Tag: vinod raj

  • ದೇಶದ ಪರಿಸ್ಥಿತಿ ನೋಡಿದ್ರೆ ಯುದ್ಧ ಮಾಡೋದು ಶ್ರೇಷ್ಠ ಅಲ್ಲ: ವಿನೋದ್ ರಾಜ್

    ದೇಶದ ಪರಿಸ್ಥಿತಿ ನೋಡಿದ್ರೆ ಯುದ್ಧ ಮಾಡೋದು ಶ್ರೇಷ್ಠ ಅಲ್ಲ: ವಿನೋದ್ ರಾಜ್

    ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕರ ದಾಳಿ ಬಗ್ಗೆ ವಿನೋದ್ ರಾಜ್ (Vinod Raj) ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದೇಶದ ಪರಿಸ್ಥಿತಿ ನೋಡಿದ್ರೆ, ಯುದ್ಧ ಮಾಡೋದು ಶ್ರೇಷ್ಠ ಅಲ್ಲ ಅಂತ ಅನಿಸುತ್ತದೆ ಎಂದು ಉಗ್ರರ ದಾಳಿ ಬಗ್ಗೆ ವಿನೋದ್ ರಾಜ್ ಹೇಳಿದ್ದಾರೆ. ಇದನ್ನೂ ಓದಿ:ಪಹಲ್ಗಾಮ್‌ನಲ್ಲಿ ತುಂಬಾ ಕ್ರೂರವಾಗಿ ಸಾಯಿಸಿದ್ದಾರೆ: ಉಗ್ರರ ದಾಳಿ ಬಗ್ಗೆ ರಾಗಿಣಿ ಕಿಡಿ

    ನಮ್ಮ ವಿಶ್ವದಲ್ಲಿ ಇರೋದು ಒಂದೇ ಹಿಂದೂಸ್ಥಾನ. ನಮ್ಮ ಹಿಂದುಸ್ಥಾನದಲ್ಲಿ ನಮಗೇ ಸ್ಥಾನ ಇಲ್ಲ ಅನ್ನುವಂತಹ ಪರಿಸ್ಥಿತಿ ಎದುರಾಗಬಾರದು. ನಮ್ಮ ಸಂಸ್ಕೃತಿ, ಸಂಸ್ಕಾರ ಉಳಿಯಬೇಕು. ಅನುಕಂಪ, ವಾತ್ಸಲ್ಯ ಭಾರತ ಮಣ್ಣಿಗೆ ಮಾತ್ರ ಚೆನ್ನಾಗಿ ಗೊತ್ತಿದೆ. ಬೇರೆ ಮಣ್ಣಿಗೆ ಅದು ಗೊತ್ತಿಲ್ಲ. ದೇಶದ ಪರಿಸ್ಥಿತಿ ನೋಡಿದ್ರೆ, ಯುದ್ಧ ಮಾಡೋದು ಶ್ರೇಷ್ಠ ಅಲ್ಲ ಅಂತ ಅನಿಸುತ್ತದೆ. ಅದನ್ನು ಅಲ್ಲೇ ಸರಿ ಮಾಡಬೇಕು. ಈ ಸೆಕ್ಯೂರಿಟಿನ ನಾವೇ ಸರಿ ಮಾಡಿಕೊಳ್ಳಬೇಕು ಎಂದು ಅವರು ಮಾತನಾಡಿದ್ದಾರೆ. ಇದನ್ನೂ ಓದಿ: ‘ತಾಂಡೇಲ್’ ಸಕ್ಸಸ್ ಬಳಿಕ ಹೊಸ ಸಿನಿಮಾ ಘೋಷಿಸಿದ ನಾಗಚೈತನ್ಯ

    ಏ.22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ 26 ಮಂದಿ ಬಲಿಯಾಗಿದ್ದಾರೆ. ಇನ್ನೂ ಹಲವರು ಗಾಯಗೊಂಡಿದ್ದಾರೆ. ಅಂದಹಾಗೆ, ಸಂತ್ರಸ್ಥರ ಕುಟುಂಬಕ್ಕೆ ಸಿಎಂ ಸಿದ್ದರಾಮಯ್ಯ 10 ಲಕ್ಷ ರೂ. ಘೋಷಿಸಿದ್ದಾರೆ.

  • ಬ್ಯಾಂಕ್‌ ಜನಾರ್ಧನ್‌ ಸಾವಿನ ಸುದ್ದಿ ಕೇಳಿ ಆಘಾತವಾಯ್ತು: ದೊಡ್ಡಣ್ಣ ಭಾವುಕ

    ಬ್ಯಾಂಕ್‌ ಜನಾರ್ಧನ್‌ ಸಾವಿನ ಸುದ್ದಿ ಕೇಳಿ ಆಘಾತವಾಯ್ತು: ದೊಡ್ಡಣ್ಣ ಭಾವುಕ

    ಬ್ಯಾಂಕ್ ಜನಾರ್ಧನ್ ಬಹಳ ಶಿಸ್ತಿನ ವ್ಯಕ್ತಿ – ಸಾಧು ಕೋಕಿಲ ಭಾವುಕ 

    ನ್ನಡ ಚಿತ್ರರಂಗದಲ್ಲಿ 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡವರು ಬ್ಯಾಂಕ್‌ ಜನಾರ್ಧನ್.‌ ಅವರ ನಿಧನದ ಬಗ್ಗೆ ಕಲಾವಿದರಾದ ದೊಡ್ಡಣ್ಣ (Doddanna), ಡಿಂಗ್ರಿ ನಾಗರಾಜ್‌, ಸಾಧು ಕೋಕಿಲ, ವಿನೋದ್‌ ರಾಜ್‌ ಸಂತಾಪ ಸೂಚಿಸಿದ್ದಾರೆ. ಅವರ ಜೊತೆಗಿನ ಒಡನಾಟದ ಬಗ್ಗೆ ಮಾತನಾಡಿದ್ದಾರೆ. ಇದನ್ನೂ ಓದಿ:ಬ್ಯಾಂಕ್‌ ಜನಾರ್ಧನ್ ನಿಧನಕ್ಕೆ ಟೆನ್ನಿನ್‌ ಕೃಷ್ಣ, ನಟಿ ಅಭಿನಯ ಭಾವುಕ

