Tag: viral video

  • ಪಂದ್ಯಕ್ಕೂ ಮುನ್ನ ಮೈದಾನದಲ್ಲಿ ಕೊಹ್ಲಿ ಡ್ಯಾನ್ಸ್‌

    ಪಂದ್ಯಕ್ಕೂ ಮುನ್ನ ಮೈದಾನದಲ್ಲಿ ಕೊಹ್ಲಿ ಡ್ಯಾನ್ಸ್‌

    ಶಾರ್ಜಾ: ಕಿಂಗ್ಸ್‌ ಇಲೆವನ್‌ ಪಂಜಾಬ್‌ ವಿರುದ್ಧದ ಪಂದ್ಯ ನಡೆಯುವುದಕ್ಕೆ ಮುನ್ನ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ನಾಯಕ ವಿರಾಟ್‌ ಕೊಹ್ಲಿ ಮೈದಾನದಲ್ಲಿ ನಡೆಸಿದ ದೈಹಿಕ ಕಸರತ್ತಿನ ವಿಡಿಯೋ ಈಗ ವೈರಲ್‌ ಆಗಿದೆ.

    ಮೈದಾನದಲ್ಲಿ ಸಹ ಆಟಗಾರರ ಜೊತೆ ಕೊಹ್ಲಿ ವ್ಯಾಯಾಮ ಮಾಡುತ್ತಿದ್ದರು. ಆದರೆ ಈ ವೇಳೆ ಕೊಹ್ಲಿ ಡ್ಯಾನ್ಸ್‌ ಮಾಡುತ್ತಾ ವ್ಯಾಯಾಮ ಮಾಡಿದ್ದಾರೆ. ಒಮ್ಮೆ ಕುಳಿತುಕೊಂಡೇ ಕೈಯನ್ನು ಅಲ್ಲಡಿಸುತ್ತಾ ನೃತ್ಯ ಮಾಡಿದರೆ ಮತ್ತೊಮ್ಮೆ ಬೆನ್ನನ್ನು ನೆಲಕ್ಕೆ ಹಾಕುತ್ತಾ ನೃತ್ಯ ಮಾಡಿದ್ದಾರೆ.

    https://twitter.com/LogicalBakwaas/status/1316732878714142721

    ವ್ಯಾಯಾಮದ ವೇಳೆ ಕೊಹ್ಲಿ ಬಹಳ ಸಂಭ್ರಮದಲ್ಲಿರುವ ವಿಡಿಯೋ ನೆಟ್ಟಿಗರ ಮನ ಗೆದ್ದಿದ್ದು ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ವಿಡಿಯೋ ಶೇರ್‌ ಮಾಡುತ್ತಿದ್ದಾರೆ. ಇದನ್ನೂ ಓದಿ: ಅಫ್ರಿದಿಗೆ ಸಹಾಯ, ಧೋನಿಗೆ ವ್ಯಂಗ್ಯ- ಬಜ್ಜಿ ವಿರುದ್ಧ ಧೋನಿ ಫ್ಯಾನ್ಸ್ ಫೈರ್

    ಇಂದು ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಬೆಂಗಳೂರು 20 ಓವರ್‌ಗಳಿಗೆ 6 ವಿಕೆಟ್‌ ನಷ್ಟಕ್ಕೆ 171 ರನ್‌ ಗಳಿಸಿದೆ. ವಿರಾಟ್‌ ಕೊಹ್ಲಿ 48 ರನ್‌(39 ಎಸೆತ, 3 ಬೌಂಡರಿ) ಹೊಡೆದು ಔಟಾದರು.

    17.5 ಓವರ್‌ಗಳಲ್ಲಿ ತಂಡದ ಮೊತ್ತ136 ಆಗಿದ್ದಾಗ ಕೊಹ್ಲಿ 6ನೇಯವರಾಗಿ ಔಟಾದರು. ನಂತರ ಕ್ರಿಸ್‌ ಮೋರಿಸ್‌ ಮತ್ತು ಉದಾನಾ ಅವರು 13 ಎಸೆತಗಳಲ್ಲಿ 35 ರನ್‌ ಹೊಡೆದರು. ಕ್ರೀಸ್‌ ಮೋರಿಸ್‌ 25 ರನ್‌(8 ಎಸೆತ, 1 ಬೌಂಡರಿ, 3 ಸಿಕ್ಸರ್‌) ಉದಾನಾ 10 ರನ್‌(5 ಎಸೆತ, 1 ಸಿಕ್ಸರ್‌) ಹೊಡೆದು ಅಜೇಯರಾಗಿ ಉಳಿದರು.

  • ಜೆಸಿಬಿ ಬಕೆಟ್‍ನಲ್ಲಿ ಬೆನ್ನು ಉಜ್ಜಿಕೊಂಡ ವ್ಯಕ್ತಿಯ ವೀಡಿಯೋ ವೈರಲ್

    ಜೆಸಿಬಿ ಬಕೆಟ್‍ನಲ್ಲಿ ಬೆನ್ನು ಉಜ್ಜಿಕೊಂಡ ವ್ಯಕ್ತಿಯ ವೀಡಿಯೋ ವೈರಲ್

    – ಬೆನ್ನು ತುರಿಸುತ್ತೆ ಅಂತ ಬೆಕಟ್ ಮುಂದೆ ಬಾಗಿ ನಿಂತ

    ಸಾಮಾನ್ಯವಾಗಿ ಜೆಸಿಬಿಯನ್ನು ಮಣ್ಣು ಅಗೆಯಲು ಬಳಸುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಇದೇ ಜೆಸಿಬಿಯಲ್ಲಿ ತನ್ನ ಬೆನ್ನು ಉಜ್ಜಿಕೊಳ್ಳುವ ಮೂಲಕ ವ್ಯಕ್ತಿಯೊಬ್ಬರು ಭಾರೀ ಸುದ್ದಿಯಾಗಿದ್ದಾರೆ.

    ಹೌದು. ಈ ವಿಚಾರ ನಿಮಗೆ ಅಚ್ಚರಿ ಎನಿಸಿದರೂ ಸತ್ಯ. ಯಾಕಂದ್ರೆ ಇದಕ್ಕೆ ಸಾಕ್ಷಿ ಎಂಬಂತೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಕೂಡ ವೈರಲ್ ಆಗುತ್ತಿದೆ. 41 ಸೆಕೆಂಡಿನ ವೀಡಿಯೋವನನ್ನು ಅಬ್ದುಲ್ ನಝಾರ್ ಎಂಬವರು ತಮ್ಮ ಫೇಸ್‍ಬುಕ್ ಖಾತೆಯಿಂದ ಶೇರ್ ಮಾಡಿಕೊಂಡಿದ್ದಾರೆ. ಈ ವೀಡಿಯೋ ನೋಡಿದ ನೆಟ್ಟಿಗರು ನಗೆಗಡಲಲ್ಲಿ ತೇಲಿದ್ದಾರೆ. ಅಲ್ಲದೆ ಸಾಕಷ್ಟು ತಮಾಷೆಯ ಕಾಮೆಂಟ್‍ಗಳು ಬಂದಿವೆ.

