Tag: viral video

  • ವಿಡಿಯೋ: ಡ್ರಾಪ್ ನೀಡದ್ದಕ್ಕೆ ನಡುರಸ್ತೆಯಲ್ಲಿಯೇ ಚಾಲಕನ ಮೇಲೆ ಪೊರಕೆಯಿಂದ ಹಲ್ಲೆಗೈದ ಮಹಿಳಾ ಪೊಲೀಸ್

    ವಿಡಿಯೋ: ಡ್ರಾಪ್ ನೀಡದ್ದಕ್ಕೆ ನಡುರಸ್ತೆಯಲ್ಲಿಯೇ ಚಾಲಕನ ಮೇಲೆ ಪೊರಕೆಯಿಂದ ಹಲ್ಲೆಗೈದ ಮಹಿಳಾ ಪೊಲೀಸ್

    ಲಕ್ನೋ: ಚಾಲಕನೊಬ್ಬ ತನ್ನ ಆಟೋದಲ್ಲಿ ಡ್ರಾಪ್ ನೀಡದ್ದಕ್ಕೆ ಕೋಪಗೊಂಡ ಮಹಿಳಾ ಸಬ್ ಇನ್ಸ್ ಪೆಕ್ಟರ್ ನಡುರಸ್ತೆಯಲ್ಲಿಯೇ ಪೊರಕೆಯಿಂದ ಹಲ್ಲೆ ನಡೆಸಿರುವ ಘಟನೆ ಉತ್ತರ ಪ್ರದೇಶ ರಾಜ್ಯದ ಅಮೇಥಿ ಜಿಲ್ಲೆಯಲ್ಲಿ ನಡೆದಿದೆ. ಪೊಲೀಸ್ ಅಧಿಕಾರಿ ಚಾಲಕನ ಮೇಲೆ ಹಲ್ಲೆ ಮಾಡಿರುವ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

    ಅನುರಾಧ ಸಾಹು ಚಾಲಕನ ಮೇಲೆ ಹಲ್ಲೆ ನಡೆಸಿದ ಪೊಲೀಸ್ ಅಧಿಕಾರಿ. ಅಮೇಥಿ ಜಿಲ್ಲೆಯ ಮುಸಾಫಿರಖಾನಾ ನಗರದ ಅಡನಪುರ ಮಾರ್ಕೆಟ್ ನಲ್ಲಿ ಈ ಘಟನೆ ನಡೆದಿದೆ. ಚಾಲಕನ ಮೇಲೆ ಹಲ್ಲೆ ನಡೆಸಿದ ಬಳಿಕ ಪೊಲೀಸ್ ವಾಹನ ಸಮೇತ ಆತನನ್ನು ಕೋತವಾಲಿ ನಗರಕ್ಕೆ ಕರೆದುಕೊಂಡು ಹೋಗಲಾಗಿದೆ ಅಂತಾ ಸ್ಥಳೀಯ ಪತ್ರಿಕೆಗಳು ಪ್ರಕಟಿಸಿವೆ.

    ಆ ನಂತರ ಮಹಿಳಾ ಪೊಲೀಸ್ ಮೇಲೆ ಯಾವ ಕ್ರಮ ತೆಗೆದುಕೊಳ್ಳಲಾಗಿದೆ ಎಂಬುದರ ಬಗ್ಗೆ ಮಾಹಿತಿಗಳು ಲಭ್ಯವಾಗಿಲ್ಲ. ಈ ಬಗ್ಗೆ ಅನುರಾಧ ಸಾಹು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ ಎನ್ನಲಾಗಿದೆ. ಮಹಿಳಾ ಪೊಲೀಸ್ ನಿಂದ ಹಲ್ಲೆಗೊಳಾಗದ ಚಾಲಕ ಯಾರು ಎಂಬುದರ ಬಗ್ಗೆಯೂ ಸರಿಯಾದ ಮಾಹಿತಿಗಳು ಲಭ್ಯವಾಗಿಲ್ಲ. ಹಲ್ಲೆಯ ಬಳಿಕ ಚಾಲಕ ಅಧಿಕಾರಿ ವಿರುದ್ಧ ದೂರು ದಾಖಲಿಸಿದ್ದಾನಾ? ಇಲ್ಲವೇ ಎನ್ನುವುದರ ಬಗ್ಗೆ ಮಾಹಿತಿ ಸಿಕ್ಕಿಲ್ಲ.

  • ಫುಟ್‍ಪಾತ್ ಮೇಲೆ ಬೈಕ್ ಓಡಿಸುತ್ತಿದ್ದ ಸವಾರರ ಚಳಿ ಬಿಡಿಸಿದ ಬ್ರೇವ್ ಲೇಡಿ

    ಫುಟ್‍ಪಾತ್ ಮೇಲೆ ಬೈಕ್ ಓಡಿಸುತ್ತಿದ್ದ ಸವಾರರ ಚಳಿ ಬಿಡಿಸಿದ ಬ್ರೇವ್ ಲೇಡಿ

    ಬೆಂಗಳೂರು: ನಗರದಲ್ಲಿ ಫುಟ್‍ಪಾತ್ ಮೇಲೆಯೇ ಬೈಕ್ ಓಡಿಸುತ್ತಿದ್ದ ಸವಾರರಿಬ್ಬರ ಚಳಿ ಬಿಡಿಸಿರುವ ಮಹಿಳೆಯೊಬ್ಬರ ವಿಡಿಯೋವೊಂದು ಸಾಮಾಜಿಕ ಜಾಲತಾಣ ವಾಟ್ಸಪ್, ಫೇಸ್‍ಬುಕ್ ನಲ್ಲಿ ವೈರಲ್ ಆಗಿದೆ.

