Tag: viral video

  • ಓಣಂ ರಂಗೋಲಿ ಹಾಕಿದ್ದಕ್ಕೆ ಕಾಲಿನಿಂದ ಅಳಿಸಿ ನೃತ್ಯ ಮಾಡಿ ಕಿರಿಕ್‌

    ಓಣಂ ರಂಗೋಲಿ ಹಾಕಿದ್ದಕ್ಕೆ ಕಾಲಿನಿಂದ ಅಳಿಸಿ ನೃತ್ಯ ಮಾಡಿ ಕಿರಿಕ್‌

    ಬೆಂಗಳೂರು: ತನ್ನ ಅನುಮತಿ ಇಲ್ಲದೇ ಓಣಂ (Onam) ಹೂವಿನ ರಂಗೋಲಿ (Pookalam) ಹಾಕಿದ್ದಕ್ಕೆ ಮಹಿಳೆಯೊಬ್ಬಳು ಕಾಲಿನಿಂದ ಒದ್ದು ವಿಕೃತಿ ಮೆರೆದ ಘಟನೆ ಬೆಂಗಳೂರಿನ ಥಣಿಸಂದ್ರದಲ್ಲಿ ನಡೆದಿದೆ.

    ಬೆಂಗಳೂರು (Bengaluru) ಸಂಪಿಗೆಹಳ್ಳಿ ಠಾಣಾ ವ್ಯಾಪ್ತಿಯ ಥಣಿಸಂದ್ರದ ಮೊನಾರ್ಕ್ ಸೆರೆನಿಟಿ ಅಪಾರ್ಟ್‌ಮೆಂಟ್‌ನಲ್ಲಿ ಈ ಘಟನೆ ನಡೆದಿದೆ.

     

    ನನ್ನ ಅಪ್ಪಣೆ ಇಲ್ಲದೆ ಅಪಾರ್ಟ್‌ಮೆಂಟ್‌ನಲ್ಲಿ ಏನು ಮಾಡುವಂತಿಲ್ಲ ಎಂದು ಕಿರಿಕ್‌ ಮಾಡಿದ ಮಹಿಳೆ ಕಾಲಿನಿಂದ ಅಳಿಸಿ, ಅದರ ಮೇಲೆ ನೃತ್ಯ ಮಾಡಿದ್ದಾಳೆ. ಇದನ್ನೂ ಓದಿ: ತಿರುಪತಿ ಲಡ್ಡುವಿನಲ್ಲಿ ಹಂದಿ, ದನದ ಕೊಬ್ಬು ಹಾಕುವ ಕುಕೃತ್ಯವನ್ನ ಒಬ್ಬ ಕ್ರೈಸ್ತ ಮಾಡಿದ್ದಾನೆ: ಪ್ರತಾಪ್‌ ಸಿಂಹ

    ಈ ಸಂದರ್ಭದಲ್ಲಿ ನಿವಾಸಿಗಳು ಆಕೆಯ ಜೊತೆ ಮಕ್ಕಳು ರಚಿಸಿರುವ ರಂಗೋಲಿಯನ್ನು ದಯವಿಟ್ಟು ಹಾಳುಮಾಡಬೇಡಿ ಎಂದು ಪರಿ ಪರಿಯಾಗಿ ಮನವಿ ಮಾಡಿದರೂ ಆಕೆ ತಲೆ ಕೆಡಿಸಿಕೊಳ್ಳದೇ ಸಂವಿಧಾನ ಹಾಗೇ ಹೀಗೆ ಎಂದು ಹೇಳಿ ಕಾಲಿನಿಂದ ರಂಗೋಲಿಯನ್ನು ಹಾಳು ಮಾಡಿದ್ದಾಳೆ.

    ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್‌ ಆಗಿದೆ. ಕಿರಿಕ್‌ ಮಾಡಿದ ಮಹಿಳೆಯೂ ಮಲೆಯಾಳಿ ಅಗಿದ್ದರೂ ಆಕೆಗೆ ಕೇರಳ ಸಂಸ್ಕೃತಿ ಬಗ್ಗೆ ಅವಮಾನ ಮಾಡುವುದು ಎಷ್ಟು ಸರಿ ಎಂದು ನೆಟ್ಟಿಗರು ಪ್ರಶ್ನಿಸಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

     

  • ಸಮುದ್ರದ ಅಲೆಗಳ ನಡುವೆ ಸ್ಕೂಟರ್ ಸಮೇತ ನೀರಿಗೆ ಇಳಿದ ಯುವಕ- ವೀಡಿಯೋ ವೈರಲ್‌

    ಸಮುದ್ರದ ಅಲೆಗಳ ನಡುವೆ ಸ್ಕೂಟರ್ ಸಮೇತ ನೀರಿಗೆ ಇಳಿದ ಯುವಕ- ವೀಡಿಯೋ ವೈರಲ್‌

    ಗೇನಿದ್ದರೂ ಸೋಶಿಯಲ್‌ ಮೀಡಿಯಾದ್ದೇ ಹವಾ. ರೀಲ್ಸ್‌ಗಾಗಿ ಯುವಕ- ಯುವತಿಯರು ಅನೇಕ ಸಾಹಸಗಳನ್ನು ಮಾಡುತ್ತಿದ್ದಾರೆ. ಇದೀಗ ಯುವಕನೊಬ್ಬ ಕಡಲಬ್ಬರದ ಅಲೆಗಳ ನಡುವೆ ಸ್ಕೂಟರ್‌ ಜೊತೆಗೆ ನೀರಿಗೆ ಇಳಿಯುವ ಮೂಲಕ ಅಚ್ಚರಿ ಮೂಡಿಸಿದ್ದಾನೆ.

    ಸದ್ಯ ಇದರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್‌ ಆಗುತ್ತಿದ್ದು, ಪರ-ವಿರೋಧ ಕಾಮೆಂಟ್‌ಗಳು ಬರುತ್ತಿವೆ. ಆದರೆ ಈ ರೀತಿಯ ಸಾಹಸಕ್ಕೆ ಯಾರೂ ಹಾಕಬೇಡಿ ಎಂಬುದಾಗಿ ಸಾರ್ವಜನಿಕರು ಮನವಿ ಮಾಡಿಕೊಂಡಿದ್ದಾರೆ.

    ವೀಡಿಯೋದಲ್ಲಿ ಏನಿದೆ..?: ವೈರಲ್ ಆಗುತ್ತಿರುವ ವೀಡಿಯೋದಲ್ಲಿ ಯುವಕನೊಬ್ಬ ತನ್ನ ಸ್ಕೂಟರ್‌ನಲ್ಲಿ ಕುಳಿತಿದ್ದಾನೆ. ಆತ ಹೆಲ್ಮೆಟ್ ಕೂಡ ಹಾಕಿಕೊಂಡಿರುವುದನ್ನು ಗಮನಿಸಬಹುದಾಗಿದೆ. ಬಳಿಕ ತನ್ನ ಸ್ಕೂಟರ್ ಅನ್ನು ಯಾವುದೇ ರಸ್ತೆಯಲ್ಲಿ ಓಡಿಸದೆ ಸಮುದ್ರದ ನೀರಿನಲ್ಲಿ ಓಡಿಸಿದ್ದಾನೆ. ಯುವಕ ಸಮುದ್ರದತ್ತ ಚಲಿಸುತ್ತಿದ್ದಾಗ ಮುಂಭಾಗದಿಂದ ಬರುವ ಅಲೆಗಳನ್ನು ಸಹ ನೋಡಬಹುದು. ಅಲೆಗಳು ಅಪ್ಪಳಿಸಿದ್ರೂ ಯುವಕ ಕಿಂಚಿತ್ತೂ ಅಂಜದೆ ಸ್ಕೂಟರ್‌ ಚಾಲನೆ ಮಾಡಿದ್ದಾನೆ. ಇದನ್ನೂ ಓದಿ: ಹರಿಯಾಣದಲ್ಲಿ ಹಳಿತಪ್ಪಿದ ಗೂಡ್ಸ್‌ರೈಲು – ಕಂಟೈನರ್ ಮಗುಚಿ ರೈಲು ಸಂಚಾರಕ್ಕೆ ಅಡ್ಡಿ

