Tag: viral video

  • ಬೆಕ್ಕಿನ ಮರಿಗೆ ಹಾಲುಣಿಸಿದ ಶ್ವಾನದ ವೀಡಿಯೋ ವೈರಲ್

    ಬೆಕ್ಕಿನ ಮರಿಗೆ ಹಾಲುಣಿಸಿದ ಶ್ವಾನದ ವೀಡಿಯೋ ವೈರಲ್

    – ಬೆಕ್ಕಿನ ಮರಿಗೆ ತಾಯಿ ಪ್ರೀತಿ ತೋರಿದ ಶ್ವಾನ

    ಲಾಗೋಸ್: ಶ್ವಾನವೊಂದು ಬೆಕ್ಕಿನ ಮರಿಗೆ ಹಾಲುಣಿಸುತ್ತಿರುವ ಅಪರೂಪದ ವೀಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

    ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ವೀಡಿಯೋ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ. ನೈಜೀರಿಯಾದ ಹಳ್ಳಿಯೊಂದರಲ್ಲಿ ಶ್ವಾನ ಬೆಕ್ಕಿನ ಮರಿಗೆ ಹಾಲುಣಿಸುವ ಮೂಲಕವಾಗಿ ಸುದ್ದಿಯಾಗಿದೆ. ಟ್ವಿಟ್ಟರ್ ಖಾತೆಯಲ್ಲಿ ಈ ವೀಡಿಯೋವನ್ನು ನೋಡಿದ ನೆಟ್ಟಿಗರು ಮೆಚ್ಚಿ ಶೇರ್ ಮತ್ತು ಕಾಮೆಂಟ್ ಮಾಡುತ್ತಿದ್ದಾರೆ.

    ವೈರಲ್ ವೀಡಿಯೋದಲ್ಲಿ ಏನಿದೆ?
    ಬೀದಿಯಲ್ಲಿ ಮಲಗಿದ ಶ್ವಾನವು ತನ್ನ ಮಕ್ಕಳಂತೆ ಬೆಕ್ಕಿನ ಮರಿಗೆ ಹಾಲುಣಿಸುತ್ತಿದೆ. ನಾಯಿ ಬೆಕ್ಕಿನ ಮರಿಗೆ ಪ್ರಿತಿಯಿಂದ ಹಾಲುಣಿಸುತ್ತಿದೆ. ಸುತ್ತಮುತ್ತಲಿನ ಜನರು ಆ ದೃಶ್ಯವನ್ನು ಆಶ್ಚರ್ಯ ಮತ್ತು ಬೆರಗಾಗಿ ನೋಡುತ್ತಿದ್ದಾರೆ. 32 ಸೇಕೆಂಡ್‍ಗಳ ಈ ವೀಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ನಾಯಿಗೆ ಇರುವ ಮಾನವೀಯತೆ ಮತ್ತು ತಾಯಿ ಪ್ರೀತಿಯ ಕುರಿತಾಗಿ ಮೆಚ್ಚುಗೆಯ ಪ್ರಶಂಸೆಯ ನುಡಿಗಳನ್ನಾಡುತ್ತಿದ್ದಾರೆ.

  • ಬರ್ತ್ ಡೇ ಪಾರ್ಟಿ ವೀಡಿಯೋ ವೈರಲ್ – ಪೊಲೀಸರ ಅತಿಥಿಯಾದ ಯುವಕರು

    ಬರ್ತ್ ಡೇ ಪಾರ್ಟಿ ವೀಡಿಯೋ ವೈರಲ್ – ಪೊಲೀಸರ ಅತಿಥಿಯಾದ ಯುವಕರು

    ಲಕ್ನೋ: ಹುಟ್ಟು ಹಬ್ಬದ ಕೇಕ್ ಗನ್ ನಿಂದ ಕತ್ತರಿಸಿದ್ದ ಯುವಕರು ಪೊಲೀಸರ ಅತಿಥಿಯಾಗಿದ್ದಾರೆ. ಉತ್ತರ ಪ್ರದೇಶದ ಹಾಪುರ ಜಿಲ್ಲೆಯ ಕೆಲ ಯುವಕರ ಬರ್ತ್ ಡೇ ಪಾರ್ಟಿಯ ವೀಡಿಯೋ ವೈರಲ್ ಬಳಿಕ ಪೊಲೀಸರು ಇಬ್ಬರನ್ನ ಬಂಧಿಸಿದ್ದಾರೆ.

