ಡೆಹ್ರಾಡೂನ್: ಚಾರ್ ಧಾಮ್ ಯಾತ್ರೆಗೆ (Char Dham Yatra 2024) ದೇಶ, ವಿದೇಶಗಳಿಂದ ಭಕ್ತರು ಹರಿದು ಬರುತ್ತಿದ್ದಾರೆ. ಯಾತ್ರೆಯ ನೋಂದಣಿ ಸಂಖ್ಯೆ ಈಗಾಗಲೇ 26 ಲಕ್ಷ ದಾಟಿದೆ. ಕಳೆದ ನಾಲ್ಕು ದಿನಗಳಲ್ಲಿ ಎರಡು ಲಕ್ಷಕ್ಕೂ ಅಧಿಕ ಯಾತ್ರಾರ್ಥಿಗಳು ಆಗಮಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸದ್ಯ ವಿಐಪಿ (VIP) ದರ್ಶನ ಸೌಲಭ್ಯವನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಏಪ್ರಿಲ್ 15 ರಂದು ಚಾರ್ಧಾಮ್ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದೆ. ಅಂದಿನಿಂದ ಇದುವರೆಗೆ ರಾಜ್ಯದಲ್ಲಿ 26 ಲಕ್ಷಕ್ಕೂ ಹೆಚ್ಚು ಯಾತ್ರಿಕರು ನೋಂದಾಯಿಸಿಕೊಂಡಿದ್ದಾರೆ. ಯಾತ್ರಾರ್ಥಿಗಳಿಗೆ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಲು ರಾಜ್ಯ ಸರ್ಕಾರ ಹಾಗೂ ಪ್ರವಾಸೋದ್ಯಮ ಇಲಾಖೆ ಶ್ರಮಿಸುತ್ತಿದೆ. ಎಲ್ಲಾ ಅಧಿಕಾರಿಗಳು ಸರ್ಕಾರ ಹೊರಡಿಸಿದ ಮಾರ್ಗಸೂಚಿಗಳನ್ನು ಗಂಭೀರವಾಗಿ ಅನುಸರಿಸುತ್ತಿದ್ದಾರೆ ಎಂದು ಅವರು ಹೇಳಿದರು.
ದರ್ಶನಕ್ಕಾಗಿ ಭಕ್ತರು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಮೇ ತಿಂಗಳಲ್ಲಿ ಕೇದಾರನಾಥ, ಬದರಿನಾಥ್, ಗಂಗೋತ್ರಿ ಮತ್ತು ಯಮುನೋತ್ರಿ ಧಾಮಕ್ಕೆ ಯಾತ್ರೆಗಾಗಿ ಆನ್‌ಲೈನ್ ನೋಂದಣಿಗಳನ್ನು ಸಂಪೂರ್ಣವಾಗಿ ಬುಕ್ ಮಾಡಲಾಗಿದೆ. ಆನ್‌ಲೈನ್ ನೋಂದಣಿಗೆ ನಿಗದಿತ ಸಂಖ್ಯೆಯ ಸ್ಲಾಟ್‌ಗಳು ಲಭ್ಯವಿದೆ. ಪೂರ್ವ ನೋಂದಣಿ ಇಲ್ಲದೆ ಆಗಮಿಸುವ ಭಕ್ತರಿಗೆ ಅವಕಾಶ ಕಲ್ಪಿಸಲು, ರಾಜ್ಯ ಸರ್ಕಾರ ಮತ್ತು ಪ್ರವಾಸೋದ್ಯಮ ಇಲಾಖೆ ಹರಿದ್ವಾರ ಮತ್ತು ಋಷಿಕೇಶದಲ್ಲಿ ಅವರ ಅನುಕೂಲಕ್ಕಾಗಿ ಆಫ್‌ಲೈನ್ ನೋಂದಣಿ ಸೌಲಭ್ಯಗಳನ್ನು ಆಯೋಜಿಸಿದೆ.
ಗಂಗೋತ್ರಿ ಯಾತ್ರಾ ಮಾರ್ಗದಲ್ಲಿ ಟ್ರಾಫಿಕ್: ಗೇಟ್ ವ್ಯವಸ್ಥೆ ಜಾರಿಯಿಂದಾಗಿ ಯಮುನೋತ್ರಿ ಮಾರ್ಗದಲ್ಲಿ ವ್ಯವಸ್ಥೆಗಳು ಸುಗಮವಾಗಿ ಕಾರ್ಯನಿರ್ವಹಿಸುತ್ತಿರುವಂತೆ ಕಂಡುಬಂದರೂ ಗಂಗೋತ್ರಿ ಮಾರ್ಗದಲ್ಲಿ ಸವಾಲುಗಳು ಎದುರಾಗಿವೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಆಗಮಿಸಿದ್ದರಿಂದ ಸಂಚಾರ ವ್ಯವಸ್ಥೆ ಹದಗೆಟ್ಟಿದೆ. ಗಂಗೋತ್ರಿ ಯಾತ್ರಾ ಮಾರ್ಗದಲ್ಲಿ ಗಂಗನಾನಿ ಮತ್ತು ಗಂಗೋತ್ರಿ ನಡುವೆ ಸುಮಾರು 60 ಕಿ.ಮೀ ವ್ಯಾಪಿಸಿರುವ ಟ್ರಾಫಿಕ್ ಜಾಮ್‌ನಲ್ಲಿ ಹಲವು ಪ್ರಯಾಣಿಕರ ವಾಹನಗಳು ಸಿಲುಕಿವೆ.