    ಈ ಬೆನ್ನಲ್ಲೇ ಮತ್ತೊಂದು ದೊಡ್ಡದಾದ ಅಲೆ ಬಂದಿದೆ. ಈ ವೇಳೆ ಯುವಕ ತನ್ನ ಸ್ಕೂಟರ್‌ ಅನ್ನು ದಡದತ್ತ ತಿರುಗಿಸಿದ್ದಾನೆ. ಅಲೆಯು ಕೂಡ ಯುವಕನನ್ನು ದಡದತ್ತ ನೂಕಿದೆ. ಒಟ್ಟಿನಲ್ಲಿ ಯುವಕ ಸೇಫ್‌ ಆಗಿ ದಡ ಸೇರಿದ್ದು, ಯಾವುದೇ ಹಾನಿಯಾಗಿಲ್ಲ. ಆದರೆ ಈ ವೀಡಿಯೋವನ್ನು ಯಾವಾಗ ಮತ್ತು ಎಲ್ಲಿ ತೆಗೆಯಲಾಗಿದೆ ಎಂಬುದರ ಕುರಿತು ಯಾವುದೇ ಮಾಹಿತಿ ಸಿಕ್ಕಿಲ್ಲ.

    https://twitter.com/TheFigen_/status/1807823991324745951

    ಸದ್ಯ ಈ ವೀಡಿಯೋವನ್ನು @TheFigen_ ಎಂಬ ಎಕ್ಸ್‌ ಖಾತೆಯಿಂದ ಹಂಚಿಕೊಳ್ಳಲಾಗಿದೆ. ಈ ವೀಡಿಯೋಗೆ ʼನೀವು ಗೂಗಲ್‌ ಮ್ಯಾಪ್‌ ಅನ್ನೇ ಜಾಸ್ತಿ ಅವಲಂಬಿಸಿದಾಗʼ ಎಂದು ತಮಾಷೆಯಾಗಿ ಬರೆದುಕೊಳ್ಳಲಾಗಿದೆ. ಈ ವೀಡಿಯೋವನ್ನು ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಅಲ್ಲದೇ ಬಳಕೆದಾರರು, ಸ್ಕೂಟರ್ ನಿಲ್ಲಲಿಲ್ಲ ಎಂದು ನನಗೆ ಆಶ್ಚರ್ಯವಾಗಿದೆ. ಮೂರನೇ ಬಳಕೆದಾರರು ಬರೆದಿದ್ದಾರೆ – ಇದು ತಮಾಷೆ ಮತ್ತು ಗಂಭೀರವಾಗಿದೆ, ಇದು ನಿಜವಾಗಿಯೂ ನಡೆಯುತ್ತಿದೆಯೇ ಎಂದು ಪ್ರಶ್ನಿಸಿದ್ದಾರೆ.

  • ಸೆಮಿಫೈನಲ್‌ ಗೆಲ್ಲುತ್ತಿದ್ದಂತೆಯೇ ಬಿಕ್ಕಿ ಬಿಕ್ಕಿ ಅತ್ತ ಹಿಟ್‌ಮ್ಯಾನ್- ವೀಡಿಯೋ ವೈರಲ್‌

    ಸೆಮಿಫೈನಲ್‌ ಗೆಲ್ಲುತ್ತಿದ್ದಂತೆಯೇ ಬಿಕ್ಕಿ ಬಿಕ್ಕಿ ಅತ್ತ ಹಿಟ್‌ಮ್ಯಾನ್- ವೀಡಿಯೋ ವೈರಲ್‌

    ಗಯಾನ: ರೋಹಿತ್ ಶರ್ಮಾ (Rohit Sharma) ನಾಯಕತ್ವದಲ್ಲಿ ಟೀಮ್ ಇಂಡಿಯಾ ಟಿ20 ವಿಶ್ವಕಪ್ 2024 (T20 World Cup) ರ ಫೈನಲ್ ತಲುಪಿದೆ. ಸೆಮಿಫೈನಲ್‌ನಲ್ಲಿ ಗೆಲುವು ಸಾಧಿಸುತ್ತಿದ್ದಂತೆಯೇ ಹಿಟ್‌ಮ್ಯಾನ್‌ ಮಕ್ಕಳಂತೆ ಖುಷಿಯಿಂದ ಕಣ್ಣೀರು ಹಾಕಿದ್ದಾರೆ. ಇದರ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್‌ ಆಗುತ್ತಿದೆ.

    ವೀಡಿಯೋದಲ್ಲಿ ಏನಿದೆ..?: ಇಂಗ್ಲೆಂಡ್ (England) ವಿರುದ್ಧದ ಗೆಲುವಿನ ಬಳಿಕ ಎಲ್ಲಾ ಆಟಗಾರರು ಡ್ರೆಸ್ಸಿಂಗ್ ರೂಮ್ ಕಡೆಗೆ ಹೋಗುತ್ತಿದ್ದಾಗ ರೋಹಿತ್ ಶರ್ಮಾ ಬಾಗಿಲ ಬಳಿ ಇದ್ದ ಕುರ್ಚಿಯಲ್ಲಿ ಕುಳಿತಿದ್ದರು. ಅಲ್ಲದೇ ಒಂದು ಕೈಯಿಂದ ಮುಖ ಮುಚ್ಚಿಕೊಂಡಿದ್ದು, ಕಣ್ಣಲ್ಲಿ ನೀರು ತುಂಬಿಕೊಂಡಿತ್ತು. ಈ ವೇಳೆ ವಿರಾಟ್ ಕೊಹ್ಲಿ ಅವರು ಶರ್ಮಾ ತಲೆ ಮೇಲೆ ಕೈಯಿಟ್ಟು ನಂತರ ಒಳಗೆ ಹೋಗುವುದನ್ನು ನಾವು ವೀಡಿಯೋದಲ್ಲಿ ಕಾಣಬಹುದಾಗಿದೆ. ಇದನ್ನೂ ಓದಿ: T20 World Cup: ಇಂಗ್ಲೆಂಡ್‌ ವಿರುದ್ಧ ಭರ್ಜರಿ ಜಯ – ಫೈನಲ್‌ಗೆ ಭಾರತ ಗ್ರ್ಯಾಂಡ್‌ ಎಂಟ್ರಿ