    ಜನವರಿ 10ರಂದು ಹಾಪುರ ಯುವಕರು ಬರ್ತ್ ಡೇ ಪಾರ್ಟಿ ಮಾಡಿದ್ದರು. ಇದರಲ್ಲಿ ಒಬ್ಬ ಗನ್ ಬಳಸಿ ಕೇಕ್ ಕತ್ತರಿಸಿದ್ದನು. ನಂತರ ಎಲ್ಲರೂ ಮದ್ಯ ಸೇವಿಸಿ ಕುಣಿದು ಕುಪ್ಪಳಿಸಿದರು. ಯುವಕರ ಬರ್ತ್ ಡೇ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

    ವೀಡಿಯೋ ವೈರಲ್ ಬಳಿಕ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರನ್ನ ಬಂಧಿಸಿದ್ದಾರೆ. ಯುವಕರ ಬಳಿಯಲ್ಲಿದ್ದ ಗನ್ ಹಾಗೂ ಎರಡು ಜೀವಂತ ಗುಂಡುಳನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಪಾರ್ಟಿಯಲ್ಲಿ ಭಾಗಿಯಾಗಿದ್ದ ಇನ್ನುಳಿದವರು ಮತ್ತು ಗನ್ ಇವರ ಬಳಿಯಲ್ಲಿ ಹೇಗೆ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

  • ತಮ್ಮ ಬೆಂಬಲದಿಂದ ಗೆದ್ದ ಸದಸ್ಯರಿಗೆ ಆಣೆ ಪ್ರಮಾಣ ಮಾಡಿಸಿಕೊಂಡ್ರಾ ಶಿವಲಿಂಗೇಗೌಡ..?

    ತಮ್ಮ ಬೆಂಬಲದಿಂದ ಗೆದ್ದ ಸದಸ್ಯರಿಗೆ ಆಣೆ ಪ್ರಮಾಣ ಮಾಡಿಸಿಕೊಂಡ್ರಾ ಶಿವಲಿಂಗೇಗೌಡ..?

    ಹಾಸನ: ಗ್ರಾಮಪಂಚಾಯ್ತಿ ಚುನಾವಣೆಯಲ್ಲಿ ಗೆದ್ದ ಸದಸ್ಯರನ್ನು ಜೇನುಕಲ್ ಬೆಟ್ಟದಲ್ಲಿ ಅರಸೀಕೆರೆ ಶಾಸಕ ಶಿವಲಿಂಗೇಗೌಡ ಪ್ರಮಾಣ ಮಾಡಿಸುತ್ತಿದ್ದಾರೆ ಎಂಬ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ತಮ್ಮ ಬೆಂಬಲದಿಂದ ಗೆದ್ದ ಸದಸ್ಯರು, ಬೇರೆಯವರ ಬಳಿ ಹೋಗದಂತೆ ಆಣೆ ಪ್ರಮಾಣ ಮಾಡಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ದೇವಸ್ಥಾನ ಮುಂದೆ ಶಾಸಕ ಶಿವಲಿಂಗೇಗೌಡ ನಿಂತಿದ್ದು, ಅವರ ಬಳಿ ಬರುವ ಸದಸ್ಯರು ದೇವರಿಗೆ ಕರ್ಪೂರ ಹಚ್ಚಿ ನಿಮ್ಮನ್ನು ಬಿಟ್ಟು ಹೋಗಲ್ಲ ಎಂದು ಹೇಳುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಇತ್ತೀಚಿಗೆ ಅರಸೀಕೆರೆಯಲ್ಲಿ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಸಂತೋಷ್ ಬಿಜೆಪಿ ಪಕ್ಷದ ಸಂಘಟನೆಯಲ್ಲಿ ತೊಡಗಿದ್ದಾರೆ. ಪದೇ ಪದೇ ಶಿವಲಿಂಗೇಗೌಡ ಮತ್ತು ಸಂತೋಷ್ ನಡುವೆ ರಾಜಕೀಯವಾಗಿ ಕಿತ್ತಾಟ ನಡೆಯುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಶಾಸಕರು ಆಣೆ ಪ್ರಮಾಣ ಮಾಡಿಸಿರಬಹುದೆಂಬ ಟೀಕೆ ವ್ಯಕ್ತವಾಗುತ್ತಿದೆ.