    ಮಂಜು ಥಾಮಸ್ ಎಂಬವರೇ ಸವಾರರಿಗೆ ಚಳಿ ಬಿಡಿಸಿದ ಮಹಿಳೆ. ಶನಿವಾರ ರಾತ್ರಿ ಬೆಂಗಳೂರಿನ ಕಾರ್ಪೋರೇಷನ್ ಬಳಿ ಈ ಘಟನೆ ನಡೆದಿದೆ. ಕೆಎ 51 ಇಎಫ್ 7695 ನಂಬರಿನ ಹೋಂಡಾ ಆಕ್ಟಿವಾದಲ್ಲಿ ಇಬ್ಬರು ಯುವಕರು ಫುಟ್‍ಪಾತ್ ಮೇಲೆಯೇ ತಮ್ಮ ಬೈಕ್ ಚಲಾಯಿಸುತ್ತಿದ್ದರು. ಈ ವೇಳೆ ಯುವಕರನ್ನು ತಡೆದ ಮಂಜು ನಿಮಗೆ ಫುಟ್‍ಪಾತ್ ಯಾವುದು? ರಸ್ತೆ ಯಾವುದು? ಅಂತ ಗೊತ್ತಿಲ್ವಾ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

    ಈ ವೇಳೆ ಬೈಕ್ ಸವಾರರು ನಾವು ನಿಮ್ಮ ಲೆಕ್ಚರ್ ಕೇಳೋಕೆ ಇಲ್ಲಿ ಬಂದಿಲ್ಲ. ಎಲ್ಲರೂ ಫುಟ್‍ಪಾತ್ ಮೇಲೆಯೇ ಹೋಗ್ತಾ ಇದ್ದಾರೆ ಅಂತಾ ಎದುರುತ್ತರ ನೀಡಿದ್ದಾರೆ. ಒಬ್ಬ ವಿದ್ಯಾವಂತ ನಾಗರಿಕರಾಗಿ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸುವುದು ತಪ್ಪಾಗುತ್ತದೆ ಅಂತಾ ತಿಳಿಸಿದ ಕೂಡಲೇ ಬೈಕ್ ಸವಾರರು ಫುಟ್‍ಪಾತ್ ಬಿಟ್ಟು ರಸ್ತೆ ಮೇಲೆ ಹೋಗಿದ್ದಾರೆ.

    ಬೈಕ್ ಸವಾರರು ಫುಟ್‍ಪಾತ್ ನಿಂದ ತೆರಳುತ್ತಿದ್ದಂತೆ ಮಂಜು ಅವರು, ಕದಡಿದ ಟೈಲ್ಸ್ ಗಳನ್ನು ಸರಿಯಾಗಿ ಜೋಡಣೆ ಮಾಡಿ ತೆರಳಿದ್ದಾರೆ. ಮಂಜು ಅವರು ಸವಾರರನ್ನು ತರಾಟೆಗೆ ತೆಗೆದುಕೊಳ್ಳುವ ವಿಡಿಯೋವನ್ನು ಸಾರ್ವಜನಿಕರು ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಿಸಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ. ಹೀಗಾಗಿ ಇದೀಗ ಆ ವಿಡಿಯೋ ವೈರಲ್ ಆಗಿದೆ.

    https://youtu.be/X8xPVw2A5wc

  • ಲೆಹೆಂಗಾ ಬದಲು ಜೀನ್ಸ್ ಧರಿಸಿ ಡ್ಯಾನ್ಸ್ ಮಾಡಿದ ವಧು- ವಿಡಿಯೋ ವೈರಲ್

    ಲೆಹೆಂಗಾ ಬದಲು ಜೀನ್ಸ್ ಧರಿಸಿ ಡ್ಯಾನ್ಸ್ ಮಾಡಿದ ವಧು- ವಿಡಿಯೋ ವೈರಲ್

    ನವದೆಹಲಿ: ಯುವತಿಯೊಬ್ಬಳು ತನ್ನ ಮದುವೆಯಲ್ಲಿ ಲೆಹೆಂಗಾ ಬದಲು ಜೀನ್ಸ್ ಧರಿಸಿ ಡ್ಯಾನ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯುವತಿ ವಧುವಿನಂತೆ ತಯಾರಾಗಿದ್ದು, ಆಭರಣಗಳನ್ನು ಸಹ ಧರಿಸಿ, ಲೆಹಂಗಾ ಬದಲು ಜೀನ್ಸ್ ಪ್ಯಾಂಟ್ ಹಾಕಿಕೊಂಡಿದ್ದಾರೆ.

