Tag: viral video

  • ಶ್ರೀಲಂಕಾದಲ್ಲಿ ಹೆಬ್ಬಾವಿನ ಜೊತೆ ಪೋಸ್ ಕೊಟ್ಟ ಗೋಲ್ಡನ್ ಸ್ಟಾರ್ ಗಣೇಶ್

    ಶ್ರೀಲಂಕಾದಲ್ಲಿ ಹೆಬ್ಬಾವಿನ ಜೊತೆ ಪೋಸ್ ಕೊಟ್ಟ ಗೋಲ್ಡನ್ ಸ್ಟಾರ್ ಗಣೇಶ್

    ಶ್ರೀಲಂಕಾ: ಮುಗುಳುನಗೆ ಗೆಲುವಿನ ನಂತರ ರಜೆ ಮೂಡಿನಲ್ಲಿರೋ ಗೋಲ್ಡನ್ ಸ್ಟಾರ್ ಗಣೇಶ್ ಅವರು ತಮ್ಮ ಕುಟುಂಬದ ಸಮೇತ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದಾರೆ.

    ಕೊಲಂಬೊದಲ್ಲಿನ ಪ್ರಾಣಿ ಸಂಗ್ರಹಾಲಯಕ್ಕೆ ಶನಿವಾರ ಭೇಟಿ ನೀಡಿದ್ದ ಗಣೇಶ್ ಹೆಬ್ಬಾವನ್ನು ಮೈಮೇಲೆ ಬಿಟ್ಟುಕೊಂಡು ಪೋಸ್ ನೀಡಿದ್ದಾರೆ. ವಿಶೇಷ ಅಂದರೆ ಗಣೇಶ್ ಜೊತೆ ಅವರ ಪುತ್ರನೂ ಇದ್ದ.

    ಇಬ್ಬರು ಹೆದರದೇ ಧೈರ್ಯವಾಗಿ ಹೆಬ್ಬಾವಿನ ಜೊತೆ ಪೋಸ್ ನೀಡಿದ್ದಾರೆ.

    ಈ ದೃಶ್ಯವನ್ನು ಶಿಲ್ಪಾ ಗಣೇಶ್ ಫೇಸ್‍ಬುಕ್‍ಗೆ ಅಪ್‍ಲೋಡ್ ಮಾಡಿದ್ದು ಸಖತ್ ವೈರಲ್ ಆಗಿದೆ.

  • ಬೆಂಗ್ಳೂರಲ್ಲಿ ವಾಕಿಂಗ್ ಸ್ಟಿಕ್ ಗನ್ ಪತ್ತೆ – ಬೆಚ್ಚಿಬಿದ್ದ ಪೊಲೀಸರು, ವಿಡಿಯೋ ವೈರಲ್

    ಬೆಂಗ್ಳೂರಲ್ಲಿ ವಾಕಿಂಗ್ ಸ್ಟಿಕ್ ಗನ್ ಪತ್ತೆ – ಬೆಚ್ಚಿಬಿದ್ದ ಪೊಲೀಸರು, ವಿಡಿಯೋ ವೈರಲ್

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ವಾಕಿಂಗ್ ಸ್ಟಿಕ್ ಗನ್ ಪತ್ತೆಯಾಗಿದೆ.

    ಮೊದಲು ಇದನ್ನ ವಾಕಿಂಗ್ ಸ್ಟಿಕ್ ಎಂದೇ ಭಾವಿಸಿದ್ದ ಪೊಲೀಸರು ಎರಡೆರಡು ಬಾರಿ ಪರಿಶೀಲನೆ ನಡೆಸಿದಾಗ ಈ ವಾಕಿಂಗ್ ಸ್ಟಿಕ್ ರಹಸ್ಯ ಬಯಲಾಗಿದೆ. ನೋಡೋಕೆ ವಾಕಿಂಗ್ ಸ್ಟಿಕ್ ರೀತಿಯೇ ಇರುವ ಇದರಲ್ಲಿ ಹಿಡಿಕೆಯೇ ಟ್ರಿಗರ್ ಆಗಿದೆ.

    ಕೋಲಿನಲ್ಲಿ ಬುಲೆಟ್ ಇರುತ್ತದೆ. ರಾಜ್ಯಕ್ಕೆ ಅಪರೂಪವಾದ ಈ ವಾಕಿಂಗ್ ಸ್ಟಿಕ್ ಗನ್ ವಿಡಿಯೋ ಸಖತ್ ವೈರಲ್ ಆಗಿದೆ.

    ಆದರೆ ಈ ವಾಕಿಂಗ್ ಸ್ಟಿಕ್ ಗನ್ ಎಲ್ಲಿ ಸಿಕ್ತು ಅನ್ನೋ ಬಗ್ಗೆ ಸರಿಯಾದ ಮಾಹಿತಿ ಲಭ್ಯವಾಗಿಲ್ಲ.

    https://www.youtube.com/watch?v=9U0M7IGoekw

  • ಅರ್ಧ ಬಾಕ್ಸ್ ಚಾಕ್ಲೇಟ್ ತಿಂದಾದ್ಮೇಲೆ ಕಾಣಿಸ್ತು ಹುಳುಗಳು- ವೈರಲ್ ವಿಡಿಯೋ ನೋಡಿ

    ಅರ್ಧ ಬಾಕ್ಸ್ ಚಾಕ್ಲೇಟ್ ತಿಂದಾದ್ಮೇಲೆ ಕಾಣಿಸ್ತು ಹುಳುಗಳು- ವೈರಲ್ ವಿಡಿಯೋ ನೋಡಿ

     

    ವಾಷಿಂಗ್ಟನ್: ಚಾಕ್ಲೇಟ್ ಅಂದ್ರೆ ಯಾರಿಗೆ ತಾನೆ ಇಷ್ಟವಾಗಲ್ಲ? ಆದ್ರೆ ನೀವು ಇನ್ಮುಂದೆ ಚಾಕ್ಲೇಟ್ ತಿನ್ನೋ ಮುಂಚೆ ಹತ್ತು ಬಾರಿ ಯೋಚಿಸ್ತೀರ. ಅಮೆರಿಕದ ರೇಚಲ್ ಹಾಗೂ ಆಕೆಯ ರೂಮ್‍ಮೇಟ್‍ಗೆ ಸಹಿಯಾದ ಚಾಕ್ಲೇಟ್ ಕಹಿ ಅನುಭವ ನೀಡಿದೆ.