    ಪಬ್ಲಿಕ್‌ ಟಿವಿಗೆ ದೊಡ್ಡಣ್ಣ ಮಾತನಾಡಿ, ನಾನು ಚಿತ್ರರಂಗಕ್ಕೆ ಬಂದು 46 ವರ್ಷಗಳಾಯ್ತು. ನನಗೆ 40 ವರ್ಷಗಳಿಂದ ಜನಾರ್ಧನ್ ಪರಿಚಿತರು. ಅವರೊಂದಿಗೆ ನಾನು 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದೇನೆ. ಅವರೊಂದಿನ ಒಡನಾಟ ಎಂದಿಗೂ ಮರೆಯಲು ಸಾಧ್ಯವೇ ಇಲ್ಲ. ಜನಾರ್ಧನ್ ಒಬ್ಬ ಒಳ್ಳೆಯ ಪೋಷಕ ನಟನಾಗಿದ್ದರು. ಅವರು ಮುಂಚೆ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದರು. ಅದಕ್ಕೆ ಅವರ ಹೆಸರೊಂದಿಗೆ ಬ್ಯಾಂಕ್ ಪದ ಸೇರಿಕೊಂಡಿದೆ. ಇದನ್ನೂ ಓದಿ: ಬ್ಯಾಂಕ್‌ ಜನಾರ್ಧನ್‌ ಅದ್ಭುತ ಅಭಿನಯದಿಂದ ನನ್ನ ಸಿನಿಪಯಣದಲ್ಲಿ ಯಶಸ್ವಿ ಹೆಜ್ಜೆ ಇಟ್ಟೆ: ಉಪೇಂದ್ರ

    2 ವರ್ಷಗಳ ಹಿಂದೆ ನಟ ಮಂದೀಪ್ ರಾಯ್ ತೀರಿಕೊಂಡಾಗ ಅವರ ಅಂತಿಮ ದರ್ಶನಕ್ಕೆ ಬ್ಯಾಂಕ್ ಜನಾರ್ಧನ್ ಬಂದಿದ್ದರು. ಈ ವೇಳೆ ಅವರನ್ನು ಕಡೆಯದಾಗಿ ಭೇಟಿಯಾಗಿದ್ದೆ. ಆಗ ಸ್ವಲ್ಪ ಸೋತಂಗೆ ಕಂಡಿದ್ದರು. ಆಗ ಹುಷರಿಲ್ವಾ ಎಂದು ಕೇಳಿದ್ದೆ, ಸಣ್ಣ ಪುಟ್ಟ ಏನಾದರೂ ಇರುತ್ತೆ ಅಲ್ವಾ ಎಂದಿದ್ದರು. ಒಂದೂವರೆ ವರ್ಷದ ಬಳಿಕ ಅವರು ಸಿಗಲಿಲ್ಲ. ಇಂದು ಬೆಳಗ್ಗೆ ಅವರ ಸಾವಿನ ಸುದ್ದಿ ತಿಳಿದು ಆಘಾತವಾಯ್ತು. ಏನು ಮಾಡೋಕೆ ಆಗಲ್ಲ. ಹುಟ್ಟು ಆಕಸ್ಮಿಕ, ಸಾವು ಖಚಿತ. ಹುಟ್ಟಿದ್ಮೇಲೆ ಒಂದಲ್ಲ ಒಂದು ದಿನ ಸಾಯಲೇಬೇಕು ಎಂದು ಭಾವುಕವಾಗಿ ದೊಡ್ಡಣ್ಣ ಮಾತನಾಡಿದ್ದಾರೆ.

    ಡಿಂಗ್ರಿ ನಾಗರಾಜ್ ಮಾತನಾಡಿ, ಬ್ಯಾಂಕ್ ಜನಾರ್ಧನ್ (Bank Janardhan) ಹಾಗೂ ನನ್ನದು ಸುಮಾರು 40 ವರ್ಷದ ಸ್ನೇಹವಾಗಿತ್ತು. ನನ್ನ ನಾಟಕದ ಟೀಮ್‌ನಲ್ಲಿ ಹಲವು ನಾಟಕಗಳನ್ನ ಅವರು ಮಾಡಿದ್ದರು. ಜಗ್ಗೇಶ್, ಕಾಶಿನಾಥ್ ಅವರ ಸಿನಿಮಾದಲ್ಲಿ ನಟಿಸಿ ಅವರು ಕೂಡ ತುಂಬಾ ಜನಪ್ರಿಯವಾದರು. ಬ್ಯಾಂಕ್ ಕೆಲಸದ ಜೊತೆಗೆ ನಟನೆ ತುಂಬಾ ಇಷ್ಟಪಡುತ್ತಿದ್ದರು. ಈ ಹಿಂದೆ ಹಾಸ್ಯ ಪೋಷಕನಟರ ಅಸೋಸಿಯೇಷನ್ ಮಾಡಿದ್ವಿ. ಅದಕ್ಕೆ ಬ್ಯಾಂಕ್ ಜನಾರ್ದನ್‌ರನ್ನೇ ಅಧ್ಯಕ್ಷರನ್ನಾಗಿ ಮಾಡಿದ್ವಿ.

    ಕಳೆದ 2 ವರ್ಷಗಳಿಂದ ನಿಲ್ಲೋದ್ದಕ್ಕೆ ಆಗ್ತಿರಲಿಲ್ಲ. ಹಾಗಾಗಿ ಸಿನಿಮಾದಿಂದ ದೂರವಾದರು. ಮಗನಿಗೆ ಡಬ್ಬಿಂಗ್ ಸ್ಟುಡಿಯೋ ಮಾಡಿ ಕೊಟ್ಟಿದ್ದರು. ಅದು ಅಷ್ಟೊಂದು ಸರಿಯಾಗಿ ನಡೆಯುತ್ತಿರಲಿಲ್ಲ. ಅವರಿಗೆ ಆ ಕೊರಗೂ ಇತ್ತು. ಪತ್ನಿ ತೀರಿ ಹೋದ ಮೇಲೆ ಸ್ವಲ್ಪ ಮಂಕಾಗಿದ್ದರು. ಅವರ ನಿಧನ ಕನ್ನಡ ಚಿತ್ರರಂಗಕ್ಕೆ ದೊಡ್ಡ ನಷ್ಟ ಎಂದು ಡಿಂಗ್ರಿ ನಾಗರಾಜ್ ಸ್ಮರಿಸಿದ್ದಾರೆ.

