Tag: vip

  • ವಿಐಪಿಗಳು, ಭಕ್ತರು ಪೇಜಾವರ ಶ್ರೀಗಳ ಆರೋಗ್ಯಕ್ಕೆ ಡಿಸ್ಟರ್ಬ್ ಮಾಡಬೇಡಿ: ಕೆಎಂಸಿ ಮಣಿಪಾಲ ವಿನಂತಿ

    ವಿಐಪಿಗಳು, ಭಕ್ತರು ಪೇಜಾವರ ಶ್ರೀಗಳ ಆರೋಗ್ಯಕ್ಕೆ ಡಿಸ್ಟರ್ಬ್ ಮಾಡಬೇಡಿ: ಕೆಎಂಸಿ ಮಣಿಪಾಲ ವಿನಂತಿ

    ಉಡುಪಿ: ಪೇಜಾವರಶ್ರೀ ಆರೋಗ್ಯ ಅತಿ ಮುಖ್ಯ. ಶ್ರೀಗಳು ಆಸ್ಪತ್ರೆಗೆ ದಾಖಲಾದ ದಿನದಿಂದ ನಿರಂತರವಾಗಿ ವಿಐಪಿಗಳು, ಗಣ್ಯರು ಬಂದು ಯೋಗಕ್ಷೇಮ ವಿಚಾರಿಸಲು ಬರುತ್ತಿದ್ದಾರೆ. ಸದ್ಯ ಶ್ರೀಗಳಿಗೆ ಯಾರು ಡಿಸ್ಟರ್ಬ್ ಮಾಡಬೇಡಿ ಎಂದು ಕೆಎಂಸಿ ಮಣಿಪಾಲ ಆಸ್ಪತ್ರೆ ವಿನಂತಿ ಮಾಡಿದೆ.

    ವಿಐಪಿ, ಭಕ್ತರು ಆಸ್ಪತ್ರೆಗೆ ಬಾರದಿದ್ದರೆ ಒಳಿತು. ಗಣ್ಯರು ಬಂದಾಗೆಲ್ಲ ನಾವು ಐಸಿಯು ಬಾಗಿಲು ತೆರೆಯಬೇಕಾಗುತ್ತದೆ. ಇದರಿಂದ ವೈದ್ಯರ ಚಿಕಿತ್ಸೆಗೆ ಅಡ್ಡಿಯಾಗುತ್ತೆ. ಈ ಹಿಂದೆ ಕೂಡ ನಾನು ಮನವಿ ಮಾಡಿಕೊಂಡಿದ್ದೆ. ಈಗಲೂ ಮಾಡುತ್ತೇನೆ ಎಂದು ಡಾ. ಅವಿನಾಶ್ ಶೆಟ್ಟಿ ಹೇಳಿದರು.

    ಪ್ರತಿನಿತ್ಯ ಹೆಲ್ತ್ ಬುಲೆಟಿನ್ ರಿಲೀಸ್ ಮಾಡುತ್ತೇವೆ. ಯಾರೂ ಆತಂಕಗೊಳ್ಳುವ ಅವಶ್ಯಕತೆಯಿಲ್ಲ. ಮಾಧ್ಯಮಗಳ ಮೂಲಕ ಮಾಹಿತಿ ಕಲೆ ಹಾಕಿಕೊಳ್ಳಬಹುದು ಎಂದು ಕೆಎಂಸಿ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಮನವಿ ಮಾಡಿಕೊಂಡಿದ್ದಾರೆ.

    ಪೇಜಾವರ ಶ್ರೀ ತೀವ್ರ ಉಸಿರಾಟದಿಂದ ಕೆಎಂಸಿಗೆ ದಾಖಲಾಗಿದ್ದರು. ಪ್ರತಿ ಹಂತದಲ್ಲಿ ಮಾಹಿತಿ ನೀಡಿದ್ದೇವೆ. ಬೆಂಗಳೂರಿನಿಂದ ಇಬ್ಬರು ತಜ್ಞರು ಬಂದಿದ್ದಾರೆ. ಪೇಜಾವರ ಶ್ರೀಗಳ ಆರೋಗ್ಯ ಸಮಸ್ಥಿತಿಗೆ ತರುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಕೆಎಂಸಿ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಹೇಳಿದ್ದಾರೆ.

    ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಿರಂತರ ಸಂಪರ್ಕದಲ್ಲಿದ್ದಾರೆ. ಏಮ್ಸ್ ವೈದ್ಯರ ಜೊತೆಗೂ ನಿರಂತರ ಸಂಪರ್ಕದಲ್ಲಿ ಇದ್ದೇವೆ. ಚಿಕಿತ್ಸೆಯ ವಿವರ, ಅಲ್ಲಿನ ತಜ್ಞರ ಸಲಹೆ ಪಡೆಯುತ್ತೇವೆ ಎಂದು ಹೇಳಿದರು.

  • ಎಂಎಲ್‍ಎ ಮಗನಿಗೆ ಮದುವೆ ಸಂಭ್ರಮ -ಸಂಚಾರ ದಟ್ಟಣೆಯಲ್ಲಿ ಒದ್ದಾಡಿ ಹೋದ ಜನ

    ಎಂಎಲ್‍ಎ ಮಗನಿಗೆ ಮದುವೆ ಸಂಭ್ರಮ -ಸಂಚಾರ ದಟ್ಟಣೆಯಲ್ಲಿ ಒದ್ದಾಡಿ ಹೋದ ಜನ

    ಬೆಂಗಳೂರು: ಯಲಹಂಕದ ಬಿಜೆಪಿ ಶಾಸಕ ವಿಶ್ವನಾಥ್ ಮಗನ ಮದುವೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ನಡೆಯಿತು. ಆದರೆ ದೊಡ್ಡವರ ಮದುವೆಯಿಂದಾಗಿ ವಾಹನ ಸವಾರರು ಪರದಾಡುವಂತಾಯಿತು.

    ವಿಶ್ವನಾಥ್ ಪುತ್ರ ಅಲೋಕ್ ವಿಶ್ವನಾಥ್ ಹಾಗೂ ಪಲ್ಲವಿ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಸಿಎಂ ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಖ್ಯಾತ ಹಿನ್ನೆಲೆ ಗಾಯಕ ಸೋನು ನಿಗಮ್ ಸೇರಿದಂತೆ ಸಾಕಷ್ಟು ಶಾಸಕರು, ಸಂಸದರು ಮತ್ತು ಗಣ್ಯರು ಮದುವೆಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.


    ವಿಐಪಿಗಳ ಸುಗಮ ಸಂಚಾರಕ್ಕಾಗಿ ಸಾಮಾನ್ಯರ ಜನರ ವಾಹನಗಳನ್ನು ಪೊಲೀಸರು ತಡೆದು ನಿಲ್ಲಿಸಿದ್ದರು. ಇದರಿಂದಾಗಿ ಪ್ಯಾಲೇಸ್ ಗ್ರೌಂಡ್ ಸುತ್ತಮುತ್ತ ಸಿಕ್ಕಾಪಟ್ಟೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಗಂಟೆಗಟ್ಟಲೇ ನಿಂತರೂ ಟ್ರಾಫಿಕ್ ಕರಗಲೇ ಇಲ್ಲ. ಇದರಿಂದಾಗಿ ವಾಹನ ಸವಾರರು ಹಿಡಿಶಾಪ ಹಾಕಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಿಶ್ರಾಂತಿಗೆ ತೊಂದರೆ ಹಿನ್ನೆಲೆ ಸಿದ್ದಗಂಗಾ ಶ್ರೀಗಳು ಆಸ್ಪತ್ರೆಗೆ ಶಿಫ್ಟ್: ಕಿರಿಯ ಸ್ವಾಮೀಜಿ

    ವಿಶ್ರಾಂತಿಗೆ ತೊಂದರೆ ಹಿನ್ನೆಲೆ ಸಿದ್ದಗಂಗಾ ಶ್ರೀಗಳು ಆಸ್ಪತ್ರೆಗೆ ಶಿಫ್ಟ್: ಕಿರಿಯ ಸ್ವಾಮೀಜಿ

    ತುಮಕೂರು: ಸಿದ್ದಗಂಗಾ ಮಠದ ಸಿದ್ದಗಂಗಾ ಶ್ರೀಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಶ್ರೀಗಳು ಬೇಗ ಗುಣಮುಖರಾಗಲು ಉತ್ತಮ ಆರೈಕೆ ಅಗತ್ಯವಿದ್ದು, ಸೋಂಕು ಬೇಗ ವಾಸಿಯಾಗಬೇಕು ಎಂಬ ಉದ್ದೇಶದಿಂದ ಅವರನ್ನು ಸಿದ್ದಗಂಗಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸಿದ್ದಗಂಗಾ ಕಿರಿಯ ಶ್ರೀಗಳು ಮಾಹಿತಿ ನೀಡಿದ್ದಾರೆ.

