Tag: Vinod Prabhakar

  • ಮಾದೇವ ನಂತರ ಲಂಕಾಸುರನಾಗಿ ಮರಿ ಟೈಗರ್ ಅಬ್ಬರ

    ಮಾದೇವ ನಂತರ ಲಂಕಾಸುರನಾಗಿ ಮರಿ ಟೈಗರ್ ಅಬ್ಬರ

    ರಿ ಟೈಗರ್ ವಿನೋದ್ ಪ್ರಭಾಕರ್ (Vinod Prabhkar) ಅಭಿನಯದ ಮಾದೇವ ಈ ವರ್ಷದ ಬಾಕ್ಸಾಫಿಸ್‌ನಲ್ಲಿ ಸದ್ದು ಮಾಡಿದ ಸಿನಿಮಾ. ಕಮರ್ಷಿಯಲ್ ಎಲಿಮೆಂಟ್ ಜೊತೆಗೆ ಫ್ಯಾಮಿಲಿ ಎಂಟರ್‌ಟೈನ್ಮೆಂಟ್‌ ಉಣಬಡಿಸಿದ ಮಾದೇವ ಸಿನಿಮಾ ಈ ವರ್ಷದ ಸಕ್ಸಸ್ ಲಿಸ್ಟ್‌ನಲ್ಲಿದೆ. ಸಿನಿಮಾದ ನಂತರ ವಿನೋದ್ ಪ್ರಭಾಕರ್ (Vinod Prabhakar) ನಟನೆಯ ಲಂಕಾಸುರ (Lankasura) ಸಿನಿಮಾ ತಂಡ ಫ್ಯಾನ್ಸ್‌ಗೆ ಗುಡ್‌ನ್ಯೂಸ್ ಕೊಟ್ಟಿದೆ.

    ಟೈಗರ್ ಟಾಕೀಸ್ ಬ್ಯಾನರ್‌ ನಡಿಯಲ್ಲಿ ವಿನೋದ್ ಪ್ರಭಾಕರ್ ಪತ್ನಿ ನಿಶಾ ವಿನೋದ್ ಪ್ರಭಾಕರ್ ಬಂಡವಾಳ ಹೂಡಿ ನಿರ್ಮಾಣ ಮಾಡುತ್ತಿದ್ದಾರೆ. ಅಂದಹಾಗೆ ಈ ಸಿನಿಮಾ ಇದೇ ವರ್ಷ ತೆರೆಗೆ ಬರಲು ಸಿದ್ಧತೆಯನ್ನ ಮಾಡುತ್ತಿದೆ. ಮಾದೇವ ಈ ವರ್ಷ ತಂದುಕೊಟ್ಟ ಸಕ್ಸಸ್‌ನ ಸಂಭ್ರಮದಲ್ಲಿರುವ ವಿನೋದ್ ಪ್ರಭಾಕರ್ ಈ ವರ್ಷಾಂತ್ಯಕ್ಕೆ ಲಂಕಾಸುರ ಸಿನಿಮಾ ತೆರೆಗೆ ತರುವ ಪ್ರಯತ್ನದಲ್ಲಿದೆ ಚಿತ್ರತಂಡ. ಈ ಖುಷಿ ವಿಚಾರವನ್ನು ವರಮಹಾಲಕ್ಷ್ಮಿ ಹಬ್ಬದ ದಿನ ಚಿತ್ರತಂಡ ಹಂಚಿಕೊಂಡಿದೆ. ಇದನ್ನೂ ಓದಿ: ಮನೋರಂಜನ್ ರವಿಚಂದ್ರನ್ ಐದನೇ ಸಿನಿಮಾಗೆ ಮುಹೂರ್ತ

    ಶಿವಭಕ್ತನಾಗಿ ಮಾದೇವ ಸಿನಿಮಾದ ಮೂಲಕ ಕರುನಾಡ ಮನಗೆದ್ದ ವಿನೋದ್ ಪ್ರಭಾಕರ್ ಲಂಕಾಸುರನಾಗಿ ಮನರಂಜನೆ ನೀಡಲು 2025ರಲ್ಲಿ ಮುಹೂರ್ತ ಇಡಲಾಗಿದೆ. ಲಂಕಾಸುರ ಸಿನಿಮಾದಲ್ಲಿ ಲೂಸ್ ಮಾದ ಯೋಗಿ, ದೇವರಾಜ್, ರವಿಶಂಕರ್, ಪಾರ್ವತಿ ಅರುಣ್ ಸೇರಿದಂತೆ ಅತಿದೊಡ್ಡ ತಾರಾಗಣ ಈ ಸಿನಿಮಾದಲ್ಲಿದೆ. ಈ ಚಿತ್ರಕ್ಕೆ ಸುಗನ್ ಅವರ ಛಾಯಾಗ್ರಾಹಣವಿದ್ದರೆ, ವಿಜೇತ್ ಕೃಷ್ಣ ಸಂಗೀತ ನಿರ್ದೇಶನವಿದೆ. ಇದನ್ನೂ ಓದಿ:ಕಾಂತಾರ ಚಾಪ್ಟರ್ 1| ಕನಕವತಿಯ ಮೊದಲ ನೋಟ ವರಮಹಾಲಕ್ಷ್ಮಿಯಂದು ಅನಾವರಣ

  • ಬಲರಾಮನ ದಿನಗಳು – ಮತ್ತೊಂದು ಸಿನಿಮಾ ಶೂಟಿಂಗ್ ಮುಗಿಸಿದ ವಿನೋದ್‌ ಪ್ರಭಾಕರ್

    ಬಲರಾಮನ ದಿನಗಳು – ಮತ್ತೊಂದು ಸಿನಿಮಾ ಶೂಟಿಂಗ್ ಮುಗಿಸಿದ ವಿನೋದ್‌ ಪ್ರಭಾಕರ್

    ವಿನೋದ್ ಪ್ರಭಾಕರ್ ಅವರ ಅಭಿನಯದ “ಮಾದೇವ” ಚಿತ್ರ ಭರ್ಜರಿ ಯಶಸ್ಸು ಕಂಡಿದೆ. ಆ ಚಿತ್ರದ ನಂತರ ವಿನೋದ್ ಪ್ರಭಾಕರ್ (Vinod Prabhakar ಅವರು ನಾಯಕರಾಗಿ ನಟಿಸುತ್ತಿರುವ “ಬಲರಾಮನ ದಿನಗಳು” (Balaramana Dinagalu) ಚಿತ್ರ ಸಹ ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ. ಪ್ರಸ್ತುತ ಬಹು ನಿರೀಕ್ಷಿತ ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರು, ಮೈಸೂರು, ಶಿವಮೊಗ್ಗ, ಸಕಲೇಶಪುರ ಮುಂತಾದ ಕಡೆ 80 ದಿನಗಳ ಚಿತ್ರೀಕರಣ ನಡೆದಿದೆ. ಸದ್ಯದಲ್ಲೇ ಪೋಸ್ಟ್ ಪ್ರೊಡಕ್ಷನ್ ವರ್ಕ್ ಆರಂಭವಾಗಲಿದೆ.

    ಪದ್ಮಾವತಿ ಫಿಲಂಸ್ ಲಾಂಛನದಲ್ಲಿ ಪದ್ಮಾವತಿ ಜಯರಾಂ ಹಾಗೂ ಶ್ರೇಯಸ್ ಅವರ ಚೊಚ್ಚಲ ನಿರ್ಮಾಣದಲ್ಲಿ ಅದ್ದೂರಿಯಾಗಿ ಮೂಡಿಬರುತ್ತಿರುವ ಈ ಚಿತ್ರವನ್ನು “ಆ ದಿನಗಳು” ಖ್ಯಾತಿಯ ಕೆ.ಎಂ.ಚೈತನ್ಯ ನಿರ್ದೇಶಿಸುತ್ತಿದ್ದಾರೆ. ಟೈಗರ್ ವಿನೋದ್ ಪ್ರಭಾಕರ್ ಅವರಿಗೆ ನಾಯಕಿಯಾಗಿ ಪ್ರಿಯಾ ಆನಂದ್ (Priya Anand) ಅಭಿನಯಿಸುತ್ತಿದ್ದಾರೆ. ಹೆಸರಾಂತ ಕಲಾವಿದರಾದ ಅತುಲ್ ಕುಲಕರ್ಣಿ, ಆಶಿಶ್ ವಿದ್ಯಾರ್ಥಿ ಅವರಂತಹ ಅನುಭವಿ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. “ಬಿಗ್ ಬಾಸ್” ಖ್ಯಾತಿಯ ವಿನಯ್ ಗೌಡ ಸಹ ಈ ಚಿತ್ರದಲ್ಲ ನಟಿಸಿದ್ದಾರೆ. ಕನ್ನಡ ಸೇರಿದಂತೆ ಅನೇಕ ಭಾಷೆಗಳಲ್ಲಿ ಅಭಿನಯಿಸಿರುವ ಖ್ಯಾತ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದು, ಮುಂದಿನ ದಿನಗಳಲ್ಲಿ ಚಿತ್ರತಂಡ ಈ ಕುರಿತು ವಿವರ ನೀಡಲಿದೆ. ಇದನ್ನೂ ಓದಿ: ಹಾಲಿವುಡ್‍ನಲ್ಲಿ ಫ್ಯಾಮಿಲಿ ಜೊತೆ ಐಕಾನ್‍ಸ್ಟಾರ್ ಜಾಲಿ ಜಾಲಿ..!