    ವೀಡಿಯೋದಲ್ಲಿ ಕನ್ಸ್ಟ್ರಕ್ಷನ್ ನಡೆಯೋ ಸ್ಥಳದಲ್ಲಿರುವ ವ್ಯಕ್ತಿ ಮೊದಲು ತನ್ನ ಟವಲ್ ನಿಂದ ಬೆನ್ನು ಉಜ್ಜಿಕೊಂಡಿದ್ದಾರೆ. ಆದರೆ ಅದರಿಂದ ಅವರಿಗೆ ತೃಪ್ತಿ ಸಿಕ್ಕಿಲ್ಲ. ಹೀಗಾಗಿ ಜೆಸಿಬಿ ಬಳಿ ಹೋಗಿ ಅದರ ಬಕೆಟ್ ಮುಂದೆ ಬಾಗಿ ನಿಲ್ಲುತ್ತಾರೆ. ಈ ವೇಳೆ ಜೆಸಿಬಿ ಚಾಲಕ ಅದರ ಬಕೆಟ್‍ನಿಂದ ವ್ಯಕ್ತಿಯ ಬೆನ್ನನ್ನು ಉಜ್ಜುತ್ತಾರೆ. ಇದರಿಂದ ವ್ಯಕ್ತಿಗೆ ಸಮಾಧಾನವಾದಂತೆ ತೋರುತ್ತಿದೆ. ಆದರೆ ಈ ಘಟನೆ ಎಲಿ ನಡೆದಿದೆ ಎಂಬುದ ಬಗ್ಗೆ ಮಾಹಿತಿ ಇಲ್ಲ.

    ಈ ಎಲ್ಲಾ ದೃಶ್ಯಗಳನ್ನು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದ್ದು, ವ್ಯಕ್ತಿಯ ಈ ಕೆಲಸಕ್ಕೆ ನೆಟ್ಟಿಗರು ಇದೊಂದು ಬೇಜವಾಬ್ದಾರಿತನ ಎಂದು ಕಿಡಿಕಾರಿದ್ದಾರೆ. ವೀಡಿಯೋ ಫೇಸ್‍ಬುಕ್ ನಲ್ಲಿ ಶೇರ್ ಆಗುತ್ತಿದ್ದಂತೆಯೇ ಇದುವರೆಗೆ ಸುಮಾರು 3.4 ಸಾವಿರಕ್ಕೂ ಅಧಿಕ ಬಾರಿ ವೀಕ್ಷಣೆ ಆಗಿದೆ. ಅಲ್ಲದೆ 2.3 ಸಾವಿರಕ್ಕೂ ಹೆಚ್ಚು ಮಂದಿ ಶೇರ್ ಮಾಡಿದ್ದಾರೆ.

    ಈ ಹಿಂದೆ ಅಂದರೆ ಕಳೆದ ಜುಲೈ ತಿಂಗಳಲ್ಲಿ ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಪ್ರಶ್ನೆ ಮಾಡಿದನೆಂದು ಸಿಟ್ಟುಗೊಂಡ ಚಾಲಕನ ಜೆಸಿಬಿ ಬಕೆಟ್ ನಿಂದ ಆತನ ತಲೆಗೆ ಬಡದ ಘಟನೆಯೊಂದು ನಡೆದಿತ್ತು. ಪರಿನಾಂ ವ್ಯಕ್ತಿಯ ತಲೆಗೆ ಗಾಯಗಳಾಗಿತ್ತು. ಈ ಸಂಬಂಧ ಜೆಸಿಬಿ ಡ್ರೈವರ್ ವಿರುದ್ಧ ಎಫ್‍ಐಆರ್ ದಾಖಲಾಗಿತ್ತು. ಇದನ್ನೂ ಓದಿ: ವಿಡಿಯೋ: ಕುಡಿದ ಮತ್ತಿನಲ್ಲಿ ಪ್ರಶ್ನೆ ಮಾಡಿದ್ದಕ್ಕೆ ಜೆಸಿಬಿ ಬಕೆಟ್‍ನಿಂದ ತಲೆಗೆ ಬಡಿದ!

  • ಸೈಕಲ್ ಚಲಾಯಿಸ್ತಾ ಆಗುತ್ತೆ ಗೋಧಿ ಹಿಟ್ಟು- ವೈರಲ್ ವಿಡಿಯೋ

    ಸೈಕಲ್ ಚಲಾಯಿಸ್ತಾ ಆಗುತ್ತೆ ಗೋಧಿ ಹಿಟ್ಟು- ವೈರಲ್ ವಿಡಿಯೋ

    ಬೆಂಗಳೂರು: ಜಿಮ್ ಸೈಕಲ್ ಚಲಾಯಿಸುತ್ತಾ ಹಿಟ್ಟು ಮಾಡುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಐಎಎಸ್ ಅಧಿಕಾರಿ ಅವನೀಶ್ ಶರಣ್ ವಿಡಿಯೋವನ್ನ ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿಕೊಂಡು ತಂತ್ರಜ್ಞಾನಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

    ವಿಡಿಯೋದಲ್ಲಿ ಏನಿದೆ?: ಮಹಿಳೆಯೊಬ್ಬರು ಜಿಮ್ ಸೈಕಲ್ ತುಳಿಯುತ್ತಾ ಇದ್ರೆ ಮುಂದೆ ಗೋಧಿ ಹಿಟ್ಟು ಬರುತ್ತದೆ. ಜಿಮ್ ಸೈಕಲ್ ಮಾಡಿಫೈ ಮಾಡಲಾಗಿದ್ದು, ಮೇಲ್ಭಾಗದಲ್ಲಿ ಗೋಧಿ ಹಾಕಲು ಸ್ಥಳ ಮಾಡಲಾಗಿದೆ. ಸೈಕಲ್ ತುಳಿದಂತೆ ಅದಕ್ಕೆ ಅಳವಡಿಸಲಾಗಿರುವ ಯಂತ್ರ ಸಹ ಕೆಲಸ ಮಾಡಲಾರಂಭಿಸುತ್ತದೆ. ನಿಧಾನವಾಗಿ ಸೈಕ್ಲಿಂಗ್ ಮಾಡುತ್ತಾ ಹೋದಂತೆ ನಿಮಗೆ ಮುಂಭಾಗದಲ್ಲಿರಿಸಿದ ಡಬ್ಬದಲ್ಲಿ ನಿಮಗೆ ಹಿಟ್ಟು ಸಿಗುತ್ತದೆ.

    https://twitter.com/AwanishSharan/status/1299658946332864513

    ಸಾಮಾನ್ಯ ಮಹಿಳೆ ಸಹ ಸೈಕಲ್ ತುಳಿಯಬಹುದಾಗಿದೆ. ಹಾಗಾಗಿ ಸೈಕಲ್ ತುಳಿಯುವದರಿಂದ ವ್ಯಾಯಾವದ ಜೊತೆಗೆ ಅಡುಗೆಗೆ ಬೇಕಾದ ಹಿಟ್ಟು ಸಹ ಸಿಗುತ್ತದೆ ಎಂದು ವಿಡಿಯೋದಲ್ಲಿ ಮಹಿಳೆ ಹೇಳುವುದನ್ನ ಕೇಳಬಹುದು. ಆದ್ರೆ ಈ ವಿಡಿಯೋ ಎಲ್ಲಿಯದ್ದು ಎಂಬುದರ ಬಗ್ಗೆ ತಿಳಿದು ಬಂದಿಲ್ಲ. ವಿಡಿಯೋಗೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ.