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಕಿರಿಯ ಶ್ರೀಗಳು, ಮಠದ ವಾತಾವರಣದಲ್ಲಿ ಶ್ರೀಗಳಿಗೆ ಸೋಂಕು ತಗಲುವ ಸಾಧ್ಯತೆ ಇದ್ದು, ಮಠಕ್ಕೆ ವಿಐಪಿಗಳು ಹೆಚ್ಚಾಗಿ ಭೇಟಿ ನೀಡುತ್ತಿದ್ದಾರೆ. ಆದ್ದರಿಂದ ಆಸ್ಪತ್ರೆಗೆ ಶಿಫ್ಟ್ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ಯಾವುದೇ ಕಾರಣಕ್ಕೂ ನಾಡಿನ ಭಕ್ತರೂ ಇದನ್ನು ಅನ್ಯತ ತಿಳಿದುಕೊಳ್ಳಬಾರದು. ಶ್ರೀಗಳ ಆರೋಗ್ಯ ಉತ್ತಮವಾಗಿ ಚೇತರಿಕೆ ಆಗುತ್ತಿದೆ. ವಿಐಪಿಗಳ ಭೇಟಿಗೂ ಅವಕಾಶ ನಿರಾಕರಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

    ಮಠದಲ್ಲಿ ನಾವು ಎಷ್ಟೇ ಜಾಗೃತಿ ವಹಿಸಿದರು ಕೂಡ ಸೋಂಕು ತಗಲುವ ಸಾಧ್ಯತೆ ಇತ್ತು. ಅಲ್ಲದೇ ಚಿಕಿತ್ಸೆಗೆ ಬೇಕಾದ ಸೌಲಭ್ಯಗಳು ಕೂಡ ಆಸ್ಪತ್ರೆಯಲ್ಲಿ ಲಭ್ಯವಾಗುವ ಕಾರಣ ಈ ನಿರ್ಧಾರ ಕೈಗೊಳ್ಳಲಾಯಿತು. ಶ್ರೀ ಗಳಿಗೆ ಎಂದಿನಂತೆ ತಪಾಸಣೆ ಹಾಗೂ ಚಿಕಿತ್ಸೆ ಆಸ್ಪತ್ರೆಯಲ್ಲೇ ಮುಂದುವರಿಯುತ್ತದೆ. ಇಂದು ರೇಲಾ ಆಸ್ಪತ್ರೆಯಿಂದ ತಜ್ಞ ವೈದ್ಯರು ಕೂಡ ಪರಿಶೀಲನೆ ನಡೆಸಿದ್ದಾರೆ. ಆದ್ದರಿಂದ ಯಾರು ಆತಂಕಕ್ಕೆ ಒಳಪಡುವ ಅಗತ್ಯವಿಲ್ಲ ಎಂದರು.

    ತುಮಕೂರು ಜಿಲ್ಲಾಧಿಕಾರಿ ಡಾ. ರಾಕೇಶ್ ಕುಮಾರ್ ಹಾಗೂ ಎಸ್‍ಪಿ ಡಾ ದಿವ್ಯಾ ಗೋಪಿನಾಥ್ ನೇತೃತ್ವದಲ್ಲಿ ಆಸ್ಪತ್ರೆ ಗೆ ಶಿಫ್ಟ್ ಮಾಡಲಾಯಿತು. ಮಠದಿಂದ ಝೀರೋ ಟ್ರಾಫಿಕ್ ಮೂಲಕ ಸಿದ್ದಗಂಗಾ ಆಸ್ಪತ್ರೆಗೆ ಶ್ರೀಗಳನ್ನು ಕರೆತರಲಾಯಿತು. ಶ್ರೀಗಳ ವಿಶ್ರಾಂತಿಗೆ ತೊಂದರೆ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 36 ವರ್ಷದ ಹಿಂದಿನ ವಿಐಪಿ ಸಂಸ್ಕೃತಿಗೆ ರೈಲ್ವೇ ಇಲಾಖೆಯಲ್ಲಿ ಬ್ರೇಕ್

    36 ವರ್ಷದ ಹಿಂದಿನ ವಿಐಪಿ ಸಂಸ್ಕೃತಿಗೆ ರೈಲ್ವೇ ಇಲಾಖೆಯಲ್ಲಿ ಬ್ರೇಕ್

    ನವದೆಹಲಿ: ರೈಲ್ವೆ ಇಲಾಖೆಯಲ್ಲಿ ಕಳೆದ ಮೂರುವರೆ ದಶಕಗಳಿಂದ ಪಾಲಿಸಿಕೊಂಡು ಬರುತ್ತಿದ್ದ ವಿಐಪಿ ಸಂಸ್ಕೃತಿಗೆ ಬ್ರೇಕ್ ಬಿದ್ದಿದೆ.

