Tag: viral video

  • ಮೃತ ಕರುವಿನ ಮುಂದೆ ಗೋಳಾಡಿದ ಎಮ್ಮೆ- ವೀಡಿಯೋ ವೈರಲ್

    ಮೃತ ಕರುವಿನ ಮುಂದೆ ಗೋಳಾಡಿದ ಎಮ್ಮೆ- ವೀಡಿಯೋ ವೈರಲ್

    ದಾವಣಗೆರೆ: ಎಮ್ಮೆಯೊಂದು ಮೃತ ಕರುವಿನ ಮುಂದೆ ಗೋಳಾಡಿದ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ದಾವಣಗೆರೆ ಜಿಲ್ಲೆಯ ಚನ್ನಗಿರಿ ಪಟ್ಟಣದಲ್ಲಿ ರಸ್ತೆ ಬದಿ ಮೇವು ತಿನ್ನುವಾಗ ಕರುವಿಗೆ ಅಪಘಾತವಾಗಿದೆ. ಪರಿಣಾಮ ಕರು ಸ್ಥಳದಲ್ಲೇ ಸಾವನ್ನಪ್ಪಿದೆ. ಸಾವನ್ನಪ್ಪಿದ ತನ್ನ ಕರುವನ್ನು ನೋಡಿ ರಸ್ತೆಗೆ ಅಡ್ಡಲಾಗಿ ನಿಂತು ಎಮ್ಮೆ ಗೋಳಾಟ ಮಾಡಿದೆ.

    ಕಳೆದ ಎರಡು ದಿನಗಳಿಂದಲೂ ಎಮ್ಮೆ, ತನ್ನ ಮೃತ ಕರುವನ್ನು ಬಿಟ್ಟು ಹೋಗುತ್ತಿಲ್ಲ. ಮೇವು ನೀರು ಕುಡಿಯದೇ ಮೃತ ಕರುವಿನ ಬಳಿ ಎಮ್ಮೆ ನಿಂತು ಕಣ್ಣೀರು ಹಾಕುತ್ತಿರುವುದು ಆ ಮಾರ್ಗವಾಗಿ ಸಂಚರಿಸುವವರ ಕಣ್ಣಂಚಲ್ಲೂ ನೀರು ತರಿಸಿದೆ.

  • ಮಾಲೀಕನ ರಕ್ಷಣೆಗೆ ಧಾವಿಸುವ ಗೋವು- ವೀಡಿಯೋ ವೈರಲ್

    ಮಾಲೀಕನ ರಕ್ಷಣೆಗೆ ಧಾವಿಸುವ ಗೋವು- ವೀಡಿಯೋ ವೈರಲ್

    – ಗೋವಿನ ಪ್ರಾಮಾಣಿಕತೆಗೆ ಜನ ಫಿದಾ

    ಗಾಂಧಿನಗರ: ಕೆಲ ದಿನಗಳ ಹಿಂದೆ ಮಾಲೀಕನನ್ನ ರಕ್ಷಿಸುವ ವೀಡಿಯೋ ವೈರಲ್ ಆಗಿತ್ತು. ಖಾಸಗಿ ಮಾಧ್ಯಮ ವೀಡಿಯೋ ರಿಯಾಲಿಟಿ ಚೆಕ್ ನಡೆಸಿ ವರದಿ ಬಿತ್ತರಿಸಿದೆ.

    ಗುಜರಾತ್ ರಾಜ್ಯದ ಕಛ್ ಜಿಲ್ಲೆಯ ನಿವಾಸಿ ಮಾನದ್ ಎಂಬವರ ಹಸು ತನ್ನ ಸ್ನೇಹಿತನಂತೆ ಸಾಕಿಕೊಂಡಿದ್ದಾರೆ. ಮಾಲೀಕನ ಮೇಲೆ ಯಾರಾದ್ರೂ ಹಲ್ಲೆಗೆ ಯತ್ನಿಸಿದ್ರೆ ಹಸು ಪ್ರತ್ಯಕ್ಷವಾಗಿ ಒಡೆಯನ ರಕ್ಷಣೆಗೆ ಮುಂದಾಗುತ್ತದೆ.

    ನಾನು ಹಸುವನ್ನು ಗೆಳೆಯನಂತೆ ನೋಡಿಕೊಂಡಿದ್ದೇನೆ. ನನಗೆ ಅಪಾಯವಾದ್ರೆ ರಕ್ಷಣೆಗೆ ಬರುತ್ತೆ. ನೀವು ಬೇಕಾದ್ರೆ ನನ್ನ ಹಲ್ಲೆ ನಡೆಸಿದಂತೆ ನಟಿಸಿ ದೂರದಲ್ಲಿರುವ ನನ್ನ ಹಸು ಓಡೋಡಿ ಬರುತ್ತೆ ಎಂದು ಮಾನದ್ ಹೇಳುತ್ತಾರೆ. ಸ್ಥಳಕ್ಕೆ ತೆರಳಿದ ಮಾಧ್ಯಮ ಸಿಬ್ಬಂದಿ ರಿಯಾಲಿಟಿ ಚೆಕ್ ನಡೆಸಿದ್ದಾರೆ. ಆತನೊಂದಿಗೆ ಇನ್ನೋರ್ವ ಕೋಲಿನಿಂದ ಹೊಡೆದಾಡುವಂತೆ ನಟಿಸಿದಾಗಲೂ ಮೇಯುತ್ತಿದ್ದ ಹಸು ಬಂದಿದೆ.

    ಮಾನದ್ 12 ವರ್ಷದವಾಗಿರಿಂದಲೇ ಹಸುಗಳನ್ನು ಮೇಯಿಸಿಕೊಂಡು ಬರುತ್ತಿದ್ದಾರೆ. ಮಾನದ್ 20 ಜಾನುವಾರುಗಳಿದ್ದು, ಅದರಲ್ಲಿ ಈ ಹಸು ತುಂಬಾ ವಿಶೇಷ ಗುಣವನ್ನು ಹೊಂದಿದೆ. ಇನ್ನು ಮಾನದ್ ಬಿಡುವಿನ ಸಮಯದಲ್ಲಿ ಆಟೋ ಸಹ ಓಡಿಸುತ್ತಾರೆ.