  • ಮಾಸ್ಕ್ ಹಾಕಿಲ್ಲ ಯಾಕೆ? ಯುವಕರಿಂದ ಲಂಚ ಪಡೆದ ಪೇದೆ

    ಮಾಸ್ಕ್ ಹಾಕಿಲ್ಲ ಯಾಕೆ? ಯುವಕರಿಂದ ಲಂಚ ಪಡೆದ ಪೇದೆ

    -ಕೈಯಲ್ಲಿ ಲಂಚದ ಹಣ ಮುಟ್ಟದ ಪೊಲೀಸಪ್ಪ
    -ಲಂಚ ಪಡೆಯಲು ಪೇದೆಯ ಸೂಪರ್ ಪ್ಲ್ಯಾನ್
    -ಪೊಲೀಸಪ್ಪನ ಕಳ್ಳಾಟ ಕ್ಯಾಮೆರಾದಲ್ಲಿ ಸೆರೆ

    ಲಕ್ನೋ: ಮಾಸ್ಕ್ ಹಾಕದ ಯುವಕರಿಂದ ಪೊಲೀಸ್ ಪೇದೆ ಲಂಚ ಪಡೆದಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ಹರ್ದೌಯಿ ಜಿಲ್ಲೆಯಲ್ಲಿ ಪೇದೆಯೋರ್ವ ಅತ್ಯಂತ ಚಾಣಕ್ಷತನದಿಂದ ಲಂಚ ಪಡೆದಿರುವ ವಿಡಿಯೋ ಸಾರ್ವಜನಿಕರ ಮೊಬೈಲಿನಲ್ಲಿ ಸೆರೆಯಾಗಿದೆ. ಪೇದೆಗೆ ಅಲ್ಲಿಯ ಟ್ರಾಫಿಕ್ ಪೊಲೀಸ್ ಸಹ ಸಾಥ್ ನೀಡಿದ್ದಾರೆ ಎನ್ನಲಾಗಿದೆ. ವಿಡಿಯೋ ನೋಡಿದ ನೆಟ್ಟಿಗರು ಪೊಲೀಸರ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ. ಸೋಮವಾರ ಘಟನೆ ನಡೆದಿದ್ದು, ಮಂಗಳವಾರ ಪೊಲೀಸಪ್ಪ ಲಂಚದ ಕಳ್ಳಾಟ ಬಯಲಾಗಿದೆ.

    ವಿಡಿಯೋದಲ್ಲಿ ಏನಿದೆ?: ಮಾಸ್ಕ್ ಧರಿಸದ ಇಬ್ಬರು ಯುವಕರನ್ನ ಪೇದೆ ತಡೆದಿದ್ದಾನೆ. ಕೊರೊನಾ ನಿಯಮ ಪಾಲಿಸದಕ್ಕೆ ದಂಡ ಹಾಕೋದಾಗಿ ಬೆದರಿಕೆ ಹಾಕಿದ್ದಾರೆ. ನಂತರ ನಿಧಾನವಾಗಿ ತನ್ನ ಕೈಯಲ್ಲಿ ಡೈರಿಯೊಂದನ್ನ ಬೈಕ್ ಮೇಲಿಟ್ಟು ಪೇದೆ ಸ್ವಲ್ಪ ಮುಂದೆ ಹೋಗುತ್ತಾನೆ. ಯುವಕರಿಬ್ಬರು ಹಣವನ್ನ ಪೇದೆಯ ಡೈರಿಯಲ್ಲಿಟ್ಟು ತೆರಳುತ್ತಾರೆ. ಯುವಕರು ಹೋದ ನಂತರ ಪೇದೆ ಡೈರಿಯನ್ನ ಎತ್ತಿಕೊಂಡು ಹೋಗಿದ್ದಾನೆ.

    ವಿಡಿಯೋ ವೈರಲ್ ಬಳಿಕ ಪ್ರತಿಕ್ರಿಯಿಸಿರುವ ಎಸ್‍ಎಸ್‍ಪಿ, ಪೊಲೀಸರು ಲಂಚ ಪಡೆಯುವ ಬಗ್ಗೆ ಸಾರ್ವಜನಿಕರಿಂದ ದೂರುಗಳ ಬಂದಿವೆ. ವೈರಲ್ ಆಗಿರುವ ವಿಡಿಯೋ ಸಹ ನಮ್ಮ ಗಮನಕ್ಕೆ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.

    ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಸರ್ಕಾರ ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯ ಮಾಸ್ಕ್ ಧರಿಸಿವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎಂದು ಹೇಳುತ್ತಿದೆ. ಕೊರೊನಾ ನಿಯಮಗಳ ಪಾಲನೆ ಮಾಡದಿದ್ದಲ್ಲಿ ದಂಡ ವಿಧಿಸಲಾಗುವುದು ಎಂದು ಸಾರ್ವಜನಿಕರಿಗೆ ಎಚ್ಚರಿಕೆ ಸಹ ನೀಡಿದೆ. ಆದ್ರೆ ಇದೇ ಆದೇಶವನ್ನ ಕೆಲ ಪೊಲೀಸರು ಬಂಡವಾಳ ಮಾಡಿಕೊಂಡು ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದಾರೆ. ಅಂತಹವುದು ಒಂದು ಘಟನೆ ಉತ್ತರ ಪ್ರದೇಶದ ಹರ್ದೌಯಿ ಜಿಲ್ಲೆಯಲ್ಲಿ ನಡೆದಿದೆ.

  • ಗುಲಾಬಿ ಮೇಲೆ ನೀಲಿ ಬಣ್ಣದ ಹಾವು – ವಿಡಿಯೋ ವೈರಲ್

    ಗುಲಾಬಿ ಮೇಲೆ ನೀಲಿ ಬಣ್ಣದ ಹಾವು – ವಿಡಿಯೋ ವೈರಲ್

    -ಹಾವಿನ ಡೆಡ್ಲಿ ಸೈಲೆಂಟ್ ಚಲನೆ
    -ಸುಂದರತೆ ಮೇಲೆ ವಿಷದ ಜಾಲ ಎಂದ ನೆಟ್ಟಿಗರು

    ಗುಲಾಬಿ ಹೂವಿನ ಮೇಲೆ ನೀಲಿ ಬಣ್ಣದ ಹಾವು ಕುಳಿತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ.

    ಸಾಮಾನ್ಯವಾಗಿ ಈ ರೀತಿಯ ಹಾವುಗಳನ್ನು ಪ್ರಾಣಿ ಸಂಗ್ರಾಹಲಗಳಲ್ಲಿ ನೋಡಿರುತ್ತೀರಿ. ಆದ್ರೆ ಗುಲಾಬಿ ಮೇಲೆ ಕುಳಿತ ಈ ವಿಡಿಯೋ ನೋಡಗರ ಎದೆಯನ್ನ ಒಮ್ಮೆ ಝಲ್ ಅನ್ನುವಂತೆ ಮಾಡುತ್ತದೆ. ಲೈಫ್ ಆನ್ ಅರ್ಥ್ ಟ್ವಿಟ್ಟರ್ ಖಾತೆಯಲ್ಲಿ ಸೆಪ್ಟೆಂಬರ್ 17ರಂದು ವಿಡಿಯೋ ಅಪ್ಲೋಡ್ ಮಾಡಲಾಗಿದೆ. ಇದುವರೆಗೂ 94 ಸಾವಿರಕ್ಕೂ ಅಧಿಕ ಬಾರಿ ವೀಕ್ಷಣೆಯಾಗಿದ್ದು, ಮೂರು ಸಾವಿರಕ್ಕೂ ಹೆಚ್ಚು ರಿಟ್ವೀಟ್ ಆಗಿದೆ. ಏಳು ಸಾವಿರಕ್ಕೂ ಅಧಿಕ ಲೈಕ್ಸ್ ಪಡೆದಿಕೊಂಡಿದೆ.