    ಬ್ಯಾಂಕ್ ಜನಾರ್ಧನ್ ಬಹಳ ಶಿಸ್ತುವುಳ್ಳ ವ್ಯಕ್ತಿಯಾಗಿದ್ದರು. ಅವರು ಧ್ವನಿ ಅಂತೂ ಮರೆಯೋಕೆ ಆಗಲ್ಲ, ನಾವೆಲ್ಲಾ ಚಿತ್ರರಂಗಕ್ಕೆ ಜೊತೆ ಜೊತೆಯಲ್ಲಿ ಬಂದವರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಾಧು ಕೋಕಿಲ ಸಂತಾಪ ಸೂಚಿಸಿದ್ದಾರೆ.

    ಈ ವೇಳೆ, ಬ್ಯಾಂಕ್ ಜನಾರ್ಧನ್ ಜೊತೆಗಿನ ಒಡನಾಟ ನೆನೆದು ವಿನೋದ್ ರಾಜ್ ಕಣ್ಣೀರಿಟ್ಟಿದ್ದಾರೆ. ಕನ್ನಡ ಚಿತ್ರರಂಗ ಕಂಡ ಒಬ್ಬ ಅದ್ಭುತ ಹಾಸ್ಯ ಕಲಾವಿದರಾಗಿದ್ರು. ಸಿನಿಮಾದಲ್ಲಿ ರಂಜಿಸಿದವರನ್ನ ನಾವು ಕಳೆದುಕೊಂಡಿದ್ದೇವೆ. ಬೆರಳೆಣಿಕೆಯ ಶ್ರೇಷ್ಠ ಕಲಾವಿದರಲ್ಲಿ ಬ್ಯಾಂಕ್ ಜನಾರ್ಧನ್ ಒಬ್ಬರು ಆಗಿದ್ದರು. ಅವರ ನಿಧನ ಕರ್ನಾಟಕ ಚಲನಚಿತ್ರ ರಂಗಕ್ಕೆ ಭಾರೀ ಆಘಾತ ತಂದಿದೆ. ಅವರಿಲ್ಲದೇ ಇರೋದು ತುಂಬಾ ನೋವು ತಂದಿದೆ. ಕೆಲವು ದಿನಗಳ ಹಿಂದೆ ನನ್ನ ಆರೋಗ್ಯ ವಿಚಾರಿಸಲು ಅವರು ಫೋನ್ ಮಾಡಿದ್ದರು. ಆರೋಗ್ಯ ಸರಿ ಇಲ್ವಂತೆ ನಿನಗೆ ನೀನು ಚೆನ್ನಾಗಿರಬೇಕು ಅಂದರು. ಈಗ ನೋಡಿದ್ರೆ ನಮ್ಮ ಜೊತೆ ಅವರು ಇಲ್ಲ ಅನ್ನೋದು ನೋವು ತಂದಿದೆ ಎಂದಿದ್ದಾರೆ.

  • ನಟಿ ಲೀಲಾವತಿ 1ನೇ ವರ್ಷದ ಪುಣ್ಯಸ್ಮರಣೆ

    ನಟಿ ಲೀಲಾವತಿ 1ನೇ ವರ್ಷದ ಪುಣ್ಯಸ್ಮರಣೆ

    ಹಿರಿಯ ನಟಿ ಲೀಲಾವತಿ (Leelavathi) ಅವರು ನಿಧನರಾಗಿ ಇಂದಿಗೆ (ಡಿ.8) ಒಂದು ವರ್ಷವಾಗಿದೆ. ಈ ಹಿನ್ನೆಲೆ ಪುತ್ರ ವಿನೋದ್ ರಾಜ್ ಅವರು ಲೀಲಾವತಿ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮ ನೆರವೇರಿಸಿದ್ದಾರೆ. ಇದನ್ನೂ ಓದಿ:ಎಲಿಮಿನೇಷನ್‌ನಲ್ಲಿ ಟ್ವಿಸ್ಟ್- ಚುಚ್ಚು ಮಾತು ಕೇಳಿ ಕಣ್ಣೀರಿಟ್ಟ ಚೈತ್ರಾ

    ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯ ತೋಟದಲ್ಲಿನ ನಿವಾಸದಲ್ಲಿ ಪೂಜಾ ವಿಧಾನ ನೆರವೇರಿಸಿದ್ದಾರೆ. ನಟಿಯ ಇಷ್ಟವಾದ ತಿಂಡಿಗಳನ್ನು ಫೋಟೋ ಮುಂದೆ ಇಟ್ಟು ಪೂಜೆ ಮಾಡಿದ್ದಾರೆ ಪುತ್ರ ವಿನೋದ್ ರಾಜ್. ಲೀಲಾವತಿ ಸಮಾಧಿ ಬಳಿ ಅಭಿಮಾನಿಗಳು ಆಗಮಿಸಿ ದರ್ಶನ ಪಡೆದರು.

    ಇನ್ನೂ ಡಿ.5ರಂದು ಅಮ್ಮ ಲೀಲಾವತಿ ಅವರ ಸ್ಮಾರಕವನ್ನು ವಿನೋದ್ ರಾಜ್ ನಿರ್ಮಿಸಿದ್ದಾರೆ. ನಟಿಯ ಸ್ಮಾರಕವನ್ನು ಕೆ.ಎಚ್ ಮುನಿಯಪ್ಪ ಉದ್ಘಾಟನೆ ಮಾಡಿದ್ದರು.

  • ಅಮ್ಮ ಲೀಲಾವತಿಗಾಗಿ ಸ್ಮಾರಕ ನಿರ್ಮಿಸಿದ ವಿನೋದ್‌ ರಾಜ್‌

    ಅಮ್ಮ ಲೀಲಾವತಿಗಾಗಿ ಸ್ಮಾರಕ ನಿರ್ಮಿಸಿದ ವಿನೋದ್‌ ರಾಜ್‌

    ಹಿರಿಯ ನಟಿ ಡಾ.ಲೀಲಾವತಿ (Leelavathi) ಸ್ಮಾರಕ ಉದ್ಘಾಟನೆ ಇಂದು (ಡಿ.5) ಸೋಲದೇವನಹಳ್ಳಿಯಲ್ಲಿ ಜರುಗಿದೆ. ಸಚಿವ ಕೆ.ಎಚ್ ಮುನಿಯಪ್ಪ (K.H Muniyappa) ಅವರಿಂದ ಲೀಲಾವತಿ ಸ್ಮಾರಕ ಉದ್ಘಾಟಿಸಿದ್ದಾರೆ. ಇದನ್ನೂ ಓದಿ:ಪುಷ್ಪ 2 ಪ್ರೀಮಿಯರ್‌ ಶೋ ವೇಳೆ ಕಾಲ್ತುಳಿತ; ಓರ್ವ ಮಹಿಳೆ ಸಾವು

    ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯ ತೋಟದಲ್ಲಿ ಅಮ್ಮನ ಸ್ಮಾರಕವನ್ನು ವಿನೋದ್ ರಾಜ್ ನಿರ್ಮಿಸಿದ್ದಾರೆ. ಅದಕ್ಕೆ ‘ತಾಯಿಯೇ ದೇವರು, ವರನಟಿ ಡಾ.ಲೀಲಾವತಿ ದೇಗುಲ’ ಎಂದು ವಿನೋದ್ ರಾಜ್ (Vinod raj) ಹೆಸರಿಟ್ಟಿದ್ದಾರೆ. ಇಂದು (ಡಿ.5) ಕುಟುಂಬಸ್ಥರು, ಆಪ್ತರ ಸಮ್ಮುಖದಲ್ಲಿ ಬೆಳಗ್ಗೆ ಹೋಮ, ಹವನ ಮೂಲಕ ಪೂಜೆ ನೆರವೇರಿದೆ.

    ಬಹುಭಾಷಾ ನಟಿಯಾಗಿ ಮಿಂಚಿದ ಲೀಲಾವತಿ ಅವರು ಕಳೆದ ವರ್ಷ ಡಿ.8ರಂದು ಇಹಲೋಕ ತ್ಯಜಿಸಿದರು. ಸದಾ ಅಮ್ಮನ ಜೊತೆಯೇ ಇದ್ದು ನೋಡಿಕೊಳ್ಳುತ್ತಿದ್ದ ವಿನೋದ್ ರಾಜ್ ಅವರು ಅಮ್ಮನಿಗಾಗಿ ದೇಗುಲ ಕಟ್ಟಿಸಿದ್ದಾರೆ. ಲೀಲಾವತಿಯವರ ಬಾಲ್ಯದಿಂದ ಬದುಕಿನ ಕೊನೆ ಕ್ಷಣದವರೆಗೂ ಸವೆಸಿ ಹೋದ ಕಾಲಘಟ್ಟಗಳ 60ಕ್ಕೂ ಹೆಚ್ಚು ಫೋಟೋಗಳನ್ನು ಸ್ಮಾರಕದಲ್ಲಿ ಅಳವಡಿಸಲಾಗಿದೆ ಎಂಬುದು ವಿಶೇಷ.

  • ರೇಣುಕಾಸ್ವಾಮಿ ಮನೆಗೆ ರಾಜಿ ಸಂಧಾನಕ್ಕೆ ಹೋಗಿದ್ದಲ್ಲ ಎಂದ ವಿನೋದ್ ರಾಜ್

    ರೇಣುಕಾಸ್ವಾಮಿ ಮನೆಗೆ ರಾಜಿ ಸಂಧಾನಕ್ಕೆ ಹೋಗಿದ್ದಲ್ಲ ಎಂದ ವಿನೋದ್ ರಾಜ್

    ಸ್ಯಾಂಡಲ್‌ವುಡ್ ನಟ ವಿನೋದ್ ರಾಜ್ (Vinod Raj) ಅವರು ಇತ್ತೀಚೆಗೆ ಕೊಲೆಯಾದ ಚಿತ್ರದುರ್ಗದ ರೇಣುಕಾಸ್ವಾಮಿ ಕುಟುಂಬಸ್ಥರನ್ನು ಭೇಟಿಯಾದ ಹಿನ್ನೆಲೆ ರಾಜಿ ಸಂಧಾನಕ್ಕೆ ಹೋಗಿದ್ದಾರೆ ಎಂದು ಚರ್ಚೆ ಶುರುವಾಗಿತ್ತು. ಈ ಬಗ್ಗೆ ಮಾತನಾಡಿ, ದರ್ಶನ್ (Darshan) ಪರವಾಗಿ ರಾಜಿ ಸಂಧಾನಕ್ಕೆ ಹೋಗಿದ್ದಲ್ಲ ಎಂದು ವಿನೋದ್ ರಾಜ್ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ:ಬಾತ್ ರೂಮ್ ವಿಡಿಯೋ ಲೀಕ್ ಆಗಿದ್ದು ನಿಜ ಎಂದು ಒಪ್ಪಿಕೊಂಡ ಊರ್ವಶಿ ರೌಟೇಲಾ

    ರೇಣುಕಾಸ್ವಾಮಿ (Renukaswamy) ಕುಟುಂಬಸ್ಥರ ಭೇಟಿಯ ಕುರಿತು ವಿನೋದ್ ರಾಜ್ ಮಾತನಾಡಿ, ಕಳೆದ ವಾರ ದರ್ಶನ್‌ರನ್ನು ಕಾಣಲು ಕಾರಾಗೃಹಕ್ಕೆ ಭೇಟಿ ನೀಡಿದ್ದೆ ಅದಾದ ನಂತರ ರೇಣುಕಾಸ್ವಾಮಿ ಕುಟುಂಬದವರನ್ನು ಭೇಟಿಯಾದೆ. ರಾಜಿ ಸಂಧಾನಕ್ಕೆ ಹೋಗಿದ್ದೀನಿ ಅಂತೆಲ್ಲಾ ಸುದ್ದಿಯಾಯಿತು. ಖಂಡಿತಾ ಇಲ್ಲ. ದರ್ಶನ್‌ ಒಬ್ಬ ಕಲಾವಿದರು ಎನ್ನುವ ಪ್ರೀತಿಯಿಂದ ನೋಡಿ ಭೇಟಿಯಾಗಿ ಬಂದಿದ್ದೇನೆ ಅಷ್ಟೇ ಎಂದರು.