  • ಆಂಟಿ ಎಂದು ಕರೆದ ಹುಡಿಗಿಗೆ ಗೂಸಾ ಕೊಟ್ಟ ಮಹಿಳೆ

    ಆಂಟಿ ಎಂದು ಕರೆದ ಹುಡಿಗಿಗೆ ಗೂಸಾ ಕೊಟ್ಟ ಮಹಿಳೆ

    ಲಕ್ನೋ: ಶಾಪಿಂಗ್ ಮಾಡುವ ವೇಳೆ ಆಂಟಿ ಎಂದು ಕರೆದಿದ್ದ ಹುಡುಗಿಗೆ ಮಹಿಳೆ ಹೊಡೆದಿರುವ ಘಟನೆ ಉತ್ತರ ಪ್ರದೇಶದ ಇತಾನ ಬಾಬುಗಂಜ್ ಮಾರುಕಟ್ಟೆಯಲ್ಲಿ ನಡೆದಿದೆ.

    ಇತಾನ ಬಾಬುಗಂಜ್ ಮಾರುಕಟ್ಟೆಯಲ್ಲಿ 40 ವರ್ಷದ ಮಹಿಳೆ ತನ್ನ ಗೆಳತಿಯರೊಂದಿಗೆ ಶಾಪಿಂಗ್ ಮಾಡುತ್ತಿದ್ದಳು. ಈ ವೇಳೆ ಅಲ್ಲಿಯೆ ಶಾಪಿಂಗ್ ಮಾಡುತ್ತಿದ್ದ ಹುಡುಗಿ ಆಂಟಿ ಎಂದು ಕರೆದಿದ್ದಾಳೆ ಇದರಿಂದ ಕೋಪಗೊಂಡಿರುವ ಮಹಿಳೆ ಹುಡುಗಿಗೆ ಹಿಗ್ಗಾಮುಗ್ಗ ಥಳಿಸಿದ್ದಾಳೆ.

    ಹುಡುಗಿ ಆಂಟಿ ಎಂದು ಕರೆದ ನಂತರ ಮಹಿಳೆ ಮತ್ತು ಆಕೆಯ ಸ್ನೇಹಿತೆಯರು ಶಾಪಿಂಗ್ ನಿಲ್ಲಿಸಿ ಜಗಳ ಪ್ರಾರಂಭಿಸಿದ್ದಾರೆ. ಮಹಿಳೆ ಸಂಘರ್ಷದಲ್ಲಿ ಹುಡುಗಿಯ ಕೂದಲನ್ನು ಹಿಡಿದು ಎಳೆದಾಡಿದ್ದಾಳೆ.

    ಲೇಡಿ ಪೊಲೀಸ್ ಮಧ್ಯಪ್ರವೇಶಿಸಿದ ನಂತರ ಇಬ್ಬರೂ ಜಗಳ ನಿಲ್ಲಿಸಿದ್ದಾರೆ. ನಂತರ ಇವರ ಸಮಸ್ಯೆಯನ್ನು ಇತ್ಯರ್ಥಪಡಿಸಿ ಅಲ್ಲಿಂದ ಕಳಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಯಾವುದೇ ದೂರು ದಾಖಲಾಗಿಲ್ಲ. ಮಹಿಳೆ ಹುಡುಗಿಯನ್ನು ಎಳೆದು ಹೊಡೆದಿರುವ ವಿಡಿಯೋ ಟ್ವಿಟ್ಟರ್‍ನಲ್ಲಿ ವೈರಲ್ ಆಗಿದೆ.

  • ತಾಳಿ ಕಟ್ಟೋ ಕೊನೆ ಕ್ಷಣದಲ್ಲಿ ಮದ್ವೆ ಬೇಡ ಎಂದ ವಧು- ಸಿನಿಮಾ ಸ್ಟೈಲ್‍ನಲ್ಲಿ ಯುವತಿಯ ಡೈಲಾಗ್

    ತಾಳಿ ಕಟ್ಟೋ ಕೊನೆ ಕ್ಷಣದಲ್ಲಿ ಮದ್ವೆ ಬೇಡ ಎಂದ ವಧು- ಸಿನಿಮಾ ಸ್ಟೈಲ್‍ನಲ್ಲಿ ಯುವತಿಯ ಡೈಲಾಗ್

    ಚೆನ್ನೈ: ಹಸೆಮಣೆ ಮೇಲೆ ಕುಳಿತ್ತಿದ್ದ ವರ ಇನ್ನೇನು ಕೆಲವೇ ಕ್ಷಣಗಳಲ್ಲಿ ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ಎಲ್ಲರಿಗೂ ಶಾಕ್ ನೀಡಿದ್ದ ವಧು, ತನಗೆ ಈ ಮದುವೆ ಬೇಡ ಎಂದು ಸಿನಿಮಾ ಸ್ಟ್ರೈಲ್ ಡೈಲಾಗ್ ಹೊಡೆದು ಮದುವೆ ನಿಲ್ಲಿಸಿರುವ ಘಟನೆ ತಮಿಳುನಾಡಿನ ನೀಲಗಿರಿ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ.

    ನೀಲಗಿರಿ ಜಿಲ್ಲೆಯ ಉದಗ ಗ್ರಾಮದಲ್ಲಿ ಘಟನೆ ನಡೆದಿದ್ದು, ತಾನು ಪ್ರೀತಿಸಿದ್ದ ಯುವಕನನ್ನೇ ಮದುವೆಯಾಗಲು ಯುವತಿ ಅಂತಿಮ ಕ್ಷಣದಲ್ಲಿ ಮದುವೆಗೆ ಬ್ರೇಕ್ ಹಾಕಿ ಕುಟುಂಬಸ್ಥರಿಗೆ ಶಾಕ್ ನೀಡಿದ್ದಳು.