    ಟೀಂ ಇಂಡಿಯಾ (Team India) ಫೈನಲ್ ತಲುಪಿರುವ ಕಾರಣ ಅವರು ಭಾವುಕರಾಗಿದ್ದಾರೆ. ಭಾರತಕ್ಕೆ ಟ್ರೋಫಿ ಗೆಲ್ಲುವ ಮತ್ತೊಂದು ಅವಕಾಶ ಸಿಕ್ಕಿದೆ. ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡದ ಬೌಲರ್‌ಗಳು ಮತ್ತು ಬ್ಯಾಟ್ಸ್‌ಮನ್‌ಗಳು ಅದ್ಭುತ ಪ್ರದರ್ಶನ ನೀಡಿದರು. ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಅರ್ಧಶತಕ ಗಳಿಸಿದರೆ, ಅಕ್ಷರ್ ಪಟೇಲ್ ಮತ್ತು ಕುಲದೀಪ್ ಯಾದವ್ ಅತ್ಯುತ್ತಮ ಬೌಲಿಂಗ್ ಮೂಲಕ ತಲಾ 3 ವಿಕೆಟ್ ಪಡೆದರು. ಟೂರ್ನಿಯುದ್ದಕ್ಕೂ ಒಗ್ಗಟ್ಟಿನ ಪ್ರದರ್ಶನ ನೀಡಿದ ಟೀಂ ಇಂಡಿಯಾ ಫೈನಲ್‌ಗೆ ಲಗ್ಗೆ ಇಟ್ಟಿದೆ.

    https://twitter.com/iMSIDPAK/status/1806421452322644307

    ಒಟ್ಟಿನಲ್ಲಿ ಕಳೆದ ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಭಾರತ ತಂಡವನ್ನು ಇಂಗ್ಲೆಂಡ್ ಸೋಲಿಸಿತ್ತು. ಇದೀಗ ಆ ಸೋಲಿಗೆ ಭಾರತ ಸೇಡು ತೀರಿಸಿಕೊಂಡಿದೆ.

    ಮೂರನೇ ಬಾರಿ ಫೈನಲ್‌ಗೆ ಲಗ್ಗೆ: ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ಮೂರನೇ ಬಾರಿಗೆ ಫೈನಲ್‌ಗೆ ಲಗ್ಗೆ ಇಟ್ಟಿದೆ. ಇದಕ್ಕೂ ಮುನ್ನ 2007 ಮತ್ತು 2014ರ ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಫೈನಲ್‌ಗೆ ತಲುಪಿತ್ತು. 2007ರ ಫೈನಲ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸಿ ಭಾರತ ಪ್ರಶಸ್ತಿ ಗೆದ್ದಿತ್ತು. 2014ರಲ್ಲಿ ಶ್ರೀಲಂಕಾ ವಿರುದ್ಧ ಸೋಲನ್ನು ಎದುರಿಸಬೇಕಾಯಿತು. ಈ ಬಾರಿಯ ಫೈನಲ್‌ನಲ್ಲಿ ಭಾರತವು ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ.

  • ಮಂಡಿಯೂರಿ ವೃದ್ಧೆ ಕಾಲಿಗೆ ನಮಸ್ಕರಿಸಿದ ಪ್ರಧಾನಿ ಮೋದಿ ವೀಡಿಯೋ ವೈರಲ್‌

    ಮಂಡಿಯೂರಿ ವೃದ್ಧೆ ಕಾಲಿಗೆ ನಮಸ್ಕರಿಸಿದ ಪ್ರಧಾನಿ ಮೋದಿ ವೀಡಿಯೋ ವೈರಲ್‌

    – ಅಷ್ಟಕ್ಕೂ ಆ ವೃದ್ಧೆ ಯಾರು?

    ಭುವನೇಶ್ವರ: ಪ್ರದಾನಿ ನರೇಂದ್ರ ಮೋದಿಯವರು (Narendra Modi) ವೃದ್ಧೆಯೊಬ್ಬರ ಕಾಲಿಗೆ ಮಂಡಿಯೂರಿ ನಮಸ್ಕರಿಸಿದ್ದಾರೆ. ಇದರ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್‌ ಆಗುತ್ತಿದೆ.

    ವೀಡಿಯೋ ವೈರಲ್‌ ಬೆನ್ನಲ್ಲೇ ಆ ವೃದ್ಧೆ ಯಾರು ಎಂಬ ಪ್ರಶ್ನೆ ಎದ್ದಿದೆ. ಈ ವೃದ್ಧೆಯ ಕುರಿತು ಪ್ರಧಾನಿ ನರೇಂದ್ರ ಮೋದಿಯವರು ಕಳೆದ ಫೆಬ್ರವರಿ 26 ರಂದು 98 ನೇ ಆವೃತ್ತಿಯ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿ, ಅವರ ಕೆಲಸವನ್ನು ಶ್ಲಾಘಿಸಿದ್ದರು.

    ಈ ವೃದ್ಧೆ ಯಾರು?, ಇವರು ಯಾಕೆ ಫೇಮಸ್?: ಈ ವೃದ್ಧೆಯ ಹೆಸರು ಕಮಲಾ ಮಹಾರಾಣಾ (Kamala Maharana). ಒಡಿಶಾ ಮೂಲದ ಇವರು ತ್ಯಾಜ್ಯ ವಸ್ತುಗಳನ್ನು ಬಳಸಿ ಅನೇಕ ಗೃಹೋಪಯೋಗಿ ವಸ್ತುಗಳನ್ನು ತಯಾರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿಯವರು ಇವರನ್ನು ಗುರುತಿಸಿ, ಕೆಲಸವನ್ನು ಕೊಂಡಾಡಿದ್ದರು. ಇದನ್ನೂ ಓದಿ: ಡಾ.ಮಂಜುನಾಥ್ ಗೆಲುವಿಗೆ ಹರಕೆಹೊತ್ತ ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿ

    ಬುಧವಾರ ಪ್ರಧಾನಿಯವರು ಚುನಾವಣಾ ರ್ಯಾಲಿ ನಡೆಸಲು ಒಡಿಶಾದ ಕೇಂದ್ರಪಾರಕ್ಕೆ ತೆರಳಿದ್ದರು. ಅಂತೆಯೇ ರ್ಯಾಲಿ ಬಳಿಕ ವೇದಿಕೆಯಲ್ಲಿ ಕಮಲಾ ಮಹಾರಾಣಾ ಅವರನ್ನು ಭೇಟಿಯಾದರು. ಈ ವೇಳೆ ಕಮಲಾ ಅವರು ಮೋದಿಯವರ ಕಾಲಿಗೆ ನಮಸ್ಕರಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ಮೋದಿ ಕೂಡ ಮಂಡಿಯೂರಿ ಕಮಲಾ ಕಾಲಿಗೆ ನಮಸ್ಕರಿಸಿದ್ದಾರೆ.

    ಕಮಲಾ ಅವರು ಸ್ವ-ಸಹಾಯ ಗುಂಪಿನ ಭಾಗವಾಗಿದ್ದಾರೆ. ಮತ್ತು ‘ವೇಸ್ಟ್ ಟು ವೆಲ್ತ್’ ಜೊತೆಗೆ ಮಹಿಳಾ ಸಬಲೀಕರಣದಲ್ಲಿ ಕೆಲಸ ಮಾಡುತ್ತಾರೆ. ಇತ್ತೀಚೆಗೆ ಕಮಲಾ ಅವರು ಪ್ರಧಾನಿ ಮೋದಿಯವರಿಗೆ ವಸ್ತ್ರದಿಂದ ತಯಾರಿಸಿದ ರಾಖಿಯನ್ನೂ ಕಳುಹಿಸಿದ್ದರು.

  • 4 ನೇ ಮಹಡಿಯಿಂದ ಬಿದ್ದು ರಕ್ಷಿಸಲ್ಪಟ್ಟಿದ್ದ ಮಗುವಿನ ತಾಯಿ ಟೆಕ್ಕಿ ಆತ್ಮಹತ್ಯೆ!