    ಆದರೆ ರೇಣುಕಾಸ್ವಾಮಿ ಪತ್ನಿ ಪ್ರೆಗ್ನೆಂಟ್ ಅನ್ನೋ ಕಾರಣಕ್ಕೆ ಹುಟ್ಟೋ ಮಗುವಿಗೆ ಏನಾದರೋ ಒಳ್ಳೆಯದು ಮಾಡೋಕೆ ಆಗುತ್ತಾ ಅನ್ನುವ ದೃಷ್ಟಿಯಿಂದ ಹೋಗಿ ಬಂದಿದ್ದೇನೆ ಅಷ್ಟೇ. ಅದಕ್ಕೆ ಕೈಲಾದ ಕಾಣಿಕೆ ಕೊಟ್ಟು ಬಂದೆ. ಅದು ಬಿಟ್ಟು ಯಾವುದೇ ರಾಜಿ ಸಂಧಾನ ಮಾಡಲು ನಾನು ಹೋಗಿರಲಿಲ್ಲ. ಅದು ನನಗೆ ಬೇಕಾಗೂ ಇಲ್ಲ ಎಂದು ವಿನೋದ್ ರಾಜ್ ಸ್ಪಷ್ಟನೆ ನೀಡಿದ್ದಾರೆ.

    ಅಂದಹಾಗೆ, ದರ್ಶನ್ ಜೊತೆಗಿನ ಭೇಟಿಯ ಬಳಿಕ ಜು.26ರಂದು ರೇಣುಕಾಸ್ವಾಮಿ ಕುಟುಂಬಸ್ಥರನ್ನು ಭೇಟಿಯಾಗಿ ಲೀಲಾವತಿ ಹೆಸರಲ್ಲಿ ವಿನೋದ್ ರಾಜ್ 1 ಲಕ್ಷ ರೂ. ನೆರವು ನೀಡಿದ್ದರು.

  • ರೇಣುಕಾಸ್ವಾಮಿ ಕುಟುಂಬ ನೋಡಿದ್ರೆ ಕರುಳು ಕಿತ್ತು ಬರುತ್ತದೆ: ವಿನೋದ್ ರಾಜ್

    ರೇಣುಕಾಸ್ವಾಮಿ ಕುಟುಂಬ ನೋಡಿದ್ರೆ ಕರುಳು ಕಿತ್ತು ಬರುತ್ತದೆ: ವಿನೋದ್ ರಾಜ್

    ಚಿತ್ರದುರ್ಗದ ರೇಣುಕಾಸ್ವಾಮಿ ಕುಟುಂಬಸ್ಥರನ್ನು ವಿನೋದ್ ರಾಜ್ (Vinod Raj) ಭೇಟಿ ಮಾಡಿ ಲೀಲಾವತಿ (Leelavathi) ಹೆಸರಲ್ಲಿ 1 ಲಕ್ಷ ರೂ. ನೆರವು ನೀಡಿದ್ದಾರೆ. ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ರೇಣುಕಾಸ್ವಾಮಿ ಕುಟುಂಬ ನೋಡಿದ್ರೆ ಕರುಳು ಕಿತ್ತು ಬರುತ್ತದೆ ಎಂದು ವಿನೋದ್ ರಾಜ್ ಮಾತನಾಡಿದ್ದಾರೆ.

    ರೇಣುಕಾಸ್ವಾಮಿ ಕುಟುಂಬಸ್ಥರನ್ನು ಭೇಟಿಯಾದ ಬಳಿಕ ವಿನೋದ್ ರಾಜ್ ಮಾತನಾಡಿ, ಈ ಮನೆಯ ಆಧಾರ ಸ್ತಂಭವಾಗಿದ್ದ ರೇಣುಕಾಸ್ವಾಮಿ ಕಳೆದುಕೊಂಡು ಕುಟುಂಬ ಪರಿತಪಿಸುತ್ತಿದೆ. ಇವರ ಸ್ಥಿತಿ ಕಂಡು ಕರುಳು ಕಿತ್ತು ಬರುತ್ತದೆ. ನಾವು ಮನುಷ್ಯರಾಗಿದ್ದೀವಾ ಅಂತ ನಾವು ಮುಟ್ಟಿ ನೋಡಿಕೊಳ್ಳುವ ಕಾಲ ಬಂದಿದೆ ಅನಿಸುತ್ತಿದೆ. ಪ್ರತಿಯೊಂದು ಜೀವಿಗೂ ಜೀವಿಸುವ ಅಧಿಕಾರವಿದೆ. ಕೆಟ್ಟದ್ದು ಜಾಸ್ತಿಯಾದಾಗ ಇಂತಹ ಕೃತ್ಯ ನಡೆಯುತ್ತದೆ. ಇಂತಹ ಘಟನೆ ಹೆಚ್ಚಾಗದಂತೆ ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದ್ದಾರೆ.

    ಕಲಾವಿದರನ್ನು ನೋಡಿ ಜನ ಅನುಕರಣೆ ಮಾಡುತ್ತಾರೆ. ಇದು ಆಘಾತಕಾರಿ ವಿಷಯವಾಗಿದೆ. ಹೆಸರು, ಕೀರ್ತಿಯಲ್ಲಿರುವ ನಾವು ಎಂದಿಗೂ ಎಚ್ಚರವಾಗಿರಬೇಕು. ಜನ ನಮಗೆ ಕಲವಿದರು ಅನ್ನುವ ಪಟ್ಟ ಕೊಟ್ಟು ಬಿಟ್ಟಿದ್ದಾರೆ ಎಂದಿದ್ದಾರೆ. ನಾವು ಏನೇ ಹೆಜ್ಜೆ ಇಟ್ಟರು ಜಾಗೃತರಾಗಿರಬೇಕು. ಯಾರದ್ದೇ ತಪ್ಪಾಗಿದ್ದರು ಶಿಕ್ಷೆಯಾಗಲಿ. ಇಂತಹ ಘಟನೆ ಮತ್ತೆ ನಡೆಯಬಾರದು ಎಂದು ವಿನೋದ್ ರಾಜ್ ಮಾತನಾಡಿದ್ದಾರೆ.

