Tag: viral video

  • ನಡು ರಸ್ತೆಯಲ್ಲಿ ಮಹಿಳೆಯರಿಬ್ಬರ ಬಿಂದಾಸ್ ಡ್ಯಾನ್ಸ್- ವಿಡಿಯೋ ವೈರಲ್

    ನಡು ರಸ್ತೆಯಲ್ಲಿ ಮಹಿಳೆಯರಿಬ್ಬರ ಬಿಂದಾಸ್ ಡ್ಯಾನ್ಸ್- ವಿಡಿಯೋ ವೈರಲ್

    -ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಸಂಚಲನ

    ಬೆಂಗಳೂರು: ಮಹಿಳೆಯರಿಬ್ಬರು ನಡು ರಸ್ತೆಯಲ್ಲಿ ಬಿಂದಾಸ್ ಆಗಿ ಹೆಜ್ಜೆ ಹಾಕಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ.

    ಗಾಯಕಿ ಆಶಾ ಬೋಸ್ಲೆ ಹಾಡಿರುವ ‘ಪಿಯಾ ತು ಅಬ್ ತೋ ಆಜಾ’ ಹಾಡಿಗೆ ಮಹಿಳೆಯರು ಹೆಜ್ಜೆ ಹಾಕಿದ್ದಾರೆ. ಕೇವಲ 15 ಸೆಕೆಂಡ್ ವಿಡಿಯೋ ಕ್ಲಿಪ್ ನೋಡಿದ ನೆಟ್ಟಿಗರು, ಇಬ್ಬರ ಡ್ಯಾನ್ಸ್‍ಗೆ ಫಿದಾ ಆಗಿದ್ದಾರೆ. ವಿಡಿಯೋದಲ್ಲಿ ಮಹಿಳೆಯರ ಜೊತೆ ಓರ್ವ ವ್ಯಕ್ತಿ ಹೆಜ್ಜೆ ಹಾಕಿ ಹಿಂದೆ ಸರಿದಿರೋದನ್ನ ಗಮನಿಸಬಹುದು. ಈ ವಿಡಿಯೋ ಎಲ್ಲಿಯದ್ದು ಮತ್ತು ಮಹಿಳೆಯರು ಯಾರು ಎಂಬುವುದು ತಿಳಿದು ಬಂದಿಲ್ಲ.

    ಮಹಿಳೆಯರ ಡ್ಯಾನ್ಸ್ ವಿಡಿಯೋ 11 ಸಾವಿರಕ್ಕೂ ಅಧಿಕ ವ್ಯೂವ್ ಪಡೆದುಕೊಂಡಿದೆ. 1970ರಲ್ಲಿ ಬಿಡುಗಡೆಯಾದ ‘ಕಾರವಾನ್’ ಸಿನಿಮಾದಲ್ಲಿ ‘ಪಿಯಾ ತು ಅಬ್ ತೋ ಆಜಾ’ ಆರ್.ಡಿ. ಬರ್ಮನ್ ಸಂಯೋಜನೆಯಲ್ಲಿ ಮೂಡಿ ಬಂದಿತ್ತು. ಚಿತ್ರದಲ್ಲಿ ಜೀತೇಂದ್ರ ಮತ್ತು ಆಶಾ ಪಾರೇಖ್ ಜೊತೆಯಾಗಿ ನಟಿಸಿದ್ದರು.

  • ವ್ಯಾಪಾರಿಯ ಮೆಕ್ಕೆಜೋಳದ ತಳ್ಳುವ ಗಾಡಿ ಬೀಳಿಸಿದ- ವಿಡಿಯೋ ವೈರಲ್

    ವ್ಯಾಪಾರಿಯ ಮೆಕ್ಕೆಜೋಳದ ತಳ್ಳುವ ಗಾಡಿ ಬೀಳಿಸಿದ- ವಿಡಿಯೋ ವೈರಲ್

    -ದರ್ಪ ಮೆರೆದ ಸಬ್ ಇನ್‍ಸ್ಪೆಕ್ಟರ್ ಅಮಾನತು

    ಲಕ್ನೋ: ಸಬ್ ಇನ್‍ಸ್ಪೆಕ್ಟರ್ ರಸ್ತೆ ಬದಿಯಲ್ಲಿ ಮೆಕ್ಕೆಜೋಳ ಮಾರುತ್ತಿದ್ದ ವ್ಯಾಪಾರಿಯ ತಳ್ಳುವ ಗಾಡಿ ಬೀಳಿಸಿದ ದರ್ಪ ಮರೆದಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೋ ವೈರಲ್ ಬಳಿ ದರ್ಪ ಮೆರದ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ. ಇದನ್ನೂ ಓದಿ:  100 ರೂ. ಲಂಚ ನೀಡಲು ನಿರಾಕರಿಸಿದ ಬಾಲಕ- ಮೊಟ್ಟೆ ಬಂಡಿ ಪಲ್ಟಿ ಮಾಡಿದ ಪಾಲಿಕೆ ಅಧಿಕಾರಿ

    ಉತ್ತರ ಪ್ರದೇಶದ ವಾರಾಣಸಿಯ ಶಿವಪುರದಲ್ಲಿ ಬೀದಿ ಬದಿ ವ್ಯಾಪಾರಿ ಗಾಡಿಯಲ್ಲಿ ಮೆಕ್ಕೆಜೋಳ ಮಾರುತ್ತಿದ್ದರು. ವ್ಯಾಪಾರಿ ಬಳಿ ಬಂದ ಸಬ್ ಇನ್‍ಸ್ಪೆಕ್ಟರ್ ಕುಮಾರರ ಶಶಿ ಗಾಡಿಯಲ್ಲಿದ್ದ ಜೋಳವನ್ನು ಕೆಳಗೆ ಬೀಳಿಸಿ, ನೋಡ ನೋಡುತ್ತಿದ್ದಂತೆ ಗಾಡಿ ಪಲ್ಟಿ ಹೊಡೆಸಿದ್ದಾನೆ. ಈ ಎಲ್ಲ ದೃಶ್ಯಗಳು ಕಟ್ಟಡ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸೋಮವಾರ ಘಟನೆ ನಡೆದಿದ್ದು, ವಿಡಿಯೋ ವೈರಲ್ ಬಳಿಕ ಮಂಗಳವಾರ ಕಿಶೋರ್ ಶಶಿಯನ್ನು ಅಮಾನತುಗೊಳಿಸಲಾಗಿದೆ. ಹಾಗೆ ಬೀದಿ ಬದಿ ವ್ಯಾಪಾರಿ ಬಳಿ ಪೊಲೀಸರು ಕ್ಷಮೆ ಕೇಳಿದ್ದಾರೆ. ಇದನ್ನೂ ಓದಿ: 100 ರೂ. ಲಂಚಕ್ಕಾಗಿ ಮೊಟ್ಟೆ ಬಂಡಿ ಪಲ್ಟಿ – ಬಾಲಕನಿಗೆ ಉಚಿತ ಶಿಕ್ಷಣ, ಮನೆ

    ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಹಿರಿಯ ಅಧಿಕಾರಿಗಳು ಈಗಾಗಲೇ ಸೂಚನೆ ನೀಡಿದ್ದಾರೆ. ಜೊತೆಗೆ ವ್ಯಾಪಾರಿಯಾದ ನಷ್ಟವನ್ನು ನೀಡುವಂತೆ ತಿಳಿಸಲಾಗಿದೆ. ಆದ್ರೆ ಕಿಶೋರ್ ಗಾಡಿಯನ್ನು ಯಾಕೆ ಬೀಳಿಸಿದ್ರು ಎಂಬುವುದು ಗೊತ್ತಿಲ್ಲ ಎಂದು ಹೆಸರು ಹೇಳಲು ಇಚ್ಛಿಸದ ಪೊಲೀಸ್ ಅಧಿಕಾರಿ ಮಾಧ್ಯಮಕ್ಕೆ ಹೇಳಿದ್ದಾರೆ. ಇದನ್ನೂ ಓದಿ: ಫ್ರೀಯಾಗಿ ಐಸ್ ಕ್ರೀಂ ಕೊಡದಕ್ಕೆ ಗಾಡಿ ತೊಗೊಂಡು ಹೋದ ಪೊಲೀಸರು

  • ಚುಮು ಚುಮು ಚಳಿಯಲ್ಲಿ ಬಿಕಿನಿ ತೊಟ್ಟು ಈಜುಕೊಳಕ್ಕೆ ಧಮುಕಿದ ಸಾರಾ

    ಚುಮು ಚುಮು ಚಳಿಯಲ್ಲಿ ಬಿಕಿನಿ ತೊಟ್ಟು ಈಜುಕೊಳಕ್ಕೆ ಧಮುಕಿದ ಸಾರಾ

    -ಸೈಫ್ ಪುತ್ರಿಯ ಸ್ವಿಮಿಂಗ್ ವಿಡಿಯೋ ವೈರಲ್

    ಮುಂಬೈ: ಬಾಲಿವುಡ್ ನಟಿ, ಸೈಫ್ ಪುತ್ರಿ ಸಾರಾ ಅಲಿಖಾನ್ ಸ್ವಿಮಿಂಗ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಪಾದರಸದಂತೆ ಹರಿದಾಡ್ತಿದೆ. ಈಜುಕೊಳದಲ್ಲಿ ಮತ್ಸಕನ್ನೆಯಂತೆ ಸಾರಾ ಈಜಾಡುತ್ತಿರೋದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

    ಇನ್‍ಸ್ಟಾಗ್ರಾಂನಲ್ಲಿ ವಿಡಿಯೋ ವೈರಲ್ ಆಗಿದ್ದು, ಅಭಿಮಾನಿಗಳು ತಮ್ಮ ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ. ಲಾಕ್‍ಡೌನ್ ಆದಾಗಿನಿಂದ ಕುಟುಂಬಸ್ಥರ ಜೊತೆ ಕಾಲ ಕಳೆಯುತ್ತಿರುವ ಸಾರಾ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಕೆಲವು ದಿನಗಳ ಹಿಂದೆ ಸಾಮಾನ್ಯರಂತೆ ಮುಂಬೈ ರಸ್ತೆಯಲ್ಲಿ ಸಾರಾ ಸೈಕಲ್ ಓಡಿಸಿದ್ದ ವಿಡಿಯೋ ವೈರಲ್ ಆಗಿತ್ತು.

    https://www.instagram.com/p/CDtoJSbpt7E/?utm_source=ig_embed

    ಸಾರಾ ಜೊತೆ ಸೋದರ ಇಬ್ರಾಹಿಂ ಅಲಿ ಖಾನ್ ಸಹ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಸೋದರ ಇಬ್ರಾಹಿಂ ಜೊತೆಗಿನ ಸೈಕಲ್ ರೇಸ್ ವಿಡಿಯೋ ಸಾರಾ ಪೋಸ್ಟ್ ಮಾಡಿಕೊಂಡಿದ್ದರು.

    https://www.instagram.com/p/CDtR2Y5JZcH/

    ಕೇದಾರನಾಥ್ ಸಿನಿಮಾ ಮೂಲಕ ಬಾಲಿವುಡ್ ಅಂಗಳಕ್ಕೆ ಪಾದಾರ್ಪಣೆ ಮಾಡಿರುವ ಸಾರಾ ಮೊದಲ ಚಿತ್ರದ ನಟನೆಗೆ ಅಪಾರ ಮೆಚ್ಚುಗೆ ಪಡೆದುಕೊಂಡಿದ್ದರು. ತದನಂತರ ಸಿಂಬಾದಲ್ಲಿಯೂ ಸಾರಾ ನಟಿಸಿದ್ದಾರೆ. ಸದ್ಯ ವರುಣ್ ಧವನ್ ಗೆ ಜೊತೆಯಾಗಿ ಕೂಲಿ ನಂಬರ್ ಒನ್ ಚಿತ್ರದಲ್ಲಿ ನಟಿಸುತ್ತಿದ್ದಾರೆ.

