Tag: Viprah N Simha

  • `ಸಿಂಹಪ್ರಿಯ’ ಜೋಡಿಯ ಪುತ್ರನ ಹೆಸರು ವಿಪ್ರಾ – ಅರ್ಥವೇನು ಗೊತ್ತಾ?

    `ಸಿಂಹಪ್ರಿಯ’ ಜೋಡಿಯ ಪುತ್ರನ ಹೆಸರು ವಿಪ್ರಾ – ಅರ್ಥವೇನು ಗೊತ್ತಾ?

    ಸ್ಯಾಂಡಲ್‌ವುಡ್‌ನ `ಸಿಂಹಪ್ರಿಯ’ ಎಂದೇ ಖ್ಯಾತಿ ಪಡೆದ ನಟ ವಸಿಷ್ಠ ಸಿಂಹ (Vasishta Simha) ಹಾಗೂ ನಟಿ ಹರಿಪ್ರಿಯಾ (Haripriya) ತಮ್ಮ ಮುದ್ದಾದ ಮಗನಿಗೆ ವಿಪ್ರಾ ಎನ್ ಸಿಂಹ ಎಂದು ಹೆಸರಿಟ್ಟಿದ್ದಾರೆ.

    ಇದೀಗ `ವಿಪ್ರಾ ಎನ್ ಸಿಂಹ’ (Viprah N Simha) ಎಂಬ ಮಗನ ಹೆಸರಿನ ಅರ್ಥವನ್ನು ಜೋಡಿಯು ಬಿಚ್ಚಿಟ್ಟಿದ್ದು, ವಿಪ್ರಾ ಎನ್ ಸಿಂಹ ಎಂಬ ಹೆಸರು `ವಿ’ ಇಂದ ಪ್ರಾರಂಭವಾಗಿ `ಹೆಚ್’ ಪೂರ್ಣಗೊಳ್ಳುತ್ತದೆ. ಇದು ನಮ್ಮಿಬ್ಬರ ಹೆಸರು ಸಹ ಆಗಿದೆ. ಜೊತೆಗೆ, ವಿಐಪಿ ಎಂಬ ಭಾವನೆಯನ್ನು ಸಂಕೇತಿಸುತ್ತದೆ. ವಿಐ ಎಂದರೆ ವಿಷ್ಣು. ಕೊನೆಯಿಂದ ಹೆಚ್‌ಎಆರ್ ಎಂದರೆ ಹರನೂ ಹೌದು ಹರಿಪ್ರಿಯಾನೂ ಹೌದು. ವಿಷ್ಣು ಹಾಗೂ ಶಿವನ ಸಮಾಗಮವಾಗಿದೆ. ಅವರ ಅನುಗ್ರಹ ಎಂಬುದು ನಮ್ಮ ಭಾವನೆಯಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಜಮೀನು ಖರೀದಿಸ್ತೀನಿ ಅಂದವರು ಯಾಕೆ ಖರೀದಿಸಿಲ್ಲ : ಅನಿರುದ್ಧ ಪ್ರಶ್ನೆ ಮಾಡಿದ್ದು ಯಾರಿಗೆ?

    ಬಳಿಕ ನಟಿ ಹರಿಪ್ರಿಯಾ ಮಾತನಾಡಿ, ಮಗುವಿಗೆ ಹೆಸರನ್ನು ಆಯ್ಕೆ ಮಾಡುವುದು ನಮಗೆ ಭಾವನಾತ್ಮಕ ಕ್ಷಣವಾಗಿತ್ತು. ಒಂದು ಜೀವಕ್ಕೆ ಜನ್ಮ ಕೊಟ್ಟು, ಆ ಮಗುವಿಗೆ ಹೆಸರಿಡುವುದು ಬಹಳ ಭಾವನಾತ್ಮಕ ಕ್ಷಣ. ಸಾಂಪ್ರದಾಯಿಕವಾಗಿ ಮನೆಯವರೆಲ್ಲ ಸೇರಿ ನಾಮಕರಣ ಮಾಡಿದ್ವಿ. ಮಗುವಿನ ಕಿವಿಯಲ್ಲಿ ಹೆಸರನ್ನು ಹೇಳುವಾಗ ನಮ್ಮಿಬ್ಬರ ಕಣ್ಣಲ್ಲಿ ನೀರು ತುಂಬಿತ್ತು. ನಮ್ಮ ಮಗ ಚೆನ್ನಾಗಿ ಬೆಳೆಯಲಿ, ಒಳ್ಳೆ ಹೆಸರು ಮಾಡಲೆಂದು ತುಂಬಾ ಖುಷಿಯಲ್ಲಿ ಈ ಹೆಸರಿಟ್ಟಿದ್ದೇವೆ ಎಂದು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ನಟ ಅಜಯ್ ರಾವ್ ದಾಂಪತ್ಯದಲ್ಲಿ ಬಿರುಕು – ಮತ್ತೆ ಒಂದಾಗೋಕೆ ಬಯಸಿದ ಪತ್ನಿ ಸಪ್ನ