  • ರೇಣುಕಾಸ್ವಾಮಿ ಕುಟುಂಬಕ್ಕೆ 1 ಲಕ್ಷ ನೆರವು ನೀಡಿದ ನಟ ವಿನೋದ್ ರಾಜ್

    ರೇಣುಕಾಸ್ವಾಮಿ ಕುಟುಂಬಕ್ಕೆ 1 ಲಕ್ಷ ನೆರವು ನೀಡಿದ ನಟ ವಿನೋದ್ ರಾಜ್

    ಚಿತ್ರದುರ್ಗದ ಮೃತ ರೇಣುಕಾಸ್ವಾಮಿ ಮನೆಗೆ ನಟ ವಿನೋದ್ ರಾಜ್ (Vinod Raj) ಭೇಟಿ ನೀಡಿದ್ದಾರೆ. ರೇಣುಕಾಸ್ವಾಮಿ ಕುಟುಂಬಸ್ಥರಿಗೆ (Renukaswamy Family) ವಿನೋದ್ ರಾಜ್ ಸಾಂತ್ವನ ಹೇಳಿ 1 ಲಕ್ಷ ರೂ. ನೆರವು ನೀಡಿದ್ದಾರೆ. ಇದನ್ನೂ ಓದಿ:ದರ್ಶನ್ ಬಿಡುಗಡೆಗಾಗಿ ಚಂಡಿಕಾ ಯಾಗ ಮಾಡಿಸಿದ ಪತ್ನಿ ವಿಜಯಲಕ್ಷ್ಮಿ

    ಮೃತ ರೇಣುಕಾಸ್ವಾಮಿ ನಿವಾಸಕ್ಕೆ ತೆರಳಿ ಪೋಷಕರಿಗೆ ಮತ್ತು ರೇಣುಕಾಸ್ವಾಮಿ ಪತ್ನಿ ಸಹನಾಗೆ ವಿನೋದ್ ರಾಜ್ ಸಾಂತ್ವನ ಹೇಳಿದ್ದಾರೆ. ನಿಮ್ಮ ಮಗ ಮರಳಿ ಬರಲಿ ಅಂತ ಹಾರೈಸಿದ್ದಾರೆ. ಬಳಿಕ 1 ಲಕ್ಷ ರೂ. ಕೊಡುವ ಮೂಲಕ ಕುಟುಂಬಕ್ಕೆ ಆರ್ಥಿಕ ನೆರವು ನೀಡಿದ್ದಾರೆ.

    ವಿನೋದ್ ರಾಜ್ ಭೇಟಿಯ ಬಗ್ಗೆ ರೇಣುಕಾಸ್ವಾಮಿ ತಂದೆ ಶಿವನಗೌಡ ಪ್ರತಿಕ್ರಿಯೆ ನೀಡಿದ್ದು, ಮಗನ ಕಳೆದುಕೊಂಡು ಕರಳು ಕಿತ್ತು ಬರುತ್ತಿದೆ. ಈ ಪ್ರಕರಣದಿಂದ ನಾವು ನೊಂದಿದ್ದೇವೆ. ನಮ್ಮ ಕುಟುಂಬ ಸಂಕಷ್ಟದಲ್ಲಿದೆ. ಮಗನ ಕೊಂದವರು ಯಾರು ಎಂಬುದು ನಮಗೆ ಗೊತ್ತಿಲ್ಲ. ಆದರೆ ಅವರಿಗೆ ತಕ್ಕ ಶಿಕ್ಷೆಯಾಗಬೇಕು. ನಟಿ ಲೀಲಾವತಿ ಅವರ ಬಗ್ಗೆ ತುಂಬಾ ಕೇಳಿದ್ದೇನೆ.’ ಇದೀಗ ಅವರ ಮಗ ವಿನೋದ್ ರಾಜ್ ನಮ್ಮ ಮನೆಗೆ ಭೇಟಿ ನೀಡಿದ್ದು, ಸಮಾಧಾನ ತಂದಿದೆ ಎಂದು ಮಾತನಾಡಿದ್ದಾರೆ.

    ಅಂದಹಾಗೆ, ಜು.23ರಂದು ವಿಜಯಲಕ್ಷ್ಮಿ ಕುಟುಂಬದ ಜೊತೆ ದರ್ಶನ್‌ರನ್ನು ಜೈಲಿನಲ್ಲಿ ವಿನೋದ್‌ ರಾಜ್ ಭೇಟಿಯಾಗಿದ್ದರು.‌ ದರ್ಶನ್‌ ಜೈಲಿನಲ್ಲಿರೋದು ನೋವು ತಂದಿದೆ ಎಂದು ಮಾತನಾಡಿದ್ದರು.

  • ಜೈಲಿನಲ್ಲಿ ದರ್ಶನ್ ನೋಡಿ ಮನಸ್ಸಿಗೆ ತುಂಬಾ ನೋವಾಯಿತು: ವಿನೋದ್ ರಾಜ್

    ಜೈಲಿನಲ್ಲಿ ದರ್ಶನ್ ನೋಡಿ ಮನಸ್ಸಿಗೆ ತುಂಬಾ ನೋವಾಯಿತು: ವಿನೋದ್ ರಾಜ್

    ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ದರ್ಶನ್‌ರನ್ನು (Darshan) ನೋಡಲು ದಿನಕರ್ ತೂಗುದೀಪ್ ಕುಟುಂಬದ ಜೊತೆಯೇ ತೆರಳಿ ವಿನೋದ್ ರಾಜ್ (Vinod Raj) ಭೇಟಿಯಾಗಿದ್ದಾರೆ. ಬಳಿಕ ಮಾಧ್ಯಮಕ್ಕೆ ವಿನೋದ್ ರಾಜ್ ಮಾತನಾಡಿ, ದರ್ಶನ್‌ರನ್ನು ಜೈಲಿನಲ್ಲಿ ನೋಡಿ ಬೇಸರ ಆಯಿತು ಎಂದು ಮಾತನಾಡಿದ್ದಾರೆ.

    ನನ್ನ ಮನೋಭಾವನೆಯಲ್ಲಿ ದರ್ಶನ್ ಒಬ್ಬ ಕಲಾವಿದ. ಬಂದ ತಕ್ಷಣ ನನ್ನನ್ನು ನೋಡಿ ತುಂಬಿಕೊಂಡರು. ಅದೇ ಪ್ರೀತಿ ಅದೇ ಆತ್ಮೀಯತೆಯಿಂದ ಮಾತನಾಡಿದರು. ಸ್ವೇಚ್ಚಾನುಸಾರವಾಗಿ ಓಡಾಡುತ್ತಿದ್ದ ಮನುಷ್ಯ ದರ್ಶನ್ ಅವರಾಗಿದ್ದರು. ದೇವರ ದಯೆಯಿಂದ ಎಲ್ಲಾ ಸರಿ ಹೋಗಬೇಕು ಎಂದು ಕೇಳಿಕೊಳ್ಳುತ್ತೇನೆ ಎಂದು ಮಾತನಾಡಿದ್ದಾರೆ.