    ತಾನು ಪ್ರೀತಿಸಿದ ಯುವಕ ಅರ್ಧ ಗಂಟೆಯಲ್ಲಿ ಮದುವೆ ಮನೆಗೆ ಬರುತ್ತಾನೆ. ತಾನು ಅವನನ್ನೇ ಮದುವೆಯಾಗುವುದಾಗಿ ಹೇಳಿ ಯುವತಿ ತಾಳಿ ಕಟ್ಟಲು ಬಂದ ವರನನ್ನು ತಡೆದಿದ್ದಳು. ಇತ್ತ ಕುಟುಂಬಸ್ಥರು ನೋಡಿ ನಿರ್ಧಾರ ಮಾಡಿದ್ದ ಯುವತಿಯನ್ನು ಮದುವೆಯಾಗಿ ಹೊಸ ಜೀವನವನ್ನು ಆರಂಭಿಸಲು ಕನಸು ಕಂಡಿದ್ದ ಯುವಕ ಕ್ಷಣ ಕಾಲ ಏನಾಗುತ್ತಿದೆ ಎಂದು ತಿಳಿಯದೆ ಸುಮ್ಮನೆ ಕುಳಿತ್ತಿದ್ದ.

    ಯುವತಿ ಮದುವೆ ನಿರಾಕರಿಸುತ್ತಿದಂತೆ ಆಕ್ರೋಶಗೊಂಡ ಕುಟುಂಬಸ್ಥರು ಆಕೆಗೆ ಬುದ್ಧಿ ಮಾತು ಹೇಳಿ ಮದುವೆ ಮಾಡಿಕೊಳ್ಳುವಂತೆ ತಿಳಿ ಹೇಳುವ ಕೆಲಸ ಮಾಡಿದ್ದರು. ಆದರೂ ಆಕೆ ಒಪ್ಪಿಕೊಳ್ಳದ ಕಾರಣ ಪ್ರೀತಿಯ ವಿಚಾರವನ್ನು ಮೊದಲೇ ಏಕೆ ಹೇಳಿಲ್ಲ ಎಂದು ಗರಂ ಆಗಿ ಯುವತಿಯ ಮೇಲೆ ಕೈ ಮಾಡುವುದಕ್ಕೂ ಮುಂದಾದರು. ಆದರೆ ಈ ವೇಳೆ ಮಧ್ಯ ಪ್ರವೇಶಿಸಿದ ಸಂಬಂಧಿಗಳು ಕುಟುಂಬಸ್ಥರನ್ನು ತಡೆದು ನಿಲ್ಲಿಸಿದ್ದರು.

    ಇದನ್ನೆಲ್ಲಾ ನೋಡುತ್ತಾ ಕುಳಿತ್ತಿದ್ದ ಯುವಕ ನಿರಾಸೆಯಿಂದ ಹಸೆಮಣೆಯಿಂದ ಎದ್ದು ಮದುವೆ ಮಂಟಪದಿಂದ ಹೊಸ ನಡೆದಿದ್ದ. ಆದರೆ ಯುವತಿಯನ್ನು ಪ್ರೀತಿಸಿದ್ದ ಯುವಕ ಮದುವೆ ನಿಂತು ಒಂದು ಗಂಟೆಯಾದರೂ ಮಂಟಪಕ್ಕೆ ಆಗಮಿಸಲಿಲ್ಲ. ಇದರಿಂದ ಮತ್ತಷ್ಟು ಕೋಪಗೊಂಡ ಯುವತಿಯ ಪೋಷಕರು ಆಕೆಯನ್ನು ಮದುವೆ ಮಂಟಪದಲ್ಲೇ ಬಿಟ್ಟು ವಾಪಸ್ ತೆರಳಿದ್ದರು. ಮದುವೆಯಲ್ಲಿ ನಡೆದ ಎಲ್ಲಾ ಹೈಡ್ರಾಮಾ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  • ವಾಲಿಬಾಲ್ ಆಡುತ್ತಿರುವ ಗಿಳಿಗಳ ವಿಡಿಯೋ ವೈರಲ್

    ವಾಲಿಬಾಲ್ ಆಡುತ್ತಿರುವ ಗಿಳಿಗಳ ವಿಡಿಯೋ ವೈರಲ್

    ಗಿಳಿಗಳು ಮಾತನಾಡುವುದು, ಹಾಡು ಹೇಳುವುದನ್ನು ಕೇಳಿದ್ದೀರಿ ಮತ್ತು ನೋಡಿದ್ದೀರಿ ಆದರೆ ಇಲ್ಲಿ ಗಿಳಿಗಳು ವಾಲಿಬಾಲ್ ಆಟ ಆಡುತ್ತವೆ ಎಂದು ಹೇಳಿದರೆ ಖಂಡಿತವಾಗಿಯೂ ಆಶ್ಚರ್ಯವಾಗುತ್ತದೆ ಆದರು ಇದು ಸತ್ಯ.

