Tag: Vir Das

  • ಬೆಂಗಳೂರಿನಲ್ಲಿ ಆಯೋಜನೆಗೊಂಡಿದ್ದ ವೀರ್‌ ದಾಸ್‌ ಹಾಸ್ಯ ಕಾರ್ಯಕ್ರಮ ರದ್ದು

    ಬೆಂಗಳೂರಿನಲ್ಲಿ ಆಯೋಜನೆಗೊಂಡಿದ್ದ ವೀರ್‌ ದಾಸ್‌ ಹಾಸ್ಯ ಕಾರ್ಯಕ್ರಮ ರದ್ದು

    ನವದೆಹಲಿ: ಮಲ್ಲೇಶ್ವರದಲ್ಲಿರುವ ಚೌಡಯ್ಯ ಸ್ಮಾರಕ ಭವನದಲ್ಲಿ ಇಂದು ನಡೆಯಬೇಕಿದ್ದ ವೀರ್ ದಾಸ್(Vir Das) ಹಾಸ್ಯ ಕಾರ್ಯಕ್ರಮ ರದ್ದಾಗಿದೆ.

    ಇಂದು ಬೆಳಗ್ಗೆಯಿಂದ ಹಿಂದೂ ಜಾಗರಣ ವೇದಿಕೆ(Hindu Jagarana Vedike) ಪ್ರತಿಭಟನೆ ನಡೆಸುತ್ತಿತ್ತು. ಪ್ರತಿಭಟನೆ ಜೋರಾದ ಹಿನ್ನೆಲೆಯಲ್ಲಿ ಆಯೋಜಕರು ಹಾಸ್ಯ(Comedy) ಕಾರ್ಯಕ್ರಮ ರದ್ದು ಮಾಡುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.

    ಇಂದು ಎರಡು ಕಾರ್ಯಕ್ರಮ ನಡೆಯಬೇಕಿತ್ತು. ಆದರೆ ಭಾರೀ ವಿರೋಧ ಮತ್ತು ದೂರು ದಾಖಲಾಗಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮ ರದ್ದಾಗಿದೆ.

    ಹಿಂದೂ ಸಂಘಟನೆಗಳ ವಿರೋಧ ಯಾಕೆ?
    ಅಮೆರಿಕದಲ್ಲಿ ಭಾರತದ(India) ಬಗ್ಗೆ ಅತ್ಯಂತ ಕೆಟ್ಟದಾಗಿ ಹಾಸ್ಯ ಮಾಡಿ ಅವಹೇಳನ ಮಾಡಿದ್ದಾನೆ. ಈ ಕಾರಣಕ್ಕಾಗಿ ಮುಂಬೈ ಪೋಲಿಸರು ಇವನ ಮೇಲೆ ಪ್ರಕರಣವನ್ನು ದಾಖಲಿಸಿದ್ದರು. ವಿದೇಶದಲ್ಲಿ ಭಾರತದ ಪ್ರಧಾನಿ ಭಾರತದ ಮಹಿಳೆಯರ ವಿರುದ್ಧ ಮತ್ತು ಭಾರತದ ಘನತೆಯ ಬಗ್ಗೆ ಅತ್ಯಂತ ಕೆಟ್ಟದಾಗಿ ಅಪಮಾನ ಮಾಡಿದ ವ್ಯಕ್ತಿಯ ಕಾರ್ಯಕ್ರಮಕ್ಕೆ ನಮ್ಮ ರಾಜ್ಯದಲ್ಲಿ ಅವಕಾಶ ಕೊಡಬಾರದು.  ಇದನ್ನೂ ಓದಿ: ಪತ್ನಿಯನ್ನು ಕೊಚ್ಚಿ ಕೊಂದು ಮನೆಗೆ ಬೀಗ ಹಾಕಿ ಪರಾರಿಯಾದ ಪಾಪಿ ಪತಿ