    1980ರ ಕಾಲಘಟ್ಟದಲ್ಲಿ ನಡೆಯುವ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಭಾರತದ ಹೆಸರಾಂತ ಸಂಗೀತ ನಿರ್ದೇಶಕ ಸಂತೋಷ್ ನಾರಾಯಣನ್ ಸಂಗೀತ ನೀಡುತ್ತಿದ್ದಾರೆ. ಇದು ಸಂತೋಷ್ ನಾರಾಯಣನ್ ಸಂಗೀತ ನೀಡುತ್ತಿರುವ ಮೊದಲ ಕನ್ನಡ ಚಿತ್ರವಾಗಿದೆ. ವೇಣು “ಬಲರಾಮನ ದಿನಗಳು” ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ. ಇದನ್ನೂ ಓದಿ: ಹಾಲಿವುಡ್‍ನಲ್ಲಿ ಫ್ಯಾಮಿಲಿ ಜೊತೆ ಐಕಾನ್‍ಸ್ಟಾರ್ ಜಾಲಿ ಜಾಲಿ..!

    .

  • ಮಂತ್ರಾಲಯದಲ್ಲಿ ಉರುಳು ಸೇವೆ ಮಾಡಿ ಹರಕೆ ತೀರಿಸಿದ ನಟ ವಿನೋದ್ ಪ್ರಭಾಕರ್

    ಮಂತ್ರಾಲಯದಲ್ಲಿ ಉರುಳು ಸೇವೆ ಮಾಡಿ ಹರಕೆ ತೀರಿಸಿದ ನಟ ವಿನೋದ್ ಪ್ರಭಾಕರ್

    ರಾಯಚೂರು: ತಮ್ಮ ಮುಂದಿನ ಸಿನಿಮಾ ಯಶಸ್ಸಿಗಾಗಿ ನಟ ವಿನೋದ್ ಪ್ರಭಾಕರ್ (Vinod Prabhakar) ಮಂತ್ರಾಲಯಕ್ಕೆ (Mantralaya) ಭೇಟಿ ನೀಡಿ ಗುರುರಾಘವೇಂದ್ರ ಸ್ವಾಮಿ ಮಠದಲ್ಲಿ ಉರುಳು ಸೇವೆ ಮಾಡಿ ಹರಕೆ ತೀರಿಸಿದ್ದಾರೆ.

    ‘ಮಾದೇವ’ ಸಿನಿಮಾ ಯಶಸ್ಸಿಗಾಗಿ ಸಿನಿಮಾ ತಂಡದೊಂದಿಗೆ ವಿನೋದ್ ಪ್ರಭಾಕರ್ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ. ಅದೇ ರೀತಿ ಮಂತ್ರಾಲಯ ಹಾಗೂ ರಾಯಚೂರಿನ (Raichur) ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಮನೆಗಳ್ಳತನ ಮಾಡಿದ್ದ ಇಬ್ಬರು ಅರೆಸ್ಟ್ – 10 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಜಪ್ತಿ

    ರಾಯಚೂರಿನ ಗಾಂಧಿ ವೃತ್ತದಲ್ಲಿನ ಆಂಜನೇಯ ದೇವಾಲಯಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ವಿನೋದ್ ಪ್ರಭಾಕರ್, ನನಗೆ ನಮ್ಮ ತಂದೆಯವರಿಗೆ ಉತ್ತರ ಕರ್ನಾಟಕದಿಂದ ಒಳ್ಳೆಯ ಅಭಿಮಾನ ಬಳಗ ಇದೆ. ಈ ಕಡೆ ಜನ ನಮಗೆ ತುಂಬಾ ಬೆಂಬಲ ಕೊಡುತ್ತಾರೆ. ಬೆಳಗ್ಗೆ ಮಂತ್ರಾಲಯ ರಾಯರ ಮಠಕ್ಕೆ ಹೋಗಿ ಆಶಿರ್ವಾದ ಪಡೆದಿದ್ದೇವೆ. ಜೂನ್ 6 ಕ್ಕೆ ಮಾದೇವ ಸಿನಿಮಾ ತೆರೆಗೆ ಬರುತ್ತಿದೆ. ಇಡೀ ಚಿತ್ರ ತಂಡ ಪ್ರಚಾರ ನಡೆಸಿದ್ದೇವೆ. ಎಲ್ಲರೂ ಹರಸಿ ಹಾರೈಸಬೇಕು ಎಂದರು. ಇದನ್ನೂ ಓದಿ: ಅರಣ್ಯ ಇಲಾಖೆ ರಾಯಭಾರಿಯಾಗಿ ಅನಿಲ್ ಕುಂಬ್ಳೆ: ಈಶ್ವರ್ ಖಂಡ್ರೆ

    ರಾಯರ ಮಠದಲ್ಲಿ ಉರುಳು ಸೇವೆ ಮಾಡಬೇಕು ಎಂದು ಮೊದಲೇ ಅಂದುಕೊಂಡಿದ್ದೆ. ಮಠಕ್ಕೆ ಬರಲು ಆಗಿರಲಿಲ್ಲ. ಹಾಗಾಗಿ ಈಗ ಉರುಳು ಸೇವೆ ಮಾಡಿದ್ದೇನೆ. ನಾನು ರಾಯರು ಹಾಗೂ ಬಾಬಾ ಭಕ್ತ. ನಮ್ಮ ಸಿನಿಮಾಗೆ ಗುರು ಬಲ ಸಿಗಲಿ ಎಂದು ಬೇಡಿಕೊಂಡಿದ್ದೇನೆ ಎಂದು ಹೇಳಿದರು. ಇದನ್ನೂ ಓದಿ: ಆಪರೇಷನ್ ಸಿಂಧೂರವನ್ನ ಕ್ಯಾಮೆರಾ ಮುಂದೆಯೇ ಮಾಡಲಾಯ್ತು ಆದ್ದರಿಂದ ಯಾರೂ ಪುರಾವೆ ಕೇಳಲ್ಲ: ವಿಪಕ್ಷಗಳಿಗೆ ತಿವಿದ ಮೋದಿ

    ಇನ್ನೂ ಮೈಸೂರು ಸ್ಯಾಂಡಲ್ ಸೋಪ್‌ಗೆ ತಮನ್ನಾ ಭಾಟಿಯಾ ಬ್ರ‍್ಯಾಂಡ್ ಅಂಬಾಸಿಡರ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಪುನೀತ್ ಸರ್ ನಮ್ಮ ನಂದಿನಿ ಹಾಲಿಗೆ ಬ್ರ‍್ಯಾಂಡ್ ಅಂಬಾಸಿಡರ್ ಆಗಿದ್ದರು. ನಮ್ಮಲ್ಲೂ ಚರ್ಚೆ ನಡೆದಿದೆ, ಚಿತ್ರರಂಗದವರು ಚರ್ಚೆ ಮಾಡುತ್ತಿದ್ದಾರೆ. ನಮ್ಮವರು ಬ್ರ‍್ಯಾಂಡ್ ಅಂಬಾಸಿಡರ್ ಖಂಡಿತ ಆಗೇ ಆಗುತ್ತಾರೆ. ಅವಕಾಶ ಸಿಕ್ಕರೆ ನಮ್ಮ ಕನ್ನಡದ್ದು ನಾನು ಪ್ರಮೋಷನ್ ಮಾಡೇ ಮಾಡುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಸಮಾಜದಲ್ಲಿ ಅಶಾಂತಿ, ಒಡಕು ಮೂಡಿಸೋದು ಬಿಜೆಪಿ ಉದ್ದೇಶ: ಶರಣಪ್ರಕಾಶ್ ಪಾಟೀಲ್

  • ಕನ್ನಡಕ್ಕೆ ಬಂದ ‘ಕಲ್ಕಿ’ ಚಿತ್ರದ ಮ್ಯೂಸಿಕ್ ಡೈರೆಕ್ಟರ್

    ಕನ್ನಡಕ್ಕೆ ಬಂದ ‘ಕಲ್ಕಿ’ ಚಿತ್ರದ ಮ್ಯೂಸಿಕ್ ಡೈರೆಕ್ಟರ್

    ದ್ಮಾವತಿ ಫಿಲಂಸ್ ಲಾಂಛನದಲ್ಲಿ ಪದ್ಮಾವತಿ ಜಯರಾಂ ಹಾಗೂ ಶ್ರೇಯಸ್ ನಿರ್ಮಿಸುತ್ತಿರುವ ಹಾಗೂ “ಆ ದಿನಗಳು” ಖ್ಯಾತಿಯ ಕೆ‌.ಎಂ.ಚೈತನ್ಯ (K.M. Chaitanya) ನಿರ್ದೇಶನದಲ್ಲಿ ಟೈಗರ್ (Vinod Prabhakar) ನಾಯಕರಾಗಿ ನಟಿಸುತ್ತಿರುವ 25 ನೇ ಚಿತ್ರ “ಬಲರಾಮನ ದಿನಗಳು”. ಕಳೆದ ಕೆಲವು ತಿಂಗಳ ಹಿಂದಷ್ಟೇ ಈ ಚಿತ್ರದ ಘೋಷಣೆಯಾಗಿತ್ತು. ಈಗ ಈ ಚಿತ್ರದ ಕುರಿತು ಮತ್ತೊಂದು ಮಹತ್ವದ ಸುದ್ದಿ ಹೊರಬಂದಿದೆ. ಭಾರತದ ಜನಪ್ರಿಯ ಸಂಗೀತ ನಿರ್ದೇಶಕ ಸಂತೋಷ್ ನಾರಾಯಣನ್ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ‌. ಹೆಸರಾಂತ ಸಂಗೀತ ನಿರ್ದೇಶಕ ಹಾಗೂ ಗಾಯಕ ಸಂತೋಷ್ ನಾರಾಯಣನ್ ಅವರನ್ನು “ಬಲರಾಮನ ದಿನಗಳು” ಚಿತ್ರತಂಡ ಅದ್ದೂರಿಯಾಗಿ ಕನ್ನಡಕ್ಕೆ ಬರಮಾಡಿಕೊಂಡರು. ನಂತರ ಸಂತೋಷ್ ನಾರಾಯಣನ್  (Santosh Narayanan)ಹಾಗೂ ಚಿತ್ರತಂಡದ ಸದಸ್ಯರು ಮಾತನಾಡಿದರು.