    ರಶಿಕಾ ನೃತ್ಯ ಮಾಡಿದ ವಧು. ಗಾಯಕ ಮಂಕ್ರಿತ್ ಔಲಾಖ್ ಹಾಡಿರುವ ‘ಕಾದರ್’ ಪಂಜಾಬಿ ಹಾಡಿಗೆ ರಶಿಕಾ ಹೆಜ್ಜೆ ಹಾಕಿದ್ದಾರೆ. ರಶಿಕಾ ಕೇವಲ ಪಂಜಾಬಿ ಶೈಲಿಯ ಡ್ಯಾನ್ಸ್ ಮಾಡದೇ ಬೆಲ್ಲಿ ಮತ್ತು ಬಾಲಿವುಡ್ ಸ್ಟೆಪ್ ಗಳನ್ನು ಹಾಕಿದ್ದಾರೆ. ಇದನ್ನೂ ಓದಿ: ಮದುವೆ ದಿನ ಲೆಹೆಂಗಾ ಬದಲು ಶಾರ್ಟ್ಸ್ ತೊಟ್ಟ ವಧು- ಫೋಟೋ ವೈರಲ್

    ರಶಿಕಾ ಅವರು ಕಥಕ್ ನಲ್ಲಿ ತರಬೇತಿ ಪಡೆದಿದ್ದು, ಕಳೆದ 16 ವರ್ಷಗಳಿಂದ ನೃತ್ಯ ಕಲಿಯುತ್ತಿದ್ದಾರೆ. ಮದುವೆಯ ದಿನವು ನೃತ್ಯವನ್ನು ಮಾಡದೆ ಇರಲು ರಶಿಕಾಗೆ ಸಾಧ್ಯವಾಗಲಿಲ್ಲ. ನಾನು ಅವರ ನೃತ್ಯವನ್ನು ಶೂಟ್ ಮಾಡಲು ನಿರ್ಧರಿಸಿದೆ” ಎಂದು ಡಿಸೈನ್ ಆಕ್ವಾ ಸ್ಟುಡಿಯೋವನ್ನು ನಡೆಸುತ್ತಿರುವ ಛಾಯಾಗ್ರಾಹಕ ಪ್ರಿಯಾಂಕಾ ಕಾಂಬೋಜ್ ಚೋಪ್ರಾ ಅವರು ಖಾಸಗಿ ಮಾಧ್ಯಮವೊಂದಕ್ಕೆ ಹೇಳಿದ್ದಾರೆ. ಇದನ್ನೂ ಓದಿ: ಬರೋಬ್ಬರಿ 60 ಲಕ್ಷ ವ್ಯೂ ಕಂಡಿರೋ ವಧುವಿನ ವೈರಲ್ ಡ್ಯಾನ್ಸ್ ವೀಡಿಯೋ ನೋಡಿ

    ಕೇವಲ 20 ಗಂಟೆಗಳಲ್ಲಿಯೇ ಈ ವಿಡಿಯೋ 4.3 ಲಕ್ಷ ವ್ಯೂವ್ ಮತ್ತು ಸುಮಾರು 7,000 ಲೈಕ್ಸ್ ಗಳಿಸಿದೆ. ವಧುವಿನ ವಿಭಿನ್ನ ನೃತ್ಯ ನೋಡಿದವರು ಫನ್ನಿಯಾಗಿ ಕಮೆಂಟ್ ಮಾಡಿದ್ದಾರೆ.

    ರಶಿಕಾ ಡ್ಯಾನ್ಸ್ ನೋಡಿದ ಗಾಯಕ ಮಂಕ್ರಿತ್ ವಿಡಿಯೋವನ್ನು ತಮ್ಮ ಇನ್ ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಮಂಕ್ರಿತ್ ವಿಡಿಯೋ ಶೇರ್ ಮಾಡಿಕೊಂಡ ಕೇವಲ ಮೂರು ಗಂಟೆಯಲ್ಲಿ 2.1 ಲಕ್ಷ ವ್ಯೂವ್ ಮತ್ತು 34 ಸಾವಿರಕ್ಕೂ ಅಧಿಕ ಲೈಕ್ಸ್ ಪಡೆದುಕೊಂಡಿದೆ.

    ಸೋಮವಾರ ಸಂಜೆ ದೆಹಲಿಯಲ್ಲಿ ರಶಿಕಾ ಮತ್ತು ಮಾಯಾಂಕ್ ಮದುವೆ ಆಗಿದ್ದಾರೆ.