    4 ನೇ ಮಹಡಿಯಿಂದ ಬಿದ್ದು ರಕ್ಷಿಸಲ್ಪಟ್ಟಿದ್ದ ಮಗುವಿನ ತಾಯಿ ಟೆಕ್ಕಿ ಆತ್ಮಹತ್ಯೆ!

    ಚೆನ್ನೈ: ಕೆಲದಿನಗಳ ಹಿಂದೆ ಪುಟ್ಟ ಕಂದಮ್ಮವೊಂದು ಅಪಾರ್ಟ್‌ ಮೆಂಟ್‌ನ ಬಾಲ್ಕನಿಯಿಂದ ಸನ್ ಶೇಡ್ ಮೇಲೆ ಬಿದ್ದಿದ್ದ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್‌ ಆಗಿತ್ತು. ಇದೀಗ ಈ ಮಿರಾಕಲ್ ಮಗುವಿನ ತಾಯಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಹೌದು. ಆಕಸ್ಮಿಕವಾಗಿ ತನ್ನ ಕೈಯಿಂದ ಜಾರಿ ಮಗು ಅಪಾರ್ಟ್‌ ಮೆಂಟ್‌ ಬಾಲ್ಕನಿಯಲ್ಲಿ (Apartment Balcony) ಬಿದ್ದ ಘಟನೆಯ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ನಿಂದನೆ ವ್ಯಕ್ತವಾಗಿದ್ದರಿಂದ ಮನನೊಂದು ಟೆಕ್ಕಿ ರಮ್ಯಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೊಯಮತ್ತೂರಿನ (Coimbatore) ಕಾರಮಡೈಯಲ್ಲಿರುವ ತವರು ಮನೆಯಲ್ಲಿ ಭಾನುವಾರ ರಮ್ಯಾ ಸಾವಿನ ದಾರಿ ಹಿಡಿದಿದ್ದಾರೆ.

    ರಮ್ಯಾ (Techie Ramya) ಚೆನ್ನೈನ ಐಟಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರೆ, ಪತಿ ವೆಂಕಟೇಶ್ ಕೂಡ ಐಟಿ ಉದ್ಯೋಗಿ. ಎರಡು ವಾರಗಳ ಹಿಂದೆ ರಮ್ಯಾ ಮತ್ತು ಅವರ ಪತಿ ತಮ್ಮ ಮಗುವಿನೊಂದಿಗೆ ಕರಾಮಡೈನಲ್ಲಿರುವ ತಮ್ಮ ತವರು ಮನೆಗೆ ಬಂದಿದ್ದರು. ಇದನ್ನೂ ಓದಿ: ಇರಾನ್ ಅಧ್ಯಕ್ಷ ರೈಸಿ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ

    ಭಾನುವಾರದಂದು ಪೋಷಕರು ಶುಭ ಸಮಾರಂಭದಲ್ಲಿ ಭಾಗವಹಿಸಲು ಮನೆಯಿಂದ ತೆರಳಿದ್ದರು. ಇತ್ತ ರಮ್ಯಾ ಮನೆಯಲ್ಲಿ ಒಬ್ಬಳೇ ಇದ್ದರು. ಇದೇ ಸಮಯವನ್ನು ನೋಡಿಕೊಂಡ ರಮ್ಯಾ ಆತ್ಮಹತ್ಯೆಯ ನಿರ್ಧಾರ ಮಾಡಿದರು. ಇನ್ನು ಸಮಾರಂಭ ಮುಗಿಸಿ ಹಿಂದಿರುಗಿದ ಪೋಷಕರಿಗೆ ಆಘಾತವೇ ಕಾದಿತ್ತು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ರಮ್ಯಾರನ್ನು ಪೋಷಕರು ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋದರು. ಆದರೆ ಆಕೆ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು.

    ಅಂದು ನಡೆದಿದ್ದೇನು..?: ಏಪ್ರಿಲ್ 28 ರಂದು ರಮ್ಯಾ ಅವರ 7 ತಿಂಗಳ ಮಗು ಕೈಜಾರಿ 4ನೇ ಮಹಡಿಯಿಂದ ಮೊದಲ ಮಹಡಿಯ ಸನ್ ಶೇಡ್ ಮೇಲೆ ಬಿದ್ದಿತ್ತು. ಬಳಿಕ ಸ್ಥಳೀಯರು ಸೇರಿ ಮಗುವನ್ನು ರಕ್ಷಿಸಿದ್ದರು. ಇದಾದ ಬಳಿಕ ರಮ್ಯಾ ಸ್ಥಳೀಯರಿಂದ ಹಾಗೂ ಸಾಮಾಜಿಕ ಜಾಲದಲ್ಲಿ ಭಾರೀ ಟಿಕೆಗೆ ಒಳಗಾದರು.

    ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆ, ತಾಯಿಯ ನಿರ್ಲಕ್ಷ್ಯವೇ ಕಾರಣ. ತಾಯಿ ಅಜಾಗರೂಕತೆಯಿಂದ ಈ ಅವಘಡ ಸಂಭವಿಸಿದೆ. ಹೀಗಾಗಿ ಈ ಘಟನೆ ನಡೆಯಲು ತಾಯಿಯೇ ನೇರ ಕಾರಣ ಎಂದೆಲ್ಲ ಆರೋಪಿಸಿ ಸಾಮಾಜಿಕ ಜಾಲತಾಣಗಳಲ್ಲಿ ನಿಂದಿಸಲಾಗಿತ್ತು. ಇದರಿಂದ ರಮ್ಯ ಮನೊಂದಿದ್ದರು. ಇಷ್ಟು ಮಾತ್ರವಲ್ಲದೇ ಕೆಲ ಸುದ್ದಿ ವಾಹಿನಿಗಳಿಗೆ ಬೈಟ್‌ ಕೊಟ್ಟಿದ್ದ ಅಪಾರ್ಟ್‌ಮೆಂಟ್‌ನ ನಿವಾಸಿಗಳು ಕೂಡ ತಾಯಿಯ ವೈಫಲ್ಯವೇ ಈ ಘಟನೆಗೆ ಕಾರಣ ಎಂದು ಬಿಂಬಿಸುವಂತಹ ಹೇಳಿಕೆಗಳನ್ನು ನೀಡಿದ್ದರು. ಈ ಎಲ್ಲಾ ಅವಮಾನಗಳು, ಹೇಳಿಕೆಗಳು ರಮ್ಯಾ ಅವರನ್ನು ಖಿನ್ನತೆಗೆ ದೂಡಿತು. ಅಂತಿಮವಾಗಿ ಅವರ ಸಾವಿಗೆ ಕಾರಣವಾಯಿತು.

