Tag: virakta mutt

  • ಸಿಂದಗಿ ವಿರಕ್ತ ಮಠದ 1.28 ಎಕರೆ ಜಾಗ ಈಗ ವಕ್ಫ್‌ ಆಸ್ತಿ!

    ಸಿಂದಗಿ ವಿರಕ್ತ ಮಠದ 1.28 ಎಕರೆ ಜಾಗ ಈಗ ವಕ್ಫ್‌ ಆಸ್ತಿ!

    ವಿಜಯಪುರ: ಸಿಂದಗಿ (Sindagi) ಪಟ್ಟಣದ ವಿರಕ್ತ ಮಠದ (Virakta Mutt) ಆಸ್ತಿ ಇದೀಗ ವಕ್ಫ್ ಆಸ್ತಿಯಾಗಿದೆ. ಸರ್ವೆ ನಂ 1020 ರ ಅಸ್ತಿಯಲ್ಲಿ ಕಬರಸ್ಥಾನ ವಕ್ಫ್ ಬೋರ್ಡ್‌ (Waqf Board) ಎಂದು ನೋಂದಣಿಯಾಗಿದೆ.

    ಸಿದ್ದಲಿಂಗ ಸ್ವಾಮಿಜಿಗಳು ಈ ಮಠದ ಪೀಠಾಧಿಪತಿಗಳಾಗಿದ್ದಾಗ ಪಹಣಿಯ ಕಾಲಂ ನಂ 11 ಖಾಲಿ ಇತ್ತು. 2018 – 2019 ರಲ್ಲಿ ವಕ್ಫ್ ಬೋರ್ಡ್‌ ಎಂದು ಸೇರ್ಪಡೆಯಾಗಿದೆ.  ಇದನ್ನೂ ಓದಿ: ವಿಜಯಪುರ ಆಯ್ತು ಈಗ ಯಾದಗಿರಿಯ 1440 ರೈತರಿಗೆ ವಕ್ಫ್‌ ಬಿಗ್ ಶಾಕ್!

    ವಕ್ಫ್ ಬೋರ್ಡ್‌ಗೆ 1.28 ಎಕರೆ ಆಸ್ತಿಯನ್ನು ಸೇರಿಸಿದ್ದಕ್ಕೆ ಮಠದ ಭಕ್ತರ ತೀವ್ರ ವಿರೋಧ ಹಾಗೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. 13ನೇ ಶತಮಾನದಲ್ಲಿ ಸ್ಥಾಪನೆಯಾಗಿರುವ ಮಠ ಖಬರಸ್ಥಾನ ವಕ್ಫ್ ಬೋರ್ಡ್‌ ಆಗಿದ್ದು ಹೇಗೆ ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಇದೆ ರೀತಿ ಸಿಂದಗಿ ತಾಲೂಕಿನಲ್ಲಿ ಅನೇಕ ಹಿಂದೂ ಮಠಗಳು ಆಸ್ತಿ ವಕ್ಫ್ ಬೋರ್ಡ್‌ ಸೇರಿದೆ ಎಂಬ ಶಂಕೆಯನ್ನು ಭಕ್ತರು ವ್ಯಕ್ತಪಡಿಸಿದ್ದಾರೆ. ವಕ್ಫ್‌ ಬೋರ್ಡ್‌ಗೆ ಸೇರ್ಪಡೆಯಾದ ವಿಚಾರ ತಿಳಿದು ಭಕ್ತರು ಈಗ ಮಠದ ಮುಂದೆ ಜಮಾಯಿಸುತ್ತಿದ್ದಾರೆ.

  • ತೀವ್ರ ಹೃದಯಾಘಾತದಿಂದ ವಿರಕ್ತ ಮಠದ ಶ್ರೀಗಳು ವಿಧಿವಶ

    ತೀವ್ರ ಹೃದಯಾಘಾತದಿಂದ ವಿರಕ್ತ ಮಠದ ಶ್ರೀಗಳು ವಿಧಿವಶ

    ಕಲಬುರಗಿ: ತೀವ್ರ ಹೃದಯಾಘಾತದಿಂದ ವಿರಕ್ತ ಮಠದ ಶ್ರೀ ಸಿದ್ದರಾಮ ಮಹಾಸ್ವಾಮಿಗಳು (35) ವಿಧಿವಶರಾಗಿದ್ದಾರೆ.

    ಕಲಬುರಗಿ ಜಿಲ್ಲೆ ಕಾಳಗಿ ತಾಲೂಕಿನ ರಟಕಲ್ ಗ್ರಾಮದಲ್ಲಿರೋ ವಿರಕ್ತ ಮಠದ್ದಲ್ಲಿ ಇಂದು ನಸುಕಿನ ಜಾವ ತೀವ್ರ ಹೃದಯಾಘಾತದಿಂದ ಮಹಾಸ್ವಾಮಿಗಳು ಮೃತಪಟ್ಟಿದ್ದಾರೆ.