    ರೈಲ್ವೇ ಬೋರ್ಡ್ ಅಧ್ಯಕ್ಷ ಮತ್ತು ಬೋರ್ಡ್ ಇತರ ಸದಸ್ಯರು ಭೇಟಿಗೆಂದು ಆಗಮಿಸುವ ಮತ್ತು ನಿರ್ಗಮಿಸುವ ಸಮಯದಲ್ಲಿ ಕಡ್ಡಾಯವಾಗಿ ಜನರಲ್ ಮ್ಯಾನೇಜರ್ ಗಳು ಸ್ಥಳದಲ್ಲೇ ಇರಲೇಬೇಕೆಂಬ 36 ವರ್ಷ ಹಿಂದಿನ ಶಿಷ್ಟಾಚಾರಕ್ಕೆ ಸಚಿವಾಲಯ ತೆರೆ ಎಳೆದಿದೆ.

    ಸೆಪ್ಟೆಂಬರ್ 28 ಕ್ಕೆ ಆದೇಶ ಪ್ರಕಟವಾಗಿದ್ದು, ರೈಲ್ವೇ ಅಧಿಕಾರಿಗಳ ಭೇಟಿ ವೇಳೆ ಇನ್ನು ಮುಂದೆ ಯಾವುದೇ ಬೊಕ್ಕೆ ಅಥವಾ ಹೂ ಗುಚ್ಛಗಳನ್ನು ನೀಡಬಾರದು ಎಂದು ರೈಲ್ವೇ ಬೋರ್ಡ್ ಅಧ್ಯಕ್ಷ ಅಶ್ವನಿ ಲೊಹನಿ ತಿಳಿಸಿದ್ದಾರೆ.

    ಕಚೇರಿಯಲ್ಲಿ ಅಲ್ಲದೇ ಅಧಿಕಾರಿಗಳು ಈ ಶಿಷ್ಟಾಚಾರವನ್ನು ಮನೆಯಲ್ಲೂ ಪಾಲಿಸಬೇಕು. ಅಧಿಕಾರಿಗಳ ಮನೆಯಲ್ಲಿ ಕೆಲಸ ಮಾಡುತ್ತಿರುವ ರೈಲು ಸಿಬ್ಬಂದಿಯನ್ನು ಕೂಡಲೇ ತೆರವುಗೊಳಿಸಬೇಕು ಎಂದು ಸೂಚಿಸಲಾಗಿದೆ.

    ಸಮಾರು 30 ಸಾವಿರಕ್ಕೂ ಅಧಿಕ ಟ್ರ್ಯಾಕ್ ಮನ್ ಗಳು ಹಿರಿಯ ಅಧಿಕಾರಿಗಳ ಮನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕಳೆದ ಒಂದು ತಿಂಗಳಿನಿಂದ ಅಧಿಕಾರಿಗಳ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಸುಮಾರು 6 ಸಾವಿರ – 7 ಸಾವಿರ ರೈಲ್ವೇ ಸಿಬ್ಬಂದಿ ಮರಳಿ ತಮ್ಮ ಮೂಲಕ ಕೆಲಸಕ್ಕೆ ನಿಯೋಜನೆಗೊಂಡಿದ್ದಾರೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

    ರೈಲ್ವೇ ಸಚಿವ ಪಿಯೂಶ್ ಗೋಯಲ್ ಅವರು ಹಿರಿಯ ಅಧಿಕಾರಿಗಳಿಗೆ, ನೀವು ದುಬಾರಿ ವರ್ಗದ ಬೋಗಿಗಳಲ್ಲೇ ಪ್ರಯಾಣಿಸದೇ ಸ್ಲೀಪರ್ ಮತ್ತು ಎಸಿ ತ್ರಿ ಟಯರ್ ಬೋಗಿಗಳಲ್ಲಿ ಪ್ರಯಾಣಿಸಬೇಕು. ಈ ಮೂಲಕ ಪ್ರಯಾಣಿಕರ ಕಷ್ಟಗಳನ್ನು ತಿಳಿದುಕೊಳ್ಳಬೇಕು ಎಂದು ಸೂಚಿಸಿದ್ದಾರೆ.