    https://www.instagram.com/p/BgQtCPvHhRe/?taken-by=mankirtaulakh

  • ಗ್ಲಾಸ್ ಬ್ರಿಡ್ಜ್ ಮೇಲೆ ನಡೆಯಲು ಹೆದರಿದ ಪ್ರವಾಸಿಯನ್ನ 500 ಮೀ. ಎಳೆದುಕೊಂಡೇ ಹೋದ್ರು

    ಗ್ಲಾಸ್ ಬ್ರಿಡ್ಜ್ ಮೇಲೆ ನಡೆಯಲು ಹೆದರಿದ ಪ್ರವಾಸಿಯನ್ನ 500 ಮೀ. ಎಳೆದುಕೊಂಡೇ ಹೋದ್ರು

    ಬೀಜಿಂಗ್: ಚೀನಾ ಗ್ಲಾಸ್ ಸೇತುವೆಯ ಮೇಲೆ ಪ್ರವಾಸಿ ಯುವತಿ ನಡೆಯಲು ಹೆದರಿದ್ದರಿಂದ ಆಕೆಯನ್ನು ಸುಮಾರು 500 ಮೀಟರ್ ವರಗೆ ಎಳೆದುಕೊಂಡು ಹೋಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    500 ಮೀಟರ್ ಎತ್ತರ ಬೆಟ್ಟದ ಡೆಹಾಂಗ್ ಕ್ಯಾನನ್ ಬೆಟ್ಟದ ಮೇಲೆ ಐಜಾಯಿ ಎಂಬ ಗ್ಲಾಸ್ ಬ್ರಿಡ್ಜ್ ನಿರ್ಮಾಣ ಮಾಡಲಾಗಿದೆ. ಚೀನಾ ಎತ್ತರದ ಪ್ರದೇಶಗಳಲ್ಲಿ ಗ್ಲಾಸ್ ನಿಂದ ಬ್ರಿಡ್ಜ್ ಗಳನ್ನು ನಿರ್ಮಿಸಿದೆ. ಇದನ್ನೂ ಓದಿ: ಕಾಶ್ಮೀರದಲ್ಲಿ ನಿರ್ಮಾಣವಾಗ್ತಿದೆ ಐಫೆಲ್ ಟವರ್‍ಗಿಂತ ಎತ್ತರದ ಬ್ರಿಡ್ಜ್? ಏನಿದರ ವಿಶೇಷತೆ? ಇಲ್ಲಿದೆ ಮಾಹಿತಿ

    ಐಜಾಯಿ ಗ್ಲಾಸ್ ಬ್ರಿಡ್ಜ್ ಉತ್ತರ ಚೀನಾದ ಪೂರ್ವ ತೈಹೆಂಗಾ ಎಂಬಲ್ಲಿ ಎರಡು ಬೆಟ್ಟಗಳ ನಡುವೆ ಈ ಗ್ಲಾಸ್ ವಾಕ್ ಕಟ್ಟಲಾಗಿದೆ. 500 ಮೀಟರ್ ಎತ್ತರದಲ್ಲಿ ಬ್ರಿಡ್ಜ್ ನಿರ್ಮಾಣವಾಗಿದ್ದು, ಒಂದು ಕಡೆಯಿಂದ ಮತ್ತೊಂದು ಕಡೆ ಚಲಿಸುವಾಗ ಕೆಳಗಡೆ ಆಳದ ಕಣಿವೆ ಕಾಣುತ್ತದೆ. ಇದು ಪ್ರವಾಸಿಗರಿಗೆ ಥ್ರಿಲ್ಲಿಂಗ್ ಅನುಭವವನ್ನು ನೀಡುತ್ತದೆ. 500 ಮೀಟರ್ ಎತ್ತರದಲ್ಲಿ ಗ್ಲಾಸ್ ಮೇಲೆ ನಡೆಯಲು ಕೆಲವರು ಹೆದರುವುದು ಸಹಜ.

  • ಉದ್ರಿ ಭಾಷಣ ಮಾಡ್ಬೇಡಿ, ಮೊದಲು ಕೆಲ್ಸಾ ಮಾಡ್ರಿ: ಮಾಜಿ ಸಚಿವರಿಗೆ ಜನರಿಂದ ತರಾಟೆ

    ಉದ್ರಿ ಭಾಷಣ ಮಾಡ್ಬೇಡಿ, ಮೊದಲು ಕೆಲ್ಸಾ ಮಾಡ್ರಿ: ಮಾಜಿ ಸಚಿವರಿಗೆ ಜನರಿಂದ ತರಾಟೆ

    ಯಾದಗಿರಿ: ಉದ್ರಿ ಭಾಷಣ ಮಾಡಬೇಡಿ, ಮೊದಲು ಕೆಲಸ ಮಾಡಿ ಅಂತಾ ಮಾಜಿ ಸಚಿವ ಬಾಬು ರಾವ್ ಚಿಂಚನಸೂರ್ ಅವರಿಗೆ ಕ್ಷೇತ್ರದ ಜನರು ವೇದಿಕೆಯ ಮೇಲೆಯೇ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಎರಡು ದಿನಗಳ ಹಿಂದೆ ಯಾದಗಿರಿ ಜಿಲ್ಲೆಯ ಗುರುಮಿಠಕಲ್ ಬಳಿಯ ನಸಲವಾಯಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕು ಸ್ಥಾಪನೆಗಾಗಿ ಸಚಿವರು ತೆರಳಿದ್ದರು. ಕಾರ್ಯಕ್ರಮದಲ್ಲಿ ಸಚಿವರು ಭಾಷಣ ಮಾಡಲು ಮುಂದಾಗುತ್ತಿದ್ದಂತೆ ಸ್ಥಳೀಯರು ಆಕ್ರೋಶಗೊಂಡು ಸಚಿವರ ವಿರುದ್ಧ ಹರಿಹಾಯ್ದರು.

    ಈ ಹಿಂದೆ ವಿವಿಧ ಕಾಮಗಾರಿಗಳ ಹೆಸರಿನಲ್ಲಿ ಎಚ್‍ಕೆಆರ್‍ಡಿಬಿಯಿಂದ ಬಂದ 15 ಕೋಟಿ ರೂಪಾಯಿ ಹಣವನ್ನು ನುಂಗಿದ್ದೀರಿ ಎಂದು ಜನರು ಆರೋಪಿಸಿದರು. ಅಪರೂಪಕ್ಕೆ ಎಂಬಂತೆ ಕ್ಷೇತ್ರಕ್ಕೆ ಬರುವ ನೀವು ಉದ್ರಿ ಭಾಷಣ ಮಾಡಿ ಹೋಗಬೇಡಿ, ಕೆಲಸ ಮಾಡಿ ಅಂತಾ ಜನರು ಆಕ್ರೋಶಗೊಂಡರು. ಮಾಜಿ ಸಚಿವರಿಗೆ ಜನ ತರಾಟೆ ತೆಗೆದುಕೊಂಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಗುರುಮಿಠಕಲ್ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಬಾಬುರಾವ್ ಚಿಂಚನಸೂರ್ ಎರಡು ಬಾರಿ ಕಾಂಗ್ರೆಸ್ ನಿಂದ ಗೆದ್ದು ಬಂದಿದ್ದಾರೆ. ಈ ಬಾರಿಯ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ಚಿಂಚನಸೂರ್ ಅವರಿಗೆ ತಮ್ಮ ಕ್ಷೇತ್ರದಲ್ಲಾದ ಘಟಯಿಂದಾಗಿ ತೀವ್ರ ಮುಜುಗರಕ್ಕೊಳಗಾಗಿದ್ದಾರೆ. ಗುರುಮಿಠಕಲ್ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆಯಾಗಿದೆ.

  • ಬೇಟೆಗಾರರಿಂದ ರಕ್ಷಿಸಿದ ನಂತರ ಪೈಲಟ್‍ನೊಂದಿಗೆ ಸ್ನೇಹ ಬೆಳೆಸಿಕೊಂಡ ಚಿಂಪಾಂಜಿ ಮರಿ- ಕ್ಯೂಟ್ ವಿಡಿಯೋ ವೈರಲ್!

    ಬೇಟೆಗಾರರಿಂದ ರಕ್ಷಿಸಿದ ನಂತರ ಪೈಲಟ್‍ನೊಂದಿಗೆ ಸ್ನೇಹ ಬೆಳೆಸಿಕೊಂಡ ಚಿಂಪಾಂಜಿ ಮರಿ- ಕ್ಯೂಟ್ ವಿಡಿಯೋ ವೈರಲ್!

    ಕಿನ್ಶಾಸಾ: ಮುದ್ದಾದ ಚಿಂಪಾಂಜಿ ಮರಿಯನ್ನು ಬೇಟೆಗಾರರಿಂದ ರಕ್ಷಿಸಿದ ಬಳಿಕ ಪೈಲಟ್ ಹೆಲಿಕಾಪ್ಟರ್ ನಲ್ಲಿ ಚಿಂಪಾಂಜಿಯ ಜೊತೆ ಹಾರಾಡಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಡೆಮಾಕ್ರೆಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ಈ ವಿಡಿಯೋವನ್ನ ಸೆರೆಹಿಡಿಯಲಾಗಿದೆ. ಮುಸ್ಸಾ ಎಂಬ ಮುದ್ದಾದ ಚಿಂಪಾಜಿ ಮರಿಯ ಕುಟುಂಬದವರನ್ನ ಬೇಟೆಗಾರರು ಮಾಂಸಕ್ಕಾಗಿ ಕೊಂದಿದ್ದರು. ಚಿಂಪಾಂಜಿ ಮರಿ ಪತ್ತೆಯಾದ ವ್ಯಕ್ತಿಯ ಮನೆಯಲ್ಲಿ ಎರಡು ಮೊಸಳೆಗಳು ಕೂಡ ಸಿಕ್ಕಿದ್ದು, ಬೇಟೆಗಾರರು ಮರಿಯನ್ನು 20 ಡಾಲರ್ ನಿಂದ- 50 ಡಾಲರ್ ಬೆಲೆ(ಅಂದಾಜು 1 ಸಾವಿರ ದಿಂದ 3 ಸಾವಿರ ರೂ. ಗೆ) ಆ ವ್ಯಕ್ತಿಗೆ ಮಾರಾಟ ಮಾಡಿರಬಹುದೆಂದು ಊಹಿಸಲಾಗಿದೆ.

    ಆ ವ್ಯಕ್ತಿ ಚಿಂಪಾಂಜಿಯನ್ನು ಸಾಕಲು ಇಟ್ಟುಕೊಂಡಿದ್ದರಾ ಅಥವಾ ಮಾರಾಟ ಮಾಡಲು ಬಯಸ್ಸಿದ್ದರಾ ಎಂಬುದು ಗೊತ್ತಾಗಿಲ್ಲ. ಈಗ ಪೈಲಟ್ ಆಂಥೋನಿ ಕೆರೀ ಚಿಂಪಾಂಜಿ ಮರಿಯನ್ನ ರಕ್ಷಿಸಿ, ತನ್ನ ಜೊತೆಯಲ್ಲಿ ವಿರುಂಗ ನ್ಯಾಷನಲ್ ಪಾರ್ಕ್ ಗೆ ಕರೆತಂದಿದ್ದಾರೆ.

    ವಿಡಿಯೋದಲ್ಲಿ ಮುಸ್ಸಾ, ಪೈಲೆಟ್ ಆಂಥೋನಿಯ ಹಿಂದಿನ ಸೀಟಿನಿಂದ ಮುಂದಿನ ಸೀಟಿಗೆ ಎಗರಿ ಬಂದು ಅವರ ತೊಡೆಯ ಮೇಲೆ ಕುಳಿತುಕೊಳ್ಳುವುದನ್ನ ಕಾಣಬಹುದು. ಇದಾದ ಬಳಿಕ ಹೆಲಿಕಾಪ್ಟರ್‍ನ ನಿಯಂತ್ರಕ ಗುಂಡಿಗಳನ್ನ ಒತ್ತಲು ಪ್ರಯತ್ನಿಸಿದೆ. ನಂತರ ನಿಧಾನವಾಗಿ ಪೈಲಟ್‍ ನ ತೊಡೆ ಮೇಲೆ ನಿದ್ರೆಗೆ ಜಾರಿದೆ. ಈ ಕ್ಯೂಟ್ ದೃಶ್ಯ ಎಲ್ಲರನ್ನ ಮನಸೂರೆ ಮಾಡಿದೆ.

    ವಿಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಆಂಥೋಣಿ, “ಇದು ಎಷ್ಟು ಮುದ್ದಾಗಿದೆಯೋ ಅಷ್ಟೇ ದುರದೃಷ್ಟಕರದ ಕಥೆಯಾಗಿದೆ. ಮುಸ್ಸಾ ಈಗ ತನ್ನ ಅಮ್ಮನೊಂದಿಗೆ ಇರಬೇಕಿತ್ತು. ತಾಯಿಯನ್ನ ಕಳೆದುಕೊಂಡ ಇವನಿಗೆ ಈಗ ನಾವೇ ಆಶ್ರಯ ಕೊಟ್ಟು ಸುಖವಾಗಿರಲು ಸಹಾಯ ಮಾಡಲಾಗಿದೆ” ಎಂದು ಬರೆದುಕೊಂಡಿದ್ದಾರೆ. ಮುಸ್ಸಾ ಈಗ ಬೇರೆ ಚಿಂಪಾಂಜಿಗಳ ಜೊತೆಯಲ್ಲಿ ಸಂತೋಷದಿಂದ ಇದೆ.

    https://www.youtube.com/watch?v=XA9Va14OwUk

  • ಲಿಫ್ಟ್ ನಲ್ಲಿಯೇ ಸೂಸು ಮಾಡಿದ ಬಾಲಕ-ಕೊನೆಗೆ ಹೊರಬರಲಾರದೇ ಅಲ್ಲಿಯೇ ಸಿಲುಕಿದ

    ಲಿಫ್ಟ್ ನಲ್ಲಿಯೇ ಸೂಸು ಮಾಡಿದ ಬಾಲಕ-ಕೊನೆಗೆ ಹೊರಬರಲಾರದೇ ಅಲ್ಲಿಯೇ ಸಿಲುಕಿದ

    ಬೀಜಿಂಗ್: ಚೀನಾದ ಚಾಂಗ್‍ಕಿಂಗ್ ನಗರದಲ್ಲಿ ಶುಕ್ರವಾರ ಬಾಲಕನೊಬ್ಬ ಲಿಫ್ಟ್ ನಲ್ಲಿಯೇ ಮೂತ್ರ ವಿಸರ್ಜನೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಲಿಫ್ಟ್ ಒಳಗಡೆ ಬರುವ ಬಾಲಕ ಮಶೀನ್ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾನೆ. ಇನ್ನೇನು ಹೊರ ಬರಬೇಕೆಂದು ಅನ್ನುವಷ್ಟರಲ್ಲಿ ಲಿಫ್ಟ್ ಬಾಗಿಲು ತೆರೆಯದೇ ಅಲ್ಲಿಯೇ ಸಿಲುಕಿಕೊಂಡಿದ್ದಾನೆ. ಈ ವಿಡಿಯೋವನ್ನು ಸಿಜಿಟಿಎನ್ ತನ್ನ ಯುಟ್ಯೂಬ್ ಖಾತೆಯಲ್ಲಿ ಅಪ್ಲೋಡ್ ಮಾಡಿಕೊಂಡಿದ್ದು, ಬಾಲಕನ ನಡುವಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಬಾಲಕ ಲಿಫ್ಟ್ ನಲ್ಲಿ ಮೂತ್ರ ವಿಸರ್ಜಿಸುವ ಎಲ್ಲ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಮಶೀನ್ ನಲ್ಲಿ ಮೂತ್ರ ಹೋಗಿದ್ದರಿಂದ ಲಿಫ್ಟ್ ಬಾಗಿಲು ತೆರೆಯಲಿಲ್ಲ. ಕೊನೆಗೆ ಬಾಲಕನನ್ನು ಸುರಕ್ಷಿತವಾಗಿ ರಕ್ಷಣೆ ಮಾಡಲಾಗಿದೆ ಎಂದು ವರದಿ ಆಗಿದೆ.

  • ವಿಮಾನದಲ್ಲಿದ್ದ ಲಗೇಜ್ ನಲ್ಲಿ ಕಾಣಿಸಿಕೊಂಡ ಬೆಂಕಿ ಆರಿಸಲು ನೀರು, ಜ್ಯೂಸ್ ಎರಚಿದ್ರು- ವಿಡಿಯೋ ವೈರಲ್

    ವಿಮಾನದಲ್ಲಿದ್ದ ಲಗೇಜ್ ನಲ್ಲಿ ಕಾಣಿಸಿಕೊಂಡ ಬೆಂಕಿ ಆರಿಸಲು ನೀರು, ಜ್ಯೂಸ್ ಎರಚಿದ್ರು- ವಿಡಿಯೋ ವೈರಲ್

    ಬೀಜಿಂಗ್: ವಿಮಾನದ ಮೇಲಿನ ಕಂಪಾರ್ಟ್‍ಮೆಂಟ್‍ನಲ್ಲಿ ಇಡಲಾಗಿದ್ದ ಲಗೇಜ್‍ನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ವಿಮಾನ ಮೂರು ಗಂಟೆ ತಡವಾಗಿ ಹೊರಟ ಘಟನೆ ಚೀನಾದಲ್ಲಿ ನಡೆದಿದೆ.