  • ಗ್ರಾಮಸ್ಥರಿಂದಲೇ ಅತ್ತಿಗೆ ಜೊತೆ ಮೈದುನನ ಮದುವೆ

    ಗ್ರಾಮಸ್ಥರಿಂದಲೇ ಅತ್ತಿಗೆ ಜೊತೆ ಮೈದುನನ ಮದುವೆ

    – ಬಲವಂತ ಮದುವೆ ವೀಡಿಯೋ ವೈರಲ್
    – ಮದುವೆಯಲ್ಲಿ ಯುವಕನ ಕಣ್ಣೀರು

    ಪಾಟ್ನಾ: ಗ್ರಾಮಸ್ಥರು ಮತ್ತು ಕುಟುಂಬಸ್ಥರೇ ಬಲವಂತವಾಗಿ ವಿಧವೆ ಅತ್ತಿಗೆ ಜೊತೆ ಮೈದುನನ ಮದುವೆ ಮಾಡಿಸಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ಬಿಹಾರದ ದರ್ಬಾಂಗ್ ಜಿಲ್ಲೆಯ ಮೋರಾ ಕ್ಷೇತ್ರದ ಖರಪುರ ಗ್ರಾಮದಲ್ಲಿ ಈ ಮದುವೆ ನಡೆದಿದೆ. ಕೆಲ ದಿನಗಳ ಹಿಂದೆಯೇ ಮಹಿಳೆಯ ಪತಿ ನಿಧನರಾಗಿದ್ದರು. ಅಣ್ಣನ ಸಾವಿನ ಬಳಿಕ ಯುವಕ ಅತ್ತಿಗೆ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಎಂಬ ಆರೋಪಗಳು ಕೇಳಿ ಬಂದಿವೆ. ಕೆಲವರು ಮಹಿಳೆ ಮತ್ತು ಯುವಕನನ್ನ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ ಎನ್ನಲಾಗಿದೆ.

    ಅನೈತಿಕ ಸಂಬಂಧದ ಆರೋಪಗಳು ಕೇಳಿ ಬಂದ ಹಿನ್ನೆಲೆ ಮಹಿಳೆಯ ಪೋಷಕರು ಆಕೆಯನ್ನ ತವರಿಗೆ ಕರೆದುಕೊಂಡು ಹೋಗಿದ್ದರು. ಮಹಿಳೆಯ ಕುಟುಂಬಸ್ಥರು ಯುವಕನಿಗೆ ಕರೆ ಮಾಡಿ ಗ್ರಾಮದ ಬಳಿಯ ದೇವಸ್ಥಾನಕ್ಕೆ ಕರೆಸಿಕೊಂಡಿದ್ದಾರೆ. ಈ ವೇಳೆ ಯುವಕನಿಗೆ ಬಲವಂತವಾಗಿ ಮದುವೆ ಮಾಡಿಸಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ವೈರಲ್ ಆಗಿರೋ ವೀಡಿಯೋದಲ್ಲಿ ಕಣ್ಣೀರು ಹಾಕೋದನ್ನ ಗಮನಿಸಬಗಹುದು. ವೀಡಿಯೋ ವೈರಲ್ ಬಳಿಕ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

     

  • ಮದ್ವೆಯಲ್ಲಿ ವರನ ಕುರ್ತಾ ಎಳೆದ ವಧು – ವೀಡಿಯೋ ನೋಡಿ ನಕ್ಕ ನೆಟ್ಟಿಗರು

    ಮದ್ವೆಯಲ್ಲಿ ವರನ ಕುರ್ತಾ ಎಳೆದ ವಧು – ವೀಡಿಯೋ ನೋಡಿ ನಕ್ಕ ನೆಟ್ಟಿಗರು

    ನವದೆಹಲಿ: ಪ್ರದಕ್ಷಿಣೆ ವೇಳೆ ತಪ್ಪು ಮಾರ್ಗವಾಗಿ ಹೊರಟಿದ್ದ ಪತಿಯನ್ನ ವಧು ಎಚ್ಚರಿಸಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವೀಡಿಯೋ ನೋಡಿದ ನೆಟ್ಟಿಗರು ನಕ್ಕು ನಕ್ಕು ಶೇರ್ ಮಾಡಿಕೊಂಡು, ಮದ್ವೆಯಾದ ಗಳಿಗೆಯಿಂದಲೇ ಪತಿಯನ್ನ ಸರಿ ಮಾರ್ಗದಲ್ಲಿರುವ ಪತ್ನಿ ಎಂದು ಬರೆದುಕೊಳ್ಳುತ್ತಿದ್ದಾರೆ.