    ಈತ ಕೆಲವು ದಿನಗಳ ಹಿಂದೆ ಅಮೇರಿಕದ ವಾಷಿಗ್ಟನ್ ಡಿಸಿಯಲ್ಲಿ ಮಾತನಾಡಿದ ಒಂದು ವಿಡಿಯೋದಲ್ಲಿ ತಾನು ಎಲ್ಲಿ ಮಹಿಳೆಯರನ್ನು ಬೆಳಗ್ಗೆ ಪೂಜೆ ಮಾಡಿ ರಾತ್ರಿ ಅವರ ಮೇಲೆ ಅತ್ಯಾಚಾರ ಮಾಡುವ ಭಾರತದಿಂದ ಬಂದಿದ್ದೇನೆ ಎಂದು ದೇಶದ ಮಹಿಳೆಯರ ಬಗ್ಗೆ ಕೆಟ್ಟದಾಗಿ ಅಪಮಾನ ಮಾಡಿದ್ದಾನೆ. ಇದು ಭಾರತದ ದಂಡ ಸಂಹಿತೆಯ ಪ್ರಕಾರ ಗಂಭೀರ ಅಪರಾಧವಾಗಿದೆ. ಹೀಗಿರುವಾಗ ಇಂತಹ ವಿವಾದಿತ ವ್ಯಕ್ತಿ ಬೆಂಗಳೂರಿನಂತಹ(Bengaluru) ಅತ್ಯಂತ ಕೋಮು ಸೂಕ್ಚ್ಮ ಪ್ರದೇಶದಲ್ಲಿ ಈ ರೀತಿಯ ವಿವಾದಿತ ಕಾರ್ಯಕ್ರಮಗಳಿಗೆ ಅವಕಾಶ ನೀಡುವುದು ಸರಿಯಲ್ಲ.

     

    ಈಗಾಗಲೇ ಕರ್ನಾಟಕದಲ್ಲಿ(Karnataka) ಕೋಮು ಘಟನೆಗಳ ಪ್ರಕರಣದಿಂದ ಅನೇಕ ಕಾನೂನು ಸುವ್ಯವಸ್ಥೆಯ ಸಮಸ್ಯೆಯನ್ನು ಎದುರಿಸುತ್ತಿರುವಾಗ ಪುನಃ ಕಾನೂನು ಸುವ್ಯವಸ್ಥೆಗೆ ಭಂಗ ತರುವ ಕಾರ್ಯಕ್ರಮಕ್ಕೆ ಅನುಮತಿ ನೀಡಬಾರದು. ಕೂಡಲೇ ಈ ಕಾರ್ಯಕ್ರಮವನ್ನು ರದ್ದು ಮಾಡಬೇಕು ಎಂದು ದೂರು ನೀಡಿದ್ದವು.

    Live Tv
    [brid partner=56869869 player=32851 video=960834 autoplay=true]

  • ಬೆಂಗಳೂರಿನಲ್ಲಿ ವೀರ್ ದಾಸ್ ಕಾರ್ಯಕ್ರಮಕ್ಕೆ ಅನುಮತಿ ಕೊಡಬೇಡಿ – ಹಿಂದೂ ಸಂಘಟನೆಗಳಿಂದ ದೂರು

    ಬೆಂಗಳೂರಿನಲ್ಲಿ ವೀರ್ ದಾಸ್ ಕಾರ್ಯಕ್ರಮಕ್ಕೆ ಅನುಮತಿ ಕೊಡಬೇಡಿ – ಹಿಂದೂ ಸಂಘಟನೆಗಳಿಂದ ದೂರು

    ಬೆಂಗಳೂರು: ಮಲ್ಲೇಶ್ವರದಲ್ಲಿರುವ ಚೌಡಯ್ಯ ಸ್ಮಾರಕ ಭವನದಲ್ಲಿ ಆಯೋಜನೆಗೊಂಡಿರುವ ವೀರ್ ದಾಸ್(Vir Das) ಕಾಮಿಡಿ ಕಾರ್ಯಕ್ರಮಕ್ಕೆ ಅನುಮತಿ ನೀಡಬಾರದು ಎಂದು ಹಿಂದೂ ಜನಜಾಗೃತಿ ಸಮಿತಿ ಮತ್ತು ಶ್ರೀರಾಮ ಸೇನೆ ಆಗ್ರಹಿಸಿದೆ.

    ಹಿಂದೂ ಜನಜಾಗೃತಿ ಸಮಿತಿಯ(Hindu Janajagriti Samiti) ರಾಜ್ಯ ವಕ್ತಾರ ಮೋಹನ ಗೌಡ, ಶ್ರೀರಾಮ‌ಸೇನೆಯ ಬೆಂಗಳೂರು ನಗರ ಅಧ್ಯಕ್ಷ ಚಂದ್ರಶೇಖರ ನೇತೃತ್ವದಲ್ಲಿ ವೈಯಾಲಿಕವಲ್ ಪೋಲಿಸ್ ಠಾಣೆಯಲ್ಲಿ ಸಂಘಟನೆಗಳು ದೂರು ನೀಡಿವೆ.

