Tag: Viraat

  • ದಿನಕರ್ ತೂಗುದೀಪ್ ನಿರ್ದೇಶನದ ‘ರಾಯಲ್’ ಚಿತ್ರದ ಫಸ್ಟ್ ಸಾಂಗ್ ರಿಲೀಸ್

    ದಿನಕರ್ ತೂಗುದೀಪ್ ನಿರ್ದೇಶನದ ‘ರಾಯಲ್’ ಚಿತ್ರದ ಫಸ್ಟ್ ಸಾಂಗ್ ರಿಲೀಸ್

    ‘ರಾಯಲ್’ ಆಗಿ ಕಥೆ ಹೇಳೋಕೆ ನಟ ವಿರಾಟ್ (Viraat) ಮತ್ತು ದಿನಕರ್ ತೂಗುದೀಪ್ (Dinakar Thoogudeepa) ರೆಡಿಯಾಗಿದ್ದಾರೆ. ಸದ್ಯ ಈ ಸಿನಿಮಾದ ಮೊದಲ ಹಾಡು ರಿಲೀಸ್ ಮಾಡುವ ಮೂಲಕ ಪ್ರೇಕ್ಷಕರಿಗೆ ಸರ್ಪ್ರೈಸ್ ನೀಡಿದ್ದಾರೆ. ಲಲನೆಯರ ಜೊತೆ ವಿರಾಟ್ ಬಿಂದಾಸ್ ಆಗಿ ಹೆಜ್ಜೆ ಹಾಕಿದ್ದಾರೆ.

    ‘ನಾನೇ ಕೃಷ್ಣ, ನಾನೇ ಶ್ಯಾಮ’ ಎಂಬ ಹಾಡು ರಿಲೀಸ್ ಆಗಿದೆ. ಈ ಸಾಂಗ್ ಅದ್ಭುತವಾಗಿ ಮೂಡಿ ಬಂದಿದೆ. ವಿ.ನಾಗೇಂದ್ರ ಪ್ರಸಾದ್ ಬರೆದ ಸಾಹಿತ್ಯಕ್ಕೆ, ಸಂಜಿತ್ ಹೆಗ್ಡೆ ಧ್ವನಿಯಾಗಿದ್ದಾರೆ. ಈ ಕಲರ್‌ಫುಲ್ ಹಾಡಿಗೆ ವಿರಾಟ್ ಸಖತ್ ಆಗಿ ಹೆಜ್ಜೆ ಹಾಕಿದ್ದಾರೆ. ಇದನ್ನೂ ಓದಿ:ಕಮಲ್ ಹಾಸನ್ ಬದಲು ವಿಜಯ್ ಸೇತುಪತಿ ಎಂಟ್ರಿ

    ಈ ಚಿತ್ರದಲ್ಲಿ ವಿರಾಟ್ ಪಕ್ಕಾ ಮಾಸ್ & ಎನರ್ಜಿಟಿಕ್ ಹೀರೋ ಆಗಿ ಅಬ್ಬರಿಸೋಕೆ ರೆಡಿಯಾಗಿದ್ದಾರೆ. ‘ಕಿಸ್’ ಹೀರೋ ವಿರಾಟ್‌ಗೆ ನವಗ್ರಹ, ಜೊತೆ ಜೊತೆಯಲಿ, ಸಾರಥಿ ಸಿನಿಮಾಗಳ ನಿರ್ದೇಶಕ ದಿನಕರ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಇದೊಂದು ಪಕ್ಕಾ ಆ್ಯಕ್ಷನ್ ಕಮ್‌ ರೊಮ್ಯಾಂಟಿಕ್‌ ಸಿನಿಮಾ ಆಗಿದೆ.

    ಇನ್ನೂ ವಿರಾಟ್‌ಗೆ ನಾಯಕಿಯಾಗಿ ಸಲಗ ಸುಂದರಿ ಸಂಜನಾ ಆನಂದ್ (Sanjana Anand) ಜೋಡಿಯಾಗಿದ್ದಾರೆ. ಚಿತ್ರದಲ್ಲಿ ರಘು ಮುಖರ್ಜಿ, ಛಾಯಾ ಸಿಂಗ್, ಅಚ್ಯುತ್ ಕುಮಾರ್, ರಂಗಾಯಣ ರಘು, ಪ್ರಮೋದ್ ಶೆಟ್ಟಿ, ಅಭಿಲಾಷ್ ಸೇರಿದಂತೆ ಅನೇಕರು ನಟಿಸಿದ್ದಾರೆ.