    ಗುರುದ್ವಾರದಲ್ಲಿ ತಲೆ ಬಾಗಿಸಿ ನಮಸ್ಕರಿಸಿ ಎದ್ದು ಜೋಡಿ ನಿಂತಿದ್ದರು. ಈ ವೇಳೆ ಗುರುದ್ವಾರದಲ್ಲಿ ಸುತ್ತು ತೆಗೆದುಕೊಳ್ಳುವಾಗ ವರ ವಿರುದ್ಧ ದಿಕ್ಕಿನಿಂದ ಹೊರಟಿದ್ದನು. ಎಚ್ಚೆತ್ತ ವಧು ವರನ ಕುರ್ತಾ ಎಳೆದು ಈ ಕಡೆಯಿಂದ ಸುತ್ತು ಆರಂಭಿಸಬೇಕೆಂದು ಸನ್ನೆ ಮಾಡಿದ್ದಾಳೆ. ಈ ವೀಡಿಯೋ ಮಾಡುತ್ತಿದ್ದ ಕೆಲವರು ಜೋರಾಗಿ ನಕ್ಕಿದ್ದಾರೆ.

    ಐಪಿಎಸ್ ಅಧಿಕಾರಿ ದೀಪಾಂಶು ಕಬ್ರಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಇಂದು ಬೆಳಗ್ಗೆ ಈ ವೀಡಿಯೋ ಅಪ್ಲೋಡ್ ಮಾಡಿಕೊಂಡಿದ್ದು, ನಿಜವಾದ ಜೀವನ ಸಂಗಾತಿ. ನಿಮ್ಮ ಸದಾ ಸರಿಯಾದ ಮಾರ್ಗ ತೋರಿಸುತ್ತಿರಲಿ ಎಂದು ಬರೆದುಕೊಂಡಿದ್ದರು. ವೀಡಿಯೋ 27 ಸಾವಿರಕ್ಕೂ ಅಧಿಕ ವ್ಯೂವ್ ಪಡೆದುಕೊಂಡಿದ್ದು, 3.7 ಸಾವಿರಕ್ಕೂ ಅಧಿಕ ಲೈಕ್ಸ್ ಬಂದಿವೆ.

  • ಬಾಲಕನನ್ನ ಎಳೆದೊಯ್ದ ಗಾಳಿಪಟ – 30 ಅಡಿ ಎತ್ತರದಿಂದ ಬಿದ್ದ!

    ಬಾಲಕನನ್ನ ಎಳೆದೊಯ್ದ ಗಾಳಿಪಟ – 30 ಅಡಿ ಎತ್ತರದಿಂದ ಬಿದ್ದ!

    – ಮೊಬೈಲಿನಲ್ಲಿ ದೃಶ್ಯ ಸೆರೆ, ವೀಡಿಯೋ ವೈರಲ್

    ಜಕಾರ್ತ: 12 ವರ್ಷದ ಬಾಲಕನನ್ನು ಗಾಳಿಪಟ ಎಳೆದೊಯ್ದ ಘಟನೆ ಇಂಡೋನೇಷಿಯಾದಲ್ಲಿ ನಡೆದಿದೆ. ಬಾಲಕ 30 ಅಡಿ ಎತ್ತರದಿಂದ ಬೀಳುವ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

    ತನಗಿಂತ ಗಾತ್ರದಲ್ಲಿ ಮೂರು ಪಟ್ಟು ದೊಡ್ಡದಾದ ಡ್ರ್ಯಾಗನ್ ಪತಂಗವನ್ನ ಬಾಲಕ ಹಾರಿಸುತ್ತಿದ್ದನು. ಗಾಳಿಯಲ್ಲಿ ಏರಿದ ಗಾಳಿಪಟ ತನ್ನ ಜೊತೆಗೆ ಬಾಲಕನನ್ನ ಸಹ ಎಳೆದೊಯ್ದಿದೆ. ಮೇಲಕ್ಕೆ ಹೋದಂತೆ ಬ್ಯಾಲೆನ್ಸ್ ಕಳೆದುಕೊಂಡ ಬಾಲಕ ಕೈಯಲ್ಲಿದ್ದ ಗಾಳಿಪಟದ ಸೂತ್ರ ಬಿಟ್ಟ ಪರಿಣಾಮ 30 ಅಡಿ ಎತ್ತರದಿಂದ ಕೆಳಕ್ಕೆ ಬಿದ್ದಿದ್ದಾನೆ.

