲ್ಫಿ ವಿಡಿಯೋ ಮಾಡಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ನಾಗ್ಪುರದಿಂದ 25 ಕಿ.ಮೀ ದೂರದಲ್ಲಿರೋ ವೇನಾ ಜಲಾಶಯದಲ್ಲಿ ಈ ಅವಘಡ ಸಂಭವಿಸಿದೆ. ಭಾನುವಾರ ಸಂಜೆ 11 ಮಂದಿ ಯುವಕರು ಎಂಜಾಯ್ ಮಾಡಲೆಂದು ವೇನಾ ಜಲಾಶಯಕ್ಕೆ ಬಂದಿದ್ದರು. ಅಂತೆಯೇ ದೋಣಿ ವಿಹಾರ ಮಾಡುತ್ತಾ ತಮ್ಮೊಂದಿಗೆ ಎಂಜಾಯ್ ಮಾಡಲು ಬಾರದ ಸ್ನೇಹಿತನ್ನು ಕಿಚಾಯಿಸುತ್ತಾ ಸೆಲ್ಫಿ ವಿಡಿಯೋ ಮಾಡಿದ್ದಾರೆ. ಬಳಿಕ ಅದನ್ನು ಫೇಸ್ ಬುಕ್‍ಗೆ ಅಪ್ ಲೋಡ್ ಮಾಡಿದ್ದಾರೆ. ಹೀಗೆ ಎಂಜಾಯ್ ಮಾಡುತ್ತಿದ್ದ ವೇಳೆಯಲ್ಲಿಯೇ ದೋಣಿ ಮಗುಚಿ ಯುವಕರು ನೀರುಪಾಲಾಗಿದ್ದಾರೆ. ಆದ್ರೆ ಘಟನೆಯಲ್ಲಿ ಮೂವರು ಯುವಕರನ್ನು ರಕ್ಷಿಸಲಾಗಿದೆ.

    ಇದಕ್ಕೂ ಮೊದಲು ಮೂವರು ನಾವಿಕರ ಜೊತೆ 8 ವಿದ್ಯಾರ್ಥಿಗಳು ತಮ್ಮನ್ನು ಅಣೆಕಟ್ಟಿನ ಹತ್ತಿರ ಕರೆದುಕೊಂಡು ಹೋಗುವಂತೆ ತಿಳಿಸಿದ್ದರು ಎಂಬುವುದಾಗಿ ವರದಿಯಾಗಿದೆ. ದೋಣಿ ಮಗುಚಿ ಬೀಳುವುದನ್ನು ಗಮನಿಸಿದ ಪ್ರತ್ಯಕ್ಷದರ್ಶಿಯೊಬ್ಬರು ಮುಳುಗುತಜ್ಞರಿಗೆ ಮಾಹಿತಿ ನೀಡಿದ್ದರು. ಕೂಡಲೇ ಅವರು ಸ್ಥಳಕ್ಕೆ ದೌಡಾಯಿಸಿ ಮೂವರನ್ನು ರಕ್ಷಿಸಿದ್ದಾರೆ ಅಂತ ವರದಿಯಾಗಿದೆ.

    ನೀರುಪಾಲಾದ ಯುವಕರಲ್ಲಿ ಓರ್ವನ ಶವ ಪತ್ತೆಯಾಗಿದ್ದು, ಉಳಿದ 7 ಮಂದಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಶೋಧ ಕಾರ್ಯಕ್ಕಾಗಿ ಈಗಾಲೇ ಎರಡು ತಂಡಗಳಾದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಇಂದು ಮುಂಜಾನೆಯೇ ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ.