  • ಕನ್ನಡದ ನಟಿ ವಿದಿಶಾ ಶ್ರೀವಾಸ್ತವ ಪ್ರೆಗ್ನೆನ್ಸಿ ಫೋಟೋಶೂಟ್

    ಕನ್ನಡದ ನಟಿ ವಿದಿಶಾ ಶ್ರೀವಾಸ್ತವ ಪ್ರೆಗ್ನೆನ್ಸಿ ಫೋಟೋಶೂಟ್

    ನ್ನಡದ ಜನಪ್ರಿಯ ನಟಿ ಶಾನ್ವಿ ಶ್ರೀವಾಸ್ತವ (Shanvi Srivastav) ಸಹೋದರಿ, ನಟಿ ವಿದಿಶಾ (Vidisha) ಅವರು ಇದೀಗ ಪ್ರೆಗ್ನೆನ್ಸಿ ಫೋಟೋಶೂಟ್‌ನಲ್ಲಿ ಮಿಂಚಿದ್ದಾರೆ. ಕನ್ನಡದ ‘ವಿರಾಟ್’ (Viraat) ಸಿನಿಮಾದ ನಟಿ ವಿದಿಶಾ, ಬೇಬಿ ಬಂಪ್ ಲುಕ್‌ನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ:ಬಾಲಿವುಡ್‌ ಚಿತ್ರಗಳ ಫ್ಲಾಪ್‌ ಬಳಿಕ ರಶ್ಮಿಕಾ ನಟನೆ 3ನೇ ಚಿತ್ರದ ಟೀಸರ್‌ ರಿಲೀಸ್

    ವಿರಾಟ್, ನಲಿ ನಲಿಯುತ ಸಿನಿಮಾಗಳಲ್ಲಿ ನಟಿಸಿರುವ ವಿದಿಶಾ ಶ್ರೀವಾಸ್ತವ ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ವಿದಿಶಾ ತಾಯಿಯಾಗುತ್ತಿರುವ ವಿಚಾರವನ್ನ ವಿದಿಶಾ ಸಹೋದರಿ ಶಾನ್ವಿ ಶ್ರೀವಾಸ್ತವ ಅವರು ಕೆಲ ತಿಂಗಳ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ಸಿಹಿಸುದ್ದಿ ಹಂಚಿಕೊಂಡಿದ್ದರು.

    2018ರಲ್ಲಿ ಸಾಯಕ್ ಎಂಬವರನ್ನು ನಟಿ ವಿದಿಶಾ ಬನಾರಸ್‌ನಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ಮದುವೆಯಾದರು. ಕೆಲ ವರ್ಷಗಳ ಡೇಟಿಂಗ್ ನಂತರ ಹಿರಿಯರ ಸಮ್ಮತಿಯ ಮೇರೆಗೆ ದಾಂಪತ್ಯ ಜೀವನಕ್ಕೆ ಸಾಯಕ್- ವಿದಿಶಾ ಕಾಲಿಟ್ಟಿದ್ದರು. ನಟಿ ವಿದಿಶಾ ಇದೀಗ ಚೊಚ್ಚಲ ಮಗುವಿನ ಬರುವಿಕೆಯ ಖುಷಿಯಲ್ಲಿದ್ದಾರೆ. ಇದೇ ಸಂತಸದಲ್ಲಿ ಪ್ರೆಗ್ನೆನ್ಸಿ ಫೋಟೋಶೂಟ್ (Pregnancy Photoshoot) ಮಾಡಿಸಿದ್ದಾರೆ.

    ನಟಿ ವಿದಿಶಾ ಇದೀಗ ತುಂಬು ಗರ್ಭಿಣಿಯಾಗಿದ್ದು, ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದಾರೆ. ಕೆಂಪು ಬಣ್ಣ- ಬಿಳಿ ಬಣ್ಣದ ಉಡುಗೆಯಲ್ಲಿ ಪತಿ ಜೊತೆ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಫೋಟೋಶೂಟ್‌ನಲ್ಲಿ ನಟಿಯ ಪ್ರೆಗ್ನೆನ್ಸಿಯ ಗ್ಲೋ ಎದ್ದು ಕಾಣುತ್ತಿದೆ. ವಿದಿಶಾ ಫೋಟೋಸ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ವಿದಿಶಾ ಸುಸೂತ್ರವಾಗಿ ಹೆರಿಗೆ ಆಗಲಿ ಒಳ್ಳೆಯದಾಗಲಿ ಎಂದು ಫ್ಯಾನ್ಸ್ ಶುಭಕೋರಿದ್ದಾರೆ.