    `ಸಿಂಹಪ್ರಿಯ’ ಜೋಡಿಯು ತಮ್ಮ ಮುದ್ದಾದ ಮಗನಿಗೆ ಕೃಷ್ಣ ಜನ್ಮಾಷ್ಟಮಿಯಂದೇ ವಿಪ್ರಾ ಎನ್ ಸಿಂಹ ಎಂದು ಹೆಸರಿಟ್ಟಿದ್ದರು. ಮಗುವಿನ ಹೆಸರಿನ ಅರ್ಥದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಕುತೂಹಲ ಮೂಡಿತ್ತು. ಇದೀಗ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಈ ಎಲ್ಲಾ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.

  • ಕೃಷ್ಣ ಜನ್ಮಾಷ್ಟಮಿಯಂದೇ ಮಗನ ನಾಮಕರಣ ಮಾಡಿದ `ಸಿಂಹಪ್ರಿಯ’ ಜೋಡಿ – ಹೆಸರೇನು ಗೊತ್ತಾ?

    ಕೃಷ್ಣ ಜನ್ಮಾಷ್ಟಮಿಯಂದೇ ಮಗನ ನಾಮಕರಣ ಮಾಡಿದ `ಸಿಂಹಪ್ರಿಯ’ ಜೋಡಿ – ಹೆಸರೇನು ಗೊತ್ತಾ?

    `ಸಿಂಹಪ್ರಿಯ’ ಜೋಡಿಯೆಂದೇ ಖ್ಯಾತಿಗಳಿಸಿದ್ದ ನಟ ವಸಿಷ್ಠ ಸಿಂಹ (Vasishta Simha) ಹಾಗೂ ನಟಿ ಹರಿಪ್ರಿಯಾ (Haripriya) ತಮ್ಮ ಮುದ್ದಾದ ಮಗನಿಗೆ ಕೃಷ್ಣ ಜನ್ಮಾಷ್ಟಮಿಯಂದೇ (Krishna Janmashtami) ನಾಮಕರಣ ಮಾಡಿದ್ದಾರೆ.

    ದಂಪತಿಯು ಪುಟ್ಟ ಕೃಷ್ಣನಿಗೆ ವಿಪ್ರಾ ಎನ್ ಸಿಂಹ (Viprah N Simha) ಎಂದು ಹೆಸರಿಟ್ಟಿದ್ದಾರೆ. 2023ರ ಜನವರಿ 26ರಂದು ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. 2025 ಜನವರಿ 26ರಂದು ಹರಿಪ್ರಿಯಾ ಗಂಡು ಮಗುವಿಗೆ ಜನ್ಮ ನೀಡಿದ್ದರು.

    ಇದೀಗ ದಂಪತಿಗಳು ಮಗನ ನಾಮಕರಣದ ಸಂಭ್ರಮದಲ್ಲಿದ್ದಾರೆ. ಇದೀಗ ಮೂವರು ಹಳದಿ ಬಣ್ಣದ ಸೇಮ್ ಕಾಸ್ಟ್ಯೂಮ್‌ನಲ್ಲಿ ಮಿಂಚಿದ್ದಾರೆ. ಸದ್ಯ ಸಿಂಹಪ್ರಿಯ ಜೋಡಿಯ ಮಗನ ನಾಮಕರಣದ ಫೋಟೋಸ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ನಾಮಕರಣ ಕಾರ್ಯಕ್ರಮದಲ್ಲಿ ನಟಿ ಪ್ರಣಿತಾ, ಸೊನಾಲ್, ಕೆಜಿಎಫ್ ಖ್ಯಾತಿಯ ಗರುಡ ರಾಮ್ ಹಾಗೂ ಇನ್ನಿತರ ಸೆಲೆಬ್ರಿಟಿಗಳು ಭಾಗಿಯಾಗಿದ್ದಾರೆ