    https://www.instagram.com/p/CDdqAhBJ-XV/

  • 100 ರೂ. ಲಂಚ ನೀಡಲು ನಿರಾಕರಿಸಿದ ಬಾಲಕ- ಮೊಟ್ಟೆ ಬಂಡಿ ಪಲ್ಟಿ ಮಾಡಿದ ಪಾಲಿಕೆ ಅಧಿಕಾರಿ

    100 ರೂ. ಲಂಚ ನೀಡಲು ನಿರಾಕರಿಸಿದ ಬಾಲಕ- ಮೊಟ್ಟೆ ಬಂಡಿ ಪಲ್ಟಿ ಮಾಡಿದ ಪಾಲಿಕೆ ಅಧಿಕಾರಿ

    -ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ

    ಇಂದೋರ್: ತಳ್ಳುವ ಬಂಡಿಯಲ್ಲಿ ಮೊಟ್ಟೆಗಳನ್ನು ತೆಗೆದುಕೊಂಡು ಹೋಗುತ್ತಿದ್ದ 14 ವರ್ಷದ ಬಾಲಕನ ಬಂಡಿಯನ್ನು ಪಲ್ಟಿ ಮಾಡಿ ಅಧಿಕಾರಿ ದರ್ಪ ನಡೆಸಿರುವ ಘಟನೆ ಮಧ್ಯಪ್ರದೇಶ ಇಂದೋರ್ ನಲ್ಲಿ ನಡೆದಿದೆ.

    ವ್ಯಾಪಾರ ಮಾಡಲು ಮೊಟ್ಟೆಯನ್ನು ತೆಗೆದುಕೊಂಡು ಹೋಗುತ್ತಿದ್ದ ಬಾಲಕನ ಬಳಿ ಸ್ಥಳೀಯ ಪಾಲಿಗೆ ಅಧಿಕಾರಿ 100 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಇಲ್ಲ ಎಂದರೇ ಬಂಡಿಯನ್ನು ಸ್ಥಳದಿಂದ ತೆಗೆಯುವಂತೆ ಎಚ್ಚರಿಕೆ ನೀಡಿದ್ದ. ಆದರೆ ಲಾಕ್‍ಡೌನ್ ಕಾರಣದಿಂದ ವ್ಯಾಪಾರ ಕಡಿಮೆಯಾಗಿದ್ದರಿಂದ ಬಾಲಕ ಹಣ ನೀಡಲು ನಿರಾಕರಿಸಿದ್ದ. ಇದರಿಂದ ಕುಪಿತಗೊಂಡ ಅಧಿಕಾರಿ ನಡುರಸ್ತೆಯಲ್ಲಿ ಬಾಲಕನ ಬಂಡಿಯನ್ನು ಪಲ್ಟಿ ಮಾಡಿ ಮೊಟ್ಟೆಗಳನ್ನು ನಾಶ ಮಾಡಿದ್ದಾನೆ.

    ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಖತ್ ವೈರಲ್ ಆಗಿದ್ದು, ಬಾಲಕ ನಡೆದ ಘಟನೆ ಬಗ್ಗೆ ವಿವರಿಸಿದ್ದಾನೆ. ಕೊರೊನಾ ಕಾರಣದಿಂದ ವ್ಯಾಪಾರ ಆಗಿಲ್ಲ. ಅಲ್ಲದೇ ಮೊಟ್ಟೆ ವ್ಯಾಪಾರವಾಗದೆ ಉಳಿದಿರುವುದು ಮತ್ತಷ್ಟು ನಷ್ಟ ತಂದಿದೆ ಎಂದಿದ್ದಾನೆ. ವಿಡಿಯೋದಲ್ಲಿ ಬಾಲಕನ ಬಳಿ ನಿಂತಿರುವ ವ್ಯಕ್ತಿಯನ್ನು ಪಾಲಿಕೆ ಅಧಿಕಾರಿ ಎಂದು ಗುರುತಿಸಲಾಗಿದೆ.

    ಇಂದೋರ್ ನಲ್ಲಿ ಕೊರೊನಾ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದ್ದು, ವ್ಯಾಪಾರಕ್ಕೆ ನಿಷೇಧ ವಿಧಿಸಿದ್ದ ಸರ್ಕಾರ ಇತ್ತೀಚೆಗೆ ನಿಯಮಗಳನ್ನು ಸಡಿಲಗೊಳಿಸಿತ್ತು. ಇಂದೋರ್ ನಲ್ಲಿ ನಿನ್ನೆ 118 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, 6,457 ಮಂದಿಗೆ ಇದುವರೆಗೂ ಸೋಂಕು ಹರಡಿದೆ.

  • ಅಂಧ ವೃದ್ಧನಿಗಾಗಿ ಓಡೋಡಿ ಬಂದು ಬಸ್ ನಿಲ್ಲಿಸಿದ ಮಹಿಳೆ- ವಿಡಿಯೋ ವೈರಲ್

    ಅಂಧ ವೃದ್ಧನಿಗಾಗಿ ಓಡೋಡಿ ಬಂದು ಬಸ್ ನಿಲ್ಲಿಸಿದ ಮಹಿಳೆ- ವಿಡಿಯೋ ವೈರಲ್

    – ಮಹಿಳೆಯ ಕಾರ್ಯಕ್ಕೆ ಶಹಬ್ಬಾಸ್ ಎಂದ ನೆಟ್ಟಿಗರು

    ತಿರುವನಂತಪುರಳ: ಮಹಾಮಾರಿ ಕೊರೊನಾ ವೈರಸ್ ನಮ್ಮ ದೇಶವನ್ನು ವಕ್ಕರಿಸಿದ ಬಳಿಕ ಅನೇಕ ಮಾನವೀಯ ಕಾರ್ಯಗಳನ್ನು ನಾವು ಕಂಡಿದ್ದೇವೆ. ಹಾಗೆಯೇ ಇದೀಗ ಕೇರಳದಲ್ಲಿ ಮಹಿಳೆಯೊಬ್ಬರು ಅಂಧ ವೃದ್ಧರೊಬ್ಬರಿಗೆ ಸಹಾಯ ಮಾಡಿರುವುದು ಇದೀಗ ಎಲ್ಲರ ಪ್ರಶಂಸೆಗೆ ಕಾರಣವಾಗಿದೆ.