    ಪ.ರಂಜಿತ್ ಅವರ “ಅಟ್ಟಕತ್ತಿ” ಚಿತ್ರದ ಮೂಲಕ ಸ್ವತಂತ್ರ ಸಂಗೀತ ನಿರ್ದೇಶಕರಾದ ಇವರು, “ಕಾಲ”, ” ಕಬಾಲಿ”, “ಭೈರವ”, ” ದಸರಾ” ಹಾಗೂ ಇತ್ತೀಚಿಗೆ ತೆರೆಕಂಡ “ಕಲ್ಕಿ” ಸಿನಿಮಾವರೆಗೂ 50 ಚಿತ್ರಗಳಿಗೆ ಸಂಗೀತ ನೀಡಿದ್ದಾರೆ. ಹಲವು ಚಿತ್ರಗಳಲ್ಲಿ ಹಾಡಿದ್ದಾರೆ ಕೂಡ‌. “ನನ್ನ ತಾಯಿಗೆ ಕನ್ನಡ ಬರುತ್ತದೆ. ಅವರು ನನಗೂ ಸ್ವಲ್ಪ ಕನ್ನಡ ಹೇಳಿಕೊಟ್ಟಿದ್ದಾರೆ. ಬೆಂಗಳೂರಿಗೆ ಆಗಾಗ ಬರುತ್ತಿರುತ್ತೇನೆ. “ಬಲರಾಮನ ದಿನಗಳು” ನನ್ನ 51ನೇ ಚಿತ್ರ ಹಾಗೂ ನಾನು ಸಂಗೀತ ನೀಡುತ್ತಿರುವ ಕನ್ನಡದ ಮೊದಲ ಚಿತ್ರ. ಪದ್ಮಾವತಿ ಫಿಲಂಸ್, ಚೈತನ್ಯ ಹಾಗೂ ವಿನೋದ್ ಪ್ರಭಾಕರ್ ಅವರ ಜೊತೆಗೆ ಕೆಲಸ ಮಾಡುತ್ತಿರುವುದು ಖುಷಿಯಾಗಿದೆ. ಈ ಸಂದರ್ಭದಲ್ಲಿ ಗುರುಗಳಾದ ಇಳಯರಾಜ, ಎ.ಆರ್.ರೆಹಮಾನ್ ಅವರನ್ನು ನೆನಪಿಸಿಕೊಳ್ಳುತ್ತೇನೆ. ರಘು ದೀಕ್ಷಿತ್ ಅವರ  “ನಿನ್ನ ಪೂಜೆಗೆ ಬಂದೆ ಮಾದೇಶ್ವರ” ಸೇರಿದಂತೆ ಕೆಲವು ಹಾಡುಗಳಿಗೆ ಪ್ರೋಗ್ರಾಮರ್ ಆಗಿ ಕೆಲಸ ಮಾಡಿದ್ದೇನೆ. ಅಜನೀಶ್ ಲೋಕನಾಥ್ ಹಾಗೂ ರವಿ ಬಸ್ರೂರ್ ಅವರ ಸಂಗಿತ ಇಷ್ಟ ಎಂದು ಹೇಳಿದ ಸಂತೋಷ್ ನಾರಾಯಣನ್, ಈ ಚಿತ್ರದಲ್ಲೂ ಒಳ್ಳೆಯ ಹಾಡುಗಳನ್ನು ಕೊಡುವ ಪ್ರಯತ್ನ ಮಾಡುತ್ತೇನೆ ಎಂದರು.

    ಇದು ನನ್ನ 25ನೇ ಸಿನಿಮಾ, ಕೆ.ಎಂ. ಚೈತನ್ಯ ನಿರ್ದೇಶನದ 10ನೇ ಸಿನಿಮಾ. “ಬಲರಾಮನ ದಿನಗಳು” ಗೆ ಬಲ ನೀಡುವುದಕ್ಕೆ ಸಂತೋಷ್‍ ನಾರಾಯಣನ್ ಅವರು ಇಲ್ಲಿಗೆ ಬಂದಿದ್ದಾರೆ. ಸಂತೋಷ್‍ ನಾರಾಯಣನ್ ಅವರೇ ಯಾಕೆ? ಎಂಬ ಪ್ರಶ್ನೆ ಬರಬಹುದು. ಅವರ ಕೆಲಸವನ್ನು ನಮ್ಮಲ್ಲಿ ಜನ ಒಪ್ಪಿಕೊಂಡಿದ್ದಾರೆ. ಅವರು ಯಾರು ಎಂದು ಗೊತ್ತಿಲ್ಲದಿರಬಹುದು, ಅವರ ಮುಖ ನೋಡದಿರಬಹುದು. ಆದರೆ, ಗ್ಯಾಂಗ್‍ಸ್ಟರ್ ಸಿನಿಮಾ ಸಂಬಂಧ ಪಟ್ಟ ಯಾವುದೇ ಪೋಸ್ಟ್ ನೋಡಿ, ಇವರ ಸಿಗ್ನೇಚರ್ ಸಂಗೀತ ಇದ್ದೇ ಇರುತ್ತದೆ. ಹಾಗಾಗಿ, ನಮ್ಮ ಚಿತ್ರತಂಡದವರೆಲ್ಲಾ ನಿರ್ಧಾರ ತೆಗೆದುಕೊಂಡು ಅವರನ್ನು ಕರೆಸಿದ್ದೇವೆ. ಇದೊಂದು ಗ್ಯಾಂಗ್‍ಸ್ಟರ್ & ಕಲ್ಟ್ ಸಿನಿಮಾ ಆಗಿರುವುದರಿಂದ ಅವರೇ ಸೂಕ್ತ ಎಂದನಿಸಿತು. ಅವರು ದೊಡ್ಡ ಸಂಗೀತ ನಿರ್ದೇಶಕ. ಅವರನ್ನು ಕರೆದುಕೊಂಡು ಬರುವುದು ಅಷ್ಟು ಸುಲಭವಾಗಿರಲಿಲ್ಲ. ಬಹಳ ಕಷ್ಟಪಟ್ಟು ಅವರನ್ನು ಕರೆದುಕೊಂಡು ಬಂದಿದ್ದೇವೆ. ‘ಕಲ್ಕಿ’ ಬಿಡುಗಡೆಗೂ ಮೊದಲೇ, ಮೇ ತಿಂಗಳಲ್ಲಿ ಅವರನ್ನು ಮಾತನಾಡಿಸಿದ್ದೆವು. ಅವರಿಗೆ ಚಿತ್ರಕಥೆ ರೀಡಿಂಗ್‍ ಕೊಡುತ್ತಿದ್ದಂತೆಯೇ ಒಪ್ಪಿಕೊಂಡರು. ಚಿತ್ರ ವಿಭಿನ್ನವಾಗಿದೆ, 70-80ರ ಕಾಲಘಟ್ಟದ ಚಿತ್ರವಾಗಿರುವುದರಿಂದ ಸಾಕಷ್ಟು ಪ್ರಯೋಗ ಮಾಡಬಹುದು ಎಂದು ಖುಷಿಪಟ್ಟು ಒಪ್ಪಿ ಕೆಲಸ ಮಾಡುತ್ತಿದ್ದಾರೆ. ಅವರನ್ನು ಕನ್ನಡಕ್ಕೆ ಕರೆದುಕೊಂಡು ಬಂದಿರುವ ಹೆಮ್ಮೆ ಇದೆ. ಚಿತ್ರದ ಕುರಿತು ಮುಂದಿನ ದಿನಗಳಲ್ಲಿ ಮಾತನಾಡುತ್ತೇನೆ ಎಂದರು ನಾಯಕ ಟೈಗರ್.

    ಇದು 90 ರ ದಶಕದ ಕಾಲಘಟ್ಟದ ಭೂಗತಲೋಕದ ಕಥೆ. ಯಾವುದೇ ನೈಜ ಘಟನೆ ಅಥವಾ ವ್ಯಕ್ತಿಯ ಕುರಿತಾದ ಚಿತ್ರವಲ್ಲ. ಕಾಲ್ಪನಿಕ ಕಥೆ. ಟೈಗರ್ ಅವರ ಚಿತ್ರವನ್ನು ನಿರ್ದೇಶಿಸುವ ಆಸೆಯಿತ್ತು. ಅದು ಈ ಚಿತ್ರದ ಮೂಲಕ ಈಡೇರಿದೆ. ನಿರ್ಮಾಪಕರಾದ ಪದ್ಮಾವತಿ ಜಯರಾಂ ಮತ್ತು ಶ್ರೇಯಸ್‍ ಗೆ ವಂದನೆಗಳು. ಸಂತೋಷ್ ನಾರಾಯಣ್ ಅವರ ಸಂಗೀತ ನಿರ್ದೇಶನದಲ್ಲಿ ಒಳ್ಳೆಯ ಹಾಡುಗಳು ಬರಲಿದೆ ಎಂದು ನಿರ್ದೇಶಕ ಕೆ.ಎಂ.ಚೈತನ್ಯ ತಿಳಿಸಿದರು.