  • ‘ಬ್ಯಾಡ್‌ ಮ್ಯಾನರ್ಸ್‌’ ರಿಲೀಸ್‌ಗೂ ಮೊದಲೇ ಹೊಸ ಚಿತ್ರ ಕೈಗೆತ್ತಿಕೊಂಡ ನಿರ್ದೇಶಕ ಸೂರಿ

    ‘ಬ್ಯಾಡ್‌ ಮ್ಯಾನರ್ಸ್‌’ ರಿಲೀಸ್‌ಗೂ ಮೊದಲೇ ಹೊಸ ಚಿತ್ರ ಕೈಗೆತ್ತಿಕೊಂಡ ನಿರ್ದೇಶಕ ಸೂರಿ

    ದುನಿಯಾ ಸೂರಿ ನಿರ್ದೇಶನದ ‘ಬ್ಯಾಡ್‌ ಮ್ಯಾನರ್ಸ್’ (Bad Manners)ಸಿನಿಮಾ ರಿಲೀಸ್‌ಗೂ ಮೊದಲೇ ಹೊಸ ಸಿನಿಮಾಗೆ ಸೂರಿ ಕೈಜೋಡಿಸಿದ್ದಾರೆ. ಇದೇ ಮೊದಲ ಬಾರಿಗೆ ಜಯಣ್ಣ ಫಿಲಂಸ್ ಜೊತೆ ನಿರ್ದೇಶಕ ಸೂರಿ ಸಿನಿಮಾ ಮಾಡಲು ಮುಂದಾಗಿದ್ದಾರೆ. ‘ಕಿಸ್’ (Kiss) ಹೀರೋ ವಿರಾಟ್‌ಗೆ ಸೂರಿ (Duniya Suri) ನಿರ್ದೇಶನ ಮಾಡ್ತಿದ್ದಾರೆ.

    ಜಯಣ್ಣ- ಬೋಗೇಂದ್ರ ಫಿಲಂಸ್ ಸಂಸ್ಥೆಯೊಂದಿಗೆ ಬಹು ಚಿತ್ರಗಳನ್ನ ಮಾಡಲು ನಟ ವಿರಾಟ್ ಸಹಿ ಮಾಡ್ತಿದ್ದಾರೆ. ಈ ಸಂಸ್ಥೆ ಜೊತೆ ದಿನಕರ್ ತೂಗುದೀಪ್ ನಿರ್ದೇಶನದ ‘ರಾಯಲ್’ (Royal) ಚಿತ್ರದಲ್ಲಿ ವಿರಾಟ್ ನಟನೆ ಮಾಡ್ತಿದ್ದಾರೆ. ಇದಾದ ಬಳಿಕ ವಿರಾಟ್‌ಗೆ ‘ಟಗರು’ ಖ್ಯಾತಿಯ ಸೂರಿ ಆ್ಯಕ್ಷನ್ ಕಟ್ ಹೇಳಲಿದ್ದಾರೆ.

     

    View this post on Instagram

     

    A post shared by Viraat (@viraat_official)

    ಅಭಿಷೇಕ್ ಅಂಬರೀಶ್ ನಟನೆಯ ‘ಬ್ಯಾಡ್‌ ಮ್ಯಾನರ್ಸ್’ ಸಿನಿಮಾ ಮೇ ಅಂತ್ಯದಲ್ಲಿ ತೆರೆಗೆ ಬರಲಿದೆ. ಈ ಸಿನಿಮಾದ ರಿಲೀಸ್ ಬಳಿಕ ವಿರಾಟ್ ಕೈಗೆತ್ತಿಕೊಳ್ಳಲಿದ್ದಾರೆ ನಿರ್ದೇಶಕ ಸೂರಿ. ಪಕ್ಕಾ ಮಾಸ್ ಎಂಟರ್‌ಟೈನರ್ ಸಿನಿಮಾ ಮಾಡಲು ಪ್ಲ್ಯಾನ್‌ ಮಾಡಿದ್ದಾರೆ. ಇದನ್ನೂ ಓದಿ:ನೆಟ್ಟಿಗರ ಹಾಸ್ಯಕ್ಕೆ ಗುರಿಯಾದ ‘ಬಿಗ್ ಬಾಸ್’ ಸೋನು ಗೌಡ ಬ್ರಾ ವೀಡಿಯೋ

    ಹೊಸ ಬಗೆಯ ಕಥೆ ಹೊತ್ತು  ಜಯಣ್ಣ ಫಿಲಂಸ್ ಅಡಿ ವಿರಾಟ್ ಲೈಟ್, ಕ್ಯಾಮೆರಾ, ಆ್ಯಕ್ಷನ್, ಎಂದು ಹೇಳಲು ರೆಡಿಯಾಗಿದ್ದಾರೆ. ದುನಿಯಾ ಸೂರಿ- ನಟ ವಿರಾಟ್ ಕಾಂಬೋ ಅದೆಷ್ಟರ ಮಟ್ಟಿಗೆ ಮೋಡಿ ಮಾಡಲಿದ್ದಾರೆ ಎಂದು ಕಾದುನೋಡಬೇಕಿದೆ.