    ಇಲ್ಲಿನೋಯ್ಸ್ ನಿವಾಸಿಯಾದ ರೇಚಲ್, ಫೆರೆರೋ ರೋಚರ್ ಚಾಕ್ಲೇಟ್ ಖರೀದಿಸಿ ತಂದಿದ್ರು. ಆಕೆ ಮತ್ತು ಆಕೆಯ ರೂಮ್ ಮೇಟ್ ಅರ್ಧ ಡಬ್ಬ ಚಾಕ್ಲೇಟ್ ತಿಂದು ಮುಗಿಸಿದ್ರು. ನಂತರ ಮತ್ತೊಂದು ಚಾಕ್ಲೇಟ್ ಕಚ್ಚಿದಾಗ ಹುಳುಗಳು ಹೊರಬಂದಿವೆ. ಇದನ್ನ ನೋಡಿ ಇಬ್ಬರಿಗೂ ಶಾಕ್ ಆಗಿದೆ. ಇದರ ಫೋಟೋ ಹಾಗೂ ವಿಡಿಯೋಗಳನ್ನ ಫೇಸ್‍ಬುಕ್‍ನಲ್ಲಿ ಹಂಚಿಕೊಳ್ಳಲಾಗಿದ್ದು, ಈಗ ವೈರಲ್ ಆಗಿದೆ. 7 ಲಕ್ಷಕ್ಕೂ ಹೆಚ್ಚು ಬಾರಿ ಈ ಫೇಸ್‍ಬುಕ್ ಪೋಸ್ಟ್ ಶೇರ್ ಆಗಿದೆ.

    ಚಾಕ್ಲೇಟ್‍ವೊಂದನ್ನ ತೆಗೆದುಕೊಂಡು ಅದರ ಮೇಲಿನ ಫಾಯಿಲ್ ತೆಗೆದು ಹುಳುಗಳು ತೆವಳಾಡುತ್ತಿರೋದನ್ನ ಮಹಿಳೆ ತೋರಿಸಿದ್ದಾರೆ. ಮತ್ತೊಂದು ಚಾಕ್ಲೇಟ್ ತೆಗೆದು ನೋಡಿದಾಗ ಮತ್ತಷ್ಟು ಹುಳುಗಳು ಕಾಣಿಸಿವೆ.

    https://www.facebook.com/photo.php?fbid=10214549638404732&set=pcb.10214549650805042&type=3&theater

    ಇದರಿಂದ ಸಾಕಪ್ಪ ಈ ಚಾಕ್ಲೇಟ್ ಸಹವಾಸ ಎಂದುಕೊಂಡಿರೋ ಮಹಿಳೆ, ಇನ್ಯಾವತ್ತೂ ಇದನ್ನ ತಿನ್ನಲ್ಲ. ನಾನು ಮತ್ತು ನನ್ನ ರೂಮ್ ರೂಮ್‍ಮೇಟ್‍ಗೆ ಕಾಣಿಸಿದ್ದು ಇದು. ಪ್ರತಿಯೊಂದು ಚಾಕ್ಲೇಟ್‍ನಲ್ಲೂ ಹುಳುಗಳು ಎಂದು ಫೇಸ್‍ಬುಕ್ ಪೋಸ್ಟ್‍ನಲ್ಲಿ ಬರೆದುಕೊಂಡಿದ್ದಾರೆ.

    ಈಗಾಗಲೇ ಈ ವಿಡಿಯೋ 5 ಕೋಟಿಗೂ ಹೆಚ್ಚು ಬಾರಿ ವೀಕ್ಷಣೆಯಾಗಿದೆ. ವಿಡಿಯೋ ನೋಡಿದವರು ಅಸಹ್ಯ ಪಟ್ಟುಕೊಂಡಿದ್ದಾರೆ. ಬಾಕ್ಸ್ ಮೇಲೆ ಎಕ್ಸ್‍ಪೈರಿ ಡೇಟ್ ಮಾರ್ಚ್ 6, 2018 ಎಂದು ಬರೆಯಲಾಗಿದ್ದು, ಈ ಬಗ್ಗೆ ರೇಚಲ್ ಕಂಪೆನಿಗೆ ದೂರು ನೀಡಿದ್ದಾರೆ. ಆದ್ರೆ ಚಾಕ್ಲೇಟ್ ಶೇಖರಿಸಿಡಲಾದ ಜಾಗದ ಸುತ್ತಮುತ್ತ ಕೀಟಗಳು ಇದ್ದಿರಬಹುದು. ಅದಕ್ಕಾಗಿ ಈ ರೀತಿ ಆಗಿದೆ ಎಂದು ಸಾಕಷ್ಟು ಜನ ಕಮೆಂಟ್ ಮಾಡಿದ್ದಾರೆ.