  • ಶಶಿಕಲಾಗೆ ಸೆಂಟ್ರಲ್ ಜೈಲಲ್ಲಿ ಹೈಫೈ ಸೌಲಭ್ಯ: ರೂಪಾ ಆರೋಪಕ್ಕೆ ಇಲ್ಲಿದೆ ದೃಶ್ಯ `ರೂಪ’ಕ

    ಶಶಿಕಲಾಗೆ ಸೆಂಟ್ರಲ್ ಜೈಲಲ್ಲಿ ಹೈಫೈ ಸೌಲಭ್ಯ: ರೂಪಾ ಆರೋಪಕ್ಕೆ ಇಲ್ಲಿದೆ ದೃಶ್ಯ `ರೂಪ’ಕ

    ಬೆಂಗಳೂರು: ಛಾಪಾಕಾಗದ ಹಗರಣದ ರೂವಾರಿ ತೆಲಗಿಯ ಹೈ-ಫೈ ಲೈಫ್ ಬಗ್ಗೆ ನಿಮ್ಮ ಪಬ್ಲಿಕ್ ಟಿವಿಯ ವರದಿ ರಾಷ್ಟ್ರಮಟ್ಟದಲ್ಲಿ ಬಿರುಗಾಳಿ ಎಬ್ಬಿಸಿತ್ತು. ಈಗ ಪರಪ್ಪನ ಅಗ್ರಹಾರದಲ್ಲಿ ಸಾಮಾನ್ಯ ಕೈದಿಯಾಗಿರುವ ಶಶಿಕಲಾಗೆ ಫೈವ್ ಸ್ಟಾರ್ ಹೊಟೇಲ್‍ನಂಥ ಫೆಸಿಲಿಟಿ ಕೊಟ್ಟಿರೋದು ಸೋಮವಾರ ಜಗಜ್ಜಾಹೀರಾಗಿದೆ.

    ಹೌದು. ಚಿನ್ನಮ್ಮ ಶಶಿಕಲಾಗೆ ಜೈಲಿನಲ್ಲಿ ಅಧಿಕಾರಿಗಳು 5 ಬಿಹೆಚ್‍ಕೆ ಪ್ಯಾಸೇಜ್ ನೀಡಿದ್ದರು. 5 ಬಿಹೆಚ್‍ಕೆ ಪ್ಯಾಸೇಜ್‍ಗಾಗಿಯೇ ಶಶಿಕಲಾ 2 ಕೋಟಿ ರೂ. ನೀಡಿದ್ದರು. 2 ಕೋಟಿ ಲಂಚದ ಜೊತೆಗೆ ವಾರಕ್ಕೆ ಎರಡೂವರೆ ಲಕ್ಷ ರೂ. ಹಣವನ್ನು ನೀಡಲಾಗುತಿತ್ತು ಎನ್ನುವ ಹೊಸ ಆರೋಪವೂ ಈಗ ಕೇಳಿಬಂದಿದೆ.

    ವಿಶೇಷ ಸೌಲಭ್ಯ ಏನಿದೆ?
    ಪೂಜೆಗೆ ಮಾಡಲೆಂದೇ ತುಳಸಿ ಗಿಡ ಇರುವ ವಿಶೇಷ ರೂಮ್, ಗಣ್ಯರು-ಅತಿಥಿಗಳ ಜೊತೆ ಮಾತನಾಡಲು ಸ್ಪೆಷಲ್ ರೂಮ್. ಮಲಗಲು ವಿಶೇಷ ಕೊಠಡಿ, ಬಟ್ಟೆಗಳನ್ನು ಇಡಲು ಪ್ರತ್ಯೇಕ ವಾರ್ಡ್‍ ರೋಬ್, 51 ಇಂಚಿನ ದೊಡ್ಡ ಟಿವಿ ಸೌಲಭ್ಯ ನೀಡಲಾಗಿತ್ತು.