  • ದಿನಕರ್ ತೂಗುದೀಪ್ ನಿರ್ದೇಶನದಲ್ಲಿ ʻರಾಯಲ್ʼ ಆಗಿ ಮಿಂಚಲು ವಿರಾಟ್ ರೆಡಿ

    ದಿನಕರ್ ತೂಗುದೀಪ್ ನಿರ್ದೇಶನದಲ್ಲಿ ʻರಾಯಲ್ʼ ಆಗಿ ಮಿಂಚಲು ವಿರಾಟ್ ರೆಡಿ

    `ಕಿಸ್’ ಸಿನಿಮಾ (Kiss Film) ಮೂಲಕ ಚಿತ್ರರಂಗದಲ್ಲಿ ಭರವಸೆಯ ನಟನಾಗಿ ಗಮನ ಸೆಳೆದ ವಿರಾಟ್ (Actor Viraat) ಇದೀಗ ಎರಡನೇ ಸಿನಿಮಾ ಬಗ್ಗೆ ಅಪ್‌ಡೇಟ್ ನೀಡಿದ್ದಾರೆ. ಖ್ಯಾತ ನಿರ್ದೇಶಕ ದಿನಕರ್ ತೂಗುದೀಪ್ (Dinakar Thoogudeepa) ನಿರ್ದೇಶನದಲ್ಲಿ ವಿರಾಟ್ ಹೊಸ ಸಿನಿಮಾ ಮೂಡಿ ಬಂದಿದೆ. ಈ ಚಿತ್ರದ ಟೈಟಲ್ ಕೂಡ ರಿವೀಲ್ ಆಗಿದೆ.

    ಎ.ಪಿ ಅರ್ಜುನ್‌ ನಿರ್ದೇಶನದ `ಕಿಸ್’ ಚಿತ್ರದಲ್ಲಿ ವಿರಾಟ್- ಶ್ರೀಲೀಲಾ (Sreeleela) ಜೋಡಿಯಾಗಿ ಸಿನಿಪ್ರೇಕ್ಷಕರ ಮನಗೆದ್ದಿದ್ದರು. ಈಗ `ಸಲಗ’ ಬ್ಯೂಟಿ ಸಂಜನಾ ಆನಂದ್ (Sanjana Anand) ಜೊತೆ ವಿರಾಟ್ `ರಾಯಲ್’ (Royal) ಆಗಿ ಮಿಂಚಲು ಬರುತ್ತಿದ್ದಾರೆ. ಚಿತ್ರದ ಟೈಟಲ್ ಮತ್ತು ಪೋಸ್ಟರ್ ಲುಕ್ ಮೂಲಕ ನಟ ಹೈಪ್ ಕ್ರಿಯೆಟ್ ಮಾಡಿದ್ದಾರೆ. ಇದನ್ನೂ ಓದಿ: ಸಿದ್-ಕಿಯಾರಾ ಮದುವೆ ಜೀವನದ ಬಗ್ಗೆ ಭವಿಷ್ಯ ನುಡಿದ ಜ್ಯೋತಿಷಿ

    ದಿನಕರ್ ತೂಗುದೀಪ್ ನಿರ್ದೇಶನದ, ಜಯಣ್ಣ ಫಿಲ್ಮ್ಸ್‌ ನಿರ್ಮಾಣದ ಹೊಸ ಸಿನಿಮಾಗೆ `ರಾಯಲ್’ ಎಂದು ಹೆಸರಿಡಲಾಗಿದೆ. ಈ ಚಿತ್ರದ ಟೈಟಲ್ ಅನ್ನ ಅಶ್ವಿನಿ ಪುನೀತ್ ರಾಜ್‌ಕುಮಾರ್ (Puneeth Rajkumar) ಮತ್ತು ಹೊಂಬಾಳೆ ಸಂಸ್ಥೆಯ (Hombale Films) ರೂವಾರಿ ವಿಜಯ್ ಕಿರಗಂದೂರು ಅವರು ಟೈಟಲ್ ಪೋಸ್ಟರ್ ಲಾಂಚ್ ಮಾಡಿದ್ದಾರೆ. ಈ ಮೂಲಕ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ.

    `ರಾಯಲ್’ ಆಗಿ ಜೀವನ ಮಾಡಬೇಕು ಎಂಬುದು ಪ್ರತಿಯೊಬ್ಬರ ಕನಸು. ಅದರಂತೆಯೇ ಈ ಚಿತ್ರದ ನಾಯಕ ವಿರಾಟ್ ಕೂಡ ಅಂದುಕೊಂಡಿರುತ್ತಾರೆ. ಮುಂದೆ ಹೇಗೆಲ್ಲಾ ತಿರುವು ಬರಲಿದೆ ಎಂಬುದನ್ನ ಬೆಳ್ಳಿಪರದೆಯಲ್ಲಿ ತೋರಿಸಲು ನಿರ್ದೇಶಕರು ಹೊರಟಿದ್ದಾರೆ.