    ಈ ಬಗ್ಗೆ ಸಂಸ್ಥೆಯ ವಕ್ತಾರರು ಹೇಳಿಕೆ ನೀಡಿದ್ದು, ನಮ್ಮ ಉತ್ಪನ್ನಗಳನ್ನು ಸರಿಯಾದ ಜಾಗದಲ್ಲಿ ಸ್ಟೋರ್ ಮಾಡಬೇಕು ಎಂದಿದ್ದಾರೆ. ಚಾಕ್ಲೇಟ್‍ನ ಪ್ಯಾಕೇಜಿಂಗ್ ಮೇಲೆ ಶೇಖರಿಸಲು ನಿರ್ದಿಷ್ಟ ಸ್ಥಳಗಳನ್ನ ಉಲ್ಲೇಖಿಸಲಾಗಿದ್ದು, ಅದರಂತೆ ಸ್ಟೋರ್ ಮಾಡಬೇಕು ಎಂದು ಹೇಳಿದ್ದಾರೆ.

    ಫೆರೆರೋ ಚಾಕ್ಲೇಟ್‍ನ ಗುಣಮಟ್ಟದ ಬಗ್ಗೆ ನಾವು ಸಂಪೂರ್ಣ ಭರವಸೆ ನೀಡ್ತೀವಿ. ನಮ್ಮ ಗ್ರಾಹಕರಿಗಾದ ಈ ಸಮಸ್ಯೆಯನ್ನ ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಈ ಬಗ್ಗೆ ತನಿಖೆ ಮಾಡಲು ಅವರೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ಹೇಳಿದ್ದಾರೆ.

    https://www.facebook.com/DancerGrl15/videos/pcb.10214549650805042/10214549638324730/?type=3&theater

    https://www.facebook.com/DancerGrl15/videos/pcb.10214549650805042/10214549638484734/?type=3&theater

    https://www.facebook.com/photo.php?fbid=10214549640564786&set=pcb.10214549650805042&type=3&theater

    https://www.facebook.com/photo.php?fbid=10214592273470582&set=pcb.10214549650805042&type=3&theater

  • 9ನೇ ತರಗತಿ ವಿದ್ಯಾರ್ಥಿನಿಯೊಂದಿಗೆ 25ರ ಯುವಕನ ಕಾಮಚೇಷ್ಟೆಯ ವಿಡಿಯೋ ವೈರಲ್

    9ನೇ ತರಗತಿ ವಿದ್ಯಾರ್ಥಿನಿಯೊಂದಿಗೆ 25ರ ಯುವಕನ ಕಾಮಚೇಷ್ಟೆಯ ವಿಡಿಯೋ ವೈರಲ್

    ಬೆಳಗಾವಿ: 9ನೇ ತರಗತಿ ಬಾಲಕಿಯನ್ನ ಪುಸಲಾಯಿಸಿ ಯುವಕನೊಬ್ಬ ಕಾಮಚೇಷ್ಟೆ ತೀರಿಸಿಕೊಂಡ ಮೊಬೈಲ್ ವಿಡಿಯೋ ಒಂದು ವೈರಲ್ ಆಗಿದೆ.

    ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ 25 ವರ್ಷದ ಯುವಕ ಬಾಲಕಿಯನ್ನು ಲೈಂಗಿಕವಾಗಿ ಬಳಸಿಕೊಳ್ತಿರೋದನ್ನು ತಾನೇ ವಿಡಿಯೋ ಮಾಡಿಕೊಂಡಿದ್ದಾನೆ. ಮಗಳ ವಿಡಿಯೋ ಬಗ್ಗೆ ತಿಳಿಯುತ್ತಿದ್ದಂತೆ ಆಘಾತಕ್ಕೊಳಗಾಗಿರೋ ಬಾಲಕಿಯ ತಾಯಿ ಹಾರೋಗೇರಿ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ.

    ಇದನ್ನೂ ಓದಿ: ಟಾಯ್ಲೆಟ್‍ನಲ್ಲಿ ಯುವಕ ಯುವತಿ ಸರಸ ಸಲ್ಲಾಪ-ಮಂಗ್ಳೂರಲ್ಲಿ ವೈರಲಾಯ್ತು ರಾಸಲೀಲೆ ವಿಡಿಯೋ

    ಅಸಲಿಗೆ ಈ ಘಟನೆ ಎರಡು ತಿಂಗಳ ಹಿಂದೆ ನಡೆದಿದೆ ಎನ್ನಲಾಗಿದೆ. ಮೊಬೈಲ್ ರಿಪೇರಿಗೆ ಕೊಟ್ಟಿದ್ದಾಗ ಮೊಬೈಲ್ ಅಂಗಡಿ ಮಾಲೀಕ ವಿಡಿಯೋವನ್ನು ವಾಟ್ಸಾಪ್‍ನಲ್ಲಿ ಹರಿಬಿಟ್ಟು ವೈರಲ್ ಮಾಡಿರೋದು ಗೊತ್ತಾಗಿದೆ.

    ಇತ್ತ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಪರಾರಿಯಾಗಿದ್ದು, ಮೊಬೈಲ್ ಅಂಗಡಿ ಮಾಲೀಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಇದನ್ನೂ ಓದಿ: ಎಂಗೇಜ್‍ಮೆಂಟ್ ಆದ್ರೂ ತನ್ನ ಜೊತೆ ಎಂಗೇಜ್ ಆಗೆಂದ ಹುಡ್ಗ-ಮುಂದೆ ಏನ್ ಮಾಡ್ದಾ ಗೊತ್ತಾ?

    https://youtu.be/D5gLc8sSen8

  • ಅಪಘಾತದಲ್ಲಿ ಗಾಯಗೊಂಡ ಯೋಧರಿಗೆ ಕಾಶ್ಮೀರದ ಜನರ ಸಹಾಯ- ವಿಡಿಯೋ ವೈರಲ್

    ಅಪಘಾತದಲ್ಲಿ ಗಾಯಗೊಂಡ ಯೋಧರಿಗೆ ಕಾಶ್ಮೀರದ ಜನರ ಸಹಾಯ- ವಿಡಿಯೋ ವೈರಲ್

     

    ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಅಪಘಾತದಲ್ಲಿ ಗಾಯಗೊಂಡಿದ್ದ ಯೋಧರಿಗೆ ಸ್ಥಳಿಯರು ಸಹಾಯ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಇಲ್ಲಿನ ಬುದ್ಗಾಮ್ ಜಿಲ್ಲೆಯಲ್ಲಿ ಸೇನಾ ಟ್ರಕ್‍ವೊಂದು ಅಪಘಾತಕ್ಕೆ ಸಿಲುಕಿತ್ತು. ಇದನ್ನ ಕಂಡ ಸ್ಥಳೀಯರು ಕೂಡಲೇ ಸೈನಿಕರ ನೆರವಿಗೆ ಧಾವಿಸಿದ್ದಾರೆ. ಭಾನುವಾರದಂದು ಈ ಅಪಘಾತ ನಡೆದಿದೆ.