    ಬಾಲಕ ಬೀಳುತ್ತಿದ್ದಂತೆ ಸ್ಥಳದಲ್ಲಿದ್ದ ಜನರು ಆತನಿಗೆ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಡಿಸೆಂಬರ್ 1ರಂದು ಪ್ರಿಂಗ್ಸೆವ್ಯೂ ರೆಜೆನ್ಸಿಯಲ್ಲಿ ಈ ಘಟನೆ ನಡೆದಿದೆ. ಮೇಲಿಂದ ಬಿದ್ದ ಬಾಲಕನ ಕೈ ಮೂಳೆ ಮುರಿದಿದೆ ಎಂದು ವರದಿಯಾಗಿದೆ.

  • 80ರ ಅತ್ತೆಯನ್ನು ಮನೆಯಿಂದ ಹೊರಗೆ ಹಾಕಿದ ಸೊಸೆ- ವಿಡಿಯೋ ವೈರಲ್

    80ರ ಅತ್ತೆಯನ್ನು ಮನೆಯಿಂದ ಹೊರಗೆ ಹಾಕಿದ ಸೊಸೆ- ವಿಡಿಯೋ ವೈರಲ್

    – ಚಳಿಯಲ್ಲಿ ನಡುಗುತ್ತಾ ಮನೆ ಮುಂದೆ ಮಲಗಿದ ವೃದ್ಧೆ

    ಚಂಡೀಗಢ: ಸೊಸೆಯೊಬ್ಬಳು 80 ವರ್ಷದ ಅತ್ತೆಯನ್ನು ಮನೆಯಿಂದ ಹೊರಗೆ ಹಾಕಿ ವೃದ್ಧೆಯ ವಸ್ತುಗಳನ್ನು ಹೊರಗೆ ಎಸೆದಿರುವ ಘಟನೆ ಹರಿಯಾಣದ ಹಿಸಾರ್‍ನ ಆಜಾದ್ ನಗರದಲ್ಲಿ ನಡೆದಿದೆ.

    ಹಲ್ಲೆಗೊಳಗಾದ ವೃದ್ಧೆಯನ್ನು ಚನ್ನೋ (80) ಎಂದು ಗುರುತಿಸಲಾಗಿದೆ. ಸೊಸೆ ಶಕುಂತಲಾ ವಯಸ್ಸಾದ ಅತ್ತೆಯ ಮೇಲೆ ಹಲ್ಲೆ ಮಾಡಿದ್ದಾಳೆ ಮತ್ತು ವಸ್ತುಗಳನ್ನು ಮನೆಯಿಂದ ಹೊರಗೆ ಎಸೆದಿದ್ದಾಳೆ. ಈ ಚಳಿ ವಾತಾವರಣದಲ್ಲಿ ವಯಸ್ಸಾದ ಮಹಿಳೆ ಮನೆಯ ಹೊರಗೆ ಮಲಗಿರುವ ಸ್ಥಿತಿ ಕರುಣಾಜನಕವಾಗಿತ್ತು.

    ವಸ್ತುಗಳನ್ನು ಸಹ ಹೊರಗೆ ಎಸೆದಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನಂತರ ಪೊಲೀಸರು ಆರೋಪಿ ಮಹಿಳೆ ಶಕುಂತಲಾಳನ್ನು ಸೆಕ್ಷನ್ 323(ಸ್ವಯಂಪ್ರೇರಣೆಯಿಂದ ನೋವನ್ನುಂಟುಮಾಡುವುದು, ಸೆಕ್ಷನ್ 506(ಬೆದರಿಕೆ), 509 ಸೆಕ್ಷನ್( ಮಹಿಳೆಗೆ ಸನ್ನೆ, ಶಬ್ದ, ವಸ್ತು ಬಳಸಿ ಅವಮಾನಿಸುವುದು) ಅಡಿಯಲ್ಲಿ ಬಂಧಿಸಿದ್ದಾರೆ. ಡಿಎಸ್ಪಿ ಜೋಗೇಂದ್ರ ಶರ್ಮಾ ಆರೋಪಿ ಮಹಿಳೆಯ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಪೊಲೀಸ್ ಠಾಣೆಯ ಉಸ್ತುವಾರರಿಗೆ ಆದೇಶಿಸಿದ್ದಾರೆ.