    ಮೋಹ‌ನ ಗೌಡ ಪ್ರತಿಕ್ರಿಯಿಸಿ, ವೀರ್ ದಾಸ್‌ ಎನ್ನುವ ವಿವಾದಿತ ಕಾಮಿಡಿಯನ್ ನ.12 ರಂದು ಕಾಮಿಡಿ ಶೋವನ್ನು ಆಯೋಜನೆ ಮಾಡಿರುವುದು ಗಮನಕ್ಕೆ ಬಂದಿದೆ. ಈ ಹಿಂದೆ ಈತ ಅಮೆರಿಕದಲ್ಲಿ ಭಾರತದ(India) ಬಗ್ಗೆ ಅತ್ಯಂತ ಕೆಟ್ಟದಾಗಿ ಕಾಮಿಡಿ ಮಾಡಿ ಅವಹೇಳನ ಮಾಡಿದ್ದನು. ಈ ಕಾರಣಕ್ಕಾಗಿ ಮುಂಬೈ ಪೋಲಿಸರು ಇವನ ಮೇಲೆ ಪ್ರಕರಣವನ್ನು ದಾಖಲಿಸಿದ್ದರು. ಹೀಗೆ ವಿದೇಶದಲ್ಲಿ ಭಾರತದ ಪ್ರಧಾನಿ ಭಾರತದ ಮಹಿಳೆಯರ ವಿರುದ್ಧ ಮತ್ತು ಭಾರತದ ಘನತೆಯ ಬಗ್ಗೆ ಅತ್ಯಂತ ಕೆಟ್ಟದಾಗಿ ಅಪಮಾನ ಮಾಡಿದ್ದಾನೆ ಎಂದು ದೂರಿದರು. ಇದನ್ನೂ ಓದಿ: ಹಿಂದೂ ಪದದ ಅರ್ಥವೇ ಅಶ್ಲೀಲ – ಜಾರಕಿಹೊಳಿ ಹೇಳಿಕೆಯನ್ನು ಖಂಡಿಸಿದ ಕಾಂಗ್ರೆಸ್‌

    ಈತ ಕೆಲವು ದಿನಗಳ ಹಿಂದೆ ಅಮೇರಿಕದ ವಾಷಿಗ್ಟನ್ ಡಿಸಿಯಲ್ಲಿ ಮಾತನಾಡಿದ ಒಂದು ವಿಡಿಯೋದಲ್ಲಿ ತಾನು ಎಲ್ಲಿ ಮಹಿಳೆಯರನ್ನು ಬೆಳಗ್ಗೆ ಪೂಜೆ ಮಾಡಿ ರಾತ್ರಿ ಅವರ ಮೇಲೆ ಅತ್ಯಾಚಾರ ಮಾಡುವ ಭಾರತದಿಂದ ಬಂದಿದ್ದೇನೆ ಎಂದು ದೇಶದ ಮಹಿಳೆಯರ ಬಗ್ಗೆ ಕೆಟ್ಟದಾಗಿ ಅಪಮಾನ ಮಾಡಿದ್ದಾನೆ. ಇದು ಭಾರತದ ದಂಡ ಸಂಹಿತೆಯ ಪ್ರಕಾರ ಗಂಭೀರ ಅಪರಾಧವಾಗಿದೆ. ಹೀಗಿರುವಾಗ ಇಂತಹ ವಿವಾದಿತ ವ್ಯಕ್ತಿ ಬೆಂಗಳೂರಿನಂತಹ ಅತ್ಯಂತ ಕೋಮು ಸೂಕ್ಚ್ಮ ಪ್ರದೇಶದಲ್ಲಿ ಈ ರೀತಿಯ ವಿವಾದಿತ ಕಾರ್ಯಕ್ರಮಗಳಿಗೆ ಅವಕಾಶ ನೀಡುವುದು ಸರಿಯಲ್ಲ ಎಂದು ಹೇಳಿದರು.