    ಇನ್ನೂ `ರಾಯಲ್’ ಚಿತ್ರ ಪಕ್ಕಾ ಕರ್ಮರ್ಷಿಯಲ್ ಸಿನಿಮಾವಾಗಿದ್ದು, ಲವ್, ಆ್ಯಕ್ಷನ್, ಸೆಂಟಿಮೆಂಟ್, ಎಮೋಷನ್ಸ್ ಎಲ್ಲವನ್ನೂ ಒಳಗೊಂಡಿದೆ. ಮೊದಲ ಬಾರಿಗೆ ವಿರಾಟ್- ಸಂಜನಾ ಜೋಡಿ ತೆರೆಯ ಒಟ್ಟಿಗೆ ಕಾಣಿಸಿಕೊಳ್ತಿದ್ದು, ಚಿತ್ರದ 80% ರಷ್ಟು ಚಿತ್ರೀಕರಣವಾಗಿದೆ. ಈ ವರ್ಷದ ಅಂತ್ಯದಲ್ಲಿ ತೆರೆಗೆ ಅಬ್ಬರಿಸಲಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪುನೀತ್‌ಗಾಗಿ ಬರೆದ ಕಥೆಯಲ್ಲಿ ನಟ ವಿರಾಟ ನಟಿಸುತ್ತಾರಾ: ದಿನಕರ್ ತೂಗುದೀಪ್ ಸ್ಪಷ್ಟನೆ

    ಪುನೀತ್‌ಗಾಗಿ ಬರೆದ ಕಥೆಯಲ್ಲಿ ನಟ ವಿರಾಟ ನಟಿಸುತ್ತಾರಾ: ದಿನಕರ್ ತೂಗುದೀಪ್ ಸ್ಪಷ್ಟನೆ

    ನ್ನಡ ಚಿತ್ರರಂಗದಲ್ಲಿ ಜೊತೆ ಜೊತೆಯಲಿ, ಸಾರಥಿ, ನವಗ್ರಹ ಸಿನಿಮಾಗಳ ಮೂಲಕ ಸಂಚಲನ ಸೃಷ್ಟಿಸಿದ ನಿರ್ದೇಶಕ ದಿನಕರ್ ತೂಗುದೀಪ ಇದೀಗ `ಕಿಸ್’ ಚಿತ್ರದ ನಟ ವಿರಾಟ್‌ಗೆ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಇನ್ನು ಈ ಹಿಂದೆ ಪುನೀತ್ ರಾಜ್‌ಕುಮಾರ್‌ಗಾಗಿ ಹೆಣೆದಿದ್ದ ಕಥೆಯನ್ನೇ ವಿರಾಟ್‌ಗೆ ನಿರ್ದೇಶನ ಮಾಡ್ತಾರಾ ಎಂಬ ಸುದ್ದಿಗೆ ಇದೀಗ ಸ್ಪಷ್ಟನೆ ಸಿಕ್ಕಿದೆ.

    ದಿನಕರ್ ತೂಗುದೀಪ ಮಾಡಿದ್ದು ಕೆಲವೇ ಚಿತ್ರವಾಗಿದ್ರು, ಪವರ್‌ಫುಲ್ ಕಥೆಯೊಂದಿಗೆ ಬೆಳ್ಳಿತೆರೆಯಲ್ಲಿ ನಿರ್ದೇಶನದ ಮೂಲಕ ಕಮಾಲ್ ಮಾಡಿದ್ದಾರೆ. ಈ ಹಿಂದೆ ಪುನೀತ್ ರಾಜ್‌ಕುಮಾರ್‌ಗಾಗಿ ಒಂದೊಳ್ಳೆ ಕಥೆಯನ್ನ ದಿನಕರ್ ಮಾಡಿದ್ರು. ಆದರೆ ಪುನೀತ್ ಅಗಲಿಕೆಯ ಆ ಸಿನಿಮಾ ಕನಸು ಕನಸಾಗೇ ಉಳಿದಿದೆ. ಇದೀಗ ದಿನಕರ್ ನಿರ್ದೇಶನದಲ್ಲಿ `ಕಿಸ್’ ಚಿತ್ರದ ನಟ ವಿರಾಟ್ ಕಾಣಿಸಿಕೊಳ್ತಿದ್ದಾರೆ. ಅಪ್ಪುಗಾಗಿ ಹೆಣೆದಿದ್ದ ಕಥೆನಾ ಇದು ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ.