    ಇಲ್ಲಿನ ಚಾದೂರಾ ಪ್ರದೇಶದ ಮಾರ್ಗವಾಗಿ ವಾಹನ ಚಲಿಸುತ್ತಿದ್ದ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಟ್ರಕ್ ರಸ್ತೆಯಿಂದ ಪಕ್ಕಕ್ಕೆ ಹೋಗಿತ್ತು. ಅಪಘಾತದಿಂದಾಗಿ ಹಲವು ಸೈನಿಕರಿಗೆ ಸಣ್ಣಪುಟ್ಟ ಗಾಯಗಳಾಗಿತ್ತು. ಕೂಡಲೇ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿದ್ದು, ಗಾಯಗೊಂಡ ಸೈನಿಕರಿಗೆ ನೆರವಾದ್ರು ಎಂದು ಪೊಲೀಸರು ಹೇಳಿದ್ದಾರೆ. ಸೈನಿಕರಿಗೆ ಕುಡಿಯಲು ನೀರು ಹಾಗೂ ಪ್ರಥಮ ಚಿಕಿತ್ಸೆ ನೀಡಿ ಸ್ಥಳೀಯರು ಮಾನವೀಯತೆ ಮೆರೆದಿದ್ದಾರೆ.

    ಕಳೆದ ವರ್ಷವೂ ಕೂಡ ಇಲ್ಲಿನ ಪರಿಂಪೋರಾ – ಪಂತ ಚೌಕ್ ಬೈಪಾಸ್‍ನ ಲಸ್ಜನ್ ಬಳಿ ಟ್ರಕ್ ಅಪಘಾತಕ್ಕೆ ಸಿಲುಕಿದ್ದಾಗ ಗಾಯಗೊಂಡ ಸೈನಿಕರು ಹೊರಬರಲು ಸ್ಥಳೀಯರು ಸಹಾಯ ಮಾಡಿದ್ದರು.

  • 1500 ರೂ. ಆಸೆಗಾಗಿ ಶವವನ್ನ ನದಿಗೆಸೆದ ರೈಲ್ವೆ ಪೊಲೀಸ್- ವಿಡಿಯೋ ವೈರಲ್

    1500 ರೂ. ಆಸೆಗಾಗಿ ಶವವನ್ನ ನದಿಗೆಸೆದ ರೈಲ್ವೆ ಪೊಲೀಸ್- ವಿಡಿಯೋ ವೈರಲ್

    ಪಾಟ್ನಾ: 1500 ರೂ. ಆಸೆಗಾಗಿ ರೈಲ್ವೇ ಪೊಲೀಸರೊಬ್ಬರು ಶವವನ್ನು ನಾಚಿಕೆಯಿಲ್ಲದೆ ನದಿಗೆ ಎಸೆದ ಘಟನೆ ಬಿಹಾರದಲ್ಲಿ ನಡೆದಿದೆ.

    ರೈಲ್ವೆ ಪೊಲೀಸ್ ಅಧಿಕಾರಿ ಹಾಗು ಮತ್ತೊಬ್ಬ ವ್ಯಕ್ತಿ ಶವವನ್ನು ನದಿಗೆ ಎಸೆಯುವ ವೇಳೆ ಪ್ರತ್ಯಕ್ಷದರ್ಶಿಗಳು ಇದನ್ನ ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಾರೆ. ದರ್ಭಂಗಾ ರೈಲ್ವೆ ನಿಲ್ದಾಣದ ಬಳಿ ಸರ್ಕಾರಿ ರೈಲ್ವೆ ಪೊಲೀಸರಿಗೆ(ಜಿಆರ್‍ಪಿ) ಗುರುವಾರದಂದ ಅಪರಿಚಿತ ಶವವೊಂದು ಪತ್ತೆಯಾದ ಬಳಿಕ ಈ ಘಟನೆ ನಡೆದಿದೆ.

    ನಿಯಮಗಳ ಪ್ರಕಾರ ಅಪರಿಚಿತ ಶವ ಪತ್ತೆಯಾದಾಗ ಭಾರತೀಯ ರೈಲ್ವೇ ಶವ ಸಂಸ್ಕಾರಕ್ಕಾಗಿ 1500 ರೂ. ನೀಡುತ್ತದೆ. ಈ 1500 ರೂ. ಹಣವನ್ನ ಜೇಬಿಗಿಳಿಸಿಕೊಳ್ಳಬಹುದು ಎಂಬ ಆಸೆಯಿಂದ ಜಿಆರ್‍ಪಿ ಅಧಿಕಾರಿ ಅವ್ದೇಶ್ ಮಿಶ್ರಾ ಹಾಗೂ ಶವವನ್ನು ಇರಿಸಲಾಗಿದ್ದ ಆಂಬುಲೆನ್ಸ್‍ನ ಚಾಲಕ ದರ್ಭಂಗಾ- ಸಮಸ್ತಿಪುರ್ ರಸ್ತೆಯಲ್ಲಿನ ಬಾಗ್ಮತಿ ನದಿಗೆ ಶವವನ್ನು ಎಸೆಯಲು ನಿರ್ಧರಿಸಿದ್ದರು.