ಹಿಂದಿರುಗಿದ ಭಕ್ತರು: ಸಂಚಾರ ದಟ್ಟಣೆಯಲ್ಲಿ ಸಿಲುಕಿದ ಅನೇಕ ಭಕ್ತರು ತಮ್ಮ ದರ್ಶನವನ್ನು ಪೂರ್ಣಗೊಳಿಸದೆ ಉತ್ತರಕಾಶಿಯಿಂದ ಹಿಂದಿರುಗಲು ನಿರ್ಧರಿಸಿದ್ದಾರೆ. ಕಳೆದ ಭಾನುವಾರ ಯಮುನೋತ್ರಿ ಯಾತ್ರಾ ಮಾರ್ಗದಲ್ಲಿ ಉಂಟಾದ ಭಾರೀ ಟ್ರಾಫಿಕ್ ಜಾಮ್‌ನಿಂದಾಗಿ ಭಕ್ತರು ಗಂಗೋತ್ರಿ ಧಾಮದ ಕಡೆಗೆ ಪ್ರಯಾಣ ಬೆಳೆಸಿದರು. ದಮ್ಲಾದಿಂದ ಪ್ರಾರಂಭವಾಗುವ ಬರ್ನಿಗಡ್ ಮತ್ತು ರಾಡಿ ಟಾಪ್ ಬೈಪಾಸ್‌ನಂತಹ ಪರ್ಯಾಯ ಮಾರ್ಗಗಳ ಮೂಲಕ ಪ್ರಯಾಣಿಕರು ಗಂಗೋತ್ರಿಯನ್ನು ತಲುಪಿದ್ದಾರೆ.
ತಮ್ಮ ಅಮೋಘ ಅಭಿನಯದ ಮೂಲಕ ಅಭಿಮಾನಿಗಳ ಮನ ಗೆದ್ದಿರುವ ವಸಿಷ್ಠ ಸಿಂಹ (Vasishtha Simha) ನಾಯಕರಾಗಿ ನಟಿಸುತ್ತಿರುವ “ವಿಐಪಿ” (VIP) ಚಿತ್ರದ ಫಸ್ಟ್ ಲುಕ್ (First Look) ಇತ್ತೀಚಿಗೆ ಬಿಡುಗಡೆಯಾಯಿತು. ಅದಿಚುಂಚನಗಿರಿ ಮಠದ ಪರಮಪೂಜ್ಯ ಜಗದ್ಗುರು ಡಾ. ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿ ಇವರ ದಿವ್ಯ ಸಾನಿಧ್ಯದಲ್ಲಿ ಈ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಯಿತು. ಈ ಸಂದರ್ಭದಲ್ಲಿ ನಾಯಕ ವಸಿಷ್ಠ ಸಿಂಹ ಹಾಗೂ ಚಿತ್ರತಂಡ ಉಪಸ್ಥಿತರಿದ್ದರು. ಫಸ್ಟ್ ಲುಕ್ ನಲ್ಲಿ ವಸಿಷ್ಠ ಸಿಂಹ ಬ್ಯಾಟ್ ಹಿಡಿದಿದ್ದಾರೆ. ಮಾಸ್ ಫೀಲ್ ಇರುವಂತಹ ಪೋಸ್ಟರ್ ಕುತೂಹಲ ಮೂಡಿಸಿದೆ.
ಬಹು ನಿರೀಕ್ಷಿತ ಈ ಚಿತ್ರಕ್ಕೆ ಈಗಾಗಲೇ ಬೆಂಗಳೂರು ಸುತ್ತಮುತ್ತ ಎರಡು ಹಂತಗಳ ಚಿತ್ರೀಕರಣ ನಡೆದಿದೆ. ಈ ಭಾಗದಲ್ಲಿ ಮಾತಿನ ಭಾಗದ ಚಿತ್ರೀಕರಣ ಹಾಗೂ “ಕೆ.ಜಿ.ಎಫ್” ಖ್ಯಾತಿಯ ವಿಕ್ರಂ ಮೋರ್ , “ಯುವ” ಖ್ಯಾತಿಯ ಅರ್ಜುನ್ ಅವರ ಸಾಹಸ ನಿರ್ದೇಶನದಲ್ಲಿ ಸಾಹಸ ಸನ್ನಿವೇಶಗಳ ಚಿತ್ರೀಕರಣ ನಡೆದಿದೆ. ಕಲಾ ಸೃಷ್ಟಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಆರ್.ಎಸ್ . ಮೋಹನ್ ಕುಮಾರ್ ಹಾಗೂ ಆರ್ ಅಚ್ಯುತ್ ರಾವ್ ಅವರ ನಿರ್ಮಾಣದಲ್ಲಿ ಈ ಚಿತ್ರ ಅದ್ದೂರಿಯಾಗಿ ಮೂಡಿ ಬರುತ್ತಿದೆ. ಬ್ರಹ್ಮ ಈ ಚಿತ್ರದ ನಿರ್ದೇಶಕರು.
ವಿಭಿನ್ನ ಕಥಾಹಂದರ ಹಾಗೂ ಮೇಕಿಂಗ್ ನಿಂದ ಸದ್ದು ಮಾಡುತ್ತಿರುವ “ವಿಐಪಿ” ಚಿತ್ರದಲ್ಲಿ ವಸಿಷ್ಠ ಸಿಂಹ ಅವರಿಗೆ ನಾಯಕಿಯಾಗಿ ತೇಜಸ್ವಿನಿ ಶರ್ಮ ಅಭಿನಯಿಸುತ್ತಿದ್ದಾರೆ. ಸುನೀಲ್ ಪುರಾಣಿಕ್, ಬಲ ರಾಜವಾಡಿ , ಅಫ್ಜಲ್ , ಸ್ಪರ್ಶ ರೇಖಾ, ಸುಚೇಂದ್ರ ಪ್ರಸಾದ್ , ಹನುಮಂತೇಗೌಡ, ರಾಮ್ ಕಶ್ಯಪ್, ರಣವೀರ್ ಮುಂತಾದವರು ತಾರಾಬಳಗದಲ್ಲಿದ್ದಾರೆ.