    ಶಶಿಕಲಾ ಚಲನವಲನ ಬೇರೆಯವರಿಗೆ ಗೊತ್ತಾಗದಂತೆ ಕೊಠಡಿ ಸುತ್ತ ಪರದೆಯನ್ನು ಹಾಕಲಾಗಿತ್ತು. ಎರಡೆಲೆ ಚಿಹ್ನೆಯನ್ನು ಪಡೆಯಲು ಚುನಾವಣಾ ಆಯೋಗಕ್ಕೆ ಲಂಚ ನೀಡಿದ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದ ಟಿಟಿವಿ ದಿನಕರನ್ ನೇರವಾಗಿ ಈ ರೂಮ್‍ಗೆ ಬಂದು ಚರ್ಚೆ ಮಾಡುತ್ತಿದ್ದರು. ಚಿನ್ನಮ್ಮ ಸೇವೆಗಾಗಿ ತಮಿಳು ಬಲ್ಲ ಮೇರಿ-ರೇಖಾ ಜೊತೆ ಮತ್ತಿಬ್ಬರು ಕೈದಿಗಳ ನಿಯೋಜನೆ ಮಾಡಲಾಗಿತ್ತು ಎನ್ನುವ ಸ್ಪೋಟಕ ಮಾಹಿತಿ ಈಗ ಲಭ್ಯವಾಗಿದೆ.

    ಇದನ್ನೂ ಓದಿ:ಡಿಐಜಿ ರೂಪಾ ವರ್ಗಾವಣೆ ಮಾಡಿದ್ದು ಯಾಕೆ: ಸಿಎಂ ಸಮರ್ಥನೆ ನೀಡಿದ್ದು ಹೀಗೆ

    ತೆಲಗಿಗೆ ನೀಡಿದ ವಿಶೇಷ ಸೌಲಭ್ಯಗಳ ಫೋಟೋಗಳು ಇಲ್ಲಿವೆ

     

    https://youtu.be/VUvHqCfFg0E

  • ಜೈಲು ರಹಸ್ಯ ಬೇಧಿಸಿದ ರೂಪಾಗೆ ಎತ್ತಂಗಡಿ ಭಾಗ್ಯ

    ಜೈಲು ರಹಸ್ಯ ಬೇಧಿಸಿದ ರೂಪಾಗೆ ಎತ್ತಂಗಡಿ ಭಾಗ್ಯ

    ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ನೀಡಿದ ಪ್ರಕರಣವನ್ನು ಬಯಲಿಗೆ ಎಳೆದ ಡಿಐಜಿ ರೂಪಾ ಅವರನ್ನು ಸರ್ಕಾರ ವರ್ಗಾವಣೆಗೊಳಿಸಿದೆ.

    ಹೌದು, ಡಿಐಜಿ ರೂಪಾ ಮತ್ತು ಗುಪ್ತಚರ ಇಲಾಖೆಯ ಡಿಜಿಪಿ ಎಂಎನ್ ರೆಡ್ಡಿ ಅವರನ್ನು ವರ್ಗಾವಣೆ ಗೊಳಿಸಿ ಆದೇಶಿಸಿದೆ. ರೂಪಾ ಅವರನ್ನ ಸಂಚಾರ ಮತ್ತು ರಸ್ತೆ ಸುರಕ್ಷತಾ ಆಯುಕ್ತರನ್ನಾಗಿ ವರ್ಗಾವಣೆ ಮಾಡಿದೆ.

    ಬಂಟ್ವಾಳ ಗಲಾಟೆಯನ್ನು ನಿಯಂತ್ರಿಸುವಲ್ಲಿ ವಿಫಲವಾಗಿದ್ದಕ್ಕೆ ಎಂಎನ್ ರೆಡ್ಡಿ ಅವರನ್ನು ಎಸಿಬಿಗೆ ಸರ್ಕಾರ ವರ್ಗಾಯಿಸಿದೆ. ಗುಪ್ತಚರ ಇಲಾಖೆಯ ಐಜಿಯಾಗಿ ಅಮೃತ್ ಪೌಲ್ ನೇಮಕವಾಗಿದ್ದರೆ, ಕಾರಾಗೃಹದ ಎಡಿಜಿಪಿಯಾಗಿ ಮೇಘರಿಕ್ ನೇಮಕವಾಗಿದ್ದಾರೆ.

