Tag: VIP culture

  • ಬೆಂಗಾವಲು ವಾಹನ ನಿಲ್ಲಿಸಿ ಅಂಬುಲೆನ್ಸ್‌ಗೆ ದಾರಿ ಮಾಡಿಕೊಟ್ಟ ಮೋದಿ

    ಬೆಂಗಾವಲು ವಾಹನ ನಿಲ್ಲಿಸಿ ಅಂಬುಲೆನ್ಸ್‌ಗೆ ದಾರಿ ಮಾಡಿಕೊಟ್ಟ ಮೋದಿ

    ಗಾಂಧಿನಗರ: ದೇಶದಲ್ಲಿರುವ ವಿಐಪಿ ಸಂಸ್ಕೃತಿ ಕುರಿತಂತೆ ಯಾವಾಗಲೂ ವಾಗ್ದಾಳಿ ನಡೆಸುವ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರು, ಮಾರ್ಗಮಧ್ಯೆ ತಾವು ಪ್ರಯಾಣಿಸುತ್ತಿದ್ದ ಕಾರನ್ನು ನಿಲ್ಲಿಸುವಂತೆ ಬೆಂಗಾವಲು ಪಡೆಗೆ ಆದೇಶಿಸಿ ಅಂಬುಲೆನ್ಸ್‌ಗೆ (Ambulance) ದಾರಿ ಮಾಡಿಕೊಡುವ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಅಹಮದಾಬಾದ್‍ನಿಂದ (Ahmedabad) ಗಾಂಧಿನಗರಕ್ಕೆ ಹೋಗುವ ದಾರಿಯಲ್ಲಿ ಬರುತ್ತಿದ್ದ ಅಂಬುಲೆನ್ಸ್ ಕಂಡು ನರೇಂದ್ರ ಮೋದಿ ಅವರು, ತಮ್ಮ ವಾಹನವನ್ನು ನಿಲ್ಲಿಸಿ ಅಂಬುಲೆನ್ಸ್‌ಗೆ ದಾರಿ ಮಾಡಿಕೊಟ್ಟಿದ್ದಾರೆ. ಮೋದಿ ಯುಗದಲ್ಲಿ ವಿಐಪಿ ಸಂಸ್ಕೃತಿ ಇಲ್ಲ ಎಂದು ಬಿಜೆಪಿ ನಾಯಕ ರುತ್ವಿಜ್ ಪಟೇಲ್ (BJP leader Rutvij Patel) ಟ್ವಿಟರ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಹೋಟೆಲ್ ರೂಮ್‍ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮಾಡೆಲ್ ಶವ ಪತ್ತೆ

    ಗುಜರಾತ್ (Gujarat) ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರು ಅಂಬುಲೆನ್ಸ್‌ಗೆ ದಾರಿ ಮಾಡಿಕೊಡುವ ಸಲುವಾಗಿ ತಮ್ಮ ಬೆಂಗಾವಲು ಪಡೆಯನ್ನು ನಿಲ್ಲಿಸಿದರು. ವಿಐಪಿ ಸಂಸ್ಕೃತಿಯ ವಿರುದ್ಧ ಪ್ರಧಾನಿಯವರ ಮತ್ತೊಂದು ನಡೆ. ಇದೊಂದು ಮಾನವೀಯತೆಯನ್ನು ಸೂಚಿಸುತ್ತದೆ ಎಂದು ಬರೆಯಲಾಗಿದೆ. ಇದನ್ನೂ ಓದಿ: ಪಬ್ಲಿಕ್ ಟಿವಿ ಇಂಪ್ಯಾಕ್ಟ್- ಹೆಚ್ಚಿನ ದರ ಪಡೆದರೆ ಬಸ್ ರೂಟ್‍ಪರ್ಮಿಟ್ ಕ್ಯಾನ್ಸಲ್