ರಾಜೀವ್ ಗಣೇಸನ್ ಛಾಯಾಗ್ರಹಣ, ಹರ್ಷವರ್ಧನ್ ರಾಜ್ ಸಂಗೀತ ನಿರ್ದೇಶನ, ಸತೀಶ್ ಚಂದ್ರಯ್ಯ ಸಂಕಲನ ಈ ಚಿತ್ರದಲ್ಲಿರಲಿದೆ ಎಂದು ಕಾರ್ಯಕಾರಿ ನಿರ್ಮಾಪಕ ಅಫ್ಜಲ್ ತಿಳಿಸಿದ್ದಾರೆ.
ಅಮೋಘ ಅಭಿನಯ ಹಾಗೂ ಕಂಚಿನ ಕಂಠದ ಮೂಲಕ ಕನ್ನಡಿಗರ ಮನಗೆದ್ದಿರುವ ನಟ ವಸಿಷ್ಠ ಸಿಂಹ (Vasishtha Simha) ನಾಯಕರಾಗಿ ನಟಿಸುತ್ತಿರುವ ನೂತನ ಚಿತ್ರಕ್ಕೆ ‘ವಿಐಪಿ’ (VIP) ಎಂದು ಹೆಸರಿಡಲಾಗಿದೆ. ಮಕರ ಸಂಕ್ರಾಂತಿಯ ಪರ್ವಕಾಲದಲ್ಲಿ ಈ ನೂತನ ಚಿತ್ರದ ಶೀರ್ಷಿಕೆ ಅನಾವರಣವಾಗಿದೆ.
ಕಲಾ ಸೃಷ್ಟಿ ಪ್ರೊಡಕ್ಷನ್ಸ್ ನಿರ್ಮಾಣದ, ಬ್ರಹ್ಮ ನಿರ್ದೇಶನದ ಈ ಚಿತ್ರ ವಿಭಿನ್ನ ಕಥಾಹಂದರ ಹೊಂದಿದೆ. ಮತ್ತೊಂದು ವಿಶೇಷವೆಂದರೆ ವಿಐಪಿ ಅಭಿಮಾನಿಗಳು ವಸಿಷ್ಠ ಸಿಂಹ ಅವರಿಗೆ ರಾಯಲ್ ಸ್ಟಾರ್ ಎಂಬ ಬಿರುದು ನೀಡಿದ್ದಾರೆ. ವಸಿಷ್ಠ ಸಿಂಹ ಈ ಚಿತ್ರದಿಂದ ರಾಯಲ್ ಸ್ಟಾರ್ ವಸಿಷ್ಠ ಸಿಂಹ ಆಗಿ ಮಿಂಚಲಿದ್ದಾರೆ.
ಬೆಂಗಳೂರಿನ ಸುತ್ತಮುತ್ತಾ ವಿಐಪಿ ಚಿತ್ರದ ಚಿತ್ರೀಕರಣ ಅದ್ದೂರಿಯಾಗಿ ಬಿರುಸಿನಿಂದ ಸಾಗಿದೆ. ಕೊಡಗು, ಸಕಲೇಶಪುರದಲ್ಲೂ ಚಿತ್ರೀಕರಣ ನಡೆಯಲಿದೆ. ಕಲಾಸೃಷ್ಠಿ ಪ್ರೊಡಕ್ಷನ್ಸ್ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ ಮೊದಲ ಚಿತ್ರವಿದು. ಈ ಚಿತ್ರಕ್ಕೆ ಅಫ್ಜಲ್ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಗಿಣಿ ಅಭಿನಯದ ಸಾರಿ ಕರ್ಮ ರಿಟರ್ನ್ಸ್ ಚಿತ್ರದ ನಿರ್ದೇಶಕ ಬ್ರಹ್ಮ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
ಕ್ರೈಮ್ ಥ್ರಿಲ್ಲರ್ ಹಾಗೂ ರಿವೆಂಜ್ ಕಥಾಹಂದರ ಹೊಂದಿರುವ ಈ ಚಿತ್ರ ಹಾಲಿವುಡ್ ಸ್ಟೈಲ್ ನಲ್ಲಿ (ನಾನ್ ಲೀನಿಯರ್ ಸ್ಕ್ರೀನ್ ಪ್ಲೇ) ಮೇಕಿಂಗ್ ಇರಲಿದೆ. ಮೋಹನ್ ಕುಮಾರ್ ವಿಐಪಿ ಚಿತ್ರಕ್ಕೆ ಕಥೆ ಬರೆದಿದ್ದಾರೆ. ರಾಜೀವ್ ಗಣೇಶನ್ ಚಿತ್ರಕಥೆ ಬರೆದು ಛಾಯಾಗ್ರಾಹಕರಾಗೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಹರ್ಷವರ್ಧನ್ ರಾಜ್ ಸಂಗೀತ ನಿರ್ದೇಶನ, ಸತೀಶ್ ಚಂದ್ರಯ್ಯ ಸಂಕಲನ ಹಾಗೂ ಕೆಜಿಎಫ್ ಖ್ಯಾತಿಯ ವಿಕ್ರಮ್ ಮೋರ್ ಸಾಹಸ ನಿರ್ದೇಶನ ಚಿತ್ರದಲ್ಲಿರಲಿದೆ. ಹೆಸರಾಂತ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ ಮುಂದಿನ ದಿನಗಳಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡುವುದಾಗಿ ಕಾರ್ಯಕಾರಿ ನಿರ್ಮಾಪಕ ಅಫ್ಜಲ್ ತಿಳಿಸಿದ್ದಾರೆ.