    ಇಂದು ಸಂಜೆ 5 ಗಂಟೆಗೆ ರಟಕಲ್ ಗ್ರಾಮದಲ್ಲಿ ಧಾರ್ಮಿಕ ವಿಧಿ-ವಿಧಾನದ ಪ್ರಕಾರ ಶ್ರೀಗಳ ಅಂತ್ಯಕ್ರಿಯೆ ನಡೆಯಲಿದೆ. ಭಾನುವಾರ ರಟಕಲ್ ಗ್ರಾಮದಲ್ಲಿ ಅದ್ಧೂರಿಯಾಗಿ ನಡೆದ ವಚನ ಸಂಗಮ ಕಾರ್ಯಕ್ರಮದಲ್ಲಿ ಶ್ರೀಗಳು ಭಾಗಿಯಾಗಿದ್ದರು.

    ಕಾರ್ಯಕ್ರಮದಲ್ಲಿ ಸಚಿವ ಡಾ ಶರಣಪ್ರಕಾಶ್ ಪಾಟೀಲ್, ಶಾಸಕ ಬಿಆರ್ ಪಾಟೀಲ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.

  • ಶ್ರೀಗಳು ಆರೋಪಿ ಅಷ್ಟೇ, ಅಪರಾಧಿ ಅಲ್ಲ: ಮುರುಘಾ ಶ್ರೀ ಆಪ್ತ

    ಶ್ರೀಗಳು ಆರೋಪಿ ಅಷ್ಟೇ, ಅಪರಾಧಿ ಅಲ್ಲ: ಮುರುಘಾ ಶ್ರೀ ಆಪ್ತ

    ದಾವಣಗೆರೆ: ಮುರುಘಾ ಶ್ರೀಗಳು (Murugha Shree) ಆರೋಪಿ ಅಷ್ಟೇ, ಅಪರಾಧಿ ಅಲ್ಲ. ಇದು ಅನಿರೀಕ್ಷಿತ ಆದೇಶ ಎಂದು ಶ್ರೀಗಳ ಆಪ್ತ ಶಿವಶಂಕರ್ ಹೇಳಿದ್ದಾರೆ.

    ಶ್ರೀಗಳ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿಯಾಗುತ್ತಿದ್ದಂತೆಯೇ ವಿರಕ್ತ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನಿಗೆ ತಲೆ ಬಾಗುವುದಾಗಿ ಶ್ರೀಗಳು ಹೇಳಿದ್ದಾರೆ. ಇದರ ಹಿಂದೆ ಷಡ್ಯಂತ್ರ ಇದೆ. ಶ್ರೀಗಳು ಆರೋಪಿ ಅಷ್ಟೇ, ಅಪರಾಧಿ ಅಲ್ಲ ಎಂದು ಹೇಳಿದರು.

    ನಮ್ಮ ವಕೀಲರು ಮುಂದಿನ ಕ್ರಮಗಳನ್ನು ಕೈಗೊಳ್ಳುತ್ತಾರೆ. ಸಂಕಷ್ಟ ಎಸುರಿದಲು ಶ್ರೀಗಳು ಸಿದ್ಧರಿದ್ದಾರೆ. ಕೋರ್ಟ್ ಆದೇಶದಿಂದ ಖುಷಿ, ದುಃಖ ಅಂತೇನಿಲ್ಲ. ಇದೊಂದು ಅನಿರೀಕ್ಷಿತ ಆದೇಶವಾಗಿದೆ ಎಂದು ಅವರು ತಿಳಿಸಿದರು. ಇದನ್ನೂ ಓದಿ: ಮುರುಘಾ ಶ್ರೀಗಳಿಗೆ ಮತ್ತೆ ಅರೆಸ್ಟ್ ವಾರೆಂಟ್ ಜಾರಿ

    ಪೋಕ್ಸೋ ಕೇಸಿನಲ್ಲಿ ಶ್ರೀಗಳಿಗೆ ಅರೆಸ್ಟ್ ವಾರೆಂಟ್ ಜಾರಿಯಾಗಿದೆ. ಶ್ರೀಗಳು ಮೊದಲನೇ ಕೇಸಿನಲ್ಲಿ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದರು. ಇದೀಗ 2ನೇ ಕೇಸಿನಲ್ಲಿ ಬಂಧಿಸುವಂತೆ ಚಿತ್ರದುರ್ಗ ಜಿಲ್ಲಾ ನ್ಯಾಯಾಲಯ ಆದೇಶ ಮಾಡಿದೆ. ಈ ಮೂಲಕ ಕೇವಲ ನಾಲ್ಕೇ ದಿನಕ್ಕೆ ಶ್ರೀಗಳಿಗೆ ಮತ್ತೆ ಬಂಧನದ ಭೀತಿ ಶುರುವಾಗಿದೆ.