    ಈಗಾಗಲೇ ಕರ್ನಾಟಕದಲ್ಲಿ(Karnataka) ಕೋಮು ಘಟನೆಗಳ ಪ್ರಕರಣದಿಂದ ಅನೇಕ ಕಾನೂನು ಸುವ್ಯವಸ್ಥೆಯ ಸಮಸ್ಯೆಯನ್ನು ಎದುರಿಸುತ್ತಿರುವಾಗ ಪುನಃ ಕಾನೂನು ಸುವ್ಯವಸ್ಥೆಗೆ ಭಂಗ ತರುವ ಕಾರ್ಯಕ್ರಮಕ್ಕೆ ಅನುಮತಿ ನೀಡಬಾರದು. ಕೂಡಲೇ ಈ ಕಾರ್ಯಕ್ರಮವನ್ನು ರದ್ದು ಮಾಡಬೇಕು ಎಂದು ಮೋಹನ್‌ ಗೌಡ ಆಗ್ರಹಿಸಿದರು.

    Live Tv
    [brid partner=56869869 player=32851 video=960834 autoplay=true]

  • ಜನ್ರನ್ನು ನಗಿಸೋದು ನನ್ನ ಕೆಲ್ಸ, ನಿಮ್ಗೆ ಹಾಸ್ಯವಾಗಿ ಕಾಣಿಸದಿದ್ದರೆ ನಗ್ಬೇಡಿ: ವೀರ್ ದಾಸ್

    ಜನ್ರನ್ನು ನಗಿಸೋದು ನನ್ನ ಕೆಲ್ಸ, ನಿಮ್ಗೆ ಹಾಸ್ಯವಾಗಿ ಕಾಣಿಸದಿದ್ದರೆ ನಗ್ಬೇಡಿ: ವೀರ್ ದಾಸ್

    ಮುಂಬೈ: ನಾನು ನನ್ನ ಕೆಲಸ ಮಾಡಲು ಇಲ್ಲಿದ್ದೇನೆ ಮತ್ತು ಅದನ್ನು ಮುಂದುವರೆಸುತ್ತೇನೆ, ನಿಲ್ಲಿಸುವುದಿಲ್ಲ. ಜನರನ್ನು ನಗಿಸುವುದು ನನ್ನ ಕೆಲಸ, ನಿಮಗೆ ಅದು ಹಾಸ್ಯವಾಗಿ ಕಾಣಿಸದಿದ್ದರೆ ನಗಬೇಡಿ ಎಂದು ಸ್ಟ್ಯಾಂಡ್‍ಅಪ್ ಕಾಮಿಡಿಯನ್(ವಿಡಂಬನಕಾರ) ವೀರ್ ದಾಸ್ ಹೇಳಿದ್ದಾರೆ.

    ಕಳೆದ ವಾರವಷ್ಟೇ, ನಾನು ಎರಡು ರೀತಿಯ ಭಾರತದಿಂದ ಬಂದಿದ್ದೇನೆ ಎಂಬ ವೀರ್ ದಾಸ್ ಅವರ ಆರು ನಿಮಿಷದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದರಲ್ಲಿ ಭಾರತದಲ್ಲಿರುವ ಒಳ್ಳೆಯ ಮತ್ತು ಕೆಟ್ಟದ್ದರ ಕುರಿತಂತೆ  ಮಾತನಾಡಿದ್ದರು. ಈ ವೀಡಿಯೋ ನೋಡಿ ಕೆಲವರು ಭಾರತಕ್ಕೆ ಅವಮಾನ ಮಾಡುತ್ತಿದ್ದರೆ ಎಂದು ಟೀಕಿಸಿದರೆ, ಮತ್ತೆ ಕೆಲವರು ಅವರ ಧೈರ್ಯಶಾಲಿ ಹೇಳಿಗೆ ಪ್ರಶಂಸೆ ವ್ಯಕ್ತಪಡಿಸಿದ್ದರು ಮತ್ತು ಅವರ ನಿಲುವಿಗೆ ಬೆಂಬಲ ನೀಡಿದ್ದರು.