ಹೈದರಾಬಾದ್: ಸಾಮಾನ್ಯ ಯಾತ್ರಿಗಳಿಗೆ (Common Pilgrims) ತಿರುಮಲ ತಿರುಪತಿ ದೇವಸ್ಥಾನಂ (TTD) ಮಂಡಳಿಯು ಗುಡ್ ನ್ಯೂಸ್ ನೀಡಿದೆ. ಸಾಮಾನ್ಯರಿಗೂ ವೆಂಕಟೇಶ್ವರಸ್ವಾಮಿ ದೇವರ ದರ್ಶನ ಸುಲಭವಾಗಿ ಸಿಗಲೆಂದು ಪ್ರಮುಖ ನಿರ್ಧಾರವನ್ನು ಟಿಟಿಡಿ ಕೈಗೊಂಡಿದೆ.
ತಿರುಮಲದಲ್ಲಿ ಶನಿವಾರ ಸಭೆ ನಡೆಸಿದ ಮಂಡಳಿಯು, ಗಣ್ಯರಿಗಾಗಿ ಜಾರಿಯಲ್ಲಿದ್ದ ತಿರುಪತಿ ದೇವರ ದರ್ಶನ ಸಮಯದಲ್ಲಿ ಬದಲಾವಣೆ ಮಾಡಿದೆ. ಈವರೆಗೆ ಇದ್ದ ಬೆಳಗ್ಗೆ 5:30 ರ ಬದಲಾಗಿ ಗಣ್ಯರಿಗೆ 10 ಗಂಟೆಯಿಂದ ದರ್ಶನಕ್ಕೆ ಅವಕಾಶ ಕಲ್ಪಿಸಲು ಕ್ರಮವಹಿಸಲಾಗಿದೆ. ಗಣ್ಯರು ದರ್ಶನ ಮುಗಿಸಿ ಬರುವವರೆಗೂ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತು ಕಾಯಬೇಕಿದ್ದ ಸಾಮಾನ್ಯ ಯಾತ್ರಾರ್ಥಿಗಳಿಗೆ ಶ್ರೀವಾರಿ ದರ್ಶನಕ್ಕೆ ಅನುವು ಮಾಡಿಕೊಡಲು ಈ ಬದಲಾವಣೆ ಮಾಡಲಾಗಿದೆ.
ಟಿಟಿಡಿ ಎಲ್ಲಾ ವರ್ಗಗಳ ಕೊಠಡಿಗಳನ್ನು ಹೊಂದಿದೆ. ಸುಮಾರು 7,500 ಘಟಕಗಳಿವೆ. ಇದು ಸೀಮಿತ ಸಂಖ್ಯೆಯ ಯಾತ್ರಿಕರ ಅಗತ್ಯಗಳನ್ನು ಮಾತ್ರ ಹೊಂದಿದೆ. ತಿರುಮಲಕ್ಕೆ ಬರುವ ಅನೇಕ ಯಾತ್ರಾರ್ಥಿಗಳು ಕೊಠಡಿ ಖಾಲಿಯಾಗಿ ತಮಗೆ ಹಂಚಿಕೆಯಾಗುವವರೆಗೂ ಗಂಟೆಗಳ ಕಾಲ ಕಾಯುವಂತಹ ಪರಿಸ್ಥಿತಿ ಇದೆ. ಅದನ್ನು ತಪ್ಪಿಸಲು ಈ ಕ್ರಮಕೈಗೊಳ್ಳಲಾಗಿದೆ.
ಚಂಡೀಗಢ: ಮುಖ್ಯಮಂತ್ರಿ ಭಗವಂತ್ ಮಾನ್ ನೇತೃತ್ವದ ಪಂಜಾಬ್ ಸರ್ಕಾರ ರಾಜ್ಯದಲ್ಲಿ 424 ಮಂದಿಗೆ ನೀಡಿದ್ದ ಭದ್ರತೆಯನ್ನು ಹಿಂಪಡೆಯುವ ಮಹತ್ವದ ನಿರ್ಧಾರವನ್ನು ಕೈಗೊಂಡಿರುವುದಾಗಿ ತಿಳಿಸಿದೆ.