     ನಾನು ಚಿಕ್ಕ ವಯಸ್ಸಿನಿಂದ ಟೈಗರ್ ಅವರ ಅಭಿಮಾನಿ ಎಂದು ಮಾತನಾಡಿದ ನಿರ್ಮಾಪಕ ಶ್ರೇಯಸ್, ಇಂದು ಅವರು ನಾಯಕರಾಗಿ ನಟಿಸುತ್ತಿರುವ ಚಿತ್ರ ನಿರ್ಮಾಣ ಮಾಡುತ್ತಿರುವುದು ಸಂತೋಷವಾಗಿದೆ. ನಮ್ಮ ಪದ್ಮಾವತಿ ಫಿಲಂಸ್ ಲಾಂಛನದಲ್ಲಿ ಮೂಡಿಬರುತ್ತಿರುವ ಮೊದಲ ಸಿನಿಮಾವಿದು. ನಮ್ಮ ಮೊದಲ ಚಿತ್ರಕ್ಕೆ ಹೆಸರಾಂತ ಸಂಗೀತ ನಿರ್ದೇಶಕ ಸಂತೋಷ್ ನಾರಾಯಣನ್ ಸಂಗೀತ ನೀಡುತ್ತಿದ್ದಾರೆ ಹಾಗೂ ಕೆ.ಎಂ.ಚೈತನ್ಯ ಅವರು ನಿರ್ದೇಶನ ಮಾಡುತ್ತಿದ್ದಾರೆ.  ಈ ಹಿಂದೆ ನಮ್ಮ ಚಿತ್ರದ ಘೋಷಣೆ ಮಾಡಿದಾಗ ತಾವೆಲ್ಲರು ನೀಡಿದ ಪ್ರೋತ್ಸಾಹಕ್ಕೆ ಚಿರ ಋಣಿ.   ನನ್ನ ಕನಸಿಗೆ ಆಸರೆಯಾದ ಅಪ್ಪ ಅಮ್ಮನಿಗೆ ಧನ್ಯವಾದ. ಮುಂದೆ ಕೂಡ ನಿಮ್ಮ ಪ್ರೋತ್ಸಾಹ ಹೀಗೆ ಇರಲಿ ಎಂದರು ನಿರ್ಮಾಪಕ ಶ್ರೇಯಸ್. ನಿರ್ಮಾಪಕಿ  ಪದ್ಮಾವತಿ ಜಯರಾಂ ಹಾಗೂ ಜಯರಾಂ ಅವರು ಸಹ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

  • ವಿನೋದ್ ಪ್ರಭಾಕರ್ ನಟನೆ 25ನೇ ಚಿತ್ರದಿಂದ ಬಿಗ್ ಅನೌನ್ಸ್ಮೆಂಟ್

    ವಿನೋದ್ ಪ್ರಭಾಕರ್ ನಟನೆ 25ನೇ ಚಿತ್ರದಿಂದ ಬಿಗ್ ಅನೌನ್ಸ್ಮೆಂಟ್

    ಟೈಗರ್ ವಿನೋದ್ ಪ್ರಭಾಕರ್ (Vinod Prabhakar) ಅಭಿನಯದ 25 ನೇ ಚಿತ್ರ ‘ಬಲರಾಮನ ದಿನಗಳು’ ಚಿತ್ರವನ್ನು ಪದ್ಮಾವತಿ ಫಿಲಂಸ್ ಲಾಂಛನದಲ್ಲಿ ಪದ್ಮಾವತಿ ಜಯರಾಂ ಹಾಗೂ ಶ್ರೇಯಸ್ ಅವರು ನಿರ್ಮಾಣ‌ ಮಾಡುತ್ತಿದ್ದಾರೆ. ಆ ದಿನಗಳು ಖ್ಯಾತಿಯ  ಕೆ‌.ಎಂ.ಚೈತನ್ಯ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

    ಕೆಲವು ದಿನಗಳ ಹಿಂದಷ್ಟೇ ಚಿತ್ರದ ಪೋಸ್ಟರ್ ಬಿಡುಗಡೆಯಾಗಿತ್ತು. ಈ ಚಿತ್ರದ ಮೊದಲ ಪೋಸ್ಟರ್ ಎಲ್ಲರ ಗಮನ ಸೆಳೆದಿತ್ತು.  ಆಗಸ್ಟ್ 23 ರಂದು ಬಲರಾಮನ ದಿನಗಳು ಚಿತ್ರದ ಕುರಿತು ಬಿಗ್ ಅನೌನ್ಸ್ ಮೆಂಟ್ ಮಾಡುವುದಾಗಿ ಚಿತ್ರತಂಡ ತಿಳಿಸಿದೆ. ಅದೇನಿರಬಹುದೆಂಬ ಕುತೂಹಲ ಅಭಿಮಾನಿಗಳಿಗಿದೆ.

     

    ಒಟ್ಟಿನಲ್ಲಿ ಪದ್ಮಾವತಿ ಫಿಲಂಸ್ ನಿರ್ಮಾಣದ, ಕೆ.ಎಂ.ಚೈತನ್ಯ ಹಾಗೂ ವಿನೋದ್ ಪ್ರಭಾಕರ್ ಕಾಂಬಿನೇಶನ್ ನಲ್ಲಿ ಮೂಡಿ ಬರುತ್ತಿರುವ ಈ ಚಿತ್ರ ಆರಂಭದಲ್ಲೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ.

  • ‌ದರ್ಶನ್‌ ಪ್ರಕರಣ: ಕಾನೂನಿಗಿಂತ ಯಾರು ದೊಡ್ಡವರಿಲ್ಲ, ನ್ಯಾಯ ಸಿಗಬೇಕು- ವಿನೋದ್‌ ಪ್ರಭಾಕರ್

    ‌ದರ್ಶನ್‌ ಪ್ರಕರಣ: ಕಾನೂನಿಗಿಂತ ಯಾರು ದೊಡ್ಡವರಿಲ್ಲ, ನ್ಯಾಯ ಸಿಗಬೇಕು- ವಿನೋದ್‌ ಪ್ರಭಾಕರ್

    ನ್ನಡದ ಸ್ಟಾರ್ ನಟ ದರ್ಶನ್ (Darshan) ಇದೀಗ ರೇಣುಕಾಸ್ವಾಮಿ ಕೊಲೆ (Renukaswamy Murder Case) ಪ್ರಕರಣ ಸಂಬಂಧ ಜೈಲು ಸೇರಿದ್ದಾರೆ. ಇದೀಗ ಅವರನ್ನು ನಟ ವಿನೋದ್ ಪ್ರಭಾಕರ್ ಭೇಟಿಯಾಗಿ ಮಾತನಾಡಿಸಿ ಬಂದಿದ್ದಾರೆ. ರೇಣುಕಾಸ್ವಾಮಿ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿ, ಕಾನೂನಿಗಿಂತ ಯಾರು ದೊಡ್ಡವರಿಲ್ಲ, ನ್ಯಾಯ ಸಿಗಬೇಕು ಎಂದು ವಿನೋದ್ ಮಾತನಾಡಿದ್ದಾರೆ.

    ರೇಣುಕಾಸ್ವಾಮಿ ಆತ್ಮಕ್ಕೆ ಶಾಂತಿ ಸಿಗಬೇಕು. ಅವರ ಕುಟುಂಬಕ್ಕೆ ಭಗವಂತ ಧೈರ್ಯ ಕೊಡಲಿ ಅಂತ ಕೇಳಿಕೊಳ್ಳುತ್ತೇನೆ. ಹೀಗೆಲ್ಲಾ ಆಗಬಾರದಿತ್ತು. ನಿಮಗೆಲ್ಲಾ ಎಷ್ಟು ತಿಳಿದಿದೆಯೋ ನನಗೂ ಅಷ್ಟೇ ತಿಳಿದಿರೋದು. ನಾನು ದರ್ಶನ್ ಸರ್ ಅವರನ್ನು ಮೀಟ್ ಮಾಡದೇ 4 ತಿಂಗಳು ಆಗಿತ್ತು. ಅವರ ಹುಟ್ಟುಹಬ್ಬಕ್ಕೆ ಮೀಟ್ ಆಗಿದ್ದು ಆ ನಂತರ ಸುದ್ದಿ ನೋಡಿ ತಿಳಿಯಿತು ಎಂದು ದರ್ಶನ್ ಆಪ್ತ ನಟ ವಿನೋದ್ ಪ್ರಭಾಕರ್ (Vinod Prabhakar) ಮಾತನಾಡಿದ್ದಾರೆ.


    ಅನ್ನಪೂರ್ಣೇಶ್ವರಿ ಠಾಣೆಯಲ್ಲಿದ್ದಾಗ ಭೇಟಿ ಮಾಡಲು ಪ್ರಯತ್ನಿಸಿದೆ ಆದರೆ ಅಂದು ಆಗಲಿಲ್ಲ. ಇದೀಗ ಅವರನ್ನು ಭೇಟಿಯಾದೆ. ಅಲ್ಲಿ ಏನೂ ಮಾತನಾಡಲು ಸಾಧ್ಯವಾಗಲಿಲ್ಲ. ಹ್ಯಾಂಡ್ ಶೇಕ್ ಮಾಡ್ವಿ. ಟೈಗರ್ ಅಂದ್ರು ಬಾಸ್ ಅಂತ ಕರೆದೆ ಅಷ್ಟೇ ಅಲ್ಲಿ ಮಾತನಾಡಿದ್ದು ಎಂದು ವಿನೋದ್ ತಿಳಿಸಿದರು.