    ನಟಿಸಿದ ಮೊದಲ ಚಿತ್ರ `ಕಿಸ್’ ಸಿನಿಮಾದಲ್ಲೇ ತಾನೆಂತಹ ಕಲಾವಿದ ಅಂತಾ ಪ್ರೂವ್ ಮಾಡಿದ್ದ ವಿರಾಟ್ ಈಗ ಅದ್ದೂರಿ ಲವರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಜತೆಗೆ ದಿನಕರ್ ನಿರ್ದೇಶನದಲ್ಲಿ ನಟಿಸುವ ಅವಕಾಶ ಕೂಡ ಗಿಟ್ಟಿಸಿಕೊಂಡಿದ್ದಾರೆ. ರಘು ನಿಡುವಳ್ಳಿ ಬರೆದ ಕತೆಗೆ ದಿನಕರ್ ನಿರ್ದೇಶನ ಮಾಡ್ತಿದ್ದಾರೆ. ಪುನೀತ್‌ಗಾಗಿ ದಿನಕರ್ ಕಥೆ ಬರೆದಿದ್ರು ಆ ಕಥೆ ಹಾಗೇಯೇ ಇದೆ. ಮಾಸ್ ಕಮರ್ಷಿಯಲ್ ಕಥೆಗೆ ವಿರಾಟ್‌ನನ್ನು ನಾಯಕನಾಗಿ ಲಾಂಚ್ ಮಾಡ್ತಿದ್ದಾರೆ. ಪುನೀತ್‌ಗೆ ಬರೆದ ಕಥೆಗೂ ಈ ಹೊಸ ಪ್ರಾಜೆಕ್ಟ್ಗೂ ಯಾವುದೇ ಸಂಬಂಧವಿಲ್ಲ ಎಂಬ ಸ್ಪಷ್ಣನೆ ಸಿಕ್ಕಿದೆ. ಇದನ್ನೂ ಓದಿ: ರಕ್ತಸಿಕ್ತ ಅಧ್ಯಾಯಕ್ಕೆ ನಾಯಕನಾಗಲಿದ್ದಾರಾ ನೀನಾಸಂ ಸತೀಶ್?: 20 ಕೋಟಿ ಬಜೆಟ್, ಪ್ಯಾನ್ ಇಂಡಿಯಾ ಸಿನಿಮಾ

     

    View this post on Instagram

     

    A post shared by Viraat (@viraat_official)

    ʻಕಿಸ್ʼ ಚಿತ್ರದಲ್ಲಿ ಸ್ಟೈಲೀಶ್ ಆಗಿ ಕಾಣಿಸಿಕೊಂಡಿದ್ದ ನಟ ವಿರಾಟ್, ದಿನಕರ್ ನಿರ್ದೇಶನದ ಚಿತ್ರದಲ್ಲಿ ಫುಲ್ ಮಾಸ್ ಮತ್ತು ರಗಡ್ ಲುಕ್‌ನಲ್ಲಿ ಕಾಣಿಸಿಕೊಳ್ತಿದ್ದಾರೆ. ಗಟ್ಟಿ ಕಥೆ ಜತೆ ಕಮರ್ಷಿಯಲ್ ಕಂಟೆಂಟ್ ಹೊತ್ತು ದಿನಕರ್ ಮತ್ತು ವಿರಾಟ್ ಮಿಂಚಲು ರೆಡಿಯಾಗಿದ್ದಾರೆ.

  • ಪ್ರೀತಿಯಲ್ಲಿ ಸೋತ ಹೃದಯಗಳಿಗೆ ಹಾಡಿನ ಕಿಸ್!

    ಪ್ರೀತಿಯಲ್ಲಿ ಸೋತ ಹೃದಯಗಳಿಗೆ ಹಾಡಿನ ಕಿಸ್!

    ಬೆಂಗಳೂರು: ಈವರೆಗೆ ಬಿಡುಗಡೆಯಾಗಿರೋ ಎ.ಪಿ ಅರ್ಜುನ್ ನಿದೇಶನದ ಕಿಸ್ ಚಿತ್ರದ ಎಲ್ಲ ಹಾಡುಗಳೂ ಹಿಟ್ ಆಗಿವೆ. ಮಿಲಿಯನ್ನುಗಟ್ಟಲೆ ವೀವ್ಸ್ ಪಡೆದುಕೊಳ್ಳೋ ಮೂಲಕ ದಾಖಲೆಯನ್ನೂ ಬರೆದಿವೆ. ಇನ್ನೇನು ಕಿಸ್ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಈ ಹೊತ್ತಿನಲ್ಲಿ ಮತ್ತೊಂದು ಲಿರಿಕಲ್ ವೀಡಿಯೋ ಸಾಂಗ್ ಅನಾವರಣಗೊಂಡಿದೆ. ಎಲ್ಲ ಥರದ ವಿರಹದ ನೋವಿನ ಆತ್ಮನಿವೇದನೆಯಂತಿರೋ ಈ ಹಾಡೂ ಕೂಡಾ ಇದುವರೆಗೆ ಬಂದಿರೋ ಹಾಡುಗಳಂತೆಯೇ ಹಿಟ್ ಆಗೋ ಹಾದಿಯಲ್ಲಿ ಮುಂದುವರೆಯುತ್ತಿದೆ. ಇದರೊಂದಿಗೇ ಎ.ಪಿ ಅರ್ಜುನ್ ಪ್ರೀತಿಯಲ್ಲಿ ಸೋತ ಹೃದಯಗಳಿಗೆಲ್ಲ ಕಿಸ್ ಕೊಟ್ಟು ಸಮಾಧಾನಿಸಿದ್ದಾರೆ!