ನಿವೃತ್ತ ಪೊಲೀಸ್ ಅಧಿಕಾರಿಗಳು ಮತ್ತು ಧಾರ್ಮಿಕ ಮತ್ತು ರಾಜಕೀಯ ಮುಖಂಡರಿಗೆ ನೀಡಲಾಗಿದ್ದ ಭದ್ರತೆಯನ್ನು ಪಂಜಾಬ್ ಸರ್ಕಾರ ಹಿಂಪಡೆದಿದೆ. ಏಪ್ರಿಲ್‍ನಲ್ಲಿ ಮಾಜಿ ಸಚಿವರು, ಶಾಸಕರು ಸೇರಿದಂತೆ 184 ಜನರ ಭದ್ರತೆಯನ್ನು ಪಂಜಾಬ್ ಸರ್ಕಾರ ಹಿಂಪಡೆದಿತ್ತು. ಬಳಿಕ ಒಂದು ತಿಂಗಳ ಹಿಂದೆ 122 ಮಾಜಿ ಸಚಿವರು ಮತ್ತು ಶಾಸಕರ ಭದ್ರತೆಯನ್ನು ಹಿಂಪಡೆಯಲಾಗಿತ್ತು. ಇದನ್ನೂ ಓದಿ: 1991ರ ಕಾಯಿದೆ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸುಪ್ರೀಂಕೋರ್ಟ್‍ಗೆ ಮತ್ತೊಂದು ಅರ್ಜಿ
ಇದೀಗ ಕ್ಯಾಪ್ಟನ್ ಅಮರಿಂದರ್ ಸಿಂಗ್ ಪುತ್ರ ರಾನೀಂದರ್ ಸಿಂಗ್, ಕಾಂಗ್ರೆಸ್ ಶಾಸಕ ಪ್ರತಾಪ್ ಸಿಂಗ್ ಪತ್ನಿ, ಮಾಜಿ ಸಚಿವರಾದ ಮನ್‍ಪ್ರೀತ್ ಸಿಂಗ್ ಬಾದಲ್, ರಾಜ್ ಕುಮಾರ್ ವರ್ಕಾ, ಭರತ್ ಭೂಷಣ್ ಆಶು, ಮಾಜಿ ಮುಖ್ಯಮಂತ್ರಿ ಚರಣ್‍ಜಿತ್ ಸಿಂಗ್ ಚನ್ನಿ ಸೇರಿದಂತೆ ಅವರ ಕುಟುಂಬಸ್ಥರಿಗೆ ನೀಡಿದ್ದ ಭದ್ರತೆಯನ್ನು ಹಿಂಪಡೆಯಲಾಗಿದೆ ಎಂದು ತಿಳಿಸಲಾಗಿದೆ. ಸದ್ಯ 400 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಠಾಣೆಗಳಿಗೆ ಮರಳಿದ್ದಾರೆ ಎಂದು ಭಗವತ್ ಮಾನ್ ಹೇಳಿದ್ದಾರೆ. ಇದನ್ನೂ ಓದಿ: ಡಿಕೆಶಿ ವಿರುದ್ಧ ಇಡಿ ಕೇಸ್ – ವಿಚಾರಣೆ ಮೇ 31ಕ್ಕೆ ಮುಂದೂಡಿಕೆ
ಚಂಡೀಗಢ: ವಿಐಪಿ ಸಂಸ್ಕೃತಿಯನ್ನು ಕೊನೆಗೊಳಿಸುವ ಪ್ರಯತ್ನದಲ್ಲಿರುವ ಪಂಜಾಬ್‍ನ ಭಗವಂತ್ ಮಾನ್ ಸರ್ಕಾರವು ಜೈಲಿನಲ್ಲಿರುವ ಎಲ್ಲಾ ವಿಐಪಿ ಕೊಠಡಿಗಳನ್ನು ಜೈಲು ನಿರ್ವಹಣಾ ಬ್ಲಾಕ್‍ಗಳನ್ನಾಗಿ ಪರಿವರ್ತಿಸಲು ಘೋಷಿಸಿದೆ.
ಈ ಬಗ್ಗೆ ಸಿಎಂ ಭಗವಂತ್ ಮಾನ್ ಅವರು ಮಾತನಾಡಿ, ಜೈಲು ಸಿಬ್ಬಂದಿಯ ಸುಗಮ ಕಾರ್ಯ ನಿರ್ವಹಣೆಯನ್ನು ಖಚಿತ ಪಡಿಸಿಕೊಳ್ಳಲು ಜೂಲ್ಲಿನ ಎಲ್ಲಾ ವಿಐಪಿ ಕೊಠಡಿಗಳನ್ನು ಜೈಲು ನಿರ್ವಹಣಾ ಬ್ಲಾಕ್‍ಗಳನ್ನಾಗಿ ಪರಿವರ್ತಿಸಲಾಗಿದೆ ಎಂದು ತಿಳಿಸಿದ್ದಾರೆ.
With a view to ending VIP culture, all VIP rooms in jails will be converted into jail management blocks to ensure smooth functioning of jail staff. Concerned officers will be held accountable in case of negligence in jail & strict action will be taken: Punjab CM Bhagwant Mann pic.twitter.com/WEpq7QgGUp
ಜೈಲು ಕೈದಿಗಳಿಂದ ಮೊಬೈಲ್ ಫೋನ್ ವಶಪಡಿಸಿಕೊಂಡ ಬಗ್ಗೆ ಮಾತನಾಡಿದ ಅವರು, ಜೈಲು ಆವರಣದಲ್ಲಿ ದರೋಡೆಕೋರರಿಂದ 710 ಮೊಬೈಲ್ ಫೋನ್‍ಗಳನ್ನು ವಶಪಡಿಸಿಕೊಂಡಿದ್ದೇವೆ. ಅಷ್ಟೇ ಅಲ್ಲದೇ ಫೋನ್‍ಗಳನ್ನು ಒಳಗೆ ಪಡೆದವರ ವಿರುದ್ಧವೂ ಕ್ರಮ ಕೈಗೊಂಡಿದ್ದೇವೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಕೆಲಸದಲ್ಲಿ ತೃಪ್ತಿ ಇಲ್ಲ – ಡೆತ್ ನೋಟ್ ಬರೆದು ಪೊಲೀಸ್ ಆತ್ಮಹತ್ಯೆ
ಪಾಟ್ನಾ: ವಿಕಾಸಶೀಲ್ ಇನ್ಸಾನ್ ಪಾರ್ಟಿ(ವಿಐಪಿ)ಯ ಮೂವರು ಶಾಸಕರು ಬುಧವಾರ ಪಕ್ಷವನ್ನು ತೊರೆದು ಮುಖೇಶ್ ಸಹಾನಿ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ವಿಐಪಿಯು ಬಿಜೆಪಿ, ಜನತಾ ದಳ ಯುನೈಟೆಡ್ (ಜೆಡಿಯು) ಮತ್ತು ಹಿಂದೂಸ್ತಾನ್ ಅವಾಮಿ ಮೋರ್ಚಾ (ಎಚ್‍ಎಎಂ) ವನ್ನು ಒಳಗೊಂಡಿರುವ ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‍ಡಿಎ) ಮಿತ್ರ ಪಕ್ಷವಾಗಿದ್ದು, ಇದೀಗ ವಿಐಪಿ ತೊರೆದು ರಾಜು ಸಿಂಗ್, ಮಿಶ್ರಿ ಲಾಲ್ ಯಾದವ್ ಮತ್ತು ಸ್ವರ್ಣ ಸಿಂಗ್ ಅವರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಇದನ್ನೂ ಓದಿ: ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಪುನಾರಂಭಿಸಿ: ಸೋನಿಯಾ ಗಾಂಧಿ
ಈ ಮೂವರು ಶಾಸಕರು ವಿಐಪಿ ಪಕ್ಷವನ್ನು ತೊರೆದು ಬಿಜೆಪಿ ಸೇರ್ಪಡೆಗೊಂಡಿರುವುದರಿಂದ ವಿಧಾನಸಭೆಯಲ್ಲಿ 77 ಶಾಸಕರನ್ನು ಹೊಂದಿರುವ ಅತಿದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದರೆ, 75 ಶಾಸಕರನ್ನು ಹೊಂದಿರುವ ಮೂಲಕ ಆರ್‍ಜೆಡಿಯು ಎರಡನೇ ಸ್ಥಾನಕ್ಕೀಳಿದಿದೆ. ಜೆಡಿಯು 45, ಕಾಂಗ್ರೆಸ್ 19 ಮತ್ತು ಎಡಪಕ್ಷಗಳು 15 ಶಾಸಕರನ್ನು ಹೊಂದಿದೆ.