    ಹೌದು. ಹಸಿರು ಮತ್ತು ಹಳದಿ ಬಣ್ಣದ ಮುದ್ದು ಗಿಳಿಗಳು ಎರಡು ತಂಡಗಳಾಗಿ ವಾಲಿಬಾಲ್ ಆಟ ಆಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ಪುಟ್ಟ ಪಕ್ಷಿಗಳನ್ನು 2 ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಒಂದು ಬದಿಯಲ್ಲಿ ಹಸಿರು ಬಣ್ಣದ ಗಿಳಿಯ ತಂಡ ಇನ್ನೊಂದು ಕಡೆ ಹಳದಿ ಬಣ್ಣದ ಗಿಳಿಗಳ ತಂಡವನ್ನಾಗಿ ಮಾಡಲಾಗುತ್ತದೆ. ನಂತರ ಇವುಗಳ ಮಧ್ಯೆ ಒಂದು ಪುಟ್ಟ ನೆಟ್ ಕಟ್ಟಿ ಆಟವಾಡಲು ಬಿಡುತ್ತಾರೆ. ಆಗ ಗಿಳಿಗಳು ಕಾಳುಗಳನ್ನು ಹೆಕ್ಕುತ್ತಾ ಪುಟ್ಟ ಬಾಲ್ ಅನ್ನು ನೆಟ್ ನಿಂದ ಒಂದು ಕಡೆಯಿಂದ ಇನ್ನೊಂದು ಕಡೆಗೆ ಪಾಸ್ ಮಾಡುವ ದೃಶ್ಯ ಎಲ್ಲರ ಗಮನ ಸೆಳೆದಿದೆ. ಸಾಮಾಜಿಕ ಜಾಲತಾಣದಲ್ಲಿ ಆಟವಾಡುತ್ತಿರುವ ಈ ಮುದ್ದಾದ ಗಿಳಿಗಳ ವಿಡಿಯೋ ಹರಿದಾಡುತ್ತಿದೆ.

  • ಟಿಕ್‍ಟಾಕ್ ವೀಡಿಯೋದಿಂದಾಗಿ ಮೆಟ್ಟಲಿನಿಂದ ಬಿದ್ದ ಯುವಕ- 80 ಲಕ್ಷಕ್ಕೂ ಅಧಿಕ ವ್ಯೂವ್

    ಟಿಕ್‍ಟಾಕ್ ವೀಡಿಯೋದಿಂದಾಗಿ ಮೆಟ್ಟಲಿನಿಂದ ಬಿದ್ದ ಯುವಕ- 80 ಲಕ್ಷಕ್ಕೂ ಅಧಿಕ ವ್ಯೂವ್

    ಸೋಶಿಯಲ್ ಮೀಡಿಯಾ ಪ್ಲಾಟ್‍ಫಾರಂನಲ್ಲಿ ಕಳೆದ ಒಂದೆರಡು ದಿನಗಳಿಂದ ವಿಡಿಯೋ ವೈರಲ್ ಆಗಿದೆ. ಟಿಕ್‍ಟಾಕ್ ಮಾಡುತ್ತಿದ್ದ ಯುವಕನೋರ್ವ ಆಯತಪ್ಪಿ ಮೆಟ್ಟಿಲಿನಿಂದ ಬಿದ್ದಿರುವ ವಿಡಿಯೋ ವೈರಲ್ ಆಗಿದ್ದು, 80 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆ ಆಗಿದೆ.

    24 ವರ್ಷದ ಕೋರೆ ಎಂಬ ಯುವಕನ ಟಿಕ್‍ಟಾಕ್ ಖಾತೆಯಿಂದ ಈ ವೀಡಿಯೋ ಅಪ್ಲೋಡ್ ಮಾಡಲಾಗಿದೆ. ಕೆಲವರು ಫನ್ನಿ ಕಮೆಂಟ್ ಮೂಲಕ ಯುವಕನನ್ನ ಟ್ರೋಲ್ ಮಾಡುತ್ತಿದ್ದರೆ, ಬಹುತೇಕರು ಯುವಕ ಬಿದ್ದಿರುವದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

    ವಿಡಿಯೋದಲ್ಲಿ ಏನಿದೆ?: ಕೋರೆ ಮನೆಯ ಬಾಗಿಲು ಹಾಕಿ ಟಿಕ್‍ಟಾಕ್ ಮಾಡಲು ಶುರು ಮಾಡಿದ್ದಾನೆ. ತನ್ನ ಮುಂದಿನ ಟೇಬಲ್ ಮೇಲೆ ಮೊಬೈಲ್ ಇಟ್ಟು, ಕೈಯಲ್ಲಿ ಭಾರವಾದ ಬ್ಲಾಂಕೇಟ್ ಹಿಡಿದು ಟಿಕ್‍ಟಾಕ್ ಮಾಡುವಷ್ಟರಲ್ಲಿ ಬಾಗಿಲು ತೆಗೆದು ಕೋರೆಯ ಅಂಕಲ್ ಒಳಗೆ ಬಂದಿದ್ದಾರೆ. ಒಳಗೆ ಬಂದ ವ್ಯಕ್ತಿ ಬಾಗಿಲು ಹಾಕದೇ ಹೋಗಿರೋದನ್ನ ಕೋರೆ ಗಮನಿಸಿರಲಿಲ್ಲ. ಬಾಗಿಲು ಮುಚ್ಚಿದೆ ಅಂತ ತಿಳಿದಿದ್ದ ಕೋರೆ ಹಿಂದೆ ಹೋಗುತ್ತಾ ಮೆಟ್ಟಿಲಿನಿಂದ ಆಯತಪ್ಪಿ ಬಿದ್ದಿದ್ದಾನೆ.

    ಕೋರೆ ಬೀಳುತ್ತಿದ್ದಂತೆ ಒಳಗಿನಿಂದ ಬಂದ ಅಂಕಲ್ ಬಾಗಿಲ ಬಳಿ ನೋಡಿದಾಗ, ಯುವಕ ಬ್ಲಾಂಕೇಟ್ ಹಿಡಿದು ಮೇಲೆ ಬರೋದನ್ನ ವೀಡಿಯೋದಲ್ಲಿ ನೋಡಬಹುದಾಗಿದೆ. ವೀಡಿಯೋ ನೋಡಿದ ನೆಟ್ಟಿಗರು ಟಿಕ್‍ಟಾಕ್ ಮಾಡುವ ಮುನ್ನ ಎಚ್ಚರಿಕೆ ವಹಿಸಬೇಕು ಎಂದು ಕೋರೆಗೆ ಸಲಹೆ ನೀಡಿದ್ದಾರೆ.