    12 ಸೆಕೆಂಡ್ ವಿಡಿಯೋದಲ್ಲಿ ಗುಲಾಬಿ ಮೇಲೆ ಅಲುಗಾಡದೇ ನೀಲಿ ಹಾವು ಕುಳಿತಿರುವುದು ನೋಡಬಹುದು. ಗುಲಾಬಿ ಗಿಡದ ಕೆಳಭಾಗದಲ್ಲಿ ಅಲ್ಲಡಿಸಿದಾಗ ಹಾವು ತನ್ನ ನಾಲಗೆ ಹೊರ ತೆಗೆದು ಬುಸುಗುಟ್ಟಾಗ ಎದೆ ಝಲ್ ಅನ್ನಿಸುತ್ತೆ. ಆದ್ರೆ ಈ ವಿಡಿಯೋ ಎಲ್ಲಿ ಸೆರೆ ಹಿಡಿಯಲಾಗಿದೆ ಎಂಬುದರ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ. ಈ ಹಾವು ಅತ್ಯಂತ ವಿಷಕಾರಿಯಾಗಿದ್ದು, ಅದರ ಬಳಿ ಹತ್ತಿರ ಹೋಗುವುದು ಸಾವಿಗೆ ಆಹ್ವಾನ ನೀಡಿದಂತೆ ಎಂದು ನೆಟ್ಟಿಗರು ಹೇಳಿದ್ದಾರೆ.

    https://twitter.com/planetpng/status/1306620212045844482

    12 ಸೆಕೆಂಡ್ ವಿಡಿಯೋ ರಿಟ್ವೀಟ್ ಮಾಡಿಕೊಂಡಿರುವ ನೆಟ್ಟಿಗರು, ಸುಂದರತೆಯ ಮೇಲೆ ವಿಷದ ಜಾಲವಿದೆ ಎಂದು ಬರೆದುಕೊಂಡಿದ್ದಾರೆ. ಕೆಲವರು ಅಪರೂಪದ ವಿಡಿಯೋ, ಹಾವು ತುಂಬಾನೇ ಅಪಾಯ ಎಂದು ಕಮೆಂಟ್ ಮಾಡಿದ್ದಾರೆ.

  • ವಿಡಿಯೋ: ವಾಟರ್ ಜಗ್‍ನೊಳಗೆ ಕೈ ಹಾಕಿ ಪೋಷಕರಿಗೆ ಚಮಕ್ ಕೊಟ್ಟ ಕಂದಮ್ಮ

    ವಿಡಿಯೋ: ವಾಟರ್ ಜಗ್‍ನೊಳಗೆ ಕೈ ಹಾಕಿ ಪೋಷಕರಿಗೆ ಚಮಕ್ ಕೊಟ್ಟ ಕಂದಮ್ಮ

    – ಬಾಲಕಿಯ ನಟನಾ ಕೌಶಲ್ಯಕ್ಕೆ ನೆಟ್ಟಿಗರು ಫಿದಾ

    ಪುಟ್ಟ ಮಕ್ಕಳು ಏನೇ ಮಾಡಿದ್ರೂ ನೋಡೋಕೆ ಚಂದ. ಅವರು ಆಡುವ ತುಂಟಾಟ, ನಗು, ಅಳು, ಕೋಪ ಹೀಗೆ ಎಲ್ಲವೂ ಮನಸ್ಸಿಗೆ ಮುದ ನೀಡುತ್ತವೆ. ಮನೆಯಲ್ಲೊಂದು ಮಗು ಇದ್ದರೆ ನಾವು ಎಂತದ್ದೇ ಪರಿಸ್ಥಿತಿಯಲ್ಲಿದ್ದರೂ ಒಂದು ಬಾರಿ ಮನಸ್ಸು ನಿರಾಳ ಎನಿಸುವುದು ಸಹಜ. ಹೀಗೆ ಇಲ್ಲೊಂದು ಪುಟ್ಟ ಮಗು ತನ್ನ ಮನೆಯವರನ್ನು ಪ್ರ್ಯಾಂಕ್ ಮಾಡಿದ ಘಟನೆ ನಡೆದಿದೆ.

    ಹೌದು. ಪುಟ್ಟ ಬಾಲಕಿಯೊಬ್ಬಳು ನೀರಿನ ಜಗ್ ಒಳಗೆ ಕೈ ಹಾಕಿ ಅಳಲು ಶುರು ಮಾಡಿದ್ದಾಳೆ. ಕೂಡಲೇ ಆಕೆಯ ಪೋಷಕರು ಬಂದು ಜಗ್ ಒಳಗಿಂದ ಕೈ ತೆಗೆದಿದ್ದಾರೆ. ಈ ವೇಳೆ ಬಾಲಕಿ ನಗುತ್ತಾ ಮತ್ತೆ ಅದೇ ರೀತಿ ಮಾಡಲು ಮುಂದಾಗುತ್ತಾಳೆ. ಈಕೆಯ ಕುಚೇಷ್ಟೆಯಿಂದ ಸುಸ್ತಾದ ಮನೆಯವರು ನೀರಿನ ಜಗ ಇಡುವ ಜಾಗವನ್ನು ಬದಲಾಯಿಸುತ್ತಾರೆ. ಪುಟ್ಟ ಕಂದಮ್ಮಳ ಈ ಕುಚೇಷ್ಟೆಯನ್ನು ಮನೆಯವರು ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ಈ ವಿಡಿಯೋವನ್ನು ಬ್ಯಾಕ್ ಟು ನೇಚರ್ ಎಂಬ ಟ್ವಿಟ್ಟರ್ ಅಕೌಂಟ್ ಅಪ್ಲೋಡ್ ಮಾಡಿದೆ. 16 ಸೆಕೆಂಡಿನ ಈ ವಿಡಿಯೋ ಇದೂವರೆಗೂ ಸುಮಾರು 20 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆಯಾಗಿದೆ. ಅಲ್ಲದೆ ಸಾಕಷ್ಟು ಕಾಮೆಂಟ್ ಗಳು ಬಂದಿದ್ದು, ಪುಟ್ಟ ಬಾಲಕಿಯ ಕುಚೇಷ್ಟೆಗೆ ನೆಟ್ಟಿಗೆ ಮಾರು ಹೋಗಿದ್ದಾರೆ.

    ಈ ಘಟನೆ ಎಲ್ಲಿ ನಡೆದಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಪುಟ್ಟ ಹುಡುಗಿಯ ನಟನಾ ಕೌಶಲ್ಯಕ್ಕೆ ಫಿದಾ ಆಗಿರುವ ಟ್ವಿಟ್ಟರ್ ಬಳಕೆದಾರರು, ತುಂಬಾ ತಮಾಷೆಯಾಗಿದೆ. ಆದರೂ ಉತ್ತಮ ನಟನೆ ಎಂದು ಒಬ್ಬರು ಬರೆದುಕೊಂಡಿದ್ದಾರೆ. ಹೀಗೆ ಹಲವಾರು ಕಾಮೆಂಟ್ ಗಳು ಬಂದಿವೆ.