    ದರ್ಶನ್ ನೋಡಿದಾಗ ಮನಸ್ಸಿಗೆ ತುಂಬಾ ನೋವಾಯಿತು. ಆದರೆ ಅಲ್ಲಿ ಪ್ರಾಣ ಕಳೆದುಕೊಂಡ ತಂದೆ ತಾಯಿ ನೋವು ದೊಡ್ಡದು. ಆತನ ಹೆಂಡತಿ ಗರ್ಭದಲ್ಲಿರುವ ಮಗು ಎಲ್ಲವನ್ನು ನೆನೆಸಿಕೊಂಡರೆ ತುಂಬಾ ನೋವಾಗುತ್ತದೆ ಎಂದು ಮಾತನಾಡಿದ್ದಾರೆ. ಇದನ್ನೂ ಓದಿ:ಪ್ಯಾನ್ ಇಂಡಿಯಾ ಚಿತ್ರಕ್ಕಾಗಿ 5ನೇ ಬಾರಿ ಒಂದಾದ ಶಶಾಂಕ್, ಅರ್ಜುನ್ ಜನ್ಯ

    ದರ್ಶನ್‌ರನ್ನು ನಂಬಿ ತಮ್ಮ ಸಿನಿಮಾಗೆ ಹಣ ಹಾಕಿದ ನಿರ್ಮಾಪಕರನ್ನು ನೋಡಿದರೆ ನೋವಾಗುತ್ತದೆ. ಎಲ್ಲವನ್ನೂ ಕಳೆದುಕೊಂಡು ನೋಡೋದು ಕಷ್ಟದ ಕೆಲಸ ಎಂದಿದ್ದಾರೆ. ಕಾರಾಗೃಹದಲ್ಲಿ ಅಷ್ಟು ದಿನಗಳ ಕಾಲ ಸಮಯ ಕಳೆಯೋದು ಸುಲಭವಲ್ಲ. ಅಣ್ಣಾ ಎಂದು ಬಾಯಿ ತುಂಬಾ ಹೇಳುವ ದರ್ಶನ್ ಹೀಗೆ ಆಯ್ತಲ್ಲ ನೋವು ಆಗ್ತಿದೆ ಎಂದು ವಿನೋದ್ ರಾಜ್ ಮಾತನಾಡಿದ್ದಾರೆ.

  • ದರ್ಶನ್ ಪ್ರಕರಣ: ಈ ಘಟನೆ ಜೀರ್ಣಿಸಿಕೊಳ್ಳೋಕೆ ಆಗುತ್ತಿಲ್ಲ ಎಂದ ವಿನೋದ್ ರಾಜ್

    ದರ್ಶನ್ ಪ್ರಕರಣ: ಈ ಘಟನೆ ಜೀರ್ಣಿಸಿಕೊಳ್ಳೋಕೆ ಆಗುತ್ತಿಲ್ಲ ಎಂದ ವಿನೋದ್ ರಾಜ್

    ರೇಣುಕಾಸ್ವಾಮಿ ಕೊಲೆ (Renukawamy Murder Case) ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಪಾಲಾಗಿರುವ ದರ್ಶನ್‌ರನ್ನು ನೋಡಲು ಈಗಾಗಲೇ ಹಲವರು ಭೇಟಿ ನೀಡಿದ್ದರು.‌ ಇದೀಗ ದರ್ಶನ್‌ ಭೇಟಿಗೆ ಅವಕಾಶ ಸಿಗದೆ ವಿನೋದ್‌ ರಾಜ್ ವಾಪಾಸ್ ಆಗಿದ್ದಾರೆ. ಬಳಿಕ ಮಾಧ್ಯಮಕ್ಕೆ ದರ್ಶನ್ ಪ್ರಕರಣದ ಬಗ್ಗೆ ವಿನೋದ್ ರಾಜ್ (Vinod Raj) ಮಾತನಾಡಿದ್ದಾರೆ. ಇದನ್ನೂ ಓದಿ:ಕಾನೂನು ಮುಂದೆ ಯಾರೂ ದೊಡ್ಡವರಲ್ಲ: ದರ್ಶನ್‌ ಪ್ರಕರಣದ ಬಗ್ಗೆ ಧ್ರುವ ಸರ್ಜಾ ಫಸ್ಟ್ ರಿಯಾಕ್ಷನ್

    ವಿನೋದ್ ರಾಜ್ ಮಾತನಾಡಿ, ದಿನಕ್ಕೆ ಒಂದೇ ಭೇಟಿ ಅಂತ ಜೈಲು ಅಧಿಕಾರಿಗಳು ಹೇಳಿದರು. ಮಧ್ಯಾಹ್ನ ನಂತರ ಮತ್ತೆ ದರ್ಶನ್ ಮನೆಯವರ ಜೊತೆ ಬರುತ್ತೇನೆ. ಕೆಲವು ನಡೆಯಬಾರದ ಘಟನೆಗಳು ನಡೆದು ಹೋಗುತ್ತವೆ. ವಿಧಿಗಿಂತಲೂ ಮೀರಿದ ಘಟನೆಗಳು ಆಗುತ್ತದೆ. ದರ್ಶನ್‌ಗೆ ಮೂಗಿನ ತುದಿಯಲ್ಲಿ ಕೋಪ ಇದೆ. ಈಗ ದರ್ಶನ್‌ಗೆ ಅಗ್ನಿ ಪರೀಕ್ಷೆ ಅಷ್ಟೇ. ನಮ್ಮ ತಾಯಿಗೆ ದರ್ಶನ್ ಮೇಲೆ ತುಂಬಾ ಪ್ರೀತಿ ಇತ್ತು. ಆಗ ಮಂಚದಲ್ಲಿ ಮಲಗಿದ್ದಾಗಲೂ ದರ್ಶನ್ ಬಗ್ಗೆಯೇ ಅಮ್ಮ ಮಾತನಾಡುತ್ತಿದ್ದರು. ತೂಗುದೀಪ್ ಮಗ ಬಿಟ್ಟು ಕೊಡಬೇಡ ಅಂತಿದ್ದರು. ಯಾಕೆ ಈ ರೀತಿ ಘಟನೆ ಆಯಿತು ಅನ್ನಿಸುತ್ತಿದೆ. ಅಚಾತುರ್ಯ ಅಂತಾ ಅಷ್ಟೇ ಹೇಳ್ತೀನಿ ಎಂದು ವಿನೋದ್ ರಾಜ್ ಮಾತನಾಡಿದ್ದಾರೆ.