  • ಕುದಿಯುವ ಎಣ್ಣೆಗೆ ಕೈ ಹಾಕಿ ಬಜ್ಜಿ ಬೇಯಿಸುತ್ತಾಳೆ ಮಹಿಳೆ- ವಿಡಿಯೋ

    ಕುದಿಯುವ ಎಣ್ಣೆಗೆ ಕೈ ಹಾಕಿ ಬಜ್ಜಿ ಬೇಯಿಸುತ್ತಾಳೆ ಮಹಿಳೆ- ವಿಡಿಯೋ

    ನವದೆಹಲಿ: ಬಿಸಿ ಎಣ್ಣೆಯಲ್ಲಿ ಕೈ ಇಟ್ಟು ಜಾದು ಮಾಡುವುದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಮಹಿಳೆ ಯಾವುದೇ ಭಯವಿಲ್ಲ, ಯಾವುದರ ಸಹಾಯವಿಲ್ಲದೆ ಬೆರಳುಗಳನ್ನು ಎಣ್ಣೆಯೊಳಗೆ ಹಾಕಿ ಬಜ್ಜಿಯನ್ನು ಬೇಯಿಸಿದ್ದಾಳೆ.

    ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಮಹಿಳೆ ಕುದಿಯುವ ಎಣ್ಣೆಯಲ್ಲಿ ಬೆರಳುಗಳನ್ನು ಎದ್ದಿ, ಬರಿಗೈಲೇ ಬಜ್ಜಿಗಳನ್ನು ತಿರುಗಿಸುತ್ತ ಬೇಯಿಸುತ್ತಾಳೆ. ಇಂತಹ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಳ್ಳಲಾಗಿದ್ದು, ಸಖತ್ ವೈರಲ್ ಆಗಿದೆ. ಅಲ್ಲದೆ ಇಕ್ಕಳು ಇಲ್ಲದ್ದಕ್ಕೆ ಎಂದು ಮಹಿಳೆ ಹೇಳಿರುವುದಾಗಿ ಟ್ವಿಟ್ಟರ್ ನಲ್ಲಿ ಬರೆದು ಪೋಸ್ಟ್ ಮಾಡಲಾಗಿದೆ.

    13 ಸೆಕೆಂಡ್‍ಗಳ ಈ ವಿಡಿಯೋ ಸಖತ್ ವೈರಲ್ ಆಗಿದ್ದು, ದೊಡ್ಡ ಬಾಣಲಿಯಲ್ಲಿ ಎಣ್ಣೆ ಕುದಿಯುತ್ತಿದ್ದು, ಮಹಿಳೆ ಇಕ್ಕಳ ಅಥವಾ ಇನ್ನಾವುದೋ ವಸ್ತುಗಳ ಸಹಾಯವಿಲ್ಲದೇ ಬಜ್ಜಿಯನ್ನು ತಿರುಗಿಸುವ ಬದಲು ತನ್ನ ಬೆರಳುಗಳಿಂದಲೇ ಅವುಗಳ್ನು ಹೊರಳಿಸಿ ಹಾಕುತ್ತಿದ್ದಾಳೆ. ಅಲ್ಲದೆ ವಿಡಿಯೋದ ಒಂದು ಭಾಗದಲ್ಲಿ ಮಹಿಳೆ ಕುದಿಯುವ ಎಣ್ಣೆಯನ್ನು ಕೈಯ್ಯಲ್ಲೇ ಹಿಡಿಯುತ್ತಾಳೆ. ಆದರೆ ಏನೂ ಆಗುವುದಿಲ್ಲ. ಇದನ್ನು ನೆರೆದಿದ್ದ ಜನಕ್ಕೆ ಸಹ ತೋರಿಸಿದ್ದಾಳೆ.

    ಮಹಿಳೆ ಎಣ್ಣೆಯನ್ನು ಕೈಯಲ್ಲಿ ಹಿಡಿದ ದೃಶ್ಯ ಮುಗಿಯುತ್ತಿದ್ದಂತೆ ನಂತರ ವಿಡಿಯೋ ಎಡಿಟ್ ಮಾಡಲಾಗಿದ್ದು, ಇಕ್ಕಳುಗಳ ಮಧ್ಯೆ ಮುಖವನ್ನು ತೋರಿಸಿ, ನಾನು ಇಲ್ಲಿ ಇರಲಿಲ್ಲ ಅನ್ನಿಸುತ್ತದೆ. ನಾನು ಭ್ರಮೆಯಲ್ಲಿದ್ದೆ ಅನ್ನಿಸುತ್ತದೆ ಎಂದು ವಿಡಿಯೋದಲ್ಲಿ ಹೇಳಲಾಗಿದೆ. ವಿಡಿಯೋ ಕಣ್ಣಾರೆ ಕಂಡರೂ ನೆಟ್ಟಿಗರು ಇದನ್ನು ನಂಬುತ್ತಿಲ್ಲ. ಸಾವಿರಾರು ಜನ ಕಮೆಂಟ್ ಮಾಡಿ ಲೈಕ್ ಮಾಡಿದ್ದಾರೆ. ಹಲವು ಜನ ಆಶ್ಚರ್ಯಕರ ರೀತಿಯಲ್ಲಿ ವಿವಿಧ ರೀತಿಯ ಕಮೆಂಟ್ ಮಾಡಿದ್ದಾರೆ.