    ಶವವನ್ನು ಎಸೆಯುವ ವೇಳೆ ಸ್ಥಳದಲ್ಲಿದ್ದವರು ಈ ದೃಶ್ಯವನ್ನ ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಾರೆ. ಸ್ಥಳದಲ್ಲಿದ್ದವರು ಅವ್ದೇಶ್ ಹಾಗೂ ಆಂಬುಲೆನ್ಸ್ ಚಾಲಕನಿಗೆ ಏನು ಮಾಡ್ತೀದ್ದೀರ ಅಂತ ವಿಚಾರಿಸಿದ್ದರು. ಆಗ ಅವ್ದೇಶ್, ಶವ ಕೊಳೆತುಹೋಗಿದ್ದರಿಂದ ನದಿಗೆ ಎಸೆಯುತ್ತಿದ್ದೇವೆ ಎಂದು ಹೇಳಿದ್ದರು.

    ಈ ದೃಶ್ಯವನ್ನ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದ ವ್ಯಕ್ತಿ ಇದನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ನಂತರ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸ್ ಇಲಾಖೆಯ ವಿರುದ್ಧ ಕೋಪದಿಂದ ಕಮೆಂಟ್‍ಗಳನ್ನ ಮಾಡಿದ್ದಾರೆ. ವಿಡಿಯೋ ವೈರಲ್ ಆದ ನಂತರ ಎಸ್‍ಪಿ ಗೆ ಈ ಬಗ್ಗೆ ಮಾಹಿತಿ ತಿಳಿದು ತನಿಖೆಗೆ ಆದೇಶಿಸಿದ್ದರು. ರೈಲ್ವೆ ಪೊಲೀಸ್‍ನ ಈ ನಾಚಿಕೆಗೇಡಿನ ಕೃತ್ಯ ನಿಜವೆಂದು ಸಾಬೀತಾಗಿದೆ. ಕೂಡಲೇ ಇಲಾಖೆ ಕ್ರಮ ಕೈಗೊಂಡಿದ್ದು, ಅವ್ದೇಶ್‍ರನ್ನ ಅಮಾನತು ಮಾಡಿದೆ.

  • ಮನೆಗೆ ನುಗ್ಗಿದ್ದ ಪ್ರವಾಹದ ನೀರಿನಲ್ಲಿ ಮೀನು ಹಿಡಿದ- ವೈರಲ್ ವಿಡಿಯೋ ನೋಡಿ

    ಮನೆಗೆ ನುಗ್ಗಿದ್ದ ಪ್ರವಾಹದ ನೀರಿನಲ್ಲಿ ಮೀನು ಹಿಡಿದ- ವೈರಲ್ ವಿಡಿಯೋ ನೋಡಿ

    ವಾಷಿಂಗ್ಟನ್: ಭೀಕರ ಪ್ರವಾಹದಿಂದಾಗಿ ನೀರಿನ ಜೊತೆ ಮೀನೊಂದು ಮನೆಗೆ ನುಗ್ಗಿದ್ದು, ಮನೆಯ ಮಾಲೀಕ ಮೀನು ಹಿಡಿಯಲು ಸಾಹಸ ಪಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಅಮೇರಿಕದಲ್ಲಿ ಭೀಕರ ಪ್ರವಾಹ ಉಂಟಾಗಿದ್ದು ಯುರಿಕೈನ್ ಹಾರ್ವೆನಲ್ಲಿರುವ ಕಟ್ಟಡವೊಂದಕ್ಕೆ ನೀರು ನುಗ್ಗಿದೆ. ಈ ವೇಳೆ ಪ್ರವಾಹದ ನೀರಿನೊಂದಿಗೆ ಮೀನು ಮನೆಯೊಳಗೆ ಬಂದಿದೆ. ಇದನ್ನು ಗಮನಿಸಿದ ಮನೆಯ ಮಾಲೀಕ ಸಾಲ್ಡನ್ ಮೀನು ಹಿಡಿಯಲು ಹರಸಾಹಸ ಮಾಡಿದ್ದಾರೆ.

    ಸಾಲ್ಡನ್ ಮೀನು ಹಿಡಿಯುವ ದೃಶ್ಯವನ್ನು ಮಗಳು ವಿವೈನ ತನ್ನ ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಾಳೆ. ಸಾಲ್ಡನ್ ನೀರಿನಲ್ಲಿ ಡೈ ಹೊಡೆದು ಸ್ಲಿಪ್ಪೆರಿ ಹೆಸರಿನ ಮೀನನ್ನು ಹಿಡಿಯುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಸಾಲ್ಡನಾ ಮೀನು ಹಿಡಿಯುವ ವಿಡಿಯೋವನ್ನ `ಆಹಾರವೇ ಮನೆಗೆ ಬಂದಾಗ, ನಾವು ಯಾಕೆ ಹೊರಗಡೆ ಹೋಗಬೇಕು’ ಎಂಬ ಬರಹದೊಂದಿಗೆ ಫೇಸ್ ಬುಕ್‍ನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ.

     ಸಾಲ್ಡನ್ ಫೇಸ್ ಬುಕ್‍ನಲ್ಲಿ ವಿಡಿಯೋ ಇದೂವರೆಗೂ 10 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆಯಾಗಿದ್ದು, 4 ಲಕ್ಷಕ್ಕೂ ಅಧಿಕ ಜನ ವಿಡಿಯೋವನ್ನು ಶೇರ್ ಮಾಡಿದ್ದಾರೆ.