    ಹೌದು. ಸುಪ್ರಿಯಾ ಎಂಬ ಮಹಿಳೆ ಅಂಧ ವೃದ್ಧರೊಬ್ಬರಿಗೆ ಸಹಾಯ ಮಾಡಿದ್ದಾರೆ. ಅಜ್ಜ ಬಸ್ಸಿನಲ್ಲಿ ತೆರಳಬೇಕಿತ್ತು. ಈ ವಿಚಾರ ತಿಳಿದ ಮಹಿಳೆ ಬಸ್ಸಿನ ಬಳಿ ಓಡೋಡಿ ಬಂದು ಬಸ್ಸು ನಿಲ್ಲಿಸಿದ್ದಾರೆ. ಈ ಎಲ್ಲಾ ದೃಶ್ಯಗಳನ್ನು ಅಲ್ಲೇ ಇದ್ದ ಕೆಲವರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಅಲ್ಲದೆ ಮಹಿಳೆಯ ಕಾರ್ಯಕ್ಕೆ ನಟ-ನಟಿಯರು ಸೇರಿದಂತೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    ವಿಡಿಯೋದಲ್ಲಿ ಏನಿದೆ..?
    ಅಜ್ಜ ಬಸ್ಸಿಗಾಗಿ ಕಾಯುತ್ತಿದ್ದರು. ಆದರೆ ಅದಾಗಲೇ ನಿಲ್ದಾಣಕ್ಕೆ ಬಂದ ಬಸ್ಸು ಹೊರಡಲಾರಭಿಸಿದೆ. ಈ ವಿಚಾರ ಮಹಿಳೆಯ ಗಮನಕ್ಕೆ ಬಂದಿದ್ದು, ಕೂಡಲೇ ಹೊರಡಲು ಅಣಿಯಾದ ಬಸ್ಸನ್ನು ನಿಲ್ಲಿಸಿದ್ದಾರೆ. ಅಲ್ಲದೆ ಅಜ್ಜನ ಬಳಿ ಹೋಗಿ ಅವರ ಕೈಹಿಡಿದು ಬಸ್ಸಿನ ಬಳಿ ಕರೆತಂದು ಹತ್ತಿಸಿ ವಾಪಸ್ ಆಗಿರುವುದನ್ನು ನಾವು ವಿಡಿಯೋದಲ್ಲಿ ಕಾಣಬಹುದಾಗಿದೆ.

    ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಇತ್ತ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಎಲ್ಲರೂ ತಮ್ಮ ಟ್ವಿಟ್ಟರ್ ಅಕೌಂಟ್ ಗಳಲ್ಲಿ ವಿಡಿಯೋ ಶೇರ್ ಮಾಡಿಕೊಂಡು ಮಹಿಳೆಯ ಕಾರ್ಯಕ್ಕೆ ಶಹಬ್ಬಾಸ್ ಅಂದಿದ್ದಾರೆ. ಅಂತೆಯೇ ಐಪಿಎಸ್ ಅಧಿಕಾರಿ ಕೂಡ ಈ ವಿಡಿಯೋವನ್ನು ಶೇರ್ ಮಾಡಿಕೊಂಡು, ಈ ಜಗತ್ತು ಬದುಕಲು ಒಂದು ಉತ್ತಮ ಸ್ಥಳ ಎಂಬುದನ್ನು ಈ ಮಹಿಳೆ ತೋರಿಸಿದ್ದಾರೆ. ಅವರ ಈ ಕುರುಣೆ ತುಂಬಾ ಸುಂದರವಾಗಿದೆ ಎಂದು ಬರೆದುಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    41 ಸೆಕೆಂಡ್ ಇರುವ ಈ ವಿಡಿಯೋವನ್ನು ಸುಮಾರು 6.2 ಲಕ್ಷಕ್ಕಿಂತಯೂ ಅಧಿಕ ಬಾರಿ ವೀಕ್ಷಣೆಯಾಗಿದೆ. ಕಮೆಂಟ್ ಮೂಲಕ ಎಲ್ಲರೂ ಮಹಿಳೆಯ ಕಾರ್ಯವನ್ನು ಮೆಚ್ಚಿ ಕೊಂಡಿದ್ದಾರೆ. ಮಹಿಳೆ ಜಾಲಿ ಸಿಲ್ಕ್ಸ್ ಎಂಬ ಟೆಕ್ಸ್ ಟೈಲ್ ನಲ್ಲಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ.

  • ಭಾರತ, ಚೀನಾ ಗಡಿಪ್ರದೇಶದ ಸನಿಹ ನೋಡ ನೋಡುತ್ತಿದಂತೆ ಕುಸಿದು ಬಿದ್ದ ಸೇತುವೆ- ವೈರಲ್ ವಿಡಿಯೋ

    ಭಾರತ, ಚೀನಾ ಗಡಿಪ್ರದೇಶದ ಸನಿಹ ನೋಡ ನೋಡುತ್ತಿದಂತೆ ಕುಸಿದು ಬಿದ್ದ ಸೇತುವೆ- ವೈರಲ್ ವಿಡಿಯೋ

    ನವದೆಹಲಿ: ಭಾರತ ಹಾಗೂ ಚೀನಾ ಗಡಿಪ್ರದೇಶದ ಬಳಿ ಪ್ರಮುಖ ಸೇತುವೆಯೊಂದು ನೋಡ ನೋಡುತ್ತಿದಂತೆ ಕುಸಿದು ಬಿದ್ದಿರುವ ಘಟನೆ ಉತ್ತರಾಖಂಡ ರಾಜ್ಯದ ಪಿಥೋರ್‍ಗಢ ಜಿಲ್ಲೆಯಲ್ಲಿ ನಡೆದಿದೆ.

    ಭಾರೀ ಗಾತ್ರದ ನಿರ್ಮಾಣ ಯಂತ್ರವನ್ನು ಟ್ರಕ್‍ವೊಂದು ಹೊತ್ತು ಸಾಗುತ್ತಿದ್ದ ವೇಳೆ ಏಕಾಏಕಿ ಸೇತುವೆ ಕುಸಿದು ಬಿದ್ದಿದೆ. ಘಟನೆಯಲ್ಲಿ ವಾಹನದ ಚಾಲಕ ಹಾಗೂ ಸಹಾಯಕ ಗಂಭೀರವಾಗಿ ಗಾಯಗೊಂಡಿರುವ ಮಾಹಿತಿ ಲಭಿಸಿದೆ. ಲೀಲಾ ಜೋಹಾರ್ ಕಣಿವೆಯ ಧಾಪಾ-ಮಿಲಾಮ್ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ.