  • ರಾಮಾಚಾರಿಗೆ ಐರಾಳ ಗೂಗ್ಲಿ- ಶೇರಿಂಗ್, ಕೇರಿಂಗ್ ವೀಡಿಯೋ ವೈರಲ್

    ರಾಮಾಚಾರಿಗೆ ಐರಾಳ ಗೂಗ್ಲಿ- ಶೇರಿಂಗ್, ಕೇರಿಂಗ್ ವೀಡಿಯೋ ವೈರಲ್

    ಬೆಂಗಳೂರು: ಸ್ಯಾಂಡಲ್‍ವುಡ್ ರಾಜಾಹುಲಿ, ರಾಕಿಂಗ್ ಸ್ಟಾರ್ ಯಶ್ ಗೆ ಪುತ್ರಿ ಐರಾ ಚಮಕ್ ನೀಡಿದ್ದಾಳೆ. ಮಗಳ ಜೊತೆಗಿನ ಮುದ್ದಾದ ವಿಡಿಯೋ ಹಂಚಿಕೊಂಡಿರುವ ಗಜಕೇಸರಿ, ಶೇರಿಂಗ್ ಮತ್ತು ಕೇರಿಂಗ್ ಎಂದು ಬರೆದುಕೊಂಡಿದ್ದಾರೆ.

    ತಂದೆ ಯಶ್ ಮುಂದೆ ಟೇಬಲ್ ಮೇಲೆ ಕುಳಿತ ಐರಾ ಐಸ್ ಕ್ರೀಂ ತಿನ್ನುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಪುತ್ರಿ ಐರಾ ಐಸ್ ಕ್ರೀಂ ತಿನ್ನುವಾಗ ತಮಗೂ ನೀಡುವಂತೆ ಯಶ್ ಕೇಳಿದ್ದಾರೆ. ಆದ್ರೆ ಐರಾ ಮಾತ್ರ ಜಾಣತನದಿಂದ ಐಸ್ ಕ್ರೀಂ ತುಂಬಿದ ಸ್ಪೂನ್ ತಂದೆ ಬಳಿ ತೆಗೆದುಕೊಂಡಿ ತಾನೇ ತಿನ್ನುವ ಮೂಲಕ ಗೂಗ್ಲಿಗೆ ಗೂಗ್ಲಿ ಹಾಕಿದ್ದಾರೆ.

     

    View this post on Instagram

     

    Sharing is caring… not when it comes to ICE CREAM ???? (Getting a dose of my own medicine here ????)

    A post shared by Yash (@thenameisyash) on

    ಪ್ಲೀಸ್ ಅಮ್ಮಾ, ಸ್ವಲ್ಪ ನೀಡು ಎಂದು ಯಶ್ ಕೇಳಿಕೊಂಡರೂ ಐರಾ ಮಾತ್ರ ಸ್ಪೂನ್ ಹತ್ತಿರ ತೆಗೆದುಕೊಂಡು ಹೋಗಿ ತಾನೇ ತಿಂದು ಚಮಕ್ ಕೊಟ್ಟಿದ್ದಾಳೆ. ಕೊನೆಗೆ ಮುಂದೆ ವಿಡಿಯೋ ಮಾಡುತ್ತಿದ್ದ ಮಾವನನ್ನ ಕರೆದ ಐರಾ, ಐಸ್ ಕ್ರೀಂ ತಿನ್ನಿಸುವಂತೆ ನಟಿಸಿ ಮಾಂಜಾ ಕೊಟ್ಟಿದ್ದಾಳೆ. ಕೆಲ ದಿನಗಳ ಹಿಂದೆ ಐರಾ ಲಾಲಿ ಹಾಡು ಸಹ ವೈರಲ್ ಆಗಿತ್ತು.

  • ದೇವಸ್ಥಾನದ ಧಾರ್ಮಿಕ ಕಾರ್ಯದಲ್ಲಿ ಭಾಗಿಯಾದ ಮಾಜಿ ಶಾಸಕ ಮೊಯಿದ್ದೀನ್ ಬಾವಾಗೆ ಬೆದರಿಕೆ ಕರೆ

    ದೇವಸ್ಥಾನದ ಧಾರ್ಮಿಕ ಕಾರ್ಯದಲ್ಲಿ ಭಾಗಿಯಾದ ಮಾಜಿ ಶಾಸಕ ಮೊಯಿದ್ದೀನ್ ಬಾವಾಗೆ ಬೆದರಿಕೆ ಕರೆ

    – ಇದು ನೆಹರು ದೇಶವಲ್ಲ, ಮೋದಿ ದೇಶ
    – ಬೆದರಿಕೆ ಕರೆ ವಿರುದ್ಧ ದೂರು ದಾಖಲು

    ಮಂಗಳೂರು: ದೇವಸ್ಥಾನದ ನವರಾತ್ರಿ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾದ ಮಂಗಳೂರು ಉತ್ತರ ಕ್ಷೇತ್ರದ ಮಾಜಿ ಶಾಸಕ ಮೊಯಿದ್ದೀನ್ ಬಾವಾಗೆ ಮುಂಬೈನಿಂದ ಬೆದರಿಕೆ ಕರೆ ಬಂದಿದೆ.

    ಮಂಗಳೂರು ಹೊರವಲಯದ ಬಜಪೆ ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ನವರಾತ್ರಿಯ ಪ್ರಯುಕ್ತ ಕೊಪ್ಪರಿಗೆ ಇಡುವ ಕಾರ್ಯಕ್ರಮವಿತ್ತು. ಇದಕ್ಕೆ ಕ್ಷೇತ್ರದ ಆಹ್ವಾನದಂತೆ ಮಾಜಿ ಶಾಸಕ ಮೊಯಿದ್ದೀನ್ ಬಾವಾ ಭೇಟಿ ನೀಡಿದ್ದರು. ಅದೇ ವೇಳೆ ಕೊಪ್ಪರಿಗೆ ಇಡುವ ಧಾರ್ಮಿಕ ವಿಧಿ ವಿಧಾನ ನಡೆಯುತ್ತಿತ್ತು. ಹೀಗಾಗಿ ಕ್ಷೇತ್ರಾಡಳಿತ ಮಂಡಳಿಯವರು ಮಾಜಿ ಶಾಸಕ ಮೊಯಿದ್ದೀನ್ ಬಾವಾರಿಂದಲೂ ಕೊಪ್ಪರಿಗೆಗೆ (ಅನ್ನದಾನಕ್ಕೆ ಅಕ್ಕಿ ಸಂಗ್ರಹಿಸುವ ದೊಡ್ಡ ಪಾತ್ರೆ) ಅಕ್ಕಿ ಹಾಕುವಂತೆ ಹೇಳಿದ್ದು, ಬಾವಾ ಅವರು ಕೊಪ್ಪರಿಗೆಗೆ ಅಕ್ಕಿ ಹಾಕಿದ್ದಾರೆ.

