Tag: Violation of Code of Conduct

  • ನೀತಿ ಸಂಹಿತೆ ಉಲ್ಲಂಘನೆ – ಶಶಿಕಲಾ ಜೊಲ್ಲೆ ವಿರುದ್ಧ ಪ್ರಕರಣ ದಾಖಲು

    ನೀತಿ ಸಂಹಿತೆ ಉಲ್ಲಂಘನೆ – ಶಶಿಕಲಾ ಜೊಲ್ಲೆ ವಿರುದ್ಧ ಪ್ರಕರಣ ದಾಖಲು

    ಚಿಕ್ಕೋಡಿ: ನೀತಿ ಸಂಹಿತೆ ಉಲ್ಲಂಘನೆ (Violation of Code of Conduct) ಮಾಡಿರುವುದಕ್ಕಾಗಿ ಸಚಿವೆ ಶಶಿಕಲಾ ಜೊಲ್ಲೆ (Shashikala Jolle) ವಿರುದ್ಧ ಪ್ರಕರಣ ದಾಖಲಾಗಿದೆ. ನಿಪ್ಪಾಣಿ (Nipani) ಮತಕ್ಷೇತ್ರದಲ್ಲಿ ನೀತಿ ಸಂಹಿತೆ ಉಲ್ಲಂಘನೆಯಾಗಿದೆ.

    ನೀತಿ ಸಂಹಿತೆ ಘೋಷಣೆಯ ಮೊದಲ ದಿನವೇ ಸಚಿವೆ ಶಶಿಕಲಾ ಜೊಲ್ಲೆ ಸಮ್ಮುಖದಲ್ಲೇ ನೀತಿ ಸಂಹಿತೆ ಉಲ್ಲಂಘನೆಯಾಗಿದೆ. ನಿಪ್ಪಾಣಿಯ ರಣರಾಗಿಣಿ ಮಹಿಳಾ ಮಂಡಳದಿಂದ ಅರಿಶಿನ ಕುಂಕುಮ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಬಿಜೆಪಿ ಚಿಹ್ನೆ ಹಾಗೂ ಲೋಕಸಭಾ ಸದಸ್ಯ ಅಣ್ಣಾಸಾಬ ಜೊಲ್ಲೆ ಅವರ ಫೋಟೋ ಬಳಕೆ ಮಾಡಲಾಗಿತ್ತು. ಇದನ್ನೂ ಓದಿ: ಬಿಜೆಪಿ-ಕಾಂಗ್ರೆಸ್‍ನ ಹೊಸ ಮುಖಗಳ ಪ್ರಯೋಗ ಶಾಲೆಯಾಗುತ್ತಾ ರಾಜ್ಯದ ಏಕೈಕ ಮೀಸಲು ಕ್ಷೇತ್ರ ಸುಳ್ಯ?

    ಈ ಕಾರ್ಯಕ್ರಮದಲ್ಲಿ 4-5 ಸಾವಿರ ಮಹಿಳೆಯರು ಭಾಗವಹಿಸಿದ್ದು, ಶಶಿಕಲಾ ಜೊಲೆ ಕೂಡಾ ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ನೀತಿಸಂಹಿತೆ ಉಲ್ಲಂಘನೆಯಾಗಿರುವ ಹಿನ್ನೆಲೆ ರಣರಾಗಿಣಿ ಮಹಿಳಾ ಮಂಡಳ ಅಧ್ಯಕ್ಷೆ ಹಾಗೂ ಶಶಿಕಲಾ ಜೊಲ್ಲೆ ವಿರುದ್ಧ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಚೆಕ್‍ಬೌನ್ಸ್ ಕೇಸ್- ಶಾಸಕ ಎಂ.ಪಿ.ಕುಮಾರಸ್ವಾಮಿಗೆ ಬಂಧನದ ಭೀತಿ?

  • ನಟಿ ಪೂಜಾ ಗಾಂಧಿಗೆ ರಿಲೀಫ್

    ನಟಿ ಪೂಜಾ ಗಾಂಧಿಗೆ ರಿಲೀಫ್

    ರಾಯಚೂರು: 2013ರ ವಿಧಾನಸಭೆ ಚುನಾವಣೆಯಲ್ಲಿ ನೀತಿ ಸಂಹಿತೆ ಉಲ್ಲಂಘಿಸಿದ ಪ್ರಕರಣದಲ್ಲಿ ನ್ಯಾಯಾಂಗ ಬಂಧನದ ಭೀತಿ ಎದುರಿಸುತ್ತಿದ್ದ ನಟಿ ಪೂಜಾಗಾಂಧಿಗೆ ಕೋರ್ಟ್ ಜಾಮೀನು ನೀಡಿದೆ.

    ಚುನಾವಣೆಯಲ್ಲಿ ಬಿಎಸ್‍ಆರ್ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಪೂಜಾ ಗಾಂಧಿ ಅನುಮತಿ ಇಲ್ಲದ ವಾಹನವನ್ನ ಚುನಾವಣಾ ಪ್ರಚಾರಕ್ಕೆ ಬಳಸಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದರು.

    ಈ ಹಿನ್ನೆಲೆಯಲ್ಲಿ ಸದರಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 5 ಬಾರಿ ವಿಚಾರಣೆಗೆ ಗೈರಾಗಿದ್ದ ಪೂಜಾ ಗಾಂಧಿಗೆ ವಾರೆಂಟ್ ಜಾರಿ ಮಾಡಲಾಗಿತ್ತು. ಇಂದು ವಿಚಾರಣೆ ವೇಳೆ ನ್ಯಾಯಾಧೀಶರು ಪೂಜಾಗಾಂಧಿಯನ್ನು ಸುಮಾರು 6 ಗಂಟೆ ಕಾಲ ಕೋರ್ಟ್ ಕಸ್ಟಡಿಗೆ ಒಳಪಡಿಸಿದ್ದರು. ನ್ಯಾಯಾಲಯವು ಪೂಜಾಗಾಂಧಿಗೆ ಒಂದು ಲಕ್ಷ ರೂ. ಶ್ಯೂರಿಟಿ ಹಾಗೂ ಮುಂದಿನ ವಿಚಾರಣೆಗೆ ತಪ್ಪದೆ ಹಾಜರಾಗುವಂತೆ ಎಚ್ಚರಿಕೆ ನೀಡಿ ಷರತ್ತುಬದ್ಧ ಜಾಮೀನು ನೀಡಿದೆ. ಮುಂದಿನ ವಿಚಾರಣೆಯನ್ನ ನವೆಂಬರ್ 3 ಕ್ಕೆ ಮುಂದೂಡಿದೆ.

    ಕಸ್ಟಡಿಗೆ ಒಳಪಡಿಸಿದ ವೇಳೆ ಪೂಜಾಗಾಂಧಿ ಇಂದು ಮಧ್ಯಾಹ್ನ ಊಟ ಬಿಟ್ಟು ಚಾಕೋಲೇಟ್ ತಿಂದು ಹೊಟ್ಟೆ ತುಂಬಿಸಿಕೊಂಡರು.

    ಇದನ್ನೂ ಓದಿ: ನಟಿ ಪೂಜಾಗಾಂಧಿಗೆ ನ್ಯಾಯಾಂಗ ಬಂಧನ ಭೀತಿ