    ಸದ್ಯ ಕುಸಿದು ಬಿದ್ದಿರುವ ಸೇತುವೆ ಭಾರತೀಯ ಸೇನೆ ಮತ್ತು ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸರ ನಡುವೆ ಸಂಪರ್ಕ ಕಲ್ಪಿಸಲು ಇರುವ ಏಕೈಕ ಮಾರ್ಗ ಎನ್ನಲಾಗಿದೆ. ಭಾರತ-ಚೀನಾ ಗಡಿಯಲ್ಲಿ ನಡೆಯುತ್ತಿರುವ ರಸ್ತೆ ನಿರ್ಮಾಣ ಕಾರ್ಯಗಳಲ್ಲಿ ಬಳಸಲು ಭಾರೀ ನಿರ್ಮಾಣ ಯಂತ್ರವನ್ನು ಟ್ರಕ್ ಮೂಲಕ ಸಾಗಿಸಲಾಗುತ್ತಿತ್ತು. ಸೇತುವೆ ಕುಸಿದ ಪರಿಣಾಮ ಈ ಮಾರ್ಗದ ಸಂಪರ್ಕ ಕಡಿತಗೊಂಡಿದೆ.

    ಸೇತುವೆ ಕುಸಿದು ಬೀಳುವ ದೃಶ್ಯ ಸೆರೆಯಾಗಿದ್ದು, ಟ್ರಕ್ ಸೇತುವೆಯ ಅರ್ಧ ಭಾಗಕ್ಕೆ ಆಗಮಿಸಿದ್ದ ವೇಳೆ ಅವಘಡ ಸಂಭವಿಸಿದೆ. ಗಡಿ ಪ್ರದೇಶದಿಂದ ಸುಮಾರು 65 ಕಿಮೀ ದೂರದಲ್ಲಿ ಘಟನೆ ಜರುಗಿದ್ದು, 25 ವರ್ಷ ಹಿಂದಿನ ಹಳೆಯ ಸೇತುವೆ ಎಂಬ ಮಾಹಿತಿ ಲಭಿಸಿದೆ. ಸೇತುವೆ ಮರು ನಿರ್ಮಾಣವಾಗದ ಹೊರತು ಸುಮಾರು 7 ಸಾವಿರ ಜನಸಂಖ್ಯೆ ಹೊಂದಿರುವ ಹಳ್ಳಿಗಳಿಗೆ ಸಂಪರ್ಕ ಸಾಧ್ಯವಾಗುವುದಿಲ್ಲ. ಬಾರ್ಡರ್ ರೋಡ್ ಆರ್ಗನೈಜೇಶನ್ (ಬಿಆರ್‍ಒ) ಸದ್ಯ ಸೇತುವೆ ಮರು ನಿರ್ಮಾಣದ ಕಾರ್ಯಕ್ಕೆ ಮುಂದಾಗಿದೆ. ಇತ್ತೀಚೆಗೆ ವಾಸ್ತವಿಕ ನಿಯಂತ್ರಣ ರೇಖೆ (ಎಲ್‍ಎಸಿ) ಬಳಿ ಭಾರೀ ವಾಹನಗಳನ್ನು ರಸ್ತೆ ನಿರ್ಮಾಣದ ಕಾಮಗಾರಿಗೆ ಸಾಗಿಸಲಾಗಿತ್ತು. ಮಿಲಾಮ್‍ನಿಂದ ಚೀನಾ ಗಡಿ ಪ್ರದೇಶವರೆಗೂ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.

  • ಜೀವನ್ಮರಣದ ನಡ್ವೆ ಒದ್ದಾಡ್ತಿದ್ದ ಯುವತಿಯನ್ನ ರಕ್ಷಿಸಿದ ಬಾಲಕಿ

    ಜೀವನ್ಮರಣದ ನಡ್ವೆ ಒದ್ದಾಡ್ತಿದ್ದ ಯುವತಿಯನ್ನ ರಕ್ಷಿಸಿದ ಬಾಲಕಿ

    – ಬಾಲಕಿ ಸಮಯಪ್ರಜ್ಞೆಗೆ ಭಾರೀ ಪ್ರಶಂಸೆ
    – ಸ್ಥಳೀಯರ ಕಾರ್ಯಕ್ಕೆ ಮೆಚ್ಚುಗೆ

    ಉಡುಪಿ: ಚಲಿಸುತ್ತಿದ್ದ ಕಾರು ಕೆರೆಗೆ ಬಿದ್ದು ಚಾಲಕ ಮೃತಪಟ್ಟು ಕಾರಿನಲ್ಲಿದ್ದ ಯುವತಿ ಸ್ಥಳೀಯರ ಸಮಯ ಪ್ರಜ್ಞೆಯಿಂದ ಬದುಕುಳಿದಿದ್ದಾಳೆ. ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕಿನ ಬಾರ್ಕೂರಲ್ಲಿ ಈ ಘಟನೆ ನಡೆದಿದೆ.

    ಬಾರ್ಕೂರಿನ ಚೌಳಿಕೆರೆಗೆ ಕಾರು ಉರುಳಿ ಉದ್ಯಮಿ ಸಂತೋಷ್ ಶೆಟ್ಟಿ ಎಂಬವರು ಸ್ಥಳದಲ್ಲೇ ಮೃತರಾಗಿದ್ದರು. ಕಾರಿನಲ್ಲಿ ಜೊತೆಗಿದ್ದ ಸಂಸ್ಥೆಯ ಉದ್ಯೋಗಿ ಶ್ವೇತಾ ಅಪಘಾತದಿಂದ ಪವಾಡ ಸದೃಶ ರೂಪದಲ್ಲಿ ಬಚಾವಾಗಿದ್ದು, ಯುವತಿ ಶ್ವೇತಾಳನ್ನು ಬದುಕಿಸಿದ ವೀಡಿಯೋ ಸಿಕ್ಕಿದೆ.