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಮುಖೇಶ್ ಸಹಾನಿ ನೇತೃತ್ವದ ವಿಐಪಿ ಪಕ್ಷವು ಬಿಜೆಪಿ ವಿರುದ್ಧ 57 ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಏಪ್ರಿಲ್ 12 ರಂದು ನಡೆಯಲಿರುವ ಬೋಚಾಹಾ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿಯ ಬೇಬಿ ಕುಮಾರಿ ವಿರುದ್ಧ ಗೀತಾ ದೇವಿ ಎಂಬ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದಾರೆ. ಇದನ್ನೂ ಓದಿ: ಮೋಹಿನಿಯಾಟ್ಟಂ ನೃತ್ಯಕ್ಕೆ ಅರ್ಧದಲ್ಲೇ ತಡೆ – ಕೇರಳ ಜಡ್ಜ್ ಪಾಷಾ ವಿರುದ್ಧ ಖ್ಯಾತ ಕಲಾವಿದೆ ಆಕ್ರೋಶ
ಸದ್ಯ ಮುಖೇಶ್ ಸಹಾನಿ ಎಂಎಲ್‍ಸಿ ಆಗಿದ್ದು, ಜುಲೈನಲ್ಲಿ ಅವರ ಅವಧಿ ಮುಕ್ತಾಯವಾಗಲಿದೆ. ಅಲ್ಲದೇ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಬಿಹಾರದ ಎನ್‍ಡಿಎ ಸರ್ಕಾರದಲ್ಲಿ ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಚಿವರಾಗಿದ್ದಾರೆ.
– ಎಲ್ಲರಿಗೂ ದರ್ಶನಕ್ಕೆ ಅವಕಾಶ ನೀಡಿ, ಇಲ್ಲವೇ ಯಾರಿಗೂ ನೀಡಬೇಡಿ
– ಕೇವಲ ವಿಐಪಿಗಳಿಗೇಕೆ ಅವಕಾಶ ಎಂದು ಪ್ರಶ್ನೆ
ಹಾಸನ: ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ಹಾಸನಾಂಬೆ ದೇವಾಲಯದ ಬಾಗಿಲನ್ನು ನವಂಬರ್ 5ರಿಂದ ತೆರೆಯಲಾಗಿದ್ದು, ಕೊರೊನಾ ಕಾರಣ ನೀಡಿ ಆಹ್ವಾನಿತ ಜನಪ್ರತಿನಿಧಿಗಳು, ವಿಐಪಿಗಳಿಗೆ ಮಾತ್ರ ದರ್ಶನಕ್ಕೆ ವ್ಯವಸ್ಥೆ ಮಾಡಿಕೊಟ್ಟು ಸಾಮಾನ್ಯ ಭಕ್ತರ ಪ್ರವೇಶ ನಿಷೇಧಿಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಈ ವರ್ಷ ಕೊರೊನಾ ಕಾರಣ ನೀಡಿ ಆಹ್ವಾನಿತ ಜನಪ್ರತಿನಿಧಿಗಳು, ವಿಐಪಿಗಳಿಗೆ ನವೆಂಬರ್ 16 ರವರೆಗೆ ದರ್ಶನಕ್ಕೆ ಅವಕಾಶ ನೀಡಲಾಗಿದ್ದು, ಜನಸಾಮಾನ್ಯರ ದರ್ಶನ ನಿಷೇಧಿಸಲಾಗಿದೆ. ಜನಸಾಮಾನ್ಯರಿಗೆ ಒಂದು ಕಾನೂನು, ರಾಜಕಾರಣಿಗಳಿಗೆ ಮತ್ತೊಂದು ಕಾನೂನು. ಇದು ಎಷ್ಟರಮಟ್ಟಿಗೆ ಸರಿ, ದರ್ಶನದ ವ್ಯವಸ್ಥೆ ಇಲ್ಲ ಎಂದರೆ ಯಾರಿಗೂ ಅವಕಾಶ ನೀಡಬೇಡಿ ಎಂದು ಹಾಸನಾಂಬೆ ಭಕ್ತರು ಕಿಡಿಕಾರಿದ್ದಾರೆ.