    ಕೆಲ ದಿನಗಳಿಂದ ನಾನು ನೋಡ್ತಿದ್ದೀನಿ. ದರ್ಶನ್ ಬಗ್ಗೆ ನಾನು ಏನು ಮಾತನಾಡ್ತಿಲ್ಲ. ಅವರ ಒಂದು ಪೋಸ್ಟ್ ಕೂಡ ಹಾಕ್ತಿಲ್ಲ ಎಂಬ ಮಾತುಗಳು ಕೇಳಿ ಬಂದಿತ್ತು. ಈಗ ನಾನು ಪೋಸ್ಟ್ ಮಾಡಿ ಸಮಸ್ಯೆ ಬಗೆಹರಿಯೋದಾಗಿದ್ರೆ 1 ಲಕ್ಷ ಪೋಸ್ಟ್ ಮಾಡ್ತಿದ್ದೆ, ತನಿಖೆ ನಡೆಯುತ್ತದೆ. ಅವರಿಗೂ ಏನು ತೊಂದರೆಯಾಗಬಾರದು ಎಂದಿತ್ತು. ನನಗೆ ಇದರ ಬಗ್ಗೆ ಕ್ಲ್ಯಾರಿಟಿ ಇಲ್ಲ. ಭೇಟಿಯಾಗದೇ ಏನನ್ನೂ ಮಾತನಾಡಬಾರದು ಎಂದುಕೊಂಡಿದ್ದೆ ಎಂದು ವಿನೋದ್ ಮಾತನಾಡಿದರು. ಕಾನೂನಿಗಿಂತ ಯಾರು ದೊಡ್ಡವರಿಲ್ಲ. ನ್ಯಾಯ ಸಿಗಬೇಕು. ಎಲ್ಲರಿಗೂ ಒಳ್ಳೆಯದಾಗಬೇಕು ಎಂದು ವಿನೋದ್ ಪ್ರಭಾಕರ್ ಮಾತನಾಡಿದ್ದಾರೆ.

  • ದರ್ಶನ್‌ ಭೇಟಿಗೆ ಬಂದ ನಟ ವಿನೋದ್ ಪ್ರಭಾಕರ್

    ದರ್ಶನ್‌ ಭೇಟಿಗೆ ಬಂದ ನಟ ವಿನೋದ್ ಪ್ರಭಾಕರ್

    ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕಿಡ್ನಾಪ್‌ ಹಾಗೂ ಕೊಲೆ ಪ್ರಕರಣದಲ್ಲಿ ಸ್ಯಾಂಡಲ್‌ವುಡ್‌ ನಟ ದರ್ಶನ್‌ (Challenging Star Darshan) ಹಾಗೂ ಗ್ಯಾಂಗ್‌ ಜೈಲು ಸೇರಿದೆ. ಇದೀಗ ದರ್ಶನ್‌ ಕುಟುಂಬಸ್ಥರು ಹಾಗೂ ಆಪ್ತರು ನಟನ ಬಳಿ ಮಾತನಾಡಲು ಬರುತ್ತಿದ್ದಾರೆ.

    ಇಂದು ನಟ ವಿನೋದ್ ಪ್ರಭಾಕರ್ (Vinod Prabhakar) ಅವರು ದರ್ಶನ್‌ ಅವರನ್ನು ಭೇಟಿ ಮಾಡಲು ಪರಪ್ಪನ ಅಗ್ರಹಾರದ ಬಳಿ ಬಂದಿದ್ದಾರೆ. ಸ್ನೇಹಿತರ ಜೊತೆ ಚೆಕ್ ಪೋಸ್ಟ್ ಮೂಲಕ ಜೈಲಿನತ್ತ ಹೋಗಿದ್ದಾರೆ. ಇದನ್ನೂ ಓದಿ: ಸೊಳ್ಳೆಗಳ ಕಾಟ- ಐಷಾರಾಮಿ ಜೀವನ ನಡೆಸಿದ್ದ ಪವಿತ್ರಾಗೆ ನರಕವಾದ ಜೈಲುವಾಸ

    ಇದಕ್ಕೂ ಮುನ್ನ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ಭೇಟಿಗೆ ಅವಕಾಶ ಕೇಳಿದ್ದೆ, ಒಳಗೆ ಬಿಟ್ರೆ ಭೇಟಿ ಆಗುತ್ತೇನೆ. ಕುಟುಂಬದವರಿಗೆ ಮಾತ್ರ ಅವಕಾಶ ಅಂತ ಹೇಳಿದ್ದಾರೆ. ನೊಡೋಣ ಒಳಗಡೆ ಹೋಗಿ ಅಧಿಕಾರಿಗಳಿಗೆ ಕೇಳಿ ಭೇಟಿ ಆಗ್ತೇನೆ ಎಂದರು. ಅಂತೆಯೇ ಇದೀಗ ದರ್ಶನ್‌ ರನ್ನು ಭೇಟಿ ಮಾಡಿ ವಿನೋದ್‌ ಪ್ರಭಾಕರ್‌ ತಮ್ಮ ಕಾರಿನಲ್ಲಿ ಹೊರಟರು.  ಇದನ್ನೂ ಓದಿ: ಊಟ ಸೇರ್ತಿಲ್ಲ, ನಿದ್ದೆ ಬರ್ತಿಲ್ಲ- ಜೈಲಿನಲ್ಲಿ ‘ಯಜಮಾನ’ ಪರದಾಟ

    ಗೆಳತಿ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಮೆಸೇಜ್‌ ಮಾಡಿದ್ದಾನೆ ಎಂದು ಆರೋಪಿಸಿ ದರ್ಶನ್‌ ಹಾಗೂ ಗ್ಯಾಂಗ್‌ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಿಸಿ ಬೆಂಗಳೂರಿಗೆ ಕರೆತಂದಿದೆ. ನಂತರ ಪಟ್ಟಣಗೆರೆ ಶೆಡ್‌ಗೆ ಕರೆದೊಯ್ದು ಚಿತ್ರಹಿಂಸೆ ಕೊಟ್ಟು ಬರ್ಬರವಾಗಿ ಕೊಲೆ ಮಾಡಿದೆ. ಹತ್ಯೆಯ ಬಳಿಕ ರೇಣುಕಾಸ್ವಾಮಿ ಮೃತದೇಹವನ್ನು ಸುಮ್ಮನಹಳ್ಳಿ ಮೋರಿ ಬಳಿ ಬಿಸಾಕಿದೆ.

    ಇತ್ತ ಮೋರಿ ಬಳಿ ಶವ ಸಿಗುತ್ತಿದ್ದಂತೆಯೇ ನಾಲ್ವರು ಪೊಲೀಸರಿಗೆ ಶರಣಾಗಿ ನಾವೇ ಕೊಲೆ ಮಾಡಿದ್ದಾಗಿ ಶರಣಾಗಿದ್ದಾರೆ. ಈ ಪ್ರಕರಣದ ಜಾಡು ಹಿಡಿದ ಪೊಲೀಸರಿಗೆ ನಡೆದ ನಿಜ ಘಟನೆ ಬೆಳಕಿಗೆ ಬಂದಿದೆ. ಸದ್ಯ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌, ಗೆಳತಿ ಪವಿತ್ರಾ ಗೌಡ ಸೇರಿದಂತೆ ಒಟ್ಟು 14 ಮಂದಿಯನ್ನು ಜೈಲಿಗಟ್ಟಲಾಗಿದೆ.

  • ವಿನೋದ್ ಪ್ರಭಾಕರ್ ನಟನೆಯ 25ನೇ ಚಿತ್ರಕ್ಕೆ ಚೈತನ್ಯ ಡೈರೆಕ್ಟರ್

    ವಿನೋದ್ ಪ್ರಭಾಕರ್ ನಟನೆಯ 25ನೇ ಚಿತ್ರಕ್ಕೆ ಚೈತನ್ಯ ಡೈರೆಕ್ಟರ್

    ವಿನೋದ್ ಪ್ರಭಾಕರ್ (Vinod Prabhakar) ನಾಯಕರಾಗಿ ನಟಿಸುತ್ತಿರುವ 25 ನೇ ಚಿತ್ರದ ಶೀರ್ಷಿಕೆ ಅನಾವರಣ ಇತ್ತೀಚಿಗೆ ಅದ್ದೂರಿಯಾಗಿ ನೆರವೇರಿತು. ಇದೇ ಸಂದರ್ಭದಲ್ಲಿ ಪದ್ಮಾವತಿ ಫಿಲಂಸ್ ಎಂಬ ನೂತನ ನಿರ್ಮಾಣ ಸಂಸ್ಥೆ ಕೂಡ ಆರಂಭವಾಯಿತು. ಗೃಹ ಸಚಿವ ಜಿ.ಪರಮೇಶ್ವರ್  ನೂತನ ಚಿತ್ರದ ಶೀರ್ಷಿಕೆಯನ್ನು ಅನಾವರಣಗೊಳಿಸಿದರು. ‘ಬಲರಾಮನ ದಿನಗಳು’ (Balaramana Dinagalu)  ಎಂದು ಚಿತ್ರಕ್ಕೆ ಹೆಸರಿಡಲಾಗಿದೆ.  ಆ ದಿನಗಳು ಖ್ಯಾತಿಯ ಕೆ.ಎಂ.ಚೈತನ್ಯ (KM Chaitanya) ಈ  ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಪದ್ಮಾವತಿ ಜಯರಾಂ ಹಾಗೂ ಶ್ರೇಯಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

    ನಿರ್ಮಾಪಕ ಶ್ರೇಯಸ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಈ ಚಿತ್ರದ ಶೀರ್ಷಿಕೆ ಅನಾವರಣ ಅದ್ದೂರಿಯಾಗಿ ನಡೆಯಿತು. ಇದೇ ಸಂದರ್ಭದಲ್ಲಿ ವಿನೋದ್ ಪ್ರಭಾಕರ್ ಅವರಿಗೆ ಟೈಗರ್ ಎಂದು ಬಿರುದು ನೀಡಿ ಸನ್ಮಾನಿಸಲಾಯಿತು. ನಂತರ ಗಣ್ಯರು ಹಾಗೂ ಚಿತ್ರತಂಡದ ಸದಸ್ಯರು ಮಾತನಾಡಿದರು.