    ನೀರು ತುಂಬಿದ್ದ ಕೆರೆಗೆ ಕಾರು ಬಿದ್ದಾಗ ಇಬ್ಬರೂ ಮುಳುಗಿದ್ದರು. ಸಂತೋಷ್ ಸ್ಥಳದಲ್ಲೇ ಸತ್ತರೆ, ಯುವತಿ ಜೀವನ್ಮರಣದ ನಡುವೆ ಹೋರಾಟ ಮಾಡುತ್ತಿದ್ದಳು. ಈ ವೇಳೆ ಸ್ಥಳೀಯ ಬಾಲಕಿ ಸಮಯಪ್ರಜ್ಞೆಯಿಂದ ಶ್ವೇತಾ ಬದುಕಿ ಬಂದಿದ್ದಾಳೆ. ಜೀವನ್ಮರಣ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಯುವತಿ ಕೊನೆಗೂ ಬಚಾವಾಗಿದ್ದಾಳೆ. ಸಮಯ ಪ್ರಜ್ಞೆ ಮೆರೆದು ಯುವತಿಗೆ ಮರುಜೀವ ಕೊಟ್ಟ ಬಾಲಕಿಯ ಹೆಸರು ನಮನ. ಶ್ವೇತಾಳನ್ನು ಮೇಲಕ್ಕೆ ಎತ್ತಿದ ತಕ್ಷಣ ಎದೆಗೆ ಒತ್ತಡ ಹಾಕಿ ಚೇತರಿಸಿಕೊಳ್ಳುವಂತೆ ಮಾಡಿದ್ದಾಳೆ. ಪ್ರಾಥಮಿಕ ಚಿಕಿತ್ಸೆ ನೀಡಿ ಉಸಿರು ಮರಳುವಂತೆ ಮಾಡಿದ ಈಕೆ ಮತ್ತು ಸ್ಥಳೀಯ ಸಾಹಸ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

    ಘಟನೆ ವೇಳೆ ಸ್ಥಳೀಯರೊಬ್ಬರು ವಿಡಿಯೋ ಮಾಡಿದ್ದಾರೆ. ಈ ವೀಡಿಯೋ ಸದ್ಯ ಸಖತ್ ವೈರಲ್ ಆಗುತ್ತಿದೆ. ಈಕೆ ಲಿಟಲ್‍ರಾಕ್ ಶಾಲೆಯಲ್ಲಿ 10ನೇ ತರಗತಿ ಕಲಿಯುತ್ತಿದ್ದಾಳೆ. ಪ್ರಥಮ ಚಿಕಿತ್ಸೆ ಮೂಲಕ ದೇಹದಿಂದ ನೀರು ಹೊರ ಹಾಕಿದ ಬಳಿಕವೇ ಮಣಿಪಾಲ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಚಿಕಿತ್ಸೆ ನೀಡಿದ ವೈದ್ಯರೂ ನಮನಳ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರಥಮ ಚಿಕಿತ್ಸೆ ನೀಡಿದ್ದಲ್ಲದಿದ್ದರೆ ಜೀವಕ್ಕೇ ಅಪಾಯ ಇತ್ತು ಎಂದು ವೈದ್ಯರು ಹೇಳಿದ್ದಾರೆ.

    ವಿದ್ಯಾರ್ಥಿನಿ ನಮನ ಮಾತನಾಡಿ, ಮನೆಯಲ್ಲಿದ್ದಾಗ ಜೋರಾಗಿ ಶಬ್ದ ಕೇಳಿತು. ಸುತ್ತಮುತ್ತ ಇದ್ದ ಎಲ್ಲರೂ ಓಡಿ ಬಂದಿದ್ದಾರೆ. ಹಗ್ಗ ಕಟ್ಟಿ ಕೆಳಗೆ ಇಳಿಯಲಾಯ್ತು. ಮಹಿಳೆಯನ್ನು ಕೆರೆಯಿಂದ ಮೇಲಕ್ಕೆತ್ತಲಾಯ್ತು. ಚಾಲಕರು ಕಾರೊಳಗೆ ಸಿಲುಕಿದ್ದರು. ಹೊಟ್ಟೆಯಿಂದ ನೀರು ತೆಗೆದು, ಎದೆ ಒತ್ತಿ ಉಸಿರು ಬರುವಂತೆ ಮಾಡಿದೆವು. ಕೆರೆಗೆ ಆವರಣ ಗೋಡೆ ನಿರ್ಮಿಸಿದರೆ ಅವಘಡ ನಡೆಯುತ್ತಿರಲಿಲ್ಲ ಎಂದು ಹೇಳಿದ್ದಾಳೆ.

  • ಕೊರೊನಾ ಆತಂಕ- ಸಾಬೂನಿನಿಂದ ಕೊತ್ತಂಬರಿ ಸೊಪ್ಪು ತೊಳೆದ ಯುವತಿ

    ಕೊರೊನಾ ಆತಂಕ- ಸಾಬೂನಿನಿಂದ ಕೊತ್ತಂಬರಿ ಸೊಪ್ಪು ತೊಳೆದ ಯುವತಿ

    -ವಿಡಿಯೋ ವೈರಲ್, 4.6 ಕೋಟಿಗೂ ಅಧಿಕ ವ್ಯೂವ್

    ಬೆಂಗಳೂರು: ಕೊರೊನಾ ಜೊತೆಗೆ ಜೀವನ ಸಾಗುತ್ತಿದ್ದು, ಜನರು ಆರೋಗ್ಯದ ಹಿತದೃಷ್ಟಿಯಿಂದ ಮುನ್ನೆಚ್ಚರಿಕೆ ಕ್ರಮಗಳು ತೆಗೆದುಕೊಳ್ಳಬೇಕೆಂದು ಸರ್ಕಾರ ಸಲಹೆ ನೀಡುತ್ತಿದೆ. ಆದ್ರೆ ಯುವತಿ ಮಾರುಕಟ್ಟೆಯಿಂದ ತಂದ ಕೊತ್ತಂಬರಿ ಸೊಪ್ಪನ್ನು ಸಾಬೂನಿನಿಂದ ತೊಳೆದಿರುವ ವಿಡಿಯೋ ವೈರಲ್ ಆಗುತ್ತಿದೆ.