    ವೃದ್ಧ ಮಹಿಳೆಯನ್ನು ಮನೆಯಿಂದ ಹೊರಗೆ ಹಾಕಿ ಹೊಡೆಯುವ ವಿಡಿಯೋ ವೈರಲ್ ಆಗಿತ್ತು. ನಾವು ವಿಚಾರಣೆ ನಡೆಸಿದಾಗ ಈ ಸಂದರ್ಭದಲ್ಲಿ, ವೃದ್ದೆ ಸೊಸೆ ತನ್ನ ಮೇಲೆ ಹಲ್ಲೆ ನಡೆಸಿ ಮನೆಯಿಂದ ಹೊರಗೆ ಓಡಿಸಿದಳು ಮತ್ತು ತನ್ನ ಸಾಮಾನುಗಳನ್ನು ಸಹ ರಸ್ತೆಗೆ ಎಸೆದಳು ಎಂದು ತಿಳಿಸಿದ್ದಾಳೆ. ನಾವು ಸ್ಥಳಕ್ಕೆ ಹೋದಾಗ ವೃದ್ಧೆ ಮನೆಯ ಹೊರಗೆ ಇದ್ದಳು. ಈಗ ತನ್ನ ಎರಡನೇ ಮಗನ ಮನೆಗೆ ಕರೆದೊಯ್ಯಲಾಗಿದೆ ಎಂದು ಆಜಾದ್ ನಗರ ಪೊಲೀಸ್ ಠಾಣೆಯ ಉಸ್ತುವಾರಿ ರೋಹ್ತಾಶ್ ತಿಳಿಸಿದ್ದಾರೆ.

    https://youtu.be/DWbFXH3cSbs

  • ಸೀರೆ ಧರಿಸಿ ಯುವತಿಯ ಬ್ಯಾಕ್‍ಫ್ಲಿಪ್- ವೀಡಿಯೋ ವೈರಲ್

    ಸೀರೆ ಧರಿಸಿ ಯುವತಿಯ ಬ್ಯಾಕ್‍ಫ್ಲಿಪ್- ವೀಡಿಯೋ ವೈರಲ್

    ನವದೆಹಲಿ: ಕಳೆದ ಎರಡು ದಿನಗಳಿಂದ ಯುವತಿಯ ಬ್ಯಾಕ್‍ಫ್ಲಿಪ್ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಸೀರೆ ಧರಿಸಿ ಮಾಡಿರುವ ಕಸರತ್ತು ಕಂಡ ನೆಟ್ಟಿಗರು ಮೆಚ್ಚುಗೆ ಸೂಚಿಸಿ ಶೇರ್ ಮಾಡಿಕೊಳ್ಳುತ್ತಿದ್ದಾರೆ.

    ಬ್ಯಾಕ್‍ಫ್ಲಿಪ್ ಮಾಡಿರುವ ಯುವತಿಯ ಹೆಸರು ಮಿಲಿ ಸರ್ಕಾರ. ಈ ಬ್ಯಾಕ್‍ಫ್ಲಿಪ್ ಸೇರಿದಂತೆ ಹಲವು ಕಸರತ್ತಿನ ವೀಡಿಯೋಗಳನ್ನು ಮಿಲಿ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ಮಿಲಿ ಓರ್ವ ಯೋಗಾಪಟು, ಕಟೆಂಪರಿ, ಡ್ಯಾನ್ಸರ್ ಆಗಿದ್ದಾರೆ. ಬಾಲಿವುಡ್ ನಟ ಟೈಗರ್ ಶ್ರಾಫ್ ಸಹ ಮಿಲಿಯ ಕಸರತ್ತಿಗೆ ಮೆಚ್ಚುಗೆ ಸೂಚಿಸಿ, ನಾನು ನಿಮ್ಮ ಅಭಿಮಾನಿ ಎಂದು ಕೊಂಡಾಡಿದ್ದಾರೆ. ಅದೇ ರೀತಿ ಮಹಿಳೆಯರು ಯಾವುದಕ್ಕೂ ಕಡಿಮೆ ಇಲ್ಲ. ಸೀರೆಯಲ್ಲಿದ್ದರೂ ವ್ಯಾಯಾಮಕ್ಕೂ ಸಿದ್ಧ ಎಂದು ಮಹಿಳಾ ನೆಟ್ಟಿಗರು ಮಿಲಿಯವರ ವೀಡಿಯೋ ಹಂಚಿಕೊಳ್ಳುತ್ತಿದ್ದಾರೆ.