    ಇದರ ವೀಡಿಯೋ ವೈರಲ್ ಆಗಿ ಪರ ವಿರೋಧ ಚರ್ಚೆ ನಡೆದಿತ್ತು. ಇದೇ ವೇಳೆ ಮುಂಬೈನಿಂದ ಅನಿಲ್ ಎಂದು ಹೇಳಿಕೊಂಡ ವ್ಯಕ್ತಿ ಮೊಯಿದ್ದೀನ್ ಬಾವಾ ಅವರ ಮೊಬೈಲ್‍ಗೆ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ. ಹಿಂದೂ ದೇವಸ್ಥಾನದಲ್ಲಿ ನೀವು ಕೊಪ್ಪರಿಗೆಗೆ ಅಕ್ಕಿ ಹಾಕಿದ್ದು ಯಾಕೆ? ನೀವು ದನದ ಮಾಂಸ ತಿನ್ನೋರು ಧಾರ್ಮಿಕ ಕಾರ್ಯದಲ್ಲಿ ಭಾಗಿಯಾಗೋದು ಸರಿಯಲ್ಲ. ಇದು ನೆಹರು ದೇಶವಲ್ಲ, ಮೋದಿಯ ದೇಶ, ಇನ್ನು ಮುಂದೆ ಹೀಗೆಲ್ಲಾ ಹೋದ್ರೆ ಹುಷಾರ್ ಎಂದು ತುಳುವಿನಲ್ಲಿ ಮಾತಾಡಿ ಬೆದರಿಕೆ ಹಾಕಲಾಗಿದೆ. ಈ ಬೆದರಿಕೆ ಕರೆಯ ಬಗ್ಗೆ ಮೊಯಿದ್ದೀನ್ ಬಾವಾ ಸುರತ್ಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದು ಎಫ್‍ಐಆರ್ ದಾಖಲಾಗಿದೆ.

    ಸುಂಕದಕಟ್ಟೆ ದೇವಸ್ಥಾನದ ನವರಾತ್ರಿಯ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾದ ಬಗ್ಗೆ ಮಾಜಿ ಶಾಸಕ ಮೊಯಿದ್ದೀನ್ ಬಾವಾ ಹೇಳಿಕೆ ನೀಡಿದ್ದು, ದೇವಸ್ಥಾನದ ನವರಾತ್ರಿ ಉತ್ಸವಕ್ಕೆ ಅಲ್ಲಿನ ಸ್ವಾಮೀಜಿಯವರ ಮಗ ನನ್ನನ್ನು ಆಹ್ವಾನಿದ್ದರು. ನಾನು ಅಲ್ಲಿನ ಮಾಜಿ ಶಾಸಕನ ನೆಲೆಯಲ್ಲಿ ಅಲ್ಲಿಗೆ ಹೋಗಿದ್ದೇನೆ. ನಾನು ಅಲ್ಲಿಗೆ ಹೋದಾಗ ಕೊಪ್ಪರಿಗೆಗೆ ಅಕ್ಕಿಯನ್ನ ಹಾಕುವ ಧಾರ್ಮಿಕ ಕಾರ್ಯ ನಡೆಯುತ್ತಿತ್ತು. ದೇವರ ಅನುಗ್ರಹದಂತೆ ನನಗೆ ಆ ಅವಕಾಶ ಸಿಕ್ಕಿತು ಅಂದುಕೊಳ್ತೇನೆ. ಆಗಷ್ಟೇ ಹಾಲಿ ಶಾಸಕರು ಬಂದು, ಅರ್ಜೆಂಟ್ ಇದೆ ಅಂತ ಹೋದರು ಅನ್ನೋದು ಗೊತ್ತಾಯ್ತು. ಅಲ್ಲಿದ್ದವರು ನನಗೆ ಅಕ್ಕಿ ಹಾಕಿ ಅಂತ ಹೇಳಿದಾಗ ಹಾಕಿದೆ.

    ನಾನು ಜಾತಿವಾದಿಯಲ್ಲ, ಜಾತ್ಯಾತೀತ ನೆಲೆಯಲ್ಲಿ ಮಾಡಿದೆ. ಇದರಲ್ಲಿ ಯಾರ ಮನಸ್ಸಿಗಾದರೂ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ. ನಾನು ಅಲ್ಲಿ ಸೋತಿದ್ದರೂ ಜನರ ಪ್ರೀತಿ ಇಂದಿಗೂ ನನಗಿದೆ. ಚುನಾವಣೆ ವೇಳೆ ನಡೆದ ಒಂದು ಕೊಲೆಯನ್ನು ನನ್ನ ತಲೆಗೆ ಕಟ್ಟಿ ಸೋಲಿಸಿದ್ದರು. ಈ ಷಡ್ಯಂತ್ರದಿಂದ ಭರತ್ ಶೆಟ್ಟಿ ಅಲ್ಲಿ ಶಾಸಕನಾಗಿ ಆಯ್ಕೆಯಾಗಿದ್ದಾರೆ ಎಂದು ಮಾಜಿ ಶಾಸಕ ಮೊಯಿದ್ದೀನ್ ಬಾವಾ ಪ್ರತಿಕ್ರಿಯಿಸಿದ್ದಾರೆ.