    ಪ್ರಕರಣ ಸಂಬಂಧ ಕರಮಡೈ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

  • ಬಿಕಿನಿ ತೊಟ್ಟು ಬಸ್‌ ಹತ್ತಿದ ಮಹಿಳೆ – ಮುಜುಗರದಿಂದ ಸೀಟು ಬಿಟ್ಟು ಹೋದ ಪ್ರಯಾಣಿಕ; ವೀಡಿಯೋ ಫುಲ್‌ ವೈರಲ್‌

    ಬಿಕಿನಿ ತೊಟ್ಟು ಬಸ್‌ ಹತ್ತಿದ ಮಹಿಳೆ – ಮುಜುಗರದಿಂದ ಸೀಟು ಬಿಟ್ಟು ಹೋದ ಪ್ರಯಾಣಿಕ; ವೀಡಿಯೋ ಫುಲ್‌ ವೈರಲ್‌

    ನವದೆಹಲಿ: ಮೆಟ್ರೋ ರೈಲಿನಲ್ಲಿ ಬಿಕಿನಿ (Bikini), ಅಶ್ಲೀಲ ಕೃತ್ಯಗಳಿಂದ ಕುಖ್ಯಾತವಾಗಿದ್ದ ದೆಹಲಿಯಲ್ಲಿ ಇದೀಗ ಮಹಿಳೆಯೊಬ್ಬರು (Delhi Women) ಬಿಕಿನಿ ತೊಟ್ಟು ಬಸ್‌ ಹತ್ತಿದ್ದು ಆಕೆಯನ್ನು ವೇಶವನ್ನು ನೋಡಲಾಗದೆ ಸಹ ಪ್ರಯಾಣಿಕರು ಸೀಟು ಬಿಟ್ಟು ಹೋದ ಘಟನೆ ನಡೆದಿದೆ.

    ಇತ್ತೀಚಿನ ದಿನಗಳಲ್ಲಿ ಸೋಶಿಯಲ್‌ ಮೀಡಿಯಾದಲ್ಲಿ ಟ್ರೆಂಡ್‌ ಸೃಷ್ಟಿಸೋದು ಕೆಲವರಿಗೆ ಅಭ್ಯಾಸ ಆಗಿಬಿಟ್ಟಿದೆ. ಅದರಲ್ಲೂ ದೆಹಲಿಯಂತಹ ಮಹಾನಗರದಲ್ಲಿ ಇದು ಹೆಚ್ಚಾಗಿಯೇ ನಡೆಯುತ್ತಿದೆ. ಈ ಹಿಂದೆ ದೆಹಲಿ ಮೆಟ್ರೋದಲ್ಲಿ ಕಂಡುಬರುತ್ತಿದ್ದ ಅಶ್ಲೀಲ ಕೃತ್ಯಗಳು ಈಗ ಸಾರ್ವಜನಿಕ ಬಸ್‌ನಲ್ಲೂ ಕಂಡುಬಂದಿದೆ. ಇದನ್ನೂ ಓದಿ: Delhi Metro Girl: ನಾನೂ ಸಂಪ್ರದಾಯಸ್ಥ ಹುಡ್ಗಿ, ಏನ್ ಬೇಕಾದ್ರೂ ಧರಿಸ್ತೀನಿ ಎಂದ ಬಿಕಿನಿ ಗರ್ಲ್

    ಹೌದು. ಜನದಟ್ಟಣೆಯ ಬಸ್‌ನಲ್ಲಿ ಬಿಕಿನಿ ತೊಟ್ಟಿರುವ ಮಹಿಳೆಯ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಮೂಡಿಸಿದೆ. 12 ಸೆಕೆಂಡುಗಳ ಈ ವೀಡಿಯೋದಲ್ಲಿ ಮಹಿಳೆ ಬಿಕಿನಿ ತೊಟ್ಟು ಬಸ್‌ ಬಾಗಿಲಿನ ಬಳಿ ನಿಂತಿದ್ದಾಳೆ, ಸಾರ್ವಜನಿಕರು ಆಕೆಯನ್ನ ಕಣ್ಣು ಮಿಟುಕಿಸದೇ ನೋಡುತ್ತಿದ್ದಾರೆ. ಇನ್ನೂ ಕೆಲವರು ಆಕೆ ಬಸ್‌ ಹತ್ತುತ್ತಿದ್ದಂತೆ ಮುಜುಗರದಿಂದ ತಾವಿದ್ದ ಸೀಟನ್ನು ಬಿಟ್ಟು ಮತ್ತೊಂದು ಸೀಟಿನಲ್ಲಿ ಕುಳಿತಿದ್ದಾರೆ. ಆದ್ರೆ ಇದ್ಯಾವುದನ್ನೂ ತಲೆಗೆ ಹಚ್ಚಿಕೊಳ್ಳದ ಮಹಿಳೆ ತನ್ನ ಪಾಡಿಗೆ ಬಸ್‌ ಸೀಟಿನಲ್ಲಿ ಕುಳಿತುಕೊಂಡು ಪ್ರಯಾಣಿಸಿದ್ದಾಳೆ.

    ಬಿಕಿನಿ ತೊಟ್ಟು ಬಸ್‌ ಹತ್ತಿದ ಮಹಿಳೆ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಇದು ಆಕೆಯ ಸ್ವಾತಂತ್ರ್ಯ ಎಂದು ಸಮರ್ಥಿಸಿಕೊಂಡಿದ್ದರೆ, ಮತ್ತೆ ಕೆಲವರು ಇದು ಸ್ವೇಚ್ಚಾಚಾರ, ಅಶ್ಲೀಲಕ್ಕೆ ಪ್ರಶೋದನೆ ನೀಡುವಂತಹ ಕೆಲಸ ಇಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಕೆಲವರು ಬೇಸಿಗೆ ಅಲ್ವಾ ಶೆಕೆ ಇರಬೇಕು ಅಂತ ಕಾಲೆಳೆದಿದ್ದಾರೆ. ಇದನ್ನೂ ಓದಿ: ಬಾಯಿಂದ ಬಾಯಿಗೆ ಎಂಜಲು ನೀರು ಉಗಿದುಕೊಂಡು ಚೆಲ್ಲಾಟ – ಪ್ರೇಮಿಗಳಿಗೆ ಶುರುವಾಯ್ತು ಪೀಕಲಾಟ

    ದೆಹಲಿ ಬಸಸ್‌ ಎನ್ನುವ ಎಕ್ಸ್‌ ಖಾತೆಯಲ್ಲಿ ಈ ವೀಡಿಯೋ ಹಂಚಿಕೊಂಡಿದ್ದು, ಇದನ್ನು ದೆಹಲಿ ಸಾರಿಗೆ ಅಧಿಕಾರಿಗಳಿಗೂ ಟ್ಯಾಗ್‌ ಮಾಡಿದ್ದಾರೆ. ಸದ್ಯ ಈ ಬಗ್ಗೆ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಹಿಂದೆ ದೆಹಲಿ ಮೆಟ್ರೋದಲ್ಲಿಯೂ ಇಂತಹದ್ದೇ ಘಟನೆ ನಡೆದಿತ್ತು. ಇದನ್ನೂ ಓದಿ: ‌ಫ್ಲೈಟ್‌ನಲ್ಲಿ ಹಾಟ್‌ ಡ್ರೆಸ್‌ ತೊಟ್ಟು ಡಾನ್ಸ್; ಪಡ್ಡೆ ಹುಡುಗರ ಹೃದಯ ಕದ್ದ ಯುವತಿಗೆ ನೆಟ್ಟಿಗರಿಂದ ಕ್ಲಾಸ್‌