    ಅಷ್ಟಕ್ಕೂ ನಿರ್ದೇಶಕ ಎ.ಪಿ ಅರ್ಜುನ್ ಪ್ರೀತಿಯ ನವಿರು ಭಾವಗಳನ್ನು ಸೊಗಸಾದ ಕಥೆಗಳ ಮೂಲಕ ಕಟ್ಟಿಕೊಡುವಲ್ಲಿ ಸಿದ್ಧಹಸ್ತರು. ಅಂಬಾರಿಯಿಂದ ಇಲ್ಲಿಯವರೆಗೂ ಅರ್ಜುನ್ ನಿರ್ದೇಶನ ಮಾಡಿರೋ ಚಿತ್ರಗಳೆಲ್ಲವೂ ಪ್ರೀತಿಯ ಪುಳಕ ಹೊದ್ದ ಕಥೆಗಳ ಮೂಲಕವೇ ಗೆದ್ದಿವೆ. ಇದೀಗ ಅವರು ನಿರ್ದೇಶನ ಮಾಡಿ ಬಿಡುಗಡೆಗೆ ರೆಡಿಯಾಗಿರೋ ಕಿಸ್ ಕೂಡಾ ಪ್ರೇಮದ ಮತ್ತೊಂದು ಮಜಲಿನ ಕಥಾನಕ. ಅದರ ಪ್ಯಾಥೋ ಶೈಲಿಯ ಹಾಡೀಗ ಎಲ್ಲರ ಮನಸಿಗೂ ಕಿಸ್ ಕೊಟ್ಟಿದೆ. ಈ ಹಾಡನ್ನು ಅರ್ಜುನ್ ಪ್ರೀತಿಯಲ್ಲಿ ಸೋತ ಹೃದಯಗಳಿಗೆ ಅರ್ಪಿಸಿದ್ದಾರೆ.

    ಎ.ಪಿ. ಅರ್ಜುನ್ ಅವರೇ ಬರೆದಿರೋ ಈ ಹಾಡಿಗೆ ವಿ ಹರಿಕೃಷ್ಣ ಸಂಗೀತ ನೀಡಿದ್ದಾರೆ. ಸಂತೋಷ್ ವೆಂಕಿ ಧ್ವನಿಯಲ್ಲಿ ಮೂಡಿ ಬಂದಿರೋ ಕಣ್ಣ ನೀರಿದು ಜಾರುತಾ ಇದೆ ನೀನು ಇಲ್ಲದೆ ತುಂಬ ನೋವಾಗಿದೆ ಎಂಬ ಲಿರಿಕಲ್ ವೀಡಿಯೋ ಸಾಂಗ್ ಡಿ ಬೀಟ್ಸ್ ಯೂಟ್ಯೂಬ್ ಚಾನೆಲ್ ಮೂಲಕ ಬಿಡುಗಡೆಯಾಗಿದೆ. ಸದರಿ ಪ್ಯಾಥೋ ಮೂಡಿನ ಹಾಡಿಗೆ ಯೂಟ್ಯೂಬ್‍ನಲ್ಲಿ ವ್ಯಾಪಕ ಮೆಚ್ಚುಗೆ, ವೀಕ್ಷಣೆಗಳು ಸಿಗುತ್ತಿವೆ. ವೇಗವಾಗಿ ಹೆಚ್ಚು ಹೆಚ್ಚು ವೀವ್ಸ್ ಪಡೆಯುತ್ತಲೇ ಈ ಹಿಂದಿನ ಹಾಡುಗಳ ದಾಖಲೆಗಳನ್ನು ಬೀಟ್ ಮಾಡೋ ಆವೇಗದೊಂದಿಗೆ ಸಾಗುತ್ತಿದೆ. ಅಂದಹಾಗೆ ಕಿಸ್ ಚಿತ್ರ ಇದೇ ತಿಂಗಳ 27ರಂದು ಬಿಡುಗಡೆಯಾಗಲಿದೆ.

  • ಶುಕ್ರವಾರ ರಾಕಿಂಗ್ ಸ್ಟಾರ್ ಯಶ್ ‘ಕಿಸ್’ ಕೊಡ್ತಾರಂತೆ!

    ಶುಕ್ರವಾರ ರಾಕಿಂಗ್ ಸ್ಟಾರ್ ಯಶ್ ‘ಕಿಸ್’ ಕೊಡ್ತಾರಂತೆ!