    ಪ್ರತಿಯೊಬ್ಬರಿಗೂ ಜೀವನದಲ್ಲಿ ವೈದ್ಯ, ಪೊಲೀಸ್‍, ರಾಜಕಾರಣಿ, ವಿಜ್ಞಾನಿ  ಹೀಗೆ ಏನೇನೋ ಆಗಬೇಕು ಎಂಬ ಆಸೆ ಇರುತ್ತದೆ. ಆದರೆ, ನಮ್ಮ ಶ್ರೇಯಸ್‍ಗೆ ಚಿತ್ರ ನಿರ್ಮಾಣದಲ್ಲಿ ತೊಡಗಿಸಿಕೊಳ್ಳುವ ಆಸೆ ಇದ್ದು, ಈ ನಿಟ್ಟಿನಲ್ಲಿ ಹೊಸ ಹೆಜ್ಜೆ ಇಟ್ಟಿದ್ದಾರೆ. ಚಿತ್ರರಂಗದಲ್ಲಿ ಅವರಿಗೆ  ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ. ಹಿಂದೆ ಸಿನಿಮಾದಲ್ಲಿ ಸಂದೇಶ ಇರುತ್ತಿತ್ತು. ಮೌಲ್ಯಗಳ ಪಾಠ ಇರುತ್ತಿತ್ತು. ಈಗ ಕಮರ್ಷಿಯಲ್‍ ಚಿತ್ರಗಳ ಸಂಖ್ಯೆ ಜಾಸ್ತಿ ಆಗಿದೆ. ಹಣ ಮಾಡಬೇಕು ನಿಜ. ಆದರೆ, ಜೊತೆಗೆ ಚಿತ್ರ ನೋಡುವ ಪ್ರೇಕ್ಷಕರಿಗೆ ಒಂದು ಸಂದೇಶ ಸಹ ಹೋಗಬೇಕು. ಚಲನಚಿತ್ರ ಒಂದು ಪ್ರಬಲವಾದ ಮಾಧ್ಯಮ. ಈ ಮಾಧ್ಯಮದ ಮೂಲಕ ಜನರ ಮನಸ್ಸು ಬದಲಾವಣೆ ಮಾಡುವ ಅವಕಾಶವಿರುತ್ತದೆ. ಹಾಗಾಗಿ, ಯಾವ ಸಿನಿಮಾ ಮಾಡಿದರೂ ಅದರ ಮೂಲಕ ಪ್ರೇಕ್ಷಕರಿಗೆ ಒಂದು ಸಂದೇಶ ಕೊಡಿ. ನನಗೆ ಟೈಗರ್ ಪ್ರಭಾಕರ್ ಪರಿಚಿತರು. ಅವರ ಮಗ ಇಂದು ತಮ್ಮ 25ನೇ ಸಿನಿಮಾ ಮಾಡುತ್ತಿದ್ದಾರೆ. ಇದು ತಮಾಷೆ ವಿಷಯವಲ್ಲ. ಅವರು ಇನ್ನೂ 25 ಸಿನಿಮಾಗಳನ್ನು ಮಾಡಲಿ ಎಂಬುದು ನನ್ನ ಹಾರೈಕೆ ಎಂದು ಜಿ.ಪರಮೇಶ್ವರ್ ತಿಳಿಸಿದರು.

    ಚಿತ್ರ ನಿರ್ಮಿಸಬೇಕು ಎಂಬುದು ನನ್ನ ಕನಸು ಎಂದು ಮಾತನಾಡಿದ ನಿರ್ಮಾಪಕ ಶ್ರೇಯಸ್,  ಆ ಕನಸಿಗೆ ನನ್ನ ತಂದೆ, ತಾಯಿ ಮತ್ತು ಸಹೋದರ ಶಕ್ತಿ ತುಂಬುತ್ತಿದ್ದಾರೆ. ವಿನೋದ್‍ ಪ್ರಭಾಕರ್ ಅವರು ನನ್ನ ಚಿತ್ರರಂಗದ ಗುರುಗಳು. ಅವರ ಸಹಕಾರದಿಂದ ನಾನು ಪದ್ಮಾವತಿ  ಫಿಲಂಸ್ ಎಂಬ ಸಂಸ್ಥೆ ಹುಟ್ಟುಹಾಕಿ ಈ ಚಿತ್ರ ನಿರ್ಮಿಸುತ್ತಿದ್ದೇನೆ ಎಂದರು. ನನಗೆ ಈ ಸಂಸ್ಥೆಯವರು ಟೈಗರ್ ಎಂಬ ಬಿರುದು ಕೊಟ್ಟಿದ್ದಾರೆ. ನನ್ನ ಅಭಿನಯದ ಮೂರು ಚಿತ್ರಗಳು ಬಿಡುಗಡೆಗೆ ಸಿದ್ದವಾಗುತ್ತಿದೆ.  ಬಿರುದಿಗೆ ಆ ಚಿತ್ರಗಳು ಧಕ್ಕೆ ತರದಂತೆ ನೋಡಿಕೊಳ್ಳುತ್ತೇನೆ. ಚೈತನ್ಯ ಅವರ ‘ಆ ದಿನಗಳು’ ಚಿತ್ರ ನೋಡಿದಾಗಿನಿಂದ ನಾನು ಅವರ ಅಭಿಮಾನಿ. ಅವರ ಜೊತೆಗೆ ಕೆಲಸ ಮಾಡಬೇಕು ಎಂಬ ಆಸೆ ಇತ್ತು. ಅದು ಈಗ ಈಡೇರಿದೆ. ಅವರೇನು ಬಲರಾಮನ ಪಾತ್ರ ಸೃಷ್ಠಿ ಮಾಡಿದ್ದಾರೋ, ಪ್ರಾಣ ಒತ್ತೆಯಿಟ್ಟು, ಬೆವರು-ರಕ್ತ ಹರಿಸಿ ಅದಕ್ಕೆ ನ್ಯಾಯ ಸಲ್ಲಿಸುತ್ತೇನೆ ಎಂದರು ನಾಯಕ ವಿನೋದ್ ಪ್ರಭಾಕರ್.

    ಹೆಚ್ಚಿನ ಸಿನಿಮಾಗಳಲ್ಲಿ ಮನರಂಜನೆ ಇರುತ್ತದೆ. ಸಂದೇಶಗಳು ಕಡಿಮೆಯಾಗುತ್ತಿವೆ ಎಂದು ಮಾತು ಅರಂಭಿಸಿದ ನಿರ್ದೇಶಕ ಕೆ.ಎಂ.ಚೈತನ್ಯ,  ನಾನು ನಿರ್ದೇಶಿಸಿರುವ ಸಿನಿಮಾಗಳಲ್ಲಿ ಪ್ರತ್ಯಕ್ಷವಾಗಿ ಅಲ್ಲದಿದ್ದರೂ, ಪರೋಕ್ಷವಾಗಿ ಸಂದೇಶ ಹೇಳಿದ್ದೇನೆ. ಇದರಲ್ಲೂ ಅದು ಮುಂದುವರೆಯುತ್ತದೆ. ಈ ಚಿತ್ರ ಆಗುತ್ತಿರುವುದಕ್ಕೆ ಮುಖ್ಯ ಕಾರಣ ಶ್ರೇಯಸ್‍. ಈ ಕಥೆ ಆಯ್ಕೆ ಮಾಡಿದ್ದು ಅವರು. ಭೂಗತಲೋಕದ ಬಗ್ಗೆ ಸಾಕಷ್ಟು ಕಥೆಗಳನ್ನು ಮಾಡಿದ್ದೆ. ಅದರಲ್ಲಿ ಯಾವ ಕಥೆ ಮಾಡಬೇಕು ಅಂತ ಹೇಳಿದ್ದು ಅವರೆ. ಜೊತೆಗೆ ಬಹಳ ವರ್ಷಗಳಿಂದ ವಿನೋದ್‍ ಪ್ರಭಾಕರ್ ಜೊತೆಗೆ ಚಿತ್ರ ಮಾಡುವ ಆಸೆ ಇತ್ತು. ಅದಕ್ಕೆ ಪೂರಕವಾಗಿ ಕಥೆ ಸಿಕ್ಕಿದೆ. ಈ ಚಿತ್ರಕ್ಕೆ ಅವರು ಬಹಳ ಅತ್ಯುತ್ತಮ ಆಯ್ಕೆ. ಇದು ಭೂಗತಲೋಕದ ಸಿನಿಮಾ.  ಭೂಗತ ಲೋಕದ ಜೊತೆಗೆ ಸಮಾಜ, ರಾಜಕೀಯ ಹೀಗೆ ಎಲ್ಲಾ ಆಯಾಮಗಳು ಇರುತ್ತವೆ. ಚಿತ್ರದ ಬಗ್ಗೆ ಈಗಲೇ ಹೆಚ್ಚು ಹೇಳುವುದು ಕಷ್ಟ. ನಿಜಜೀವನದ ಕಥೆ ಆಧರಿಸಿದ ಕಾಲ್ಪನಿಕ ಚಿತ್ರ. ಇದು ಯಾವುದೇ ವ್ಯಕ್ತಿಯ ಕುರಿತಾದ ಚಿತ್ರ ಅಲ್ಲ. ಇದರಲ್ಲಿ ಮನರಂಜನೆ ಇರುತ್ತದೆ. ಇಡೀ ಕುಟುಂಬ ನೋಡುವ ಚಿತ್ರ ಎಂದು ತಿಳಿಸಿದರು.