  • ಟ್ರೈನ್ ಛಾವಣಿಯಿಂದ ಮಳೆನೀರು ಸೋರಿಕೆ: ಛತ್ರಿ ಹಿಡ್ಕೊಂಡೇ ರೈಲು ಓಡಿಸಿದ ಚಾಲಕ- ವಿಡಿಯೋ ವೈರಲ್

    ಟ್ರೈನ್ ಛಾವಣಿಯಿಂದ ಮಳೆನೀರು ಸೋರಿಕೆ: ಛತ್ರಿ ಹಿಡ್ಕೊಂಡೇ ರೈಲು ಓಡಿಸಿದ ಚಾಲಕ- ವಿಡಿಯೋ ವೈರಲ್

    ರಾಂಚಿ: ಮಳೆ ಬಂದಾಗ ಮನೆಯ ಛಾವಣಿ ಸೋರಿಕೆಯಾಗೋದನ್ನ ಕೇಳಿರ್ತೀವಿ. ಹಾಗೇ ಕೆಲವು ಬಸ್‍ಗಳಲ್ಲೂ ಮಳೆ ನೀರು ಸೋರಿಕೆಯಾಗುತ್ತೆ. ಆದ್ರೆ ರೈಲಿನಲ್ಲಿ ಹೀಗಾದ್ರೆ ಏನ್ ಮಾಡೋದು? ಅದರಲ್ಲೂ ರೈಲು ಚಾಲನೆ ಮಾಡೋ ಚಾಲಕರೇ ಸೋರೋ ಮಳೆನೀರಿನಿಂದ ರಕ್ಷಿಸಿಕೊಳ್ಳೋಕೆ ಛತ್ರಿ ಹಿಡಿದು ಕೂತ್ರೆ? ಇಂತಹದ್ದೊಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ರೈಲು ಚಾಲಕ ಛತ್ರಿ ಹಿಡಿದು ರೈಲು ಚಾಲನೆ ಮಾಡುತ್ತಿರೋದನ್ನ ವಿಡಿಯೋದಲ್ಲಿ ಕಾಣಬಹುದು. ರೈಲಿನ ಛಾವಣಿಯಿಂದ ನೀರು ಸೋರಿಕೆಯಾಗ್ತಿದ್ದು, ಇದರಿಂದ ಕಂಟ್ರೋಲ್ ಪ್ಯಾನಲ್‍ಗೆ ಹಾನಿಯಾಗದಂತೆ ರಕ್ಷಿಸಲು ಚಾಲಕ ಛತ್ರಿ ಹಿಡಿದು ಕೂತಿದ್ದಾರೆ. ಅಲ್ಲದೆ ನೆಲದ ಮೇಲೆ ದಿನಪತ್ರಿಕೆಗಳನ್ನ ಹಾಸಲಾಗಿದ್ದು ಅವೂ ಕೂಡ ನೀರಿನಲ್ಲಿ ನೆಂದು ತೊಪ್ಪೆಯಾಗಿದೆ.

    ಇದನ್ನೂ ಓದಿ: ಈ ಸರ್ಕಾರಿ ಕಚೇರಿಯಲ್ಲಿ ಹೆಲ್ಮೆಟ್ ಕಡ್ಡಾಯ!

    ರೈಲು ಚಾಲಕ ತನ್ನ ಕರ್ತವ್ಯವನ್ನ ನಿರ್ವಹಿಸಿದ್ರೆ ಸ್ಪೀಕರ್ ಮತ್ತು ಕ್ಯಾಮೆರಾ ಹಿಂದಿದ್ದ ಮತ್ತೋರ್ವ ವ್ಯಕ್ತಿ ತಮ್ಮ ಸಂಕಷ್ಟದ ಬಗ್ಗೆ ಹೇಳಿಕೊಂಡಿದ್ದಾರೆ. ವರ್ಷಗಳಿಂದ ಈ ಸೋರಿಕೆ ಸಮಸ್ಯೆಯನ್ನ ಎದುರಿಸುತ್ತಿದ್ದೇವೆ. ಎಲ್ಲಾ ಸಮಯದಲ್ಲೂ ನಾವು ಹೆಚ್ಚಾಗೇ ಜಾಗರೂಕರಾಗಿರಬೇಕು ಅಂತ ಹೇಳಿದ್ದಾರೆ.

    ಜಾಗರೂಕತೆಯಿಂದ ಇರೋಕೆ ನಮಗೇನೂ ತೊಂದರೆಯಿಲ್ಲ. ಆದ್ರೆ ಕೆಲಸದಲ್ಲಿ ಸಾಕಷ್ಟು ಅನಾನುಕೂಲಗಳು ಹಾಗೂ ತೊಂದರೆಗಳಿವೆ ಅಂತ ಅವರು ಹೇಳಿದ್ದಾರೆ.

    ತಮ್ಮ ಸಂಕಷ್ಟದ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರಲು ಈ ವಿಡಿಯೋವನ್ನ ಸಾಧ್ಯವಾದಷ್ಟು ಹಂಚಿಕೊಳ್ಳಿ ಅಂತ ವ್ಯಕ್ತಿ ಕೇಳಿಕೊಂಡಿದ್ದಾರೆ. ಈ ವಿಡಿಯೋವನ್ನ ಜಾರ್ಖಂಡ್‍ನಲ್ಲಿ ಚಿತ್ರೀಕರಿಸಲಾಗಿದೆ ಆದ್ರೆ ಯಾವಾಗ ಚಿತ್ರೀಕರಿಸಲಾಗಿದೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ.