  • ಬಾಯಿಂದ ಬಾಯಿಗೆ ಎಂಜಲು ನೀರು ಉಗಿದುಕೊಂಡು ಚೆಲ್ಲಾಟ – ಪ್ರೇಮಿಗಳಿಗೆ ಶುರುವಾಯ್ತು ಪೀಕಲಾಟ

    ಬಾಯಿಂದ ಬಾಯಿಗೆ ಎಂಜಲು ನೀರು ಉಗಿದುಕೊಂಡು ಚೆಲ್ಲಾಟ – ಪ್ರೇಮಿಗಳಿಗೆ ಶುರುವಾಯ್ತು ಪೀಕಲಾಟ

    ಲಕ್ನೋ: ಇತ್ತೀಚೆಗೆ ಪ್ರೀತಿಯ (Love) ಪರಿಭಾಷೆಯೇ ಬದಲಾಗಿದೆ. ಪ್ರೀತಿಯ ಹುಟ್ಟಿನ ರೀತಿಯೂ ಬದಲಾಗಿದೆ. ಪ್ರೀತಿ ಎಂಬುದು ಹೇಳಿ ಕೇಳಿ ಹುಟ್ಟುವುದಿಲ್ಲ. ಇದರ ಹುಟ್ಟಿಗೆ ದಿನಾಂಕ, ಸಮಯ ಬೇಕಿಲ್ಲ. ಪ್ರೀತಿಯ ಭಾವ ಮನಸ್ಸಿನೊಳಗೆ ಮೂಡಿದಾಗ ಹೊಟ್ಟೆಯೊಳಗೆ ಕಚಗುಳಿ ಇಟ್ಟಂತಾಗುವುದು ಸುಳ್ಳಲ್ಲ. ಅದರಲ್ಲೂ ಮಾಡರ್ನ್ ಪ್ರೇಮಿಗಳಿಗೆ (Lovers) ಮೊದಲ ನೋಟದಲ್ಲೇ ಪ್ರೀತಿ ಚಿಗುರುತ್ತದೆ. ಇಂತ ಪ್ರೇಮಿಗಳ ನಡುವೆ ಕೆಲವರು ಹುಚ್ಚುತನದಿಂದ ಪೆಚ್ಚಾಗಿ ಪೇಚಿಗೆ ಸಿಲುಕುತ್ತಾರೆ. ಉತ್ತರ ಪ್ರದೇಶದಲ್ಲಿ (Uttar Pradesh) ನಡೆದ ಘಟನೆಯೊಂದು ಇದಕ್ಕೆ ತಾಜಾ ಉದಾಹರಣೆಯಾಗಿದೆ.

    ಹೌದು. ಉತ್ತರ ಪ್ರದೇಶದ ನೋಯ್ಡಾದ ಪಾರ್ಕ್‌ವೊಂದರಲ್ಲಿ (Noida Park) ಪ್ರೇಮಿಗಳಿಬ್ಬರು ಅತಿರೇಖದ ವರ್ತನೆ ತೋರಿದ್ದು, ವಿವಾದಕ್ಕೆ ಕಾರಣವಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಪ್ರೇಮಿಗಳ ವಿರುದ್ಧ ನೆಟ್ಟಿಗರು ಸಿಡಿದಿದ್ದಾರೆ. ಇದನ್ನೂ ಓದಿ: Delhi Metro: ಮೆಟ್ರೋ ರೈಲಿನಲ್ಲಿ ಲಿಪ್‌ ಲಾಕ್‌ ಮಾಡಿದ ಪ್ರೇಮಿಗಳು – ವೀಡಿಯೋ ವೈರಲ್‌ 

    ನೋಯ್ಡಾದಲ್ಲಿರುವ ವಾನ್‌ವೇದ್‌ ಪಾರ್ಕ್‌ನಲ್ಲಿ ಚಿತ್ರೀಕರಿಸಿದ ವೀಡಿಯೋದಲ್ಲಿ, ಯುವಕ ಮೊದಲು ತನ್ನ ಪ್ರೇಯಸಿಗೆ ಉಂಗುರ ತೊಡಿಸಿದ್ದಾನೆ. ನಂತರ ಆಕೆ ತನ್ನ ಪ್ರೀತಿ ವ್ಯಕ್ತಪಡಿಸಿಲು ತನ್ನ ಬಾಯಿಂದ ಎಂಜಲು ನೀರನ್ನು ತನ್ನ ಪ್ರೇಮಿ ಬಾಯಿಗೆ ಉಗುಳಿದ್ದಾಳೆ. ಅದಕ್ಕೆ ಪ್ರತಿಯಾಗಿ ಯುವಕನೂ ಅದೇ ರೀತಿ ಮಾಡಿದ್ದಾನೆ. ಇದು ಅಸಭ್ಯ ವರ್ತನೆಯಂತೆ ತೋರಿದು, ವೀಡಿಯೋ ಸದ್ದು ಮಾಡುತ್ತಿದ್ದಂತೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.

    ಕೆಲ ದಿನಗಳ ಹಿಂದೆ ದೆಹಲಿಯ ಮೆಟ್ರೋದಲ್ಲಿ (Delhi Metro) ಪ್ರೇಮಿಗಳಿಬ್ಬರು ಲಿಪ್‌ ಲಾಕ್‌ ಮಾಡಿದ್ದ ದೃಶ್ಯ ಕಂಡುಬಂದಿತ್ತು. ಇದೀಗ ಪಾರ್ಕ್‌ಗಳಲ್ಲಿ ಹೀಗೆ ಆದ್ರೆ, ಸಭ್ಯಸ್ಥರು ಓಡಾಡುವುದು ಹೇಗೆ? ಹೇಳುವವರು ಕೇಳುವವರು ಇಲ್ಲದಂತಾಗಿದೆ ಪೊಲೀಸರು ಕ್ರಮ ಕೈಗೊಂಡು ಬಿಸಿ ಮುಟ್ಟಿಸಬೇಕು ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಝಿಕಾ ಆತಂಕ; ಚಿಕ್ಕಬಳ್ಳಾಪುರದ 5 ಗ್ರಾಮಗಳಲ್ಲಿ ಅಲರ್ಟ್‌ – 31 ಮಂದಿ ಗರ್ಭಿಣಿಯರಿಗೆ ರಕ್ತ ಪರೀಕ್ಷೆ

    ಅಲ್ಲದೇ ವೀಡಿಯೋವನ್ನು ಟ್ಬಿಟ್ಟರ್‌ ಎಕ್ಸ್‌ ಖಾತೆಯಲ್ಲಿ ನೋಯ್ಡಾದ ಉಪ ಪೊಲೀಸ್‌ ಆಯುಕ್ತರಿಗೆ ಟ್ಯಾಗ್‌ ಮಾಡಲಾಗಿದ್ದು, ಕ್ರಮಕ್ಕೆ ಒತ್ತಾಯಿಸಿದ್ದಾರೆ. ಇದರಿಂದ ಸೂಕ್ತ ಕ್ರಮ ಕೈಗೊಳ್ಳುವಂತೆ ಅವರು, ನೋಯ್ಡಾದ ಸೆಕ್ಟರ್-113 ಠಾಣೆಗೆ ಮತ್ತು ಸೈಬರ್‌ ಸೆಲ್‌ ವಿಭಾಗಕ್ಕೆ ಸೂಚಿಸಿದ್ದಾರೆ. ಪಾರ್ಕ್‌ನಲ್ಲಿ ಚೆಲ್ಲಾಟವಾಡಿದ ಪ್ರೇಮಿಗಳಿಗೆ ಈಗ ಪೀಕಲಾಟ ಶುರುವಾಗಿದೆ. ಇದನ್ನೂ ಓದಿ: ರಾಜಕೀಯ ಪ್ರೇರಿತವಾಗಿ ನೀಡಿರುವ ನೋಟಿಸ್‌ ಹಿಂಪಡೆಯಿರಿ: EDಗೆ ಕೇಜ್ರಿವಾಲ್‌ ಪ್ರತಿಕ್ರಿಯೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಟಿವಿ ಸ್ಟುಡಿಯೋದಲ್ಲೇ ಹೊಡೆದಾಡಿಕೊಂಡ ರಾಜಕಾರಣಿಗಳು

    ಟಿವಿ ಸ್ಟುಡಿಯೋದಲ್ಲೇ ಹೊಡೆದಾಡಿಕೊಂಡ ರಾಜಕಾರಣಿಗಳು

    ಇಸ್ಲಾಮಾಬಾದ್: ಪಾಕಿಸ್ತಾನದ (Pakistan) ಸುದ್ದಿ ಮಾಧ್ಯಮವೊಂದರ ಸಂವಾದ (TV Debate) ಕಾರ್ಯಕ್ರಮದಲ್ಲಿ ಇಬ್ಬರು ರಾಜಕಾರಣಿಗಳು ಪರಸ್ಪರ ಹೊಡೆದಾಡಿಕೊಂಡ ಪ್ರಸಂಗ ನಡೆದಿದೆ. `ಕಲ್ ತಕ್’ ಎಂಬ ಶೋನಲ್ಲಿ ಈ ಘಟನೆ ನಡೆದಿದ್ದು ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ (Viral Video) ಆಗಿದೆ.