    ಏಕಪಾತ್ರಭಿನಯ ಬಗ್ಗೆ ಕುರಿತಂತೆ ವೀರ್ ದಾಸ್ ಅವರು, ನಾನು ಕೇವಲ ಶೋಗಳನ್ನು ನೀಡುತ್ತೇನೆ. ಅದು ನನ್ನ ಪ್ರೇಕ್ಷಕರಿಗಾಗಿ ಒಂದಷ್ಟು ತುಣುಕುಗಳನ್ನು ಬರೆದಿದ್ದೇನೆ. ನನ್ನನ್ನು ಕರೆಸಿ ಸಂಭಾಷಣೆ ನಡೆಸಬೇಕೆಂದು ನಾನು ಎಂದಿಗೂ ಬಯಸಿಲ್ಲ. ಹಾಗೇ ನಾನು ಭಾವಿಸುವುದು ಇಲ್ಲ. ನಾನು ಕೇವಲ ಜನರನ್ನು ಕೋಣೆಯಲ್ಲಿ ನಗಿಸಲು ಬಯಸುತ್ತೇನೆ. ನೀವು ಹಾಗೆಯೇ ಭಾವಿಸುತ್ತೀರಾ ಅಂದುಕೊಂಡಿದ್ದೇನೆ.

    Vir Das

    ನಾನು ಬಹಳ ಅದೃಷ್ಟವಂತ ಏಕೆಂದರೆ ನಾನು ಯಾವುದೇ ಸೆನ್ಸಾರ್‍ಶಿಪ್ ಅನ್ನು ಎದುರಿಸಬೆಕಾಗಿಲ್ಲ. “ನಾನು ಅದನ್ನು ಅನುಭವಿಸದೇ ಇರುವಷ್ಟು ಅದೃಷ್ಟಶಾಲಿಯಾಗಿದ್ದೇನೆ. ನಾನು ನೆಟ್‍ಫ್ಲಿಕ್ಸ್‍ನಲ್ಲಿ ಮೂರು ಸ್ಪೆಷಲ್ ಕಾಮಿಡಿಗಳನ್ನು ಮಾಡಿದ್ದೇನೆ ಮತ್ತು ನಮ್ಮ ಕಾರ್ಯಕ್ರಮದ ಏಕೈಕ ಉದ್ದೇಶ ‘ಜನರನ್ನು ನಗಿಸುವುದು ಮತ್ತು ಅದು ನನಗೆ ‘ಸರಿ’ ಎನಿಸುತ್ತದೆ ಎಂದಿದ್ದಾರೆ. ಜೊತೆಗೆ “ಜನರನ್ನು ನಗಿಸಲು ಮತ್ತು ಪ್ರೀತಿಯನ್ನು ಹರಡಲು ನಮಗೆ ಭಾರತದಲ್ಲಿ ಹೆಚ್ಚಿನ ಕಾಮಿಡಿ ಕ್ಲಬ್‍ಗಳ ಅಗತ್ಯವಿದೆ” ಎಂದು ವೀರ್ ದಾಸ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:  ವೀರ್ ದಾಸ್‍ಗೆ ಪ್ರದರ್ಶನ ನೀಡಲು ಬಿಡುವುದಿಲ್ಲ: ನರೋತ್ತಮ್ ಮಿಶ್ರಾ

    ಇತ್ತೀಚೆಗಷ್ಟೇ ಅಮೇರಿಕಾದಲ್ಲಿ ನಡೆದ ಸಂದರ್ಶನವೊಂದರಲ್ಲಿ ವೀರ್ ದಾಸ್ ಅವರು ಮಹಿಳೆಯನ್ನು ಗೌರವಿಸುವ, ರಾತ್ರಿಯಲ್ಲಿ ಮಹಿಳೆ ಮೇಲೆ ಅತ್ತಾಚಾರ ಮಾಡುವ ದೇಶದಿಂದ ನಾನು ಬಂದಿದ್ದೇನೆ. ಅಲ್ಲಿ ಮಾಸ್ಕ್ ಹಾಕಿಕೊಂಡು ಮಕ್ಕಳು ಕೈ ಮುಗಿಯುವಾಗ, ನಾಯಕರು ಮಾಸ್ಕ್ ಇಲ್ಲದೇ ಅಪ್ಪಿಕೊಳ್ಳುತ್ತಾರೆ. ಅತಿ ದೊಡ್ಡ ಜನಸಂಖ್ಯೆ ಇರುವ ರಾಷ್ಟ್ರದಿಂದ ಬಂದಿದ್ದೇನೆ. 75 ವರ್ಷದ ಮುದುಕರಿಂದ 150 ವರ್ಷದ ಹಳೆಯದಾದ ಐಡಿಯಾಗಳನ್ನು ಕೇಳಲಾಗುತ್ತದೆ ಎಂದು ಹೇಳಿದ್ದರು.

    ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ವೀರ್ ದಾಸ್ ಭಾರತಕ್ಕೆ ಅವಮಾನ ಮಾಡಿದ್ದಾರೆ. ಹೀಗಾಗಿ ಇವರಿಗೆ ರಾಜ್ಯದಲ್ಲಿ ಹಾಸ್ಯ ಪ್ರದರ್ಶನ ನೀಡಲು ಬಿಡಿಬಾರದು ಎಂದು ಅನೇಕ ಮಂದಿ ಆಕ್ರೋಶ ವ್ಯಕ್ತಪಡಿಸದ್ದರು.

  • ವೀರ್ ದಾಸ್‍ಗೆ ಪ್ರದರ್ಶನ ನೀಡಲು ಬಿಡುವುದಿಲ್ಲ: ನರೋತ್ತಮ್ ಮಿಶ್ರಾ

    ವೀರ್ ದಾಸ್‍ಗೆ ಪ್ರದರ್ಶನ ನೀಡಲು ಬಿಡುವುದಿಲ್ಲ: ನರೋತ್ತಮ್ ಮಿಶ್ರಾ

    ಮುಂಬೈ: ನಾನು ಎರಡು ರೀತಿಯ ಭಾರತದಿಂದ ಬಂದಿದ್ದೇನೆ ಎಂದು ಹೇಳುವ ಮೂಲಕ ಸಂಕಷ್ಟಕ್ಕೆ ಸಿಲುಕಿರುವ ಹಾಸ್ಯನಟ ವೀರ್ ದಾಸ್ ಅವರಿಗೆ ರಾಜ್ಯದಲ್ಲಿ ಯಾವುದೇ ಪ್ರದರ್ಶನ ನೀಡಲು ಅವಕಾಶ ನೀಡಲಾಗುವುದಿಲ್ಲ ಎಂದು ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ ಹೇಳಿದ್ದಾರೆ.

    vir das

    ಅಮೇರಿಕಾದಲ್ಲಿ ನಡೆದ ಸಂದರ್ಶನವೊಂದರಲ್ಲಿ ಮಾತನಾಡಿದ್ದ ವೀರ್ ದಾಸ್ ಅವರು ಆ ವೀಡಿಯೋವನ್ನು ತಮ್ಮ ಯೂಟ್ಯೂಬ್‍ನಲ್ಲಿ ಹಂಚಿಕೊಂಡಿದ್ದರು. ಮಹಿಳೆಯನ್ನು ಗೌರವಿಸುವ, ರಾತ್ರಿಯಲ್ಲಿ ಮಹಿಳೆ ಮೇಲೆ ಅತ್ತಾಚಾರ ಮಾಡುವ ದೇಶದಿಂದ ನಾನು ಬಂದಿದ್ದೇನೆ. ಅಲ್ಲಿ ಮಾಸ್ಕ್ ಹಾಕಿಕೊಂಡು ಮಕ್ಕಳು ಕೈ ಮುಗುಯುವಾಗ, ನಾಯಕರು ಮಾಸ್ಕ್ ಇಲ್ಲದೇ ಅಪ್ಪಿಕೊಳ್ಳುತ್ತಾರೆ. ಅತಿ ದೊಡ್ಡ ಜನಸಂಖ್ಯೆ ಇರುವ ರಾಷ್ಟ್ರದಿಂದ ಬಂದಿದ್ದೇನೆ. 75 ವರ್ಷದ ಮುದುಕರಿಂದ 150 ವರ್ಷದ ಹಳೆಯದಾದ ಐಡಿಯಾಗಳನ್ನು ಕೇಳಲಾಗುತ್ತದೆ ಎಂದು ವೀರ್ ದಾಸ್ ವೀಡಿಯೋದಲ್ಲಿ ಹೇಳಿದ್ದರು. ಇದನ್ನೂ ಓದಿ: ಅವಳಿ ಮಕ್ಕಳಿಗೆ ಪೋಷಕರಾದ ನಟಿ ಪ್ರೀತಿ ಜಿಂಟಾ ದಂಪತಿ