    https://twitter.com/backt0nature/status/1306005877602889728

  • ಹಾವು ಹಿಡಿದ ಸೀರೆ ತೊಟ್ಟ ಕನ್ನಡತಿ -ವೈರಲ್ ಆಯ್ತು ವಿಡಿಯೋ

    ಹಾವು ಹಿಡಿದ ಸೀರೆ ತೊಟ್ಟ ಕನ್ನಡತಿ -ವೈರಲ್ ಆಯ್ತು ವಿಡಿಯೋ

    -ಮೂಲೆಯಲ್ಲಿ ಹೆಡೆ ಬಿಚ್ಚಿ ಬುಸುಗುಡುತ್ತಿದ್ದ ನಾಗರಾಜ

    ನವದೆಹಲಿ: ಸೀರೆ ತೊಟ್ಟ ಮಹಿಳೆ ಹಾವು ಹಿಡಿದಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಮಹಿಳೆಯ ಧೈರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಕರ್ನಾಟಕ ಮೂಲದ ನಿರ್ಜರಾ ಚಿಟ್ಟಿ ಹಾವು ಹಿಡಿದ ಮಹಿಳೆ. ನಿರ್ಜರಾ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ರೆಡಿಯಾಗಿದ್ದರು. ಈ ವೇಳೆ ಮನೆಯಲ್ಲಿ ಹಾವು ಬಂದಿರುವ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದ್ದಾರೆ. ಬಟ್ಟೆ ಬದಲಿಸಿಕೊಳ್ಳದೇ ಸೀರೆಯಲ್ಲಿಯೇ ಬಂದು ಯಾವುದೇ ಮುಂಜಾಗ್ರತ ಉಪಕರಣಗಳಿಲ್ಲದೇ ಬರಿಗೈಯಲ್ಲಿ ಹಾವನ್ನ ಹಿಡಿದು ಮನೆಯ ಸದಸ್ಯರ ಆತಂಕವನ್ನ ದೂರ ಮಾಡಿದ್ದಾರೆ.

    https://twitter.com/DoctorAjayita/status/1304779562945933313

    12 ಸೆಕೆಂಡ್ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಮೂಲೆಯಲ್ಲಿ ಹಡೆ ಬಿಚ್ಚಿ ಬುಸುಗುಡುತ್ತಿದ್ದ ನಾಗಪ್ಪನನ್ನು ನಿರ್ಜರಾ ರಕ್ಷಿಸಿದ್ದಾರೆ. ಸೀರೆ ಧರಿಸಿದ ಪರಿಣಾಮ ಹಾವು ಹಿಡಿಯಲು ಕಷ್ಟವಾಗುತ್ತಿದೆ. ಬಟ್ಟೆ ಬದಲಿಸಿ ಬರೋಷ್ಟರಲ್ಲಿ ಹಾವು ಅಪಾಯ ಮಾಡಿದ್ರೆ ಹೇಗೆ ಎಂದು ಬಂದೆ ಎಂದು ನಿರ್ಜರಾ ಹೇಳಿರುವುದು ವಿಡಿಯೋದಲ್ಲಿ ಕೇಳಬಹುದು.

  • ನಾನು ಡ್ರಗ್ಸ್ ಅಡಿಕ್ಟ್ ಆಗಿದ್ದೆ – ಕಂಗನಾ ಹಳೆ ವಿಡಿಯೋ ವೈರಲ್

    ನಾನು ಡ್ರಗ್ಸ್ ಅಡಿಕ್ಟ್ ಆಗಿದ್ದೆ – ಕಂಗನಾ ಹಳೆ ವಿಡಿಯೋ ವೈರಲ್

    ಮುಂಬೈ: ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ವಿರುದ್ಧ ಡ್ರಗ್ಸ್ ಆರೋಪ ಕೇಳಿ ಬಂದಿರುವ ಬೆನ್ನಲ್ಲೇ ನಟಿಯ ಹಳೆಯ ವಿಡಿಯೋವೊಂದು ಸಂಚಲನ ಸೃಷ್ಟಿಸಿದೆ. ಕಂಗನಾ ಡ್ರಗ್ಸ್ ಸೇವನೆ ಮಾಡುತ್ತಿದ್ದರು ಅನ್ನೋ ಆರೋಪಕ್ಕೆ ವಿಡಿಯೋ ಪುಷ್ಟಿ ನೀಡುತ್ತಿದೆ.

    ಸಿನಿ ಕೆರಿಯರ್ ಆರಂಭದಲ್ಲಿ ತಾನು ಡ್ರಗ್ ಅಡಿಕ್ಟ್ ಆಗಿದ್ದೆ ಎಂದು ನಟಿ ಕಂಗನಾ ರಣಾವತ್ ಹೇಳಿರುವ ವಿಡಿಯೋ ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಮಾರ್ಚ್ 29ರಂದು ಕಂಗನಾ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಈ ವಿಡಿಯೋ ಅಪ್ಲೋಡ್ ಮಾಡಿಕೊಂಡಿದ್ದು, ತನ್ನ ಸಿನಿ ಬದುಕು ಮತ್ತು ಡ್ರಗ್ಸ್ ಅಡಿಕ್ಟ್ ನಿಂದ ಹೊರ ಬಂದಿರುವ ಬಗ್ಗೆ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ರಣವೀರ್‌, ರಣ್‌ಬೀರ್‌, ವಿಕ್ಕಿ ಡ್ರಗ್ಸ್‌ ಪರೀಕ್ಷೆಗೆ ಒಳಪಡಬೇಕು – ಕಂಗನಾ

    ವಿಡಿಯೋದಲ್ಲಿ ಏನಿದೆ?: ಮನೆಯಲ್ಲಿ ಕುಳಿತು ಬೋರ್ ಆಗ್ತಿದೆಯಾ? ಕೆಲವರು ಅಳುತ್ತಿರಬಹುದು. ಕೆಟ್ಟ ಸಮಯ ಅದು ನಿಮ್ಮ ಜೀವನದ ಅತ್ಯಂತ ಒಳ್ಳೆಯ ದಿನ ಆಗಿರುತ್ತೆ. ಕಾರಣ ಆ ದಿನಗಳು ನಿಮಗೆ ಅಪಾರ ಅನುಭವ ನೀಡುತ್ತವೆ. 15-16ನೇ ವಯಸ್ಸಿನಲ್ಲಿ ಮನೆಯಿಂದ ಓಡಿ ಬಂದೆ. ಆಕಾಶದಲ್ಲಿರುವ ನಕ್ಷತ್ರಗಳನ್ನ ಹಿಡಿಯುವ ಆಸೆ ನನ್ನದಾಗಿತ್ತು. ಮನೆಯಿಂದ ಓಡಿ ಬಂದ ಎರಡೂವರೆ ವರ್ಷದಲ್ಲಿ ನಾನು ಫಿಲಂ ಸ್ಟಾರ್ ಮತ್ತು ಡ್ರಗ್ಸ್ ಅಡಿಕ್ಟ್ ಆಗಿದ್ದೆ. ಆ ಸಮಯದಲ್ಲಿ ಕೆಲವರ ಸಂಪರ್ಕದಿಂದಾಗಿ ನನ್ನ ಜೀವನ ಸಮಸ್ಯೆಗಳಿಂದ ತುಂಬಿತ್ತು. ನನ್ನ ಜೀವನವೇ ಅಂತ್ಯವಾಗುವ ಹಂತದಲ್ಲಿತ್ತು. ಇದನ್ನೂ ಓದಿ: ಚಂಡೀಗಢ ತಲುಪ್ತಿದ್ದಂತೆ ನಾನು ಬದುಕುಳಿದೆ ಎಂದ ಕಂಗನಾ