ಹಾಸನಾಂಬೆ ದೇವಿ ಹಲವು ಪವಾಡಗಳಿಗೆ, ನಂಬಿಕೆಗಳಿಗೆ ಹೆಸರಾಗಿದ್ದು, ಪೂಜೆ ಸಲ್ಲಿಸಿ ಬಾಗಿಲು ಹಾಕಿದ ನಂತರ ಹಚ್ಚಿಟ್ಟ ದೀಪ ಮುಂದಿನ ವರ್ಷ ಬಾಗಿಲು ತೆರೆಯುವವರೆಗೂ ಬೆಳಗುತ್ತಿರುತ್ತದೆ. ದೇವರಿಗೆ ಮುಡಿಸಿದ ಹೂ ವರ್ಷವಾದರೂ ಬಾಡಿರುವುದಿಲ್ಲ. ದೇವರ ಮುಂದಿಟ್ಟ ನೈವೇದ್ಯ ಹಳಸಿರುವುದಿಲ್ಲ ಎಂಬ ನಂಬಿಕೆಯಿದೆ. ಅಷ್ಟೆ ಅಲ್ಲದೆ ವರ್ಷಕ್ಕೊಮ್ಮೆ ಹಾಸನಾಂಬೆ ದರ್ಶನ ಪಡೆದು ಪೂಜೆ ಸಲ್ಲಿಸಿದರೆ ನಮ್ಮ ಬೇಡಿಕೆ ಈಡೇರಲಿದೆ ಎಂಬ ನಂಬಿಕೆಯಿದೆ. ಹೀಗಾಗಿ ವರ್ಷಕ್ಕೊಮ್ಮೆ ಹಾಸನಾಂಬೆ ದೇವಾಲಯದ ಬಾಗಿಲು ತೆರೆದಾಗ ಲಕ್ಷಾಂತರ ಭಕ್ತರು ದೇವರ ದರ್ಶನ ಪಡೆದು ಪುನೀತರಾಗುತ್ತಾರೆ.
ನವದೆಹಲಿ: ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿರುವ ಬಾಲಿವುಡ್ ಗಾಯಕಿ ಕನ್ನಿಕಾ ಕಪೂರ್ ವಿರುದ್ಧ ಲಕ್ನೋ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.
ಮಾರ್ಚ್ ಆರಂಭದಲ್ಲಿ ಲಂಡನ್‍ನಿಂದ ಭಾರತಕ್ಕೆ ವಾಸಪ್ ಆಗಿದ್ದ ಕನ್ನಿಕಾ ಅವರಿಗೆ ಡೆಡ್ಲಿ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಆದರೆ ಸೋಂಕು ಇತರರಿಗೆ ಹರಡದಂತೆ ಅಗತ್ಯವಾದ ನಿರ್ದೇಶನಗಳನ್ನು ಪಾಲಿಸದ ಹಿನ್ನೆಲೆ ಲಕ್ನೋ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.
ಶುಕ್ರವಾರ ಕನ್ನಿಕಾ ಅವರ ಕೋವಿಡ್-19 ಪರೀಕ್ಷೆಯ ವರದಿ ಬಂದಿದ್ದು, ಅವರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಆದರೆ ಇದಕ್ಕೂ ಮೊದಲು ಹಲವು ವಿಐಪಿಗಳನ್ನು ಕನ್ನಿಕಾ ಪಾರ್ಟಿಯಲ್ಲಿ ಭೇಟಿಯಾಗಿದ್ದರು. ಹೀಗಾಗಿ ಪಾರ್ಟಿಯಲ್ಲಿ ಭಾಗಿಯಾಗಿದ್ದವರಿಗೂ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ. ಕನ್ನಿಕಾ ಅವರಿ ಸೋಂಕು ತಗುಲಿರುವುದು ದೃಢಪಟ್ಟ ಬಳಿಕ ಅವರಿಗೆ ಲಕ್ನೋದ ಕಿಂಗ್ ಜಾರ್ಜ್ ಮೆಡಿಕಲ್ ವಿಶ್ವವಿದ್ಯಾಲಯ (ಕೆಜಿಎಂಯು)ನ ಪ್ರತ್ಯೇಕ ವಾರ್ಡ್ ನಲ್ಲಿ ಇರಿಸಿ ಚಿಕಿತ್ಸೆ ಕೊಡಲಾಗುತ್ತಿದೆ.
ಆದರೆ ಲಕ್ನೋ ಮುಖ್ಯ ವೈದ್ಯಕೀಯ ಅಧಿಕಾರಿಯೊಬ್ಬರು ಕನ್ನಿಕಾ ಸೋಂಕಿನ ಬಗ್ಗೆ ನಿರ್ಲಕ್ಷ್ಯ ಮೆರೆದಿದ್ದಾರೆ ಎಂದು ದೂರಿದ್ದು, ಈ ದೂರಿನ ಮೇರೆಗೆ ಐಪಿಸಿ ಸೆಕ್ಷನ್ 188, 269, 270ರ ಅಡಿಯಲ್ಲಿ ಲಕ್ನೋನ ಸರೋಜಿನಿ ನಗರ ಪೊಲೀಸ್ ಠಾಣೆಯಲ್ಲಿ ಕನ್ನಿಕಾ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ.