    ಯುವಕರ ತಂಡವೊಂದು ಪ್ರವಾಸಕ್ಕೆಂದು ವೇನಾ ಜಲಾಶಯಕ್ಕೆ ಬಂದಿದ್ದರು. ಅಂತೆಯೇ ಅವರು ಮೀನುಗಾರಿಕಾ ದೋಣಿಯನ್ನು ಎಂಜಾಯ್ ಮಾಡಲು ಬಳಸಿದ್ದರು. ಹೀಗೆ ಎಂಜಾಯ್ ಮಾಡುತ್ತಿರುವಾಗಲೇ ದೋಣಿ ಮಗುಚಿ ಯುವಕರು ನೀರುಪಾಲಾಗಿದ್ದಾರೆ. ವಿಡಿಯೋದಲ್ಲಿರುವ ವಿದ್ಯಾರ್ಥಿಗಳೆಲ್ಲರೂ 20ರಿಂದ 25 ವರ್ಷದೊಳಗಿನವರಾಗೆ ಕಾಣುತ್ತಾರೆ ಅಂತ ಪೊಲೀಸ್ ಅಧಿಕಾರಿ ಸುರೇಶ್ ಭಯೋತ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

    https://www.youtube.com/watch?v=FcyW-PXLGK4

  • ಪೋಷಕರೇ, ಮಕ್ಕಳಿಗೆ ಆಟವಾಡಲು ಪಾತ್ರೆಯನ್ನು ನೀಡೋ ಮುನ್ನ ಪ್ಲೀಸ್ ಈ ವಿಡಿಯೋ ನೋಡಿ…

    ಪೋಷಕರೇ, ಮಕ್ಕಳಿಗೆ ಆಟವಾಡಲು ಪಾತ್ರೆಯನ್ನು ನೀಡೋ ಮುನ್ನ ಪ್ಲೀಸ್ ಈ ವಿಡಿಯೋ ನೋಡಿ…

    ತಿರುವನಂತಪುರಂ: ಮಕ್ಕಳು ತಮ್ಮ ಪಾಡಿಗೆ ತಾವು ಆಟವಾಡುತ್ತಿರುತ್ತವೇ ಅಂತ ಮನೆಯಲ್ಲಿ ಇರುವ ಮಂದಿ ಗಮನಹರಿಸಿದೇ ಇರಬಾರದು. ಅಪ್ಪಿ ತಪ್ಪಿ ಮಕ್ಕಳ ಕಡೆ ಗಮನಕೊಡದಿದ್ರೆ ಆಪತ್ತಿಗೆ ಸಿಲುಕಿಕೊಳ್ತಾವೆ. ಇದಕ್ಕೆ ಸಾಕ್ಷಿ ಈ ವಿಡಿಯೋ.

    ಆಟವಾಡ್ತಿದ್ದ ಮಗು ಖಾಲಿ ಪಾತ್ರೆಯನ್ನು ತಗೆದುಕೊಂಡು ತಲೆ ಮೇಲೆ ಟೋಪಿ ಥರ ಹಾಕಿಕೊಂಡಿದೆ. ಆದ್ರೆ ಪಾತ್ರ ಮಾತ್ರ ವಾಪಸ್ ಬರಲೇ ಇಲ್ಲ. ಕೊನೆಗೆ ಮಗುವಿನ ಕಿರುಚಾಟ ನೋಡಿ ಪೋಷಕರು ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದಾರೆ.

    ಮಗುವಿನ ಸ್ಥಿತಿಯನ್ನು ನೋಡಿದ ವೈದ್ಯರು ಅಗ್ನಿಶಾಮಕ ದಳದ ಹತ್ತಿರ ಕರೆದುಕೊಂಡು ಹೋಗುವಂತೆ ಹೇಳಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಪಾತ್ರೆಯನ್ನು ಕತ್ತರಿಸಿ ಮಗುವನ್ನ ರಕ್ಷಣೆ ಮಾಡಿದ್ದಾರೆ.

    ಕೇರಳದ ಮಲಪ್ಪುರಂನಲ್ಲಿ ಈ ಘಟನೆ ಬುಧವಾರ ನಡೆದಿದೆ. ಕೇರಳ ಫೈರ್ ಫೋರ್ಸ್ ನವರು ಈ ವಿಡಿಯೋವನ್ನು ಫೇಸ್‍ಬುಕ್ ನಲ್ಲಿ ಅಪ್ಲೋಡ್ ಮಾಡಿದ್ದು, 5 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, 11 ಸಾವಿರಕ್ಕೂ ಅಧಿಕ ಮಂದಿ ಶೇರ್ ಮಾಡಿದ್ದಾರೆ.

    https://youtu.be/T1FRHw3-hd8

     