    ಮನೆಗೆ ತಂದ ತರಕಾರಿ, ಹಣ್ಣುಗಳನ್ನು ಉಪ್ಪಿನ ನೀರಿನಲ್ಲಿ ಅಥವಾ ಬಿಸಿ ನೀರಿನಲ್ಲಿ ತೊಳೆದ್ರೆ ಉತ್ತಮ ಎಂದು ಆರೋಗ್ಯಾಧಿಕಾರಿಗಳು ಸಲಹೆ ನೀಡಿದ್ದಾರೆ. ಹೊರಗಿನಿಂದ ಮನೆಗೆ ಬರೋ ಮುನ್ನ ಸ್ಯಾನಿಟೈಸ್ ಬಳಕೆ ಮಾಡಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಸರ್ಕಾರ ನಿರ್ದೇಶನ ನೀಡಿದೆ. ಈ ಯುವತಿ ಮಾತ್ರ ಮನೆಗೆ ತಂದ ಕೊತ್ತಂಬರಿ ಸೊಪ್ಪನ್ನು ಚೆನ್ನಾಗಿ ತೊಳೆದಿದ್ದಾಳೆ. ಸೊಪ್ಪು ತೊಳೆಯುವುದನ್ನ ಟಿಕ್‍ಟಾಕ್ ನಲ್ಲಿ ವಿಡಿಯೋ ಮಾಡಿ ಅಪ್ಲೋಡ್ ಮಾಡಿದ್ದಾಳೆ.

    @1993pikachu

    1st rank par agyi humari ye vedio 7 din huye upload kiya or 40million views and 1.6M likes..thank uh is vedio koi itna pyar dene ke #jabalpuriyamuser

    ♬ original sound – 𝔅𝔯𝔬𝔨𝔢𝔫 𝔖𝔬𝔲𝔩 💔….

    ಕೆಲವು ದಿನಗಳ ಹಿಂದೆ ವಿಡಿಯೋ ಶೇರ್ ಮಾಡಲಾಗಿದ್ದು, 46 ಮಿಲಿಯನ್(4.6 ಕೋಟಿ)ಗೂ ಅಧಿಕ ವ್ಯೂವ್ ಪಡೆದುಕೊಂಡಿದೆ. ಐದು ಸಾವಿರಕ್ಕೂ ಹೆಚ್ಚು ಕಮೆಂಟ್ ಗಳು ಬಂದಿವೆ. ಓರ್ವ ಬಳಕೆದಾರ, ನೀವು ಕೊತ್ತಂಬರಿ ಸೊಪ್ಪನ್ನು ವಾಷಿಂಗ್ ಮಷಿನ್ ನಲ್ಲಿ ಹಾಕಿ ತೊಳೆಯಿರಿ ಎಂದು ಉಚಿತ ಸಲಹೆ ನೀಡಿದ್ದಾನೆ. ಇನ್ನು ಕೆಲವರು ಹೀಗೆ ಫನ್ನಿ ಫನ್ನಿ ಕಮೆಂಟ್ ಮಾಡಿದ್ದಾರೆ. ಮತ್ತೋರ್ವ ಬಳಕೆದಾರ, ಈ ರೀತಿ ಸಾಬೂನಿನಿಂದ ತೊಳೆದ್ರೆ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿರುತ್ತೆ ಎಂದು ಎಚ್ಚರಿಸಿದ್ದಾರೆ.

  • ಕಿಮ್ಸ್ ಕರ್ಮಕಾಂಡ: ಸ್ಟ್ರೆಚರ್ ಇಲ್ಲದೇ ಮಗುವನ್ನು ಹೊತ್ತುಕೊಂಡು ಹೋದ ತಂದೆ!

    ಕಿಮ್ಸ್ ಕರ್ಮಕಾಂಡ: ಸ್ಟ್ರೆಚರ್ ಇಲ್ಲದೇ ಮಗುವನ್ನು ಹೊತ್ತುಕೊಂಡು ಹೋದ ತಂದೆ!

    ಹುಬ್ಬಳ್ಳಿ: ಅನಾರೋಗ್ಯದಿಂದ ಬಳಲುತ್ತಿದ್ದ ಮಗುವಿಗೆ ಆಕ್ಸಿಜನ್ ನೀಡಿದ್ದ ಸಂದರ್ಭದಲ್ಲಿ ಯಾವುದೇ ಸ್ಟ್ರೆಚರ್ ಸಹಾಯ ಇಲ್ಲದಿರುವುದರಿಂದ ತಂದೆಯೇ ಹೊತ್ತುಕೊಂಡು ಹೋಗಿರುವ ಘಟನೆಯೊಂದು ಹುಬ್ಬಳ್ಳಿ ಪ್ರತಿಷ್ಠಿತ ಕಿಮ್ಸ್ ಆಸ್ಪತ್ರೆಯ ಆವರಣದಲ್ಲಿ ನಡೆದಿದೆ. ಕಿಮ್ಸ್ ಸಿಬ್ಬಂದಿಗಳ ನಿಷ್ಕಾಳಜಿಯನ್ನು ಎತ್ತಿ ತೋರುವ ದೃಶ್ಯವೊಂದು ಸಾರ್ವಜನಿಕರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಾರ್ವಜನಿಕ ಸೇವೆಗೆ ಕೈ ಜೋಡಿಸಿದ್ದು, ನಿಜಕ್ಕೂ ವಿಶೇಷವಾಗಿದೆ. ಅಲ್ಲದೇ ಉತ್ತರ ಕರ್ನಾಟಕದ ಧನ್ವಂತರಿ ಎಂಬುವಂತ ಹೆಗ್ಗಳಿಕೆ ಪಾತ್ರವಾಗಿರುವ ಕಿಮ್ಸ್ ಮಹತ್ವದ ಪಾತ್ರ ನಿರ್ವಹಿಸುತ್ತಿದೆ. ಆದರೆ ಸಿಬ್ಬಂದಿಗಳ ನಿಷ್ಕಾಳಜಿಯಿಂದ ಕಿಮ್ಸ್ ಆಸ್ಪತ್ರೆಗೆ ಕಪ್ಪು ಚುಕ್ಕೆ ಇಟ್ಟಂತಾಗಿದೆ. ಇನ್ನೂ ಸಿಬ್ಬಂದಿಗಳು ಏನು ಗೊತ್ತಿರದ ಮಗುವಿನ ತಂದೆಯ ಕೈಯಲ್ಲಿ ಆಕ್ಸಿಜನ್ ಹಾಕಿದ್ದ ಮಗುವನ್ನು ಕೊಟ್ಟಿರುವುದು ಎಷ್ಟರ ಮಟ್ಟಿಗೆ ಸರಿ ಎಂಬುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.