  • ಎನ್‌ಕೌಂಟರ್‌ ಭಯ – ಕೈ ಎತ್ತಿ ಶರಣಾದ ಉಗ್ರ, ಸೈನಿಕರ ಕಾಲಿಗೆ ಅಡ್ಡ ಬಿದ್ದ ತಂದೆ

    ಎನ್‌ಕೌಂಟರ್‌ ಭಯ – ಕೈ ಎತ್ತಿ ಶರಣಾದ ಉಗ್ರ, ಸೈನಿಕರ ಕಾಲಿಗೆ ಅಡ್ಡ ಬಿದ್ದ ತಂದೆ

    ಶ್ರೀನಗರ: ಎನ್‌ಕೌಂಟರ್‌ ಕಾರ್ಯಾಚರಣೆಯ ವೇಳೆ ಯುವ ಉಗ್ರನೊಬ್ಬ ಭಾರತೀಯ ಸೇನೆಗೆ ಶರಣಾಗಿದ್ದಾನೆ.

    ಉಗ್ರರು ಇರುವ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಬುದ್ಗಾಂನಲ್ಲಿ ಸೇನೆ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ ಭಯಕ್ಕೆ ಬಿದ್ದ ಉಗ್ರನೊಬ್ಬ ಸೇನೆಗೆ ಶರಣಾಗಿದ್ದಾನೆ.

    ಪ್ರದೇಶವನ್ನು ಸೇನೆ ಸುತ್ತವರಿದ ವೇಳೆ ಉಗ್ರ ನಾನು ಶರಣಾಗುತ್ತಿದ್ದೇನೆ ಎಂದು ಹೇಳಿದ್ದಾನೆ. ಈ ವೇಳೆ ಸೈನಿಕರು, ನಿನ್ನನ್ನು ಏನು ಮಾಡುವುದಿಲ್ಲ. ಹತ್ತಿರ ಬರುವ ಮೊದಲು ಶರ್ಟ್‌ ತೆಗೆಯಬೇಕು ಎಂದು ಹೇಳಿದ್ದಾರೆ.

    ಹತ್ತಿರ ಬಂದ ಬಳಿಕ ಆತನ ದೇಹದಲ್ಲಿ ಯಾವುದಾದರೂ ಶಸ್ತ್ರಾಸ್ತ್ರಗಳು ಇದೆಯೇ ಎಂದು ಪರಿಶೀಲಿಸಿದ್ದಾರೆ. ಬಳಿಕ ಇತನ ತಂದೆ ಸ್ಥಳಕ್ಕೆ ಬಂದು ಸೈನಿಕರ ಕಾಲಿಗೆ ಬಿದ್ದು ಕೃತಜ್ಞತೆ ಹೇಳಿದ್ದಾರೆ. ಬಳಿಕ ಮಗನಿಗೆ ಮತ್ತೆ ಉಗ್ರರ ಜೊತೆ ಕೈ ಜೋಡಿಸಬೇಡ ಎಂದು ಬುದ್ಧಿವಾದ ಹೇಳಿದ್ದಾರೆ.

    ಈತ ಕೆಲ ದಿನಗಳ ಹಿಂದೆಯಷ್ಟೇ ಯುವಕ  ಉಗ್ರರ ಜೊತೆ ಸೇರಿದ್ದ. ಆತನ ಬಳಿಯಿಂದ ಎಕೆ 47 ರೈಫಲ್‌ ವಶಪಡಿಸಿಕೊಳ್ಳಲಾಗಿದೆ.

    ಈ ವಿಚಾರದ ಬಗ್ಗೆ ಭಾರತೀಯ ಸೇನೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, “ಅಕ್ಟೋಬರ್‌ 13 ರಂದು ವಿಶೇಷ ಪೊಲೀಸ್‌ ಅಧಿಕಾರಿ 2 ಎಕೆ 47 ರೈಫಲ್‌ ಜೊತೆ ಪರಾರಿಯಾದ ಬಗ್ಗೆ ವರದಿ ಬಂತು. ಇದೇ ದಿನ ಚಡೂರದಿಂದ ಜಹಾಂಗೀರ್‌ ಬಟ್‌ ಎಂಬಾತ ನಾಪತ್ತೆಯಾಗಿದ್ದ. ಈತನ ಕುಟುಂಬ ಈತನನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿತ್ತು. ಇಂದು ಬೆಳಗ್ಗೆ ನಡೆದ ಜಂಟಿ ಕಾರ್ಯಾಚರಣೆಯ ವೇಳೆ ಈತ ಪತ್ತೆಯಾಗಿ ಶರಣಾಗಿದ್ದಾನೆ” ಎಂದು ತಿಳಿಸಿದೆ.

    https://twitter.com/PawanDurani/status/1317077178866040838

    ಎನ್‌ಕೌಂಟರ್‌ ವೇಳೆ ಉಗ್ರರು ಸೇನೆಗೆ ಶರಣಾಗುವುದು ಅಪರೂಪದಲ್ಲಿ ಅಪರೂಪ. ಈ ಹಿಂದೆ ಅಗಸ್ಟ್‌ನಲ್ಲಿ ಶೋಪಿಯನ್‌ ಜಿಲ್ಲೆಯ ಕಿಲ್ಲೂರ ಗ್ರಾಮದಲ್ಲಿ ಸೇನೆ ಕಾರ್ಯಾಚರಣೆಗೆ ಇಳಿದಾಗ ಒಬ್ಬ ಉಗ್ರ ಶರಣಾಗಿದ್ದ. ಈ ಕಾರ್ಯಾಚರಣೆಯಲ್ಲಿ 4 ಮಂದಿ ಉಗ್ರರನ್ನು ಹತ್ಯೆ ಮಾಡಲಾಗಿತ್ತು.

    https://twitter.com/Delta6470/status/1317080787435450373