    2017ರಿಂದಲೂ ಭಾರತದಲ್ಲಿರುವ ವಿಐಪಿ ಸಂಸ್ಕೃತಿಯ ವಿರುದ್ಧ ಮಾತನಾಡುವ ನರೇಂದ್ರ ಮೋದಿ ಅವರು, ಪ್ರತಿಯೊಬ್ಬ ವ್ಯಕ್ತಿಯೂ ವಿಐಪಿ ಸಂಸ್ಕೃತಿಯನ್ನು ಬದಲಾಯಿಸಿಕೊಳ್ಳುವುದು ಬಹಳ ಮುಖ್ಯ. ಎಲ್ಲಾ ಭಾರತೀಯರು ವಿಐಪಿ ಮನಸ್ಥಿತಿಯನ್ನು ತೊಡೆದುಹಾಕಬೇಕು. ಪ್ರತಿಯೊಬ್ಬ ವ್ಯಕ್ತಿಗೂ ಮೌಲ್ಯ ಮತ್ತು ಪ್ರಾಮುಖ್ಯತೆ ನೀಡಬೇಕು ಎಂದು ಹೇಳಿದ್ದರು.

    Live Tv
    [brid partner=56869869 player=32851 video=960834 autoplay=true]

  • ವಿಐಪಿ ವಾಹನಗಳ ಮೇಲೆ ಕೆಂಪು/ನೀಲಿ ದೀಪ ಬಳಕೆ ನಿಷೇಧಿಸಿದ ಕೇಂದ್ರ ಸರ್ಕಾರ

    ವಿಐಪಿ ವಾಹನಗಳ ಮೇಲೆ ಕೆಂಪು/ನೀಲಿ ದೀಪ ಬಳಕೆ ನಿಷೇಧಿಸಿದ ಕೇಂದ್ರ ಸರ್ಕಾರ

    ನವದೆಹಲಿ: ಇನ್ಮುಂದೆ ದೇಶದ ರಾಷ್ಟ್ರಪತಿ, ಪ್ರಧಾನಿ, ನ್ಯಾಯಾಧೀಶರು ಸೇರಿದಂತೆ ಗಣ್ಯ ವ್ಯಕ್ತಿಗಳು ತಮ್ಮ ಕಾರಿನ ಮೇಲೆ ಕೆಂಪು ಹಾಗೂ ನೀಲಿ ದೀಪಗಳನ್ನ ಬಳಸುವಂತಿಲ್ಲ.

    ಹೌದು. ವಿಐಪಿ ಸಂಪ್ರದಾಯಕ್ಕೆ ಕೊನೆಹಾಡುವ ಸಲುವಾಗಿ ಕೇಂದ್ರ ಸಚಿವ ಸಂಪುಟ ಸಭೆ ಬುಧವಾರದಂದು ಈ ತೀರ್ಮಾನ ಕೈಗೊಂಡಿದ್ದು, ಗಣ್ಯ ವ್ಯಕ್ತಿಗಳ ಕಾರಿನಲ್ಲಿ ನೀಲಿ ಹಾಗೂ ಕೆಂಪು ದೀಪಗಳ ಬಳಕೆಯನ್ನ ನಿಷೇಧಿಸಿದೆ. ಈ ನಿಯಮ ಮೇ 1ರಿಂದಲೇ ಜಾರಿಗೆ ಬರಲಿದೆ.

    ಆದ್ರೂ ಆಂಬುಲೆನ್ಸ್ ಗಳಂತಹ ತುರ್ತು ಸೇವೆ ಒದಗಿಸುವ ವಾಹನಗಳಲ್ಲಿ ಕೆಂಪು ದೀಪಗಳನ್ನ ಬಳಸಬಹುದಾಗಿದೆ.

    ಈಗಾಗಲೇ ಹೊಸದಾಗಿ ರಚನೆಯಾಗಿರೋ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರಪ್ರದೇಶ ಸರ್ಕಾರ ಹಾಗೂ ಅಮರೀಂದರ್ ಸಿಂಗ್ ನೇತೃತ್ವದ ಪಂಜಾಬ್ ಸರ್ಕಾರ ವಿಐಪಿ ವಾಹನಗಳ ಮೇಲೆ ಕೆಂಪು ದೀಪ ಬಳಕೆಯನ್ನ ನಿಷೇಧಿಸಿವೆ.