ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ಹಲವು ವಿಡಿಯೋ, ಫೋಟೋ ಹಾಗೂ ಪೋಸ್ಟ್‌ಗಳು ವೈರಲ್ ಆಗುತ್ತಲೇ ಇರುತ್ತೆ. ಆದರೆ ಇತ್ತೀಚೆಗೆ ಫೇಸ್‍ಬುಕ್, ಇನ್‍ಸ್ಟಾ, ಟಿಟ್ಟರ್ ಹೀಗೆ ಹಲವು ಪ್ರಸಿದ್ಧ ಸಾಮಾಜಿಕ ಜಾಲತಾಣಗಳಲ್ಲಿ ಚಿರತೆವೊಂದರ ಫೋಟೋ ವೈರಲ್ ಆಗುತ್ತಿದ್ದು, ಅದರಲ್ಲಿ ಚಿರತೆ ಎಲ್ಲಿದೆ ಎಂದು ಹುಡುಕುವ ಚಾಲೆಂಜ್ ನೆಟ್ಟಿಗರ ತಲೆಕೆಡಿಸಿದೆ.
ಈ ಚಾಲೆಂಜ್ ಬಗ್ಗೆ ಕೇಳಿದ ತಕ್ಷಣ ಎಂತಾ ಮುರ್ಖರಪ್ಪ, ಒಂದು ಚಿರತೆ ಹುಡುಕೋಕೆ ತಲೆ ಯಾಕೆ ಕೆಡಿಸಿಕೊಳ್ಳಬೇಕು? ಅಂತಹ ತಲೆಕೆಡಿಸುವ ಚಾಲೆಂಜಾ ಅದು ಎಂದನಿಸುತ್ತೆ. ಆದರೆ ಫೋಟೋದಲ್ಲಿ ಚಿರತೆ ಎಂದು ಕಂಡು ಹಿಡಿಯುವಾಗಲೇ ಎಷ್ಟು ತಲೆ ಕಡುತ್ತೆ ಎಂದು ತಿಳಿಯೋದು. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿರುವ ಚಿರತೆ ಕಂಡುಹಿಡಿಯುವ ಚಾಲೆಂಜ್ ಎಲ್ಲರ ಗಮನ ಸೆಳೆದಿದೆ. ಬಹುತೇಕ ನೆಟ್ಟಿಗರು ಎಲ್ಲಿದಿಯಪ್ಪ ಚಿರತೆ ಎಂದು ಹುಡುಕುವುದರಲ್ಲೇ ಬ್ಯುಸಿಯಾಗಿದ್ದಾರೆ.
ಮೊದಲು ಬೆಲ್ಲಾ ಲ್ಯಾಕ್ ಎಂಬ ಟ್ವಿಟ್ಟರ್ ಖಾತೆಯಿಂದ ಈ ಚಿರತೆ ಕಂಡು ಹಿಡಿಯುವ ಫೋಟೋ ಅಪ್ಲೋಡ್ ಮಾಡಲಾಗಿತ್ತು. ನನಗೆ ನನ್ನ ಸ್ನೇಹಿತರೊಬ್ಬರು ಈ ಫೋಟೋ ಕಳುಹಿಸಿ, ಚಿರತೆ ಎಲ್ಲದೆ ಎಂದು ಗುರುತಿಸು ಎಂದು ಚಾಲೆಂಜ್ ಮಾಡಿದರು. ಮೊದಲು ಜೋಕ್ ಅಂದುಕೊಂಡು ಚಾಲೆಂಜ್ ಸ್ವೀಕರಿಸಿದೆ. ಇದೆಷ್ಟು ತಲೆಕೆಡಿಸುತ್ತೆಂದು ಬಳಿಕ ಗೊತ್ತಾಯ್ತು. ನೀವು ಈ ಚಾಲೆಂಜ್ ಸ್ವೀಕರಿಸುತ್ತೀರಾ ಎಂದು ಬರೆದು ಟ್ವೀಟ್ ಮಾಡಿ ಸವಾಲ್ ಹಾಕಲಾಗಿತ್ತು.
https://twitter.com/ResisterDog22/status/1177531495755472896
ಈ ಟ್ವೀಟ್ ನೋಡಿದ ನೆಟ್ಟಿಗರು ತಾ ಮುಂದು, ನಾ ಮುಂದು ಎಂದು ಚಾಲೆಂಜ್ ಸ್ವೀಕರಿಸುತ್ತಿದ್ದು, ಈ ಚಿರತೆ ಹುಡುಕುವ ಚಾಲೆಂಜ್ ಸಾಮಾಜಿಕ ಜಾಲತಾಣದಲ್ಲಿ ಹೊಸ ಕ್ರೇಜ್ ಹುಟ್ಟಿಸಿದೆ. ಕೆಲವರು ಚಿರತೆ ಹುಡುಕಿ ಖುಷಿ ಪಟ್ಟರೆ, ಇನ್ನೂ ಕೆಲವರು ಎಲ್ಲಪ್ಪಾ ಚಿರತೆ ಕಾಣ್ತಾನೆ ಇಲ್ಲ ಎಂದು ತಲೆಕೆಡಿಸಿಕೊಂಡಿದ್ದಾರೆ. ಆದರೂ ಒಂಥಾರ ಚಾಲೆಂಜ್ ಚೆನ್ನಾಗಿದೆ ಎನ್ನುತ್ತಿದ್ದಾರೆ.
https://twitter.com/botanistlaura/status/1177842649006514177
ನಿಮ್ಮ ಸ್ನೇಹಿತರಿಗೂ ಈ ಫೋಟೋ ಶೇರ್ ಮಾಡಿ, ಯಾರು ಚಿರತೆ ಹುಡುಕಿ ಭೇಷ್ ಎನಿಸಿಕೊಳ್ಳುತ್ತಾರೆ. ಯಾರು ಚಿರತೆ ಕಾಣದೆ ಪಿಕಲಾಟಕ್ಕೆ ಬೀಳುತ್ತಾರೆ ಎಂದು ತಿಳಿದು ಮಜಾ ನೋಡಿ.
https://twitter.com/SagarJa79149004/status/1178514995140653057