    ಭಾನುವಾರದಂದು ಚೀನಾದ ಗುವಾಂಗ್‍ಝೌ ನಿಂದ ಶಾಂಘೈ ಗೆ ಹೊರಟಿದ್ದ ವಿಮಾನದಲ್ಲಿ ಈ ಘಟನೆ ನಡೆದಿದೆ. ಟೇಕ್ ಆಫ್ ಆಗುವುದಕ್ಕೆ ಸ್ವಲ್ಪ ಸಮಯ ಮುಂಚೆ ಪ್ರಯಾಣಿಕರು ವಿಮಾನವೇರುತ್ತಿದ್ದಾಗ ಲಗೇಜ್‍ವೊಂದರಲ್ಲಿದ್ದ ಪವರ್ ಬ್ಯಾಂಕಿನಲ್ಲಿ ಬೆಂಕಿ ಹೊತ್ತಿಕೊಂಡು ಬ್ಯಾಗ್‍ಗೆ ಆವರಿಸಿದೆ. ಇದನ್ನ ಕಂಡ ಜನ ಕ್ಷಣಕಾಲ ಆತಂಕಕ್ಕೆ ಒಳಗಾಗಿದ್ದರು. ಆದ್ರೆ ವಿಮಾನದ ಸಿಬ್ಬಂದಿ ಬಂದು ಬೆಂಕಿ ಆರಿಸಿದ್ದು, ಹೆಚ್ಚಿನ ಅನಾಹುತವೇನೂ ಆಗಿಲ್ಲ.

    ಪ್ರಯಾಣಿಕರೊಬ್ಬರು ಘಟನೆಯ ದೃಶ್ಯವನ್ನ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಫ್ಲೈಟ್ ಅಟೆಂಡೆಂಟ್‍ವೊಬ್ಬರು ಮೊದಲು ನೀರಿನ ಬಾಟಲಿಯನ್ನ ಬ್ಯಾಗ್ ಮೇಲೆ ಎಸೆದಿದ್ದಾರೆ. ಆಗ ಪ್ರಯಾಣಿಕರೊಬ್ಬರು ಜೊತೆಗೂಡಿ ಬೆಂಕಿ ಆರಿಸಲು ಜ್ಯೂಸ್ ಎರಚಿದ್ದಾರೆ. ಕೆಲವೇ ಸೆಕೆಂಡ್‍ಗಳಲ್ಲಿ ಬೆಂಕಿ ನಂದಿಸಿದ್ದಾರೆ. ಈ ವಿಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದ್ದು, ವೈರಲ್ ಆಗಿದೆ.

    ವಿಮಾನಯಾನ ಸಂಸ್ಥೆ ಘಟನೆ ಬಗ್ಗೆ ಹೇಳಿಕೆ ನೀಡಿದ್ದು, ಅಗ್ನಿಶಾಮಕ ಹಾಗೂ ಭದ್ರತಾ ಇಲಾಖೆಯ ನೆರವಿನಿಂದ ಬೆಂಕಿ ನಂದಿಸಲಾಯಿತು. ಯಾವುದೇ ಹೆಚ್ಚಿನ ಅಪಾಯ ಅಥವಾ ಯಾರಿಗೂ ಗಾಯಗಳಾಗಿಲ್ಲ. ತನಿಖೆಯ ಉದ್ದೇಶದಿಂದ ಬ್ಯಾಗ್ ಮಾಲೀಕರನ್ನ ಕರೆಸಲಾಗಿತ್ತು. ಪ್ರಾಥಮಿಕ ತನಿಖೆಯ ಪ್ರಕಾರ ಪವರ್ ಬ್ಯಾಂಕಿಗೆ ಬೆಂಕಿ ಹೊತ್ತಿಕೊಂಡಾಗ ಅದು ಬಳಕೆಯಲ್ಲಿರಲಿಲ್ಲ ಎಂದು ತಿಳಿದುಬಂದಿರುವುದಾಗಿ ಹೇಳಿದೆ. ಘಟನೆಯ ನಂತರ ಪ್ರಯಾಣಿಕರನ್ನ ಕೆಳಗಿಳಿಸಿ ಮತ್ತೊಂದು ವಿಮಾನದಲ್ಲಿ ಕಳಿಸಿಕೊಡಲಾಗಿದ್ದು, ವಿಮಾನ ಮೂರು ಗಂಟೆ ತಡವಾಗಿ ಹೊರಟಿದೆ.

    ಆದ್ರೆ ಅಟೆಂಡೆಂಟ್‍ಗಳು ನೀರು ಹಾಗೂ ಜ್ಯೂಸ್ ಬಳಸಿ ಬೆಂಕಿ ಆರಿಸಿದ ರೀತಿ ನೋಡಿ ಸಾಮಾಜಿಕ ಜಾಲತಾಣಗಳಲ್ಲಿ ಜನ ಪ್ರಶ್ನೆ ಮಾಡಿದ್ದಾರೆ. ವಿಮಾನದಲ್ಲಿ ಫೈರ್ ಎಕ್ಸ್‍ಟಿಂಗ್ವಿಷರ್ ಇರಬೇಕಿತ್ತಲ್ಲವಾ, ಅದನ್ನ ಬಳಸಬಹುದಿತ್ತು ಎಂದು ಕೇಳಿದ್ದಾರೆ.