     

    https://youtu.be/VUvHqCfFg0E

     

    https://youtu.be/5NYUIeTEy-8

  • ವಿಐಪಿ ವಾಹನಗಳ ಮೇಲೆ ಕೆಂಪು/ನೀಲಿ ದೀಪ ಬಳಕೆ ನಿಷೇಧಿಸಿದ ಕೇಂದ್ರ ಸರ್ಕಾರ

    ವಿಐಪಿ ವಾಹನಗಳ ಮೇಲೆ ಕೆಂಪು/ನೀಲಿ ದೀಪ ಬಳಕೆ ನಿಷೇಧಿಸಿದ ಕೇಂದ್ರ ಸರ್ಕಾರ

    ನವದೆಹಲಿ: ಇನ್ಮುಂದೆ ದೇಶದ ರಾಷ್ಟ್ರಪತಿ, ಪ್ರಧಾನಿ, ನ್ಯಾಯಾಧೀಶರು ಸೇರಿದಂತೆ ಗಣ್ಯ ವ್ಯಕ್ತಿಗಳು ತಮ್ಮ ಕಾರಿನ ಮೇಲೆ ಕೆಂಪು ಹಾಗೂ ನೀಲಿ ದೀಪಗಳನ್ನ ಬಳಸುವಂತಿಲ್ಲ.

    ಹೌದು. ವಿಐಪಿ ಸಂಪ್ರದಾಯಕ್ಕೆ ಕೊನೆಹಾಡುವ ಸಲುವಾಗಿ ಕೇಂದ್ರ ಸಚಿವ ಸಂಪುಟ ಸಭೆ ಬುಧವಾರದಂದು ಈ ತೀರ್ಮಾನ ಕೈಗೊಂಡಿದ್ದು, ಗಣ್ಯ ವ್ಯಕ್ತಿಗಳ ಕಾರಿನಲ್ಲಿ ನೀಲಿ ಹಾಗೂ ಕೆಂಪು ದೀಪಗಳ ಬಳಕೆಯನ್ನ ನಿಷೇಧಿಸಿದೆ. ಈ ನಿಯಮ ಮೇ 1ರಿಂದಲೇ ಜಾರಿಗೆ ಬರಲಿದೆ.

    ಆದ್ರೂ ಆಂಬುಲೆನ್ಸ್ ಗಳಂತಹ ತುರ್ತು ಸೇವೆ ಒದಗಿಸುವ ವಾಹನಗಳಲ್ಲಿ ಕೆಂಪು ದೀಪಗಳನ್ನ ಬಳಸಬಹುದಾಗಿದೆ.

    ಈಗಾಗಲೇ ಹೊಸದಾಗಿ ರಚನೆಯಾಗಿರೋ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರಪ್ರದೇಶ ಸರ್ಕಾರ ಹಾಗೂ ಅಮರೀಂದರ್ ಸಿಂಗ್ ನೇತೃತ್ವದ ಪಂಜಾಬ್ ಸರ್ಕಾರ ವಿಐಪಿ ವಾಹನಗಳ ಮೇಲೆ ಕೆಂಪು ದೀಪ ಬಳಕೆಯನ್ನ ನಿಷೇಧಿಸಿವೆ.

  • ‘ರಾಜ್ಯ, ರಾಷ್ಟ್ರೀಯ ಹೆದ್ದಾರಿಯ ಟೋಲ್‍ಗಳಲ್ಲಿ ವಿಐಪಿಗಳಿಗೆ ಪ್ರತ್ಯೇಕ ದ್ವಾರ ನಿರ್ಮಿಸಿ’

    – ಪರಿಷತ್‍ನಲ್ಲಿ ಸರ್ಕಾರದ ವಿರುದ್ಧ ಜೆಡಿಎಸ್, ಬಿಜೆಪಿ ಶಾಸಕರ ಪ್ರತಿಭಟನೆ

    ಬೆಂಗಳೂರು: ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿಯ ಟೋಲ್‍ಗಳಲ್ಲಿ ಅಂಬುಲೆನ್ಸ್ ಮತ್ತು ವಿಐಪಿ ವಾಹನಗಳಿಗೆ ಪ್ರತ್ಯೇಕ ದ್ವಾರ ನಿರ್ಮಿಸಬೇಕು ಎಂದು ವಿಧಾನ ಪರಿಷತ್‍ನಲ್ಲಿ ಜೆಡಿಎಸ್ ಸದಸ್ಯರು ಆಗ್ರಹಿಸಿದರು.