    https://www.instagram.com/p/B-T4iCHlGIo/

    ಈ ಸಮಯಲ್ಲಿ ಒಳ್ಳೆಯ ಸ್ನೇಹಿತರ ಪರಿಚಯವಾಯ್ತು. ಅವರು ನನಗೆ ಧ್ಯಾನ, ಯೋಗ ಅಭ್ಯಾಸ ಮಾಡೋದನ್ನ ಕಲಿಸಿದರು. ವಿವೇಕಾನಂದ ಅವರನ್ನ ಗುರುಗಳೆಂದು ತಿಳಿದು ನನ್ನನ್ನ ನಾನು ಸುಧಾರಿಸಿಕೊಂಡಿದ್ದೇನೆ. ನನಗಾಗಿ ನಾನು ಬದುಕೋದನ್ನ ಕಲಿತುಕೊಂಡಿದ್ದರಿಂದ ನನ್ನ ವಿಲ್ ಪವರ್, ಭಾವನೆ, ಕುಟುಂಬ ಜೊತೆಗಿನ ಸಂಬಂಧ, ಟ್ಯಾಲೆಂಟ್ ಸುಧಾರಿಸಿಕೊಂಡೆ. ಹಾಗಾಗಿ ಇಂದು ಒಂದು ಹಂತಕ್ಕೆ ಬಂದಿದ್ದೇನೆ. ಆ ಕಷ್ಟದ ದಿನಗಳ ಬರದಿದ್ರೆ ಗುಂಪಿನಲ್ಲಿ ನಾನು ಒಬ್ಬಳಾಗುತ್ತಿದ್ದೆ. ಒಂದೆರಡು ವರ್ಷ ಕಟ್ಟುನಿಟ್ಟಾಗಿ ಬ್ರಹ್ಮಚರ್ಯವನ್ನ ಪಾಲಿಸಿದ್ದೇನೆ ಎಂದು ಹೇಳಿದ್ದಾರೆ.

    ಕಂಗನಾ ಚಾಲೆಂಜ್: ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್‍ಮುಖ್ ಕಂಗನಾ ವಿರುದ್ಧ ಡ್ರಗ್ ತನಿಖೆ ಮಾಡಲಾಗುವುದು ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಯ ಬೆನ್ನಲ್ಲೇ ಮುಂಬೈ ಪೊಲೀಸರು ಕಂಗನಾ ವಿರುದ್ಧ ತನಿಖೆ ಆರಂಭಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ ಕಂಗನಾ, ಬಹಳ ಸಂತೋಷ. ನನ್ನನ್ನು ಡ್ರಗ್ ಪರೀಕ್ಷೆಗೆ ಒಳಪಡಿಸಿ. ನನ್ನ ಕರೆಗಳನ್ನು ತನಿಖೆ ಮಾಡಿ ಡ್ರಗ್ ಪೆಡ್ಲರ್ ಜೊತೆ ಇರುವ ಸಂಬಂಧವನ್ನು ಪತ್ತೆ ಹಚ್ಚಿ. ಒಂದು ವೇಳೆ ತಪ್ಪು ಸಾಬೀತಾದರೆ ನಾನು ಮುಂಬೈ ತೊರೆಯುತ್ತೇನೆ ಎಂದು ಚಾಲೆಂಜ್ ಹಾಕಿದ್ದರು. ಇದನ್ನೂ ಓದಿ: ಭಿಕ್ಷೆ ಬೇಡೋಕೆ ಮುಂಬೈಗೆ ಯಾಕೆ ಬಂದೆ- ಕಂಗನಾಗೆ ರಾಖಿ ಪ್ರಶ್ನೆ

    ರಣ್‍ವೀರ್ ಸಿಂಗ್, ರಣ್‍ಬೀರ್ ಕಪೂರ್, ಅಯಾನ್ ಮುಖರ್ಜಿ, ವಿಕ್ಕಿ ಕೌಶಿಕ್ ಡ್ರಗ್ ಪರೀಕ್ಷೆ ನಡೆಸಲು ರಕ್ತದ ಮಾದರಿಯನ್ನು ನೀಡಬೇಕು. ಈ ನಟರು ಕೊಕೇನ್ ಸೇವಿಸುತ್ತಾರೆ ಎಂಬ ಆರೋಪ ಕೇಳಿಬಂದಿದೆ. ತಮ್ಮ ಮೇಲೆ ಬಂದಿರುವ ಆರೋಪವನ್ನು ಸುಳ್ಳು ಮಾಡಲು ನಟರು ರಕ್ತದ ಮಾದರಿಯನ್ನು ನೀಡಬೇಕೆಂದು ವಿನಂತಿಸುತ್ತಿದ್ದೇನೆ. ಈ ವ್ಯಕ್ತಿಗಳು ಯುವ ಜನತೆಗೆ ಮಾದರಿಯಾಗಿರುವ ಕಾರಣ ಆರೋಪ ಮುಕ್ತವಾಗಬೇಕೆಂದು ಎಂದು ಕಂಗನಾ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಅನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ಟ್ಯಾಗ್ ಮಾಡಿದ್ದಾರೆ.

    ಈಗಾಗಲೇ ಡ್ರಗ್ಸ್ ಪ್ರಕರಣದಲ್ಲಿ ನಟಿ ರಿಯಾ ಚಕ್ರವರ್ತಿ ಮತ್ತು ಸೋದರ ಶೌವಿಕ್ ಚಕ್ರವರ್ತಿ ಸೇರಿದಂತೆ 16 ಜನರನ್ನ ಎನ್‍ಸಿಬಿ ಬಂಧಿಸಿದೆ. ಇತ್ತ ಸ್ಯಾಂಡಲ್‍ವುಡ್ ನಲ್ಲಿ ನಟಿ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಸಹ ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿದ್ದಾರೆ.

  • ಕಾರು ಪಾರ್ಕಿಂಗ್‌ ಸ್ಥಳ ಈಗ ಟೂರಿಸ್ಟ್‌ ಸ್ಪಾಟ್‌ – ವೈರಲ್‌ ವಿಡಿಯೋ ಸೆರೆಗೆ ಒಂದು ಕಮೆಂಟ್‌ ಕಾರಣ

    ಕಾರು ಪಾರ್ಕಿಂಗ್‌ ಸ್ಥಳ ಈಗ ಟೂರಿಸ್ಟ್‌ ಸ್ಪಾಟ್‌ – ವೈರಲ್‌ ವಿಡಿಯೋ ಸೆರೆಗೆ ಒಂದು ಕಮೆಂಟ್‌ ಕಾರಣ

    – ಇದು ದೊಡ್ಡ ಸಾಧನೆ ಅಲ್ಲ
    – ಯಾರೇ ಅನುಭವಿ ಚಾಲಕ ಪಾರ್ಕ್‌ ಮಾಡಬಹುದು

    ಕಣ್ಣೂರು: ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿರುವ ಇನ್ನೋವಾ ಪಾರ್ಕಿಂಗ್‌ ಸ್ಥಳ ಈಗ ಟೂರಿಸ್ಟ್‌ ಸ್ಪಾಟ್‌ ಆಗಿ ಬದಲಾಗಿದೆ.

    ಕೇರಳದ ವಯನಾಡ್‌ ನಿವಾಸಿ ಪಿ.ಜೆ ಬಿಜು ಅವರು ಮಾಹೆ ರೈಲ್ವೇ ನಿಲ್ದಾಣದ ಬಳಿ ಇರುವ ರಸ್ತೆಯ ಕಿರುದಾಗಿರುವ ಜಾಗದಲ್ಲಿ ಪಾರ್ಕ್‌ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

    https://twitter.com/nandu79/status/1302612571002871813

    ಈಗ ಕಾರು ಪಾರ್ಕಿಂಗ್‌ ಮಾಡಿದ ಜಾಗ ಪ್ರವಾಸಿ ತಾಣವಾಗಿ ಪರಿವರ್ತನೆಯಾಗಿದೆ. ಭಾರೀ ಸಂಖ್ಯೆಯಲ್ಲಿ ಜನ ಆಗಮಿಸಿ ಕಾರು ನಿಲ್ಲಿಸಿದ ಜಾಗವನ್ನು ಪರಿಶೀಲನೆ ಮಾಡಿ ಹೋಗುತ್ತಿದ್ದಾರೆ ಎಂದು ವರದಿಯಾಗಿದೆ.