  • ಮರಿ ಟೈಗರ್ ವಿನೋದ್ ಪ್ರಭಾಕರ್ ಗೆ ಶ್ವೇತಾ ಡಿಸೋಜಾ ನಾಯಕಿ

    ಮರಿ ಟೈಗರ್ ವಿನೋದ್ ಪ್ರಭಾಕರ್ ಗೆ ಶ್ವೇತಾ ಡಿಸೋಜಾ ನಾಯಕಿ

    ಗೊಂಬೆಗಳ ಲವ್ ಸಿನಿಮಾ ಖ್ಯಾತಿಯ ಅರುಣ್ ಕುಮಾರ್ (Arun Kumar) ಮರಿ ಟೈಗರ್ ವಿನೋದ್ ಪ್ರಭಾಕರ್ (Vinod Prabhakar) ಜೊತೆ ಕೈ ಜೋಡಿಸಿರುವುದು ಗೊತ್ತೇ ಇದೆ. ಇವರಿಬ್ಬರ ಕಾಂಬಿನೇಷನ್ ನೆಲ್ಸನ್ ಸಿನಿಮಾದ ಟೀಸರ್ ಧೂಳ್ ಎಬ್ಬಿಸಿದೆ. ಇದೀಗ ಚಿತ್ರತಂಡದಿಂದ ಮತ್ತೊಂದು ಅಪ್ ಡೇಟ್ ಸಿಕ್ಕಿದೆ. ನೆಲ್ಸನ್ ಗೆ ನಾಯಕಿ ಸಿಕ್ಕಿದ್ದಾಳೆ. ಮಾಸ್ ಮರಿ ಟೈಗರ್ ವಿನೋದ್ ಗೆ ಜೋಡಿಯಾಗಿ ಶ್ವೇತಾ ಡಿಸೋಜಾ ನಟಿಸಲಿದ್ದಾರೆ.

    ಕರಾವಳಿಯ ಚೆಲುವೆ ಶ್ವೇತಾ ಡಿಸೋಜಾ (Shweta D’Souza) ನೆಲ್ಸನ್ ಬಳಗ ಸೇರಿಕೊಂಡಿದ್ದಾರೆ. ಹಿಂದಿ ಸಿನಿಮಾ Y ಮೂಲಕ ಸಿನಿಮಾ ಜರ್ನಿ ಆರಂಭಿಸಿದ್ದ ಈ ಸುಂದರಿ ಖಾಸಗಿ ಪುಟಗಳು ಹಾಗೂ ಹೆಜ್ಜಾರು ಚಿತ್ರದಲ್ಲಿ ನಟಿಸಿದ್ದಾರೆ. ಹೆಜ್ಜಾರು ಸಿನಿಮಾಗಾಗಿ ಕಾಯ್ತಿರುವ ಶ್ವೇತಾ, ಈಗ ನೆಲ್ಸನ್ ಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

    1960-90ರ ದಶಕದಲ್ಲಿ ಚಾಮರಾಜನಗರದಲ್ಲಿ ನಡೆಯುವ ನೈಜ ಘಟನೆಯಾಧಾರಿತ ಚಿತ್ರ ನೆಲ್ಸನ್. ಗ್ಯಾಂಗ್ ಸ್ಟರ್ ಕಥಾಹಂದರ ಹೊಂದಿದ್ದು,  ವಿನೋದ್ ಪ್ರಭಾಕರ್ ಹಿಂದೆಂದೂ ಕಾಣದ ಅವತಾರದಲ್ಲಿ ‘ನೆಲ್ಸನ್-ರಕ್ತದಲ್ಲಿ ನೆಂದ ದೇವರಕಾಡು’ ಸಿನಿಮಾದಲ್ಲಿ ನಿಮಗೆ ಕಾಣಸಿಗ್ತಾರೆ.

    ಒಂದಷ್ಟು ಸಿನಿಮಾಗಳಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿರುವ ಅರುಣ್ ಕುಮಾರ್ ನೆಲ್ಸನ್ ಮೂಲಕ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಅರುಣ್ ಮೊದಲ ಕನಸಿಗೆ ದೀಪ ಫಿಲ್ಮ್ಸ್ ಬ್ಯಾನರ್ ನಲ್ಲಿ ಬಿ.ಎಮ್ ಶ್ರೀರಾಮ್ (ಕೋಲಾರ) ಹಣ ಹಾಕಿದ್ದಾರೆ. ಪ್ರಜ್ವಲ್ ಗೌಡ ಛಾಯಾಗ್ರಹಣ ಮತ್ತು ಭರತ್ ಬಿಜಿ ಸಂಗೀತ, ವಿಜಯ್ ರಾಜ್ ಸಂಕಲನ, ಹರಿ ಸಂಭಾಷಣೆ ‘ನೆಲ್ಸನ್-ರಕ್ತದಲ್ಲಿ ನೆಂದ ದೇವರಕಾಡು’ ಸಿನಿಮಾಗಿದೆ.

  • ‘ನೆಲ್ಸನ್’ ಚಿತ್ರಕ್ಕೆ ಲಿಯೋನಿಲ್ಲಾ ಶ್ವೇತಾ ಡಿಸೋಜಾ ನಾಯಕಿ

    ‘ನೆಲ್ಸನ್’ ಚಿತ್ರಕ್ಕೆ ಲಿಯೋನಿಲ್ಲಾ ಶ್ವೇತಾ ಡಿಸೋಜಾ ನಾಯಕಿ

    ನ್ನಡದಲ್ಲಿ ಈಗಾಗಲೇ ಒಂದಷ್ಟು ಸಿನಿಮಾಗಳಲ್ಲಿ ನಟಿಸಿ, ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದ ಲಿಯೋನಿಲ್ಲಾ ಶ್ವೇತಾ ಡಿಸೋಜಾ (Leonilla Shweta D’Souza) ಇದೀಗ ಮತ್ತೆ ಕನ್ನಡ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಮರಿ ಟೈಗರ್ ವಿನೋದ್ ಪ್ರಭಾಕರ್ ನಾಯಕನಾಗಿ ನಟಿಸುತ್ತಿರುವ ನೆಲ್ಸನ್ ಚಿತ್ರದಲ್ಲಿ ಲಿಯೋನಿಲ್ಲಾ ಶ್ವೇತಾ ಡಿಸೋಜಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದೊಂದು ಹೊಸ ರೀತಿಯ ಪಾತ್ರ ಎನ್ನಲಾಗುತ್ತಿದೆ.

    ಮೊನ್ನೆಯಷ್ಟೇ ಟೀಸರ್ ರಿಲೀಸ್

    ಗೊಂಬೆಗಳ ಲವ್‌ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಭರವಸೆ ಮೂಡಿಸಿದ್ದ ನಟ ಅರುಣ್‌ ಕುಮಾರ್ (Arun Kumar) ಈಗ ನಿರ್ದೇಶನಕ್ಕಿಳಿದಿದ್ದಾರೆ. ಅವರ ಚೊಚ್ಚಲ ಹೆಜ್ಜೆಗೆ ‘ನೆಲ್ಸನ್’ (Nelson) ಎಂಬ ಶೀರ್ಷಿಕೆ ಇಡಲಾಗಿದ್ದು, ರಕ್ತದಲ್ಲಿ ನೆಂದ ದೇವರಕಾಡು ಎಂಬ ಅಡಿ ಬರಹ ಚಿತ್ರದ ಸಾರಂಶವನ್ನು ವಿವರಿಸ್ತಿದೆ. ಟೀಸರ್ ರಿಲೀಸ್ ಆಗಿದ್ದು, ನಿರೀಕ್ಷೆಯನ್ನು ಇಮ್ಮಡಿಗೊಳಿಸಿದೆ. ಸಖತ್ ಮಾಸ್ ಆಗಿ ಮೂಡಿಬಂದಿರುವ ನೆಲ್ಸನ್ ಟೀಸರ್ ನಲ್ಲಿ ಮರಿ ಟೈಗರ್ ವಿನೋದ್ ಪ್ರಭಾಕರ್ (Vinod Prabhakar) ಆಂಗ್ರಿ ಯಂಗ್ ಮ್ಯಾನ್ ಅವತಾರದಲ್ಲಿ ಅಬ್ಬರಿಸಿದ್ದಾರೆ. ಇಂದು ಎಂಎಂ ಲೆಗಸಿಯಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರು ಟೀಸರ್ ಲಾಂಚ್ ಮಾಡಿ ಇಡೀ ತಂಡಕ್ಕೆ ಶುಭಾಶಯ ತಿಳಿಸಿದರು. ಈ ವೇಳೆ ಇಡೀ ಚಿತ್ರತಂಡ ಭಾಗಿಯಾಗಿತ್ತು.