    ನಮ್ಮ ತಾಯಿ ಜೊತೆ ದರ್ಶನ್ ತಂದೆ ತೂಗುದೀಪ್ ಸಾಕಷ್ಟು ಸಿನಿಮಾದಲ್ಲಿ ನಟಿಸಿದ್ದಾರೆ. ತಾಯಿಯ ಆರೋಗ್ಯ ಸರಿ ಇಲ್ಲದಾಗ ಬಂದು ನನ್ನ ತಾಯಿಯನ್ನು ದರ್ಶನ್ ಮಾತನಾಡಿಸಿದ್ದರು. ಒಂದು ಕಡೆ ಪ್ರಾಣ ಕಳೆದುಕೊಂಡ ಕುಟುಂಬದವರ ನೋವು. ಇನ್ನೊಂದು ಕಡೆ ಅಭಿಮಾನಿಗಳು ಮತ್ತು ನಿರ್ಮಾಪಕರ ಜೊತೆ ದರ್ಶನ್ ಸಂತೋಷವಾಗಿದ್ದರು. ಹೇಗಿದ್ದವರು ಈಗ ಯಾವ ರೀತಿ ಬದಲಾವಣೆ ಆಗಿದೆ ಈ ರೀತಿ ಆಗಬಾರದಿತ್ತು ಎಂದು ವಿನೋದ್ ರಾಜ್ ಮಾತನಾಡಿದ್ದಾರೆ.


    ಕಳೆದ ಬಾರಿ ನನಗೆ ಸರ್ಜರಿಗೆ ಮುನ್ನ ನಾನು ಮತ್ತು ದರ್ಶನ್ ಭೇಟಿಯಾಗಿದ್ದೆವು. ನಂತರ ದರ್ಶನ್ ತೋಟದ ಮನೆಗೆ ಹೋಗಿ ಕೆಲ ಗಿಡಗಳನ್ನು ಹಾಕಿ ಬರೋಣ ಅಂತ ಅನ್ಕೊಂಡಿದ್ವಿ. ಅಷ್ಟರಲ್ಲಿ ನಾನು ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದೆ. ಆದರಿಂದ ಮೀಟ್ ಮಾಡೋಕೆ ಆಗಿರಲಿಲ್ಲ. ದರ್ಶನ್ 2ನೇ ಬಾರಿ ಜೈಲಿಗೆ ಹೋಗಿರೋದು ಈಗ ಮತ್ತೆ ಯಾಕಾಯಿತು ಎಂದು ನಮಗೆ ಜೀರ್ಣಿಸಿಕೊಳ್ಳೋಕೆ ಆಗುತ್ತಿಲ್ಲ ಎಂದು ವಿನೋದ್ ರಾಜ್ ಮಾತನಾಡಿದ್ದಾರೆ.

  • ವಿನೋದ್ ರಾಜ್‌ಗೆ ಅನಾರೋಗ್ಯ- ಆಸ್ಪತ್ರೆಗೆ ದಾಖಲು

    ವಿನೋದ್ ರಾಜ್‌ಗೆ ಅನಾರೋಗ್ಯ- ಆಸ್ಪತ್ರೆಗೆ ದಾಖಲು

    ನ್ನಡ ಚಿತ್ರರಂಗದ ನಟ ವಿನೋದ್ ರಾಜ್‌ಗೆ (Vinod Raj) ಆರೋಗ್ಯದಲ್ಲಿ ಏರುಪೇರಾಗಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕರುಳಿನ ಸಮಸ್ಯೆಯಿಂದ ಆಸ್ಪತ್ರೆಗೆ ಅವರನ್ನು ದಾಖಲಿಸಿದ್ದಾರೆ. ಇದನ್ನೂ ಓದಿ: ಇನ್‍ಸ್ಟಾದಲ್ಲಿ ದರ್ಶನ್ ಅನ್‍ಫಾಲೋ‌, ಡಿಪಿ ಡಿಲೀಟ್ ಮಾಡಿದ ಪತ್ನಿ ವಿಜಯಲಕ್ಷ್ಮಿ!

    11 ವರ್ಷಗಳ ಹಿಂದೆ ವಿನೋದ್ ರಾಜ್ ಹಾರ್ಟ್ ಆಪರೇಷನ್‌ಗೆ (Heart Operation) ಒಳಗಾಗಿದ್ದರು. ಈ ವೇಳೆ, ಅವರ ಹಾರ್ಟ್‌ಗೆ ಸ್ಟಂಟ್ ಅಳವಡಿಸಲಾಗಿತ್ತು. ಈ ಪರಿಣಾಮ, ಇದೀಗ ಅದೇ ಸ್ಟಂಟ್‌ನಿಂದ ಕರುಳಿನ ಸಮಸ್ಯೆ ಎದುರಾಗಿದೆ. ಹಾಗಾಗಿ ಇದೀಗ ಆಪರೇಷನ್ ಕೂಡ ಮಾಡಲಾಗಿದ್ದು, ಇನ್ನೇರಡು ದಿನಗಲ್ಲಿ ವಿನೋದ್ ರಾಜ್ ಡಿಸ್ಚಾರ್ಜ್ ಕೂಡ ಆಗಲಿದ್ದಾರೆ.

    ಅಂದಹಾಗೆ, ವಿನೋದ್ ರಾಜ್ ಕನ್ನಡದ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಡ್ಯಾನ್ಸ್ ರಾಜಾ ಡ್ಯಾನ್ಸ್, ಶ್ರೀ ವೆಂಕಟೇಶ್ವರ ಮಹಿಮೆ, ಕೃಷ್ಣಾ ನೀ ಕುಣಿದಾಗ, ಕಾಲೇಜ್ ಹೀರೋ, ನನಗು ಹೆಂಡ್ತಿ ಬೇಕು, ಯುದ್ಧ ಪರ್ವ, ನಾಯಕ, ಬನ್ನಿ ಒಂದ್ಸಲಾ ನೋಡಿ, ಗಿಳಿ ಬೇಟೆ ಎಂಬ ಸಿನಿಮಾಗಳಲ್ಲಿ ನಟಿಸಿದ್ದಾರೆ.