    ಆದ್ರೆ ಸಿಬ್ಬಂದಿಯ ಕ್ರಮವನ್ನ ಸಮರ್ಥಿಸಿಕೊಂಡಿರೋ ವಿಮಾನಯಾನ ಸಂಸ್ಥೆ, ಲಿಥಿಯಂ ಬ್ಯಾಟರಿಗಳಿಂದ ಕಾಣಿಸಿಕೊಳ್ಳುವ ಬೆಂಕಿ ಆರಿಸಲು ನೀರು ಬಹಳ ಸೂಕ್ತವಾದುದು ಎಂದು ಹೇಳಿದ್ದಾರೆ.

  • ಶಾಲೆಯ ಶೌಚಾಲಯ ಕ್ಲೀನ್ ಮಾಡಿದ ಬಿಜೆಪಿ ಸಂಸದ – ವಿಡಿಯೋ ವೈರಲ್

    ಶಾಲೆಯ ಶೌಚಾಲಯ ಕ್ಲೀನ್ ಮಾಡಿದ ಬಿಜೆಪಿ ಸಂಸದ – ವಿಡಿಯೋ ವೈರಲ್

    ಭೋಪಾಲ್: ಮಧ್ಯಪ್ರದೇಶದ ಬಿಜೆಪಿ ಸಂಸದರೊಬ್ಬರು ಶಾಲೆಯ ಶೌಚಾಲಯವನ್ನ ಸ್ವಚ್ಛಗೊಳಿಸಿದ್ದು, ಭಾರೀ ಸುದ್ದಿಯಾಗಿದೆ. ಇದರ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

    ಸಂಸದರದ ಜನಾರ್ದನ ಮಿಶ್ರಾ ಕೈಯಲ್ಲೇ ಟಾಯ್ಲೆಟ್ ಸ್ವಚ್ಛಗೊಳಿಸಿದ್ದು, ಕಮೋಡ್‍ನಲ್ಲಿ ಕಟ್ಟಿದ್ದ ಮಣ್ಣು ಹಾಗೂ ಕಸವನ್ನ ತೆಗೆದಿದ್ದಾರೆ. ಮಿಶ್ರಾ ಅವರ ಕಾರ್ಯಕ್ಕೆ ಜನರಿಂದ ಶ್ಲಾಘನೆ ವ್ಯಕ್ತವಾಗಿದೆ. ರಾಜಸ್ಥಾನ ಸಚಿವ ಕಾಳಿಚರಣ್ ಶರಾಫ್ ಸಾರ್ವಜನಿಕ ಸ್ಥಳದಲ್ಲಿ ಮೂತ್ರವಿಸರ್ಜನೆ ಮಾಡಿದ್ದ ಘಟನೆಯನ್ನ ಇದರ ಜೊತೆ ಜನ ಹೋಲಿಕೆ ಮಾಡ್ತಿದ್ದಾರೆ.

    ಕಳೆದ ವಾರ ಮಿಶ್ರಾ ಅವರು ತನ್ನ ಕ್ಷೇತ್ರದ ಶಾಲೆಯೊಂದಕ್ಕೆ ಭೇಟಿ ನೀಡಿದ್ದರು. ಶಾಲೆಯಲ್ಲಿ ವಿದ್ಯಾರ್ಥಿಗಳು ಶೌಚಾಲಯವನ್ನ ಬಳಸದೇ ಹೊರಗಡೆ ಹೋಗ್ತಿದ್ದಿದ್ದು ಕಂಡುಬಂದಿತ್ತು. ಇದರಿಂದ ಕೋಪಗೊಂಡ ಮಿಶ್ರಾ ಶಾಲೆಯ ಶೌಚಾಲಯಗಳಿಗೆ ಹೋಗಿ ಪರಿಶೀಲಿಸಿದ್ರು. ತುಂಬಾ ಸಮಯದಿಂದ ಶೌಚಾಲಯವನ್ನ ಸ್ವಚ್ಛ ಮಾಡದೇ ಇದ್ದಿದ್ದು ಕಾಣಿಸಿತ್ತು.

    ಶಾಲೆಯವರು ಟಾಯ್ಲೆಟ್‍ಗಳನ್ನ ಸರಿಯಾಗಿ ನಿರ್ವಹಣೆ ಮಾಡದಿರೋದನ್ನ ಕಂಡು ಅಸಮಾಧಾನಗೊಂಡ ಮಿಶ್ರಾ, ಸ್ವತಃ ತಾವೇ ಕ್ಲೀನ್ ಮಾಡಿದ್ರು. ಸಂಸದರು ಎಡಗೈ ಮೂಲಕ ಟಾಯ್ಲೆಟ್‍ನಲ್ಲಿ ಸಿಲುಕಿಕೊಂಡಿದ್ದ ಕಸವನ್ನು ತೆಗೆಯೋದನ್ನ ವಿಡಿಯೋದಲ್ಲಿ ಕಾಣಬಹುದು.

    ಸ್ವತಃ ಸಂಸದರೇ ವಿಡಿಯೋವನ್ನ ಟ್ವೀಟ್ ಮಾಡಿದ್ದು, ಇದೀಗ ವೈರಲ್ ಆಗಿದೆ. ಇದನ್ನೂ ಓದಿ: ಬಿಜೆಪಿ ಮಂತ್ರಿಯಿಂದಲೇ ರಸ್ತೆ ಬದಿ ಮೂತ್ರ ವಿಸರ್ಜನೆ – ಫೋಟೋ ವೈರಲ್