    ಬೆಂಗಳೂರು: ಎ.ಪಿ. ಅರ್ಜುನ್ ನಿರ್ದೇಶನದ ಕಿಸ್ ಚಿತ್ರ ರೊಮ್ಯಾಂಟಿಕ್ ಹಾಡುಗಳೊಂದಿಗೆ ಬಹುನಿರೀಕ್ಷಿತ ಚಿತ್ರವಾಗಿ ನೆಲೆ ಕಂಡುಕೊಂಡಿದೆ. ತಡವಾದಷ್ಟೂ ಕಾತರವನ್ನು ಹೆಚ್ಚಾಗಿಸುತ್ತಿರೋ ಈ ಸಿನಿಮಾ ಇದೀಗ ಬಿಡುಗಡೆಯ ನಿರ್ಣಾಯಕ ಹಂತ ತಲುಪಿಕೊಂಡಿದೆ. ಅದರ ಭಾಗವಾಗಿ ಚೆಂದದ್ದೊಂದು ಟ್ರೇಲರ್ ಬಿಡುಗಡೆಗೊಳಿಸಲು ಚಿತ್ರತಂಡ ರೆಡಿಯಾಗಿದೆ. ಈ ಟ್ರೇಲರ್ ಅನ್ನು ರಾಕಿಂಗ್ ಸ್ಟಾರ್ ಯಶ್ ಪ್ರೀತಿಯಿಂದ ಬಿಡುಗಡೆ ಮಾಡಲಿದ್ದಾರೆ.

    ಇದೇ ಶುಕ್ರವಾರ, 23ನೇ ತಾರೀಕಿನಂದು ರಾಕಿಂಗ್ ಸ್ಟಾರ್ ಯಶ್ ಕಿಸ್ ಚಿತ್ರದ ಟ್ರೇಲರ್ ಅನ್ನು ಬಿಡುಗಡೆಗೊಳಿಸಲಿದ್ದಾರೆ. ನಿರ್ದೇಶಕ ಎ.ಪಿ ಅರ್ಜುನ್ ಮತ್ತು ಯಶ್ ಬಹು ಕಾಲದ ಸ್ನೇಹಿತರು. ಈ ಸೆಳೆತದಿಂದಲೇ ತಮ್ಮ ಬ್ಯುಸಿಯಾದ ಶೆಡ್ಯೂಲ್ ನಡುವೆಯೂ ಬಿಡುವು ಮಾಡಿಕೊಂಡು ಕಿಸ್ ಟ್ರೇಲರ್ ಲಾಂಚ್ ಮಾಡಲು ಅವರೊಪ್ಪಿಕೊಂಡಿದ್ದಾರೆ. ಈ ಮೂಲಕವೇ ಕಿಸ್ ಚಿತ್ರಕ್ಕೆ ಮತ್ತಷ್ಟು ಬಲ ಬಂದಂತೆಯೂ ಆಗಿದೆ. ಕಿಸ್ ಈವರೆಗೂ ಸೃಷ್ಟಿಸಿರೋ ಕ್ರೇಜ್ ಕಂಡು ಯಶ್ ಸಂತಸಗೊಂಡಿದ್ದಾರಂತೆ.

    ವಿರಾಟ್ ಮತ್ತು ಶ್ರೀಲೀಲಾ ಕಿಸ್‍ನಲ್ಲಿ ನಾಯಕ ನಾಯಕಿಯರಾಗಿ ನಟಿಸಿದ್ದಾರೆ. ಇವರಿಬ್ಬರ ಕಾಂಬಿನೇಷನ್ನಿನಲ್ಲಿ ಮೂಡಿ ಬಂದಿರೋ ಶೀಲ ಸುಶೀಲ ಯೂ ಡೋಂಟುವರಿ ಎಂಬ ಹಾಡಂತೂ ಈ ಕ್ಷಣಕ್ಕೂ ಟ್ರೆಂಡಿಂಗ್‍ನಲ್ಲಿದೆ. ಆ ನಂತರ ಬಂದಿರೋ ಹಾಡುಗಳೂ ಕೂಡಾ ಮಿಲಿಯನ್ನುಗಟ್ಟಲೆ ವೀವ್ಸ್‍ನೊಂದಿಗೆ ದಾಖಲೆ ಬರೆದಿವೆ. ಆದರೆ ಈ ಸಿನಿಮಾದ ಕಥೆ ಏನಿರಬಹುದೆಂಬ ಕುತೂಹಲ ಮಾತ್ರ ಹಾಗೆಯೇ ಉಳಿದು ಕೊಂಡಿದೆ. ಶುಕ್ರವಾರ ಯಶ್ ಬಿಡುಗಡೆಗೊಳಿಸಲಿರೋ ಟ್ರೇಲರ್‍ನಲ್ಲಿ ಅದರ ಸಿಳಿವಿರಬಹುದಾ? ಅಥವಾ ಆ ಮೂಲಕವೇ ಮತ್ತಷ್ಟು ಕ್ಯೂರಿಯಾಸಿಟಿಗೆ ಕಾರಣವಾಗುವಂತೆ ಈ ಟ್ರೇಲರ್ ಅನ್ನು ರೂಪಿಸಿದ್ದಾರಾ ಅನ್ನೋದೆಲ್ಲ ಜಾಹೀರಾಗಲು ಇನ್ನೊಂದು ದಿನ ಕಾಯಬೇಕಿದೆಯಷ್ಟೆ!