    ಇಮ್ರಾನ್ ಖಾನ್ ಅವರ ವಕೀಲ ಶೇರ್ ಅಫ್ಜಲ್ ಮರ್ವಾತ್ ಮತ್ತು ನವಾಜ್ ಷರೀಫ್ ಅವರ ಪಾಕಿಸ್ತಾನ್ ಮುಸ್ಲಿಂ ಲೀಗ್ ನವಾಜ್‍ನ ಸೆನೆಟರ್ ಆಗಿರುವ ಅಫ್ನಾನ್ ಉಲ್ಲಾ ಬಡಿದಾಡಿಕೊಂಡ ವ್ಯಕ್ತಿಗಳಾಗಿದ್ದಾರೆ. ಸೆನೆಟರ್ ಅಫ್ನಾನ್ ಅವರು ಇಮ್ರಾನ್ ಖಾನ್ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಅದು ಇಬ್ಬರ ನಡುವಿನ ಹೊಡೆದಾಟಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಒಂದು ಹನಿ ನೀರು ಬಿಡದೇ ಇರುವ ಹಾಗೆ ಮಾಡೋಕೆ ಕನ್ನಡಿಗರಿಗೆ ಶಕ್ತಿ ಇದೆ- ಪೂಜಾ ಗಾಂಧಿ

    ಮಾರ್ವತ್ ಪ್ರತಿವಾದ ಮಾಡುವ ಬದಲು ಹಲ್ಲೆ ನಡೆಸಿದ್ದಾರೆ. ಬಳಿಕ ಇಬ್ಬರು ತಲೆಗೆ ಹೊಡೆದುಕೊಂಡಿರುವುದು ವೀಡಿಯೋದಲ್ಲಿ ಸೆರೆಯಾಗಿದೆ. ಬಳಿಕ ಇಬ್ಬರೂ ರಾಜಕಾರಣಿಗಳು ತಮ್ಮನ್ನು ಸಾಮಾಜಿಕ ಜಾಲತಾಣದಲ್ಲಿ ಸಮರ್ಥಿಸಿಕೊಂಡಿದ್ದಾರೆ. ಇಮ್ರಾನ್ ಖಾನ್ ವಿರುದ್ಧ ಅಫ್ನಾನ್ ಉಲ್ಲಾ ಬಳಸಿರುವ ಅವಹೇಳನಕಾರಿ ಭಾಷೆಯಿಂದಾಗಿ ಮಾರ್ವತ್ ಹಲ್ಲೆ ನಡೆಸಿದ್ದಾಗಿ ಹೇಳಿದ್ದಾರೆ. ಮತ್ತೊಂದೆಡೆ ಸೆನೆಟರ್ ಅಫ್ನಾನ್ ಉಲ್ಲಾ ಖಾನ್ ಅಹಿಂಸೆಯನ್ನು ನಂಬುತ್ತೇನೆ ಎಂದು ಹೇಳಿಕೊಂಡಿದ್ದಾರೆ.

    ಈ ಘಟನೆಯ ವೀಡಿಯೋ ವೈರಲ್ ಆಗುತ್ತಿದ್ದಂತೆ ವ್ಯಾಪಕ ಟೀಕೆಗೆ ಗುರಿಯಾಗಿದೆ. ಹಿಂಸಾಚಾರವನ್ನು ತಡೆಯಲು ವಿಫಲವಾದ `ಕಲ್ ತಕ್’ನ ಹೋಸ್ಟ್ ಸಿಬ್ಬಂದಿಯ ಕ್ರಮವನ್ನು ಹಲವರು ಖಂಡಿಸಿದ್ದಾರೆ. ಇದನ್ನೂ ಓದಿ: ನಾಡಿನ ರೈತರಿಗೆ ನೀರಿಲ್ಲದೆ ಭತ್ತ ಬೆಳೆಯುವ ಭಾಗ್ಯ: ಬಿಜೆಪಿ ಆಕ್ರೋಶ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೈಕೊಟ್ಟ ಪ್ರಿಯತಮ- ನಡುರಸ್ತೆಯಲ್ಲೇ ಬೇಕಾಬಿಟ್ಟಿಯಾಗಿ ಯುವತಿ ರಂಪಾಟ

    ಕೈಕೊಟ್ಟ ಪ್ರಿಯತಮ- ನಡುರಸ್ತೆಯಲ್ಲೇ ಬೇಕಾಬಿಟ್ಟಿಯಾಗಿ ಯುವತಿ ರಂಪಾಟ

    ನಾರಿ ಮುನಿದರೆ ಮಾರಿ ಎಂಬ ಗಾದೆಯೊಂದಿದೆ. ಈ ಗಾದೆಯಂತೆ ಪ್ರೀತಿಯ ವಂಚನೆಗೊಳಗಾಗಿ (Love Failure) ಯುವತಿಯೊಬ್ಬಳು ರೊಚ್ಚಿಗೆದ್ದು ನಡುರಸ್ತೆಯಲ್ಲಿಯೇ ರಂಪ ರಾಮಾಯಣ ಮಾಡಿದ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ಹೌದು. ಯುವಕನೊಬ್ಬನನ್ನು ಯುವತಿ ಪ್ರೀತಿಸುತ್ತಿದ್ದಳು. ಆದರೆ ಆತ ಈಕೆಗೆ ವಂಚಿಸಿದ್ದಾನೆ. ಇದರಿಂದ ಯುವತಿ ಮಾನಸಿಕವಾಗಿ ನೊಂದಿದ್ದಾಳೆ. ಅಲ್ಲದೆ ಅದೇ ಫೀಲಿಂಗ್‍ನಿಂದ ತಲೆಕೆಟ್ಟು ನಡು ರಸ್ತೆಯಲ್ಲಿಯೇ ರಂಪಾಟ ಮಾಡಿದ್ದಾಳೆ.

    ರಸ್ತೆ ತುಂಬಾ ಓಡಾಡುತ್ತಾ ಸಿಕ್ಕ ಸಿಕ್ಕ ಕಾರುಗಳ ಮೇಲೆ ಹತ್ತಿ ಕುಳಿತು ದುರ್ವರ್ತನೆ ತೋರಿದ್ದಾಳೆ. ಅಲ್ಲದೆ ಬ್ಯಾರಿಕೇಡ್‍ಗಳನ್ನು ಬೀಳಿಸಿದ್ದಾಳೆ. ಹೀಗೆ ನಡುರೋಡಿನಲ್ಲೇ ಬೇಕಾಬಿಟ್ಟಿಯಾಗಿ ವರ್ತಿಸಿ ಕೆಲ ಕಾಲ ಆತಂಕ ಸೃಷ್ಠಿಸಿದ್ದಾಳೆ. ನಂತರ ಸ್ಥಳೀಯರು ಆಕೆಯನ್ನು ಹಿಡಿದು ರಸ್ತೆ ಬದಿಯಲ್ಲಿ ಕೂರಿಸಿ ಬುದ್ಧಿ ಹೇಳಿದ್ದಾರೆ.