    ಸಿಬ್ಬಂದಿಗಳ ವರ್ತನೆಯಿಂದ ಒಂದಿಲ್ಲೊಂದು ರೀತಿಯಲ್ಲಿ ಸುದ್ದಿಯಾಗುತ್ತಿದ್ದ ಕಿಮ್ಸ್ ಆಸ್ಪತ್ರೆ ಮತ್ತೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಮಗುವನ್ನು ಯಾವುದೇ ಸ್ಟ್ರೆಚರ್ ಸಿಗದ ಹಿನ್ನಲೆಯಲ್ಲಿ ತಂದೆಯೇ ಹೊತ್ತುಕೊಂಡು ಹೋಗಿ ಚಿಕಿತ್ಸೆ ಕೊಡಿಸುತ್ತಿರುವ ವಿಡಿಯೋ ಮನ ಕಲಕುವಂತಿದೆ. ಕೂಡಲೇ ಅಧಿಕಾರಿಗಳು ಹಾಗೂ ಕಿಮ್ಸ್ ನಿರ್ದೇಶಕರು ಎಚ್ಚೆತ್ತುಕೊಂಡ ಅವ್ಯವಸ್ಥೆ ಸರಿಪಡಿಸಬೇಕು ಎಂಬುವುದು ಸಾರ್ವಜನಿಕರ ಒತ್ತಾಸೆಯಾಗಿದೆ.

  • ತನ್ನ ಜೀವ ಪಣಕ್ಕಿಟ್ಟು ಪುಟ್ಟ ಮರಿಯನ್ನು ರಕ್ಷಿಸಿದ ತಾಯಿ ಕೋತಿ – ವಿಡಿಯೋ ವೈರಲ್

    ತನ್ನ ಜೀವ ಪಣಕ್ಕಿಟ್ಟು ಪುಟ್ಟ ಮರಿಯನ್ನು ರಕ್ಷಿಸಿದ ತಾಯಿ ಕೋತಿ – ವಿಡಿಯೋ ವೈರಲ್

    ನವದೆಹಲಿ: ತಾಯಿ ಪ್ರೀತಿಗೆ ಸಾಟಿಯಿಲ್ಲ, ತಾಯಿ ಎದುರು ಆ ದೇವರೇ ಸಲಾಂ ಹೊಡೆಯುತ್ತಾನೆ ಎಂಬ ಮಾತಿದೆ. ಮನುಷ್ಯರೇ ಆಗಲಿ, ಪ್ರಾಣಿಗಳೇ ಆಗಲಿ ತಾಯಿ ಮಮತೆ, ಪ್ರೀತಿ ಒಂದೆ. ಇದಕ್ಕೆ ಉದಾಹರಣೆ ಎನ್ನುವಂತೆ ಸಾಮಾಜಿಕ ಜಾಲತಾಣಗಳಲ್ಲಿ ತಾಯಿ ಕೋತಿ ತನ್ನ ಮರಿಯನ್ನು ರಕ್ಷಣೆ ಮಾಡಿರುವ ವಿಡಿಯೋವೊಂದು ಸಖತ್ ವೈರಲ್ ಆಗಿದ್ದು, ತನ್ನ ಪ್ರಣವನ್ನು ಲೆಕ್ಕಿಸದೆ ತಾಯಿ ಕೋತಿ ತನ್ನ ಪುಟ್ಟ ಮರಿಯ ಜೀವ ಉಳಿಸಿದ ದೃಶ್ಯ ನೆಟ್ಟಿಗರ ಮನ ಮುಟ್ಟಿದೆ.

    ವೈರಲ್ ವಿಡಿಯೋದಲ್ಲಿ ಕೋತಿಯೊಂದು ತನ್ನ ಕಂದನನ್ನು ಪ್ರಾಣದ ಹಂಗು ತೊರೆದು ರಕ್ಷಿಸಿದ ದೃಶ್ಯ ಸೆರೆಯಾಗಿದೆ. ಕಟ್ಟಡದಿಂದ ಮತ್ತೊಂದು ಕಟ್ಟಡಕ್ಕೆ ಹಾರುವಾಗ ವಿದ್ಯುತ್ ತಂತಿಯ ಮಧ್ಯದಲ್ಲಿ ಸಿಲುಕಿ, ಜೀವ ಉಳಿಸಿಕೊಳ್ಳಲು ಒದ್ದಾಡುತ್ತಿದ್ದ ಪುಟ್ಟ ಮರಿಯನ್ನು ತಾಯಿ ಕೋತಿ ತನ್ನ ಜೀವ ಪಣಕ್ಕಿಟ್ಟು ರಕ್ಷಿಸಿರುವ ದೃಶ್ಯ ನೋಡಿ ನೆಟ್ಟಿಗರು ಮನಸೋತಿದ್ದಾರೆ.

    ತನ್ನ ಜೀವವನ್ನು ಲೆಕ್ಕಿಸದೆ ಮರಿಗಾಗಿ ತಾಯಿ ಕೋತಿ ಕಟ್ಟದದಿಂದ ವಿದ್ಯುತ್ ತಂತಿಯ ಮೇಲೆ ಹಾರಿ, ತನ್ನ ಕರುಳ ಕುಡಿಯನ್ನು ರಕ್ಷಿಸಿರುವುದು ತಾಯಿಯ ನಿಸ್ವಾರ್ಥ ಪ್ರೀತಿ ಏನು ಎಂಬುದನ್ನು ತಿಳಿಸುತ್ತೆ ಎಂದು ನೆಟ್ಟಿಗರು ಈ ದೃಶ್ಯವನ್ನು ವರ್ಣಿಸಿದ್ದಾರೆ.

    ಈ ಹೃದಯಸ್ಪರ್ಶಿ ವಿಡಿಯೋವನ್ನು ಅರಣ್ಯ ಅಧಿಕಾರಿ ಪ್ರವೀಣ್ ಕಾಸ್ವಾನ್ ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದು ತಾಯಿ ನಡೆಸಿದ ರಕ್ಷಣಾ ಕಾರ್ಯಾಚರಣೆ, ವಿಫಲವಾಗಲು ಸಾಧ್ಯವೆ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ತಾಯಿ ಪ್ರೀತಿಗೆ, ದಿಟ್ಟತನಕ್ಕೆ ಸಲಾಂ ಎಂದಿದ್ದಾರೆ.