    ಉಪೇಂದ್ರ ಮಾತನಾಡಿ, ಟೈಗರ್ ಹವಾ ಆಗಲೂ ಇತ್ತು ಈಗಲೂ ಇರುತ್ತೇ.. ಮುಂದೆಯೂ ಇರುತ್ತದೆ. ನಿಮ್ಮ ತಂದೆ ಸಿನಿಮಾಗೆ ಡೈಲಾಗ್ ಬರೆದಿದ್ದೆ. ಇವತ್ತು ನಿಮ್ಮ ಟೀಸರ್ ಲಾಂಚ್ ಮಾಡಲು ನಿಮ್ಮ ತಂದೆ ಆಶೀರ್ವಾದ ಮಾಡಿದ್ದಾರೆ. ಟೀಸರ್ ಬಗ್ಗೆ ಏನೂ ಹೇಳೋದು. ಎಲ್ಲವೂ ಎಕ್ಸ್ಟ್ರಾಡಿನರಿಯಾಗಿದೆ. ಮೇಕಿಂಗ್, ಗೆಟಪ್ ಸೂಪರ್. ಸಬ್ಜೆಕ್ಟ್ ಬೇರೆ ತರ ಇದೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ.  ಈ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಲಿದೆ ಎಂದರು.  ನಟ ವಿನೋದ್ ಪ್ರಭಾಕರ್ ಮಾತನಾಡಿ, ಉಪೇಂದ್ರ (Upendra) ಅಣ್ಣ ಟೀಸರ್ (Teaser) ನೋಡಿ ತುಂಬಾ ಖುಷಿಪಟ್ಟರು. ದರ್ಶನ್ ಸರ್ ಕೂಡ ಟೀಸರ್ ನೋಡಿದರು. ಈ ತರಹದ ಒಂದು ಸಿನಿಮಾ ಮಾಡಲು ಧೈರ್ಯ ಬೇಕು. ಶ್ರೀರಾಮ್ ಸರ್ ನಿಮಗೆ ಧನ್ಯವಾದ. ನಿಮ್ಮ ಮೇಲೆ ನಮಗೆ ಕಾನ್ಫಿಡೆನ್ಸ್ ಇದೆ. ಅರುಣ್ ಕುಮಾರ್ ಅವರು ಬಹಳಷ್ಟು ಫ್ಯಾಷನ್ ಇರುವ ವ್ಯಕ್ತಿ. ಭರತ್ ಸರ್ ವಂಡರ್ ಫುಲ್ ಮ್ಯೂಸಿಕ್. ಸಿನಿಮಾ ಬಗ್ಗೆ ಮುಂದೆ ಮಾತಾಡ್ತೀನಿ. ತೆರೆಹಿಂದೆ ಬಹಳಷ್ಟು ಜನ ಕೆಲಸ‌ ಮಾಡಿದ್ದೀರಿ ಎಂದರು.

    ನಿರ್ದೇಶಕ ಅರುಣ್ ಕುಮಾರ್ ಮಾತನಾಡಿ, ಲಾಕ್ ಡೌನ್ ಆದ್ಮೇಲೆ ಹಸಿವು, ಅಸಹಾಯಕ ಸಮಯದಲ್ಲಿ ನೆಲ್ಸನ್ ಹುಟ್ಟಿಕೊಂಡಿದ್ದು. ಬರೆಯುತ್ತಾ, ಬರೆಯುತ್ತಾ ತುಂಬಾ ಚೆನ್ನಾಗಿ ಕಥೆ ಬೆಳೆಯಿತು. ಮಲಯಾಳಂ, ತಮಿಳು ಇಂಡಸ್ಟ್ರೀಗೆ ಕಥೆ ತೆಗೆದುಕೊಂಡು. ಆದರೆ ನನಗೆ ತೃಪ್ತಿಯಾಗಲಿಲ್ಲ. ಇಲ್ಲೇ ಏನಾದರೂ ಆಗಬೇಕು ಅದಕ್ಕೆ ಬಂದೆ. ಸ್ನೇಹಿತರ ಮೂಲಕ ನಿರ್ಮಾಪಕರು ಸಿಕ್ಕಿದರು. ನಂಬಿಕೆ ಹುಟ್ಟಿಕೊಳ್ತು. ಇದುವರೆಗೆ ನನ್ನ ನಂಬಿದ್ದು ಶ್ರೀರಾಮ್ ಸರ್. ನಾನು ಟೀಂ ನನ್ನ ಬೆನ್ನೆಲುಬು ಆಗಿ ನಿಂತರು. ಸಿನಿಮಾ ಈ ಹಂತಕ್ಕೆ ಬರಲು ನನ್ನ ಟೆಕ್ನಿಕಲ್ ಟೀಂ ಬೆಂಬಲವಿದೆ. ವಿನೋದ್ ಸರ್ ಡೆಡಿಕೇಷನ್ ನೋಡಿ ಭಯ ಆಯಿತು. ವಿನೋದ್ ಸರ್ ಸಪೋರ್ಟ್ ತುಂಬಾ ದೊಡ್ಡದಿದೆ. 60 ರಿಂದ 90 ಒಳಗಡೆ ಚಾಮರಾಜನಗರದಲ್ಲಿ ನಡೆಯುವ ಕಥೆ ಇದು. ಸ್ಕ್ರೀನ್ ಪ್ಲೇ, ಕಥೆ ತುಂಬಾ ಸ್ಟ್ರಾಂಗ್ ಆಗಿದೆ ಎಂದರು.

    ನಿರ್ಮಾಪಕ ಬಿ.ಎಂ.ಶ್ರೀರಾಮ್ (ಕೋಲಾರ) ಮಾತನಾಡಿ, ಉಪ್ಪಿ ಕಾರ್ಯಕ್ರಮಕ್ಕೆ ಬಂದಿದ್ದು ಬಹಳ ಖುಷಿ ಆಯ್ತು. ನಾವು ತುಂಬ ಬಡತನದಿಂದ ಮೇಲೆ ಬಂದವರು. ನಾವು ಈ ಮಟ್ಟದಲ್ಲಿ ಬೆಳೆಯಲು ಐದು ಜನರನ್ನು ಸ್ಫೂರ್ತಿಯಾಗಿ ತೆಗೆದುಕೊಂಡೆ. ಅದರಲ್ಲಿ ಉಪ್ಪಿ ಸರ್ ಕೂಡ ಒಬ್ಬರು. ತಂದೆ ತಾಯಿ ಆಶೀರ್ವಾದ ಮಾರ್ಗದರ್ಶನದಿಂದ ಈ ಮಟ್ಟಕ್ಕೆ ಇದ್ದೀವಿ. ಅರುಣ್ ಅವರನ್ನು ನನ್ನ ಸ್ನೇಹಿತರು ರೆಫರ್ ಮಾಡಿದ್ದರು. ಇದು ಚಾಮರಾಜನಗ ಆಚಾರ,ವಿಚಾರ ಅಂಶಗಳು ಇರುವುದರಿಂದ ಕಥೆ ಒಪ್ಪಿಕೊಂಡೆ. ವಿನೋದ್ ಸರ್ ಅಪ್ರೋಚ್ ಮಾಡಿದ್ವಿ. ಕಥೆ ಹೇಳಿದ್ವಿ ಒಪ್ಪಿಕೊಂಡರು. ಟೀಸರ್ ಮಾಡಿದ್ಮೇಲೆ ಅರುಣ್ ಟೀ ಮೇಲೆ ಭರವಸೆ ಹೆಚ್ಚಾಯ್ತು ಎಂದರು.

    ‘ನೆಲ್ಸನ್-ರಕ್ತದಲ್ಲಿ ನೆಂದ ದೇವರಕಾಡು’ ನೈಜ ಘಟನೆಯ ಕಥಾಹಂದರದ ಸಿನಿಮಾ. ಚಾಮರಾಜನಗರ ಜಿಲ್ಲೆಯಲ್ಲಿ 60ರಿಂದ 90ರ ದಶಕದಲ್ಲಿ ನಡೆಯುವ ಗ್ಯಾಗ್‌ಸ್ಟರ್‌ ಕಥೆ. ಅಲ್ಲಿನ ಭಾಷೆ, ಸಂಸ್ಕೃತಿ, ನೆಲ, ಜಲ, ಬುಡಕಟ್ಟು ಜನಾಂಗದ ಸಂಘರ್ಷ ಸೇರಿದಂತೆ ಒಂದಷ್ಟು ಅಂಶಗಳನ್ನು ಈ ಚಿತ್ರದಲ್ಲಿ ಅರುಣ್ ಕಟ್ಟಿಕೊಡಲಿದ್ದಾರೆ. ವಿಶೇಷ ಅಂದರೆ ವಿನೋದ್ ಪ್ರಭಾಕರ್ ಹಿಂದೆಂದೂ ಕಾಣದ ಅವತಾರದಲ್ಲಿ ‘ನೆಲ್ಸನ್-ರಕ್ತದಲ್ಲಿ ನೆಂದ ದೇವರಕಾಡು’ ಸಿನಿಮಾದಲ್ಲಿ ನಿಮಗೆ ಕಾಣಸಿಗ್ತಾರೆ. ಬಹಳ ಇಂಪ್ರೆಸ್ ಎನಿಸುವ ಟೀಸರ್ ಝಲಕ್ ನಲ್ಲಿ ಛಾಯಾಗ್ರಹಣ ಹಾಗೂ ಸಂಗೀತವೂ ಗಮನಸೆಳೆಯುತ್ತಿದೆ.

     

    ಒಂದಷ್ಟು ಸಿನಿಮಾಗಳಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿರುವ ಅನುಭವವಿರುವ ಅರುಣ್ ಕುಮಾರ್ ಆ ಎಲ್ಲಾ ಕಲೆಯನ್ನು ‘ನೆಲ್ಸನ್-ರಕ್ತದಲ್ಲಿ ನೆಂದ ದೇವರಕಾಡು’ ಚಿತ್ರಕ್ಕೆ ಧಾರೆ ಎರೆದಿದ್ದಾರೆ. ಅವರ ಮೊದಲ ಕನಸಿಗೆ ದೀಪ ಫಿಲ್ಮ್ಸ್ ಬ್ಯಾನರ್ ನಲ್ಲಿ ಬಿ.ಎಮ್ ಶ್ರೀರಾಮ್ (ಕೋಲಾರ) ಹಣ ಹಾಕಿದ್ದಾರೆ. ಪ್ರಜ್ವಲ್ ಗೌಡ ಛಾಯಾಗ್ರಹಣ ಮತ್ತು ಭರತ್ ಬಿಜಿ ಸಂಗೀತ, ವಿಜಯ್ ರಾಜ್ ಸಂಕಲನ, ಹರಿ ಸಂಭಾಷಣೆ ‘ನೆಲ್ಸನ್-ರಕ್ತದಲ್ಲಿ ನೆಂದ ದೇವರಕಾಡು’ ಸಿನಿಮಾಗಿದೆ.