    ವಿಡಿಯೋ ವೈರಲ್‌ ಆದ ಬಗ್ಗೆ ಪ್ರತಿಕ್ರಿಯಿಸಿದ 42 ವರ್ಷದ ಬಿಜು, ನನ್ನ ಪತ್ನಿ ಮಾಡಿರುವ ವಿಡಿಯೋ ಇದು. ಆಕೆಗೂ ಸಹ ವಿಡಿಯೋ ಈ ಪ್ರಮಾಣದಲ್ಲಿ ವೈರಲ್‌ ಆಗುತ್ತದೆ ಎಂದು ಗೊತ್ತಿರಲಿಲ್ಲ ಎಂದು ಹೇಳಿದ್ದಾರೆ.

    ಬಿಜು ಹೇಳುವುಂತೆ ಮನೆಯ ಈ ಜಾಗದಲ್ಲಿ ಪಾರ್ಕ್‌ ಮಾಡಿದ ನಾಲ್ಕನೇ ಕಾರು ಇನ್ನೋವಾ. ಈ ಮೊದಲು ಮಾರುತಿ ಅಲ್ಟೋ, ನಂತರ ಸ್ನೇಹಿತ ನೀಡಿದ ವಾಗನ್‌ ಆರ್‌, ಅಷ್ಟೇ ಅಲ್ಲದೇ ಜೀಪ್‌ ಸಹ ಈ ಜಾಗದಲ್ಲಿ ಪಾರ್ಕ್‌ ಮಾಡಿದ್ದರು. ಈ ಎಲ್ಲ ವಾಹನಗಳನ್ನು ಪಾರ್ಕ್‌ ಮಾಡಿದ್ದರೂ ಯಾರೂ ಗಮನ ಹರಿಸಿರಲಿಲ್ಲ ಎಂದು ಹೇಳುತ್ತಾರೆ.

    ಕಮೆಂಟ್‌ನಿಂದ ವೈರಲ್‌:
    ಆರಂಭದಲ್ಲಿ ಫೇಸ್‌ಬುಕ್‌ನಲ್ಲಿ ಫೋಟೋ ಹಾಕಿದಾಗ ಯಾರೊ ಒಬ್ಬರು ಎಡಿಟ್‌ ಮಾಡಿದ ಫೋಟೋ ಎಂದು ಹೇಳಿ ಕಮೆಂಟ್‌ ಮಾಡಿದ್ದರಂತೆ. ಈ ಕಾರಣಕ್ಕೆ ಅನುಮಾನ ಪರಿಹರಿಸಲು ಸಂಪೂರ್ಣವಾಗಿ ಪಾರ್ಕ್‌ ಮಾಡುತ್ತಿರುವ ವಿಡಿಯೋವನ್ನು  ಪತ್ನಿ ಮನೆಯಿಂದ ಸೆರೆ ಹಿಡಿದಳು. ಪತ್ನಿ ಆ ವಿಡಿಯೋವನ್ನು ಸ್ನೇಹಿತೆಗೆ ಕಳುಹಿಸಿದಳು. ಆಕೆ ಈ ವಿಡಿಯೋವನ್ನು ಫೇಸ್‌ಬುಕ್‌ನಲ್ಲಿ ಹಾಕಿದ ಬಳಿಕ ವೈರಲ್‌ ಆಗಿದೆ ಎಂದು ಬಿಜು ತಿಳಿಸಿದರು.

    ಇನ್ನೋವಾ ಕಾರು ನನ್ನ ಸ್ನೇಹಿತನದ್ದು. ಓಣಂ ಸಮಯದಲ್ಲಿ ನಾನು ಊರಿನಲ್ಲಿ ಇರುವುದಿಲ್ಲ. ಕಾರನ್ನು ಸರ್ವಿಸ್‌ ಮಾಡಿಕೊಡು ಎಂದು ಹೇಳಿದ್ದ. ಹೀಗಾಗಿ ಕೆಲ ದಿನ ನಾನು ಮನೆಯ ಮುಂಭಾಗ ಪಾರ್ಕ್‌ ಮಾಡಿದ್ದೆ. ಓಣಂ ಮುಗಿದು ವರ್ಕ್‌ ಶಾಪ್‌ ಆರಂಭಗೊಂಡ ಬಳಿಕ ನಾನು ಕಾರು ತೆಗೆದಿದ್ದೆ. ಕಾರನ್ನು ತೆಗೆಯುವ ವೇಳೆ ಪತ್ನಿ ವಿಡಿಯೋ ಮಾಡಿದಳು ಎಂದು ಅವರು ವಿವರಿಸಿದರು.

    ಲಿಕ್ಕರ್‌ ಕಂಪನಿಯೊಂದರ ಉದ್ಯೋಗಿ ಮತ್ತು ಡ್ರೈವರ್‌ ಆಗಿರುವ ಬಿಜು ಅವರು ಕಳೆದ 12 ವರ್ಷಗಳಿಂದ ಮಾಹೆಯಲ್ಲಿ ಕುಟುಂಬದ ಜೊತೆ ವಾಸವಾಗಿದ್ದಾರೆ. 1996ರಲ್ಲಿ ಡ್ರೈವಿಂಗ್‌ ಲೈಸೆನ್ಸ್‌ ಪಡೆದಿರುವ ಇವರು ಬಸ್‌ ಸೇರಿದಂತೆ ಹಲವು ವಾಹನಗಳನ್ನು ಚಲಾಯಿಸಿದ ಅನುಭವವನ್ನು ಹೊಂದಿದ್ದಾರೆ.

    ಇಷ್ಟು ಸಣ್ಣ ಜಾಗದಲ್ಲಿ ಹೇಗೆ ಸುಲಭವಾಗಿ ಪಾರ್ಕ್‌ ಮಾಡಿದ್ದೀರಿ ಎಂದು ಕೇಳಿದ ಪ್ರಶ್ನೆಗೆ, ಇದು ಸಣ್ಣ ಜಾಗವೇ? ನಾನು ಎರ್ನಾಕುಲಂ ಮತ್ತು ಕಣ್ಣೂರು ಮಧ್ಯೆ ಹಲವು ವರ್ಷಗಳ ಕಾಲ ಬಸ್‌ ಓಡಿಸಿದ್ದೇನೆ. ಈ ಬಸ್ಸು 12 ಮೀಟರ್‌ ಉದ್ದವನ್ನು ಹೊಂದಿತ್ತು. ಹೀಗಿರುವ ಇನ್ನೋವಾದ ಗಾತ್ರ ಬಸ್ಸಿಗೆ ಹೋಲಿಸಿದರೆ ಬಹಳ ಚಿಕ್ಕದು. ಯಾವುದೇ ಕಾರಿನ ಗಾತ್ರವನ್ನು ಮನಸ್ಸಿನಲ್ಲೇ ಯೋಚಿಸಿಕೊಂಡು ಆತ್ಮವಿಶ್ವಾಸದಿಂದ ಪಾರ್ಕ್‌ ಮಾಡಿದರೆ ಇದು ಕಷ್ಟದ ಕೆಲಸವಲ್ಲ ಎಂದು ಉತ್ತರಿಸಿದರು.