  • ಈ ಮನುಷ್ಯನ ಸಾಹಸ ನೋಡಿದ್ರೆ ನೀವು ಬೆಚ್ಚಿಬೀಳ್ತಿರಿ! ವಿಡಿಯೋ ನೋಡಿ

    ಈ ಮನುಷ್ಯನ ಸಾಹಸ ನೋಡಿದ್ರೆ ನೀವು ಬೆಚ್ಚಿಬೀಳ್ತಿರಿ! ವಿಡಿಯೋ ನೋಡಿ

    ಕ್ವೀನ್ಸ್ ಲ್ಯಾಂಡ್: ವನ್ಯಜೀವಿಗಳ ಜೊತೆ ಸಾಹಸ ಮಾಡೋದು ತುಂಬಾ ಕಷ್ಟ. ಈ ವನ್ಯಜೀವಿಗಳ ಅಧ್ಯಯನಕ್ಕೆ ಕೆಲವರು ತುಂಬಾ ತಲೆ ಕೆಡಿಸಿಕೊಂಡಿರುತ್ತಾರೆ. ಅಂತಹದರಲ್ಲಿ ಆಸ್ಟ್ರೇಲಿಯಾದ ವ್ಯಕ್ತಿಯೊಬ್ಬ ಧೈರ್ಯ ಮಾಡಿ ವಿಶೇಷ ಸಾಧನೆ ಮಾಡಿರುವ ವಿಡಿಯೋ ಈಗ ವೈರಲ್ ಆಗಿದೆ.

    ಹೌದು. ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್‍ದ ನಿವಾಸಿಯಾದ ವನ್ಯಜೀವಿ ಉತ್ಸಾಹಿ ಬ್ಯೂ ಗ್ರೀವ್ಸ್ ಎಂಬಾತನಿಗೆ ಸಮುದ್ರದ ದಂಡೆಯ ಬಳಿ ಒಂದು ಗುಂಡಿ ಕಾಣಿಸಿಕೊಂಡಿದೆ. ಆ ಗುಂಡಿಯಲ್ಲಿ ಏನೋ ಒಂದು ಜೀವಿ ಇರಬೇಕು ಎಂದು ಭಾವಿಸಿಕೊಂಡು ಇಣುಕಿ ನೋಡಿದ್ದಾನೆ. ನೋಡಿದಾಗ ಆ ಗುಂಡಿಯಲ್ಲಿ ದೊಡ್ಡ ಗಾತ್ರದ ಏಡಿವೊಂದು ಕಾಣಿಸಿಕೊಂಡಿದೆ.

    ಆ ಏಡಿಯನ್ನು ಹೇಗಾದ್ರೂ ಮಾಡಿ ಹಿಡಿಯಲೇಬೇಕು ಅಂತ ಯೋಚಿಸುತ್ತಾನೆ. ತನ್ನ ಕೈಯಲ್ಲಿದ್ದ ಒಂದು ಸ್ಟಿಕ್ ಬಳಸಿಕೊಂಡು ತನ್ನ ಜೀವವನ್ನೇ ಪಣಕ್ಕೆ ಇಟ್ಟು ಗುಂಡಿಯ ಒಳಗಡೆ ನುಗ್ಗುತ್ತಾನೆ. ಅರ್ಧ ದೇಹದೊಂದಿಗೆ ಗುಂಡಿಯ ಒಳಗಡೆ ಹೋಗಿ ದೊಡ್ಡ ಏಡಿಯನ್ನು ಹೊರ ತೆಗೆದಿದ್ದಾನೆ.

    ಈ ವಿಡಿಯೋವನ್ನು ಫೇಸ್‍ಬುಕ್ ಗೆ ಜೂನ್ 26 ರಂದು ಅಪ್ಲೋಡ್ ಮಾಡಿದ್ದು, 11 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಅಷ್ಟೇ ಅಲ್ಲದೇ 12 ಸಾವಿರಕ್ಕೂ ಅಧಿಕ ಮಂದಿ ಪೋಸ್ಟನ್ನು ಶೇರ್ ಮಾಡಿದ್ದಾರೆ.