    ಆದ್ರೆ ಈ ವಿಡಿಯೋ ಟ್ವಿಟ್ಟರ್‍ನಲ್ಲಿ ವೈರಲ್ ಆದ ಬಳಿಕ ರೈಲ್ವೆ ಇಲಾಖೆ ಟ್ವಿಟ್ಟರ್ ಖಾತೆಯಿಂದ ಪ್ರತಿಕ್ರಿಯೆ ಬಂದಿದೆ. ನಮಗೆ ಈ ಬಗ್ಗೆ ಕಾಳಜಿ ಇದೆ. ತನಿಖೆ ಮಾಡಲಾಗಿದೆ. ಇದು ಕಾರ್ಯನಿರ್ವಹಿಸದ ಎಂಜಿನ್ ಆಗಿದ್ದು ಮುಂದಿನಿಂದ ಮತ್ತೊಂದು ಎಂಜಿನ್ ಅದನ್ನ ಎಳೆದೊಯ್ಯೋದನ್ನ ವಿಡಿಯೋದಲ್ಲಿ ಕಾಣಬಹುದು ಎಂದು ಹೇಳಿದೆ.

  • ನಡುರಸ್ತೆಯಲ್ಲಿ ಟ್ರಾಫಿಕ್ ಪೊಲೀಸ್ ಕೆನ್ನೆಗೆ ಬಾರಿಸಿದ ಬೈಕ್ ಸವಾರ- ವಿಡಿಯೋ ವೈರಲ್

    ನಡುರಸ್ತೆಯಲ್ಲಿ ಟ್ರಾಫಿಕ್ ಪೊಲೀಸ್ ಕೆನ್ನೆಗೆ ಬಾರಿಸಿದ ಬೈಕ್ ಸವಾರ- ವಿಡಿಯೋ ವೈರಲ್

     

    ಮುಂಬೈ: ಬೈಕ್ ಸಾವರನೊಬ್ಬ ಟ್ರಾಫಿಕ್ ಪೊಲೀಸ್‍ಗೆ ನಡುರಸ್ತೆಯಲ್ಲಿ ಕಪಾಳಕ್ಕೆ ಬಾರಿಸಿರುವ ಘಟನೆ ಸೋಮವಾರದಂದು ಮುಂಬೈನಲ್ಲಿ ನಡೆದಿದ್ದು, ಸದ್ಯ ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಟ್ರಾಫಿಕ್ ಸಿಗ್ನಲ್ ಜಂಪ್ ಮಾಡಿದ ಕಾರಣಕ್ಕೆ ಇಲ್ಲಿನ ವಾಸೈನಲ್ಲಿ ಟ್ರಾಫಿಕ್ ಪೊಲೀಸ್ ಕಾಲು ವಿಠಲ್ ಮುಂಡೆ ಬೈಕ್ ಸವಾರನನ್ನು ತಡೆದಿದ್ದರು. ಈ ವೇಳೆ ಬೈಕ್ ಸವಾರ ತನ್ನ ಹೆಂಡತಿ ಹಾಗೂ ಮಗುವಿನೊಂದಿಗೆ ಹೋಗುತ್ತಿದ್ದರು. ಸವಾರ ವಾಸೈನ ಪಾರ್ವತಿ ಕ್ರಾಸ್ ಏರಿಯ ಬಳಿ ಸಿಗ್ನಲ್ ಜಂಪ್ ಮಾಡಿದ್ದರು ಎನ್ನಲಾಗಿದೆ. ಆದ್ರೆ ನಾನು ಯಾವುದೇ ಸಂಚಾರ ನಿಯಮ ಉಲ್ಲಂಘನೆ ಮಾಡಿಲ್ಲ ಎಂದು ಸವಾರ ವಾದಿಸಿದ್ದಾರೆ. ಆದ್ರೆ ಟ್ರಾಫಿಕ್ ಪೊಲೀಸ್ ಇದಕ್ಕೆ ಕಿವಿಗೊಡದ ಕಾರಣ ಬೈಕ್ ಸವಾರ ನಡುರಸ್ತೆಯಲ್ಲೇ ಎಲ್ಲರೆದುರು ಟ್ರಾಫಿಕ್ ಪೊಲೀಸ್‍ಗೆ ಎರಡು ಬಾರಿ ಕೆನ್ನೆಗೆ ಬಾರಿಸಿದ್ದಾರೆ.

    ನಂತರ ಆರೋಪಿ ಬೈಕ್ ಸವಾರನನ್ನ ಮಾಣಿಕ್‍ಪುರ್ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ನಾವು ಬೈಕ್ ಸವಾರನ ವಿರುದ್ಧ ಸೆಕ್ಷನ್ 186ರ ಅಡಿ ಪ್ರಕರಣ ದಾಖಲಿಸಿಕೊಂಡು, ಎಚ್ಚರಿಕೆ ನೀಡಿ ಕಳಿಸಿದ್ದೇವೆ ಅಂತ ಮಾಣಿಕ್‍ಪುರ್ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿ ಅನಿಲ್ ಪಾಟಿಲ್ ಹೇಳಿದ್ದಾರೆ.

  • ಕುದುರೆಗೆ ಚಿತ್ರಹಿಂಸೆ ಕೊಟ್ಟು ಕೊಂದ್ರು, ಪೊಲೀಸರೂ ಸಹಾಯ ಮಾಡಿದ್ರು!- ಅಮಾನವೀಯ ಕೃತ್ಯದ ವಿಡಿಯೋ ವೈರಲ್

    ಕುದುರೆಗೆ ಚಿತ್ರಹಿಂಸೆ ಕೊಟ್ಟು ಕೊಂದ್ರು, ಪೊಲೀಸರೂ ಸಹಾಯ ಮಾಡಿದ್ರು!- ಅಮಾನವೀಯ ಕೃತ್ಯದ ವಿಡಿಯೋ ವೈರಲ್

     