     

    View this post on Instagram

     

    A post shared by mili (@milisarkar72)

    ಕೆಲ ದಿನಗಳ ಹಿಂದೆ ನಟಿ ಗುಲ್ ಪನಾಗ್ ಅವರು ಸೀರೆಯಲ್ಲಿಯೇ ಪುಶ್ ಅಪ್ ಮಾಡಿ ಅಚ್ಚರಿ ಮೂಡಿಸಿದ್ದರು. ಪುಶ್ ಅಪ್ ಮಾಡುತ್ತಿರುವ ವೀಡಿಯೋವನ್ನು ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದರು. ಅಲ್ಲದೆ ಎಂದಾದರೂ, ಎಲ್ಲಾದರೂ ಎಂದು ಕ್ಯಾಪ್ಷನ್ ಹಾಕಿದ್ದಾರೆ. ಈ ವೀಡಿಯೋ ಸಹ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ವೀಡಿಯೋ ಗುಲ್ ಪಾನಗ್ ಅಭಿಮಾನಿಗಳನ್ನು ಸ್ಫೂರ್ತಿಗೊಳಿಸಿದ್ದು, ಸಾಕಷ್ಟು ಕಾಮೆಂಟ್ ಗಳು ಬಂದಿದ್ದವು. ಇದಕ್ಕೂ ಮೊದಲು ನಟಿ ಮಂದಿರಾ ಬೇಡಿ ಸಹ ಸೀರೆಯಲ್ಲಿಯೇ ಪುಶ್ ಅಪ್ ಮಾಡಿದ್ದರು. ಇದನ್ನೂ ಓದಿ: ಸೀರೆಯಲ್ಲೇ ಪುಶ್ ಅಪ್ ಮಾಡಿದ ನಟಿಯ ವೀಡಿಯೋ ವೈರಲ್

     

    View this post on Instagram

     

    A post shared by mili (@milisarkar72)

  • ಸಿನಿಮಾ ಸೀನ್ ಅಲ್ಲ- ವೈರಲ್ ಆಯ್ತು ಐಪಿಎಸ್ ಅಧಿಕಾರಿ ಹಂಚಿಕೊಂಡ ವೀಡಿಯೋ

    ಸಿನಿಮಾ ಸೀನ್ ಅಲ್ಲ- ವೈರಲ್ ಆಯ್ತು ಐಪಿಎಸ್ ಅಧಿಕಾರಿ ಹಂಚಿಕೊಂಡ ವೀಡಿಯೋ

    ಚೆನ್ನೈ: ಐಪಿಎಸ್ ಅಧಿಕಾರಿ ಮಹೇಶ್ ಅಗರ್ವಾಲ್ ಹಂಚಿಕೊಂಡ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಪೊಲೀಸ್ ಅಧಿಕಾರಿಯ ಸಾಹಸಹಕ್ಕೆ ಮೆಚ್ಚುಗೆ ಸೂಚಿಸುತ್ತಿದ್ದಾರೆ.

    ಸಿನಿಮಾಗಳಲ್ಲಿ ಪೊಲೀಸರು ಕಳ್ಳರನ್ನ ಚೇಸ್ ಮಾಡಿ ಕಳ್ಳರನ್ನು ಹಿಡಿಯುವ ದೃಶ್ಯಗಳನ್ನ ನೋಡಿರುತ್ತೀರಿ. ಅಂತಹವುದೇ ಘಟನೆ ಚೆನ್ನೈನಲ್ಲಿ ನಡೆದಿದೆ. ಗ್ರೇಟರ್ ಚೆನ್ನೈನಲ್ಲಿ ಎಸ್‍ಐ ಅಂತ್ಲಿನ್ ರಮೇಶ್ ಮೊಬೈಲ್ ಕಳ್ಳರನ್ನ ಬೈಕಿನಲ್ಲಿ ಚೇಸ್ ಮಾಡಿ ಹಿಡಿದಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡ್ತಿದೆ.