  • ಕೈಗೆ ಬಂದ ತುತ್ತು ಬಾಯಿಗೆ ಬರ್ಲಿಲ್ಲ- ಮೀನುಗಾರರಿಂದ ಈ ಮೀನು ಹೇಗೆ ತಪ್ಪಿಸಿಕೊಳ್ತು ನೋಡಿ

    ಕೈಗೆ ಬಂದ ತುತ್ತು ಬಾಯಿಗೆ ಬರ್ಲಿಲ್ಲ- ಮೀನುಗಾರರಿಂದ ಈ ಮೀನು ಹೇಗೆ ತಪ್ಪಿಸಿಕೊಳ್ತು ನೋಡಿ

    ಪೆರುಗ್ವೆ: ಇಬ್ಬರು ಮೀನುಗಾರರು ಕಷ್ಟಪಟ್ಟು ಹಿಡಿದಿದ್ದ ದೊಡ್ಡ ಗಾತ್ರದ ಮೀನೊಂದು ದಡಕ್ಕೆ ತಂದ ಮೇಲೆ ಇಬ್ಬರ ಕೈಯಿಂದ ತಪ್ಪಿಸಿಕೊಂಡು ನದಿ ಸೇರಿದೆ.

    ಜೆಕ್ ರಿಪಬ್ಲಿಕ್‍ನ ಬ್ರನೋ ನಗರದಲ್ಲಿ ವ್ಯಕ್ತಿ ತನ್ನ ಗೆಳಯನ ಜೊತೆ ಸೇರಿ ದೊಡ್ಡ ಗಾತ್ರದ ಮೀನನ್ನು ಹಿಡಿದಿದ್ದರು. ಕೈಯಲ್ಲಿ ಮೀನು ಹಿಡಿದುಕೊಂಡ ಬಂದ ವ್ಯಕ್ತಿ ಅದನ್ನು ನೆಲದ ಮೇಲೆ ಇಡುವ ವೇಳೆ ಅದು ಒದ್ದಾಡುತ್ತಲೇ ಅವರಿಂದ ನುಸುಳಿಕೊಂಡು ನದಿಯ ಕಡೆಗೆ ಹೋಗಿದೆ. ಓರ್ವ ವ್ಯಕ್ತಿ ಅದನ್ನ ಹಿಡಿಯಲು ಪ್ರಯತ್ನಿಸಿದ್ರೂ ಅದು ಅಷ್ಟರಲ್ಲಿ ನೀರಿನೊಳಗೆ ಹೋಗಿದೆ.

    ಜೂನ್ 27ರಂದು ಈ ವಿಡಿಯೋ ಯುಟ್ಯೂಬ್‍ನಲ್ಲಿ ಅಪ್ಲೋಡ್ ಆಗಿದ್ದು, ಇದೂವರೆಗೂ 3 ಲಕ್ಷಕ್ಕೂ ಅಧಿಕ ವ್ಯೂವ್‍ಗಳನ್ನ ಕಂಡಿದೆ.

  • ಮನುಷ್ಯರೇ ನಾಚುವಂತೆ ಡ್ಯಾನ್ಸ್ ಮಾಡಿತು ಗೋರಿಲ್ಲಾ: ವಿಡಿಯೋ ನೋಡಿ

    ಮನುಷ್ಯರೇ ನಾಚುವಂತೆ ಡ್ಯಾನ್ಸ್ ಮಾಡಿತು ಗೋರಿಲ್ಲಾ: ವಿಡಿಯೋ ನೋಡಿ

    ವಾಷಿಂಗ್ಟನ್: ನೀರು ಅಂದ್ರೆ ಯಾರಿಗಾದ್ರೂ ಉತ್ಸಾಹ ಉಕ್ಕಿ ಬರೋದು ಸಹಜ. ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರ ತನಕ ನೀರು ಅಂದ್ರೆ ತುಂಬಾನೇ ಇಷ್ಟ ಪಡುತ್ತಾರೆ. ಈಗ ಗೋರಿಲ್ಲಾ ಒಂದು ನೀರಿನಲ್ಲಿ ನೃತ್ಯ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.