    ಈ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ವೀರ್ ದಾಸ್ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಹೀಗಾಗಿ ಈ ಬಗ್ಗೆ ವೀರ್ ದಾಸ್ ಅವರು, ಭಾರತ ದೇಶವನ್ನು ಅವಮಾನಗೊಳಿಸಬೇಕೆಂಬ ಉದ್ದೇಶವನ್ನು ನಾನು ಹೊಂದಿಲ್ಲ. ವಿಭಿನ್ನವಾದಂತಹ ಕೆಲಸಗಳನ್ನು ಮಾಡುವ ಎರಡು ಪ್ರತ್ಯೇಕ ಭಾರತದ ದ್ವಂದ್ವತೆಯನ್ನು ಅಲ್ಲಿ ವಿವರಿಸಲಾಗಿದೆ. ಯಾವುದೇ ದೇಶದಲ್ಲಿಯೂ ಬೆಳಕು ಮತ್ತು ಕತ್ತಲೆ, ಒಳ್ಳೆಯದು ಮತ್ತು ಕೆಟ್ಟದ್ದು ಇರುತ್ತದೆ. ಅದೇನೂ ಗುಟ್ಟಲ್ಲ. ನಾವು ಶ್ರೇಷ್ಠರು ಎಂಬುದನ್ನು ಎಂದಿಗೂ ಮರೆಯಬಾರದು ಎಂದು ಮನವಿ ಮಾಡಿದ್ದರು. ನಮ್ಮನ್ನು ಶ್ರೇಷ್ಠರು ಎಂದು ಹೇಳುವುದರ ಮೇಲೆ ಕೇಂದ್ರೀಕರಿಸುವುದನ್ನು ಎಂದಿಗೂ ನಿಲ್ಲಿಸಬಾರದು. ನಾವೆಲ್ಲರೂ ಪ್ರೀತಿಸುವ, ನಂಬುವ ಮತ್ತು ಹೆಮ್ಮೆಪಡುವ ದೇಶಕ್ಕೆ ದೇಶಭಕ್ತಿಯ ಚಪ್ಪಾಳೆ ಹೊಡೆಯುತ್ತೇವೆ ಎಂದು ಸ್ಪಷ್ಟನೆ ನೀಡಿದ್ದರು. ಇದಕ್ಕೆ ಟಿಎಂಸಿ ಸದಸ್ಯರಾದ ಮಹುವಾ ಮೊಯಿತ್ರಾ ಮತ್ತು ಕಾಂಗ್ರೆಸ್ ನಾಯಕರಾದ ಕಪಿಲ್ ಸಿಬಲ್ ಮತ್ತು ಶಶಿ ತರೂರ್ ಅವರು ಬೆಂಬಲ ನೀಡಿದ್ದರು. ಇದನ್ನೂ ಓದಿ:  ಫ್ಯಾಮಿಲಿ ಜೊತೆಗೆ ಜಾಲಿ ಮೂಡ್‍ನಲ್ಲಿ ಶ್ವೇತಾ ಚೆಂಗಪ್ಪ

    ಸದ್ಯ ಈ ಕುರಿತಂತೆ ನರೋತ್ತಮ್ ಮಿಶ್ರಾ ಅವರು, “ಅಂತಹ ಹಾಸ್ಯಗಾರರಿಗೆ ರಾಜ್ಯದಲ್ಲಿ ಹಾಸ್ಯ ಪ್ರದರ್ಶನ ನೀಡಲು ನಾವು ಅನುಮತಿ ನೀಡುವುದಿಲ್ಲ. ಅವರು ಕ್ಷಮೆಯಾಚಿಸಿದರೆ, ನಾವು ಅದರ ಬಗ್ಗೆ ಯೋಚಿಸುತ್ತೇವೆ ಎಂದು ತಿಳಿಸಿದ್ದಾರೆ. ಇದೇ ಭಾರತವನ್ನು “ಅವಮಾನ” ಮಾಡಲು ಪ್ರಯತ್ನಿಸುವ ಕೆಲವು ಹಾಸ್ಯಗಾರರಿದ್ದಾರೆ ಮತ್ತು ಅವರಿಗೆ ಕಪಿಲ್ ಸಿಬಲ್ ಮತ್ತು ಇತರ ಕಾಂಗ್ರೆಸ್ ಜನರಂತಹ ಕೆಲವು ಬೆಂಬಲಿಗರಿದ್ದಾರೆ ಎಂದು ಕಿಡಿಕಾರಿದರು.