    ಚಂಡೀಗಢ: ಕುದುರೆಯೊಂದಕ್ಕೆ ಚಿತ್ರಹಿಂಸೆ ಕೊಟ್ಟು ಹಗ್ಗದಿಂದ ಬಿಗಿದು ಕೊಂದಿರುವ ಅಮಾನವೀಯ ಘಟನೆ ಹರಿಯಾಣಾದಲ್ಲಿ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಮಾನುಕುಲವೇ ತಲೆತಗ್ಗಿಸುವ ಇಂತಹದ್ದೊಂದು ಘಟನೆ ಮಂಗಳವಾರದಂದು ಹರಿಯಾಣದ ಜಿಂದ್ ಪ್ರದೇಶದ ಗೊಹಾನಾ ರಸ್ತೆಯಲ್ಲಿ ನಡೆದಿದೆ. ಈ ಅಮಾನವೀಯ ಕೃತ್ಯದ ಹಿನ್ನೆಲೆಯಲ್ಲಿ ಪೊಲೀಸರು 10 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಕೆಲವು ವ್ಯಕ್ತಿಗಳು ಕುದುರೆಯನ್ನ ದೊಣ್ಣೆಯಿಂದ ಹೊಡೆದು ಹಗ್ಗದಿಂದ ಬಿಗಿಯಾಗಿ ಎಳೆದಿದ್ದಾರೆ. ಕುದುರೆಯ ಕಾಲುಗಳು ಹಾಗು ಬಾಯಿಗೆ ಹಗ್ಗ ಕಟ್ಟಿ ಎಲ್ಲಾ ದಿಕ್ಕಿನಿಂದ ಎಳೆಯುತ್ತಿರೋದನ್ನ ವಿಡಿಯೋದಲ್ಲಿ ಕಾಣಬಹುದು. ಇವರ ಹಿಂಸೆಯಿಂದ 10 ನಿಮಿಷಕ್ಕೂ ಹೆಚ್ಚು ಕಾಲ ಒದ್ದಾಡಿದ ಕುದುರೆ ಕೊನೆಗೆ ಸಾವನ್ನಪ್ಪಿದೆ.

    ಈ ಕುದುರೆ ಬೀದಿಗಳಲ್ಲಿ ಅಲೆದಾಡಿಕೊಂಡಿದ್ದು, ಹತ್ತಿರದ ಮಾರುಕಟ್ಟೆ ಪ್ರದೇಶದಲ್ಲಿ ಜನರ ಮೇಲೆ ದಾಳಿ ಮಾಡಿ, ಆಸ್ತಿಪಾಸ್ತಿಗೆ ಹಾನಿ ಮಾಡುತ್ತಿತ್ತು ಎಂದು ಇಲ್ಲಿನ ವ್ಯಾಪಾರಿಗಳು ಪೊಲೀಸರಿಗೆ ದೂರು ನೀಡಿದ್ದರು. ಆದ್ರೆ ಪೊಲೀಸರು ಪಶುಸಂಗೋಪನಾ ಇಲಾಖೆಯ ಪ್ರಾಣಿ ತಜ್ಞರಿಗೆ ವಿಷಯ ತಿಳಿಸಿರಲಿಲ್ಲ ಎಂದು ವರದಿಯಾಗಿದೆ. ಪೊಲೀಸರ ಸಹಾಯ ಪಡೆದು ಸ್ಥಳೀಯರೇ ಕುದುರೆಯನ್ನ ಕೊಂದಿದ್ದಾರೆ.

    ಈ ಕೃತ್ಯಕ್ಕೆ ಎಎಸ್‍ಐ ರಾಜಿಂದರ್ ಕುಮಾರ್ ಮತ್ತು ವಿಶೇಷ ರಕ್ಷಣಾ ಅಧಿಕಾರಿ ಸುಭಾಷ್ ಸಹಾಯ ಮಾಡಿದ್ದಾರೆ. ಸದ್ಯ ಇಬ್ಬರನ್ನೂ ವರ್ಗಾವಣೆ ಮಾಡಿದ್ದು, ಇವರ ವಿರುದ್ಧ ತನಿಖೆ ಆರಂಭವಾಗಿದೆ.

    ಈ ಬಗ್ಗೆ ಹೇಳಿಕೆ ನೀಡಿರೋ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯ ಉಸ್ತುವಾರಿಯಾದ ಇನ್ಸ್ ಪೆಕ್ಟರ್ ದಿನೇಶ್ ಕುಮಾರ್, ಕುದುರೆ ತುಂಬಾ ಒದ್ದಾಡುತ್ತಿದ್ದರಿಂದ ಅದನ್ನು ನಿಯಂತ್ರಿಸಲು ಮಾತ್ರ ಪೊಲೀಸರು ಸಹಾಯ ಮಾಡಿದ್ದಾರೆ ಅಂತ ಹೇಳಿದ್ದಾರೆ. ಕುದುರೆಯನ್ನ ನಿಯಂತ್ರಿಸಲು ಹಗ್ಗದಿಂದ ಕಟ್ಟಿ ಈ ರೀತಿ ಹಿಂಸೆ ನೀಡೋ ಬದಲು ಬೇರೆ ಯಾವುದೇ ಮಾರ್ಗ ಇರಲಿಲ್ವಾ ಎಂದು ಕೇಳಿದ್ದಕ್ಕೆ, ನೀವು ಬಂದು ನಿಯಂತ್ರಿಸಬೇಕಿತ್ತು ಎಂದು ದಿನೇಶ್ ಉಡಾಫೆಯ ಉತ್ತರ ನೀಡಿದ್ದಾರೆ.

    ಕುದುರೆಯ ಮೃತದೇಹವನ್ನ ಮರಣೋತ್ತರ ಪರೀಕ್ಷೆ ಹಾಗೂ ವಿಧಿ ವಿಜ್ಞಾನ ಪರೀಕ್ಷೆಗೆ ಕಳಿಸಲಾಗಿದೆ. ವರದಿಯಲ್ಲಿ ಕುದುರೆ ಹಿಂಸೆಯಿಂದ ಸಾವನ್ನಪ್ಪಿದೆ ಎಂಬ ಕಾರಣವಿದ್ದರೆ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.