    ಅಮೆರಿಕಾದ ಡಲ್ಲಾಸ್ ಮೃಗಾಲಯದಲ್ಲಿ ಗೋರಿಲ್ಲಾವೊಂದು ನೀರಿನ ತೊಟ್ಟಿಯಲ್ಲಿ ನಿಂತು ಡ್ಯಾನ್ಸ್ ಮಾಡಿದೆ. ಹೌದು, ಈ 14 ವರ್ಷದ ಗಂಡು ಗೊರಿಲ್ಲ ಬಕೆಟ್ ನೀರಿನಲ್ಲಿ ನಿಂತು ಸಖತ್ ಡ್ಯಾನ್ಸ್ ಮಾಡಿದೆ. ಇದನ್ನು ಪ್ರವಾಸಿಗರೊಬ್ಬರು ಚಿತ್ರೀಕರಿಸಿದ್ದು, ವಿಡಿಯೋವನ್ನು ಯುಟ್ಯೂಬ್‍ಗೆ ಅಪ್ಲೋಡ್ ಮಾಡಲಾಗಿದೆ.

    ಈ ವಿಡಿಯೋವನ್ನು ಇದೂವರೆಗೆ 19 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

     

     

  • ಪತ್ರಕರ್ತ ರವಿ ಬೆಳಗೆರೆಗೆ 1 ವರ್ಷ ಜೈಲು- ಬಂಧನಕ್ಕೆ ಕಾದು ಕುಳಿತ ಬೆಂಗ್ಳೂರು ಸಿಸಿಬಿ ಪೊಲೀಸರು

    ಪತ್ರಕರ್ತ ರವಿ ಬೆಳಗೆರೆಗೆ 1 ವರ್ಷ ಜೈಲು- ಬಂಧನಕ್ಕೆ ಕಾದು ಕುಳಿತ ಬೆಂಗ್ಳೂರು ಸಿಸಿಬಿ ಪೊಲೀಸರು

    ಧಾರವಾಡ: ಶಾಸಕರ ಬಗ್ಗೆ ಮಾನಹಾನಿಕರ ಸುದ್ದಿ ಪ್ರಕಟಿಸಿದ ಹಿನ್ನೆಲೆಯಲ್ಲಿ ಹಿರಿಯ ಪತ್ರಕರ್ತ ರವಿ ಬೆಳಗೆರೆ ಅವರಿಗೆ ಸದನ ಸಮಿತಿ 1 ವರ್ಷ ಜೈಲು ಶಿಕ್ಷೆ ಪ್ರಕಟಿಸಿದೆ.

    ಸದ್ಯ ಅನಾರೋಗ್ಯದ ಹಿನ್ನೆಲೆಯಲ್ಲಿ ಧಾರವಾಡದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರವಿ ಬೆಳೆಗೆರೆಯವರನ್ನ ಬಂಧಿಸಲು ಬೆಂಗಳೂರು ಸಿಸಿಬಿ ಪೊಲೀಸರು ಕಾಯುತ್ತಿದ್ದಾರೆ. ಧಾರವಾಡ ವಿದ್ಯಾಗಿರಿ ಪೊಲೀಸರೂ ಕೂಡ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.