    ವೈರಲ್ ಆಗಿರುವ ವೀಡಿಯೋದಲ್ಲಿ ಯುವತಿಯ ಕಣ್ಣು, ನಡವಳಿಕೆ ಮತ್ತು ಭಾಷೆ ನೋಡಿದರೆ ಆಕೆ ಸಂಪೂರ್ಣವಾಗಿ ಮಾನಸಿಕ ತಳಮಳ ಅಥವಾ ಗೊಂದಲಕ್ಕೀಡಾಗಿರುವುದು ಸ್ಪಷ್ಟವಾಗುತ್ತದೆ. ಇದನ್ನೂ ಓದಿ: ಯುವತಿ ಮೇಲೆ ಅತ್ಯಾಚಾರವೆಸಗಿ ಚಿನ್ನಾಭರಣ ಕದ್ದು ಪರಾರಿ – ಮಹಿಳೆ ಸೇರಿ ಐವರ ವಿರುದ್ಧ ಕೇಸ್

    ಈ ಘಟನೆ ಎಲ್ಲಿ ನಡೆದಿರುವುದು ಎಂಬುದರ ಬಗ್ಗೆ ಮಾಹಿತಿ ಇಲ್ಲ. ಆದರೆ ಯುವತಿಯ ವೀಡಿಯೋವನ್ನು ವಿಕಾಸ್‌ ಕುಮಾರ್‌ ಎಂಬ ಟ್ವಿಟ್ಟರ್‌ ಬಳಕೆದಾರರೊಬ್ಬರು ಶೇರ್ ಮಾಡಿಕೊಂಡಿದ್ದು, ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲದಲಿ ಸಾಕಷ್ಟು ವೈರಲ್‌ ಆಗುತ್ತಿದೆ.

    ಒಟ್ಟಿನಲ್ಲಿ ಒಬ್ಬ ಮನುಷ್ಯ ಮಾನಸಿಕ ಖಿನ್ನತೆಗೆ ಒಳಗಾಗಿ ಈ ರೀತಿಯಾಗಿ ವರ್ತಿಸುವುದನ್ನು ನೋಡುವುದು ತುಂಬಾ ದುಃಖಕರವಾಗಿದೆ. ಹೀಗಾಗಿ ಈ ವಿಷಯದ ಬಗ್ಗೆ ಶಿಕ್ಷಣ ನೀಡುವ ಅವಶ್ಯಕತೆ ಇದೆ.

     

  • ಯುವತಿಗೆ ಥಳಿಸಿ, ಕುತ್ತಿಗೆ ಹಿಡಿದು ಬಲವಂತವಾಗಿ ಕ್ಯಾಬ್‌ನಲ್ಲಿ ಕೂರಿಸಿದ ಯುವಕ – ವೀಡಿಯೋ ವೈರಲ್

    ಯುವತಿಗೆ ಥಳಿಸಿ, ಕುತ್ತಿಗೆ ಹಿಡಿದು ಬಲವಂತವಾಗಿ ಕ್ಯಾಬ್‌ನಲ್ಲಿ ಕೂರಿಸಿದ ಯುವಕ – ವೀಡಿಯೋ ವೈರಲ್

    ನವದೆಹಲಿ: ಯುವಕನೊಬ್ಬ ಯುವತಿಗೆ ಥಳಿಸಿ, ಕುತ್ತಿಗೆ ಹಿಡಿದು ಎಳೆದಾಡಿ ಆಕೆಯನ್ನ ಬಲವಂತವಾಗಿ ಕ್ಯಾಬ್‌ನಲ್ಲಿ (Cab) ಕೂರಿಸಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದ್ದು, ವೀಡಿಯೋ ಜಾಲತಾಣದಲ್ಲಿ (Social Media) ಸದ್ದು ಮಾಡ್ತಿದೆ.

    ದೆಹಲಿಯ (New Delhi) ಮಂಗೋಲ್‌ಪುರಿ ಪ್ರದೇಶದಲ್ಲಿ ಘಟನೆ ನಡೆದಿದ್ದು, ವೀಡಿಯೋ ಎಲ್ಲೆಡೆ ಹರಿದಾಡುತ್ತಿದೆ. ವೀಡಿಯೋವನ್ನ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಹಾಗೂ ದೆಹಲಿ ಪೊಲೀಸರಿಗೂ ಟ್ಯಾಗ್ ಮಾಡಿದ್ದು, ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಅಪ್ಪನೊಂದಿಗೆ ಸೇರಿ ಹೆಂಡ್ತಿ ಮೇಲೆ ಅತ್ಯಾಚಾರ – ತಂದೆಗೆ 14, ಮಗನಿಗೆ 10 ವರ್ಷ ಜೈಲು

    ಈ ಘಟನೆ ಶನಿವಾರ ತಡರಾತ್ರಿ 11:30ರ ಸುಮಾರಿಗೆ ಗುರುಗ್ರಾಮ್‌ನ ಐಎಫ್‌ಎಫ್‌ಸಿಎಒ ಚೌಕ್‌ನಲ್ಲಿ ನಡೆದಿದ್ದು, ಸಿಸಿಟಿವಿ ದೃಶ್ಯಾವಳಿ ಪೊಲೀಸರಿಗೆ ಲಭ್ಯವಾದ ಬಳಿಕ ತನಿಖೆಗೆ ಕೈಗೊಂಡಿದ್ದಾರೆ.

    ಸದ್ಯ ದೆಹಲಿ ಪೊಲೀಸರು (Delhi Police) ಕ್ಯಾಬ್ ಮತ್ತು ಚಾಲಕನನ್ನು ಪತ್ತೆಹಚ್ಚಿದ್ದಾರೆ. ವೀಡಿಯೋದಲ್ಲಿ ಕಾಣುತ್ತಿರುವ ಇಬ್ಬರು ಯುವಕರು ಯುವತಿಯನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದರು ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಅಕ್ಕನ ಅನೈತಿಕ ಸಂಬಂಧ ವಿರೋಧಿಸಿದ್ದಕ್ಕೆ ತಮ್ಮನ ಕೊಲೆ ಪ್ರಕರಣ – 8 ವರ್ಷಗಳ ಬಳಿಕ ಆರೋಪಿಗಳು ಅರೆಸ್ಟ್

    ದೆಹಲಿಯ ರೋಹಿಣಿಯಿಂದ ವಿಕಾಸಪುರಿಗೆ ಉಬರ್ ಆ್ಯಪ್ (Uber App) ಮೂಲಕ ಕ್ಯಾಬ್ ಬುಕ್ ಮಾಡಲಾಗಿತ್ತು. ಮಾರ್ಗಮಧ್ಯೆ ಇಬ್ಬರ ನಡುವೆ ವಾಗ್ವಾದ ನಡೆದು ಅದು ದೈಹಿಕ ಹಲ್ಲೆಗೆ ಕಾರಣವಾಗಿದೆ ಎನ್ನಲಾಗಿದೆ.