    ಬೈಕ್ ಮೇಲೆ ಹೊರಟ ಇಬ್ಬರು ಮೊಬೈಲ್ ಕಳ್ಳರನ್ನ ರಮೇಶ್ ಹಿಂಬಾಲಿಸಿ ಹಿಡಿದಿದ್ದಾರೆ. ಓರ್ವ ಬೈಕಿನಿಂದ ಇಳಿದು ಓಡಿ ಹೋಗಿದ್ದಾನೆ. ಮತ್ತೋರ್ವ ಬೈಕ್ ನಲ್ಲಿ ಹೋಗಲು ಪ್ರಯತ್ನಿಸಿದ್ರೂ ಬಿಡದ ರಮೇಶ್ ಆತನ ಶರ್ಟ್ ಹಿಡಿದು ನಿಲ್ಲಿಸಿದ್ದಾರೆ. ಈ ಎಲ್ಲ ದೃಶ್ಯಗಳು ಕಟ್ಟಡವೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಕಳ್ಳರು ಒಟ್ಟು 11 ಮೊಬೈಲ್ ಕಳ್ಳತನ ಮಾಡಿದ್ದರು.

    ಎಸ್‍ಐ ರಮೇಶ್ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಐಪಿಎಸ್ ಮಹೇಶ್ ಅಗರ್ವಾಲ್ ತಮ್ಮ ಕಚೇರಿಗೆ ಕರೆಸಿಕೊಂಡು ಸ್ಮರಣಿಗೆ ನೀಡಿ ಗೌರವಿಸಿದ್ದಾರೆ. ಜೊತೆಗೆ ರಮೇಶ್ ಅವರ ಜೊತೆ ಟೀ ಪಾರ್ಟಿ ಮಾಡಿದ್ದಾರೆ.

  • ಗ್ರಾಮಸ್ಥನ ಮೇಲೆ ಬಿಜೆಪಿ ಸಂಸದ ಉದಾಸಿ ದರ್ಪ

    ಗ್ರಾಮಸ್ಥನ ಮೇಲೆ ಬಿಜೆಪಿ ಸಂಸದ ಉದಾಸಿ ದರ್ಪ

    – ಸಮಸ್ಯೆ ಹೇಳಲು ಬಂದ ವ್ಯಕ್ತಿಯನ್ನ ತಳ್ಳಿದ ಎಂಪಿ

    ಹಾವೇರಿ: ಸಮಸ್ಯೆ ಹೇಳಲು ಬಂದಿದ್ದ ಗ್ರಾಮಸ್ಥನ ಮೇಲೆ ಬಿಜೆಪಿ ಸಂಸದ ಶಿವಕುಮಾರ್ ಉದಾಸಿ ದರ್ಪ ತೋರಿದ್ದು, ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಂಸದರ ನಡೆಗೆ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

    ನವೆಂಬರ್ 20ರಂದು ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಸೋಮಸಾಗರ ಗ್ರಾಮದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಭೂಮಿ ಪೂಜೆಗೆ ಸಂಸದ ಶಿವಕುಮಾರ್ ಉದಾಸಿ ಆಗಮಿಸಿದ್ದರು. ಪೂಜೆ ಬಳಿಕ ಸಂಸದರ ಬಳಿ ಗ್ರಾಮದ ಶೇಖಪ್ಪ ಎಂಬವರು ತಮ್ಮ ಏರಿಯಾದ ಸಮಸ್ಯೆ ಹೇಳಲು ದೌಡಾಯಿಸಿದ್ದರು. ಸ್ಥಳೀಯ ಬಿಜೆಪಿ ಮುಖಂಡರೊಬ್ಬರ ಬಳಿ ಸಮಸ್ಯೆ ಹೇಳುತ್ತಿದ್ದಾಗ ಮಧ್ಯ ಪ್ರವೇಶಿಸಿ ಶಿವಕುಮಾರ್ ಉದಾಸಿ, ರಸ್ತೆ ಬಂದಾಗ ಬರ್ತಿಯಿಲ್ಲ ಎಂದರು. ಇದಕ್ಕೆ ಪ್ರತಿಯಾಗಿ ಬಂದದ್ದು ಆಯ್ತು, ನೋಡ್ಕೊಂಡದ್ದು ಆಯ್ತು ಎಂದು ಶೇಖರಪ್ಪ ಪ್ರತ್ಯುತ್ತರ ನೀಡಿದರು.

    ಗ್ರಾಮಸ್ಥನ ತಿರುಗೇಟಿಗೆ ಕೋಪಗೊಂಡ ಸಂಸದರು ಆಯ್ತು ನೋಡ್ಕೋ ಹೋಗ್ ಎಂದು ಎಡಗೈಯಿಂದ ಗ್ರಾಮಸ್ಥನನ್ನ ನೂಕಿದರು. ಗ್ರಾಮಸ್ಥನನ್ನು ನೂಕಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.