    ಜೈಲು ಶಿಕ್ಷೆ ಪ್ರಕಟವಾದ ಬಗ್ಗೆ ಆಸ್ಪತ್ರೆಯಲ್ಲಿದ್ದುಕೊಂಡೇ ಪ್ರತಿಕ್ರಿಯೆ ನೀಡಿರೋ ರವಿ ಬೆಳಗೆರೆ, ನನಗೆ 1 ವರ್ಷ ಜೈಲು, 10 ಸಾವಿರ ರೂ. ದಂಡ ವಿಧಿಸಿ ಶಿಕ್ಷೆ ಪ್ರಕಟಿಸಿದ್ದಾರೆ. ನಾನು ಹೈ ಕೋರ್ಟ್ ಅಲ್ಲ ಸುಪ್ರೀಂ ಕೋರ್ಟ್ ತನಕ ಹೋಗಿ ಬಡಿದಾಡ್ತೀನಿ. ಇನ್ನು ಈ ಸರ್ಕಾರಕ್ಕೆ, ಕೇವಲ ಒಂದು ವರ್ಷ ಇದೆ ಎಲೆಕ್ಷನ್‍ಗೆ. ಇವರ ಜೀವನ ಮುಗಿಯಿತು ಇಲ್ಲಿಗೆ. ಪತ್ರಕರ್ತರ ತಂಟೆಗೆ ಯಾಕ್ರೀ ಬರ್ತೀರಿ? ಯಾವುದಕ್ಕಾದ್ರೂ ನನ್ನನ್ನ ಯಾಕೆ ದೂಷಿಸುತ್ತೀರಿ? ಇದು ಬಹಳ ಧಮನಕಾರಿ ಆಕ್ರಮಣ. ನಾನು ಇದರ ವಿರುದ್ಧ ಇದ್ದೀನಿ. ನಾನು ವ್ಯವಸ್ಥೆ ವಿರುದ್ಧ ಇರುತ್ತೇನೆ. ಕೈ ಕಾಲು ಇಲ್ಲದವನಲ್ಲ, ದಡ್ಡನಲ್ಲ, ಮೂರ್ಖನಲ್ಲ. ಬೇಕಾದ್ದು ಮಾಡಲಿ. ಹೋರಾಟ ಮಾಡದೇ ಕೈ ಕಟ್ಟಿ ಶರಣಾಗುವ ಪರಿಸ್ಥಿತಿ ನನಗಿಲ್ಲ. ಅಂತಹದ್ದು ಬಂದ್ರೆ ಆತ್ಮಹತ್ಯೆ ಮಾಡಿಕೊಂಡು ಸಾಯ್ತೀನಿ ಅಂದ್ರು.

    ಕಾಂಗ್ರೆಸ್ ನ ಎಂ.ಬಿ.ನಾಗರಾಜ ವಿರುದ್ಧದ ಪ್ರಕರಣದಲ್ಲಿ ಅವಹೇಳನಕಾರಿ ಲೇಖನ ಪ್ರಕಟಿಸಿದ ದೂರಿನ ಮೇಲೆ 1 ವರ್ಷ ಜೈಲು ಹಾಗೂ 10 ಸಾವಿರ ರೂ. ದಂಡ ವಿಧಿಸಿ ಹಕ್ಕು ಬಾಧ್ಯತಾ ಸಮಿತಿ ಶಿಫಾರಸು ಮಾಡಿತ್ತು. ಅದನ್ನು ಸದನ ಅಂಗೀಕರಿಸಿತ್ತು.

    https://www.youtube.com/watch?v=NTHycVatfSM&feature=youtu.be

  • ವೈರಲ್ ವಿಡಿಯೋ: ಸಿಂಪಲ್ ಐಡಿಯಾ ಬಳಸಿ ದರೋಡೆಕೋರರು ಬ್ಯಾಂಕ್‍ನೊಳಗೆ ನುಗ್ಗದಂತೆ ತಡೆದ ಸೆಕ್ಯೂರಿಟಿ ಗಾರ್ಡ್!

    ವೈರಲ್ ವಿಡಿಯೋ: ಸಿಂಪಲ್ ಐಡಿಯಾ ಬಳಸಿ ದರೋಡೆಕೋರರು ಬ್ಯಾಂಕ್‍ನೊಳಗೆ ನುಗ್ಗದಂತೆ ತಡೆದ ಸೆಕ್ಯೂರಿಟಿ ಗಾರ್ಡ್!

    ಮೆಕ್ಸಿಕೋ: ಬೆಣ್ಣೆಯಲ್ಲಿ ಕೂದಲು ತೆಗೆದಷ್ಟು ಸಲೀಸಾಗಿ ಅಂತಾರಲ್ಲ ಅದಕ್ಕೆ ಸ್ಪಷ್ಟ ಉದಾಹರಣೆ ಈ ವಿಡಿಯೋ. ಮೆಕ್ಸಿಕೋದಲ್ಲಿ ಬ್ಯಾಂಕಿನ ಸೆಕ್ಯೂರಿಟಿ ಗಾರ್ಡ್‍ವೊಬ್ಬರು ತುಂಬಾನೇ ಸರಳವಾದ ಐಡಿಯಾ ಬಳಸಿ ಮೂವರು ಮುಸುಕುಧಾರಿ ದರೋಡೆಕೋರರನ್ನು ಬ್ಯಾಂಕ್ ಒಳಗೆ ನುಗ್ಗದಂತೆ ತಡೆದಿದ್ದು, ಇದೀಗ ಈ ವಿಡಿಯೋ ವೈರಲ್ ಆಗಿದೆ.