ಹಜರತ್‍ಗಂಜ್ ಮತ್ತು ಗೋಮ್ಟಿನಗರ ಪೊಲೀಸ್ ಠಾಣೆಗಳಲ್ಲಿಯೂ ಕನ್ನಿಕಾ ವಿರುದ್ಧ ಇನ್ನೂ ಎರಡು ಎಫ್‍ಐಆರ್ ದಾಖಲಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಈ ಪ್ರದೇಶದ ಮೂರು ವಿಭಿನ್ನ ಪಾರ್ಟಿಗಳಲ್ಲಿ ಕನ್ನಿಕಾ ಮಾರ್ಚ್ 11ರಂದು ಲಂಡನ್‍ನಿಂದ ವಾಪಸ್ ಬಂದ ಬಳಿಕ ಭಾಗಿಯಾಗಿದ್ದರು. ಈ ಹಿನ್ನೆಲೆ ಇನ್ನೂ ಅವರ ಮೇಲೆ ಇನ್ನೂ ಎರಡು ಪ್ರಕರಣ ದಾಖಲಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
Vasundhara Raje, son Dushyant Singh self-quarantine after attending party with Kanika Kapoor
ಕಾನಿಕಾ ಕಪೂರ್ ಬೇರೆ ಬೇರೆ ದಿನಗಳಲ್ಲಿ ಒಟ್ಟು ಮೂರು ಪಾರ್ಟಿಗಳಲ್ಲಿ ಭಾಗಿಯಾಗಿದ್ದರು. ಉನ್ನತ ರಾಜಕಾರಣಿಗಳು ಸೇರಿದಂತೆ ಹಲವಾರು ವಿಐಪಿಗಳನ್ನು ಭೇಟಿ ಮಾಡಿದ್ದರು. ಪಾರ್ಟಿಯಲ್ಲಿ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ, ಬಿಜೆಪಿ ಸಂಸದ ದುಶ್ಯಂತ್ ಸಿಂಗ್ ಮತ್ತು ಅವರ ತಾಯಿ ಅವರು ಕನ್ನಿಕಾರ ಸಂಪರ್ಕಕ್ಕೆ ಬಂದಿದ್ದರು. ಈ ಹಿನ್ನೆಲೆ ಈ ನಾಯಕರು ತಮ್ಮನ್ನು ತಾವು ಪ್ರತ್ಯೇಕವಾಗಿರಿಸಿಕೊಂಡಿದ್ದಾರೆ.
Correction – Singer Kanika Kapoor (in file pic), who tested positive for #COVID19, stayed at Taj Hotel in Lucknow and attended several functions in the city, booked for negligence by Uttar Pradesh police. pic.twitter.com/WsUUzBP6KL
ಲಂಡನ್‍ನಿಂದ ಬಂದ ಬಳಿಕ ಕನ್ನಿಕಾ ಐಷಾರಾಮಿ ಹೋಟೆಲ್‍ನಲ್ಲಿ ಉಳಿದುಕೊಂಡಿದ್ದರು, ಅಲ್ಲದೇ ಕಾನ್ಪುರದ ಸಂಬಂಧಿಕರ ಮನೆಗೆ ಕನ್ನಿಕಾ ಭೇಟಿ ಕೊಟ್ಟಿದ್ದರು ಎಂದು ಲಕ್ನೋನ ಅಧಿಕಾರಿಗಳು ಶುಕ್ರವಾರ ಮಾಹಿತಿ ನೀಡಿದ್ದಾರೆ.
ಭಾರತದಲ್ಲಿ ಕೊರೊನಾ ಹಬ್ಬಿದ್ದು ಹೇಗೆ?
ಭಾರತದಲ್ಲಿ ಇದುವರೆಗೆ ಸೋಂಕಿತ ಪ್ರಕರಣ 246 (ಅಧಿಕೃತ ಪಟ್ಟಿ, ನಿನ್ನೆ ರಾತ್ರಿ 12 ಗಂಟೆಯವರೆಗೆ) ವರದಿಯಾಗಿದೆ. ಇದರಲ್ಲಿ ವಿದೇಶದಿಂದ ಬಂದ 136 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ವಿದೇಶದಿಂದ ಬಂದವರ ಜೊತೆ ಸಂಪರ್ಕದಿಂದ 105 ಮಂದಿಗೆ ಸೋಂಕು ತಗುಲಿದೆ.
The total number of positive cases of #COVID19 in India now stands at 258 (including 39 foreigners), 4 deaths (1 each) in Delhi, Karnataka, Punjab and Maharashtra: Ministry of Health and Family Welfare pic.twitter.com/oJhLdpl5oA
ಜನವರಿ 30 ಕೇರಳದಲ್ಲಿ ಕೊರೊನಾ ವೈರಸ್ ಸೋಂಕಿತ ಮೊದಲ ಕೇಸ್ ವರದಿಯಾಗಿತ್ತು. ಆದರೆ ಮಾರ್ಚ್ 10ರಂದು ದೇಶದಲ್ಲಿ ಸೋಂಕಿತರ ಸಂಖ್ಯೆ 50ಕ್ಕೆ ಮುಟ್ಟಿತ್ತು. ಸದ್ಯ ಮಾರ್ಚ್ 20ರವರೆಗೆ ಸೋಂಕಿತರ ಸಂಖ್ಯೆ 249ಕ್ಕೆ ತಲುಪಿದೆ.
24 ಗಂಟೆಗಳಲ್ಲಿ ಪತ್ತೆಯಾದ ಹೊಸ ಪ್ರಕರಣಗಳು:
ಭಾರತದಲ್ಲಿ 55 ಹೊಸ ಪ್ರಕರಣ ದಾಖಲಾಗಿದೆ. ಇತ್ತ ಇಟಲಿಯಲ್ಲಿ 5986, ಸ್ಪೇನ್‍ನಲ್ಲಿ 3494, ಜರ್ಮನಿಯಲ್ಲಿ 4528, ಅಮೆರಿಕದಕಲ್ಲಿ 5861, ಇರಾನ್‍ನಲ್ಲಿ 1237, ಫ್ರಾನ್ಸ್ ನಲ್ಲಿ 1617 ಕೊರೊನಾ ಸೋಂಕಿತ ಪ್ರಕರಣಗಳು ವರದಿಯಾಗಿದೆ.