    ಈ ವೇಳೆ ಫೆಬ್ರವರಿ 13ರಂದು ಸಂಜೆ 5 ಗಂಟೆಗೆ ಈ ಬಗ್ಗೆ ಸಭೆ ಕರೆದು ಚರ್ಚಿಸೋಣ ಎಂದ ಲೋಕೋಪಯೋಗಿ ಸಚಿವ ಮಹದೇವಪ್ಪ ಉತ್ತರಕ್ಕೆ ಜೆಡಿಎಸ್- ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ರು. ಲೋಕೋಪಯೋಗಿ ಸಚಿವರು ಪ್ರತಿ ಬಾರಿ ಹೀಗೆ ಹೇಳುತ್ತಾರೆ, ಕೆಲವು ಟೋಲ್ ಅಲ್ಲ. ಎಲ್ಲ ಟೋಲ್ ಗಳಲ್ಲೂ ಈ ರೀತಿಯ ಸಮಸ್ಯೆಗಳಿವೆ ಅಂತಾ ಜೆಡಿಎಸ್ ಸದಸ್ಯ ಶರವಣ ಅಸಮಾಧಾನ ವ್ಯಕ್ತಪಡಿಸಿದರು. ಈ ವೇಳೆ ಸದನದ ಬಾವಿಗಿಳಿದು ಜೆಡಿಎಸ್, ಬಿಜೆಪಿ ಸದಸ್ಯರು ಪ್ರತಿಭಟನೆ ನಡೆಸಿದ್ರು.

    ಮಾಜಿ ಪ್ರಧಾನಿ ದೇವೇಗೌಡರಿಗೂ ಬಿಟ್ಟಿಲ್ಲ ಅಂದ್ರೆ ನಾಚಿಕೆ ಆಗಬೇಕು. ಸಚಿವರಾಗಿ ನೀವು ವಿಫಲರಾಗಿದ್ದೀರಾ ಎಂದ ಈಶ್ವರಪ್ಪ, ಎಲ್ಲರಿಗೂ ಟೋಲ್ ತೆಗೆದು ಬಿಡಿ ಅಂದ್ರು. ಇದಕ್ಕೆ ತಿರುಗೇಟು ನೀಡಿದ ಮಹದೇವಪ್ಪ ಇದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೈಯಲ್ಲಿದೆ. ಕೇಂದ್ರ ಸರ್ಕಾರವನ್ನ ಒತ್ತಾಯಿಸಿ ಅಂದ್ರು. ಮತ್ಯಾಕೆ ಸಭೆ ಮಾಡ್ತೀರಾ ಅಂತ ಈಶ್ವರಪ್ಪ ಟಾಂಗ್ ಕೊಟ್ಟರು. ಈ ವೇಳೆ ಈಶ್ವರಪ್ಪ ಮಹದೇವಪ್ಪ ನಡುವೆ ವಾಕ್ಸಮರ ನಡೀತು.

    ಮಧ್ಯಪ್ರವೇಶಿಸಿದ ಸಚಿವ ಡಿಕೆಶಿವಕುಮಾರ್ ನಮ್ಮ ಹೆಸ್ರಲ್ಲಿ ಪಾಸ್‍ಗಳು ದುರುಪಯೋಗ ಆಗ್ತಿದೆ. ನನ್ನ ಶಿಷ್ಯರು ಕಲರ್ ಜೆರಾಕ್ಸ್ ಮಾಡಿ, ಬಾರು, ವೈನ್ ಶಾಪ್ ಮುಂದೆ ವಾಹನ ನಿಲ್ಲಿಸುತ್ತಿದ್ದಾರೆ. ಈ ದುರುಪಯೋಗ ತಡೆಯಲು ಮ್ಯಾಗ್ನೆಟಿಕ್ ಐಡಿ ಕಾರ್ಡ್ ತರಲು ಚಿಂತಿಸಲಾಗಿದೆ. ಫೆಬ್ರವರಿ 13ರ ಸಭೆಯಲ್ಲಿ ಎಲ್ಲವನ್ನ ಚರ್ಚಿಸೋಣ ಅಂತ ವಾಕ್ಸಮರಕ್ಕೆ ತೆರೆ ಎಳೆದ್ರು.

    ಸಭಾಪತಿ ಪೀಠದ ಮುಂದೆ ಬಿಜೆಪಿ ಜೆಡಿಎಸ್ ಪ್ರತಿಭಟಿಸಿ ಟೋಲ್ ಗೇಟ್‍ನಲ್ಲಿ ಶಾಸಕರೊಂದಿಗೆ ಟೋಲ್ ಸಿಬ್ಬಂದಿ ಅನುಚಿತ ವರ್ತನೆ ತೋರುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ರು.