    ದರೋಡೆಕೋರರನ್ನು ನೋಡಿದ ತಕ್ಷಣ ಎಂಥವರಿಗಾದ್ರೂ ಒಂದು ಕ್ಷಣ ಗಾಬರಿಯಾಗುತ್ತೆ. ಏನು ಮಾಡಬೇಕು ಅಂತ ಥಟ್ಟನೆ ತೋಚೋದಿಲ್ಲ. ಕೆಲವರು ಅಲ್ಲಿಂದ ಓಡಿಹೋಗಲೂ ಯತ್ನಿಸಬಹುದು. ಆದ್ರೆ ಈ ವಿಡಿಯೋದಲ್ಲಿ ಮೂವರು ಮುಸುಕುಧಾರಿಗಳು ಬ್ಯಾಂಕಿನ ಮುಖ್ಯದ್ವಾರದೊಳಗೆ ನುಗ್ಗಿ ಎರಡನೇ ಬಾಗಿಲಿನ ಕಡೆಗೆ ಬಂದಿದ್ದಾರೆ. ಈ ವೇಳೆ ನೀಟಾಗಿ ಶರ್ಟ್, ಟೈ ಧರಿಸಿ ಕೂಲ್ ಆಗಿ ಕಾಣ್ತಿದ್ದ ಸೆಕ್ಯೂರಿಟಿ ಗಾರ್ಡ್ ಮುಸುಕುಧಾರಿಗಳನ್ನ ನೋಡಿ ಅಷ್ಟೇ ಕೂಲ್ ಆಗಿ ಹೋಗಿ ಬ್ಯಾಂಕಿನ ಗಾಜಿನ ಬಾಗಿಲನ್ನ ಲಾಕ್ ಮಾಡಿದ್ದಾರೆ. ಸೆಕ್ಯೂರಿಟಿ ಗಾರ್ಡ್ ಇಷ್ಟು ಆರಾಮವಾಗಿ ಬಾಗಿಲನ್ನ ಲಾಕ್ ಮಾಡಿದ್ದು ನೋಡಿ, ಥೂ ನಮ್ಮ ಪ್ಲಾನ್ ಹಾಳಾಯ್ತು ಅಂತ ಆ ದರೋಡೆಕೋರರು ಅಲ್ಲಿಂದ ವಾಪಸ್ ಹೋಗಿದ್ದಾರೆ.

    ಈ ವಿಡಿಯೋ ಈಗ ವೈರಲ್ ಆಗಿದ್ದು, ಈಗಾಗಲೇ ಯೂಟ್ಯೂಬ್‍ನಲ್ಲಿ 4 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆಯಾಗಿದೆ. ನೋಡುಗರು ಸೆಕ್ಯೂರಿಟಿ ಗಾರ್ಡ್‍ನ ಸಮಯಪ್ರಜ್ಞೆ ಹಾಗೂ ಧೈರ್ಯವನ್ನ ಕೊಂಡಾಡಿದ್ದಾರೆ. ಅಲ್ಲದೆ ಬಂದ ದಾರಿಗೆ ಸುಂಕವಿಲ್ಲದಂತೆ ವಾಪಸ್ ಹೋದ ದರೋಡೆಕೋರರನ್ನ ಕಂಡು ತಮಾಷೆ ಮಾಡಿದ್ದಾರೆ. ಅಯ್ಯೋ ಆ ದರೋಡೆಕೋರರು ಬ್ಯಾಂಕ್ ದರೊಡೆ ಮಾಡ್ಬೇಕು ಅಂತ ಬಂದು, ಗಾಜಿನ ಡೋರ್ ಒಡೆದರೆ ತಪ್ಪಾಗಬಹುದು ಅಂದುಕೊಂಡ್ರೇನೋ ಅಂತ ವ್ಯಂಗ್ಯ ಮಾಡಿದ್ದಾರೆ.