    ಕಳೆದ ಮೂರು ದಿನಗಳಿಂದ ಹಲವು ವರದಿಗಾರರು ನನಗೆ ಕರೆ ಮಾಡುತ್ತಿದ್ದಾರೆ. ಹಾಗೆ ನೋಡಿದರೆ ಇದು ದೊಡ್ಡ ವಿಷಯವೇ ಇಲ್ಲ. ಯಾರೇ ಉತ್ತಮ ಚಾಲಕ ನಾನು ಪಾರ್ಕ್‌ ಮಾಡಿದಂತೆ ಮಾಡಬಹುದು ಎಂದು ಹೇಳಿದರು.

    ಸಾಮಾಜಿಕ ಜಾಲತಾಣದಲ್ಲಿ, ಕಿರಿದಾದ ಜಾಗದಲ್ಲಿ ಇಷ್ಟು ದೊಡ್ಡ ಕಾರನ್ನು ಯಾರ ಸಹಾಯ ಇಲ್ಲದೇ, ಬೇರೆ ವಾಹನಗಳಿಗೂ ತೊಂದರೆ ನೀಡದೇ ತೆಗೆದಿದ್ದಾನೆ. ಆತನ ಡ್ರೈವಿಂಗ್‌ ಪವರ್‌ ನಿಜವಾಗಿಯೂ ಗ್ರೇಟ್‌ ಎಂದು ಕಮೆಂಟ್‌ ಮಾಡುತ್ತಿದ್ದಾರೆ.

  • ಅಬ್ಬಾ ಎಷ್ಟು ಸೆಕೆ- ವಿಮಾನದ ಎಮೆರ್ಜೆನ್ಸಿ ಡೋರ್ ನಿಂದ ಹೊರ ಬಂದ ಮಹಿಳೆ

    ಅಬ್ಬಾ ಎಷ್ಟು ಸೆಕೆ- ವಿಮಾನದ ಎಮೆರ್ಜೆನ್ಸಿ ಡೋರ್ ನಿಂದ ಹೊರ ಬಂದ ಮಹಿಳೆ

    – ವಿಮಾನದ ವಿಂಗ್ ಮೇಲೆ ಮಹಿಳೆಯ ವಾಕಿಂಗ್
    – ಮಹಿಳೆ ವರ್ತನೆ ಕಂಡು ಪ್ರಯಾಣಿಕರು ಶಾಕ್
    – ಮಹಿಳೆಯ ವಿಡಿಯೋ ವೈರಲ್

    ಕೀವ್: ಅಬ್ಬಾ ಎಷ್ಟೊಂದು ಸೆಕೆ ಅಂತ ಮಹಿಳಾ ಪ್ರಯಾಣಿಕರೊಬ್ಬರ ವಿಮಾನದ ಎಮೆರ್ಜೆನ್ಸಿ ಡೋರ್ಚ ತೆಗೆದಿರುವ ವಿಚಿತ್ರ ಘಟನೆ ಉಕ್ರೇನ್ ದೇಶದ ಕೀವ್ ನಲ್ಲಿ ನಡೆದಿದೆ. ಮಹಿಳೆ ಎಮೆರ್ಜೆನ್ಸಿ ಡೋರ್ ದಿಂದ ಹೊರ ಬಂದು ವಿಮಾನದ ವಿಂಗ್ ಮೇಲೆ ನಡೆದಾಡಿರುವ ವಿಡಿಯೋ ರಾಕೆಟ್ ವೇಗದಲ್ಲಿ ವೈರಲ್ ಆಗುತ್ತಿದೆ.

    ಈ ಕುರಿತು ಮಾಹಿತಿ ನೀಡಿರುವ ಉಕ್ರೇನ್ ಅಂತರಾಷ್ಟ್ರೀಯ ವಿಮಾನಯಾನ ಸಂಸ್ಥೆ, ಮಹಿಳೆ ದಿಢೀರ್ ಅಂತ ಎಮೆರ್ಜೆನ್ಸಿ ಡೋರ್ ತೆಗೆದು ವಿಂಗ್ ಮೇಲೆ ನಡೆಯಲಾರಂಭಿಸಿದರು. ಬೋಯಿಂಗ್ 737-86ಎನ್ ವಿಮಾನ ಲ್ಯಾಂಡ್ ಆಗ್ತಿದ್ದಂತೆ ಸೆಕೆ ಆಗುತ್ತಿದೆ ಎಂದು ಮಹಿಳೆ ಕಂಪ್ಲೇಂಟ್ ಮಾಡಿದ್ರು. ಜನರು ಸಹ ವಿಮಾನದಿಂದ ಹೊರ ಬರುತ್ತಿದ್ದರು. ಎಮೆರ್ಜೆನ್ಸಿ ಡೋರ್ ತೆಗೆದ ಮಹಿಳೆ ಗಾಳಿ ತೆಗೆದುಕೊಳ್ಳಲು ನಡೆಯುತ್ತಿದ್ದೆ ಅಂತಾ ಹೇಳಿದ್ದಾರೆ. ಕೂಡಲೇ ಸಿಬ್ಬಂದಿ ಮಹಿಳೆಯನ್ನ ಒಳ ಕರೆದು ಡೋರ್ ಕ್ಲೋಸ್ ಮಾಡಿದ್ದಾರೆ ಎಂದು ತಿಳಿಸಿದೆ.

    ಬಹುತೇಕ ಪ್ರಯಾಣಿಕರು ಹೊರಗೆ ಬಂದಿದ್ದರು. ಆಕೆಯ ಇಬ್ಬರು ಮಕ್ಕಳು ಸಹ ಕೆಳಗೆ ನನ್ನ ಹಿಂದೆಯೇ ನಿಂತಿದ್ರು. ಪ್ಲೇನ್ ವಿಂಗ್ ಮೇಲೆ ಮಹಿಳೆಯನ್ನ ನೋಡಿದ ಮಕ್ಕಳು, ಅವರು ನಮ್ಮ ತಾಯಿ ಎಂದು ಕೂಗಿ ಹೇಳಿದ್ರು. ಮಹಿಳೆ ವಿಂಗ್ ಮೇಲೆ ನಡೆಯೋದು ನೋಡಿ ನಮಗೂ ಆಶ್ಚರ್ಯವಾಯ್ತು ಎಂದು ಪ್ರಯಾಣಿಕರೊಬ್ಬರು ತಿಳಿಸಿದ್ದಾರೆ.

    https://www.instagram.com/p/CEkEaFmpZam/

    ಪ್ರಯಾಣಿಕರು ವಿಮಾನಯಾನ ಸಂಸ್ಥೆಯ ಸುರಕ್ಷಾ ನಿಯಮಗಳನ್ನ ಪಾಲನೆ ಮಾಡಬೇಕು. ನಿಯಮ ಉಲ್ಲಂಘನೆ ಹಿನ್ನೆಲೆ ಮಹಿಳೆಯ ಹೆಸರನ್ನ ಆಡಳಿತ ಮಂಡಳಿ ಕಪ್ಪುಪಟ್ಟಿಗೆ ಸೇರಿಸಿದೆ. ವರದಿಗಳ ಪ್ರಕಾರ ಮಹಿಳೆ ಭಾರೀ ಮೊತ್ತದ ದಂಡ ವಿಧಿಸಲಾಗಿದೆ.